Social Welfare
ಕ್ರೀಡಾ ರಾಷ್ಟ್ರದ ನಿರ್ಮಾಣ
ಖೇಲೋ ಇಂಡಿಯಾ ಮತ್ತು ಅಂತಾರಾಷ್ಟ್ರೀಯ ಶ್ರೇಷ್ಠತೆಯ ಹಾದಿ
Posted On:
27 JUL 2026 5:08PM
|
ಕಾಮನ್‌ವೆಲ್ತ್ ಗೇಮ್ಸ್ 2026ರಲ್ಲಿ ಭಾರತವು ಸ್ಪರ್ಧಿಸುತ್ತಿರುವಂತೆ, ಅದರ ಹೆಚ್ಚುತ್ತಿರುವ ಯಶಸ್ಸು ಕ್ರೀಡೆಯಲ್ಲಿ ವರ್ಷಗಳ ಕಾಲ ನಿರಂತರವಾಗಿ ಮಾಡಲಾದ ಹೂಡಿಕೆಯನ್ನು ಪ್ರತಿಬಿಂಬಿಸುತ್ತದೆ. 'ಖೇಲೋ ಇಂಡಿಯಾ' ಮತ್ತು ಇತರ ಉಪಕ್ರಮಗಳಿಂದ ಪ್ರೇರಿತವಾಗಿ, ದೇಶವು ಕ್ರೀಡಾಪಟುಗಳ ಅಭಿವೃದ್ಧಿಯನ್ನು ಬಲಪಡಿಸಿದೆ, ಕ್ರೀಡಾ ಅವಕಾಶಗಳನ್ನು ವಿಸ್ತರಿಸಿದೆ ಮತ್ತು ಅಂತಾರಾಷ್ಟ್ರೀಯ ಸಾಧನೆಗಳನ್ನು ಸುಧಾರಿಸಿದೆ. ತಳಮಟ್ಟದ ಪಾಲ್ಗೊಳ್ಳುವಿಕೆಯಿಂದ ಹಿಡಿದು ಜಾಗತಿಕ ಪದಕಗಳ ವೇದಿಕೆಗಳವರೆಗೆ, ಭಾರತವು ಬಲವಾದ ಕ್ರೀಡಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸುತ್ತಿದೆ ಮತ್ತು ನಾಳಿನ ಚಾಂಪಿಯನ್‌ಗಳನ್ನು ರೂಪಿಸುತ್ತಿದೆ.
|
ಕ್ರೀಡಾಭಿಮಾನದ ಭಾರತದ ಸ್ಫೂರ್ತಿ

ಕಾಮನ್‌ವೆಲ್ತ್ ಗೇಮ್ಸ್ 2026 ಜುಲೈ 23 ರಿಂದ ಆಗಸ್ಟ್ 2 ರವರೆಗೆ ಗ್ಲ್ಯಾಸ್ಗೋದಲ್ಲಿ ಪುನರಾರಂಭಗೊಳ್ಳುತ್ತಿದ್ದಂತೆ, ಭಾರತವು ತನ್ನ ಕ್ರೀಡಾ ಪಯಾಣದಲ್ಲಿ ಮತ್ತೊಂದು ಹೊಸ ಅಧ್ಯಾಯವನ್ನು ಆರಂಭಿಸಿದೆ. ಇದು 1934ರಲ್ಲಿ ಪ್ರಾರಂಭವಾದ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಭಾರತದ 19 ನೇ ಕಾಮನ್‌ವೆಲ್ತ್ ಗೇಮ್ಸ್ ಭಾಗವಹಿಸುವಿಕೆಯಾಗಿದೆ. ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಈಗಾಗಲೇ ಗ್ಲ್ಯಾಸ್ಗೋದಲ್ಲಿ ಭಾರತದ ಚಿನ್ನದ ಪದಕದ ಖಾತೆಯನ್ನು ತೆರೆದಿದ್ದು, ಸತತ ಮೂರನೇ ಬಾರಿಗೆ ಸಿಡಬ್ಲ್ಯೂಜಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇಂತಹ ಕ್ಷಣಗಳು ಪದಕಗಳಿಗಿಂತಲೂ ಮಿಗಿರಾದ ಮೌಲ್ಯವನ್ನು ಸಾರುತ್ತವೆ. ಕ್ರೀಡೆಯು ರಾಷ್ಟ್ರವನ್ನೇ ಪರಿವರ್ತಿಸುವ ಅಪಾರ ಶಕ್ತಿಯನ್ನು ಹೊಂದಿದ್ದು, ವ್ಯಕ್ತಿಗಳನ್ನು ರೂಪಿಸುತ್ತದೆ ಮತ್ತು ದೇಶಗಳನ್ನು ಜಾಗತಿಕ ಮಟ್ಟಕ್ಕೇರಿಸುತ್ತದೆ. ಇದು ನಾಗರಿಕರಲ್ಲಿ ವ್ಯಕ್ತಿತ್ವ ಮತ್ತು ಆತ್ಮವಿಶ್ವಾಸವನ್ನು ಬೆಳೆಸುವುದರ ಜೊತೆಗೆ, ಒಂದು ರಾಷ್ಟ್ರವು ಕ್ರೀಡಾ ಮಹಾಶಕ್ತಿಯಾಗಿ ಹೊರಹೊಮ್ಮುತ್ತಿರುವುದನ್ನು ಸಾರುತ್ತದೆ. ಮೈದಾನದಲ್ಲಿ ಸಿಗುವ ಗೆಲುವು ಅಪಾರ ರಾಷ್ಟ್ರೀಯ ಹೆಮ್ಮೆಯನ್ನು ತಂದುಕೊಡುತ್ತದೆ, ಜಾತಿ, ಮತ ಮತ್ತು ಧರ್ಮಗಳ ಗಡಿಗಳನ್ನು ಮೀರಿ ಜನರನ್ನು ಒಂದೇ ತಾಣದಲ್ಲಿ ಒಗ್ಗೂಡಿಸುತ್ತದೆ. ಈ ಸಾಮೂಹಿಕ ಹೆಮ್ಮೆಯು ಹೆಚ್ಚು ಸಂತೋಷದಾಯಕ, ಆರೋಗ್ಯಕರ ಮತ್ತು ಒಗ್ಗಟ್ಟಿನ ಸಮಾಜವನ್ನು ನಿರ್ಮಿಸಲು ಸಹಾಯ ಮಾಡುತ್ತದೆ.
ಭಾರತದ ಅತಿ ದೊಡ್ಡ ಕ್ರೀಡಾ ಆಸ್ತಿಯೇ ಅದರ ಯುವಜನತೆ. ಜನಸಂಖ್ಯೆಯ ಸುಮಾರು 65 ಪ್ರತಿಶತದಷ್ಟು ಭಾಗವು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಈ ಅಪಾರ ಸಾಮರ್ಥ್ಯವನ್ನು ಗುರುತಿಸಿ, ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ದೇಶಾದ್ಯಂತ ಯುವಕರ ಅಭಿವೃದ್ಧಿಯನ್ನು ಬಲಪಡಿಸುವುದನ್ನು ಮತ್ತು ಕ್ರೀಡಾ ಶ್ರೇಷ್ಠತೆಯನ್ನು ಉತ್ತೇಜಿಸುವುದನ್ನು ಮುಂದುವರೆಸಿದೆ. 2013-14 ರಲ್ಲಿ 1,219 ಕೋಟಿ ರೂ.ಗಳಷ್ಟಿದ್ದ ಅನುದಾನವನ್ನು ಹೆಚ್ಚಿಸಿ, ಕೇಂದ್ರ ಬಜೆಟ್ 2026-27 ರಲ್ಲಿ ಸಚಿವಾಲಯಕ್ಕೆ ದಾಖಲೆಯ ₹4,479.88 ಕೋಟಿಗಳನ್ನು ಮೀಸಲಿಡಲಾಗಿದೆ.
ಈ ಪರಿವರ್ತನೆಯ ಕೇಂದ್ರಬಿಂದುವಾಗಿ 'ಖೇಲೋ ಇಂಡಿಯಾ' ಕಾರ್ಯಕ್ರಮವು ನಿಂತಿದೆ, ಜೊತೆಗೆ ಇತರ ಹಲವಾರು ಪ್ರಮುಖ ಉಪಕ್ರಮಗಳು ಇದಕ್ಕೆ ಪೂರಕವಾಗಿವೆ. ಇವೆರಡೂ ಸೇರಿ ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡರಲ್ಲೂ ಸಾಮೂಹಿಕ ಭಾಗವಹಿಸುವಿಕೆ ಮತ್ತು ಕ್ರೀಡಾ ಶ್ರೇಷ್ಠತೆಯನ್ನು ಉತ್ತೇಜಿಸುತ್ತವೆ. ಪ್ರತಿಯೊಂದು ಹಂತದಲ್ಲೂ ಪ್ರತಿಭೆಗಳನ್ನು ಗುರುತಿಸಲು, ತರಬೇತಿ ನೀಡಲು ಮತ್ತು ಪೋಷಿಸಲು ಇವು ನಿರ್ಣಾಯಕ ಮೂಲಭೂತ ಸೌಕರ್ಯ ಮತ್ತು ಆರ್ಥಿಕ ಬೆಂಬಲವನ್ನು ಒದಗಿಸುತ್ತವೆ. ಈ ಪ್ರಯತ್ನಗಳು ವಿಶ್ವದ ದೊಡ್ಡ ವೇದಿಕೆಗಳಲ್ಲಿ ಭಾರತದ ಧ್ವಜವನ್ನು ಹೆಮ್ಮೆಯಿಂದ ಹಾರಿಸಲು ಸಿದ್ಧವಾಗಿರುವ ಒಂದು ತಲೆಮಾರನ್ನು ರೂಪಿಸುತ್ತಿವೆ.
ಖೇಲೋ ಇಂಡಿಯಾ ದೃಷ್ಟಿಕೋನ

ಭಾರತೀಯ ಕ್ರೀಡೆಗೆ ಭದ್ರವಾದ ಬುನಾದಿಯನ್ನು ಒದಗಿಸಲು 2017ರಲ್ಲಿ ಪ್ರಾರಂಭಿಸಲಾದ 'ಖೇಲೋ ಇಂಡಿಯಾ ಯೋಜನೆ'ಯುಮೂರು ಅಸ್ತಿತ್ವದಲ್ಲಿರುವ ಕಾರ್ಯಕ್ರಮಗಳನ್ನು ಒಂದೆಡೆ ತಂದಿತು. ಇದು ಕ್ರೀಡಾ ಅಭಿವೃದ್ಧಿಯ ಏಕೀಕೃತ ಚೌಕಟ್ಟಿನಡಿಯಲ್ಲಿ ರಾಜೀವ್ ಗಾಂಧಿ ಖೇಲ್ ಅಭಿಯಾನ, ನಗರ ಕ್ರೀಡಾ ಮೂಲಭೂತ ಸೌಕರ್ಯ ಯೋಜನೆ ಮತ್ತು ರಾಷ್ಟ್ರೀಯ ಕ್ರೀಡಾ ಪ್ರತಿಭೆ ಹುಡುಕಾಟ ಯೋಜನೆಯನ್ನು ವಿಲೀನಗೊಳಿಸಿತು.
ಕ್ರೀಡಾ ಪರಿಸರ ವ್ಯವಸ್ಥೆಯ ಪ್ರತಿಯೊಂದು ಹಂತವನ್ನು ಬಲಪಡಿಸಲು ಈ ಯೋಜನೆಯು ಸಮಗ್ರ ವಿಧಾನವನ್ನು ಅನುಸರಿಸುತ್ತದೆ. ಇದರ ಐದು ಪ್ರಮುಖ ಸ್ತಂಭಗಳು :
- ಪ್ರತಿಭಾವಂತ ಕ್ರೀಡಾಪಟುಗಳನ್ನು ಗುರುತಿಸಲು ಮತ್ತು ವೃತ್ತಿಪರ ಶ್ರೇಷ್ಠತೆಯತ್ತ ಅವರನ್ನು ಮುನ್ನಡೆಸಲು ವಿವಿಧ ಹಂತಗಳಲ್ಲಿ ತರಬೇತಿ ಕೇಂದ್ರಗಳನ್ನು ಸ್ಥಾಪಿಸುವುದು.
- ಮೀಸಲಾದ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ತರಬೇತುದಾರರು ಮತ್ತು ಬೆಂಬಲ ಸಿಬ್ಬಂದಿಯ ಸಾಮರ್ಥ್ಯವನ್ನು ನಿರ್ಮಿಸುವುದು.
- ಕ್ರೀಡಾಪಟುಗಳ ಕಾರ್ಯಕ್ಷಮತೆಯನ್ನು ಸುಧಾರಿಸಲು ಕ್ರೀಡಾ ವಿಜ್ಞಾನ ಮತ್ತು ಸುಧಾರಿತ ತಂತ್ರಜ್ಞಾನದ ಬಳಕೆಯನ್ನು ವಿಸ್ತರಿಸುವುದು.
- ರೋಮಾಂಚಕ ಕ್ರೀಡಾ ಸಂಸ್ಕೃತಿಯನ್ನು ಉತ್ತೇಜಿಸಲು ಮತ್ತು ಸ್ಪರ್ಧಾತ್ಮಕ ಅವಕಾಶಗಳನ್ನು ಒದಗಿಸಲು ಸ್ಪರ್ಧೆಗಳು ಮತ್ತು ಲೀಗ್‌ಗಳನ್ನು ಆಯೋಜಿಸುವುದು.
- ತರಬೇತಿ ಮತ್ತು ಸ್ಪರ್ಧಾತ್ಮಕಕೂಟಗಳೆರಡಕ್ಕೂ ಬೆಂಬಲ ನೀಡಲು ಕ್ರೀಡಾ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು.
ಈ ಮಿಷನ್ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಯೋಜನೆಗಳ ಮೂಲಕ ಪ್ರತಿ ಜಿಲ್ಲೆಯಲ್ಲೂ ಒಂದು 'ಖೇಲೋ ಇಂಡಿಯಾ ತರಬೇತಿ ಕೇಂದ್ರ'ವನ್ನು ಹೊಂದುವ ದೂರದೃಷ್ಟಿಯನ್ನು ಹೊಂದಿದೆ. ಇದು ಕ್ರೀಡಾ ವಿಜ್ಞಾನ, ಮನೋವಿಜ್ಞಾನ ಮತ್ತು ಪೋಷಣೆಯ ಬೆಂಬಲದೊಂದಿಗೆ ರಚನಾತ್ಮಕ ಕ್ರೀಡಾಪಟುಗಳ ಮಾರ್ಗಗಳನ್ನು ಉತ್ತೇಜಿಸುತ್ತದೆ. ದತ್ತಾಂಶ ಆಧಾರಿತ ವೇದಿಕೆಗಳು ನೈಜ-ಸಮಯದ ಕ್ರೀಡಾಪಟುಗಳ ಟ್ರ್ಯಾಕಿಂಗ್ ಅನ್ನು ಸಕ್ರಿಯಗೊಳಿಸುತ್ತವೆ. ಈ ಸಮಗ್ರ ವಿಧಾನವು 2036ರ ವೇಳೆಗೆ ಭಾರತವನ್ನು ವಿಶ್ವದ ಪ್ರಮುಖ ಕ್ರೀಡಾ ರಾಷ್ಟ್ರಗಳಲ್ಲಿ ಒಂದಾಗಿಸುವ ಗುರಿಯನ್ನು ಹೊಂದಿದೆ.
ಖೇಲೋ ಇಂಡಿಯಾದಲ್ಲಿ ಹೆಚ್ಚುತ್ತಿರುವ ಹೂಡಿಕೆ
- 2017-18 ರಿಂದ 2019-20: ಯೋಜನೆಯನ್ನು ನವೀಕರಿಸಲು ಮೂರು ವರ್ಷಗಳಿಗೆ ₹1,756 ಕೋಟಿ ಅನುಮೋದಿಸಲಾಗಿದೆ.
- 2020-21: ಒಂದು ವರ್ಷಕ್ಕೆ ₹328.77 ಕೋಟಿ ಅನುದಾನ ಹಂಚಿಕೆ.
- 2021-22 ರಿಂದ 2025-26: ಚಟುವಟಿಕೆಗಳನ್ನು ವಿಸ್ತರಿಸಲು ಮತ್ತು ಕ್ರೀಡಾ ಮೂಲಭೂತ ಸೌಕರ್ಯಗಳನ್ನು ಬಲಪಡಿಸಲು ಐದು ವರ್ಷಗಳ ಆರ್ಥಿಕ ವೆಚ್ಚ ಅನ್ನು ₹3,790.50 ಕೋಟಿಗಳಿಗೆ ಹೆಚ್ಚಿಸಲಾಗಿದೆ.
- 2026-27: ಯೋಜನೆಯು ಫಲಿತಾಂಶ-ಆಧಾರಿತ ಅನುಷ್ಠಾನದ ಹೊಸ ಹಂತಕ್ಕೆ ಪ್ರವೇಶಿಸುತ್ತಿರುವುದರಿಂದ, ನಿರಂತರ ಬೆಂಬಲವನ್ನು ಬಲಪಡಿಸಲು ₹924.35 ಕೋಟಿಗಳನ್ನು ಹಂಚಿಕೆ ಮಾಡಲಾಗಿದೆ.
|

ಖೇಲೋ ಇಂಡಿಯಾ ಯೋಜನೆಯ ಪ್ರಮುಖ ಸಾಧನೆಗಳು (ಜುಲೈ 2026ರ ಹೊತ್ತಿಗೆ):
- ಒಟ್ಟು ₹3,176 ಕೋಟಿ ಹೂಡಿಕೆಯೊಂದಿಗೆ 349 ಹೊಸ ಕ್ರೀಡಾ ಮೂಲಭೂತ ಸೌಕರ್ಯ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.
- ತಳಮಟ್ಟದ ತರಬೇತಿ ಮತ್ತು ಕ್ರೀಡಾಪಟುಗಳ ಬೆಂಬಲವನ್ನು ಬಲಪಡಿಸಲು 1,067 'ಖೇಲೋ ಇಂಡಿಯಾ ಕೇಂದ್ರಗಳನ್ನು' ಸ್ಥಾಪಿಸಲಾಗಿದೆ.
- ವಿವಿಧ ವಿಭಾಗಗಳಲ್ಲಿ ಕ್ರೀಡಾ ಪ್ರತಿಭೆಗಳನ್ನು ಪೋಷಿಸಲು 267 ಅಕಾಡೆಮಿಗಳಿಗೆ ಬೆಂಬಲ ನೀಡಲಾಗಿದೆ.
- 2,745 'ಖೇಲೋ ಇಂಡಿಯಾ ಕ್ರೀಡಾಪಟುಗಳಿಗೆ' ತರಬೇತಿ, ಉಪಕರಣಗಳು, ವೈದ್ಯಕೀಯ ಚಿಕಿತ್ಸೆ ಮತ್ತು ಮಾಸಿಕ ಜೇಬಿನ ವೆಚ್ಚದ ಭತ್ಯೆಯೊಂದಿಗೆ ನೆರವು ನೀಡಲಾಗಿದೆ.
ನಿರಂತರ ಹೂಡಿಕೆ ಮತ್ತು ಸ್ಪಷ್ಟವಾದ ದೂರದೃಷ್ಟಿಯ ಮೂಲಕ, 'ಖೇಲೋ ಇಂಡಿಯಾ' ಭಾರತಕ್ಕಾಗಿ ಚಾಂಪಿಯನ್‌ಗಳ ಬಲವಾದ ಪೈಪ್‌ಲೈನ್ ಅನ್ನು ನಿರ್ಮಿಸುತ್ತಿದೆ.
ಖೇಲೋ ಇಂಡಿಯಾ ಕ್ರೀಡಾಕೂಟ: ಭವಿಷ್ಯದ ಚಾಂಪಿಯನ್‌ಗಳ ವೇದಿಕೆ
2018ರಲ್ಲಿ 'ಖೇಲೋ ಇಂಡಿಯಾ ಸ್ಕೂಲ್ ಗೇಮ್ಸ್' ಆರಂಭವಾಗುವುದರೊಂದಿಗೆ ಖೇಲೋ ಇಂಡಿಯಾ ಚಳುವಳಿಯು ಹೊಸ ಹಂತಕ್ಕೆ ಪ್ರವೇಶಿಸಿತು. ಹೊಸ ದೆಹಲಿಯಲ್ಲಿ ನಡೆದ ಈ ಕಾರ್ಯಕ್ರಮವು ದೇಶಾದ್ಯಂತದ ಯುವ ಕ್ರೀಡಾ ಪ್ರತಿಭೆಗಳನ್ನು ಒಂದೇ ವೇದಿಕೆಗೆ ತಂದಿತು.
ಅದೇ ವರ್ಷದ ನಂತರ, ಭಾರತೀಯ ಒಲಿಂಪಿಕ್ಸ್ ಒಕ್ಕೂಟವು ಈ ಉಪಕ್ರಮದೊಂದಿಗೆ ಕೈಜೋಡಿಸಿತು. 2019 ರಿಂದ, ಈ ಸ್ಪರ್ಧೆಯನ್ನು 'ಖೇಲೋ ಇಂಡಿಯಾ ಯೂತ್ ಗೇಮ್ಸ್' (KIYG) ಎಂದು ಮರುನಾಮಕರಣ ಮಾಡಲಾಯಿತು. ಇದು ಖೇಲೋ ಇಂಡಿಯಾ ಅಡಿಯಲ್ಲಿ ಪ್ರಮುಖ ಸ್ಪರ್ಧೆಯಾಗಿ ಮುಂದುವರಿದಿದೆ.

ಖೇಲೋ ಇಂಡಿಯಾ ಕ್ರೀಡಾಕೂಟವು ವಿವಿಧ ವಿಭಾಗಗಳ ಕ್ರೀಡಾಪಟುಗಳಿಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸಲು ಕ್ರಮೇಣ ವಿಸ್ತರಿಸಿದೆ. ವಾರ್ಷಿಕ ಸ್ಪರ್ಧೆಗಳು ಈಗ ತಮ್ಮ ರಾಜ್ಯಗಳು ಮತ್ತು ವಿಶ್ವವಿದ್ಯಾಲಯಗಳನ್ನು ಪ್ರತಿನಿಧಿಸುವ ಸ್ಪರ್ಧಾಳುಗಳನ್ನು ಒಂದೆಡೆ ಸೇರಿಸುತ್ತಿದ್ದು, ಅವರು ಸ್ಪರ್ಧಿಸಲು, ಶ್ರೇಷ್ಠತೆಯನ್ನು ಸಾಧಿಸಲು ಮತ್ತು ಉನ್ನತ ಮಟ್ಟಕ್ಕೆ ಸಿದ್ಧರಾಗಲು ಸಹಾಯ ಮಾಡುತ್ತಿವೆ. 2018 ರಿಂದ, 63,000 ಕ್ಕೂ ಹೆಚ್ಚು ಕ್ರೀಡಾಪಟುಗಳು ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ.
ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟ (KIUG) ಮತ್ತು ಖೇಲೋ ಇಂಡಿಯಾ ಶೀತಲ ಕ್ರೀಡಾಕೂಟವನ್ನು (KIWG) 2020 ರಲ್ಲಿ ಪರಿಚಯಿಸಲಾಯಿತು. 2023 ರಲ್ಲಿ ಖೇಲೋ ಇಂಡಿಯಾ ಪ್ಯಾರಾ ಕ್ರೀಡಾಕೂಟ (KIPG) ಆರಂಭವಾಯಿತು. 2025 ರಲ್ಲಿ ಖೇಲೋ ಇಂಡಿಯಾ ಬೀಚ್ ಗೇಮ್ಸ್ (KIBG) ಮತ್ತು ಖೇಲೋ ಇಂಡಿಯಾ ಜಲ ಕ್ರೀಡಾ ಉತ್ಸವದೊಂದಿಗೆ ಈ ವಿಸ್ತರಣೆಯು ಮುಂದುವರಿಯಿತು. ಖೇಲೋ ಇಂಡಿಯಾ ಬುಡಕಟ್ಟು ಕ್ರೀಡಾಕೂಟವು (KITG) 2026 ರಲ್ಲಿ ತನ್ನ ಪಾದಾರ್ಪಣೆ ಮಾಡಿತು.
ಯುವ ಕ್ರೀಡಾಪಟುಗಳಿಗೆ ಶ್ರೇಷ್ಠತೆಯನ್ನು ಸಾಧಿಸಲು ರಾಷ್ಟ್ರೀಯ ವೇದಿಕೆಯನ್ನು ಒದಗಿಸುವ ಮೂಲಕ ಖೇಲೋ ಇಂಡಿಯಾ ಕ್ರೀಡಾಕೂಟವು ಭಾರತದ ಕ್ರೀಡಾ ಸಂಸ್ಕೃತಿಯನ್ನು ಮತ್ತಷ್ಟು ಬಲಪಡಿಸುತ್ತಿದೆ.
ಭಾರತದ ಕ್ರೀಡಾ ಯಶಸ್ಸಿಗೆ ಅನುವು ಮಾಡಿಕೊಡುವುದು
ಭಾರತದ ಕ್ರೀಡಾ ಕ್ಷೇತ್ರದ ಉನ್ನತಿಯು ಕೇವಲ ಮೂಲಭೂತ ಸೌಕರ್ಯಗಳು ಮತ್ತು ಸ್ಪರ್ಧೆಗಳಿಗಷ್ಟೇ ಸೀಮಿತವಾಗಿಲ್ಲ. ಹಲವಾರು ಕೇಂದ್ರೀಕೃತ ಉಪಕ್ರಮಗಳು ಕ್ರೀಡಾಪಟುಗಳ ಅಭಿವೃದ್ಧಿಯನ್ನು ಬಲಪಡಿಸುತ್ತವೆ, ಉದಯೋನ್ಮುಖ ಪ್ರತಿಭೆಗಳನ್ನು ಗುರುತಿಸುತ್ತವೆ ಮತ್ತು ದೀರ್ಘಕಾಲೀನ ಕ್ರೀಡಾ ಸಾಮರ್ಥ್ಯವನ್ನು ನಿರ್ಮಿಸುತ್ತವೆ. ಒಟ್ಟಾರೆಯಾಗಿ, ಈ ಪ್ರಯತ್ನಗಳು ತಳಮಟ್ಟದ ಭಾಗವಹಿಸುವಿಕೆಯಿಂದ ಜಾಗತಿಕ ಯಶಸ್ಸಿನತ್ತ ಬಲವಾದ ಹಾದಿಯನ್ನು ಸೃಷ್ಟಿಸುತ್ತಿವೆ.
ಟಾರ್ಗೆಟ್ ಒಲಂಪಿಕ್ ಪೊಡಿಯಮ್ ಸ್ಕೀಮ್ (ಟಾಪ್ಸ್)
ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಕ್ರೀಡಾಕೂಟಗಳಲ್ಲಿ ಭಾರತದ ಕಾರ್ಯಕ್ಷಮತೆಯನ್ನು ಸುಧಾರಿಸಲು ಸೆಪ್ಟೆಂಬರ್ 2014 ರಲ್ಲಿ ಟಾರ್ಗೆಟ್ ಒಲಿಂಪಿಕ್ ಪೊಡಿಯಮ್ ಸ್ಕೀಮ್ (ಟಾಪ್ಸ್) ಅನ್ನು ಪ್ರಾರಂಭಿಸಿತು. ಕ್ರೀಡಾಪಟುಗಳಿಗೆ ಸಮಗ್ರ ನೆರವು ನೀಡಲು ಮೀಸಲಾದ ತಾಂತ್ರಿಕ ಬೆಂಬಲ ತಂಡದೊಂದಿಗೆ ಈ ಯೋಜನೆಯನ್ನು ಏಪ್ರಿಲ್ 2018 ರಲ್ಲಿ ನವೀಕರಿಸಲಾಯಿತು.
ವಿದೇಶಿ ತರಬೇತಿ, ಅಂತಾರಾಷ್ಟ್ರೀಯ ಸ್ಪರ್ಧೆಗಳು, ತರಬೇತಿ ಶಿಬಿರಗಳು, ವಿಶೇಷ ಉಪಕರಣಗಳು ಮತ್ತು ತಿಂಗಳಿಗೆ ₹50,000 ಸ್ಟೈಫಂಡ್ ಮೂಲಕ ಟಾಪ್ಸ್ ಕ್ರೀಡಾಪಟುಗಳನ್ನು ಬೆಂಬಲಿಸುತ್ತದೆ. ತಿಂಗಳಿಗೆ ₹25,000 ಸ್ಟೈಫಂಡ್‌ನೊಂದಿಗೆ ಜೂನಿಯರ್ ಕ್ರೀಡಾಪಟುಗಳನ್ನು ಬೆಂಬಲಿಸಲು 'ಅಭಿವೃದ್ಧಿ ಗುಂಪು' ಅನ್ನು ಸಹ ಪರಿಚಯಿಸಲಾಯಿತು.
ಏಪ್ರಿಲ್ 2026 ರ ಹೊತ್ತಿಗೆ, ಈ ಯೋಜನೆಯು ಪ್ರಸ್ತುತ 51 ಕೋರ್ ಕ್ರೀಡಾಪಟುಗಳು, 52 ಪ್ಯಾರಾ ಕೋರ್ ಕ್ರೀಡಾಪಟುಗಳು ಮತ್ತು 130 ಅಭಿವೃದ್ಧಿ ಕ್ರೀಡಾಪಟುಗಳಿಗೆ ಬೆಂಬಲ ನೀಡುತ್ತಿದೆ. ಟೋಕಿಯೊ 2020 ಮತ್ತು ಪ್ಯಾರಿಸ್ 2024 ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಭಾರತದ ಪದಕ ವಿಜೇತ ಪ್ರದರ್ಶನಗಳಲ್ಲಿ ಟಾಪ್ಸ್ ಪ್ರಮುಖ ಪಾತ್ರ ವಹಿಸಿದೆ.
ಕೀರ್ತಿ
ಖೇಲೋ ಇಂಡಿಯಾ ರೈಸಿಂಗ್ ಟ್ಯಾಲೆಂಟ್ ಐಡೆಂಟಿಫಿಕೇಶನ್ ಉಪಕ್ರಮವು 9 ರಿಂದ 18 ವರ್ಷ ವಯಸ್ಸಿನ ಮಕ್ಕಳಲ್ಲಿ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಪೋಷಿಸುತ್ತದೆ. ಇದು ಪಾರದರ್ಶಕ ಮತ್ತು ಅರ್ಹತೆ ಆಧಾರಿತ ಆಯ್ಕೆಯನ್ನು ಖಚಿತಪಡಿಸಿಕೊಳ್ಳಲು ಪ್ರತಿಭೆ ಮೌಲ್ಯಮಾಪನ ಕೇಂದ್ರಗಳು, ಪ್ರಮಾಣೀಕೃತ ಮೌಲ್ಯಮಾಪನ ಪ್ರೋಟೋಕಾಲ್‌ಗಳು ಮತ್ತು ಕೃತಕ ಬುದ್ಧಿಮತ್ತೆ ಹಾಗೂ ಡೇಟಾ ವಿವರಣೆ ಸೇರಿದಂತೆ ಸುಧಾರಿತ ಐಟಿ ಉಪಕರಣಗಳನ್ನು ಬಳಸುತ್ತದೆ.
ಪ್ರಸ್ತುತ, 3 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 174 ಪ್ರತಿಭೆ ಮೌಲ್ಯಮಾಪನ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಮತ್ತು 1,87,921 ಮೌಲ್ಯಮಾಪನಗಳು ಪೂರ್ಣಗೊಂಡಿವೆ. 2036 ರ ವೇಳೆಗೆ ಭಾರತವನ್ನು ಅಗ್ರ 10 ಕ್ರೀಡಾ ರಾಷ್ಟ್ರಗಳಲ್ಲಿ ಒಂದಾಗಿಸಲು ಮತ್ತು 2047 ರ ವೇಳೆಗೆ ಅಗ್ರ 5 ಕ್ರೀಡಾ ರಾಷ್ಟ್ರಗಳಲ್ಲಿ ಒಂದಾಗಿಸಲು ಸಹಾಯ ಮಾಡುವ ನಿಟ್ಟಿನಲ್ಲಿ ಸುಸ್ಥಿರ ಪ್ರತಿಭಾ ಪೈಪ್‌ಲೈನ್ ಅನ್ನು ನಿರ್ಮಿಸುವ ಗುರಿ ಕೀರ್ತಿ ಹೊಂದಿದೆ.
ಕ್ರೀಡಾ ಸಾಮಗ್ರಿಗಳ ತಯಾರಿಕೆ
ಕೇಂದ್ರ ಬಜೆಟ್ 2026-27 ರಲ್ಲಿ ₹500 ಕೋಟಿ ಹಂಚಿಕೆಯೊಂದಿಗೆ ಕ್ರೀಡಾ ಸಾಮಗ್ರಿಗಳ ತಯಾರಿಕೆಗಾಗಿ ಮೀಸಲಾದ ಉಪಕ್ರಮವನ್ನು ಘೋಷಿಸಲಾಗಿದೆ. ಈ ಉಪಕ್ರಮವು ಉತ್ತಮ ಗುಣಮಟ್ಟದ ಮತ್ತು ಕೈಗೆಟುಕುವ ಕ್ರೀಡಾ ಸಾಮಗ್ರಿಗಳ ಜಾಗತಿಕ ಕೇಂದ್ರವಾಗಿ ಭಾರತದ ಸ್ಥಾನವನ್ನು ಬಲಪಡಿಸಲು ಪ್ರಯತ್ನಿಸುತ್ತದೆ.
ದೇಶೀಯ ಉತ್ಪಾದನಾ ಸಾಮರ್ಥ್ಯವನ್ನು ವಿಸ್ತರಿಸುವುದು, ಉಪಕರಣಗಳ ವಿನ್ಯಾಸದಲ್ಲಿ ಸಂಶೋಧನೆ ಮತ್ತು ನಾವೀನ್ಯತೆಯನ್ನು ಉತ್ತೇಜಿಸುವುದು, ವಸ್ತು ವಿಜ್ಞಾನವನ್ನು ಮುನ್ನಡೆಸುವುದು, ಜಾಗತಿಕ ಕ್ರೀಡಾ ಪೂರೈಕೆ ಸರಪಳಿಗಳಲ್ಲಿ ಭಾರತದ ಉಪಸ್ಥಿತಿಯನ್ನು ಬಲಪಡಿಸುವುದು ಮತ್ತು ಉತ್ಪಾದನೆ ಹಾಗೂ ಸಂಬಂಧಿತ ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿಸುವುದು ಇದರ ಪ್ರಮುಖ ಉದ್ದೇಶಗಳಾಗಿವೆ.
ಈ ಉಪಕ್ರಮಗಳು ಭಾರತದ ಕ್ರೀಡಾ ಪರಿಸರ ವ್ಯವಸ್ಥೆಯನ್ನು ಬಲಪಡಿಸುತ್ತಿವೆ ಮತ್ತು ಜಾಗತಿಕ ವೇದಿಕೆಯಲ್ಲಿ ಆತ್ಮವಿಶ್ವಾಸದಿಂದ ಸ್ಪರ್ಧಿಸಲು ಕ್ರೀಡಾಪಟುಗಳನ್ನು ಸಿದ್ಧಪಡಿಸುತ್ತಿವೆ.
ಜಾಗತಿಕ ಕ್ರೀಡಾ ವೇದಿಕೆಯಲ್ಲಿ ಭಾರತದ ಉನ್ನತಿ
ಭಾರತದ ಕ್ರೀಡಾ ಪರಿಸರ ವ್ಯವಸ್ಥೆಯಲ್ಲಿ ಮಾಡಲಾದ ಹೂಡಿಕೆಗಳು ಜಾಗತಿಕ ವೇದಿಕೆಯಲ್ಲಿ ಫಲ ನೀಡುತ್ತಿವೆ. ಪ್ರಮುಖ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರತದ ಪ್ರದರ್ಶನಗಳು ಒಲಿಂಪಿಕ್, ಪ್ಯಾರಾಲಿಂಪಿಕ್ ಮತ್ತು ಬಹು-ಕ್ರೀಡಾ ವಿಭಾಗಗಳಲ್ಲಿ ದೇಶದ ಬೆಳೆಯುತ್ತಿರುವ ಶಕ್ತಿಯನ್ನು ಪ್ರತಿಬಿಂಬಿಸುತ್ತವೆ. ಬಲವಾದ ಕ್ರೀಡಾಪಟುಗಳ ಅಭಿವೃದ್ಧಿ, ಉತ್ತಮ ತರಬೇತಿ ಬೆಂಬಲ ಮತ್ತು ನಿರಂತರ ಹೂಡಿಕೆಯು ವಿಶ್ವ ವೇದಿಕೆಯಲ್ಲಿ ಸ್ಥಿರವಾದ ಸುಧಾರಣೆಗಳಿಗೆ ಕಾರಣವಾಗಿದೆ. ಭಾಗವಹಿಸುವಿಕೆ ಮತ್ತು ಪದಕಗಳ ಸಂಖ್ಯೆಯಲ್ಲಿನ ಸ್ಥಿರ ಏರಿಕೆಯು ಹೆಚ್ಚು ಸ್ಪರ್ಧಾತ್ಮಕ ಕ್ರೀಡಾ ರಾಷ್ಟ್ರವಾಗಿ ಭಾರತದ ಹೊರಹೊಮ್ಮುವಿಕೆಯನ್ನು ಉಲ್ಲೇಖಿಸುತ್ತದೆ.
ಒಲಿಂಪಿಕ್ ಕ್ರೀಡಾಕೂಟ
2016 ಮತ್ತು 2024 ರ ನಡುವೆ ಭಾರತದ ಒಲಿಂಪಿಕ್ ಪಯಾಣವು ಗಮನಾರ್ಹ ರೂಪಾಂತರಕ್ಕೆ ಸಾಕ್ಷಿಯಾಯಿತು. ರಿಯೊ 2016 ರಲ್ಲಿ ಎರಡು ಪದಕಗಳಿಂದ ದೇಶವು ಟೋಕಿಯೊ 2020 ರಲ್ಲಿ ಏಳು ಪದಕಗಳಿಗೆ ನ್ನಡೆ ಸಾಧಿಸಿತು. ಪ್ಯಾರಿಸ್ 2024 ರಲ್ಲಿ ಆರು ಪದಕಗಳೊಂದಿಗೆ ಭಾರತ ಈ ಸುಸ್ಥಿರತೆಯನ್ನು ಕಾಯ್ದುಕೊಂಡಿತು. ನೀರಜ್ ಚೋಪ್ರಾ ಅವರು ಟೋಕಿಯೊ 2020 ರಲ್ಲಿ ಭಾರತದ ಮೊದಲ ಒಲಿಂಪಿಕ್ ಅಥ್ಲೆಟಿಕ್ಸ್ ಚಿನ್ನದ ಪದಕ ವಿಜೇತರಾದರು. ಮೀರಾಬಾಯಿ ಚಾನು ಕೂಡ ಭಾರತದ ಅತ್ಯಂತ ಸ್ಥಿರ ಒಲಿಂಪಿಕ್ ಪದಕ ವಿಜೇತರಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ.
|
ವರ್ಷ
|
ಆತಿಥೇಯ ನಗರ
|
ಭಾರತೀಯ ಕ್ರೀಡಾಪಟುಗಳು
|
ಗೆದ್ದ ಪದಕಗಳು
|
|
2016
|
ರಿಯೊ ಡಿ ಜನೈರೊ
|
117
|
2
|
|
2020
|
ಟೋಕಿಯೊ
|
119
|
7
|
|
2024
|
ಪ್ಯಾರಿಸ್
|
117
|
6
|
ಪ್ಯಾರಾಲಿಂಪಿಕ್ ಕ್ರೀಡಾಕೂಟ
ಕಳೆದ ಮೂರು ಆವೃತ್ತಿಗಳಲ್ಲಿ ಭಾರತದ ಪ್ಯಾರಾಲಿಂಪಿಕ್ ಪ್ರದರ್ಶನವು ಅಸಾಧಾರಣ ಬೆಳವಣಿಗೆಯನ್ನು ಕಂಡಿದೆ. ರಿಯೊ 2016 ರಲ್ಲಿ ನಾಲ್ಕು ಇದ್ದ ಪದಕಗಳ ಸಂಖ್ಯೆಯು ಟೋಕಿಯೊ 2020 ರಲ್ಲಿ 19 ಕ್ಕೆ ಏರಿತು. ಪ್ಯಾರಿಸ್ 2024 ರ ಕ್ರೀಡಾಕೂಟವು 29 ಪದಕಗಳನ್ನು ಗೆಲ್ಲುವ ಮೂಲಕ ಭಾರತದ ಸಾರ್ವಕಾಲಿಕ ಅತ್ಯುತ್ತಮ ಪ್ಯಾರಾಲಿಂಪಿಕ್ ಅಭಿಯಾನವೆಂದು ದಾಖಲಾಯಿತು. ಅವನಿ ಲೇಖರಾ, ಸುಮಿತ್ ಅಂಟಿಲ್ ಮತ್ತು ಪ್ರಮೋದ್ ಭಗತ್ ಅವರು ದೇಶದ ಅತ್ಯುತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳಲ್ಲಿ ಪ್ರಮುಖರಾಗಿದ್ದಾರೆ. 'ಟಾಪ್ಸ್' ಮತ್ತು 'ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್' ನಂತಹ ಕಾರ್ಯಕ್ರಮಗಳು ಪ್ಯಾರಾ-ಕ್ರೀಡಾಪಟುಗಳಿಗೆ ದೊರೆಯುವ ಬೆಂಬಲವನ್ನು ಮತ್ತಷ್ಟು ಬಲಪಡಿಸಿವೆ.
|
ವರ್ಷ
|
ಆತಿಥೇಯ ನಗರ
|
ಭಾರತೀಯ ಕ್ರೀಡಾಪಟುಗಳು
|
ಗೆದ್ದ ಒಟ್ಟು ಪದಕಗಳು
|
ಚಿನ್ನ
|
ಬೆಳ್ಳಿ
|
ಕಂಚು
|
|
2016
|
ರಿಯೊ ಡಿ ಜನೈರೊ
|
19
|
4
|
2
|
1
|
1
|
|
2020
|
ಟೋಕಿಯೊ
|
54
|
19
|
5
|
8
|
6
|
|
2024
|
ಪ್ಯಾರಿಸ್
|
84
|
29
|
7
|
9
|
13
|
ಏಷ್ಯನ್ ಕ್ರೀಡಾಕೂಟ
ದೊಡ್ಡ ಪ್ರಮಾಣದ ತಂಡಗಳು ಮತ್ತು ಬಲವಾದ ಪದಕ ವಿಜೇತ ಪ್ರದರ್ಶನಗಳ ಮೂಲಕ ಭಾರತವು ಏಷ್ಯನ್ ಕ್ರೀಡಾಕೂಟದಲ್ಲಿ ತನ್ನ ಕಾರ್ಯಕ್ಷಮತೆಯನ್ನು ಕ್ರಮೇಣ ಹೆಚ್ಚಿಸಿಕೊಂಡಿದೆ. ದೇಶವು ಇಂಚಿಯಾನ್ 2014 ರಲ್ಲಿ 57 ಪದಕಗಳನ್ನು ಗೆದ್ದಿತು ಮತ್ತು ಜಕಾರ್ತ 2018 ರಲ್ಲಿ ಅದನ್ನು 69 ಕ್ಕೆ ಸುಧಾರಿಸಿಕೊಂಡಿತು. ಹ್ಯಾಂಗ್ಝೌ 2023 ಒಂದು ಮೈಲಿಗಲ್ಲು ಆವೃತ್ತಿಯಾಯಿತು, ಏಕೆಂದರೆ ಭಾರತವು ತನ್ನ ಸಾರ್ವಕಾಲಿಕ ಅತ್ಯಧಿಕ ಪದಕಗಳ ಸಂಖ್ಯೆಯಾದ 107 ಅನ್ನು ದಾಖಲಿಸಿತು. ನೀರಜ್ ಚೋಪ್ರಾ, ಲವ್ಲಿನಾ ಬೊರ್ಗೊಹೈನ್, ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಪ್ರಮುಖ ಕೊಡುಗೆ ನೀಡಿದವರಲ್ಲಿ ಸೇರಿದ್ದಾರೆ.
|
ವರ್ಷ
|
ಆತಿಥೇಯ ನಗರ
|
ಭಾರತೀಯ ಕ್ರೀಡಾಪಟುಗಳು
|
ಗೆದ್ದ ಒಟ್ಟು ಪದಕಗಳು
|
ಚಿನ್ನ
|
ಬೆಳ್ಳಿ
|
ಕಂಚು
|
|
2014
|
ಇಂಚಿಯಾನ್
|
541
|
57
|
11
|
9
|
37
|
|
2018
|
ಜಕಾರ್ತ
|
570
|
69
|
15
|
24
|
30
|
|
2023
|
ಹ್ಯಾಂಗ್ಝೌ
|
655
|
107
|
28
|
38
|
41
|
ಕಾಮನ್‌ವೆಲ್ತ್ ಕ್ರೀಡಾಕೂಟ
ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತವು ಅತ್ಯಂತ ಬಲವಾದ ಸಾಧನೆ ತೋರಿದ ದೇಶಗಳಲ್ಲಿ ಒಂದಾಗಿ ಮುಂದುವರಿದಿದೆ. ದೇಶವು ಗ್ಲ್ಯಾಸ್ಗೋ 2014 ರಲ್ಲಿ 64 ಪದಕಗಳನ್ನು ಗೆದ್ದಿತು ಮತ್ತು ಗೋಲ್ಡ್ ಕೋಸ್ಟ್ 2018 ರಲ್ಲಿ ಅದನ್ನು 66 ಕ್ಕೆ ಸುಧಾರಿಸಿಕೊಂಡಿತು. ಇದರ ಮುಂದುವರಿದ ಭಾಗವಾಗಿ ಭಾರತವು ಬರ್ಮಿಂಗ್ಹ್ಯಾಮ್ 2022 ರಲ್ಲಿ 61 ಪದಕಗಳನ್ನು ಗಳಿಸಿತು. ಕುಸ್ತಿ, ವೇಟ್‌ಲಿಫ್ಟಿಂಗ್, ಟೇಬಲ್ ಟೆನ್ನಿಸ್, ಬ್ಯಾಡ್ಮಿಂಟನ್ ಮತ್ತು ಅಥ್ಲೆಟಿಕ್ಸ್ ವಿಭಾಗಗಳು ಭಾರತದ ಯಶಸ್ಸಿಗೆ ನಿರಂತರವಾಗಿ ಕೊಡುಗೆ ನೀಡಿವೆ. ಪಿ.ವಿ. ಸಿಂಧು, ವಿನೇಶ್ ಫೋಗಟ್ ಮತ್ತು ಅಚಿಂತ ಶಿಯುಲಿ ಅವರು ದೇಶದ ಪ್ರಮುಖ ಸಾಧನೆ ಮಾಡಿದ ಕ್ರೀಡಾಪಟುಗಳಲ್ಲಿ ಸೇರಿದ್ದಾರೆ.
|
ವರ್ಷ
|
ಆತಿಥೇಯ ನಗರ
|
ಭಾರತೀಯ ಕ್ರೀಡಾಪಟುಗಳು
|
ಗೆದ್ದ ಒಟ್ಟು ಪದಕಗಳು
|
ಚಿನ್ನ
|
ಬೆಳ್ಳಿ
|
ಕಂಚು
|
|
2014
|
ಗ್ಲ್ಯಾಸ್ಗೋ (Glasgow)
|
215
|
64
|
15
|
30
|
19
|
|
2018
|
ಗೋಲ್ಡ್ ಕೋಸ್ಟ್
|
218
|
66
|
26
|
20
|
20
|
|
2022
|
ಬರ್ಮಿಂಗ್ಹ್ಯಾಮ್
|
210
|
61
|
22
|
16
|
23
|
ಭಾರತದ ಬೆಳೆಯುತ್ತಿರುವ ಜಾಗತಿಕ ಯಶಸ್ಸು ಅದರ ಕ್ರೀಡಾ ಪರಿಸರ ವ್ಯವಸ್ಥೆಯ ಬಲವನ್ನು ಮತ್ತು ವಿಶ್ವ ವೇದಿಕೆಯಲ್ಲಿ ಶ್ರೇಷ್ಠತೆಯನ್ನು ಮೆರೆಯಲು ಕ್ರೀಡಾಪಟುಗಳು ಹೊಂದಿರುವ ದೃಢಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ.
ಕಾಮನ್‌ವೆಲ್ತ್ ಗೇಮ್ಸ್ 2026

2026ರ ಕಾಮನ್‌ವೆಲ್ತ್ ಗೇಮ್ಸ್ ಜುಲೈ 23 ರಿಂದ ಆಗಸ್ಟ್ 2 ರವರೆಗೆ ಗ್ಲ್ಯಾಸ್ಗೋದಲ್ಲಿ ನಡೆಯುತ್ತಿವೆ. ಈ ಕ್ರೀಡಾಕೂಟವು ನಾಲ್ಕು ಸ್ಥಳಗಳಲ್ಲಿ ಆಯೋಜಿಸಲಾಗಿದ್ದು, ಆರು ಸಂಪೂರ್ಣವಾಗಿ ಸಂಯೋಜಿತ ಪ್ಯಾರಾ ಕ್ರೀಡೆಗಳು ಸೇರಿದಂತೆ 10 ಕ್ರೀಡಾ ಕಾರ್ಯಕ್ರಮಗಳಲ್ಲಿ 74 ದೇಶಗಳ ಕ್ರೀಡಾಪಟುಗಳನ್ನು ಒಂದೆಡೆ ಸೇರಿಸಿದೆ.
ಭಾರತದಿಂದ 78 ಪುರುಷ ಮತ್ತು 46 ಮಹಿಳಾ ಕ್ರೀಡಾಪಟುಗಳು ಸೇರಿದಂತೆ ಒಟ್ಟು 124 ಸದಸ್ಯರನ್ನೊಳಗೊಂಡ ತುಕಡಿಯು ಪ್ರತಿನಿಧಿಸುತ್ತಿದೆ. ಈ ತುಕಡಿಯು ಬಹು ಕ್ರೀಡಾ ವಿಭಾಗಗಳಲ್ಲಿ ದೇಶದ ಬೆಳೆಯುತ್ತಿರುವ ಪ್ರತಿಭೆಯ ಆಳವನ್ನು ಪ್ರತಿಬಿಂಬಿಸುತ್ತದೆ.
ಜುಲೈ 27, 2026 ರ ಹೊತ್ತಿಗೆ, ಭಾರತವು ಒಂದು ಚಿನ್ನ, ಎರಡು ಬೆಳ್ಳಿ ಮತ್ತು ಒಂದು ಕಂಚು ಸೇರಿದಂತೆ ಒಟ್ಟು ನಾಲ್ಕು ಪದಕಗಳನ್ನು ಗೆದ್ದಿದೆ. ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲಿ ಝಂಡು ಕುಮಾರ್ ಕಂಚಿನ ಪದಕ ಗೆಲ್ಲುವ ಮೂಲಕ ಭಾರತದ ಪದಕದ ಖಾತೆಯನ್ನು ತೆರೆದರು. ಪುರುಷರ 60 ಕೆಜಿ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಬೆಳ್ಳಿ ಗೆಲ್ಲುವ ಮೂಲಕ ರಿಷಿಕಾಂತ್ ಸಿಂಗ್ ಮೊದಲ ವಿಶೇಷಚೇತನರಲ್ಲದ ಭಾರತೀಯ ಪದಕ ವಿಜೇತರಾದರು. ಅವರು ಸ್ನ್ಯಾಚ್ ವಿಭಾಗದಲ್ಲಿ ಹೊಸ ಕಾಮನ್‌ವೆಲ್ತ್ ಗೇಮ್ಸ್ ದಾಖಲೆಯನ್ನು ಸಹ ನಿರ್ಮಿಸಿದರು.
ಗ್ಲ್ಯಾಸ್ಗೋದಲ್ಲಿ ಭಾರತದ ಮೊದಲ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಮೀರಾಬಾಯಿ ಚಾನು ಮತ್ತೊಂದು ಐತಿಹಾಸಿಕ ಕ್ಷಣವನ್ನು ತಂದುಕೊಟ್ಟರು. ಈ ಗೆಲುವಿನೊಂದಿಗೆ ಅವರು ಸತತ ಮೂರನೇ ಬಾರಿಗೆ ಕಾಮನ್‌ವೆಲ್ತ್ ಗೇಮ್ಸ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಮುತ್ತುಪಾಂಡಿ ರಾಜಾ ಕೂಡ ಪುರುಷರ 65 ಕೆಜಿ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತದ ಪದಕಗಳ ಸಂಖ್ಯೆಯನ್ನು ಹೆಚ್ಚಿಸಿದರು.
ಇನ್ನೂ ಹಲವು ಸ್ಪರ್ಧೆಗಳು ನಡೆಯಬೇಕಿರುವುದರಿಂದ, ಭಾರತೀಯ ಕ್ರೀಡಾಪಟುಗಳು ದೃಢನಿಶ್ಚಯ ಮತ್ತು ಆತ್ಮವಿಶ್ವಾಸದಿಂದ ಸ್ಪರ್ಧಿಸುವುದನ್ನು ಮುಂದುವರೆಸಿದ್ದಾರೆ. ಗ್ಲ್ಯಾಸ್ಗೋದಲ್ಲಿ ತ್ರಿವರ್ಣ ಧ್ವಜವು ಹೆಮ್ಮೆಯಿಂದ ಹಾರಾಡುತ್ತಿದ್ದಂತೆ, ದೇಶವು ಮತ್ತಷ್ಟು ಸ್ಮರಣೀಯ ಪ್ರದರ್ಶನಗಳಿಗಾಗಿ ಎದುರು ನೋಡುತ್ತಿದೆ.
ಕ್ರೀಡಾ ಶ್ರೇಷ್ಠತೆಯ ಅನ್ವೇಷಣೆ
ಭಾರತದ ಕ್ರೀಡಾ ಪಯಾಣವು ವೇಗವನ್ನು ಪಡೆದುಕೊಳ್ಳುತ್ತಲೇ ಇದೆ. ನಿರಂತರ ಹೂಡಿಕೆ, ಬಲವಾದ ಬೆಂಬಲ ವ್ಯವಸ್ಥೆಗಳು ಮತ್ತು ಕೇಂದ್ರೀಕೃತ ಕ್ರೀಡಾಪಟುಗಳ ಅಭಿವೃದ್ಧಿಯು ಯಶಸ್ಗಾಗಿ ಶಾಶ್ವತವಾದ ಬುನಾದಿಯನ್ನು ಸೃಷ್ಟಿಸುತ್ತಿವೆ. ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಹೆಚ್ಚುತ್ತಿರುವ ಭಾಗವಹಿಸುವಿಕೆ ಮತ್ತು ಸುಧಾರಿತ ಪ್ರದರ್ಶನಗಳು ಈ ಪ್ರಯತ್ನಗಳ ಪರಿಣಾಮವನ್ನು ಪ್ರತಿಬಿಂಬಿಸುತ್ತವೆ. 2026ರ ಕಾಮನ್‌ವೆಲ್ತ್ ಗೇಮ್ಸ್ ಇನ್ನೂ ನಡೆಯುತ್ತಿರುವುದರಿಂದ, ಭಾರತೀಯ ಕ್ರೀಡಾಪಟುಗಳು ದೃಢತೆ ಮತ್ತು ಹೆಮ್ಮೆಯಿಂದ ಸ್ಪರ್ಧಿಸುವುದನ್ನು ಮುಂದುವರೆಸಿದ್ದಾರೆ. ಪ್ರತಿ ಪ್ರದರ್ಶನವು ಮುಂದಿನ ಪಿಳಿಗೆಗೆ ದೊಡ್ಡ ಕನಸು ಕಾಣಲು ಮತ್ತು ಉನ್ನತ ಗುರಿಯನ್ನು ಹೊಂದಲು ಸ್ಫೂರ್ತಿ ನೀಡುತ್ತದೆ. ಭಾರತವು ಭವಿಷ್ಯದತ್ತ ನೋಡುತ್ತಿರುವಾಗ, ಚಾಂಪಿಯನ್‌ಗಳನ್ನು ನಿರ್ಮಿಸಲು ಮತ್ತು ವಿಶ್ವದ ಪ್ರಮುಖ ಕ್ರೀಡಾ ರಾಷ್ಟ್ರಗಳಲ್ಲಿ ತನ್ನ ಸ್ಥಾನವನ್ನು ಬಲಪಡಿಸಲು ರಾಷ್ಟ್ರವು ಬದ್ಧವಾಗಿದೆ.
References:
PIB Backgrounders:
Ministry of Youth Affairs and Sports
Ministry of Textiles
Commonwealth Sport:
The Making of a Sporting Nation
*****
(Explainer ID: 159346)
आगंतुक पटल : 17
Provide suggestions / comments