ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ
ವರ್ಷಾಂತ್ಯ ಅವಲೋಕನ: ಸಿಬ್ಬಂದಿ, ಸಾರ್ವಜನಿಕ ಕೊಂದುಕೊರತೆ ಹಾಗೂ ಪಿಂಚಣಿಗಳ ಸಚಿವಾಲಯ
Posted On:
21 DEC 2018 7:25PM by PIB Bengaluru
ವರ್ಷಾಂತ್ಯ ಅವಲೋಕನ:
ಸಿಬ್ಬಂದಿ, ಸಾರ್ವಜನಿಕ ಕೊಂದುಕೊರತೆ ಹಾಗೂ ಪಿಂಚಣಿಗಳ ಸಚಿವಾಲಯ
12ನೇ ನಾಗರಿಕ ಸೇವೆಗಳ ದಿನದ ಕಾರ್ಯಕ್ರಮ: ಎರಡು ದಿನಗಳ 12ನೇ ನಾಗರಿಕ ಸೇವೆಗಳ ದಿನದ ಕಾರ್ಯಕ್ರಮವನ್ನು 20.04.2018ರಂದು ಉಪ ರಾಷ್ಟ್ರಪತಿ
ಶ್ರೀ ಎಂ.ವೆಂಕಯ್ಯ ನಾಯ್ಡು ಉದ್ಘಾಟಿಸಿದರು. ನಾಗರಿಕ ಸೇವಾ ದಿನವಾದ 21.04.2018ರಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನಾಗರಿಕ
ಸೇವೆಯಲ್ಲಿರುವ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು. ವಿವಿಧ ವಿಭಾಗಗಳಲ್ಲಿ ವಿಜೇತರಾದವರಿಗೆ ಪ್ರಧಾನಮಂತ್ರಿ 15 ಪ್ರಶಸ್ತಿಗಳನ್ನು ಪ್ರದಾನ
ಮಾಡಿದರು. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ, ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ, ಪ್ರಧಾನಮಂತ್ರಿ ವಸತಿ ಯೋಜನೆ
ಹಾಗೂ ಡಿಜಿಟಲ್ ಪಾವತಿಗಳನ್ನು ಪ್ರೋತ್ಸಾಹಿಸುವ ಮಹತ್ವದ ಕಾರ್ಯಕ್ರಮಗಳಿಗೆ ಪ್ರಶಸ್ತಿ ನೀಡಲಾಗಿದೆ. ಇವು ‘ನೂತನ ಭಾರತ’ಕ್ಕೆ ಅತ್ಯಂತ ಪ್ರಮುಖವಾದ
ಕಾರ್ಯಕ್ರಮಗಳಾಗಿವೆ ಎಂದು ಪ್ರಧಾನಮಂತ್ರಿ ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.
ನಾಗರಿಕ ಸೇವೆಗಳ ದಿನ-2018ರ ಆಚರಣೆ ಕಾರ್ಯಕ್ರಮದಲ್ಲಿ ಭಾರತ ಸರ್ಕಾರದ ಆಡಳಿತ ಸುಧಾರಣೆಗಳ ಹಾಗೂ ಸಾರ್ವಜನಿಕ ಕೊಂದುಕೊರತೆ ನಿವಾರಣಾ
ಇಲಾಖೆ (ಡಿಎಆರ್ ಹಾಗೂ ಪಿಜಿ)ಯು ‘ಪ್ರಧಾನಮಂತ್ರಿ ಪ್ರಶಸ್ತಿಗಳು 2018ರ ಹಾದಿ’ ಹಾಗೂ ‘ನವ ಭಾರತ-ಭವಿಷ್ಯ ರೂಪಿಸುವುದು’ ಎಂಬ ಎರಡು
ಸಿನಿಮಾಗಳನ್ನು ಎನ್‍ಎಫ್‍ಡಿಸಿ ಪಟ್ಟಿಗೆ ಸೇರಿದ ನಿರ್ಮಾಪಕರುಗಳ ಮೂಲಕ ಬಿಡುಗಡೆ ಮಾಡಲಾಗಿದೆ.
ಇದನ್ನು 2018ರಂದು ಸಿಎಸ್‍ಡಿಯಲ್ಲಿ ಕೂಡ ಪ್ರದರ್ಶಿಸಲಾಯಿತು. ಈ ಸಿನಿಮಾಗಳು ಇಲಾಖೆಗಳ ವೆಬ್‍ಸೈಟ್ ಹಾಗೂ ಟ್ವಿಟರ್ ಹಾಗೂ ಫೇಸ್‍ಬುಕ್‍ನಂತಹ
ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಲಭ್ಯವಿದೆ. ‘ಅನುಕರಣೆ ಶ್ರೇಷ್ಠತೆ-ಪುನಾರಾವರ್ತನೆಯಿಂದ ದೂರ’ ಎಂಬ ಕೃತಿ 28 ಯಶಸ್ವಿ ಅನ್ವೇಷಣೆಗಳು ಹಾಗೂ ‘ಹೊಸ
ಹಾದಿಗಳು’ ಎಂಬ ಕೃತಿ 34 ಯಶಸ್ವಿ ಕಥೆಗಳನ್ನು ಒಳಗೊಂಡಿದೆ. ‘ಹೊಸ ಹಾದಿಗಳು’ ಎಂಬ ಕೃತಿ ಪ್ರಮುಖ ಕಾರ್ಯಕ್ರಮಗಳ ಅನುಷ್ಠಾನದ 34
ಯಶೋಗಾಥೆಗಳನ್ನು ಒಳಗೊಂಡಿದೆ. ಈ ಎರಡು ಪುಸ್ತಕಗಳನ್ನು ಅನುಕ್ರಮವಾಗಿ ಭಾರತದ ಉಪರಾಷ್ಟ್ರಪತಿ ಶ್ರೀ ಎಂ.ವೆಂಕಯ್ಯ ನಾಯ್ಡು 2018ರ ಏಪ್ರಿಲ್
20ರಂದು ಹಾಗೂ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಏಪ್ರಿಲ್ 21ರಂದು ವಿಜ್ಞಾನ ಭವನದಲ್ಲಿ ಬಿಡುಗಡೆಗೊಳಿಸಿದರು.
ಗುರುತಿಸಲ್ಪಟ್ಟ ಪ್ರಮುಖ ಕಾರ್ಯಕ್ರಮಗಳ ಯಶಸ್ವಿ ಕಥೆಗಳ (ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ, ಡಿಜಿಟಲ್ ಪಾವತಿ ಉತ್ತೇಜನೆ, ಪ್ರಧಾನಮಂತ್ರಿ ವಸತಿ
ಯೋಜನೆ-ನಗರ ಮತ್ತು ಗ್ರಾಮೀಣ ಹಾಗೂ ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ) ಹಾಗೂ ಜಿಲ್ಲೆಗಳು, ಕೇಂದ್ರ ಹಾಗೂ ರಾಜ್ಯ ಸಂಸ್ಥೆಗಳು
ಆಯೋಜಿಸಿದ್ದ ಆಯ್ದ ಅನ್ವೇಷಣೆಗಳ ಡಿಜಿಟಲ್ ಪ್ರದರ್ಶನ ಏರ್ಪಡಿಸಲಾಗಿತ್ತು. ನಾಗರಿಕ ಸೇವೆಯಲ್ಲಿರುವ ಅಧಿಕಾರಿಗಳ ಕ್ರಿಯಾತ್ಮಕ ಕೆಲಸಗಳನ್ನು ಕೂಡ
ಪ್ರದರ್ಶನದಲ್ಲಿ ಪ್ರದರ್ಶಿಸಲಾಯಿತು. ಇದರಲ್ಲಿ ಪುಸ್ತಕಗಳು, ಸಂಗೀತ, ಚಿತ್ರಕಲೆಗಳು ಇತ್ಯಾದಿ ಸೇರಿವೆ. ಈ ವಸ್ತು ಪ್ರದರ್ಶನವನ್ನು ಭಾರತದ ಉಪರಾಷ್ಟ್ರಪತಿ ಶ್ರೀ
ವೆಂಕಯ್ಯ ನಾಯ್ಡು ಏಪ್ರಿಲ್ 20-21ರಂದು ಆಯೋಜಿಸಿದ್ದ ನಾಗರಿಕ ಸೇವೆಗಳ ದಿನಾಚರಣೆಯಂದು ಉದ್ಘಾಟಿಸಿದರು.
ಕೇಂದ್ರ ಸಚಿವಾಲಯಗಳಲ್ಲಿ ಸಹಾಯಕ ಕಾರ್ಯದರ್ಶಿಗಳ ನೇಮಕ: ಭಾರತ ಸರ್ಕಾರದಲ್ಲಿ ಸಹಾಯಕ ಕಾರ್ಯದರ್ಶಿಗಳಾಗಿ ನೇಮಕಗೊಂಡಿರುವ 2016ನೇ
ಬ್ಯಾಚ್‍ನ ಐಎಎಸ್ ಅಧಿಕಾರಿಗಳನ್ನು ಉದ್ದೇಶಿಸಿ ಉಪರಾಷ್ಟ್ರಪತಿ ಶ್ರೀ ಎಂ.ವೆಂಕಯ್ಯ ನಾಯ್ಡು 11.07.18ರಂದು ಮಾತನಾಡಿದರು. ‘ಜನರನ್ನು ‘ಟಾರ್ಗೆಟ್
ಗುಂಪುಗಳಾಗಿ’ ಅಥವಾ ‘ಫಲಾನುಭವಿಗಳಂತೆ’ ನೋಡಬೇಡಿ. ಬದಲಿಗೆ ಭಾರತವನ್ನು ಬದಲಾಯಿಸುವ ಕ್ರಿಯಾಶೀಲ ವ್ಯಕ್ತಿಗಳಂತೆ ನೋಡಿ’ ಎಂದು
ಉಪರಾಷ್ಟ್ರಪತಿ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು. 58 ಕೇಂದ್ರ ಸಚಿವಾಲಯಗಳಲ್ಲಿ ಸಹಾಯಕ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸುತ್ತಿರುವ 2016ನೇ
ಬ್ಯಾಚ್‍ನ 176 ಯುವ ಅಧಿಕಾರಿಗಳು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಹಾಯಕ ಕಾರ್ಯದರ್ಶಿಗಳಾಗಿ ನೇಮಕಗೊಂಡಿರುವ 2016ನೇ ಸಾಲಿನ
170 ಯುವ ಐಎಎಸ್ ಅಧಿಕಾರಿಗಳೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ 04.07.2018ರಂದು ಸಂವಾದ ನಡೆಸಿದರು. ಪ್ರಾಯೋಗಿಕ ತರಬೇತಿಯ
ಅನುಭವಗಳನ್ನು ಹಂಚಿಕೊಳ್ಳುವಂತೆ ಪ್ರಧಾನಮಂತ್ರಿ ಅಧಿಕಾರಿಗಳನ್ನು ಒತ್ತಾಯಿಸಿದರು. ಜನ್ ಭಾಗೀಧಾರಿ, ಮಾಹಿತಿ ಹರಿವು, ಸಂಪನ್ಮೂಲಗಳ ಗರಿಷ್ಠ ಬಳಕೆ
ಹಾಗೂ ಆಡಳಿತದಲ್ಲಿ ಜನರ ನಂಬಿಕೆ ಸೇರಿದಂತೆ ಉತ್ತಮ ಆಡಳಿತಕ್ಕೆ ಸಂಬಂಧಿಸಿದ ಪ್ರಮುಖ ಅಂಶಗಳ ಬಗ್ಗೆ ಪ್ರಧಾನಮಂತ್ರಿ ಚರ್ಚಿಸಿದರು. 27.09.18ರಂದು
ನಡೆದ ವಿದಾಯ ಕಾರ್ಯಕ್ರಮದಲ್ಲಿ 2016ನೇ ಬ್ಯಾಚ್ ಅಧಿಕಾರಿಗಳು ಕೃಷಿ ಆದಾಯಗಳ ಹೆಚ್ಚಳ, ಮಣ್ಣಿನ ಆರೋಗ್ಯ ಕಾರ್ಡ್‍ಗಳು, ಕೊಂದುಕೊರತೆ ಪರಿಹಾರ,
ಸಾರ್ವಜನಿಕ ಕೇಂದ್ರೀಕೃತ ಸೇವೆಗಳು, ಇಂಧನ ವಲಯ ಸುಧಾರಣೆ, ಪ್ರವಾಸಿಗರ ಆತಿಥ್ಯ, ಇ-ಹರಾಜುಗಳು ಹಾಗೂ ಸ್ಮಾರ್ಟ್ ನಗರಗಳ ಅಭಿವೃದ್ಧಿ
ಪರಿಹಾರಗಳು ಸೇರಿದಂತೆ 8 ಆಯ್ದ ಕಾರ್ಯಕ್ರಮಗಳ ಕುರಿತ ಅಭಿಪ್ರಾಯಗಳನ್ನು ಪ್ರಧಾನಮಂತ್ರಿ ಮುಂದೆ ಪ್ರಸ್ತುತಪಡಿಸಿದರು.
03-08-18ರಂದು ನಡೆದ ತರಬೇತಿ ಕಾರ್ಯಕ್ರಮದ 120ನೇ ಪ್ರವೇಶ ಸಮಾರಂಭದಲ್ಲಿ ಕೇಂದ್ರ ಸಿಬ್ಬಂದಿ ಮತ್ತು ಸಾರ್ವಜನಿಕ ಕುಂದುಕೊರತೆಗಳ ರಾಜ್ಯ ಸಚಿವ
ಡಾ.ಜಿತೇಂದ್ರ ಸಿಂಗ್ ಅಭ್ಯರ್ಥಿಗಳೊಂದಿಗೆ ಸಂವಾದ ನಡೆಸಿದರು. ರಾಜ್ಯ ನಾಗರಿಕ ಸೇವೆಯಿಂದ ಐಎಎಸ್‍ಗೆ ಬಡ್ತಿ ಹೊಂದಿದ 18 ರಾಜ್ಯಗಳ 89 ಅಧಿಕಾರಿಗಳು
ಮುಸ್ಸೂರಿಯ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ತರಬೇತಿ ಅಕಾಡೆಮಿ (ಎಲ್‍ಬಿಎಸ್‍ಎನ್‍ಎಎ)ಯಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ
ಭಾಗವಹಿಸಿದ್ದರು.
ಸಚಿವರೊಂದಿಗೆ ಸಂವಾದದಲ್ಲಿ ತೊಡಗಿರುವ ಸಂದರ್ಭದಲ್ಲಿ ಅಭ್ಯರ್ಥಿಗಳು ತರಬೇತಿಯ ಗುಣಮಟ್ಟ ಹೆಚ್ಚಳ, ಹೊಸ ತರಬೇತಿ ಕೇಂದ್ರಗಳ ಸ್ಥಾಪನೆ, ಕೆಲವೊಂದು
ಸ್ಥಳಗಳಲ್ಲಿ ಐಎಎಸ್ ಅಧಿಕಾರಿಗಳ ಕೊರತೆಯಿರುವುದು ಹಾಗೂ ಸರ್ಕಾರದ ಹೊಸ ಕಾರ್ಯಕ್ರಮಗಳು ಇತ್ಯಾದಿ ಬಗ್ಗೆ ಚರ್ಚೆ ನಡೆಸಿದರು.
ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆ (ಐಐಪಿಎ) ನಾಗರಿಕ ಸೇವೆಯಲ್ಲಿರುವವರು ಹಾಗೂ ಅಧಿಕಾರಿಗಳಿಗೆ ಆಯೋಜಿಸಿದ್ದ ಸಾರ್ವಜನಿಕ ಆಡಳಿತದಲ್ಲಿ 44ನೇ
ವಿನೂತನ ವೃತ್ತಿ ಕಾರ್ಯಕ್ರಮ (ಎಪಿಪಿಪಿಎ)ದ ಉದ್ಘಾಟನಾ ಭಾಷಣವನ್ನು 02.07.18ರಂದು ಸಚಿವರಾದ ಡಾ.ಜಿತೇಂದ್ರ ಸಿಂಗ್ ಮಾಡಿದರು.
ಪ್ರಸಕ್ತ ಸರ್ಕಾರ ಅಳವಡಿಸಿಕೊಂಡಿರುವ ಅಭ್ಯಾಸಗಳ ಪ್ರಕಾರ ವೈಯಕ್ತಿಕ ಹಾಗೂ ತರಬೇತಿ ಇಲಾಖೆ (ಡಿಒಪಿಟಿ) ನವದೆಹಲಿಯಲ್ಲಿ 01.05.18ರಂದು
ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಚಿವರಾದ ಡಾ.ಜಿತೇಂದ್ರ ಸಿಂಗ್ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ (2017) ಅಗ್ರಸ್ಥಾನ ಗಳಿಸಿದ ಅಭ್ಯರ್ಥಿಗಳನ್ನು
ಸನ್ಮಾನಿಸಿದರು.
ಉತ್ತಮ ಆಡಳಿತಕ್ಕೆ ಸಂಬಂಧಿಸಿದ ಪ್ರಾದೇಶಿಕ ಸಮ್ಮೇಳನ: 2018-19ನೇ ಆರ್ಥಿಕ ಸಾಲಿನಲ್ಲಿ ಇಲಾಖೆಯು ಭೋಪಾಲ್ (ಮಧ್ಯಪ್ರದೇಶ),
ಕೊಹಿಮಾ(ನಾಗಲ್ಯಾಂಡ್) ಹಾಗೂ ತಿರುವನಂತಪುರಂ (ಕೇರಳ)ನಲ್ಲಿ ಮೂರು ಪ್ರಾದೇಶಿಕ ಸಮ್ಮೇಳನಗಳನ್ನು ಆಯೋಜಿಸಿತ್ತು. ಕೇಂದ್ರ ಹಾಗೂ ರಾಜ್ಯ
ಸರ್ಕಾರಗಳ ಹಿರಿಯ ಅಧಿಕಾರಿಗಳು ಉತ್ತಮ ಆಡಳಿತ ಅಭ್ಯಾಸಗಳನ್ನು ಅನುಷ್ಠಾನಗೊಳಿಸಲು ಜವಾಬ್ದಾರರಾಗಿರುತ್ತಾರೆ. ನೀತಿ ಆಯೋಗದ ಅಧಿಕಾರಿಗಳು,
ಮಾದರಿ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಪಿಎಂ ಪ್ರಶಸ್ತಿಗಳ ಪುರಸ್ಕೃತರು, ಇ-ಆಡಳಿತ ಹಾಗೂ ಸಿಎಪಿಎಎಂ ಪ್ರಶಸ್ತಿಗಳನ್ನು ಪಡೆದವರು ಮುಂತಾದವರು ಈ
ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಉತ್ತಮ ಆಡಳಿತ ಕಾರ್ಯಕ್ರಮಗಳ ಜತೆಗೆ ಮಹತ್ವಾಕಾಂಕ್ಷೆ ಜಿಲ್ಲೆಗಳ/ ಸಾಮಥ್ರ್ಯ ಅಭಿವೃದ್ಧಿ/ನಾಗರಿಕ ಕೇಂದ್ರೀಕೃತ
ಸೇವೆಗಳು/ ಪ್ರಶಸ್ತಿಗಳ ಕಾರ್ಯಕ್ರಮಗಳು ಹಾಗೂ ಇ-ಆಡಳಿತ ಸೇವೆಗಳ ಮೇಲೆ ಗಮನ ಕೇಂದ್ರೀಕರಿಸಿ ಉತ್ತಮ ಆಡಳಿತ ಕಾರ್ಯಕ್ರಮಗಳನ್ನು
ಆಯೋಜಿಸುವುದು ಈ ವರ್ಷದ ಸಮ್ಮೇಳನದ ಧ್ಯೇಯ.
ಇಲಾಖೆಯ ವೆಬ್‍ಸೈಟ್‍ನಲ್ಲಿ ದ್ವೈವಾರ್ಷಿಕ ನಿಯತಕಾಲಿಕ ‘ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ’ದ ಜುಲೈ-ಡಿಸೆಂಬರ್ 2017 ಹಾಗೂ ಜನವರಿ-ಜೂನ್, 2018ರ
ಎರಡು ಸಂಚಿಕೆಗಳು ಕ್ರಮವಾಗಿ 2018ರ ಜನವರಿ ಹಾಗೂ ಜುಲೈನಲ್ಲಿ ಇ-ಪ್ರಕಟಗೊಂಡಿವೆ.
ರಾಷ್ಟ್ರೀಯ ಇ-ಆಡಳಿತ ಪ್ರಶಸ್ತಿಗಳು: ತೆಲಂಗಾಣದ ಹೈದರಾಬಾದ್‍ನಲ್ಲಿ 27.12.2018ರಂದು ಎರಡು ದಿನಗಳ ಇ-ಆಡಳಿತದ ರಾಷ್ಟ್ರೀಯ ಸಮ್ಮೇಳನ -2018
(21ನೇ ಸಂಚಿಕೆ)ದ ಕಾರ್ಯಕ್ರಮದಲ್ಲಿ ಕೇಂದ್ರ ಸಿಬ್ಬಂದಿ ಮತ್ತು ಸಾರ್ವಜನಿಕ ಕುಂದುಕೊರತೆಗಳ ರಾಜ್ಯ ಸಚಿವ ಡಾ.ಜಿತೇಂದ್ರ ಸಿಂಗ್ ಇ-ಆಡಳಿತಕ್ಕೆ
ಸಂಬಂಧಿಸಿದ 2017-18ನೇ ಸಾಲಿನ ರಾಷ್ಟ್ರೀಯ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಇ-ಆಡಳಿತ ವಿಭಾಗದಲ್ಲಿನ ಪ್ರಯತ್ನಗಳಿಗೆ 8 ವಿಭಾಗಗಳಲ್ಲಿ 19
ಪ್ರಶಸ್ತಿಗಳನ್ನು ಅವರು ವಿತರಿಸಿದರು. ಪ್ರತಿ ವಿಭಾಗದಲ್ಲಿ ಸ್ವರ್ಣ ಪದಕದಲ್ಲಿ 2 ಲಕ್ಷ ರೂ. ನಗದು, ಪ್ರಶಸ್ತಿ ಫಲಕ ಹಾಗೂ ಬೆಳ್ಳಿ ಪದಕದಲ್ಲಿ ಒಂದು ಲಕ್ಷ ರೂ. ನಗದು
ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಸಮ್ಮೇಳನದ ಮುಖ್ಯ ಉದ್ದೇಶ ‘ಅಭಿವೃದ್ಧಿ ಹೆಚ್ಚಳಕ್ಕೆ ತಂತ್ರಜ್ಞಾನ’ ಸಮ್ಮೇಳನವನ್ನು 26.02.2018ರಂದು ಕೇಂದ್ರ
ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ಹಂಚಿಕೆ ಹಾಗೂ ವಾಣಿಜ್ಯ ಮತ್ತು ಕೈಗಾರಿಕೆ ರಾಜ್ಯ ಸಚಿವ ಶ್ರೀ ಸಿ.ಆರ್.ಚೌಧರಿ ಹಾಗೂ ತೆಲಂಗಾಣ
ರಾಜ್ಯದ ಮಾಹಿತಿ ತಂತ್ರಜ್ಞಾನ, ನಗರ ನಿರ್ವಹಣೆ ಹಾಗೂ ನಗರ ಅಭಿವೃದ್ಧಿ, ಕೈಗಾರಿಕಾ ಹಾಗೂ ವಾಣಿಜ್ಯ ಖಾತೆ ಸಚಿವ ಶ್ರೀ ಕೆ.ಟಿ. ರಾಮ್‍ರಾವ್
26.02.2018ರಂದು ಉದ್ಘಾಟಿಸಿದರು.
ವಿವಿಧ ರಾಜ್ಯ ಸರ್ಕಾರಗಳ ಹಾಗೂ ಕೇಂದ್ರದ ಇ-ಆಡಳಿತ ಯೋಜನೆಗಳಿಗೆ ಸಂಬಂಧಿಸಿ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಇ-
ಆಡಳಿತ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪ್ರದರ್ಶಿಸಲಾಯಿತು. ಆಧಾರ್, ಜಿಎಸ್‍ಟಿಎನ್, ಸರ್ಕಾರದ ಇ-ಮಾರ್ಕೆಟ್ ಪ್ಲೇಸ್
(ಜಿಇಎಂ), ಹಾಕೀ, ಕೃಷಿ ಹಾಗೂ ರೈತರ ಕಲ್ಯಾಣದ ಇ-ನಾಮ್ ವೇದಿಕೆ, ಮೀಸೇವಾ ಇತ್ಯಾದಿಯನ್ನು ಇದು ಒಳಗೊಂಡಿದೆ.
ಮುಂದಿನ ಇ-ಆಡಳಿತ ರಾಷ್ಟ್ರೀಯ ಸಮ್ಮೇಳನ-2019 (22ನೇ ಆವೃತ್ತಿ)ಯನ್ನು ರಾಜಸ್ಥಾನ ಸರ್ಕಾರವು ಜೈಪುರದಲ್ಲಿ 2019ರ ಫೆಬ್ರವರಿಯಲ್ಲಿ ಆಯೋಜಿಸಲಿದೆ.
ಸಮ್ಮೇಳನದಲ್ಲಿ 6 ವಿಭಾಗಗಳಲ್ಲಿ ಇ-ಆಡಳಿತ ರಾಷ್ಟ್ರೀಯ ಪ್ರಶಸ್ತಿಗಳನ್ನು ನೀಡಲು ಇದು ಪ್ರಸ್ತಾಪಿಸಿದೆ. 1. ಡಿಜಿಟಲ್ ಪರಿವರ್ತನೆಗೆ ಇಂಜಿನಿಯರಿಂಗ್ ಪ್ರಕ್ರಿಯೆ
ಸರ್ಕಾರದ ಶ್ರೇಷ್ಠತೆ. 2. ನಾಗರಿಕ ಕೇಂದ್ರೀಕೃತ ಪೂರೈಕೆಯಲ್ಲಿ ಅತ್ಯುತ್ತಮ ನಿರ್ವಹಣೆ 3. ಇ-ಆಡಳಿತದಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ನಿರ್ವಹಣೆಗೆ ಮುಂದಾಳತ್ವ-
(1) ಈಶಾನ್ಯ ರಾಜ್ಯಗಳು + ಪರ್ವತ ರಾಜ್ಯಗಳು (2) ಕೇಂದ್ರಾಡಳಿತ ಪ್ರದೇಶಗಳು (ದೆಹಲಿ ಸೇರಿದಂತೆ) (3) ಇತರ ರಾಜ್ಯಗಳು. 4. ಅಕಾಡೆಮಿಕ್/ಸಂಶೋಧನಾ
ಸಂಸ್ಥೆಗಳಿಂದ ನಾಗರಿಕ ಕೇಂದ್ರೀಕೃತ ಸೇವೆಗಳಲ್ಲಿ ಅತ್ಯುತ್ತಮ ಸಂಶೋಧನೆ 5. ಸ್ಟಾರ್ಟ್‍ಅಪ್‍ಗಳಲ್ಲಿ ಇ-ಆಡಳಿತ ಸೇವೆಗಳ ಅನ್ವೇಷಣಾತ್ಮಕ ಬಳಕೆ 6. ವಿನೂತನ
ತಂತ್ರಜ್ಞಾನಗಳನ್ನು ಉಪಯೋಗಿಸಿಕೊಳ್ಳುವಲ್ಲಿ ಶ್ರೇಷ್ಠತೆ. ಸಮ್ಮೇಳನದ ಉದ್ದೇಶ ‘ಡಿಜಿಟಲ್ ಇಂಡಿಯಾ: ಪರಿಪೂರ್ಣತೆಯ ಯಶಸ್ಸು.’
ಇ-ಕಚೇರಿ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಸಚಿವಾಲಯಗಳು/ಇಲಾಖೆಗಳಿಗೆ ಪ್ರಶಂಸ ಪತ್ರಗಳು: ಸಚಿವಾಲಯಗಳು/ಇಲಾಖೆಗಳಲ್ಲಿ ಇ-ಕಚೇರಿ
ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ 34 ಸಚಿವಾಲಯಗಳು/ಇಲಾಖೆಗಳಿಗೆ 14.03.2018ರಂದು ಸಿಬ್ಬಂದಿ ಮತ್ತು ಸಾರ್ವಜನಿಕ
ಕುಂದುಕೊರತೆಗಳ ರಾಜ್ಯ ಸಚಿವ ಡಾ.ಜಿತೇಂದ್ರ ಸಿಂಗ್ ಅವರು ಪ್ರಶಂಸಾ ಪ್ರಮಾಣಪತ್ರಗಳನ್ನು ವಿತರಿಸಿದರು. ಆಡಳಿತ ಸುಧಾರಣೆಗಳು ಹಾಗೂ ಸಾರ್ವಜನಿಕ
ಕುಂದುಕೊರತೆ ನಿವಾರಣೆ (ಡಿಎಆರ್‍ಪಿಜಿ), ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ನಿವಾರಣೆ ಹಾಗೂ ಪಿಂಚಣಿ ಸಚಿವಾಲಯಗಳು ಈ ಪ್ರಶಸ್ತಿಗಳನ್ನು ನೀಡಿವೆ.
ಡಿಜಿಟಲ್ ಇಂಡಿಯಾ ಕಾರ್ಯಕ್ರಮದಡಿಯಲ್ಲಿ ಇ-ಕಚೇರಿ ಪ್ರಮುಖವಾದ ಮಾದರಿ ಯೋಜನೆಗಳಲ್ಲಿ ಒಂದಾಗಿದೆ.
ಸಾರ್ವಜನಿಕ ಆಡಳಿತ ಹಾಗೂ ಆಡಳಿತದಲ್ಲಿ ಅಂತಾರಾಷ್ಟ್ರೀಯ ಸಹಕಾರ: ಸಾರ್ವಜನಿಕ ನಿರ್ವಹಣೆ ಹಾಗೂ ಆಡಳಿತ ವಲಯದಲ್ಲಿ ಅಂತಾರಾಷ್ಟ್ರೀಯ ಸಹಕಾರಕ್ಕೆ
ಸಂಬಂಧಿಸಿದ ವಿಷಯಗಳಲ್ಲಿ ಈ ಇಲಾಖೆ ನೋಡಲ್ ಸಂಸ್ಥೆಯಂತೆ ಕಾರ್ಯನಿರ್ವಹಿಸುತ್ತದೆ. ಭಾರತ ಹಾಗೂ ಇತರ ರಾಷ್ಟ್ರಗಳ ನಡುವೆ (ದ್ವಿ ಮಾರ್ಗ ಅಥವಾ
ಬಹುಮಾರ್ಗದ) ತಿಳಿವಳಿಕೆ ಪತ್ರ (ಎಂಒಯು)ಕ್ಕೆ ಅನುಗುಣವಾಗಿ ಕಾರ್ಯಕ್ರಮಗಳ ಆಯೋಜನೆ ಹಾಗೂ ವಿದೇಶಿ ಪರಿಣಿತರ ಭಾರತ ಭೇಟಿ ಹಾಗೂ ಭಾರತೀಯ
ಪರಿಣಿತರ ವಿದೇಶಿ ಭೇಟಿಯನ್ನು ಇದು ಒಳಗೊಂಡಿದೆ. ರಾಷ್ಟ್ರೀಯ ಸರ್ಕಾರಕ್ಕೆ ಸಂಬಂಧಿಸಿ ಉತ್ತಮ ಅಭ್ಯಾಸಗಳು ಹಾಗೂ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೆ
ವಿಚಾರದಲ್ಲಿ ಅಂತಾರಾಷ್ಟ್ರೀಯ ಸಹಕಾರ ಉದ್ದೇಶವನ್ನು ಇದು ಒಳಗೊಂಡಿದೆ.
ಕಾಮನ್ವೆಲ್ತ್ ರಾಷ್ಟ್ರಗಳಲ್ಲಿ ಉತ್ತಮ ನಿರ್ವಹಣೆ ಹಾಗೂ ಆಡಳಿತವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಾರ್ವಜನಿಕ ಆಡಳಿತ ಹಾಗೂ ನಿರ್ವಹಣೆಗೆ ಸಂಬಂಧಿಸಿದ
ಕಾಮನ್ವೆಲ್ತ್ ಸಂಘಟನೆ (ಸಿಎಪಿಎಎಂ) ಮಂಡಳಿ ಸದಸ್ಯರು ಹಾಗೂ ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಕುಂದುಕೊರತೆ ನಿವಾರಣೆಗಳ ಇಲಾಖೆ ಇದರ
ಸಾಂಸ್ಥಿಕ ಸದಸ್ಯನಾಗಿ ಸಿಎಪಿಎಎಂ ಅನೇಕ ಯೋಜನಾಬದ್ಧ ಕಾರ್ಯಕ್ರಮಗಳು ಹಾಗೂ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿವೆ. ಗಯಾನದ
ಜಾರ್ಜೆಟೌನ್‍ನಲ್ಲಿ ಸಿಎಪಿಎಎಂ ಸದಸ್ಯರ ಸಭೆ 2018ರ ಅಕ್ಟೋಬರ್ 21ರಂದು ನಡೆಯಿತು. 2018-2020ರ ಅವಧಿಗೆ ಸಿಎಪಿಎಎಂ ಮಂಡಳಿ ಸದಸ್ಯರನ್ನು ಆಯ್ಕೆ
ಮಾಡಿದರು. ಸಿಎಪಿಎಎಂ ನಿರ್ದೇಶಕರ ಮಂಡಳಿಯ ಡಿಎಆರ್‍ಪಿಜಿಯನ್ನು 2018-2020 ನೇ ಅವಧಿಯಲ್ಲಿ ಆಯ್ಕೆ ಮಾಡಲಾಯಿತು. 2018-20ರ ಅವಧಿಯಲ್ಲಿ
ಗಯಾನದ ಜಾರ್ಜ್‍ಟೌನ್‍ನಲ್ಲಿ ನಡೆದ ಸಿಎಪಿಎಎಂ ಸಮ್ಮೇಳನದಲ್ಲಿ ಸಿಎಪಿಎಎಂ ಅನ್ವೇಷಣಾ ಪ್ರಶಸ್ತಿಗಳನ್ನು ಘೋಷಿಸಲಾಯಿತು. ನಾಲ್ಕು ವಿಭಾಗಗಳಲ್ಲಿ ಭಾರತ
ಎರಡರಲ್ಲಿ ಪ್ರಶಸ್ತಿ ಗಳಿಸಿದೆ. “ಉನ್ನಯನ್ ಬಂಕ” - ಬಂಕ ಜಿಲ್ಲೆಯಲ್ಲಿ ತಂತ್ರಜ್ಞಾನ ಬಳಸಿ ಶಿಕ್ಷಣದ ಮರು ಸಂಶೋಧನೆಗೆ ಸಂಬಂಧಿಸಿ ‘ಇನ್ನೋವೇಷನ್
ಇನ್‍ಕ್ಯುಬೇಷನ್’ ವಿಭಾಗದಲ್ಲಿ ಬಿಹಾರ ರಾಜ್ಯ ಆಯ್ಕೆಯಾಗಿದೆ. ‘ಸಾರ್ವಜನಿಕ ಸೇವೆ ನಿರ್ವಹಣೆಯಲ್ಲಿ ಅನ್ವೇಷಣೆ’ ವಿಭಾಗದಲ್ಲಿ ಕರ್ನಾಟಕ ಸರ್ಕಾರದ ಸಹಕಾರ
ಇಲಾಖೆಯ ‘ಏಕೀಕೃತ ಕೃಷಿ ಮಾರುಕಟ್ಟೆಗಳು’ ಎಂಬ ಹೆಸರಿನ ಕಾರ್ಯಕ್ರಮ ಪ್ರಶಸ್ತಿಗೆ ಆಯ್ಕೆಯಾಗಿದೆ. ಈ ಮೂಲಕ ಈ ವಿಭಾಗದಲ್ಲಿನ ಒಂದೇ ಒಂದು ಚಿನ್ನದ
ಪದಕ ಕೂಡ ಭಾರತದ ಪಾಲಾಗಿದೆ.
ಡಿಎಆರ್‍ಪಿಜಿ ಸಾರ್ವಜನಿಕ ಆಡಳಿತದಲ್ಲಿ ಸಾಧನೆ ಮಾಡಿದವರಿಗೆ ನೀಡುವ ಪ್ರಧಾನಮಂತ್ರಿ ಪ್ರಶಸ್ತಿ ವಿಜೇತರು ಹಾಗೂ ಅಂತಾರಾಷ್ಟ್ರೀಯ ಮಾನ್ಯತೆ ಪಡೆದ
ಸಂಸ್ಥೆಗಳು/ವಿಶ್ವವಿದ್ಯಾಲಯಗಳಲ್ಲಿ ವಿದೇಶಿ ತರಬೇತಿ ಕಾರ್ಯಕ್ರಮಗಳಲ್ಲಿ ಸಾರ್ವಜನಿಕ ಆಡಳಿತದಲ್ಲಿ ಪ್ರಧಾನಮಂತ್ರಿಗಳ ಅತ್ಯುತ್ತಮ ಪ್ರಶಸ್ತಿ ಹಾಗೂ ರಾಷ್ಟ್ರೀಯ
ಪ್ರಶಸ್ತಿಗಳ ವಿಜೇತರಾದ ಭಾರತ ಸರ್ಕಾರ, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಅಧಿಕಾರಿಗಳನ್ನು ಅಂತಾರಾಷ್ಟ್ರೀಯ ಖ್ಯಾತಿಯ
ಸಂಸ್ಥೆ/ವಿಶ್ವವಿದ್ಯಾಲಯಗಳಲ್ಲಿ ತರಬೇತಿಗೆ ಕಳಿಸಲಾಗುತ್ತಿದೆ. ತಮ್ಮ ಸೇವಾವಧಿಯಲ್ಲಿ ಸಾರ್ವಜನಿಕ ಆಡಳಿತಕ್ಕೆ ಸಂಬಂಧಿಸಿದ ಅನುಭವ ಹಾಗೂ ಉತ್ತಮ
ಕಾರ್ಯಕ್ರಮಗಳನ್ನು ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ಹಂಚಿಕೊಳ್ಳಲು ಇದು ಅವಕಾಶ ಕಲ್ಪಿಸುತ್ತದೆ. 2018-19ನೇ ಅವಧಿಯಲ್ಲಿ 15 ಅಧಿಕಾರಿಗಳನ್ನು ಒಳಗೊಂಡ
ಎರಡು ಗುಂಪು ದಕ್ಷಿಣ ಕೊರಿಯಾದ ಸಿಯೋಲ್‍ನಲ್ಲಿ ಕೊರಿಯಾ ಅಭಿವೃದ್ಧಿ ಸಂಸ್ಥೆ (ಕೆಡಿಐ), ನಡೆಸಿದ ತರಬೇತಿ ಕಾರ್ಯಕ್ರಮದಲ್ಲಿ 2018ರ ಮೇ/ಜೂನ್‍ನಲ್ಲಿ
ಹಾಗೂ ಅಮೆರಿಕದ ನ್ಯೂಯಾರ್ಕ್‍ನ ಮ್ಯಾಕ್ಸ್‍ವೆಲ್ ಸೈರಕ್ಯೂಸ್ ವಿಶ್ವವಿದ್ಯಾಲಯದಲ್ಲಿ 2018ರ ನವೆಂಬರ್‍ನಲ್ಲಿ ನಡೆದ ತರಬೇತಿ ಕಾರ್ಯಕ್ರಮದಲ್ಲಿ
ಪಾಲ್ಗೊಂಡಿದ್ದರು.
ಸಿಪಿಜಿಆರ್‍ಎಎಂಎಸ್‍ನಲ್ಲಿನ ನಿರ್ವಹಣೆಗಾಗಿ ಸಚಿವಾಲಯ/ಇಲಾಖೆಗಳಿಗೆ ಪ್ರಶಂಸಾ ಪ್ರಮಾಣಪತ್ರ: ಕೇಂದ್ರೀಕೃತ ಸಾರ್ವಜನಿಕ ಕುಂದುಕೊರತೆಗಳ ನಿವಾರಣೆ
ಹಾಗೂ ನಿರ್ವಹಣಾ ವ್ಯವಸ್ಥೆ (ಸಿಪಿಜಿಆರ್‍ಎಎಂಎಸ್)ಯಲ್ಲಿ ಸಚಿವಾಲಯಗಳು/ಇಲಾಖೆಗಳ ನಿರ್ವಹಣೆ ಆಧಾರದಲ್ಲಿ ಅವರಿಗೆ ಪ್ರಶಂಸಾ ಪ್ರಮಾಣಪತ್ರಗಳನ್ನು
ಸಚಿವರು 27.04.18ರಂದು ವಿತರಿಸಿದ್ದಾರೆ. 2017ರ ಜುಲೈ-ಸೆಪ್ಟೆಂಬರ್ ಹಾಗೂ ಅಕ್ಟೋಬರ್‍ನಿಂದ ಡಿಸೆಂಬರ್ ತ್ರೈಮಾಸಿಕದಲ್ಲಿ ಈ ಪ್ರಶಸ್ತಿಗಳನ್ನು ಇಲಾಖೆಗಳಿಗೆ
ವಿತರಿಸಲಾಯಿತು.
10.08.2018ರಂದು ಡಾ.ಜಿತೇಂದ್ರ ಸಿಂಗ್ ಅವರು ವಿವಿಧ ಸಚಿವಾಲಯಗಳು/ಇಲಾಖೆಗಳಿಗೆ ಪಿಜಿ ಪೋರ್ಟಲ್‍ನಲ್ಲಿ ಸಾರ್ವಜನಿಕ ಕುಂದು ಕೊರತೆ ನಿವಾರಣೆಗೆ
ಸಂಬಂಧಿಸಿದ ಅತ್ಯುತ್ತಮ ನಿರ್ವಹಣೆಗಾಗಿ 2018ರ ಜನವರಿ-ಮಾರ್ಚ್ ಹಾಗೂ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಸಾರ್ವಜನಿಕ ಕುಂದುಕೊರತೆ ನಿರ್ವಹಣೆಗೆ ಸಂಬಂಧಿಸಿದ ಆನ್‍ಲೈನ್ ಡ್ಯಾಷ್‍ಬೋರ್ಡ್ ಬಿಡುಗಡೆ: ಆಡಳಿತ ಸುಧಾರಣೆ ಹಾಗೂ ಸಾರ್ವಜನಿಕ ಕುಂದುಕೊರತೆ
ನಿವಾರಣೆ ಇಲಾಖೆ (ಡಿಎಆರ್‍ಪಿಜಿ) ಅಭಿವೃದ್ಧಿಪಡಿಸಿದ ಆನ್‍ಲೈನ್ ಡ್ಯಾಷ್‍ಬೋರ್ಡ್ ಅನ್ನು ಡಾ.ಜಿತೇಂದ್ರ ಸಿಂಗ್ 11.04.18ರಂದು ಬಿಡುಗಡೆಗೊಳಿಸಿದರು. ಈ
ಡ್ಯಾಷ್‍ಬೋರ್ಡ್ ಸಾರ್ವಜನಿಕರ ಕುಂದುಕೊರತೆಗಳನ್ನು ನಿರ್ವಹಿಸುತ್ತದೆ ಹಾಗೂ ವ್ಯವಸ್ಥಿತ ಸುಧಾರಣೆಗಳಲ್ಲಿನ ಪ್ರಗತಿಯನ್ನು ಆಗಾಗ ವಿಶ್ಲೇಷಿಸುತ್ತದೆ. ಇದು
ಸಂಬಂಧಿತ ಸಚಿವಾಲಯಗಳು/ಇಲಾಖೆಗಳ ಸುಧಾರಣೆಗಳ ಅನುಷ್ಠಾನವನ್ನು ನಿರ್ವಹಿಸುತ್ತದೆ.
ಸಾರ್ವಜನಿಕ ಕುಂದುಕೊರತೆಗಳ ನಿವಾರಣೆ: 21.12.2018ಕ್ಕೆ ಅನ್ವಯಿಸುವಂತೆ 2018ರಲ್ಲಿ ಸಾರ್ವಜನಿಕ ಕುಂದುಕೊರತೆಗಳ ನಿರ್ವಹಣೆಗೆ ಸಂಬಂಧಿಸಿದ
ಅರ್ಜಿಗಳ ಸ್ವೀಕಾರ ಹಾಗೂ ವಿಲೇವಾರಿ ಸ್ಥಿತಿ ಈ ಕೆಳಗಿನಂತಿದೆ.
01.01.2018ಕ್ಕೆ ಅನ್ವಯಿಸುವಂತೆ ಬಾಕಿಯಿರುವ ಕುಂದುಕೊರತೆಗಳ ಸಂಖ್ಯೆ: 1,21,806
2018ರಲ್ಲಿ ಸ್ವೀಕೃತವಾಗಿರುವ ಕುಂದುಕೊರತೆಗಳ ಸಂಖ್ಯೆ: 10,92,221
2018ರ ಅವಧಿಯಲ್ಲಿ ಪರಿಹರಿಸಲ್ಪಟ್ಟ ಕುಂದುಕೊರೆತೆಗಳ ಸಂಖ್ಯೆ: 11,01,267
21.12.2018ಕ್ಕೆ ಅನ್ವಯವಾಗುವಂತೆ ಬಾಕಿಯಿರುವ ಕುಂದುಕೊರತೆಗಳ ಸಂಖ್ಯೆ: 93,107
ಸಂಪುಟ ನಿರ್ಧಾರಗಳು: 7.03.2018ರಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ, ಕೇಂದ್ರ ಲೋಕಸೇವಾ ಆಯೋಗ
(ಯುಪಿಎಸ್‍ಸಿ) ಹಾಗೂ ಮಾರಿಷಸ್‍ನ ಸಾರ್ವಜನಿಕ ಸೇವಾ ಆಯೋಗದ ನಡುವೆ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಲು ಒಪ್ಪಿಗೆ ಸೂಚಿಸಿತು. ಈ ಒಪ್ಪಂದವು ಎರಡು
ರಾಷ್ಟ್ರಗಳ ಲೋಕಸೇವಾ ಆಯೋಗಗಳ ನಡುವೆ ಸಾಂಸ್ಥಿಕ ಸಂಪರ್ಕವನ್ನು ಅಭಿವೃದ್ಧಿಪಡಿಸುತ್ತದೆ. ವೈಯಕ್ತಿಕ ನಿರ್ವಹಣೆ ಹಾಗೂ ಸಾರ್ವಜನಿಕ ಆಡಳಿತಕ್ಕೆ
ಸಂಬಂಧಿಸಿ ಭಾರತ ಮತ್ತು ಸಿಂಗಾಪುರದ ನಡುವೆ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಲು 23.05.2018ರಂದು ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ. ಸಾರ್ವಜನಿಕ
ಸೇವೆಗಳ ಹಂಚಿಕೆ, ಕೆಲಸಗಾರರು, ಕೆಲಸದ ಸ್ಥಳ ಹಾಗೂ ಉದ್ಯೋಗಗಳಲ್ಲಿ ಮಾನವ ಸಂಪನ್ಮೂಲ ನಿರ್ವಹಣೆ, ಸಾರ್ವಜನಿಕ ವಲಯ ಸುಧಾರಣೆ,
ನಾಯಕತ್ವ/ಬುದ್ಧಿವಂತಿಕೆ ಅಭಿವೃದ್ಧಿ ಹಾಗೂ ಇ-ಆಡಳಿತ ಹಾಗೂ ಡಿಜಿಟಲ್ ಸರ್ಕಾರದಲ್ಲಿ ಪ್ರಸ್ತಕವಿರುವ ಆಡಳಿತವನ್ನು ಅಭಿವೃದ್ಧಿಪಡಿಸುವುದು ಎಂಒಯುನ ಮುಖ್ಯ
ಉದ್ದೇಶ.
ಮಲೇಷ್ಯಾದ ಮಾನವ ಸಂಪನ್ಮೂಲ ಸಚಿವ ಶ್ರಿ ಎಂ.ಕುಲಶೇಖರನ್ ನೇತೃತ್ವದ ತಂಡ ರಾಜ್ಯ ಸಚಿವ ಡಾ.ಜಿತೇಂದ್ರ ಸಿಂಗ್ ಅವರನ್ನು 09.10.18. ರಂದು
ಮಾಡಿತು. ಈ ಭೇಟಿಯು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಮಲೇಷ್ಯಾದ ಮೇ ಭೇಟಿಯ ಮುಂದುವರಿದ ಭಾಗವಾಗಿದೆ. ನೇಮಕ, ತರಬೇತಿ ಹಾಗೂ
ಸಾರ್ವಜನಿಕ ಸೇವೆಗಳ ಇತರ ವಿಚಾರಗಳ ಭಾಗವಾಗಿ ನಡೆದ ದ್ವಿಪಕ್ಷೀಯ ಸಹಕಾರದ ಅಂಶಗಳನ್ನು ಈ ಸಂದರ್ಭದಲ್ಲಿ ಚರ್ಚಿಸಲಾಯಿತು.
ತಾಂಜೇನಿಯ ಸರ್ಕಾರದ ಸಾರ್ವಜನಿಕ ಸೇವೆ ಹಾಗೂ ಉತ್ತಮ ಆಡಳಿತ, ಕಾನೂನು ಮತ್ತು ನ್ಯಾಯ ಸಚಿವ ಶ್ರೀ ಹರೋನ್ ಅಲಿ ಸುಲೇಮಾನ್ ರಾಜ್ಯ ಸಚಿವರ
ಡಾ.ಜಿತೇಂದ್ರ ಸಿಂಗ್ ಅವರಿಗೆ 16.11.18ರಂದು ಕರೆ ಮಾಡಿ ಉತ್ತಮ ಆಡಳಿತಕ್ಕೆ ಸಂಬಂಧಿಸಿದಂತೆ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ
ಅಕಾಡೆಮಿ (ಎಲ್‍ಬಿಎಸ್‍ಎನ್‍ಎಎ) ಮಸ್ಸೂರಿ ಮತ್ತು ಇತರ ಭಾರತೀಯ ಸಂಸ್ಥೆಗಳ ಜತೆಗೆ ಶೈಕ್ಷಣಿಕ ಹಂತದ ವಿನಿಮಯ ಕಾರ್ಯಕ್ರಮಕ್ಕೆ ಸಂಬಂಧಿಸಿ ಚರ್ಚೆ
ನಡೆಸಿದರು.
ಪಿಂಚಣಿ ಅದಾಲತ್: ಪಿಂಚಣಿ ಹಾಗೂ ಪಿಂಚಣಿದಾರರ ಕಲ್ಯಾಣ ಇಲಾಖೆ ಸಿಪಿಇಎನ್‍ಜಿಆರ್‍ಎಎಂಎಸ್ ಪ್ರಕರಣಗಳಿಗೆ ಸಂಬಂಧಿಸಿ ಪಿಂಚಣಿ ಅದಾಲತ್‍ಗಳನ್ನು
ಆಯೋಜಿಸುವ ವಿನೂತನ ಪ್ರಯೋಗವನ್ನು ಪ್ರಾರಂಭಿಸಿತು. ವಿವಿಧ ಸಚಿವಾಲಯಗಳು ಮುಚ್ಚಿರುವ ಅಥವಾ 60 ದಿನಗಳೊಳಗೆ ವಿಲೇವಾರಿಯಾಗದ
ಪ್ರಕರಣಗಳಿಗೆ ಸಂಬಂಧಿಸಿ ಲೋಕ ಅದಾಲತ್ ಆಯೋಜಿಸಲಾಗುತ್ತಿದೆ. ಒಂದು ನಿರ್ದಿಷ್ಟ ಕುಂದುಕೊರತೆಗೆ ಸಂಬಂಧಿಸಿ ಎಲ್ಲ ಪಾಲುದಾರರನ್ನು ಒಂದೇ ಸ್ಥಳದÀಲ್ಲಿ
ಕರೆದು ಸಮಸ್ಯೆ ಬಗೆಹರಿಸುವುದು ಇದರ ಉದ್ದೇಶ. ಪಿಂಚಣಿ ಪಡೆಯುವವರು, ಸಂಬಂಧಿಸಿದ ಇಲಾಖೆ, ಪಿಎಒ, ಬ್ಯಾಂಕ್ ಹಾಗೂ ಪ್ರತಿನಿಧಿಗಳನ್ನು ಒಟ್ಟಿಗೆ ಕೂರಿಸಿ
ಪ್ರಕರಣವನ್ನು ಬಗೆಹರಿಸಲಾಗುತ್ತದೆ.
2018ರ ಫೆಬ್ರವರಿ 9ರಂದು ನಡೆದ 2ನೇ ಪಿಂಚಣಿ ಅದಾಲತ್‍ನಲ್ಲಿ 34 ವಿಲೇವಾರಿಯಾಗದ ಕುಂದುಕೊರತೆಗಳನ್ನು ಕೈಗೆತ್ತಿಕೊಳ್ಳಲಾಯಿತು. ಸಮಸ್ಯೆಯನ್ನು
ಸ್ಥಳದಲ್ಲೇ ಪರಿಹರಿಸಲು ಸಚಿವಾಲಯಗಳು, ಇಲಾಖೆಗಳು, ಬ್ಯಾಂಕ್‍ಗಳು, ಸಿಪಿಎಒನ ವಿವಿಧ ಷೇರುದಾರರನ್ನು ಕರೆಯಲಾಯಿತು. ಕುಟುಂಬ ಪಿಂಚಣಿ, ಪಿಂಚಣಿ
ಸಂಗ್ರಹ, ಜಿಪಿಎಫ್ ಅಂತಿಮ ಒಪ್ಪಂದ, ನಿಗದಿತ ವೈದ್ಯಕೀಯ ಭತ್ಯೆಗಳು ಇತ್ಯಾದಿಗಳಿಗೆ ಸಂಬಂಧಿಸಿದ ಪ್ರಕರಣಗಳ ಪರಿಶೀಲನೆಯನ್ನು ಇದು ಒಳಗೊಂಡಿದೆ.
ಆಯ್ದ 34 ಪ್ರಕರಣಗಳಲ್ಲಿ 20 ಅನ್ನು ಅದಾಲತ್‍ನಲ್ಲೇ ಬಗೆಹರಿಸಲಾಗಿದೆ. ಇದರಲ್ಲಿ 19 ಪ್ರಕರಣಗಳಲ್ಲಿ ಪಿಂಚಣಿದಾರರ ಆರೋಪಗಳನ್ನು ಪರಿಗಣಿಸಲಾಗಿದೆ.
ಪ್ರಕರಣವನ್ನು ಬಗೆಹರಿಸಲು ಸಂಬಂಧಿತ ಇಲಾಖೆಗೆ ಸೂಕ್ತ ಮಾರ್ಗದರ್ಶನಗಳನ್ನು ನೀಡಲಾಯಿತು. 2018ರ ನವೆಂಬರ್ 30ರಂದು 34 ಕುಂದುಕೊರತೆಗಳನ್ನು
ಅದಾಲತ್‍ನಲ್ಲಿ ಪ್ರಸ್ತಾಪಿಸಲಾಯಿತು. ಇದರಲ್ಲಿ 30 ಸಮಸ್ಯೆಗಳು ಬಗೆಹರಿದಿವೆ. ವೈಯಕ್ತಿಕ, ಸಾರ್ವಜನಿಕ ಕುಂದುಕೊರತೆ ಹಾಗೂ ಪಿಂಚಣಿ ಸಚಿವಾಲಯಕ್ಕೆ
ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿ 95ನೇ ವರದಿಯಲ್ಲಿ ಪಿಂಚಣಿ ಅದಾಲತ್‍ಗಳ ಆಯೋಜನಾ ವ್ಯವಸ್ಥೆಯನ್ನು ಶ್ಲಾಘಿಸಿದೆ. ಉತ್ತಮ ಆಡಳಿತ ಹಾಗೂ
ಕುಂದುಕೊರತೆಗಳನ್ನು ತಗ್ಗಿಸಲು ಪಿಂಚಣಿದಾರರಿಗಾಗಿಯೇ ಒಂದು ದಿನ ಮೀಸಲಿಡುವಂತೆ ಸಲಹೆ ನೀಡಿದೆ. ದೇಶಾದ್ಯಂತ ಸಚಿವಾಲಯಗಳಲ್ಲಿ ನಿರ್ದಿಷ್ಟ
ದಿನದಂದು ಪಿಂಚಣಿ ಅದಾಲತ್‍ಗಳನ್ನು ಆಯೋಜಿಸಲು ಸಮಿತಿ ಸಲಹೆ ನೀಡಿದೆ.
ಅಖಿಲ ಭಾರತ ಪಿಂಚಣಿ ಅದಾಲತ್-2018: ಇದು ವರ್ಷದಲ್ಲಿ ಒಂದು ದಿನವನ್ನು ಪಿಂಚಣಿದಾರರಿಗೆ ಮೀಸಲಿಡುವ ಪ್ರಯತ್ನ. ಪಿಂಚಣಿ ಹಾಗೂ ಪಿಂಚಣಿದಾರರ
ಕಲ್ಯಾಣ ಇಲಾಖೆ 2018ರ ಸೆಪ್ಟೆಂಬರ್ 18ರಂದು ಅಖಿಲ ಭಾರತ ಪಿಂಚಣಿ ಅದಾಲತ್ ಆಯೋಜಿಸಿತ್ತು. ರಾಜ್ಯ ಖಾತೆ ಸಚಿವ ಡಾ.ಜಿತೇಂದ್ರ ಸಿಂಗ್ ಇದನ್ನು
ಉದ್ಘಾಟಿಸಿದರು. ಎಲ್ಲ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳು (ಸಿಎಪಿಎಫ್‍ಎಸ್), ರಕ್ಷಣಾ, ರೈಲ್ವೆ, ದೂರಸಂಪರ್ಕ ಹಾಗೂ ಅಂಚೆಕಚೇರಿ ಸೇರಿದಂತೆ
ದೇಶಾದ್ಯಂತದ ವಿವಿಧ ಸಚಿವಾಲಯಗಳು/ಇಲಾಖೆಗಳಲ್ಲಿ ಅದಾಲತ್‍ಗಳನ್ನು ಆಯೋಜಿಸಲಾಗಿತ್ತು. ಅಖಿಲ ಭಾರತ ಸೇವೆಗಳ ಪಿಂಚಣಿದಾರರಿಗೆ ಸಂಬಂಧಿಸಿ
ಅದಾಲತ್‍ಗಳನ್ನು ಆಯೋಜಿಸುವಂತೆ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಲಾಗಿದೆ. ವರದಿ ಅನ್ವಯ ಪಿಂಚಣಿ ಅದಾಲತ್‍ನಲ್ಲಿ 12,849 ಪ್ರಕರಣಗಳನ್ನು
ಪರಿಹರಿಸಲಾಗಿದೆ. ಇವುಗಳಲ್ಲಿ 9,368 (73%) ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ್ದಾಗಿದೆ. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಕೂಡ ಅಖಿಲ ಭಾರತ
ಸೇವೆಯಿಂದ ನಿವೃತ್ತರಾದ ಅಧಿಕಾರಿಗಳಿಗೆ ಪಿಂಚಣಿ ಅದಾಲತ್‍ಗಳನ್ನು ಆಯೋಜಿಸಿದೆ. ಈ ಸಂದರ್ಭದಲ್ಲಿ 1614 ಕುಂದುಕೊರತೆಗಳನ್ನು ಅದೇ ದಿನ
ಬಗೆಹರಿಸಲಾಗಿದೆ. ಪಿಂಚಣಿ ಹಾಗೂ ಪಿಂಚಣಿದಾರರ ಕಲ್ಯಾಣ ಇಲಾಖೆ ಒಂದೇ ದಿನ ವಿವಿಧ ಸಚಿವಾಲಯಗಳಿಗೆ ಸಂಬಂಧಿಸಿದ 32 ಕುಂದುಕೊರತೆಗಳನ್ನು
ಕೈಗೆತ್ತಿಕೊಂಡಿತು. ಸಂಬಂಧಿತ ಪ್ರಾಧಿಕಾರಗಳು ಅರ್ಜಿಗಳ ವಿಲೇವಾರಿಗೆ ಕೈಗೊಂಡ ಕ್ರಮಗಳ ಬಗ್ಗೆ ಈ ಸಂದರ್ಭದಲ್ಲಿ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದರು.
ಈ ಪ್ರಕರಣವನ್ನು ಸಿಪಿಇಎನ್‍ಜಿಆರ್‍ಎಎಂಎಸ್ ಪೋರ್ಟಲ್‍ನಲ್ಲಿನ ಪರಿಹಾರವಾಗದ ಕಂದುಕೊರತೆಗಳಿಂದ ಆರಿಸಿಕೊಳ್ಳಲಾಗಿದೆ. ಇದರ ಜತೆಗೆ ಕಳೆದ ಪಿಂಚಣಿ
ಅದಾಲತ್‍ನಲ್ಲಿ ಪರಿಹರಿಸಲಾಗದ 4 ಪ್ರಕರಣಗಳನ್ನು ಮರುಪರಿಶೀಲಿಸಲಾಯಿತು. ಇದರಲ್ಲಿ 22 ಪ್ರಕರಣಗಳನ್ನು ಅದಾಲತ್ ನಡೆದ ಸ್ಥಳದಲ್ಲೇ
ಬಗೆಹರಿಸಲಾಯಿತು. ಇಲಾಖೆಗಳು/ಪಿಎಒ/ಸಿಪಿಎಒ/ಬ್ಯಾಂಕ್‍ಗಳಿಗೆ ಸಂಬಂಧಿಸಿ ಬಾಕಿಯಿರುವ ಪ್ರಕರಣಗಳನ್ನು ನಿರ್ದಿಷ್ಟ ಸಮಯ ಮಿತಿಯೊಳಗೆ ಪರಿಹರಿಸಲು
ಸಮರ್ಪಕ ಸೂಚನೆ/ ನಿರ್ದೇಶನಗಳನ್ನು ನೀಡಲಾಯಿತು.
ಪಿಂಚಣಿದಾರರ ಕುಂದುಕೊರತೆಗಳ ಮೂಲ ಕಾರಣದ ವಿಶ್ಲೇಷಣೆ: ವಿಲೇವಾರಿಯ ಗುಣಮಟ್ಟವನ್ನು ಕೇಂದ್ರೀಕರಿಸಿ ಪಿಂಚಣಿದಾರರ ಮೂಲ ಸಮಸ್ಯೆಗಳ
ವಿಶ್ಲೇಷಣೆಗೆ ಇಲಾಖೆ ಕ್ರಮ ಕೈಗೊಂಡಿದೆ. ಕೆಲವೊಂದು ಪ್ರಕರಣಗಳಲ್ಲಿ ಇದು ಅಷ್ಟೊಂದು ಸಮಾಧಾನಕಾರಿಯಾಗಿರಲಿಲ್ಲ. ಪರಿಹಾರ ಪ್ರಕ್ರಿಯೆ ಜತೆಗೆ
ಅಭಿಪ್ರಾಯಗಳನ್ನು ಕೂಡ ವಿಶ್ಲೇಷಿಸಲಾಯಿತು. ಇದರ ಪರಿಣಾಮ ತೊಂದರೆಗೆ ಒಳಗಾಗಿರುವ ಅನೇಕ ಫಲಾನುಭವಿಗಳನ್ನು ಗುರುತಿಸಿ ಹಾಗೂ ಈ ಸಮಸ್ಯೆಯ
ಮೂಲಕಾರಣವನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಾಯಿತು.
ಅನುಭವ್: 2017ರ ಏಪ್ರಿಲ್ 1ರಿಂದ ಮಾರ್ಚ್ 31ರ ತನಕ ಅನುಭವ್ ಪೋರ್ಟಲ್‍ನಲ್ಲಿ ಪ್ರಕಟಗೊಂಡ ಆಯ್ದ ಬರಹಗಳಿಗೆ ಆರು ಪ್ರಶಸ್ತಿಗಳನ್ನು ರಾಜ್ಯ ಸಚಿವರು
(ಪಿಪಿ) 3ನೇ ಅನುಭವ್ ಪ್ರಶಸ್ತಿ ಕಾರ್ಯಕ್ರಮದಲ್ಲಿ ವಿತರಿಸಿದರು. ನಿವೃತ್ತಿಗೆ ಮುನ್ನ ಆಪ್ತಸಮಾಲೋಚನೆ ಕಾರ್ಯಾಗಾರವನ್ನು 10.01.2018ರಂದು
ಆಯೋಜಿಸಲಾಗಿತ್ತು. ನಿವೃತ್ತಿಯಾದ ಬಳಿಕದ ಚಟುವಟಿಕೆಗಳ ಬಗ್ಗೆ ಜಾಗೃತಿ ಮೂಡಿಸುವುದು ಇದರ ಉದ್ದೇಶ. ಈ ಕಾರ್ಯಾಗಾರದಲ್ಲಿ 125 ನಿವೃತ್ತ ಅಧಿಕಾರಿಗಳು
5 ಎನ್‍ಜಿಒಗಳ ಜತೆ ನಿವೃತ್ತಿ ಬಳಿಕದ ಜೀವನದಲ್ಲಿ ಕೈಗೊಳ್ಳಬಹುದಾದ ಚಟುವಟಿಕೆಗಳ ಬಗ್ಗೆ ಚರ್ಚಿಸಿದರು.
ಡಿಜಿಟಲ್ ಜೀವನ ಪ್ರಮಾಣಪತ್ರ: ಹಿರಿಯ ಹಾಗೂ ನಿವೃತ್ತ ಪಿಂಚಣಿದಾರರು ಜೀವನ ಪ್ರಮಾಣ ಪತ್ರಕ್ಕಾಗಿ ನವೆಂಬರ್ ತಿಂಗಳಲ್ಲಿ ಬ್ಯಾಂಕ್ ಮುಂದೆ ಸರದಿ
ಸಾಲಿನಲ್ಲಿ ನಿಲ್ಲಬೇಕಾದ ಅನಿವಾರ್ಯತೆಯನ್ನು ಮನಗಂಡು ಪಿಂಚಣಿದಾರರ ಸಂಘಟನೆಗಳ ಸಹಕಾರದಿಂದ ಎಂಟು ನಗರಗಳಲ್ಲಿ ಮನೆಯಲ್ಲೇ ಡಿಜಿಟಲ್ ಜೀವನ
ಪ್ರಮಾಣಪತ್ರ ಪಡೆಯುವ ವ್ಯವಸ್ಥೆಯನ್ನು ಆರಂಭಿಸಿದೆ. ಇದು ನೋಯ್ಡ/ದೆಹಲಿ, ಚಂಡೀಗಢ, ಡೆಹ್ರಾಡೂನ್, ಮುಂಬೈ, ಮೈಸೂರು, ವಡೋದರ,
ತಿರುವನಂತಪುರಂ ಹಾಗೂ ಬೆಂಗಳೂರಿನಲ್ಲಿ ಪೈಲೆಟ್ ಕಾರ್ಯಕ್ರಮವಾಗಿ ಪ್ರಾರಂಭಿಸಲಾಯಿತು. 13.12.2018ರ ತನಕ ಡಿಎಲ್‍ಸಿಎಸ್‍ನ 2480 ಸದಸ್ಯರು
ಮನೆಗಳಿಂದಲೇ ವಯಸ್ಕ ಪಿಂಚಣಿಗಳನ್ನು ಪಡೆದಿದ್ದಾರೆ.
ಸ್ವಯಂಸೇವಾ ಸಂಸ್ಥೆಗಳ ಸ್ಥಾಯಿ ಸಮಿತಿ (ಎಸ್‍ಸಿಒವಿಎ): ರಾಜ್ಯ ಸಚಿವರ (ಪಿಪಿ) ನೇತೃತ್ವದಲ್ಲಿ ಸ್ವಯಂಸೇವಕ ಸಂಸ್ಥೆಗಳ ಸ್ಥಾಯಿ ಸಮಿತಿ (ಎಸ್‍ಸಿಒವಿಎ)
ಸ್ಥಾಪಿಸಲಾಯಿತು. ಈ ಇಲಾಖೆಯ ಕಾರ್ಯಕ್ರಮಗಳು/ನೀತಿಗಳ ಅನುಷ್ಠಾನದ ಬಗ್ಗೆ ಅಭಿಪ್ರಾಯ ಒದಗಿಸುವ ಉದ್ದೇಶದಿಂದ ಇದರ ಸ್ಥಾಪನೆ ಮಾಡಲಾಗಿದೆ.
ಸಚಿವರಾದ ಡಾ.ಜಿತೇಂದ್ರ ಸಿಂಗ್ ನೇತೃತ್ವದಲ್ಲಿ ಎಸ್‍ಸಿಒವಿಎಯ 30ನೇ ಸಭೆ ನವದೆಹಲಿಯಲ್ಲಿ 2018ರ ಮಾರ್ಚ್ 23ರಂದು ನಡೆಯಿತು. ವಿವಿಧ ಪಿಂಚಣಿ
ಸಂಘಟನೆಗಳು ಹಾಗೂ ಸಚಿವಾಲಯಗಳು/ಇಲಾಖೆಗಳ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಿದ್ದರು. 2006ಕ್ಕೂ ಮೊದಲಿನ ಪಿಂಚಣಿದಾರರಿಗೆ ಸಂಬಂಧಿಸಿದ
ವಿಷಯಗಳು, ಆರೋಗ್ಯ ವಿಮೆ, ಪಿಂಚಣಿದಾರರ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು.
2018 ರ ಅವಧಿಯಲ್ಲಿ ಪಿಂಚಣಿ ಸುಧಾರಣೆ:
1. ಸಿಜಿಎಚ್‍ಎಸ್ ಅಡಿಯಲ್ಲಿ ನಿಗದಿತ ವೈದ್ಯಕೀಯ ಭತ್ಯೆಗೆ ಪಡೆಯಲು ನಗರದಲ್ಲಿ ವಾಸಿಸುವ ಪಿಂಚಣಿದಾರರಿಗೆ ಸಿಎಂಒ ಅಂಗೀಕೃತ ಆದೇಶವನ್ನು
31.01.2018ರಂದು ಹೊರಡಿಸಲಾಯಿತು.
2. ಪಿಂಚಣಿ ಹಾಗೂ ಪಿಂಚಣಿದಾರರ ಕಲ್ಯಾಣ ಇಲಾಖೆ ಕಾರ್ಯದರ್ಶಿ ನೇತೃತ್ವದಲ್ಲಿ ವಿತ್ತ ಸೇವೆಗಳ ಇಲಾಖೆ ಸಮಿತಿಯನ್ನು ರಚಿಸಿತು. ರಾಷ್ಟ್ರೀಯ ಪಿಂಚಣಿ
ಯೋಜನೆ ಅನುಷ್ಠಾನವನ್ನು ಮುಖ್ಯವಾಹಿನಿಗೆ ತರಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲು ನೆರವು ನೀಡಲು ಇದನ್ನು ರಚಿಸಲಾಗಿದೆ. ಈ ಸಮಿತಿ
28.2.2018ರಂದು ವರದಿ ಸಲ್ಲಿಸಿತು. ವರದಿಯ ಶಿಫಾರಸ್ಸಿನ ಅನ್ವಯ ಸರ್ಕಾರ ಈ ಕೆಳಗಿನ ಕ್ರಮಗಳನ್ನು ಕೈಗೊಂಡಿದೆ:
*ಎನ್‍ಪಿಎಸ್ ಟೈರ್-1ರ ಅಡಿಯಲ್ಲಿ ಕೇಂದ್ರ ಸರ್ಕಾರ ತನ್ನ ನೌಕರರಿಗೆ ನೀಡುತ್ತಿರುವ ಕೊಡುಗೆ ಮೊತ್ತವನ್ನು ಪ್ರಸಕ್ತವಿರುವ ಶೇ.10ರಿಂದ ಶೇ.14ಕ್ಕೆ ಏರಿಕೆ.
*ಕೇಂದ್ರ ಸರ್ಕಾರದ ನೌಕರರಿಗೆ ಪಿಂಚಣಿ ನಿಧಿಗಳು ಹಾಗೂ ಹೂಡಿಕೆ ಮಾದರಿಯ ಆಯ್ಕೆಯಲ್ಲಿ ಸ್ವಾತಂತ್ರ್ಯ ಒದಗಿಸುವುದು.
* 2004-2012ರ ಅವಧಿಯಲ್ಲಿ ಎನ್‍ಪಿಎಸ್ ಕೊಡುಗೆಯನ್ನು ಖಾತೆಗೆ ತುಂಬದ ಅಥವಾ ತಡವಾಗಿ ನೀಡಿದ ಹಿನ್ನೆಲೆಯಲ್ಲಿ ಪರಿಹಾರ ಪಾವತಿ.
*ಎನ್‍ಪಿಎಸ್‍ನಿಂದ ಹಣ ತೆಗೆಯುವಾಗ ಪ್ರಸ್ತುತವಿದ್ದ ತೆರಿಗೆ ವಿನಾಯಿತಿ ಮಿತಿಯನ್ನು ಶೇ.60ರಷ್ಟು ಹೆಚ್ಚಿಸಲಾಯಿತು. ಈ ಮೂಲಕ ಇನ್ನು ಮುಂದೆ ಸಂಪೂರ್ಣ
ಮೊತ್ತದ ಹಿಂತೆಗೆತದ ಮೇಲೆ ಯಾವುದೇ ಆದಾಯ ತೆರಿಗೆ ಇರುವುದಿಲ್ಲ.
ಕೇಂದ್ರ ಮಾಹಿತಿ ಆಯೋಗ (ಸಿಐಸಿ) ವಾರ್ಷಿಕ ವರದಿಯನ್ನು ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ 2018ರ ಮಾರ್ಚ್ 14 ಹಾಗೂ 15ರಂದು ಕ್ರಮವಾಗಿ
ಮಂಡಿಸಲಾಯಿತು. ವಾರ್ಷಿಕ ವರದಿಯ ಮುಖ್ಯಾಂಶಗಳು ಹೀಗಿವೆ:
•2016-17ನೇ ಸಾಲಿನಲ್ಲಿ 9.17 ಲಕ್ಷ ಆರ್‍ಟಿಐ ಅರ್ಜಿಗಳನ್ನು ಕೇಂದ್ರ ಸಾರ್ವಜನಿಕ ಪ್ರಾಧಿಕಾರಗಳಲ್ಲಿ (ಪಿಎಎಸ್) ನೋಂದಣಿಯಾಗಿತ್ತು. ಇದು 2015-16ನೇ
ಸಾಲಿನಲ್ಲಿ ವರದಿಯಾಗಿದ್ದಕ್ಕಿಂತ 59,670 ಕಡಿಮೆ ಅಂದರೆ ಶೇ.6.1 ಕಡಿಮೆ.
•2016-17 ನೇ ಸಾಲಿನಲ್ಲಿ ಕೇಂದ್ರ ಪಿಎ ಶೇ.6.59 (60,428) ಆರ್‍ಟಿಐ ಅರ್ಜಿಗಳನ್ನು ತಿರಸ್ಕರಿಸಿತ್ತು. 2015-16ನೇ ಸಾಲಿನಲ್ಲಿ ಶೇ.6.62ರಷ್ಟಿದ್ದ ಇದು
ಶೇ.0.03ರಷ್ಟು ಇಳಿಕೆಯಾಗಿತ್ತು.
•ಹಣಕಾಸು ಸಚಿವಾಲಯ ಶೇ.18.41, ಗೃಹ ವ್ಯವಹಾರಗಳ ಸಚಿವಾಲಯ ಶೇ.16.08 ಹಾಗೂ ಗೃಹ ವ್ಯವಹಾರಗಳ ಸಚಿವಾಲಯ ಶೇ.16.08 ಹಾಗೂ ಕಾರ್ಮಿಕ
ಮತ್ತು ಉದ್ಯೋಗ ಸಚಿವಾಲಯ ಶೇ.14.37 ಆರ್‍ಟಿಇ ಅರ್ಜಿಗಳನ್ನು ತಿರಸ್ಕರಿಸಿವೆ.
•ಹಿಂದಿನ ವರ್ಷಕ್ಕೆ ಹೋಲಿಸಿದರೆ ಕೇಂದ್ರ ಪಿಎ ಸ್ವೀಕರಿಸಿದ ಮೊದಲ ಹಂತದ ಮೇಲ್ಮನವಿ ಅರ್ಜಿಗಳ ಸಂಖ್ಯೆಯಲ್ಲಿ ಶೇ.0.08 ಕಡಿಮೆಯಾಗಿತ್ತು ಎಂದು 2016-
17ನೇ ಸಾಲಿನ ವಾರ್ಷಿಕ ವರದಿ ಸೂಚಿಸಿತ್ತು.
•2016-17ನೇ ಸಾಲಿನಲ್ಲಿ ಸಿಐಸಿ 32,344 ಮನವಿಗಳು ಹಾಗೂ ದೂರುಗಳನ್ನು ಪರಿಹರಿಸಿದರು. ಇದು ಆಯೋಗ ವಿಲೇವಾರಿ ಮಾಡಿದ ಅತ್ಯಧಿಕ ಸಂಖ್ಯೆಯ
ಅರ್ಜಿಗಳು. ಇದೇ ಅವಧಿಯಲ್ಲಿ ಒಟ್ಟು 23,811 ಪ್ರಕರಣಗಳು ನೋಂದಣಿಯಾಗಿದ್ದವು. ವರ್ಷಾಂತ್ಯದಲ್ಲಿ ಆಯೋಗದ ಬಳಿ 26,449 ಪ್ರಕರಣಗಳು ವಿಲೇವಾರಿಗೆ
ಬಾಕಿ ಉಳಿದಿದ್ದವು.
•2016-17ನೇ ಅವಧಿಯಲ್ಲಿ 18.98 ಲಕ್ಷ ರೂ. ದಂಡವನ್ನು ಆಯೋಗ ವಿಧಿಸಿತ್ತು. ಪಿಐಒಎಸ್‍ನಿಂದ ಒಟ್ಟು 8.6 ಲಕ್ಷ ರೂ. ವಶಪಡಿಸಿಕೊಳ್ಳಲಾಗಿತ್ತು.
•2015-16ನೇ ಸಾಲಿಗಿಂತ ಹೆಚ್ಚಿನ ಅಂದರೆ ಒಟ್ಟು 1,965 ಪಿಎಗಳನ್ನು ಈ ಸಾಲಿನಲ್ಲಿ ಸಲ್ಲಿಸಲಾಗಿದೆ.
ಕೇಂದ್ರ ಮಾಹಿತಿ ಆಯೋಗ (ಸಿಐಸಿ) 13ನೇ ವಾರ್ಷಿಕ ಸಮ್ಮೇಳನ: ಕೇಂದ್ರ ಮಾಹಿತಿ ಆಯೋಗ (ಸಿಐಸಿ)ದ 13ನೇ ವಾರ್ಷಿಕ ಸಮ್ಮೇಳನವನ್ನು 12.10.18ರಂದು
ಭಾರತದ ರಾಷ್ಟ್ರಪತಿ ಶ್ರೀ ರಾಮನಾಥ್ ಕೋವಿಂದ್ ಅವರು ಉದ್ಘಾಟಿಸಿದರು. ‘ಮಾಹಿತಿ ಗೌಪ್ಯತೆ ಹಾಗೂ ಮಾಹಿತಿ ಹಕ್ಕು, ಆರ್‍ಟಿಐ ಕಾಯ್ದೆಗೆ ತಿದ್ದುಪಡಿ ಹಾಗೂ
ಆರ್‍ಟಿಐ ಕಾಯ್ದೆ ಅನುಷ್ಠಾನ’ ವಿಷಯದ ಮೇಲೆ ವಾರ್ಷಿಕ ಸಮ್ಮೇಳನ. ಆಡಳಿತ ಸುಧಾರಣೆಯಲ್ಲಿ ಪಾರದರ್ಶಕತೆ ಹಾಗೂ ಉತ್ತರದಾಯಿತ್ವ ಹೆಚ್ಚಿಸಲು ಅಗತ್ಯ
ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಶಿಫಾರಸುಗಳನ್ನು ಮಾಡಲಾಗಿದೆ. ‘ಮಾಹಿತಿ ಗೌಪ್ಯತೆ ಹಾಗೂ ಮಾಹಿತಿ ಹಕ್ಕು’, ‘ಆರ್‍ಟಿಇ ಕಾಯ್ದೆಗೆ ತಿದ್ದುಪಡಿ’ ಹಾಗೂ
ಆರ್‍ಟಿಐ ಕಾಯ್ದೆ ಅನುಷ್ಠಾನಕ್ಕೆ ಸಂಬಂಧಿಸಿ ಮೂರು ನಿರ್ದಿಷ್ಟ ವಿಷಯಗಳ ಮೇಲೆ ಸಮ್ಮೇಳನ ಕೇಂದ್ರಿಕೃತವಾಗಿತ್ತು.
ಕೇಂದ್ರ ಮಾಹಿತಿ ಆಯೋಗ (ಸಿಐಸಿ)ಕ್ಕೆ ಹೊಸ ಕಟ್ಟಡ: ಕೇಂದ್ರ ಮಾಹಿತಿ ಆಯೋಗದ ಹೊಸ ಕಟ್ಟಡವನ್ನು ನವದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ
06.03.18ರಂದು ಉದ್ಘಾಟಿಸಿದರು. ನಿಗದಿತ ಅವಧಿಗಿಂತ ಮುನ್ನ ಕಟ್ಟಡ ಪೂರ್ಣಗೊಂಡಿತ್ತು. ಕಟ್ಟಡ ನಿರ್ಮಾಣದಲ್ಲಿ ತೊಡಗಿದ್ದ ಎಲ್ಲ ಸಂಸ್ಥೆಗಳನ್ನು ಈ
ಸಂದರ್ಭದಲ್ಲಿ ಅಭಿನಂದಿಸಲಾಯಿತು. ಇಂಧನ ಉಳಿತಾಯಗಳು ಹಾಗೂ ಪರಿಸರದ ಸಂರಕ್ಷಣೆಗೆ ಗೃಹ-17 ಪರಿಸರಸ್ನೇಹಿ ವ್ಯವಸ್ಥೆ ನೆರವು ನೀಡಲಿದೆ ಎಂದು
ಪ್ರಧಾನಮಂತ್ರಿ ಹೇಳಿದರು. ಆಯೋಗವು ಒಂದೇ ಸ್ಥಳದಿಂದ ಕಾರ್ಯನಿರ್ವಹಿಸುವಂತೆ ಮಾಡಲು ಈ ಹೊಸ ಕಟ್ಟಡ ನೆರವು ನೀಡಲಿದೆ. ಈ ಮೊದಲು ಅದು ಎರಡು
ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಮಾಹಿತಿ ಹಕ್ಕು ಕಾಯ್ದೆ 2005 ರ ಅನ್ವಯ ಸಿಐಸಿ ಸ್ಥಾಪಿಸಲಾಗಿದೆ.
ಹಿಂದಿಯಲ್ಲಿ ನೂತನ ಮೊಬೈಲ್ ಆಪ್ ಸಿಐಸಿಯನ್ನು ಕೇಂದ್ರ ಮಾಹಿತಿ ಆಯೋಗ (ಸಿಐಸಿ) 2018ರ ಜುಲೈನಲ್ಲಿ ಬಿಡುಗಡೆಗೊಳಿಸಿತು. ಇದು ಗೂಗಲ್ ಪ್ಲೇ ಸ್ಟೋರ್
ಹಾಗೂ ಆಪಲ್ ಸ್ಟೋರ್‍ನಲ್ಲಿ ಈ ಕೆಳಗಿನ ವಿಶೇಷತೆಗಳೊಂದಿಗೆ ಲಭ್ಯವಿವೆ.
*ಅರ್ಜಿದಾರ ಅವಳ/ಅವನ 2ನೇ ಮನವಿಗಳು/ದೂರುಗಳು/ಲಿಂಕ್ ಪೇಪರ್‍ಗಳನ್ನು ಹಿಂದಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಸಲ್ಲಿಸಬಹುದು.
*ಅರ್ಜಿದಾರರು ಈ ಎರಡೂ ಭಾಷೆಗಳಲ್ಲಿ ಎರಡನೇ ಮನವಿ/ದೂರನ್ನು ಹುಡುಕಬಹುದು.
*ಹಿಂದಿ ಹಾಗೂ ಇಂಗ್ಲಿಷ್‍ನಲ್ಲಿ ಅರ್ಜಿಗಳ ಸ್ಥಿತಿಗತಿಗಳ ಮಾಹಿತಿ ಲಭಿಸುತ್ತದೆ.
*ಅರ್ಜಿದಾರರು ಅರ್ಜಿಗಳ ಪ್ರತಿಯನ್ನು ಡೌನ್‍ಲೋಡ್ ಮಾಡಿಕೊಳ್ಳಲು ಅವಕಾಶವಿದೆ.
ಕೇಂದ್ರ ಮಾಹಿತಿ ಆಯೋಗ ಆರ್‍ಟಿಐ ಕಾಯ್ದೆಯ ಅನುಷ್ಠಾನಕ್ಕೆ ಸಂಬಂಧಿಸಿ ವಿವಿಧ ಸಾರ್ವಜನಿಕ ಪ್ರಾಧಿಕಾರಗಳು ಕೈಗೊಂಡ ಕ್ರಮಗಳನ್ನು
ಪರಿಶೀಲನೆಗೊಳಪಡಿಸುತ್ತದೆ. ಮಾಜಿ ಮುಖ್ಯ ಮಾಹಿತಿ ಆಯುಕ್ತ ಎ.ಎನ್.ತಿವಾರಿ ಹಾಗೂ ಮಾಜಿ ಮಾಹಿತಿ ಆಯುಕ್ತ (20.11.18) ಎಂ.ಎಂ.ಅನ್ಸಾರಿ
ಅವರನ್ನೊಳಗೊಂಡ ಸಮಿತಿ ಪರಿಶೀಲನೆ ನಡೆಸುತ್ತದೆ.
ಆರೋಗ್ಯ ಹಾಗೂ ಮಾಹಿತಿ ಹಕ್ಕುಗಳ ಕಾಯ್ದೆ 2005 ಕ್ಕೆ ಸಂಬಂಧಿಸಿ ಕೇಂದ್ರ ಮಾಹಿತಿ ಆಯೋಗ 07.04.18ರಂದು ಸೆಮಿನಾರ್ ಆಯೋಜಿಸಿತ್ತು. ಕೇಂದ್ರ ಮಾಹಿತಿ
ಆಯೋಗದ ಮುಖ್ಯ ಆಯುಕ್ತ , ಮಾಜಿ ಮಾಹಿತಿ ಆಯುಕ್ತರು, ರಾಜ್ಯ ಮಾಹಿತಿ ಆಯುಕ್ತರು, ಎನ್‍ಜಿಒ ಇತರರು ಸೆಮಿನಾರ್‍ನಲ್ಲಿ ಭಾಗವಹಿಸಿದರು.
ವಿಚಕ್ಷಣ ಜಾಗೃತಿ ವಾರ: ಕೇಂದ್ರ ವಿಚಕ್ಷಣ ಆಯೋಗ ವಿಚಕ್ಷಣಾ ಜಾಗೃತಿ ವಾರವನ್ನು ಸರ್ದಾರ್ ವಲ್ಲಭ್‍ಭಾಯಿ ಪಟೇಲ್ ಹುಟ್ಟುಹಬ್ಬದ ದಿನವಾದ ಅಕ್ಟೋಬರ್
31ರಂದು ಆಚರಿಸಲಾಯಿತು. ‘ಭ್ರಷ್ಟಚಾರ ಹೊಗಲಾಡಿಸಿ ಹೊಸ ಭಾರತ ನಿರ್ಮಾಣ’ ಉದ್ದೇಶದೊಂದಿಗೆ 2018ರ ಅಕ್ಟೋಬರ್ 29ರಿಂದ ನವೆಂಬರ್ 3ರ ತನಕ
ವಿಚಕ್ಷಣ ಜಾಗೃತಿ ವಾರವನ್ನು ಆಚರಿಸಲಾಯಿತು. ಕೇಂದ್ರ ವಿಚಕ್ಷಣ ಆಯೋಗ ಆಚರಿಸಿದ ವಿಚಕ್ಷಣ ಜಾಗೃತಿ ವಾರವನ್ನು ದೂರದರ್ಶನದಲ್ಲಿ ಪ್ರಸಾರ
ಮಾಡಲಾಯಿತು. ಆ ಮೂಲಕ ಈ ಸಂಬಂಧ ಎಲ್ಲ ಸಾರ್ವಜನಿಕ ಸೇವಕರು ಪ್ರತಿಜ್ಞೆ ಕೈಗೊಳ್ಳುವಂತೆ ಮಾಡಲಾಯಿತು. ರಾಷ್ಟ್ರಪತಿ ಶ್ರೀ ರಾಮನಾಥ್ ಕೋವಿಂದ್
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ರಾಜ್ಯ ಖಾತೆ ಸಚಿವ ಡಾ.ಜಿತೇಂದ್ರ ಸಿಂಗ್ ಕಾರ್ಯಕ್ರಮದ ಗೌರವನ್ವಿತ ಅತಿಥಿಯಾಗಿದ್ದರು. ವಿವಿಧ
ಸಚಿವಾಲಯಗಳು, ಇಲಾಖೆಗಳು ಹಾಗೂ ಕೇಂದ್ರ ಸರ್ಕಾರದ ಇತರ ಸಂಸ್ಥೆಗಳ ಹಿರಿಯ ಅಧಿಕಾರಿಗಳು ಹಾಗೂ ನಿವೃತ್ತ ಅಧಿಕಾರಿಗಳು, ಕೇಂದ್ರ ಸಾರ್ವಜನಿಕ
ವಲಯದ ಉದ್ಯಮಿಗಳು, ವೃತ್ತಿನಿರತ ಸಂಘಟನೆಗಳ ಪ್ರತಿನಿಧಿಗಳು, ವಾಣಿಜ್ಯ ಹಾಗೂ ಕೈಗಾರಿಕಾ ಸಂಘಟನೆಗಳು, ಎನ್‍ಜಿಒಗಳು, ಶಿಕ್ಷಣ ಸಂಸ್ಥೆಗಳ
ಪ್ರಾಂಶುಪಾಲರು ಹಾಗೂ ಮುಖ್ಯಸ್ಥರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಚಕ್ಷಣ ಶ್ರೇಷ್ಠತೆ ಪ್ರಶಸ್ತಿಗಳನ್ನು ರಾಷ್ಟ್ರಪತಿ ವಿತರಿಸಿದರು. ವಿಚಕ್ಷಣ ಜಾಗೃತಿ ವಾರದ
ಅಂಗವಾಗಿ ಇಲಾಖೆಗಳು ಹಾಗೂ ಸರ್ಕಾರಿ ಸಂಸ್ಥೆಗಳು ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದವು.
ಸಿವಿಸಿ ಉಪನ್ಯಾಸ ಸರಣಿಗಳು: ಉಪನ್ಯಾಸ ಸರಣಿಗಳ ಭಾಗವಾಗಿ ಸಿವಿಸಿ ತಜ್ಞರು/ಗಣ್ಯ ವ್ಯಕ್ತಿಗಳಿಂದ ಸಿವಿಸಿ ಉಪನ್ಯಾಸಗಳನ್ನು ಏರ್ಪಡಿಸಿತ್ತು. ಲೋಕಸಭಾ
ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ‘ಜನರ ಪ್ರತಿನಿಧಿಯಾಗಿ ನನ್ನ ಅನುಭವ’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು. ಸಾರ್ವಜನಿಕ ಹಣಕಾಸು ಹಾಗೂ
ನೀತಿ ರಾಷ್ಟ್ರೀಯ ಸಂಸ್ಥೆ ನಿರ್ದೇಶಕರಾದ ಡಾ.ರತಿನ್ ರಾಯ್, ಯುಐಡಿಎಐ ಸಿಇಒ ಡಾ.ಅಜಯ್ ಭೂಷಣ ಪಾಂಡೆ, ಹಣಕಾಸು ಆಯೋಗದ ಸದಸ್ಯರಾದ
ಶಕ್ತಿಕಾಂತ್ ದಾಸ್ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿ ಪ್ರಮುಖ ಗಣ್ಯರು ಉಪನ್ಯಾಸಗಳನ್ನು ನೀಡಿದರು.
ಬ್ಯಾಂಕ್ ವಂಚನೆಗೆ ಸಂಬಂಧಿಸಿದ ಅಗ್ರ 100 ಪ್ರಕರಣಗಳ ವರದಿ: ಈ ವರ್ಷ ಬಿಡುಗಡೆಯಾದ 2017ನೇ ಸಾಲಿನ ವರದಿ ಆಧರಿಸಿ ಅಗ್ರ 100 ಬ್ಯಾಂಕ್ ವಂಚನೆ
ಪ್ರಕರಣಗಳನ್ನು ಸಿವಿಸಿ ಪರಿಶೀಲಿಸಿ, ವಿಶ್ಲೇಷಿಸಿದೆ. ಹರಳು ಮತ್ತು ಆಭರಣಗಳು, ಉತ್ಪಾದನೆ, ಕೃಷಿ ವಲಯ, ಮಾಧ್ಯಮ, ವಾಯುಯಾನ, ಸೇವಾ ವಲಯ,
ಚೆಕ್‍ಗಳು ಹಾಗೂ ಬಿಲ್‍ಗಳ ಡಿಸ್ಕೌಂಟ್, ವಾಣಿಜ್ಯ ವಲಯ, ಐಟಿ ವಲಯ, ರಫ್ತು ವಲಯ, ನಿಗದಿತ ಠೇವಣಿ ಹಾಗೂ ಬೇಡಿಕೆ ಸಾಲ ಇತ್ಯಾದಿ. ಈ ಸಾಲ ನೀಡುವಿಕೆ
ಪ್ರಕ್ರಿಯೆಗೆ ಸಂಬಂಧಿಸಿ ವಿಶ್ಲೇಷಣೆ ನಡೆಸಲಾಯಿತು. ಅದರಲ್ಲಿನ ವಿವಿಧ ಲೋಪದೋಷಗಳನ್ನು ಗುರುತಿಸಲಾಯಿತು. ಇದರ ಆಧಾರದಲ್ಲಿ ವ್ಯವಸ್ಥೆಯ ಅಭಿವೃದ್ಧಿಗೆ
ನಿರ್ದಿಷ್ಟ ಸಲಹೆಗಳನ್ನು ಹಣಕಾಸು ಸೇವೆಗಳ ಸಚಿವಾಲಯ ಹಾಗೂ ಆರ್‍ಬಿಐಗೆ ಸೂಚಿಸಲಾಗಿದೆ. ಎಸ್‍ಒಪಿಗಳ ಬಲಿಷ್ಠತೆ, ನಿರ್ವಹಣಾ ವ್ಯವಸ್ಥೆ, ನಿರ್ವಹಣಾ
ಸಂಸ್ಥೆಗಳ ಪಾತ್ರದ ಮುಖ್ಯಾಂಶಗಳು, ಉದ್ಯಮದ ಗುಣಮಟ್ಟದ ವಿಶ್ಲೇಷಣೆಗೆ ಸಂಬಂಧಿಸಿ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಅಭ್ಯರ್ಥಿಗಳಿಗೆ ಅರ್ಜಿಗಳನ್ನು ಹಿಂಪಡೆಯುವ ಸೌಲಭ್ಯವನ್ನು ಯುಪಿಎಸ್ಸಿ ಕಲ್ಪಿಸಿದೆ: ಅಭ್ಯರ್ಥಿಗಳಿಗೆ ಅರ್ಜಿಗಳನ್ನು ಹಿಂಪಡೆಯಲು ಕೇಂದ್ರ ಸಾರ್ವಜನಿಕ ಸೇವಾ
ಆಯೋಗ (ಯುಪಿಎಸ್ಸಿ) ಅವಕಾಶ ಕಲ್ಪಿಸಿದೆ. ಯುಪಿಎಸ್ಸಿ ಮುಖ್ಯಸ್ಥರಾದ ಶ್ರೀ ಅರವಿಂದ್ ಸಕ್ಸೆನಾ 01.10.18ರಂದು ನಡೆದ 92ನೇ ಸಂಸ್ಥಾಪನಾ ದಿನದಂದು
ಮಾತನಾಡುತ್ತ ಈ ವಿಷಯ ಘೋಷಿಸಿದ್ದಾರೆ. ನಾಗರಿಕ ಸೇವಾ ಪರೀಕ್ಷೆಗೆ 10 ಲಕ್ಷಕ್ಕಿಂತಲೂ ಹೆಚ್ಚು ಅಭ್ಯರ್ಥಿಗಳು ಅರ್ಜಿ ಸಲ್ಲಿಸುತ್ತಾರೆ. ಆದರೆ, ಅವರಲ್ಲಿ ಶೇ.50
ಅಭ್ಯರ್ಥಿಗಳು ಮಾತ್ರ ಪೂರ್ವಸಿದ್ಧತಾ ಪರೀಕ್ಷೆಗೆ ಹಾಜರಾಗುತ್ತಾರೆ ಎಂದು ಅವರು ಹೇಳಿದರು. 10 ಲಕ್ಷ ಅರ್ಜಿದಾರರಿಗೆ ನಾವು ಪರೀಕ್ಷಾ ಕೇಂದ್ರ ನಿಯೋಜನೆ
ಮಾಡಬೇಕು, ಪೇಪರ್‍ಗಳನ್ನು ಪ್ರಿಂಟ್ ಮಾಡಬೇಕು, ಮೌಲ್ಯಮಾಪಕರನ್ನು ನೇಮಿಸಿಕೊಳ್ಳಬೇಕು ಹಾಗೂ ದಾಖಲೆಗಳನ್ನು ರವಾನೆ ಮಾಡಬೇಕು-ಇದಕ್ಕೆಲ್ಲ
ಒಟ್ಟಾರೆ ಶೇ.50ರಷ್ಟು ಶಕ್ತಿ ಹಾಗೂ ಸಂಪನ್ಮೂಲಗಳು ವ್ಯರ್ಥವಾಗುತ್ತವೆ ಎಂದು ಅವರು ಹೇಳಿದರು. ಅರ್ಜಿ ಹಿಂಪಡೆಯುವ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಇ-
ಮೇಲ್ ಹಾಗೂ ಎಸ್‍ಎಂಎಸ್ ಕಳುಹಿಸಲಾಗುತ್ತದೆ. ಒಮ್ಮೆ ಅರ್ಜಿ ಹಿಂಪಡೆದ ಬಳಿಕ ಅದನ್ನು ಮತ್ತೆ ಸಲ್ಲಿಸಲು ಅವಕಾಶವಿಲ್ಲ.
ಯುಪಿಎಸ್‍ಸಿ ಮುಖ್ಯಸ್ಥರಾಗಿ ಶ‍್ರೀ ಅರವಿಂದ್ ಸಕ್ಷೇನಾ ಪ್ರಮಾಣವಚನ ಸ್ವೀಕಾರ: ಆಯೋಗದ ಸದಸ್ಯರಾಗಿ 8.5.2015ರಂದು ಸಕ್ಷೇನಾ ನೇಮಕಗೊಂಡಿದ್ದರು.
20.06.2018ರಂದು ಅವರನ್ನು ಯುಪಿಎಸ್‍ಸಿ ಮುಖ್ಯಸ್ಥರ ಸ್ಥಾನಕ್ಕೆ ನೇಮಕ ಮಾಡಲಾಯಿತು. ಅವರು 29.11.18ರಿಂದ ಯುಪಿಎಸ್‍ಸಿ ಮುಖ್ಯಸ್ಥರಾಗಿ ಅಧಿಕಾರ
ಸ್ವೀಕರಿಸಿದರು.
13.12.18ರಂದು ಭರತ್ ಭೂಷಣ್ ವ್ಯಾಸ್ ಐಎಎಸ್ (ಜಮ್ಮು ಮತ್ತು ಕಾಶ್ಮೀರ 1986) ಕೇಂದ್ರ ಲೋಕಸೇವಾ ಆಯೋಗದ ಸದಸ್ಯರಾಗಿ ಪ್ರತಿಜ್ಞಾವಿಧಿ
ಸ್ವೀಕರಿಸಿದರು. ಯುಪಿಎಸ್ಸಿ ಮುಖ್ಯಸ್ಥ ಅರವಿಂದ್ ಸಕ್ಷೇನಾ ಪ್ರತಿಜ್ಞಾ ವಿಧಿ ಬೋಧಿಸಿದರು.
-------------------------
(Release ID: 1558594)
Visitor Counter : 349