ಪ್ರಧಾನ ಮಂತ್ರಿಯವರ ಕಛೇರಿ

ಮೇ 25ರಂದುಪ್ರಧಾನ ಮಂತ್ರಿ ಪಶ್ಚಿಮ ಬಂಗಾಳ ಮತ್ತು ಜಾರ್ಖಂಡಕ್ಕೆ ಭೇಟಿ.

Posted On: 24 MAY 2018 5:20PM by PIB Bengaluru

ಮೇ 25ರಂದುಪ್ರಧಾನ ಮಂತ್ರಿ ಪಶ್ಚಿಮ ಬಂಗಾಳ ಮತ್ತು ಜಾರ್ಖಂಡಕ್ಕೆ ಭೇಟಿ. 
 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮೇ 25 ರಂದು ಪಶ್ಚಿಮ ಬಂಗಾಳ ಮತ್ತು ಜಾರ್ಖಂಡಕ್ಕೆ ಭೇಟಿ ನೀಡಲಿದ್ದಾರೆ. 

ಅವರು ಶಾಂತಿ ನಿಕೇತನದಲ್ಲಿರುವ ವಿಶ್ವ ಭಾರತಿ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಭಾಗವಹಿಸುವರು. ಅವರು ಶಾಂತಿ ನಿಕೇತನದಲ್ಲಿ ಭಾರತ ಮತ್ತು ಬಾಂಗ್ಲಾದೇಶದ ನಡುವಣ ಸಾಂಸ್ಕೃತಿಕ ಬಾಂಧವ್ಯದ ಪ್ರತೀಕವಾಗಿರುವ ಬಾಂಗ್ಲಾ ದೇಶ ಭವನವನ್ನು ಉದ್ಘಾಟಿಸಲಿದ್ದಾರೆ. ಬಾಂಗ್ಲಾ ದೇಶದ ಪ್ರಧಾನ ಮಂತ್ರಿ ಶ್ರೀಮತಿ ಶೇಖ್ ಹಸೀನಾ ಅವರು ಈ ಎರಡೂ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು.

ಜಾರ್ಖಂಡದಲ್ಲಿ, ಪ್ರಧಾನ ಮಂತ್ರಿ ಭಾರತ ಸರಕಾರ ಮತ್ತು ಜಾರ್ಖಂಡ ಸರಕಾರದ ವಿವಿಧ ಕಾರ್ಯಕ್ರಮಗಳಿಗೆ ಸಿಂಧ್ರಿಯಲ್ಲಿ ಶಿಲಾನ್ಯಾಸ ಮಾಡುವರು. ಇದರಲ್ಲಿ ಈ ಕೆಳಗಿನ ಯೋಜನೆಗಳು ಸೇರಿವೆ.:

-ಹಿಂದೂಸ್ಥಾನ ಉರ್ವರಕ್ ಮತ್ತು ರಸಾಯನ ಲಿಮಿಟೆಡ್ ನ ಸಿಂಧ್ರಿ ರಸಗೊಬ್ಬರ ಯೋಜನೆಯ ಪುನಃಶ್ಚೇತನ.

-ಗೈಲ್ (GAIL) ನ ರಾಂಚಿ ನಗರಕ್ಕೆ ಅನಿಲ ವಿತರಿಸುವ ಯೋಜನೆ.

-ದಿಯೋಘರ್ ನಲ್ಲಿ ಅಖಿಲ ಭಾರತ ವೈದ್ಯ ವಿಜ್ಞಾನಗಳ ಸಂಸ್ಥೆ (ಎ.ಐ.ಐ.ಎಂ.ಎಸ್.)

-ದಿಯೋಘರ್ ವಿಮಾನ ನಿಲ್ದಾಣದ ಅಭಿವೃದ್ಧಿ 

-ಪತ್ರತು ಸೂಪರ್ ಉಷ್ಣ ವಿದ್ಯುತ್ ಯೋಜನೆ (3x800 ಮೆ.ವಾ.) 

ಅವರು ಜನೌಷಧಿ ಕೇಂದ್ರಗಳ ತಿಳುವಳಿಕಾ ಒಪ್ಪಂದಗಳ ವಿನಿಮಯವನ್ನು ಸಾಕ್ಷೀಕರಿಸುವರು.

ಪ್ರಧಾನ ಮಂತ್ರಿಗಳು ಸಮಾರಂಭವನ್ನುದ್ದೇಶಿಸಿ ಮಾತನಾಡುವರು.

ಬಳಿಕ ಪ್ರಧಾನ ಮಂತ್ರಿಯವರು ಜಾರ್ಖಂಡ ಮತ್ತು ರಾಂಚಿಯ ಅಭಿವೃದ್ಧಿ ಆಶಯದ ಜಿಲ್ಲೆಗಳ ಜಿಲ್ಲಾ ಕಲೆಕ್ಟರ್ ಗಳ ಜತೆ ಸಂವಾದ ಮಾಡುವರು.
 

****



(Release ID: 1533477) Visitor Counter : 64