ಸಂಪುಟ
ಕೃಷಿ ರಫ್ತು ನೀತಿ 2018ಕ್ಕೆ ಸಂಪುಟದ ಅನುಮೋದನೆ
Posted On:
06 DEC 2018 9:34PM by PIB Bengaluru
ಕೃಷಿ ರಫ್ತು ನೀತಿ 2018ಕ್ಕೆ ಸಂಪುಟದ ಅನುಮೋದನೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಕೃಷಿ ರಫ್ತು ನೀತಿ 2018ಕ್ಕೆ ತನ್ನ ಅನುಮೋದನೆ ನೀಡಿದೆ. ಕೃಷಿ ರಫ್ತು ನೀತಿ ಅನುಷ್ಠಾನದ ಮೇಲ್ವಿಚಾರಣೆ ನಡೆಸಲು ಕೇಂದ್ರದಲ್ಲಿ ವಾಣಿಜ್ಯ ಇಲಾಖೆಯನ್ನು ನೋಡಲ್ ಇಲಾಖೆಯಾಗಿಟ್ಟುಕೊಂಡು ವಿವಿಧ ಸಚಿವಾಲಯಗಳು / ಇಲಾಖೆಗಳು ಮತ್ತು ಸಂಸ್ಥೆಗಳನ್ನು ಮತ್ತು ಸಂಬಂಧಪಟ್ಟ ರಾಜ್ಯ ಸರ್ಕಾರಗಳ ಪ್ರತಿನಿಧಿಗಳನ್ನೊಳಗೊಂಡ ಉಸ್ತುವಾರಿ ಚೌಕಟ್ಟನ್ನು ಸ್ಥಾಪಿಸುವ ಪ್ರಸ್ತಾಪಕ್ಕೆ ಸಂಪುಟ ಅನುಮೋದನೆ ನೀಡಿದೆ.
ರೈತರ ಆದಾಯವನ್ನು 2022ರ ಹೊತ್ತಿಗೆ ದುಪ್ಪಟ್ಟು ಮಾಡುವ ನೀತಿಯ ನಿಟ್ಟಿನಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ. ಕೃಷಿ ಉತ್ಪನ್ನಗಳ ರಫ್ತು ಈ ಗುರಿ ಸಾಧನೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಕೃಷಿ ರಫ್ತಿಗೆ ಚೈತನ್ಯ ನೀಡುವ ನಿಟ್ಟಿನಲ್ಲಿ, ಸರ್ಕಾರ ಸಮಗ್ರ ‘ಕೃಷಿ ರಫ್ತು ನೀತಿ’ ರೂಪಿಸಿದ್ದು, ಕೃಷಿ ರಫ್ತನ್ನು ದ್ವಿಗುಣಗೊಳಿಸುವ ಮತ್ತು ಜಾಗತಿಕ ಮೌಲ್ಯ ಸರಪಳಿಗಳೊಂದಿಗೆ ಭಾರತೀಯ ರೈತರು ಮತ್ತು ಕೃಷಿ ಉತ್ಪನ್ನಗಳನ್ನು ಸಂಯೋಜಿಸುವ ಗುರಿಯನ್ನು ಹೊಂದಿದೆ. ಕೃಷಿ ರಫ್ತು ನೀತಿ ಈ ಕೆಳಗಿನ ಮುನ್ನೋಟವನ್ನು ಒಳಗೊಂಡಿದೆ:
“ಕೃಷಿಯಲ್ಲಿ ಭಾರತವನ್ನು ಜಾಗತಿಕ ಶಕ್ತಿಯಾಗಿ ಮಾಡಲು ಮತ್ತು ರೈತರ ಆದಾಯ ಹೆಚ್ಚಿಸಲು ಸೂಕ್ತ ನೀತಿ ನಿರೂಪಣೆಯ ಮೂಲಕ ಭಾರತೀಯ ಕೃಷಿ ರಫ್ತು ಸಾಮರ್ಥ್ಯವನ್ನು ಬಳಸಿಕೊಳ್ಳುವುದು.”.
ಉದ್ದೇಶಗಳು:
ಕೃಷಿ ರಫ್ತು ನೀತಿಯ ಉದ್ದೇಶಗಳು ಈ ಕೆಳಕಂಡಂತಿವೆ:
- ಸೂಕ್ತ ವಾಣಿಜ್ಯ ನೀತಿ ಆಡಳತದೊಂದಿಗೆ ಪ್ರಸಕ್ತ ಇರುವ 30+ಶತಕೋಟಿ ಅಮೆರಿಕನ್ ಡಾಲರ್ ಕೃಷಿ ರಫ್ತನ್ನು 2022ರ ಹೊತ್ತಿಗೆ 60 ಶತಕೋಟಿ ಅಮೆರಿಕನ್ ಡಾಲರ್ ಗೆ ಹೆಚ್ಚಿಸುವುದು ಮತ್ತು ನಂತರದ ಕೆಲವು ವರ್ಷಗಳಲ್ಲಿ ಅದನ್ನು 100 ಶತಕೋಟಿ ಅಮೆರಿನ್ ಡಾಲರ್ ತಲುಪಿಸುವುದು.
- ನಮ್ಮ ರಫ್ತು ಬುಟ್ಟಿ, ಗಮ್ಯಸ್ಥಳಗಳನ್ನು ವೈವಿಧ್ಯಗೊಳಿಸಲು ಮತ್ತು ನಾಶವಾಗುವ ವಸ್ತುಗಳ ಮೇಲೆ ಗಮನವಿಟ್ಟು ಹೆಚ್ಚಿನ ಮೌಲ್ಯ ಮತ್ತು ಮೌಲ್ಯವರ್ಧಿತ ಕೃಷಿ ರಫ್ತು ಉತ್ತೇಜಿಸಲು.
- ಅಪೂರ್ವ, ಸ್ಥಳೀಯ, ಸಾವಯವ, ಜನಾಂಗೀಯ, ಸಾಂಪ್ರದಾಯಿಕ ಮತ್ತು ಸಾಂಪ್ರದಾಯಿಕವಲ್ಲದ ಕೃಷಿ ಉತ್ಪನ್ನಗಳ ರಫ್ತುಗಳನ್ನು ಉತ್ತೇಜಿಸಲು.
- ಮಾರುಕಟ್ಟೆಯ ಪ್ರವೇಶ ಮುಂದುವರಿಸಲು, ಅಡೆತಡೆಗಳನ್ನು ನಿವಾರಿಸಲು ಮತ್ತು ನೈರ್ಮಲ್ಯ ಮತ್ತು ಫೈಟೋ-ನೈರ್ಮಲ್ಯ ಸಮಸ್ಯೆಗಳನ್ನು ಎದುರಿಸಲು ಸಾಂಸ್ಥಿಕ ವ್ಯವಸ್ಥೆಯನ್ನು ರೂಪಿಸಲು.
- ಶೀಘ್ರವೇ ಜಾಗತಿಕ ಮೌಲ್ಯ ಸರಪಳಿಯಲ್ಲಿ ಸಂಯೋಜಿಸುವ ಮೂಲಕ ವಿಶ್ವದ ಕೃಷಿ ರಫ್ತಿನಲ್ಲಿ ಭಾರತದ ಪಾಲನ್ನು ದುಪ್ಪಟ್ಟು ಮಾಡಲು.
- ಕಡಲಾಚೆಯ ಮಾರುಕಟ್ಟೆಯಲ್ಲಿ ರಫ್ತು ಅವಕಾಶದ ಪ್ರಯೋಜನವನ್ನು ರೈತರಿಗೆ ಒದಗಿಸಲು
ಕೃಷಿ ರಫ್ತು ನೀತಿಯ ಅಂಶಗಳು:
ಕೃಷಿ ರಫ್ತು ನೀತಿಯಲ್ಲಿನ ಶಿಫಾರಸುಗಳನ್ನು ಈ ಕೆಳಗೆ ವಿವರಿಸಿರುವಂತೆ- ವ್ಯೂಹಾತ್ಮಕ ಮತ್ತು ಕಾರ್ಯನಿರ್ವಹಣಾತ್ಮಕ ಎಂದು ಎರಡು ಪ್ರವರ್ಗಗಳಲ್ಲಿ ಸಂಯೋಜಿಸಲಾಗಿದೆ:
ವ್ಯೂಹಾತ್ಮಕ
|
ನೀತಿಯ ಕ್ರಮಗಳು
|
ಮೂಲಸೌಕರ್ಯ ಮತ್ತು ಸಾಗಣೆ ಬೆಂಬಲ
|
ರಫ್ತು ಉತ್ತೇಜನಕ್ಕೆ ಸಮಗ್ರ ದೃಷ್ಟಿಕೋನ
|
ಕೃಷಿ ರಫ್ತಿನಲ್ಲಿ ರಾಜ್ಯ ಸರ್ಕಾರಗಳ ಹೆಚ್ಚಿನ ಪಾಲ್ಗೊಳ್ಳುವಿಕೆ
|
|
ಘಟಕಗಳ ಮೇಲೆ ಗಮನ
|
|
ಮೌಲ್ಯ ವರ್ಧಿತ ರಫ್ತು ಉತ್ತೇಜನ
|
|
ಬ್ರಾಂಡ್ ಇಂಡಿಯಾ ಉತ್ತೇಜನ ಮತ್ತು ಮಾರುಕಟ್ಟೆ
|
ಕಾರ್ಯ ನಿರ್ವಹಣಾತ್ಮಕ
|
ಉತ್ಪಾದನೆ ಮತ್ತು ಸಂಸ್ಕರಣೆಯಲ್ಲಿ ಖಾಸಗಿ ಹೂಡಿಕೆಯ ಆಕರ್ಷಣೆ
|
|
ಬಲಿಷ್ಟ ಗುಣಮಟ್ಟದ ಕಟ್ಟುಪಾಡು ರಚಿಸುವುದು
|
|
ಸಂಶೋಧನೆ ಮತ್ತು ಅಭಿವೃದ್ಧಿ
|
|
ಇತರೆ
|
*****
(Release ID: 1555346)
Visitor Counter : 109