• Sitemap
  • Advance Search
Infrastructure

ಗಣಿಗಳು ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಕಾಯಿದೆ, 2026

Posted On: 19 AUG 2026 5:27PM

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

Q. ಗಣಿಗಳಿಂದ ರಾಜ್ಯ ಸರ್ಕಾರಗಳು ಸಂಗ್ರಹಿಸುವ ಆದಾಯದ ವರ್ಗಗಳು/ವಿಧಗಳು ಯಾವುವು?

ರಾಜ್ಯಗಳು ಪ್ರಸ್ತುತ ರಾಯಲ್ಟಿ, ಹರಾಜು ಪ್ರೀಮಿಯಂ, ಡೆಡ್ ರೆಂಟ್, ಜಿಲ್ಲಾ ಖನಿಜ ಪ್ರತಿಷ್ಠಾನಗಳಿಗೆ (DMFs) ಪಾವತಿಗಳು, ಜಿಎಸ್‌ಟಿ ಮತ್ತು ರವಾನೆ ಶುಲ್ಕಗಳು ಸೇರಿದಂತೆ ಸುಮಾರು 14 ರೀತಿಯ ತೆರಿಗೆಗಳು, ಶುಲ್ಕಗಳು, ದರಗಳು ಮತ್ತು ಇತರ ವಸೂಲಾತಿಗಳನ್ನು ಪಡೆಯುತ್ತಿವೆ. ಇದಲ್ಲದೆ, ಕೆಲವು ರಾಜ್ಯಗಳು ಖನಿಜವನ್ನು ಹೊಂದಿರುವ ಭೂಮಿಯ ಮೇಲೆಯೂ ತೆರಿಗೆಗಳನ್ನು ವಿಧಿಸಿದ್ದು, ಇದು ಸರ್ಕಾರಿ ಕಂಪನಿಗಳ ಮೇಲೆ ಹೆಚ್ಚುವರಿ ಆರ್ಥಿಕ ಹೊರೆಯಾಗಲು ಕಾರಣವಾಗಿದೆ. ಕೆಲವು ಪ್ರಕರಣಗಳಲ್ಲಿ, ಇಂತಹ ತೆರಿಗೆಗಳು ಶೇಕಡಾ 20 ರಷ್ಟು ಹೆಚ್ಚಾಗಿವೆ.

Q. ಗಣಿಗಾರಿಕೆ ಆದಾಯವನ್ನು ರಾಜ್ಯ ಮತ್ತು ಕೇಂದ್ರದ ನಡುವೆ ಹೇಗೆ ಹಂಚಿಕೆ ಮಾಡಲಾಗುತ್ತದೆ?

ಪ್ರಸ್ತುತ, ಗಣಿಗಾರಿಕೆ ವಲಯದಿಂದ ಬರುವ ಆದಾಯದ ಸುಮಾರು ಶೇಕಡಾ 90 ರಷ್ಟು ಭಾಗವು ರಾಜ್ಯಗಳಿಗೆ ಸೂರುತ್ತ್ತಿದೆ. ಕಳೆದ ದಶಕದಲ್ಲಿ, ಒಟ್ಟು ಖನಿಜ ಆದಾಯದಲ್ಲಿ (ಕಲ್ಲಿದ್ದಲು ಮತ್ತು ಕಲ್ಲಿದ್ದಲೇತರ) ರಾಜ್ಯಗಳ ಪಾಲು ವಾಸ್ತವವಾಗಿ ಸುಮಾರು 28 ಶೇಕಡಾವಾರು ಅಂಕಗಳಷ್ಟು ಹೆಚ್ಚಾಗಿದ್ದು, 2025-26 ರಲ್ಲಿ ಸುಮಾರು ₹1,14,549.28 ಕೋಟಿಗೆ ತಲುಪಿದೆ. ಈ ಕಾಯಿದೆಯ ಅಂಗೀಕಾರದೊಂದಿಗೆ, ರಾಜ್ಯಗಳಿಗೆ ಬರುವ ಆದಾಯದಲ್ಲಿ ಯಾವುದೇ ಕಡಿತವಾಗುವುದಿಲ್ಲ. ಖನಿಜ ಉತ್ಪಾದನೆಯಿಂದ ಬರುವ ಆದಾಯದ ಸುಮಾರು ಶೇಕಡಾ 90 ರಷ್ಟನ್ನು ರಾಜ್ಯಗಳು ಪಡೆಯುವುದನ್ನು ಮುಂದುವರಿಸುತ್ತವೆ

Q. 2015 ರಿಂದ ಖನಿಜ ವಲಯದಲ್ಲಿ ಮಾಡಲಾದ ಪ್ರಮುಖ ಸುಧಾರಣೆಗಳು ಯಾವುವು?

2015 ರಿಂದ ಗಣಿಗಾರಿಕೆ ವಲಯದಲ್ಲಿ ಈ ಕೆಳಗಿನ ಕ್ರಮಗಳನ್ನು ತರಲಾಗಿದ್ದು, ಇದನ್ನು ಪಾರದರ್ಶಕ, ಸ್ಪರ್ಧಾತ್ಮಕ ಮತ್ತು ಭವಿಷ್ಯದ ಬೇಡಿಕೆಗೆ ಉತ್ತಮವಾಗಿ ಸಜ್ಜುಗೊಳಿಸಲಾಗಿದೆ:

  • ಸ್ಪರ್ಧಾತ್ಮಕ -ಹರಾಜು ಮತ್ತು ಗಣಿ ತೆರೆಯುವಿಕೆಯ ದಾಖಲೆ ವರ್ಷ

ಗಣಿಗಳು ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯಿದೆಗೆ 2015 ರ ತಿದ್ದುಪಡಿ ಮಾಡಿದ್ದು ರಿಯಾಯಿತಿಗಳ ಸ್ವಯಂಪ್ರೇರಿತ ಹಂಚಿಕೆಯನ್ನು ಅಂತ್ಯಗೊಳಿಸಿತು. ಅಂದಿನಿಂದ, 17 ರಾಜ್ಯಗಳಲ್ಲಿ 723 ಪ್ರಮುಖ ಖನಿಜ ಬ್ಲಾಕ್‌ಗಳನ್ನು ಹರಾಜು ಮಾಡಲಾಗಿದೆ, ಇದರಲ್ಲಿ ರಾಜಸ್ಥಾನ 140, ಮಧ್ಯಪ್ರದೇಶ 127 ಮತ್ತು ಒಡಿಶಾ 76 ಬ್ಲಾಕ್‌ಗಳೊಂದಿಗೆ ಮುಂಚೂಣಿಯಲ್ಲಿವೆ. ಆರ್ಥಿಕ ವರ್ಷ 2025-26 ಇದುವರೆಗಿನ ಅತ್ಯುತ್ತಮ ವರ್ಷವಾಗಿದ್ದು, ದಾಖಲೆಯ 212 ಬ್ಲಾಕ್‌ಗಳನ್ನು ಹರಾಜು ಮಾಡಲಾಗಿದೆ ಮತ್ತು 36 ಬ್ಲಾಕ್‌ಗಳನ್ನು ಕಾರ್ಯಾಚರಣೆಗೆ ತರಲಾಗಿದೆ. ಕಲ್ಲಿದ್ದಲಿನಲ್ಲಿ 141 ಗಣಿಗಳನ್ನು ಹರಾಜು ಮಾಡಲಾಗಿದ್ದು, 23 ಗಣಿಗಳನ್ನು ಕಾರ್ಯಾಚರಣೆಗೆ ತರಲಾಗಿದೆ.

  • ಉತ್ಪಾದನೆ ಮತ್ತು ಜಾಗತಿಕ ಸ್ಥಾನಮಾನದಲ್ಲಿ ಬೆಳವಣಿಗೆ

ರಾಷ್ಟ್ರೀಯ ನಿರ್ಣಾಯಕ ಖನಿಜ ಮಿಷನ್‌ಗೆ (NCMM) 2025 ರ ಜನವರಿ 29 ರಂದು ₹16,300 ಕೋಟಿ ವೆಚ್ಚದೊಂದಿಗೆ ಅನುಮೋದನೆ ನೀಡಲಾಯಿತು, ಇದರಲ್ಲಿ ಆರ್ಥಿಕ ವರ್ಷ 2030-31 ರವರೆಗೆ ₹2,600 ಕೋಟಿ ಬಜೆಟ್ ಬೆಂಬಲವೂ ಸೇರಿದೆ. ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಸಂಸ್ಥೆ (GSI) ಮತ್ತು ರಾಷ್ಟ್ರೀಯ ಖನಿಜ ಅನ್ವೇಷಣೆ ಮತ್ತು ಅಭಿವೃದ್ಧಿ ಟ್ರಸ್ಟ್ (NMEDT) 1,200 ನಿರ್ಣಾಯಕ ಖನಿಜ ಯೋಜನೆಗಳತ್ತ ಕೆಲಸ ಮಾಡುತ್ತಿವೆ. NMEDT ಅನುಮೋದಿಸಿದ ₹3,828.52 ಕೋಟಿ ಮೌಲ್ಯದ 777 ಯೋಜನೆಗಳಲ್ಲಿ, 255 ಯೋಜನೆಗಳು ನಿರ್ಣಾಯಕ ಖನಿಜಗಳಿಗೆ ಸಂಬಂಧಿಸಿವೆ. 2025 ರ ತಿದ್ದುಪಡಿಯು NMEDT ಗೆ ವಿದೇಶದಲ್ಲಿ ಅನ್ವೇಷಣೆಯನ್ನು ಬೆಂಬಲಿಸಲು ಅನುಮತಿಸುತ್ತದೆ. ಖನಿಜ್ ಬಿದೇಶ್ ಇಂಡಿಯಾ ಲಿಮಿಟೆಡ್ (KABIL) ಅರ್ಜೆಂಟೀನಾದಲ್ಲಿ ವಿಶೇಷ ಲಿಥಿಯಂ ಅನ್ವೇಷಣೆ ಹಕ್ಕುಗಳನ್ನು ಪಡೆದುಕೊಂಡಿದೆ.

  • ರಾಷ್ಟ್ರೀಯ ನಿರ್ಣಾಯಕ ಖನಿಜ ಮಿಷನ್ ಮತ್ತು ವಿದೇಶಿ ಸಂಪನ್ಮೂಲ ಗಳಿಕೆ

ರಾಷ್ಟ್ರೀಯ ನಿರ್ಣಾಯಕ ಖನಿಜ ಮಿಷನ್‌ಗೆ (NCMM) 2025 ರ ಜನವರಿ 29 ರಂದು ₹16,300 ಕೋಟಿ ವೆಚ್ಚದೊಂದಿಗೆ ಅನುಮೋದನೆ ನೀಡಲಾಯಿತು, ಇದರಲ್ಲಿ ಆರ್ಥಿಕ ವರ್ಷ 2030-31 ರವರೆಗೆ ₹2,600 ಕೋಟಿ ಬಜೆಟ್ ಬೆಂಬಲವೂ ಸೇರಿದೆ. ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಸಂಸ್ಥೆ (GSI) ಮತ್ತು ರಾಷ್ಟ್ರೀಯ ಖನಿಜ ಅನ್ವೇಷಣೆ ಮತ್ತು ಅಭಿವೃದ್ಧಿ ಟ್ರಸ್ಟ್ (NMEDT) 1,200 ನಿರ್ಣಾಯಕ ಖನಿಜ ಯೋಜನೆಗಳತ್ತ ಕೆಲಸ ಮಾಡುತ್ತಿವೆ. NMEDT ಅನುಮೋದಿಸಿದ ₹3,828.52 ಕೋಟಿ ಮೌಲ್ಯದ 777 ಯೋಜನೆಗಳಲ್ಲಿ, 255 ಯೋಜನೆಗಳು ನಿರ್ಣಾಯಕ ಖನಿಜಗಳಿಗೆ ಸಂಬಂಧಿಸಿವೆ. 2025 ರ ತಿದ್ದುಪಡಿಯು NMEDT ಗೆ ವಿದೇಶದಲ್ಲಿ ಅನ್ವೇಷಣೆಯನ್ನು ಬೆಂಬಲಿಸಲು ಅನುಮತಿಸುತ್ತದೆ. ಖನಿಜ್ ಬಿದೇಶ್ ಇಂಡಿಯಾ ಲಿಮಿಟೆಡ್ (KABIL) ಅರ್ಜೆಂಟೀನಾದಲ್ಲಿ ವಿಶೇಷ ಲಿಥಿಯಂ ಅನ್ವೇಷಣೆ ಹಕ್ಕುಗಳನ್ನು ಪಡೆದುಕೊಂಡಿದೆ.

  • ಸಂಸ್ಕರಣೆ, ಮರುಬಳಕೆ ಮತ್ತು ಸಂಶೋಧನಾ ಸಾಮರ್ಥ್ಯ

ನಿರ್ಣಾಯಕ ಖನಿಜ ಮರುಬಳಕೆಗಾಗಿ ₹1,500 ಕೋಟಿ ಪ್ರೋತ್ಸಾಹ ಯೋಜನೆಯನ್ನು 2025 ರ ಅಕ್ಟೋಬರ್ 2 ರಂದು ಪ್ರಾರಂಭಿಸಲಾಯಿತು. ಇದು 270Kt ಗುರಿಯ ವಿರುದ್ಧ ವರ್ಷಕ್ಕೆ 850 ಸಾವಿರ ಟನ್‌ಗಳಷ್ಟು ಸಾಮರ್ಥ್ಯವನ್ನು ಒದಗಿಸಲು 58 ಸಂಸ್ಥೆಗಳನ್ನು ಆಕರ್ಷಿಸಿದೆ. ಆಂಧ್ರಪ್ರದೇಶ, ಗುಜರಾತ್, ಒಡಿಶಾ ಮತ್ತು ಮಹಾರಾಷ್ಟ್ರದಲ್ಲಿ ನಿರ್ಣಾಯಕ ಖನಿಜ ಸಂಸ್ಕರಣಾ ಪಾರ್ಕ್‌ಗಳಿಗೆ (CMPPs) ₹500 ಕೋಟಿಯೊಂದಿಗೆ ಬೆಂಬಲ ನೀಡಲಾಗುತ್ತಿದೆ. ಮೂರು ಸತತ ಬಜೆಟ್‌ಗಳಲ್ಲಿ ನಿರ್ಣಾಯಕ ಖನಿಜಗಳು, ಲಿಥಿಯಂ-ಐಯಾನ್ ಬ್ಯಾಟರಿ ತ್ಯಾಜ್ಯ ಮತ್ತು ಸಂಸ್ಕರಣಾ ಬಂಡವಾಳ ಸರಕುಗಳ ಮೇಲಿನ ಮೂಲಭೂತ ಸುಂಕವನ್ನು ತೆಗೆದುಹಾಕಲಾಗಿದೆ. 'ಮಹಾ' (MAHA) ಮಿಷನ್ ಅಡಿಯಲ್ಲಿ ₹210 ಕೋಟಿಯೊಂದಿಗೆ ಒಂಬತ್ತು ಸಂಸ್ಥೆಗಳನ್ನು ಉತ್ಕೃಷ್ಟತಾ ಕೇಂದ್ರಗಳು (CoEs) ಎಂದು ಹೆಸರಿಸಲಾಗಿದೆ.

  • ವಿಶಾಲ ಮತ್ತು ಉತ್ತಮ ಆರ್ಥಿಕ ಬೆಂಬಲಿತ ಅನ್ವೇಷಣೆ ಪರಿಸರ ವ್ಯವಸ್ಥೆ

2014 ರಿಂದ ಅನ್ವೇಷಣಾ ಚಟುವಟಿಕೆಯು ಸುಮಾರು 200 ಪಟ್ಟು ಬೆಳೆದಿದ್ದು, ಪ್ರಸ್ತುತ 51 ಖಾಸಗಿ ಏಜೆನ್ಸಿಗಳನ್ನು ಈ ಕೆಲಸಕ್ಕಾಗಿ ಅಧಿಸೂಚಿಸಲಾಗಿದೆ. NMEDT ಕೊಡುಗೆಯನ್ನು ಶೇಕಡಾ 3 ಕ್ಕೆ ಹೆಚ್ಚಿಸಲಾಗಿದೆ ಮತ್ತು ನೇರ ಅನ್ವೇಷಣಾ ವೆಚ್ಚದ ಅರ್ಧದಷ್ಟನ್ನು ಮರುಪಾವತಿಸಲಾಗುತ್ತದೆ. ಅನ್ವೇಷಣಾ ವೆಚ್ಚದ ಮರುಪಾವತಿಯ ಗರಿಷ್ಠ ಮಿತಿಯು ಅನ್ವೇಷಣಾ ಪರವಾನಗಿ ಹೊಂದಿರುವವರಿಗೆ ₹20 ಕೋಟಿ ಮತ್ತು ಸಂಯೋಜಿತ (ಕಾಂಪೋಸಿಟ್) ಪರವಾನಗಿ ಹೊಂದಿರುವವರಿಗೆ ₹8 ಕೋಟಿಯಾಗಿದೆ. GSI ಫೀಲ್ಡ್ ಸೀಸನ್ 2025-26 ರಲ್ಲಿ 457 ಯೋಜನೆಗಳನ್ನು ಪೂರ್ಣಗೊಳಿಸಿದೆ, ಇದರಲ್ಲಿ ನಿರ್ಣಾಯಕ ಮತ್ತು ಕಾರ್ಯತಂತ್ರದ ಖನಿಜಗಳ ಮೇಲಿನ 230 ಯೋಜನೆಗಳು ಸೇರಿವೆ, ಆದರೆ NMEDT 2024-25 ರಲ್ಲಿ 62 ಮತ್ತು 2025-26 ರಲ್ಲಿ 84 ಇಂತಹ ಯೋಜನೆಗಳಿಗೆ ಧನಸಹಾಯ ನೀಡಿದೆ.

  • ಸರಳ ಕಾರ್ಯಾಚರಣೆಗಳು ಮತ್ತು ಡಿಜಿಟಲ್ ಉಸ್ತುವಾರಿ

ಗಣಿಗಾರಿಕೆ ಗುತ್ತಿಗೆಗಳು ಈಗ ಶೇಕಡಾ 10 ರವರೆಗೆ ಮತ್ತು ಸಂಯೋಜಿತ ಪರವಾನಗಿಗಳು ಶೇಕಡಾ 30 ರವರೆಗೆ ಒಮ್ಮೆಯ ಪ್ರದೇಶ ವಿಸ್ತರಣೆಯನ್ನು ಪಡೆಯಬಹುದು. ಸ್ವಂತ ಬಳಕೆಯ (ಕ್ಯಾಪ್ಟಿವ್) ಗಣಿಗಳಿಂದ ಖನಿಜ ಮಾರಾಟದ ಮೇಲಿನ ಮಿತಿಯನ್ನು ತೆಗೆದುಹಾಕಲಾಗಿದೆ, ಜೊತೆಗೆ ಗುತ್ತಿಗೆಗೆ ನಿರ್ಣಾಯಕ, ಕಾರ್ಯತಂತ್ರದ ಅಥವಾ ಆಳದಲ್ಲಿರುವ ಖನಿಜಗಳನ್ನು ಸೇರಿಸಲು ಹೆಚ್ಚುವರಿ ಪಾವತಿಯನ್ನೂ ರದ್ದುಗೊಳಿಸಲಾಗಿದೆ. ರಾಜ್ಯಗಳೊಂದಿಗೆ ನಿರ್ಮಿಸಲಾದ ಏಕೀಕೃತ ಗಣಿಗಾರಿಕೆ ಪೋರ್ಟಲ್ (UMP), ಹರಾಜಿನಿಂದ ಕಾರ್ಯಾಚರಣೆಯವರೆಗಿನ ಸಂಪೂರ್ಣ ಬ್ಲಾಕ್ ಜೀವಿತಾವಧಿಯನ್ನು ಟ್ರ್ಯಾಕ್ ಮಾಡುತ್ತದೆ. ಕಲ್ಲಿದ್ದಲು ಮತ್ತು ಖನಿಜ ವಿನಿಮಯ ಕೇಂದ್ರಗಳು ನ್ಯಾಯಯುತ ಬೆಲೆ ಶೋಧನೆಗೆ ಮತ್ತಷ್ಟು ಬೆಂಬಲ ನೀಡುತ್ತವೆ.

Q. ಗಣಿಗಾರಿಕೆಯಿಂದ ಸಂತ್ರಸ್ತರಾದ ಜನರಿಗೆ ಪ್ರಯೋಜನಗಳನ್ನು ಹಂಚಿಕೊಳ್ಳುವಲ್ಲಿ 2015 ತಿದ್ದುಪಡಿಯು ಹೇಗೆ ಕೊಡುಗೆ ನೀಡಿದೆ?

2015 ರಲ್ಲಿ, ಕೇಂದ್ರ ಸರ್ಕಾರವು ಗಣಿಗಾರಿಕೆಯಿಂದ ಸಂತ್ರಸ್ತರಾದ ಜನರೊಂದಿಗೆ ಗಣಿಗಾರಿಕೆಯ ಪ್ರಯೋಜನವನ್ನು ಹಂಚಿಕೊಳ್ಳಲು 'ಜಿಲ್ಲಾ ಖನಿಜ ಪ್ರತಿಷ್ಠಾನ' (DMF) ಪರಿಕಲ್ಪನೆಯನ್ನು ಪರಿಚಯಿಸಿತು. ಆಕಾಂಕ್ಷಿ ಜಿಲ್ಲೆಗಳಲ್ಲಿನ 106 ಡಿಎಂಎಫ್‌ಗಳು ಸೇರಿದಂತೆ ಸ್ಥಳೀಯ ಕಲ್ಯಾಣಕ್ಕಾಗಿ ಪ್ರಧಾನಮಂತ್ರಿ ಖನಿಜ ಕ್ಷೇತ್ರ ಕಲ್ಯಾಣ ಯೋಜನೆ (PMKKKY) ಮತ್ತು 656 ಜಿಲ್ಲಾ ಖನಿಜ ಪ್ರತಿಷ್ಠಾನಗಳನ್ನು (DMFs) ಸ್ಥಾಪಿಸಲಾಯಿತು. ಡಿಎಂಎಫ್ ಅಡಿಯಲ್ಲಿ ಸಂಗ್ರಹಿಸಲಾದ ಸಂಪೂರ್ಣ ಮೊತ್ತವನ್ನು ಸ್ಥಳೀಯ ಅಭಿವೃದ್ಧಿ ಯೋಜನೆಗಳಿಗೆ ಬಳಸಲಾಗುತ್ತದೆ, ಜಿಲ್ಲಾಡಳಿತವು ಧನಸಹಾಯ ನೀಡಬೇಕಾದ ಪ್ರದೇಶಗಳು ಮತ್ತು ಯೋಜನೆಗಳನ್ನು ನಿರ್ಧರಿಸುತ್ತದೆ. ಈ ಉಪಕ್ರಮಗಳು ರಸ್ತೆಗಳು, ಆಸ್ಪತ್ರೆಗಳು, ಶಾಲೆಗಳು, ಕುಡಿಯುವ ನೀರು ಮತ್ತು ಸುಧಾರಿತ ಜೀವನ ಪರಿಸ್ಥಿತಿಗಳಂತಹ ಅತ್ಯಗತ್ಯ ಮೂಲಸೌಕರ್ಯಗಳು ಮತ್ತು ಸೇವೆಗಳನ್ನು ಬೆಂಬಲಿಸುತ್ತವೆ.

Q. 2026 ತಿದ್ದುಪಡಿ ಕಾಯಿದೆಯು ಖನಿಜಗಳ ಮೇಲಿನ ಆಮದು ಅವಲಂಬನೆಯ ಸಮಸ್ಯೆಯನ್ನು ಹೇಗೆ ಪರಿಹರಿಸುತ್ತದೆ?

ಈ ಕಾಯಿದೆಯು ದೇಶೀಯ ಆರ್ಥಿಕ ಬೆಳವಣಿಗೆ ಅಥವಾ ಪ್ರಾದೇಶಿಕ ಬೆಳವಣಿಗೆ ಮತ್ತು ರಾಷ್ಟ್ರೀಯ ಕಾರ್ಯತಂತ್ರದ ಹಿತಾಸಕ್ತಿಗಳೆರಡಕ್ಕೂ ಸ್ಥಿರ ಮತ್ತು ವೈಚಾರಿಕ ತೆರಿಗೆ ರಚನೆಯನ್ನು ಒದಗಿಸುತ್ತದೆ. ಈ ಸ್ಥಿರತೆಯು ಹೂಡಿಕೆಯನ್ನು ಆಕರ್ಷಿಸುತ್ತದೆ, ನಿರ್ಣಾಯಕ ಖನಿಜಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ಖನಿಜಗಳ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ.

Q. 2026 ತಿದ್ದುಪಡಿ ಕಾಯಿದೆಯು ಖನಿಜ ಭರಿತ ರಾಜ್ಯಗಳ ಆದಾಯದ ಮೂಲದ ಮೇಲೆ ಪ್ರಭಾವ ಬೀರುತ್ತದೆಯೇ?

ರಾಜ್ಯಗಳು ಪ್ರಸ್ತುತ ಗಣಿಗಾರಿಕೆ ಕಾರ್ಯಾಚರಣೆಗಳ ಮೇಲೆ ಸುಮಾರು 14 ರೀತಿಯ ತೆರಿಗೆಗಳು, ಶುಲ್ಕಗಳು, ದರಗಳು ಮತ್ತು ಇತರ ವಸೂಲಾತಿಗಳನ್ನು ವಿಧಿಸುತ್ತಿವೆ.

ಪ್ರಸ್ತುತ, ಗಣಿಗಾರಿಕೆ ವಲಯದ ಒಟ್ಟು ತೆರಿಗೆಗಳು ಮತ್ತು ಶಾಸನಬದ್ಧ ಪಾವತಿಗಳಲ್ಲಿ ಸುಮಾರು ಶೇಕಡಾ 90 ರಷ್ಟು ರಾಜ್ಯಗಳಿಗೆ ಹೋಗುತ್ತದೆ ಮತ್ತು ತಿದ್ದುಪಡಿಯ ನಂತರವೂ ಈ ಪರಿಸ್ಥಿತಿ ಮುಂದುವರಿಯುತ್ತದೆ. ಆದ್ದರಿಂದ, ಎಂಎಂಡಿಆರ್ (MMDR) ಕಾಯಿದೆಯಲ್ಲಿನ ಪ್ರಸ್ತುತ ತಿದ್ದುಪಡಿಯ ಕಾರಣದಿಂದಾಗಿ ರಾಜ್ಯಕ್ಕೆ ಯಾವುದೇ ಆದಾಯದ ನಷ್ಟವಾಗುವುದಿಲ್ಲ.

ಗಣಿಗಾರಿಕೆ ಯೋಜನೆಗಳಿಗೆ ವರ್ಷಾನುಗಟ್ಟಲೆ ಭಾರಿ ಪ್ರಮಾಣದ ಮುಂಗಡ ಬಂಡವಾಳದ ಅಗತ್ಯವಿರುವುದರಿಂದ ಈ ಕಾಯಿದೆಯು ದೀರ್ಘಕಾಲೀನ ರಾಜಸ್ವ ನಿಶ್ಚಿತತೆಯನ್ನು ಸ್ಥಾಪಿಸುತ್ತದೆ. ಈ ಕಾಯಿದೆಯು ರಾಜ್ಯ ಸರ್ಕಾರದ ಉತ್ಪಾದನೆ ಮತ್ತು ಆದಾಯದಲ್ಲಿ ಹೆಚ್ಚಳಕ್ಕೆ ದಾರಿ ಮಾಡಿಕೊಡುತ್ತದೆ.

Q. ಕಾಯಿದೆಯು ರಾಜ್ಯಗಳಿಗೆ ಬರುವ ಆದಾಯದ ಮೇಲೆ ಪ್ರಭಾವ ಬೀರುತ್ತದೆಯೇ?

ಈ ಕಾಯಿದೆಯು ರಾಜ್ಯಗಳಿಗೆ ಬರುವ ಆದಾಯವನ್ನು ಕಡಿಮೆ ಮಾಡುವುದಿಲ್ಲ. ರಾಜ್ಯಗಳು ರಾಯಲ್ಟಿ, ಹರಾಜು ಪ್ರೀಮಿಯಂ, ಡಿಎಂಎಫ್ ಮತ್ತು ಜಿಎಸ್‌ಟಿಯಲ್ಲಿ ತಮ್ಮ ಪಾಲನ್ನು ಪಡೆಯುವುದನ್ನು ಮುಂದುವರಿಸುತ್ತವೆ. 2015 ರಲ್ಲಿ ಹರಾಜು ವ್ಯವಸ್ಥೆಯು ಪ್ರಾರಂಭವಾದಂದಿನಿಂದ, ಕಲ್ಲಿದ್ದಲು ಸೇರಿದಂತೆ ಗಣಿಗಾರಿಕೆ ವಲಯದಿಂದ ರಾಜ್ಯಗಳು ₹ 7 ಲಕ್ಷ ಕೋಟಿಗೂ ಹೆಚ್ಚು ಹಣವನ್ನು ಪಡೆದುಕೊಂಡಿವೆ. ಇಂದು, ಗಣಿಗಾರಿಕೆ ವಲಯದ ಆದಾಯದ ಸುಮಾರು ಶೇಕಡಾ 96 ರಷ್ಟು ರಾಜ್ಯಗಳಿಗೆ ಸೂರುತ್ತ್ತದೆ, ಆದರೆ ಕೇಂದ್ರವು ಜಿಎಸ್‌ಟಿ ಮೂಲಕ ಸುಮಾರು ಶೇಕಡಾ 4 ರಷ್ಟನ್ನು ಪಡೆಯುತ್ತದೆ. ಬದಲಾಗಿ, ಈ ಕಾಯಿದೆಯು ಗಣಿಗಾರಿಕೆ ಯೋಜನೆಗಳನ್ನು ಆರ್ಥಿಕವಾಗಿ ಲಾಭದಾಯಕವಾಗಿರಿಸಲು ಶ್ರಮಿಸುತ್ತದೆ, ಇದರಿಂದ ಹೆಚ್ಚಿನ ಉತ್ಪಾದನೆ, ಹೂಡಿಕೆ ಮತ್ತು ನಿರಂತರ ಗಣಿಗಾರಿಕೆ ಚಟುವಟಿಕೆಯು ರಾಜ್ಯಗಳಿಗೆ ಹೆಚ್ಚು ಸುಸ್ಥಿರ ಆದಾಯವನ್ನು ಸೃಷ್ಟಿಸುತ್ತದೆ. ವಾಸ್ತವವಾಗಿ, ರಾಜ್ಯದ ಖನಿಜ ಆದಾಯವು ಕಳೆದ ದಶಕದಲ್ಲಿ ಸುಮಾರು ಶೇಕಡಾ 354 ರಷ್ಟು ಹೆಚ್ಚಾಗಿದ್ದು, 2025-26 ರಲ್ಲಿ ಸುಮಾರು ₹82,366 ಕೋಟಿಗೆ ತಲುಪಿದೆ.

Q. ಕಾಯಿದೆಯು ಆರ್ಥಿಕತೆಗೆ ಹೇಗೆ ಸಹಾಯ ಮಾಡುತ್ತದೆ?

ಮುನ್ಸೂಚಿಸಬಹುದಾದ ರಾಜಸ್ವ ವ್ಯವಸ್ಥೆಯನ್ನು ಸೃಷ್ಟಿಸುವ ಮೂಲಕ, ದೀರ್ಘಕಾಲೀನ ನೀತಿ ದೃಷ್ಟಿಕೋನವು ದೇಶದಲ್ಲಿ ಹೆಚ್ಚಿನ ಉದ್ಯಮಗಳ ಭಾಗವಹಿಸುವಿಕೆ ಮತ್ತು ವಿದೇಶಿ ಹೂಡಿಕೆಯನ್ನು ಆಕರ್ಷಿಸುತ್ತದೆ. ಹೂಡಿಕೆದಾರರು ತಮ್ಮ ತೆರಿಗೆ ಹೊಣೆಗಾರಿಕೆಯನ್ನು ಮುಂಚಿತವಾಗಿಯೇ ತಿಳಿದುಕೊಳ್ಳಬೇಕಾಗುತ್ತದೆ. ಈ ಸ್ಥಿರತೆಯು ಹೂಡಿಕೆಯನ್ನು ಆಕರ್ಷಿಸುತ್ತದೆ, ನಿರ್ಣಾಯಕ ಖನಿಜಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ, ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಮತ್ತು ವಿಕಸಿತ ಭಾರತ 2047 ರ ದೃಷ್ಟಿಕೋನವನ್ನು ಸುಗಮಗೊಳಿಸುತ್ತದೆ.

Q. ರಾಜ್ಯಗಳು ವಿಧಿಸುವ ಖನಿಜ ತೆರಿಗೆಗಳು ಸಾಮಾನ್ಯ ನಾಗರಿಕರಿಗೆ ಹೇಗೆ ಹಾನಿ ಮಾಡುತ್ತವೆ?

ಖನಿಜಗಳು ಉಕ್ಕು, ವಿದ್ಯುತ್, ಸಿಮೆಂಟ್ ಮತ್ತು ಮೂಲಸೌಕರ್ಯಗಳಿಗೆ ಪ್ರಾಥಮಿಕ ಕಚ್ಚಾ ವಸ್ತುಗಳಾಗಿವೆ. ರಾಜ್ಯಗಳು ಗಣಿಗಾರಿಕೆಯ ಹಂತದಲ್ಲೇ ಭಾರಿ ತೆರಿಗೆಗಳನ್ನು ವಿಧಿಸಿದಾಗ, ಅದು ತೆರಿಗೆಯ ಮೇಲೆ ತೆರಿಗೆ ಬೀಳುವ (ಕೇಸ್ಕೇಡಿಂಗ್) ಪರಿಣಾಮವನ್ನು ಸೃಷ್ಟಿಸುತ್ತದೆ. ಇದು ಖನಿಜದ ಇನ್‌ಪುಟ್ ವೆಚ್ಚವನ್ನು ಹೆಚ್ಚಿಸಿ, ಉತ್ಪಾದನಾ ವೆಚ್ಚವನ್ನು ಏರಿಸುತ್ತದೆ ಮತ್ತು ಅಂತಿಮವಾಗಿ ಸಾಮಾನ್ಯ ನಾಗರಿಕರ ಜೀವನ ವೆಚ್ಚವನ್ನು ಹೆಚ್ಚಿಸುತ್ತದೆ.

Q. ಕಾಯಿದೆಯು ಕೇವಲ ಬೆರಳೆಣಿಕೆಯಷ್ಟು ಕಾರ್ಪೊರೇಟ್‌ಗಳಿಗೆ ಮಾತ್ರ ಪ್ರಯೋಜನ ನೀಡುತ್ತದೆಯೇ?

ಈ ಕಾಯಿದೆಯು ಯಾವುದೇ ನಿರ್ದಿಷ್ಟ ಕಾರ್ಪೊರೇಟ್‌ಗೆ ಪ್ರಯೋಜನ ನೀಡಲು ಉದ್ದೇಶಿಸಿಲ್ಲ. ಇದು ಗಣಿಗಾರಿಕೆ ವಲಯದ ತೆರಿಗೆ ರಚನೆಗೆ ಸ್ಪಷ್ಟತೆ, ನಿಯಂತ್ರಣ ಮತ್ತು ಶಾಸನಬದ್ಧ ತಿದ್ದುಪಡಿಯನ್ನು ತರಲು ಉದ್ದೇಶಿಸಿದೆ. ಇಂದು, ಖನಿಜ ಬ್ಲಾಕ್‌ಗಳನ್ನು ಯಾರದೇ ಸ್ವಯಂಪ್ರೇರಿತ ನಿರ್ಧಾರದಿಂದ  ಹಂಚಿಕೆ ಮಾಡಲಾಗುವುದಿಲ್ಲ. ಎಲ್ಲಾ ಬ್ಲಾಕ್‌ಗಳನ್ನು ಸ್ಪರ್ಧಾತ್ಮಕ ಬಿಡ್ಡಿಂಗ್ ಆಧರಿಸಿ ಶೇಕಡಾ 100 ರಷ್ಟು ಪಾರದರ್ಶಕ ಇ-ಹರಾಜಿನ ಮೂಲಕ ಹಂಚಿಕೆ ಮಾಡಲಾಗುತ್ತದೆ. 2014 ಕ್ಕಿಂತ ಮುಂಚಿತವಾಗಿ ಇದ್ದ ವ್ಯವಸ್ಥೆಯು ಈಗ ಇಲ್ಲ. ಇಂದು, ಹಂಚಿಕೆಯು ಗರಿಷ್ಠ ಬಿಡ್ ಆಧಾರಿತವಾಗಿದೆಯೇ ಹೊರತು ವೈಯಕ್ತಿಕ ನಿರ್ಧಾರ ಅಥವಾ ಪ್ರಭಾವದ ಮೇಲಲ್ಲ. ಸುಮಾರು 725 ಖನಿಜ ಬ್ಲಾಕ್‌ಗಳನ್ನು ಹರಾಜು ಮಾಡಲಾಗಿದ್ದು, 105 ಕಾರ್ಯಾಚರಣೆಯಲ್ಲಿದ್ದರೆ, 141 ಕಲ್ಲಿದ್ದಲು ಗಣಿಗಳನ್ನು ಯಶಸ್ವಿಯಾಗಿ ಹರಾಜು ಮಾಡಲಾಗಿದ್ದು, ಅವುಗಳಲ್ಲಿ 23 ಕಾರ್ಯಾಚರಣೆಯಲ್ಲಿವೆ.

ಹರಾಜು ಪ್ರಕ್ರಿಯೆಯು ಪಿಎಸ್‌ಯುಗಳು (PSUs), ಎಂಎಸ್‌ಎಂಇಗಳು (MSMEs), ಸ್ಟಾರ್ಟ್‌ಅಪ್‌ಗಳು, ಭಾರತೀಯ ಕಂಪನಿಗಳು ಮತ್ತು ಜಾಗತಿಕ ಕಂಪನಿಗಳಿಗೆ ಸಮಾನ ಅವಕಾಶವನ್ನು ನೀಡುತ್ತದೆ. ಹರಾಜು ಮಾಡಲಾದ 725 ಪ್ರಮುಖ ಖನಿಜ ಬ್ಲಾಕ್‌ಗಳಲ್ಲಿ, 300 ವಿಶಿಷ್ಟ ಬಿಡ್‌ದಾರರಿದ್ದಾರೆ. ಮತ್ತು ದೇಶದಲ್ಲಿ ಕೆಲಸ ಮಾಡುತ್ತಿರುವ ಒಟ್ಟು ಗಣಿಗಳಲ್ಲಿ, 337 ವಿಶಿಷ್ಟ ಕಂಪನಿಗಳು ಗಣಿಗಾರಿಕೆ ಗುತ್ತಿಗೆಗಳನ್ನು ಹೊಂದಿವೆ. ಹಳೆಯ ಮತ್ತು ಅನಿಶ್ಚಿತ ತೆರಿಗೆ ಬೇಡಿಕೆಗಳನ್ನು ಪೂರ್ವಾಪರ ಅನ್ವಯವಾಗುವಂತೆ ಅಥವಾ ಒಮ್ಮೆಲೇ ವಿಧಿಸಿದರೆ, ಅದು ಉಕ್ಕು, ಸಿಮೆಂಟ್, ಅಲ್ಯೂಮಿನಿಯಂ ಮತ್ತು ವಿದ್ಯುತ್‌ನಂತಹ ವಲಯಗಳ ಮೇಲೆ ಗಂಭೀರ ಪರಿಣಾಮ ಬೀರಬಹುದು. ಮೂಲಸೌಕರ್ಯ, ವಸತಿ, ವಿದ್ಯುತ್ ಮತ್ತು ಇತರ ಅತ್ಯಗತ್ಯ ಸರಕು ಮತ್ತು ಸೇವೆಗಳ ಹೆಚ್ಚಿನ ವೆಚ್ಚಗಳ ಮೂಲಕ ಇದರ ಪ್ರಭಾವವು ಅಂತಿಮವಾಗಿ ಸಾಮಾನ್ಯ ನಾಗರಿಕನನ್ನು ತಲುಪುತ್ತದೆ. ಈ ಕಾಯಿದೆಯು ರಾಜ್ಯದ ಖಜಾನೆಯಿಂದ ಯಾವುದೇ ಹಣವನ್ನು ಯಾವುದೇ ಕಾರ್ಪೊರೇಟ್‌ಗೆ ವರ್ಗಾಯಿಸುವುದಿಲ್ಲ ಮತ್ತು ಯಾರ ಬಾಕಿಯನ್ನೂ ಮನ್ನಾ ಮಾಡುವುದಿಲ್ಲ. ಇದು ಗಣಿಗಾರಿಕೆ ವಲಯ ಮತ್ತು ವಿಶಾಲ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದಾದ ವಸೂಲಾತಿಗಳನ್ನು ನಿಯಂತ್ರಿಸಲು ಸ್ಪಷ್ಟ ಕಾನೂನು ಚೌಕಟ್ಟನ್ನು ಮಾತ್ರ ಒದಗಿಸುತ್ತದೆ. ವ್ಯಾಜ್ಯಗಳನ್ನು ಕಡಿಮೆ ಮಾಡುವುದು, ನೀತಿ ನಿಶ್ಚಿತತೆಯನ್ನು ಒದಗಿಸುವುದು ಮತ್ತು ಸ್ಥಿರ ಹಾಗೂ ಸ್ಪರ್ಧಾತ್ಮಕ ಗಣಿಗಾರಿಕೆ ವಲಯವನ್ನು ಸೃಷ್ಟಿಸುವುದು ಇದರ ಉದ್ದೇಶವಾಗಿದೆ, ಇದರಿಂದ ಉದ್ಯಮ ಮತ್ತು ದೇಶ ಎರಡೂ ಬೆಳೆಯಬಹುದು.

Q. ತಿದ್ದುಪಡಿ ಕಾಯಿದೆಯ ಮೂಲಕ ಮಾಡಲಾದ ಬದಲಾವಣೆಯು ಉಪ-ಖನಿಜಗಳಿಗೂ ಅನ್ವಯಿಸುತ್ತದೆಯೇ?

ಇಲ್ಲ. ಎಂಎಂಡಿಆರ್ (MMDR) ತಿದ್ದುಪಡಿ ಕಾಯಿದೆ, 2026 ರಾಜ್ಯ ಸರ್ಕಾರಗಳಿಂದ ಪ್ರತ್ಯೇಕವಾಗಿ ನಿಯಂತ್ರಿಸಲ್ಪಡುವ ಮತ್ತು ನಿರ್ವಹಿಸಲ್ಪಡುವ ಉಪ-ಖನಿಜಗಳ ಮೇಲೆ ಪ್ರಭಾವ ಬೀರವುದಿಲ್ಲ. ಮರಳು, ಜಲ್ಲಿ, ಜೇಡಿಮಣ್ಣು, ಸಿಲಿಕಾ, ಗ್ರಾನೈಟ್, ಮಾರ್ಬಲ್, ಜಿಪ್ಸಮ್, ಲ್ಯಾಟರೈಟ್ ಮತ್ತು ಇತರವುಗಳನ್ನು ಒಳಗೊಂಡಂತೆ ಸುಮಾರು 50 ಉಪ-ಖನಿಜಗಳು ಈ ವರ್ಗದ ಅಡಿಯಲ್ಲಿ ಬರುತ್ತವೆ. ಈ ಉಪ-ಖನಿಜಗಳನ್ನು ನಿಯಂತ್ರಿಸುವ, ನಿರ್ವಹಿಸುವ ಅಥವಾ ತೆರಿಗೆ ವಿಧಿಸುವ ರಾಜ್ಯ ಸರ್ಕಾರಗಳ ಅಧಿಕಾರವನ್ನು ಈ ಕಾಯಿದೆಯು ಬದಲಾಯಿಸುವುದಿಲ್ಲ. ಆದ್ದರಿಂದ, ಇಂತಹ ಉಪ-ಖನಿಜಗಳ ಮೇಲೆ ರಾಜ್ಯಗಳು ಹೊಂದಿರುವ ಪ್ರಸ್ತುತ ನಿಯಂತ್ರಣ ಮತ್ತು ರಾಜಸ್ವ ಅಧಿಕಾರಗಳು ಈ ಕಾಯಿದೆಯಿಂದ ಬಾಧಿತವಾಗುವುದಿಲ್ಲ.

References

Ministry of Coal

Ministry of Mines

Click here to see pdf

 

*****

(Explainer ID: 159650) आगंतुक पटल : 45
Provide suggestions / comments
इस विज्ञप्ति को इन भाषाओं में पढ़ें: English , Urdu , हिन्दी , Bengali