ಸಂಪುಟ

ಭಾರತ ಮತ್ತು ಡೆನ್ಮಾರ್ಕ್ ನಡುವೆ ಆಹಾರ ಸುರಕ್ಷೆ ಸಹಕಾರ ಕುರಿತ ತಿಳುವಳಿಕಾ ಒಡಂಬಡಿಕೆಗೆ ಸಂಪುಟ ಅನುಮೋದನೆ.

Posted On: 23 MAY 2018 3:55PM by PIB Bengaluru

ಭಾರತ ಮತ್ತು ಡೆನ್ಮಾರ್ಕ್ ನಡುವೆ ಆಹಾರ ಸುರಕ್ಷೆ ಸಹಕಾರ ಕುರಿತ ತಿಳುವಳಿಕಾ ಒಡಂಬಡಿಕೆಗೆ ಸಂಪುಟ ಅನುಮೋದನೆ. 
 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಭಾರತ ಮತ್ತು ಡೆನ್ಮಾರ್ಕ್ ನಡುವೆ ಆಹಾರ ಸುರಕ್ಷಾ ಕ್ಷೇತ್ರದಲ್ಲಿ ಸಹಕಾರ ಕುರಿತಂತೆ ಏರ್ಪಟ್ಟ ತಿಳುವಳಿಕಾ ಒಡಂಬಡಿಕೆಗೆ ಪೂರ್ವಾನ್ವಯಗೊಂಡಂತೆ ಅನುಮೋದನೆ ನೀಡಿತು. ಈ ತಿಳುವಳಿಕಾ ಒಡಂಬಡಿಕೆಗೆ 2018 ರ ಏಪ್ರಿಲ್ 16 ರಂದು ಸಹಿ ಹಾಕಲಾಗಿತ್ತು.

ಲಾಭಗಳು:

ಆಹಾರ ಸುರಕ್ಷೆಗೆ ಸಂಬಂಧಿಸಿ ಉಭಯ ದೇಶಗಳಲ್ಲಿ ಸಾಮರ್ಥ್ಯ ವರ್ಧನೆ , ದ್ವಿಪಕ್ಷೀಯ ಸಹಕಾರ ಮತ್ತು ಪರಸ್ಪರ ತಿಳುವಳಿಕೆ ಮತ್ತು ವಿಶ್ವಾಸ ವರ್ಧನೆಗೆ ಈ ತಿಳುವಳಿಕಾ ಒಡಂಬಡಿಕೆ ಸಹಾಯ ಮಾಡಲಿದೆ. ಇದಲ್ಲದೆ ಆಹಾರ ಸುರಕ್ಷಾ ಕ್ಷೇತ್ರದಲ್ಲಿ ಉತ್ತಮ ವಿಧಾನಗಳನ್ನು ತಿಳಿದುಕೊಳ್ಳಲು ಮತ್ತು ಆಹಾರ ಸುರಕ್ಷೆಗೆ ಸಂಬಂಧಿಸಿದ ವಿಷಯಗಳನ್ನು ತ್ವರಿತವಾಗಿ ಬಗೆಹರಿಸಿಕೊಳ್ಲಲು ಎರಡೂ ದೇಶಗಳಿಗೆ ಅನುಕೂಲತೆಗಳನ್ನು ಒದಗಿಸಲಿದೆ.

ಪ್ರಮುಖ ಆಹಾರ ಸರಕುಗಳ ವ್ಯಾಪಾರ ವಹಿವಾಟಿಗೆ ಸಂಬಂಧಿಸಿದ ಉತ್ತಮ ವಿಧಾನಗಳನ್ನು ತಿಳಿದುಕೊಳ್ಳುವ ಮೂಲಕ ಈ ತಿಳುವಳಿಕಾ ಒಡಂಬಡಿಕೆ ಆಹಾರ ಸುರಕ್ಷಾ ಮಾನದಂಡಗಳನ್ನು ನಿಗದಿ ಮಾಡಲು ಮತ್ತು ಸುಧಾರಿಸಲು ಸಹಾಯ ಮಾಡಲಿದೆ, ಮತ್ತು ಆಹಾರ ವ್ಯಾಪಾರೋದ್ಯಮ ಬೆಳವಣಿಗೆಗೆ ನೆರವಾಗಲಿದೆ.



(Release ID: 1533331) Visitor Counter : 65