ಪ್ರಧಾನ ಮಂತ್ರಿಯವರ ಕಛೇರಿ
ಮಹಾರಾಷ್ಟ್ರದ ಶಿರ್ಡಿಗೆ ಪ್ರಧಾನಮಂತ್ರಿ ಭೇಟಿ; ಶ್ರೀ ಸಾಯಿಬಾಬಾ ಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಸಭಿಕರನ್ನುದ್ಧೇಶಿಸಿ ಭಾಷಣ ಮಾಡಿದರು
Posted On:
19 OCT 2018 1:50PM by PIB Bengaluru
ಮಹಾರಾಷ್ಟ್ರದ ಶಿರ್ಡಿಗೆ ಪ್ರಧಾನಮಂತ್ರಿ ಭೇಟಿ; ಶ್ರೀ ಸಾಯಿಬಾಬಾ ಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಸಭಿಕರನ್ನುದ್ಧೇಶಿಸಿ ಭಾಷಣ ಮಾಡಿದರು
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಾರಾಷ್ಟ್ರದ ಶಿರ್ಡಿಗೆ ಭೇಟಿ ನೀಡಿದರು.
ಸಾರ್ವಜನಿಕ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರು ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟಿನ ವಿವಿಧ ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ ಅಂಗವಾಗಿ ಫಲಕವನ್ನು ಅನಾವರಣ ಮಾಡಿದರು. ಶ್ರೀ ಸಾಯಿಬಾಬಾ ಸಮಾಧಿಯ ಶತಮಾನೋತ್ಸವ ಸ್ಮರಣಾರ್ಥ ರಜತ ನಾಣ್ಯವನ್ನು ಬಿಡುಗಡೆ ಮಾಡಿದರು.
ಪ್ರಧಾನಮಂತ್ರಿ ಆವಾಸ ಯೋಜನೆ – ಗ್ರಾಮೀಣ (ಪಿ.ಎಮ್.ಎ.ವೈ.-ಜಿ) ಇದರ ಇ-ಗೃಹಪ್ರವೇಶದ ಅಂಗವಾಗಿ ಮಹಾರಾಷ್ಟ್ರದ ಫಲಾನುಭವಿಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬೀಗದ ಕೀಲಿಕೈ ವಿತರಣೆ ಮಾಡಿದರು. ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಾದ ಸತಾರಾ, ಲಾತುರ್, ನಂದುರ್ಬಾರ್, ಅಮರಾವತಿ, ಥಾನೆ, ಸೋಲಾಪುರ್, ನಾಗ್ಪುರ ಮುಂತಾದಡೆಯ ಫಲಾನುಭವಿಗಳೊಂದಿಗೆ ಪ್ರಧಾನಮಂತ್ರಿ ಅವರು ವೀಡಿಯೊ ಸಂವಾದ ನಡೆಸಿದರು. ಫಲಾನುಭವಿಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಮಹಿಳೆಯರಿದ್ದು, ಅವರು ಉತ್ತಮ ಗುಣಮಟ್ಟದ ವಸತಿ, ಸರಳ ಸಾಲ ಸೌಲಭ್ಯ ಮತ್ತು ಪಿ.ಎಮ್.ಎ.ವೈ.-ಜಿ (ಪ್ರಧಾನಮಂತ್ರಿ ಆವಾಸ ಯೋಜನೆ–ಗ್ರಾಮೀಣ) ಯೋಜನೆಯ ಭ್ರಷ್ಟಾಚಾರ ಮುಕ್ತ ಪ್ರಕ್ರಿಯೆಗೆ ಪ್ರಧಾನಮಂತ್ರಿ ಅವರಿಗೆ ಧನ್ಯವಾದ ಸಲ್ಲಿಸಿದರು. ಬಳಿಕ ಪ್ರಧಾನಮಂತ್ರಿ ಅವರು ಸಭಿಕರನ್ನು ಉದ್ಧೇಶಿಸಿ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು, ಭಾರತದ ಜನತೆಗೆ ದಸರಾ ಹಬ್ಬದ ಶುಭಾಶಯವನ್ನು ತಿಳಿಸಿದರು. ದಸರಾ ಹಬ್ಬದ ಶುಭ ಸಂದರ್ಭದಲ್ಲಿ ಜನರ ನಡುವೆ ಇರುವುದರಿಂದ ದೇಶದ ಒಳಿತಿಗಾಗಿ ಉತ್ತಮ ಕೆಲಸಮಾಡಲು ಶಕ್ತಿ ಮತ್ತು ನವ ಹುರುಪು ದೊರೆಯುತ್ತದೆ ಎಂದು ಪ್ರಧಾನಮಂತ್ರಿ ತಿಳಿಸಿದರು.
ಸಮಾಜಕ್ಕೆ ಶ್ರೀ ಸಾಯಿಬಾಬಾ ಅವರು ನೀಡಿದ ಕೊಡುಗೆಗಳ ಬಗ್ಗೆ ಪ್ರಧಾನಮಂತ್ರಿ ಅವರು ಮಾತನಾಡುತ್ತಾ, ಅವರ ಬೋಧನೆಗಳು ಒಂದುಗೂಡಿದ ಬಲಿಷ್ಟ ಸಮಾಜ ನಿರ್ಮಾಣ ಹಾಗೂ ಪ್ರೀತಿಯಿಂದ ಮಾನವ ಸೇವೆ ಮಾಡಲು ನಮಗೆ ಮಂತ್ರಸಿದ್ಧಿ ನೀಡುತ್ತದೆ ಎಂದು ಹೇಳಿದರು. ಶಿರ್ಡಿಯನ್ನು ಸದಾ ಸಾರ್ವಜನಿಕ ಸೇವೆಯ ತಿರುಳೆಂದೇ ಭಾವಿಸಲಾಗುತ್ತಿದೆ. ಸಾಯಿಬಾಬಾ ಅವರ ಹಾದಿಯನ್ನೇ ಅನುಸರಿಸಿ ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ಮುನ್ನಡೆಯುತ್ತಿರುವುದಕ್ಕೆ ಪ್ರಧಾನಮಂತ್ರಿ ಅವರು ಸಂತಸ ವ್ಯಕ್ತಪಡಿಸಿದರು. ಶಿಕ್ಷಣದ ಮೂಲಕ ಸಮಾಜವನ್ನು ಸಬಲೀಕರಣಗೊಳಿಸುತ್ತಿರುವುದಕ್ಕೆ ಮತ್ತು ಧಾರ್ಮಿಕ ಬೋಧನೆಗಳ ಮೂಲಕ ಚಿಂತನೆಗಳಲ್ಲಿ ಪರಿವರ್ತನೆ ತರುತ್ತಿರುವ ಕೊಡುಗೆಗಾಗಿ ಪ್ರಧಾನಮಂತ್ರಿ ಅವರು ಟ್ರಸ್ಟನ್ನು ಅಭಿನಂದಿಸಿದರು.
ದಸರಾ ಹಬ್ಬದ ಶುಭ ಸಂದರ್ಭದಲ್ಲಿ ಪ್ರಧಾನಮಂತ್ರಿ ಆವಾಸ ಯೋಜನೆ – ಗ್ರಾಮೀಣ (ಪಿ.ಎಮ್.ಎ.ವೈ.-ಜಿ) ಅಡಿಯಲ್ಲಿ 2 ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ನೂತನ ವಸತಿಗಳನ್ನು ಹಸ್ತಾಂತರಿಸಲು ಸಂತಸ ವ್ಯಕ್ತಪಡಿಸಿದ ಪ್ರಧಾನಮಂತ್ರಿ ಅವರು, ಬಡತನದ ವಿರುದ್ದ ಹೋರಾಟದಲ್ಲಿ ಇದೊಂದು ದೊಡ್ಡ ಹೆಜ್ಜೆಯಾಗಿದೆ ಎಂದರು. 2022ನೇ ಇಸವಿ ಒಳಗಾಗಿ ‘ಎಲ್ಲರಿಗೂ ವಸತಿ’ಯನ್ನು ಸಾಕಾರಗೊಳಿವತ್ತ ಸರಕಾರದ ಪ್ರಯತ್ನಗಳನ್ನು ಪಧಾನಮಂತ್ರಿ ಅವರು ಈ ಸಂದರ್ಭದಲ್ಲಿ ವಿವರಿಸಿದರು. ಕಳೆದ ನಾಲ್ಕು ವರ್ಷಗಳಲ್ಲಿ ಸರಕಾರವು 1.25 ಕೋಟಿ ವಸತಿಗಳ ನಿರ್ಮಾಣ ಮಾಡಿದೆ, ನಿರ್ಮಾಣವಾದ ಪ್ರತಿಯೊಂದೂ ಮನೆಗಳು ಕೇವಲ ಉತ್ತಮ ಗುಣಮಟ್ಟದಿಂದ ಕೂಡಿವೆ ಮಾತ್ರವಲ್ಲ, ಅವುಗಳು ಶೌಚಾಲಯ, ಅಡುಗೆ ಅನಿಲ ಹಾಗೂ ವಿದ್ಯುತ್ ಸಂಪರ್ಕ ವನ್ನೂ ಹೊಂದಿವೆ ಎಂದು ಪಧಾನಮಂತ್ರಿ ಅವರು ಹೇಳಿದರು.
ಸಭಿಕರನ್ನು ಉದ್ಧೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು ಮಹಾರಾಷ್ಟ್ರವನ್ನು ಬಯಲು ಶೌಚಾಲಯ ಮುಕ್ತ ರಾಜ್ಯವನ್ನಾಗಿಸಿದ್ದಕ್ಕಾಗಿ ಜನರಿಗೆ ಅಭಿನಂದನೆ ಸಲ್ಲಿಸಿದರು. ಸ್ವಚ್ಛ ಭಾರತ ಚಟುವಟಿಕೆ ನಿಟ್ಟಿನಲ್ಲಿ ಮಹಾರಾಷ್ಟ್ರ ಸರಕಾರದ ಪ್ರಯತ್ನಗಳನ್ನು ಅವರು ಪ್ರಶಂಸಿದರು. ಈ ಸಂದರ್ಭದಲ್ಲಿ, ಪ್ರಧಾನಮಂತ್ರಿ ಆವಾಸ ಯೋಜನೆ – ಗ್ರಾಮೀಣ ( ಪಿ.ಎಮ್.ಜೆ.ಎ.ವೈ.) ಕುರಿತು ಪ್ರಧಾನಮಂತ್ರಿ ಅವರು ಮಾತನಾಡಿದರು ಮತ್ತು ಯೋಜನೆಯಿಂದ ಈ ತನಕ ಸುಮಾರು ಒಂದು ಲಕ್ಷ ಜನರಿಗೆ ಪ್ರಯೋಜನವಾಗಿದೆ ಹಾಗೂ ಪಿ.ಎಮ್.ಜೆ.ಎ.ವೈ.ಯೋಜನೆಯಡಿ ಅಧುನಿಕ ವೈದ್ಯಕೀಯ ಮೂಲಸೌಕರ್ಯಗಳು ಸಿದ್ಧಗೊಳ್ಳುತ್ತಿವೆ ಎಂದು ಹೇಳಿದರು.
ಮಹಾರಾಷ್ಟ್ರದ ಬರ ಪರಿಸ್ಥಿತಿಯನ್ನು ನಿಯಂತ್ರಿಸಲು ಸರಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ಪ್ರಧಾನಮಂತ್ರಿ ಅವರು ವಿವರಿಸಿದರು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು, ಕೃಷಿಸಿಂಚಯಿ ಯೋಜನೆ ಮತ್ತು ಫಸಲ್ ಬಿಮಾ ಯೋಜನಾಗಳನ್ನು ಉಲ್ಲೇಖಿಸಿದರು ಮತ್ತು ಮಹಾರಾಷ್ಟ್ರ ಸರಕಾರದ ಜಲಯುಕ್ತ ಶಿವಿರ್ ಅಭಿಯಾನವನ್ನು ಪ್ರಶಂಸಿದರು ಹಾಗೂ ಮಹಾರಾಷ್ಟ್ರ ಸರಕಾರ ಕೈಗೆತ್ತಿಕೊಂಡ ನೀರಾವರಿ ನಾಲೆಗಳ ಹೂಳೆತ್ತುವ ಯೋಜನೆಯಲ್ಲಿ ಸಾರ್ವಜನಿಕರು ಪಾಲ್ಗೊಂಡಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.
ಬಿ ಆರ್ ಅಂಬೇಡ್ಕರ್, ಜ್ಯೋತಿ ರಾವ್ ಫುಲೆ ಮತ್ತು ಛತ್ರಪತಿ ಶಿವಾಜಿಯವರ ಬೋಧನೆಗಳನ್ನು ನೆನಪಿಸಿಕೊಳ್ಳುತ್ತಾ ಪ್ರಧಾನಮಂತ್ರಿ ಅವರು ದೇಶದ ಜನತೆ ಈ ಮಹಾನುಭಾವರ ಶ್ರೇಷ್ಠ ಆದರ್ಶಗಳನ್ನು ಮತ್ತು ಬೋಧನೆಗಳನ್ನು ಅನುಸರಿಸಬೇಕು ಹಾಗೂ ಅವಿಭಜಿತ ಬಲಿಷ್ಠ ಸಮಾಜ ನಿರ್ಮಾಣಕ್ಕಾಗಿ ಕೆಲಸಮಾಡಬೇಕು ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಸಬ್ಕಾ ಸಾಥ್, ಸಬ್ಕಾ ವಿಕಾಸ್ ಮತ್ತು ಏಕ್ ಭಾರತ್ ಶ್ರೇಷ್ಠ ಭಾರತ್ ಗುರಿ ಸಾಧಿಸುವ ನಿಟ್ಟಿನಲ್ಲಿ ಜನತೆ ಕಾರ್ಯನಿರತವಾಗಬೇಕು ಎಂದು ಹೇಳಿದರು.
ಇದಕ್ಕೂ ಮೊದಲು ಪ್ರಧಾನಮಂತ್ರಿ ಅವರು ಶ್ರೀ ಶಿರ್ಡಿ ಸಾಯಿಬಾಬಾ ಸಮಾಧಿ ದೇವಾಲಯ ಸಮುಚ್ಛಯವನ್ನು ಸಂದರ್ಶಿಸಿ ಪಾರ್ಥನೆ ಸಲ್ಲಿಸಿದರು. ಶ್ರೀ ಸಾಯಿಬಾಬಾ ಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲೂ ಅವರು ಭಾಗವಹಿಸಿದರು.
(Release ID: 1550151)
Visitor Counter : 82