ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
ಬಳಕೆದಾರರ ರಕ್ಷಣೆ ಮತ್ತು ಕಾನೂನು ಮಾಪನಕ್ಕೆ ಸಂಬಂಧಿಸಿ ಮಾರಿಷಸ್ ಜೊತೆಗಿನ ತಿಳುವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ.
ಪ್ರಕಟಣಾ ದಿನಾಂಕ:
22 NOV 2018 1:33PM by PIB Bengaluru
ಬಳಕೆದಾರರ ರಕ್ಷಣೆ ಮತ್ತು ಕಾನೂನು ಮಾಪನಕ್ಕೆ ಸಂಬಂಧಿಸಿ ಮಾರಿಷಸ್ ಜೊತೆಗಿನ ತಿಳುವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ.
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಭಾರತ ಮತ್ತು ಮಾರಿಷಸ್ ನಡುವಿನ ಬಳಕೆದಾರರ ರಕ್ಷಣೆ ಮತ್ತು ಕಾನೂನು ಮಾಪನಕ್ಕೆ ಸಂಬಂಧಿಸಿದ ತಿಳುವಳಿಕಾ ತಿಳುವಳಿಕೆ ಒಪ್ಪಂದಕ್ಕೆ ಅನುಮೋದನೆ ನೀಡಿತು.
ಲಾಭಗಳು:
ಈ ತಿಳುವಳಿಕೆ ಒಪ್ಪಂದವು ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧಕ್ಕೆ ಪ್ರಯೋಜನಕಾರಿಯಾಗಿದೆ. ಗ್ರಾಹಕ / ಬಳಕೆದಾರರ ರಕ್ಷಣೆಯ ಕ್ಷೇತ್ರದಲ್ಲಿ ಸಹಕಾರ ವಿಸ್ತರಣೆಗೆ ಇದು ಸಹಕಾರಿಯಾಗಲಿದೆ ಮತ್ತು ಉಭಯ ದೇಶಗಳಲ್ಲಿ ಆಗುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪರಸ್ಪರ ಪ್ರಯೋಜನಗಳನ್ನು ಪಡೆಯುವ ನಿಟ್ತಿನಲ್ಲಿ ಕಾರ್ಯೋನ್ಮುಖವಾಗಲು , ಮಾಹಿತಿ ವಿನಿಮಯಕ್ಕೆ ಅನುಕೂಲವಾಗುವಂತಹ ವ್ಯವಸ್ಥೆಯನ್ನು ರೂಪಿಸಲು ಇದು ನೆರವಾಗಲಿದೆ. ಇದು ಒಳಗೊಳ್ಳುವ, ಸಹ್ಯ ಮತ್ತು ಗ್ರಾಹಕ ರಕ್ಷಣೆ ಹಾಗು ಕಾನೂನು ಮಾಪನ ಕ್ಷೇತ್ರಗಳಲ್ಲಿ ಪುಟಿದೇಳುವ ಬೆಳವಣಿಗೆಗಳನ್ನು ಉತ್ತೇಜಿಸಲಿದೆ, ದಾರಿ ತಪ್ಪಿಸುವಂತಹ ಜಾಹೀರಾತು, ಟೆಲಿಮಾರ್ಕೆಟಿಂಗ್, ಬಹು ಸ್ತರೀಯ ಮಾರ್ಕೆಟಿಂಗ್, ಇ-ವಾಣಿಜ್ಯ ಇತ್ಯಾದಿ ಕ್ಷೇತ್ರಗಳ ಹೊಸ ಸವಾಲುಗಳನ್ನು ನಿಭಾಯಿಸಲು ಸಹಾಯ ಮಾಡಲಿದೆ. ಅದು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಗುಣಮಾನಕಗಳನ್ನು ಅನ್ವೇಷಿಸಿ ಆ ಮೂಲಕ ಹೊಸ ಸವಾಲುಗಳನ್ನು ನಿಭಾಯಿಸಲು ಹೊಸ ತಜ್ಞತಾ ಕ್ಷೇತ್ರಗಳನ್ನು ಅಭಿವೃದ್ದಿಪಡಿಸಲಿದೆ. ಜೊತೆಗೆ ಕಾಲ ಕಾಲಕ್ಕೆ ಮಾಹಿತಿ ವಿನಿಮಯದ ಮೂಲಕ ಮತ್ತು ತರಬೇತಿ ಕಾರ್ಯಕ್ರಮದ ಮೂಲಕ ಉತ್ತಮ ಆಡಳಿತಕ್ಕೆ ಅನುಕೂಲಕರವಾದ ತಜ್ಞತೆಯನ್ನು ಹೊಂದುವಿಕೆಯನ್ನು ಖಾತ್ರಿಪಡಿಸಲಿದೆ ಮತ್ತು ಗ್ರಾಹಕ ವಂಚನೆ ತಡೆಗೂ ಇದರಿಂದ ನೆರವು ದೊರೆಯಲಿದೆ.
*******
(ಪ್ರಕಟಣೆ ಐ.ಡಿ.: 1553546)
ವಿಸಿಟರ್ ಕೌಂಟರ್ : 159