ಪ್ರಧಾನ ಮಂತ್ರಿಯವರ ಕಛೇರಿ

ಏಷಿಯನ್ ಗೇಮ್ಸ್ 2018ರಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಭಾರತೀಯ ತಂಡವನ್ನು ಪ್ರಧಾನಮಂತ್ರಿ ಅಭಿನಂದಿಸಿದರು. 

Posted On: 02 SEP 2018 8:50PM by PIB Bengaluru

ಏಷಿಯನ್ ಗೇಮ್ಸ್ 2018ರಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಭಾರತೀಯ ತಂಡವನ್ನು ಪ್ರಧಾನಮಂತ್ರಿ ಅಭಿನಂದಿಸಿದರು. 
 

ಏಷಿಯನ್ ಗೇಮ್ಸ್ 2018ರಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿದ ಭಾರತೀಯ ತಂಡವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದರು. 

 

“ಏಷಿಯನ್ ಗೇಮ್ಸ್ 2018 ಮುಕ್ತಾಯ ಹಂತದಲ್ಲಿದೆ, ಅತ್ಯುತ್ತಮ ಸಾಧನೆಯನ್ನು ಮಾಡಿದ ಭಾರತೀಯ ತಂಡವನ್ನು ನಾನು ಮತ್ತೊಮ್ಮೆ ಅಭಿನಂದಿಸುತ್ತೇನೆ. ಏಷಿಯನ್ ಗೇಮ್ಸ್ ನ ಇತಿಹಾಸದಲ್ಲಿ ಭಾರತದ ಪಾಲಿಗೆ 2018 ಕ್ರೀಡೆ , ಸರ್ವಶ್ರೇಷ್ಠ ಸಾಧನೆಯಾಗಿದೆ. ಏಷಿಯನ್ ಗೇಮ್ಸ್ ನಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಕ್ರೀಡಾಳು ಭಾರತಕ್ಕೆ ಹೆಮ್ಮೆಯಾಗಿದ್ದಾರೆ.

 

ಯಾವ ಕ್ರೀಡಾಸ್ಪರ್ಧೆಯಲ್ಲಿ ನಾವು ಐತಿಹಾಸಿಕವಾಗಿ ಬಲಷ್ಠರಾಗಿದ್ದೆವೋ, ಅವುಗಳಲ್ಲಿ ನಾವು ನಮ್ಮ ಸ್ಥಾನಗಳನ್ನು ಏಕೀಕರಿಸಿ ಭದ್ರಗೊಳಿಸಿಕೊಂಡಿದ್ದೇವೆ ಮತ್ತು ಈ ಹಿಂದೆ ಬಹಳ ವರ್ಷಗಳಿಂದ ಗೆಲುವು ಸಾಧಿಸಿಲ್ಲವೋ ಆ ಕ್ರೀಡಾ ಸ್ಪರ್ಧೆಗಳಲ್ಲಿ ನಾವು ಗೆಲುವಿನ ಮುದಿಪು (ಪ್ರಶಸ್ತಿ) ಗಳನ್ನು  ಕಂಡಿದ್ದೇವೆ.  ಭಾರತೀಯ ಕ್ರೀಡಾರಂಗಕ್ಕೆ ಇದೊಂದು ಅತ್ಯಂತ ಸಕಾರಾತ್ಮಕ ಸಂಕೇತ ಮತ್ತು ಶುಭಸೂಚನೆಯ ಲಕ್ಷಣವೂ ಆಗಿದೆ.

 

ಕ್ರೀಡಾಪಟುಗಳ ತರಬೇತುದಾರರಿಗೆ, ಸಹಾಯಕ ಸಿಬ್ಬಂದಿಗಳಿಗೆ, ತಂದೆತಾಯಂದಿರಿಗೆ, ಕುಟುಂಬಕ್ಕೆ ಮತ್ತು ಗೆಳೆಯರಿಗೆಲ್ಲ ನನ್ನ ಪ್ರಣಾಮಗಳು. ನಮ್ಮ ವಿಜೇತರಿಗೆ (ಚ್ಯಾಂಪ್ಯನ್ಸ್) ನಿರಂತರ ಬೆಂಬಲ ನೀಡಿದ್ದಕ್ಕಾಗಿ ನಿಮಗೆ ಧನ್ಯವಾದಗಳು. ನಮ್ಮ ಕ್ರೀಡಾಪಟುಗಳ ಭವಿಷ್ಯದ ಎಲ್ಲ ಪ್ರಯತ್ನಗಳಿಗೂ ನನ್ನ ಶುಭಾಶಯಗಳು.

 

ಸ್ಮರಣಾರ್ಹ ಏಷಿಯನ್ ಗೇಮ್ಸ್ 2018 ನ್ನು ಆಯೋಜಿಸಿದ್ದಕ್ಕಾಗಿ ಇಂಡೋನೇಷ್ಯಾದ ಜನತೆಗೆ ಮತ್ತು ಅಧ್ಯಕ್ಷ ಶ್ರೀ ಜೊಕೊ ವಿಡೊಡೊ ಅವರಿಗೆ ಶುಭಾಶಯಗಳು. ಕ್ರೀಡಾಳುಗಳಿಗೆ ಅತ್ಯುತ್ತಮ ಪ್ರದರ್ಶನ ನೀಡಲು ಮತ್ತು ಕ್ರೀಡಾಳುಗಳ ಪ್ರಾವಿಣ್ಯತೆಯ ಸ್ಪೂರ್ತಿ ಅತ್ಯುತ್ತಮ ಸ್ವರೂಪದಲ್ಲಿ ವ್ಯಕ್ತವಾಗಲು ಈ ಕ್ರೀಡಾಸ್ಪರ್ಧೆ ಸಾಕ್ಷಿಯಾಯಿತು” ಎಂದು ಪ್ರಧಾನಮಂತ್ರಿ ತಮ್ಮ ಸರಣಿ ಟ್ವೀಟ್ ಸಂದೇಶಗಳಲ್ಲಿ ತಿಳಿಸಿದ್ದಾರೆ. 

 

 

 ……………



(Release ID: 1544846) Visitor Counter : 66