ಸಂಪುಟ
ಸಾರ್ವಜನಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನ ಮತ್ತು ಬೋಧಕ, ರೋಗಿಗಳು/ ಕ್ಲಿನಿಕಲ್ ಕೇರ್ ಬಲವರ್ಧನೆಗೆ ಕೇಂದ್ರ ಸಂಪುಟ ಅನುಮೋದನೆ; ಕೇಂದ್ರ ಸರ್ಕಾರ ಮತ್ತು ಕೇಂದ್ರ ಸರ್ಕಾರಿ ಸಾಮ್ಯದ ಸಂಸ್ಥೆಗಳಲ್ಲಿನ ಅನುಭವಿ ವೈದ್ಯರನ್ನು ಬೋಧನೆ/ ಕ್ಲಿನಿಕಲ್/ ಸಾರ್ವಜನಿಕ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನ ಚಟುವಟಿಕೆಗಳಿಗೆ ನಿಯೋಜಿಸುವುದು
Posted On:
27 JUN 2018 3:46PM by PIB Bengaluru
ಸಾರ್ವಜನಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನ ಮತ್ತು ಬೋಧಕ, ರೋಗಿಗಳು/ ಕ್ಲಿನಿಕಲ್ ಕೇರ್ ಬಲವರ್ಧನೆಗೆ ಕೇಂದ್ರ ಸಂಪುಟ ಅನುಮೋದನೆ; ಕೇಂದ್ರ ಸರ್ಕಾರ ಮತ್ತು ಕೇಂದ್ರ ಸರ್ಕಾರಿ ಸಾಮ್ಯದ ಸಂಸ್ಥೆಗಳಲ್ಲಿನ ಅನುಭವಿ ವೈದ್ಯರನ್ನು ಬೋಧನೆ/ ಕ್ಲಿನಿಕಲ್/ ಸಾರ್ವಜನಿಕ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನ ಚಟುವಟಿಕೆಗಳಿಗೆ ನಿಯೋಜಿಸುವುದು
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಸಾರ್ವಜನಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನ ಮತ್ತು ಬೋಧಕ, ರೋಗಿಗಳು/ಕ್ಲಿನಿಕಲ್ ಕೇರ್ ಬಲವರ್ಧನೆಗೆ ಅನುಮೋದನೆ ನೀಡಲಾಯಿತು, ಆ ಮೂಲಕ ಕೇಂದ್ರ ಸರ್ಕಾರಕ್ಕೆ ಸೇರಿದ ಮತ್ತು ಕೇಂದ್ರ ಸರ್ಕಾರಿ ಸಾಮ್ಯದ ಸಂಸ್ಥೆಗಳಲ್ಲಿರುವ ಅನುಭವಿ ವೈದ್ಯರನ್ನು ಬೋಧನೆ/ಕ್ಲಿನಿಕಲ್/ಸಾರ್ವಜನಿಕ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನ ಚಟುವಟಿಕೆಗಳಿಗೆ ನಿಯೋಜಿಸಲು ತೀರ್ಮಾನಿಸಲಾಯಿತು.
ಕೇಂದ್ರ ಆರೋಗ್ಯ ಸೇವೆಗಳ(ಸಿಎಚ್ಎಸ್) ಮತ್ತು ಇತರೆ ಸಚಿವಾಲಯಗಳು/ಇಲಾಖೆಗಳು/ಇತರೆ ಕೇಂದ್ರ ಸರ್ಕಾರಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ, 62 ವರ್ಷ ಪೂರೈಸಿರುವ ಮತ್ತು ನಿಗದಿತ ವಲಯಗಳಲ್ಲಿ ಪರಿಣಿತಿ ಸಾಧಿಸಿರುವವರ ಸೇವೆಯನ್ನು ಪಡೆಯಲು ಅನುಮೋದಿಸಲಾಯಿತು. ಈ ಕುರಿತಂತೆ 2016ರ ಜೂನ್ 15ರಂದು ಕೈಗೊಂಡಿದ್ದ ಕೇಂದ್ರ ಸಂಪುಟದ ನಿರ್ಣಯವನ್ನು ತಿದ್ದುಪಡಿ ಮಾಡಲಾಗಿದೆ. ಆ ನಿರ್ಧಾರ ಪರಿಣಾಮಕಾರಿ ಅನುಷ್ಠಾನದಲ್ಲಿ ಅಡತಡೆಗಳು ಎದುರಾದ ಹಿನ್ನೆಲೆಯಲ್ಲಿ ಅವುಗಳನ್ನು ನಿವಾರಿಸಲು ಈ ತೀರ್ಮಾನ ಕೈಗೊಳ್ಳಲಾಗಿದೆ.
ಪ್ರಮುಖ ಪರಿಣಾಮ :
ಇದರಿಂದಾಗಿ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮ ಅನುಷ್ಠಾನಕ್ಕೆ ವೈದ್ಯಕೀಯ ಶಿಕ್ಷಣ, ಕ್ಲಿನಿಕಲ್/ರೋಗಿಗಳ ರಕ್ಷಣಾ ಸೇವೆಗೆ ಹೆಚ್ಚಿನ ಅನುಭವಿ ವೈದ್ಯರು, ಕೇಂದ್ರ ಸರ್ಕಾರಿ ವೈದ್ಯರು ಲಭ್ಯವಾಗುತ್ತಾರೆ ಮತ್ತು ಇದರಿಂದ ಸಾಮರ್ಥ್ಯ ಮತ್ತು ನಾಯಕತ್ವ ವೃದ್ಧಿಯಾಗುತ್ತದೆ.
ಫಲಾನುಭವಿಗಳು:
ಈ ನಿರ್ಧಾರದಿಂದ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನ ಮತ್ತು ರೋಗಿಗಳು/ಕ್ಲಿನಿಕಲ್ ಕೇರ್ ವೈದ್ಯಕೀಯ ಬೋಧನಾ ಚಟುವಟಿಕೆಗಳಿಗೆ ಹೆಚ್ಚಿನ ಅನುಭವ ಹೊಂದಿರುವ ವೈದ್ಯರು ಲಭ್ಯವಾಗಲಿದ್ದು, ಒಟ್ಟಾರೆ ಇಡೀ ಸಮಾಜಕ್ಕೆ ಇದರಿಂದ ಅನುಕೂಲವಾಗಲಿದೆ. ಈ ಪ್ರಸ್ತಾವದ ಪ್ರಯೋಜನಗಳು ದೇಶಾದ್ಯಂತ ದೊರಕಲಿದೆ.
ಹಿನ್ನೆಲೆ :
ವೈದ್ಯರ ಕೊರತೆ ಸಮಸ್ಯೆಯನ್ನು ನೀಗಿಸಲು ಮತ್ತು ಕೇಂದ್ರ ಸರ್ಕಾರಿ ಆರೋಗ್ಯ ಸೇವೆಯಲ್ಲಿ ಹೆಚ್ಚಿನ ವೈದ್ಯರು ಸೇವೆ ತ್ಯಜಿಸುತ್ತಿರುವುದು ಮತ್ತು ಕಡಿಮೆ ವೈದ್ಯರ ಸೇರ್ಪಡೆ ಹಿನ್ನೆಲೆಯಲ್ಲಿ 2016ರ ಏಪ್ರಿಲ್ 15ರಂದು ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಕೇಂದ್ರ ಸರ್ಕಾರಿ ಸೇವೆಯಲ್ಲಿರುವ ವೈದ್ಯರ ನಿವೃತ್ತಿ ವಯಸ್ಸನ್ನು 65 ವರ್ಷಕ್ಕೆ ಹೆಚ್ಚಿಸಲಾಗಿತ್ತು. ಅಂತೆಯೇ 2017ರ ಸೆಪ್ಟೆಂಬರ್ 27ರಂದು ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಭಾರತೀಯ ರೈಲ್ವೆ, ಆಯುಷ್, ಕೇಂದ್ರೀಯ ವಿಶ್ವವಿದ್ಯಾಲಯಗಳು ಮತ್ತಿತರ ಕೇಂದ್ರ ಸಚಿವಾಲಯಗಳು/ಇಲಾಖೆಗಳ ಅಡಿಯಲ್ಲಿ ಕಾರ್ಯನಿರ್ವಹಿಸುವ ವೈದ್ಯರ ನಿವೃತ್ತಿ ವಯಸ್ಸನ್ನು 65 ವರ್ಷಕ್ಕೆ ಹೆಚ್ಚಳ ಮಾಡಲಾಯಿತು. ಇದಲ್ಲದೆ ಸಾರ್ವಜನಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನ ಚಟುವಟಿಕೆಗಳು /ವೈದ್ಯಕೀಯ ಕಾಲೇಜುಗಳಲ್ಲಿನ ಬೋಧಕ ಸಿಬ್ಬಂದಿ/ ರೋಗಿಗಳ ರಕ್ಷಣೆ ಮತ್ತು ಕ್ಲಿನಿಕಲ್ ಸೇವೆ ಸೇರಿದಂತೆ ಮೂಲ ವೈದ್ಯಕೀಯ ವೃತ್ತಿಗೆ 62 ವರ್ಷ ಪೂರ್ಣಗೊಳಿಸಿರುವ ಹಿರಿಯ ವೈದ್ಯರ ಸೇವೆ ಅಗತ್ಯತೆ ಎಂಬುದನ್ನು ಮನಗಂಡು ಈ ನಿರ್ಧಾರ ಕೈಗೊಳ್ಳಲಾಯಿತು.
*************
(Release ID: 1537168)
Visitor Counter : 107