ಸಂಪುಟ
ಜೈವಿಕ ಇಂಧನ ರಾಷ್ಟ್ರೀಯ ನೀತಿ -2018ಕ್ಕೆ ಸಂಪುಟದ ಅನುಮೋದನೆ
Posted On:
16 MAY 2018 3:25PM by PIB Bengaluru
ಜೈವಿಕ ಇಂಧನ ರಾಷ್ಟ್ರೀಯ ನೀತಿ -2018ಕ್ಕೆ ಸಂಪುಟದ ಅನುಮೋದನೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಜೈವಿಕ ಇಂಧನದ ರಾಷ್ಟ್ರೀಯ ನೀತಿ -2018ಕ್ಕೆ ತನ್ನ ಅನುಮೋದನೆ ನೀಡಿದೆ.
ಪ್ರಮುಖ ಅಂಶಗಳು:
- ಈ ನೀತಿಯು ಜೈವಿಕ ಇಂಧನವನ್ನು "ಮೂಲಭೂತ ಜೈವಿಕ ಇಂಧನಗಳು" ಎಂದು ವರ್ಗೀಕರಿಸುತ್ತದೆ. ಅಂದರೆ, ಪ್ರಥಮ ಪೀಳಿಗೆಯ (1 ಜಿ) ಜೈವಿಕ ಎಥನಾಲ್ ಮತ್ತು ಜೈವಿಕ ಡೀಸೆಲ್ ಮತ್ತು "ಮುಂದುವರಿದ ಜೈವಿಕ ಇಂಧನಗಳು" - ಎರಡನೇ ಪೀಳಿಗೆ (2 ಜಿ) ಎಥೆನಾಲ್,ಮುನ್ಸಿಪಲ್ ಘನ ತ್ಯಾಜ್ಯ (ಎಂಎಸ್.ಡಬ್ಲ್ಯೂ) ಇಂಧನಗಳಿಂದ ಡ್ರಾಪ್-ಇನ್ ಇಂಧನ, ಮೂರನೇ ಪೀಳಿಗೆ (3 ಜಿ) ಜೈವಿಕ ಇಂಧನಗಳು,ಜೈವಿಕ ಸಿಎನ್.ಜಿ. ಇತ್ಯಾದಿ.ಪ್ರತಿ ವರ್ಗದ ಅಡಿಯಲ್ಲಿ ಸೂಕ್ತ ಹಣಕಾಸು ವಿಸ್ತರಣೆ ಮತ್ತು ಹಣಕಾಸಿನ ಪ್ರೋತ್ಸಾಹಕ್ಕೆ ಅನುವು ಮಾಡುತ್ತದೆ.
- ಕಬ್ಬಿನ ಹಾಲು,ಶುಗರ್ ಬೀಟ್, ಸ್ವೀಟ್ ಜೋರ್ಗಮ್ ನಂಥ ಸಕ್ಕರೆ ಒಳಗೊಂಡ ವಸ್ತುಗಳು, ಗಂಜಿಯುಳ್ಳ ವಸ್ತು ಅಂದರೆ ಜೋಳದಕಾಳು, ಕೆಸವ, ಹಾಳಾದ ಆಹಾರ ಧಾನ್ಯಗಳು ಅಂದರೆ ಗೋಧಿ, ಒಡೆದ ಅಕ್ಕಿ, ಕೊಳೆತ ಆಲೂಗಡ್ಡೆಯಂಥ ಮಾನವನ ಬಳಕೆಗೆ ಸೂಕ್ತವಲ್ಲದ್ದನ್ನು ಎಥನಾಲ್ ಉತ್ಪಾದನೆಗೆ ಕಚ್ಚಾವಸ್ತುವಾಗಿ ಬಳಸಲು ಈ ನೀತಿ ವ್ಯಾಪ್ತಿ ವಿಸ್ತರಿಸುತ್ತದೆ.
iii. ಅಧಿಕ ಉತ್ಪಾದನೆ ಆದ ಸಂದರ್ಭದಲ್ಲಿ ರೈತರು ತಮ್ಮ ಬೆಳೆಗೆ ಸೂಕ್ತ ಬೆಲೆಯನ್ನು ಪಡೆಯದ ಅಪಾಯ ಎದುರಿಸುತ್ತಾರೆ. ಇದನ್ನು ಗಣನೆಗೆ ತೆಗೆದುಕೊಂಡಿರುವ ನೀತಿ, ಅಧಿಕವಾದ ಆಹಾರ ಧಾನ್ಯವನ್ನು ರಾಷ್ಟ್ರೀಯ ಜೈವಿಕ ಇಂಧನ ಸಮನ್ವಯ ಸಮಿತಿಯ ಅನುಮತಿಯೊಂದಿಗೆ ಪೆಟ್ರೋಲ್ ನೊಂದಿಗೆ ಸೇರಿಸುವ ಎಥನಾಲ್ ಉತ್ಪಾದನೆಗೆ ಬಳಸಲು ಅವಕಾಶ ನೀಡುತ್ತದೆ
- ಮುಂದುವರಿದ ಜೈವಿಕ ಇಂಧನದ ಮೇಲಿನ ವಿಶ್ವಾಸದೊಂದಿಗೆ, ಈ ನೀತಿಯು 1 ಜಿ ಜೈವಿಕ ಇಂಧನಕ್ಕೆ ಹೋಲಿಸಿದಲ್ಲಿ 2 ಜಿ ಎಥನಾಲ್ ಜೈವಿಕ ಸಂಸ್ಕರಣೆ ಘಟಕಗಳಿಗೆ ಹೆಚ್ಚುವರಿ ತೆರಿಗೆ ಪ್ರೋತ್ಸಾಹಕ ಮತ್ತು ಹೆಚ್ಚಿನ ಖರೀದಿ ದರದ ಜೊತೆಗೆ 6 ವರ್ಷಗಳ ಅವಧಿಯ 5000 ಕೋಟಿ ರೂಪಾಯಿಗಳ ಸಿಂಧುತ್ವದ ಹಣಕಾಸು ನೆರವು ಯೋಜನೆಯನ್ನು ಸೂಚಿಸುತ್ತದೆ.
- ಈ ನೀತಿಯು ಖಾದ್ಯವಲ್ಲದ ಎಣ್ಣೆಕಾಳುಗಳಿಂದ ಬಳಕೆ ಮಾಡಲಾದ ಖಾದ್ಯ ತೈಲ, ಅಲ್ಪಾವಧಿ ಬೆಳೆಗಳಿಂದ ಜೈವಿಕ ಇಂಧನ ಉತ್ಪಾದನೆಗೆ ಪೂರೈಕೆ ಸರಪಳಿಯ ವ್ಯವಸ್ಥೆಯನ್ನು ಸ್ಥಾಪಿಸಲು ಉತ್ತೇಜನ ನೀಡುತ್ತದೆ.
- ಜೈವಿಕ ಇಂಧನಗಳಿಗೆ ಸಂಬಂಧಪಟ್ಟ ಎಲ್ಲಾ ಸಂಬಂಧಿತ ಸಚಿವಾಲಯ/ ಇಲಾಖೆಗಳ ಪಾತ್ರಗಳು ಮತ್ತು ಜವಾಬ್ದಾರಿಗಳ ಪ್ರಯತ್ನಗಳ ಸಂಯೋಜನೆಯನ್ನು ರೂಪಿಸಲು ನೀತಿಯ ದಸ್ತಾವೇಜಿನಲ್ಲಿ ಸೇರಿಸಲಾಗಿದೆ.
ನಿರೀಕ್ಷಿತ ಪ್ರಯೋಜನಗಳು:
- ಆಮದಿನ ಅವಲಂಬನೆ ತಗ್ಗಿಸುತ್ತದೆ: ಒಂದು ಕೋಟಿ ಲೀಟರ್ ಇ-10 ಪ್ರಸಕ್ತ ದರದಲ್ಲಿ 28 ಕೋಟಿ ರೂಪಾಯಿ ವಿದೇಶಿ ವಿನಿಮಯ ಉಳಿತಾಯ ಮಾಡುತ್ತದೆ. 2017-18ನೇ ಎಥನಾಲ್ ಪೂರೈಕೆ ವರ್ಷವು 150 ಕೋಟಿ ಲೀಟರ್ ಎಥನಾಲ್ ಪೂರೈಕೆಯನ್ನು ಕಂಡಿದೆ, ಇದರಿಂದಾಗಿ 4000 ಕೋಟಿ ರೂಪಾಯಿಗಳ ವಿದೇಶೀ ವಿನಿಮಯ ಉಳಿದಿದೆ.
- ಶುದ್ಧ ಪರಿಸರ: ಒಂದು ಕೋಟಿ ಲೀಟರ್ ಇ 10 ಸುಮಾರು 20000 ಟನ್ ಸಿಓ2 ತ್ಯಾಜ್ಯವನ್ನು ಉಳಿಸುತ್ತದೆ. 2017-18ರ ಎಥನಾಲ್ ಪೂರೈಕೆ ವರ್ಷದಲ್ಲಿ ಸಿಓ2ನ ಹೊರಸೂಸುವಿಕೆ 30 ಲಕ್ಷ ಟನ್ ವರೆಗೆ ಕಡಿಮೆಯಾಗಿದೆ. ಬೆಳೆ ಸುಡುವುದನ್ನು ತಗ್ಗಿಸಿದ ಮತ್ತು ಕೃಷಿ ತ್ಯಾಜ್ಯವನ್ನು ಮತ್ತು ಕಳೆಯನ್ನು ಜೈವಿಕ ಇಂಧನವಾಗಿ ಪರಿವರ್ತಿಸಿದ ಫಲವಾಗಿ ಹಸಿರು ಮನೆ ಅನಿಲದ ಹೊರಸೂಸುವಿಕೆಯೂ ತಗ್ಗಿದೆ.
- ಆರೋಗ್ಯದ ಪ್ರಯೋಜನಗಳು: ದೀರ್ಘಕಾಲದವರೆಗೆ ಬಳಿಸಿದ ಖಾದ್ಯ ತೈಲವನ್ನೇ ಆಹಾರ ತಯಾರಿಕೆಗೆ ಅದರಲ್ಲೂ ಕರೆಯುವುದಕ್ಕೆ ಬಳಸುವುದರಿಂದ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಮತ್ತು ಇದು ಹಲವು ಕಾಯಿಲೆಗಳಿಗೆ ಕಾರಣವಾಗುತ್ತದೆ. ಬಳಸಿದ ಖಾದ್ಯ ತೈಲ ಜೈವಿಕ ಇಂಧನಕ್ಕೆ ಉತ್ತಮ ಸಾಮಗ್ರಿಯಾಗಿದೆ ಮತ್ತು ಇದರ ಬಳಕೆಯು ಆಹಾರ ಕೈಗಾರಿಕೆಯಲ್ಲಿ ಬಳಸಿದ ಅಡುಗೆ ಅನಿಲದ ಮರು ಬಳಕೆಯನ್ನು ತಡೆಯುತ್ತದೆ.
- ಎಂ.ಎಸ್.ಡಬ್ಯ್ಲು ಮ್ಯಾನೇಜ್ಮೆಂಟ್: ಭಾರತದಲ್ಲಿ ವಾರ್ಷಿಕ 62 ಎಂ.ಎಂ.ಟಿ. ಮುನಿಸಿಫಲ್ ಘನ ತ್ಯಾಜ್ಯ ಉತ್ಪತ್ತಿ ಆಗುತ್ತದೆ ಎಂದು ಅಂದಾಜು ಮಾಡಲಾಗಿದೆ. ಈ ತ್ಯಾಜ್ಯವನ್ನು, ಪ್ಲಾಸ್ಟಿಕ್/ತ್ಯಾಜ್ಯವನ್ನು ಇಂಧನವಾಗಿ ಪರಿವರ್ತಿಸುವ ತಂತ್ರಜ್ಞಾನ ಲಭ್ಯವಿದೆ. ಇಂಥ ಒಂದು ಟನ್ ತ್ಯಾಜ್ಯ ಸುಮಾರು ಶೇ.20ರಷ್ಟು ಹನಿ ಇಂಧನ ಮಾಡಬಲ್ಲುದಾಗಿದೆ.
- ಗ್ರಾಮೀಣ ಪ್ರದೇಶಗಳಲ್ಲಿ ಮೂಲಸೌಕರ್ಯ ಹೂಡಿಕೆ: ಒಂದು 100 ಕೆಎಲ್ಪಿಡಿ ಜೈವಿಕ ಸಂಸ್ಕರಣಾಗಾರಕ್ಕೆ800 ಕೋಟಿ ರೂಪಾಯಿ ಬಂಡವಾಳ ಹೂಡಿಕೆಯ ಅಗತ್ಯವಿದೆ ಎಂದು ಅಂದಾಜು ಮಾಡಲಾಗಿದೆ. ಪ್ರಸ್ತುತ ತೈಲ ಮಾರುಕಟ್ಟೆ ಕಂಪನಿಗಳು 12 2 ಜಿ ಜೈವಿಕ ಸಂಸ್ಕರಣಾ ಘಟಕಗಳನ್ನು 10,000 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಥಾಪಿಸುವ ಪ್ರಕ್ರಿಯೆಯಲ್ಲಿವೆ. ಅಲ್ಲದೆ 2 ಜಿ ಜೈವಿಕ ಸಂಸ್ಕರಣಾ ಘಕಕದ ಜೊತೆಗೆ ದೇಶದಾದ್ಯಂತ ಗ್ರಾಮೀಣ ಮೂಲಸೌಕರ್ಯದಲ್ಲಿ ಹೂಡಿಕೆ ಹರಿದು ಬರಲಿದೆ.
- ಉದ್ಯೋಗ ಸೃಷ್ಟಿ: ಒಂದು 100 ಕೆಎಲ್ಪಿಡಿ 2 ಜಿ ಜೈವಿಕ ಸಂಸ್ಕರಣೆ ಘಟಕವು 1200 ಘಟಕ ಕಾರ್ಯಾಚರಣೆ ಉದ್ಯೋಗ ಸೃಷ್ಟಿಗೆ ಕೊಡುಗೆ ನೀಡುತ್ತದೆ, ಗ್ರಾಮೀಣ ಮಟ್ಟದಲ್ಲಿ ಉದ್ಯಮಶೀಲರು ಮತ್ತು ಪೂರೈಕೆ ಸರಪಣಿ ವ್ಯವಸ್ಥೆಯನ್ನೂ ರೂಪಿಸುತ್ತದೆ.
- ರೈತರಿಗೆ ಹೆಚ್ಚುವರಿ ಆದಾಯ: 2 ಜಿ ತಂತ್ರಜ್ಞಾನ ಅಳವಡಿಸಿಕೊಳ್ಳುವುದರಿಂದ ರೈತರು ಸಾಮಾನ್ಯವಾಗಿ ಸುಟ್ಟು ಹಾಕುತ್ತಿದ್ದ ಕೃಷಿ ತ್ಯಾಜ್ಯ ಮತ್ತು ಕಳೆಗಳನ್ನು ಎಥನಾಲ್ ಆಗಿ ಪರಿವರ್ತಿಸಬಹುದಾಗಿದೆ ಮತ್ತು ಮಾರುಕಟ್ಟೆ ಅಭಿವೃದ್ಧಿ ಸಾಧಿಸಿದರೆ ಇದು ಅವರಿಗೆ ಹಣ ತರುವ ಮೂಲವಾಗಲಿದೆ. ಜೊತೆಗೆ ಅಧಿಕ ಬೆಳೆ ಬಂದ ಸಂದರ್ಭದಲ್ಲಿ ರೈತರಿಗೆ ತಮ್ಮ ಬೆಳೆಗೆ ಸೂಕ್ತ ದರ ಸಿಗದ ಅಪಾಯವೂ ಇದೆ. ಹೀಗಾಗಿ ಹೆಚ್ಚುವರಿ ಧಾನ್ಯ ಮತ್ತು ಕೃಷಿ ಜೈವಿಕ ಗೊಬ್ಬರವನ್ನು ಪರಿವರ್ತಿಸುವುದು ಬೆಲೆ ಸ್ಥಿರತೆಗೂ ನೆರವಾಗಲಿದೆ.
ಹಿನ್ನೆಲೆ:
ದೇಶದಲ್ಲಿ ಜೈವಿಕ ಇಂಧನ ಉತ್ತೇಜಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಜೈವಿಕ ಇಂಧನ ನೀತಿಯನ್ನು ಹೊಸ ಹಾಗೂ ನವೀಕರಿಸಬಹುದಾದ ಇಂಧನ ಸಚಿವಾಲಯವು 2009ರಲ್ಲಿ ರೂಪಿಸಿತು. ಜಾಗತಿಕವಾಗಿ, ಜೈವಿಕ ಇಂಧನ ಕಳೆದ ದಶಕದಲ್ಲಿ ಗಮನ ಸೆಳೆಯಿತು ಮತ್ತು ಜೈವಿಕ ಇಂಧನ ಕ್ಷೇತ್ರದ ಅಭಿವೃದ್ಧಿಯ ವೇಗವನ್ನು ಕಾಯ್ದುಕೊಂಡಿತು. ಭಾರತದಲ್ಲಿ ಜೈವಿಕ ಇಂಧನಗಳು ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಹೊಂದಿವೆ,ಉದಾಹರಣೆಗೆ, ಮೇಕ್ ಇನ್ ಇಂಡಿಯಾ ಸ್ವಚ್ಛ ಭಾರತ ಅಭಿಯಾನ, ಕೌಶಲ್ಯಾಭಿವೃದ್ಧಿ ಉಪಕ್ರಮಗಳು ಮತ್ತು ರೈತರ ವರಮಾನ ಹೆಚ್ಚಳ,ಆಮದು ಕಡಿತ, ಉದ್ಯೋಗಗಳ ದುಪ್ಪಟ್ಟು, ತ್ಯಾಜ್ಯದಿಂದ ಸಂಪತ್ತು ಸೃಷ್ಟಿಯ ಮಹತ್ವಾಕಾಂಕ್ಷೆಯ ಗುರಿಗಳೊಂದಿಗೆ ಸಂಯೋಜಿಸಲು ಉತ್ತಮ ಅವಕಾಶವನ್ನು ನೀಡುತ್ತದೆ. ಭಾರತದಲ್ಲಿ ಜೈವಿಕ ಜೈವಿಕ ಇಂಧನ ಉತ್ಪಾದನೆಗೆ ದೇಶೀಯವಾಗಿ ಕಚ್ಚಾ ಸಾಮಗ್ರಿಯ ಸುಸ್ಥಿರ ಮತ್ತು ಅಗತ್ಯ ಪ್ರಮಾಣದ ಅಲಭ್ಯತೆಯಿಂದಾಗಿ ಇಂಧನ ಕಾರ್ಯಕ್ರಮಕ್ಕೆ ದೊಡ್ಡ ಪರಿಣಾಮವಾಗಿದ್ದು, ಇದನ್ನು ಪರಿಹರಿಸುವುದು ಅಗತ್ಯವಾಗಿದೆ.
****
(Release ID: 1532757)
Visitor Counter : 99