ಪ್ರಧಾನ ಮಂತ್ರಿಯವರ ಕಛೇರಿ

ಆಗಸ್ಟ್ 23ರಂದು ಪ್ರಧಾನಮಂತ್ರಿ ಗುಜರಾತ್ ಭೇಟಿ 

Posted On: 22 AUG 2018 3:57PM by PIB Bengaluru

ಆಗಸ್ಟ್ 23ರಂದು ಪ್ರಧಾನಮಂತ್ರಿ ಗುಜರಾತ್ ಭೇಟಿ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಗಸ್ಟ್ 23, 2018 ರಂದು ಗುಜರಾತ್ ಗೆ ಭೇಟಿ ನೀಡಲಿದ್ದಾರೆ. 

ವಲ್ಸಾಡ್ ಜಿಲ್ಲೆಯ ಜುಲ್ವಾ ಗ್ರಾಮದಲ್ಲಿ ನಡೆಯಲಿರುವ ಬೃಹತ್ ಸಾರ್ವಜನಿಕ ಕಾರ್ಯಕ್ರಮದಲ್ಲಿ “ಎಲ್ಲರಿಗೂ ಮನೆ” ಸಂಕಲ್ಪದಲ್ಲಿ ಕೇಂದ್ರ ಸರಕಾರದ ಪ್ರಮುಖ ಯೋಜನೆಯಾದ ಪ್ರಧಾನಮಂತ್ರಿ ಆವಾಸ್ ಯೋಜನಾ ( ಗ್ರಾಮೀಣ ) ಇದರ ಫಲಾನುಭವಿಗಳ ಸಾಮೂಹಿಕ ಇ-ಗೃಹಪ್ರವೇಶಕ್ಕೆ ಪ್ರಧಾನಮಂತ್ರಿ ಅವರು ಸಾಕ್ಷಿಯಾಗಲಿದ್ದಾರೆ. 

ಗುಜರಾತ್ ನಲ್ಲಿ ಒಂದು ಲಕ್ಷಕ್ಕೂ ಅಧಿಕ ವಸತಿಗಳ ನಿರ್ಮಾಣವಾಗಿದೆ. ಎಲ್ಲ 26 ಜಿಲ್ಲೆಗಳ ಫಲಾನುಭವಿಗಳೂ ಒಟ್ಟಾಗಿ ಗೃಹಪ್ರವೇಶ ಆಚರಣೆ ಮಾಡಲಿದ್ದಾರೆ. ಗುಜರಾತ್ ನ ದಕ್ಷಿಣದ ಐದು ಜಿಲ್ಲೆಗಳಾದ ವಲ್ಸಾಡ್, ನವಸಾರಿ, ತಾಪಿ, ಸೂರತ್ ಮತ್ತು ದಂಗ್ಸ್ ಗಳ ಫಲಾನುಭವಿಗಳು ವಲ್ಸಾಡ್ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಉಳಿದ ಜಿಲ್ಲೆಗಳಲ್ಲಿ, ಒಟ್ಟಾಗಿ ಗೃಹಪ್ರವೇಶ ಬ್ಲಾಕ್ ಹಂತದಲ್ಲಿ ಜರುಗಲಿದೆ. ಈ ಜಿಲ್ಲೆಗಳ ಫಲಾನುಭವಿಗಳಿಗೆ ವಲ್ಸಾಡ್ ನಲ್ಲಿ ನಡೆಯುವ ಮುಖ್ಯಕಾರ್ಯಕ್ರಮದ ಸಂಪರ್ಕವನ್ನು ವಿಡಿಯೊ ಮೂಲಕ ಏರ್ಪಡಿಸಲಾಗುವುದು. ಕಾರ್ಯಕ್ರಮಕ್ಕೆ ಒಟ್ಟು 2 ಲಕ್ಷಕ್ಕೂ ಅಧಿಕ ಮಂದಿ ಸಂಪರ್ಕ ಹೊಂದುವ ನಿರೀಕ್ಷೆಯಿದೆ. 

ದೀನ್ ದಯಾಳ್ ಉಪಾಧ್ಯಾಯ್ ಗ್ರಾಮೀಣ ಕೌಶಲ್ಯ ವಿಕಾಸ್ ಯೋಜನಾ, ಮುಖ್ಯ ಮಂತ್ರಿ ಗ್ರಾಮೋದಯ ಯೋಜನಾ ಮತ್ತು ರಾಷ್ಟ್ರೀಯ ಗ್ರಾಮೀಣ ಜೀವನಾಧಾರ ಮಿಷನ್ ಮುಂತಾದ ಹಲವು ಯೋಜನೆಗಳಿಗೆ ಸಂಬಂಧಪಟ್ಟ ಫಲಾನುಭವಿಗಳಲ್ಲಿ ಆಯ್ದ ಕೆಲವರಿಗೆ ಪ್ರಮಾಣಪತ್ರ ಮತ್ತು ಉದ್ಯೋಗ ಪತ್ರಗಳನ್ನು ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ವಿತರಿಸಲಿದ್ದಾರೆ. ಅವರು ಮಹಿಳಾ ಬ್ಯಾಂಕ್ ಪ್ರತಿನಿಧಿಸುವವರಿಗೆ ಉದ್ಯೋಗ ನೇಮಕಾತಿ ಪತ್ರಗಳನ್ನು ಮತ್ತು ಸಣ್ಣ-ಎ.ಟಿ.ಎಂ.ಗಳನ್ನು ವಿತರಿಸಲಿದ್ದಾರೆ.ಬಳಿಕ ಸಭಿಕರನ್ನುದ್ಧೇಶಿಸಿ ಭಾಷಣ ಕೂಡಾ ಮಾಡಲಿದ್ದಾರೆ. 

ಜುನಾಘಡ್ ನಲ್ಲಿ ಪ್ರಧಾನಮಂತ್ರಿ ಅವರು ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಇವುಗಳಲ್ಲಿ ಜುನಾಘಡ್ ನ ಸರಕಾರಿ ಸಾರ್ವಜನಿಕ ಆಸ್ಪತ್ರೆ, ಜುನಾಘಡ್ ಮಹಾನಗರ ಪಾಲಿಕೆಯ 13 ಯೋಜನೆಗಳು; ಮತ್ತು ಖೋಖರ್ಡಾದಲ್ಲಿ ಹಾಲು ಸಂಸ್ಕರಣಾ ಘಟಕಗಳು ಸೇರಿವೆ. ಇಲ್ಲಿ ಅವರು ಸಭಿಕರನ್ನುದ್ಧೇಶಿಸಿ ಭಾಷಣ ಕೂಡಾ ಮಾಡಲಿದ್ದಾರೆ. 

ಪ್ರಧಾನಮಂತ್ರಿ ಅವರು ಗುಜರಾತ್ ವಿಧಿ ವಿಜ್ಞಾನಗಳ ವಿಶ್ವವಿದ್ಯಾಲಯ, ಗಾಂಧಿನಗರ ಇದರ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ದೆಹಲಿಗೆ ಹಿಂತಿರುಗುವ ಮೊದಲು, ಪ್ರಧಾನಮಂತ್ರಿ ಅವರು ಗಾಂಧಿನಗರದ ಸೋಮನಾಥ ಟ್ರಸ್ಟ್ ನ ಸಭೆಯಲ್ಲಿ ಪಾಲ್ಗೊಳ್ಳಲಿದ್ದರೆ. 



(Release ID: 1543996) Visitor Counter : 81