ಸಂಪುಟ

ಭಾರತ ಮತ್ತು ಬ್ರೂನೈ ದರುಸ್ಸಲಾಮ್ ನಡುವಿನ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ 

Posted On: 12 SEP 2018 4:33PM by PIB Bengaluru

ಭಾರತ ಮತ್ತು ಬ್ರೂನೈ ದರುಸ್ಸಲಾಮ್ ನಡುವಿನ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ ಉಪಗ್ರಹ ಮತ್ತು ಉಡಾವಣಾ ವಾಹಕಗಳಿಗಾಗಿ ಟೆಲಿ ಕಮಾಂಡ್ ನಿಲ್ದಾಣ ಮತ್ತು ಟೆಲಿಮೆಟ್ರಿ ಟ್ರ್ಯಾಕಿಂಗ್ ಕಾರ್ಯಾಚರಣೆ ಸಹಕಾರಕ್ಕಾಗಿ ಮತ್ತು ಬಾಹ್ಯಾಕಾಶ ಸಂಶೋಧನೆ, ವಿಜ್ಞಾನ ಮತ್ತು ಆನ್ವಯಿಕಗಳ ಕ್ಷೇತ್ರದಳಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಬ್ರೂನೈ ದರುಸ್ಸಲಾಮ್ ನಡುವೆ ಆಗಿರುವ ತಿಳಿವಳಿಕೆ ಒಪ್ಪಂದದ ಬಗ್ಗೆ ವಿವರಿಸಲಾಯಿತು. ಈ ತಿಳಿವಳಿಕೆ ಒಪ್ಪಂದಕ್ಕೆ 2018ರ ಜುಲೈ 19ರಂದು ನವದೆಹಲಿಯಲ್ಲಿ ಅಂಕಿತ ಹಾಕಲಾಗಿತ್ತು.

ಪ್ರಯೋಜನಗಳು:

ಈ ತಿಳಿವಳಿಕೆ ಒಪ್ಪಂದವು, ಭಾರತೀಯ ಉಡಾವಣಾ ವಾಹಕ ಮತ್ತು ಉಪಗ್ರಹ ಕಾರ್ಯಾಚರಣೆಗಳಿಗೆ ಬೆಂಬಲ ನೀಡುವ ಉದ್ದೇಶದಿಂದ ತನ್ನ ಕ್ಷೇತ್ರ ನಿಲ್ದಾಣವನ್ನು ಕಾರ್ಯಾಚರಣೆಗೊಳಿಸಲು, ನಿರ್ವಹಿಸಲು ಮತ್ತು ವೃದ್ಧಿಸಲು ಭಾರತವನ್ನು ಶಕ್ತಗೊಳಿಸುತ್ತದೆ. ಬ್ರೂನೈ ದರುಸ್ಸಲಾಮ್ ನ ವಿದ್ಯಾರ್ಥಿಗಳು ಮತ್ತು ಅಧಿಕಾರಿಗಳಿಗೆ ಬಾಹ್ಯಾಕಾಶ ತಂತ್ರಜ್ಞಾನ ಆನ್ವಯಿಕಗಳಲ್ಲಿ ತರಬೇತಿ ನೀಡುವ ಮೂಲಕ ತನ್ನ ಬಾಹ್ಯಾಕಾಶ ಚಟುವಟಿಕೆಯ ಅನುಭವ ಮತ್ತು ತಜ್ಞತೆಯನ್ನು ಹಂಚಿಕೊಳ್ಳಲು ನೆರವು ನೀಡುತ್ತದೆ.

ಈ ತಿಳಿವಳಿಕೆ ಒಪ್ಪಂದದ ಮೂಲಕ ಬ್ರೂನೈ ದರುಸ್ಸಲಾಮ್ ನೊಂದಿಗಿನ ಸಹಕಾರವು ಭಾರತಕ್ಕೆ ಭಾರತದ ಉಡಾವಣಾ ವಾಹಕ ಮತ್ತು ಉಪಗ್ರಹ ಅಭಿಯಾನಗಳನ್ನು ಬೆಂಬಲಿಸಲು ತನ್ನ ಕ್ಷೇತ್ರ ನಿಲ್ದಾಣವನ್ನು ಕಾರ್ಯಾಚರಣೆಗೊಳಿಸಲು, ನಿರ್ವಹಿಸಲು ಮತ್ತು ವೃದ್ಧಿಸಲು ಇಂಬು ನೀಡುತ್ತದೆ. ಆ ಮೂಲಕ ದೇಶದ ಎಲ್ಲ ವಲಯಗಳು ಮತ್ತು ವಿಭಾಗಗಳು ಪ್ರಯೋಜನ ಪಡೆಯಲಿವೆ.

ಈ ತಿಳಿವಳಿಕೆ ಒಪ್ಪಂದವು, ಬಾಹ್ಯಾಕಾಶ ತಂತ್ರಜ್ಞಾನ ಆನ್ವಯಿಕಗಳಲ್ಲಿ ಕ್ಷೇತ್ರ ನಿಲ್ದಾಣಗಳ ಕಾರ್ಯಾಚರಣೆ ಮತ್ತು ತರಬೇತಿಯ ಚಟುವಟಿಕೆಗಳಲ್ಲಿ ಹೊಸ ಸಂಶೋಧನಾ ಚಟುವಟಿಕೆಗಳನ್ನು ಅನ್ವೇಷಿಸಲು ಪ್ರಚೋದನೆ ನೀಡುತ್ತದೆ.
 

****



(Release ID: 1545957) Visitor Counter : 57