ಪ್ರಧಾನ ಮಂತ್ರಿಯವರ ಕಛೇರಿ

2018 ರ ಆಗಸ್ಟ್ 11ರಂದು ಪ್ರಧಾನಮಂತ್ರಿ ಮುಂಬಯಿಗೆ ಭೇಟಿ 

Posted On: 10 AUG 2018 5:26PM by PIB Bengaluru

2018 ರ ಆಗಸ್ಟ್ 11ರಂದು ಪ್ರಧಾನಮಂತ್ರಿ ಮುಂಬಯಿಗೆ ಭೇಟಿ 
 

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು 2018 ರ ಆಗಸ್ಟ್ 11 ರಂದು ಮುಂಬಯಿಗೆ ಭೇಟಿ ನೀಡಲಿದ್ದಾರೆ. 

ಅವರು ಮುಂಬಯಿಯ ಭಾರತೀಯ ತಂತ್ರಜ್ಞಾನ ಸಂಸ್ಥೆಯ 56 ನೇ ವಾರ್ಷಿಕ ಘಟಿಕೋತ್ಸವದಲ್ಲಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. 

ಆ ಬಳಿಕ ಪ್ರಧಾನ ಮಂತ್ರಿಗಳು ಬಾಂಬೆ ಐ.ಐ.ಟಿಯ ಇಂಧನ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಹೊಸ ಕಟ್ಟಡ ಹಾಗೂ ಪರಿಸರ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರವನ್ನು ಉದ್ಘಾಟಿಸುವರು. 



(Release ID: 1542855) Visitor Counter : 87