Farmer's Welfare
ಸೆಣಬು: ಭಾರತದ ಚಿನ್ನದ ನಾರು
ನೂತನ ನೀತಿ ಮಧ್ಯಸ್ಥಿಕೆಗಳ ಮೂಲಕ ಜೀವನೋಪಾಯಗಳನ್ನು ಸುಸ್ಥಿರಗೊಳಿಸುವುದು
Posted On:
07 SEP 2026 6:12PM
|
ಭಾರತವು ಜಾಗತಿಕ ಕಚ್ಚಾ ಸೆಣಬಿನ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದು, ಸುಸ್ಥಿರ ಕೈಗಾರಿಕಾ ಬೆಳವಣಿಗೆಯನ್ನು ಉತ್ತೇಜಿಸುವುದರ ಜೊತೆಗೆ ಲಕ್ಷಾಂತರ ಜನರ ಜೀವನೋಪಾಯವನ್ನು ಬೆಂಬಲಿಸುತ್ತಿದೆ. 2025-26ರ ಹಣಕಾಸು ವರ್ಷದಲ್ಲಿ ಭಾರತವು 76 ಲಕ್ಷ ಕಚ್ಚಾ ಸೆಣಬಿನ ಕಟ್ಟುಗಳು ಮತ್ತು 12.80 ಲಕ್ಷ ಮೆಟ್ರಿಕ್ ಟನ್ ಸೆಣಬಿನ ಉತ್ಪನ್ನಗಳನ್ನು ಉತ್ಪಾದಿಸಿದೆ. ಅದೇ ವರ್ಷದಲ್ಲಿ, ಭಾರತವು ₹225.11 ಕೋಟಿ ಮೌಲ್ಯದ 22,700 ಮೆಟ್ರಿಕ್ ಟನ್ ಕಚ್ಚಾ ಸೆಣಬು ಮತ್ತು ₹3,155.27 ಕೋಟಿ ಮೌಲ್ಯದ 1,71,300 ಮೆಟ್ರಿಕ್ ಟನ್ ಸೆಣಬಿನ ಉತ್ಪನ್ನಗಳನ್ನು ರಫ್ತು ಮಾಡಿದೆ. ಸರ್ಕಾರದ ಮಧ್ಯಸ್ಥಿಕೆಗಳು ರೈತರ ಆದಾಯವನ್ನು ಹೆಚ್ಚಿಸಿವೆ, ಮೌಲ್ಯವರ್ಧನೆ ಸರಪಳಿಯನ್ನು ಆಧುನೀಕರಿಸಿವೆ ಮತ್ತು ವೈವಿಧ್ಯಮಯ ಉತ್ಪನ್ನಗಳ ತಯಾರಿಕೆಯನ್ನು ಉತ್ತೇಜಿಸಿವೆ. ಸೆಣಬಿನ ಜೈವಿಕವಾಗಿ ಕೊಳೆಯುವ ಗುಣ ಮತ್ತು ವಿಸ್ತರಿಸುತ್ತಿರುವ ಬಳಕೆಗಳು ಇದನ್ನು ಸಿಂಥೆಟಿಕ್ ವಸ್ತುಗಳಿಗೆ ಪ್ರಮುಖ ಪರ್ಯಾಯವನ್ನಾಗಿ ಮಾಡಿವೆ. ನಾವೀನ್ಯತೆ, ಮಾರುಕಟ್ಟೆ ವಿಸ್ತರಣೆ ಮತ್ತು ಡಿಜಿಟಲ್ ತಂತ್ರಜ್ಞಾನಗಳು ಭಾರತದ 'ಚಿನ್ನದ ನಾರನ್ನು' ಜಾಗತಿಕವಾಗಿ ಸ್ಪರ್ಧಾತ್ಮಕ ಮತ್ತು ಪರಿಸರ ಜವಾಬ್ದಾರಿಯುತ ಉದ್ಯಮವಾಗಿ ರೂಪಿಸುತ್ತಿವೆ.
|
ಭಾರತದ ಚಿನ್ನದ ನಾರಿನ ಉದ್ಯಮ
ಸೆಣಬು ಭಾರತದ ಅತ್ಯಂತ ಪ್ರಮುಖ ನೈಸರ್ಗಿಕ ನಾರುಗಳಲ್ಲಿ ಒಂದಾಗಿದ್ದು, ಅದರ ವ್ಯಾಪಕ ಬಳಕೆಗಳು ಮತ್ತು ಪರಿಸರ ಸುಸ್ಥಿರತೆಗಾಗಿ ಮೌಲ್ಯಯುತವಾಗಿದೆ. ವಾಣಿಜ್ಯ ಮತ್ತು ಕೈಗಾರಿಕಾ ಸನ್ನಿವೇಶದಲ್ಲಿ, ಸೆಣಬು ಮತ್ತು ಮೇಸ್ತಾಗಳನ್ನು ಹೋಲಿಸಬಹುದಾದ ಅಂತಿಮ ಬಳಕೆಗಳ ಕಾರಣದಿಂದಾಗಿ ಜಂಟಿಯಾಗಿ 'ಕಚ್ಚಾ ಸೆಣಬು' ಎಂದು ವರ್ಗೀಕರಿಸಲಾಗಿದೆ. ಮೇಸ್ತಾ ಎಂಬುದು ಕಚ್ಚಾ ನಾರಿನ ಬೆಳೆಯಾಗಿದ್ದು, ಇದನ್ನು ವಿಶೇಷವಾಗಿ ಶುಷ್ಕ ಕೃಷಿ-ವಾತಾವರಣದ ಪ್ರದೇಶಗಳಲ್ಲಿ ಸೆಣಬಿಗೆ ವೆಚ್ಚ-ಪರಿಣಾಮಕಾರಿ ಪರ್ಯಾಯವಾಗಿ ಬೆಳೆಯಲಾಗುತ್ತದೆ. ತನ್ನ ವಿಶಿಷ್ಟ ಚಿನ್ನದ ಬಣ್ಣ ಮತ್ತು ರೇಷ್ಮೆಯಂತಹ ಹೊಳಪಿನಿಂದಾಗಿ, ಸೆಣಬನ್ನು ಸಾಮಾನ್ಯವಾಗಿ "ಚಿನ್ನದ ನಾರು" ಎಂದು ಕರೆಯಲಾಗುತ್ತದೆ.

ಭಾರತವು ವಿಶ್ವದಲ್ಲೇ ಅತಿ ದೊಡ್ಡ ಕಚ್ಚಾ ಸೆಣಬು ಉತ್ಪಾದಕ ದೇಶವಾಗಿದೆ. ಆಹಾರ ಧಾನ್ಯಗಳ ಉತ್ಪಾದನೆಯ ಮೂರನೇ ಮುಂಗಡ ಅಂದಾಜಿನ (2025-26) ಪ್ರಕಾರ, ಸೆಣಬು ಮತ್ತು ಮೇಸ್ತಾ ಉತ್ಪಾದನೆಯು 2024-25ರಲ್ಲಿ 88.02 ಲಕ್ಷ ಬೇಲ್‌ಗಳಿಂದ 2014-15ರಲ್ಲಿ 94.03 ಲಕ್ಷ ಬೇಲ್‌ಗಳಿಗೆ ಏರಿಕೆಯಾಗಿದೆ. ಜುಲೈ 2026 ರ ಹೊತ್ತಿಗೆ, ಜಾಗತಿಕ ಅಂದಾಜು ಉತ್ಪಾದನೆಯ ಶೇಕಡಾ 75 ರಷ್ಟನ್ನು ಹೊಂದುವ ಮೂಲಕ ಭಾರತವು ವಿಶ್ವದ ಪ್ರಮುಖ ಸೆಣಬು ಉತ್ಪನ್ನ ಉತ್ಪಾದಿಸುವ ದೇಶವಾಗಿಯೂ ಹೊರಹೊಮ್ಮಿದೆ. ಸೆಣಬು ಉದ್ಯಮವು ಭಾರತದ ಪೂರ್ವ ಪ್ರದೇಶದಲ್ಲಿ, ವಿಶೇಷವಾಗಿ ಪಶ್ಚಿಮ ಬಂಗಾಳದಲ್ಲಿ ಬಲವಾದ ಕೈಗಾರಿಕಾ ತಳಹದಿಯನ್ನು ಹೊಂದಿದೆ. ಈ ಉದ್ಯಮವು ಸಂಘಟಿತ ಗಿರಣಿಗಳು ಮತ್ತು ವೈವಿಧ್ಯಮಯ ಸೆಣಬಿನ ಘಟಕಗಳಲ್ಲಿ ಸುಮಾರು 3.70 ಲಕ್ಷ ಕಾರ್ಮಿಕರಿಗೆ ನೇರ ಉದ್ಯೋಗವನ್ನು ಒದಗಿಸುತ್ತದೆ. ಅಲ್ಲದೆ, ಇದು ಸೆಣಬು ಬೇಸಾಯದಲ್ಲಿ ತೊಡಗಿರುವ ಸುಮಾರು 40 ಲಕ್ಷ ರೈತ ಕುಟುಂಬಗಳ ಜೀವನೋಪಾಯಕ್ಕೆ ಆಸರೆಯಾಗಿದೆ. ಡಿಸೆಂಬರ್ 2025 ರ ವೇಳೆಗೆ, ಭಾರತದಲ್ಲಿ 120 ಸಂಯೋಜಿತ ಸೆಣಬಿನ ಗಿರಣಿಗಳಿದ್ದು, ಪಶ್ಚಿಮ ಬಂಗಾಳ ಒಂದರಲ್ಲೇ 89 ಗಿರಣಿಗಳಿವೆ. ಇದು ಎಲ್ಲಾ ರಾಜ್ಯಗಳಿಗಿಂತ ಅತ್ಯಂತ ಹೆಚ್ಚಿನದ್ದಾಗಿದೆ.
ದೇಶೀಯ ಉತ್ಪಾದನೆಯು ರಾಷ್ಟ್ರೀಯ ಬೇಡಿಕೆಯನ್ನು ಸಮರ್ಪಕವಾಗಿ ಪೂರೈಸುತ್ತಿರುವುದರಿಂದ, ಭಾರತವು ಸೆಣಬಿನ ಉತ್ಪನ್ನಗಳ ಉತ್ಪಾದನೆಯಲ್ಲಿ ಸಂಪೂರ್ಣ ಆತ್ಮನಿರ್ಭರ ಆಗಿ ಮುಂದುವರಿದಿದೆ. 2025-26ರ ಹಣಕಾಸು ವರ್ಷದಲ್ಲಿ, ಸೆಣಬಿನ ಉತ್ಪನ್ನಗಳ ದೇಶೀಯ ಬಳಕೆಯು 12.05 ಲಕ್ಷ ಮೆಟ್ರಿಕ್ ಟನ್ ಆಗಿತ್ತು. ಇದು ಒಟ್ಟು 12.80 ಲಕ್ಷ ಮೆಟ್ರಿಕ್ ಟನ್ ಸೆಣಬಿನ ಉತ್ಪನ್ನಗಳ ಉತ್ಪಾದನೆಯ ಶೇಕಡಾ 94 ರಷ್ಟಾಗಿದೆ. ಇದಲ್ಲದೆ, ಭಾರತವು 2025-26ರ ಹಣಕಾಸು ವರ್ಷದಲ್ಲಿ ₹3155.27 ಕೋಟಿ ಮೌಲ್ಯದ 1.71 ಲಕ್ಷ ಮೆಟ್ರಿಕ್ ಟನ್ ಸೆಣಬಿನ ಉತ್ಪನ್ನಗಳನ್ನು ರಫ್ತು ಮಾಡಿದೆ. ಕಚ್ಚಾ ಸೆಣಬಿನ ವಿಚಾರದಲ್ಲಿ, ಭಾರತವು 2025-26ರ ಹಣಕಾಸು ವರ್ಷದಲ್ಲಿ ₹225.11 ಕೋಟಿ ಮೌಲ್ಯದ 22,700 ಮೆಟ್ರಿಕ್ ಟನ್ ಕಚ್ಚಾ ಸೆಣಬನ್ನು ರಫ್ತು ಮಾಡಿದೆ.
ಭಾರತದಲ್ಲಿ ಸೆಣಬು ಉತ್ಪಾದನೆಯ ಇತಿಹಾಸದ ಅವಲೋಕನ
ಭಾರತದಲ್ಲಿ ಸೆಣಬಿನ ಇತಿಹಾಸವನ್ನು ಕ್ರಿ.ಪೂ. ಮೂರನೇ ಶತಮಾನಕ್ಕೆ ಗುರುತಿಸಬಹುದಾಗಿದೆ. ಆದಾಗ್ಯೂ, ಬ್ರಿಟಿಷ್ ವಸಾಹತುಶಾಹಿ ಅವಧಿಯಲ್ಲಿ ಅದರ ಯುದ್ಧತಂತ್ರದ ಮಿಲಿಟರಿ ಬಳಕೆಗಳ ಕಾರಣದಿಂದಾಗಿ ಇದು ಒಂದು ಪ್ರಮುಖ ವಾಣಿಜ್ಯ ಸರಕಾಗಿ ಹೊರಹೊಮ್ಮಿತು. ಈಸ್ಟ್ ಇಂಡಿಯಾ ಕಂಪನಿಯು ಬೆಂಗಾಳದಲ್ಲಿ ಹಲವಾರು ಸೆಣಬಿನ ಗಿರಣಿಗಳನ್ನು ಸ್ಥಾಪಿಸಿತು, ಈ ಮೂಲಕ ಆ ಪ್ರದೇಶವನ್ನು ಸೆಣಬು ಬೇಸಾಯ ಮತ್ತು ಸಂಸ್ಕರಣೆಯ ಕೇಂದ್ರವನ್ನಾಗಿ ಮಾಡಿತು.
1947ರಲ್ಲಿ ಭಾರತದ ಸ್ವಾತಂತ್ರ್ಯ ಮತ್ತು ನಂತರದ ವಿಭಜನೆಯು ಬೆಂಗಾಳದ ಸಂಯೋಜಿತ ಸೆಣಬು ಅರ್ಥವ್ಯವಸ್ಥೆಯನ್ನು ಗಣನೀಯವಾಗಿ ಏರುಪೇರುಗೊಳಿಸಿತು. ಸೆಣಬು ಬೆಳೆಯುವ ಶೇಕಡಾ 80 ರಷ್ಟು ಪ್ರದೇಶಗಳು ಪೂರ್ವ ಪಾಕಿಸ್ತಾನದ (ಈಗಿನ ಬಾಂಗ್ಲಾದೇಶ) ಭಾಗವಾದವು. ಆದರೆ ಹೆಚ್ಚಿನ ಸೆಣಬಿನ ಗಿರಣಿಗಳು ಭಾರತದಲ್ಲೇ ಉಳಿದುಕೊಂಡವು. ಇದು ಈ ಗಿರಣಿಗಳಲ್ಲಿ ಸಂಸ್ಕರಣೆಗೆ ಅಗತ್ಯವಾದ ಕಚ್ಚಾ ವಸ್ತುವಿನ ತೀವ್ರ ಅಭಾವಕ್ಕೆ ಕಾರಣವಾಯಿತು. ಈ ಅಸಮತೋಲನವನ್ನು ಸರಿಪಡಿಸಲು, ಸರ್ಕಾರವು ಸೆಪ್ಟೆಂಬರ್ 1949ರಲ್ಲಿ "ಹೆಚ್ಚು ಸೆಣಬು ಬೆಳೆಯಿರಿ" ಆಂದೋಲನವನ್ನು ಪ್ರಾರಂಭಿಸಿತು. ರೈತರು ಭತ್ತದ ಬೇಸಾಯದಿಂದ ಸೆಣಬಿನ ಕೃಷಿಗೆ ಬದಲಾಗುವಂತೆ ಪ್ರೋತ್ಸಾಹಿಸಲಾಯಿತು. ಪರಿಣಾಮವಾಗಿ, ಭಾರತದ ಕಚ್ಚಾ ಸೆಣಬಿನ ಉತ್ಪಾದನೆಯು 6.2 ಲಕ್ಷ ಟನ್‌ಗಳಿಂದ (1951-52) 14.56 ಲಕ್ಷ ಟನ್‌ಗಳಿಗೆ (1961-62) ದುಪ್ಪಟ್ಟಿಗಿಂತ ಹೆಚ್ಚಾಯಿತು. 1982ರ ಸೆಣಬಿನ ಪ್ಯಾಕೇಜಿಂಗ್ ಕಾಯಿದೆಯು ಅಗತ್ಯ ಸರಕುಗಳ ಪ್ಯಾಕಿಂಗ್‌ಗಾಗಿ ಸೆಣಬಿನ ಚೀಲಗಳ ಬಳಕೆಯನ್ನು ಕಡ್ಡಾಯಗೊಳಿಸುವ ಮೂಲಕ ಈ ರಂಗವನ್ನು ಮತ್ತಷ್ಟು ಬಲಪಡಿಸಿತು. ಈ ಕ್ರಮವು ಭಾರತೀಯ ಸೆಣಬು ರೈತರಿಗೆ ಸ್ಥಿರವಾದ ಮಾರುಕಟ್ಟೆಯನ್ನು ಒದಗಿಸಿತು. ಕಾಲಾನಂತರದಲ್ಲಿ, ಸೆಣಬು ಒಂದು ಪ್ರಮುಖ 'ಹಸಿರು ನಾರಾಗಿ' ಹೊರಹೊಮ್ಮಿತು, ಇದು ಗ್ರಾಮೀಣ ಜೀವನೋಪಾಯಕ್ಕೆ ಮತ್ತು ಪರಿಸರ ಸುಸ್ಥಿರ ಕೈಗಾರಿಕಾ ಅಭಿವೃದ್ಧಿಗೆ ಕೊಡುಗೆ ನೀಡಿತು.
ಪ್ರಸ್ತುತ, ಪಶ್ಚಿಮ ಬಂಗಾಳವು ದೇಶದಲ್ಲೇ ಅತಿ ಹೆಚ್ಚು ಕಚ್ಚಾ ಸೆಣಬು ಕೃಷಿಯ ಪಾಲನ್ನು ಹೊಂದಿದೆ. ನಂತರದ ಸ್ಥಾನಗಳಲ್ಲಿ ಬಿಹಾರ, ಅಸ್ಸಾಂ, ಒಡಿಶಾ ಮತ್ತು ಜಾರ್ಖಂಡ್ ಇವೆ. ಸೆಣಬನ್ನು ಸಾಮಾನ್ಯವಾಗಿ ಮಾರ್ಚ್-ಏಪ್ರಿಲ್ ಅವಧಿಯಲ್ಲಿ ಬಿತ್ತಲಾಗುತ್ತದೆ ಮತ್ತು 100-110 ದಿನಗಳಲ್ಲಿ ಕೊಯ್ಲು ಮಾಡಲಾಗುತ್ತದೆ. ಬೆಳೆ ಬೆಳೆಯುವ ಅವಧಿಯಲ್ಲಿ 700-1500 ಮಿಮೀ ಮಳೆಯಾಗುವ, ಬಿಸಿ ಮತ್ತು ಆರ್ದ್ರತೆಯಿಂದ ಕೂಡಿದ ವಾತಾವರಣದಲ್ಲಿ ಇದು ಚೆನ್ನಾಗಿ ಬೆಳೆಯುತ್ತದೆ. ಈ ಕೃಷಿ-ವಾತಾವರಣದ ಅಗತ್ಯತೆಗಳನ್ನು ಗಮನಿಸಿದರೆ, ಇದರ ಕೃಷಿಯು ಮುಖ್ಯವಾಗಿ ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಕೇಂದ್ರೀಕೃತವಾಗಿದೆ ಮತ್ತು ಇದು ಹೆಚ್ಚಾಗಿ ಮಳೆಯಾಶ್ರಿತವಾಗಿದೆ. ಈ ಬೆಳೆಯನ್ನು ಮುಖ್ಯವಾಗಿ ಸಣ್ಣ ಮತ್ತು ಅಂಚಿನ ರೈತರು ಬೆಳೆಯುತ್ತಾರೆ.
ಸೆಣಬು ಏಕೆ ಒಂದು ಪ್ರಮುಖ ನೈಸರ್ಗಿಕ ನಾರಾಗಿದೆ?
ಸೆಣಬು ಜೈವಿಕವಾಗಿ ಕೊಳೆಯುವ ಮತ್ತು ಮರುಬಳಕೆ ಮಾಡಬಹುದಾದ ನೈಸರ್ಗಿಕ ನಾರಾಗಿದ್ದು, ವೇಗದ ಬೆಳವಣಿಗೆ, ವೆಚ್ಚ-ಪರಿಣಾಮಕಾರಿತ್ವ ಮತ್ತು ಸುಲಭ ಲಭ್ಯತೆಯಿಂದ ಗುರುತಿಸಲ್ಪಟ್ಟಿದೆ. ಇದು ಬಲವಾದ, ಬಾಳಿಕೆ ಬರುವ, ಗಾಳಿ ನೀಡುವ ಮತ್ತು ಬಹುಮುಖ ಬಳಕೆಯ ನಾರಾಗಿದ್ದು, ಪ್ಯಾಕೇಜಿಂಗ್, ನಿರ್ಮಾಣ, ಕೃಷಿ ಮತ್ತು ಕೈಗಾರಿಕಾ ಜವಳಿಗಳಲ್ಲಿ ಇದರ ಅನ್ವಯಿಕೆಗಳಿವೆ. ಸೆಣಬು ಶಾಖ ಮತ್ತು ಶಬ್ದ ನಿರೋಧಕತೆ, ಹೆಚ್ಚಿನ ತೇವಾಂಶ ಹೀರಿಕೊಳ್ಳುವಿಕೆ ಮತ್ತು ಕಡಿಮೆ ಸ್ಥಾಯೀವಿದ್ಯುತ್ ಉತ್ಪಾದನೆಯಂತಹ ಅನುಕೂಲಕರ ಗುಣಲಕ್ಷಣಗಳನ್ನು ಹೊಂದಿದೆ. ಇದು ನೈಸರ್ಗಿಕ ಮತ್ತು ಸಿಂಥೆಟಿಕ್ ನಾರುಗಳೆರಡರೊಂದಿಗೂ ಚೆನ್ನಾಗಿ ಬೆರೆಯುತ್ತದೆ, ಇದು ವೈವಿಧ್ಯಮಯ ಮೌಲ್ಯವರ್ಧಿತ ಮತ್ತು ಜವಳಿ ಉತ್ಪನ್ನಗಳ ತಯಾರಿಕೆಗೆ ಅನುಕೂಲಕರವಾಗಿದೆ.

|
ಸೆಣಬನ್ನು ಆಹಾರವಾಗಿ ಸೇವಿಸಬಹುದೇ?
ಸೆಣಬಿನ ಎಲೆಗಳನ್ನು ಆಫ್ರಿಕಾ, ಮಧ್ಯಪ್ರಾಚ್ಯ ಮತ್ತು ಆಗ್ನೇಯ ಏಷ್ಯಾದಂತಹ ಪ್ರದೇಶಗಳಲ್ಲಿ ಬಹಳ ಕಾಲದಿಂದಲೂ ತರಕಾರಿಯಾಗಿ ಸೇವಿಸಲಾಗುತ್ತಿದೆ. ಜಪಾನ್‌ನಲ್ಲಿ, ಸೆಣಬಿನ ಎಲೆಗಳನ್ನು ಆರೋಗ್ಯಕರ ಆಹಾರವೆಂದು ವ್ಯಾಪಕವಾಗಿ ಗುರುತಿಸಲಾಗುತ್ತದೆ ಮತ್ತು ಸೇವಿಸಲಾಗುತ್ತದೆ. ಪೌಷ್ಟಿಕಾಂಶದ ದೃಷ್ಟಿಯಿಂದ, ಸೆಣಬಿನ ಎಲೆಗಳು ಜೀವಸತ್ವಗಳು, ಕ್ಯಾರೋಟಿನಾಯ್ಡ್‌ಗಳು, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಆಹಾರದ ನಾರಿನಂಶದಿಂದ ಸಮೃದ್ಧವಾಗಿದ್ದು, ಇವುಗಳನ್ನು ಕ್ರಿಯಾತ್ಮಕ ಆಹಾರ ಮೂಲವಾಗಿ ಪುಷ್ಟೀಕರಿಸುತ್ತವೆ. ಸೆಣಬಿನ ಎಲೆಗಳಿಂದ ಉತ್ಕರ್ಷಣ ನಿರೋಧಕ ಮೂಲಿಕೆ ಪಾನೀಯಗಳು ಮತ್ತು ಆರೋಗ್ಯ ರಕ್ಷಣಾ ಉತ್ಪನ್ನಗಳನ್ನು ತಯಾರಿಸಲು ಸಾಬೀತಾದ ತಂತ್ರಜ್ಞಾನಗಳನ್ನು ಸಹ ಅಭಿವೃದ್ಧಿಪಡಿಸಲಾಗಿದೆ.
|
ಸೆಣಬಿನ ಜಿಯೋಟೆಕ್ಸ್ಟೈಲ್: ಸುಸ್ಥಿರ ಮೂಲಸೌಕರ್ಯದ ನಾರು
ಸೆಣಬಿನ ಜಿಯೋಟೆಕ್ಸ್ಟೈಲ್ ಎಂಬುದು ತಾಂತ್ರಿಕ ಜವಳಿ ವರ್ಗಕ್ಕೆ ಸೇರಿದ ಅತ್ಯಂತ ಬಹುಮುಖ ಮತ್ತು ವೈವಿಧ್ಯಮಯ ಸೆಣಬಿನ ಉತ್ಪನ್ನವಾಗಿದೆ. ಇದನ್ನು ಸಿವಿಲ್ ಇಂಜಿನಿಯರಿಂಗ್, ಮಣ್ಣಿನ ಸವೆತ ತಡೆಗಟ್ಟುವಿಕೆ, ರಸ್ತೆ ನಿರ್ಮಾಣ ಮತ್ತು ನದಿ ದಂಡೆಗಳ ರಕ್ಷಣೆಯಂತಹ ಅನೇಕ ಕ್ಷೇತ್ರಗಳಲ್ಲಿ ಬಳಸಬಹುದಾಗಿದೆ. ವಿಶೇಷ ಸಂಸ್ಕರಣೆ ಮತ್ತು ನೇಯ್ಗೆ ಪ್ರಕ್ರಿಯೆಗಳ ಮೂಲಕ ಸೆಣಬಿನ ನಾರುಗಳಿಂದ ಜೆಜಿಟಿಯನ್ನು ತಯಾರಿಸಲಾಗುತ್ತದೆ.
ಅದರ ಕಾರ್ಯಾಚರಣೆಯ ದಕ್ಷತೆ, ಪರಿಸರ ಸ್ನೇಹಿ ಗುಣ, ಅನುಕೂಲಕರ ತಾಂತ್ರಿಕ-ಭೌತಿಕ ಗುಣಲಕ್ಷಣಗಳು ಮತ್ತು ಕೈಗೆಟುಕುವ ಬೆಲೆಯಿಂದಾಗಿ ಇದಕ್ಕೆ ವ್ಯಾಪಕ ಸ್ವೀಕಾರಾರ್ಹತೆ ಸಿಗುತ್ತಿದೆ. ಪಾರಿಸರಿಕ ದೃಷ್ಟಿಕೋನದಿಂದ, ಜೆಜಿಟಿ ಸಂಪೂರ್ಣವಾಗಿ ಜೈವಿಕವಾಗಿ ಕೊಳೆಯುವಂತಹದ್ದಾಗಿದ್ದು, ಮಣ್ಣಿನ ರಚನೆ ಮತ್ತು ಫಲವತ್ತತೆಯನ್ನು ಸುಧಾರಿಸುತ್ತದೆ. ಮೇಲಾಗಿ, ಮಣ್ಣಿನ ಸ್ಥಿರೀಕರಣ, ಸವೆತ ನಿಯಂತ್ರಣ ಮತ್ತು ಹಾನಿಗೊಳಗಾದ ಪ್ರದೇಶಗಳ ಪಾರಿಸರಿಕ ಪುನರುಜ್ಜೀವನಕ್ಕೆ ಜೆಜಿಟಿಯನ್ನು ಒಂದು ಪರಿಣಾಮಕಾರಿ ನೈಸರ್ಗಿಕ ಪರಿಹಾರವೆಂದು ಜಾಗತಿಕವಾಗಿ ಗುರುತಿಸಲಾಗಿದೆ. ಏಕೆಂದರೆ ಇದು ಕಡಿಮೆ ಮಣ್ಣಿನ ತಾಪಮಾನವನ್ನು ಕಾಯ್ದುಕೊಳ್ಳುವ ಮೂಲಕ ಮತ್ತು ಮೇಲ್ಮೈ ಅಡಚಣೆಯನ್ನು ಕಡಿತಗೊಳಿಸುವ ಮೂಲಕ ಸೂಕ್ಷ್ಮ-ಪರಿಸರವನ್ನು ನಿಯಂತ್ರಿಸಲು ನೆರವಾಗುತ್ತದೆ. ಹೀಗಾಗಿ, ಇದು ಬೀಜಗಳ ಮೊಳಕೆಯೊಡೆಯುವಿಕೆಗೆ ಮತ್ತು ಆರಂಭಿಕ ಸಸ್ಯಗಳ ಬೆಳವಣಿಗೆಗೆ ಬೆಂಬಲ ನೀಡುತ್ತದೆ.
ಸೆಣಬಿನ ಜಿಯೋಟೆಕ್ಸ್ಟೈಲ್ನ ಅನ್ವಯಿಕೆಗಳು (Applications)
ಸಿವಿಲ್ ಇಂಜಿನಿಯರಿಂಗ್, ಮಣ್ಣಿನ ಸಂರಕ್ಷಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿಯಲ್ಲಿ ವೈವಿಧ್ಯಮಯ ಬಳಕೆಗಾಗಿ ಸೆಣಬಿನ ಜಿಯೋಟೆಕ್ಸ್ಟೈಲ್ ಅತ್ಯಂತ ಪರಿಣಾಮಕಾರಿ ನೈಸರ್ಗಿಕ ವಸ್ತುವಾಗಿ ಗುರುತಿಸಲ್ಪಟ್ಟಿದೆ:
- ಇದನ್ನು ಮಣ್ಣಿನ ಏರಿಗಳು, ಬೆಟ್ಟಗಳ ಕಡಿತಗಳು, ನದಿ ದಂಡೆಗಳು, ಕಾಲುವೆಗಳು ಮತ್ತು ಮಳೆನೀರು ಕೊಯ್ಲು ರಚನೆಗಳಲ್ಲಿ ಇಳಿಜಾರಿನ ರಕ್ಷಣೆಗಾಗಿ ವ್ಯಾಪಕವಾಗಿ ಬಳಸಲಾಗುತ್ತದೆ. ಏಕೆಂದರೆ, ಇದರ ಹೆಚ್ಚಿನ ಆರಂಭಿಕ ತನನ ಸಾಮರ್ಥ್ಯ ಮತ್ತು ಮೇಲ್ಮೈ ಒರಟುತನವು ಮಣ್ಣಿನ ಸ್ಥಿರೀಕರಣವನ್ನು ಹೆಚ್ಚಿಸುತ್ತದೆ ಹಾಗೂ ಸವೆತವನ್ನು ತಗ್ಗಿಸುತ್ತದೆ.
- ರಸ್ತೆ ಮತ್ತು ಹಾಲ್ ರಸ್ತೆ ನಿರ್ಮಾಣದಲ್ಲಿ, ಹಾಗೂ ರೈಲ್ವೆ ಹಳಿಗಳ ನಿರ್ಮಾಣದಲ್ಲಿ ಜೆಜಿಟಿ ಯಾಂತ್ರಿಕ ಭಾರದ ಹಂಚಿಕೆಯನ್ನು ಸುಧಾರಿಸುತ್ತದೆ ಮತ್ತು ನೆಲ ಕುಸಿತವನ್ನು ನಿಯಂತ್ರಿಸುತ್ತದೆ. ಇದು ನಿರ್ವಹಣಾ ವೆಚ್ಚ ಮತ್ತು ಜೀವಿತಾವಧಿಯ ವೆಚ್ಚವನ್ನು ಕಡಿಮೆ ಮಾಡುತ್ತದೆ.
- ವಿಶೇಷವಾಗಿ ಗುಡ್ಡಗಾಡು ಪ್ರದೇಶಗಳ ಗುಪ್ತ ಒಳಚರಂಡಿ ವ್ಯವಸ್ಥೆಗಳಲ್ಲಿ ಇದರ ಬಳಕೆಯು ಮಣ್ಣಿನ ಕೊಚ್ಚಿಹೋಗುವಿಕೆಯನ್ನು ತಡೆಯುವ ಜೊತೆಗೆ ನೀರಿನ ಹರಿವನ್ನು ನಿಯಂತ್ರಿಸಲು ನೆರವಾಗುತ್ತದೆ. ಮೆದುವಾದ ಮಣ್ಣನ್ನು ಸ್ಥಿರಗೊಳಿಸಲು ಪ್ರಿಫ್ಯಾಬ್ರಿಕೇಟೆಡ್ ವರ್ಟಿಕಲ್ ಡ್ರೈನ್ಸ್‌ಗಳ ಮೂಲಕವೂ ಜೆಜಿಟಿಯನ್ನು ಬಳಸಲಾಗುತ್ತದೆ; ಇದು ಮಣ್ಣಿನ ಸಾಂದ್ರತೆಯನ್ನು ವೇಗಗೊಳಿಸುತ್ತದೆ ಮತ್ತು ಅದರ ಹೊರೆಯನ್ನು ಹೊರಬಲ್ಲ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಇತ್ತೀಚಿನ ವರ್ಷಗಳಲ್ಲಿ, ರಾಷ್ಟ್ರೀಯ ಸೆಣಬು ಮಂಡಳಿಯು ಸೆಣಬಿನ ಜಿಯೋಟೆಕ್ಸ್ಟೈಲ್‌ಗಳನ್ನು ಇಂಜಿನಿಯರಿಂಗ್ ವಸ್ತುವಾಗಿ ಅಭಿವೃದ್ಧಿಪಡಿಸಲು ಮತ್ತು ಪ್ರಚಾರ ಮಾಡಲು ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಈ ಮಂಡಳಿಯು ವಿನ್ಯಾಸದ ಮಾನದಂಡಗಳು, ಸಂಗ್ರಹಣೆ ಪ್ರಕ್ರಿಯೆಗಳು, ಪರೀಕ್ಷಾ ನಿಯಮಾವಳಿಗಳು ಮತ್ತು ಅಳವಡಿಕೆಯ ಅಭ್ಯಾಸಗಳ ಮೇಲಿನ ಮಾರ್ಗದರ್ಶನ ಸೇರಿದಂತೆ ಅಂತಿಮ ಬಳಕೆದಾರರಿಗೆ ತಾಂತ್ರಿಕ ಬೆಂಬಲವನ್ನು ಒದಗಿಸುತ್ತದೆ.
|
2026ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ತಂಡದಿಂದ ಸೆಣಬಿನ ಉಡುಪುಗಳ ಪ್ರದರ್ಶನ
2026ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳು ಮತ್ತು ತಂಡದ ಸದಸ್ಯರು ಸೆಣಬು-ವಿಸ್ಕೋಸ್ ಮಿಶ್ರಿತ ಉಡುಪುಗಳನ್ನು ಧರಿಸಿದ್ದರು. ಈ ಬಟ್ಟೆಗಳನ್ನು ರಾಷ್ಟ್ರೀಯ ಸೆಣಬು ಮಂಡಳಿಯು ಅಭಿವೃದ್ಧಿಪಡಿಸಿದೆ. ಈ ಉಡುಪುಗಳನ್ನು ನವದೆಹಲಿಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ ವಿನ್ಯಾಸಗೊಳಿಸಿದೆ. ಈ ಉಪಕ್ರಮವು ೧೦೦ ಪ್ರತಿಶತ ಜೈವಿಕವಾಗಿ ಕೊಳೆಯುವ ಸೆಣಬು-ವಿಸ್ಕೋಸ್ ಮಿಶ್ರಿತ ಬಟ್ಟೆಯ ಸಾಮರ್ಥ್ಯವನ್ನು ಒಂದು ಸುಸ್ಥಿರ ಮತ್ತು ನವೀನ ಜವಳಿ ಪರಿಹಾರವಾಗಿ ಉಲ್ಲೇಖಿಸುತ್ತದೆ ಈ ಪ್ರವರ್ತನವು ಭಾರತೀಯ ತಯಾರಕರ ಕರಕುಶಲತೆಯನ್ನು ಎತ್ತಿ ಹಿಡಿಯುವ ಜೊತೆಗೆ, ಭಾರತದ ಸೆಣಬು ಉದ್ಯಮಕ್ಕೆ ಜಾಗತಿಕ ಮಟ್ಟದಲ್ಲಿ ಮನ್ನಣೆಯನ್ನು ಒದಗಿಸಿದೆ.
|
ಹೊಲದಿಂದ ಮಾರುಕಟ್ಟೆಗೆ: ಸೆಣಬು ಉದ್ಯಮಕ್ಕಾಗಿ ಸರ್ಕಾರದ ಮಧ್ಯಸ್ಥಿಕೆಗಳು
ಭಾರತದ ಸೆಣಬು ರಂಗವನ್ನು ಬಲಪಡಿಸುವ ನಿರಂತರ ಬದ್ಧತೆಯನ್ನು ಬಿಂಬಿಸುವ ಅನೇಕ ನೀತಿ ಉಪಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ಇವುಗಳಲ್ಲಿ ಕಚ್ಚಾ ಸೆಣಬಿನ ಕನಿಷ್ಠ ಬೆಂಬಲ ಬೆಲೆಯ ಮೇಲ್ಮುಖ ಪರಿಷ್ಕರಣೆಗಳು ಸೇರಿವೆ. 2026-೨೭ರ ಹಣಕಾಸು ವರ್ಷಕ್ಕೆ ಕಚ್ಚಾ ಸೆಣಬಿನ ಕನಿಷ್ಠ ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಾಲ್‌ಗೆ ₹5925 ಎಂದು ನಿಗದಿಪಡಿಸಲಾಗಿದೆ. ಇದು ಸಾರಾಸರಿ ಅಖಿಲ ಭಾರತ ಉತ್ಪಾದನಾ ವೆಚ್ಚಕ್ಕಿಂತ ಶೇಕಡಾ 61.8 ರಷ್ಟು ಲಾಭವನ್ನು ಖಚಿತಪಡಿಸುತ್ತದೆ. ಇದು 2014-15ರ ಹಣಕಾಸು ವರ್ಷದಲ್ಲಿದ್ದ ಕಚ್ಚಾ ಸೆಣಬಿನ ಕನಿಷ್ಠ ಬೆಂಬಲ ಬೆಲೆಗಿಂತ (ಪ್ರತಿ ಕ್ವಿಂಟಾಲ್‌ಗೆ ₹2400) ಸುಮಾರು ಶೇಕಡಾ 147 ರಷ್ಟು ಹೆಚ್ಚಳವನ್ನು ಸೂಚಿಸುತ್ತದೆ. ಸೆಣಬು ರೈತರಿಗೆ ಪಾವತಿಸಲಾದ ಕನಿಷ್ಠ ಬೆಂಬಲ ಬೆಲೆಯ ಮೊತ್ತವೂ ಕಾಲಕ್ರಮೇಣ ಹೆಚ್ಚಾಗಿದೆ2004-05 ರಿಂದ 2013-14 ರವರೆಗಿನ ಹಣಕಾಸು ವರ್ಷಗಳ ಅವಧಿಯಲ್ಲಿ ಪಾವತಿಸಿದ ಮೊತ್ತವು ₹441 ಕೋಟಿಯಾಗಿತ್ತು. ಇದು 2014-15 ರಿಂದ 2014-15ರವರೆಗಿನ ಹಣಕಾಸು ವರ್ಷಗಳ ಅವಧಿಯಲ್ಲಿ ₹1342 ಕೋಟಿಗೆ ಏರಿಕೆಯಾಗಿದೆ.

ಸರ್ಕಾರವು ಸೆಣಬಿನ ಪ್ಯಾಕೇಜಿಂಗ್ ವಸ್ತುಗಳ (ಸರಕುಗಳನ್ನು ಪ್ಯಾಕ್ ಮಾಡುವಲ್ಲಿ ಕಡ್ಡಾಯ ಬಳಕೆ) ಕಾಯಿದೆಯನ್ನು ಸಹ ಅನುಷ್ಠಾನಗೊಳಿಸಿದೆ. ಈ ಕಾಯಿದೆಯು ಯಾವ ಸರಕುಗಳನ್ನು ಮತ್ತು ಎಷ್ಟು ಪ್ರಮಾಣದಲ್ಲಿ ಕಡ್ಡಾಯವಾಗಿ ಸೆಣಬಿನ ಪ್ಯಾಕೇಜಿಂಗ್ ವಸ್ತುಗಳಲ್ಲೇ ಪ್ಯಾಕ್ ಮಾಡಬೇಕು ಎಂಬುದನ್ನು ನಿರ್ದಿಷ್ಟಪಡಿಸುತ್ತದೆ. ಅದರಂತೆ, ಸರ್ಕಾರವು ಶೇಕಡಾ 100 ರಷ್ಟು ಆಹಾರ ಧಾನ್ಯಗಳನ್ನು ಮತ್ತು ಶೇಕಡಾ 20 ರಷ್ಟು ಸಕ್ಕರೆಯನ್ನು ಕಡ್ಡಾಯವಾಗಿ ಸೆಣಬಿನ ಚೀಲಗಳಲ್ಲೇ ಪ್ಯಾಕ್ ಮಾಡಬೇಕೆಂದು ಆದೇಶಿಸಿದೆ.
|
ಭಾರತೀಯ ಸೆಣಬು ನಿಗಮ
ಜೂಟ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಕಚ್ಚಾ ಸೆಣಬಿನ ಕನಿಷ್ಠ ಬೆಂಬಲ ಬೆಲೆ ನೀತಿಯನ್ನು ಜಾರಿಗೊಳಿಸುವ ಏಕೈಕ ನೋಡಲ್ ಸಂಸ್ಥೆಯಾಗಿದೆ. ಮಾರುಕಟ್ಟೆ ಬೆಲೆಗಳು ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆಯಾದಾಗ ರೈತರಿಂದ ನೇರವಾಗಿ ಖರೀದಿ ಮಾಡುವ ಮೂಲಕ ಇದು ಸೆಣಬು ರೈತರ ಹಿತಾಸಕ್ತಿಗಳನ್ನು ರಕ್ಷಿಸುತ್ತದೆ. ಜೆಸಿಐನ ಇಲಾಖಾ ಖರೀದಿ ಕೇಂದ್ರಗಳು, ಗ್ರಾಮೀಣ ಪ್ರದೇಶಗಳಲ್ಲಿದ್ದು, ರೈತರಿಂದ ನೇರವಾಗಿ ಕಚ್ಚಾ ಸೆಣಬನ್ನು ಖರೀದಿಸುತ್ತವೆ. ಜೆಸಿಐ ಪಶ್ಚಿಮ ಬಂಗಾಳ, ಅಸ್ಸಾಂ, ಬಿಹಾರ, ಆಂಧ್ರಪ್ರದೇಶ, ಒಡಿಶಾ ಮತ್ತು ತ್ರಿಪುರಾ ರಾಜ್ಯಗಳಲ್ಲಿ ಸುಮಾರು 110 ಡಿಪಿಸಿಗಳನ್ನು ಹೊಂದಿದೆ.

|
ಸರ್ಕಾರವು ಸೆಣಬಿನ ಕೃಷಿ ಮತ್ತು ಸಂಸ್ಕರಣೆಗೆ ಬೆಂಬಲ ನೀಡುವ ತನ್ನ ಪ್ರಯತ್ನಗಳನ್ನು ರಾಷ್ಟ್ರೀಯ ಸೆಣಬು ಅಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ ಸಂಯೋಜಿಸಿದೆ.

ರಾಷ್ಟ್ರೀಯ ಸೆಣಬು ಅಭಿವೃದ್ಧಿ ಕಾರ್ಯಕ್ರಮ
ರಾಷ್ಟ್ರೀಯ ಸೆಣಬು ಅಭಿವೃದ್ಧಿ ಕಾರ್ಯಕ್ರಮವು ಸೆಣಬು ರಂಗದ ಅಭಿವೃದ್ಧಿ ಮತ್ತು ಪ್ರಚಾರಕ್ಕಾಗಿ ಜಾರಿಯಲ್ಲಿರುವ ಒಂದು ಛತ್ರಿ ಯೋಜನೆಯಾಗಿದೆ. ಇದನ್ನು ರಾಷ್ಟ್ರೀಯ ಸೆಣಬು ಮಂಡಳಿಯು ೨೦೨೧-೨೨ ರ ಹಣಕಾಸು ವರ್ಷದಿಂದ 2014-15 ರ ಹಣಕಾಸು ವರ್ಷದವರೆಗೆ ₹48೪೮೫.೫೮ ಕೋಟಿ ಅನುದಾನದೊಂದಿಗೆ ಅನುಷ್ಠಾನಗೊಳಿಸುತ್ತಿದೆ. ಇದು ಕೃಷಿ ಉತ್ಪಾದಕತೆ ಮತ್ತು ರೈತರ ಆದಾಯವನ್ನು ಹೆಚ್ಚಿಸುವುದು, ಜೊತೆಗೆ ಎರಡು ಪ್ರಮುಖ ಘಟಕಗಳ ಮೂಲಕ ವೈವಿಧ್ಯೀಕರಣವನ್ನು ಉತ್ತೇಜಿಸುವುದರ ಮೇಲೆ ಗಮನ ಹರಿಸುತ್ತದೆ: ಅವುಗಳೆಂದರೆ ಜೂಟ್-ಐಕೇರ್ ಮತ್ತು ಸೆಣಬಿನ ವೈವಿಧ್ಯೀಕರಣ ಯೋಜನೆ. ಈ ಕಾರ್ಯಕ್ರಮವು ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಸೆಣಬನ್ನು ಪ್ರಚುರಪಡಿಸಲು ವಿಚಾರಸಂಕಿರಣಗಳು, ಪ್ರದರ್ಶನಗಳು ಮತ್ತು ಅರಿವು ಮೂಡಿಸುವ ಆಂದೋಲನಗಳಿಗೆ ಬೆಂಬಲ ನೀಡುತ್ತದೆ.
|
ರಾಷ್ಟ್ರೀಯ ಸೆಣಬು ಮಂಡಳಿ
ರಾಷ್ಟ್ರೀಯ ಸೆಣಬು ಮಂಡಳಿಯು ಮೌಲ್ಯ ಸರಪಳಿಯಾದ್ಯಂತ ಸೆಣಬು ರಂಗದ ಅಭಿವೃದ್ಧಿ, ಪ್ರಚಾರ ಮತ್ತು ವೈವಿಧ್ಯೀಕರಣಕ್ಕಾಗಿ ಪ್ರಮುಖ ನೋಡಲ್ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ. ಇದರ ಮುಖ್ಯ ಕಾರ್ಯಗಳು ಇಂತಿವೆ:

- ಕೃಷಿ ಪದ್ಧತಿ ಮತ್ತು ನಾರಿನ ಗುಣಮಟ್ಟವನ್ನು ಸುಧಾರಿಸುವುದು,
- ಉತ್ಪಾದಕತೆ ಮತ್ತು ಪ್ರಮಾಣೀಕರಣವನ್ನು ಹೆಚ್ಚಿಸುವುದು,
- ದೇಶೀಯ ಮತ್ತು ರಫ್ತು ಮಾರುಕಟ್ಟೆಗಳನ್ನು ಪ್ರೋತ್ಸಾಹಿಸುವುದು,
- ಸಂಶೋಧನೆ ಹಾಗೂ ಮೌಲ್ಯವರ್ಧಿತ ಉತ್ಪನ್ನಗಳ ವೈವಿಧ್ಯೀಕರಣಕ್ಕೆ ಬೆಂಬಲ ನೀಡುವುದು, ಮತ್ತು
- ಸಾಮರ್ಥ್ಯ ವರ್ಧನೆ ಹಾಗೂ ಮಾರುಕಟ್ಟೆ ಅಭಿವೃದ್ಧಿಯ ಮೂಲಕ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು (MSME) ಹಾಗೂ ಕರಕುಶಲ ಕರ್ಮಿಗಳನ್ನು ಬಲಪಡಿಸುವುದು.
|
ಜೂಟ್-ಐಸಿಎಆರ್ ಯೋಜನೆ
2015-16ರ ಹಣಕಾಸು ವರ್ಷದಲ್ಲಿ ಪ್ರಾರಂಭಿಸಲಾದ ಜೂಟ್-ಐಕೇರ್ (ಸುಧಾರಿತ ಕೃಷಿ ಮತ್ತು ಸುಧಾರಿತ ಕೊಳೆಸುವ ಅಭ್ಯಾಸ) ಯೋಜನೆಯು ಸೆಣಬಿನ ಉತ್ಪಾದಕತೆ ಮತ್ತು ನಾರಿನ ಗುಣಮಟ್ಟವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ವೈಜ್ಞಾನಿಕ ಕೃಷಿ, ಯಾಂತ್ರೀಕರಣ ಮತ್ತು ಸುಧಾರಿತ ಕೊಳೆಸುವ ತಂತ್ರಜ್ಞಾನಗಳ ಮೂಲಕ ಇದನ್ನು ಸಾಧಿಸಲಾಗುತ್ತಿದೆ. ಇದು ಸಬ್ಸಿಡಿ ದರದ ಪ್ರಮಾಣೀಕೃತ ಬೀಜಗಳು, ಪ್ರಾತ್ಯಕ್ಷಿಕೆಗಳು ಮತ್ತು ಯಾಂತ್ರಿಕೀಕೃತ ಉಪಕರಣಗಳ ಮೂಲಕ ಸಣ್ಣ ಮತ್ತು ಅಂಚಿನ ರೈತರಿಗೆ ಬೆಂಬಲ ನೀಡುತ್ತದೆ. ಈ ಯೋಜನೆಯನ್ನು 'ಸೆಣಬು ಮತ್ತು ಸಂಬಂಧಿತ ನಾರುಗಳ ಕೇಂದ್ರೀಯ ಸಂಶೋಧನಾ ಸಂಸ್ಥೆ' ಹಾಗೂ 'ಜೂಟ್ ಕಾರ್ಪೊರೇಷನ್ ಆಫ್ ಇಂಡಿಯಾ' ಸಹಯೋಗದೊಂದಿಗೆ ಅನುಷ್ಠಾನಗೊಳಿಸಲಾಗುತ್ತಿದೆ. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಮತ್ತು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಸಂಯೋಜನೆಯೊಂದಿಗೆ ಕೊಳೆಸುವ ಕೊಳಗಳ ನಿರ್ಮಾಣಕ್ಕೂ ಈ ಯೋಜನೆ ಅನುಕೂಲ ಮಾಡಿಕೊಡುತ್ತದೆ.
ಸೆಣಬಿನ ವೈವಿಧ್ಯೀಕರಣ ಯೋಜನೆ
ಸೆಣಬಿನ ವೈವಿಧ್ಯೀಕರಣ ಯೋಜನೆಯು ಸೆಣಬಿನ ಸಂಸ್ಕರಣೆ, ಮಾರುಕಟ್ಟೆ ಮತ್ತು ಮಾರಾಟಕ್ಕೆ ಬೆಂಬಲ ನೀಡುವ ವಿವಿಧ ಯೋಜನೆಗಳನ್ನು ಒಳಗೊಂಡಿದೆ.
ಸೆಣಬು ಸಂಸ್ಕರಣೆಗೆ ಬೆಂಬಲ ನೀಡುವ ಉಪಕ್ರಮ: ಸೆಣಬು ಕಚ್ಚಾ ವಸ್ತು ಬ್ಯಾಂಕ್
ಸೆಣಬು ಕಚ್ಚಾ ವಸ್ತು ಬ್ಯಾಂಕ್ ಅಸಂಘಟಿತ ವಲಯ ಹಾಗೂ ಸಣ್ಣ ಉತ್ಪಾದನಾ ಘಟಕಗಳಿಗೆ ವೈವಿಧ್ಯಮಯ ಸೆಣಬಿನ ಉತ್ಪನ್ನಗಳನ್ನು ತಯಾರಿಸಲು ಕಚ್ಚಾ ವಸ್ತುಗಳು ಸುಲಭವಾಗಿ ಸಿಗುವಂತೆ ಮಾಡುತ್ತದೆ. ಗಿರಣಿ-ದರ ಮತ್ತು ನೈಜ ಸಾರಿಗೆ ವೆಚ್ಚದ ಆಧಾರದ ಮೇಲೆ ಆರ್ಥಿಕ ದರದಲ್ಲಿ ಕಚ್ಚಾ ವಸ್ತುಗಳನ್ನು ಪೂರೈಸುವ ಮೂಲಕ ಇದನ್ನು ಮಾಡಲಾಗುತ್ತದೆ. ಗುಣಮಟ್ಟದ ಕಚ್ಚಾ ವಸ್ತುಗಳು ನಿಯಮಿತವಾಗಿ ದೊರೆಯುವಂತೆ ಮಾಡುವ ಮೂಲಕ ಈ ಯೋಜನೆಯು ವೈವಿಧ್ಯಮಯ ಸೆಣಬಿನ ಉತ್ಪನ್ನ ತಯಾರಿಕೆಯಲ್ಲಿ ತೊಡಗಿರುವ ಕರಕುಶಲ ಕರ್ಮಿಗಳು, ಮಹಿಳಾ ಸ್ವಸಹಾಯ ಸಂಘಗಳು ಮತ್ತು ಎಂಎಸ್‌ಎಂಇ ಗಳಿಗೆ ಬೆಂಬಲ ನೀಡುತ್ತದೆ. ಇದು ಗ್ರಾಮೀಣ ಜೀವನೋಪಾಯವನ್ನು ಮತ್ತಷ್ಟು ಪ್ರೋತ್ಸಾಹಿಸುತ್ತದೆ.
ಉತ್ಪಾದನೆ, ಮಾರುಕಟ್ಟೆ ಮತ್ತು ಮಾರಾಟದ ಉಪಕ್ರಮಗಳು
ಸೆಣಬಿನ ವೈವಿಧ್ಯೀಕರಣ ಯೋಜನೆಯು ಹಲವಾರು ಉಪ-ಯೋಜನೆಗಳ ಮೂಲಕ ಮೌಲ್ಯವರ್ಧನೆ, ಆಧುನಿಕೀಕರಣ ಮತ್ತು ಮಾರುಕಟ್ಟೆ ವಿಸ್ತರಣೆಯನ್ನು ಉತ್ತೇಜಿಸುತ್ತದೆ:
- ಯಂತ್ರೋಪಕರಣ ಖರೀದಿಗೆ ಬಂಡವಾಳ ಸಬ್ಸಿಡಿ: ವೈವಿಧ್ಯಮಯ ಸೆಣಬಿನ ಉತ್ಪನ್ನಗಳನ್ನು ತಯಾರಿಸುವ ಸೆಣಬಿನ ಗಿರಣಿಗಳು ಮತ್ತು ಎಂಎಸ್‌ಎಂಇಗಳಿಗೆ (MSME) ಯಂತ್ರೋಪಕರಣಗಳ ವೆಚ್ಚದ ಮೇಲೆ ಶೇಕಡಾ ೩೦ ರಷ್ಟು ಸಬ್ಸಿಡಿಯನ್ನು ನೀಡಲಾಗುತ್ತದೆ.
- ಸೆಣಬು ಸಂಪನ್ಮೂಲ ಮತ್ತು ಉತ್ಪಾದನಾ ಕೇಂದ್ರಗಳು: ಕರಕುಶಲ ಕರ್ಮಿಗಳು, ಮಹಿಳಾ ಸ್ವಸಹಾಯ ಸಂಘಗಳು, ಉದ್ಯಮಿಗಳು, ಸರ್ಕಾರೇತರ ಸಂಸ್ಥೆಗಳು, സഹಕಾರಿ ಸಂಘಗಳ ಸದಸ್ಯರು ಮುಂತಾದವರಿಗಾಗಿ ಕ್ಲಸ್ಟರ್ ಆಧಾರಿತ ತರಬೇತಿ ಮತ್ತು ಉತ್ಪಾದನಾ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತವೆ.
- ಸೆಣಬಿನ ಚಿಲ್ಲರೆ ಮಾರಾಟ ಕೇಂದ್ರಗಳು: ವೈವಿಧ್ಯಮಯ ಸೆಣಬಿನ ಉತ್ಪನ್ನಗಳ ಚಿಲ್ಲರೆ ಮತ್ತು ಶೋರೂಮ್ ಮಾರಾಟಕ್ಕೆ ಶೇಕಡಾ ೨೫ ರಷ್ಟು ಮಾರಾಟ ನೆರವನ್ನು (ಪ್ರತಿ ಯೂನಿಟ್‌ಗೆ ಗರಿಷ್ಠ ₹೯ ಲಕ್ಷದವರೆಗೆ) ಒದಗಿಸಲಾಗುತ್ತದೆ.
- ವೈವಿಧ್ಯಮಯ ಸೆಣಬಿನ ಉತ್ಪನ್ನಗಳ ರಫ್ತಿಗೆ ಉತ್ಪಾದನೆ ಆಧಾರಿತ ಪ್ರೋತ್ಸಾಹಕ: ರಫ್ತು ಮಾಡಲಾದ ವೈವಿಧ್ಯಮಯ ಸೆಣಬಿನ ಉತ್ಪನ್ನಗಳಲ್ಲಿ ಬಳಸಲಾದ ಕಚ್ಚಾ ವಸ್ತುವಿನ ಪ್ರಮಾಣ ಮತ್ತು ರಫ್ತಿನ ಮೌಲ್ಯದ ಆಧಾರದ ಮೇಲೆ ರಫ್ತುದಾರರಿಗೆ ಪ್ರೋತ್ಸಾಹಕಗಳನ್ನು ನೀಡಲಾಗುತ್ತದೆ.
ಬ್ರ್ಯಾಂಡಿಂಗ್, ಗುಣಮಟ್ಟದ ಭರವಸೆ ಮತ್ತು ಮಾರುಕಟ್ಟೆ ಪ್ರಚಾರಕ್ಕಾಗಿ ಉಪಕ್ರಮಗಳು
ಜೂಟ್ ಮಾರ್ಕ್ ಇಂಡಿಯಾ ಲೋಗೋ
ಜೂಟ್ ಮಾರ್ಕ್ ಇಂಡಿಯಾ ಲೋಗೋವು ಸೆಣಬು ಮತ್ತು ಸೆಣಬು-ಮಿಶ್ರಿತ ಉತ್ಪನ್ನಗಳಲ್ಲಿ ಪ್ರಾಮಾಣಿಕತೆ, ಗುಣಮಟ್ಟದ ಭರವಸೆ ಮತ್ತು ಸುಸ್ಥಿರತೆಯನ್ನು ಪ್ರತಿನಿಧಿಸುತ್ತದೆ. ಸಂರಚನಾತ್ಮಕ ಚೌಕಟ್ಟಿನೊಳಗಿನ ಶೈಲೀಕೃತ ಸೆಣಬಿನ ಮೆದೆಗಳು ನೈಸರ್ಗಿಕ ನಾರಿನ ಸಾಮರ್ಥ್ಯ, ಕರಕುಶಲತೆ ಮತ್ತು ಮೌಲ್ಯ ಸರಪಳಿಯಾದ್ಯಂತ ಪ್ರಮಾಣೀಕರಣವನ್ನು ಸೂಚಿಸುತ್ತವೆ. ಜೂಟ್ ಮಾರ್ಕ್ ಇಂಡಿಯಾ ಲೋಗೋವು ಗುಣಮಟ್ಟದ ಮಾನದಂಡಗಳ ಅನುಸರಣೆಯನ್ನು ಪ್ರಮಾಣೀಕರಿಸುತ್ತದೆ ಮತ್ತು ಮಿಶ್ರಿತ ಉತ್ಪನ್ನಗಳಲ್ಲಿನ ಸೆಣಬಿನ ಪ್ರಮಾಣವನ್ನು ದೃಢೀಕರಿಸುತ್ತದೆ. ಇದು ಗ್ರಾಹಕರ ವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ಬ್ರ್ಯಾಂಡ್ ಮನ್ನಣೆಯನ್ನು ಬಲಪಡಿಸುತ್ತದೆ.

ದೇಶೀಯ ಮಾರುಕಟ್ಟೆ ಪ್ರಚಾರದ ಉಪಕ್ರಮಗಳು
ಸರ್ಕಾರವು 2014-15ರ ಹಣಕಾಸು ವರ್ಷದಲ್ಲಿ ಭಾರತ ಅಂತರರಾಷ್ಟ್ರೀಯ ವ್ಯಾಪಾರ ಮೇಳ, ಸೂರಜ್‌ಕುಂಡ್ ಮೇಳ ಮತ್ತು ಭಾರತ್ ಟೆಕ್ಸ್ ನಂತಹ ಪ್ರಮುಖ ನಗರಗಳಾದ್ಯಂತ 57 ಕ್ಕೂ ಹೆಚ್ಚು ಪ್ರಾದೇಶಿಕ ಸೆಣಬಿನ ಮೇಳಗಳನ್ನು ಆಯೋಜಿಸಿದೆ.
|
ಸೆಣಬಿನ ಕೈಮಗ್ಗ ಉದ್ಯಮ: ಸ್ವಸಹಾಯ ಸಂಘಗಳಿಂದ ರಫ್ತು ಮಾರುಕಟ್ಟೆಗಳವರೆಗೆ
ಬ್ರ್ಯಾಂಡಿಂಗ್, ಪ್ರದರ್ಶನ-ಆಧಾರಿತ ಪ್ರಚಾರ ಮತ್ತು ಸಂಘಟಿತ ಮಾರುಕಟ್ಟೆ ಸಂಪರ್ಕಗಳು ಸೆಣಬಿನ ಉದ್ಯಮಗಳ ಕ್ಷೇತ್ರ-ಮಟ್ಟದ ಪ್ರಗತಿಯನ್ನು ವೇಗಗೊಳಿಸಿವೆ. ಉತ್ತರಾಖಂಡದ ಹೃಷಿಕೇಶದ 'ಭಾರತೀಯ ಗ್ರಾಮೋತ್ಥಾನ ಸಂಸ್ಥಾ', ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನ 'ಹೇಡನ್ ಹಾಲ್ ಇನ್‌ಸ್ಟಿಟ್ಯೂಟ್', ಉತ್ತರ ಪ್ರದೇಶದ ಲಕ್ನೋದ 'ಜೂಟ್ ಆರ್ಟಿಸನ್ಸ್ ಗಿಲ್ಡ್ ಅಸೋಸಿಯೇಷನ್' ಮತ್ತು ಒಡಿಶಾದ ಕಟಕ್‌ನ 'ರೂರಲ್ ಆರ್ಗನೈಸೇಶನ್ ಫಾರ್ ಸೋಶಿಯಲ್ ಆಕ್ಷನ್' ಸಂಸ್ಥೆಗಳ ಯಶೋಗಾಥೆಗಳು ಇದಕ್ಕೆ ಅತ್ಯುತ್ತಮ ಉದಾಹರಣೆಗಳಾಗಿವೆ. ರಾಷ್ಟ್ರೀಯ ಸೆಣಬು ಮಂಡಳಿಯ ಕಾರ್ಯಕ್ರಮಗಳಡಿಯಲ್ಲಿ ತರಬೇತಿ ಪಡೆದ ಈ ಸಂಸ್ಥೆಗಳು ಮಾರ್ಗದರ್ಶನ ಮತ್ತು ಮಾರುಕಟ್ಟೆ ಸಂಪರ್ಕಗಳನ್ನು ಬಳಸಿಕೊಂಡು ಸಂಘಟಿತ ಸೆಣಬಿನ ಕೈಮಗ್ಗ ಉತ್ಪಾದನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡವು. ಇವು ನವದೆಹಲಿಯ ಐಐಟಿಎಫ್, ಟೆಕ್ಸ್-ಟ್ರೆಂಡ್ಸ್ ಇಂಡಿಯಾ ಮತ್ತು ಮುಂಬೈನ ಗಿಫ್ಟ್‌ಟೆಕ್ಸ್ ಶೋನಂತಹ ಪ್ರಮುಖ ವ್ಯಾಪಾರ ಮೇಳಗಳಲ್ಲಿ ಭಾಗವಹಿಸಲು ಪ್ರಾರಂಭಿಸಿದವು. ಇದು ಆಯೋಜಕರಿಗೆ ಮತ್ತು ತಯಾರಕರಿಗೆ ನೇರ ಗ್ರಾಹಕ ಸಂವಾದವನ್ನು ಸಾಧ್ಯವಾಗಿಸಿತಲ್ಲದೆ, ಬೃಹತ್ ರಫ್ತು ಆದೇಶಗಳನ್ನು ಪಡೆದುಕೊಳ್ಳಲು ಮತ್ತು ಅವರ ಮಾರುಕಟ್ಟೆ ಕೌಶಲ್ಯಗಳನ್ನು ಬಲಪಡಿಸಲು ನೆರವಾಯಿತು. ಪರಿಣಾಮವಾಗಿ, ಇವುಗಳ ಸದಸ್ಯರ ವೈಯಕ್ತಿಕ ಆದಾಯವು ಹೆಚ್ಚಳಗೊಂಡಿದ್ದಲ್ಲದೆ, ಉತ್ಪಾದನಾ ಸಾಮರ್ಥ್ಯ ಮತ್ತು ಸಾಮಾಜಿಕ ಮನ್ನಣೆಯಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ.


|
ಪೂರೈಕೆ ಸರಪಳಿಯಾದ್ಯಂತ ಡಿಜಿಟಲ್ ಮತ್ತು ತಾಂತ್ರಿಕ ಉಪಕ್ರಮಗಳು
ಜೂಟ್-ಸ್ಮಾರ್ಟ್
2016 ರಿಂದ, ಸೆಣಬಿನ ಚೀಲಗಳ (ಆಹಾರ ಧಾನ್ಯಗಳ ಪ್ಯಾಕಿಂಗ್‌ಗಾಗಿ) ಸಂಗ್ರಹಣೆ ಮತ್ತು ಪೂರೈಕೆಯ ಸಂಪೂರ್ಣ ಕಾರ್ಯಾಚರಣೆಯನ್ನು ಸೆಣಬು ಕಮಿಷನರ್ ಕಚೇರಿಯು ನಿರ್ವಹಿಸುತ್ತಿದೆ. ಈ ಕಾರ್ಯಾಚರಣೆಗಳನ್ನು ಸುಗಮಗೊಳಿಸಲು, ನವೆಂಬರ್ 2016 ರಲ್ಲಿ ಸೆಣಬು ಕಮಿಷನರ್ ಕಚೇರಿಯಿಂದ 'ಜೂಟ್-ಸ್ಮಾರ್ಟ್' ಎಂಬ ಸಂಪೂರ್ಣ ಇ-ಆಡಳಿತ ತಂತ್ರಾಂಶ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಿ ಜಾರಿಗೆ ತರಲಾಯಿತು. ಆಗಸ್ಟ್ 2026 ರವರೆಗೆ, ಪಂಜಾಬ್, ಹರಿಯಾಣ, ಒಡಿಶಾ, ತೆಲಂಗಾಣ, ಪಶ್ಚಿಮ ಬಂಗಾಳ, ಬಿಹಾರ, ಆಂಧ್ರಪ್ರದೇಶ ಮತ್ತು ಎಫ್‌ಸಿಐ ಸೇರಿದಂತೆ 20 ಕ್ಕೂ ಹೆಚ್ಚು ರಾಜ್ಯ ಸಂಗ್ರಹಣಾ ಸಂಸ್ಥೆಗಳು ಈ ಪೋರ್ಟಲ್ ಮೂಲಕ ಸುಮಾರು ₹1,00,000 ಕೋಟಿಗೂ ಹೆಚ್ಚು ಮೌಲ್ಯದ 303 ಲಕ್ಷ ಬಿ.ಟ್ವಿಲ್ ಸೆಣಬಿನ ಚೀಲಗಳ ಗಂಟುಗಳನ್ನು ( ಪ್ರತಿ ಗಂಟಿಗೆ 500 ಚೀಲಗಳಂತೆ) ಸಂಗ್ರಹಿಸಿವೆ.
2026ರಲ್ಲಿ, ಪೂರೈಕೆ ಸರಪಳಿಯಲ್ಲಿನ ವಿವಿಧ ಪ್ರಕ್ರಿಯೆಗಳನ್ನು ಡಿಜಿಟಲೀಕರಣಗೊಳಿಸಲು ಜೂಟ್-ಸ್ಮಾರ್ಟ್ ಪೋರ್ಟಲ್ ಅನ್ನು ಮತ್ತಷ್ಟು ನವೀಕರಿಸಲಾಗಿದೆ. ಸಾಗಣೆದಾರರು, ಕಚ್ಚಾ ಸೆಣಬು ವರ್ತಕರು ಮತ್ತು ಆಮದುದಾರರಂತಹ ವಿವಿಧ ಪಾಲುದಾರರನ್ನು ಈ ವ್ಯವಸ್ಥೆಗೆ ಒಳಪಡಿಸಲಾಗಿದೆ. ಕಚ್ಚಾ ಸೆಣಬು ವರ್ತಕರು, ಆಮದುದಾರರು ಮತ್ತು ಸೆಣಬಿನ ಗಿರಣಿಗಳ ನೋಂದಣಿಯನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲಾಗಿದೆ. ನಿಯಮಗಳ ಅನುಸರಣೆಯನ್ನು ಸುಲಭಗೊಳಿಸಲು ಅಗತ್ಯವಿರುವ ವರದಿ ಸಲ್ಲಿಕೆಯನ್ನೂ ಸಂಪೂರ್ಣವಾಗಿ ಆನ್‌ಲೈನ್ ಮಾಡಲಾಗಿದೆ.
ಸೆಣಬು ಬೆಳೆ ಮಾಹಿತಿ ವ್ಯವಸ್ಥೆ
- ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು, ರಾಷ್ಟ್ರೀಯ ದೂರಸಂವೇದಿ ಕೇಂದ್ರದ ಮೂಲಕ 'ಸೆಣಬು ಬೆಳೆ ಮಾಹಿತಿ ವ್ಯವಸ್ಥೆ'ಯನ್ನು ಅಭಿವೃದ್ಧಿಪಡಿಸಿದೆ. ಇದನ್ನು ಜೂಟ್ ಕಾರ್ಪೊರೇಷನ್ ಆಫ್ ಇಂಡಿಯಾ ಮತ್ತು ರಾಷ್ಟ್ರೀಯ ಸೆಣಬು ಮಂಡಳಿಯ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಈ ವ್ಯವಸ್ಥೆಯು ದೂರಸಂವೇದಿ ಮತ್ತು ಕ್ಷೇತ್ರ ಡೇಟಾವನ್ನು ಬಳಸಿಕೊಂಡು ಸೆಣಬಿನ ಕೃಷಿಯನ್ನು ಮೇಲ್ವಿಚಾರಣೆ ಮಾಡುವ ಕಾರ್ಯವನ್ನು ಮಾಡುತ್ತದೆ. ಈ ಉಪಕ್ರಮದ ಭಾಗವಾಗಿ, ಎರಡು ಪ್ರಮುಖ ಉಪಕರಣಗಳನ್ನು ಅಭಿವೃದ್ಧಿಪಡಿಸಲಾಗಿದೆ:
- ಭುವನ್ ಜಂಪ್: ಕ್ಷೇತ್ರದಲ್ಲಿ ಸೆಣಬಿನ ಕೃಷಿಯ ಮೇಲ್ವಿಚಾರಣೆಗಾಗಿ ಬಳಸಲಾಗುವ ಒಂದು ಮೊಬೈಲ್ ಆಪ್.
- ಪಾತ್ಸನ್: ಅಧಿಕಾರಿಗಳು ಮತ್ತು ಪಾಲುದಾರರು ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲು ಬೆಂಬಲವಾಗಿ, ನೈಜ-ಸಮಯಕ್ಕೆ ಹತ್ತಿರವಾದ ಸೆಣಬಿನ ಕಾವಲು ಮತ್ತು ವಿಶ್ಲೇಷಣೆಗಳನ್ನು ಒದಗಿಸುವ ಒಂದು ವೆಬ್-ಆಧಾರಿತ ವೇದಿಕೆ.
ಮಾರುಕಟ್ಟೆ ಅಭಿವೃದ್ಧಿ ಮತ್ತು ಪ್ರಚಾರ ಯೋಜನೆ
ರಾಷ್ಟ್ರೀಯ ಸೆಣಬು ಅಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ ಸರ್ಕಾರವು 'ಮಾರುಕಟ್ಟೆ ಅಭಿವೃದ್ಧಿ ಮತ್ತು ಪ್ರಚಾರ ಯೋಜನೆ'ಯನ್ನು ಅನುಷ್ಠಾನಗೊಳಿಸುತ್ತಿದೆ. ಈ ಯೋಜನೆಯು ದೇಶೀಯ ಮತ್ತು ರಫ್ತು ಮಾರುಕಟ್ಟೆಗಳಲ್ಲಿ ವೈವಿಧ್ಯಮಯ ಸೆಣಬಿನ ಉತ್ಪನ್ನಗಳ ಪ್ರಚಾರ ಹಾಗೂ ಮಾರಾಟಕ್ಕಾಗಿ ಉದ್ಯಮಿಗಳಿಗೆ ಮತ್ತು ರಫ್ತುದಾರರಿಗೆ ಬೆಂಬಲ ನೀಡುತ್ತದೆ.
ಕಾರ್ಮಿಕರ ಕಲ್ಯಾಣ ಯೋಜನೆ (ಶಿಷ್ಯವೇತನ ಯೋಜನೆ)
ರಾಷ್ಟ್ರೀಯ ಸೆಣಬು ಮಂಡಳಿ ಕಾಯಿದೆ, 2008 "ಸೆಣಬು ಉದ್ಯಮದಲ್ಲಿ ತೊಡಗಿರುವ ಕಾರ್ಮಿಕರಿಗೆ ಉತ್ತಮ ಕೆಲಸದ ವಾತಾವರಣ, ಸೌಲಭ್ಯಗಳ ಸುಧಾರಣೆ ಮತ್ತು ಪ್ರೋತ್ಸಾಹಕಗಳನ್ನು ಖಾತ್ರಿಪಡಿಸಲು" ಅವಕಾಶ ನೀಡುತ್ತದೆ. ಇದಕ್ಕೆ ಅನುಗುಣವಾಗಿ, ರಾಷ್ಟ್ರೀಯ ಸೆಣಬು ಮಂಡಳಿಯು ಪ್ರೌಢಶಾಲೆ ಮತ್ತು ಉನ್ನತ ಪ್ರೌಢಶಾಲೆ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವ ಸೆಣಬಿನ ಗಿರಣಿಗಳು ಹಾಗೂ ಎಂಎಸ್‌ಎಂಇ ಘಟಕಗಳ ಕಾರ್ಮಿಕರ ಹೆಣ್ಣುಮಕ್ಕಳಿಗೆ ಶಿಷ್ಯವೇತನ ಹಾಗೂ ಪ್ರೋತ್ಸಾಹಕ ಬೆಂಬಲವನ್ನು ಒದಗಿಸುತ್ತದೆ.
ಸೆಣಬಿನೊಂದಿಗೆ ಸುಸ್ಥಿರ ಭವಿಷ್ಯ
ಭಾರತದ ಸೆಣಬು ರಂಗವು ಸುಸ್ಥಿರ ಮತ್ತು ಒಳಗೊಳ್ಳುವಿಕೆಯ ಅಭಿವೃದ್ಧಿಯ ಪ್ರಮುಖ ಚಾಲಕ ಶಕ್ತಿಯಾಗಿ ಬೆಳೆದಿದೆ. ಇದು ಮೌಲ್ಯ ಸರಪಳಿಯಾದ್ಯಂತ ಲಕ್ಷಾಂತರ ರೈತರು, ಕಾರ್ಮಿಕರು, ಕರಕುಶಲ ಕರ್ಮಿಗಳು ಮತ್ತು ಉದ್ಯಮಿಗಳಿಗೆ ಬೆಂಬಲ ನೀಡುತ್ತದೆ. ನೀತಿಗಳ ಬೆಂಬಲ, ನಾವೀನ್ಯತೆ ಮತ್ತು ಸುಧಾರಿತ ಉತ್ಪಾದನೆಯು ಈ ಕ್ಷೇತ್ರದ ಸ್ಪರ್ಧಾತ್ಮಕತೆಯನ್ನು ಬಲಪಡಿಸಿವೆ. ಸೆಣಬು ಗ್ರಾಮೀಣ ಜೀವನೋಪಾಯ, ಪರಿಸರ ಸುಸ್ಥಿರತೆ ಮತ್ತು ಕೈಗಾರಿಕಾ ಬೆಳವಣಿಗೆಗೆ ಕೊಡುಗೆ ನೀಡುತ್ತದೆ. ಇದರ ಹೆಚ್ಚುತ್ತಿರುವ ಪ್ರಸ್ತುತತೆಯು ಪರಿಸರ ಸ್ನೇಹಿ ಮತ್ತು ಸುಸ್ಥಿರ ವಸ್ತುಗಳತ್ತ ಭಾರತದ ಪರಿವರ್ತನೆಯನ್ನು ಬಿಂಬಿಸುತ್ತದೆ. ನಿರಂತರ ಹೂಡಿಕೆ, ನಾವೀನ್ಯತೆ ಮತ್ತು ಸಮುದಾಯದ ಭಾಗವಹಿಸುವಿಕೆಯು ಈ ಕ್ಷೇತ್ರದ ಸಂಪೂರ್ಣ ಸಾಮರ್ಥ್ಯವನ್ನು ಅನಾವರಣಗೊಳಿಸಲಿದೆ.
References
National Jute Board
https://jute.com/jute/
https://jute.com/jute/njb/21
https://jute.dac.gov.in/pdf/StatusPaper.pdf
https://www.nitiforstates.gov.in/public-assets/Policy/policy_files/SNC504A000660.pdf
Ministry of Agriculture and Farmers Welfare
https://www.ncfc.gov.in/change-jute-area.html
https://agriwelfare.gov.in/Documents/Time_Series_3rdAE_2025_26_En.pdf
Ministry of Commerce & Industry
https://www.pib.gov.in/PressReleasePage.aspx?PRID=2122016
https://www.pib.gov.in/PressReleasePage.aspx?PRID=2117470
https://www.ibef.org/exports/jute-industry-india
Ministry of Textiles
https://www.texmin.gov.in/static/uploads/2025/12/c865d599cae0c357c02d247a8a82d24e.pdf
https://www.texmin.gov.in/static/uploads/2026/05/5c48e80d2180ca3194b9e9b01340696d.pdf
https://sansad.in/getFile/loksabhaquestions/annex/182/AU2512_P6JQIu.pdf?source=pqals
https://www.pib.gov.in/PressReleasePage.aspx?PRID=2222478®=48&lang=2
https://www.pib.gov.in/PressReleasePage.aspx?PRID=2282076®=1&lang=1
https://www.pib.gov.in/PressReleasePage.aspx?PRID=2200812®=3&lang=1
https://sansad.in/getFile/loksabhaquestions/annex/171/AU4409.pdf?source=pqals
https://sansad.in/getFile/annex/259/AU2191.pdf?source=pqars
https://sansad.in/getFile/annex/255/AU2392.pdf?source=pqars
https://www.jutecorp.in/jute-i-care/
Cabinet Committee on Economic Affairs
https://www.pib.gov.in/PressReleasePage.aspx?PRID=2232106®=3&lang=1
World Bank
https://thedocs.worldbank.org/en/doc/088011224509316922-0560011976/original/WorldBankGroupArchivesfolder30124862.pdf
Click here for pdf file
*****
(Explainer ID: 159885)
आगंतुक पटल : 11
Provide suggestions / comments