ಪ್ರಧಾನ ಮಂತ್ರಿಯವರ ಕಛೇರಿ

ಜುನಾಘಡ್ ಜಿಲ್ಲೆಯಲ್ಲಿ ಪ್ರಧಾನಮಂತ್ರಿ ವಿವಿಧ ಯೋಜನೆಗಳನ್ನು ಉದ್ಘಾಟಿಸಿದರು. 

Posted On: 23 AUG 2018 4:46PM by PIB Bengaluru

ಜುನಾಘಡ್ ಜಿಲ್ಲೆಯಲ್ಲಿ ಪ್ರಧಾನಮಂತ್ರಿ ವಿವಿಧ ಯೋಜನೆಗಳನ್ನು ಉದ್ಘಾಟಿಸಿದರು. 
 

ಜುನಾಘಡ್ ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿವಿಧ ಯೋಜನೆಗಳನ್ನು ಉದ್ಘಾಟಿಸಿದರು. ಸರಕಾರಿ ಸಾರ್ವಜನಿಕ ಆಸ್ಪತ್ರೆ, ಹಾಲು ಸಂಸ್ಕರಿಸುವ ಘಟಕ ಮತ್ತು ಜುನಾಘಡ್ ಕೃಷಿ ವಿಶ್ವವಿದ್ಯಾಲಯದ ಕೆಲವು ಕಟ್ಟಡಗಳು ಇವುಗಳಲ್ಲಿ ಸೇರಿಕೊಂಡಿವೆ.

ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡುವ ಮೂಲಕ ಇಂದು ರೂ 500 ಕೋಟಿಗೂ ಅಧಿಕ ಮೌಲ್ಯದ ಒಂಬತ್ತು ಯೋಜನೆಗಳನ್ನು ಲೋಕಾರ್ಪಣೆ ಮಾಡಲಾಗಿದೆ ಎಂದು ಸಾರ್ವಜನಿಕ ಸಮಾರಂಭದಲ್ಲಿ ಸಭಿಕರನ್ನುದ್ಧೇಶಿಸಿ ಪ್ರಧಾನಮಂತ್ರಿ ಹೇಳಿದರು. ಭಾರತದ ಅಭಿವೃದ್ಧಿಯ ಪಥದಲ್ಲಿ ಹೊಸಶಕ್ತಿ ಮತ್ತು ಸಂತುಲಿತತೆಯಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ಗುಜರಾತ್ ನಲ್ಲಿ ರಾಜ್ಯದ ಎಲ್ಲ ಭಾಗಗಳಿಗೂ ಸಾಕಷ್ಟು ನೀರು ಲಭ್ಯವಾಗುವಂತೆ ನಿರಂತರ ಪ್ರಯತ್ನಗಳು ನಡೆಯುತ್ತಿದೆ. ಜಲ ಸಂರಕ್ಷಣೆಯ ನಿಟ್ಟಿನಲ್ಲಿ ಕೂಡಾ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಪ್ರಧಾನಮಂತ್ರಿ ಹೇಳಿದರು. 

ಗುಜರಾತ್ ನಾದ್ಯಂತ ಎಲ್ಲಡೆ ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳು ಪ್ರಾರಂಭಗೊಳ್ಳಲಿವೆ. ಇವುಗಳು ಕೇವಲ ರೋಗಿಗಳಿಗೆ ಮಾತ್ರವಲ್ಲ, ವೈದ್ಯಕೀಯ ಶಿಕ್ಷಣ ಬಯಸುವವರಿಗೂ ಸಹಾಯ ಮಾಡುತ್ತವೆ. ಜನ್ ಔಷಧಿ ಯೋಜನಾ ಅಡಿ ಜನ್ ಔಷಧಿ ಕೇಂದ್ರಗಳು ತೆರೆದುಕೊಂಡಾಗ ಔಷಧಗಳ ಬೆಲೆಗಳು ಕಡಿಮೆಗೊಂಡವು, ಪ್ರಮುಖವಾಗಿ ಬಡವರಿಗೆ ಮತ್ತು ಮಧ್ಯಮವರ್ಗದವರಿಗೆ ಕೈಗೆಟಕುವ ಬೆಲೆಯಲ್ಲಿ ಔಷಧಗಳು ಲಭ್ಯವಾದವು ಎಂದು ಪ್ರಧಾನಮಂತ್ರಿ ತಿಳಿಸಿದರು. 

ಸರಕಾರ ಶುಚಿತ್ವಕ್ಕೆ ಮಹತ್ವ ನೀಡಿದ ಕಾರ್ಯ ಸಾರ್ವತ್ರಿಕವಾಗಿ ಪ್ರಶಂಸೆ ಪಡೆದಿದೆ. ಶುಚಿತ್ವಕ್ಕೆ ಪ್ರೋತ್ಸಾಹ ನೀಡುವ ಪ್ರಾಧಾನ್ಯತೆಯಿದೆ, ಏಕೆಂದರೆ ಶುಚಿಯಾದ ಭಾರತ ಜನರು ರೋಗಗಳಿಂದ ಬಳಲದಂತೆ ಭರವಸೆ ನೀಡುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. 

ಆರೋಗ್ಯ ಕ್ಷೇತ್ರಕ್ಕೆ ಉತ್ತಮ ವೈದ್ಯರ ಮತ್ತು ರೋಗಚಿಕಿತ್ಸಾ ವೈದ್ಯಕೀಯ ಸಿಬ್ಬಂದಿಗಳ ಆವಶ್ಯಕತೆಯಿದೆ. ಅಲ್ಲದೆ, ಭಾರತದಲ್ಲಿ ವೈದ್ಯಕೀಯ (ಔಷಧೀಯ) ಉಪಕರಣಗಳ ಉತ್ಪಾದೆಯಾಗಬೇಕು ನಾವು ಬಯಸುತ್ತೇವೆ, ಹಾಗೂ ಜಾಗತಿಕ ತಂತ್ರಜ್ಞಾನದ ಅಧುನಿಕತೆಯನ್ನು ಮೀರಿ ಕ್ಷೇತ್ರವು ಮುನ್ನಡೆಯುಬೇಕು ಎಂದು ಹೇಳಿದರು. 

ಪ್ರಧಾನಮಂತ್ರಿ ಜನ್ ಆರೋಗ್ಯ ಯೋಜನಾ – ಆಯುಷ್ಮಾನ್ ಭಾರತ್ ಬಗ್ಗೆ ಹೇಳುವುದಾದರೆ, ಇದು ಆರೋಗ್ಯ ಕ್ಷೇತ್ರದ ಸ್ವರೂಪವನ್ನೇ ಬದಲಾಯಿಸಲಿದೆ, ಅಲ್ಲದೆ, ಬಡವರೂ ಕೂಡಾ ಕೈಗೆಟಕುವ ಬೆಲೆಯಲ್ಲಿ ಅತ್ಯುತ್ತಮ ಮಟ್ಟದ ಆರೋಗ್ಯ (ಸ್ವಾಸ್ಥ) ಸೌಲಭ್ಯಗಳನ್ನು ಪಡೆಯಲಿದ್ದಾರೆ, ಎಂದು ಪ್ರಧಾನಮಂತ್ರಿ ತಿಳಿಸಿದರು.
 

***


(Release ID: 1543998)