ಸಂಪುಟ

ಅಕ್ರಮ ವಲಸಿಗರ ವಾಪಸು ಕುರಿತಂತೆ ಭಾರತ ಮತ್ತು ಯುನೈಟೆಡ್ ಕಿಂಗ್ಡಮ್ ಹಾಗೂ ಉತ್ತರ ಐರ್ಲೆಂಡ್ ನಡುವಿನ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ

Posted On: 11 APR 2018 2:04PM by PIB Bengaluru

ಅಕ್ರಮ ವಲಸಿಗರ ವಾಪಸು ಕುರಿತಂತೆ ಭಾರತ ಮತ್ತು ಯುನೈಟೆಡ್ ಕಿಂಗ್ಡಮ್ ಹಾಗೂ ಉತ್ತರ ಐರ್ಲೆಂಡ್ ನಡುವಿನ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಅಕ್ರಮ ವಲಸಿಗರ ವಾಪಸು ಕುರಿತಂತೆ ಭಾರತ ಮತ್ತು ಯುನೈಟೆಡ್ ಕಿಂಗ್ಡಮ್ ಹಾಗೂ ಉತ್ತರ ಐರ್ಲೆಂಡ್ ನಡುವಿನ ತಿಳಿವಳಿಕೆ ಒಪ್ಪಂದಕ್ಕೆ ತನ್ನ ಅನುಮೋದನೆ ನೀಡಿದೆ. 

ಪ್ರಯೋಜನಗಳು: 

ಈ ತಿಳಿವಳಿಕೆ ಒಪ್ಪಂದವು ಎಂ.ಓ.ಯು. ಆಖೈರಾದ ತರುವಾಯ ರಾಜತಾಂತ್ರಿಕ ಪಾಸ್ ಪೋರ್ಟ್ ಹೊಂದಿರುವವರಿಗೆ ಮತ್ತು ಯುಕೆಯ ಉದಾರೀಕೃತ ವೀಸಾ ಆಡಳಿತದಲ್ಲಿ ಕಾನೂನುಬದ್ಧವಾಗಿ ಯು.ಕೆ.ಗೆ ಪ್ರಯಾಣಿಸುವವರಿಗೆ ವೀಸಾ ಮುಕ್ತ ಒಪ್ಪಂದದ ಅವಕಾಶ ಕಲ್ಪಿಸುತ್ತದೆ. 

ತನಗೆ ತೃಪ್ತಿಯಾಗುವಂತೆ ರಾಷ್ಟ್ರೀಯತೆಯ ಪರಿಶೀಲನೆಯ ಬಳಿಕ ಮತ್ತೊಬ್ಬ ಪಕ್ಷಕಾರರ ಪ್ರದೇಶದೊಳಗೆ ಕಾನೂನುಬದ್ಧ ಆಧಾರವಿಲ್ಲದ ವ್ಯಕ್ತಿಗಳ ವಾಪಸಾತಿಯನ್ನು ಇದು ಖಾತ್ರಿಪಡಿಸುತ್ತದೆ. 

ನಿರ್ದಿಷ್ಟ ಕಾಲದ ಚೌಕಟ್ಟಿನಲ್ಲಿ ಮತ್ತೊಬ್ಬ ಪಕ್ಷಕಾರರ ನೆಲದಲ್ಲಿ ಅಕ್ರಮವಾಗಿ ನೆಲೆಸಿರುವವರು ಸಿಕ್ಕಿಬಿದ್ದಾಗ, ಅಂಥ ಪ್ರಜೆಗಳ ವಾಪಸಿನ ಪ್ರಕ್ರಿಯೆಯನ್ನು ಮುಖ್ಯವಾಹಿನಿಗೊಳಿಸಲು ಇದು ನೆರವಾಗುತ್ತದೆ. 
 

***



(Release ID: 1528678) Visitor Counter : 74