Rural Prosperity
ಸ್ಟಾರ್ಟ್-ಅಪ್ ವಿಲೇಜ್ ಎಂಟರ್‌ಪ್ರೆನ್ಯೂರ್‌ಶಿಪ್ ಪ್ರೋಗ್ರಾಂ
ತಳಮಟ್ಟದ ಉದ್ಯಮಶೀಲತೆಯ ಮೂಲಕ ಗ್ರಾಮೀಣ ಆರ್ಥಿಕತೆಗೆ ಉತ್ತೇಜನ
Posted On:
25 JUL 2026 10:02AM
|
ಸ್ಟಾರ್ಟ್-ಅಪ್ ವಿಲೇಜ್ ಎಂಟರ್‌ಪ್ರೆನ್ಯೂರ್‌ಶಿಪ್ ಪ್ರೋಗ್ರಾಂ ತರಬೇತಿ, ಹಣಕಾಸು ನೆರವು, ಮಾರ್ಗದರ್ಶನ ಮತ್ತು ಸಮುದಾಯ ನೇತೃತ್ವದ ಸಾಂಸ್ಥಿಕ ಬೆಂಬಲದ ಮೂಲಕ ಕೃಷಿಯೇತರ ಉದ್ಯಮಗಳನ್ನು ಬೆಂಬಲಿಸುತ್ತದೆ. ಜೂನ್ 30, 2026ರ ವೇಳೆಗೆ, ಎಸ್‌ವಿಇಪಿ ದೇಶಾದ್ಯಂತ 4.32 ಲಕ್ಷ ಗ್ರಾಮೀಣ ಉದ್ಯಮಗಳನ್ನು ಬೆಂಬಲಿಸಿದೆ. ಈ ಕಾರ್ಯಕ್ರಮವು ಸಾಮಾಜಿಕ ಒಳಗೊಳ್ಳುವಿಕೆ ಮತ್ತು ಉದ್ಯಮಶೀಲತಾ ಅವಕಾಶಗಳಿಗೆ ಸಮಾನ ಪ್ರವೇಶ ಕಲ್ಪಿಸುವುದರ ಮೇಲೆ ಬಲವಾದ ಗಮನಹರಿಸಿದೆ. ಸುಮಾರು ಶೇಕಡಾ 86ರಷ್ಟು ಉದ್ಯಮಿಗಳು ಎಸ್‌ಸಿ, ಎಸ್‌ಟಿ, ಅಲ್ಪಸಂಖ್ಯಾತ ಮತ್ತು ಒಬಿಸಿ ಸಮುದಾಯಗಳಿಗೆ ಸೇರಿದವರಾಗಿದ್ದಾರೆ. ಸ್ವಸಹಾಯ ಸಂಘಗಳು, ಸಿಆರ್‌ಪಿ-ಇಪಿಗಳು, ಬ್ಯಾಂಕ್ ಜೋಡಣೆಗಳು ಮತ್ತು ಪ್ರಧಾನಮಂತ್ರಿ ಮುದ್ರಾ ಯೋಜನೆಯಂತಹ ಯೋಜನೆಗಳ ಒಮ್ಮುಖದ ಮೂಲಕ ಎಸ್‌ವಿಇಪಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ. ಬಡತನ ನಿರ್ಮೂಲನೆ, ಸ್ಥಳೀಯ ಉದ್ಯೋಗ ಸೃಷ್ಟಿ ಮತ್ತು ಗ್ರಾಮೀಣ ಆರ್ಥಿಕ ಅಭಿವೃದ್ಧಿಗೆ ಎಸ್‌ವಿಇಪಿ ಒಂದು ಪರಿಣಾಮಕಾರಿ ತಳಮಟ್ಟದ ಮಾದರಿಯಾಗಿ ಹೊರಹೊಮ್ಮಿದೆ.
|
ಭಾರತದಲ್ಲಿ ಉದ್ಯಮ-ನೇತೃತ್ವದ ಗ್ರಾಮೀಣ ಪರಿವರ್ತನೆ
ಭಾರತವು ವಿಶ್ವದ ಮೂರನೇ ಅತಿ ದೊಡ್ಡ ಸ್ಟಾರ್ಟ್-ಅಪ್ ಪರಿಸರ ವ್ಯವಸ್ಥೆಯನ್ನು ಹೊಂದಿದೆ. ಇದು ಅನುಕೂಲಕರ ಸರ್ಕಾರದ ನೀತಿಗಳ ಬೆಂಬಲದೊಂದಿಗೆ ಬೆಳೆದುಬಂದಿದ್ದು, ಆರ್ಥಿಕತೆಯ ಬೆಳವಣಿಗೆಗೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಆದಾಗ್ಯೂ, ಹೆಚ್ಚಿನ ಭಾರತೀಯ ಸ್ಟಾರ್ಟ್-ಅಪ್ ಪರಿಸರ ವ್ಯವಸ್ಥೆಗಳು ನಗರ ಪ್ರದೇಶಗಳಲ್ಲಿಯೇ ನೆಲೆಗೊಂಡಿವೆ. ಆದ್ದರಿಂದ, ಗ್ರಾಮೀಣ ಪ್ರದೇಶಗಳಲ್ಲಿ ಉದ್ಯಮಶೀಲತೆ ಮತ್ತು ನಾವೀನ್ಯತೆಯನ್ನು ಉತ್ತೇಜಿಸಲು ಸರ್ಕಾರವು ಹಲವಾರು ಸೌಲಭ್ಯಗಳನ್ನು ಆರಂಭಿಸಿದೆ. ಅವುಗಳಲ್ಲಿ ಪ್ರಮುಖವಾದ ಒಂದು ಉಪಕ್ರಮವೆಂದರೆ ಸ್ಟಾರ್ಟ್-ಅಪ್ ವಿಲೇಜ್ ಎಂಟರ್‌ಪ್ರೆನ್ಯೂರ್‌ಶಿಪ್ ಪ್ರೋಗ್ರಾಂ (ಎಸ್‌ವಿಇಪಿ).
2016ರಲ್ಲಿ ಪ್ರಾರಂಭವಾದ ಎಸ್‌ವಿಇಪಿ, ದೀನ್ ದಯಾಳ್ ಅಂತ್ಯೋದಯ ಯೋಜನೆ - ರಾಷ್ಟ್ರೀಯ ಗ್ರಾಮೀಣ ಜೀವೋಪಾಯ ಮಿಷನ್‌ನ (ಡಿಎವೈ-ಎನ್‌ಆರ್‌ಎಳ್‌ಎಂ) ಉಪ-ಯೋಜನೆಯಾಗಿದೆ. ಈ ಕಾರ್ಯಕ್ರಮವು ಸ್ವಸಹಾಯ ಸಂಘಗಳು ಮತ್ತು ಅವುಗಳ ಕುಟುಂಬದ ಸದಸ್ಯರಿಗೆ ಕೃಷಿಯೇತರ ಕ್ಷೇತ್ರದಲ್ಲಿ ಸಣ್ಣ ಉದ್ಯಮಗಳನ್ನು ಸ್ಥಾಪಿಸಲು ಬೆಂಬಲ ನೀಡುತ್ತದೆ. ಇದು ಆರ್ಥಿಕ ನೆರವು, ಸಾಂಸ್ಥಿಕ ಬೆಂಬಲ, ವ್ಯಾಪಾರ ನಿರ್ವಹಣಾ ತರಬೇತಿ, ಮೃದು ಕೌಶಲ್ಯ ಅಭಿವೃದ್ಧಿ ಮತ್ತು ವ್ಯಾಪಾರ ಅಭಿವೃದ್ಧಿ ಸೇವೆಗಳನ್ನು ಒದಗಿಸುತ್ತದೆ. ಇದು ಗ್ರಾಮೀಣ ಪ್ರದೇಶಗಳಲ್ಲಿ ಸುಸ್ಥಿರ ಜೀವನೋಪಾಯ ಮತ್ತು ಸ್ವಯಂ ಉದ್ಯೋಗ ಅವಕಾಶಗಳನ್ನು ಉತ್ತೇಜಿಸುತ್ತದೆ.
ಎಸ್‌ವಿಇಪಿ ಬ್ಯಾಂಕಿಂಗ್ ಸಂಪರ್ಕಗಳಿಗೆ ಪ್ರವೇಶ ಕಲ್ಪಿಸುವುದಲ್ಲದೆ, ಸರ್ಕಾರದ ಇತರ ಯೋಜನೆಗಳೊಂದಿಗೆ ಒಮ್ಮುಖವಾಗಲು ಸಹಕರಿಸುತ್ತದೆ. ದೀರ್ಘಕಾಲೀನ ಆರ್ಥಿಕ ಬೆಳವಣಿಗೆ ಮತ್ತು ವ್ಯಾಪಕ ಸಾಮಾಜಿಕ ಪ್ರಯೋಜನಗಳನ್ನು ಸಾಧಿಸುವುದೇ ಇದರ ಕಾರ್ಯತಂತ್ರದ ಗಮನವಾಗಿದೆ. ಸ್ಥಳೀಯವಾಗಿ ಉದ್ಯಮಗಳಿಗೆ ಧನಸಹಾಯ ಮಾಡಲು ಮತ್ತು ಬೆಂಬಲಿಸಲು ಸಮುದಾಯ ಆಧಾರಿತ ನಿರ್ಧಾರ ಕೈಗೊಳ್ಳುವಿಕೆಯು ಎಸ್‌ವಿಇಪಿ ನ ಪ್ರಮುಖ ಲಕ್ಷಣವಾಗಿದೆ.

|
ದೀನ್ ದಯಾಳ್ ಅಂತ್ಯೋದಯ ಯೋಜನೆ - ರಾಷ್ಟ್ರೀಯ ಗ್ರಾಮೀಣ ಜೀವೋಪಾಯ ಮಿಷನ್
ದೀನ್ ದಯಾಳ್ ಅಂತ್ಯೋದಯ ಯೋಜನೆ - ರಾಷ್ಟ್ರೀಯ ಗ್ರಾಮೀಣ ಜೀವೋಪಾಯ ಮಿಷನ್ (ಡಿಎವೈ-ಎನ್‌ಆರ್‌ಎಳ್‌ಎಂ) ವಿಶ್ವದ ಅತಿ ದೊಡ್ಡ ಜೀವೋಪಾಯ ಉಪಕ್ರಮಗಳಲ್ಲಿ ಒಂದಾಗಿದೆ. ಇದು ಗ್ರಾಮೀಣ ಪ್ರದೇಶದ ಬಡ ಕುಟುಂಬಗಳನ್ನು, ಮುಖ್ಯವಾಗಿ ಮಹಿಳೆಯರನ್ನು ಸ್ವಸಹಾಯ ಸಂಘಗಳಾಗಿ ಸಂಘಟಿಸುತ್ತದೆ. ಅವರಿಗೆ ಸುಸ್ಥಿರ ಜೀವೋಪಾಯವನ್ನು ಒದಗಿಸುವುದು, ಹಣಕಾಸು ಸೇವೆಗಳಿಗೆ ಪ್ರವೇಶ ಕಲ್ಪಿಸುವುದು ಮತ್ತು ಕೌಶಲ್ಯ ಅಭಿವೃದ್ಧಿ ಮಾಡುವುದರ ಮೇಲೆ ಇದು ಗಮನಹರಿಸುತ್ತದೆ. 2026ರ ಜೂನ್ ಮಧ್ಯಭಾಗದ ವೇಳೆಗೆ, ಡಿಎವೈ-ಎನ್‌ಆರ್‌ಎಳ್‌ಎಂ ಅಡಿಯಲ್ಲಿ 10.29 ಕೋಟಿಗೂ ಹೆಚ್ಚು ಗ್ರಾಮೀಣ ಕುಟುಂಬಗಳನ್ನು ಸ್ವಸಹಾಯ ಸಂಘಗಳಾಗಿ ಸಂಘಟಿಸಲಾಗಿದೆ.
|
ಭಾರತದಾದ್ಯಂತ ಗ್ರಾಮೀಣ ಉದ್ಯಮಶೀಲತೆಯ ವಿಸ್ತರಣೆ
ಎಸ್‌ವಿಇಪಿ (ಸ್ಟಾರ್ಟ್-ಅಪ್ ವಿಲೇಜ್ ಎಂಟರ್‌ಪ್ರೆನ್ಯೂರ್‌ಶಿಪ್ ಪ್ರೋಗ್ರಾಂ) ಎಲ್ಲಾ ವಿಭಾಗಗಳನ್ನು ಒಳಗೊಳ್ಳುವ ಸಮಗ್ರ ವಿಧಾನವನ್ನು ಅಳವಡಿಸಿಕೊಂಡಿದ್ದು, ಮಹಿಳೆಯರು, ಅಂಚಿನಲ್ಲಿರುವ ಸಮುದಾಯಗಳು ಮತ್ತು ಸೀಮಿತ ಶಿಕ್ಷಣ ಪಡೆದ ವ್ಯಕ್ತಿಗಳನ್ನು ಬೆಂಬಲಿಸುವುದರ ಮೇಲೆ ವಿಶೇಷ ಗಮನಹರಿಸಿದೆ. ಕಾರ್ಯಕ್ರಮವು ಪ್ರಾರಂಭವಾದಾಗಿ Mಂದಿಂದ 2026ರ ಜೂನ್ 15ರ ವರೆಗೆ, ಇದು 4.32 ಲಕ್ಷಕ್ಕೂ ಹೆಚ್ಚು ಗ್ರಾಮೀಣ ಉದ್ಯಮಗಳನ್ನು ಬೆಂಬಲಿಸಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ಅಸ್ಸಾಂ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಮಧ್ಯಪ್ರದೇಶ ರಾಜ್ಯಗಳು ಅತಿ ಹೆಚ್ಚು ಉದ್ಯಮಗಳನ್ನು ಬೆಂಬಲಿಸಿರುವ ಮುಂಚೂಣಿ ರಾಜ್ಯಗಳಾಗಿವೆ.

|
ಸ್ವಸಹಾಯ ಸಂಘದ ಸದಸ್ಯೆಯಿಂದ ಗ್ರಾಮೀಣ ವ್ಯವಹಾರ ನಾಯಕಿಯವರೆಗೆ
ಮಹಾರಾಷ್ಟ್ರದ ಜಹಾನ್‌ಪುರದ ಶ್ರೀಮತಿ ಭಾಗ್ಯಶ್ರೀ ಲೋಂಡೆ ಅವರು 2014 ರಲ್ಲಿ ಸ್ವಸಹಾಯ ಸಂಘಕ್ಕೆ ಸೇರುವ ಮೂಲಕ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು. ಸ್ವಸಹಾಯ ಸಂಘ ಮತ್ತು ಗ್ರಾಮ ಸಂಘದ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಅವರ ನಾಯಕತ್ವ ಮತ್ತು ವ್ಯವಹಾರ ಕೌಶಲ್ಯಗಳು ಬಲಗೊಂಡವು. ಅವರು ಸಣ್ಣ ಪ್ರಮಾಣದಲ್ಲಿ ಮಸಾಲಾ, ಹಪ್ಪಡ ಮತ್ತು ಉಪ್ಪಿನಕಾಯಿಗಳನ್ನು ಉತ್ಪಾದಿಸುವ ಮೂಲಕ ತಮ್ಮ ಉದ್ಯಮಶೀಲತೆಯ ಪ್ರಯಾಣವನ್ನು ಆರಂಭಿಸಿದರು. ಎಸ್‌ವಿಇಪಿ ಅಡಿಯಲ್ಲಿ ದೊರೆತ 45,000 ರೂ.ಗಳ ಸಮುದಾಯ ಉದ್ಯಮ ನಿಧಿ ಸಾಲವು, ಸ್ಥಳೀಯವಾಗಿ ಲಭ್ಯವಿರುವ ಕಚ್ಚಾ ವಸ್ತುಗಳನ್ನು ಬಳಸಿ ಉತ್ಪಾದನೆಯನ್ನು ವಿಸ್ತರಿಸಲು ಅವರಿಗೆ ಸಹಾಯ ಮಾಡಿತು. 2019-20ರ ಮಹಾಲಕ್ಷ್ಮಿ ಸರಸ್‌ನಲ್ಲಿ ಅವರ ಉದ್ಯಮಶೀಲತೆಯ ಪ್ರಯತ್ನಗಳಿಗೆ ಮನ್ನಣೆ ಸಿಕ್ಕಿತು, ಅಲ್ಲಿ ಅವರು ಹತ್ತು ದಿನಗಳಲ್ಲಿ 5 ಲಕ್ಷ ರೂ.ಗಳ ಆದಾಯವನ್ನು ಗಳಿಸಿದರು.
ಕಲಿಯುವ ಮತ್ತು ಬೆಳೆಯುವ ಅವರ ಹಂಬಲವು ತಮ್ಮ ವ್ಯವಹಾರದ ಜ್ಞಾನ ಮತ್ತು ಕೌಶಲ್ಯಗಳನ್ನು ಉನ್ನತೀಕರಿಸಲು ಅವರಿಗೆ ಅನುವು ಮಾಡಿಕೊಟ್ಟಿತು. ಅವರು ತಮ್ಮ ಉದ್ಯಮವನ್ನು ನಿರ್ವಹಿಸುತ್ತಲೇ ಮುಕ್ತ ವಿಶ್ವವಿದ್ಯಾಲಯದ ಮೂಲಕ 10 ನೇ ತರಗತಿ ಶಿಕ್ಷಣವನ್ನು ಪೂರ್ಣಗೊಳಿಸಿದರು. ಎನ್‌ಆರ್‌ಎಳ್‌ಎಂ ಮತ್ತು ಕೃಷಿ ವಿಜ್ಞಾನ ಕೇಂದ್ರದ ಅಡಿಯಲ್ಲಿ ಪಡೆದ ತರಬೇತಿಯು ಅವರ ವ್ಯವಹಾರ ಸಾಕ್ಷರತೆ ಮತ್ತು ತಾಂತ್ರಿಕ ಸಾಮರ್ಥ್ಯಗಳನ್ನು ಹೆಚ್ಚಿಸಿತು. ಪರಿಣಾಮವಾಗಿ, ಅವರ ಉದ್ಯಮವು ಪ್ರತಿದಿನ ದೊಡ್ಡ ಪ್ರಮಾಣದಲ್ಲಿ ಉತ್ಪಾದನೆಯನ್ನು ಪ್ರಾರಂಭಿಸಿತು, ನಿಯಮಿತ ಆದಾಯವನ್ನು ಗಳಿಸಿಕೊಟ್ಟಿತು ಮತ್ತು ಗ್ರಾಮೀಣ ಮಹಿಳೆಯರಿಗೆ ಉದ್ಯೋಗ ಸೃಷ್ಟಿಸಿತು. ಉದ್ಯಮಶೀಲತೆ, ನಿರಂತರ ಕಲಿಕೆ ಮತ್ತು ಸಾಂಸ್ಥಿಕ ಬೆಂಬಲವು ಆಕಾಂಕ್ಷಿ ಮಹಿಳೆಯರನ್ನು ಯಶಸ್ವಿ ವ್ಯವಹಾರ ನಾಯಕಿಯರನ್ನಾಗಿ ಹೇಗೆ ಪರಿವರ್ತಿಸಬಲ್ಲುದು ಎಂಬುದನ್ನು ಅವರ ಈ ಪ್ರಯಾಣವು ತೋರಿಸಿಕೊಡುತ್ತದೆ.
|
ಎಸ್.ವಿ.ಇ.ಪಿ. (ಎಸ್‌ವಿಇಪಿ) ವಿಸ್ತರಣೆ ಮತ್ತು ಕೇಂದ್ರ ಸರ್ಕಾರದ ಬೆಂಬಲ
ಎಸ್.ವಿ.ಇ.ಪಿ. (ಎಸ್‌ವಿಇಪಿ) ಕಾರ್ಯಕ್ರಮದ ನಿರಂತರ ವಿಸ್ತರಣೆಯನ್ನು ಬೆಂಬಲಿಸಲು, ಸರ್ಕಾರವು ಫೆಬ್ರವರಿ 2026 ರವರೆಗೆ ಒಟ್ಟು ₹942.09 ಕೋಟಿ ಗಳ ಸಂಚಿತ ಕೇಂದ್ರ ಪಾಲನ್ನು ಬಿಡುಗಡೆ ಮಾಡಿದೆ.
ಕಾರ್ಯಕ್ರಮವು ಪ್ರಾರಂಭವಾದಾಗಿನಿಂದ (2016) ಜನವರಿ 2018 ರವರೆಗೆ ಬಿಡುಗಡೆ ಮಾಡಲಾದ ಸಂಚಿತ ₹112.39 ಕೋಟಿ ಗಳೊಂದಿಗೆ ಹೋಲಿಸಿದರೆ ಇದು ಸುಮಾರು 738% ರಷ್ಟು ಹೆಚ್ಚಾಗಿದೆ.

ಗ್ರಾಮೀಣ ಉದ್ಯಮಗಳನ್ನು ಪೋಷಿಸುವ ಮತ್ತು ವಿಸ್ತರಿಸುವ ಹಾದಿ
ರಾಜ್ಯ ಗ್ರಾಮೀಣ ಜೀವನೋಪಯೋಗ ಮಿಷನ್‌ಗಳ ಮೂಲಕ ಎಸ್.ವಿ.ಇ.ಪಿ. (ಎಸ್‌ವಿಇಪಿ) ಅನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಪ್ರತಿ ಬ್ಲಾಕ್‌ಗೆ ₹6.50 ಕೋಟಿ ಗಳ ನಿಧಿಯೋಜನೆ ಹಾಗೂ ಪ್ರತಿ ಉದ್ಯಮಕ್ಕೆ ಸರಾಸರಿ ₹27,083 ರಷ್ಟು ಬಂಡವಾಳ ಹೂಡಿಕೆಯ ಅವಕಾಶವನ್ನು ಕಲ್ಪಿಸಲಾಗಿದೆ.

ಬ್ಲಾಕ್ ಮಟ್ಟದಲ್ಲಿ, ಬ್ಲಾಕ್ ಸಂಪನ್ಮೂಲ ಕೇಂದ್ರಗಳು-ಉದ್ಯಮ ಉತ್ತೇಜನ ಕಾರ್ಯಕ್ರಮದ ಅನುಷ್ಠಾನವನ್ನು ಸಂಘಟಿಸುತ್ತವೆ. ತರಬೇತಿ ಪಡೆದ ಸಮುದಾಯ ಸಂಪನ್ಮೂಲ ವ್ಯಕ್ತಿಗಳು-ಉದ್ಯಮ ಉತ್ತೇಜನ ಉದ್ಯಮ ಉತ್ತೇಜನದ ಕುರಿತು ಬ್ಲಾಕ್ ಸಂಪನ್ಮೂಲ ಕೇಂದ್ರಗಳಿಗೆ ತಾಂತ್ರಿಕ ನೆರವು ನೀಡುತ್ತಾರೆ. ಅರ್ಹ ಉದ್ಯಮಿಗಳಿಗೆ ಬ್ಯಾಂಕ್‌ಗಳು ಆರ್ಥಿಕ ಬೆಂಬಲವನ್ನು ವಿಸ್ತರಿಸುತ್ತವೆ. ಸ್ವಸಹಾಯ ಸಂಘಗಳು ಮತ್ತು ಅವುಗಳ ಒಕ್ಕೂಟಗಳು ಸಂಭಾವ್ಯ ಉದ್ಯಮಿಗಳನ್ನು ಗುರುತಿಸಲು ಸಹಾಯ ಮಾಡುತ್ತವೆ. ಸಮುದಾಯ ಸಂಸ್ಥೆಗಳು ಉದ್ಯಮ ಸ್ಥಾಪನೆಗೆ ಅನುಕೂಲ ಕಲ್ಪಿಸುತ್ತವೆ ಮತ್ತು ಅಗತ್ಯ ಮಾರ್ಗದರ್ಶನ ಬೆಂಬಲವನ್ನು ಒದಗಿಸುತ್ತವೆ. ಅಲ್ಲದೆ, ಸಮುದಾಯ ಉದ್ಯಮ ನಿಧಿ ಮೂಲಕ ಸಾಲಗಳನ್ನು ನಿರ್ವಹಿಸುತ್ತವೆ. ಸಮುದಾಯ ಸಂಸ್ಥೆಗಳು ಉದ್ಯಮಗಳ ಕಾರ್ಯಕ್ಷಮತೆ ಮತ್ತು ಬೆಳವಣಿಗೆಯನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡುತ್ತವೆ. ಡಿಜಿಟಲ್ ಉಪಕರಣಗಳು ವ್ಯಾಪಾರ ಯೋಜನೆ, ಸಾಲ ಮೌಲ್ಯಮಾಪನ ಮತ್ತು ಉದ್ಯಮ ಟ್ರ್ಯಾಕಿಂಗ್ ಅನ್ನು ಬೆಂಬಲಿಸುತ್ತವೆ. ಈ ಸಮಗ್ರ ಕಾರ್ಯವಿಧಾನವು ಪರಿಣಾಮಕಾರಿ ಅನುಷ್ಠಾನ ಮತ್ತು ಉದ್ಯಮ ಅಭಿವೃದ್ಧಿಯನ್ನು ಖಚಿತಪಡಿಸುತ್ತದೆ.
ಪರೀಕ್ಷೆ, ತರಬೇತಿ ಮತ್ತು ಪ್ರಮಾಣೀಕರಣದ ಮೂಲಕ ರಾಜ್ಯ ಗ್ರಾಮೀಣ ಜೀವನೋಪಯೋಗ ಮಿಷನ್‌ಗಳು ಮತ್ತು ಯೋಜನೆ ಅನುಷ್ಠಾನ ಸಂಸ್ಥೆಗಳು ಜಂಟಿಯಾಗಿ ಸಿಆರ್‌ಪಿ-ಇಪಿಗಳನ್ನು ಆಯ್ಕೆ ಮಾಡುತ್ತವೆ. ಮೂಲಭೂತ ವ್ಯಾಪಾರ ಮತ್ತು ಗಣಿತ ಕೌಶಲ್ಯಗಳನ್ನು ಹೊಂದಿರುವ ಸ್ಥಳೀಯ ನಿವಾಸಿಗಳಿಗೆ ಆದ್ಯತೆ ನೀಡಲಾಗುತ್ತದೆ. ಕನಿಷ್ಠ 90% ರಷ್ಟು ಸಿಆರ್‌ಪಿ-ಇಪಿಗಳನ್ನು ಸ್ವಸಹಾಯ ಸಂಘದ ಕುಟುಂಬಗಳಿಂದ ಆಯ್ಕೆ ಮಾಡಲಾಗುತ್ತದೆ ಮತ್ತು ಈ ಸಿಬ್ಬಂದಿಯಲ್ಲಿ ಮಹಿಳೆಯರು ಕನಿಷ್ಠ 60% ರಷ್ಟಿರುತ್ತಾರೆ. ಪ್ರತಿಯೊಬ್ಬ ಸಿಆರ್‌ಪಿ-ಇಪಿಯು 50 ರಷ್ಟು ಉದ್ಯಮಗಳಿಗೆ ಮಾರ್ಗದರ್ಶನ, ತರಬೇತಿ ಮತ್ತು ಸಾಲ ಸೌಲಭ್ಯದ ಬೆಂಬಲವನ್ನು ಒದಗಿಸುತ್ತಾರೆ.
|
ಸ್ವಸಹಾಯ ಸಂಘದ ಸದಸ್ಯೆಯಿಂದ ಅತ್ಯುತ್ತಮ ಕಾರ್ಯಕ್ಷಮತೆಯ ಸಿಆರ್‌ಪಿ-ಇಪಿ ವರೆಗೆ
ಉತ್ತರ ಪ್ರದೇಶದ ಶ್ರೀಮತಿ ಪೂನಮ್ ಅವರು ಸಾಮಾಜಿಕ ಮತ್ತು ಆರ್ಥಿಕ ತಡೆಗೋಡೆಗಳನ್ನು ಮೀರಿ ಯಶಸ್ವಿ ಸಿಆರ್‌ಪಿ-ಇಪಿಆದರು. ಸ್ವಸಹಾಯ ಸಂಘಕ್ಕೆ ಸೇರಿದ ನಂತರ, ಅವರಿಗೆ ಎಸ್‌ವಿಇಪಿ ಪರಿಚಯವಾಯಿತು ಮತ್ತು ಅವರು 54 ದಿನಗಳ ಸಿಆರ್‌ಪಿ-ಇಪಿತರಬೇತಿ ಕಾರ್ಯಕ್ರಮವನ್ನು ಪೂರ್ಣಗೊಳಿಸಿದರು. ಈ ತರಬೇತಿಯು ಉದ್ಯಮ ಉತ್ತೇಜನ ಮತ್ತು ಜೀವನೋಪಯೋಗಿ ಅಭಿವೃದ್ಧಿಯಲ್ಲಿ ಅವರಿಗೆ ಅಗತ್ಯ ಕೌಶಲ್ಯಗಳನ್ನು ನೀಡಿತು.
ತರಬೇತಿ ಪೂರ್ಣಗೊಂಡ ನಂತರ, ಅವರು ವ್ಯಾಪಾರ ಯೋಜನೆಗೆ ಸಹಾಯ ಮಾಡುವುದು, ಸಾಲ ಸೌಲಭ್ಯ ಕಲ್ಪಿಸುವುದು, ಮಾರುಕಟ್ಟೆ ಸಂಪರ್ಕಗಳನ್ನು ಸ್ಥಾಪಿಸುವುದು ಮತ್ತು ನಿರಂತರ ಮಾರ್ಗದರ್ಶನ ನೀಡುವ ಮೂಲಕ ಸುಮಾರು 40 ಉದ್ಯಮಗಳಿಗೆ ಬೆಂಬಲ ನೀಡಲು ಪ್ರಾರಂಭಿಸಿದರು. ತಮ್ಮ ಆರ್ಥಿಕ ಸ್ವಾತಂತ್ರ್ಯಕ್ಕೆ ಎಸ್‌ವಿಇಪಿ ಕಾರಣ ಎಂದು ಪೂನಮ್ ಹೆಮ್ಮೆಯಿಂದ ಸ್ಮರಿಸುತ್ತಾರೆ ಮತ್ತು ಇತರರಿಗೆ ತಮ್ಮ ವ್ಯವಹಾರಗಳನ್ನು ಸ್ಥಾಪಿಸಲು ಹಾಗೂ ಬೆಳೆಸಲು ಸಹಾಯ ಮಾಡಲು ದೊರೆತ ಅವಕಾಶವನ್ನು ಗೌರವಿಸುತ್ತಾರೆ. ಸಮುದಾಯ ಆಧಾರಿತ ಸಂಸ್ಥೆಗಳು ಮತ್ತು ಉದ್ಯಮಶೀಲತೆಯ ಬೆಂಬಲವು ಗ್ರಾಮೀಣ ಜೀವನೋಪಯೋಗವನ್ನು ಹೇಗೆ ಬಲಪಡಿಸುತ್ತದೆ ಮತ್ತು ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಹೇಗೆ ಮುನ್ನಡೆಸುತ್ತದೆ ಎಂಬುದನ್ನು ಅವರ ಈ ಪ್ರಯಾಣವು ಪ್ರತಿಬಿಂಬಿಸುತ್ತದೆ.
|
ಸಮುದಾಯದ ಸಂಸ್ಥೆಗಳು ಅಗತ್ಯತೆ, ಬಡತನದ ಸ್ಥಿತಿ ಮತ್ತು ಉದ್ಯಮಶೀಲತೆಯ ಸಾಮರ್ಥ್ಯದ ಆಧಾರದ ಮೇಲೆ ಉದ್ಯಮಶೀಲರನ್ನು ಗುರುತಿಸುತ್ತವೆ. ಉದ್ಯಮದ ಕಾರ್ಯಸಾಧ್ಯತೆಯ ಮೌಲ್ಯಮಾಪನದ ನಂತರ ಫಲಾನುಭವಿಗಳು ತರಬೇತಿ, ಮಾರ್ಗದರ್ಶನ ಮತ್ತು ಆರ್ಥಿಕ ಬೆಂಬಲವನ್ನು ಪಡೆಯುತ್ತಾರೆ, ಹಾಗೂ ಅಂತಿಮ ಸಾಲದ ಅನುಮೋದನೆಯನ್ನು ಸಮುದಾಯ-ಆಧಾರಿತ ಸಂಸ್ಥೆಗಳು ಒದಗಿಸುತ್ತವೆ. ಈ ಕಾರ್ಯಕ್ರಮವು ಕನಿಷ್ಠ ಶೇಕಡಾ 60ರಷ್ಟು ಫಲಾನುಭವಿಗಳು ಮಹಿಳೆಯರಾಗಿರಬೇಕೆಂದು ಕಡ್ಡಾಯಗೊಳಿಸುತ್ತದೆ, ಜೊತೆಗೆ ವಿಕಲಚೇತನರು ಹಾಗೂ ಎಸ್‌ಸಿ/ಎಸ್‌ಟಿ/ಅಲ್ಪಸಂಖ್ಯಾತ ಸಮುದಾಯಗಳ ಪ್ರತಿನಿಧಿತ್ವವನ್ನು ಖಚಿತಪಡಿಸುತ್ತದೆ.
ಎಸ್‌ವಿಇಪಿ (ಸ್ಟಾರ್ಟ್‌ಅಪ್ ವಿಲೇಜ್ ಎಂಟರ್‌ಪ್ರೆನ್ಯೂರ್‌ಶಿಪ್ ಪ್ರೋಗ್ರಾಂ) ಅನ್ನು ತ್ರೈಮಾಸಿಕ ವಿಮರ್ಶೆಗಳು ಮತ್ತು ಆವರ್ತಕ ಮೌಲ್ಯಮಾಪನಗಳ ಮೂಲಕ ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತದೆ. ಉದ್ಯಮದ ಕಾರ್ಯಕ್ಷಮತೆ, ನಿಧಿಯ ಬಳಕೆ ಮತ್ತು ಕಾರ್ಯಕ್ರಮದ ಪ್ರಗತಿಯನ್ನು ಟ್ರ್ಯಾಕ್ ಮಾಡಲು ಕೇಂದ್ರೀಕೃತ ಎಂಐಎಸ್ ವ್ಯವಸ್ಥೆಯಿದೆ.
ಗ್ರಾಮೀಣ ಜೀವನೋಪಾಯ ಮತ್ತು ಉದ್ಯಮಶೀಲತೆಯ ಮೇಲೆ ಎಸ್‌ವಿಇಪಿ ನ ಪ್ರಭಾವ
ಗ್ರಾಮೀಣಾಭಿವೃದ್ಧಿ ಸಚಿವಾಲಯಕ್ಕಾಗಿ ಎಸ್‌ವಿಇಪಿ ನ ಮಧ್ಯಂತರ ಮೌಲ್ಯಮಾಪನವನ್ನು ಭಾರತೀಯ ಗುಣಮಟ್ಟ ಮಂಡಳಿ (QCI) ನಡೆಸಿತು, ಇದರ ಪ್ರಮುಖ ಕ್ಷೇತ್ರ ಮೌಲ್ಯಮಾಪನಗಳನ್ನು 2019 ರಲ್ಲಿ ಕೈಗೊಳ್ಳಲಾಯಿತು. ಈ ವಿಮರ್ಶೆಯು ಗ್ರಾಮೀಣ ಉದ್ಯಮಗಳು, ಜೀವನೋಪಾಯ ಮತ್ತು ಸಾಮಾಜಿಕ ಒಳಗೊಳ್ಳುವಿಕೆಯ ಮೇಲೆ ಕಾರ್ಯಕ್ರಮದ ಪ್ರಭಾವವನ್ನು ಮೌಲ್ಯಮಾಪನ ಮಾಡಿದೆ.
ಆದಾಯ ಗಳಿಕೆ, ಉದ್ಯಮ ಅಭಿವೃದ್ಧಿ ಮತ್ತು ದುರ್ಬಲ ಸಮುದಾಯಗಳ ಸಬಲೀಕರಣದಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ಈ ಸಂಶೋಧನೆಗಳು ಸೂಚಿಸುತ್ತವೆ.
- ಎಸ್‌ವಿಇಪಿ-ಬೆಂಬಲಿತ ಉದ್ಯಮಗಳಲ್ಲಿ ಶೇಕಡಾ 99ರಷ್ಟು ಉದ್ಯಮಗಳು ಲಾಭದಾಯಕವಾಗಿದ್ದವು.
- ಎಸ್‌ವಿಇಪಿ ಉದ್ಯಮಗಳು ಒಟ್ಟು ಕುಟುಂಬದ ಆದಾಯಕ್ಕೆ ಶೇಕಡಾ 57ರಷ್ಟು ಕೊಡುಗೆ ನೀಡಿವೆ.
- ಸರಾಸರಿ ಮಾಸಿಕ ಉದ್ಯಮದ ಆದಾಯವು ಸುಮಾರು ರೂ. 39,000 ಇತ್ತು.
- ಉತ್ಪಾದನಾ (ಮ್ಯಾನುಫ್ಯಾಕ್ಚರಿಂಗ್) ಉದ್ಯಮಗಳು ತಿಂಗಳಿಗೆ ರೂ. 47,800 ರಷ್ಟು ಅತ್ಯಧಿಕ ಸರಾಸರಿ ಆದಾಯವನ್ನು ದಾಖಲಿಸಿವೆ.
- ಶೇಕಡಾ 96ರಷ್ಟು ಉದ್ಯಮಿಗಳು ತಮ್ಮ ಉಳಿತಾಯ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.
- ಶೇಕಡಾ 75ರಷ್ಟು ಉದ್ಯಮಗಳು ಮಹಿಳೆಯರ ಮಾಲೀಕತ್ವದಲ್ಲಿದ್ದವು ಅಥವಾ ಅವರೇ ನಿರ್ವಹಿಸುತ್ತಿದ್ದರು.
ಎಸ್‌ವಿಇಪಿ ಉದ್ಯಮಿಗಳಿಗೆ ಅವರ ಆರಂಭಿಕ ಆಕಾಂಕ್ಷೆಗಳಿಗಿಂತ ಹೆಚ್ಚಿನ ಆದಾಯವನ್ನು ಗಳಿಸಲು ಸಹಾಯ ಮಾಡಿದೆ. ಹಣಕಾಸಿನ ಸುಧಾರಿತ ಪ್ರವೇಶವು ಉದ್ಯಮಿಗಳಿಗೆ ಉದ್ಯಮಗಳನ್ನು ಸ್ಥಾಪಿಸಲು ಮತ್ತು ಬೆಳೆಸಲು ಅನುವು ಮಾಡಿಕೊಟ್ಟಿತು. ನಿರಂತರ ಮಾರ್ಗದರ್ಶನವು ಉದ್ಯಮ ನಿರ್ವಹಣೆ ಮತ್ತು ಸುಸ್ಥಿರತೆಯನ್ನು ಬಲಪಡಿಸಿತು.
ಅಲ್ಲದೆ, ಮಹಿಳೆಯರು ಮತ್ತು ಹಿಂದುಳಿದ ಸಮುದಾಯಗಳು ಪ್ರಥಮ ಪೀಳಿಗೆಯ ಉದ್ಯಮಿಗಳಾಗಲು ಎಸ್‌ವಿಇಪಿ ಪ್ರೋತ್ಸಾಹಿಸಿದೆ. ಫಲಾನುಭವಿಗಳು ತಮ್ಮ ಆತ್ಮವಿಶ್ವಾಸ ಮತ್ತು ಜೀವನೋಪಾಯದ ಭದ್ರತೆಯಲ್ಲಿ ಸುಧಾರಣೆಯಾಗಿದೆ ಎಂದು ತಿಳಿಸಿದ್ದಾರೆ. ಅನೇಕ ಕುಟುಂಬಗಳು ಉತ್ತಮ ಶಿಕ್ಷಣ, ಪೌಷ್ಟಿಕಾಂಶ, ಆರೋಗ್ಯ ಮತ್ತು ನೈರ್ಮಲ್ಯದ ಫಲಿತಾಂಶಗಳನ್ನು ಅನುಭವಿಸಿವೆ. ಉದ್ಯಮಿಗಳು ಬಲವಾದ ವ್ಯಾಪಾರ ನಿರ್ವಹಣೆ ಮತ್ತು ಆರ್ಥಿಕ ಕೌಶಲ್ಯಗಳನ್ನು ಪಡೆದುಕೊಂಡರು. ಹೆಚ್ಚಿದ ಉಳಿತಾಯ ಮತ್ತು ಮರುಹೂಡಿಕೆಯು ದೀರ್ಘಕಾಲೀನ ಉದ್ಯಮ ಬೆಳವಣಿಗೆಗೆ ಬೆಂಬಲ ನೀಡಿತು. ಈ ಕಾರ್ಯಕ್ರಮವು ಸಮುದಾಯಗಳಲ್ಲಿ ಫಲಾನುಭವಿಗಳ ಸಾಮಾಜಿಕ ಸ್ಥಾನಮಾನವನ್ನೂ ಹೆಚ್ಚಿಸಿದೆ.
References
Ministry of Rural Development
https://svep.nrlm.gov.in/landing
https://svep.nrlm.gov.in/pdf/Final_Mid_Term_Report.pdf
https://nrlm.gov.in/dashboardForOuter.do?methodName=dashboard
https://lakhpatididi.gov.in/wp-content/uploads/2024/02/SVEP_updated_Master_Circular.pdf
https://sansad.in/getFile/loksabhaquestions/annex/13/AU2824.pdf?source=pqals
https://www.pib.gov.in/PressReleaseIframePage.aspx?PRID=1651525®=48&lang=2
https://sansad.in/getFile/loksabhaquestions/annex/187/AU3940_Wamd8p.pdf?source=pqals
Ministry of Commerce
https://www.ibef.org/blogs/svep-start-up-village-entrepreneurship-programme
Government of Nagaland
https://nsrlm.nagaland.gov.in/wp-content/uploads/2020/07/guidelines-CRP-EP.pdf
PIB Backgrounders
https://www.pib.gov.in/PressReleasePage.aspx?PRID=2195990®=3&lang=1
https://www.pib.gov.in/PressReleasePage.aspx?PRID=2267960®=3&lang=1
https://www.pib.gov.in/FeaturesDeatils.aspx?NoteId=156719&ModuleId=2®=3&lang=1
Click to See PDF
*****
(Explainer ID: 159327)
आगंतुक पटल : 8
Provide suggestions / comments