ಪ್ರಧಾನ ಮಂತ್ರಿಯವರ ಕಛೇರಿ

ಅಂತಾರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರಾಗಿ ಪುನರಾಯ್ಕೆ ಆಗಿರುವ ನ್ಯಾಯಮೂರ್ತಿ ದಲ್ವೀರ್ ಭಂಡಾರಿ ಅವರಿಗೆ ಪ್ರಧಾನಿ ಅಭಿನಂದನೆ

Posted On: 21 NOV 2017 10:32AM by PIB Bengaluru

ಅಂತಾರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರಾಗಿ ಪುನರಾಯ್ಕೆ ಆಗಿರುವ ನ್ಯಾಯಮೂರ್ತಿ ದಲ್ವೀರ್ ಭಂಡಾರಿ ಅವರಿಗೆ ಪ್ರಧಾನಿ ಅಭಿನಂದನೆ



ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಅಂತಾರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರಾಗಿ ಪುನರಾಯ್ಕೆ ಆಗಿರುವ ನ್ಯಾಯಮೂರ್ತಿ ದಲ್ವೀರ್ ಭಂಡಾರಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

" ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಪುನರಾಯ್ಕೆ ಆಗಿರುವ ನ್ಯಾಯಮೂರ್ತಿ ದಲ್ವೀರ್ ಭಂಡಾರಿ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಅವರ ಪುನರಾಯ್ಕೆ ನಮಗೆ ಹೆಮ್ಮೆಯ ಕ್ಷಣವಾಗಿದೆ.

ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತದ ಪುನರಾಯ್ಕೆಗೆ ಕಾರಣವಾದ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಮತ್ತು ವಿದೇಶಾಂಗ ವ್ಯವಹಾರ ಸಚಿವಾಲಯದ ಮತ್ತು ರಾಜತಾಂತ್ರಿಕ ಅಭಿಯಾನದ ಇಡೀ ತಂಡದ ಅವಿಶ್ರಾಂತ ಶ್ರಮವನ್ನು ನಾನು ಅಭಿನಂದಿಸುತ್ತೇನೆ. ಭಾರತದ ಬಗ್ಗೆ ವಿಶ್ವಾಸವಿಟ್ಟು, ಬೆಂಬಲ ನೀಡಿದ ಯು.ಎನ್.ಜಿ.ಎ ಮತ್ತು ಯು.ಎನ್.ಎಸ್.ಸಿ.ಯ ಎಲ್ಲ ಸದಸ್ಯರಿಗೂ ನನ್ನ ಆಳವಾದ ಕೃತಜ್ಞತೆಗಳು", ಎಂದು ಪ್ರಧಾನಿ ಹೇಳಿದ್ದಾರೆ.

***


(Release ID: 1510300)
Read this release in: English , Gujarati , Tamil , Telugu