• Sitemap
  • Advance Search
Infrastructure

ಕ್ಯೂ ನಿಂದ ಕ್ಲಿಕ್‌ಗಳವರೆಗೆ: ಭಾರತೀಯ ರೈಲ್ವೆಯಲ್ಲಿ ಪ್ರಯಾಣಿಕರ ಮೀಸಲಾತಿಯ ನಾಲ್ಕು ದಶಕಗಳು

Posted On: 06 AUG 2026 2:10PM

ಸಾಲಿನಿಂದ (ಕ್ಯೂ) ಕ್ಲಿಕ್‌ಗಳವರೆಗೆ, ಭಾರತೀಯ ರೈಲ್ವೆಯು ಪ್ರಯಾಣಿಕರ ಮೀಸಲಾತಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ಪರಿವರ್ತಿಸಿದೆ. ಇಂದು, ತಂತ್ರಜ್ಞಾನವು ವಿಶ್ವದ ಅತಿ ದೊಡ್ಡ ಸಾರ್ವಜನಿಕ ಮೀಸಲಾತಿ ವ್ಯವಸ್ಥೆಗಳಲ್ಲಿ ಒಂದಕ್ಕೆ ಶಕ್ತಿ ತುಂಬುತ್ತಿದೆ. ನಿರಂತರ ಆಧುನೀಕರಣವು ಬುಕಿಂಗ್ ಅನ್ನು ಹೆಚ್ಚು ವೇಗವಾಗಿ ಮತ್ತು ವಿಶ್ವಾಸಾರ್ಹವಾಗಿಸಿದೆ. ಆಧುನೀಕರಿಸಿದ ಪ್ರಯಾಣಿಕರ ಮೀಸಲಾತಿ ವ್ಯವಸ್ಥೆಯು ಹೆಚ್ಚು ಚುರುಕಾದ ಮತ್ತು ತಡೆರಹಿತ ಪ್ರಯಾಣದ ಅನುಭವವನ್ನು ಸೃಷ್ಟಿಸುತ್ತಿದೆ.

ರೈಲ್ವೆ ಮೀಸಲಾತಿಯ ಬೆನ್ನೆಲುಬು

ಪ್ರತಿ ದಿನ, ಭಾರತೀಯ ರೈಲ್ವೆಯು ವಿಶ್ವದ ಅತಿ ದೊಡ್ಡ ರೈಲು ನೆಟ್‌ವರ್ಕ್‌ಗಳಲ್ಲಿ ಒಂದರ ಮೂಲಕ ಲಕ್ಷಾಂತರ ಪ್ರಯಾಣಿಕರನ್ನು ಸಂಪರ್ಕಿಸುತ್ತದೆ. ಕೆಲಸ, ಶಿಕ್ಷಣ, ಆರೋಗ್ಯ, ವ್ಯಾಪಾರ ಅಥವಾ ಕುಟುಂಬಕ್ಕಾಗಿ ಪ್ರಯಾಣಿಸುವುದಿರಲಿ, ಪ್ರಯಾಣಿಕರು ತಮ್ಮ ಪ್ರಯಾಣವನ್ನು ಯೋಜಿಸಲು ವಿಶ್ವಾಸಾರ್ಹ ಮೀಸಲಾತಿ ಪರಿಸರ ವ್ಯವಸ್ಥೆಯನ್ನು ಅವಲಂಬಿಸಿರುತ್ತಾರೆ. ಪ್ರತಿ ಕಾಯ್ದಿರಿಸಿದ ಟಿಕೆಟ್ ಹಿಂದೆ ಸುಮಾರು ನಾಲ್ಕು ದಶಕಗಳಿಂದ ರೈಲ್ವೆ ಬುಕಿಂಗ್‌ಗಳ ತಂತ್ರಜ್ಞಾನ-ಸಮರ್ಥ ಬೆನ್ನೆಲುಬಾಗಿರುವ ಪ್ರಯಾಣಿಕರ ಮೀಸಲಾತಿ ವ್ಯವಸ್ಥೆ ಇದೆ. 1986ರಲ್ಲಿ ಪರಿಚಯಿಸಲ್ಪಟ್ಟ ಪಿಆರ್‌ಎಸ್, ಕೈಯಲ್ಲೇ ಮಾಡುವ ಮೀಸಲಾತಿ ಕೌಂಟರ್‌ಗಳನ್ನು ಬದಲಾಯಿಸುವುದರಿಂದ ಹಿಡಿದು ಆನ್‌ಲೈನ್ ಮತ್ತು ಮೊಬೈಲ್ ಟಿಕೆಟ್ ಬುಕಿಂಗ್ ಅನ್ನು ಬೆಂಬಲಿಸುವವರೆಗೆ ವಿಕಸನಗೊಂಡಿದೆ.

ಬಳಕೆದಾರರ ಸಂಖ್ಯೆ ಮತ್ತು ಆನ್‌ಲೈನ್ ಬಳಕೆ ಹೆಚ್ಚಾದಂತೆ, ವೇಗವಾದ, ಹೆಚ್ಚು ವಿಶ್ವಾಸಾರ್ಹ ಮತ್ತು ತಡೆರಹಿತ ಬುಕಿಂಗ್ ಸೌಲಭ್ಯಗಳ ನಿರೀಕ್ಷೆಗಳೂ ಹೆಚ್ಚಿವೆ. ಪೀಕ್ ಬುಕಿಂಗ್ ಅವಧಿಗಳಲ್ಲಿ, ವಿಶೇಷವಾಗಿ ತತ್ಕಾಲ್ ಮೀಸಲಾತಿಯ ಸಮಯದಲ್ಲಿ, ಅಪಾರ ಬೇಡಿಕೆ ಕಂಡುಬರುತ್ತದೆ, ಇದು ಬೇರೆ ಕಾಲಘಟ್ಟಕ್ಕಾಗಿ ವಿನ್ಯಾಸಗೊಳಿಸಲಾದ ಮೂಲಸೌಕರ್ಯದ ಮೇಲಿನ ಒತ್ತಡವನ್ನು ಹೆಚ್ಚಿಸುತ್ತದೆ. ಈ ಬದಲಾಗುತ್ತಿರುವ ಅಗತ್ಯಗಳನ್ನು ಪೂರೈಸಲು, ಭಾರತೀಯ ರೈಲ್ವೆಯು ಪಿಆರ್‌ಎಸ್‌ನ ಸಮಗ್ರ ಆಧುನೀಕರಣವನ್ನು ಕೈಗೊಳ್ಳುತ್ತಿದೆ. ಹೊಸ ಪಿಆರ್‌ಎಸ್ ಬುಕಿಂಗ್ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ, ಪ್ರಯಾಣಿಕರನ್ನು ಕೇಂದ್ರೀಕರಿಸಿದ ವೈಶಿಷ್ಟ್ಯಗಳನ್ನು ಪರಿಚಯಿಸುತ್ತದೆ ಮತ್ತು ಸ್ಥಿತಿಸ್ಥಾಪಕ ಆನ್‌ಲೈನ್ ಮೂಲಸೌಕರ್ಯವನ್ನು ಸೃಷ್ಟಿಸುತ್ತದೆ.

ಪ್ರಯಾಣಿಕರ ಮೀಸಲಾತಿ ವ್ಯವಸ್ಥೆಯ ನಾಲ್ಕು ದಶಕಗಳು

ಪಿಆರ್‌ಎಸ್ ಎನ್ನುವುದು ಭಾರತೀಯ ರೈಲ್ವೆ ಜಾಲದಾದ್ಯಂತ ಕಾಯ್ದಿರಿಸಿದ ಟಿಕೆಟಿಂಗ್ ಅನ್ನು ನಿರ್ವಹಿಸುವ ಕಂಪ್ಯೂಕೃತ ವೇದಿಕೆಯಾಗಿದೆ. ಇದು ಪ್ರಯಾಣಿಕರಿಗೆ ಕಾಯ್ದಿರಿಸಿದ ಟಿಕೆಟ್‌ಗಳನ್ನು ಬುಕ್ ಮಾಡಲು, ಮಾರ್ಪಡಿಸಲು ಮತ್ತು ರದ್ದುಗೊಳಿಸಲು ಅನುವು ಮಾಡಿಕೊಡುತ್ತದೆ. ಇದು ಆಸನ ಹಂಚಿಕೆ, ಕಾಯುವಿಕೆ ಪಟ್ಟಿಗಳು, ರದ್ದತಿಯ ವಿರುದ್ಧ ಮೀಸಲಾತಿ, ಮೀಸಲಾತಿ ಚಾರ್ಟ್‌ಗಳು ಮತ್ತು ಪ್ರಯಾಣಿಕರ ವಿಚಾರಣೆಗಳನ್ನು ಸಹ ನಿರ್ವಹಿಸುತ್ತದೆ. ಮೀಸಲಾತಿ ಕೇಂದ್ರಗಳು ಮತ್ತು ಆನ್‌ಲೈನ್ ಬುಕಿಂಗ್ ಚಾನಲ್‌ಗಳನ್ನು ಸಂಪರ್ಕಿಸುವ ಮೂಲಕ, ಪಿಆರ್‌ಎಸ್ ರೈಲ್ವೆ ಮೀಸಲಾತಿಯನ್ನು ಹೆಚ್ಚು ಪರಿಣಾಮಕಾರಿ, ಪಾರದರ್ಶಕ ಮತ್ತು ಸುಲಭವಾಗಿ ಪ್ರವೇಶಿಸಬಲ್ಲ  ಆಗಿಸಿದೆ.

ಪಿಆರ್‌ಎಸ್ ಕೈಯಿಂದ ಮಾಡುವ ಮೀಸಲಾತಿ ರಿಜಿಸ್ಟರ್‌ಗಳು ಮತ್ತು ಕೌಂಟರ್ ಆಧಾರಿತ ಬುಕಿಂಗ್ ಅನ್ನು ಎಲೆಕ್ಟ್ರಾನಿಕ್ ವ್ಯವಸ್ಥೆಯೊಂದಿಗೆ ಬದಲಾಯಿಸಿತು. ರೈಲ್ವೆ ಜಾಲವು ವಿಸ್ತರಿಸಿದಂತೆ, ಪಿಆರ್‌ಎಸ್ ಕಂಪ್ಯೂಟರೀಕೃತ ವರ್ಧಿತ ಮೀಸಲಾತಿ ಮತ್ತು ಟಿಕೆಟಿಂಗ್‌ಗಾಗಿ ದೇಶವ್ಯಾಪಿ ನೆಟ್‌ವರ್ಕ್ ಮೂಲಕ ದೇಶವ್ಯಾಪಿ ಮೀಸಲಾತಿ ವೇದಿಕೆಯಾಗಿ ವಿಕಸನಗೊಂಡಿತು. ಇದು ರೈಲಿನ ಮೂಲ ಅಥವಾ ಗಮ್ಯಸ್ಥಾನವನ್ನು ಲೆಕ್ಕಿಸದೆ, ಸಂಪರ್ಕಿತ ಮೀಸಲಾತಿ ಕೇಂದ್ರದಿಂದ ದೇಶದಾದ್ಯಂತದ ರೈಲುಗಳಿಗೆ ಟಿಕೆಟ್ ಕಾಯ್ದಿರಿಸಲು ಪ್ರಯಾಣಿಕರಿಗೆ ಅನುವು ಮಾಡಿಕೊಟ್ಟಿತು. ಕಾಲಾನಂತರದಲ್ಲಿ, ಬುಕಿಂಗ್ ಚಾನಲ್‌ಗಳು ಮೀಸಲಾತಿ ಕೌಂಟರ್‌ಗಳನ್ನು ಮೀರಿ ವೆಬ್‌ಸೈಟ್‌ಗಳು ಮತ್ತು ಮೊಬೈಲ್ ಅಪ್ಲಿಕೇಶನ್‌ಗಳಿಗೆ ವಿಸ್ತರಿಸಿದವು. ಇಂದು, ಪ್ರಯಾಣಿಕರು ಇಂಡಿಯನ್ ರೈಲ್ವೆ ಕೆಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್  ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್ ಮೂಲಕ ಆನ್‌ಲೈನ್‌ನಲ್ಲಿ ಪಿಆರ್‌ಎಸ್ ಅನ್ನು ಪ್ರವೇಶಿಸುತ್ತಾರೆ, ಇದರಿಂದ ಎಲ್ಲಿಂದಲಾದರೂ ಕಾಯ್ದಿರಿಸಿದ ಟಿಕೆಟ್ ಬುಕ್ ಮಾಡಲು ಸಾಧ್ಯವಾಗುತ್ತದೆ.

ಪಿಆರ್ಎಸ್ ವಿಕಾಸದ ಪ್ರಮುಖ ಮೈಲಿಗಲ್ಲುಗಳು

ವರ್ಷ

ಮೈಲಿಗಲ್ಲು

1986

ಭಾರತದಲ್ಲಿ ಕಂಪ್ಯೂಟರೀಕೃತ ರೈಲ್ವೆ ಮೀಸಲಾತಿಯ ಆರಂಭವನ್ನು ಗುರುತಿಸುತ್ತಾ ಪಿಆರ್‌ಎಸ್ ಅನ್ನು ಪರಿಚಯಿಸಲಾಯಿತು.

1990 ದಶಕ

ರೈಲ್ವೆ ವಲಯಗಳಾದ್ಯಂತ ಪಿಆರ್‌ಎಸ್ ನೆಟ್‌ವರ್ಕ್ ವಿಸ್ತರಣೆಗೊಂಡಿತು, ಇದು ಅಂತರ್ಸಂಪರ್ಕಿತ ರಾಷ್ಟ್ರವ್ಯಾಪಿ ನೆಟ್‌ವರ್ಕ್ ಮೂಲಕ ಮೀಸಲಾತಿಗೆ ಅವಕಾಶ ಮಾಡಿಕೊಟ್ಟಿತು.

2002

ಇಂಟರ್ನೆಟ್ ಆಧಾರಿತ ಟಿಕೆಟ್ ಬುಕಿಂಗ್ ಪರಿಚಯಿಸಲಾಯಿತು, ಇದು ಭೌತಿಕ ಕೌಂಟರ್‌ಗಳಾಚೆಗೂ ಮೀಸಲಾತಿ ಸೇವೆಗಳನ್ನು ವಿಸ್ತರಿಸಿತು.

2014

ಆನ್‌ಲೈನ್ ಬುಕಿಂಗ್ ಸಾಮರ್ಥ್ಯ ಮತ್ತು ಪ್ರಯಾಣಿಕರ ಅನುಭವವನ್ನು ಸುಧಾರಿಸಲು ನೆಕ್ಸ್ಟ್ ಜನರೇಷನ್ ಇ-ಟಿಕೆಟಿಂಗ್ ವ್ಯವಸ್ಥೆಯನ್ನು ಪ್ರಾರಂಭಿಸಲಾಯಿತು.

2025

ರೈಲ್‌ಒನ್ ಅಪ್ಲಿಕೇಶನ್ ಬಿಡುಗಡೆಯಾಯಿತು. ಗಮನಾರ್ಹವಾಗಿ ವರ್ಧಿತ ಬುಕಿಂಗ್ ಮತ್ತು ವಿಚಾರಣಾ ಸಾಮರ್ಥ್ಯದೊಂದಿಗೆ ಮುಂದಿನ ಪಿಆರ್‌ಎಸ್ ಅಭಿವೃದ್ಧಿಯನ್ನು ಸರ್ಕಾರ ಘೋಷಿಸಿತು.

ಆಗಸ್ಟ್ 2026

ಅಪ್‌ಗ್ರೇಡ್ ಮಾಡಿದ ಪಿಆರ್‌ಎಸ್‌ಗೆ ರೈಲುಗಳ ಹಂತ ಹಂತದ ಸ್ಥಳಾಂತರವು ನಡೆಯಿತು, ಇದು ರೈಲ್ವೆ ಮೀಸಲಾತಿಯ ಡಿಜಿಟಲ್ ಪರಿವರ್ತನೆಯಲ್ಲಿ ಹೊಸ ಹಂತವನ್ನು ಗುರುತಿಸುತ್ತದೆ.

ಉಪಕ್ರಮಗಳು ಪಾರದರ್ಶಕತೆ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಸುಧಾರಿಸಿದವು.

ಪಿಆರ್ಎಸ್: ದೊಡ್ಡ ಪ್ರಮಾಣದ ಡಿಜಿಟಲ್ ವೇದಿಕೆ

ಜೂನ್ 2025 ಮತ್ತು ಜೂನ್ 2026 ರ ನಡುವೆ, ಪ್ರಯಾಣಿಕರು ಪಿಆರ್‌ಎಸ್ (PRS) ಲಕ 65.08 ಕೋಟಿ ಕಾಯ್ದಿರಿಸಿದ ಟಿಕೆಟ್‌ಗಳನ್ನು ಬುಕ್ ಮಾಡಿದ್ದಾರೆ. ಇವುಗಳಲ್ಲಿ, 57.90 ಕೋಟಿ ಟಿಕೆಟ್‌ಗಳು (ಶೇ. 89) ಆನ್‌ಲೈನ್ ಮೂಲಕವೇ ಬುಕ್ ಮಾಡಲ್ಪಟ್ಟಿವೆ. ಇದು ರೈಲು ಪ್ರಯಾಣಿಕರಿಂದ ಡಿಜಿಟಲ್ ಸೇವೆಗಳ ಕ್ಷಿಪ್ರ ಸ್ವೀಕೃತಿಯನ್ನು ಪ್ರತಿಬಿಂಬಿಸುತ್ತದೆ.

ಪ್ರಸ್ತುತ, ಪಿಆರ್‌ಎಸ್ ವಿಶ್ವದ ಅತಿ ದೊಡ್ಡ ಆನ್‌ಲೈನ್ ರೈಲ್ವೆ ಬುಕಿಂಗ್ ವೇದಿಕೆಗಳಲ್ಲಿ ಒಂದಾಗಿದೆ. ಇದನ್ನು ರೈಲ್ವೆ ಮಾಹಿತಿ ವ್ಯವಸ್ಥೆಗಳ ಕೇಂದ್ರವು ಅಭಿವೃದ್ಧಪಡಿಸಿದೆ ಮತ್ತು ನಿರ್ವಹಿಸುತ್ತಿದೆ. ಇದು ಬಹು ಬುಕಿಂಗ್ ಚಾನೆಲ್‌ಗಳ ಮೂಲಕ ಪ್ರತಿದಿನ 20.5 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ಸೇವೆ ಸಲ್ಲಿಸುತ್ತದೆ. ಪಿಆರ್‌ಎಸ್ ವ್ಯವಹಾರಗಳ ಸುಮಾರು ಶೇ. 73 ರಷ್ಟು ಭಾಗವು ನಗದು ರಹಿತವಾಗಿವೆ. ಪಿಆರ್‌ಎಸ್ ಭಾರತದ ಅತಿ ದೊಡ್ಡ ಸಾರ್ವಜನಿಕ-ಮುಖಾಮುಖಿ ಆನ್‌ಲೈನ್ ವೇದಿಕೆಗಳಲ್ಲಿ ಒಂದಾಗಿ ವಿಕಸನಗೊಂಡಿದೆ.

ಡಿಜಿಟಲ್ ಭಾರತದ ಅಗತ್ಯಗಳನ್ನು ಪೂರೈಸಿಕೊಳ್ಳುವುದು

ಬೆಳೆಯುತ್ತಿರುವ ಬೇಡಿಕೆಯನ್ನು ಪೂರೈಸಲು, ಭಾರತೀಯ ರೈಲ್ವೆಗೆ ಹೆಚ್ಚಿನ ವಹಿವಾಟು ಪರಿಮಾಣಗಳನ್ನು ನಿರ್ವಹಿಸುವ ಮತ್ತು ವೇಗವಾದ, ಹೆಚ್ಚು ವಿಶ್ವಾಸಾರ್ಹ ಹಾಗೂ ಸುರಕ್ಷಿತ ಸೇವೆಗಳನ್ನು ಒದಗಿಸುವ ಸಾಮರ್ಥ್ಯವಿರುವ ಬುಕಿಂಗ್ ವ್ಯವಸ್ಥೆಯ ಅಗತ್ಯವಿದೆ.

ಮೀಸಲಾತಿ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು, ಭಾರತೀಯ ರೈಲ್ವೆಯು ಹಲವಾರು ಪ್ರಯಾಣಿಕ-ಕೇಂದ್ರಿತ ಸುಧಾರಣೆಗಳನ್ನು ಪರಿಚಯಿಸಿದೆ:

  • ಮುಂಗಡ ಮೀಸಲಾತಿ ಅವಧಿಯನ್ನು 120 ದಿನಗಳಿಂದ 60 ದಿನಗಳಿಗೆ ಇಳಿಸಲಾಗಿದ್ದು, ಇದು ಪ್ರಯಾಣಿಕರ ಬುಕಿಂಗ್ ಮಾದರಿಗಳಿಗೆ ಉತ್ತಮವಾಗಿ ಹೊಂದಿಕೊಳ್ಳುತ್ತದೆ.
  • ನ್ಯಾಯಸಮ್ಮತತೆ ಮತ್ತು ಪಾರದರ್ಶಕತೆಯನ್ನು ಸುಧಾರಿಸಲು 2025ರ ಜುಲೈನಲ್ಲಿ ಆಧಾರ್-ದೃಢೀಕೃತ ತತ್ಕಾಲ್ ಬುಕಿಂಗ್ ಅನ್ನು ಪರಿಚಯಿಸಲಾಯಿತು.
  • ಸ್ವಯಂಚಾಲಿತ ಬಾಟ್‌ಗಳು ಮತ್ತು ಅನಧಿಕೃತ ಏಜೆಂಟ್‌ಗಳಿಂದ ದುರುಪಯೋಗವಾಗುವುದನ್ನು ತಡೆಯಲು ನಂತರ ಒಟಿಪಿ ಆಧಾರಿತ ಪರಿಶೀಲನೆಯನ್ನು ಸೇರಿಸಲಾಯಿತು. 2010 ರಲ್ಲಿ ಇಟಾನಿಯಂ ಸರ್ವರ್‌ಗಳು ಮತ್ತು ಓಪನ್‌ವಿಎಂಎಸ್ ಪ್ಲಾಟ್‌ಫಾರ್ಮ್‌ನಲ್ಲಿ ನಿಯೋಜಿಸಲಾದ ಅಸ್ತಿತ್ವದಲ್ಲಿರುವ ಪಿಆರ್‌ಎಸ್, ಭಿನ್ನ ಮಟ್ಟದ ಡಿಜಿಟಲ್ ಬೇಡಿಕೆಗಾಗಿ ವಿನ್ಯಾಸಗೊಳಿಸಲ್ಪಟ್ಟಿತು. ಈಗ ಇದನ್ನು ಕ್ಲೌಡ್-ಸಮರ್ಥ, ಮುಂದಿನ ಪಿಆರ್‌ಎಸ್‌ಗೆ ಅಪ್‌ಗ್ರೇಡ್ ಮಾಡಲಾಗುತ್ತಿದೆ.

ಅಪ್‌ಗ್ರೇಡ್ ಮಾಡಿದ ಪಿಆರ್‌ಎಸ್ ಒದಗಿಸಲಿರುವ ಸೌಲಭ್ಯಗಳು:

  • ಅಸ್ತಿತ್ವದಲ್ಲಿರುವ ವ್ಯವಸ್ಥೆಯಡಿ ಪ್ರತಿ ನಿಮಿಷಕ್ಕೆ 32,000 ಟಿಕೆಟ್‌ಗಳಿದ್ದ ಬುಕಿಂಗ್ ಸಾಮರ್ಥ್ಯವು, ಈಗ ಪ್ರತಿ ನಿಮಿಷಕ್ಕೆ 1.5 ಲಕ್ಷಕ್ಕೂ ಹೆಚ್ಚು ಟಿಕೆಟ್ ಬುಕಿಂಗ್‌ಗಳಿಗೆ ಹೆಚ್ಚಲಿದೆ.
  • ಪ್ರಸ್ತುತ ಇರುವ ಪ್ರತಿ ನಿಮಿಷಕ್ಕೆ 4 ಲಕ್ಷ ವಿಚಾರಣೆಗಳ ಬದಲಿಗೆ, ಇನ್ನು ಮುಂದೆ ಪ್ರತಿ ನಿಮಿಷಕ್ಕೆ 40 ಲಕ್ಷಕ್ಕೂ ಹೆಚ್ಚು ವಿಚಾರಣೆಗಳನ್ನು ನಿರ್ವಹಿಸಬಹುದು.
  • ಬುಕಿಂಗ್ ಮತ್ತು ವಿಚಾರಣೆಗಾಗಿ ಬಹುಭಾಷಾ, ಬಳಕೆದಾರ ಸ್ನೇಹಿ ಇಂಟರ್ಫೇಸ್.
  • ಭವಿಷ್ಯದ ಪ್ರಯಾಣಿಕರ ಬೇಡಿಕೆಯನ್ನು ಬೆಂಬಲಿಸಲು ಹೆಚ್ಚಿನ ಮಾಪಕತೆ, ನಮ್ಯತೆ ಮತ್ತು ವಿಶ್ವಾಸಾರ್ಹತೆ.

ಮಾರ್ಪಡಿಸಲಾದ ಐಆರ್‌ಸಿಟಿಸಿ ವೆಬ್‌ಸೈಟ್ ಮೂಲಕ ಪ್ರಯಾಣಿಕರ ಸೌಲಭ್ಯಗಳನ್ನು ಸಹ ಬಲಪಡಿಸಲಾಗುತ್ತಿದೆ. ಜುಲೈ 2026 ರಲ್ಲಿ ಪ್ರಾರಂಭಿಸಲಾದ ಬೀಟಾ ಆವೃತ್ತಿಯು, ಸರಳೀಕೃತ ಇಂಟರ್‌ಫೇಸ್, ಕಡಿಮೆ ಬುಕಿಂಗ್ ಹಂತಗಳು ಮತ್ತು ಎಲ್ಲಾ ತರಗತಿಗಳಲ್ಲಿ ಆಸನ ಲಭ್ಯತೆಯನ್ನು ಹೊಂದಿದೆ. ಹೊಸ ಪೋರ್ಟಲ್ ಅನ್ನು ಮುಂದಿನ ಪೀಳಿಗೆಯ ಪಿಆರ್‌ಎಸ್ ನೊಂದಿಗೆ ಸಂಯೋಜಿಸಲಾಗುವುದು, ಇದು ಹೆಚ್ಚು ಸುಗಮವಾದ ಬುಕಿಂಗ್ ಅನುಭವವನ್ನು ಸೃಷ್ಟಿಸುತ್ತದೆ.

ರೈಲ್ವೆ ಟಿಕೆಟಿಂಗ್‌ ಹೊರತುಪಡಿಸಿ, ಐಆರ್‌ಸಿಟಿಸಿಯು ತನ್ನ ಪ್ರವಾಸೋದ್ಯಮ ವೇದಿಕೆಯ ಮೂಲಕ ಹೋಟೆಲ್ ಬುಕಿಂಗ್, ವಿಶ್ರಾಂತಿ ಕೊಠಡಿಗಳು, ಲೌಂಜ್ ಬುಕಿಂಗ್, ಪ್ರವಾಸ ಪ್ಯಾಕೇಜುಗಳು, ವಿಮಾನ ಮತ್ತು ಬಸ್ ಟಿಕೆಟ್‌ಗಳು ಸೇರಿದಂತೆ ಪ್ರಯಾಣ-ಸಂಬಂಧಿತ ಸೇವೆಗಳನ್ನು ಸಹ ನೀಡುತ್ತದೆ.

ಸಿಆರ್‌ಈಎಸ್‌: ರೈಲ್ವೆ ತಂತ್ರಜ್ಞಾನವನ್ನು ಮುನ್ನಡೆಸುತ್ತಿರುವ ಸಂಸ್ಥೆ

1986ರಲ್ಲಿ ಸ್ಥಾಪಿಸಲಾದ ಸೆಂಟರ್ ಫಾರ್ ರೈಲ್ವೆ ಇನ್ಫಾರ್ಮೇಶನ್ ಸಿಸ್ಟಮ್ಸ್  ಭಾರತೀಯ ರೈಲ್ವೆಗಾಗಿ ಐಟಿ ಮೂಲಸೌಕರ್ಯವನ್ನು ವಿನ್ಯಾಸಗೊಳಿಸುತ್ತದೆ, ಅಭಿವೃದ್ಧಿಪಡಿಸುತ್ತದೆ ಮತ್ತು ನಿರ್ವಹಿಸುತ್ತದೆ. ಸುಮಾರು ನಾಲ್ಕು ದಶಕಗಳಲ್ಲಿ, ಸಿಆರ್‌ಈಎಸ್‌ರೈಲ್ವೆ ಬುಕಿಂಗ್ ಅನ್ನು ಕಂಪ್ಯೂಟರೀಕರಿಸುವುದರಿಂದ ಹಿಡಿದು ಸಮಗ್ರ ಡಿಜಿಟಲ್ ವೇದಿಕೆಗಳನ್ನು ಅಭಿವೃದ್ಧಿಪಡಿಸುವವರೆಗೆ ವಿಸ್ತರಿಸಿದೆ. ಪ್ರಸ್ತುತ, ಇದರ ಪರಿಹಾರಗಳು ಪ್ರತಿದಿನ ಲಕ್ಷಾಂತರ ಪ್ರಯಾಣಿಕರು ಮತ್ತು ರೈಲ್ವೆ ಸಿಬ್ಬಂದಿಗೆ ಬೆಂಬಲ ನೀಡುತ್ತಿವೆ.

ಪ್ರಯಾಣಿಕ-ಕೇಂದ್ರಿತ ಡಿಜಿಟಲ್ ಸೇವೆಗಳು

ಪ್ರಯಾಣಿಕರು ಭಾರತೀಯ ರೈಲ್ವೆಯೊಂದಿಗೆ ಸಂವಹನ ನಡೆಸುವ ವಿಧಾನವನ್ನು ಪರಿವರ್ತಿಸಿರುವ PRS ಸೇರಿದಂತೆ ಹಲವಾರು ವೇದಿಕೆಗಳನ್ನು ಸಿಆರ್‌ಈಎಸ್‌ ಅಭಿವೃದ್ಧಿಪಡಿಸಿದೆ.

  • ಅನ್‌ರಿಸರ್ವ್ಡ್ ಟಿಕೆಟಿಂಗ್ ಸಿಸ್ಟಮ್: ಕಾಯ್ದಿರಿಸದ ಪ್ರಯಾಣಕ್ಕಾಗಿ ಪೇಪರ್‌ಲೆಸ್ ಮತ್ತು ಮೊಬೈಲ್ ಟಿಕೆಟಿಂಗ್ ಅನ್ನು ಬೆಂಬಲಿಸುತ್ತದೆ.
  • ರಾಷ್ಟ್ರೀಯ ರೈಲು ವಿಚಾರಣಾ ವ್ಯವಸ್ಥೆ: ನೈಜ-ಸಮಯದ ರೈಲು ಚಾಲನಾ ಸ್ಥಿತಿ, ವೇಳಾಪಟ್ಟಿಗಳು ಮತ್ತು ಆಗಮನ ಅಥವಾ ನಿರ್ಗಮನದ ಮಾಹಿತಿಯನ್ನು ಒದಗಿಸುತ್ತದೆ.
  • ರೈಲ್‌ಕನೆಕ್ಟ್: 2017ರಲ್ಲಿ ಪರಿಚಯಿಸಲ್ಪಟ್ಟ ರೈಲ್‌ಕನೆಕ್ಟ್ ಮೊಬೈಲ್ ಅಪ್ಲಿಕೇಶನ್ ಪಿಆರ್‌ಎಸ್ ಸೇವೆಗಳನ್ನು ಸ್ಮಾರ್ಟ್‌ಫೋನ್‌ಗಳಿಗೆ ತಂದಿತು. ಇದು ಆನ್‌ಲೈನ್ ಟಿಕೆಟ್ ಬುಕಿಂಗ್, ಟಿಕೆಟ್ ರದ್ದತಿ ಮತ್ತು ಪಿಎನ್‌ಆರ್ ವಿಚಾರಣೆಗಳನ್ನು ಸಕ್ರಿಯಗೊಳಿಸಿತು.
  • ರೈಲ್‌ಒನ್: ಜುಲೈ 2025 ರಲ್ಲಿ ಪ್ರಾರಂಭಿಸಲಾದ ರೈಲ್‌ಒನ್ ಒಂದು ಸಮಗ್ರ ಮೊಬೈಲ್ ಅಪ್ಲಿಕೇಶನ್ ಆಗಿದೆ. ರೈಲ್‌ಒನ್ ಅನೇಕ ಕಾರ್ಯಗಳನ್ನು ಒಂದೇ ಇಂಟರ್‌ಫೇಸ್‌ನಲ್ಲಿ ಸಂಯೋಜಿಸುತ್ತದೆ, ಇದು ರೈಲ್ವೆ ಸೇವೆಗಳ ಪ್ರವೇಶವನ್ನು ಸರಳಗೊಳಿಸುತ್ತದೆ. ಈ ಅಪ್ಲಿಕೇಶನ್ ಆಂಡ್ರಾಯ್ಡ್ ಮತ್ತು ಐಒಎಸ್ ಸಾಧನಗಳಲ್ಲಿ 4.55 ಕೋಟಿಗೂ ಹೆಚ್ಚು ಡೌನ್‌ಲೋಡ್‌ಗಳನ್ನು ದಾಖಲಿಸಿದೆ (ಜೂಲೈ 22 ರವರೆಗೆ). ಇದು ಪ್ರಸ್ತುತ ಪ್ರತಿದಿನ ಸುಮಾರು 9.65 ಲಕ್ಷ ಟಿಕೆಟ್ ಬುಕಿಂಗ್‌ಗಳನ್ನು ಸುಲಭಗೊಳಿಸುತ್ತಿದೆ. ಇದರ ಇತ್ತೀಚಿನ ವೈಶಿಷ್ಟ್ಯವೆಂದರೆ ಕೃತಕ ಬುದ್ಧಿಮತ್ತೆ ಆಧಾರಿತ ವೇಟ್‌ಲಿಸ್ಟ್ ದೃಢೀಕರಣ ಮುನ್ಸೂಚನೆ. ಇದು ಟಿಕೆಟ್ ಬುಕ್ ಮಾಡುವ ಸಮಯದಲ್ಲಿಯೂ ಸಹ, ಪ್ರಯಾಣದ ಮೊದಲು ಕಾಯುವಿಕೆ ಪಟ್ಟಿಯಲ್ಲಿರುವ ಟಿಕೆಟ್ ಖಚಿತಗೊಳ್ಳುವ ಸಾಧ್ಯತೆಯನ್ನು ಅಂದಾಜು ಮಾಡುತ್ತದೆ. ಮುನ್ಸೂಚನೆಯ ನಿಖರತೆಯು ಶೇ. 53 ರಿಂದ ಶೇ. 94 ಕ್ಕೆ ಸುಧಾರಿಸಿದೆ, ಇದು ಪ್ರಯಾಣಿಕರಿಗೆ ಹೆಚ್ಚು ತಿಳುವಳಿಕೆಯುಳ್ಳ ಪ್ರಯಾಣದ ನಿರ್ಧಾರಗಳನ್ನು ಮಾಡಲು ಸಹಾಯ ಮಾಡುತ್ತದೆ.
  • ರೈಲ್‌ಮದದ್: ಪ್ರಯಾಣಿಕರ ಕುಂದುಕೊರತೆಗಳು, ಪ್ರತಿಕ್ರಿಯೆ ಮತ್ತು ಸೇವಾ ವಿನಂತಿಗಳಿಗಾಗಿ ಸಮಗ್ರ ವೇದಿಕೆಯನ್ನು ಒದಗಿಸುತ್ತದೆ. ಪ್ರಯಾಣಿಕರು ರೈಲ್‌ಮದದ್ ವೆಬ್‌ಸೈಟ್, ಮೊಬೈಲ್ ಅಪ್ಲಿಕೇಶನ್, ಎಸ್‌ಎಂಎಸ್ ಮತ್ತು ರೈಲ್ವೆ ಸಹಾಯವಾಣಿ 139 ಮೂಲಕ ಸಹಾಯವನ್ನು ಪಡೆಯಬಹುದು. ಈ ವೇದಿಕೆಯು ಸಕಾಲಿಕ ಕುಂದುಕೊರತೆ ನಿವಾರಣೆಗಾಗಿ ಸ್ವಯಂಚಾಲಿತ ದೂರು ನಿಯೋಜನೆ ಮತ್ತು ಸ್ವಯಂ-ಉಲ್ಬಣಗೊಳಿಸುವಿಕೆಯನ್ನು ಬಳಸುತ್ತದೆ. ಕಳೆದ ಮೂರು ವರ್ಷಗಳಲ್ಲಿ ಪರಿಹರಿಸಲಾದ ದೂರುಗಳ ವಿವರಗಳು:

ವರ್ಷ

ಪರಿಹರಿಸಲಾದ ದೂರುಗಳ ಶೇಕಡವಾರು

2023-2024

99.98%

2024-2025

99.99%

2025-2026

99.98%

  • ಕೋಚ್‌ಮಿತ್ರ: ಪ್ರಯಾಣಿಕರು ತಮ್ಮ ಪ್ರಯಾಣದ ಸಮಯದಲ್ಲಿ ಹೌಸ್‌ಕೀಪಿಂಗ್ ಮತ್ತು ಸಹಾಯದಂತಹ ಆನ್‌ಬೋರ್ಡ್ ಸೌಲಭ್ಯಗಳನ್ನು ವಿನಂತಿಸಲು ಸಹಾಯ ಮಾಡುತ್ತದೆ.
  • ರೈಲ್ ಸುಗಮ್: ರೈಲ್ವೆ ಸೇವೆಗಳು, ಸರಕು ಸಾಗಣೆ ಮತ್ತು ಪ್ರಯಾಣಿಕರಿಗೆ ಸಂಬಂಧಿಸಿದ ಸೌಲಭ್ಯಗಳ ಕುರಿತು ಮಾಹಿತಿಯನ್ನು ಒದಗಿಸುತ್ತದೆ.
  • ರೈಲ್ ರಾಜ್‌ಭಾಷಾ: ಡಿಜಿಟಲ್ ಸಾಧನಗಳ ಮೂಲಕ ರೈಲ್ವೆ ಆಡಳಿತದಲ್ಲಿ ಹಿಂದಿ ಬಳಕೆಯನ್ನು ಬೆಂಬಲಿಸುತ್ತದೆ.
    ರೈಲ್ವೆ ಕಾರ್ಯಾಚರಣೆಗಳನ್ನು ಬೆಂಬಲಿಸುವ ತಂತ್ರಜ್ಞಾನ

ಪ್ರಯಾಣಿಕರ ಸೇವೆಗಳಾಚೆಗೆ, ರೈಲ್ವೆ ದಕ್ಷತೆಯನ್ನು ಸುಧಾರಿಸುವ ಡಿಜಿಟಲ್ ವ್ಯವಸ್ಥೆಗಳನ್ನು CRIS ಅಭಿವೃದ್ಧಿಪಡಿಸಿದೆ.

  • ಸರಕು ಸಾಗಣೆ ಕಾರ್ಯಾಚರಣೆಗಳ ಮಾಹಿತಿ ವ್ಯವಸ್ಥೆ: ಸರಕು ಸಾಗಣೆ ಚಲನೆ, ವ್ಯಾಗನ್ ನಿರ್ವಹಣೆ ಮತ್ತು ಲಾಜಿಸ್ಟಿಕ್ಸ್ ಯೋಜನೆಯನ್ನು ಡಿಜಿಟೈಜ್ ಮಾಡುತ್ತದೆ.
  • ಸಿಬ್ಬಂದಿ ನಿರ್ವಹಣೆ ವ್ಯವಸ್ಥೆ: ಸಿಬ್ಬಂದಿ ವೇಳಾಪಟ್ಟಿ, ನಿಯೋಜನೆ ಮತ್ತು ಮೇಲ್ವಿಚಾರಣೆಯನ್ನು ಸುಗಮಗೊಳಿಸುತ್ತದೆ.
  • ಇ-ದೃಷ್ಟಿ: ರೈಲ್ವೆ ಕಾರ್ಯಕ್ಷಮತೆ ಮತ್ತು ಕಾರ್ಯಾಚರಣೆಯ ಸೂಚಕಗಳನ್ನು ಮೇಲ್ವಿಚಾರಣೆ ಮಾಡಲು ಡ್ಯಾಶ್‌ಬೋರ್ಡ್‌ಗಳನ್ನು ಒದಗಿಸುತ್ತದೆ.
  • ಆಪೂರ್ತಿ: ಖರೀದಿ ಮತ್ತು ಟೆಂಡರ್ ನಿರ್ವಹಣೆ ಪ್ರಕ್ರಿಯೆಗಳನ್ನು ಡಿಜಿಟೈಜ್ ಮಾಡುತ್ತದೆ.
  • ಚಾಲಕ್ ದಳ್ ಮತ್ತು ಹ್ಯಾಂಡ್-ಹೆಲ್ಡ್ ಟರ್ಮಿನಲ್‌ಗಳು: ಕ್ಷೇತ್ರ ಕಾರ್ಯಾಚರಣೆಗಳು, ತಪಾಸಣೆಗಳು ಮತ್ತು ನೈಜ-ಸಮಯದ ಮೇಲ್ವಿಚಾರಣೆಯನ್ನು ಬೆಂಬಲಿಸುತ್ತವೆ.

ಉದಯಿಸುತ್ತಿರುವ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು

CRIS ಸುಧಾರಿತ ಡಿಜಿಟಲ್ ಪರಿಹಾರಗಳ ಮೂಲಕ ರೈಲ್ವೆ ತಂತ್ರಜ್ಞಾನವನ್ನು ಆಧುನೀಕರಿಸುವುದನ್ನು ಮುಂದುವರೆಸಿದೆ. ಇದು ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ, ಬಿಗ್ ಡೇಟಾ ಅನಾಲಿಟಿಕ್ಸ್ ಮತ್ತು ಕ್ಲೌಡ್ ಕಂಪ್ಯೂಟಿಂಗ್ ಅನ್ನು ಅಳವಡಿಸಿಕೊಳ್ಳುತ್ತಿದೆ. ಇದು ರೈಲ್ವೆ ಅಪ್ಲಿಕೇಶನ್‌ಗಳಾದ್ಯಂತ ಬ್ಲಾಕ್‌ಚೈನ್, ಇಂಟರ್ನೆಟ್ ಆಫ್ ಥಿಂಗ್ಸ್ ಮತ್ತು ಆಗ್ಮೆಂಟೆಡ್/ವರ್ಚುವಲ್ ರಿಯಾಲಿಟಿ ಅನ್ನು ಸಹ ಅಳವಡಿಸಿಕೊಳ್ಳುತ್ತಿದೆ. ಈ ತಂತ್ರಜ್ಞಾನಗಳನ್ನು ಈ ಕೆಳಗಿನ ಕಾರ್ಯಗಳಿಗಾಗಿ ಬಳಸಲಾಗುತ್ತಿದೆ:

  • ರೈಲು ವಿಳಂಬ ಮತ್ತು ವೇಟ್‌ಲಿಸ್ಟ್ ದೃಢೀಕರಣವನ್ನು ಮುನ್ಸೂಚಿಸಲು.
  • ರೈಲು ಮಾರ್ಗಗಳು ಮತ್ತು ವೇಳಾಪಟ್ಟಿಗಳನ್ನು ಅತ್ಯುತ್ತಮವಾಗಿಸಲು.
  • ಇಂಧನ ಬಳಕೆಯನ್ನು ಮುನ್ಸೂಚಿಸಲು.
  • ರೈಲ್ವೆ ಸ್ವತ್ತುಗಳ ಮುನ್ಸೂಚಕ ನಿರ್ವಹಣೆಯನ್ನು ಸಕ್ರಿಯಗೊಳಿಸಲು.
  • ಯೋಜನೆ ಮತ್ತು ಕಾರ್ಯಾಚರಣೆಯ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಸುಧಾರಿಸಲು.

ಮುಂದಿನ ಪೀಳಿಗೆಯ ಪಿಆರ್‌ಎಸ್ ಈ ತಾಂತ್ರಿಕ ಆಧಾರದ ಮೇಲೆ ರೂಪುಗೊಂಡಿದೆ. ಇದು ವೇಗವಾದ, ಚುರುಕಾದ ಮತ್ತು ಹೆಚ್ಚು ಮಾಪಕಿಸಬಹುದಾದ ಮೀಸಲಾತಿ ವೇದಿಕೆಯನ್ನು ಸೃಷ್ಟಿಸಲು ಕ್ಲೌಡ್-ಸಮರ್ಥ ಮೂಲಸೌಕರ್ಯವನ್ನು ಸುಧಾರಿತ ಡಿಜಿಟಲ್ ತಂತ್ರಜ್ಞಾನಗಳೊಂದಿಗೆ ಸಂಯೋಜಿಸುತ್ತದೆ.

ಭವಿಷ್ಯಕ್ಕೆ ಸಿದ್ಧವಾಗಿರುವ ಮೀಸಲಾತಿ ಪರಿಸರ ವ್ಯವಸ್ಥೆ

ಪ್ರಯಾಣಿಕರ ಮೀಸಲಾತಿ ವ್ಯವಸ್ಥೆಯು ಕಳೆದ ಸುಮಾರು ನಾಲ್ಕು ದಶಕಗಳಲ್ಲಿ ಭಾರತೀಯ ರೈಲ್ವೆಯ ಡಿಜಿಟಲ್ ಪರಿವರ್ತನೆಯನ್ನು ಪ್ರತಿಬಿಂಬಿಸುತ್ತದೆ. ಇಂದು, ಇದು ದೇಶಾದ್ಯಂತ ಲಕ್ಷಾಂತರ ಪ್ರಯಾಣಿಕರು ಬಳಸುವ ವಿಶ್ವಾಸಾರ್ಹ ಮೀಸಲಾತಿ ವೇದಿಕೆಯಾಗಿದೆ. ಮುಂದಿನ ಪೀಳಿಗೆಯ ಪಿಆರ್‌ಎಸ್ ಈ ಬಲವಾದ ಅಡಿಪಾಯದ ಮೇಲೆ ನಿರ್ಮಿಸಲ್ಪಟ್ಟಿದೆ. ಇವೆಲ್ಲವೂ ಸೇರಿ ವೇಗವಾದ, ಹೆಚ್ಚು ವಿಶ್ವಾಸಾರ್ಹ ಮತ್ತು ತಡೆರಹಿತ ರೈಲ್ವೆ ಸೇವೆಗಳನ್ನು ಒದಗಿಸಲಿವೆ. ಪ್ರಯಾಣಿಕರ ಅಗತ್ಯಗಳು ವಿಕಸನಗೊಳ್ಳುತ್ತಿIರುವಂತೆ, ಭಾರತೀಯ ರೈಲ್ವೆಯು ಭವಿಷ್ಯಕ್ಕೆ ಸಿದ್ಧವಾಗಿರುವ ಮೀಸಲಾತಿ ಪರಿಸರ ವ್ಯವಸ್ಥೆಯನ್ನು ನಿರ್ಮಿಸುತ್ತಿದೆ.

Centre for Railway Information Systems:

https://cris.org.in/loadpage?page=indexNew#home

Ministry of Railways

https://indianrail.gov.in/enquiry/PNR/PnrEnquiry.jsp

https://sr.indianrailways.gov.in/view_detail.jsp?lang=0&id=0,4,268&dcd=19160&did=17678519509983E5D5568AFF4D66322B878236BFF8C69

https://www.pib.gov.in/Pressreleaseshare.aspx?PRID=1685036&reg=48&lang=2

https://www.pib.gov.in/Pressreleaseshare.aspx?PRID=1566211&lang=2&reg=48

https://indianrailways.gov.in/railwayboard/uploads/directorate/eff_res/work_Study/2019-20/208_SR_2019-20.pdf

https://www.pmf.irctc.co.in/cn/TermsAndConditions.html

https://www.pib.gov.in/PressReleaseIframePage.aspx?PRID=2141145&reg=48&lang=2

https://indianrailways.gov.in/railwayboard/uploads/directorate/eff_res/work_Study/2019-20/81_NR_2019-20.pdf

https://www.pib.gov.in/PressReleasePage.aspx?PRID=2258800&reg=3&lang=1

https://www.pib.gov.in/PressReleasePage.aspx?PRID=2154363&reg=48&lang=2

https://www.pib.gov.in/PressReleaseIframePage.aspx?PRID=2140614&reg=48&lang=2

https://www.pib.gov.in/PressReleasePage.aspx?PRID=2285066&reg=48&lang=1

https://www.pib.gov.in/PressReleaseIframePage.aspx?PRID=2065879&reg=48&lang=2

https://www.pib.gov.in/PressReleasePage.aspx?PRID=2135694&reg=48&lang=2

https://www.pib.gov.in/PressReleasePage.aspx?PRID=1486017&reg=48&lang=2

https://www.pib.gov.in/PressReleasePage.aspx?PRID=2140614&reg=48&lang=2

https://www.pib.gov.in/PressReleasePage.aspx?PRID=2287719&reg=48&lang=1

https://www.pib.gov.in/PressReleasePage.aspx?PRID=1514686&reg=48&lang=2

Click to see PDF

(Explainer ID: 159454) आगंतुक पटल : 23
Provide suggestions / comments
इस विज्ञप्ति को इन भाषाओं में पढ़ें: English , Urdu , हिन्दी , Assamese , Bengali , Telugu , Malayalam