ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

2018 ವರ್ಷಾಂತ್ಯದ ವಿಮರ್ಶೆ ಯುವ ವ್ಯವಹಾರಗಳ ಇಲಾಖೆ  (ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ)

Posted On: 10 DEC 2018 11:43AM by PIB Bengaluru

2018 ವರ್ಷಾಂತ್ಯದ ವಿಮರ್ಶೆ

ಯುವ ವ್ಯವಹಾರಗಳ ಇಲಾಖೆ 
(
ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ)

 

 ವರ್ಷದಲ್ಲಿ ದೇಶದ ಜನಸಂಖ್ಯೆಯ ಅತ್ಯಂತ ಉತ್ಸಾಹವುಳ್ಳ ಮತ್ತು ಕ್ರಿಯಾತ್ಮಕ ಭಾಗವನ್ನು ಪ್ರತಿನಿಧಿಸುವ ಯುವಕರಿಗೆಯುವಜನ ಇಲಾಖೆಯ ಯುವ ವ್ಯವಹಾರ ಮತ್ತು ಕ್ರೀಡಾ ಇಲಾಖೆಯು  ರಾಷ್ಟ್ರೀಯ ಯುವ ಸಶಕ್ತೀಕರಣ ಕಾರ್ಯಕ್ರಮದ (ಆರ್ ವೈಎಸ್ ಕೆಮೂಲಕ ಹೊಸ ಭರವಸೆ ನೀಡಲಾಗಿದೆ.  ಯುವ ವ್ಯವಹಾರ  ಇಲಾಖೆಯು ತೆಗೆದುಕೊಂಡ   ಉಪಕ್ರಮಗಳ ಸರಣಿಗಳು ದೇಶದ ಬೆಳವಣಿಗೆಯಲ್ಲಿ ಯುವಜನರು ಹೆಚ್ಚಾಗಿ  ಪಾಲ್ಕೊಳ್ಳುವಂತೆ ಮಾಡಿದೆ.

 

ಯುವ ವ್ಯವಹಾರಗಳ ಇಲಾಖೆಯ ಯೋಜನೆಗಳ ಪುನರ್ರಚನೆ

 

01.04.2016 ರಿಂದ ಜಾರಿಗೆ ಬರುವಂತೆ ಈ ಕೆಳಗಿನಂತೆ ಇಲಾಖೆಯ ಯೋಜನೆಗಳನ್ನು  ಒಟ್ಟುಗೂಡಿಸಿ ಮೂರು ಸಣ್ಣ ಯೋಜನೆಗಳನ್ನಾಗಿ ಪುನರ್ರಚಿಸಲಾಯಿತು :

 

 

1. ಎಂಟು ಯೋಜನೆಗಳನ್ನು ಒಂದೇ ಕೊಡೆಯ ಅಡಿಯಲ್ಲಿ ಇರುವಂತಹ “ರಾಷ್ಟ್ರೀಯ ಯುವ ಸಶಕ್ತೀಕರಣ” (ಆರ್ ವೈ ಎಸ್ ಕೆಕಾರ್ಯಕ್ರಮದಲ್ಲಿ ಒಟ್ಟುಕೂಡಿಸಲಾಯಿತು.

2.   ರಾಷ್ಟ್ರೀಯ ಸೇವಾ ಯೋಜನೆ (ಎನ್ ಎಸ್ ಎಸ್)

3. ರಾಜೀವ್ ಗಾಂಧಿ ರಾಷ್ಟ್ರೀಯ ಯುವಜನ ಅಭಿವೃದ್ಧಿ ಸಂಸ್ಥೆ (ಆರ್ ಜಿ ಎನ್  ವೈ ಡಿ)

2018-19ರಲ್ಲಿ ಮೇಲಿನ ಯೋಜನೆಗಳು / ಉಪ-ಯೋಜನೆಗಳ ಅಡಿಯಲ್ಲಿನ ಪ್ರಮುಖ ಸಾಧನೆಗಳನ್ನು   ಕೆಳಗೆ ನೀಡಲಾಗಿದೆ:

 

1.       ರಾಷ್ಟ್ರೀಯ ಯುವ ಸಶಕ್ತಿಕರಣ ಕಾರ್ಯಕ್ರಮ (ಆರ್ ವೈ ಎಸ್ ಕೆ)

 

A.    ನೆಹರು ಯುವ ಕೇಂದ್ರ ಸಂಘಟನೆ (ಎನ್ ವೈ ಕೆ ಎಸ್)

ನೆಹರು ಯುವ ಕೇಂದ್ರ ಸಂಘಟನೆಯು 1.68 ಲಕ್ಷ ಯುವ ಸಂಸ್ಥೆಗಳ  ಮೂಲಕ ದಾಖಲಾದ ಸುಮಾರು 36.22 ಲಕ್ಷ ಯುವಕರೊಂದಿಗೆ   ಯುವಜನತೆಯ ವ್ಯಕ್ತಿತ್ವವನ್ನು ಬೆಳೆಸಲು ಮತ್ತು ದೇಶದ ಬೆಳವಣಿಗೆಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ದೇಶದಾದ್ಯಂತ ಕೆಲಸ ಮಾಡುತ್ತಿದೆ.

 

 2018ರಲ್ಲಿ ಎನ್ ವೈ ಕೆ ಎಸ್ ನ ಕೆಲವು ಪ್ರಮುಖ ಉಪಕ್ರಮಗಳು / ಸಾಧನೆಗಳು ಹೀಗಿವೆ:

·        8.47 ಲಕ್ಷ ಗಿಡಗಳನ್ನು ಎನ್ ವೈ ಎಸ್ ಕೆ ನ ಸ್ವಯಂಸೇವಕರಿಂದ ನೆಡಲ್ಪಟ್ಟಿವೆ.

·        13,432 ಯೂನಿಟ್ ಗಳಷ್ಟು ರಕ್ತದಾನವನ್ನು ಎನ್ ವೈ ಎಸ್ ಕೆ ನ ಸ್ವಯಂಸೇವಕರಿಂದ ಮಾಡಲಾಗಿದೆ.

·        1,764 ಮೂಲ ವೃತ್ತಿಗಳಲ್ಲಿ ಮತ್ತು ಮೃದು ಕೌಶಲ್ಯಗಳ ಕಾರ್ಯಕ್ರಮಗಳನ್ನು 51,508 ಯುವಕರಿಗೆ ಶಿಕ್ಷಣವನ್ನು ಆಯೋಜಿಸಲಾಗಿದೆ

·        1964 ಯುವಕ ಸಂಘಗಳ ಬೆಳವಣಿಗೆಯ ಕಾರ್ಯಕ್ರಮಗಳನ್ನು 83,514 ಯುವಕರನ್ನು ಒಳಗೊಂಡು ಆಯೋಜಿಸಲಾಗಿತ್ತು.

·        1336 ಕ್ರೀಡಾ ಕೂಟಗಳನ್ನು ಬ್ಲಾಕ್ ಹಂತದಲ್ಲಿ 1,77,688 ಯುವಕರನ್ನು ಒಳಗೊಂಡು ಆಯೋಜಿಸಲಾಗಿತ್ತು.

·        11,05,136 ಯುವಕರನ್ನು ಒಳಗೊಂಡು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ದಿನಗಳನ್ನು ಆಚರಿಸಲು 8126 ಕಾರ್ಯಕ್ರಮಗಳನ್ನು ನಡೆಸಲಾಯಿತು. 

·        1,84,5024 ಯುವಕರನ್ನು ಒಳಗೊಂಡ 230 ಜಿಲ್ಲಾ ಯುವ ಸಮಾವೇಶಗಳನ್ನು ಸಂಘಟಿಸಲಾಯಿತು.

·        ಆಂತರರಾಷ್ಟ್ರೀಯ ಯೋಗ ದಿನ ವನ್ನು 21ನೇ ಜೂನೆ 2018 ರಲ್ಲಿ ಎನ್ ವೈ ಕೆ ಎಸ್ ವತಿಯಿಂದ ಭಾರತದಾದ್ಯಂತ 38,356 ಸ್ಥಳಗಳಲ್ಲಿ ಆಚರಿಸಲಾಯಿತು, ಇದರಲ್ಲಿ 23.68 ಲಕ್ಷ ಯುವಕರು ಪಾಲ್ಗೊಂಡಿದ್ದರು.

·        ಸ್ವಚ್ಛತಾ ಕಾರ್ಯಕ್ರಮವನ್ನು 1,15,437 ಸ್ಥಳಗಳಲ್ಲಿ ನಡೆಸಲಾಯಿತು, ಈ ಕಾರ್ಯಕ್ರಮಗಳಲ್ಲಿ 8,577 ಶಾಲೆ ಮತ್ತು ಕಾಲೇಜುಗಳನ್ನು , 7,797 ಆಸ್ಪತ್ರೆಗಳನ್ನು ಮತ್ತು 21,905 ಮೂರ್ತಿಗಳನ್ನು ಸ್ವಚ್ಛ ಮಾಡಲು 12,07,686 ಯುವಕರು ಪಾಲ್ಗೊಂಡಿದ್ದರು.

·        ಜಲ ಸಂರಕ್ಷಣೆ - 3.9 ಲಕ್ಷ ಯುವಕರನ್ನು ಒಳಗೊಂಡಂತೆ 13,757 ಜಾಗೃತಿ ಸೃಷ್ಟಿ ಕಾರ್ಯಕ್ರಮಗಳನ್ನು ನಡೆಸಲಾಯಿತು; 2430 ಹೊಸ ಜಲಶೇಖರಣಾ ಸ್ಥಳಗಳನ್ನು ರಚಿಸಲಾಗಿದೆ ಮತ್ತು 3437 ನೀರಿನ ಮೂಲಗಳನ್ನು ನಿರ್ವಹಿಸಲಾಗಿದೆ.

·        ಇಂದ್ರಧನುಷ್ ಕಾರ್ಯಕ್ರಮ -  ಸೇವಾಕರ್ತರ ಸಹಾಯದಿಂದ 59,961 ಮಕ್ಕಳಿಗೆ ರೋಗಗಳ ವಿರುದ್ಧ ಪ್ರತಿರಕ್ಷಿಸುವ ಕಾರ್ಯಕ್ರಮವನ್ನು ಮಾಡಲಾಗಿದೆ.

·          ರಾಷ್ಟ್ರೀಯ ಏಕತಾ  ದಿನ ಮತ್ತು ಏಕತೆಗಾಗಿ ಓಟ ಕಾರ್ಯಕ್ರಮವನ್ನು ಭಾರತದಲ್ಲಿ ಜಿಲ್ಲಾ ನೆಹರು ಯುವ ಕೇಂದ್ರಗಳು ನಡೆಸಿದವು. ಇದರಲ್ಲಿ 2.6 ಲಕ್ಷ ಯುವಕರು ಭಾಗವಹಿಸಿದ್ದರು

·        ಸ್ವಚ್ಛ ಹೀ ಸೇವಾ ಶಿಬಿರ (ಸ್ವಚ್ಛತೆಯೇ ಸೇವೆ ಶಿಬಿರ) ,  ಪೂರ್ವ ಚಂಪಾರಣ್ - ಸ್ವಚ್ಛ ಹೀ ಸೇವಾ ಶಿಬಿರವನ್ನು ಪೂರ್ವ ಚಂಪಾರಣ್ (ಬಿಹಾರ)ದ,  ಜಿಲ್ಲಾ ನೆಹರು ಯುವ ಕೇಂದ್ರವು ಪ್ರಾರಂಭಿಸಿತು.  ಈ ಕಾರ್ಯಕ್ರಮವು 14 ಸೆಪ್ಟೆಂಬರ್ ನಿಂದ 25 ಸೆಪ್ಟೆಂಬರ್ 2018ರವರೆಗೆ ನಡೆಯಿತು. ಇದರಲ್ಲಿ 3000ಕ್ಕಿಂತಲೂ ಹೆಚ್ಚು ಯುವಕರು ಪಾಲ್ಗೊಂಡಿದ್ದರು.  ಮೋತಿ ಝೀಲ್, ರಸ್ತೆ, ರೈಲ್ವೆ ನಿಲ್ದಾಣ ಮತ್ತು ಸಾವರ್ಜನಿಕ ಸ್ಥಳಗಳನ್ನು ಶುಚಿಗೊಳಿಸುವ ವಿವಿಧ ರೀತಿಯ ಚಟುವಟಿಕೆಗಳನ್ನು ನಡೆಸಲಾಯಿತು.

 

·        ಗಂಗಾ ಶುದ್ಧೀಕರಣ ಯೋಜನೆ  - ಎನ್ ವೈ ಕೆ ಎಸ್ , ರಾಷ್ಟ್ರೀಯ ಮಿಷನ್ ನ ಜೊತೆಗೂಡಿ ಗಂಗಾ ಶುದ್ಧೀಕರಣ ಯೋಜನೆಯಲ್ಲಿ ಗಂಗಾ ನದಿಯ ಉದ್ದಕ್ಕೂ ಇರುವ ಹಳ್ಳಿಗಳಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯದ  ಜಾಗೃತಿ ಹರಡಲು   ಕಾರ್ಯ ನಿರ್ವಯಿಸುತ್ತಿದೆ.  ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳದ 4 ರಾಜ್ಯಗಳ 53 ಆಯ್ದ ಬ್ಲಾಕ್ ಗಳಲ್ಲಿ ಗಂಗಾ ವೃಕ್ಷಾರೋಪಣ್ ಸಪ್ತಾಹ (ಪ್ಲಾಂಟೇಶನ್ ವೀಕ್)ವನ್ನು ನಡೆಸಲಾಯಿತು. 82,819 ಸಸಿಗಳ ನೆಡುವಿಕೆಯನ್ನು ಅರಣ್ಯ ಇಲಾಖೆ ಮತ್ತು ರಾಷ್ಟ್ರೀಯ ಮಿಷನ್ ನ ಸಹಯೋಗದೊಂದಿಗೆ ಗಂಗಾ ಶುದ್ಧೀಕರಣಕ್ಕಾಗಿ ಜುಲೈ 9 ರಿಂದ ಜುಲೈ 15, 2018 ರವರೆಗೆ ನೆರವೇರಿಸಲಾಯಿತು.

 

·        ಒಂದೇ ಭಾರತ ಶ್ರೇಷ್ಠ ಭಾರತ ವನ್ನು 15 ರಾಜ್ಯಗಳಲ್ಲಿ ಅಂತರ ರಾಜ್ಯ ಯುವ ವಿನಿಮಯ ಕಾರ್ಯಕ್ರಮದಲ್ಲಿ ನಡೆಸಲಾಯಿತು.  ಇಲ್ಲಿಯವರೆಗೆ ಈ ರೀತಿ 4 ಕಾರ್ಯಕ್ರಮಗಳನ್ನು ತೆಲಂಗಾಣ, ಪಂಜಾಬ್, ಕೇರಳ ಮತ್ತು ಛತ್ತೀಸ್‌ಘಡ ರಾಜ್ಯಗಳ ನಡೆಸಲಾಗಿದೆ. ಇದರಲ್ಲಿ 401 ಯುವಕರು ಪಾಲ್ಗೊಂಡಿರುವರು.

 

·        ರಾಷ್ಟ್ರೀಯ ಪೋಷಣೆ ಅಭಿಯಾನ ಕಾರ್ಯಕ್ರಮ - ದೇಶದ ಉದ್ದಗಲಕ್ಕೂ ಪೋಷಣೆ ಅಭಿಯಾನ ಕಾರ್ಯಕ್ರಮವು ಜಾರಿಗೊಳ್ಳಲು  ಎನ್ ವೈ ಕೆ ಎಸ್ ನ ಪಾಲು ಹೆಚ್ಚಾಗಿತ್ತು.  ವಿವಿಧ ರೀತಿಯ ಚಟುವಟಿಕೆಗಳು ಅಂದರೆ ಗೋಷ್ಠಿ, ವಿಚಾರಗೋಷ್ಠಿಗಳು ಮತ್ತು  ವಿವಿಧ ರೀತಿಯ ಚಟುವಟಿಕೆಗಳು, ಪೋಷಣ್ ಮಾ ಕ್ಷೇತ್ರಗಳ ಶ್ರೇಷ್ಠ ಸಂಪನ್ಮೂಲ ವ್ಯಕ್ತಿಗಳ ಉಪನ್ಯಾಸಗಳು ಅಂದರೆ ಗರ್ಭಧಾರಿಣಿಯ ಆರೈಕೆ, ಮದುವೆಗೆ ಸರಿಯಾದ ವಯಸ್ಸು, ಮಗುವಿನ ಆರೈಕೆ, ಜನನದ ಅಂತರ, ಪ್ರತಿರಕ್ಷಣೆ, 2 ವರುಷಗಳವರೆಗೆ  ಸ್ತನ್ಯಪಾನ, ಪೂರಕ ಆಹಾರ ಮತ್ತು ನಿರ್ವಹಣೆ  ಹಾಗೂ ಗ್ರಾಮಗಳಲ್ಲಿ ಸಾಕಷ್ಟು ನೈರ್ಮಲ್ಯ ಸೌಲಭ್ಯಗಳನ್ನು ಆಯೋಜಿಸಲಾಗಿತ್ತು. ಇವುಗಳಲ್ಲದೆ, ಪೋಷಣ್ ಮಾ’ ಕ್ಷೇತ್ರಗಳನ್ನು ಗಮನದಲ್ಲಿರಿಸಿಕೊಂಡು ಹಳ್ಳಿಗಳಲ್ಲಿ ಮನೆಯಿಂದ ಮನೆಗೆ ಪ್ರಚಾರ,  ರ‍್ಯಾಲಿಗಳು, ಓಟಗಳು, ಪಾದಯಾತ್ರೆ ಮತ್ತು ಸೈಕಲ್ ಯಾತ್ರೆಗಳನ್ನು ಆಯೋಜಿಸಲಾಯಿತು. ಯುವ ವ್ಯವಹಾರ ಮತ್ತು ಕ್ರೀಡಾ ಇಲಾಖೆಯ  ಮತ್ತು  ಎನ್ ವೈ ಕೆ ಎಸ್  ನ ಶ್ರಮವು ಉನ್ನತ ಮಟ್ಟದಲ್ಲಿ ಮೆಚ್ಚುಗೆ ಪಡೆದವು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯವು ಆದರ್ಶಪ್ರಾಯ ಕೆಲಸಕ್ಕಾಗಿ ಪುರಸ್ಕರಿಸಲ್ಪಟ್ಟಿತು.

 

·        ಪರಕ್ರಾಮ್ ಪರ್ವ್, 2018 – ಭಾರತ ಸರ್ಕಾರದ ರಕ್ಷಣಾ ಇಲಾಖೆಯು ದೇಶದ ವಿವಿಧ ಭಾಗಗಳಲ್ಲಿ   28 ಸೆಪ್ಟೆಂಬರ್ 2018 ರಿಂದ ಸೆಪ್ಟೆಂಬರ್ 30 ರವರೆಗೆ ಆಯೋಜಿಸಿದ್ದ ಸರ್ಜಿಕಲ್ ಸ್ಟ್ರೈಕ್ ನ ಎರಡನೇ ವಾರ್ಷಿಕೋತ್ಸವದಲ್ಲಿ ಎನ್ ವೈ ಕೆ ಎಸ್  ಪಾಲ್ಗೊಂಡಿತ್ತು, ವಿವಿಧ ಕಾರ್ಯಕ್ರಮಗಳನ್ನು ಹಾಗೂ ಚಟುವಟಿಕೆಗಳನ್ನು ಹಮ್ಮಿಕೊಂಡಿತ್ತು. 1786 ಕ್ಕಿಂತಲೂ ಹೆಚ್ಚು ಯುವಕರು ಮತ್ತು  ಎನ್ ವೈ ಕೆ ಎಸ್ ಅಧಿಕಾರಿಗಳು ದೇಶದಾದ್ಯಂತ ನಡೆದ ಕಾರ್ಯಕ್ರಮಗಳಲ್ಲಿ ಮತ್ತು ಚಟುವಟಿಕೆಗಳಲ್ಲಿ ಭಾಗವಹಿಸಿದರು.

 

·        ಆರೋಗ್ಯ ಮೇಳ - ನೆಹರು ಯುವ ಕೇಂದ್ರ ಸಂಘಟನೆಯ ಬೆಂಬಲದೊಂದಿಗೆ ಹಾರ್ಟ್ ಕೇರ್ ಫೌಂಡೇಶನ್ ನವದೆಹಲಿಯ ತಲಕಟೋರಾ ಸ್ಟೇಡಿಯಂನಲ್ಲಿ 2018 ರ ಅಕ್ಟೋಬರ್ 23 ರಂದು 25ನೆಯ ಪರ್ಫೆಕ್ಟ್ (ಪರಿಪೂರ್ಣ) ಆರೋಗ್ಯ ಮೇಳವನ್ನು ಆಯೋಜಿಸಿತು. ಈ ಕಾರ್ಯಕ್ರಮದಲ್ಲಿ,  ಎನ್ ವೈ ಕೆ ಎಸ್ ನ 1000 ಯುವಕರು ಭಾಗವಹಿಸಿದರು. ಪ್ರಸಿದ್ಧ ಕಲಾವಿದರು, ತಜ್ಞರು, ವೈದ್ಯರು ಮತ್ತು ಸಾಮಾಜಿಕ ಕಾರ್ಯಕರ್ತರು ಉಪಸ್ಥಿತರಿದ್ದರು.

 

B.  ಅಂತರರಾಷ್ಟ್ರೀಯ ಸಹಕಾರ:

 ವಿಭಾಗವು ಯುವಜನರಲ್ಲಿ ಅಂತರರಾಷ್ಟ್ರೀಯ ದೃಷ್ಟಿಕೋನವನ್ನು ಬೆಳೆಸಲು ಮತ್ತು ಯುವ ಅಭಿವೃದ್ಧಿಗೆ ವಿವಿಧ ಅಂತರರಾಷ್ಟ್ರೀಯ ಏಜೆನ್ಸಿಗಳೊಂದಿಗೆ ಸಹಕಾರ ನೀಡಲು ಮತ್ತು ವಿವಿಧ ದೇಶಗಳೊಂದಿಗೆ ಅಂತಾರಾಷ್ಟ್ರೀಯ ಯುವ ವಿನಿಮಯಕಾರ್ಯಕ್ರಮಗಳನ್ನು ನಡೆಸಲು ಬಯಸುತ್ತದೆ ವರ್ಷದ ಕೆಲವು ಗಮನಾರ್ಹ ಸಾಧನೆಗಳು ಹೀಗಿವೆ:

1.

4 - 11 ಏಪ್ರಿಲ್, 2018 ರಲ್ಲಿ ನೇಪಾಳಕ್ಕೆ 38 ಸದಸ್ಯರೊಳಗೊಂಡ ಭಾರತೀಯ ಯುವಜನರ ಭೇಟಿ

2.

1-7 ಫೆಬ್ರವರಿ 2018 ರಲ್ಲಿ ಭಾರತಕ್ಕೆ  50 ಸದಸ್ಯರೊಳಗೊಂಡ ಪ್ಯಾಲೆಸ್ಟೈನ್ ಯುವಜನರ ಭೇಟಿ

3.

5-12 ಅಕ್ಟೋಬರ್, 2018  ರಲ್ಲಿ ಭಾರತಕ್ಕೆ  15 ಸದಸ್ಯರೊಳಗೊಂಡ ಕಿರ್ಗಿಸ್ತಾ ನ್  ಯುವಜನರನಿಯೋಗದ ಭೇಟಿ   

4.

1- 6 ಅಕ್ಟೋಬರ್ 2018 ರಲ್ಲಿ ಟುನೀಶಿಯ ದೇಶಕ್ಕೆ 19 ಸದಸ್ಯರೊಳಗೊಂಡ ಭಾರತೀಯ ಯುವಜನರನಿಯೋಗದ ಭೇಟಿ

5.

3- 10 ಅಕ್ಟೋಬರ್ 2018 ರಲ್ಲಿ ಚೈನಾ ದೇಶಕ್ಕೆ 193 ಸದಸ್ಯರೊಳಗೊಂಡ ಭಾರತೀಯ ಯುವಜನರನಿಯೋಗದ ಭೇಟಿ

6.

8 - 15 ಸೆಪ್ಟೆಂಬರ್, 2018  ರಲ್ಲಿ ಭಾರತಕ್ಕೆ  10 ಸದಸ್ಯರೊಳಗೊಂಡ ವಿಯೆಟ್ನಾಂ  ಯುವಜನರನಿಯೋಗದ ಭೇಟಿ 

7.

24 ಮಾರ್ಚ್ ನಿಂದ 1ನೇ ಏಪ್ರಿಲ್, 2018 ರವರೆಗೆ ಭಾರತಕ್ಕೆ  100 ಸದಸ್ಯರೊಳಗೊಂಡ ಬಾಂಗ್ಲಾದೇಶದಯುವಜನರ ನಿಯೋಗದ ಭೇಟಿ 

8.

12- 18 ಆಗಸ್ಟ್ 2018 ರಲ್ಲಿ  ಅರ್ಜೆಂಟೈನಾ ದೇಶಕ್ಕೆ ವೈ 20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು 2ಸದಸ್ಯರೊಳಗೊಂಡ ಭಾರತೀಯ ಯುವಜನರ ನಿಯೋಗದ ಭೇಟಿ

9.

25 ಜುಲೈ ನಿಂದ 2ನೇ ಆಗಸ್ಟ್ 2018 ವರೆಗೆ ದಕ್ಷಿಣ ಕೊರಿಯಾ ದೇಶಕ್ಕೆ 26 ಸದಸ್ಯರೊಳಗೊಂಡಭಾರತೀಯ ಯುವಜನರ ನಿಯೋಗದ ಭೇಟಿ

10.

16 ರಿಂದ ಜುಲೈ 20, 2018 ರವರೆಗೆ  ಬ್ರಿಕ್ಸ್ ಯುವ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ದಕ್ಷಿಣ ಆಫ್ರಿಕಾಕ್ಕೆ 18 ಸದಸ್ಯರ ಭಾರತೀಯ ಯುವಜನರ ನಿಯೋಗದ ಭೇಟಿ.

11.

11 ರಿಂದ  13 ಏಪ್ರಿಲ್ 2018 ರವರೆಗೆ  2 ನೇ ಅಂತರರಾಷ್ಟ್ರೀಯ ಯುವ ಶಿಕ್ಷಣ ಮತ್ತು ಸಾಂಸ್ಕೃತಿಕ ಉತ್ಸವದಲ್ಲಿ ಪಾಲ್ಗೊಳ್ಳಲು ಕಾಂಬೋಡಿಯಾಗೆ 5 ಸದಸ್ಯರ ಭಾರತೀಯ ಯುವಜನರ ನಿಯೋಗದ ಭೇಟಿ. 

12.

ರಿಂದ 15 ಅಕ್ಟೋಬರ್ 2018 ರವರೆಗೆ ಭಾರತಕ್ಕೆ 27 ಸದಸ್ಯರ  ಶ್ರೀಲಂಕಾದ ಯುವಜನರ ನಿಯೋಗದ ಭೇಟಿ

 

C. ಯುವ ಮತ್ತು ನವತರುಣರ ಅಭಿವೃದ್ಧಿಯ ರಾಷ್ಟ್ರೀಯ ಕಾರ್ಯಕ್ರಮ (ಎನ್ ಪಿ ವೈಎ ಡಿ):

 

·        ಯುವ ಮತ್ತು ನವತರುಣರ ಅಭಿವೃದ್ಧಿಯ ರಾಷ್ಟ್ರೀಯ ಕಾರ್ಯಕ್ರಮವು (ಎನ್ ಪಿ ವೈಎ ಡಿ) ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಇತರ ಯೋಜನೆಗಳೊಂದಿಗೆ ನವತರುಣರ ಮತ್ತು ಯುವಕರ ಅಭಿವೃದ್ಧಿಗಾಗಿ ಚಟುವಟಿಕೆಗಳನ್ನು ಕೈಗೊಳ್ಳುವ ಸರ್ಕಾರಿ / ಸರ್ಕಾರೇತರ ಸಂಸ್ಥೆಗಳಿಗೆ ಬೆಂಬಲ ನೀಡುವ ರಾಷ್ಟ್ರೀಯ ಯುವ ಸಶಕ್ತಿಕರಣ ಕಾರ್ಯಕ್ರಮ (ಆರ್ ವೈ ಎಸ್ ಕೆ) ಎಂಬ ಒಂದು ಅಂಬ್ರೆಲಾ ಯೋಜನೆಯಾಗಿ ವಿಲೀನಗೊಂಡಿತು.  

 

·        2018-19ರ ಆರ್ಥಿಕ ವರ್ಷದಲ್ಲಿ, ಅಖಿಲ ಭಾರತ ಮಟ್ಟದ ಸಂಸ್ಥೆಗಳು ಸೇರಿದಂತೆ 5 ಸ್ವಯಂಸೇವಕ ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡಲಾಗಿದೆ. 

·        2019 ರ ಜನವರಿ 21 ರಂದು ಉತ್ತರ ಪ್ರದೇಶದ ವಾರಣಾಸಿಯಲ್ಲಿ ಯುವ ಪ್ರವಾಸಿ ಭಾರತೀಯ ದಿನಾಚರಣೆ ನಡೆಯಲಿದೆ.

 

·         6 ನೇ ನಾರ್ತ್ ಈಸ್ಟ್ ಯೂತ್ ಫೆಸ್ಟಿವಲ್ ಅನ್ನು ಅಗರ್ತಲಾತ್ರಿಪುರದಲ್ಲಿ 15 ರಿಂದ 18 ನೇ ನವೆಂಬರ್, 2018 ರವರೆಗೆ ಆಯೋಜಿಸಲಾಯಿತು.

·          ವರ್ಷ ತೇನ್ಜಿಂಗ್ ನೋರ್ಗೆ ರಾಷ್ಟ್ರೀಯ ಸಾಹಸ ಪ್ರಶಸ್ತಿ 2017 ಅನ್ನು  ಭೂಮಿನೀರುವಾಯುವಿನಲ್ಲಿನ ಸಾಹಸಕ್ಕಾಗಿ ಮತ್ತು ಜೀವಮಾನ ಸಾಧನೆಗಳ 10 (ಹತ್ತುಪ್ರಶಸ್ತಿ ವಿಜೇತರಿಗೆ ನೀಡಲಾಯಿತು.

 

2. ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್):

ಎನ್ಎಸ್ಎಸ್ 42958 ಎನ್ಎಸ್ಎಸ್ ಯುನಿಟ್ಗಳಲ್ಲಿ 451 ಯೂನಿವರ್ಸಿಟಿಗಳು / +2 ಕೌನ್ಸಿಲ್ಗಳು, 17996 ಕಾಲೇಜುಗಳು / ತಾಂತ್ರಿಕ ಸಂಸ್ಥೆಗಳು ಮತ್ತು 12,827 ಹಿರಿಯ ಸೆಕೆಂಡರಿ ಶಾಲೆಗಳ ಮೂಲಕ 4.13 ದಶಲಕ್ಷ ವಿದ್ಯಾರ್ಥಿ ಯುವಕರು ಎನ್.ಎಸ್.ಎಸ್. ಜೊತೆ ಸೇರಿದ್ದಾರೆ.  ಎನ್ ಎಸ್ ಎಸ್  ಯುವಜನರ ವ್ಯಕ್ತಿತ್ವ ಬೆಳವಣಿಗೆಗಾಗಿ ಸ್ವಯಂ ಸಮುದಾಯ ಸೇವೆಯ ಮೂಲಕ ಕೆಲಸ ಮಾಡುತ್ತಿದೆ . ಈ ವರ್ಷದಲ್ಲಿ ಎನ್ ಎಸ್ ಎಸ್ ನ   ಕೆಲವು ಪ್ರಮುಖ ಉಪಕ್ರಮಗಳು / ಸಾಧನೆಗಳು ಹೀಗಿವೆ:

·        ಎನ್ಎಸ್ಎಸ್ ಅನ್ನು ಕೇಂದ್ರೀಯ ವಲಯ ಯೋಜನೆಯೆಂದು 1.4.2016 ರಿಂದ ಜಾರಿಗೊಳಿಸಲಾಗಿದೆ. ಯೋಜನೆಯು ಈಗ ಕೇಂದ್ರ ವಲಯ ಯೋಜನೆಯಾಗಿದೆ.

·        ಎನ್ಎಸ್ಎಸ್ ಸ್ವಯಂಸೇವಕರು ದೇಶಾದ್ಯಂತ ಸ್ವಚ್ ಭಾರತ್ ಮಿಷನ್ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಎನ್ಎಸ್ಎಸ್ ಸ್ವಯಂ ಸೇವಕರು ಸ್ವಾಚ್ ಭಾರತ್ ಪಖ್ವಾಡಾದ ಸಂದರ್ಭದಲ್ಲಿ 2276 ಆಸ್ಪತ್ರೆಗಳು, 1713 ಔಷಧ ಮಳಿಗೆಗಳು, 1665 ಸಮುದಾಯ ಕೇಂದ್ರಗಳು, 534 ವೃದ್ಧಾಶ್ರಮಗಳು, 554 ಐತಿಹಾಸಿಕ ಸ್ಥಳಗಳು, 236 ಅನಾಥಾಶ್ರಮಗಳು, 263 ವಿಕಲಚೇತನರ ಕೇಂದ್ರಗಳು, 748 ರೈಲ್ವೇ ನಿಲ್ದಾಣಗಳು, 3660 ಬಸ್ ನಿಲ್ದಾಣಗಳು, 1339 ಪ್ರತಿಮೆಗಳು ಮತ್ತು 801 ಪುರಾತತ್ವ ಸ್ಥಳಗಳು ಮತ್ತು ಪ್ರವಾಸಿ ಸ್ಥಳಗಳನ್ನು ಸ್ವಚ್ಛಗೊಳಿಸಿದ್ದಾರೆ. ಎನ್ಎಸ್ಎಸ್ ಸ್ವಯಂಸೇವಕರಿಗಾಗಿ  ಚಲನಚಿತ್ರ ತಯಾರಿಕೆ ಮತ್ತು ಪ್ರಬಂಧ ಸ್ಪರ್ಧೆಯನ್ನು ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯವು ಯುವ ವ್ಯವಹಾರ ಮತ್ತು ಕ್ರೀಡೆಗಳ ಸಚಿವಾಲಯದ ಸಹಯೋಗದೊಂದಿಗೆ ಆಯೋಜಿಸಿತ್ತು

 

·        ಸುಮಾರು 27000 ಎನ್ಎಸ್ಎಸ್ ಸ್ವಯಂಸೇವಕರು ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯವು ಸಂಘಟಿಸಿದ 100 ಗಂಟೆಗಳ ಸ್ವಚ್ಛ ಭಾರತ್ ಬೇಸಿಗೆ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. 

 

·         ಅಂತರರಾಷ್ಟ್ರೀಯ ಯೋಗ ದಿವಸದ (21.06.2018) ಸಂದರ್ಭದಲ್ಲಿ 25.78 ಲಕ್ಷ ಎನ್ಎಸ್ಎಸ್ ಸ್ವಯಂಸೇವಕರು ದೇಶಾದ್ಯಂತ ವಿವಿಧ ಯೋಗ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.

 

·        ಎನ್ಎಸ್ಎಸ್ ಸ್ವಯಂಸೇವಕರು 18,79,675 ಸಸಿಗಳನ್ನು ನೆಟ್ಟರು.

 

·        ಎನ್ಎಸ್ಎಸ್ ಸ್ವಯಂಸೇವಕರು 1,91,581 ಯೂನಿಟ್ ರಕ್ತವನ್ನು ದಾನ ಮಾಡಿದರು.

 

·        9402 ಆರೋಗ್ಯ / ಕಣ್ಣಿನ / ರೋಗನಿರೋಧಕ ಶಿಬಿರಗಳನ್ನು ಸಂಘಟಿಸಲಾಯಿತು, ಇದರಲ್ಲಿ 464622 ಎನ್ ಎಸ್ ಎಸ್ ಸ್ವಯಂಸೇವಕರು ಭಾಗವಹಿಸಿದರು.

 

·        38,710 ಸಮುದಾಯಕ್ಕೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಜಾಗೃತಿ ಕಾರ್ಯಕ್ರಮಗಳು / ರ‍್ಯಾಲಿಗಳನ್ನು ಸಂಘಟಿಸಲಾಯಿತು, ಇದರಲ್ಲಿ 25.89 ಲಕ್ಷ ಎನ್ಎಸ್ಎಸ್ ಸ್ವಯಂಸೇವಕರು ಪಾಲ್ಗೊಂಡರು.

 

·        62.50 ಲಕ್ಷ ಗಂಟೆಗಳ ಶ್ರಮದಾನವನ್ನು ಎನ್ಎಸ್ಎಸ್ ಸ್ವಯಂಸೇವಕರು ಈ ವರ್ಷದಲ್ಲಿ ಕೈಗೊಂಡರು.

 

·         34,728 ಎನ್ಎಸ್ಎಸ್ ಸ್ವಯಂಸೇವಕರಿಗೆ ಆತ್ಮರಕ್ಷಣೆಯ ತರಬೇತಿ ನೀಡಲಾಯಿತು

 

·         ಜಿಎಸ್ ಟಿ ಮತ್ತು ಡಿಜಿಟಲ್ ಪಾವತಿಗಳ ಬಗ್ಗೆ ಅರಿವು  ಮೂಡಿಸುವ ಕೆಲಸವನ್ನು ದೇಶಾದ್ಯಂತ ಎನ್ಎಸ್ಎಸ್ ಘಟಕಗಳು ಆಯೋಜಿಸಲ್ಪಟ್ಟಿದ್ದವು.

 

3. ರಾಜೀವ್ ಗಾಂಧಿ ಯುವಜನ ಅಭಿವೃದ್ಧಿ ರಾಷ್ಟ್ರೀಯ ಸಂಸ್ಥೆ (ಆರ್ ಜಿ ಎನ್ ಐ ವೈ ಡಿ):

·        ಈ ಅವಧಿಯಲ್ಲಿ, 162 ವ್ಯಕ್ತಿತ್ವ ಬೆಳವಣಿಗೆ / ಕಾರ್ಯಾಗಾರ, ಸಮ್ಮೇಳನ ಮತ್ತು ಇತರ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು . ಇದರಲ್ಲಿ ಎನ್.ಎಸ್.ಎಸ್. ಅಧಿಕಾರಿಗಳು, ಎನ್ ವೈ ಕೆ ಎಸ್ ಅಧಿಕಾರಿಗಳು,  ಶಿಕ್ಷಕರು / ಅಧ್ಯಾಪಕರು, ರಾಜ್ಯ ಸರ್ಕಾರದ ಅಧಿಕಾರಿಗಳು , ಕೈಗಾರಿಕೆಗಳ ಇಲಾಖೆ ಮತ್ತು ಎನ್ ಜಿ ಓ ಗಳಿಂದ ಕಾರ್ಯನಿರ್ವಾಹಕರು ಸೇರಿದಂತೆ 6,663 ಜನರು ಪಾಲ್ಗೊಂಡಿದ್ದರು.

·        ಮೇಲಿನ ಕಾರ್ಯಕ್ರಮಗಳ ಪೈಕಿ, 35 ಟಿ ಓ ಟಿ ಕಾರ್ಯಕ್ರಮಗಳನ್ನು  ಆಯೋಜಿಸಲಾಯಿತು. ಇವುಗಳಲ್ಲಿ 1023 ಎನ್ ವೈ ಕೆ ಎಸ್ ಮತ್ತು  ಎನ್ಎಸ್ಎಸ್ ನ ಇತರ ಅಧಿಕಾರಿಗಳಿಗೆ ಪರಿಸರ ಶಿಕ್ಷಣ, ಉದ್ಯೋಗ ಕೌಶಲ್ಯಗಳು, ಯುವಜನರ ಆರೋಗ್ಯ, ಶಾಂತಿ ಸ್ಥಾಪನೆ, ಯುವ ಗ್ರಾಮೀಣ ಮಹಿಳೆಯರಿಗೆ ಐಸಿಟಿ ಆಧಾರಿತ ಉದ್ಯಮಶೀಲತೆ, ಶಿಕ್ಷಣ ನೀತಿಗಳು ಮತ್ತು ಕಾರ್ಯಕ್ರಮಗಳು, ಜೀವನ ಕೌಶಲ್ಯ ಇತ್ಯಾದಿಗಳ ಬಗ್ಗೆ ತರಬೇತಿ ನೀಡಲಾಯಿತು.

 

ಯುವ ಅಭಿವೃದ್ಧಿ ಸೂಚ್ಯಂಕ :

ರಾಷ್ಟ್ರೀಯ ಯುವ ಸಂಪನ್ಮೂಲ ಕೇಂದ್ರದ ದಾಖಲಾತಿ ಚಟುವಟಿಕೆಯ ಭಾಗವಾಗಿ ಇತ್ತೀಚೆಗೆ  ಆರ್ ಜಿ ಎನ್  ಐ ವೈ ಡಿ ಭಾರತ ಯುವ ಅಭಿವೃದ್ಧಿ ಸೂಚ್ಯಂಕ ಮತ್ತು ವರದಿ-2017 ಅನ್ನು ಹೊರತಂದಿದೆ.

ಸಂಸ್ಥೆಯ ಆದೇಶದ ಪ್ರಕಾರ, ಪ್ರಮುಖ ಪಾಲುದಾರರಿಗೆ ಯುವಜನರಿಗೆ ಸಂಬಂಧಿಸಿದ ಮಾಹಿತಿಯನ್ನು ನೀಡಲು  ಮತ್ತು ಅದರ ಇತ್ತೀಚಿನ ಸಭೆಯಲ್ಲಿ   ಆರ್ ಜಿ ಎನ್  ಐ ವೈ ಡಿ ನ ಎಕ್ಸಿಕ್ಯುಟಿವ್ ಕೌನ್ಸಿಲ್ ಸೂಚಿಸಿದಂತೆ ಭಾರತದ ಯುವಜನ ಅಭಿವೃದ್ಧಿ ಸೂಚ್ಯಂಕ – 2017 ವಿಷಯದ ಮೇಲೆ ಮೂರು ಪ್ರಾದೇಶಿಕ ಪ್ರಸರಣ ಕಾರ್ಯಾಗಾರಗಳನ್ನು ಯುವಜನ ಅಭಿವೃದ್ಧಿ ಕ್ಷೇತ್ರದ ಪ್ರಮುಖ ಪಾಲುದಾರರಿಗಾಗಿ ಈ ಕೆಳಗೆ ಕೊಟ್ಟ ವಿವರಗಳಂತೆ ಹಮ್ಮಿಕೊಳ್ಳಲಾಯಿತು:   

 

1.      ಭಾರತದ ಯುವಜನ ಅಭಿವೃದ್ಧಿ ಸೂಚ್ಯಂಕದ ಈಶಾನ್ಯ ಪ್ರದೇಶದ ಪ್ರಸರಣ ಕಾರ್ಯಾಗಾರ – 2017, ಇದು ಆಗಸ್ಟ್ 20 ರಂದು ಅಸ್ಸಾಂ ಆಡಳಿತಾತ್ಮಕ ಸಿಬ್ಬಂದಿ ಕಾಲೇಜಿನ ಗುವಾಹಾಟಿಯಲ್ಲಿ ನಡೆಯಿತು.

2.       ಭಾರತದ ಯುವಜನ ಅಭಿವೃದ್ಧಿ ಸೂಚ್ಯಂಕದಲ್ಲಿ ಉತ್ತರ ಪ್ರಾದೇಶಿಕ ಪ್ರಸರಣ ಕಾರ್ಯಾಗಾರ – 2017, ಇದು 17 ಸೆಪ್ಟೆಂಬರ್ 2018 ರಂದು ರಾಷ್ಟ್ರೀಯ ಸಾರ್ವಜನಿಕ ಹಣಕಾಸು ಮತ್ತು ನೀತಿ ಸಂಸ್ಥೆನವದೆಹಲಿಯಲ್ಲಿ ನಡೆಯಿತು.

3.      ಭಾರತ ಯುವಜನತೆಯ ಸೂಚ್ಯಂಕದ ಮೇಲೆ ಪ್ರಸರಣ ಕಾರ್ಯಾಗಾರ – 2017, ಇದು ಅಕ್ಟೋಬರ್ 26 ರಂದು ದಕ್ಷಿಣಪೂರ್ವ ಮತ್ತು ಪಶ್ಚಿಮ ರಾಜ್ಯಗಳಿಗೆ ತಮಿಳುನಾಡಿನ ಶ್ರೀಪೆರುಂಬದೂರು ಆರ್ ಜಿ ಎನ್ ಐ ವೈ ಡಿ  ಯಲ್ಲಿ ನಡೆಯಿತು.

 

·        ಜೆ ಕೆ -11 ಸೋನವಾರಿ ಕ್ಷೇತ್ರ, ಜಮ್ಮು ಮತ್ತು ಕಾಶ್ಮೀರಕ್ಕೆ ಕ್ಷೇತ್ರದ ನಿರ್ವಹಣೆ ವ್ಯವಸ್ಥೆ.

·         ಹೊಸದಾಗಿ ಸೇರ್ಪಡೆಗೊಂಡ ಎನ್ಎಸ್ಎಸ್ ಪ್ರೋಗ್ರಾಂ ಅಧಿಕಾರಿಗಳಿಗೆ ಓರಿಯಂಟೇಶನ್ ತರಬೇತಿ ಕಾರ್ಯಕ್ರಮ

 

 ಅಂತರರಾಷ್ಟ್ರೀಯ ಕಾರ್ಯಕ್ರಮಗಳು

 

·        ಮಾಲ್ಡೀವ್ ಯುವಜನರ ನಿಯೋಗದ ಭೇಟಿ

·        ‘ಆರ್.ಡಿ.ಎ’ ನ  ಪಿ ಜಿ ಡಿ ಆರ್ ಡಿ ನ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳಿಗಾಗಿ, ಐ ಆರ್‍ ಡಿ ಎ ಪಿ - ಆರ್ ಜಿ ಎನ್ ಐ ವೈ ಡಿ  ಸಹಕಾರದ ಜ್ಞಾನದ ಭೇಟಿ.

·        ಬಾಂಗ್ಲಾದೇಶದ ಡೈರೆಕ್ಟರ್ ಜನರಲ್, ಸಿ ಐ ಆರ್ ಡಿ ಎ ಪಿ  ರವರ ಭೇಟಿ

·         ವಾಣಿಜ್ಯೋದ್ಯಮ ಮತ್ತು ಗ್ರಾಮೀಣಾಭಿವೃದ್ಧಿ: 19 ರಾಷ್ಟ್ರಗಳ ಪ್ರತಿನಿಧಿಗಳಿಗೆ ಒಂದು ಪ್ರಾತ್ಯಕ್ಷಿಕ ಭೇಟಿ

·        ಆರ್ ಜಿ ಎನ್ ಐ ವೈ ಡಿ ಗೆ ಶ್ರೀಲಂಕಾದ ಯುವಜನ ವಿನಿಮಯದ ನಿಯೋಗದ ಭೇಟಿ.

·        ಭಾರತ ಮತ್ತು ಶ‍್ರೀಲಂಕಾದ ನಡುವೆ ಅಂತರಾಷ್ಟ್ರೀಯ ಯುವಜನ ವಿನಿಮಯ ಕಾರ್ಯಕ್ರಮ

·        ಲಿಂಗ ಮತ್ತು ಅಭಿವೃದ್ಧಿ ಕುರಿತು ರಾಷ್ಟ್ರೀಯ ಸಮ್ಮೇಳನ 

·        ಭಾರತದಲ್ಲಿ ಶ್ರೀಲಂಕಾ ವಿದ್ಯಾರ್ಥಿ ನಿಯೋಗದಿಂದ ಪ್ರಾತ್ಯಕ್ಷಿಕ ಭೇಟಿ  ಮತ್ತು ಅನುಗೊಳಿಸುವಿಕೆ ಕಾರ್ಯಕ್ರಮ

 

 

ಇತರ ಸಾಧನೆಗಳು :

·        ಆರ್ ಜಿ ಎನ್ ಐ ವೈ ಡಿ  ಯು 18 ಪ್ರಮುಖ ಸಂಶೋಧನಾ ಯೋಜನೆಗಳು ಮತ್ತು 8 ಸಣ್ಣ ಸಂಶೋಧನಾ ಯೋಜನೆಗಳಿಗಾಗಿ ವಿವಿಧ ವಿಶ್ವವಿದ್ಯಾನಿಲಯಗಳಿಗೆ / ಸಂಸ್ಥೆಗಳಿಗೆ ಹಣಕಾಸು ನೆರವು ನೀಡಿದೆ.

·         ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ, 182 ವಿದ್ಯಾರ್ಥಿಗಳು 2017-18 ಮತ್ತು 2018-19ರ   ಶೈಕ್ಷಣಿಕ ವರ್ಷದಲ್ಲಿ ಸೇರಿಕೊಂಡರು, ಇವರುಗಳಲ್ಲಿ ಬಹುತೇಕ ಎಲ್ಲಾ ರಾಜ್ಯದವರು ಇದ್ದರು.

·        ಬಿ.ವೋಕ್ ಕಾರ್ಯಕ್ರಮವು ಸಿದ್ಧ  ಉಡುಪುಗಳ ತಯಾರಿಕೆ ಮತ್ತು ವಾಣಿಜ್ಯೋದ್ಯಮ ಮತ್ತು ಫ್ಯಾಷನ್ ಡಿಸೈನಿಂಗ್ ಮತ್ತು ಚಿಲ್ಲರೆ ವ್ಯಾಪಾರ ಪ್ರಾರಂಭವಾಯಿತು. ಇದು ಭಾರತ ಸರ್ಕಾರದ ಜವಳಿ ಸಚಿವಾಲಯದ ಸಿದ್ಧ ಉಡುಪಿನ ತರಬೇತಿ ಮತ್ತು ವಿನ್ಯಾಸ ಕೇಂದ್ರದ (ಎ.ಟಿ.ಡಿ.ಸಿ) ಸಹಯೋಗದೊಂದಿಗೆ ಪ್ರಾರಂಭವಾಯಿತು, ಈ ತರಬೇತಿ ಕಾರ್ಯಕ್ರಮವು 19 ಎಟಿಡಿಸಿ ಕೇಂದ್ರಗಳಲ್ಲಿ  ನಡೆಯುತ್ತಿದ್ದು ಒಟ್ಟು 663 ವಿದ್ಯಾರ್ಥಿಗಳು ದಾಖಲಾಗಿದ್ದಾರೆ.



(Release ID: 1556961) Visitor Counter : 139


Read this release in: English , Hindi , Marathi , Tamil