ಸಂಪುಟ

ಮೆಟ್ರೋ ಸಂಪರ್ಕಕ್ಕೆ ಚೈತನ್ಯ ಉತ್ತರ ಪ್ರದೇಶದ ನೋಯಿಡಾ ಸಿಟಿ ಸೆಂಟರ್ ನಿಂದ ನೋಯಿಡಾದ ಸೆಕ್ಟಾರ್ 62ರವರೆಗೆ ದೆಹಲಿ ಮೆಟ್ರೋ ಕಾರಿಡಾರ್ ವಿಸ್ತರಣೆಗೆ ಸಂಪುಟದ ಅನುಮೋದನೆ

Posted On: 16 MAY 2018 3:35PM by PIB Bengaluru

ಮೆಟ್ರೋ ಸಂಪರ್ಕಕ್ಕೆ ಚೈತನ್ಯ 

ಉತ್ತರ ಪ್ರದೇಶದ ನೋಯಿಡಾ ಸಿಟಿ ಸೆಂಟರ್ ನಿಂದ ನೋಯಿಡಾದ ಸೆಕ್ಟಾರ್ 62ರವರೆಗೆ ದೆಹಲಿ ಮೆಟ್ರೋ ಕಾರಿಡಾರ್ ವಿಸ್ತರಣೆಗೆ ಸಂಪುಟದ ಅನುಮೋದನೆ 
 

ನೋಯಿಡಾದಲ್ಲಿ ಸಾರ್ವಜನಿಕ ಸಾರಿಗೆ ಮೂಲಸೌಕರ್ಯಕ್ಕೆ ಬೃಹತ್ ಉತ್ತೇಜನ ನೀಡುವ ನಿಟ್ಟಿನಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ದೆಹಲಿ ಮೆಟ್ರೋ ಕಾರಿಡಾರ್ ಅನ್ನು ನೋಯಿಡಾ ಸಿಟಿ ಸೆಂಟರ್ ನಿಂದ ಉತ್ತರ ಪ್ರದೇಶಧ ನೋಯಿಡಾ ಸೆಕ್ಟರ್ 62ರವರೆಗೆ ಸುಮಾರು 6.675 ಕಿ.ಮೀ ವಿಸ್ತರಣೆ ಮಾಡಲು ತನ್ನ ಅನುಮೋದನೆ ನೀಡಿದೆ. ಈ ಯೋಜನೆ ಪೂರ್ಣಗೊಳ್ಳುವತನಕ ಒಟ್ಟು ವೆಚ್ಚ 1967 ಕೋಟಿ ರೂಪಾಯಿಗಳಾಗಿದೆ. ಅನುದಾನ, ಅಧಿನ ಸಾಲದ ಫಲವಾಗಿ ಇದರಲ್ಲಿ ಭಾರತ ಸರ್ಕಾರದ ಹೊಣೆ 340.60 ಕೋಟಿ ರೂಪಾಯಿಗಳಾಗಿವೆ.

ವಿವರಗಳು:

i. ದೆಹಲಿ ಮೆಟ್ರೋ ಕಾರಿಡಾರ್ ಅನ್ನು ನೋಯಿಡಾ ಸಿಟಿ ಸೆಂಟರ್ ನಿಂದ ಉತ್ತರ ಪ್ರದೇಶಧ ನೋಯಿಡಾ ಸೆಕ್ಟರ್ 62ರವರೆಗೆ 6.675 ಕಿ.ಮೀ ವಿಸ್ತರಣೆಗೆ ಅನುಮೋದನೆ.

ii. ಈ ಯೋಜನೆ ಪೂರ್ಣಗೊಳ್ಳುವತನಕ ಒಟ್ಟು ವೆಚ್ಚ 1967 ಕೋಟಿ ರೂಪಾಯಿ.

iii. ಯೋಜನೆಯನ್ನು ಭಾರತ ಸರ್ಕಾರದ ಮತ್ತು ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶ ಸರ್ಕಾರದ ಹಾಲಿ ಇರುವ ವಿಶೇಷ ಉದ್ದೇಶದ ವಾಹಕ (ಎಸ್.ಪಿ.ವಿ.) ದೆಹಲಿ ಮೆಟ್ರೋ ರೈಲು ನಿಗಮ ನಿಯಮಿ(ಡಿಎಂಆರ್.ಸಿ)ತ ಅನುಷ್ಠಾನಗೊಳಿಸುತ್ತದೆ,

iv. ಈ ಯೋಜನೆಯು ಕಾಲಕಾಲಕ್ಕೆ ತಿದ್ದುಪಡಿಯಾಗಿರುವ ಕೇಂದ್ರೀಯ ಮೆಟ್ರೋ ಕಾಯಿದೆಗಳು, ಮೆಟ್ರೋ ರೈಲುಗಳು (ನಿರ್ಮಾಣ ಮತ್ತು ಕಾಮಗಾರಿ) ಕಾಯಿದೆ, 1978 ಮತ್ತು ಮೆಟ್ರೋ ರೈಲುಗಳ (ಕಾರ್ಯಾಚರಣೆ ಮತ್ತು ನಿರ್ವಹಣೆ)ಕಾಯಿದೆ 2002ರ ಅಡಿಯಲ್ಲಿ ಬರುತ್ತದೆ.

ಪ್ರಮುಖ ಪರಿಣಾಮ:

ನೊಯಿಡಾ ಸಿಟಿ ಸೆಂಟರ್ ನಿಂದ ನೋಯಿಡಾ ಸೆಕ್ಟರ್ 62 ರವರೆಗೆ ದೆಹಲಿ ಮೆಟ್ರೋ ಕಾರಿಡಾರ್ ನ ವಿಸ್ತರಣೆಯು ದೆಹಲಿ ಮೆಟ್ರೊ ವ್ಯವಸ್ಥೆಯಲ್ಲಿ ದ್ವಾರಕಾ-ನೊಯಿಡಾ ಸಿಟಿ ಸೆಂಟರ್ ಮಾರ್ಗದ ವಿಸ್ತರಣೆಯಾಗಿದ್ದು, ಇದರಿಂದ ಜನರಿಗೆ ಸುಗಮ ಸಂಚಾರದ ಖಾತ್ರಿ ಒದಗಿಸುತ್ತದೆ ಮತ್ತು ಹೆಚ್ಚಿನ ಜನರು ದೆಹಲಿಯ ಈ ಉಪನಗರಕ್ಕೆ ಸಾಗಲು ಬಯಸುತ್ತಾರೆ, ಇದು ದೆಹಲಿಯ ಜನದಟ್ಟಣೆ ನಿವಾರಿಸಲಿದೆ. ಇದರ ಫಲವಾಗಿ ಹೆಚ್ಚು ವಸತಿ ಮತ್ತು ವಾಣಿಜ್ಯ ಸಮುಚ್ಚಯಗಳು ಈ ವಲಯದಲ್ಲಿ ಅಭಿವೃದ್ಧಿಯಾಗಲಿವೆ. ಮೆಟ್ರೋ ರೈಲು ಬಂದಲ್ಲಿ, ರಸ್ತೆಯಲ್ಲಿ ವಾಹನಗಳ ದಟ್ಟಣೆ ಕಡಿಮೆಯಾಗಲಿದ್ದು, ಇದು ಒತ್ತಡ ನಿವಾರಿಸುತ್ತದೆ, ಇದು ಪ್ರಯಾಣದ ಸಮಯ ಮತ್ತು ವೆಚ್ಚವನ್ನೂ ತಗ್ಗಿಸುತ್ತದೆ, ಪಳೆಯುಳಿಕೆ ಇಂಧನದ ಕಡಿಮೆ ಬಳಕೆಯಾಗುತ್ತದೆ, ಇದರಿಂದ ಪರಿಸರ ಮಾಲಿನ್ಯವೂ ಕಡಿಮೆಯಾಗುತ್ತದೆ.

ನೋಡಿಯಾದ ಜನಸಂಖ್ಯೆ ಮತ್ತು ಸುತ್ತಮುತ್ತಲಿನ ಪ್ರದೇಶದ ಜನರು, ಈ ವಿಸ್ತರಿತ ಮಾರ್ಗದಿಂದ ಪ್ರಯೋಜನ ಪಡೆಯಲಿದ್ದಾರೆ. ಯೋಜನಾ ಸ್ಥಳದಲ್ಲಿ, ಎಂಜಿನಿಯರುಗಳು ಮತ್ತು ಇತರ ಸಿಬ್ಬಂದಿ ಸೇರಿ ಅಂದಾಜು 800 ಸಿಬ್ಬಂದಿ ನಿಯುಕ್ತಿಗೊಳ್ಳಲಿದ್ದಾರೆ. ಅಲ್ಲದೆ, ಡಿಎಂಆರ್.ಸಿ. ಈಗಾಗಲೇ 200 ಸಿಬ್ಬಂದಿಯನ್ನು ಕಾರಿಡಾರ್ ನ ನಿರ್ವಹಣೆ ಮತ್ತು ಕಾರ್ಯಾಚರಣೆಗೆ ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ಆರಂಭಿಸಿದೆ.

ಸಿವಿಲ್ ಕಾಮಗಾರಿಯಲ್ಲಿ ಅಂದಾಜು ಶೇ.81ರಷ್ಟು ಮತ್ತು ಹಣಕಾಸಿನಲ್ಲಿ ಒಟ್ಟಾರೆಯಾಗಿ ಶೇ.55ರಷ್ಟು ಪ್ರಗತಿಯನ್ನು ಈಗಾಗಲೇ ಸಾಧಿಸಲಾಗಿದೆ.

ಹಿನ್ನೆಲೆ:

ಉತ್ತರ ಪ್ರದೇಶ ರಾಜ್ಯದ ಗೌತಮಬುದ್ಧ ನಗರ ಜಿಲ್ಲೆಯಲ್ಲಿರುವ ನೋಯಿಡಾ ನಗರವನ್ನು ಉತ್ತರ ಪ್ರದೇಶ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಕಾಯಿದೆ ಅಡಿಯಲ್ಲಿ ರಚಿಸಲಾಗಿದೆ. ಇದರಲ್ಲಿ ಎಲ್ಲ ಆಧುನಿಕ ಸೌಲಭ್ಯಗಳೂ ಇದ್ದು, ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದ ಉಪನಗರಗಳಲ್ಲಿ ಅತ್ಯಂತ ಆಧುನಿಕ ಸೌಲಭ್ಯ ಒಳಗೊಂಡ ಪ್ರದೇಶಗಳಲ್ಲಿ ಒಂದಾಗಿದೆ. 2011ರ ಜನಗಣತಿಯಂತೆ ಹಚ್ಚ ಹಸಿರು ಮತ್ತು ಬಯಲು ಪ್ರದೇಶಗಳಿಂದಾಗಿ ನೋಯಿಡಾ ನಗರದ ಜನಸಂಖ್ಯೆ ಸುಮಾರು 6.42 ಲಕ್ಷವಾಗಿತ್ತು. ದೆಹಲಿ ಮತ್ತು ಸುತ್ತಮುತ್ತಲಿನ ಹೆಚ್ಚು ಹೆಚ್ಚು ಜನರು ನೆಲೆಸಲು ನೋಯಿಡಾವನ್ನೇ ಹೆಚ್ಚು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ಹೀಗಾಗಿ ನೋಯಿಡಾದ ನಗರೀಕರಣದ ಸ್ವರೂಪ ಮೇಲ್ಮುಖವಾಗಿ ಸಾಗಿದೆ. ಹಲವು ಸಂಖ್ಯೆಯ ಕೈಗಾರಿಕೆಗಳು ಮತ್ತು ಸಾಂಸ್ಥಿಕ ಘಟಕಗಳು ನಗರದಲ್ಲಿ ಸ್ಥಾಪಿತವಾಗಿವೆ. ನೋಯಿಡಾ ಪ್ರಮುಖವಾಗಿ ದೆಹಲಿ ಹಾಗೂ ಉತ್ತರ ಪ್ರದೇಶ ಹಾಗೂ ಹರಿಯಾಣ ರಾಜ್ಯದ ಸುತ್ತಲಿನ ಪ್ರದೇಶಗಳೊಂದಿಗೆ ರಸ್ತೆ ಸಂಪರ್ಕವನ್ನು ಹೊಂದಿತ್ತು. ನೋಯಿಡಾಕ್ಕೆ ಜನರು ಕೆಲಸಕ್ಕಾಗಿ ಬರುತ್ತಾರೆ. ಈ ಅಂಶಗಳಿಂದಾಗಿ ಸಂಚಾರದಲ್ಲಿ ಹೆಚ್ಚಳವಾಯಿತು ಮತ್ತು ಈ ಜನಸಂಖ್ಯೆಗೆ ಮುಕ್ತ ತ್ವರಿತ ಸಾರಿಗೆ ವ್ಯವಸ್ಥೆಯ ಅಗತ್ಯ ಹೆಚ್ಚಿಸಿತು. ನೋಯಿಡಾಗೆ ಮೆಟ್ರೋ ರೈಲು ಸಂಪರ್ಕ ಕಲ್ಪಿಸಲಾಯಿತು. ಈ ರೈಲುಗಳು ನೋಯಿಡಾ ನಗರದ ಕೇಂದ್ರ (ಸೆಕ್ಟರ್ 32 ನೋಯಿಡಾ)ವರೆಗೆ ಸಂಚರಿಸುತ್ತವೆ. ಈಗ ಮೆಟ್ರೋ ಕಾರಿಡಾರ್ ಅನ್ನು ನೋಯಿಡಾ ಸಿಟಿ ಸೆಂಟರ್ ನಿಂದ ಸೆಕ್ಟರ್ 62ರವರೆಗೆ 6.675ಕಿ.ಮೀ ವರೆಗೆ ಆರು ನಿಲ್ದಾಣಗಳೊಂದಿಗೆ ವಿಸ್ತರಿಸಲು ನಿರ್ಣಯಿಸಲಾಗಿದೆ. ನೋಯಿಡಾಯದಲ್ಲಿ ಯಾವುದೇ ರೈಲು ನಿಲ್ದಾಣ ಇರುವುದಿಲ್ಲ. ಹತ್ತಿರದ ನಿಲ್ದಾಣ ಎಂದರೆ 15 ಕಿ.ಮೀ. ದೂರದಲ್ಲಿರುವ ದಹಲಿಯಲ್ಲಿರುವ ಹಜರತ್ ನಿಜಾಮುದ್ದೀನ್ ಆಗಿದೆ. ಹತ್ತಿರದ ವಿಮಾನ ನಿಲ್ದಾಣ ನೋಯಿಡಾದಿಂದ 35 ಕಿ.ಮೀ. ದೂರದಲ್ಲಿರುವ ದೆಹಲಿ ವಿಮಾನ ನಿಲ್ದಾಣವೇ ಆಗಿದೆ. ಮುಂಬರುವ ವರ್ಷಗಳಲ್ಲಿ ನೋಡಿಯಾ ಪ್ರದೇಶದಲ್ಲಿ ಜನಸಂಖ್ಯೆ ವಿಸ್ಮಯಕಾರಿಯಾಗಿ ವೃದ್ಧಿಸುವ ಸಾಧ್ಯತೆ ಇದೆ.

*****



(Release ID: 1532753) Visitor Counter : 57