ಸಂಪುಟ

ಚಂಡಿಗಢ ಕೇಂದ್ರಾಡಳಿತ ಪ್ರದೇಶದ ನೌಕರರಿಗೆ ಸ್ವಯಂ ಹಣಕಾಸು ವಸತಿ ಯೋಜನೆಯಡಿ 3930 ಫಲಾನುಭವಿಗಳಿಗೆ ವಸತಿ ಸಮುಚ್ಛಯ ನಿರ್ಮಾಣಕ್ಕೆ ಭೂಮಿ ಹಂಚಿಕೆ ಮಾಡುವ ಪ್ರಸ್ತಾವಕ್ಕೆ ಕೇಂದ್ರ ಸಂಪುಟ ಅನುಮೋದನೆ

Posted On: 02 JAN 2019 5:56PM by PIB Bengaluru

ಚಂಡಿಗಢ ಕೇಂದ್ರಾಡಳಿತ ಪ್ರದೇಶದ ನೌಕರರಿಗೆ ಸ್ವಯಂ ಹಣಕಾಸು ವಸತಿ ಯೋಜನೆಯಡಿ 3930 ಫಲಾನುಭವಿಗಳಿಗೆ ವಸತಿ ಸಮುಚ್ಛಯ ನಿರ್ಮಾಣಕ್ಕೆ ಭೂಮಿ ಹಂಚಿಕೆ ಮಾಡುವ ಪ್ರಸ್ತಾವಕ್ಕೆ ಕೇಂದ್ರ ಸಂಪುಟ ಅನುಮೋದನೆ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆ, 

 

ಚಂಡಿಗಢ ಕೇಂದ್ರಾಡಳಿತ ಪ್ರದೇಶದ ನೌಕರರಿಗೆ ಸ್ವಯಂ ಹಣಕಾಸು ವಸತಿ ಯೋಜನೆಯಡಿ 3930 ಫಲಾನುಭವಿಗಳಿಗೆ ವಸತಿ ಸಮುಚ್ಛಯ ನಿರ್ಮಾಣಕ್ಕೆ ಭೂಮಿ ಹಂಚಿಕೆ ಮಾಡುವ ಪ್ರಸ್ತಾವಕ್ಕೆ ಅನುಮೋದನೆ ನೀಡಿತು.

 

ಅಂಶವಾರು ವಿವರ :

        ಚಂಡಿಗಢ ಆಡಳಿತ ತನ್ನ ನೌಕರರಿಗಾಗಿ ‘ಸ್ವಯಂ ಹಣಕಾಸು ವಸತಿ ಯೋಜನೆ – 2008’ ಹೆಸರಿನ ಯೋಜನೆಯನ್ನು ಅನುಮೋದಿಸಿತ್ತು, ಅದರಂತೆ ಒಟ್ಟಾರೆ 73.3 ಎಕರೆ ಪ್ರದೇಶದಲ್ಲಿ ಕೇಂದ್ರಾಡಳಿತ ಪ್ರದೇಶದ ನೌಕರರಿಗಾಗಿ 3930 ವಸತಿ ಘಟಕಗಳನ್ನು ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಇದರಲ್ಲಿ ಈಗಾಗಲೇ 11.8 ಎಕರೆ ಜಾಗ, ಚಂಡಿಗಢ ವಸತಿ ನಿಗಮದ ಸ್ವಾಧೀನದಲ್ಲಿದೆ. ಈ ಪ್ರಸ್ತಾವದಡಿ 61.5 ಎಕರೆ ಸರ್ಕಾರಿ ಭೂಮಿಯನ್ನು ಚಂಡಿಗಢ ವಸತಿ

ನಿಗಮಕ್ಕೆ ಹಂಚಿಕೆ ಮಾಡಲಾಗುವುದು.

        ಚಂಡಿಗಢ ವಸತಿ ನಿಗಮವನ್ನು ಈ ಯೋಜನೆಯ ಅನುಷ್ಠಾನದ ನೋಡೆಲ್ ಏಜೆನ್ಸಿಯನ್ನಾಗಿ ನೇಮಿಸಲಾಗಿದೆ. ಅದರಂತೆ ಚಂಡಿಗಢ ವಸತಿ ನಿಗಮ, ಚಂಡಿಗಢ ಆಡಳಿತದಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಾಗಿ 2008ರಲ್ಲಿ 99 ವರ್ಷಗಳ ಅವಧಿಗೆ ಗುತ್ತಿಗೆ ನೀಡುವ ‘ಸ್ವಯಂ ಹಣಕಾಸು ವಸತಿ ಯೋಜನೆ’ ಯನ್ನು ಪ್ರಕಟಿಸಿತ್ತು.

 

ಪ್ರಮುಖ ಪರಿಣಾಮ:

        ಚಂಡಿಗಢ ಆಡಳಿತದಲ್ಲಿರುವ ಸಿಬ್ಬಂದಿಗೆ ಈ ವಸತಿ ಸಮುಚ್ಛಯ ನಿರ್ಮಾಣ ಪ್ರಸ್ತಾವದಿಂದಾಗಿ ಕಾರ್ಮಿಕರಿಗೆ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗ ಲಭಿಸುವುದಲ್ಲದೆ, ಸ್ಥಳೀಯ ಮಟ್ಟದಲ್ಲಿ ಕೆಲಸ ಮಾಡುತ್ತಿರುವ ಇಂಜಿನಿಯರ್ ಹಾಗೂ ಮತ್ತಿತರ ಕೆಲಸಗಾರರಿಗೆ ಯೋಜನೆಯ ಅವಧಿಯಲ್ಲಿ ಕೆಲಸ ಸಿಗುವುದಲ್ಲದೆ, ಬೊಕ್ಕಸದ ಮೇಲೆ ಯಾವುದೇ ಆರ್ಥಿಕ ಪರಿಣಾಮ ಬೀರುವುದಿಲ್ಲ.

 

ಹಿನ್ನೆಲೆ :

        ಚಂಡಿಗಢ ಆಡಳಿತದಲ್ಲಿ ಕೆಲಸ ಮಾಡುತ್ತಿರುವ ನೌಕರರು ಹಾಗೂ ಅದರಡಿ ಬರುವ ನಿಗಮ ಮತ್ತು ಮಂಡಳಿ ಹಾಗೂ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಅಥವಾ ನಿಯೋಜನೆ ಮೇಲೆ ಚಂಡಿಗಢ ಆಡಳಿತದಲ್ಲಿ ಸೇವೆ ಸಲ್ಲಿಸುತ್ತಿರುವ ನಾನಾ ವರ್ಗದ ಸಿಬ್ಬಂದಿಯ ವಸತಿ ಬೇಡಿಕೆ ಪೂರೈಸಿದಂತಾಗುತ್ತದೆ. ಕೇಂದ್ರಾಡಳಿತ ಪ್ರದೇಶದ ಎಲ್ಲ ವರ್ಗದ ಅರ್ಹ ನೌಕರರ ವಸತಿ ಬೇಡಿಕೆ ಪೂರೈಸಲು ಚಂಡಿಗಢ ವಸತಿ ನಿಗಮ – 2008ರಲ್ಲಿ ‘ಸ್ವಯಂ ಹಣಕಾಸು ಯೋಜನೆ – 2008’ಅನ್ನು ಪ್ರಕಟಿಸಿತ್ತು.  ಪಾರದರ್ಶಕ ಪ್ರಕ್ರಿಯೆ ಮೂಲಕ 2010ರ ನವೆಂಬರ್ 4ರಂದು ಲಕ್ಕಿ ಡ್ರಾ ಮೂಲಕ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ನಡೆಸಿ, 7811 ಅರ್ಜಿಗಳ ಪೈಕಿ 3930 ಅರ್ಹ ಅರ್ಜಿಗಳನ್ನು ಯಶಸ್ವಿ ಎಂದು ಪ್ರಕಟಿಸಲಾಗಿತ್ತು.

 

******************



(Release ID: 1558324) Visitor Counter : 61