Economy

ಪಿಎಂ-ಸೇತು: ಐಟಿಐಗಳ ರೂಪಾಂತರದ ಒಂದು ವರ್ಷ

Posted On: 03 OCT 2026 3:22PM

 

ಪಿಎಂ-ಸೇತು ಯೋಜನೆಯು ಹಬ್-ಅಂಡ್-ಸ್ಪೋಕ್ ಮಾದರಿ ಮತ್ತು ಉದ್ಯಮದ ಅಗತ್ಯಗಳಿಗೆ ಅನುಗುಣವಾದ ತರಬೇತಿಯ ಮೂಲಕ ಸರ್ಕಾರಿ 1000 ಐಟಿಐಗಳನ್ನು ಮೇಲ್ದರ್ಜೆಗೇರಿಸುವುದರ ಮೇಲೆ ಗಮನ ಹರಿಸುತ್ತದೆ. ಈ ಯೋಜನೆಯು ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರಗಳ ಮೂಲಕ ಐದು ಎನ್‌ಎಸ್‌ಟಿಐಗಳ (ರಾಷ್ಟ್ರೀಯ ಕೌಶಲ ತರಬೇತಿ ಸಂಸ್ಥೆಗಳು) ಸಾಮರ್ಥ್ಯ ವರ್ಧನೆಗೂ ಅವಕಾಶ ಕಲ್ಪಿಸುತ್ತದೆ. ಕೌಶಲ್ಯ ಅಭಿವೃದ್ಧಿಯಲ್ಲಿ ಉದ್ಯಮಗಳ ಭಾಗವಹಿಸುವಿಕೆಯನ್ನು ಕಾರ್ಯತಂತ್ರ ಹೂಡಿಕೆ ಯೋಜನೆಗಳು, ವಿಶೇಷ ಉದ್ದೇಶದ ವಾಹಕಗಳು ಮತ್ತು ಆಂಕರ್ ಉದ್ಯಮ ಪಾಲುದಾರರ ಮೂಲಕ ಸೇರ್ಪಡೆಗೊಳಿಸಲಾಗಿದೆ. ಈ ಯೋಜನೆಯು ಉದಯೋನ್ಮುಖ ತಂತ್ರಜ್ಞಾನಗಳು ಮತ್ತು ಉದ್ಯೋಗಗಳನ್ನು ಒಳಗೊಂಡ ಹೊಸ ಯುಗದ ಪಠ್ಯಕ್ರಮಗಳನ್ನು ಪರಿಚಯಿಸುತ್ತದೆ. ಆಯ್ದ ಎನ್‌ಎಸ್‌ಟಿಐಗಳಲ್ಲಿ ಮುಂದುವರಿದ ಕೌಶಲ್ಯ ತರಬೇತಿಯನ್ನು ನೀಡಲು ಅಂತರರಾಷ್ಟ್ರೀಯ ಪಾಲುದಾರಿಕೆಗಳು ಬೆಂಬಲ ನೀಡುತ್ತವೆ. ಈ ಉಪಕ್ರಮವು ರಾಜ್ಯ ಚುಕ್ಕಾಣಿ ಸಮಿತಿಗಳು  ಮತ್ತು ಉದ್ಯಮಗಳ ಸಕ್ರಿಯ ಭಾಗವಹಿಸುವಿಕೆಯ ಮೂಲಕ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ್ಯಂತ ತನ್ನ ಅನುಷ್ಠಾನವನ್ನು ವಿಸ್ತರಿಸಿದೆ. ಯೋಜನೆಯ ಒಂದು ವರ್ಷದ ಪ್ರಗತಿಯಲ್ಲಿ ೮೫೦ ಐಟಿಐಗಳನ್ನು ಗುರುತಿಸಲಾಗಿದ್ದು, ೧೪ ಐಟಿಐ ಕ್ಲಸ್ಟರ್‌ಗಳಿಗೆ ಅನುಮೋದನೆ ನೀಡಲಾಗಿದೆ. ಯೋಜಿತ ಕೌಶಲ್ಯ ಪ್ರಯೋಗಾಲಯಗಳು  ವಿದ್ಯಾರ್ಥಿಗಳಿಗೆ ವೃತ್ತಿಪರ ಕೌಶಲ್ಯಗಳ ಪ್ರಾಯೋಗಿಕ ಅನುಭವವನ್ನು ಮತ್ತಷ್ಟು ವಿಸ್ತರಿಸುತ್ತವೆ.

ಕುಶಲ ಕಾರ್ಯಪಡೆಯ ನಿರ್ಮಾಣಕ್ಕಾಗಿ ಐಟಿಐಗಳ ಕಾಯಕಲ್ಪ

ಭಾರತದ ಕೈಗಾರಿಕಾ ತರಬೇತಿ ಸಂಸ್ಥೆಗಳು (ಐಟಿಐಗಳ) ದೇಶದ ವೃತ್ತಿಪರ ತರಬೇತಿ ಪರಿಸರ ವ್ಯವಸ್ಥೆಯ ಅತ್ಯಂತ ಪ್ರಮುಖ ಅಂಗವಾಗಿದ್ದು, ಯುವಜನತೆಗೆ ಉದ್ಯೋಗ ಮತ್ತು ಕೈಗಾರಿಕಾ ಕ್ಷೇತ್ರಕ್ಕೆ ಅಗತ್ಯವಿರುವ ಪ್ರಾಯೋಗಿಕ ಕೌಶಲ್ಯಗಳನ್ನು ಒದಗಿಸುತ್ತಿವೆ. ಕಾರ್ಯಪಡೆಯ ಅಗತ್ಯತೆಗಳು ವಿಕಸನಗೊಳ್ಳುತ್ತಿರುವಂತೆ, ವೃತ್ತಿಪರ ತರಬೇತಿಯ ಗುಣಮಟ್ಟ, ಪ್ರಸ್ತುತತೆ ಮತ್ತು ಉದ್ಯಮ-ಆಧಾರಿತ ದೃಷ್ಟಿಕೋನವನ್ನು ಬಲಪಡಿಸುವುದು ಅತ್ಯಂತ ಅಗತ್ಯವಾಗಿದೆ.

ಈ ಹಿನ್ನೆಲೆಯಲ್ಲಿ, 'ಪಿಎಂ-ಸೇತು' (ಉತ್ತಮಗೊಳಿಸಿದ ಐಟಿಐಗಳ ಮೂಲಕ ಪ್ರಧಾನ ಮಂತ್ರಿ ಕೌಶಲ್ಯ ಮತ್ತು ಉದ್ಯೋಗಸಾಧ್ಯತೆಯ ರೂಪಾಂತರ ಯೋಜನೆ) ಯೋಜನೆಯನ್ನು 2025ರ ಅಕ್ಟೋಬರ್ 4 ರಂದು ಪ್ರಾರಂಭಿಸಲಾಯಿತು. ಈ ಯೋಜನೆಯು ಸರ್ಕಾರಿ ಐಟಿಐಗಳನ್ನು ಆಧುನಿಕ ಮತ್ತು ಉದ್ಯಮಾಧಾರಿತ ತರಬೇತಿ ಸಂಸ್ಥೆಗಳಾಗಿ ಪರಿವರ್ತಿಸುವ ಮೂಲಕ ವೃತ್ತಿಪರ ತರಬೇತಿಯ ಒಟ್ಟಾರೆ ಗುಣಮಟ್ಟ ಹಾಗೂ ಪ್ರಸ್ತುತತೆಯನ್ನು ಹೆಚ್ಚಿಸುತ್ತದೆ. ಉದ್ಯಮ-ನೇತೃತ್ವದ ಆಡಳಿತವನ್ನು ಬಲಪಡಿಸುವುದು, ತರಬೇತಿ ಮೂಲಸೌಕರ್ಯವನ್ನು ಮೇಲ್ದರ್ಜೆಗೇರಿಸುವುದು ಮತ್ತು ಬದಲಾಗುತ್ತಿರುವ ಕಾರ್ಯಪಡೆಯ ಅಗತ್ಯಗಳಿಗೆ ಅನುಗುಣವಾಗಿ ಬೇಡಿಕೆ ಆಧಾರಿತ ಕೋರ್ಸ್‌ಗಳನ್ನು ಪ್ರೋತ್ಸಾಹಿಸುವುದು ಈ ಉಪಕ್ರಮದ ಮುಖ್ಯ ಗುರಿಯಾಗಿದೆ. ಈ ಯೋಜನೆಯು ₹60,000 ಕೋಟಿ ಒಟ್ಟು ವೆಚ್ಚವನ್ನು ಹೊಂದಿದ್ದು, ಇದರಲ್ಲಿ ಕೇಂದ್ರ ಸರ್ಕಾರದಿಂದ ₹30,000 ಕೋಟಿ, ರಾಜ್ಯ ಸರ್ಕಾರಗಳಿಂದ ₹20,000 ಕೋಟಿ ಮತ್ತು ಉದ್ಯಮ ವಲಯದಿಂದ ₹10,000 ಕೋಟಿ ಅನುದಾನ ಒಳಗೊಂಡಿದೆ. ಈ ಯೋಜನೆಯು 2026 ರ ಅಕ್ಟೋಬರ್ ೪ ರಂದು ತನ್ನ ಒಂದು ವರ್ಷದ ಪಯಣವನ್ನು ಪೂರೈಸಿದೆ.

ಐಟಿಐಗಳು: ಕುಶಲ ಕಾರ್ಯಪಡೆಗೆ ಬಲವಾದ ತಳಹದಿ

ಐಟಿಐಗಳು ಯುವಕರನ್ನು ಉದ್ಯೋಗ ಮತ್ತು ಕೈಗಾರಿಕೆಗಳಿಗೆ ಅಗತ್ಯವಾದ ಪ್ರಾಯೋಗಿಕ ಕೌಶಲ್ಯಗಳೊಂದಿಗೆ ಸಜ್ಜುಗೊಳಿಸಲು ವೃತ್ತಿಪರ ತರಬೇತಿಯನ್ನು ನೀಡುತ್ತವೆ. 'ಕುಶಲಕರ್ಮಿಗಳ ತರಬೇತಿ ಯೋಜನೆ'ಯ ಅಡಿಯಲ್ಲಿ, ಇಂಜಿನಿಯರಿಂಗ್ ಮತ್ತು ಇಂಜಿನಿಯರಿಂಗ್‌‌ಯೇತರ ಕ್ಷೇತ್ರಗಳಲ್ಲಿ ಸರ್ಕಾರಿ ಹಾಗೂ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಮೂಲಕ ತರಬೇತಿಯನ್ನು ನೀಡಲಾಗುತ್ತದೆ. ಕೋರ್ಸ್‌ನ ಅವಧಿಯು ಕ್ಷೇತ್ರಕ್ಕೆ ಅನುಗುಣವಾಗಿ ಆರು ತಿಂಗಳಿನಿಂದ ಎರಡು ವರ್ಷಗಳವರೆಗೆ ವ್ಯತ್ಯಾಸಗೊಳ್ಳುತ್ತದೆ.

ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ತರಬೇತಿ ಮಹಾನಿರ್ದೇಶನಾಲಯವು, ರಾಷ್ಟ್ರೀಯ ಮಟ್ಟದಲ್ಲಿ ವೃತ್ತಿಪರ ತರಬೇತಿಯ ಅಭಿವೃದ್ಧಿ ಮತ್ತು ಸಮನ್ವಯದ ಹೊಣೆ ಹೊತ್ತಿರುವ ಅತ್ಯುನ್ನತ ಸಂಸ್ಥೆಯಾಗಿದೆ. ನೀತಿಗಳು, ಮಾನದಂಡಗಳನ್ನು ರೂಪಿಸುವುದು, ಪಠ್ಯಕ್ರಮ ಅಭಿವೃದ್ಧಿ, ಸಂಯೋಜನೆ, ಬೋಧಕರ ತರಬೇತಿ ಮತ್ತು ವೃತ್ತಿ ಪರೀಕ್ಷೆಗಳನ್ನು ನಡೆಸುವುದು ಇದರ ಮುಖ್ಯ ಕಾರ್ಯಗಳಾಗಿವೆ. ಐಟಿಐಗಳು ಆಯಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಾತ್ಮಕ ಹಾಗೂ ಹಣಕಾಸಿನ ನಿಯಂತ್ರಣದಲ್ಲಿರುತ್ತವೆ.

ದೇಶದಲ್ಲಿ ಸರ್ಕಾರಿ ಮತ್ತು ಖಾಸಗಿ ಸೇರಿದಂತೆ ಒಟ್ಟು ಐಟಿಐಗಳ ಸಂಖ್ಯೆಯು ೨೦೧೪ ರಲ್ಲಿದ್ದ 9776 ರಿಂದ 2026ರ ವೇಳೆಗೆ 13888 ಕ್ಕೆ ಏರಿಕೆಯಾಗಿದ್ದು, ಶೇಕಡಾ 42 ರಷ್ಟು ಪ್ರಗತಿಯನ್ನು ದಾಖಲಿಸಿದೆ. ಇದಲ್ಲದೆ, ದೇಶಾದ್ಯಂತ ಐಟಿಐಗಳಲ್ಲಿನ ವಿದ್ಯಾರ್ಥಿಗಳ ದಾಖಲಾತಿಯು 2014-15 ರ ಶೈಕ್ಷಣಿಕ ಸಾಲಿನಲ್ಲಿದ್ದ 9.51 ಲಕ್ಷದಿಂದ 2025-26 ರ ಶೈಕ್ಷಣಿಕ ಸಾಲಿನಲ್ಲಿ 14.70 ಲಕ್ಷಕ್ಕೆ ಏರಿಕೆಯಾಗಿದ್ದು, ಶೇಕಡಾ ೫೪ ರಷ್ಟು ಹೆಚ್ಚಳವನ್ನು ತೋರಿಸುತ್ತದೆ.

ಈ ವಿಸ್ತರಿಸುತ್ತಿರುವ ಜಾಲಬಂಧವು ವೃತ್ತಿ ಶಿಕ್ಷಣವನ್ನು ಬಲಪಡಿಸಲು ಮತ್ತು ವಿವಿಧ ಕ್ಷೇತ್ರಗಳ ಬದಲಾಗುತ್ತಿರುವ ಕೌಶಲ್ಯ ಅಗತ್ಯಗಳಿಗೆ ಅನುಗುಣವಾಗಿ ತರಬೇತಿಯನ್ನು ನೀಡಲು ಬಲವಾದ ಸಾಂಸ್ಥಿಕ ತಳಹದಿಯನ್ನು ಒದಗಿಸುತ್ತದೆ.

  • ಘಟಕ I: 1000 ಸರ್ಕಾರಿ ಐಟಿಐಗಳ ಮೇಲ್ದರ್ಜೆಗೇರಿಸುವಿಕೆ ಘಟಕ I ರ ಅಡಿಯಲ್ಲಿ 200 'ಹಬ್ ಐಟಿಐಗಳು' (ಐಟಿಐ ಕೇಂದ್ರಗಳು) ಮತ್ತು 800 'ಸ್ಪೋಕ್ ಐಟಿಐಗಳು' ಸೇರಿದಂತೆ ಒಟ್ಟು 1000 ಸರ್ಕಾರಿ ಐಟಿಐಗಳನ್ನು ಸೇರ್ಪಡೆಗೊಳಿಸಲಾಗಿದೆ. ಈ ಸಂಸ್ಥೆಗಳನ್ನು ಆಧುನಿಕ ಮೂಲಸೌಕರ್ಯ ಮತ್ತು ಉದ್ಯಮಾಧಾರಿತ ತರಬೇತಿಯೊಂದಿಗೆ 'ಹಬ್-ಅಂಡ್-ಸ್ಪೋಕ್' ಮಾದರಿಯಲ್ಲಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಪ್ರತಿಯೊಂದು ಹಬ್ ಐಟಿಐ ಸರಾಸರಿ ನಾಲ್ಕು ಸ್ಪೋಕ್ ಐಟಿಐಗಳೊಂದಿಗೆ ಸಂಯೋಜಿತಗೊಂಡಿದ್ದು, ಮುಂದುವರಿದ ಮೂಲಸೌಕರ್ಯ, ಆಧುನಿಕ ವೃತ್ತಿಪರ ಕೋರ್ಸ್‌ಗಳು, ಡಿಜಿಟಲ್ ಕಲಿಕಾ ವ್ಯವಸ್ಥೆಗಳು ಮತ್ತು ಉದ್ಯಮಶೀಲತಾ ಪ್ರೋತ್ಸಾಹಕ (ಇನ್‌ಕ್ಯುಬೇಶನ್) ಸೌಲಭ್ಯಗಳನ್ನು ಪರಸ್ಪರ ಹಂಚಿಕೊಳ್ಳಲು ಅವಕಾಶ ಕಲ್ಪಿಸುತ್ತದೆ.

ಹಬ್ ಐಟಿಐಗಳು: ನಾವೀನ್ಯತಾ ಕೇಂದ್ರಗಳು, ಬೋಧಕರ ತರಬೇತಿ ಮೂಲಸೌಕರ್ಯ, ಉತ್ಪಾದನಾ ಘಟಕಗಳು ಮತ್ತು ಉದ್ಯೋಗ ನಿಯೋಜನಾ (ಪ್ಲೇಸ್‌ಮೆಂಟ್) ಸೇವೆಗಳಂತಹ ಅತ್ಯುನ್ನತ ಸೌಲಭ್ಯಗಳನ್ನು ಒದಗಿಸುತ್ತವೆ.

ಸ್ಪೋಕ್ ಐಟಿಐಗಳು: ತರಬೇತಿಯ ತಲುಪುವಿಕೆಯನ್ನು ವಿಸ್ತರಿಸುತ್ತವೆ ಮತ್ತು ಆಯಾ ಕ್ಲಸ್ಟರ್‌ಗಳಲ್ಲಿ ಲಭ್ಯವಿರುವ ಸಂಪನ್ಮೂಲಗಳೊಂದಿಗೆ ವಿದ್ಯಾರ್ಥಿಗಳನ್ನು ಜೋಡಿಸುತ್ತವೆ.

ಈ ಮಾದರಿಯು ಸ್ಮಾರ್ಟ್ ತರಗತಿಗಳು, ಆಧುನಿಕ ಪ್ರಯೋಗಾಲಯಗಳು, ಡಿಜಿಟಲ್ ಪಠ್ಯವಿಷಯಗಳು ಮತ್ತು ಉದ್ಯಮದ ಅಗತ್ಯಕ್ಕೆ ತಕ್ಕಂತೆ ರೂಪಿಸಲಾದ ಕೋರ್ಸ್‌ಗಳ ಮೂಲಕ ಐಟಿಐಗಳನ್ನು ಕಾಯಕಲ್ಪಗೊಳಿಸಲು ನೆರವಾಗುತ್ತಿದೆ.

  • ಘಟಕ II: ಎನ್‌ಎಸ್‌ಟಿಐಗಳ ಸಾಮರ್ಥ್ಯ ವರ್ಧನೆ: ಘಟಕ II ಭುವನೇಶ್ವರ, ಚೆನ್ನೈ, ಹೈದರಾಬಾದ್, ಕಾನ್ಪುರ ಮತ್ತು ಲೂಧಿಯಾನಗಳಲ್ಲಿರುವ ೫ ರಾಷ್ಟ್ರೀಯ ಕೌಶಲ ತರಬೇತಿ ಸಂಸ್ಥೆಗಳ (ಎನ್‌ಎಸ್‌ಟಿಐs) ಸಾಮರ್ಥ್ಯ ವರ್ಧನೆಯ ಮೇಲೆ ಗಮನ ಹರಿಸುತ್ತದೆ. ಇದು ಕ್ಷೇತ್ರ-ನಿರ್ದಿಷ್ಟ 'ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರಗಳನ್ನು' ಸ್ಥಾಪಿಸುವುದು ಮತ್ತು ಜಾಗತಿಕ ಪಾಲುದಾರಿಕೆಗಳ ಮೂಲಕ ಬೋಧಕರಿಗೆ ಅತ್ಯಾಧುನಿಕ ತರಬೇತಿ ನೀಡುವುದನ್ನು ಒಳಗೊಂಡಿದೆ.
  • ಆಯಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಉದ್ಯಮ ರಂಗದೊಂದಿಗೆ ಸಮಾಲೋಚಿಸಿ ಪಿಎಂ-ಸೇತು ಅಡಿಯಲ್ಲಿ ಐಟಿಐಗಳ ಆಯ್ಕೆಯ ನೇತೃತ್ವ ವಹಿಸುತ್ತವೆ. ಅವರು ಉದ್ಯಮ ಪಾಲುದಾರರ ಸಹಯೋಗದೊಂದಿಗೆ ಐಟಿಐಗಳ ಮೇಲ್ದರ್ಜೆಗೇರಿಸುವಿಕೆಗಾಗಿ ಪ್ರಸ್ತಾವನೆಗಳನ್ನು ಸಲ್ಲಿಸುತ್ತಾರೆ. ಈ ಪ್ರಕ್ರಿಯೆಯು ಆಯಾ ಪ್ರದೇಶಗಳ ಉದಯೋನ್ಮುಖ ಕೌಶಲ್ಯ ಅಗತ್ಯತೆಗಳು ಮತ್ತು ಕೈಗಾರಿಕಾ ಸಾಮರ್ಥ್ಯವನ್ನು ಪರಿಗಣಿಸುತ್ತದೆ.
  • ರಾಷ್ಟ್ರೀಯ ಹಂತದಲ್ಲಿ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಚುಕ್ಕಾಣಿ ಸಮಿತಿಯನ್ನು ರಚಿಸಲಾಗಿದ್ದು, ಇದು ಯೋಜನೆಗೆ ಒಟ್ಟಾರೆ ಮಾರ್ಗದರ್ಶನ ನೀಡುತ್ತದೆ. ಎನ್‌ಎಸ್‌ಸಿ ಯು ವಿಶಾಲ ನೀತಿ ನಿರ್ದೇಶನಗಳನ್ನು ಒದಗಿಸುತ್ತದೆ, ಕಾರ್ಯಾಚರಣೆಯ ಮಾರ್ಗಸೂಚಿಗಳನ್ನು ಅಂತಿಮಗೊಳಿಸುತ್ತದೆ, ಅನುಷ್ಠಾನದ ಮೇಲ್ವಿಚಾರಣೆ ನಡೆಸುತ್ತದೆ ಮತ್ತು ಅಗತ್ಯವಿರುವಲ್ಲಿ ತಿದ್ದುಪಡಿಗಳನ್ನು ಕೈಗೊಳ್ಳುತ್ತದೆ.
  • ಆಯ್ಕೆ ಪ್ರಕ್ರಿಯೆಯಲ್ಲಿ ಉದ್ಯಮಗಳ ಭಾಗವಹಿಸುವಿಕೆಯನ್ನು ಸಹ ಸೇರಿಸಲಾಗಿದ್ದು, ಸಂಭಾವ್ಯ ಉದ್ಯಮ ಪಾಲುದಾರರು 'ಕಾರ್ಯತಂತ್ರ ಹೂಡಿಕೆ ಯೋಜನೆ'ಯನ್ನು ಸಲ್ಲಿಸುವುದು ಕಡ್ಡಾಯವಾಗಿದೆ.

ಒಂದು ವರ್ಷದಲ್ಲಿ ಪಿಎಂ-ಸೇತು: ಯೋಜನೆಯಿಂದ ಅನುಷ್ಠಾನದತ್ತ

ಪಿಎಂ-ಸೇತು ಯೋಜನೆಯ ಮೊದಲ ವರ್ಷದೊಳಗೆ, ಅನುಷ್ಠಾನವು ಸಾಂಸ್ಥಿಕ ಸಿದ್ಧತೆ ಮತ್ತು ಐಟಿಐಗಳ ಗುರುತಿಸುವಿಕೆಯಿಂದ ಹಿಡಿದು ಐಟಿಐ ಕ್ಲಸ್ಟರ್‌ಗಳು ಹಾಗೂ ಎಐಪಿ ಗಳ ಅನುಮೋದನೆಯವರೆಗೆ ವೇಗದ ಪ್ರಗತಿಯನ್ನು ಸಾಧಿಸಿದೆ. ಒಟ್ಟು 172 ಹಬ್ ಐಟಿಐಗಳು ಮತ್ತು 678ಸ್ಪೋಕ್ ಐಟಿಐಗಳನ್ನು ಒಳಗೊಂಡಂತೆ ೮೫೦ ಐಟಿಐಗಳನ್ನು ಗುರುತಿಸಲಾಗಿದೆ. 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕ್ಲಸ್ಟರ್‌ಗಳನ್ನು ಗುರುತಿಸಿ, ಪ್ರತ್ಯೇಕ ರಾಜ್ಯ ಬಜೆಟ್ ಶೀರ್ಷಿಕೆಗಳನ್ನು ಸೃಷ್ಟಿಸಿವೆ. ಈ ಮಧ್ಯೆ, 35 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಅನುಷ್ಠಾನದ ಮಾರ್ಗದರ್ಶನ ಮತ್ತು ಮೇಲ್ವಿಚಾರಣೆಗಾಗಿ ತಮ್ಮ ರಾಜ್ಯ ಚುಕ್ಕಾಣಿ ಸಮಿತಿಗಳನ್ನು ರಚಿಸಿವೆ. ೨೬ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಉದ್ಯಮಗಳ ಭಾಗವಹಿಸುವಿಕೆಯನ್ನು ಆಹ್ವಾನಿಸುವ ಪ್ರಕ್ರಿಯೆಯನ್ನು ಸಹ ಪ್ರಾರಂಭಿಸಿವೆ.

ರಾಷ್ಟ್ರೀಯ ಚುಕ್ಕಾಣಿ ಸಮಿತಿಯು  ಪಿಎಂ-ಸೇತು ಯೋಜನೆಯನ್ನು ತನ್ನ ಪ್ರಾಯೋಗಿಕ ಹಂತದಿಂದ ಗುರುತಿಸಲಾದ ಎಲ್ಲಾ 200 ಐಟಿಐ ಕ್ಲಸ್ಟರ್‌ಗಳಲ್ಲಿ ದೇಶಾದ್ಯಂತ ಜಾರಿಗೆ ತರಲು ಅನುಮೋದನೆ ನೀಡಿದೆ. ಈ ದೇಶವ್ಯಾಪಿ ವಿಸ್ತರಣೆಯು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ಉದ್ಯಮ ಸಿದ್ಧತೆ ಮತ್ತು ಅನುಷ್ಠಾನ ಸಾಮರ್ಥ್ಯಕ್ಕೆ ಅನುಗುಣವಾಗಿ ಯೋಜನೆಯನ್ನು ಜಾರಿಗೊಳಿಸಲು ಅನುವು ಮಾಡಿಕೊಡುತ್ತದೆ.

ಪಿಎಂ-ಸೇತು ಅಡಿಯಲ್ಲಿ ₹3446 ಕೋಟಿ ಹೂಡಿಕೆಯೊಂದಿಗೆ 14 ಐಟಿಐ ಕ್ಲಸ್ಟರ್‌ಗಳ ಕಾರ್ಯತಂತ್ರ ಹೂಡಿಕೆ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.

ಕ್ರ.ಸಂ.

ರಾಜ್ಯ

ಕ್ಲಸ್ಟರ್

ಆಂಕರ್ ಉದ್ಯಮ ಪಾಲುದಾರ

ಕ್ಷೇತ್ರ

ಮೌಲ್ಯ (₹ ಕೋಟಿಗಳಲ್ಲಿ)

1.

ಆಂಧ್ರಪ್ರದೇಶ

ಕಂಚರಪಾಲೆಂ

ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್ ಇಂಡಿಯಾ

ಉಕ್ಕು ಮತ್ತು ಲೋಹಗಳು

200

2.

ಒಡಿಶಾ

ಕೆಂಜಾರ್-ಬರ್ಬಿಲ್

ಜಿಂದಾಲ್ ನವೀನ್ ಅವಸರ ಲಿಮಿಟೆಡ್

ವೈವಿಧ್ಯಮಯ ತಯಾರಿಕೆ

240

3.

ಗುಜರಾತ್

ಸೂರತ್

ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್ ಇಂಡಿಯಾ

ಉಕ್ಕು ಮತ್ತು ಲೋಹಗಳು

240

4.

ತೆಲಂಗಾಣ

ಓಲ್ಡ್ ಸಿಟಿ

ಅಪೋಲೋ ಮೆಡ್‌ಸ್ಕಿಲ್ಸ್ ಲಿಮಿಟೆಡ್

ಆರೋಗ್ಯ ಮತ್ತು ಜೀವ ವಿಜ್ಞಾನ

241

5.

ತೆಲಂಗಾಣ

ಸಂಗಾರೆಡ್ಡಿ

ನ್ಯೂಲ್ಯಾಂಡ್ ಫೌಂಡೇಶನ್

ಫಾರ್ಮಾಸ್ಯುಟಿಕಲ್ಸ್ ಮತ್ತು ರಾಸಾಯನಿಕಗಳು

241

6.

ತೆಲಂಗಾಣ

ಪಟಾನ್‌ಚೆರು

ಶ್ರೀ ಸಿದ್ಧಾರ್ಥ್ ಇನ್ಫ್ರಾಟೆಕ್ & ಸರ್ವಿಸಸ್

ವೈವಿಧ್ಯಮಯ ತಯಾರಿಕೆ

275

7.

ರಾಜಸ್ಥಾನ

ಭಿವಾಡಿ

ಎಚ್.ಜಿ. ಇನ್ಫ್ರಾ ಇಂಜಿನಿಯರಿಂಗ್ ಲಿಮಿಟೆಡ್

ಮೂಲಸೌಕರ್ಯ ಮತ್ತು ನಿರ್ಮಾಣ

241

8.

ಉತ್ತರಪ್ರದೇಶ

ಮೀರತ್

ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮ

ಕೌಶಲ್ಯಾಭಿವೃದ್ಧಿ

240

9.

ತೆಲಂಗಾಣ

ಮೇಡ್ಚಲ್

ಝೆನ್ ಟೆಕ್ನಾಲಜೀಸ್ ಲಿಮಿಟೆಡ್

ರಕ್ಷಣೆ ಮತ್ತು ಎಲೆಕ್ಟ್ರಾನಿಕ್ಸ್

೨೫೪

10.

ಹರಿಯಾಣ

ಕುರುಕ್ಷೇತ್ರ

ಜಿಂದಾಲ್ ನವೀನ್ ಅವಸರ ಲಿಮಿಟೆಡ್

ವೈವಿಧ್ಯಮಯ ತಯಾರಿಕೆ

320

11.

ಮಹಾರಾಷ್ಟ್ರ

ಛತ್ರಪತಿ ಸಂಭಾಜಿನಗರ

ಬೆಲ್ರೈಸ್ ಇಂಡಸ್ಟ್ರೀಸ್

ಆಟೋಮೋಟಿವ್ ಉದ್ಯಮ

235

12.

ಮಹಾರಾಷ್ಟ್ರ

ಪುಣೆ

ಬಿವಿಜಿ ಗ್ರೂಪ್

ಸಮಗ್ರ ಸೌಲಭ್ಯ ನಿರ್ವಹಣೆ

241

13

ಜಮ್ಮು ಮತ್ತು ಕಾಶ್ಮೀರ

ಶ್ರೀನಗರ

ಇಂದರ್‌ದೀಪ್ ಇನ್ಫ್ರಾ ಇಂಡಿಯಾ ಲಿಮಿಟೆಡ್

ಮೂಲಸೌಕರ್ಯ ಮತ್ತು ನಿರ್ಮಾಣ

235

14.

ಜಮ್ಮು ಮತ್ತು ಕಾಶ್ಮೀರ

ಜಮ್ಮು

ಈಗಲ್ ಇನ್ಫ್ರಾ ಇಂಡಿಯಾ ಲಿಮಿಟೆಡ್

ಮೂಲಸೌಕರ್ಯ ಮತ್ತು ನಿರ್ಮಾಣ

2410

ಒಟ್ಟು                                                                    ₹ 3446 ಕೋಟಿ

ಕೌಶಲ್ಯದ ವ್ಯಾಪ್ತಿಯನ್ನು ವಿಸ್ತರಿಸುವುದು

ಉದಯೋನ್ಮುಖ ಕಾರ್ಯಪಡೆಯ ಅಗತ್ಯಗಳಿಗಾಗಿ ನವಯುಗದ ಕೋರ್ಸ್‌ಗಳು

ಮೂಲಸೌಕರ್ಯ ಮತ್ತು ಸಾಂಸ್ಥಿಕ ಸುಧಾರಣೆಗಳಿಗೆ ಪೂರಕವಾಗಿ, ಪಿಎಂ-ಸೇತು ಯೋಜನೆಯು ವೃತ್ತಿಪರ ತರಬೇತಿಯನ್ನು ಉದಯೋನ್ಮುಖ ತಂತ್ರಜ್ಞಾನಗಳು ಹಾಗೂ ಉದ್ಯೋಗಗಳಿಗೆ ತಕ್ಕಂತೆ ನೀಡುವತ್ತ ಗಮನ ಹರಿಸುತ್ತದೆ. ತರಬೇತಿ ಮಹಾನಿರ್ದೇಶನಾಲಯವು ಕುಶಲಕರ್ಮಿಗಳ ತರಬೇತಿ ಯೋಜನೆಯ ಅಡಿಯಲ್ಲಿ 32 ನವಯುಗದ ಕೋರ್ಸ್‌ಗಳನ್ನು ಪರಿಚಯಿಸಿದೆ. ಇವು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಸೈಬರ್ ಸೆಕ್ಯುರಿಟಿ, ಆಡಿಟಿವ್ ಮ್ಯಾನುಫ್ಯಾಕ್ಚರಿಂಗ್ (3D ಪ್ರಿಂಟಿಂಗ್), ಎಲೆಕ್ಟ್ರಿಕ್ ವಾಹನಗಳು, ಸೆಮಿಕಂಡಕ್ಟರ್ ತಂತ್ರಜ್ಞಾನ, ರೋಬೋಟಿಕ್ಸ್, ಗ್ರೀನ್ ಹೈಡ್ರೋಜನ್, ಡ್ರೋನ್‌ಗಳು, ಐಒಟಿ, ಸೌರ ಇಂಧನ, 5G ಮತ್ತು ಸಾಫ್ಟ್‌ವೇರ್ ಟೆಸ್ಟಿಂಗ್‌ನಂತಹ ಕ್ಷೇತ್ರಗಳನ್ನು ಒಳಗೊಂಡಿವೆ. ಆಯಾ ರಾಜ್ಯಗಳ ಆಡಳಿತಾತ್ಮಕ ಮತ್ತು ಹಣಕಾಸಿನ ನಿಯಂತ್ರಣದಲ್ಲಿರುವ ತಮ್ಮ ಐಟಿಐಗಳಲ್ಲಿ ರಾಜ್ಯಗಳು ಈ ಕೋರ್ಸ್‌ಗಳನ್ನು ಅಳವಡಿಸಿಕೊಳ್ಳಬಹುದಾಗಿದೆ.

ಸುಧಾರಿತ ಕೌಶಲ್ಯಕ್ಕಾಗಿ ಅಂತರರಾಷ್ಟ್ರೀಯ ಪಾಲುದಾರಿಕೆಗಳು

ಪಿಎಂ-ಸೇತು ಚೌಕಟ್ಟು ರಾಷ್ಟ್ರೀಯ ಕೌಶಲ ಶ್ರೇಷ್ಠತಾ ಕೇಂದ್ರಗಳ ಸಾಮರ್ಥ್ಯವನ್ನು ಬಲಪಡಿಸಲು ಮತ್ತು ತರಬೇತಿಯನ್ನು ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ರೂಪಿಸಲು ಅಂತಾರಾಷ್ಟ್ರೀಯ ಪಾಲುದಾರಿಕೆಗಳಿಗೂ ಅವಕಾಶ ಕಲ್ಪಿಸುತ್ತದೆ. ಎನ್‌ಎಸ್‌ಟಿಐ ಚೆನ್ನೈಗಾಗಿ ಸಿಂಗಾಪುರದೊಂದಿಗೆ, ಎನ್‌ಎಸ್‌ಟಿಐ ಕಾನ್ಪುರಕ್ಕಾಗಿ ಫ್ರಾನ್ಸ್‌ನೊಂದಿಗೆ, ಎನ್‌ಎಸ್‌ಟಿಐ ಭುವನೇಶ್ವರಕ್ಕಾಗಿ ಆಸ್ಟ್ರೇಲಿಯಾದೊಂದಿಗೆ ತಿಳುವಳಿಕಾಪತ್ರಕ್ಕೆ ಸಹಿ ಮಾಡಲಾಗಿದೆ ಮತ್ತು ಎನ್‌ಎಸ್‌ಟಿಐ ಹೈದರಾಬಾದ್‌ಗಾಗಿ ಜರ್ಮನಿಯೊಂದಿಗೆ ಜಂಟಿ ಉದ್ದೇಶಿತ ಘೋಷಣೆಯನ್ನು ವಿನಿಮಯ ಮಾಡಿಕೊಳ್ಳಲಾಗಿದೆ.

ಕೌಶಲ್ಯದಿಂದ ಉದ್ಯೋಗದವರೆಗಿನ ಮಾರ್ಗವನ್ನು ಬಲಪಡಿಸುವುದು

ಪಿಎಂ-ಸೇತು ಯೋಜನೆಯು ಆಧುನಿಕ ಮೂಲಸೌಕರ್ಯ, ಉದ್ಯಮಗಳ ಸಕ್ರಿಯ ಭಾಗವಹಿಸುವಿಕೆ ಮತ್ತು ಬೇಡಿಕೆ-ಆಧಾರಿತ ತರಬೇತಿಯ ಮೂಲಕ ಭಾರತದ ವೃತ್ತಿಪರ ತರಬೇತಿ ಪರಿಸರ ವ್ಯವಸ್ಥೆಯನ್ನು ಬಲಪಡಿಸುತ್ತಿದೆ. ಇದರ ಅನುಷ್ಠಾನವು ಸರ್ಕಾರಿ ಐಐಟಿಗಳು ಮತ್ತು ಎನ್‌ಎಸ್‌ಟಿಐಗಳನ್ನು ವಿಕಸನಗೊಳ್ಳುತ್ತಿರುವ ಕಾರ್ಯಪಡೆಯ ಅಗತ್ಯಗಳಿಗೆ ಹತ್ತಿರ ತರುತ್ತಿದೆ. ಈ ಉಪಕ್ರಮವು ನವಯುಗದ ಕೌಶಲ್ಯಗಳು, ಅಂತರರಾಷ್ಟ್ರೀಯ ಪರಿಣತಿ ಮತ್ತು ಆರಂಭಿಕ ವೃತ್ತಿಪರ ಅನುಭವದ ತಲುಪುವಿಕೆಯನ್ನು ವಿಸ್ತರಿಸುತ್ತಿದೆ. ಒಟ್ಟಾರೆಯಾಗಿ, ಈ ಕ್ರಮಗಳು ಭಾರತದ ಯುವಜನತೆಗೆ ಹೆಚ್ಚು ಸಂಪರ್ಕಿತ ಮತ್ತು ಉದ್ಯಮದ ಅಗತ್ಯಗಳಿಗೆ ತಕ್ಕಂತೆ ಸ್ಪಂದಿಸುವ ಕೌಶಲ್ಯ ಮಾರ್ಗವನ್ನು ಬೆಂಬಲಿಸುತ್ತಿವೆ.

References

 

Ministry of Skill Development and Entrepreneurship

https://dgt.gov.in/sites/default/files/2025-01/NCVT_Affiliation_norms_ITIs.pdf

https://pmsetu.nimi.co.in/about-us

https://pm-setu.skillindiadigital.gov.in/

https://www.pib.gov.in/PressReleasePage.aspx?PRID=2246879&lang=1&reg=1

https://www.pib.gov.in/PressReleasePage.aspx?PRID=2286584&reg=48&lang=2

 https://www.pib.gov.in/PressReleasePage.aspx?PRID=2222121&reg=3&lang=1

https://www.pib.gov.in/PressReleaseDetail.aspx?PRID=2208158&reg=6&lang=1

https://www.pib.gov.in/PressReleaseDetail.aspx?PRID=2238234&reg=6&lang=1

https://www.pib.gov.in/PressReleasePage.aspx?PRID=2246879&lang=1&reg=1

https://www.pib.gov.in/PressReleasePage.aspx?PRID=2291100&lang=1&reg=3

https://sansad.in/getFile/lsapps/loksabhaquestions/annex/188/AS206_AQ2o13.pdf?source=lsapps

https://www.pib.gov.in/PressReleaseDetail.aspx?PRID=2281937&reg=6&lang=1

https://www.pib.gov.in/PressReleseDetailm.aspx?PRID=2307775&lang=1&reg=3

https://www.pib.gov.in/PressReleaseDetail.aspx?PRID=2312980&reg=6&lang=1

https://www.pib.gov.in/PressReleasePage.aspx?PRID=2174932&reg=48&lang=2

 

Prime Minister's Office (PMO)

https://www.pmindia.gov.in/en/news_updates/pm-to-unveil-various-youth-focused-initiatives-worth-more-than-rs-62000-crore-on-4th-october

PM-SETU: One Year of Transforming India’s ITIs

 

*****

(Explainer ID: 160314) आगंतुक पटल : 21
Provide suggestions / comments
इस विज्ञप्ति को इन भाषाओं में पढ़ें: English , Urdu , हिन्दी , Assamese , Bengali , Tamil , Telugu , Malayalam