ಸಂಪುಟ

15ನೇ ಹಣಕಾಸು ಆಯೋಗದ ರಚನೆಗೆ ಸಂಪುಟದ ಅನುಮೋದನೆ

Posted On: 22 NOV 2017 4:05PM by PIB Bengaluru

15ನೇ ಹಣಕಾಸು ಆಯೋಗದ ರಚನೆಗೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಸಾಂವಿಧಾನಾತ್ಮಕ  ಹೊಣೆಗಾರಿಕೆಯಲ್ಲಿ ಸಂವಿಧಾನದ ವಿಧಿ 280(1) ಅಡಿಯಲ್ಲಿ 15ನೇ ಹಣಕಾಸು ಆಯೋಗದ ರಚನೆಗೆ ತನ್ನ ಅನುಮೋದನೆ ನೀಡಿದೆ. 15ನೇ ಹಣಕಾಸು ಆಯೋಗದ ಉಲ್ಲೇಖಿತ ನಿಯಮಗಳನ್ನು ಸೂಕ್ತ ಸಮಯದಲ್ಲಿ ಅಧಿಸೂಚಿಸಲಾಗುವುದು.

ಹಿನ್ನೆಲೆ: 

ಸಂವಿಧಾನದ 280 (1) ಪರಿಚ್ಛೇದವು ಹಣಕಾಸು ಆಯೋಗ (ಎಫ್.ಸಿ.) ಅನ್ನು ರಚಿಸಬೇಕು ಎಂದು ... " ಈ ಸಂವಿಧಾನದ ಜಾರಿಗೆ ಬಂದ ಎರಡು ವರ್ಷಗಳಲ್ಲಿ ಆರಂಭಿಸಬೇಕು ಮತ್ತು ನಂತರ ಪ್ರತಿ ಐದನೇ ವರ್ಷ ಮುಕ್ತಾಯದ ಹೊತ್ತಿಗೆ ಅಥವಾ ರಾಷ್ಟ್ರಪತಿಯವರು ಸೂಕ್ತವೆಂದು ಪರಿಗಣಿಸುವ ಮುಂಚಿನ ಅವಧಿಯಲ್ಲಿ... " ಎಂದು ಉಲ್ಲೇಖಿಸುತ್ತದೆ. ಈ ಅಗತ್ಯನ್ನು ಗಮನದಲ್ಲಿಟ್ಟುಕೊಂಡು, ಹಿಂದಿನ ಹಣಕಾಸು ಆಯೋಗದ ರಚನೆಯಾದ ಐದು ವರ್ಷಗಳ ಅವಧಿಯೊಳಗೆ ಮುಂದಿನ ಹಣಕಾಸು ಆಯೋಗ ರಚಿಸುವ ಪರಿಪಾಠ ಬೆಳೆದುಬಂದಿದೆ. 
ಹದಿನಾಲ್ಕು (14) ಹಣಕಾಸು ಆಯೋಗಗಳನ್ನು ಈ ಹಿಂದೆ ರಚಿಸಲಾಗಿದೆ. 14ನೇ ಹಣಕಾಸು ಆಯೋಗವನ್ನು 2015ರ ಏಪ್ರಿಲ್ 1ರಿಂದ ಆರಂಭವಾಗುವಂತೆ ಮುಂದಿನ 5 ವರ್ಷಗಳಿಗೆ ಶಿಫಾರಸು ಮಾಡಲು ದಿನಾಂಕ 02.01.2013ರಂದು ರಚಿಸಲಾಗಿತ್ತು. ಈ ಆಯೋಗವು 2014ರ ಡಿಸೆಂಬರ್ 15ರಂದು ತನ್ನ ವರದಿ ಸಲ್ಲಿಸಿತ್ತು. 14ನೇ ಹಣಕಾಸು ಆಯೋಗದ ಶಿಫಾರಸುಗಳು 2019-20ರ ಹಣಕಾಸು ವರ್ಷದವರೆಗೆ ಸಿಂಧುವಾಗಿರುತ್ತವೆ. ಸಂವಿಧಾನದ ನಿಯಮಾವಳಿಗಳ ರೀತ್ಯ 15ನೇ ಹಣಕಾಸು ಆಯೋಗದ ರಚನೆಯು ಏಪ್ರಿಲ್ 1, 2020ರಿಂದ ಮುಂದಿನ ಅವಧಿಗೆ ಶಿಫಾರಸು ಮಾಡಲಿದ್ದು, ಅದು ಈಗ ಆಗಬೇಕಿದೆ. 
*****



(Release ID: 1510477) Visitor Counter : 168


Read this release in: Tamil , English , Gujarati