ಪ್ರಧಾನ ಮಂತ್ರಿಯವರ ಕಛೇರಿ

ನನ್ಯಾಂಗ್ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಪ್ರಧಾನಿ ಭೇಟಿ

Posted On: 01 JUN 2018 3:09PM by PIB Bengaluru

ನನ್ಯಾಂಗ್ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಪ್ರಧಾನಿ ಭೇಟಿ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಿಂಗಪೂರದ ನನ್ಯಾಂಗ್ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದರು. 

ಅವರು ವಿದ್ಯಾರ್ಥಿಗಳೊಡನೆ ಸಂವಾದದ ವೇಳೆ ಪ್ರಶ್ನೆಗಳಿಗೆ ಉತ್ತರಿಸಿದರು. 

ಏಷ್ಯಾ 21ನೇ ಶತಮಾನದಲ್ಲಿ ಎದುರಿಸುತ್ತಿರುವ ಸವಾಲುಗಳ ಕುರಿತಂತೆ ಪ್ರಶ್ನೆಗೆ ಉತ್ತರಿಸಿದ ಪ್ರಧಾನಮಂತ್ರಿ "ನಾವು ಸದಾ ಹೇಳುತ್ತಿರುತ್ತೇವೆ 21ನೇ ಶತಮಾನ ಏಷ್ಯಾದ ಶತಮಾನವೆಂದು. ನಾವು ಮೊದಲು ನಮ್ಮ ಮೇಲೆ ನಂಬಿಕೆ ಇಡುವುದು ಅತ್ಯವಶ್ಯಕ ಮತ್ತು ಅದುನಮ್ಮ ಸರದಿ ಕೂಡ. ನಾವು ಎಂತಹುದೇ ಸಂದರ್ಭಗಳು ಎದುರಾದರೂ ಸಹ ಎದ್ದು ನಿಂತು ನಾಯಕತ್ವವಹಿಸಿಕೊಳ್ಳಬೇಕಿದೆ''ಎಂದರು. 

ಪ್ರಧಾನಿ ಅವರು ಇತ್ತೀಚೆಗೆ ತಾನು ಚೀನಾದಲ್ಲಿ ಅಲ್ಲಿನ ಅಧ್ಯಕ್ಷರಾದ ಕ್ಸಿ ಜಿನ್ಪಿಂಗ್ ಅವರೊಂದಿಗೆ ಚರ್ಚೆ ನಡೆಸಿದ್ದನ್ನು ಉಲ್ಲೇಖಿಸಿದರು. ಅಧ್ಯಕ್ಷ ಕ್ಸಿ ಅವರಿಗೆದಾಖಲೆಯೊಂದನ್ನು ನೀಡಿದ್ದೇ, ಅದರಲ್ಲಿ ಕಳೆದ 2ಸಾವಿರ ವರ್ಷಗಳ ದಾಖಲೆಗಳಲ್ಲಿ ಸುಮಾರು1600 ವರ್ಷಗಳ ಕಾಲ ಜಾಗತಿಕ ಜಿಡಿಪಿಯಲ್ಲಿ ಭಾರತ ಮತ್ತು ಚೀನಾದ ಜಂಟಿ ಪಾಲುಶೇ.50ಕ್ಕೂ ಅಧಿಕವಿತ್ತು ಮತ್ತು ಇದನ್ನು ಸಾಧಿಸಿರುವುದು ಬಹುತೇಕ ಯಾವುದೇಸಂಘರ್ಷವಿಲ್ಲದೆ ಎಂದರು. ನಾವು ಸಂಘರ್ಷವಿಲ್ಲದೆ ಸಂಪರ್ಕ ಹೆಚ್ಚಳಕ್ಕೆ ಹೆಚ್ಚಿನ ಗಮನ ಹರಿಸಬೇಕಿದೆ ಎಂದು ಪ್ರಧಾನಿ ಹೇಳಿದರು. 

ಉತ್ತಮ ಆಡಳಿತದಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆಎಂದು ಪ್ರಧಾನಿ ನುಡಿದರು. ಅದು ಸಾಮಾನ್ಯ ಜನರ ಜೀವನದಲ್ಲಿ ಸಾಕಷ್ಟು ಬದಲಾವಣೆಗಳನ್ನುತರುತ್ತಿದೆ. ಬಾಹ್ಯಾಕಾಶ ತಂತ್ರಜ್ಞಾನದಿಂದಾಗಿ ನಮ್ಮ ಅಭಿವೃದ್ಧಿ ಮೂಲಸೌಕರ್ಯಗಳನ್ನುಸೂಕ್ತವಾಗಿ ಗುರುತಿಸಲು ಸಾಧ್ಯವಾಗಿದೆ, ಅಂದರೆ ಎಲ್ಲಿ ನಮಗೆ ಹೆಚ್ಚಿನ ಶಾಲೆಗಳಅಗತ್ಯವಿದೆ, ಎಲ್ಲೆಲ್ಲಿ ಉತ್ತಮ ರಸ್ತೆಗಳನ್ನು ಮಾಡಬೇಕು ಮತ್ತು ಎಲ್ಲಿಆಸ್ಪತ್ರೆಗಳನ್ನು ಆರಂಭಿಸಬೇಕು ಎಂಬುದು ತಿಳಿಯುತ್ತದೆ ಎಂದರು. 

ಸಂಪ್ರದಾಯ ಅಥವಾ ಪರಂಪರೆ ಮತ್ತು ಜಾಗತೀಕರಣದ ನಡುವೆ ಸಮತೋಲನ ಕಾಯ್ದುಕೊಳ್ಳುವ ಕುರಿತಪ್ರಶ್ನೆಗೆ, ಪ್ರಧಾನಿ ಅವರು ಮನುಷ್ಯರು ಶತಮಾನಗಳಿಂದ ಹೊಸ ಹೊಸ ಆವಿಷ್ಕಾರ ಮತ್ತುಪುರಾಣಗಳಿಂದ ಹಾಗೂ ಮಾನವೀಯ ಮೌಲ್ಯಗಳಿಂದ ಬೆಳವಣಿಗೆ ಹೊಂದಿದ್ದಾರೆ. 

ತಂತ್ರಜ್ಞಾನಇಂದು ಮಾನವರ ಕ್ರಿಯಾಶೀಲತೆಗೆ ನೆರವು ನೀಡುತ್ತಿದೆ. ಹಲವು ಸಾಮಾಜಿಕ ಮಾಧ್ಯಮಗಳುಧ್ವನಿ ಇಲ್ಲದ ಸಹಸ್ರಾರು ಮಂದಿಗೆ ಧ್ವನಿ ನೀಡಿವೆ ಎಂದು ಹೇಳಿದರು. 

ನಾಲ್ಕನೇ ಕೈಗಾರಿಕಾ ಕ್ರಾಂತಿಯ ಈ ಸಂದರ್ಭದಲ್ಲಿ ಸಮಗ್ರ ಅಭಿವೃದ್ಧಿಯ ಕುರಿತು ಮಾತನಾಡಿದ ಪ್ರಧಾನಮಂತ್ರಿಗಳು, ಒಡೆಯುವುದು ಎಂದರೆ ನಾಶಗೊಳಿಸುವುದಲ್ಲ.ತಂತ್ರಜ್ಞಾನ ಜನರನ್ನು ಸಬಲೀಕರಣಗೊಳಿಸುತ್ತದೆ ಮತ್ತು ಆ ತಂತ್ರಜ್ಞಾನ ಆಧಾರಿತ ಸಮಾಜಸಾಮಾಜಿಕ ಅಡೆತಡೆಗಳನ್ನು ಮುರಿಯುತ್ತದೆ. ತಂತ್ರಜ್ಞಾನ ಕ್ಗೈಗೆಟುಕುವಂತೆ ಮತ್ತುಬಳಕೆದಾರರ-ಸ್ನೇಹಿಯಾಗಿರಬೇಕು ಎಂದು ಹೇಳಿದರು. ಒಂದು ಕಾಲದಲ್ಲಿ ಜನರು ಕಂಪ್ಯೂಟರ್ ಗಳೆಂದರೆ ಭಯಪಡುತ್ತಿದ್ದರು, ಆದರೆ ಅದೇ ಕಂಪ್ಯೂಟರ್ ಗಳು ನಮ್ಮ ಜೀವನ ಬದಲಾವಣೆಗೆಸಹಕರಿಸುತ್ತವೆ ಎಂದರು. 



(Release ID: 1535154) Visitor Counter : 62