ಪ್ರಧಾನ ಮಂತ್ರಿಯವರ ಕಛೇರಿ

100ನೇ ಉಪಗ್ರಹದ ಯಶಸ್ವೀ ಉಡಾವಣೆಗಾಗಿ ಇಸ್ರೋ ತಂಡಕ್ಕೆ ಪ್ರಧಾನಿ ಅಭಿನಂದನೆ

प्रविष्टि तिथि: 12 JAN 2018 11:13AM by PIB Bengaluru

100ನೇ ಉಪಗ್ರಹದ ಯಶಸ್ವೀ ಉಡಾವಣೆಗಾಗಿ ಇಸ್ರೋ ತಂಡಕ್ಕೆ ಪ್ರಧಾನಿ ಅಭಿನಂದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತನ್ನ 100ನೇ ಉಪಗ್ರಹವನ್ನು ಯಸಶ್ವಿಯಾಗಿ ಉಡಾವಣೆ ಮಾಡಿದ ಇಸ್ರೋ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

 “ಪಿ.ಎಸ್.ಎಲ್.ವಿ.ಯನ್ನುಇಂದು ಯಶಸ್ವಿಯಾಗಿ ಉಡಾವಣೆ ಮಾಡಿದ ಇಸ್ರೋಗೆ ಮತ್ತು ಅದರ ವಿಜ್ಞಾನಿಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.  ಹೊಸ ವರ್ಷದಲ್ಲಿನ ಈ ಯಶಸ್ಸು, ದೇಶದ ಬಾಹ್ಯಾಕಾಶ ತಂತ್ರಜ್ಞಾನದ ತ್ವರಿತ ಸಾಧನೆಗಳ ಪ್ರಯೋಜನವನ್ನು ನಮ್ಮ ನಾಗರಿಕರು, ರೈತರು ಮತ್ತು ಮೀನುಗಾರರು ಮತ್ತಿತರರಿಗೆ ಒದಗಿಸುತ್ತದೆ.  

ಇಸ್ರೋದ 100ನೇ ಉಪಗ್ರಹ ಉಡಾವಣೆಯು, ಅದರ ಅದ್ಭುತ ಸಾಧನೆ ಮತ್ತು ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳ ಭವ್ಯ ಭವಿಷ್ಯವನ್ನು ಪ್ರದರ್ಶಿಸುತ್ತದೆ.

ಭಾರತದ ಯಶಸ್ಸು ನಮ್ಮ ಪಾಲುದಾರರಿಗೂ ಲಭಿಸುತ್ತದೆ. ಇಂದು ಉಡಾವಣೆ ಮಾಡಲಾದ 31 ಉಪಗ್ರಹಗಳ ಪೈಕಿ, 28 ಉಪಗ್ರಹಗಳು ಇತರ ಆರು ರಾಷ್ಟ್ರಗಳಿಗೆ ಸೇರಿದ್ದಾಗಿವೆ”, ಎಂದು ಪ್ರಧಾನಿ ಹೇಳಿದ್ದಾರೆ.

 

***


(रिलीज़ आईडी: 1516472) आगंतुक पटल : 273
इस विज्ञप्ति को इन भाषाओं में पढ़ें: Tamil , English , हिन्दी