ಸಂಪುಟ
ಯುವ ವ್ಯವಹಾರ ಕುರಿತ ಸಹಕಾರಕ್ಕಾಗಿ ಭಾರತ ಮತ್ತು ಟುನೇಷಿಯಾ ನಡುವೆ ಅಂಕಿತ ಹಾಕಲಾಗಿರುವ ಎಂ.ಓ.ಯು. ಕುರಿತು ಸಂಪುಟಕ್ಕೆ ವಿವರಣೆ
Posted On:
07 FEB 2018 8:14PM by PIB Bengaluru
ಯುವ ವ್ಯವಹಾರ ಕುರಿತ ಸಹಕಾರಕ್ಕಾಗಿ ಭಾರತ ಮತ್ತು ಟುನೇಷಿಯಾ ನಡುವೆ ಅಂಕಿತ ಹಾಕಲಾಗಿರುವ ಎಂ.ಓ.ಯು. ಕುರಿತು ಸಂಪುಟಕ್ಕೆ ವಿವರಣೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ ಭಾರತ ಮತ್ತು ಟುನೇಷಿಯಾ ನಡುವೆ ಯುವ ವ್ಯವಹಾರಗಳ ಕ್ಷೇತ್ರದ ಸಹಕಾರದ ಉತ್ತೇಜನಕ್ಕಾಗಿ ಅಂಕಿತ ಹಾಕಲಾಗಿರುವ ತಿಳಿವಳಿಕೆ ಒಪ್ಪಂದ (ಎಂ.ಓ.ಯು.) ಬಗ್ಗೆ ವಿವರಿಸಲಾಯಿತು. ಈ ಎಂ.ಓ.ಯು.ಗೆ ದೆಹಲಿಯಲ್ಲಿ 30-10-2017ರಂದು ಅಂಕಿತ ಹಾಕಲಾಗಿತ್ತು.
ಭಾರತೀಯ ಯುವಕರ ನಡುವೆ ಅಂತಾರಾಷ್ಟ್ರೀಯ ದೃಷ್ಟಿಕೋನವನ್ನು ಮೂಡಿಸುವುದು, ಕಲ್ಪನೆಗಳು, ಮೌಲ್ಯಗಳು ಮತ್ತು ಸಂಸ್ಕೃತಿಯ ವಿನಿಮಯ ಉತ್ತೇಜನ ಮತ್ತು ಶಾಂತಿ ಮತ್ತು ತಿಳಿವಳಿಕೆಯನ್ನು ಉತ್ತೇಜಿಸಲು ಅವರನ್ನು ತೊಡಗಿಸಿಕೊಳ್ಳುವುದುಈ ತಿಳಿವಳಿಕೆ ಒಪ್ಪಂದದ ಉದ್ದೇಶವಾಗಿದೆ.
ಈ ತಿಳಿವಳಿಕೆ ಒಪ್ಪಂದವು ಐದು ವರ್ಷಗಳ ಅವಧಿವರೆಗೆ ಇರುತ್ತದೆ. ಈ ಎಂ.ಓ.ಯು. ಅಡಿಯಲ್ಲಿನ ಸಹಕಾರ ಕ್ಷೇತ್ರಗಳಲ್ಲಿ ಈ ಕೆಳಕಂಡವುಗಳು ಸೇರಿವೆ:
- ಯುವ ವಿನಿಮಯ ಕಾರ್ಯಕ್ರಮಗಳನ್ನು ಆಯೋಜಿಸುವುದು;
- ಅಂತಾರಾಷ್ಟ್ರೀಯ ಸಮಾವೇಶಗಳು ಮತ್ತು ವಿಚಾರ ಸಂಕಿರಣಗಳಿಗೆ ಆಹ್ವಾನ ಪತ್ರಿಕೆಗಳ ವಿನಿಮಯ;
iii. ಮುದ್ರಿತ ವಸ್ತುಗಳು, ಚಲನಚಿತ್ರ, ಅನುಭವ, ಸಂಶೋಧನೆ ಮತ್ತು ಇತರ ಮಾಹಿತಿಯ ವಿನಿಮಯ;
- ಯುವ ಶಿಬಿರ, ಯುವ ಉತ್ಸವ ಮತ್ತು ಇತರ ಸಹಕಾರಿ ಯುವ ಕಾರ್ಯಕ್ರಮಗಳಲ್ಲಿ, ಅಧ್ಯಯನ ಪ್ರವಾಸ ಮತ್ತು ಸಣ್ಣ ಕಾರ್ಯಾಗಾರ ಮತ್ತು ಯುವಕರಿಗೆ ಸಂಬಂಧಿಸಿದ ವಿಚಾರಗಳ ವಿಚಾರಗೋಷ್ಠಿಗಳು ಇತ್ಯಾದಿಯಲ್ಲಿ ಪಾಲ್ಗೊಳ್ಳುವುದು.
***
(Release ID: 1519891)
Visitor Counter : 98