ಗೃಹ ವ್ಯವಹಾರಗಳ ಸಚಿವಾಲಯ

ಕೇಂದ್ರಾಡಳಿತ ಪ್ರದೇಶ  ದಾದ್ರಾ ಮತ್ತು ನಗರ ಹವೇಲಿಯ ಸಿಲ್ವಾಸದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸಂಪುಟದ ಅನುಮೋದನೆ.

Posted On: 22 NOV 2018 1:30PM by PIB Bengaluru

ಕೇಂದ್ರಾಡಳಿತ ಪ್ರದೇಶ  ದಾದ್ರಾ ಮತ್ತು ನಗರ ಹವೇಲಿಯ ಸಿಲ್ವಾಸದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸಂಪುಟದ ಅನುಮೋದನೆ.


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಕೇಂದ್ರಾಡಳಿತ ಪ್ರದೇಶ  ದಾದ್ರಾ ಮತ್ತು ನಗರ ಹವೇಲಿಯ ಸಿಲ್ವಾಸದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಅನುಮೋದನೆ ನೀಡಿತು.


ಮುಖ್ಯಾಂಶಗಳು:

(i)           ದಾದ್ರಾ ಮತ್ತು ನಗರ ಹವೇಲಿ ಕೇಂದ್ರಾಡಳಿತ ಪ್ರದೇಶದ ಸಿಲ್ವಾಸದಲ್ಲಿ 189  ಕೋ.ರೂ. ಹೂಡಿಕೆ ವೆಚ್ಚದಲ್ಲಿ ನಿರ್ಮಿಸಲುದ್ದೇಶಿಸಿರುವ,  ವಾರ್ಷಿಕ 150 ವಿದ್ಯಾರ್ಥಿಗಳ ಪ್ರವೇಶಾತಿಯಿರುವ , ವೈದ್ಯಕೀಯ ಕಾಲೇಜಿನ ಖರ್ಚು ವೆಚ್ಚಕ್ಕೆ  ಅನುಕ್ರಮವಾಗಿ 2018-2019 ರಲ್ಲಿ 114 ಕೋ.ರೂ. ಮತ್ತು 2019-2020  ರಲ್ಲಿ 75 ಕೋ.ರೂ.ಗಳನ್ನು  ಎರಡು ವರ್ಷಗಳಲ್ಲಿ  ಒದಗಿಸಲಾಗುತ್ತದೆ.   

(ii)          ಯೋಜನೆಯನ್ನು  2019-2020 ರೊಳಗೆ ಪೂರ್ಣಗೊಳಿಸಲಾಗುತ್ತದೆ ಮತ್ತು ನಿರ್ಮಾಣ ಹಾಗೂ ಹೂಡಿಕೆ ವೆಚ್ಚವನ್ನು ಭಾರತೀಯ ವೈದ್ಯಕೀಯ ಮಂಡಳಿ ( ಎಂ.ಸಿ.ಐ.) ಮಾನದಂಡಗಳ ಅನ್ವಯ ಭರಿಸಲಾಗುತ್ತದೆ ಮತ್ತು ಆರೋಗ್ಯ ಹಾಗು ಕುಟುಂಬ ಕಲ್ಯಾಣ ಸಚಿವಾಲಯದ ಮಾರ್ಗದರ್ಶಿಗಳನ್ನು ಅನುಸರಿಸಲಾಗುತ್ತದೆ.

(iii)         ವೈದ್ಯಕೀಯ ಕಾಲೇಜಿನ ವಾರ್ಷಿಕ ಆವರ್ತ ಖರ್ಚು ವೆಚ್ಚಗಳನ್ನು ಕೇಂದ್ರಾಡಳಿತ ಪ್ರದೇಶ ಬಜೆಟ್ ಪ್ರಸ್ತಾವನೆಗಳಡಿಯಲ್ಲಿ ನಿಭಾಯಿಸಲಾಗುತ್ತದೆ.

(iv)         ಸ್ಥಾಪನಾ ಖರ್ಚು ವೆಚ್ಚಗಳ ಸಮಿತಿಯ (ಸಿ.ಇ.ಇ.)  ಶಿಫಾರಸಿನಂತೆ 357 ಖಾಯಂ ಹುದ್ದೆಗಳ ಪೈಕಿ 14 (ಜೆ.ಎಸ್.) ಮಟ್ಟದ ಮತ್ತು ಅದಕ್ಕಿಂತ ಮೇಲ್ಮಟ್ಟದ ( ಬೋಧಕ ಮತ್ತು ಬೋಧಕೇತರ ಸಹಿತ) 21 ಖಾಯಂ  ಹುದ್ದೆಗಳನ್ನು ಸೃಷ್ಟಿಸಲಾಗುವುದು.. 


ಪ್ರಯೋಜನಗಳು:

ಈ ಮಂಜೂರಾತಿಯಿಂದ ವೈದ್ಯರ ಲಭ್ಯತೆ ಹೆಚ್ಚಲಿದೆ ಮತ್ತು ಇದರಿಂದ ವೈದ್ಯರ ಕೊರತೆ ಸ್ವಲ್ಪ ಮಟ್ಟಿಗೆ ಪರಿಹಾರವಾದಂತಾಗುತ್ತದೆ. ಇದರಿಂದ ಎರಡು ಕೇಂದ್ರಾಡಳಿತ ಪ್ರದೇಶಗಳ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣದ ಅವಕಾಶಗಳು ಹೆಚ್ಚುತ್ತವೆ. ಇದರಿಂದ ಈಗಾಗಲೇ ಇರುವ ಜಿಲ್ಲಾಸ್ಪತ್ರೆಯ ಮೂಲಸೌಕರ್ಯಗಳ ಸಮುಚಿತ ಬಳಕೆ ಸಾಧ್ಯವಾಗುತ್ತದೆ ಮತ್ತು ಎರಡೂ ಕೇಂದ್ರಾಡಳಿತ ಪ್ರದೇಶಗಳು ಹಾಗು ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ತೃತೀಯ ಹಂತದ ವೈದ್ಯಕೀಯ ಸೌಲಭ್ಯಗಳ ಲಭ್ಯತೆ ಉತ್ತಮವಾಗಲಿದೆ. ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಗೆ ಅದರಲ್ಲೂ ಈ ಎರಡು ಕೇಂದ್ರಾಡಳಿತ ಪ್ರದೇಶಗಳ ಬುಡಕಟ್ಟು ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಲಾಭ ತರಲಿದೆ, ಇದರಿಂದ ಸಾಮಾಜಿಕ ಸಮಾನತೆಗೆ ಉತ್ತೇಜನ ದೊರೆಯಲಿದೆ. ಕೇಂದ್ರಾಡಳಿತ ಪ್ರದೇಶಗಳಲ್ಲಿ ವೈದ್ಯರ ಸಂಖ್ಯಾ ಹೆಚ್ಚಳದಿಂದಾಗಿ ಉತ್ತಮ ಆರೋಗ್ಯ ಸೇವೆಗಳ ಲಭ್ಯತೆಯೊಂದಿಗೆ ಆರೋಗ್ಯ ಕ್ಷೇತ್ರದಲ್ಲಿಯೂ ನೀತಿ ಸಮ್ಮತ ಸಮಾನತೆ ಉಂಟಾಗಲಿದೆ.(Release ID: 1553532) Visitor Counter : 46


Read this release in: English , Tamil , Telugu