ಪ್ರಧಾನ ಮಂತ್ರಿಯವರ ಕಛೇರಿ

ಛತ್ತೀಸ್ ಗಡ್ ನಲ್ಲಿ ಪ್ರಧಾನಮಂತ್ರಿ : ಜಂಜ್ಗಿರ್ – ಚಂಪಾದ ಕಿಸಾನ್ ಸಮ್ಮೇಳನದಲ್ಲಿ ಭಾಷಣ ; ಪ್ರಮುಖ ಮೂಲಸೌಕರ್ಯ ಯೋಜನೆಗಳಿಗೆ ಶಂಕುಸ್ಥಾಪನೆ 

Posted On: 22 SEP 2018 6:11PM by PIB Bengaluru

ಛತ್ತೀಸ್ ಗಡ್ ನಲ್ಲಿ ಪ್ರಧಾನಮಂತ್ರಿ : ಜಂಜ್ಗಿರ್ – ಚಂಪಾದ ಕಿಸಾನ್ ಸಮ್ಮೇಳನದಲ್ಲಿ ಭಾಷಣ ; ಪ್ರಮುಖ ಮೂಲಸೌಕರ್ಯ ಯೋಜನೆಗಳಿಗೆ ಶಂಕುಸ್ಥಾಪನೆ 
 

ಛತ್ತೀಸ್ ಗಡ್ ಗೆ ಭೇಟಿ ನೀಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಂಜ್ಗಿರ್ – ಚಂಪಾದಲ್ಲಿ ಸಾಂಪ್ರದಾಯಿಕ ಕೈಮಗ್ಗ ಮತ್ತು ಕೃಷಿ ಕುರಿತಾದ ವಸ್ತು ಪ್ರದರ್ಶನಕ್ಕೆ ಭೇಟಿ ನೀಡಿದರು.

ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಮತ್ತು ಪೆಂಡ್ರಾ-ಅನುಪ್ಪರ್ 3ನೇ ರೈಲ್ವೇ ಹಳಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳ ವಿವಿಧ ಕಲ್ಯಾಣ ಯೋಜನೆಗಳ ಆಯ್ದ ಫಲಾನುಭವಿಗಳಿಗೆ ಪ್ರಮಾಣಪತ್ರ ಮುಂತಾದವುಗಳನ್ನು ಪ್ರಧಾನಮಂತ್ರಿ ನೀಡಿದರು.

ಬೃಹತ್ ಕಿಸಾನ್ ಸಮ್ಮೇಳನವನ್ನು ಉದ್ಧೇಶಿಸಿ ಮಾತನಾಡುತ್ತಾ ಪ್ರಧಾನಮಂತ್ರಿ ಅವರು, ಮಾಜಿ ಪ್ರಧಾನಮಂತ್ರಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ನೂತನ ಮೂರು ರಾಜ್ಯಗಳಾದ ಉತ್ತರಾಖಂಡ್, ಝಾರ್ಖಂಡ್ ಮತ್ತು ಛತ್ತೀಸ್ ಗಡ್ ಗಳನ್ನು ನಿರ್ಮಿಸಿದ್ದರು, ಅವರ ಅಭಿವೃದ್ಧಿಯ ಸಂಕಲ್ಪ ಯೋಜನೆಯ ಫಲವಾಗಿ ಇಂದು ಈ ಎಲ್ಲ ರಾಜ್ಯಗಳೂ ಶೀಘ್ರವಾಗಿ ಪ್ರಗತಿಪಥದಲ್ಲಿ ಸಾಗುತ್ತಿವೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.

ಕೇಂದ್ರ ಸರಕಾರವು ಅಭಿವೃದ್ಧಿಗೆ ಸಮರ್ಪಿತವಾಗಿದೆ ಮತ್ತು ಜನತೆಯ ಆಶೋತ್ತರಗಳನ್ನು ಪೂರ್ಣಗೊಳಿಸಲು ಬಯಸಿದೆ. ಜನತೆಗೆ ಸುಲಭವಾಗಿ ಜೀವನ ನಡೆಸುವುದನ್ನು ಇನ್ನೂ ಉತ್ತಮಗೊಳಿಸುವುದನ್ನೇ ನಾವು ಬಯಸುತ್ತಿದ್ದೇವೆ ಎಂದು ಪ್ರಧಾನಮಂತ್ರಿ ಅವರು ತಿಳಿಸಿದರು.

ಕೇವಲ ವೋಟ್ – ಬ್ಯಾಂಕ್ ಉದ್ಧೇಶದಿಂದ ಅಥವಾ ಚುನಾವಣೆಗಳನ್ನು ಗೆಲ್ಲುವ ನಿಟ್ಟಿನಲ್ಲಿ ಯೋಜನೆಗಳನ್ನು ತಯಾರು ಮಾಡುವುದರಲ್ಲಿ ನಮ್ಮ ಸರಕಾರಕ್ಕೆ ನಂಬಿಕೆ ಇಲ್ಲ. ನಮ್ಮ ಉದ್ಧೇಶ ಹೊಸ ಮತ್ತು ಅಧುನಿಕ ಛತ್ತೀಸ್ ಗಡ್ ನಿರ್ಮಾಣವೇ ಮುಖ್ಯ ಗುರಿಯಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಿಳಿಸಿದರು.

“ಎಲ್ಲರ ಜೊತೆಯಲ್ಲಿ, ಎಲ್ಲರ ವಿಕಾಸದೊಂದಿಗೆ” ಎಂಬ ಧ್ಯೇಯದೊಂದಿಗೆ ನಾವು ಮುನ್ನಡೆಯುತ್ತಿದ್ದೇವೆ. ಮೌಲ್ಯವರ್ಧನೆಯ ಮೂಲಕ ಕೃಷಿಕರ ಪ್ರಯೋಜನಗಳ ಖಾತ್ರಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಮುನ್ನಡೆಯುತ್ತಿದೆ. ಈ ಮಿಷನ್ ನಡಿ ಪ್ರಧಾನಮಂತ್ರಿ ಕಿಸಾನ್ ಸಂಪದ ಯೋಜನೆಯು ಕೃಷಿಕರಿಗೆ ಸಹಾಯಮಾಡುತ್ತದೆ. ತಂತ್ರಜ್ಞಾನದ ಬಳಕೆಮೂಲಕ ಕೃಷಿಕರ ಕಲ್ಯಾಣವನ್ನು ಖಾತ್ರಿಗೊಳಿಸಲಾಗುತ್ತದೆ. ಈ ನಿಟ್ಟಿನಲ್ಲಿ ಮಣ್ಣಿನ ಆರೋಗ್ಯ ಕಾರ್ಡ್ ಮತ್ತು ಫಸಲ್ ಬಿಮಾ ಯೋಜನೆಗಳು ಕೃಷಿಕರಿಗೆ ಅತ್ಯಮೂಲ್ಯ ಪ್ರಯೋಜನಗಳನ್ನು ನೀಡುತ್ತವೆ ಎಂದು ಪ್ರಧಾನಮಂತ್ರಿ ಅವರು ಕೃಷಿಕರಿಗೆ ತಿಳಿಸಿದರು.

ಈ ಹಿಂದೆ ಕಾಲವೊಂದಿತ್ತು, ಆಗ ಕೇಲವ ಆಯ್ದ ಕೆಲವರಿಗೆ ಮಾತ್ರ ಕಲ್ಯಾಣ ಯೋಜನೆಗಳು ಲಭ್ಯವಾಗುತ್ತಿದ್ದವು, ಮತ್ತು ಸರಕಾರದ ವ್ಯವಸ್ಥೆಗಳನ್ನೆಲ್ಲಾ ಭ್ರಷ್ಟಾಚಾರ ಸಂಪೂರ್ಣವಾಗಿ ಹಾಳುಮಾಡಿತ್ತು. ನಾವು ಎಲ್ಲರ ಅಭಿವೃದ್ಧಿಗೆ ಬದ್ಧರಾಗಿದ್ದೇವೆ, 2022ನೇ ಇಸವಿ ವೇಳೆ ಖಾತ್ರಿಯಾಗಿ ಪ್ರತಿಯೊಬ್ಬ ಭಾರತೀಯನ ತಲೆ ಮೇಲೆ ಸೂರು ಇರುವ ದೃಢನಿರ್ಧಾರಕ್ಕೆ ಕೇಂದ್ರ ಸರಕಾರ ಕಟಿಬದ್ಧವಾಗದೆ ಎಂದು ಪ್ರಧಾನಮಂತ್ರಿ ಹೇಳಿದರು. 

ಮಿಷನ್ ಪ್ರಕ್ರಿಯೆ ರೀತಿಯಲ್ಲಿ ಶೌಚಾಲಯ ನಿರ್ಮಾಣ ಕಾರ್ಯ ನಡೆದಿದೆ. ಉಜ್ವಲ ಯೋಜನೆಯಡಿ ಬಡವರಿಗೆ ಅಡುಗೆ ಅನಿಲ ಸಂಪರ್ಕಗಳನ್ನು ನೀಡಲಾಯಿತು, ಸೌಭಾಗ್ಯ ಯೋಜನೆಯಡಿ ಪ್ರತಿ ಮನೆಗೂ ವಿದ್ಯುತ್ ಸಂಪರ್ಕ ಲಭ್ಯವಾಗುವಂತೆ ಮಾಡಲಾಯಿತು ಎಂದು ಪ್ರಧಾನಮಂತ್ರಿ ತಿಳಿಸಿದರು.
 

***



(Release ID: 1547171) Visitor Counter : 87