Rural Prosperity

ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ 2.0

ದಕ್ಷತೆ ಮತ್ತು ಸ್ವಾವಲಂಬನೆ ಹೊಂದಿರುವ ಕಾರ್ಮಿಕರ ಸಶಕ್ತಿಕರಣ

Posted On: 24 SEP 2026 10:53AM

 

ಗ್ರಾಮೀಣ ಯುವಕರಿಗೆ ಸೂಕ್ತವಾದ ಕೌಶಲ್ಯಗಳನ್ನು ಒದಗಿಸುವುದು ಮತ್ತು ಉದ್ಯೋಗಾವಕಾಶಗಳಿಗೆ ಅವಕಾಶ ಕಲ್ಪಿಸುವುದು ಸಮಗ್ರ ಮತ್ತು ಸುಸ್ಥಿರ ಗ್ರಾಮೀಣ ಪರಿವರ್ತನೆಯನ್ನು ಮುನ್ನಡೆಸುವಲ್ಲಿ ಕೇಂದ್ರವಾಗಿದೆ. ಈ ಗುರಿಯನ್ನು ಮುನ್ನಡೆಸಲು, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿಯಲ್ಲಿ 25 ಸೆಪ್ಟೆಂಬರ್ 2014 ರಂದು ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಯನ್ನು ಪ್ರಾರಂಭಿಸಲಾಯಿತು. ಇದರ ಆಧಾರದ ಮೇಲೆ, ಡಿಡಿಯು-ಜಿಕೆವೈ 2.0 ಯೋಜನೆಯು ಪ್ರಸ್ತುತ 31 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 749 ಕ್ಕಿಂತ ಹೆಚ್ಚು ಅನುಮೋದಿತ ಯೋಜನೆಗಳ ಮೂಲಕ, 760 ಕ್ಕೂ ಹೆಚ್ಚು ಸಕ್ರಿಯ ತರಬೇತಿ ಕೇಂದ್ರಗಳು ಮತ್ತು 455 ಕ್ಕಿಂತ ಹೆಚ್ಚು ಯೋಜನೆ ಅನುಷ್ಠಾನ ಸಂಸ್ಥೆಗಳೊಂದಿಗೆ, ಇಂದಿನ ದಿನಾಂಕದವರೆಗೆ ಆರ್ಥಿಕತೆಯ ಎಲ್ಲಾ ಕ್ಷೇತ್ರಗಳನ್ನು ಒಳಗೊಂಡಂತೆ ಜಾರಿಯಲ್ಲಿದೆ. 2014-15ರಲ್ಲಿ ಆರಂಭವಾದಾಗಿನಿಂದ, 800 ಕ್ಕೂ ಹೆಚ್ಚು ಉದ್ಯೋಗ ಪಾತ್ರಗಳಿಗಾಗಿ 18.47 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದೆ ಮತ್ತು 12.43 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ದೊರೆಯುವಂತೆ ಮಾಡಲಾಗಿದೆ. ಕೌಶಲ್ಯ ವೃದ್ಧಿಯ ಪ್ರಯತ್ನಗಳಿಗೆ ಪೂರಕವಾಗಿ, ಆರ್‌ಎಸ್‌ಇಟಿಐಗಳು ಸ್ವಯಂ-ಉದ್ಯೋಗ ಮತ್ತು ಗ್ರಾಮೀಣ ಉದ್ಯಮಶೀಲತೆಯನ್ನು ಉತ್ತೇಜಿಸುತ್ತವೆ. ಇಂದಿನ ದಿನಾಂಕದವರೆಗೆ, 634 ಜಿಲ್ಲೆಗಳಲ್ಲಿ ಹರಡಿರುವ 647 ಆರ್‌ಎಸ್‌ಇಟಿಐಗಳು 63.47 ಲಕ್ಷ ಅಭ್ಯರ್ಥಿಗಳಿಗೆ ತರಬೇತಿ ನೀಡಿವೆ, ಅದರಲ್ಲಿ 45.60 ಲಕ್ಷ ಮಂದಿ ಯಶಸ್ವಿಯಾಗಿ ನೆಲೆಗೊಂಡಿದ್ದಾರೆ. ಈ ಉಕ್ರಮಗಳು ಗ್ರಾಮೀಣ ಯುವಕರಿಗೆ ಉದ್ಯಮ-ಆಧಾರಿತ ತರಬೇತಿ, ಡಿಜಿಟಲ್ ವಿತರಣೆ, ಉದ್ಯೋಗ ಉಳಿಸಿಕೊಳ್ಳುವಿಕೆ ಮತ್ತು ಸುಸ್ಥಿರ ಜೀವನೋಪಾಯ ಅವಕಾಶಗಳನ್ನು ಬಲಪಡಿಸುತ್ತವೆ.

ಕೌಶಲ್ಯ ಮತ್ತು ಅವಕಾಶಗಳ ಮೂಲಕ ಗ್ರಾಮೀಣ ಯುವಕರನ್ನು ಬಲಪಡಿಸುವುದು

ಭಾರತದ ಯುವ ಜನತೆಯು ಆರ್ಥಿಕ ಬೆಳವಣಿಗೆ ಮತ್ತು ಗ್ರಾಮೀಣ ಜೀವನೋಪಾಯವನ್ನು ಬಲಪಡಿಸಲು ಒಂದು ಪ್ರಮುಖ ಅವಕಾಶವನ್ನು ಒದಗಿಸುತ್ತದೆ. ಯುವ ಜನತೆಯು 2036 ರ ವೇಳೆಗೆ ಸುಮಾರು 345 ಮಿಲಿಯನ್ ತಲುಪುವ ಅಂದಾಜಿದೆ. ಈ ಜನಸಂಖ್ಯಾ ಸಾಮರ್ಥ್ಯವನ್ನು ಬಳಸಿಕೊಳ್ಳಲು ಗುಣಮಟ್ಟದ ಕೌಶಲ್ಯಗಳು, ಉದ್ಯೋಗ ಮತ್ತು ಜೀವನೋಪಾಯದ ಅವಕಾಶಗಳಿಗೆ ಹೆಚ್ಚಿನ ಪ್ರವೇಶದ ಅಗತ್ಯವಿದೆ.

ಈ ಅಗತ್ಯವನ್ನು ಗುರುತಿಸಿ, ಗ್ರಾಮೀಣ ಅಭಿವೃದ್ಧಿ ಸಚಿವಾಲಯವು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿಯಲ್ಲಿ 25 ಸೆಪ್ಟೆಂಬರ್ 2014 ರಂದು ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಗೆ (ಡಿಡಿಯು-ಜಿಕೆವೈ) ಚಾಲನೆ ನೀಡಿತು. ಡಿಡಿಯು-ಜಿಕೆವೈ ಈ ವರ್ಷ ತನ್ನ 12 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವಾಗ, ಈ ಕಾರ್ಯಕ್ರಮವು ಗ್ರಾಮೀಣ ಯುವಕರಿಗೆ ಕೌಶಲ್ಯದಿಂದ ಉದ್ಯೋಗ ಮತ್ತು ಸುಸ್ಥಿರ ಜೀವನೋಪಾಯದ ಕಡೆಗೆ ದಾರಿಗಳನ್ನು ಬಲಪಡಿಸುವುದನ್ನು ಮುಂದುವರೆಸಿದೆ. ಒಂದು ದಶಕಕ್ಕೂ ಹೆಚ್ಚು ಕಾಲ, ಈ ಯೋಜನೆಯು ಬಡ ಕುಟುಂಬಗಳ 15-35 ವರ್ಷ ವಯಸ್ಸಿನ ಗ್ರಾಮೀಣ ಯುವಕರಿಗೆ ಉದ್ಯೋಗ-ಸಂಯೋಜಿತ ಕೌಶಲ್ಯ ತರಬೇತಿಯನ್ನು ನೀಡುತ್ತಿದೆ.

ಇದು ಎಸ್‌ಸಿ/ಎಸ್‌ಟಿ ಸಮುದಾಯಗಳು (ಶೇಕಡಾ 50), ಮಹಿಳೆಯರು (ಶೇಕಡಾ 33) ಮತ್ತು ವಿಕಲಚೇತನರ (ಶೇಕಡಾ 5) ಕಡ್ಡಾಯ ಒಳಗೊಳ್ಳುವಿಕೆಯ ಮೂಲಕ ಸಾಮಾಜಿಕ ಒಳಗೊಳ್ಳುವಿಕೆಯನ್ನು ಉತ್ತೇಜಿಸುತ್ತದೆ. ಕಳೆದ ದಶಕದಲ್ಲಿ, ಉದ್ಯೋಗದ ಫಲಿತಾಂಶಗಳು ಮತ್ತು ತರಬೇತಿಯ ನಂತರದ ಬೆಂಬಲಕ್ಕೆ ಹೆಚ್ಚಿನ ಒತ್ತು ನೀಡಲು ಈ ಯೋಜನೆಯು ವಿಕಸನಗೊಂಡಿದೆ. ಸರ್ಕಾರವು ಮೇ 2025 ರಲ್ಲಿ ನವೀಕರಿಸಿದ ಡಿಡಿಯು-ಜಿಕೆವೈ 2.0 ಮಾರ್ಗಸೂಚಿಗಳನ್ನು ಅಧಿಸೂಚಿಸಿತು, ಇದು ತರಬೇತಿ, ಉದ್ಯೋಗಾವಕಾಶಗಳು, ಉದ್ಯೋಗದ ಸ್ಥಿರತೆ ಮತ್ತು ತರಬೇತಿಯ ನಂತರದ ಬೆಂಬಲದ ಸುತ್ತಲಿನ ಚೌಕಟ್ಟನ್ನು ಬಲಪಡಿಸಿತು. ಪರಿಷ್ಕೃತ ಚೌಕಟ್ಟು ಏರೋಸ್ಪೇಸ್ ಮತ್ತು ವಿಮಾನಯಾನ, ಕೃಷಿ, ಸೌಂದರ್ಯ ಮತ್ತು ಸ್ವಾಸ್ಥ್ಯ, ಹಸಿರು ಉದ್ಯೋಗಗಳು, ಆರೋಗ್ಯ ರಕ್ಷಣೆ, ಜವಳಿ ಮತ್ತು ಇತರವುಗಳನ್ನು ಒಳಗೊಂಡಂತೆ ಉದ್ಯಮದ ಅವಶ್ಯಕತೆಗಳ ಆಧಾರದ ಮೇಲೆ ಬಹು ಕ್ಷೇತ್ರಗಳಲ್ಲಿ ತರಬೇತಿಯನ್ನು ಒದಗಿಸುತ್ತದೆ. ಗ್ರಾಮೀಣ ಕೌಶಲ್ಯ ಅಭಿವೃದ್ಧಿಯ ಮೇಲಿನ ನಿರಂತರ ಗಮನವು ಕೇಂದ್ರ ಬಜೆಟ್ 2026-27 ರಲ್ಲಿಯೂ ಪ್ರತಿಫಲಿಸಿದೆ, ಇದು ಡಿಡಿಯು-ಜಿಕೆವೈ ಗೆ 750 ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡಿದೆ.

ವಿಶೇಷ ಉಪಕ್ರಮಗಳು: ದುರ್ಬಲ ಪ್ರದೇಶಗಳಿಗೆ ಗುರಿಪಡಿಸಿದ ಹಸ್ತಕ್ಷೇಪಗಳು

ಡಿಡಿಯು-ಜಿಕೆವೈ 2.0 ಅಡಿಯಲ್ಲಿ ಎರಡು ವಿಶೇಷ ಕಾರ್ಯಕ್ರಮಗಳನ್ನು ಜಾರಿ ಮಾಡಲಾಗುತ್ತಿದೆ:

ರೋಶ್ನಿ: ಇದು ಗೃಹ ಸಚಿವಾಲಯದಿಂದ ಸೂಚಿಸಲ್ಪಟ್ಟ ಎಡಪಂಥೀಯ ಉಗ್ರವಾದ ಪೀಡಿತ ಜಿಲ್ಲೆಗಳ ನಿರ್ದಿಷ್ಟ ಅಗತ್ಯಗಳನ್ನು ಪೂರೈಸುತ್ತದೆ. ಇದು ವಸತಿ ಸಹಿತ ಕೌಶಲ್ಯ ತರಬೇತಿಯನ್ನು ಕಡ್ಡಾಯಗೊಳಿಸುತ್ತದೆ, ಮಹಿಳಾ ಅಭ್ಯರ್ಥಿಗಳಿಗೆ ಶೇಕಡಾ 40 ರಷ್ಟು ವ್ಯಾಪ್ತಿಯನ್ನು ಹೊಂದಿದೆ. ಸ್ಥಳೀಯ ಮೂಲಭೂತ ಸೌಕರ್ಯಗಳು, ಶಿಕ್ಷಣ, ಆರೋಗ್ಯ, ನೈಸರ್ಗಿಕ ಸಂಪನ್ಮೂಲಗಳು ಮತ್ತು ಸಾಂಪ್ರದಾಯಿಕ ಕೌಶಲ್ಯಗಳ ಮೇಲೆ ಗಮನಹರಿಸಿ, ಈ ಉಪಕ್ರಮವನ್ನು ಆಕಾಂಕ್ಷಿ ಜಿಲ್ಲೆಗಳಿಗೂ ವಿಸ್ತರಿಸಲಾಗಿದೆ.

ಹಿಮಾಯತ್: ಇದು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ಗಾಗಿರುವ ವಿಶೇಷ ಡಿಡಿಯು-ಜಿಕೆವೈ ಯೋಜನೆಯಾಗಿದೆ. ಇದು ಬಿಪಿಎಲ್ ಮತ್ತು ಎಪಿಎಲ್ ವ್ಯಕ್ತಿಗಳನ್ನು ಒಳಗೊಂಡಂತೆ ಗ್ರಾಮೀಣ ಮತ್ತು ನಗರ ಯುವಕರನ್ನು ಒಳಗೊಳ್ಳುತ್ತದೆ ಮತ್ತು ವೇತನಯುಕ್ತ, ಸ್ವಯಂ ಮತ್ತು ಗಿಗ್ ಉದ್ಯೋಗವನ್ನು ಬೆಂಬಲಿಸುತ್ತದೆ. ಈ ಯೋಜನೆಯು ಶೇಕಡಾ 100 ರಷ್ಟು ಕೇಂದ್ರ ಸರ್ಕಾರದ ನಿಧಿಯನ್ನು ಹೊಂದಿದೆ ಮತ್ತು ಸಮರ್ಪಿತ ಮಿಷನ್ ನಿರ್ವಹಣಾ ಘಟಕಗಳ ಮೂಲಕ ರಾಜ್ಯದ ಬೆಂಬಲದೊಂದಿಗೆ ಜಾರಿಗೆ ತರಲಾಗಿದೆ.

ಈಶಾನ್ಯ: ಈಶಾನ್ಯ ರಾಜ್ಯಗಳಿಗೆ ವಿಶಿಷ್ಟವಾದ ಸಾಮಾಜಿಕ-ಸಾಂಸ್ಕೃತಿಕ ವ್ಯತ್ಯಾಸಗಳು ಮತ್ತು ಭೂಪ್ರದೇಶದ ದೃಷ್ಟಿಯಿಂದ ಇರುವ ಸವಾಲುಗಳನ್ನು ಪರಿಗಣಿಸಿ, ಡಿಡಿಯು-ಜಿಕೆವೈ ಗಾಗಿ ಮೀಸಲಿಟ್ಟ ಒಟ್ಟು ಹಂಚಿಕೆಯಲ್ಲಿ, ಶೇಕಡಾ 10 ರಷ್ಟು ಮೊತ್ತವನ್ನು ಈಶಾನ್ಯ ರಾಜ್ಯಗಳಿಗೆ ಕಾಯ್ದಿರಿಸಲಾಗಿದೆ.

ತಲುಪಲು ಕಷ್ಟಕರವಾದ ಪ್ರದೇಶಗಳು: ಇದರ ಜೊತೆಗೆ ವಿಶೇಷ ಪ್ರದೇಶ ಭತ್ಯೆಯ ವ್ಯವಸ್ಥೆಯೂ ಇದೆ, ಇಲ್ಲಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಸಂಸ್ಥೆಗಳು ಪ್ರತಿ ಅಭ್ಯರ್ಥಿಗೆ ಮೂಲ ತರಬೇತಿ ವೆಚ್ಚದ ಹೆಚ್ಚುವರಿ ಶೇಕಡಾ 10 ರಷ್ಟು ದರದಲ್ಲಿ ಪಾವತಿಗೆ ಅರ್ಹವಾಗಿರುತ್ತವೆ.

ಡಿಡಿಯು-ಜಿಕೆವೈ 2.0: ಸುಸ್ಥಿರ ಉದ್ಯೋಗದ ಕಡೆಗೆ ಒಂದು ಬದಲಾವಣೆ

ಡಿಡಿಯು-ಜಿಕೆವೈ 2.0ಯು ತರಬೇತಿ ಮತ್ತು ಉದ್ಯೋಗ ನಿಯೋಜನೆಯಿಂದ ಹಿಡಿದು ಉದ್ಯೋಗವನ್ನು ಉಳಿಸಿಕೊಳ್ಳುವುದು ಮತ್ತು ವೃತ್ತಿಜೀವನದಲ್ಲಿ ಮುನ್ನಡೆಯುವವರೆಗಿನ ಸಂಪೂರ್ಣ ಹಾದಿಯನ್ನು ಒಳಗೊಂಡಂತೆ, ಕೌಶಲ್ಯ ಮತ್ತು ಉದ್ಯೋಗಕ್ಕಾಗಿ ಹೆಚ್ಚು ಸಮಗ್ರವಾದ ವಿಧಾನವನ್ನು ಅಳವಡಿಸಿಕೊಂಡಿದೆ.

ಪರಿಷ್ಕೃತ ಚೌಕಟ್ಟು ತರಬೇತಿ ಮಾನದಂಡಗಳನ್ನು ಬಲಪಡಿಸುತ್ತದೆ, ಕನಿಷ್ಠ ಉದ್ಯೋಗ ಅವಧಿಯನ್ನು ವಿಸ್ತರಿಸುತ್ತದೆ ಮತ್ತು ಉದ್ಯೋಗದ ನಂತರದ ಬೆಂಬಲವನ್ನು ಹೆಚ್ಚಿಸುತ್ತದೆ. ಇದು ವಲನೆಗೆ ಸಂಬಂಧಿಸಿದ ಸವಾಲುಗಳನ್ನು ಸಹ ಪರಿಹರಿಸುತ್ತದೆ ಮತ್ತು ತಂತ್ರಜ್ಞಾನ-ಸಮರ್ಥ ಮೇಲ್ವಿಚಾರಣೆ ಹಾಗೂ ಅನುಷ್ಠಾನವನ್ನು ಬಲಪಡಿಸುತ್ತದೆ.

ತರಬೇತಿ ಚೌಕಟ್ಟನ್ನು ಪ್ರಮಾಣೀಕರಿಸುವುದು

ಡಿಡಿಯು-ಜಿಕೆವೈ 2.0 ಹೆಚ್ಚು ರಚನಾತ್ಮಕ ತರಬೇತಿ ಚೌಕಟ್ಟನ್ನು ಒದಗಿಸುವ ಜೊತೆಗೆ ಕನಿಷ್ಠ 576 ಗಂಟೆಗಳ ಅವಧಿಯನ್ನು ಉಳಿಸಿಕೊಂಡಿದೆ. ಮೂರು ತಿಂಗಳ ಕೋರ್ಸ್ 396 ಗಂಟೆಗಳ ಡೊಮೇನ್ (ಕ್ಷೇತ್ರ) ತರಬೇತಿ ಮತ್ತು 180 ಗಂಟೆಗಳ ಕಡ್ಡಾಯ ಡೊಮೇನ್-ಯೇತರ ತರಬೇತಿಯನ್ನು ಒಳಗೊಂಡಿದೆ. ಡೊಮೇನ್-ಯೇತರ ಅಂಶವನ್ನು ನಾಲ್ಕು ಕ್ಷೇತ್ರಗಳಲ್ಲಿ ಪ್ರಮಾಣೀಕರಿಸಲಾಗಿದೆ: ಇಂಗ್ಲಿಷ್ ಸಂವಹನ (60 ಗಂಟೆಗಳು), ಉದ್ಯೋಗಾರ್ಹತೆ ಮತ್ತು ಜೀವನ ಕೌಶಲ್ಯಗಳು (60 ಗಂಟೆಗಳು), ಕಂಪ್ಯೂಟರ್ ಮತ್ತು ಡಿಜಿಟಲ್ ಸಾಕ್ಷರತೆ (30 ಗಂಟೆಗಳು), ಮತ್ತು ಉದ್ಯಮಶೀಲತೆ (30 ಗಂಟೆಗಳು). ಇದು ಅಭ್ಯರ್ಥಿಗಳಿಗೆ ಸಂವಹನ, ಕಾರ್ಯಸ್ಥಳ, ಡಿಜಿಟಲ್ ಮತ್ತು ಉದ್ಯಮಶೀಲತಾ ಸಾಮರ್ಥ್ಯಗಳ ಜೊತೆಗೆ ಉದ್ಯೋಗ-ನಿರ್ದಿಷ್ಟ ತಾಂತ್ರಿಕ ಕೌಶಲ್ಯಗಳನ್ನು ಪಡೆಯುವುದನ್ನು ಖಚಿತಪಡಿಸುತ್ತದೆ.

ಉದ್ಯೋಗದ ಅವಧಿ

ಮೊದಲು, ಡಿಡಿಯು-ಜಿಕೆವೈ ಉದ್ಯೋಗವನ್ನು ಕನಿಷ್ಠ ಮೂರು ತಿಂಗಳ ನಿರಂತರ ಉದ್ಯೋಗವೆಂದು ವ್ಯಾಖ್ಯಾನಿಸಲಾಗಿತ್ತು. ಈ ಬಲವಾದ ತರಬೇತಿ ಆಧಾರದ ಮೇಲೆ, ಡಿಡಿಯು-ಜಿಕೆವೈ 2.0 ಅಡಿಯಲ್ಲಿ ಕನಿಷ್ಠ ಉದ್ಯೋಗ ಅವಧಿಯನ್ನು ಆರು ತಿಂಗಳಿಗೆ ವಿಸ್ತರಿಸಲಾಗಿದೆ. ಪರಿಷ್ಕೃತ ಮಾರ್ಗಸೂಚಿಗಳು ವೇತನಯುಕ್ತ, ಸ್ವಯಂ-ಉದ್ಯೋಗ ಮತ್ತು ಗಿಗ್ ಉದ್ಯೋಗ ಸೇರಿದಂತೆ ನಿರಂತರ ಮತ್ತು ನಿರಂತರವಲ್ಲದ ಎರಡೂ ರೀತಿಯ ಉದ್ಯೋಗಗಳನ್ನು ಒಳಗೊಂಡಿವೆ.

ಗ್ರಾಮೀಣ ಯುವಕರನ್ನು ಉದ್ಯೋಗದಾತರೊಂದಿಗೆ ಸಂಪರ್ಕಿಸಲು ಉದ್ಯೋಗ ಮೇಳಗಳು

ಸ್ಥಳೀಯ ಯುವಕರನ್ನು ಸಂಭಾವ್ಯ ಉದ್ಯೋಗದಾತರೊಂದಿಗೆ ಸಂಪರ್ಕಿಸಲು ಎಸ್‌ಆರ್‌ಎಲ್‌ಎಂಗಳಿಂದ ಬ್ಲಾಕ್ ಮತ್ತು ಗ್ರಾಮ ಪಂಚಾಯತ್ ಮಟ್ಟದಲ್ಲಿ ಉದ್ಯೋಗ ಮೇಳಗಳನ್ನು ಆಯೋಜಿಸಲಾಗುತ್ತದೆ. ಇವುಗಳು ಯುವಕರ ನೋಂದಣಿ ಮತ್ತು ಸಮಾಲೋಚನೆ, ಉದ್ಯೋಗದಾತರ ಪರಿಶೀಲನೆ, ಮತ್ತು ಕೌಶಲ್ಯ ಪಂಜೀ ಮೂಲಕ ಒಂದು ವರ್ಷದವರೆಗೆ ಉದ್ಯೋಗದ ಫಲಿತಾಂಶಗಳ ಟ್ರ್ಯಾಕಿಂಗ್ ಅನ್ನು ಒಳಗೊಂಡಿರುತ್ತವೆ. ಉತ್ತಮ ಉದ್ಯೋಗಾವಕಾಶಗಳನ್ನು ಬಯಸುವ ಡಿಡಿಯು-ಜಿಕೆವೈ ತರಬೇತಿ ಪಡೆದ ಅಭ್ಯರ್ಥಿಗಳು ಸೇರಿದಂತೆ, ಉದ್ಯೋಗಾರ್ಹ ಕೌಶಲ್ಯಗಳನ್ನು ಹೊಂದಿರುವ ಯುವಕರಿಗಾಗಿ ಈ ಮೇಳಗಳು ಮುಖ್ಯವಾಗಿ ಇರುತ್ತವೆ. ಡಿಡಿಯು-ಜಿಕೆವೈ ಬಜೆಟ್‌ನಿಂದ ಪ್ರತಿ ಜಿಪಿ ಮಟ್ಟದ ಮೇಳಕ್ಕೆ ₹50,000 ಮತ್ತು ಪ್ರತಿ ಬ್ಲಾಕ್ ಮಟ್ಟದ ಮೇಳಕ್ಕೆ ₹1 ಲಕ್ಷದವರೆಗೆ ನಿಧಿಯು ಲಭ್ಯವಿರುತ್ತದೆ, ಇದು ಅನುಕ್ರಮವಾಗಿ 100 ಮತ್ತು 200 ಅಭ್ಯರ್ಥಿಗಳ ಉದ್ಯೋಗ ನಿಯೋಜನೆಗೆ ಒಳಪಟ್ಟಿರುತ್ತದೆ.

ಉದ್ಯೋಗವನ್ನು ಉಳಿಸಿಕೊಳ್ಳುವಿಕೆ ಮತ್ತು ವೃತ್ತಿಜೀವನದುನ್ನತಿಯನ್ನು ಬಲಪಡಿಸುವುದು

ಡಿಡಿಯು-ಜಿಕೆವೈ 2.0 ಅಡಿಯಲ್ಲಿ ಸುಸ್ಥಿರ ಉದ್ಯೋಗಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ವಿಸ್ತರಿಸಲಾದ ಆರು ತಿಂಗಳ ಉದ್ಯೋಗ ಅವಧಿಯನ್ನು ಬೆಂಬಲಿಸಲು, ಉದ್ಯೋಗದ ನಿರಂತರತೆಯನ್ನು ಸುಲಭಗೊಳಿಸಲು ಡಿಡಿಯು-ಜಿಕೆವೈ 2.0 ಯು 12 ತಿಂಗಳ ಉದ್ಯೋಗದ ನಂತರದ ಟ್ರ್ಯಾಕಿಂಗ್ ಅನ್ನು ಒದಗಿಸುತ್ತದೆ, ನಿರ್ದಿಷ್ಟವಾಗಿ:
 

  • ಉದ್ಯೋಗ ಪಡೆದ ಅಭ್ಯರ್ಥಿಗಳಿಗೆ ಆರು ತಿಂಗಳವರೆಗೆ ತಿಂಗಳಿಗೆ 1,270 ರೂ. ನಂತೆ ಒಟ್ಟು 7,620 ರೂ. ಗಳ ಆರ್ಥಿಕ ನೆರವು ನೀಡಲಾಗುತ್ತದೆ.
  • ಇದರ ಜೊತೆಗೆ, ಗರಿಷ್ಠ 60 ದಿನಗಳ ಉದ್ಯೋಗ ವಿರಾಮದೊಂದಿಗೆ, 365 ದಿನಗಳವರೆಗೆ ಉದ್ಯೋಗದಲ್ಲಿ ಮುಂದುವರಿಯುವ ಅಭ್ಯರ್ಥಿಗಳಿಗೆ ಪ್ರತಿ ಅಭ್ಯರ್ಥಿಗೆ 5,000 ರೂ. ಗಳ ಉಳಿಸಿಕೊಳ್ಳುವಿಕೆ ಬೆಂಬಲವನ್ನು ಒದಗಿಸಲಾಗುತ್ತದೆ.
  • ಉದ್ಯೋಗ ಪಡೆದ ಅಭ್ಯರ್ಥಿಗಳಿಗೆ 12 ತಿಂಗಳ ಉದ್ಯೋಗದ ನಂತರ ಕೌಶಲ್ಯ ವೃದ್ಧಿ ಮತ್ತು ಮರು-ಕೌಶಲ್ಯಅವಕಾಶಗಳನ್ನು ಸಹ ಒದಗಿಸಲಾಗುತ್ತದೆ, ಇದು ಅವರ ಕೌಶಲ್ಯಗಳನ್ನು ಬಲಪಡಿಸಲು ಮತ್ತು ಮುಂದುವರಿದ ಉದ್ಯೋಗ ಹಾಗೂ ವೃತ್ತಿಜೀವನದ ಪ್ರಗತಿಗಾಗಿ ಅವರ ನಿರೀಕ್ಷೆಗಳನ್ನು ಸುಧಾರಿಸಲು ಅನುವು ಮಾಡಿಕೊಡುತ್ತದೆ.

ವಲಸೆ ಬೆಂಬಲ ಕೇಂದ್ರಗಳು

ಜೀವೋಪಾಯದ ಅವಕಾಶಗಳನ್ನು ಹುಡುಕಿಕೊಂಡು ತರಬೇತಿ ಪಡೆದ ಗಣನೀಯ ಪ್ರಮಾಣದ ಅಭ್ಯರ್ಥಿಗಳು ವಲಸೆ ಹೋಗುತ್ತಾರೆ ಎಂಬುದನ್ನು ಪರಿಗಣಿಸಿ, ಡಿಡಿಯು-ಜಿಕೆವೈ 2.0 ಯು ವಲಸೆ ಬೆಂಬಲ ವ್ಯವಸ್ಥೆಗಳನ್ನು ಬಲಪಡಿಸುವುದಕ್ಕೆ ಹೊಸ ಒತ್ತು ನೀಡಿದೆ. ರಾಜ್ಯ ಗ್ರಾಮೀಣ ಜೀವನೋಪಾಯ ಮಿಷನ್‌ಗಳು ಉದ್ಯೋಗ ಪಡೆದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶಗಳಲ್ಲಿ ವಲಸೆ ಬೆಂಬಲ ಕೇಂದ್ರಗಳನ್ನು ಸ್ಥಾಪಿಸುತ್ತವೆ. ಈ ಕೇಂದ್ರಗಳು ಸ್ವಂತ ರಾಜ್ಯದೊಳಗೆ ಮತ್ತು ಗಮ್ಯಸ್ಥಾನ ರಾಜ್ಯಗಳಲ್ಲಿ ಎರಡರಲ್ಲೂ ಕಾರ್ಯನಿರ್ವಹಿಸುತ್ತವೆ. ವಸತಿ ಸಹಾಯ, ಸಮಾಲೋಚನೆ ಮತ್ತು ಉದ್ಯೋಗ ಬೆಂಬಲ ಸೇರಿದಂತೆ ಈ ಪರಿವರ್ತನೆಯ ಸಮಯದಲ್ಲಿ ಅಭ್ಯರ್ಥಿಗಳಿಗೆ ಬೆಂಬಲ ನೀಡಲು ಎಂಎಸ್‌ಸಿ ಗಳು ವಿವಿಧ ಸೇವೆಗಳನ್ನು ನೀಡುತ್ತವೆ.

ಅವು ಉದ್ಯೋಗಕ್ಕೆ ಸಂಬಂಧಿಸಿದ ಮಾಹಿತಿಯ ಹರಿವನ್ನು ಸುಲಭಗೊಳಿಸುತ್ತವೆ, ಹಳೆಯ ವಿದ್ಯಾರ್ಥಿಗಳ ನೆಟ್‌ವರ್ಕಿಂಗ್ ಅನ್ನು ಪ್ರೋತ್ಸಾಹಿಸುತ್ತವೆ ಮತ್ತು ಉದ್ಯೋಗದಾತರೊಂದಿಗೆ ತೊಡಗಿಸಿಕೊಳ್ಳುವಿಕೆಯನ್ನು ಬಲಪಡಿಸುತ್ತವೆ. ಇದರ ಜೊತೆಗೆ, ಅಭ್ಯರ್ಥಿಗಳು ನಗರದ ಕಾರ್ಯಸ್ಥಳದ ಪರಿಸರಕ್ಕೆ ಹೊಂದಿಕೊಳ್ಳಲು ಮತ್ತು ಕಾಲಾನಂತರದಲ್ಲಿ ಸ್ಥಿರವಾದ ಉದ್ಯೋಗದಲ್ಲಿ ಮುಂದುವರಿಯಲು ಸಹಾಯ ಮಾಡಲು ಈ ಕೇಂದ್ರಗಳು ಸ್ಥಳೀಯ ಆಡಳಿತ ಮಂಡಳಿಗಳು ಮತ್ತು ಸೇವಾ ಪೂರೈಕೆದಾರರೊಂದಿಗೆ ಸಂಪರ್ಕ ಸಾಧಿಸುತ್ತವೆ. ಈ ಬೆಂಬಲ ವ್ಯವಸ್ಥೆಯ ಬೆಳೆಯುತ್ತಿರುವ ಪ್ರಾಮುಖ್ಯತೆಯನ್ನು ಪ್ರತಿಬಿಂಬಿಸುತ್ತ, ಪರಿಷ್ಕೃತ ಚೌಕಟ್ಟಿನ ಅಡಿಯಲ್ಲಿ ಪ್ರತಿ ಕೇಂದ್ರದ ವಾರ್ಷಿಕ ನಿಧಿಯನ್ನು ಹಿಂದಿನ 10 ಲಕ್ಷ ರೂ. ನಿಂದ 30 ಲಕ್ಷ ರೂ. ವರೆಗೆ ಗಣನೀಯವಾಗಿ ಹೆಚ್ಚಿಸಲಾಗಿದೆ.

ಅನುಷ್ಠಾನದಲ್ಲಿ ತಂತ್ರಜ್ಞಾನದ ಬಳಕೆ

ತಂತ್ರಜ್ಞಾನದ ಏಕೀಕರಣವು ಡಿಡಿಯು-ಜಿಕೆವೈ ಆರಂಭವಾದಾಗಿನಿಂದಲೂ ಅದರ ಒಂದು ನಿರ್ಣಾಯಕ ವೈಶಿಷ್ಟ್ಯವಾಗಿದೆ. ಈ ಚೌಕಟ್ಟು ಜಿಯೋ-ಟ್ಯಾಗ್ ಮಾಡಲು ಮತ್ತು ಸಮಯ-ಮುದ್ರೆಯೊತ್ತಿದ ಬಯೋಮೆಟ್ರಿಕ್ ಹಾಜರಾತಿ ದಾಖಲೆಗಳು, ಕಂಪ್ಯೂಟರ್ ಲ್ಯಾಬ್‌ಗಳು ಮತ್ತು ಇ-ಲರ್ನಿಂಗ್ ಸೌಲಭ್ಯಗಳನ್ನು ಅವಲಂಬಿಸಿದೆ. ಈ ಕ್ರಮಗಳು ತ ಪ್ರಶಿಕ್ಷಾರ್ಥಿಗಳ ಡಿಜಿಟಲ್ ಸಾಧನಗಳ ಬಳಕೆಯನ್ನು ಹೆಚ್ಚಿಸುವ ಜೊತೆಗೆ ಕಾರ್ಯಕ್ರಮದ ಮೇಲ್ವಿಚಾರಣೆಯನ್ನು ಬಲಪಡಿಸಿದವು.

ಡಿಡಿಯು-ಜಿಕೆವೈ 2.0 ಸಂಪೂರ್ಣ ಕಾರ್ಯಕ್ರಮದ ಜೀವನಚಕ್ರವನ್ನು ಒಳಗೊಂಡಿರುವ ಅಂತ್ಯದಿಂದ ಅಂತ್ಯದವರೆಗಿನ ಡಿಜಿಟಲ್ ಪರಿಹಾರವನ್ನು ಪರಿಚಯಿಸುವ ಮೂಲಕ ಈ ತಾಂತ್ರಿಕ ಬುನಾದಿಯ ಮೇಲೆ ನಿರ್ಮಿಸುತ್ತದೆ. ಈ ವೇದಿಕೆಯು ಪಿಐಎ ಆನ್‌ಬೋರ್ಡಿಂಗ್, ಯೋಜನೆ ಸಲ್ಲಿಕೆ ಮತ್ತು ಮೌಲ್ಯಮಾಪನ, ತರಬೇತಿ ಕೇಂದ್ರ ಮತ್ತು ಅಭ್ಯರ್ಥಿ ನಿರ್ವಹಣೆ, ಮೌಲ್ಯಮಾಪನ ಮತ್ತು ಪ್ರಮಾಣೀಕರಣ, ಹಣಕಾಸು ನಿರ್ವಹಣೆ, ಹಾಗೂ ಯೋಜನಾ ಮೇಲ್ವಿಚಾರಣೆ ಮತ್ತು ಉದ್ಯೋಗ ಟ್ರ್ಯಾಕಿಂಗ್ ಅನ್ನು ವ್ಯಾಪಿಸಿದೆ.

ಪರಿಷ್ಕೃತ ವಿಧಾನವು ಈ ಕೆಳಗಿನವುಗಳನ್ನು ಸಹ ಪರಿಚಯಿಸುತ್ತದೆ:

  • ನೈಜ-ಸಮಯದ ಕಾರ್ಯಕ್ರಮ ಮೇಲ್ವಿಚಾರಣೆಗಾಗಿ ಸುಧಾರಿತ ಡ್ಯಾಶ್‌ಬೋರ್ಡ್‌ಗಳು.
  • ತರಬೇತಿ ಹುಡುಕಾಟ ಮತ್ತು ಪಿಐಎ ಕಾರ್ಯಕ್ಷಮತೆಯ ರೇಟಿಂಗ್‌ಗಳನ್ನು ವೀಕ್ಷಿಸಲು ಸಾರ್ವಜನಿಕ ಅಭ್ಯರ್ಥಿ ಪೋರ್ಟಲ್.
  • ಪ್ರಾಜೆಕ್ಟ್ ರಿಜಿಸ್ಟ್ರೇಷನ್ ನಂಬರ್ ಉತ್ಪಾದನೆ, ಕುಂದುಕೊರತೆ ನಿವಾರಣೆ ಮತ್ತು ಪ್ರಮಾಣಪತ್ರ ಪರಿಶೀಲನೆ ಸೇರಿದಂತೆ ಸ್ವಯಂಚಾಲಿತ ಪ್ರಕ್ರಿಯೆಗಳು.
  • ಮುಖದ ದೃಢೀಕರಣ ಮತ್ತು ನೈಜ-ಸಮಯದ ಡ್ಯಾಶ್‌ಬೋರ್ಡ್‌ಗಳ ಮೂಲಕ ಡಿಜಿಟಲ್ ಹಾಜರಾತಿ ಹಾಗೂ ಮೌಲ್ಯಮಾಪನ.
  • ಸ್ವಯಂಚಾಲಿತ ಕೋರ್ಸ್-ವಿವರ ಮೌಲ್ಯಮಾಪನಕ್ಕಾಗಿ ಸ್ಕಿಲ್ ಇಂಡಿಯಾ ಡಿಜಿಟಲ್ ಹಬ್ ಏಕೀಕರಣ.

ಡಿಡಿಯು-ಜಿಕೆವೈ 2.0 ನ ರೋಲ್‌ಔಟ್ (2025-26) ಮುಂಚೂಣಿ:

  • ಡಿಡಿಯು-ಜಿಕೆವೈ2.0 ನ ಬ್ಯಾಚ್‌ಗಳನ್ನು ರಚಿಸುವಲ್ಲಿ ಗೋವಾ ಮುಂಚೂಣಿಯಲ್ಲಿ ಹೊರಹೊಮ್ಮಿದೆ.
  • ಆಂಧ್ರಪ್ರದೇಶವು ಕೇವಲ 3 ತಿಂಗಳ ಅಲ್ಪಾವಧಿಯಲ್ಲಿ 12,000 ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ತರಬೇತಿಯನ್ನು ಪ್ರಾರಂಭಿಸಿದೆ.
  • ಜಮ್ಮು ಮತ್ತು ಕಾಶ್ಮೀರವು ನಿಗದಿಪಡಿಸಿದ ಗುರಿಗಳಲ್ಲಿ ಶೇ. 100 ರಷ್ಟನ್ನು ಹಂಚಿಕೆ ಮಾಡಿದೆ ಮತ್ತು ಹಂಚಿಕೆಯಾದ ಗುರಿಯ ಶೇ. 91 ರಷ್ಟು ಅಭ್ಯರ್ಥಿಗಳಿಗೆ ತರಬೇತಿಯನ್ನು ಪ್ರಾರಂಭಿಸಿದೆ.

ಯೋಜನೆಯಡಿಯಲ್ಲಿ ಸಾಧಿಸಲಾದ ಪ್ರಮುಖ ಮೈಲುಗಲ್ಲುಗಳು

ಡಿಡಿಯು-ಜಿಕೆವೈ ಯು ಪ್ರಸ್ತುತ ವಿಸ್ತಾರವಾದ ಕೌಶಲ್ಯ ಜಾಲದ ಮೂಲಕ 31 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅನುಷ್ಠಾನಗೊಳ್ಳುತ್ತಿದೆ. ಪ್ರಸ್ತುತ ದಿನಾಂಕದವರೆಗೆ, ಈ ಕಾರ್ಯಕ್ರಮವು 455 ಕ್ಕೂ ಹೆಚ್ಚು ಪಿಐಎ ಗಳ ಪಾಲುದಾರಿಕೆಯೊಂದಿಗೆ, 760 ಸಕ್ರಿಯ ತರಬೇತಿ ಕೇಂದ್ರಗಳನ್ನು ಹಾಗೂ 749 ಅನುಮೋದಿತ ಯೋಜನೆಗಳನ್ನು ಹೊಂದಿದೆ.

2014-15 ರಲ್ಲಿ ಪ್ರಾರಂಭವಾದಾಗಿನಿಂದ, ಡಿಡಿಯು-ಜಿಕೆವೈ ಯು ಆರ್ಥಿಕತೆಯ ಎಲ್ಲಾ 36 ಕ್ಷೇತ್ರಗಳು ಮತ್ತು 800 ಕ್ಕೂ ಹೆಚ್ಚು ಉದ್ಯೋಗ ಪಾತ್ರಗಳನ್ನು ಒಳಗೊಂಡಂತೆ 18.47 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ತರಬೇತಿ ನೀಡಿದೆ ಮತ್ತು 12.43 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಉದ್ಯೋಗ ಒದಗಿಸಿದೆ. ಇದು ಈ ಯೋಜನೆಯ ವ್ಯಾಪಕ ವಲಯದ ವ್ಯಾಪ್ತಿಯನ್ನು ಮತ್ತು ಗ್ರಾಮೀಣ ಯುವಕರಿಗಾಗಿ ಉದ್ಯಮ-ಜೊತೆಗೂಡಿದ ಕೌಶಲ್ಯ ಅಭಿವೃದ್ಧಿಯ ಮೇಲಿನ ಗಮನವನ್ನು ಪ್ರತಿಬಿಂಬಿಸುತ್ತದೆ.

ಈ ಯೋಜನೆಯ ಅಡಿಯಲ್ಲಿ 9.71 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ತರಬೇತಿ ನೀಡಲಾಗಿದೆ ಮತ್ತು 6.34 ಲಕ್ಷಕ್ಕೂ ಹೆಚ್ಚು ಮಹಿಳೆಯರು ಉದ್ಯೋಗ ಪಡೆದುಕೊಂಡಿದ್ದಾರೆ.

ಗ್ರಾಮೀಣ ಯುವಕರ ಉದ್ಯಮಶೀಲತೆಯನ್ನು ಬೆಂಬಲಿಸುವ ಇತರ ಉಪಕ್ರಮಗಳು

ಡಿಡಿಯು-ಜಿಕೆವೈ ಯು ಉದ್ಯೋಗ-ಸಂಯೋಜಿತ ವೇತನಯುಕ್ತ ಉದ್ಯೋಗದ ಮೇಲೆ ಗಮನಹರಿಸಿದರೆ, ಸರ್ಕಾರವು ಗ್ರಾಮೀಣ ಸ್ವಯಂ-ಉದ್ಯೋಗ ತರಬೇತಿ ಸಂಸ್ಥೆಗಳ (ಆರ್‌ಎಸ್‌ಇಟಿಐs) ಮೂಲಕ ಸ್ವಯಂ-ಉದ್ಯೋಗ ಮತ್ತು ಉದ್ಯಮಶೀಲತೆಯ ಮಾರ್ಗಗಳನ್ನು ಏಕಕಾಲದಲ್ಲಿ ಬಲಪಡಿಸಿದೆ. ಈ ಕಾರ್ಯಕ್ರಮವು 18-50 ವರ್ಷ ವಯಸ್ಸಿನ ಗ್ರಾಮೀಣ ನಿರುದ್ಯೋಗಿ ಯುವಕರಿಗೆ ಉಚಿತ ವಸತಿ ಸಹಿತ ತರಬೇತಿಯನ್ನು ನೀಡುತ್ತದೆ, ಇದರ ನಂತರ ಸುಸ್ಥಿರ ಜೀವನೋಪಾಯವನ್ನು ಸ್ಥಾಪಿಸಲು ಕೈಹಿಡಿದು ಮಾರ್ಗದರ್ಶನ ನೀಡಲಾಗುತ್ತದೆ. ಈ ಕಾರ್ಯಕ್ರಮವು ದೇಶದ ಪ್ರತಿಯೊಂದು ಜಿಲ್ಲೆಯಲ್ಲಿ ಮೀಸಲಾದ ಕೌಶಲ್ಯ ಮೂಲಭೂತ ಸೌಕರ್ಯವನ್ನು ಸೃಷ್ಟಿಸುತ್ತದೆ. ಇದು ಗ್ರಾಮೀಣ ಯುವಕರನ್ನು, ವಿಶೇಷವಾಗಿ ಬಡತನ ರೇಖೆಗಿಂತ ಕೆಳಗಿರುವ ಮತ್ತು ಡಿಎವೈ-ಎನ್‌ಆರ್‌ಎಲ್‌ಎಂ ಕುಟುಂಬಗಳಿಗೆ ಸೇರಿದವರನ್ನು ಕೌಶಲ್ಯಭರಿತರನ್ನಾಗಿ ಮಾಡಲು ಮಹತ್ವ ನೀಡುತ್ತದೆ.

ಪ್ರಸ್ತುತ ದಿನಾಂಕದವರೆಗೆ, 33 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿನ 634 ಜಿಲ್ಲೆಗಳಲ್ಲಿ ಒಟ್ಟು 647 ಆರ್‌ಎಸ್‌ಇಟಿಐ ಗಳು ಕಾರ್ಯನಿರ್ವಹಿಸುತ್ತಿವೆ. 2009 ರಲ್ಲಿ ಪ್ರಾರಂಭವಾದಾಗಿನಿಂದ, ಈ ಯೋಜನೆಯು 63.47 ಲಕ್ಷ ಅಭ್ಯರ್ಥಿಗಳಿಗೆ ತರಬೇತಿ ನೀಡಿದೆ. ಒಟ್ಟು 45.60 ಲಕ್ಷ ಅಭ್ಯರ್ಥಿಗಳು ನೆಲೆಗೊಂಡಿದ್ದಾರೆ. ಆರ್‌ಎಸ್‌ಇಟಿಐ ಅಡಿಯಲ್ಲಿ ನೆಲೆಗೊಂಡಿರುವ ಅಭ್ಯರ್ಥಿಗಳಲ್ಲಿ, ಸುಮಾರು 94% ರಷ್ಟು ಜನರು ಸುಸ್ಥಿರ ಸ್ವಯಂ-ಉದ್ಯೋಗ ಉದ್ಯಮಗಳನ್ನು ಸ್ಥಾಪಿಸಿದ್ದಾರೆ. ಸುಮಾರು 6% ರಷ್ಟು ಜನರು ವೇತನಯುಕ್ತ ಉದ್ಯೋಗವನ್ನು ಪಡೆದುಕೊಂಡಿದ್ದಾರೆ.

 

ಭವಿಷ್ಯಕ್ಕಾಗಿ ಗ್ರಾಮೀಣ ಭಾರತದ ಕಾರ್ಯಪಡೆಯನ್ನು ರೂಪಿಸುವುದು

ಭಾರತದಲ್ಲಿ ಅಂತರ್ಗತ ಆರ್ಥಿಕ ಬೆಳವಣಿಗೆಗೆ ಗ್ರಾಮೀಣ ಯುವಕರ ಕೌಶಲ್ಯ, ಉದ್ಯೋಗಾರ್ಹತೆ ಮತ್ತು ಉದ್ಯಮಶೀಲತೆಯ ಸಾಮರ್ಥ್ಯವನ್ನು ಬಲಪಡಿಸುವುದು ಅತ್ಯಂತ ಮುಖ್ಯವಾಗಿದೆ. ಡಿಡಿಯು-ಜಿಕೆವೈ 2.0 ಮೂಲಕ, ಸರ್ಕಾರವು ಹೆಚ್ಚು ಸ್ಪಂದಿಸುವ, ತಂತ್ರಜ್ಞಾನ-ಚಾಲಿತ ಮತ್ತು ಫಲಿತಾಂಶ-ಆಧಾರಿತ ಕೌಶಲ್ಯ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತಿದೆ. ಈ ಕಾರ್ಯಕ್ರಮಗಳು ಗ್ರಾಮೀಣ ಯುವಕರನ್ನು ಉದ್ಯೋಗಗಳಿಗೆ ಸಿದ್ಧಪಡಿಸುತ್ತವೆ ಮತ್ತು ಸುಸ್ಥಿರ ಜೀವನೋಪಾಯವನ್ನು ಬೆಂಬಲಿಸುತ್ತವೆ.

ಗುಣಮಟ್ಟದ ತರಬೇತಿ, ಉದ್ಯಮ ಪಾಲುದಾರಿಕೆಗಳು ಮತ್ತು ಸ್ಪಂದಿಸುವ ಬೆಂಬಲದ ಮೇಲೆ ಮುಂದುವರಿದ ಗಮನವು ಕೌಶಲ್ಯಗಳನ್ನು ಬಾಳಿಕೆ ಬರುವ ಜೀವನೋಪಾಯವನ್ನಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ. ಡಿಡಿಯು-ಜಿಕೆವೈ 2.0 ಭವಿಷ್ಯಕ್ಕಾಗಿ ನುರಿತ, ಸಬಲ ಮತ್ತು ಆತ್ಮನಿರ್ಭರ ಗ್ರಾಮೀಣ ಕಾರ್ಯಪಡೆಯನ್ನು ನಿರ್ಮಿಸುವತ್ತ ಒಂದು ಪ್ರಮುಖ ಹೆಜ್ಜೆಯನ್ನು ಪ್ರತಿನಿಧಿಸುತ್ತದೆ. ಇದು ದೇಶವನ್ನು ಜಾಗತಿಕ ಆರ್ಥಿಕ ಮತ್ತು ಜ್ಞಾನ ಕೇಂದ್ರವನ್ನಾಗಿ ಪರಿವರ್ತಿಸುವ ಗುರಿಯನ್ನು ಹೊಂದಿರುವ 'ವಿಕಸಿತ ಭಾರತ @2047' ದೃಷ್ಟಿಕೋನವನ್ನು ಉತ್ತೇಜಿಸುತ್ತದೆ.

References

Ministry of Rural Development

https://kaushal.rural.gov.in/#/about-us
https://kaushal.rural.gov.in/#/training-center-list
https://kaushal.rural.gov.in/assets/files/Deen%20Dayal%20Upadhyaya%20Grameen%20Kaushal%20Yojana.pdf
https://kaushal.rural.gov.in/#/key-features
https://ddugkysop.in/pluginfile.php/21940/mod_resource/content/2/DDUGKY_CNN_aligned_Guidelines_July_2016.pdf
https://www.dord.gov.in/static/uploads/2024/07/ee7db3320bf3aa165fdb69f12cbb2c38.pdf
https://sansad.in/getFile/loksabhaquestions/annex/187/AU3964_UIXOj8.pdf?source=pqals
https://sansad.in/getFile/loksabhaquestions/annex/187/AU5192_zshReo.pdf?source=pqals

https://www.pib.gov.in/PressReleasePage.aspx?PRID=2148466&reg=3&lang=2

https://www.pib.gov.in/PressReleasePage.aspx?PRID=2294539&reg=3&lang=1

https://cdnbbsr.s3waas.gov.in/s3e9412ee564384b987d086df32d4ce6b7/uploads/2025/06/20250625554506571.pdf

https://cdnbbsr.s3waas.gov.in/s3e9412ee564384b987d086df32d4ce6b7/uploads/2025/06/20250625108042813.pdf

Ministry of Finance

https://www.indiabudget.gov.in/doc/eb/sbe87.pdf

NITI Aayog

https://www.niti.gov.in/sites/default/files/2026-02/Revitalizing-India-Apprenticeship-Ecosystem-Insights-Challenges-Recommendations-and-Best-Practices.pdf

Ministry of Information and Broadcasting

https://www.newsonair.gov.in/bulletins-detail/parikrama-688/

Click here to see pdf 

******

 

 

(Explainer ID: 160173) आगंतुक पटल : 18
Provide suggestions / comments
इस विज्ञप्ति को इन भाषाओं में पढ़ें: English , हिन्दी , Bengali , Assamese , Telugu , Malayalam