ಸಂಪುಟ

ಜಿ ಎಸ್ ಎಲ್ ವಿ ಮಾರ್ಕ್-3 ಕಾರ್ಯಕ್ರಮ ಮುಂದುವರಿಕೆಗೆ ಸಂಪುಟ ಅನುಮೋದನೆ 

Posted On: 06 JUN 2018 3:21PM by PIB Bengaluru

ಜಿ ಎಸ್ ಎಲ್ ವಿ ಮಾರ್ಕ್-3 ಕಾರ್ಯಕ್ರಮ ಮುಂದುವರಿಕೆಗೆ ಸಂಪುಟ ಅನುಮೋದನೆ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಭೂಸ್ಥಾಯಿ ಉಪಗ್ರಹ ಉಡಾವಣಾ ವಾಹಕ ಮಾರ್ಕ್ - 3(ಜಿ ಎಸ್ ಎಲ್ ವಿ ಎನ್ ಕೆ - 3) ಹತ್ತು ಜಿ ಎಸ್ ಎಲ್ ವಿ ವಾಹಕಗಳನ್ನು ಹೊಂದುವ ಸುಮಾರು 4,338.20 ಕೋಟಿ ಅಂದಾಜು ವೆಚ್ಚದ ಕಾರ್ಯಕ್ರಮ ಮುಂದುವರಿಕೆ(ಒಂದನೇ ಹಂತ)ಗೆ ಅನುಮೋದನೆ ನೀಡಲಾಯಿತು. ಈ 4,338.20 ಕೋಟಿ ವೆಚ್ಚದಲ್ಲಿ ಹತ್ತು ಜಿ ಎಸ್ ಎಲ್ ವಿ ಎನ್ ಕೆ - 3 ವಾಹಕಗಳು ಅವುಗಳಿಗೆ ಪೂರಕ ವ್ಯವಸ್ಥೆ ಸೃಷ್ಟಿ, ಕಾರ್ಯಕ್ರಮ ನಿರ್ವಹಣೆ ಮತ್ತು ಉಡಾವಣಾ ಅಭಿಯಾನದ ವೆಚ್ಚವೂ ಸೇರಿವೆ. 

ಜಿ ಎಸ್ ಎಲ್ ವಿ ಮಾರ್ಕ - 3 ಕಾರ್ಯಕ್ರಮ ಮುಂದುವರಿಕೆಯಿಂದ ಮೊದಲನೇ ಹಂತದಲ್ಲಿ ಉಡಾವಣೆಯಾಗುವ ವಾಹಕಗಳಿಂದ ಸುಮಾರು 4 ಟನ್ ಸಾಮರ್ಥ್ಯದ ಸಂವಹನ ಉಪಗ್ರಹಗಳನ್ನು ಉಡಾಯಿಸುವ ಮೂಲಕ ದೇಶದ ಉಪಗ್ರಹ ಸಂವಹನ ಅಗತ್ಯತೆಗಳನ್ನು ಈಡೇರಿಸಬಹುದಾಗಿದೆ.

ಜಿ ಎಸ್ ಎಲ್ ವಿ ಎನ್ ಕೆ - 3 ಕಾರ್ಯಾಚರಣೆಯಿಂದ 4 ಟನ್ ಸಾಮರ್ಥ್ಯದ ಸಂವಹನ ಉಪಗ್ರಹಗಳ ಉಡಾವಣೆಯಲ್ಲಿ ದೇಶ ಸ್ವಾವಲಂಬಿಯಾಗಲಿದೆ ಮತ್ತು ಬಾಹ್ಯಾಕಾಶ ಮೂಲಸೌಕರ್ಯ ಸುಸ್ಥಿರ ಮತ್ತು ಬಲವರ್ಧನೆಯಾಗಲಿದೆ. ಅಲ್ಲದೆ ಉಪಗ್ರಹಗಳ ಉಡಾವಣೆಗೆ ವಿದೇಶಗಳನ್ನು ಅವಲಂಬಿಸುವುದು ತಗ್ಗಲಿದೆ.

ಜಿ ಎಸ್ ಎಲ್ ವಿ ಎನ್ ಕೆ - 3 ಕಾರ್ಯಕ್ರಮ ಮುಂದವರಿಕೆ - ಒಂದನೇ ಹಂತದಿಂದ ಸಂವಹನ ಉಪಗ್ರಹಗಳ ಅಗತ್ಯತೆಯನ್ನು ಪೂರೈಸುವ ಜತೆಗೆ ಗ್ರಾಮೀಣ ಬ್ರಾಡ್ ಬ್ಯಾಂಡ್ ಸಂಪರ್ಕ, ಡಿಟಿಎಚ್ ಟ್ರಾನ್ಸ್ ಪಾಂಡರ್ ಗಳ ಲಭ್ಯತೆ ಹೆಚ್ಚಳ, ವಿಸ್ಯಾಟ್ ಮತ್ತು ಟೆಲಿವಿಷನ್ ಪ್ರಸಾರಕರ ರಾಷ್ಟ್ರೀಯ ಬೇಡಿಕೆಯೂ ಪೂರೈಸಿದಂತಾಗುತ್ತದೆ.

ಜಿ ಎಸ್ ಎಲ್ ವಿ ಎನ್ ಕೆ - 3 ಕಾರ್ಯಕ್ರಮ ಮುಂದುವರಿಕೆ - ಒಂದನೇ ಹಂತದಿಂದ ಜಿ ಎಸ್ ಎಲ್ ವಿ ಎನ್ ಕೆ - 3 ಉಡಾವಣಾ ವಾಹಕದಿಂದ ಕಾರ್ಯಾಚರಣೆ ಆರಂಭಿಸಲಾಗುವುದು ಮತ್ತು ಅದರ ಅನುಮೋದನೆಯಿಂದಾಗಿ 2019ರಿಂದ 2024ರ ನಡುವಿನ ಅವಧಿಯಲ್ಲಿ ಉಪಗ್ರಹ ಉಡಾವಣಾ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು.

ಹಿನ್ನೆಲೆ :

ಭೂಸ್ಥಿರ ವರ್ಗಾವಣೆ ಕಕ್ಷೆಗೆ 4 ಟನ್ ಸಾಮರ್ಥ್ಯದ ಉಪಗ್ರಹಗಳನ್ನು ಉಡಾಯಿಸಲು ದೇಶೀಯ ಉಡಾವಣಾ ಸಾಮರ್ಥ್ಯವನ್ನು ಹೊಂದುವ ಸಲುವಾಗಿ ಈ ಜಿ ಎಸ್ ಎಲ್ ವಿ ಮಾರ್ಕ್ - 3 ಯೋಜನೆ ರೂಪಿಸಲಾಯಿತು. ಇದು 2014ರಲ್ಲಿ ಒಂದು ಪ್ರಾಯೋಗಿಕ ಉಡಾವಣೆ(ಎಲ್ ವಿ ಎಂ 3 - ಎಕ್ಸ್) ಯಶಸ್ವಿಯಾಗಿ ನಡೆಸಿತು ಮತ್ತು 2017ರಲ್ಲಿ ಮತ್ತೊಂದು ವಾಹಕ(ಜಿ ಎಸ್ ಎಲ್ ವಿ ಎನ್ ಕೆ - 3 - ಡಿ1) ಅಭಿವೃದ್ಧಿಪಡಿಸಿದೆ. ಈ ಒಂದನೇ ಹಂತದ ಕಾರ್ಯಕ್ರಮ ಮುಂದುವರಿಕೆಯಿಂದ 4 ಟನ್ ಸಾಮರ್ಥ್ಯದ ಸಂವಹನ ಉಪಗ್ರಹಗಳ ಉಡಾವಣೆಗೆ ಪ್ರತ್ಯೇಕ ಲಭ್ಯತೆ ಸೃಷ್ಟಿಯಾಗುವುದಲ್ಲದೆ, ಅಂತಾರಾಷ್ಟ್ರೀಯ ಮಾರುಕಟ್ಟೆ ಮತ್ತು ದೇಶೀ ಅಗತ್ಯತೆಗಳನ್ನು ಪೂರೈಸಲು ಕಡಿಮೆ ಖರ್ಚಿನಲ್ಲಿ 4 ಟನ್ ಸಾಮರ್ಥ್ಯದ ಉಪಗ್ರಹಗಳ ಉಡಾವಣಾ ವ್ಯವಸ್ಥೆಯನ್ನು ಹೊಂದಿದಂತಾಗುತ್ತದೆ. 
 

***



(Release ID: 1535142) Visitor Counter : 98