ಸಂಪುಟ
ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಉತ್ತೇಜನ
Posted On:
28 DEC 2018 3:49PM by PIB Bengaluru
ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಉತ್ತೇಜನ
ಭಾರತೀಯ ಮಾನವ ಸಹಿತ ಬಾಹ್ಯಾಕಾಶ ನೌಕೆ ಉಪಕ್ರಮಕ್ಕೆ ಸಂಪುಟದ ಅನುಮೋದನೆ: ಗಗನಯಾನ ಯೋಜನೆ ಎರಡು ಮಾನವರಹಿತ ಮತ್ತು ಒಂದು ಮಾನವಸಹಿತ ಯಾನಕ್ಕೆ ಯೋಜಿಸಲಾಗಿದೆ, 40 ತಿಂಗಳಲ್ಲಿ ಮೊದಲ ಮಾನವ ಸಹಿತ ವಿಮಾನ ಹಾರಾಟ- ಅಂದಾಜು ವೆಚ್ಚ 9023 ಕೋಟಿ ರೂ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಒಂದು ಕಕ್ಷೀಯ ಅವಧಿಯಿಂದ ಗರಿಷ್ಠ ಏಳು ದಿನಗಳವರೆಗಿನ ಅಭಿಯಾನ ಅವಧಿಗೆ ಭೂಮಿಯ ಕೆಳ ಕಕ್ಷೆಯಲ್ಲಿ ಭಾರತೀಯ ಮಾನವಸಹಿತ ಬಾಹ್ಯಾಕಾಶ ಸಾಮರ್ಥ್ಯವನ್ನು ಪ್ರದರ್ಶಿಸುವ ಗಗನಯಾನ ಕಾರ್ಯಕ್ರಮಕ್ಕೆ ತನ್ನ ಅನುಮೋದನೆ ನೀಡಿದೆ. ಮಾನವ ಯಾನಕ್ಕೆ ಅರ್ಹವಾದ ಜಿ.ಎಸ್.ಎಲ್.ವಿ. ಎಂ.ಕೆ. – lllನ್ನು, ಅಭಿಯಾನದ ಅವಧಿಯವರೆಗೆ 3-ಸದಸ್ಯ ಸಿಬ್ಬಂದಿ (ಮೆಂಬರ್ ಕ್ರ್ಯೂ) ಉಳಿಯಲು ಅವಶ್ಯಕವಾದ ಅವಕಾಶವನ್ನು ಹೊಂದಿರುವ ಕಕ್ಷೀಯ ಮಾಡ್ಯೂಲ್ ಅನ್ನು ಸಾಗಿಸಲು ಬಳಸಲಾಗುತ್ತದೆ. ಗಗನಯಾನ ಕಾರ್ಯಕ್ರಮಕ್ಕೆ ಬೆಂಬಲ ನೀಡಲು ಸಿಬ್ಬಂದಿಯ ತರಬೇತಿ, ವೈಮಾನಿಕ ವ್ಯವಸ್ಥೆ ಮತ್ತು ನೆಲದ ಮೂಲಸೌಕರ್ಯಕ್ಕೆ ಅಗತ್ಯವಾದ ಮೂಲಸೌಕರ್ಯವನ್ನು ಸ್ಥಾಪಿಸಲಾಗುವುದು. ಗಗನಯಾನ ಕಾರ್ಯಕ್ರಮದ ಉದ್ದೇಶಗಳನ್ನು ಸಾಧಿಸಲು ಇಸ್ರೋ ರಾಷ್ಟ್ರೀಯ ಸಂಸ್ಥೆಗಳು, ಪ್ರಯೋಗಾಲಯಗಳು, ಶಿಕ್ಷಣ ಮತ್ತು ಉದ್ಯಮಗಳೊಂದಿಗೆ ವಿಸ್ತಾರವಾಗಿ ಸಹಯೋಗ ಸಾಧಿಸುತ್ತದೆ.
ವೆಚ್ಚ:
ಗಗನಯಾನ ಕಾರ್ಯಕ್ರಮಕ್ಕೆ ಅಗತ್ಯವಾದ ಒಟ್ಟು ನಿಧಿ 10,000 ಕೋಟಿ ರೂಪಾಯಿಯೊಳಗೇ ಇದೆ ಮತ್ತು ಈ ವೆಚ್ಚ ತಂತ್ರಜ್ಞಾನದ ಅಭಿವೃದ್ಧಿ, ವಿಮಾನದ ಯಂತ್ರಾಂಶ ಸಾಕಾರ ಮತ್ತು ಅಗತ್ಯ ಮೂಲಸೌಕರ್ಯ ಅಂಶಗಳನ್ನೂ ಒಳಗೊಂಡಿದೆ. ಎರಡು ಮಾನವ ರಹಿತ ವಿಮಾನ ಮತ್ತು ಒಂದು ಮಾನವ ಸಹಿತ ವಿಮಾನಯಾನವನ್ನು ಗಗನಯಾನ ಕಾರ್ಯಕ್ರಮದ ಭಾಗವಾಗಿ ಕೈಗೊಳ್ಳಲಾಗುತ್ತದೆ.
ಪ್ರಯೋಜನಗಳು:
· ಗಗನಯಾನ ಕಾರ್ಯಕ್ರಮವು ಇಸ್ರೋ, ಶೈಕ್ಷಣಿಕ ಸಂಸ್ಥೆ, ಕೈಗಾರಿಕೆ, ರಾಷ್ಟ್ರೀಯ ಸಂಸ್ಥೆಗಳು ಮತ್ತು ಇತರ ವೈಜ್ಞಾನಿಕ ಸಂಘಟನೆಗಳೊಂದಿಗೆ ವಿಸ್ತೃತವಾದ ಚೌಕಟ್ಟನ್ನು ಸ್ಥಾಪಿಸುತ್ತದೆ.
· ಇದು ವೈವಿಧ್ಯಮಯ ತಾಂತ್ರಿಕ ಮತ್ತು ಕೈಗಾರಿಕಾ ಸಾಮರ್ಥ್ಯಗಳ ಒಗ್ಗೂಡಿಸುವಿಕೆಗೆ ಅವಕಾಶ ನೀಡುತ್ತದೆ ಮತ್ತು ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಉಪಯುಕ್ತವಾದ ಹೆಚ್ಚಿನ ಸಂಶೋಧನಾ ಅವಕಾಶಗಳು ಮತ್ತು ತಂತ್ರಜ್ಞಾನ ಅಭಿವೃದ್ಧಿಯಲ್ಲಿ ವಿಶಾಲ ಪಾಲ್ಗೊಳ್ಳುವಿಕೆಗೆ ಅವಕಾಶ ಕಲ್ಪಿಸುತ್ತದೆ.
· ವಿಮಾನ ವ್ಯವಸ್ಥೆಯ ಸಾಕಾರ ಕೈಗಾರಿಕೆಯ ಮೂಲಕ ಆಗುತ್ತದೆ.
· ಇದು ಉದ್ಯೋಗ ಸೃಷ್ಟಿಸುತ್ತದೆ ಮತ್ತು ಮಾನವ ಸಂಪನ್ಮೂಲವನ್ನು ಆಧುನಿಕ ತಂತ್ರಜ್ಞಾನದಲ್ಲಿ ತರಬೇತುಗೊಳಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.
· ಇದು ದೊಡ್ಡ ಸಂಖ್ಯೆಯ ಯುವ ವಿದ್ಯಾರ್ಥಿಗಳು ದೇಶದ ಅಭಿವೃದ್ಧಿಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ತಮ್ಮ ವೃತ್ತಿಯಾಗಿ ಸ್ವೀಕರಿಸಲು ಸ್ಫೂರ್ತಿ ನೀಡುತ್ತದೆ.
· ಗಗನಯಾನ ಕಾರ್ಯಕ್ರಮ ಒಂದು ರಾಷ್ಟ್ರೀಯ ಪ್ರಯತ್ನವಾಗಿದ್ದು, ಇದು ದೇಶದ ಉದ್ದಗಲ ಹರಡಿರುವ ರಾಷ್ಟ್ರೀಯ ಸಂಸ್ಥೆಗಳು, ಕೈಗಾರಿಕೆ ಮತ್ತು ಶೈಕ್ಷಣಿಕ ಸಂಸ್ಥೆಗಳನ್ನು ತೊಡಗಿಸಿಕೊಳ್ಳುತ್ತದೆ.
ಕಾರ್ಯತಂತ್ರ ಮತ್ತು ಗುರಿಗಳ ಅನುಷ್ಠಾನ
ಗಗನಯಾನ ಕಾರ್ಯಕ್ರಮವು ಇಸ್ರೋದೊಂದಿಗೆ ಕೈಗಾರಿಕೆ, ಶೈಕ್ಷಣಿಕ ಸಂಸ್ಥೆಗಳು ಮತ್ತು ಇತರ ವೈಜ್ಞಾನಿಕ ಸಂಸ್ಥೆ ಹಾಗೂ ಪ್ರಯೋಗಾಲಯಗಳು ಬಾಧ್ಯಸ್ಥರಾಗಿರುವ ರಾಷ್ಟ್ರೀಯ ಪ್ರಯತ್ನವಾಗಿದೆ. ಕೈಗಾರಿಕೆಯ ಮೂಲಕ ವಿಮಾನದ ಯಂತ್ರಾಂಶವನ್ನು ಸಾಕಾರಗೊಳಿಸುವ ಹೊಣೆ ಇಸ್ರೋದ್ದಾಗಿದೆ. ರಾಷ್ಟ್ರೀಯ ಸಂಸ್ಥೆಗಳು, ಪ್ರಯೋಗಾಲಯಗಳು ಮತ್ತು ಶೈಕ್ಷಣಿಕ ಸಂಸ್ಥೆಗಳು, ವಿಮಾನ ಸಿಬ್ಬಂದಿಯ ತರಬೇತಿ, ಮಾನವ ಜೀವ ವಿಜ್ಞಾನ ತಂತ್ರಜ್ಞಾನ ಅಭಿವೃದ್ಧಿ ಉಪಕ್ರಮ ಮತ್ತು ವಿನ್ಯಾಸ ಪರಾಮರ್ಶೆಯಲ್ಲಿ ಪಾಲ್ಗೊಳ್ಳುತ್ತವೆ. ಮಂಜೂರಾತಿ ದೊರೆತ ದಿನದಿಂದ 40 ತಿಂಗಳುಗಳ ಒಳಗಾಗಿ ಮೊದಲ ಮಾನವ ಸರಿತ ಬಾಹ್ಯಾಕಾರ ನೌಕೆಯ ಪ್ರದರ್ಶನದ ಗುರಿಯನ್ನು ಪೂರ್ಣಗೊಲಿಸಲಾಗುವುದು.ತಂತ್ರಜ್ಞಾನ ಮತ್ತು ಮಿಷನ್ ನಿರ್ವಹಣೆ ಅಂಶಗಳ ಕುರಿತಂತೆ ಆತ್ಮವಿಶ್ವಾಸ ಗಳಿಸಿಕೊಳ್ಳಲು ಇದಕ್ಕೂ ಮುನ್ನ ಎರಡು ಮಾನವ ರಹಿತ ವಿಮಾನಯಾನವನ್ನು ಕೈಗೊಳ್ಳಾಗುವುದು.
ಪರಿಣಾಮ :
· ಈ ಕಾರ್ಯಕ್ರಮ ವಿಶಿಷ್ಟ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ದೇಶದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಉತ್ತೇಜನ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.
· ಔಷಧ, ಕೃಷಿ, ಕೈಗಾರಿಕಾ ಸುರಕ್ಷತೆ, ಮಾಲಿನ್ಯ, ತ್ಯಾಜ್ಯ ನಿರ್ವಹಣೆ, ನೀರು ಮತ್ತು ಆಹಾರ ಸಂಪನ್ಮೂಲ ನಿರ್ವಹಣೆ ಮುಂತಾದ ಕ್ಷೇತ್ರಗಳಲ್ಲಿ ತಂತ್ರಜ್ಞಾನದ ಪ್ರಯೋಜನಗಳಿಗೆ ದೊಡ್ಡ ಸಾಮರ್ಥ್ಯ ದೊರಕಲಿದೆ.
· ಮಾನವ ಸಹಿತ ಬಾಹಾಕಾಶಯಾನ ಕಾರ್ಯಕ್ರಮ ಭವಿಷ್ಯದ ತಂತ್ರಜ್ಞಾನಗಳಿಗೆ ಪ್ರಯೋಗಗಳು ಮತ್ತು ಪರೀಕ್ಷೆ ನಡೆಸಲು ಬಾಹ್ಯಾಕಾಶದಲ್ಲಿ ವಿಶಿಷ್ಟವಾದ ಸೂಕ್ಷ್ಮ ಗುರುತ್ವ ವೇದಿಕೆಯನ್ನು ಒದಗಿಸುತ್ತದೆ.
· ಈ ಕಾರ್ಯಕ್ರಮವು ಉದ್ಯೋಗ ಸೃಷ್ಟಿ, ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಕೈಗಾರಿಕಾ ಸಾಮರ್ಥ್ಯ ಹೆಚ್ಚಳ ವಿಷಯದಲ್ಲಿ ದೇಶದೊಳಗೆ ಆರ್ಥಿಕ ಚಟುವಟಿಕೆಗಳಿಗೆ ಪ್ರೇರಣೆಯನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.
· ಮಾನವ ಸಹಿತ ಬಾಹ್ಯಾಕಾಶಯಾನ ಸಾಮರ್ಥ್ಯವು ಭಾರತಕ್ಕೆ ದೀರ್ಘ ಕಾಲೀನ ರಾಷ್ಟ್ರೀಯ ಪ್ರಯೋಜನದೊಂದಿಗೆ ಭವಿಷ್ಯದ ಜಾಗತಿಕ ಬಾಹಾಕಾಶ ಪರಿಶೋಧನೆ ಉಪಕ್ರಮಗಳಲ್ಲಿ ಭಾಗಿಯಾಗಲು ಅವಕಾಶ ಕಲ್ಪಿಸುತ್ತದೆ.
ಹಿನ್ನಲೆ:
ಭೂಮಿಯ ಕೆಳ ಕಕ್ಷೆಯಲ್ಲಿ 3 ಸದಸ್ಯ ಸಿಬ್ಬಂದಿ ಮಾಡ್ಯೂಲ್ ಅನ್ನು ಪ್ರಾರಂಭಿಸಲು ಅವಶ್ಯಕ ಪೇಲೋಡ್ ಸಾಮರ್ಥ್ಯವನ್ನು ಹೊಂದಿರುವ ಉಡಾವಣಾ ವಾಹಕ ಜಿಎಸ್.ಎಲ್.ವಿ. ಎಂ.ಕೆ. lllರ ಅಭಿವೃದ್ಧಿಯನ್ನುಇಸ್ರೋ ಪೂರ್ಣಗೊಳಿಸಿದೆ. ಇಸ್ರೋ ಮಾನವ ಸಹಿತಯಾನಕ್ಕೆ ಅತ್ಯಗತ್ಯ ತಂತ್ರಜ್ಞಾನವಾದ ಸಿಬ್ಬಂದಿ ಅಪಾಯದಿಂದ ಪಾರಾಗುವ ವ್ಯವಸ್ಥೆಯನ್ನೂ ಪರೀಕ್ಷಿಸಿದೆ. ಸಿಬ್ಬಂದಿ ಘಟಕದ ವಾಯು ಬಲ ವೈಜ್ಞಾನಿಕ ಗುಣಲಕ್ಷಣವು ಜಿಎಸ್ಎಲ್.ವಿ. ಎಂಕೆ- lll ಎಕ್ಸ್ ಮಿಷನ್ ವಿಮಾನದ ಭಾಗವಾಗಿ ಪೂರ್ಣಗೊಂಡಿದೆ. ಜೀವ ಬೆಂಬಲ ವ್ಯವಸ್ಥೆ ಮತ್ತು ಸ್ಪೇಸ್ ಸೂಟ್ ಸಹ ಸಾಕಾರಗೊಂಡಿದೆ ಮತ್ತು ಪರೀಕ್ಷಿಸಲ್ಪಟ್ಟಿದೆ. ಇದರ ಜೊತೆಗೆ ಕಕ್ಷೀಯ ಮತ್ತು ಪುನರ್ ಪ್ರವೇಶ ಅಬಿಯಾನ ಮತ್ತು ರಿಕವರಿ ಕಾರ್ಯಾಚರಣೆಗಳನ್ನು ಸ್ಪೇಸ್ ಕ್ಯಾಪ್ಸೂಲ್ ಪುನರ್ ಪ್ರವೇಶದ ಪ್ರಯೋಗ (ಎಸ್.ಆರ್.ಇ.) ಅಭಿಯಾನದಲ್ಲಿ ಪ್ರದರ್ಶಿಸಲಾಗಿದೆ. ಮಾನವ ಸಹಿತವಾದ ಬಾಹ್ಯಾಕಾಶ ಯಾನಕ್ಕೆ ಅಗತ್ಯವಾದ ಹಲವು ಬೇಸ್ ಲೈನ್ ತಂತ್ರಜ್ಞಾನವನ್ನು ಇಸ್ರೋ ಅಭಿವೃದ್ಧಿಪಡಿಸಿ ಪ್ರದರ್ಶಿಸಿದೆ. ಜಾಗತಿಕವಾಗಿ ಸಹ ಮಾನವ ಶೋಧಿತ ಉಪಕ್ರಮಗಳನ್ನು ಕೈಗೊಳ್ಳಲು ಹೊಸ ಆಸಕ್ತಿ ಮೂಡಿದೆ.
(Release ID: 1557851)
Visitor Counter : 229