ಸಂಪುಟ

ಸುಸ್ಥಿರ ಮತ್ತು ಸ್ಮಾರ್ಟ್ ನಗರಾಭಿವೃದ್ಧಿ ವಲಯದಲ್ಲಿ ತಾಂತ್ರಿಕ ಸಹಕಾರ ಕುರಿತಂತೆ ಭಾರತ ಮತ್ತು ಡೆನ್ಮಾರ್ಕ್ ನಡುವಿನ ಒಪ್ಪಂದಕ್ಕೆ ಸಂಪುಟ ಅನುಮೋದನೆ

Posted On: 06 JUN 2018 3:27PM by PIB Bengaluru

ಸುಸ್ಥಿರ ಮತ್ತು ಸ್ಮಾರ್ಟ್ ನಗರಾಭಿವೃದ್ಧಿ ವಲಯದಲ್ಲಿ ತಾಂತ್ರಿಕ ಸಹಕಾರ ಕುರಿತಂತೆ ಭಾರತ ಮತ್ತು ಡೆನ್ಮಾರ್ಕ್ ನಡುವಿನ ಒಪ್ಪಂದಕ್ಕೆ ಸಂಪುಟ ಅನುಮೋದನೆ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಸುಸ್ಥಿರ ಮತ್ತು ಸ್ಮಾರ್ಟ್ ನಗರಾಭಿವೃದ್ಧಿ ಕ್ಷೇತ್ರದಲ್ಲಿ ಭಾರತ ಮತ್ತು ಡೆನ್ಮಾರ್ಕ್ ನಡುವೆ ತಾಂತ್ರಿಕ ಸಹಕಾರ ಕುರಿತಂತೆ ಏಪ್ರಿಲ್ 2018ರಲ್ಲಿ ಸಹಿ ಮಾಡಲಾದ ಒಪ್ಪಂದಕ್ಕೆ ಅನುಮೋದನೆ ನೀಡಲಾಯಿತು.

 

ವಿವರಗಳು :

 

       ಈ ಒಪ್ಪಂದದ ಉದ್ದೇಶವೆಂದರೆ ಸುಸ್ಥಿರ ಮತ್ತು ಸ್ಮಾರ್ಟ್ ನಗರಾಭಿವೃದ್ಧಿ ವಲಯದಲ್ಲಿ ದ್ವಿಪಕ್ಷೀಯ ಸಹಕಾರ ಸಂಬಂಧಗಳನ್ನು ಉತ್ತೇಜಿಸುವುದು. ಆ ಮೂಲಕ ಜ್ಞಾನ ವಿನಿಮಯ, ಸಾಂಸ್ಥಿಕ ಸಹಕಾರ, ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ವಾಣಿಜ್ಯ ಸಂಬಂಧಗಳ ಕುರಿತಂತೆ ಪರಸ್ಪರ ಪ್ರಯೋಜನಗಳನ್ನು ಪಡೆದುಕೊಳ್ಳುವುದಾಗಿದೆ. ಸ್ಮಾರ್ಟ್ ನಗರಾಭಿವೃದ್ಧಿ ಪರಿಹಾರಗಳು, ಜೀವನಕ್ಕೆ ಅನುಕೂಲಕರವಾದ ವಾತಾವರಣ ಸೃಷ್ಟಿ, ಸುಸ್ಥಿರ ಮತ್ತು ಸಮಗ್ರ ನಗರಾಭಿವೃದ್ಧಿ ಯೋಜನೆಗಳು, ಪುನರಾಭಿವೃದ್ಧಿ, ಭೂಬಳಕೆ ಏಕೀಕೃತ ಘನತ್ಯಾಜ್ಯ ನಿರ್ವಹಣಾ ವ್ಯವಸ್ಥೆ, ತ್ಯಾಜ್ಯದಿಂದ ಇಂಧನ, ಸುಸ್ಥಿರ ಸಾರಿಗೆ ವ್ಯವಸ್ಥೆ, ನೀರು ಮತ್ತು ಒಳಚರಂಡಿ ವ್ಯವಸ್ಥೆ, ಪರಿಣಾಮಕಾರಿ ಇಂಧನ ಬಳಕೆ, ಸಂಪನ್ಮೂಲ ಕ್ರೋಢೀಕರಣ ಮತ್ತಿತರ ವಲಯಗಳಲ್ಲಿ ಪರಸ್ಪರ ಸಹಕಾರ ನೀಡುವ ಅಂಶಗಳೂ ಈ ಒಪ್ಪಂದದಲ್ಲಿ ಸೇರಿವೆ.

 

ಅನುಷ್ಠಾನ ಕಾರ್ಯತಂತ್ರ :

 

       ಈ ಒಪ್ಪಂದದ ಚೌಕಟ್ಟಿನಡಿ ಸಹಕಾರ ನೀಡುವ ಕಾರ್ಯಕ್ರಮಗಳ ಅನುಷ್ಠಾನ ಮತ್ತು ಕಾರ್ಯತಂತ್ರ ರೂಪಿಸಲು ಜಂಟಿ ಕಾರ್ಯಕಾರಿ ತಂಡ(ಜೆ ಡಬ್ಲ್ಯೂ ಜಿ) ರಚನೆ ಮಾಡಲಾಗುವುದು. ಈ ಜಂಟಿ ಕಾರ್ಯಕಾರಿ ತಂಡ ಆಗಿಂದ್ದಾಗ್ಗೆ ಪ್ರತಿನಿಧಿಗಳು ಒಪ್ಪಿಕೊಂಡಂತೆ ಡೆನ್ಮಾರ್ಕ್ ಮತ್ತು ಭಾರತದಲ್ಲಿ ಪರ್ಯಾಯವಾಗಿ ಸಭೆಗಳನ್ನು ನಡೆಸಲಿದೆ.

ಪ್ರಮುಖ ಪರಿಣಾಮ :

 

       ಈ ಒಡಂಬಡಿಕೆ ಅನ್ವಯ ಎರಡೂ ದೇಶಗಳ ನಡುವೆ ಸುಸ್ಥಿರ ಮತ್ತು ಸ್ಮಾರ್ಟ್ ನಗರಾಭಿವೃದ್ಧಿ ವಲಯದಲ್ಲಿ ದ್ವಿಪಕ್ಷೀಯ ಸಹಕಾರ ಸಂಬಂಧವನ್ನು ಉತ್ತೇಜಿಸಲಾಗುವುದು.

 

ಪ್ರಯೋಜನಗಳು :

 

       ಈ ಒಪ್ಪಂದದಿಂದಾಗಿ ಏಕೀಕೃತ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ, ತ್ಯಾಜ್ಯದಿಂದ ಇಂಧನ, ಸುಸ್ಥಿರ ಸಾರಿಗೆ ವ್ಯವಸ್ಥೆ, ನೀರು ಮತ್ತು ಒಳಚರಂಡಿ ನಿರ್ವಹಣೆ, ಪರಿಣಾಮಕಾರಿ ಇಂಧನ ಬಳಕೆ ಮತ್ತು ಸಂಪನ್ಮೂಲ ಕ್ರೋಢೀಕರಣ ವಲಯಗಳಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ.

 

****************



(Release ID: 1535127) Visitor Counter : 85