ಭೂವಿಜ್ಞಾನ ಸಚಿವಾಲಯ

ವರ್ಷಾಂತ್ಯ ಅವಲೋಕನ:2018 ಭೂ ವಿಜ್ಞಾನ ಸಚಿವಾಲಯ

Posted On: 21 DEC 2018 1:19PM by PIB Bengaluru

ವರ್ಷಾಂತ್ಯ ಅವಲೋಕನ:2018

ಭೂ ವಿಜ್ಞಾನ ಸಚಿವಾಲಯ

ಹವಾಮಾನ, ವಾತಾವರಣ, ಸಮುದ್ರ ಹಾಗೂ ತೀರದ ಸ್ಥಿತಿ, ಜಲವಿಜ್ಞಾನ, ಭೂಕಂಪನಶಾಸ್ತ್ರ ಹಾಗೂ ನೈಸರ್ಗಿಕ ಅಪಾಯಗಳಿಗೆ ಸಂಬಂಧಿಸಿ ಸೇವೆಗಳನ್ನು ಒದಗಿಸುವುದು ಭೂವಿಜ್ಞಾನ ಸಚಿವಾಲಯದ (ಎಂಇಎಸ್) ಕಾರ್ಯ. ಕಡಲ ಜೀವಿಗಳು ಹಾಗೂಅಜೀವಿಗಳ ಸಂಪನ್ಮೂಲಗಳನ್ನು ಸಮರ್ಥನೀಯ ಮಾರ್ಗದಲ್ಲಿ ಅನ್ವೇಷಿಸುವ ಕಾರ್ಯವನ್ನು ಕೂಡ ಇದು ಮಾಡುತ್ತದೆ. ಜತೆಗೆ ಮೂರು ಧ್ರುವ ಪ್ರದೇಶಗಳನ್ನು (ಆಕ್ರ್ಟಿಕ್, ಅಂಟಾಕ್ರ್ಟಿಕ್ ಹಾಗೂ ಹಿಮಾಲಯ) ಕೂಡ ಅನ್ವೇಷಿಸುತ್ತದೆ. ಕಳೆದ ನಾಲ್ಕು ವರ್ಷಗಳಲ್ಲಿಭೂ ವಿಜ್ಞಾನ ಸಚಿವಾಲಯದ ವಿವಿಧ ಯೋಜನೆಗಳಡಿಯಲ್ಲಿ ಅನೇಕ ಮಹತ್ವದ ಸಾಧನೆಗಳನ್ನು ಮಾಡಲಾಗಿದೆ. ಅದರಲ್ಲೂ ವಿಶೇಷವಾಗಿ 2018ನೇ ಸಾಲಿನಲ್ಲಿ. ಈ ಸಾಧನೆಗಳು ಸಮಾಜಕ್ಕೆ ಸಂಬಂಧಿಸಿದ ಹಲವು ವಿಧದ ಸೇವೆಗಳನ್ನು ಒಳಗೊಂಡಿವೆ. ಕೆಲವುಅತ್ಯಂತ ಪ್ರಮುಖವಾದ ಸಾಧನೆಗಳನ್ನು ಈ ಕೆಳಗೆ ನೀಡಲಾಗಿದೆ:

ಉನ್ನತ ಕಾರ್ಯದಕ್ಷತೆಯ ಕಂಪ್ಯೂಟಿಂಗ್ (ಎಚ್‍ಪಿಸಿ):  ಭೂವಿಜ್ಞಾನ ಸಚಿವಾಲಯ ತನ್ನ ಎಚ್‍ಪಿಸಿ ಸೌಲಭ್ಯವನ್ನು 6.8 ಪೆಟಾ ಫ್ಲಾಪ್ಸ್ (ಪಿಎಫ್)ಗೆ ಹೆಚ್ಚಿಸಿದೆ. ಇದನ್ನು ಅದರ ಎರಡು ಘಟಕಗಳಾದ ಭಾರತೀಯ ಉಷ್ಣವಲಯ ಹವಾಮಾನಶಾಸ್ತ್ರ ಸಂಸ್ಥೆ(ಐಐಟಿಎಂ) ಪುಣೆಯಲ್ಲಿ 4.0 ಪೆಟಾ ಫ್ಲಾಪ್ಸ್ ಸಾಮಥ್ರ್ಯದ ಎಚ್‍ಪಿಸಿ ಹಾಗೂ ಮಧ್ಯಮ ಅಂತರದ ಹವಾಮಾನ ಮುನ್ಸೂಚನೆ ರಾಷ್ಟ್ರೀಯ ಕೇಂದ್ರ (ಎನ್‍ಸಿಎಂಆರ್‍ಡಬ್ಲ್ಯುಎಫ್) ನೋಯ್ಡಾದಲ್ಲಿ 2.8 ಪೆಟಾ ಫ್ಲಾಪ್ಸ್ ಸಾಮಥ್ರ್ಯದ ಎಚ್‍ಪಿಸಿ ಅಳವಡಿಸಲಾಗಿದೆ.

ಐಐಟಿಎಂನಲ್ಲಿ ಅಳವಡಿಸಲಾಗಿರುವ ‘ಪ್ರತ್ಯುಷ್’ ಸೌಲಭ್ಯ ಹಾಗೂ ಎನ್‍ಸಿಎಂಆರ್‍ಡಬ್ಲ್ಯುಎಫ್‍ನಲ್ಲಿ ಅಳವಡಿಸಿರುವ ‘ಮಿಹಿರ್’ ಅನ್ನು ಭೂ ವಿಜ್ಞಾನ ಸಚಿವಾಲಯದ ಕೇಂದ್ರ ಸಚಿವರಾದ ಡಾ.ಹರ್ಷವರ್ಧನ್ ಅನುಕ್ರಮವಾಗಿ 2018ರ ಜನವರಿ 8 ಹಾಗೂ30ರಂದು ಲೋಕಾರ್ಪಣೆ ಮಾಡಿದರು. ಈ ಸೌಲಭ್ಯದ ಮೂಲಕ ಹವಾಮಾನ ಮುನ್ಸೂಚನೆಗೆ ಸಂಬಂಧಿಸಿದ ಮಾದರಿಯಲ್ಲಿ ಬಹುದೊಡ್ಡ ಬದಲಾವಣೆಯಾಗಿದೆ.

ಜಗತ್ತಿನಲ್ಲಿ ಎಚ್‍ಪಿಸಿ ಸೌಲಭ್ಯಕ್ಕೆ ಸಂಬಂಧಿಸಿದ ಟಾಪ್ 500 ರ್ಯಾಂಕಿಂಗ್‍ನಲ್ಲಿ ಭಾರತದ ಸ್ಥಾನ 368ರಿಂದ ಟಾಪ್ 30ರ ಆಸುಪಾಸಿಗೆ ಜಿಗಿದಿದೆ. ಹವಾಮಾನ/ ವಾತಾವರಣ ಮುನ್ಸೂಚನೆಗೆ ಸಂಬಂಧಿಸಿದ ಎಚ್‍ಪಿಸಿ ಸಂಪನ್ಮೂಲಗಳಲ್ಲಿ ಭಾರತವು ಇಂದುಜಪಾನ್, ಇಂಗ್ಲೆಂಡ್ ಹಾಗೂ ಅಮೆರಿಕದ ಬಳಿಕ 4ನೇ ಸ್ಥಾನದಲ್ಲಿದೆ.

ಈ ಸೌಲಭ್ಯವು ವಿವಿಧ ಕಾರ್ಯಾಚರಣೆ, ಸಂಶೋಧನೆ ಹಾಗೂ ಅಭಿವೃದ್ಧಿ ಚಟುವಟಿಕೆಗಳ ಮೂಲಕ ಭಾರತದ ನಾಗರಿಕರಿಗೆ ವಿಶ್ವದರ್ಜೆಯ ಹವಾಮಾನ ಮುನ್ಸೂಚನೆ ಸೇವೆಗಳನ್ನು ಒದಗಿಸುವ ಕುರಿತು ಸಚಿವಾಲಯದ ನಿರಂತರ ಪ್ರಯತ್ನದ ಭಾಗವಾಗಿದೆ. ಚಂಡಮಾರುತ, ಪ್ರವಾಹ/ಬರಗಾಲ, ಉಷ್ಣ/ಶೀತ ಅಲೆಗಳು, ಭೂಕಂಪಗಳು, ಸುನಾಮಿ ಇತ್ಯಾದಿಯಿಂದ ಉಂಟಾಗುವ ಅಪಾಯಗಳನ್ನು ತಗ್ಗಿಸುವ ಸ್ಟೇಟ್ ಆಫ್ ದಿ ಆರ್ಟ್ ಸಿಸ್ಟ್‍ಂಗಳನ್ನು ನಿರ್ಮಿಸಿದೆ. ಈ ಮೂಲಕ ಭೂವಿಜ್ಞಾನ ಸಚಿವಾಲಯವು ವಿವಿಧ ಆರ್ಥಿಕವಲಯದಲ್ಲಿರುವ ಜನರ ಪ್ರಯೋಜನಕ್ಕಾಗಿ ಇಂಥ ಅನೇಕ ಸೇವೆಗಳನ್ನು ಅಭಿವೃದ್ಧಿಪಡಿಸಿದೆ.

ಹವಾಮಾನ ಹಾಗೂ ಚಂಡಮಾರುತ ಮುನ್ಸೂಚನೆಯಲ್ಲಿ ಪ್ರಗತಿ:

ಅತ್ಯುನ್ನತ ಸಾಮಥ್ರ್ಯದ (12ಕಿ.ಮೀ.) ಜಾಗತಿಕ ಸಮಗ್ರ ಮುನ್ಸೂಚನೆ ವ್ಯವಸ್ಥೆ (ಇಪಿಎಸ್) ಯನ್ನು ಎಂಇಎಸ್ 2018ರ ಜೂನ್ 1ರಂದು ಪ್ರಾರಂಭಿಸಿದೆ. ವಿಶ್ವದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಎಲ್ಲ ಜಾಗತಿಕ ಹವಾಮಾನ ಮುನ್ಸೂಚನೆ ಕೇಂದ್ರಗಳಲ್ಲಿಇಪಿಎಸ್ ಅತ್ಯುನ್ನತ ಸಾಮಥ್ರ್ಯದಾಗಿದೆ. ಸಮಗ್ರ ಮುನ್ಸೂಚನಾ ವ್ಯವಸ್ಥೆ ಪ್ರಸ್ತುತ ಮಾದರಿಗಳು ಒದಗಿಸುವ ಹವಾಮಾನ ಮಾಹಿತಿಗಳನ್ನು ವರ್ಧಿಸಿ ಹವಾಮಾನ ಮುನ್ಸೂಚನೆಯಲ್ಲಿನ ಅನಿಶ್ಚಿತತೆಯನ್ನು ಕಡಿಮೆಗೊಳಿಸಿ ಸಂಭವನೀಯ ಹವಾಮಾನಮುನ್ಸೂಚನೆಯನ್ನು ಸೃಷ್ಟಿಸುತ್ತದೆ.

ಕಳೆದ ನಾಲ್ಕು ವರ್ಷಗಳಿಂದ ಸಚಿವಾಲಯ ಒದಗಿಸುತ್ತಿರುವ ಹವಾಮಾನ ಮುನ್ಸೂಚನೆ ಸೇವೆಗಳ ಗುಣಮಟ್ಟದಲ್ಲಿ ಪ್ರಶಂಸನೀಯ ಪ್ರಗತಿ ಕಂಡುಬಂದಿದೆ. ವಿಶೇಷವಾಗಿ ಭಾರಿ ಮಳೆ ಹಾಗೂ ಚಂಡಮಾರುತಗಳಿಗೆ ಸಂಬಂಧಿಸಿ ನೀಡುತ್ತಿರುವ ಮುನ್ಸೂಚನೆಗಳಲ್ಲಿಗಣನೀಯ ಪ್ರಗತಿ ಕಾಣಿಸಿದೆ.

2014-17 ರಲ್ಲಿ ಮುನ್ಸೂಚನೆಯಲ್ಲಿ ಕಂಡುಬಂದ ದೋಷಗಳು 125, 202, 268 ಕಿ.ಮೀ.ಗೆ ಬದಲಾಗಿ  89, 142, 207 ಕಿ.ಮೀ. ಆಗಿತ್ತು. 2007-13ರ ಅವಧಿಯಲ್ಲಿ 24,48 ಹಾಗೂ 72 ಗಂಟೆಗಳ ವ್ಯತ್ಯಾಸ ಕಂಡುಬಂದಿದೆ. 2007-13ರ ಅವಧಿಗೆ ಹೋಲಿಸಿದರೆ2014-17ನೇ ಸಾಲಿನಲ್ಲಿ ಟ್ರ್ಯಾಕ್ ಮುನ್ಸೂಚನೆ ದೋಷಗಳಲ್ಲಿ ಇಳಿಕೆ ಕಂಡುಬಂದಿದ್ದು, ಇದು 29, 30 ಹಾಗೂ 23% ಆಗಿದೆ.

2018ನೇ ಸಾಲಿನಲ್ಲಿ ಹಿಂದೂ ಮಹಾಸಾಗರದ ಉತ್ತರದಲ್ಲಿ ಆರು ಉಷ್ಣವಲಯದ ಚಂಡಮಾರುತಗಳು ಕಾಣಿಸಿಕೊಂಡಿದ್ದು, ಇವು 4.5 ಸಾಮಾನ್ಯ ತೀವ್ರತೆಯ ಚಂಡಮಾರುತಗಳಾಗಿವೆ. ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾದ ಚಂಡಮಾರುತ ಸಾಗರ್ (ಮೇ 16-21), ಅರಬ್ಬಿ ಸಮುದ್ರದಲ್ಲಿ ರೂಪುಗೊಂಡ ಭಯಾನಕ ಚಂಡಮಾರುತ ಮಿಕುನು (ಮೇ 21-27), ವಿಎಸ್‍ಸಿಎಸ್ ಲುಬಾನ್ (ಅಕ್ಟೋಬರ್ 6-15) ಹಾಗೂ ವಿಎಸ್‍ಸಿಎಸ್ ತಿತ್ಲಿ (ಅಕ್ಟೋಬರ್ 8-13) ಉಂಟು ಮಾಡುತ್ತಿದ್ದ ಹಾನಿಯನ್ನು ತಗ್ಗಿಸಿ, ಅನೇಕ ಜೀವಗಳನ್ನುಉಳಿಸಲು ಐಎಂಡಿ ನೀಡಿದ ಚಂಡಮಾರುತ ಸಲಹಾ ಸೇವೆಗಳನ್ನು ವಿಶ್ವ ಹವಾಮಾನಶಾಸ್ತ್ರ ಸಂಸ್ಥೆ (ಡಬ್ಲ್ಯುಎಂಒ) ಶ್ಲಾಘಿಸಿದೆ.

ಐಎಂಡಿ ಹಾಗೂ ಗ್ರೇಟರ್ ಮುಂಬೈ ಮಹಾನಗರ ಪಾಲಿಕೆ, ಸಫರ್-ಮುಂಬೈ ದಾಖಲಿಸಿರುವ ಮೂಲ ಮಾಪನಗಳನ್ನು ಒಗ್ಗೂಡಿಸಿ ಹವಮಾನ ನೇರ ಮುನ್ಸೂಚನೆ ಮೊಬೈಲ್ ಆಪ್ ಅಭಿವೃದ್ಧಿಪಡಿಸಲಾಗಿದೆ. ಮಳೆಗೆ ಸಂಬಂಧಿಸಿ ಪ್ರದೇಶದ ಆಧಾರದಲ್ಲಿ ನೇರಮಾಹಿತಿಯನ್ನು ಇದು ಒದಗಿಸುತ್ತದೆ. ಪ್ರಸ್ತುತ ಈ ಆಪ್ ಮುಂಬೈ ನಗರ, ಉಪನಗರ ಪ್ರದೇಶಗಳು, ನವಮುಂಬೈ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿನ 100 ಸ್ಥಳಗಳನ್ನು ಒಳಗೊಂಡಿದೆ.

ಕೃಷಿ-ಹವಾಮಾನ ಸಲಹಾ ಸೇವೆಗಳು (ಎಎಎಸ್):

ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ಸಹಭಾಗಿತ್ವದೊಂದಿಗೆ ಸಚಿವಾಲಯವು ರೈತರ ಪ್ರಯೋಜನಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಅಗ್ರೋಮೆಟ್ ಸಲಹಾ ಸೇವೆ (ಎಎಎಸ್)ಗಳನ್ನು ಒದಗಿಸುತ್ತಿದೆ. ಬಿತ್ತನೆ, ನೀರಾವರಿ, ರಸಗೊಬ್ಬರ ಹಾಗೂಕೀಟನಾಶಕಗಳ ಬಳಕೆ, ಕಟಾವು ಹಾಗೂ ಹವಾಮಾನ ವೈಪರೀತ್ಯಗಳಿಂದ ಬೆಳೆಗಳ ರಕ್ಷಣೆಗೆ ಸಂಬಂಧಿಸಿದ ಯೋಜನೆಗಳಿಗೆ ರೈತರು ಈ ಸೇವೆಗಳನ್ನು ಬಳಸಿಕೊಳ್ಳಬಹುದು. ಪ್ರಸ್ತುತ ಸುಮಾರು 40 ಮಿಲಿಯನ್ ರೈತರು ನಿರ್ದಿಷ್ಟ ಬೆಳೆಗೆ ಸಂಬಂಧಿಸಿದ ಕೃಷಿ-ಹವಾಮಾನ ಸಲಹೆಗಳನ್ನು ಮಾತೃಭಾಷೆಗಳಲ್ಲಿ ಪಡೆಯುತ್ತಿದ್ದಾರೆ. 2018ರ ಮಳೆಗಾಲದ ಸಮಯದಲ್ಲಿ 50 ಜಿಲ್ಲೆಗಳ 200 ಬ್ಲಾಕ್‍ಗಳಲ್ಲಿರುವ ಎಎಂಎಫ್‍ಯುಗಳಲ್ಲಿ ಬ್ಲಾಕ್ ಮಟ್ಟದ ಪ್ರಾಯೋಗಿಕ ಕೃಷಿ ಸಲಹಾ ಸೇವೆಗಳನ್ನು ಪ್ರಾರಂಭಿಸಲಾಗಿದೆ.

ಚಟುವಟಿಕೆ

2014ರಲ್ಲಿನ ಸ್ಥಿತಿ              

2018ರಲ್ಲಿನ ಸ್ಥಿತಿ

ಕೃಷಿ-ಹವಾಮಾನ ಸಲಹಾ ಸೇವೆಗಳು 

ಸುಮಾರು 7 ಮಿಲಿಯನ್ ರೈತರುಮಾತೃಭಾಷೆಗಳಲ್ಲಿ ಎಎಎಸ್ ಮಾಹಿತಿ  ರೈತರು ಮಾಹಿತಿ ಪಡೆಯುತ್ತಿದ್ದಾರೆ.

ಸುಮಾರು 40 ಮಿಲಿಯನ್ಮಾತೃಭಾಷೆಗಳಲ್ಲಿ ಎಎಎಸ್ ಮಾಹಿತಿ  ರೈತರು ಮಾಹಿತಿ ಪಡೆಯುತ್ತಿದ್ದಾರೆ.

                                                                             

ಇಂಧನ ವಲಯಕ್ಕೆ ಸೇವೆಗಳು:

ಇಂಧನ ವಲಯಕ್ಕೆಂದೇ ಭಾರತೀಯ ಹವಾಮಾನಶಾಸ್ತ್ರ ಇಲಾಖೆ (ಐಎಂಡಿ) ಹಾಗೂ ಪೊಸ್ಕೋ ವೆಬ್ ಪೋರ್ಟಲ್‍ವೊಂದನ್ನು ಬಿಡುಗಡೆಗೊಳಿಸಿದೆ. ಇಂಧನ ವಲಯಕ್ಕೆ ಸಂಬಂಧಿಸಿದ ಹವಾಮಾನ ಪೋರ್ಟಲ್ ಅನ್ನು 2018ರ ಆಗಸ್ಟ್ 29ರಂದು ಕೇಂದ್ರಇಂಧನ ಹಾಗೂ ನೂತನ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ರಾಜ್ಯ ಖಾತೆ ಸಚಿವ ಆರ್.ಕೆ. ಸಿಂಗ್ ಬಿಡುಗಡೆಗೊಳಿಸಿದ್ದಾರೆ. ಹವಾಮಾನ ಪರಿಸ್ಥಿತಿಗಳಲ್ಲಿ ಬದಲಾವಣೆಯಾದಂತೆ ಇಂಧನ ಬಳಕೆ ಬೇಡಿಕೆಯಲ್ಲಿಯೂ ಬದಲಾವಣೆಗಳುಕಂಡುಬರುತ್ತವೆ. ತಾಪಮಾನ, ಗಾಳಿ ಹಾಗೂ ಮಳೆ ಪ್ರಮಾಣ ಸೇರಿದಂತೆ ಹವಾಮಾನದ ಮುನ್ಸೂಚನೆ ನೀಡುತ್ತದೆ. ಈ ಮೂಲಕ ಇಂಧನ ಉತ್ಪಾದನೆ ಹಾಗೂ ಹಂಚಿಕೆಯನ್ನು ಉತ್ತಮವಾಗಿ ಅಂದಾಜಿಸಲು ಸಾಧ್ಯವಾಗುತ್ತದೆ.

ಫಲವತ್ತಾದ ಮೀನುಗಾರಿಕಾ ವಲಯ (ಪಿಎಫ್‍ಝಡ್) ಸಲಹೆಗಳು:

 ಮೀನುಗಳು ಯಾವ ಪ್ರದೇಶಗಳಲ್ಲಿ ಲಭ್ಯವಿವೆ ಎಂಬ ಮಾಹಿತಿ ಒದಗಿಸುವ ಫಲವತ್ತಾದ ಮೀನುಗಾರಿಕಾ ವಲಯಗಳ (ಪಿಎಫ್‍ಝಡ್) ಸೇವೆಗಳನ್ನು ಸಮುದ್ರ ಮಾಹಿತಿ ಸೇವೆಗಳ ಭಾರತೀಯ ರಾಷ್ಟ್ರೀಯ ಕೇಂದ್ರ (ಐಎನ್‍ಸಿಒಐಎಸ್) ಈಗಲೂಮುಂದುವರಿಸುತ್ತಿದೆ. ಸಮುದ್ರದ ಮೇಲ್ಮೈ ತಾಪಮಾನ (ಎಸ್‍ಎಸ್‍ಟಿ) ಹಾಗೂ ಸಮುದ್ರದ ಬಣ್ಣ ಸೇರಿದಂತೆ ಇತರ ಪ್ರಾಕೃತಿಕ ಮಾನದಂಡಗಳಾದ ನೀರಿನ ಶುದ್ಧತೆ ಹಾಗೂ ಸಮುದ್ರ ಮಟ್ಟ ಮುಂತಾದ ಉಪಗ್ರಹ ಆಧರಿತ ಮಾಹಿತಿ ಆಧರಿಸಿ ಪಿಎಫ್‍ಝಡ್ಸಲಹೆಗಳನ್ನು ರೂಪಿಸಲಾಗಿದೆ. 2018ನೇ ಅವಧಿಯಲ್ಲಿ ಬಳಕೆದಾರರ ಸಮುದಾಯದಲ್ಲಿ ಗಣನೀಯ ಪ್ರಗತಿ ಕಂಡುಬಂದಿದೆ.

ಮೀನುಗಾರಿಕೆ ನಿಷೇಧ ಅವಧಿ ಹಾಗೂ ವ್ಯತಿರಿಕ್ತ ಸಮುದ್ರ ಸ್ಥಿತಿ ಹೊರತುಪಡಿಸಿ ಉಪಗ್ರಹ ಮಾಹಿತಿ ಆಧರಿಸಿ ದಿನನಿತ್ಯ ಅಕ್ಷರ ರೂಪದಲ್ಲಿ ಹಾಗೂ ಸ್ಮಾರ್ಟ್ ಮ್ಯಾಪ್ ಮುಖಾಂತರ ಸಲಹೆಗಳನ್ನು ಹಂಚಲಾಗುತ್ತದೆ.  ಫಲವತ್ತಾದ ಮೀನುಗಾರಿಕಾ ವಲಯಗಳು(ಪಿಎಫ್‍ಝಡ್) ಬಹುಭಾಷೆಗಳಲ್ಲಿ ಸಲಹೆಗಳನ್ನು 2018ರ ಜನವರಿ 1ರಿಂದ ಅಕ್ಟೋಬರ್ 25ರ ಅವಧಿಯಲ್ಲಿ ರೂಪಿಸಲಾಯಿತು. ಇದು 225 ದಿನಗಳ ಕಾಲ ಲಭ್ಯವಿತ್ತು. ಗರಿಷ್ಠ ಮೀನುಗಾರಿಕಾ ಆಳದ ಮಾಹಿತಿ ಸೇರಿದಂತೆ ಐಎನ್‍ಸಿಒಐಎಸ್ 220 ಸಲಹೆಗಳನ್ನು2017-18ನೇ ಅವಧಿಯಲ್ಲಿ ನೀಡಿದೆ.

ನೀರಿನ ಉಪ್ಪು ಹಿಂಗಿಸುವಿಕೆ:

ಜಗತ್ತಿನ ಮೊಟ್ಟಮೊದಲ ಸಮುದ್ರ ಉಷ್ಣವಿದ್ಯುತ್ ಪರಿವರ್ತನೆ (ಒಟಿಇಸಿ) ಆಧರಿತ ಉಪ್ಪು ಹಿಂಗಿಸುವಿಕೆ ಯೋಜನೆಗೆ ಲಕ್ಷದ್ವೀಪದ ಕವರಟ್ಟಿಯಲ್ಲಿ 22.10.2018ರಂದು ಭೂ ವಿಜ್ಞಾನಗಳ ಕೇಂದ್ರ ಸಚಿವರಾದ ಡಾ.ಹರ್ಷವರ್ಧನ್ ಶಂಕುಸ್ಥಾಪನೆ ನೆರವೇರಿಸಿದರು.

ಸಮುದ್ರದ ಆಳದುದ್ದಕ್ಕೂ ಇರುವ ಇಂಧನ ಬಳಕೆ ಮಾದರಿಯಲ್ಲಿರುವ ಉಷ್ಣ ಇಳಕಲ್ಲುಗಳಿಂದ ನವೀಕರಿಸಬಹುದಾದ ಇಂಧನವನ್ನು ಪಡೆಯುವುದೇ ಒಟಿಇಸಿ. ಲಕ್ಷದ್ವೀಪದಲ್ಲಿ ಪ್ರಸ್ತುತವಿರುವ ಉಪ್ಪು ಹಿಂಗಿಸುವಿಕೆ ಘಟಕಗಳನ್ನು ಎನ್‍ಐಒಟಿ ಪ್ರಾರಂಭಿಸಿದ್ದು, ಇದುತನ್ನ ಕಾರ್ಯಗಳಿಗೆ ಡಿಸೇಲ್ ಜನರೇಟರ್‍ಗಳನ್ನು ಬಳಸುತ್ತಿದೆ. ಪ್ರಸ್ತಾಪಿಸಿರುವ ಘಟಕ ಒಟಿಇಸಿ ಪೂರೈಕೆ ಮಾಡುವ ಶುದ್ಧ ಹಾಗೂ ಹಸಿರು ಇಂಧನವನ್ನು ಬಳಕೆ ಮಾಡುತ್ತದೆ. ಈ ಘಟಕವನ್ನು ಕವರಟ್ಟಿಯಲ್ಲಿ ಸ್ಥಾಪಿಸಲಾಗುವುದು. ಇದು ಪರಿಸರಸ್ನೇಹಿ ಉಪ್ಪುಹಿಂಗಿಸುವಿಕೆ ಘಟಕಗಳನ್ನು ಸ್ಥಾಪನೆಗೆ ಮೂಲವಾಗಿರುವುದು ಮಾತ್ರವಲ್ಲ. ಬದಲಿಗೆ ಒಟಿಇಸಿ ತಂತ್ರಜ್ಞಾನವನ್ನು ಮುಖ್ಯವಾಹಿನಿ ಇಂಧನ ಮೂಲವಾಗಿ ಬಳಸುವ ಯೋಜನೆಯಿದೆ.

ಲಕ್ಷದ್ವೀಪದಲ್ಲಿರುವ ಅಮಿನಿ, ಅಂಡ್ರೀತ್, ಛೆಟ್ಲಟ್, ಕಡಮತ್, ಕಲ್ಪೆನಿ ಹಾಗೂ ಕಿಲ್ತನ್ ದ್ವೀಪಗಳಲ್ಲಿ 187.87 ಕೋಟಿ ರೂ. ವೆಚ್ಚದಲ್ಲಿ ಎರಡು ವರ್ಷಗಳ ಅವಧಿಯಲ್ಲಿ 1.5 ಲಕ್ಷ ಲೀಟರ್ ಸಾಮಥ್ರ್ಯದ ಎಲ್‍ಟಿಟಿಡಿ ಘಟಕಗಳನ್ನು ಸ್ಥಾಪಿಸಲು ಎನ್‍ಐಒಟಿ ಮುಂದಾಗಿದೆ. ಕವರಟ್ಟಿಯಲ್ಲಿ ಕೇಂದ್ರ ಸಚಿವ ಡಾ.ಹರ್ಷವರ್ಧನ್ ಲಕ್ಷದ್ವೀಪ ಆಡಳಿತಾಧಿಕಾರಿ ಜತೆಗೆ ಈ ಎಲ್ಲ ಘಟಕಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

 ದ್ವೀಪಗಳಲ್ಲಿ ಸಾಗರ ವಿಜ್ಞಾನ ಹಾಗೂ ತಂತ್ರಜ್ಞಾನ: ದ್ವೀಪಗಳಲ್ಲಿನ ಸಾಗರ ವಿಜ್ಞಾನ ಹಾಗೂ ತಂತ್ರಜ್ಞಾನಕ್ಕೆ ಸಂಬಂಧಿಸಿದ ಅಟಲ್ ಕೇಂದ್ರವನ್ನು ಪೋರ್ಟ್‍ಬ್ಲೇರ್‍ನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ ಮತ್ತು ಅರಣ್ಯ ಮತ್ತು ಭೂ ವಿಜ್ಞಾನಗಳ ಸಚಿವರಾದಡಾ.ಹರ್ಷವರ್ಧನ್ 2018ರ ಸೆಪ್ಟೆಂಬರ್ 15ರಂದು ಉದ್ಘಾಟಿಸಿದರು. ಮೀನುಗಳಿಗೆ ಸಂಬಂಧಿಸಿ ತಂತ್ರಜ್ಞಾನ ಅಭಿವೃದ್ಧಿ, ಆಕ್ಟಿನೋಬ್ಯಾಕ್ಟೀರಿಯಾ ಹಾಗೂ ಇತರ ಸಮುದ್ರ ಕಿರುಜೀವಿಗಳಿಂದ ಬಯೋಆಕ್ಟೀವ್ ಘಟಕಗಳನ್ನು ಉತ್ಪಾದಿಸುವ ಗುರಿ ಹೊಂದಿರುವಆಳಸಮುದ್ರದ ಮೈಕ್ರೋಬೈಯಲ್ ತಂತ್ರಜ್ಞಾನಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗೆ ಒತ್ತು ನೀಡಲು ಉದ್ದೇಶಿಸಲಾಗಿದೆ. ಆಲ್ಗೆಗಳಿಂದ ಜೀವಾಣುಗಳನ್ನು ಉತ್ಪಾದಿಸುವುದು ಹಾಗೂ ಸಮುದ್ರ ನೀರಿನ ಗುಣಮಟ್ಟ ನಿರ್ವಹಣೆಗೂ ಇದರಲ್ಲಿ ಮಹತ್ವ ನೀಡಲಾಗಿದೆ.

ಕಡಲತೀರದ ಸಂಶೋಧನೆ:

 ಭಾರತದ ಕಡಲ ತೀರದಲ್ಲಿನ ಅಳಿವೆಗಳು, ಕಡಲ್ಕೊಳಗಳು, ಮ್ಯಾಂಗ್ರೋವ್ ಕಾಡುಗಳು, ಕಲ್ಲಿನ ತೀರಗಳು, ಹವಳದ ದಂಡೆಗಳು ಸೇರಿದಂತೆ ವೈವಿಧ್ಯಮಯ ಹಾಗೂ ಉತ್ಪಾದನೀಯ ಪರಿಸರ ವ್ಯವಸ್ಥೆಯ ಮಹತ್ವವನ್ನು ಅರಿತು ಭೂವಿಜ್ಞಾನಗಳ ಸಚಿವಾಲಯಪ್ರಸ್ತುತವಿರುವ ಕೇಂದ್ರಗಳನ್ನು ಕಡಲತೀರದ ಸಂಶೋಧನೆಯ ಶ್ರೇಷ್ಠ ಕೇಂದ್ರಗಳೆಂದು ಚೆನ್ನೈನಲ್ಲಿ 2018ರ ಏಪ್ರಿಲ್‍ನಲ್ಲಿ ಘೋಷಿಸಿದೆ.

ಹವಾಮಾನ ಸಂಶೋಧನೆಗೆ ಸಂಬಂಧಿಸಿದ ರಾಷ್ಟ್ರೀಯ ಕೇಂದ್ರ (ಎನ್‍ಸಿಸಿಆರ್)ವು ಸಚಿವಾಲಯಕ್ಕೆ ಹೊಂದಿಕೊಂಡಿರುವ ಕಚೇರಿಯಾಗಿದ್ದು, ದೇಶದ ಸಾಮಾಜಿಕ ಅಗತ್ಯಗಳನ್ನು ಸಂಬೋಧಿಸಲು ಬದ್ಧವಾಗಿದೆ. ನೀಲಿ ಆರ್ಥಿಕತೆಯನ್ನು ಪ್ರಸ್ತಾಪಿಸಿ ಕಡಲತೀರದರಾಜ್ಯಗಳ ಜತೆಗೂಡಿ ಕಾರ್ಯನಿರ್ವಹಿಸುತ್ತಿರುವ ಎನ್‍ಸಿಸಿಆರ್, ಆ ರಾಜ್ಯಗಳಿಗೆ ಸಂಪನ್ಮೂಲಗಳ ಸಂರಕ್ಷಣೆ ಹಾಗೂ ನಿರ್ವಹಣೆಗೆ ಸಂಬಂಧಿಸಿ ವೈಜ್ಞಾನಿಕ ಹಾಗೂ ತಾಂತ್ರಿಕ ನೆರವನ್ನು ನೀಡುತ್ತಿದೆ. ಗಂಭೀರ ಕಡಲತೀರದ ಸಮಸ್ಯೆಗಳನ್ನು ಪರಿಹರಿಸಲುವೈಜ್ಞಾನಿಕ  ಹಾಗೂ ಪ್ರಬಲ ಸಾಂಸ್ಥಿಕ ಬೆಂಬಲವನ್ನು ಕೂಡ ಇದು ನೀಡುತ್ತಿದೆ.

ಆಂಧ್ರಪ್ರದೇಶದ ವಿಶಾಖಪಟ್ಟಣಂನ ಡಾಲ್ಪಿನ್ ಹಿಲ್‍ನಲ್ಲಿ ಕೇಂದ್ರ ಭೂ ವಿಜ್ಞಾನಗಳ ಸಚಿವ ಡಾ.ಹರ್ಷವರ್ಧನ್ ಅವರು ಕಡಲತೀರದ ಸಂಶೋಧನೆಯ ರಾಷ್ಟ್ರೀಯ ಕೇಂದ್ರ (ಎನ್‍ಸಿಸಿಆರ್) ಹಾಗೂ ಎನ್‍ಸಿಸಿಆರ್‍ನ ಮತ್ತು ಭಾರತೀಯ ಹವಾಮಾನಶಾಸ್ತ್ರಇಲಾಖೆಯ (ಐಎಂಡಿ) ಜಂಟಿ ತರಬೇತಿ ಸೌಲಭ್ಯಕ್ಕೆ 2018ರ ನವೆಂಬರ್ 2ರಂದು ಶಂಕುಸ್ಥಾಪನೆ ನೆರವೇರಿಸಿದರು.

ಭಾರತದ ಕಡಲ ತೀರದುದ್ದಕ್ಕೂ ಸಮುದ್ರದ ನೀರಿನ ಗುಣಮಟ್ಟ ಪ್ರದರ್ಶಕ (ಎಸ್‍ಡಬ್ಲ್ಯುಕ್ಯೂಎಂ) ಕಾರ್ಯಕ್ರಮದಡಿಯಲ್ಲಿ ಎನ್‍ಸಿಸಿಆರ್ >25 ಮಾನದಂಡಗಳಿಗೆ ನಿಗದಿಯಾಗಿರುವಂತೆ ಕಾಲ ಕಾಲಕ್ಕೆ ಮಾಹಿತಿ ಕಲೆ ಹಾಕುತ್ತದೆ. ಇದು ಸಮುದ್ರದ ನೀರುಹಾಗೂ ಕೆಸರಿನ ಭೌತಿಕ-ರಾಸಾಯನಿಕ, ಜೈವಿಕ, ಮೈಕ್ರೋಬಯಾಲಜಿಕಲ್ ಗುಣಗಳನ್ನು ವಿಶ್ಲೇಷಿಸುತ್ತದೆ. ಸಮುದ್ರದ ನೀರು ಹಾಗೂ ಕೆಸರನ್ನು ನಿಗದಿತ ಮಾನದಂಡಗಳನ್ನು ಬಳಸಿ ವ್ಯವಸ್ಥಿತವಾಗಿ ಸಂಗ್ರಹಿಸಿ, ವಿಶ್ಲೇಷಿಸಲಾಗುವುದು.

ನೀರು (ಮೇಲ್ಮೈ, ಮಧ್ಯದ ಆಳ ಹಾಗೂ ತಳ) ಹಾಗೂ ಕೆಸರಿನ ಮಾದರಿಗಳನ್ನು ಕಡಲತೀರದಿಂದ 0/0.5 ಕಿ.ಮೀ. (ತೀರದಲ್ಲಿ), 2/3 ಕಿ.ಮೀ.(ತೀರದ ಹತ್ತಿರ) ಹಾಗೂ 5 ಕಿ.ಮೀ. (ತೀರದಿಂದ ದೂರ) ದೂರದಲ್ಲಿ ಸಂಗ್ರಹಿಸಲಾಗುವುದು. ಎಸ್‍ಡಬ್ಲ್ಯುಕ್ಯೂಎಂಕಾರ್ಯಕ್ರಮದಡಿಯಲ್ಲಿ ಸಂಗ್ರಹಿಸಲಾದ ಮಾಹಿತಿ ಆಧಾರದಲ್ಲಿ ‘ಭಾರತದ ಕಡಲತೀರದ ಆಯ್ದ ಸ್ಥಳಗಳಲ್ಲಿ ಸಮುದ್ರ ನೀರಿನ ಗುಣಮಟ್ಟ’ ವನ್ನು 2018ರ ಜುಲೈ 27ರಂದು ನವದೆಹಲಿಯಲ್ಲಿ ಭೂವಿಜ್ಞಾನಗಳ ಸಚಿವಾಲಯದ ಸ್ಥಾಪನಾ ದಿನದಂದುಬಿಡುಗಡೆಗೊಳಿಸಲಾಯಿತು.

ವಿವಿಧ ಮಾನವ ನಿರ್ಮಿತ ಹಾಗೂ ನೈಸರ್ಗಿಕ ಅಡ್ಡಿಗಳಿಂದ ಭಾರತದ ಕಡಲತೀರ ಬದಲಾವಣೆಗಳಿಗೆ ಒಳಗಾಗುತ್ತಿದೆ. ಕಡಲತೀರದಲ್ಲಿ ಜನಸಂಖ್ಯೆ ಹೆಚ್ಚಳವಾಗುತ್ತಿರುವುದು ಕಡಲ ಸಂಪನ್ಮೂಲಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಸಿದೆ. ಕಡಲತೀರದ ಸವೆತ, ನದಿ/ಅಳಿವೆಗಳು ಮುಚ್ಚುತ್ತ ಬಂದಿವೆ. 1990-2016ರ ತನಕ 26 ವರ್ಷಗಳಲ್ಲಿ ಸಮುದ್ರ ತೀರದಲ್ಲಿ ಕಂಡುಬಂದಿರುವ ಬದಲಾವಣೆಗಳಿಗೆ ಸಂಬಂಧಿಸಿ ಎನ್‍ಸಿಸಿಆರ್ ಸ್ಥಿತಿಗತಿ ವರದಿ ಸಿದ್ಧಪಡಿಸಿದೆ. ಇದು ಸಮುದ್ರ ತೀರದಲ್ಲಿನ ಬದಲಾವಣೆಗಳು, ಮೂರು ವಿಧದ ನಕ್ಷೆ, ಸವೆತ/ಸಂಚಯ, ಭೂಮಿ ನಷ್ಟ/ಭೂ ಪ್ರದೇಶ ಲಭ್ಯ ಇತ್ಯಾದಿಗೆ ಸಂಬಂಧಿಸಿ ಭಾರತದ ಇಡೀ ಕಡಲತೀರಕ್ಕೆ ಸಂಬಂಧಿಸಿದ ಮಾಹಿತಿಯನ್ನು ಒಳಗೊಂಡಿದೆ. ಕಡಲ ತೀರ ಪ್ರದೇಶದ ಆಸ್ತಿಗಳು ಹಾಗೂ ಜೀವಿಗಳನ್ನು ರಕ್ಷಿಸಲು ಈ ವರದಿ ಕಡಲ ತೀರದನಿರ್ವಹಕರು ಹಾಗೂ ಇತರರಿಗೆ ನೆರವು ನೀಡಲಿದೆ.

ಮಹಾನಗರಗಳ ವಾಯು ಗುಣಮಟ್ಟ ಹಾಗೂ ಹವಾಮಾನ ಸೇವೆಗಳು:

ಭೂ ವಿಜ್ಞಾನಗಳ ಇಲಾಖೆ ಕೇಂದ್ರ ಸಚಿವ ಹರ್ಷವರ್ಧನ್ ದೆಹಲಿಯ ಅತ್ಯಂತ ಜನನಿಬಿಡ ಪ್ರದೇಶಗಳಲ್ಲೊಂದಾದ ಟೌನ್ ಹಾಲ್ ಸಮೀಪದ ಚಾಂದಿನಿ ಚೌಕ್ ಜನರ ಪ್ರಯೋಜನಕ್ಕಾಗಿ ವಾಯು ಗುಣಮಟ್ಟ ನಿರ್ವಹಣೆ ಹಾಗೂ ಮುನ್ಸೂಚನೆ ಕೇಂದ್ರವನ್ನುಉದ್ಘಾಟಿಸಿದರು. ಇದು ದೈನಂದಿನ ಗಾಳಿಯಲ್ಲಿನ ಮಾಲೀನಕಾರಗಳು ಹಾಗೂ ಹವಾಮಾನ ಮಾನದಂಡಗಳ ಜತೆಗೆ ಪಿಎಂ 1, ಎಚ್‍ಜಿ ಹಾಗೂ ಯುವಿ ರೇಡಿಯೇಷನ್ ಅನ್ನು ಕೂಡ ನಿರ್ವಹಣೆ ಮಾಡುತ್ತದೆ.

ದೆಹಲಿಯಲ್ಲಿ ವಾಯು ಗುಣಮಟ್ಟದ ಶೀಘ್ರ ಎಚ್ಚರಿಕೆ ವ್ಯವಸ್ಥೆ :

ದೆಹಲಿಯಲ್ಲಿ ನೂತನ ವಾಯು ಗುಣಮಟ್ಟದ ಶೀಘ್ರ ಎಚ್ಚರಿಕಾ ವ್ಯವಸ್ಥೆಯನ್ನು ಅಮೆರಿಕದ ವಾತಾವರಣ ಸಂಶೋಧನೆ ರಾಷ್ಟ್ರೀಯ ಕೇಂದ್ರ (ಎನ್‍ಸಿಎಆರ್)ದ ಸಹಭಾಗಿತ್ವದಲ್ಲಿ 2018ರ ಅಕ್ಟೋಬರ್ 15ರಂದು ಪ್ರಾರಂಭಿಸಲಾಯಿತು. ಕೇಂದ್ರೀಯ ಮಾಲಿನ್ಯನಿಯಂತ್ರಣ ಮಂಡಳಿ (ಸಿಪಿಸಿಬಿ), ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ (ಡಿಪಿಸಿಸಿ) ಹಾಗೂ ವಾಯು ಗುಣಮಟ್ಟ ಹಾಗೂ ಹವಾಮಾನ ಎಚ್ಚರಿಕಾ ಹಾಗೂ ಸಂಶೋಧನಾ ವ್ಯವಸ್ಥೆ (ಎಸ್‍ಎಎಫ್‍ಎಆರ್) ನಿರ್ವಹಿಸುತ್ತಿರುವ 36 ನಿಯಂತ್ರಣ ಕೇಂದ್ರಗಳಿಂದ ಈವ್ಯವಸ್ಥೆಯು ಮಾಹಿತಿಯನ್ನು ಸಂಗ್ರಹಿಸಲಿದೆ. ವಾಯುವ್ಯ ಭಾರತದಲ್ಲಿ ಉಷ್ಣ ಮಾರುತ ಅಥವಾ ಧೂಳಿನ ಚಂಡಮಾರುತದ ಬಗ್ಗೆ ಉಪಗ್ರಹದಿಂದ ಮಾಹಿತಿ ಸಂಗ್ರಹಿಸುವ ಮೂಲಕ ವಾಯು ಗುಣಮಟ್ಟದ ನಿಖರವಾದ ಮಾಹಿತಿ ಕಲೆ ಹಾಕಲು ಸಾಧ್ಯವಾಗುತ್ತದೆ. ಹೊಸದಾಗಿ ಅಭಿವೃದ್ಧಿಪಡಿಸಿರುವ ಈ ವ್ಯವಸ್ಥೆ ಗ್ರೇಡೆಡ್ ಪ್ರತಿಕ್ರಿಯೆ ಕಾರ್ಯಯೋಜನೆಯನ್ನು ಮುಂಚಿತವಾಗಿ ಅನುಷ್ಠಾನಗೊಳಿಸಲು ನೆರವು ನೀಡುತ್ತದೆ.

ಚೆನ್ನೈ ಪ್ರವಾಹ ತಗ್ಗಿಸುವಿಕೆ:

ಗ್ರೇಟರ್ ಚೆನ್ನೈ ನಗರಪಾಲಿಕೆ ಪ್ರದೇಶದಲ್ಲಿ ಕಡಲತೀರ ಪ್ರವಾಹ ಎಚ್ಚರಿಕಾ ವ್ಯವಸ್ಥೆಗಳಿರುವ ಸ್ಥಳಗಳಿಗೆ ತಾಂತ್ರಿಕ ಬೆಂಬಲ ಒದಗಿಸಲು ಕಡಲತೀರ ಸಂಶೋಧನೆ ರಾಷ್ಟ್ರೀಯ ಕೇಂದ್ರ (ಎನ್‍ಸಿಸಿಆರ್), ಭೂವಿಜ್ಞಾನಗಳ ಸಚಿವಾಲಯು ಚೆನ್ನೈ ಹಾಗೂ ಕಂದಾಯಆಡಳಿತ, ಪ್ರಕೃತಿ ವಿಕೋಪ ನಿರ್ವಹಣೆ ಹಾಗೂ ತಗ್ಗಿಸುವಿಕೆ ಇಲಾಖೆಯೊಂದಿಗೆ ತಿಳಿವಳಿಕೆ (ಎಂಒಯು) ಪತ್ರಕ್ಕೆ ಸಹಿ ಹಾಕಿದೆ.

ಗ್ರೇಟರ್ ಚೆನ್ನೈ ಕಾರ್ಪೋರೇಷನ್ (ಜಿಸಿಸಿ)ಗೆ ಎನ್‍ಸಿಸಿಆರ್ ಚೆನ್ನೈ ಪ್ರವಾಹ ಎಚ್ಚರಿಕಾ ವ್ಯವಸ್ಥೆ (ಸಿ-ಹರಿವು)ಯನ್ನು ಅಭಿವೃದ್ಧಿಪಡಿಸಿದೆ. ಈ ವ್ಯವಸ್ಥೆಯ ವಿನ್ಯಾಸವು ಪ್ರಾದೇಶಿಕ ಹವಾಮಾನ ಮುನ್ಸೂಚನಾ ಮಾದರಿ, ಅಲೆಗಳ ಮುನ್ಸೂಚನಾ ಮಾದರಿ, ಪ್ರವಾಹಮಾದರಿ ಜತೆಗೆ ಪ್ರವಾಹ ಹಾಗೂ ಮುಳುಗುವಿಕೆ ಮುನ್ಸೂಚನೆ ಮಾದರಿಗಳನ್ನು ಒಳಗೊಂಡಿದೆ. ಈ ವ್ಯವಸ್ಥೆಯು ಬಹು ವಿಷಯಗಳು, ಬಹು ಸಂಸ್ಥೆಗಳನ್ನು ಒಳಗೊಂಡಿದೆ. ಭಾರತೀಯ ತಾಂತ್ರಿಕ ಸಂಸ್ಥೆ, ಮುಂಬೈ (ಐಐಟಿಬಿ) ಈ ವ್ಯವಸ್ಥೆಯ ನೇತೃತ್ವ ವಹಿಸಿದೆ. ಇದರೊಂದಿಗೆ ಇತರ ಸಂಸ್ಥೆಗಳಾದ ಭಾರತೀಯ ತಾಂತ್ರಿಕ ಸಂಸ್ಥೆ ಮದ್ರಾಸ್ (ಐಐಟಿಎಂ), ಅಣ್ಣಾ ವಿಶ್ವವಿದ್ಯಾಲಯ, ಇಎಸ್‍ಎಸ್‍ಒ-ಮಧ್ಯಮ ಕ್ರಮಾಂಕದ ಹವಾಮಾನ ಮುನ್ಸೂಚನ ರಾಷ್ಟ್ರೀಯ ಕೇಂದ್ರ (ಎನ್‍ಸಿಎಂಆರ್‍ಡಬ್ಲ್ಯುಎಫ್) ಹಾಗೂ ಇಎಸ್‍ಎಸ್‍ಒ-ಭಾರತೀಯ ಹವಾಮಾನಶಾಸ್ತ್ರ ಇಲಾಖೆ (ಐಎಂಡಿ) ಕೈಜೋಡಿಸಿವೆ. ಹವಾಮಾನ ಮುನ್ಸೂಚನೆ ದೊರಕಿದ ಬಳಿಕ ಈ ವ್ಯವಸ್ಥೆ ಪ್ರತಿ ವಾರ್ಡ್‍ನಲ್ಲಿನ ಪ್ರವಾಹ ಮಟ್ಟದ ಬಗ್ಗೆ ಒಂದು ಗಂಟೆಯೊಳಗೆ ಹಾಗೂ ಅರ್ಧ ಗಂಟೆಯೊಳಗೆ ಮಾಹಿತಿ ಒದಗಿಸುತ್ತದೆ. ಪ್ರತಿ 6 ಹಾಗೂ 24 ಗಂಟೆಗೊಮ್ಮೆ ಪರಿಷ್ಕರಿಸಿದ ಮಾಹಿತಿಗಳನ್ನು ನೀಡಲಾಗುವುದು. ಅಪಾಯದ ಮುನ್ಸೂಚನೆ ನೀಡುವ ಮೊಬೈಲ್ ಅಪ್ಲಿಕೇಷನ್ ಹಾಗೂ ಡ್ಯಾಷ್‍ಬೋರ್ಡ್ ಅಭಿವೃದ್ಧಿಪಡಿಸಿ ಅದರ ಮೂಲಕ ವೈಜ್ಞಾನಿಕಾ ಸಲಹೆಗಳನ್ನು ನೀಡಲಾಗುತ್ತದೆ. ಈಶಾನ್ಯ ಮಳೆಮಾರುತಕ್ಕೆ ಸಂಬಂಧಿಸಿ ಸಿ-ಹರಿವು ಪರೀಕ್ಷೆಯನ್ನು 2018ರಲ್ಲಿ ಮಾಡಲಾಗಿದೆ.

ಕಡಲತೀರದ ಇಂಜಿನಿಯರಿಂಗ್:

ಕಡಲತೀರಗಳ ರಕ್ಷಣೆಗೆ ಪುದುಚೇರಿಯಲ್ಲಿ ಕಡಲತೀರದಿಂದ ಸ್ವಲ್ಪ ಅಂತರದಲ್ಲಿ ದಂಡೆಗಳ ನಿರ್ಮಾಣ:

ಪುದುಚೇರಿಯಉತ್ತರ ಭಾಗದಲ್ಲಿ 60 ಮೀ. ಅಗಲದ ಕಡಲ ತೀರವನ್ನು ಪಡೆಯಲು ಉಕ್ಕಿನ ಕಂಬಗಳನ್ನು ನೀರಿನಡಿಯಲ್ಲಿ ಮುಳುಗಿರುವ ದಂಡೆಗಳ ಮೇಲೆ ನೆಡಲಾಗಿದೆ. ಇದು ತ್ರಿಕೋನಾಕಾರದಲ್ಲಿರುವ ಉಕ್ಕಿನ ಕಂಬವಾಗಿದ್ದು, 800 ಟನ್ ತೂಕ ಹೊಂದಿದ್ದು, 50 ಮೀ.*60 ಮೀ.*2.5 ಮೀ. ಸುತ್ತಳತೆ ಹೊಂದಿದೆ. ಇದನ್ನು 2.5 ಮೀ. ನೀರಿನಾಳದಲ್ಲಿ ಯಶಸ್ವಿಯಾಗಿ ಅಳವಡಿಸಲಾಗಿದೆ. ಇದನ್ನು ಬೀಚ್ ಪುನರ್‍ಸ್ಥಾಪನೆ ಯೋಜನೆಯ ಭಾಗವಾಗಿ 2018ರ ಆಗಸ್ಟ್ 23ರಂದು ಅಳವಡಿಸಲಾಯಿತು. ಈ ಯೋಜನೆಪೂರ್ಣಗೊಂಡಿದ್ದು, ಅಗಲವಾದ ಬೀಚ್‍ವೊಂದು ಪುದುಚೇರಿಯಲ್ಲಿ ನಿರ್ಮಾಣವಾಗಿದೆ.

ಪದುಚೇರಿ ಬೀಚ್ ಪುನರ್‍ಸ್ಥಾಪನೆಗೆ ಸಂಬಂಧಿಸಿ ಕಾರ್ಯಾಗಾರವನ್ನು 2018ರ ಅಕ್ಟೋಬರ್ 11ರಂದು ಪುದುಚೇರಿಯಲ್ಲಿ ಆಯೋಜಿಸಲಾಗಿತ್ತು. ಈ ಬೀಚ್ ಪುನರ್‍ಸ್ಥಾಪನೆ ವಿಡಿಯೋವನ್ನು ಪುದುಚೇರಿಯ ಗೌರವನ್ವಿತ ಲೆಫ್ಟಿನೆಂಟ್ ಗವರ್ನರ್ ಡಾ.ಕಿರಣ್ ಬೇಡಿಐ.ಪಿ.ಎಸ್ (ನಿವೃತ್ತ) ಬಿಡುಗಡೆಗೊಳಿಸಿದರು. ಪುದುಚೇರಿಯ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ಈ ಯೋಜನೆಯ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಿದರು. ಬೀಚ್ ಪುನರ್‍ನಿರ್ಮಾಣ ಕಾಮಗಾರಿಯನ್ನು ಪುದುಚೇರಿ ಸರ್ಕಾರ, ಮಾಶ್ಯಮ ಹಾಗೂಸಾರ್ವಜನಿಕರು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ.

ತಂತ್ರಜ್ಞಾನದ ವರ್ಗಾವಣೆ (ಟಿಒಟಿ):  *ತಂತ್ರಜ್ಞಾನ ವರ್ಗಾವಣೆ (ಟಿಒಟಿ) ಎನ್‍ಆರ್‍ಡಿಸಿ ಮೂಲಕ ರೋಬೋ ಕಡಲತೀರದ ತಂತ್ರಜ್ಞಾನ (ಟಿಒಟಿ) ವರ್ಗಾವಣೆ ಒಪ್ಪಂದಕ್ಕೆ ಎನ್‍ಐಒಟಿ ಹೈದರಾಬಾದ್‍ನಲ್ಲಿ 2018ರ ಏಪ್ರಿಲ್ 27ರಂದು ಭೂವಿಜ್ಞಾನಸಚಿವಾಲಯದ ಕಾರ್ಯದರ್ಶಿಗಳ ಸಮಕ್ಷಮದಲ್ಲಿ ಸಹಿ ಹಾಕಿದೆ.

*ಎನ್‍ಆರ್‍ಡಿಸಿ ಮೂಲಕ ಎಲ್ ಆಂಡ್ ಟಿ ಭಾರೀ ಕೈಗಾರಿಕೆಗಳಿಗೆ ರಿಮೋಟ್ ಚಾಲಿತ ತಂತ್ರಜ್ಞಾನದ ಮೂಲಕ ಕಾರ್ಯನಿರ್ವಹಿಸುವ ವಾಹನ ತಂತ್ರಜ್ಞಾನ ವರ್ಗಾವಣೆ ಮಾಡುವ ಒಪ್ಪಂದಕ್ಕೆ ಎನ್‍ಐಒಟಿ ಹೈದರಾಬಾದ್‍ನಲ್ಲಿ 2018ರ ಏಪ್ರಿಲ್ 27ರಂದುಭೂವಿಜ್ಞಾನ ಸಚಿವಾಲಯದ ಕಾರ್ಯದರ್ಶಿಗಳ ಸಮಕ್ಷಮದಲ್ಲಿ ಸಹಿ ಹಾಕಿದೆ.

* ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್)ಗೆ ಸಂಜ್ಞಾ ಪರಿವರ್ತಕ ತಂತ್ರಜ್ಞಾನ ವರ್ಗಾವಣೆ ಮಾಡಿದೆ.

* ಎನ್‍ಆರ್‍ಡಿಸಿ ಮೂಲಕ ಎನ್‍ಐಒಟಿ ಒಸಿಯನ್ ಡ್ರಿಫ್ಟರ್ ಹಾಗೂ ಸಿಟಿಡಿ ತಂತ್ರಜ್ಞಾನವನ್ನು ಎಂ/ಎಸ್. ನೊರಿನ್ಕೋ ಮುಂಬೈ, ಎಂ/ಎಸ್. ಅಸ್ತ್ರ ಮೈಕ್ರೋವೇವ್ ಹೈದರಾಬಾದ್ ಹಾಗೂ ಎಂ/ಎಸ್. ಅಝಿಸ್ಟ್ ಕೈಗಾರಿಕಾ ಪ್ರೈ ಲಿ. ಅಹಮದಾಬಾದ್‍ಗೆವರ್ಗಾಯಿಸುವ ಒಪ್ಪಂದಕ್ಕೆ 31.8.2018ರಂದು ಎಂಇಎಸ್ ಕಾರ್ಯದರ್ಶಿ ಸಮಕ್ಷಮದಲ್ಲಿ ಸಹಿ ಹಾಕಿದೆ.

ಆಯ್ದ ನಗರಗಳ ಮೈಕ್ರೋಝೋನೇಷನ್: ಭೂ ಭೌತಶಾಸ್ತ್ರದ ಅನ್ವೇಷಣೆಗೆ ಸಂಬಂಧಿಸಿದ ಭೂಕಂಪದ ಮೈಕ್ರೋಝೋನೇಷನ್ ಕಾರ್ಯವನ್ನು ಆಯ್ದ ನಾಲ್ಕು ನಗರಗಳಾದ ಚೆನ್ನೈ, ಭುವನೇಶ್ವರ್, ಕೊಯಮತ್ತೂರು ಹಾಗೂ ಮಂಗಳೂರಿನಲ್ಲಿಪ್ರಾರಂಭಿಸಲಾಗಿದೆ. ಇದರ ಜತೆಗೆ ಇನ್ನೂ 8 ನಗರಗಳಲ್ಲಿ ಮೈಕ್ರೋಝೋನೇಷನ್ ನಡೆಸುವುದು ಭೂಕಂಪದ ಅಪಾಯದ ಹಿನ್ನೆಲೆಯಲ್ಲಿ ಮುಖ್ಯವಾಗಿದೆ. ಈ 8 ನಗರಗಳ ಪಟ್ಟಿಯಲ್ಲಿ ಪಟ್ನಾ, ಮೀರತ್, ಅಮೃತಸರ್, ಆಗ್ರಾ, ವಾರಣಾಸಿ, ಲಖ್ನೋ, ಕಾನ್ಪುರಹಾಗೂ ಧನಬಾದ್ ಸೇರಿವೆ. ಸಚಿವಾಲಯುವು ಇನ್ನೂ ಕೆಲವೊಂದು ಪ್ರದೇಶಗಳನ್ನು ಗುರುತಿಸಿದ್ದು, ಅವುಗಳ ಪ್ರಗತಿ/ಸಬಲೀಕರಣಕ್ಕೆ ಯೋಜನೆಗಳನ್ನು ರೂಪಿಸಿದೆ. ಆ ಮೂಲಕ ರಾಷ್ಟ್ರಕ್ಕೆ ಅತ್ಯುತ್ತಮ ಸೇವೆಗಳನ್ನು ಒದಗಿಸಲು ಮುಂದಾಗಿದೆ.

………


(Release ID: 1557361) Visitor Counter : 155


Read this release in: English , Hindi , Bengali , Tamil