ಸಂಪುಟ
ಭಾರತ ಮತ್ತು ರಷ್ಯಾ ನಡುವೆ ಜಂಟಿ ಅಂಚೆ ಚೀಟಿ ಪ್ರಕಟಣೆಗೆ ಸಂಪುಟ ಅನುಮೋದನೆ
Posted On:
06 JUN 2018 3:32PM by PIB Bengaluru
ಭಾರತ ಮತ್ತು ರಷ್ಯಾ ನಡುವೆ ಜಂಟಿ ಅಂಚೆ ಚೀಟಿ ಪ್ರಕಟಣೆಗೆ ಸಂಪುಟ ಅನುಮೋದನೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಭಾರತದ ಅಂಚೆ ಇಲಾಖೆ ಮತ್ತು ರಷ್ಯಾದ(ರಷ್ಯಾ ಒಕ್ಕೂಟದ ಜಂಟಿ ಅಂಚೆ-ಷೇರು ಕಂಪನಿ ಮಾರ್ಕಾ)ದ ನಡುವೆ ಜಂಟಿ ಅಂಚೆಚೀಟಿಗಳ ಬಿಡುಗಡೆ ಕುರಿತ ಒಪ್ಪಂದಕ್ಕೆ ಅನುಮೋದನೆ ನೀಡಲಾಯಿತು. ಅಂಚೆ ಚೀಟಿಗಳ ಬಿಡುಗಡೆ ಕ್ಷೇತ್ರದಲ್ಲಿ ಪರಸ್ಪರ ಪ್ರಯೋಜನವಾಗುವಂತೆ ಕಾರ್ಯಾಚರಣೆ ನಡೆಸುವುದು ಮತ್ತು ಅಂಚೆ ಸಹಕಾರವನ್ನು ಪಡೆಯುವ ಉದ್ದೇಶವಿದೆ.
ಭಾರತ ಮತ್ತು ರಷ್ಯಾ ನಡುವಿನ ಪರಸ್ಪರ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧಗಳನ್ನು ವಿಸ್ತೃತವಾಗಿ ಅರ್ಥೈಸಿಕೊಳ್ಳಬೇಕಿದೆ. ಭಾರತ ಮತ್ತು ರಷ್ಯಾ ದ್ವಿಪಕ್ಷೀಯ ಸಂಬಂಧಗಳು ಬಹುತೇಕ ಎಲ್ಲ ವಲಯಗಳಲ್ಲೂ ಗರಿಷ್ಠ ಮಟ್ಟದ ಸಹಕಾರವನ್ನು ಪಡೆದುಕೊಳ್ಳುತ್ತಿವೆ.
***
(Release ID: 1535106)
Visitor Counter : 95