ಪ್ರಧಾನ ಮಂತ್ರಿಯವರ ಕಛೇರಿ

ದೇಶಾದ್ಯಂತ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳ ಜೊತೆ ವೀಡಿಯೋ ಸೇತುವೆ ಮೂಲಕ ಪ್ರಧಾನ ಮಂತ್ರಿ ಸಂವಾದ

Posted On: 05 JUN 2018 2:33PM by PIB Bengaluru

ದೇಶಾದ್ಯಂತ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳ ಜೊತೆ ವೀಡಿಯೋ ಸೇತುವೆ ಮೂಲಕ ಪ್ರಧಾನ ಮಂತ್ರಿ ಸಂವಾದ 
 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೇಶವ್ಯಾಪ್ತಿ ಪ್ರಧಾನ ಮಂತ್ರಿ ಆವಾಸ್ ಯೋಜನಾ ಫಲಾನುಭವಿಗಳ ಜೊತೆ ವೀಡಿಯೋ ಸೇತುವೆ ಮೂಲಕ ಸಂವಾದ ನಡೆಸಿದರು. ಸರಕಾರಿ ಯೋಜನೆಗಳ ವಿವಿಧ ಫಲಾನುಭವಿಗಳ ಜೊತೆ ವೀಡಿಯೋ ಸೇತುವೆ ಮೂಲಕ ಪ್ರಧಾನ ಮಂತ್ರಿಗಳು ನಡೆಸುತ್ತಿರುವ ಸರಣಿ ಸಂವಾದದಲ್ಲಿ ಇದು ಮೂರನೇಯದಾಗಿದೆ.

ದೇಶ ವ್ಯಾಪ್ತಿ ವೀಡಿಯೋ ಸೇತುವೆ ಮೂಲಕ ಪ್ರಧಾನ ಮಂತ್ರಿ ಆವಾಸ್ ಯೋಜನಾ ಫಲಾನುಭವಿಗಳ ಜೊತೆ ಸಂವಾದ ನಡೆಸುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ ಪ್ರಧಾನ ಮಂತ್ರಿಯವರು, ಇಂತಹ ಸಂವಾದದ ಮೂಲಕ ಯೋಜನೆಯ ವಿವಿಧ ಅಂಶಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಮಾತ್ರವಲ್ಲದೆ ಸುಧಾರಣೆ ಅಗತ್ಯ ಇರುವ ವಲಯಗಳಲ್ಲಿ ಸುಧಾರಣೆಗಳನ್ನು ಜಾರಿಗೆ ತರುವುದಕ್ಕೂ ಸಾಧ್ಯವಾಗುತ್ತದೆ ಎಂದರು. ಪ್ರಧಾನ ಮಂತ್ರಿ ಯೋಜನಾ ಎಂದರೆ ಅದು ಬರೇ ಕಲ್ಲು ಮಣ್ಣಿನ ಯೋಜನೆ ಅಲ್ಲ. ಅದು ಜೀವನದ ಗುಣಮಟ್ಟವನ್ನು ವರ್ಧಿಸುವ ಮತ್ತು ಕನಸುಗಳನ್ನು ಸಾಕಾರಗೊಳಿಸುವ ಯೋಜನೆ ಎಂದೂ ಪ್ರಧಾನ ಮಂತ್ರಿಗಳು ಈ ಸಂಧರ್ಭ ಹೇಳಿದರು.

ಫಲಾನುಭವಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ಅವರು ಕಳೆದ ನಾಲ್ಕು ವರ್ಷಗಳಲ್ಲಿ ಸರಕಾರವು ಎಲ್ಲರಿಗೂ ವಸತಿ ಒದಗಿಸುವ ನಿಟ್ಟಿನಲ್ಲಿ ಆಂದೋಲನ ರೂಪದಲ್ಲಿ ಕಾರ್ಯನಿರ್ವಹಿಸಿದೆ. ಭಾರತವು ಸ್ವಾತಂತ್ರ್ಯದ 75 ನೇ ವರ್ಷ ಆಚರಿಸುವ 2022ರ ವೇಳೆಗೆ ಪ್ರತೀಯೊಬ್ಬ ಭಾರತೀಯನಿಗೂ ಮನೆ ಒದಗಿಸುವುದನ್ನು ಖಾತ್ರಿ ಪಡಿಸುವ ನಿಟ್ಟಿನಲ್ಲಿ ಸರಕಾರ ಕಾರ್ಯನಿರ್ವಹಿಸುತ್ತಿದೆ. ಎಂದೂ ಪ್ರಧಾನ ಮಂತ್ರಿಯವರು ಹೇಳಿದರು.

ಪ್ರಧಾನ ಮಂತ್ರಿ ಆವಾಸ್ ಯೋಜನಾ ಅಡಿಯಲ್ಲಿ ಸರಕಾರವು ಗ್ರಾಮೀಣ ಪ್ರದೇಶಗಳಲ್ಲಿ 3 ಕೋಟಿ ಮನೆಗಳನ್ನು ಮತ್ತು ನಗರ ಪ್ರದೇಶಗಳಲ್ಲಿ 1 ಕೋಟಿ ಮನೆಗಳನ್ನು ಕಟ್ಟಲು ಉದ್ದೇಶಿಸಿದೆ. ಸರಕಾರ ಇದುವರೆಗೆ ನಗರ ಪ್ರದೇಶಗಳಲ್ಲಿ 47 ಲಕ್ಷಕ್ಕೂ ಅಧಿಕ ಮನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಿದೆ. ಹಿಂದಿನ 10 ವರ್ಷಗಳಲ್ಲಿ ಯು.ಪಿ.ಎ. ಸರಕಾರ ಮಂಜೂರಾತಿ ನೀಡಿದ ಮನೆಗಳ ಸಂಖ್ಯೆಗೆ ಹೋಲಿಸಿದರೆ ಇದು 4 ಪಟ್ಟು ಹೆಚ್ಚಾಗಿದೆ . ಅದೇ ರೀತಿ ಗ್ರಾಮೀಣ ಪ್ರದೇಶಗಳಲ್ಲಿ 1 ಕೋಟಿಗೂ ಅಧಿಕ ಮನೆಗಳನ್ನು ಕಟ್ಟಲು ಮಂಜೂರಾತಿ ನೀಡಲಾಗಿದೆ, ಹಿಂದಿನ ಯು.ಪಿ.ಎ.ಸರಕಾರ ತನ್ನ ಕೊನೆಯ ನಾಲ್ಕು ವರ್ಷಗಳ ಅವಧಿಯಲ್ಲಿ ಮಂಜೂರು ಮಾಡಿದ 25 ಲಕ್ಷ ಮನೆಗಳಿಗೆ ಹೋಲಿಸಿದರೆ ಇದು ಬಹಳ ಹೆಚ್ಚು. ಸರಕಾರವು ಮನೆ ನಿರ್ಮಾಣ ಕಾಲಾವಧಿಯನ್ನು 18 ತಿಂಗಳಿಂದ 12 ತಿಂಗಳಿಗೆ ಇಳಿಸಲು ಸಮರ್ಥವಾಗಿದೆ, ಆ ಮೂಲಕ 6 ತಿಂಗಳ ಕಾಲಾವಧಿಯನ್ನು ಕಡಿಮೆ ಮಾಡಲಾಗಿದೆ.

ಪಿ.ಎಂ.ಎ.ವೈ. ಯಲ್ಲಿ ಸರಕಾರ ಜಾರಿಗೆ ತಂದ ಬದಲಾವಣೆಗಳನ್ನು ಒತ್ತಿ ಹೇಳಿದ ಪ್ರಧಾನ ಮಂತ್ರಿ ಅವರು ಮನೆಗಳ ವಿಸ್ತಾರವನ್ನು 20 ಚದರ ಮೀಟರಿನಿಂದ 25 ಚದರ ಮೀಟರಿಗೆ ಹೆಚ್ಚಿಸಲಾಗಿದೆ. ಯೋಜನೆಗೆ ಈ ಹಿಂದೆ ಇದ್ದ 70,000-75,000 ಸಾವಿರ ರೂ.ಗಳವರೆಗಿನ ಹಣಕಾಸು ಸಹಾಯವನ್ನು 1,25,000 ರೂ.ಗಳವರೆಗೆ ಹೆಚ್ಚಿಸಲಾಗಿದೆ ಎಂದರು.

ಸಂವಾದದ ವೇಳೆ ಪ್ರಧಾನ ಮಂತ್ರಿ ಆವಾಸ್ ಯೋಜನಾವು ನಾಗರಿಕರ ಘನತೆಯ ಜೊತೆ ನೇರ ಸಂಪರ್ಕ ಹೊಂದಿದೆ. ಮತ್ತು ಯೋಜನಾದ ಆದ್ಯತೆ ಹೆಚ್ಚು ಮಹಿಳೆಯರು, ದಿವ್ಯಾಂಗ ಸಹೋದರ, ಸಹೋದರಿಯರು, ಪರಿಶಿಷ್ಟ ವರ್ಗ, ಪರಿಶಿಷ್ಟ ಬುಡಕಟ್ಟು, ಇತರ ಹಿಂದುಳಿದ ವರ್ಗದವರು ಮತ್ತು ಅಲ್ಪ ಸಂಖ್ಯಾತ ಸಮುದಾಯಗಳಿಗೆ ವಸತಿ ಸೌಲಭ್ಯ ಒದಗಿಸುವುದಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಫಲಾನುಭವಿಗಳ ಜೊತೆ ಮಾತನಾಡುವಾಗ ಪ್ರಧಾನ ಮಂತ್ರಿಗಳು ಪಿ.ಎಂ.ಎ.ವೈ. ಎಲ್ಲರಿಗೂ ಉದ್ಯೋಗಾವಕಾಶಗಳನ್ನು ಸೃಷ್ಟಿಸಿರುವುದನ್ನು ಪ್ರಸ್ತಾಪಿಸಿದರು. ಯೋಜನೆಯನ್ನು ಬಲಪಡಿಸಲು ಮನೆಗಳನ್ನು ತ್ವರಿತವಾಗಿ ಮತ್ತು ಗುಣಮಟ್ಟದಲ್ಲಿ ಕಟ್ಟುವುದಕ್ಕೆ ಕೌಶಲ್ಯ ಅಭಿವೃದ್ದಿಯತ್ತಲೂ ಸರಕಾರ ಗಮನ ಹರಿಸುತ್ತಿದೆ ಎಂದವರು ಹೇಳಿದರು. ಇದರಂಗವಾಗಿ ಸರಕಾರವು ಕಲ್ಲು ಕಟ್ಟುವುದಕ್ಕೆ ಸಂಬಂಧಿಸಿ 1 ಲಕ್ಷ ಮಂದಿಗೆ ತರಬೇತಿ ಆರಂಭಿಸಿದೆ. ಇದರ ಜೊತೆಗೆ ಸರಕಾರವು ಪ್ರತೀ ರಾಜ್ಯದಲ್ಲಿಯೂ ಮಹಿಳೆಯರಿಗೂ ಕಲ್ಲು ಕಟ್ಟುವ    ತರಬೇತಿ ಆರಂಭಿಸಿದೆ, ಇದರಿಂದ ಮಹಿಳಾ ಸಶಕ್ತೀಕರಣ ಸಾಧ್ಯವಾಗುತ್ತಿದೆ ಎಂದರು.

ಪ್ರಧಾನ ಮಂತ್ರಿ ಅವರ ಜೊತೆ ಸಂವಾದ ನಡೆಸಿದ ಎಲ್ಲಾ ಫಲಾನುಭವಿಗಳು ಸ್ವಂತ ಮನೆಯ ತಮ್ಮ ಕನಸು ನನಸಾಗಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.ಇದರಿಂದ ತಮ್ಮ ಜೀವನ ಹೇಗೆ ಬದಲಾಗಿದೆ ಮತ್ತು ಜೀವನದ ಗುಣಮಟ್ಟ ಹೇಗೆ ಸುಧಾರಿಸಿದೆ ಎಂಬ ಬಗ್ಗೆ ಅವರು ವಿವರಿಸಿದರು.



(Release ID: 1535163) Visitor Counter : 55