• Sitemap
  • Advance Search
Farmer's Welfare

ಮಣ್ಣನ್ನು ಉಳಿಸಿ, ಕೃಷಿಯನ್ನು ಸುರಕ್ಷಿತಗೊಳಿಸಿ

"ಪ್ರತಿಯೊಂದು ಬೆಳೆಯ ಕೆಳಗೆ ಆರೋಗ್ಯಕರ ಮಣ್ಣು ಅಡಗಿರುತ್ತದೆ"

Posted On: 24 JUL 2026 11:49AM

ಮಣ್ಣು ಭಾರತದಲ್ಲಿ ಕೃಷಿ ಉತ್ಪಾದಕತೆ, ಆಹಾರ ಭದ್ರತೆ ಮತ್ತು ಗ್ರಾಮೀಣರ ಜೀವನಾಧಾರವನ್ನು ಬೆಂಬಲಿಸುವ ಒಂದು ಪ್ರಮುಖ ರಾಷ್ಟ್ರೀಯ ಸಂಪನ್ಮೂಲವಾಗಿದೆ. ಮಣ್ಣು ಪರೀಕ್ಷೆ, ಸಮತೋಲಿತ ಪೋಷಕಾಂಶಗಳ ಬಳಕೆ ಮತ್ತು ಹವಾಮಾನ-ಸ್ಥಿತಿಸ್ಥಾಪಕ ಕೃಷಿ ಪದ್ಧತಿಗಳ ಮೂಲಕ ವೈಜ್ಞಾನಿಕ ಮಣ್ಣಿನ ನಿರ್ವಹಣೆಯನ್ನು ರಾಷ್ಟ್ರೀಯ ಉಪಕ್ರಮಗಳು ಪ್ರೋತ್ಸಾಹಿಸುತ್ತಿವೆ. 'ಮಣ್ಣಿನ ಆರೋಗ್ಯ ಕಾರ್ಡ್ ಯೋಜನೆ'ಯು 25.89 ಕೋಟಿಗೂ ಹೆಚ್ಚು ಕಾರ್ಡ್‌ಗಳನ್ನು ಸೃಷ್ಟಿಸಿದ್ದು, ಪೋಷಕಾಂಶಗಳ ಸಮರ್ಪಕ ನಿರ್ವಹಣೆಗೆ ನೆರವಾಗಿದೆ. 'ನೈಸರ್ಗಿಕ ಕೃಷಿಯ ರಾಷ್ಟ್ರೀಯ ಮಿಷನ್' 18,786 ಕ್ಲಸ್ಟರ್‌ಗಳಿಗೆ ವಿಸ್ತರಿಸಿದ್ದು, 8.80 ಲಕ್ಷ ಹೆಕ್ಟೇರ್ ಪ್ರದೇಶವನ್ನು ಒಳಗೊಂಡಿದೆ. 'ಖೇತ್ ಬಚಾವೋ ಅಭಿಯಾನ' ಸೇರಿದಂತೆ ಸಾರ್ವಜನಿಕ ಜಾಗೃತಿ ಪ್ರಯತ್ನಗಳು ಸುಸ್ಥಿರ ಪದ್ಧತಿಗಳ ವ್ಯಾಪಕ ಬಳಕೆಯನ್ನು ಉತ್ತೇಜಿಸುತ್ತಿವೆ. ಡಿಜಿಟಲ್ ವೇದಿಕೆಗಳು, ಜಿಯೋಸ್ಪೇಷಿಯಲ್ (ಭೌಗೋಳಿಕ ಸ್ಥಳ ನಿರ್ದೇಶನ) ಮ್ಯಾಪಿಂಗ್ ಮತ್ತು ಕೃತಕ ಬುದ್ಧಿಮತ್ತೆಯು ಮಣ್ಣಿನ ಮೌಲ್ಯಮಾಪನ ಹಾಗೂ ಸಲಹಾ ಸೇವೆಗಳನ್ನು ಸುಧಾರಿಸುತ್ತಿದ್ದು, ಉತ್ಪಾದಕತೆ, ಸ್ಥಿತಿಸ್ಥಾಪಕತ್ವ ಮತ್ತು ದೀರ್ಘಕಾಲೀನ ಕೃಷಿ ಸುಸ್ಥಿರತೆಯನ್ನು ಬಲಪಡಿಸುತ್ತಿವೆ.

ಮಣ್ಣು ಒಂದು ಆಪರೇಷನಲ್ ಅಥವಾ ವ್ಯೂಹಾತ್ಮಕ ರಾಷ್ಟ್ರೀಯ ಸಂಪನ್ಮೂಲವಾಗಿ

ಮಣ್ಣು ಭಾರತದ ಕೃಷಿ ವ್ಯವಸ್ಥೆಗಳ ಮೂಲಾಧಾರವಾಗಿದೆ; ಇದು ಬೆಳೆ ಉತ್ಪಾದನೆಯನ್ನು ಬೆಂಬಲಿಸುತ್ತದೆ, ಪರಿಸರ ವ್ಯವಸ್ಥೆಗಳನ್ನು ಕಾಪಾಡುತ್ತದೆ ಮತ್ತು ಜೀವನಾಧಾರವನ್ನು ಭದ್ರಪಡಿಸುತ್ತದೆ. ಶೇ. 46 ಕ್ಕಿಂತ ಹೆಚ್ಚು ಶ್ರಮಿಕರು ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪರಿಣಾಮವಾಗಿ, ಮಣ್ಣಿನ ಆರೋಗ್ಯವು ಗ್ರಾಮೀಣ ಆದಾಯ, ಆಹಾರ ವ್ಯವಸ್ಥೆಗಳು ಮತ್ತು ಒಟ್ಟಾರೆ ಆರ್ಥಿಕ ಸ್ಥಿರತೆಯ ಮೇಲೆ ನೇರ ಪ್ರಭಾವ ಬೀರುತ್ತದೆ.

ಭೂ ಬಳಕೆ ಅಂಕಿಅಂಶಗಳು 2022-23 ರ ಪ್ರಕಾರ, ಭಾರತದ ಒಟ್ಟು ವರದಿ ಮಾಡಲಾದ ವಿಸ್ತೀರ್ಣವು 306.65 ಮಿಲಿಯನ್ ಹೆಕ್ಟೇರ್ ಆಗಿದೆ, ಇದರಲ್ಲಿ ಸುಮಾರು ಶೇ. 59 ರಷ್ಟು ಭಾಗವು ಕೃಷಿಯಲ್ಲಿದೆ. ಇದು ಉತ್ಪಾದಕತೆಯನ್ನು ಕಾಯ್ದುಕೊಳ್ಳುವಲ್ಲಿ ಮತ್ತು ಬೆಳೆಯುತ್ತಿರುವ ಜನಸಂಖ್ಯೆಯ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸುವಲ್ಲಿ ಮಣ್ಣಿನ ನಿರ್ಣಾಯಕ ಪಾತ್ರವನ್ನು ಉಲ್ಲೇಖಿಸುತ್ತದೆ. ಆರೋಗ್ಯಕರ ಮಣ್ಣು ಹೆಚ್ಚಿನ ಇಳುವರಿಯನ್ನು ಸಕ್ರಿಯಗೊಳಿಸುತ್ತದೆ ಮತ್ತು ಬಾಹ್ಯ ಇನ್‌ಪುಟ್‌ಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ಈ ಸಂದರ್ಭದಲ್ಲಿ, ಸುಸ್ಥಿರ ಅಭಿವೃದ್ಧಿ ಗುರಿಗಳು (SDGs) 2030 ಅನ್ನು ಸಾಧಿಸಲು ಮಣ್ಣಿನ ಭದ್ರತೆ ಮತ್ತು ಸುಸ್ಥಿರತೆಯು ಅತ್ಯಗತ್ಯ. ಇದು ಹಸಿವು ಮುಕ್ತ (SDG 2) ಮತ್ತು ಹವಾಮಾನ ಕ್ರಿಯೆಗೆ (SDG 13) ಸಂಬಂಧಿಸಿದ ಗುರಿಗಳಿಗೆ ವಿಶೇಷವಾಗಿ ಮುಖ್ಯವಾಗಿದೆ.

ಈ ವ್ಯೂಹಾತ್ಮಕ ಪ್ರಾಮುಖ್ಯತೆಯನ್ನು ಗುರುತಿಸಿ, ಭಾರತವು ಸುಸ್ಥಿರ ಮಣ್ಣು ಮತ್ತು ಭೂ ನಿರ್ವಹಣೆಯ ಮೇಲೆ ತನ್ನ ಗಮನವನ್ನು ವಿಸ್ತರಿಸಿದೆ. ರಾಷ್ಟ್ರೀಯ ಪ್ರಯತ್ನಗಳು ಹವಾಮಾನ ಸ್ಥಿತಿಸ್ಥಾಪಕತ್ವ, ನೈಸರ್ಗಿಕ ಕೃಷಿ, ಮಣ್ಣಿನ ಮ್ಯಾಪಿಂಗ್ ಮತ್ತು ಡಿಜಿಟಲ್ ಕೃಷಿಯನ್ನು ಒಳಗೊಂಡಿವೆ. ಸುಸ್ಥಿರ ಕೃಷಿಗಾಗಿ ರಾಷ್ಟ್ರೀಯ ಮಿಷನ್ ಮತ್ತು ನೈಸರ್ಗಿಕ ಕೃಷಿಯ ರಾಷ್ಟ್ರೀಯ ಮಿಷನ್ ನಂತಹ ಉಪಕ್ರಮಗಳು ಸ್ಥಿತಿಸ್ಥಾಪಕ ಮತ್ತು ಸಂಪನ್ಮೂಲ-ಸಮರ್ಥ ಕೃಷಿ ಪದ್ಧತಿಗಳನ್ನು ಉತ್ತೇಜಿಸುತ್ತವೆ. ಮಣ್ಣಿನ ಆರೋಗ್ಯ ಕಾರ್ಡ್ ಯೋಜನೆಯು ಮಣ್ಣು ಪರೀಕ್ಷೆ ಮತ್ತು ಸಲಹಾ ಸೇವೆಗಳ ಮೂಲಕ ತಿಳಿವಳಿಕೆಯುಳ್ಳ ಪೋಷಕಾಂಶಗಳ ಅನ್ವಯಿಕತೆಯನ್ನು ಮತ್ತಷ್ಟು ಬೆಂಬಲಿಸುತ್ತದೆ. ಈ ಪ್ರಯತ್ನಗಳು ಸಾಂಪ್ರದಾಯಿಕ ಕೃಷಿ ಪದ್ಧತಿಗಳಿಂದ ಆಧುನಿಕ ವೈಜ್ಞಾನಿಕ ವಿಧಾನಗಳಿಗೆ ವಿಕಸನಗೊಳ್ಳುತ್ತಿರುವ ಮಣ್ಣು ವಿಜ್ಞಾನದ ಪ್ರಯಾಣವನ್ನು ಪ್ರತಿಬಿಂಬಿಸುತ್ತವೆ.

ಸಾಂಸ್ಥಿಕ ಮಧ್ಯಸ್ಥಿಕೆಗಳ ಜೊತೆಗೆ, "ಖೇತ್ ಬಚಾವೋ ಅಭಿಯಾನ" ದಂತಹ ಇತ್ತೀಚಿನ ಜಾಗೃತಿ ಉಪಕ್ರಮಗಳು ಸಾರ್ವಜನಿಕ ಒಳಗೊಳ್ಳುವಿಕೆಯನ್ನು ಬಲಪಡಿಸುತ್ತಿವೆ. ಇದು ಮಣ್ಣಿನ ಸಂರಕ್ಷಣೆ, ರಸಗೊಬ್ಬರಗಳ ಸಮತೋಲಿತ ಬಳಕೆ ಮತ್ತು ಸುಸ್ಥಿರ ಕೃಷಿ ಪದ್ಧತಿಗಳಿಗೆ ಸಹಾಯ ಮಾಡುತ್ತಿದೆ.

ಮಣ್ಣಿನ ವೈವಿಧ್ಯತೆ: ಕೃಷಿ ಶಕ್ತಿಯ ಅಡಿಪಾಯ ಭಾರತದ ವೈವಿಧ್ಯಮಯ ಹವಾಮಾನ, ಭೂವಿಜ್ಞಾನ ಮತ್ತು ಭೂರೂಪವು ಪ್ರದೇಶ-ನಿರ್ದಿಷ್ಟ ಕೃಷಿ ಪದ್ಧತಿಗಳನ್ನು ಬೆಂಬಲಿಸುವ ವ್ಯಾಪಕ ಶ್ರೇಣಿಯ ಮಣ್ಣುಗಳಿಗೆ ಕಾರಣವಾಗಿದೆ. ಈ ಮಣ್ಣುಗಳು ಸಂಯೋಜನೆ ಮತ್ತು ಫಲವತ್ತತೆಯಲ್ಲಿ ಭಿನ್ನವಾಗಿರುತ್ತವೆ, ಇದು ವೈವಿಧ್ಯಮಯ ಬೆಳೆ ಮಾದರಿಗಳನ್ನು ಸಕ್ರಿಯಗೊಳಿಸುತ್ತದೆ ಮತ್ತು ಪ್ರದೇಶಗಳಾದ್ಯಂತ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸುತ್ತದೆ.

ಇಂಡೋ-ಗಂಗಾ ಮತ್ತು ಬ್ರಹ್ಮಪುತ್ರ ಮೈದಾನಗಳು ಹಾಗೂ ಮಹಾನದಿ, ಕೃಷ್ಣಾ ಮತ್ತು ಗೋದಾವರಿಯಂತಹ ನದಿಗಳ ಡೆಲ್ಟಾಗಳಲ್ಲಿ ಮೆಕ್ಕಲು ಮಣ್ಣು ಕಂಡುಬರುತ್ತದೆ. ಇದು ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಬಿಹಾರ, ಅಸ್ಸಾಂ, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಆಂಧ್ರಪ್ರದೇಶ ರಾಜ್ಯಗಳನ್ನು ಒಳಗೊಂಡಿದೆ. ಈ ಮಣ್ಣುಗಳು ಫಲವತ್ತಾಗಿರುತ್ತವೆ ಮತ್ತು ನದಿ ಬಯಲುಗಳಲ್ಲಿ ವ್ಯಾಪಕವಾಗಿ ಹರಡಿವೆ. ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಗುಜರಾತಿನಲ್ಲಿರುವ ಕಪ್ಪು ಮಣ್ಣು ಜೇಡಿಮಣ್ಣಿನಿಂದ ಕೂಡಿದ್ದು, ತೇವಾಂಶವನ್ನು ಹಿಡಿದಿಟ್ಟುಕೊಳ್ಳುತ್ತದೆ ಹಾಗೂ ಸುಣ್ಣ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿದೆ. ತಮಿಳುನಾಡು, ಕರ್ನಾಟಕ, ಈಶಾನ್ಯ ಆಂಧ್ರಪ್ರದೇಶ, ಪೂರ್ವ ಮಧ್ಯಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಮತ್ತು ರಾಜಸ್ಥಾನದ ಕೆಲವು ಭಾಗಗಳಲ್ಲಿ ಕೆಂಪು ಮಣ್ಣು ಹರಡಿಕೊಂಡಿದೆ. ಕಬ್ಬಿಣದ ಅಂಶದಿಂದಾಗಿ ಈ ಮಣ್ಣುಗಳು ವಿವಿಧ ಬಣ್ಣಗಳನ್ನು ಹೊಂದಿದ್ದು, ಸಾಮಾನ್ಯವಾಗಿ ಸರಂಧ್ರವಾಗಿರುತ್ತವೆ (ಪೊರಸ್) ಮತ್ತು ಪ್ರಮುಖ ಪೋಷಕಾಂಶಗಳನ್ನು ಕಡಿಮೆ ಹೊಂದಿರುತ್ತವೆ.

ಪೂರ್ವ ಆಂಧ್ರಪ್ರದೇಶ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಒಡಿಶಾ, ಅಸ್ಸಾಂ ಮತ್ತು ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಲ್ಯಾಟರೈಟ್ ಮಣ್ಣು ಪ್ರಮುಖವಾಗಿ ಕಂಡುಬರುತ್ತದೆ. ಇದು ಅಧಿಕ ಮಳೆ ಮತ್ತು ತೀವ್ರ ಕೊಚ್ಚಿಹೋಗುವಂತಹ ಪರಿಸ್ಥಿತಿಗಳಲ್ಲಿ ರೂಪುಗೊಳ್ಳುತ್ತದೆ, ಇದು ಮಣ್ಣಿನಿಂದ ಕರಗುವ ಪೋಷಕಾಂಶಗಳನ್ನು ತೆಗೆದುಹಾಕುತ್ತದೆ. ರಾಜಸ್ಥಾನ, ಗುಜರಾತ್ ಮತ್ತು ಲೇಹ್-ಲಡಾಖ್‌ನಲ್ಲಿರುವ ಮರುಭೂಮಿ ಮಣ್ಣು ಮರಳಿನ ರಚನೆ, ಕಡಿಮೆ ತೇವಾಂಶ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಮತ್ತು ಕರಗುವ ಲವಣಗಳ ಉಪಸ್ಥಿತಿಯಿಂದ ನಿರೂಪಿಸಲ್ಪಟ್ಟಿದೆ. ಕಾಡು ಮತ್ತು ಗುಡ್ಡಗಾಡು ಮಣ್ಣುಗಳು ಹಿಮಾಲಯ ಮತ್ತು ಈಶಾನ್ಯ ಪ್ರದೇಶಗಳಲ್ಲಿ ಹರಡಿಕೊಂಡಿದ್ದು, ಎತ್ತರ, ಹವಾಮಾನ ಮತ್ತು ಸಸ್ಯವರ್ಗಕ್ಕೆ ತಕ್ಕಂತೆ ಬದಲಾಗುತ್ತವೆ.

ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ಬಿಹಾರ, ರಾಜಸ್ಥಾನ, ಒಡಿಶಾ ಕರಾವಳಿ, ಪಶ್ಚಿಮ ಬಂಗಾಳದ ಸುಂದರಬನ್ಸ್ ಮತ್ತು ಗುಜರಾತಿನ ಕಚ್ ಪ್ರದೇಶದಂತಹ ಶುಷ್ಕ ಹಾಗೂ ಅರ್ಧ-ಶುಷ್ಕ ಪ್ರದೇಶಗಳು, ಕರಾವಳಿ ಹಾಗೂ ಡೆಲ್ಟಾ ಪ್ರದೇಶಗಳಲ್ಲಿ ಅಥವಾ ದೀರ್ಘಕಾಲದ ಕಳಪೆ ಒಳಚರಂಡಿ ಮತ್ತು ನೀರು ನಿಲ್ಲುವ ಸಮಸ್ಯೆ ಇರುವ ಕಡೆಗಳಲ್ಲಿ ಲವಣಯುಕ್ತ ಮತ್ತು ಕ್ಷಾರೀಯ ಮಣ್ಣು ಕಂಡುಬರುತ್ತದೆ. ಈ ಮಣ್ಣುಗಳು ಮೇಲ್ಮೈಯಲ್ಲಿ ಲವಣಗಳ ಶೇಖರಣೆಯಿಂದ ಕೂಡಿರುತ್ತವೆ, ಇದು ಬೆಳೆಯ ಉತ್ಪಾದಕತೆಯ ಮೇಲೆ ಪರಿಣಾಮ ಬೀರುತ್ತದೆ. ತಮಿಳುನಾಡು, ಬಿಹಾರ ಮತ್ತು ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಜವುಗು ಮಣ್ಣು ಕಂಡುಬರುತ್ತದೆ, ಇಲ್ಲಿ ದೀರ್ಘಕಾಲದ ನೀರು ನಿಲ್ಲುವಿಕೆಯಿಂದಾಗಿ ಹೆಚ್ಚಿನ ಪ್ರಮಾಣದ ಸಾವಯವ ಪದಾರ್ಥಗಳು ರೂಪುಗೊಳ್ಳುತ್ತವೆ. ದೇಶಾದ್ಯಂತ ಕಂಡುಬರುವ ಇಂತಹ ವೈವಿಧ್ಯಮಯ ಮಣ್ಣಿನ ಪ್ರಕಾರಗಳು ಭಾರತದ ವೈವಿಧ್ಯಮಯ ಕೃಷಿ-ಹವಾಮಾನ ಭೂದೃಶ್ಯವನ್ನು ಪ್ರತಿಬಿಂಬಿಸುತ್ತವೆ ಮತ್ತು ವಿಭಿನ್ನ ಬೆಳೆ ಪದ್ಧತಿಗಳಿಗೆ ಆಧಾರವಾಗಿವೆ.

ಮಣ್ಣು ಮತ್ತು ಹವಾಮಾನ ಕ್ರಿಯೆ: ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸುವುದು ಮಣ್ಣು ಗಮನಾರ್ಹವಾದ ನೈಸರ್ಗಿಕ ಕಾರ್ಬನ್ ಸಿಂಕ್ ಆಗಿ ಕಾರ್ಯನಿರ್ವಹಿಸುವ ಮೂಲಕ ಹವಾಮಾನ ಬದಲಾವಣೆ ತಗ್ಗಿಸುವಿಕೆ ಮತ್ತು ಹೊಂದಾಣಿಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಮಣ್ಣು ವಾತಾವರಣದಿಂದ ಇಂಗಾಲದ ಡೈಆಕ್ಸೈಡ್ ಅನ್ನು ಹೀರಿಕೊಂಡು ಅದನ್ನು ಮಣ್ಣಿನ ಸಾವಯವ ಇಂಗಾಲವಾಗಿ ಶೇಖರಿಸಿಡುತ್ತದೆ. ಈ ಪ್ರಕ್ರಿಯೆಯು ಸಸ್ಯವರ್ಗದ ಬೆಳೆವಣಿಗೆ, ಬೇರುಗಳು ಮತ್ತು ಮಣ್ಣಿನ ಸೂಕ್ಷ್ಮಾಣು ಜೀವಿಗಳಿಂದ ಸುಲಭವಾಗುತ್ತದೆ. ಶೇಖರಿಸಲ್ಪಟ್ಟ ಕಾರ್ಬನ್ ಮಣ್ಣಿನಲ್ಲಿ ದೀರ್ಘಕಾಲದವರೆಗೆ ಉಳಿಯಬಹುದು, ಇದು ವಾತಾವರಣದಲ್ಲಿನ ಹಸಿರುಮನೆ ಅನಿಲಗಳ ಸಾಂದ್ರತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರ ಜೊತೆಗೆ, ಹೆಚ್ಚಿನ ಮಣ್ಣಿನ ಸಾವಯವ ಇಂಗಾಲದ ಮಟ್ಟವು ಮಣ್ಣಿನ ರಚನೆಯನ್ನು ಸುಧಾರಿಸುತ್ತದೆ, ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ಪೋಷಕಾಂಶಗಳ ಲಭ್ಯತೆಯನ್ನು ವೃದ್ಧಿಸುತ್ತದೆ. ಇದು ಮಣ್ಣಿನ ಫಲವತ್ತತೆಯನ್ನು ಮತ್ತು ಹವಾಮಾನ ವೈಪರೀತ್ಯವನ್ನು ಎದುರಿಸುವ ಸ್ಥಿತಿಸ್ಥಾಪಕತ್ವವನ್ನು ಮತ್ತಷ್ಟು ಬಲಪಡಿಸುತ್ತದೆ. ಇದಲ್ಲದೆ, ಸುಸ್ಥಿರ ಭೂ ನಿರ್ವಹಣಾ ಅಭ್ಯಾಸಗಳ ಮೂಲಕ ವಾತಾವರಣದ ಕಾರ್ಬನ್ ಅನ್ನು ತೆಗೆದುಹಾಕಿ ಮಣ್ಣಿನಲ್ಲಿ ಶೇಖರಿಸಿಡುವ 'ಕಾರ್ಬನ್ ಕೃಷಿ'ಯು ಹವಾಮಾನ-ಸ್ಮಾರ್ಟ್ ಕೃಷಿಯ ಪ್ರಮುಖ ಅಂಶವಾಗಿ ಹೊರಹೊಮ್ಮುತ್ತಿದೆ.

ಈ ಸಂದರ್ಭದಲ್ಲಿ, ಮಣ್ಣಿನ ಸಾವಯವ ಇಂಗಾಲವನ್ನು ಹೆಚ್ಚಿಸುವ ಮತ್ತು ದೀರ್ಘಕಾಲೀನ ಇಂಗಾಲದ ಶೇಖರಣೆಯನ್ನು ಬಲಪಡಿಸುವ ಪದ್ಧತಿಗಳನ್ನು ಸರ್ಕಾರದ ಹಸ್ತಕ್ಷೇಪಗಳು ಬೆಂಬಲಿಸುತ್ತವೆ. ಇವುಗಳಲ್ಲಿ ಹಸಿರು ಭಾರತಕ್ಕಾಗಿ ರಾಷ್ಟ್ರೀಯ ಮಿಷನ್, ಸುಸ್ಥಿರ ಕೃಷಿಗಾಗಿ ರಾಷ್ಟ್ರೀಯ ಮಿಷನ್, ನೈಸರ್ಗಿಕ ಕೃಷಿಯ ರಾಷ್ಟ್ರೀಯ ಮಿಷನ್ ಮತ್ತು ಕಾರ್ಬನ್ ಕ್ರೆಡಿಟ್ ಟ್ರೇಡಿಂಗ್ ಸ್ಕೀಮ್ ಸೇರಿವೆ. ಇವರ ಹಸ್ತಕ್ಷೇಪಗಳು ಕಾರ್ಬನ್ ಕೃಷಿಯ ತತ್ವಗಳೊಂದಿಗೆ ನಿಕಟವಾಗಿ ಹೊಂದಿಕೆಯಾಗುತ್ತವೆ.

ಹಸಿರು ಭಾರತಕ್ಕಾಗಿ ರಾಷ್ಟ್ರೀಯ ಮಿಷನ್ ಹಸಿರು ಭಾರತಕ್ಕಾಗಿ ರಾಷ್ಟ್ರೀಯ ಮಿಷನ್ ಹವಾಮಾನ ಬದಲಿಕೆಯ ಕುರಿತ ರಾಷ್ಟ್ರೀಯ ಕ್ರಿಯಾ ಯೋಜನೆ ಅಡಿಯಲ್ಲಿ ಬರುವ ಉಪಕ್ರಮಗಳಲ್ಲಿ ಒಂದಾಗಿದೆ. ಇದು ಪರಿಸರ ವ್ಯವಸ್ಥೆಯ ಸೇವೆಗಳನ್ನು, ವಿಶೇಷವಾಗಿ ಕಾಡುಗಳು ಮತ್ತು ಮರಗಳಲ್ಲಿ ಇಂಗಾಲದ ಶೇಖರಣೆಯನ್ನು ಹೆಚ್ಚಿಸುವ ಕ್ರಮಗಳ ಮೂಲಕ ಹವಾಮಾನ ಬದಲಿಕೆಯನ್ನು ಎದುರಿಸುತ್ತದೆ. ಇಂಗಾಲದ ಡೈಆಕ್ಸೈಡ್ ಅನ್ನು ಹೀರಿಕೊಳ್ಳುವ ಮೂಲಕ ಮತ್ತು ನೈಸರ್ಗಿಕ ಕಾರ್ಬನ್ ಸಿಂಕ್‌ಗಳನ್ನು ಸುಧಾರಿಸುವ ಮೂಲಕ ಹವಾಮಾನ ತಗ್ಗಿಸುವಿಕೆಯಲ್ಲಿ ಕಾಡುಗಳು ಪ್ರಮುಖ ಪಾತ್ರವಹಿಸುತ್ತವೆ. ಈ ಮಿಷನ್ ಅರಣ್ಯ ಮತ್ತು ಮರಗಳ ಆವರಣವನ್ನು ಹೆಚ್ಚಿಸುವುದು ಹಾಗೂ ಸುಧಾರಿಸುವುದರ ಮೇಲೆ ಕೇಂದ್ರೀಕರಿಸುತ್ತದೆ, ಇದರಲ್ಲಿ ಅರಣ್ಯ ಪ್ರದೇಶಗಳು ಮತ್ತು ಹಾಳಾದ ಭೂಮಿಯೂ ಸೇರಿವೆ. ಇದು ಕಾರ್ಬನ್ ಸಿಂಕ್‌ಗಳನ್ನು ಬಲಪಡಿಸುತ್ತದೆ ಮತ್ತು ಭಾರತದ ಹವಾಮಾನ ಬದ್ಧತೆಗಳನ್ನು ಬೆಂಬಲಿಸುತ್ತದೆ. ತನ್ನ ರಾಷ್ಟ್ರೀಯ ನಿರ್ಧಾರಿತ ಕೊಡುಗೆಗಳ ಅಡಿಯಲ್ಲಿ ಭಾರತದ ಬದ್ಧತೆಗಳಿಗೆ ಅನುಗುಣವಾಗಿ, 2030 ರ ವೇಳೆಗೆ 2.5 ರಿಂದ 3.0 ಬಿಲಿಯನ್ ಟನ್ CO2 ಸಮಾನವಾದ ಹೆಚ್ಚುವರಿ ಕಾರ್ಬನ್ ಸಿಂಕ್ ಅನ್ನು ಸೃಷ್ಟಿಸುವ ಗುರಿಯನ್ನು ಈ ಮಿಷನ್ ಹೊಂದಿದೆ. ಭಾರತದ ಅರಣ್ಯ ಸ್ಥಿತಿ ವರದಿ  2023 ರ ಪ್ರಕಾರ, 2005 ಮತ್ತು 2021 ರ ನಡುವೆ 2.29 ಬಿಲಿಯನ್ ಟನ್ CO2 ಸಮಾನವಾದ ಹೆಚ್ಚುವರಿ ಕಾರ್ಬನ್ ಸಿಂಕ್ ಅನ್ನು ಸೃಷ್ಟಿಸಲಾಗಿದೆ, ಇದು ಈ ಗುರಿಯತ್ತ ಗಮನಾರ್ಹ ಪ್ರಗತಿಯನ್ನು ತೋರಿಸುತ್ತದೆ. ಈ ಹಸ್ತಕ್ಷೇಪಗಳು ಪರಿಸರ ವ್ಯವಸ್ಥೆಯ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸುವ ಜೊತೆಗೆ ಮಣ್ಣು ಮತ್ತು ಬಯೋಮಾಸ್ ಇಂಗಾಲವನ್ನು ಹೆಚ್ಚಿಸುತ್ತವೆ.

ಹವಾಮಾನ ಬದಲಿಕೆಯ ಕುರಿತ ರಾಷ್ಟ್ರೀಯ ಕ್ರಿಯಾ ಯೋಜನೆ

ಎನ್‌ಎಪಿಸಿಸಿ ಯು ಸುಸ್ಥಿರ ಅಭಿವೃದ್ಧಿಗೆ ಅನುವು ಮಾಡಿಕೊಡುತ್ತಲೇ ಹವಾಮಾನ ಬದಲಿಕೆಯನ್ನು ಎದುರಿಸಲು ಸಮಗ್ರ ಚೌಕಟ್ಟನ್ನು ಒದಗಿಸುತ್ತದೆ. ಇದು ಹವಾಮಾನಕ್ಕೆ ಹೊಂದಿಕೊಳ್ಳುವುದು ಮತ್ತು ತಗ್ಗಿಸುವುದು ಇವೆರಡರ ಮೇಲೂ ಗಮನಹರಿಸಿ, ಅಭಿವೃದ್ಧಿಯ ಲಾಭಗಳು ಹಾಗೂ ಹವಾಮಾನದ ಫಲಿತಾಂಶಗಳೆರಡನ್ನೂ ನೀಡುವ ಕ್ರಮಗಳನ್ನು ಪ್ರೋತ್ಸಾಹಿಸುತ್ತದೆ.

ಈ ಯೋಜನೆಯು ಎಂಟು ರಾಷ್ಟ್ರೀಯ ಮಿಷನ್‌ಗಳ ಮೂಲಕ ಕಾರ್ಯರೂಪಕ್ಕೆ ಬರುತ್ತದೆ. ಈ ಮಿಷನ್‌ಗಳು ಸೌರ ಶಕ್ತಿ, ನೀರು, ಹಸಿರು ಭಾರತ, ಕೃಷಿ, ಪರಿಸರ ವ್ಯವಸ್ಥೆಗಳು ಮತ್ತು ಜ್ಞಾನ ವ್ಯವಸ್ಥೆಗಳಂತಹ ಕ್ಷೇತ್ರಗಳನ್ನು ಒಳಗೊಂಡಿದ್ದು, ಹವಾಮಾನ ಕ್ರಿಯೆಗೆ ಸಮಗ್ರ ಚೌಕಟ್ಟನ್ನು ಒದಗಿಸುತ್ತವೆ.

ಸುಸ್ಥಿರ ಕೃಷಿಗಾಗಿ ರಾಷ್ಟ್ರೀಯ ಮಿಷನ್ ಸುಸ್ಥಿರ ಕೃಷಿಯು ಮಣ್ಣಿನ ಆರೋಗ್ಯ, ಸಂಪನ್ಮೂಲ ದಕ್ಷತೆ ಮತ್ತು ದೀರ್ಘಕಾಲೀನ ಕೃಷಿ ಉತ್ಪಾದಕತೆಯನ್ನು ಸುಧಾರಿಸುವ ಜೊತೆಗೆ ಹವಾಮಾನ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸುತ್ತದೆ. ಈ ಗುರಿಗಳನ್ನು ಮುನ್ನಡೆಸಲು, 2014-15ರಲ್ಲಿ ಎನ್‌ಎಪಿಸಿಸಿ ಯ ಪ್ರಮುಖ ಅಂಶವಾಗಿ ಸುಸ್ಥಿರ ಕೃಷಿಗಾಗಿ ರಾಷ್ಟ್ರೀಯ ಮಿಷನ್ ಅನ್ನು ಪ್ರಾರಂಭಿಸಲಾಯಿತು. ಇದು ಸುಧಾರಿತ ಮಣ್ಣಿನ ಆರೋಗ್ಯ, ಸಮರ್ಥ ನೀರಿನ ಬಳಕೆ ಮತ್ತು ಹವಾಮಾನ-ಸ್ಥಿತಿಸ್ಥಾಪಕ ಪದ್ಧತಿಗಳ ಅಳವಡಿಕೆಯ ಮೂಲಕ ಸುಸ್ಥಿರ ಕೃಷಿಯನ್ನು ಉತ್ತೇಜಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಉತ್ತಮ ಮಣ್ಣು ನಿರ್ವಹಣೆ ಮತ್ತು ನೀರು ಸಂರಕ್ಷಣಾ ಕ್ರಮಗಳನ್ನು ಅಳವಡಿಸಿಕೊಳ್ಳಲು ಈ ಮಿಷನ್ ರೈತರಿಗೆ ಆರ್ಥಿಕ ನೆರವು ಮತ್ತು ಪ್ರೋತ್ಸಾಹಕಗಳ ಮೂಲಕ ಸಹಾಯ ಮಾಡುತ್ತದೆ. 2014-15ರಿಂದ ಮಳೆಾಶ್ರಿತ ಪ್ರದೇಶ ಅಭಿವೃದ್ಧಿಯಡಿಯಲ್ಲಿ 2,119.84 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಇದು 8.50 ಲಕ್ಷ ಹೆಕ್ಟೇರ್ ಪ್ರದೇಶವನ್ನು ಆವರಿಸಿದೆ ಮತ್ತು ಸಂಯೋಜಿತ ಕೃಷಿ ಪದ್ಧತಿಯ ಮೂಲಕ 14.35 ಲಕ್ಷ ರೈತರಿಗೆ ಪ್ರಯೋಜನ ಕಲ್ಪಿಸಿದೆ. ಈ ಹಸ್ತಕ್ಷೇಪಗಳು ಮಣ್ಣಿನ ಸಾವಯವ ಇಂಗಾಲವನ್ನು ಹೆಚ್ಚಿಸುತ್ತಿವೆ ಮತ್ತು ಕಾರ್ಬನ್ ಕೃಷಿಯೊಂದಿಗೆ ಹೊಂದಿಕೊಂಡಿರುವ ಪದ್ಧತಿಗಳನ್ನು ಬೆಂಬಲಿಸುತ್ತಿವೆ.

ನೈಸರ್ಗಿಕ ಕೃಷಿಯ ರಾಷ್ಟ್ರೀಯ ಮಿಷನ್ 2024ರಲ್ಲಿ ಪ್ರಾರಂಭಿಸಲಾದ ನೈಸರ್ಗಿಕ ಕೃಷಿಯ ರಾಷ್ಟ್ರೀಯ ಮಿಷನ್, ಮಣ್ಣಿನ ಆರೋಗ್ಯವನ್ನು ಬಲಪಡಿಸುವ ಮತ್ತು ಹವಾಮಾನ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುವ ವೈಜ್ಞಾನಿಕ ಆಧಾರಿತ ವಿಧಾನಗಳ ಮೂಲಕ ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸುತ್ತದೆ. ಈ ಮಿಷನ್ ರೈತರ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವುದರ ಜೊತೆಗೆ ಸುರಕ್ಷಿತ ಮತ್ತು ಪರಿಸರ ಜವಾಬ್ದಾರಿಯುತ ಆಹಾರ ಉತ್ಪಾದನೆಯನ್ನು ಪ್ರೋತ್ಸಾಹಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಇದು ಮಣ್ಣಿನ ಸಾವಯವ ಇಂಗಾಲವನ್ನು ಸುಧಾರಿಸುವ ಮತ್ತು ದೀರ್ಘಕಾಲೀನ ಕೃಷಿ ಕಾರ್ಯಸಾಧ್ಯತೆಯನ್ನು ಬೆಂಬಲಿಸುವ ಪ್ರಕೃತಿ-ಆಧಾರಿತ ಕೃಷಿ ವ್ಯವಸ್ಥೆಗಳ ಕಡೆಗಿನ ಬದಲಾವಣೆಯನ್ನು ಪ್ರತಿನಿಧಿಸುತ್ತದೆ.

  • ಮಾರ್ಚ್ 2026ರ ವೇಳೆಗೆ, ಈ ಮಿಷನ್ 18,786 ಕ್ಲಸ್ಟರ್‌ಗಳೊಂದಿಗೆ 8.80 ಲಕ್ಷ ಹೆಕ್ಟೇರ್ ಪ್ರದೇಶವನ್ನು ಹಾಗೂ 18.19 ಲಕ್ಷಕ್ಕೂ ಅಧಿಕ ನೋಂದಾಯಿತ ರೈತರನ್ನು ಒಳಗೊಳ್ಳುವ ಮೂಲಕ ಗಣನೀಯವಾಗಿ ವಿಸ್ತರಣೆಗೊಂಡಿದೆ. ಇದು ರಾಜ್ಯಗಳಲ್ಲಿ ಬೆಳೆಯುತ್ತಿರುವ ಜನಪ್ರಿಯತೆಯನ್ನು ಪ್ರತಿಬಿಂಬಿಸುತ್ತದೆ.
  • ಸಾಮರ್ಥ್ಯ ವರ್ಧನೆಯು ಇದರ ಒಂದು ಪ್ರಮುಖ ಅಂಶವಾಗಿದೆ. 33,676 ತರಬೇತಿ ಪಡೆದ ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಮತ್ತು ವಿಶಾಲವಾದ ತರಬೇತಿ ಸಂಸ್ಥೆಗಳ ಜಾಲವು ತಳಮಟ್ಟದಲ್ಲಿ ನೈಸರ್ಗಿಕ ಕೃಷಿ ಜೈವಿಕ-ಪರಿಕರಗಳ ಕುರಿತು ಜ್ಞಾನವನ್ನು ಹಂಚಲು ಬೆಂಬಲ ನೀಡುತ್ತಿವೆ.
  • ಈ ಮಿಷನ್ ಜೈವಿಕ-ಪರಿಕರ ಸಂಪನ್ಮೂಲ ಕೇಂದ್ರ ಮತ್ತು ಪ್ರಮಾಣೀಕರಣ ವ್ಯವಸ್ಥೆಗಳ ಮೂಲಕ ಸ್ಥಳೀಯ ಪರಿಕರ ವ್ಯವಸ್ಥೆಗಳ ಅಭಿವೃದ್ಧಿಗೂ ಕೊಡುಗೆ ನೀಡುತ್ತದೆ. ಜೈವಿಕ-ಪರಿಕರ ಸಂಪನ್ಮೂಲ ಕೇಂದ್ರಗಳು ರೈತರಿಗೆ ಬೀಜಾಮೃತ ಮತ್ತು ಜೀವಾಮೃತದಂತಹ ಬಳಸಲು ಸಿದ್ಧವಿರುವ ನೈಸರ್ಗಿಕ ಕೃಷಿ ಪರಿಕರಗಳನ್ನು ಪೂರೈಸುವ ಸ್ಥಳೀಯ ಸೌಲಭ್ಯಗಳಾಗಿವೆ. ರಾಸಾಯನಿಕ ರಸಗೊಬ್ಬರಗಳು ಮತ್ತು ಕೀಟನಾಶಕಗಳಿಗೆ ನೈಸರ್ಗಿಕ ಪರ್ಯಾಯಗಳನ್ನು ಅಳವಡಿಸಿಕೊಳ್ಳಲು ಇವು ರೈತರಿಗೆ ತರಬೇತಿ ಮತ್ತು ಪ್ರದರ್ಶನಗಳನ್ನು ಸಹ ಒದಗಿಸುತ್ತವೆ. ಇದು ಒಟ್ಟಾರೆ ಕೃಷಿ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಜೊತೆಗೆ ಸುಸ್ಥಿರ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ರೈತರನ್ನು ಪ್ರೋತ್ಸಾಹಿಸುತ್ತದೆ.

ಕಾರ್ಬನ್ ಕ್ರೆಡಿಟ್ ಟ್ರೇಡಿಂಗ್ ಸ್ಕೀಮ್ ಕಾರ್ಬನ್ ಮಾರುಕಟ್ಟೆಗಳು ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡುವ, ತಡೆಯುವ ಚಟುವಟಿಕೆಗಳಿಗೆ ಆರ್ಥಿಕ ಪ್ರೋತ್ಸಾಹವನ್ನು ಸೃಷ್ಟಿಸುತ್ತವೆ. 2023ರಲ್ಲಿ ಅಳವಡಿಸಿಕೊಳ್ಳಲಾದ ಕಾರ್ಬನ್ ಕ್ರೆಡಿಟ್ ಟ್ರೇಡಿಂಗ್ ಸ್ಕೀಮ್, ರೈತರು ಮತ್ತು ಸಂಸ್ಥೆಗಳಿಗೆ ಹಸಿರುಮನೆ ಅನಿಲ ತಗ್ಗಿಸುವಿಕೆ ಚಟುವಟಿಕೆಗಳನ್ನು ಕೈಗೊಳ್ಳಲು ಅನುವು ಮಾಡಿಕೊಡುತ್ತದೆ. ಸ್ವಯಂಪ್ರೇರಿತ ಕಾರ್ಬನ್ ಮಾರುಕಟ್ಟೆಗಳ ಮೂಲಕ ವ್ಯಾಪಾರ ಮಾಡಬಹುದಾದ ಕಾರ್ಬನ್ ಕ್ರೆಡಿಟ್ ಪ್ರಮಾಣಪತ್ರಗಳನ್ನು ಗಳಿಸಲು ಇದು ಅವರಿಗೆ ಅವಕಾಶ ಕಲ್ಪಿಸುತ್ತದೆ. ಪ್ರತಿಯೊಂದು ಕಾರ್ಬನ್ ಕ್ರೆಡಿಟ್ ಕಡಿಮೆ ಮಾಡಲಾದ, ತಡೆಯಲಾದ ಅಥವಾ ತೆಗೆದುಹಾಕಲಾದ ಒಂದು ಮೆಟ್ರಿಕ್ ಟನ್ ಇಂಗಾಲದ ಡೈಆಕ್ಸೈಡ್ ಸಮಾನತೆಯನ್ನು ಪ್ರತಿನಿಧಿಸುತ್ತದೆ. ಪರಿಶೀಲಿತ ಕಾರ್ಬನ್ ಸ್ಟ್ಯಾಂಡರ್ಡ್ ಮತ್ತು ಗೋಲ್ಡ್ ಸ್ಟ್ಯಾಂಡರ್ಡ್‌ನಂತಹ ಪರಿಶೀಲಿತ ಮಾನದಂಡಗಳು ಕೃಷಿಯಲ್ಲಿ ಹೊರಸೂಸುವಿಕೆ ಕಡಿತವನ್ನು ಅಳೆಯಲು ಮತ್ತು ಮಾನ್ಯ ಮಾಡಲು ಚೌಕಟ್ಟುಗಳನ್ನು ಒದಗಿಸುತ್ತವೆ. ಸುಸ್ಥಿರ, ಪರಿಸರ ಸ್ನೇಹಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಮತ್ತು ಸರಿಯಾದ ಪರಿಶೀಲನೆಯನ್ನು ಪಡೆಯುವ ಮೂಲಕ ರೈತರು ಕಾರ್ಬನ್ ಕ್ರೆಡಿಟ್‌ಗಳನ್ನು ಉತ್ಪಾದಿಸಬಹುದು. ಹೊರಸೂಸುವಿಕೆಯನ್ನು ಸರಿದೂಗಿಸಲು ಬಯಸುವ ಸಂಸ್ಥೆಗಳಿಗೆ ಅವರು ಅವುಗಳನ್ನು ಮತ್ತಷ್ಟು ಮಾರಾಟ ಮಾಡಬಹುದು, ಇದರಿಂದಾಗಿ ಹೆಚ್ಚುವರಿ ಆದಾಯದ ಮೂಲವನ್ನು ಸೃಷ್ಟಿಸುತ್ತಾ ಹವಾಮಾನ ತಗ್ಗಿಸುವಿಕೆಯನ್ನು ಸುಲಭಗೊಳಿಸಬಹುದು.

ಮಣ್ಣಿನ ಆರೋಗ್ಯ ಮತ್ತು ರಸಗೊಬ್ಬರ ನಿರ್ವಹಣೆಗೆ ಸಮಗ್ರ ವಿಧಾನಗಳು 2015ರಲ್ಲಿ ಪ್ರಾರಂಭಿಸಲಾದ ಮಣ್ಣಿನ ಆರೋಗ್ಯ ಮತ್ತು ಫಲವತ್ತತೆ ಯೋಜನೆಯು, ಮಣ್ಣಿನ ಪೋಷಕಾಂಶಗಳ ಸ್ಥಿತಿಯನ್ನು ನಿರ್ಣಯಿಸುವ ಮತ್ತು ಸಮತೋಲಿತ ರಸಗೊಬ್ಬರ ಬಳಕೆಯ ಕುರಿತು ರೈತರಿಗೆ ಮಾರ್ಗದರ್ಶನ ನೀಡುವ ಮೂಲಕ ವೈಜ್ಞಾನಿಕ ಮಣ್ಣಿನ ನಿರ್ವಹಣೆಯನ್ನು ಉತ್ತೇಜಿಸುತ್ತದೆ. ಇದು ಮಣ್ಣಿನ ಆರೋಗ್ಯ ಮತ್ತು ಉತ್ಪಾದಕತೆಯನ್ನು ಸುಧಾರಿಸಲು ಬೆಳೆ-ನಿರ್ದಿಷ್ಟ ಶಿಫಾರಸುಗಳೊಂದಿಗೆ ಮಣ್ಣಿನ ಆರೋಗ್ಯ ಕಾರ್ಡ್‌ಗಳನ್ನು ಒದಗಿಸುತ್ತದೆ. ರಾಸಾಯನಿಕ ರಸಗೊಬ್ಬರಗಳ ವಿವೇಚನಾಪೂರ್ಣ ಬಳಕೆಯನ್ನು ಅಳವಡಿಸಿಕೊಳ್ಳಲು ತರಬೇತಿ ಮತ್ತು ಪ್ರದರ್ಶನ ಕಾರ್ಯಕ್ರಮಗಳು ರೈತರಿಗೆ ಮತ್ತಷ್ಟು ಬೆಂಬಲ ನೀಡುತ್ತವೆ. ಇದು ಸಾವಯವ ಗೊಬ್ಬರಗಳು ಮತ್ತು ಜೈವಿಕ-ರಸಗೊಬ್ಬರಗಳ ಜೊತೆಗೆ ದ್ವಿತೀಯಕ ಮತ್ತು ಸೂಕ್ಷ್ಮ ಪೋಷಕಾಂಶಗಳನ್ನು ಒಳಗೊಂಡಿದೆ. ಶಾಲಾ ಮಣ್ಣಿನ ಆರೋಗ್ಯ ಕಾರ್ಯಕ್ರಮವು ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವ ಮೂಲಕ ಈ ಪ್ರಯತ್ನವನ್ನು ಮತ್ತಷ್ಟು ವಿಸ್ತರಿಸುತ್ತದೆ. ವಿದ್ಯಾರ್ಥಿಗಳು ಮಣ್ಣಿನ ಮಾದರಿ ಸಂಗ್ರಹಣೆ, ಪರೀಕ್ಷೆ ಮತ್ತು ಮಣ್ಣಿನ ಆರೋಗ್ಯ ಕಾರ್ಡ್‌ಗಳ ತಯಾರಿಕೆಯಲ್ಲಿ ಭಾಗವಹಿಸುತ್ತಾರೆ. ಇದು ರೈತರಿಗೆ ಸಲಹಾ ಸೇವೆಗಳನ್ನು ಬೆಂಬಲಿಸಲು ಅವರಿಗೆ ಅನುವು ಮಾಡಿಕೊಡುತ್ತದೆ.

ಮಾರ್ಚ್ 13, 2026ರ ವೇಳೆಗೆ, ಈ ಯೋಜನೆಯು ಆರಂಭವಾದಾಗಿನಿಂದ ಒಟ್ಟು 25.89 ಕೋಟಿ ಮಣ್ಣಿನ ಆರೋಗ್ಯ ಕಾರ್ಡ್‌ಗಳನ್ನು ಸೃಷ್ಟಿಸಲಾಗಿದೆ. ಸಮತೋಲಿತ ರಸಗೊಬ್ಬರ ಬಳಕೆಯನ್ನು ಉತ್ತೇಜಿಸಲು ಸುಮಾರು 7.17 ಲಕ್ಷ ಪ್ರದರ್ಶನಗಳನ್ನು ನಡೆಸಲಾಗಿದೆ. ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ ಮತ್ತು ಕೃಷಿ ವಿಜ್ಞಾನ ಕೇಂದ್ರಗಳ  ಬೆಂಬಲದೊಂದಿಗೆ ನೀಡಲಾದ ಸಲಹೆಗಳ ಮೂಲಕ ಈ ಪ್ರದರ್ಶನಗಳನ್ನು ನಡೆಸಲಾಗಿದೆ. ಇದರ ಜೊತೆಗೆ, ತಳಮಟ್ಟದಲ್ಲಿ ಮಣ್ಣಿನ ಆರೋಗ್ಯ ಸಲಹೆಗಳನ್ನು ಹರಡಲು ಸಹಾಯ ಮಾಡಲು 70,002 ಕೃಷಿ ಸಖಿಯರಿಗೆ ತರಬೇತಿ ನೀಡಲಾಗಿದೆ. ಶಾಲಾ ಮಣ್ಣಿನ ಆರೋಗ್ಯ ಕಾರ್ಯಕ್ರಮವು 2025-26ನೇ ಸಾಲಿನಲ್ಲಿ 4,430 ಶಾಲೆಗಳನ್ನು ಮತ್ತು 1,29,167 ವಿದ್ಯಾರ್ಥಿಗಳನ್ನು ನೋಂದಾಯಿಸಿದೆ.

ಮಣ್ಣಿನ ಪರೀಕ್ಷೆಯಿಂದ ಅಧಿಕ ಇಳುವರಿಯವರೆಗೆ: ಒಬ್ಬ ರೈತನ ಅನುಭವ ಜಾರ್ಖಂಡ್‌ನ ಧನ್‌ಬಾದ್ ಜಿಲ್ಲೆಯ ರೈತರಾದ ಶ್ರೀ ನಿರಾಪದೊ ಗೋರಾಯ್ ಅವರು ತಮ್ಮ 3 ಎಕರೆ ಜಮೀನಿನಲ್ಲಿ ಮಣ್ಣಿನ ಆರೋಗ್ಯ ಕಾರ್ಡ್‌ನ ಶಿಫಾರಸುಗಳನ್ನು ಅಳವಡಿಸಿಕೊಂಡರು. ಇದಕ್ಕೆ ಮುಂಚೆ ಅವರ ಪೋಷಕಾಂಶ ನಿರ್ವಹಣಾ ಪದ್ಧತಿಯು ಹೆಚ್ಚಾಗಿ ಸಾರಜನಕ (ನೈಟ್ರೋಜನ್) ಮತ್ತು ರಂಜಕದ (ಫಾಸ್ಫರಸ್) ಮೇಲೆ ಮಾತ್ರ ಅವಲಂಬಿತವಾಗಿತ್ತು, ಮತ್ತು ಇತರ ಅಗತ್ಯ ಪೋಷಕಾಂಶಗಳ ಬಳಕೆ ಸೀಮಿತವಾಗಿತ್ತು. ಮಣ್ಣಿನ ಆರೋಗ್ಯ ಸಲಹೆಯ ಆಧಾರದ ಮೇಲೆ, ಅವರು ಪೊಟ್ಯಾಶ್ ಮತ್ತು ಸುಣ್ಣವನ್ನು ಒಳಗೊಂಡ ಸಮತೋಲಿತ ರಸಗೊಬ್ಬರ.

ಬಳಕೆಗೆ ಬದಲಾಯಿಸಿಕೊಂಡರು. ಅಲ್ಲದೆ, ಅವರು ಬೆಳೆ ಬೆಳೆಯುವ ವಿವಿಧ ಹಂತಗಳಲ್ಲಿ ಯೂರಿಯಾವನ್ನು ಕಂತುಗಳಲ್ಲಿ ಅನ್ವಯಿಸಿದರು.

ಈ ಬದಲಾವಣೆಯು ಪ್ರತಿ ಎಕರೆಗೆ ರಸಗೊಬ್ಬರ ವೆಚ್ಚವನ್ನು ರೂ. 1,910 ರಿಂದ ರೂ. 1,190 ಕ್ಕೆ ತಗ್ಗಿಸಿತು, ಇದರಿಂದ ಪ್ರತಿ ಎಕರೆಗೆ ರೂ. 720 ಉಳಿತಾಯವಾಯಿತು. ಅದೇ ಸಮಯದಲ್ಲಿ, ಸಸ್ಯಗಳ ಆರೋಗ್ಯದಲ್ಲಿ ಗೋಚರಿಸುವ ಸುಧಾರಣೆಯೊಂದಿಗೆ, ಭತ್ತದ ಇಳುವರಿಯು ಪ್ರತಿ ಎಕರೆಗೆ 1,000 ಕೆ.ಜಿ ಯಿಂದ 1,320 ಕೆ.ಜಿಗೆ ಹೆಚ್ಚಾಯಿತು.

ಈ ಬದಲಾವಣೆಯ ಕುರಿತು ತಮ್ಮ ಅನುಭವ ಹಂಚಿಕೊಳ್ಳುತ್ತಾ, ರೋಗಗಳು ಮತ್ತು ಕೀಟಗಳ ಬಾಧೆ ಕಡಿಮೆಯಾಗಿದೆ ಎಂದು ಅವರು ಗಮನಿಸಿದರು. ಸಾರಜನಕಯುಕ್ತ ರಸಗೊಬ್ಬರಗಳ ವಿವೇಚನಾಪೂರ್ಣ ಬಳಕೆ ಮತ್ತು ಪೊಟ್ಯಾಶ್ ಅನ್ವಯಿಕೆಯೇ ಇದಕ್ಕೆ ಕಾರಣವಾಗಿರಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಸಮತೋಲಿತ ಪೋಷಕಾಂಶಗಳ ನಿರ್ವಹಣೆ ದಕ್ಷತೆ ಮತ್ತು ಪಾರದರ್ಶಕತೆಯನ್ನು ಉತ್ತೇಜಿಸುವ ಸುಧಾರಣೆಗಳ ಮೂಲಕ ರಸಗೊಬ್ಬರ ನಿರ್ವಹಣೆಯನ್ನು ಸುಧಾರಿಸಲು ಭಾರತವು ಮಹತ್ವದ ಹೆಜ್ಜೆಗಳನ್ನು ಇಟ್ಟಿದೆ.

ಪೋಷಕಾಂಶ ಆಧಾರಿತ ಸಬ್ಸಿಡಿ ಯೋಜನೆಯು ಸಬ್ಸಿಡಿ ಬೆಂಬಲವನ್ನು ರಸಗೊಬ್ಬರಗಳ ಪೋಷಕಾಂಶದ ಅಂಶದೊಂದಿಗೆ ಜೋಡಿಸುತ್ತದೆ, ಇದು ಸಮತೋಲಿತ ಪೋಷಕಾಂಶಗಳ ಬಳಕೆಯನ್ನು ಪ್ರೋತ್ಸಾಹಿಸುತ್ತದೆ. ಈ ಯೋಜನೆಯಡಿ, ಸರ್ಕಾರವು ಡೈಮೋನಿಯಮ್ ಫಾಸ್ಫೇಟ್ ಸೇರಿದಂತೆ 28 ಶ್ರೇಣಿಯ ಫಾಸ್ಫೇಟಿಕ್ ಮತ್ತು ಪೊಟ್ಯಾಸಿಕ್ ರಸಗೊಬ್ಬರಗಳ ಮೇಲೆ ರಸಗೊಬ್ಬರ ತಯಾರಕರು ಮತ್ತು ಆಮದುದಾರರ ಮೂಲಕ ರೈತರಿಗೆ ಸಬ್ಸಿಡಿ ದರದಲ್ಲಿ ಸಬ್ಸಿಡಿಗಳನ್ನು ಒದಗಿಸುತ್ತದೆ. ಸಬ್ಸಿಡಿ ದರಗಳನ್ನು ಎರಡು ಪ್ರಮುಖ ಬೆಳೆ ಹಂಗಾಮುಗಳಿಗೆ ಪ್ರತ್ಯೇಕವಾಗಿ ಸೂಚಿಸಲಾಗುತ್ತದೆ. ಖಾರಿಫ್ ಹಂಗಾಮಿನ ದರಗಳು ಏಪ್ರಿಲ್ 1 ರಿಂದ ಸೆಪ್ಟೆಂಬರ್ 30 ರವರೆಗೆ ಅನ್ವಯಿಸುತ್ತವೆ, ಆದರೆ ರಬಿ ಹಂಗಾಮಿನ ದರಗಳು ಅಕ್ಟೋಬರ್ 1 ರಿಂದ ಮಾರ್ಚ್ 31 ರವರೆಗೆ ಅನ್ವಯಿಸುತ್ತವೆ.

ಮಾರಾಟ ಕೇಂದ್ರಗಳ ಸಾಧನಗಳು ಫಲಾನುಭವಿಗಳನ್ನು ದೃಢೀಕರಿಸುತ್ತವೆ ಮತ್ತು ರಸಗೊಬ್ಬರ ಮಾರಾಟದ ನೈಜ-ಸಮಯದ ಟ್ರ್ಯಾಕಿಂಗ್ ಅನ್ನು ಸಕ್ರಿಯಗೊಳಿಸುತ್ತವೆ. ರಸಗೊಬ್ಬರ ವ್ಯವಸ್ಥೆಯಲ್ಲಿ ನೇರ ಲಾಭ ವರ್ಗಾವಣೆಯಡಿ, ಈ ಸಾಧನಗಳ ಮೂಲಕ ನಿಜವಾದ ಮಾರಾಟದ ಆಧಾರದ ಮೇಲೆ ಸಬ್ಸಿಡಿಗಳನ್ನು ಬಿಡುಗಡೆ ಮಾಡಲಾಗುತ್ತದೆ. 2022-23 ಮತ್ತು ಜುಲೈ 2025ರ ನಡುವೆ ರಸಗೊಬ್ಬರ ಸಬ್ಸಿಡಿ ವಿತರಣೆಯು ಒಟ್ಟು 6.77 ಲಕ್ಷ ಕೋಟಿ ರೂಪಾಯಿಗಳಷ್ಟಿದೆ.

ಬೇವು ಲೇಪಿತ ಯೂರಿಯಾ ಸಾರಜನಕ ಬಿಡುಗಡೆಯನ್ನು ನಿಧಾನಗೊಳಿಸುತ್ತದೆ, ಪೋಷಕಾಂಶ ಬಳಕೆಯ ದಕ್ಷತೆಯನ್ನು ಸುಧಾರಿಸುತ್ತದೆ ಮತ್ತು ಕೃಷಿಯೇತರ ಉದ್ದೇಶಗಳಿಗಾಗಿ ತಿರುಗಿಸುವುದನ್ನು ಕಡಿಮೆ ಮಾಡುತ್ತದೆ. ದೇಶೀಯವಾಗಿ ಉತ್ಪಾದಿಸುವ ಎಲ್ಲಾ ಯೂರಿಯಾಗಳ ಮೇಲೆ ಶೇಕಡಾ 100 ರಷ್ಟು ಬೇವಿನ ಲೇಪನವನ್ನು ಸರ್ಕಾರ ಕಡ್ಡಾಯಗೊಳಿಸಿದೆ.

ಸಮಗ್ರ ರಸಗೊಬ್ಬರ ನಿರ್ವಹಣಾ ವ್ಯವಸ್ಥೆಯು ಮೇಲ್ವಿಚಾರಣೆ ಮತ್ತು ಸರಬರಾಜು ಸರಪಳಿಯನ್ನು ಮತ್ತಷ್ಟು ಬಲಪಡಿಸುತ್ತದೆ, ರಸಗೊಬ್ಬರ ಲಭ್ಯತೆ ಮತ್ತು ಬಳಕೆಯ ಮೇಲೆ ಉತ್ತಮ ನಿಯಂತ್ರಣವನ್ನು ಖಚಿತಪಡಿಸುತ್ತದೆ.

ಖೇತ್ ಬಚಾವೋ ಅಭಿಯಾನ: ಸಮತೋಲಿತ ರಸಗೊಬ್ಬರ ಬಳಕೆಯನ್ನು ಉತ್ತೇಜಿಸುವುದು ಸಮತೋಲಿತ ರಸಗೊಬ್ಬರ ಬಳಕೆಯನ್ನು ಮತ್ತಷ್ಟು ಬಲಪಡಿಸಲು, ಸರ್ಕಾರವು 'ಖೇತ್ ಬಚಾವೋ ಅಭಿಯಾನ'ದ ಮೂಲಕ ಜಾಗೃತಿ ಪ್ರಯತ್ನಗಳನ್ನು ತೀವ್ರಗೊಳಿಸಿತು. ಈ ಅಭಿಯಾನವು ರೈತರಲ್ಲಿ ವೈಜ್ಞಾನಿಕ ಪೋಷಕಾಂಶ ನಿರ್ವಹಣಾ ಪದ್ಧತಿಗಳನ್ನು ಉತ್ತೇಜಿಸಿತು.

ಭಾರತೀಯ ಕೃಷಿ ಸಂಶೋಧನಾ ಮಂಡಳಿ ಮತ್ತು ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ (DA&FW) ನೇತೃತ್ವದಲ್ಲಿ, ಈ ಅಭಿಯಾನವು ಸಂಪೂರ್ಣ ರಾಷ್ಟ್ರೀಯ ಕೃಷಿ ಸಂಶೋಧನೆ, ಶಿಕ್ಷಣ ಮತ್ತು ವಿಸ್ತರಣಾ ವ್ಯವಸ್ಥೆಗಳನ್ನು ಒಳಗೊಂಡಿತ್ತು ಮತ್ತು ಜೂನ್ 1-30, 2026 ರ ನಡುವೆ ನಡೆಯಿತು. ಇದು ಶಿಬಿರಗಳು, ಪ್ರದರ್ಶನಗಳು ಮತ್ತು ರೈತ ಜಾಗೃತಿ ಚಟುವಟಿಕೆಗಳ ಮೂಲಕ ರಾಸಾಯನಿಕ ರಸಗೊಬ್ಬರಗಳ ಮೇಲಿನ ಅತಿಯಾದ ಅವಲಂಬನೆಯನ್ನು ಕಡಿಮೆ ಮಾಡಲು ಮಣ್ಣು ಪರೀಕ್ಷೆ ಆಧಾರಿತ ಪೋಷಕಾಂಶ ನಿರ್ವಹಣೆಯನ್ನು ಉತ್ತೇಜಿಸಿತು. ಕಡಿಮೆ ಮಳೆಯ ಪರಿಸ್ಥಿತಿಗಳಲ್ಲಿ ಪರ್ಯಾಯ ಕೃಷಿ ಪದ್ಧತಿಗಳ ಬಗ್ಗೆಯೂ ಈ ಅಭಿಯಾನವು ಜಾಗೃತಿ ಮೂಡಿಸಿತು.

ಒಟ್ಟು 99,489 ಸಂವಾದ ಸಭೆಗಳು ಮತ್ತು ಕಾರ್ಯಕ್ರಮಗಳು ಹಾಗೂ 25,178 ಜಾಗೃತಿ ಶಿಬಿರಗಳನ್ನು ಆಯೋಜಿಸಲಾಯಿತು. ಇದರ ಜೊತೆಗೆ, ಸಮತೋಲಿತ ಪೋಷಕಾಂಶಗಳ ನಿರ್ವಹಣೆಯನ್ನು ಉತ್ತೇಜಿಸಲು ಹಸಿರೆಲೆ ಗೊಬ್ಬರ ಮತ್ತು ಜೈವಿಕ-ರಸಗೊಬ್ಬರಗಳ ಕುರಿತು 6,721 ತರಬೇತಿ ಕಾರ್ಯಕ್ರಮಗಳು ಮತ್ತು 96,227 ಕ್ಷೇತ್ರ ಪ್ರದರ್ಶನಗಳನ್ನು ನಡೆಸಲಾಯಿತು. ಈ ಚಟುವಟಿಕೆಗಳು ರಸಗೊಬ್ಬರ ಮತ್ತು ಇನ್‌ಪುಟ್ ಮಾರಾಟಗಾರರು ಸೇರಿದಂತೆ 4,916 ಜನಪ್ರತಿನಿಧಿ ಸಮ್ಮೇಳನಗಳ ಮೂಲಕ ತಳಮಟ್ಟದ ಭಾಗವಹಿಸುವಿಕೆಯನ್ನು ಬಲಪಡಿಸಿದವು. ಈ ಚಟುವಟಿಕೆಗಳು ನೇರವಾಗಿ ಸುಮಾರು 1.07 ಕೋಟಿ ರೈತರು ಹಾಗೂ ಇತರ ಪಾಲುದಾರರನ್ನು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಸುಮಾರು 4.5 ಕೋಟಿ ನಾಗರಿಕರನ್ನು ತಲುಪಿದವು.

ಈ ಸುಧಾರಣೆಗಳು ಮತ್ತು ಜಾಗೃತಿ ಉಪಕ್ರಮಗಳು ಸಮತೋಲಿತ ರಸಗೊಬ್ಬರ ಬಳಕೆಯನ್ನು ಬಲಪಡಿಸುತ್ತಿವೆ, ಪೋಷಕಾಂಶಗಳ ದಕ್ಷತೆಯನ್ನು ಸುಧಾರಿಸುತ್ತಿವೆ ಮತ್ತು ದೀರ್ಘಕಾಲೀನ ಮಣ್ಣಿನ ಸುಸ್ಥಿರತೆಯನ್ನು ಬೆಂಬಲಿಸುತ್ತಿವೆ.

ಡಿಜಿಟಲ್ ಮಣ್ಣಿನ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವುದು

ಭೂಗೋಳ ಸ್ಥಳ ನಿರ್ದೇಶನ ಮ್ಯಾಪಿಂಗ್, ಡಿಜಿಟಲ್ ವೇದಿಕೆಗಳು ಮತ್ತು ಕೃತಕ ಬುದ್ಧಿಮತ್ತೆಯನ್ನು ಸಂಯೋಜಿಸುವ ಮೂಲಕ ಭಾರತವು ಮಣ್ಣು ನಿರ್ವಹಣೆಗೆ ಡೇಟಾ-ಚಾಲಿತ ವಿಧಾನದತ್ತ ಮುನ್ನಡೆಯುತ್ತಿದೆ.

ಭೂಗೋಳ ಸ್ಥಳ ನಿರ್ದೇಶನ ಮಣ್ಣು ಮ್ಯಾಪಿಂಗ್ ಮತ್ತು ಸಂಪನ್ಮೂಲ ಮೌಲ್ಯಮಾಪನ

ಭೂ ಮತ್ತು ಮಣ್ಣು ಬಳಕೆ ಸಮೀಕ್ಷೆ ಭಾರತ ಸಂಸ್ಥೆಯಿಂದ ಕಾರ್ಯಗತಗೊಳಿಸಲ್ಪಟ್ಟ ರಾಷ್ಟ್ರವ್ಯಾಪಿ ಮಣ್ಣು ಸಂಪನ್ಮೂಲ ಮ್ಯಾಪಿಂಗ್ ಯೋಜನೆಯು ಉನ್ನತ-ರೆಸಲ್ಯೂಶನ್ ಮಣ್ಣಿನ ಪ್ರೊಫೈಲ್ ನಕ್ಷೆಗಳನ್ನು ಸೃಷ್ಟಿಸುತ್ತಿದೆ. ಇವು ಗ್ರಾಮ ಮಟ್ಟದ ಮಣ್ಣಿನ ದಾಸ್ತಾನುಗಳನ್ನು ರಚಿಸಲು ಉಪಗ್ರಹ ಚಿತ್ರಣವನ್ನು ಕ್ಷೇತ್ರ ಅವಲೋಕನಗಳೊಂದಿಗೆ ಸಂಯೋಜಿಸುತ್ತವೆ. ಈ ದಾಸ್ತಾನುಗಳು ವೈಜ್ಞಾನಿಕ ಭೂ ಬಳಕೆ ಯೋಜನೆ ಮತ್ತು ತಿಳಿವಳಿಕೆಯುಳ್ಳ ಬೆಳೆ ಆಯ್ಕೆಯನ್ನು ಬೆಂಬಲಿಸುತ್ತವೆ.

ಸೆಪ್ಟೆಂಬರ್ 2024ರ ಹೊತ್ತಿಗೆ, ಸುಮಾರು 29 ಮಿಲಿಯನ್ ಹೆಕ್ಟೇರ್ ಪ್ರದೇಶವನ್ನು ಮ್ಯಾಪ್ ಮಾಡಲಾಗಿದೆ. 142 ಮಿಲಿಯನ್ ಹೆಕ್ಟೇರ್ ಕೃಷಿ ಭೂಮಿಯನ್ನು ಮ್ಯಾಪ್ ಮಾಡುವುದು ಇದರ ಗುರಿಯಾಗಿದೆ. ಈ ಪ್ರಯತ್ನವನ್ನು ವೇಗಗೊಳಿಸಲು, ಆರು ರಾಜ್ಯಗಳಿಗೆ 1,076 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಇವುಗಳಲ್ಲಿ ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ತಮಿಳುನಾಡು ಮತ್ತು ಆಂಧ್ರಪ್ರದೇಶ ಸೇರಿವೆ. ಈ ಬೆಂಬಲವು ಪ್ರದೇಶಗಳಾದ್ಯಂತ ವಿಶ್ವಾಸಾರ್ಹ ಮಣ್ಣು ಸಂಪನ್ಮೂಲ ಡೇಟಾಸೆಟ್‌ಗಳ ರಚನೆಯನ್ನು ಬಲಪಡಿಸುತ್ತಿದೆ.

ಮಣ್ಣು, ಭೂಮಿ ಮತ್ತು ರೈತರ ಡೇಟಾವನ್ನು ಸಂಯೋಜಿಸುವುದು

ಸಂಯೋಜಿತ ಡೇಟಾ ವ್ಯವಸ್ಥೆಗಳು ಮತ್ತು ಉದ್ದೇಶಿತ ಸಲಹಾ ಸೇವೆಗಳ ಮೂಲಕ ಡಿಜಿಟಲ್ ತಂತ್ರಜ್ಞಾನಗಳು ಕೃಷಿ ನಿರ್ಧಾರ ಕೈಗೊಳ್ಳುವಿಕೆಯನ್ನು ಪರಿವರ್ತಿಸುತ್ತಿವೆ. ಡಿಜಿಟಲ್ ಕೃಷಿ ಮಿಷನ್ ಮಣ್ಣಿನ ಮಾಹಿತಿಯನ್ನು ಭೂಮಿ ಮತ್ತು ಬೆಳೆ ಡೇಟಾಸೆಟ್‌ಗಳೊಂದಿಗೆ ಲಿಂಕ್ ಮಾಡುವ ಮೂಲಕ ಏಕೀಕೃತ ಡೇಟಾ ಚೌಕಟ್ಟನ್ನು ನಿರ್ಮಿಸುತ್ತಿದೆ. ಅಗ್ರಿ ಸ್ಟ್ಯಾಕ್ ನಂತಹ ವೇದಿಕೆಗಳು ಉದ್ದೇಶಿತ ಸಲಹಾ ಸೇವೆಗಳನ್ನು ಬೆಂಬಲಿಸಲು ರೈತ, ಭೂಮಿ ಮತ್ತು ಮಣ್ಣಿನ ಡೇಟಾವನ್ನು ಸಂಯೋಜಿಸಲು ಅನುವು ಮಾಡಿಕೊಡುತ್ತಿವೆ. ಈ ಪ್ರಯತ್ನದ ಭಾಗವಾಗಿ, ನವೆಂಬರ್ 27, 2025ರ ವೇಳೆಗೆ, 7.63 ಕೋಟಿಗೂ ಹೆಚ್ಚು ರೈತ ಐಡಿಗಳನ್ನು ಸೃಷ್ಟಿಸಲಾಗಿದೆ. 2024-25ರ ರಬಿ ಹಂಗಾಮಿನಲ್ಲಿ, 23.5 ಕೋಟಿ ಬೆಳೆ ಪ್ಲಾಟ್‌ಗಳನ್ನು ಸಮೀಕ್ಷೆ ಮಾಡಲಾಗಿದೆ. ಇದು ಮಣ್ಣಿನ ಮಾಹಿತಿಯನ್ನು ಪ್ರತ್ಯೇಕ ಭೂಮಿಯ ಪಾರ್ಸೆಲ್‌ಗಳಿಗೆ ಮ್ಯಾಪ್ ಮಾಡಲು ಸಕ್ರಿಯಗೊಳಿಸಿದೆ, ಇದು ಹೆಚ್ಚು ನಿಖರವಾದ, ಸ್ಥಳ-ನಿರ್ದಿಷ್ಟ ಸಲಹೆಗಳನ್ನು ಬೆಂಬಲಿಸುತ್ತದೆ.

ಕೃತಕ ಬುದ್ಧಿಮತ್ತೆ ಮತ್ತು ನಿಖರವಾದ ಮಣ್ಣು ನಿರ್ವಹಣೆ

ಸಂಕೀರ್ಣ ಡೇಟಾವನ್ನು ರೈತರಿಗೆ ಕಾರ್ಯಸಾಧ್ಯವಾದ ಒಳಹೋಟಗಳಾಗಿ ಪರಿವರ್ತಿಸುವ ಮೂಲಕ ಕೃತಕ ಬುದ್ಧಿಮತ್ತೆಯು ಮಣ್ಣು ನಿರ್ವಹಣೆಯನ್ನು ಪರಿವರ್ತಿಸುತ್ತಿದೆ. ಡಿಜಿಟಲ್ ಕೃಷಿ ಮಿಷನ್ ಅಡಿಯಲ್ಲಿ, ಕೃಷಿ ನಿರ್ಧಾರ ಬೆಂಬಲ ವ್ಯವಸ್ಥೆಯಂತಹ ವೇದಿಕೆಗಳು ಮಣ್ಣು, ಹವಾಮಾನ ಮತ್ತು ಬೆಳೆ ಡೇಟಾವನ್ನು ಸಂಯೋಜಿಸುತ್ತವೆ. ಈ ವೇದಿಕೆಗಳು ಬೆಳೆ ಯೋಜನೆ ಮತ್ತು ಪೋಷಕಾಂಶಗಳ ನಿರ್ವಹಣೆಗಾಗಿ ಸ್ಥಳ-ನಿರ್ದಿಷ್ಟ ಸಲಹೆಗಳನ್ನು ಉತ್ಪಾದಿಸುತ್ತವೆ.

ಡೇಟಾ ಮತ್ತು ತಂತ್ರಜ್ಞಾನದ ಈ ಸಂಯೋಜನೆಯು ಮಣ್ಣಿನ ಮೌಲ್ಯಮಾಪನವನ್ನು ಸುಧಾರಿಸುತ್ತಿದೆ ಮತ್ತು ಕೃಷಿ ಮಟ್ಟದಲ್ಲಿ ತಿಳಿವಳಿಕೆಯುಳ್ಳ ನಿರ್ಧಾರಗಳನ್ನು ಬೆಂಬಲಿಸುತ್ತಿದೆ.

  • ಕೃತಕ ಬುದ್ಧಿಮತ್ತೆ ಆಧಾರಿತ ಮಣ್ಣಿನ ರೋಗನಿರ್ಣಯವು ಪೋಷಕಾಂಶಗಳ ಕೊರತೆಯನ್ನು ಗುರುತಿಸಲು ಉಪಗ್ರಹ ಚಿತ್ರಣ, ರಿಮೋಟ್ ಸೆನ್ಸಿಂಗ್ ಮತ್ತು ಕೃಷಿ ಮಟ್ಟದ ಡೇಟಾವನ್ನು ಬಳಸುತ್ತದೆ. ಇದು ಮಣ್ಣಿನ ಒತ್ತಡವನ್ನು ಪತ್ತೆ ಮಾಡುತ್ತದೆ ಮತ್ತು ಸಮಯೋಚಿತ ತಿದ್ದುಪಡಿ ಕ್ರಮಗಳನ್ನು ಬೆಂಬಲಿಸುತ್ತದೆ.
  • ಎಐ-ಸಮರ್ಥಿತ ನಿಖರವಾದ ಕೃಷಿಯು ಸ್ಥಳೀಯ ಮಣ್ಣಿನ ಪರಿಸ್ಥಿತಿಗಳ ಆಧಾರದ ಮೇಲೆ ನೀರು ಮತ್ತು ರಸಗೊಬ್ಬರಗಳ ತಾಣ-ನಿರ್ದಿಷ್ಟ ಅನ್ವಯಿಕತೆಯನ್ನು ಬೆಂಬಲಿಸುತ್ತದೆ. ಇದು ಸಂಪನ್ಮೂಲ ದಕ್ಷತೆಯನ್ನು ಸುಧಾರಿಸುತ್ತದೆ, ಇನ್‌ಪುಟ್ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ಪರಿಸರದ ಮೇಲಿನ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ.
  • ಎಐ-ಚಾಲಿತ ಸಲಹಾ ವ್ಯವಸ್ಥೆಗಳು ಬೆಳೆ ಆಯ್ಕೆ, ಬಿತ್ತನೆ ಸಮಯ ಮತ್ತು ಪೋಷಕಾಂಶಗಳ ನಿರ್ವಹಣೆಯ ಕುರಿತು ನಿರ್ಧಾರಗಳನ್ನು ತೆಗೆದುಕೊಳ್ಳಲು ರೈತರಿಗೆ ಸಹಾಯ ಮಾಡುತ್ತವೆ.
  • ಕೃಷಿ-ರೋಬೋಟಿಕ್ಸ್‌ನಲ್ಲಿನ ಪ್ರಗತಿಯು ವಿಶ್ಲೇಷಣೆ, ಬಿತ್ತನೆ ಮತ್ತು ಕ್ಷೇತ್ರ ನಿರ್ವಹಣೆಯಂತಹ ಕಾರ್ಯಾಚರಣೆಗಳನ್ನು ಉತ್ತೇಜಿಸುತ್ತಿದೆ. ಸ್ವಾಯತ್ತ ಟ್ರ್ಯಾಕ್ಟರ್‌ಗಳು ಸೇರಿದಂತೆ ತಂತ್ರಜ್ಞಾನಗಳು ಹೆಚ್ಚಿನ ನಿಖರತೆಗಾಗಿ ಜಿಪಿಎಸ್, ಕ್ಯಾಮೆರಾಗಳು ಮತ್ತು ಎಐ ಅನ್ನು ಬಳಸುತ್ತವೆ. ಐಸಿಎಆರ್‌-ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಂತಹ ಸಂಸ್ಥೆಗಳು ಮಾದರಿ ಸಂಗ್ರಹಣೆ ಮತ್ತು ಬೆಳೆ ಮೇಲ್ವಿಚಾರಣೆಗಾಗಿ ರೋಬೋಟಿಕ್ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುತ್ತಿವೆ.

ಈ ಪ್ರಗತಿಗಳು ಭಾರತದಲ್ಲಿ ನಿಖರತೆಯನ್ನು ಹೆಚ್ಚಿಸುತ್ತಿವೆ, ಉತ್ಪಾದಕತೆಯನ್ನು ಸುಧಾರಿಸುತ್ತಿವೆ ಮತ್ತು ಸುಸ್ಥಿರ ಹಾಗೂ ಹವಾಮಾನ-ಸ್ಥಿತಿಸ್ಥಾಪಕ ಕೃಷಿಗೆ ಬಲವಾದ ಅಡಿಪಾಯವನ್ನು ಒದಗಿಸುತ್ತಿವೆ.

ನಮ್ಮ ಕಾಲುಗಳ ಕೆಳಗಿರುವ ಸಂಪನ್ಮೂಲದ ಸಾಮರ್ಥ್ಯವನ್ನು ಮುಕ್ತಗೊಳಿಸುವುದು ಮಣ್ಣು ಭಾರತದ ಅತ್ಯಮೂಲ್ಯ ನೈಸರ್ಗಿಕ ಸಂಪನ್ಮೂಲಗಳಲ್ಲಿ ಒಂದಾಗಿದ್ದು, ಇದು ಕೃಷಿ, ಜೀವನಾಧಾರ ಮತ್ತು ಆಹಾರ ಭದ್ರತೆಯನ್ನು ಕಾಪಾಡಿಕೊಂಡು ಬಂದಿದೆ. ವೈಜ್ಞಾನಿಕ ಮೌಲ್ಯಮಾಪನ, ಸುಸ್ಥಿರ ಕೃಷಿ ಪದ್ಧತಿಗಳು ಮತ್ತು ಸುಧಾರಿತ ಪೋಷಕಾಂಶಗಳ ನಿರ್ವಹಣೆಯು ಇದರ ದೀರ್ಘಕಾಲೀನ ಆರೋಗ್ಯವನ್ನು ಬಲಪಡಿಸುತ್ತಿವೆ. ಮಣ್ಣಿನ ಆರೋಗ್ಯ ಕಾರ್ಡ್ ಯೋಜನೆ, ಎನ್‌ಎಂಎಸ್‌ಎ, ಎನ್‌ಎಂಎನ್‌ಎಫ್‌ ಮತ್ತು ಹಸಿರು ಭಾರತ ಮಿಷನ್‌ನಂತಹ ಉಪಕ್ರಮಗಳ ಮೂಲಕ, ದೇಶವು ವೈಜ್ಞಾನಿಕ ಮತ್ತು ಸುಸ್ಥಿರ ಮಣ್ಣಿನ ನಿರ್ವಹಣೆಯನ್ನು ಪ್ರೋತ್ಸಾಹಿಸುತ್ತಿದೆ.

ಮಣ್ಣಿನ ಆರೋಗ್ಯವನ್ನು ಸುಧಾರಿಸುವ ಪ್ರಯತ್ನಗಳು ಸಮತೋಲಿತ ಪೋಷಕಾಂಶಗಳ ಬಳಕೆ, ವರ್ಧಿತ ಸಂಪನ್ಮೂಲ ದಕ್ಷತೆ, ಕಾರ್ಬನ್ ಶೇಖರಣೆ ಮತ್ತು ಹವಾಮಾನ-ಸ್ಥಿತಿಸ್ಥಾಪಕ ಕೃಷಿಗೆ ಬೆಂಬಲ ನೀಡಿವೆ. ಅದೇ ಸಮಯದಲ್ಲಿ, ಭೂಗೋಳ ಸ್ಥಳ ನಿರ್ದೇಶನ ಮ್ಯಾಪಿಂಗ್, ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ಕೃಷಿ ವೇದಿಕೆಗಳು ಹೆಚ್ಚು ನಿಖರವಾದ ಮತ್ತು ಡೇಟಾ-ಚಾಲಿತ ಕೃಷಿ ನಿರ್ಧಾರಗಳಿಗೆ ಅವಕಾಶ ಮಾಡಿಕೊಡುತ್ತಿವೆ. 'ಖೇತ್ ಬಚಾವೋ ಅಭಿಯಾನ'ದಂತಹ ಪ್ರಯತ್ನಗಳ ಮೂಲಕ ಜಾಗೃತಿಯು ಹೆಚ್ಚುತ್ತಿದ್ದಂತೆ, ಭಾರತವು ಒಂದು ನಿರ್ಣಾಯಕ ರಾಷ್ಟ್ರೀಯ ಸಂಪನ್ಮೂಲವಾಗಿ ಮಣ್ಣಿನ ನಿಜವಾದ ಸಾಮರ್ಥ್ಯವನ್ನು ಕ್ರಮೇಣ ಮುಕ್ತಗೊಳಿಸುತ್ತಿದೆ.

References

Cabinet

https://www.pib.gov.in/PressReleasePage.aspx?PRID=2250032

Ministry of Agriculture & Farmers Welfare

https://www.pib.gov.in/PressReleaseIframePage.aspx?PRID=2007523&reg=3&lang=2

https://soilhealth.dac.gov.in/files/Manual/Updated_140723FinalDraftManualClasses6_8.pdf

https://www.pib.gov.in/PressReleseDetailm.aspx?PRID=2074728&reg=3&lang=2

https://www.agriwelfare.gov.in/Documents/AR_Eng_2024_25.pdf

ICAR-Indian Agricultural Research Institute, Indian Farming 75 (12): 49-52; December 2025

https://sansad.in/getFile/loksabhaquestions/annex/1710/AU964.pdf?source=pqals

https://www.pib.gov.in/PressReleasePage.aspx?PRID=2244625

https://www.pib.gov.in/PressReleasePage.aspx?PRID=2037660&reg=3&lang=2

https://www.pib.gov.in/PressReleasePage.aspx?PRID=2239789&reg=3&lang=2

https://soilhealth.dac.gov.in/school

https://www.pib.gov.in/PressReleaseIframePage.aspx?PRID=2222808&reg=3&lang=2

https://soilhealth.dac.gov.in/files/Five%20Success%20Stories%20of%20Farmers.pdf

https://icar-nbsslup.org.in/

https://www.pib.gov.in/PressReleasePage.aspx?PRID=2264122&reg=3&lang=1

https://www.pib.gov.in/PressReleasePage.aspx?PRID=2262471&reg=3&lang=2

https://www.pib.gov.in/PressReleaseDetail.aspx?PRID=2267236&reg=3&lang=1

Ministry of Chemicals and Fertilizers

https://www.pib.gov.in/PressReleseDetailm.aspx?PRID=2148437

Ministry of Finance

https://www.indiabudget.gov.in/economicsurvey/doc/eschapter/echap06.pdf

https://www.pib.gov.in/PressReleasePage.aspx?PRID=2219915&reg=1&lang=1

https://dbtbharat.gov.in/success-story/view?id=NA==

Ministry of Environment and Forests

https://moef.gov.in/uploads/2017/08/GIM_Mission-Document-1.pdf

https://moef.gov.in/uploads/2017/08/Revised%20Mission%20Document.pdf#:~:text=The%20Mission%20started%20with%20the%20objective%20to,State%20governments%20including%20the%20Green%20India%20Mission.

https://moef.gov.in/uploads/2018/04/NAP_E.pdf

https://www.pib.gov.in/PressReleasePage.aspx?PRID=2086742&reg=48&lang=2

PIB Backgrounders

https://www.pib.gov.in/PressReleasePage.aspx?PRID=2245639&reg=3&lang=2

https://www.pib.gov.in/PressNoteDetails.aspx?NoteId=155036&ModuleId=3&reg=3&lang=2

https://www.pib.gov.in/PressNoteDetails.aspx?NoteId=157351&ModuleId=3&reg=20&lang=1#:~:text=Soil%20Profile%20Maps:,of%20%E2%82%B915%2C000%20per%20camp

https://www.pib.gov.in/PressNoteDetails.aspx?NoteId=158761&ModuleId=3&reg=48&lang=1

United Nations

https://sdgs.un.org/goals

Click here to see pdf

 

*****

(Explainer ID: 159312) आगंतुक पटल : 24
Provide suggestions / comments
इस विज्ञप्ति को इन भाषाओं में पढ़ें: English , Urdu , हिन्दी , Bengali , Malayalam