ಸಂಪುಟ

ವಿಜ್ಞಾನ ಮತ್ತು ತಂತ್ರಜ್ಞಾನ ಉತ್ತೇಜನಕ್ಕೆ ಭಾರತದ ಅಟಲ್ ಅನ್ವೇಷಣಾ ಮಿಶನ್ ಮತ್ತು ರಶ್ಯಾದ ಫಂಡ್ ಟ್ಯಾಲೆಂಟ್ ಆಂಡ್ ಸಕ್ಸಸ್ ನಡುವಣ ತಿಳುವಳಿಕೆ ಒಪ್ಪಂದವನ್ನು ಪರಾಮರ್ಶೆ ಮಾಡಿದ ಕೇಂದ್ರ ಸಂಪುಟ.

Posted On: 22 NOV 2018 1:32PM by PIB Bengaluru

ವಿಜ್ಞಾನ ಮತ್ತು ತಂತ್ರಜ್ಞಾನ ಉತ್ತೇಜನಕ್ಕೆ ಭಾರತದ ಅಟಲ್ ಅನ್ವೇಷಣಾ ಮಿಶನ್ ಮತ್ತು ರಶ್ಯಾದ ಫಂಡ್ ಟ್ಯಾಲೆಂಟ್ ಆಂಡ್ ಸಕ್ಸಸ್ ನಡುವಣ ತಿಳುವಳಿಕೆ ಒಪ್ಪಂದವನ್ನು ಪರಾಮರ್ಶೆ ಮಾಡಿದ ಕೇಂದ್ರ ಸಂಪುಟ.


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ವಿಜ್ಞಾನ ಮತ್ತು ತಂತ್ರಜ್ಞಾನ ಉತ್ತೇಜನಕ್ಕೆ ಭಾರತದ ಅಟಲ್ ಅನ್ವೇಷಣಾ ಮಿಶನ್ ಮತ್ತು ರಶ್ಯಾದ ಫಂಡ್ ಟ್ಯಾಲೆಂಟ್ ಆಂಡ್ ಸಕ್ಸಸ್ ನಡುವಣ ತಿಳುವಳಿಕಾ ಒಡಂಬಡಿಕೆಯನ್ನು ಪರಾಮರ್ಶೆ ಮಾಡಿತು. ಉಭಯ ದೇಶಗಳ ನಡುವೆ ವಿದ್ಯಾರ್ಥಿಗಳು, ಶಿಕ್ಷಕರು, ಸಂಶೋಧಕರು ಮತ್ತು ವಿಜ್ಞಾನಿಗಳ ವಿನಿಮಯ ಮೂಲಕ ಸಹಯೋಗದ ಕಾರ್ಯಕ್ಕೆ ಇದು ಬಲಿಷ್ಟ ತಳಪಾಯ ಹಾಕಲಿದೆ. 2018 ರ ಅಕ್ಟೋಬರ್ 5ರಂದು ಈ ತಿಳುವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲಾಗಿತ್ತು.


ಪ್ರಯೋಜನಗಳು:

ಈ ತಿಳುವಳಿಕೆ ಒಪ್ಪಂದ ವಿಜ್ಞಾನ ತಂತ್ರಜ್ಞಾನದ ಪ್ರವರ್ಧನೆಗೆ ಅನುಕೂಲ ಒದಗಿಸಲಿದೆ, ಭಾರತ ಮತ್ತು ರಶ್ಯಾ ನಡುವೆ ವಿದ್ಯಾರ್ಥಿಗಳು, ಶಿಕ್ಷಕರು, ಸಂಶೋಧಕರು ಮತ್ತು ವಿಜ್ಞಾನಿಗಳ ವಿನಿಮಯ ಮೂಲಕ ಸಹಯೋಗದ ಕಾರ್ಯಕ್ಕೆ ಇದು ಬಲಿಷ್ಟ ತಳಪಾಯ ಹಾಕಲಿದೆ.


ಪ್ರಮುಖ ಪರಿಣಾಮ :

ಈ ತಿಳುವಳಿಕಾ ಒಡಂಬಡಿಕೆಯು ಉಭಯ ದೇಶಗಳ ಶಾಲೆಗಳು, ವಿಶ್ವವಿದ್ಯಾಲಯಗಳು, ಸಾಂಸ್ಕೃತಿಕ ಸಂಸ್ಥೆಗಳು, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗು ವಿಶೇಷ ಶಿಕ್ಷಣ ಸಂಸ್ಥೆಗಳು, ಅತ್ಯಾಧುನಿಕ ತಂತ್ರಜ್ಞಾನದ ಕಂಪೆನಿಗಳು, ನವೋದ್ಯಮಗಳು ಮತ್ತು ಅನ್ವೇಷಣಾ-ಸಂಶೋಧನಾ ಕೇಂದ್ರಗಳ ನಡುವೆ ಸಂಬಂಧ-ಸಂಪರ್ಕ ಸ್ಥಾಪಿಸುವ ನಿಟ್ಟಿನಲ್ಲಿ ಒಂದು ವ್ಯವಸ್ಥೆಯನ್ನು ಒದಗಿಸಲಿದೆ. ಈ ಕಾರ್ಯಚಟುವಟಿಕೆಗಳು ಉಭಯ ದೇಶಗಳಲ್ಲಿ ಹೊಸ ವೈಜ್ಞಾನಿಕ ಜ್ಞಾನ ಸೃಷ್ಟಿ , ಬೌದ್ಧಿಕ ಆಸ್ತಿಗಳ ಸೃಷ್ಟಿ, ನವೀನ ಅನ್ವೇಷಣೆಗಳು ಮತ್ತು ಉತ್ಪನ್ನಗಳ ಅಭಿವೃದ್ದಿಗೆ ಉತ್ತೇಜನ ನೀಡುವುದೆಂದು ನಿರೀಕ್ಷಿಸಲಾಗಿದೆ. 


ಹಿನ್ನೆಲೆ:

2015ರ ಡಿಸೆಂಬರ್ 23-24 ರಂದು ಪ್ರಧಾನ ಮಂತ್ರಿಯವರು ರಶ್ಯಾಕ್ಕೆ ಭೇಟಿ ನೀಡಿದಾಗ ಸೋಚಿಯ ಸಿರಿಯಸ್ ಶಿಕ್ಷಣ ಕೇಂದ್ರಕ್ಕೆ ಭೇಟಿ ನೀಡಿದ್ದರು, ಅಲ್ಲಿ ಭಾರತೀಯ ವಿದ್ಯಾರ್ಥಿಗಳ ಜೊತೆ ಕೆಲಸ ಮಾಡಲು ರಶ್ಯಾದ ವಿದ್ಯಾರ್ಥಿಗಳನ್ನು ಆಹ್ವಾನಿಸುವ ಬಗ್ಗೆ ಪ್ರಸ್ತಾವಿಸಲಾಗಿತ್ತು. 2018 ರ ಅಕ್ಟೋಬರ್ ಮೊದಲ ವಾರದಲ್ಲಿ ರಶ್ಯಾ ಒಕ್ಕೂಟದ ಅಧ್ಯಕ್ಷ  ವ್ಲಾದಮೀರ್ ಪುಟಿನ್ ಅವರ ಇತ್ತೀಚಿನ ಭೇಟಿಯ ಹಿನ್ನೆಲೆಯಲ್ಲಿ 10 ಮಂದಿ ರಶ್ಯನ್ ವಿದ್ಯಾರ್ಥಿಗಳು ಐದು ಅಟಲ್ ಟಿಂಕರಿಂಗ್ ಲ್ಯಾಬ್ ಶಾಲೆಗಳ 10 ಭಾರತೀಯ ವಿದ್ಯಾರ್ಥಿಗಳ ಜೊತೆ ದಿಲ್ಲಿಯ ಐ.ಐ.ಟಿ. ಅನ್ವೇಷಣಾ ಬೂಟ್ ಕ್ಯಾಂಪಿನಲ್ಲಿ ಕೆಲಸ ಮಾಡುವುದಕ್ಕಾಗಿ 2018 ರ ಅಕ್ಟೋಬರ್ 1 ರಿಂದ 4 ರವರೆಗೆ ಭಾರತಕ್ಕೆ ಭೇಟಿ ನೀಡಿದ್ದರು. ಆರೋಗ್ಯ, ಬಾಹ್ಯಾಕಾಶ ತಂತ್ರಜ್ಞಾನ , ಸ್ವಚ್ಚ ತಂತ್ರಜ್ಞಾನ, ಕೃಷಿ ತಂತ್ರಜ್ಞಾನ ಮತ್ತು ಸ್ಮಾರ್ಟ್ ಚಲನೆ –ಹೀಗೆ ಐದು ವಲಯಗಳಲ್ಲಿ ಹೊಸ ಮಾದರಿಗಳ ಅಭಿವೃದ್ದಿ ಅನ್ವೇಷಣೆಯಲ್ಲಿ ನವೀನ ಪರಿಕಲ್ಪನೆಗಳ ನಿಟ್ಟಿನಲ್ಲಿ ಕೆಲಸ ಮಾಡಿದ್ದರು. ಯುವ ವಿದ್ಯಾರ್ಥಿ ಅನ್ವೇಷಕರು ಅಭಿವೃದ್ದಿಪಡಿಸಿದ ಮಾದರಿಗಳನ್ನು 2018 ರ ಅಕ್ತೋಬರ್ 5 ರಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ರಶ್ಯಾ ಒಕ್ಕೂಟದ ಅಧ್ಯಕ್ಷ ಶ್ರೀ ವ್ಲಾದಮೀರ್ ಪುಟಿನ್ ಅವರೆದುರು ಪ್ರದರ್ಶಿಸಲಾಗಿತ್ತು

ಈ ತಿಳುವಳಿಕೆ ಒಪ್ಪಂದದ ಮೂಲಕ ಭಾರತದ ಅಟಲ್ ಅನ್ವೇಷಣಾ ಮಿಶನ್ (ಎ.ಐ.ಎಂ.) ಮತ್ತು ರಶ್ಯಾದ ಫಂಡ್ ಟ್ಯಾಲೆಂಟ್ ಆಂಡ್ ಸಕ್ಸಸ್ ನಡುವೆ ಸಹಯೋಗದ ಕಾರ್ಯವನ್ನು ಮುಂದುವರೆಸಲು ಉದ್ದೇಶಿಸಲಾಗಿದೆ.



(Release ID: 1553539) Visitor Counter : 101