• Sitemap
  • Advance Search
Rural Prosperity

ವಿಕಸಿತ ಭಾರತ – ಉದ್ಯೋಗ ಮತ್ತು ಜೀವನೋಪಾಯದ ಖಾತ್ರಿ ಯೋಜನೆ ಮಿಷನ್ (ಗ್ರಾಮೀಣ), 2025:

ವಿಬಿ-ಜಿ ರಾಮ್‌ ಜಿ (ವಿಕಸಿತ ಭಾರತ-ಜಿ ರಾಮ್ ಜಿ) ಕಾಯ್ದೆ, 2025

Posted On: 11 MAY 2026 11:49AM

ವಿಕಸಿತ ಭಾರತ – ಉದ್ಯೋಗ ಮತ್ತು ಜೀವನೋಪಾಯದ ಖಾತ್ರಿ ಯೋಜನೆ (ಗ್ರಾಮೀಣ) ಕಾಯ್ದೆ, 2025 ಕೂಲಿ ಉದ್ಯೋಗವನ್ನು ಸುಸ್ಥಿರ ಅಭಿವೃದ್ಧಿ ಮತ್ತು ವಿಕಸಿತ ಭಾರತ @2047ರ ದೂರದೃಷ್ಟಿಯೊಂದಿಗೆ ಜೋಡಿಸುವ ಮೂಲಕ ಗ್ರಾಮೀಣ ಉದ್ಯೋಗ ಚೌಕಟ್ಟನ್ನು ಪರಿವರ್ತಿಸಲು ಪ್ರಯತ್ನಿಸುತ್ತದೆ. ಈ ಕಾಯ್ದೆಯು ಎಲ್ಲಾ ಗ್ರಾಮೀಣ ಕುಟುಂಬಗಳಿಗೆ ಪ್ರತಿ ಹಣಕಾಸು ವರ್ಷದಲ್ಲಿ ಶಾಸನಬದ್ಧ ಉದ್ಯೋಗ ಖಾತ್ರಿಯನ್ನು 100 ರಿಂದ 125 ದಿನಗಳಿಗೆ ಹೆಚ್ಚಿಸುತ್ತದೆ. ಈ ಚೌಕಟ್ಟು ಫಲಿತಾಂಶ-ಆಧಾರಿತ ಕೆಲಸಗಳು ಮತ್ತು ಡಿಜಿಟಲ್ ಸಂಯೋಜಿತ ಯೋಜನೆಯ ಮೂಲಕ ಜಲ ಭದ್ರತೆ, ಗ್ರಾಮೀಣ ಮೂಲಸೌಕರ್ಯ, ಜೀವನೋಪಾಯದ ಆಸ್ತಿಗಳು ಮತ್ತು ವಿಪತ್ತು ಸನ್ನದ್ಧತೆಗೆ ಆದ್ಯತೆ ನೀಡುತ್ತದೆ. ಬಯೋಮೆಟ್ರಿಕ್ ದೃಢೀಕರಣ, ಜಿಯೋ-ರೆಫರೆನ್ಸಿಂಗ್, ಡಿಜಿಟಲ್ ಮೇಲ್ವಿಚಾರಣೆ ಮತ್ತು ಸಮಯಕ್ಕೆ ಸರಿಯಾಗಿ ವೇತನ ಪಾವತಿಗಳ ಮೂಲಕ ತಂತ್ರಜ್ಞಾನ-ಚಾಲಿತ ಆಡಳಿತವು ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಕಡ್ಡಾಯ ಸಾಮಾಜಿಕ ಲೆಕ್ಕಪರಿಶೋಧನೆಗಳು, ವ್ಯವಸ್ಥಿತ ಮೇಲ್ವಿಚಾರಣಾ ಕಾರ್ಯವಿಧಾನಗಳು ಮತ್ತು ಕುಂದುಕೊರತೆ ನಿವಾರಣಾ ವ್ಯವಸ್ಥೆಗಳು ಅನುಷ್ಠಾನವನ್ನು ಮತ್ತಷ್ಟು ಬಲಪಡಿಸುತ್ತವೆ. ಈ ಕಾಯ್ದೆಯು ಗ್ರಾಮೀಣ ಉದ್ಯೋಗವನ್ನು ಸುಸ್ಥಿರ ಗ್ರಾಮದ ಅಭಿವೃದ್ಧಿ ಮತ್ತು ಬಾಳಿಕೆ ಬರುವ ಆಸ್ತಿ ಸೃಷ್ಟಿಯ ಉತ್ಪಾದಕ ಪ್ರೇರಕ ಶಕ್ತಿಯನ್ನಾಗಿ ರೂಪಿಸುತ್ತದೆ.

ದೇಶದಾದ್ಯಂತ ಎಲ್ಲಾ ಗ್ರಾಮೀಣ ಪ್ರದೇಶಗಳಲ್ಲಿ ವಿಬಿ-ಜಿ ರಾಮ್ ಜಿ ಕಾಯ್ದೆಯ ಐತಿಹಾಸಿಕ ಅನುಷ್ಠಾನ

ಭಾರತ ಸರ್ಕಾರವು ವಿಕಸಿತ ಭಾರತ - ಉದ್ಯೋಗ ಮತ್ತು ಜೀವನೋಪಾಯದ ಖಾತ್ರಿ ಯೋಜನೆ (ಗ್ರಾಮೀಣ): ವಿಬಿ-ಜಿ ರಾಮ್‌ ಜಿ (ವಿಕಸಿತ ಭಾರತ—ಜಿ ರಾಮ್ ಜಿ) ಕಾಯ್ದೆ, 2025 ಅನ್ನು 01/07/2026 ರಿಂದ ಜಾರಿಗೆ ಬರುವಂತೆ ದೇಶದಾದ್ಯಂತ ಎಲ್ಲಾ ಗ್ರಾಮೀಣ ಪ್ರದೇಶಗಳಲ್ಲಿ ಅಧಿಸೂಚಿಸಿದೆ. ವಿಬಿ-ಜಿ ರಾಮ್ ಜಿ ಕಾಯ್ದೆಯು ಜಾರಿಗೆ ಬರುವುದರೊಂದಿಗೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ, 2005 ಅದೇ ದಿನಾಂಕದಿಂದ ರದ್ದಾಗುತ್ತದೆ. ಇದು ಭಾರತದ ಗ್ರಾಮೀಣಾಭಿವೃದ್ಧಿ ಚೌಕಟ್ಟಿನಲ್ಲಿ ಒಂದು ಐತಿಹಾಸಿಕ ಪರಿವರ್ತನೆಯನ್ನು ಗುರುತಿಸುತ್ತದೆ ಮತ್ತು ವಿಕಸಿತ ಭಾರತ @2047ರ ರಾಷ್ಟ್ರೀಯ ದೂರದೃಷ್ಟಿಗೆ ಅನುಗುಣವಾಗಿ ಸಮಗ್ರ, ಭವಿಷ್ಯದ ಸಿದ್ಧ ಮತ್ತು ಉತ್ಪಾದಕತೆ-ಆಧಾರಿತ ಗ್ರಾಮೀಣ ರೂಪಾಂತರದ ಹೊಸ ಯುಗಕ್ಕೆ ನಾಂದಿ ಹಾಡುತ್ತದೆ.

ಕಾಯ್ದೆಯ ಪ್ರಾರಂಭವು ಮಹಾತ್ಮ ಗಾಂಧಿ ನರೇಗಾದ ಹಿಂದಿನ ಚೌಕಟ್ಟಿನಿಂದ ಆಧುನಿಕ ಗ್ರಾಮೀಣಾಭಿವೃದ್ಧಿ ವಾಸ್ತುಶಿಲ್ಪದತ್ತ ಐತಿಹಾಸಿಕ ಪರಿವರ್ತನೆಯನ್ನು ಗುರುತಿಸುತ್ತದೆ. ಇದು ಜೀವನೋಪಾಯದ ಭದ್ರತೆ, ಬಾಳಿಕೆ ಬರುವ ಆಸ್ತಿ ಸೃಷ್ಟಿ, ತಂತ್ರಜ್ಞಾನ-ಚಾಲಿತ ಆಡಳಿತ, ಅಭಿಸರಣ-ಚಾಲಿತ ಯೋಜನೆ ಮತ್ತು ಹವಾಮಾನ ಸ್ಥಿತಿಸ್ಥಾಪಕತ್ವವನ್ನು ಸಂಯೋಜಿಸುತ್ತದೆ.

ಕೌಶಲ್ಯ ರಹಿತ ಶಾರೀರಿಕ ಕೆಲಸವನ್ನು ಮಾಡಲು ಸ್ವಯಂಪ್ರೇರಿತರಾಗಿ ಮುಂದೆ ಬರುವ ಪ್ರತಿಯೊಂದು ಗ್ರಾಮೀಣ ಕುಟುಂಬಕ್ಕೆ ಪ್ರತಿ ಹಣಕಾಸು ವರ್ಷದಲ್ಲಿ 125 ದಿನಗಳ ಕೂಲಿ ಉದ್ಯೋಗದ ಶಾಸನಬದ್ಧ ಖಾತ್ರಿಯನ್ನು ಈ ಕಾಯ್ದೆಯು ಸ್ಥಾಪಿಸುತ್ತದೆ. ಈ ವರ್ಧಿತ ಕಾತ್ರಿಯು ಗ್ರಾಮೀಣ ಕುಟುಂಬದ ಆದಾಯ, ಜೀವನೋಪಾಯದ ಭದ್ರತೆ, ಗ್ರಾಮ ಮಟ್ಟದ ಮೂಲಸೌಕರ್ಯ ಸೃಷ್ಟಿ ಮತ್ತು ಸುಸ್ಥಿರ ಗ್ರಾಮೀಣಾಭಿವೃದ್ಧಿಗೆ ಹೊಸ ಚೈತನ್ಯವನ್ನು ನೀಡುವ ನಿರೀಕ್ಷೆಯಿದೆ. ಅದೇ ಸಮಯದಲ್ಲಿ, ಇದು ಜಲ ಭದ್ರತೆ, ಗ್ರಾಮೀಣ ಮೂಲಸೌಕರ್ಯ, ಗ್ರಾಮೀಣ ಜೀವನೋಪಾಯಗಳು, ಸ್ಥಳೀಯ ಆರ್ಥಿಕ ಬೆಳವಣಿಗೆ ಮತ್ತು ಹವಾಮಾನ ಸಂಬಂಧಿತ ಸವಾಲುಗಳ ವಿರುದ್ಧ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸುವ ಬಾಳಿಕೆ ಬರುವ ಮತ್ತು ಉತ್ಪಾದಕ ಗ್ರಾಮೀಣ ಮೂಲಸೌಕರ್ಯವನ್ನು ಸೃಷ್ಟಿಸಲು ಪ್ರಯತ್ನಿಸುತ್ತದೆ.

ಹಿನ್ನೆಲೆ ಮತ್ತು ಸುಧಾರಣೆಯ ಅಗತ್ಯತೆ

ಹಲವು ದಶಕಗಳಿಂದ, ಕೂಲಿ-ಉದ್ಯೋಗ ಕಾರ್ಯಕ್ರಮಗಳು ಭಾರತದ ಗ್ರಾಮೀಣಾಭಿವೃದ್ಧಿ ಕಾರ್ಯತಂತ್ರದ ಅವಿಭಾಜ್ಯ ಅಂಗವಾಗಿವೆ, ಅರೆ-ಉದ್ಯೋಗ ಮತ್ತು ಜೀವನೋಪಾಯದ ಅಭದ್ರತೆಯನ್ನು ಎದುರಿಸುತ್ತಿರುವ ಗ್ರಾಮೀಣ ಕುಟುಂಬಗಳಿಗೆ ಆದಾಯದ ಬೆಂಬಲವನ್ನು ನೀಡುತ್ತವೆ.

ಕಾಲಾನಂತರದಲ್ಲಿ, ವಿಸ್ತರಿತ ಸಾಮಾಜಿಕ ರಕ್ಷಣೆ, ಸುಧಾರಿತ ಭೌತಿಕ ಮತ್ತು ಡಿಜಿಟಲ್ ಸಂಪರ್ಕ, ವರ್ಧಿತ ಹಣಕಾಸು ಒಳಗೊಳ್ಳುವಿಕೆ ಮತ್ತು ಜೀವನೋಪಾಯದ ವೈವಿಧ್ಯೀಕರಣದಿಂದಾಗಿ ಗ್ರಾಮೀಣ ಆರ್ಥಿಕತೆಯು ಗಮನಾರ್ಹ ರೂಪಾಂತರಕ್ಕೆ ಒಳಗಾಗಿದೆ. ಈ ಬೆಳವಣಿಗೆಗಳು ಸಮಕಾಲೀನ ಅಗತ್ಯಗಳು ಮತ್ತು ಆಕಾಂಕ್ಷೆಗಳಿಗೆ ಹಾಗೂ ವಿಕಸಿತ ಭಾರತ @2047ರ ರಾಷ್ಟ್ರೀಯ ದೂರದೃಷ್ಟಿಗೆ ಅನುಗುಣವಾಗಿ ಅಸ್ತಿತ್ವದಲ್ಲಿರುವ ಗ್ರಾಮೀಣ ಉದ್ಯೋಗ ಚೌಕಟ್ಟಿನ ಮರುಮಾಪನವನ್ನು ಅನಿವಾರ್ಯಗೊಳಿಸುತ್ತವೆ.

ಈ ಉದ್ದೇಶದ ಮುಂದುವರಿಕೆಯಾಗಿ, ಒಂದು ಹಣಕಾಸು ವರ್ಷದಲ್ಲಿ ಶಾಸನಬದ್ಧ ಉದ್ಯೋಗದ ಖಾತ್ರಿಯನ್ನು ನೂರು ದಿನಗಳಿಂದ ನೂರ ಇಪ್ಪತ್ತೈದು ದಿನಗಳಿಗೆ ಹೆಚ್ಚಿಸುವ ಮೂಲಕ ಜೀವನೋಪಾಯದ ಖಾತ್ರಿ ಚೌಕಟ್ಟನ್ನು ಬಲಪಡಿಸಲು ಪ್ರಸ್ತಾಪಿಸಲಾಗಿದೆ. ವರ್ಧಿತ ಖಾತ್ರಿಯು ಗ್ರಾಮೀಣಾಭಿವೃದ್ಧಿಯ ವೇಗವರ್ಧಿತ ಗತಿಗೆ ಬೆಂಬಲ ನೀಡಲು, ಹೆಚ್ಚಿನ ಆದಾಯದ ಭದ್ರತೆಯನ್ನು ಒದಗಿಸಲು ಮತ್ತು ವಿಸ್ತರಿತ ಉದ್ಯೋಗಾವಕಾಶಗಳ ಮೂಲಕ ಗ್ರಾಮೀಣ ಕುಟುಂಬಗಳನ್ನು ಸಬಲೀಕರಣಗೊಳಿಸಲು ಉದ್ದೇಶಿಸಿದೆ.

ಅದರಂತೆ, ವಿಕಸಿತ ಭಾರತ @2047 ರ ದೃಷ್ಟಿಕೋನದೊಂದಿಗೆ ಜೀವನೋಪಾಯದ ಭದ್ರತೆಯನ್ನು ಉತ್ಪಾದಕತೆ, ಅಭಿಸರಣ, ಸ್ಥಿತಿಸ್ಥಾಪಕತ್ವ ಮತ್ತು ಸುಸ್ಥಿರ ಆಸ್ತಿ ಸೃಷ್ಟಿಯೊಂದಿಗೆ ಸಂಯೋಜಿಸುವ ಭವಿಷ್ಯದ ಸಿದ್ಧ ಗ್ರಾಮೀಣಾಭಿವೃದ್ಧಿ ಚೌಕಟ್ಟನ್ನು ಸ್ಥಾಪಿಸಲು ವಿಕಸಿತ ಭಾರತ - ಉದ್ಯೋಗ ಮತ್ತು ಜೀವನೋಪಾಯದ ಖಾತ್ರಿ ಯೋಜನೆ (ಗ್ರಾಮೀಣ): ವಿಬಿ-ಜಿ ರಾಮ್ ಜಿ ಕಾಯ್ದೆ, 2025 ಎಂಬ ಹೊಸ ಶಾಸನವನ್ನು ಜಾರಿಗೆ ತರಲಾಗಿದೆ.

ವಿಬಿ-ಜಿ ರಾಮ್ ಜಿ ಕಾಯ್ದೆ, 2025 ಎಂಬುದು ಗ್ರಾಮೀಣ ಉದ್ಯೋಗವನ್ನು ವಿಕಸಿತ ಭಾರತ @2047 ರ ರಾಷ್ಟ್ರೀಯ ದೂರದೃಷ್ಟಿಯೊಂದಿಗೆ ಜೋಡಿಸಲು ವಿನ್ಯಾಸಗೊಳಿಸಲಾದ ಸಮಗ್ರ ಶಾಸನಾತ್ಮಕ ಮರುಹೊಂದಿಕೆಯಾಗಿದೆ. ಡಿಸೆಂಬರ್ 2025 ರಲ್ಲಿ ಸಂಸತ್ತಿನಿಂದ ಅಂಗೀಕರಿಸಲ್ಪಟ್ಟ ಈ ಕಾಯ್ದೆಯು ಎರಡು ದಶಕಗಳ ಹಳೆಯದಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ, 2005 ಅನ್ನು ಬದಲಿಸುತ್ತದೆ. ಇದು ಕೇವಲ ಕಲ್ಯಾಣ ಮಧ್ಯಸ್ಥಿಕೆಯ ಬದಲಾಗಿ ಅಭಿವೃದ್ಧಿ ಮತ್ತು ಅಭಿವೃದ್ಧಿ ಮೂಲಸೌಕರ್ಯದ ಸಮಗ್ರ ಸಾಧನವಾಗಿ ಗಮನವನ್ನು ಬದಲಾಯಿಸುತ್ತದೆ.

ವರ್ಧಿತ ಜೀವನೋಪಾಯ ಖಾತ್ರಿ ಮತ್ತು ಕಾರ್ಮಿಕ-ಕೇಂದ್ರಿತ ಚೌಕಟ್ಟು

ಎಲ್ಲಾ ಗ್ರಾಮೀಣ ಕುಟುಂಬಗಳಿಗೆ ಪ್ರತಿ ಹಣಕಾಸು ವರ್ಷದಲ್ಲಿ ಶಾಸನಬದ್ಧ ಉದ್ಯೋಗ ಖಾತ್ರಿಯನ್ನು 100 ದಿನಗಳಿಂದ 125 ದಿನಗಳಿಗೆ ಹೆಚ್ಚಿಸಿರುವುದು ಈ ಕಾಯ್ದೆಯ ಪ್ರಮುಖ ಲಕ್ಷಣವಾಗಿದೆ. ಈ ವರ್ಧಿತ ಖಾತ್ರಿಯು ಜೀವನೋಪಾಯದ ಭದ್ರತೆಯನ್ನು ಬಲಪಡಿಸಲು, ಆದಾಯದ ಸ್ಥಿರತೆಯನ್ನು ಸುಧಾರಿಸಲು, ಗ್ರಾಮೀಣ ಬಳಕೆಯನ್ನು ಬೆಂಬಲಿಸಲು ಮತ್ತು ದುರ್ಬಲ ಕುಟುಂಬಗಳಿಗೆ ಹೆಚ್ಚಿನ ಆರ್ಥಿಕ ಸ್ಥಿತಿಸ್ಥಾಪಕತ್ವವನ್ನು ಒದಗಿಸಲು ಉದ್ದೇಶಿಸಿದೆ.

ಈ ಚೌಕಟ್ಟನ್ನು ಉದ್ಯೋಗ  ಭಿ, ಸಮ್ಮಾನ್ ಭಿ” (ಉದ್ಯೋಗವೂ ಕೂಡ, ಗೌರವವೂ ಕೂಡ) ಅಂದರೆ 'ಗೌರವದೊಂದಿಗೆ ಉದ್ಯೋಗ' ಎಂಬ ತತ್ವದ ಸುತ್ತ ವಿನ್ಯಾಸಗೊಳಿಸಲಾಗಿದೆ. ಇದರ ಉದ್ದೇಶ ಕೇವಲ ಕೂಲಿ ಉದ್ಯೋಗವನ್ನು ಒದಗಿಸುವುದು ಮಾತ್ರವಲ್ಲದೆ, ದೀರ್ಘಕಾಲೀನ ಗ್ರಾಮದ ಅಭಿವೃದ್ಧಿಗೆ ಕೊಡುಗೆ ನೀಡುವ ಬಾಳಿಕೆ ಬರುವ ಮತ್ತು ಉತ್ಪಾದಕ ಸಾರ್ವಜನಿಕ ಆಸ್ತಿಗಳ ಸೃಷ್ಟಿಯಲ್ಲಿ ಗ್ರಾಮೀಣ ಕಾರ್ಮಿಕರು ಸಕ್ರಿಯ ಭಾಗಿಗಳಾಗುವುದನ್ನು ಖಚಿತಪಡಿಸಿಕೊಳ್ಳುವುದು.

ಮಹಾತ್ಮ ಗಾಂಧಿ ನರೇಗಾದಿಂದ ಹೊಸ ಚೌಕಟ್ಟಿಗೆ ಪರಿವರ್ತನೆಯನ್ನು ತಡೆರಹಿತ ಮತ್ತು ಕಾರ್ಮಿಕ ಸ್ನೇಹಿ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಅಸ್ತಿತ್ವದಲ್ಲಿರುವ ಇ-ಕೆವೈಸಿ ಪರಿಶೀಲಿಸಿದ ಜಾಬ್ ಕಾರ್ಡ್‌ಗಳು, ಗ್ರಾಮೀಣ ಉದ್ಯೋಗ  ಖಾತ್ರಿ ಕಾರ್ಡ್‌ಗಳನ್ನು ವಿತರಿಸುವವರೆಗೆ ಮಾನ್ಯವಾಗಿರುತ್ತವೆ. ಪ್ರಸ್ತುತ ಜಾಬ್ ಕಾರ್ಡ್‌ಗಳನ್ನು ಹೊಂದಿರದ ಕಾರ್ಮಿಕರು ನೋಂದಣಿ ಮತ್ತು ಹೊಸ ಕಾರ್ಡ್‌ಗಳ ವಿತರಣೆಗಾಗಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಅರ್ಜಿ ಸಲ್ಲಿಸಬಹುದು. ಕೇವಲ ಇ-ಕೆವೈಸಿ ಬಾಕಿ ಇರುವ ಕಾರಣಕ್ಕಾಗಿ ಕಾರ್ಮಿಕರಿಗೆ ಉದ್ಯೋಗವನ್ನು ನಿರಾಕರಿಸಲಾಗುವುದಿಲ್ಲ ಮತ್ತು ಅಗತ್ಯವಿರುವ ಕಡೆಗಳಲ್ಲಿ ಕೆಲಸದ ಸ್ಥಳಗಳೂ ಸೇರಿದಂತೆ ಇ-ಕೆವೈಸಿ ಪೂರ್ಣಗೊಳಿಸಲು ಸುಗಮಗೊಳಿಸುವ ಕಾರ್ಯವಿಧಾನಗಳನ್ನು ಒದಗಿಸಲಾಗಿದೆ.

ಕಾರ್ಮಿಕರು ಮೌಖಿಕವಾಗಿ, ಅಸ್ತಿತ್ವದಲ್ಲಿರುವ ಫಾರ್ಮ್-6 ಚೌಕಟ್ಟಿನ ಮೂಲಕ ಲಿಖಿತವಾಗಿ ಅಥವಾ ಡಿಜಿಟಲ್ ವೇದಿಕೆಗಳ ಮೂಲಕ ಉದ್ಯೋಗಕ್ಕಾಗಿ ಬೇಡಿಕೆಯನ್ನು ಮುಂದುವರಿಸಬಹುದು. ನಿಗದಿತ ಕಾಲಮಿತಿಯೊಳಗೆ ಉದ್ಯೋಗವನ್ನು ಒದಗಿಸುವುದನ್ನು ಮುಂದುವರಿಸಲಾಗುವುದು, ಒಂದು ವೇಳೆ ವಿಫಲವಾದಲ್ಲಿ ಕಾರ್ಮಿಕರು ಕಾಯ್ದೆಯ ನಿಬಂಧನೆಗಳ ಪ್ರಕಾರ ನಿರುದ್ಯೋಗ ಭತ್ಯೆಗೆ ಅರ್ಹರಾಗಿರುತ್ತಾರೆ. ನಿರುದ್ಯೋಗ ಭತ್ಯೆಯು ಹಣಕಾಸು ವರ್ಷದ ಮೊದಲ ಮೂವತ್ತು ದಿನಗಳವರೆಗೆ ಅಧಿಸೂಚಿತ ವೇತನ ದರದ ನಾಲ್ಕನೇ ಒಂದು ಭಾಗಕ್ಕಿಂತ ಕಡಿಮೆಯಿಲ್ಲದಂತೆ ಮತ್ತು ಹಣಕಾಸು ವರ್ಷದ ಉಳಿದ ಅವಧಿಗೆ ಅಧಿಸೂಚಿತ ವೇತನ ದರದ ಅರ್ಧಕ್ಕಿಂತ ಕಡಿಮೆಯಿಲ್ಲದಂತೆ ಪಾವತಿಸಬೇಕಾಗುತ್ತದೆ, ಆ ಮೂಲಕ ಉದ್ಯೋಗದ ಕಾನೂನು ಖಾತ್ರಿ ಮತ್ತು ಅನುಷ್ಠಾನ ಚೌಕಟ್ಟಿನ ಹೊಣೆಗಾರಿಕೆಯನ್ನು ಬಲಪಡಿಸಲಾಗುತ್ತದೆ.

ಸಕಾಲಿಕ ವೇತನ ಪಾವತಿಗಳು ಮತ್ತು ಬಲವರ್ಧಿತ ಪಾರದರ್ಶಕತೆ

ಈ ಕಾಯ್ದೆಯು ಸಕಾಲಿಕ, ಪಾರದರ್ಶಕ ಮತ್ತು ಜವಾಬ್ದಾರಿಯುತ ವೇತನ ಪಾವತಿಗಳಿಗೆ ಹೆಚ್ಚಿನ ಮಹತ್ವ ನೀಡುತ್ತದೆ. ಪಾರದರ್ಶಕತೆಯನ್ನು ಬಲಪಡಿಸಲು ಮತ್ತು ವಿಳಂಬವನ್ನು ಕಡಿಮೆ ಮಾಡಲು ವೇತನವನ್ನು ನೇರ ಲಾಭ ವರ್ಗಾವಣೆ ಮೂಲಕ ಕಾರ್ಮಿಕರ ಬ್ಯಾಂಕ್ ಅಥವಾ ಅಂಚೆ ಕಚೇರಿ ಖಾತೆಗಳಿಗೆ ನೇರವಾಗಿ ವರ್ಗಾಯಿಸುವುದನ್ನು ಮುಂದುವರಿಸಲಾಗುವುದು.

ಈ ಚೌಕಟ್ಟಿನಡಿಯಲ್ಲಿ, ವೇತನವನ್ನು ವಾರಕ್ಕೊಮ್ಮೆ ಅಥವಾ ಮಸ್ಟರ್ ರೋಲ್ ಮುಚ್ಚಿದ ಹದಿನೈದು ದಿನಗಳ ಒಳಗೆ ಪಾವತಿಸಬೇಕು. ನಿಗದಿತ ಅವಧಿಗಿಂತ ವೇತನ ಪಾವತಿ ವಿಳಂಬವಾದ ಸಂದರ್ಭಗಳಲ್ಲಿ, ಕಾರ್ಮಿಕರು ಕಾಯ್ದೆಯ ನಿಬಂಧನೆಗಳ ಪ್ರಕಾರ ವಿಳಂಬ ಪರಿಹಾರಕ್ಕೆ ಅರ್ಹರಾಗಿರುತ್ತಾರೆ. ಮಸ್ಟರ್ ರೋಲ್ ಮುಚ್ಚಿದ ದಿನಾಂಕದಿಂದ ಹದಿನೈದು ದಿನಗಳೊಳಗೆ ವೇತನ ಪಾವತಿ ಮಾಡದಿದ್ದರೆ, ಉದ್ಯೋಗಾಕಾಂಕ್ಷಿಗಳು ಹದಿನಾರನೇ ದಿನದಿಂದ ಅನ್ವಯವಾಗುವಂತೆ ವಿಳಂಬದ ಪ್ರತಿ ದಿನಕ್ಕೆ ಪಾವತಿಸದ ವೇತನದ ಶೇಕಡಾ 0.05 ರಷ್ಟು ದರದಲ್ಲಿ ವಿಳಂಬ ಪರಿಹಾರ ಪಡೆಯಲು ಅರ್ಹರಾಗಿರುತ್ತಾರೆ ಎಂದು ಕಾಯ್ದೆಯು ಮತ್ತಷ್ಟು ನಿಬಂಧನೆ ನೀಡುತ್ತದೆ. ಈ ಕ್ರಮಗಳು ವೇತನ ವಿತರಣೆಯಲ್ಲಿ ಹೊಣೆಗಾರಿಕೆಯನ್ನು ಬಲಪಡಿಸಲು ಮತ್ತು ಕಾರ್ಮಿಕರಿಗೆ ಸಕಾಲಿಕ ಪಾವತಿಯನ್ನು ಖಚಿತಪಡಿಸಿಕೊಳ್ಳಲು ಉದ್ದೇಶಿಸಲಾಗಿದೆ.

ಕೆಲಸದ ಸ್ಥಳಗಳಲ್ಲಿ ಹಾಜರಾತಿಯನ್ನು ಎನ್‌ಎಂಎಂಎಸ್‌-ಸಕ್ರಿಯಗೊಳಿಸಿದ ವ್ಯವಸ್ಥೆಗಳು ಮತ್ತು ಮುಖದ ದೃಢಿಕರಣ ಆಧಾರಿತ ಹಾಜರಾತಿ ಕಾರ್ಯವಿಧಾನಗಳ ಮೂಲಕ ಸೆರೆಹಿಡಿಯಲಾಗುತ್ತದೆ. ಅದೇ ಸಮಯದಲ್ಲಿ, ತಾಂತ್ರಿಕ ಅಥವಾ ನೆಟ್‌ವರ್ಕ್ ಸಂಪರ್ಕ ಸಂಬಂಧಿತ ಸಮಸ್ಯೆಗಳಿಂದಾಗಿ ನೈಜ ಕಾರ್ಮಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಸೂಕ್ತವಾದ 'ವಿನಾಯಿತಿ ನಿರ್ವಹಣೆ' ನಿಬಂಧನೆಗಳನ್ನು ಸಹ ಸೇರಿಸಲಾಗಿದೆ.

ಒಂದು ಸಡೆರಹಿತ ಪರಿವರ್ತನೆ: "ಉದ್ಯೋಗ  ಭಿ, ಸಮ್ಮಾನ್ ಭಿ"

ಕಾಯ್ದೆಯಡಿಯಲ್ಲಿ ಗ್ರಾಮೀಣ ಕಾರ್ಮಿಕರ ಹಿತಾಸಕ್ತಿಗಳನ್ನು ರಕ್ಷಿಸುವ ಒಂದು ಸುಗಮ ಪರಿವರ್ತನೆಯೇ ಸರ್ಕಾರದ ಪ್ರಾಥಮಿಕ ಉದ್ದೇಶವಾಗಿದೆ.

  • ಎಲ್ಲಾ ಗ್ರಾಮೀಣ ಪ್ರದೇಶಗಳಿಗೆ ಅಧಿಸೂಚನೆ: ಈ ಕಾಯ್ದೆಯ ನಿಬಂಧನೆಗಳು ಪ್ರಾರಂಭದ ದಿನಾಂಕದಿಂದ ದೇಶಾದ್ಯಂತದ ಎಲ್ಲಾ ಗ್ರಾಮೀಣ ಪ್ರದೇಶಗಳಲ್ಲಿ ಏಕಕಾಲದಲ್ಲಿ ಜಾರಿಗೆ ಬರುತ್ತವೆ. ಅದೇ ಸಮಯದಲ್ಲಿ, ಮಹಾತ್ಮ ಗಾಂಧಿ ನರೇಗಾ ಅದೇ ದಿನಾಂಕದಿಂದ ಅಂದರೆ 01/07/2026 ರಿಂದ ಜಾರಿಗೆ ಬರುವಂತೆ ರದ್ದಾಗುತ್ತದೆ.
  • ಮಹಾತ್ಮ ಗಾಂಧಿ ನರೇಗಾ ಅಡಿಯಲ್ಲಿ ಉದ್ಯೋಗ: ವಿಬಿ-ಜಿ ರಾಮ್ ಜಿ ಕಾಯ್ದೆ ಪ್ರಾರಂಭವಾಗುವವರೆಗೆ ಮಹಾತ್ಮ ಗಾಂಧಿ ನರೇಗಾ ಅಡಿಯಲ್ಲಿ ಉದ್ಯೋಗವು ತಡೆರಹಿತ ಮತ್ತು ಸುಗಮ ರೀತಿಯಲ್ಲಿ ಮುಂದುವರಿಯುತ್ತದೆ.
  • ಸರ್ಕಾರದ ಅತ್ಯುನ್ನತ ಆದ್ಯತೆಯು ಉದ್ಯೋಗದ ಸಕಾಲಿಕ ಲಭ್ಯತೆ ಮತ್ತು ಕಾರ್ಮಿಕರಿಗೆ ತ್ವರಿತವಾಗಿ ವೇತನ ಪಾವತಿಯನ್ನು ಖಚಿತಪಡಿಸಿಕೊಳ್ಳುವುದಾಗಿದೆ. ಅಡೆತಡೆಯಿಲ್ಲದ ಉದ್ಯೋಗಾವಕಾಶಗಳನ್ನು ಖಚಿತಪಡಿಸಿಕೊಳ್ಳಲು, ಉದಯೋನ್ಮುಖ ಬೇಡಿಕೆಯ ಮಾದರಿಗಳು ಮತ್ತು ಕ್ಷೇತ್ರಗಳ ಅಗತ್ಯಗಳಿಗೆ ಅನುಗುಣವಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಾಕಷ್ಟು ಕಾರ್ಮಿಕ ಅನುದಾನವನ್ನು ಲಭ್ಯವಾಗುವಂತೆ ಮಾಡಲಾಗಿದೆ.
  • ಕಾರ್ಮಿಕರ ಮುಂದುವರಿಕೆ: ಹೊಸ ಗ್ರಾಮೀಣ ಉದ್ಯೋಗ ಖಾತ್ರಿ ಕಾರ್ಡ್‌ಗಳನ್ನು ನೀಡುವವರೆಗೆ, ಇ-ಕೆವೈಸಿ ಪೂರ್ಣಗೊಳಿಸಿದ ಕಾರ್ಮಿಕರ ಅಸ್ತಿತ್ವದಲ್ಲಿರುವ ಜಾಬ್ ಕಾರ್ಡ್‌ಗಳು ಪರಿವರ್ತನೆಯ ಅವಧಿಯಲ್ಲಿ ಮಾನ್ಯವಾಗಿರುತ್ತವೆ.
  • ನಡೆಯುತ್ತಿರುವ ಕಾಮಗಾರಿಗಳು: ಪ್ರಾರಂಭದ ದಿನಾಂಕದಂದು ನರೇಗಾ ಅಡಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳು ಹೊಸ ಕಾಯ್ದೆಯ ಅಡಿಯಲ್ಲಿ ಮುಂದುವರಿಯಬಹುದು.
  • ಹೊಸ ಕಾಮಗಾರಿಗಳು: ಉದ್ಯೋಗದ ಬೇಡಿಕೆಯನ್ನು ಪೂರೈಸಲು ನಡೆಯುತ್ತಿರುವ ಕಾಮಗಾರಿಗಳು ಸಾಕಾಗದೇ ಇರುವಲ್ಲಿ, ಹೊಸ ಕಾಯ್ದೆಯ ಅನುಸೂಚಿ-I ಕ್ಕೆ ಅನುಗುಣವಾಗಿ ಹೊಸ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬಹುದು.

ಐತಿಹಾಸಿಕ ಬಜೆಟ್ ಬದ್ಧತೆ

ದೇಶಾದ್ಯಂತ ಹೊಸ ಚೌಕಟ್ಟಿನ ಅನುಷ್ಠಾನಕ್ಕಾಗಿ ಭಾರತ ಸರ್ಕಾರವು ವ್ಯಾಪಕವಾದ ಹಣಕಾಸಿನ ನಿಬಂಧನೆಗಳನ್ನು ಮಾಡಿದೆ. ಈ ಕಾರ್ಯಕ್ರಮದ ಅಡಿಯಲ್ಲಿ 2026-27ರ ಹಣಕಾಸು ವರ್ಷಕ್ಕೆ ಕೇಂದ್ರದ ಪಾಲಾಗಿ ₹95,692.31 ಕೋಟಿ ರೂಪಾಯಿಗಳ ನಿಬಂಧನೆಯನ್ನು ಮಾಡಲಾಗಿದೆ. ಇದು ಗ್ರಾಮೀಣ ಉದ್ಯೋಗ ಕಾರ್ಯಕ್ರಮವೊಂದಕ್ಕೆ ಬಜೆಟ್ ಅಂದಾಜು ಹಂತದಲ್ಲಿ ಈವರೆಗೆ ನೀಡಲಾದ ಅತಿದೊಡ್ಡ ಹಂಚಿಕೆಯಾಗಿದೆ. ಈ ನಿಬಂಧನೆಯು ಸರ್ಕಾರದ ಆದ್ಯತೆ, ಪ್ರಮಾಣ ಮತ್ತು ಬದ್ಧತೆಯನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ, ಇದರ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಮತ್ತು ಜೀವನೋಪಾಯದ ಅವಕಾಶಗಳು ಹೊಸ ವೇಗವನ್ನು ಪಡೆಯುವ ನಿರೀಕ್ಷೆಯಿದೆ.

ಅಂದಾಜು ರಾಜ್ಯದ ಪಾಲನ್ನು ಒಳಗೊಂಡಂತೆ, ಒಟ್ಟು ಕಾರ್ಯಕ್ರಮದ ವೆಚ್ಚವು ₹1.51 ಲಕ್ಷ ಕೋಟಿಗಿಂತ ಹೆಚ್ಚಾಗುವ ನಿರೀಕ್ಷೆಯಿದೆ. ಈ ಬೃಹತ್ ಹಣಕಾಸು ಒದಗಿಸುವಿಕೆಯು ಗ್ರಾಮೀಣ ಆರ್ಥಿಕತೆಯಲ್ಲಿ ದೊಡ್ಡ ಪ್ರಮಾಣದ ರೂಪಾಂತರವನ್ನು ತರುವ, ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸುವ, ಗ್ರಾಮ ಮಟ್ಟದಲ್ಲಿ ಬಾಳಿಕೆ ಬರುವ ಆಸ್ತಿಗಳನ್ನು ಸೃಷ್ಟಿಸುವ ಮತ್ತು ಗ್ರಾಮೀಣ ಕುಟುಂಬಗಳ ಆದಾಯದಲ್ಲಿ ಗಮನಾರ್ಹ ಬೆಳವಣಿಗೆಯನ್ನು ಖಚಿತಪಡಿಸುವ ಸರ್ಕಾರದ ವಿಶ್ವಾಸಾರ್ಹ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ಕ್ಷೇತ್ರ ಮಟ್ಟದ ಸಿಬ್ಬಂದಿ: ಸಾಮರ್ಥ್ಯ, ಹೊಣೆಗಾರಿಕೆ ಮತ್ತು ದಕ್ಷತೆ ಪಿಓಗಳು, ಮೇಟ್‌ಗಳು ಮತ್ತು ಗ್ರಾಮ ಉದ್ಯೋಗ ಸೇವಕರು ಮತ್ತು ಇತರ ಕ್ಷೇತ್ರ ಮಟ್ಟದ ಸಿಬ್ಬಂದಿಗಳ ಪಾತ್ರವು ವಿಬಿ-ಜಿ ರಾಮ್ ಜಿ ಗೆ ಸುಗಮವಾಗಿ ಪರಿವರ್ತನೆಯಾಗುವಲ್ಲಿ ಪ್ರಮುಖವಾಗಿದೆ. ಈ ಕಾಯ್ದೆಯಡಿ, ಆಡಳಿತಾತ್ಮಕ ವೆಚ್ಚವನ್ನು ಶೇಕಡಾ 6 ರಿಂದ ಶೇಕಡಾ 9 ಕ್ಕೆ ಹೆಚ್ಚಿಸಲಾಗಿದೆ, ಇದು ಸಾಮರ್ಥ್ಯ ವೃದ್ಧಿ, ತರಬೇತಿ, ಮಾನವ ಸಂಪನ್ಮೂಲಗಳ ಬಲವರ್ಧನೆ, ಸಂಭಾವನೆ ಪಾವತಿ ಮತ್ತು ಕ್ಷೇತ್ರ ಮಟ್ಟದಲ್ಲಿ ಸುಧಾರಿತ ಅನುಷ್ಠಾನವನ್ನು ಉತ್ತೇಜಿಸುತ್ತದೆ. ಈ ವ್ಯವಸ್ಥಿತ ಸುಧಾರಣೆಯು ತಳಮಟ್ಟದಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ಹೆಚ್ಚು ದಕ್ಷರು ಮತ್ತು ಸಬಲೀಕರಣಗೊಳ್ಳುವುದನ್ನು ಖಚಿತಪಡಿಸುತ್ತದೆ.

ಕೆಲಸದ ವಿಸ್ತರಿತ ವ್ಯಾಪ್ತಿ: ಅಭಿವೃದ್ಧಿಗೆ ಹೊಸ ವೇಗ

ವಿಕಸಿತ ಭಾರತ–ಜಿ ರಾಮ್‌ ಜಿ ಕಾಯ್ದೆ, 2025ರ ಅಡಿಯಲ್ಲಿ, ಕೆಲಸಗಳ ವ್ಯಾಪ್ತಿಯನ್ನು ಗಣನೀಯವಾಗಿ ವಿಸ್ತರಿಸಲಾಗಿದೆ ಮತ್ತು ವಿಕಸಿತ ಭಾರತ @2047ರ ಗುರಿಯೊಂದಿಗೆ ಜೋಡಿಸಲಾಗಿದೆ. ಕೆಲಸಗಳನ್ನು ನಾಲ್ಕು ಪ್ರಮುಖ ವಿಷಯಾಧಾರಿತ ಕ್ಷೇತ್ರಗಳಾಗಿ ವಿಂಗಡಿಸಲಾಗಿದೆ: ಜಲ ಭದ್ರತೆ, ಪ್ರಮುಖ ಗ್ರಾಮೀಣ ಮೂಲಸೌಕರ್ಯ, ಜೀವನೋಪಾಯಕ್ಕೆ ಸಂಬಂಧಿಸಿದ ಮೂಲಸೌಕರ್ಯ ಮತ್ತು ವಿಪರೀತ ಹವಾಮಾನ ಘಟನೆಗಳನ್ನು ತಗ್ಗಿಸುವ ಕೆಲಸಗಳು. ಇದು ಅನುಷ್ಠಾನದಲ್ಲಿ ಹೆಚ್ಚು ಫಲಿತಾಂಶ-ಆಧಾರಿತ ಮತ್ತು ಸುಸಂಘಟಿತ ವಿಧಾನವನ್ನು ಶಕ್ತಗೊಳಿಸುತ್ತದೆ.

ಕಾಯ್ದೆಯಡಿ ಅನುಮತಿಸಲಾದ ಕೆಲಸಗಳು ಕೇವಲ ಸಾಂಪ್ರದಾಯಿಕ ಕಾರ್ಮಿಕ-ಆಧಾರಿತ ಚಟುವಟಿಕೆಗಳಿಗೆ ಸೀಮಿತವಾಗಿಲ್ಲ, ಆದರೆ ಗ್ರಾಮೀಣ ಜೀವನದ ಗುಣಮಟ್ಟವನ್ನು ನೇರವಾಗಿ ಹೆಚ್ಚಿಸುವ ಬಹು ಆಯಾಮದ ಕೆಲಸಗಳನ್ನು ಒಳಗೊಂಡಿವೆ. ಇದು ಹೆಚ್ಚಿನ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸುವ ಬಾಳಿಕೆ ಬರುವ ಆಸ್ತಿಗಳನ್ನು ಸೃಷ್ಟಿಸುತ್ತದೆ. ಈ ವಿಧಾನವು "ಉದ್ಯೋಗದ ಜೊತೆಗೆ ಗೌರವ" ಎಂಬ ತತ್ವವನ್ನು ಆಧರಿಸಿದೆ, ಇದರಲ್ಲಿ ಕಾರ್ಮಿಕರು ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಸಕ್ರಿಯ ಭಾಗಿಗಳಾಗುತ್ತಾರೆ.

ಪ್ರತಿ ದಿನದ ಉದ್ಯೋಗವು ಬಾಳಿಕೆ ಬರುವ ಮತ್ತು ಉತ್ಪಾದಕ ಗ್ರಾಮೀಣ ಮೂಲಸೌಕರ್ಯಗಳ ಸೃಷ್ಟಿಗೆ ಕೊಡುಗೆ ನೀಡುವುದನ್ನು ಖಚಿತಪಡಿಸಿಕೊಳ್ಳಲು ಕೆಲಸಗಳ ವಿಷಯಾಧಾರಿತ ಆದ್ಯತೆಯನ್ನು ಪರಿಚಯಿಸಲಾಗಿದೆ.

ಜಲ ಭದ್ರತೆ ಕೆಲಸಗಳು ನೀರಾವರಿ ಬೆಂಬಲ, ಅಂತರ್ಜಲ ಮರುಪೂರಣ ರಚನೆಗಳು, ಜಲಾನಯನ ಅಭಿವೃದ್ಧಿ, ಜಲಮೂಲಗಳ ಪುನಶ್ಚೇತನ, ಅರಣ್ಯೀಕರಣ ಮತ್ತು ಮಳೆನೀರು ಕೊಯ್ಲು ರಚನೆಗಳನ್ನು ಒಳಗೊಂಡಿರುತ್ತವೆ, ಇವು ಗ್ರಾಮೀಣ ಪ್ರದೇಶಗಳಲ್ಲಿ ದೀರ್ಘಕಾಲೀನ ನೀರಿನ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸುವ ಗುರಿಯನ್ನು ಹೊಂದಿವೆ.

ಪ್ರಮುಖ ಗ್ರಾಮೀಣ ಮೂಲಸೌಕರ್ಯ ಕೆಲಸಗಳು ಗ್ರಾಮೀಣ ರಸ್ತೆಗಳು, ಸಾರ್ವಜನಿಕ ಕಟ್ಟಡಗಳು, ಶಾಲಾ ಮೂಲಸೌಕರ್ಯಗಳು, ಅಂಗನವಾಡಿ ಕೇಂದ್ರಗಳು, ನೈರ್ಮಲ್ಯ ವ್ಯವಸ್ಥೆಗಳು, ನವೀಕರಿಸಬಹುದಾದ ಇಂಧನ ಮೂಲಸೌಕರ್ಯಗಳು, ವಸತಿ ಸಂಬಂಧಿತ ಕೆಲಸಗಳು ಮತ್ತು ವಿವಿಧ ಸರ್ಕಾರಿ ಯೋಜನೆಗಳ ಅಡಿಯಲ್ಲಿನ ಕೆಲಸಗಳನ್ನು ಒಳಗೊಂಡಿರುತ್ತವೆ, ಆ ಮೂಲಕ ಮೂಲಭೂತ ಸೌಕರ್ಯಗಳು ಮತ್ತು ಸಾರ್ವಜನಿಕ ಸೇವೆಗಳ ಲಭ್ಯತೆಯನ್ನು ಸುಧಾರಿಸುತ್ತದೆ.

ಜೀವನೋಪಾಯಕ್ಕೆ ಸಂಬಂಧಿಸಿದ ಮೂಲಸೌಕರ್ಯಗಳು ಗ್ರಾಮೀಣ ಮಾರುಕಟ್ಟೆಗಳು, ಸಂಗ್ರಹಣಾ ಮೂಲಸೌಕರ್ಯಗಳು, ಆಹಾರ ಸಂಸ್ಕರಣಾ ಘಟಕಗಳು, ಶೀತಲಿಕರಣ ಘಟಕ ಸೌಲಭ್ಯಗಳು, ಜಾನುವಾರು ಮೂಲಸೌಕರ್ಯಗಳು, ಮೀನುಗಾರಿಕೆ ಮೂಲಸೌಕರ್ಯಗಳು, ಕಾಂಪೋಸ್ಟ್ ಘಟಕಗಳು ಮತ್ತು ಕೌಶಲ್ಯ ಅಭಿವೃದ್ಧಿ ಕೇಂದ್ರಗಳನ್ನು ಒಳಗೊಂಡಿರುತ್ತವೆ. ಈ ಮಧ್ಯಸ್ಥಿಕೆಗಳು ಸ್ಥಳೀಯ ಜೀವನೋಪಾಯವನ್ನು ಬಲಪಡಿಸುವ, ಗ್ರಾಮೀಣ ಆದಾಯವನ್ನು ವೈವಿಧ್ಯಗೊಳಿಸುವ ಮತ್ತು ಕೃಷಿ ಆಧಾರಿತ ಆರ್ಥಿಕ ಚಟುವಟಿಕೆಗಳನ್ನು ಬೆಂಬಲಿಸುವ ನಿರೀಕ್ಷೆಯಿದೆ.

ಈ ಚೌಕಟ್ಟು ವಿಪರೀತ ಹವಾಮಾನ ಘಟನೆಗಳ ತಗ್ಗಿಸುವಿಕೆ ಮತ್ತು ಹವಾಮಾನ ವೈಪರೀತ್ಯಕ್ಕೆ ಸಂಬಂಧಿಸಿದ ಕೆಲಸಗಳಿಗೆ ಆದ್ಯತೆ ನೀಡುತ್ತದೆ, ಇದರಲ್ಲಿ ಪ್ರವಾಹ ನಿರ್ವಹಣಾ ರಚನೆಗಳು, ಒಡ್ಡುಗಳು, ಚಂಡಮಾರುತ ಪೀಡಿತ ಪ್ರದೇಶದ ಜನರ ಆಶ್ರಯ ತಾಣಗಳು, ವಿಪತ್ತು ನಂತರದ ಪುನಃಸ್ಥಾಪನೆ ಮತ್ತು ಕಾಳ್ಗಿಚ್ಚು ನಿರ್ವಹಣಾ ಕೆಲಸಗಳು ಸೇರಿವೆ.

ಈ ವಿಷಯಾಧಾರಿತ ವಿಧಾನದ ಮೂಲಕ, ಗ್ರಾಮೀಣ ಉದ್ಯೋಗವು ನೇರವಾಗಿ ಉತ್ಪಾದಕ ಆಸ್ತಿ ಸೃಷ್ಟಿ, ಸ್ಥಳೀಯ ಆರ್ಥಿಕ ಅಭಿವೃದ್ಧಿ ಮತ್ತು ಸ್ಥಿತಿಸ್ಥಾಪಕತ್ವ-ನಿರ್ಮಾಣದೊಂದಿಗೆ ಸಂಬಂಧ ಹೊಂದಿದೆ.

ಈ ಕೆಲಸಗಳು ಉದ್ಯೋಗ ಸೃಷ್ಟಿ, ಮೌಲ್ಯವರ್ಧನೆ, ಕೃಷಿ ಆಧಾರಿತ ಕೈಗಾರಿಕೆಗಳ ವಿಸ್ತರಣೆ ಮತ್ತು ಸುಧಾರಿತ ಸೇವೆಗಳ ಲಭ್ಯತೆಯನ್ನು ಖಚಿತಪಡಿಸುತ್ತದೆ, ಆ ಮೂಲಕ ಗ್ರಾಮೀಣ ಆರ್ಥಿಕತೆಗೆ ಸ್ಥಿರತೆಯನ್ನು ತರುತ್ತದೆ ಮತ್ತು ಆದಾಯದ ಮೂಲಗಳನ್ನು ವೈವಿಧ್ಯಗೊಳಿಸುತ್ತದೆ.

ಕೃಷಿ ಅವಧಿಯಲ್ಲಿ ಸಮತೋಲನ: ರೈತರು ಮತ್ತು ಕಾರ್ಮಿಕರ ಇಬ್ಬರ ಹಿತಾಸಕ್ತಿಗಳ ರಕ್ಷಣೆ

 ಬಿತ್ತನೆ ಮತ್ತು ಕೊಯ್ಲು ಕಾಲದಲ್ಲಿ ಕೃಷಿ ಕಾರ್ಮಿಕರ ಪೂರೈಕೆಯನ್ನು ಸುಗಮಗೊಳಿಸಲು, ಒಂದು ಹಣಕಾಸು ವರ್ಷದಲ್ಲಿ ಒಟ್ಟು ಅರವತ್ತು ದಿನಗಳವರೆಗೆ 'ವಿರಾಮದ ಅವಧಿ'ಯನ್ನು ಅಧಿಸೂಚಿಸಲು ಕಾಯ್ದೆಯು ರಾಜ್ಯಗಳಿಗೆ ಅಧಿಕಾರ ನೀಡುತ್ತದೆ (ಸೆಕ್ಷನ್ 6). ಪೂರ್ಣ 125 ದಿನಗಳ ಉದ್ಯೋಗ ಖಾತ್ರಿಯು ಹಾಗೆಯೇ ಉಳಿಯುತ್ತದೆ ಮತ್ತು ಇದನ್ನು ಉಳಿದ ಅವಧಿಯಲ್ಲಿ ಒದಗಿಸಲಾಗುತ್ತದೆ, ಇದು ಕೃಷಿ ಉತ್ಪಾದಕತೆ ಮತ್ತು ಕಾರ್ಮಿಕರ ಭದ್ರತೆ ಎರಡನ್ನೂ ಬೆಂಬಲಿಸುವ ಸಮತೋಲನವನ್ನು ಖಚಿತಪಡಿಸುತ್ತದೆ.

ವಿಕಸಿತ ಗ್ರಾಮ ಪಂಚಾಯತ್ ಯೋಜನೆ (ವಿಜಿಪಿಪಿ - ಯೋಜನಾ ಚೌಕಟ್ಟು)

ವಿಕಸಿತ ಭಾರತ @2047ರ ದೃಷ್ಟಿಕೋನಕ್ಕೆ ಅನುಗುಣವಾಗಿ, ಗ್ರಾಮೀಣ ಭಾರತವು ಹೊಸ ಮತ್ತು ಪರಿವರ್ತನೆಯ ಹಂತವನ್ನು ಪ್ರವೇಶಿಸುತ್ತಿದೆ. ಅಭಿವೃದ್ಧಿಯ ದಿಕ್ಕು ಇನ್ನು ಮುಂದೆ ಕೇವಲ ಕೂಲಿ ಉದ್ಯೋಗಕ್ಕೆ ಸೀಮಿತವಾಗಿಲ್ಲ, ಆದರೆ "ಉದ್ಯೋಗ, ಜೀವನೋಪಾಯ ಮತ್ತು ಉತ್ಪಾದಕ ಆಸ್ತಿಗಳ ಸೃಷ್ಟಿ"ಯ ಸಮಗ್ರ ಮಾದರಿಯತ್ತ ವಿಕಸನಗೊಳ್ಳುತ್ತಿದೆ. ವಿಕಸಿತ ಭಾರತ–ಜಿ ರಾಮ್‌ ಜಿ ಯೋಜನೆಯು ಈ ಸಮಗ್ರ ಮತ್ತು ವಿಕೇಂದ್ರೀಕೃತ ವಿಧಾನವನ್ನು ಪ್ರತಿಬಿಂಬಿಸುತ್ತದೆ, ಗ್ರಾಮ ಪಂಚಾಯತ್‌ಗಳನ್ನು ಅಭಿವೃದ್ಧಿಯ ಕೇಂದ್ರದಲ್ಲಿರಿಸುತ್ತದೆ ಮತ್ತು ಯೋಜನೆ ಮತ್ತು ಅನುಷ್ಠಾನದಲ್ಲಿ ಅವರಿಗೆ ನೈಜ ಅಧಿಕಾರವನ್ನು ನೀಡುತ್ತದೆ. ವಿಕಸಿತ ಗ್ರಾಮ ಪಂಚಾಯತ್ ಯೋಜನೆಗಳ ತಯಾರಿಕೆಯ ಮೂಲಕ, ಗ್ರಾಮ ಪಂಚಯಿತಿಗಳೇ ತಮ್ಮ ಅಭಿವೃದ್ಧಿಯ ದಿಕ್ಕನ್ನು ನಿರ್ಧರಿಸುತ್ತವೆ.

ಈ ಚೌಕಟ್ಟಿನಡಿಯಲ್ಲಿ, ಯೋಜನಾ ಪ್ರಕ್ರಿಯೆಯನ್ನು 'ಕೆಳಗಿನಿಂದ ಮೇಲಕ್ಕೆ' ಎಂಬ ವಿಧಾನದಲ್ಲಿ ರೂಪಿಸಲಾಗಿದೆ, ಇಲ್ಲಿ ಗ್ರಾಮ ಪಂಚಾಯಿತಿಗಳು ಗ್ರಾಮ ಸಭೆಗಳ ಮೂಲಕ ಸ್ಥಳೀಯ ಅಗತ್ಯಗಳ ಆಧಾರದ ಮೇಲೆ ಕೆಲಸಗಳನ್ನು ಗುರುತಿಸುತ್ತವೆ ಮತ್ತು ಆದ್ಯತೆ ನೀಡುತ್ತವೆ. ಈ ವ್ಯವಸ್ಥೆಯು ಪಿಎಂ ಗತಿ ಶಕ್ತಿ, ಜಿಐಎಸ್‌ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳೊಂದಿಗೆ ಸಂಯೋಜಿಸಲ್ಪಟ್ಟಿದೆ, ಇದು ವೈಜ್ಞಾನಿಕ ಮತ್ತು ಪ್ರಾದೇಶಿಕ ಯೋಜನೆಯನ್ನು ಖಚಿತಪಡಿಸುತ್ತದೆ.

ಕೆಲಸದ ಸ್ಥಳದ ಸೌಲಭ್ಯಗಳು: ಕಾರ್ಮಿಕರ ಗೌರವ ಮತ್ತು ಸುರಕ್ಷತೆಗೆ ಒತ್ತು

ವಿಕಸಿತ ಭಾರತ- ಜಿ ರಾಮ್‌ ಜಿ ಕಾಯ್ದೆ, 2025ರ ಅನುಸೂಚಿ IIರ ಅಡಿಯಲ್ಲಿ, ಕೆಲಸದ ಸ್ಥಳದ ಸೌಲಭ್ಯಗಳಿಗೆ ಕಾನೂನು ಖಾತ್ರಿ ನೀಡಲಾಗಿದೆ, ಇದು ಕೇವಲ ಆಡಳಿತಾತ್ಮಕ ವ್ಯವಸ್ಥೆಯಾಗಿ ಉಳಿಯದೆ ಕಾರ್ಮಿಕರ ಗೌರವ ಮತ್ತು ಮಾನವ ಗೌರವದ ಪ್ರಬಲ ಸಂಕೇತವಾಗಿದೆ. ಈ ನಿಬಂಧನೆಯ ಅಡಿಯಲ್ಲಿ, ಪ್ರತಿ ಕೆಲಸದ ಸ್ಥಳದಲ್ಲಿ ಶುದ್ಧ ಕುಡಿಯುವ ನೀರಿನ ಲಭ್ಯತೆಯನ್ನು ಕಡ್ಡಾಯಗೊಳಿಸಲಾಗಿದೆ. ವಿಶೇಷವಾಗಿ ಗ್ರಾಮೀಣ ಭಾರತದ ಬೇಸಿಗೆಯ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು, ಕಾರ್ಮಿಕರನ್ನು ಬಿಸಿಲಿನಿಂದ ರಕ್ಷಿಸಲು ನೆರಳು ಮತ್ತು ವಿಶ್ರಾಂತಿ ಸ್ಥಳಗಳಿಗೆ ಸಾಕಷ್ಟು ವ್ಯವಸ್ಥೆಗಳನ್ನು ಖಚಿತಪಡಿಸಲಾಗಿದೆ. ಹೆಚ್ಚುವರಿಯಾಗಿ, ಪ್ರತಿ ಕೆಲಸದ ಸ್ಥಳದಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆಯ ಲಭ್ಯತೆಯನ್ನು ಖಚಿತಪಡಿಸಲಾಗಿದೆ, ಇದರಿಂದ ಕಾರ್ಮಿಕರ ಸುರಕ್ಷತೆ ಮತ್ತು ಆರೋಗ್ಯಕ್ಕೆ ಆದ್ಯತೆ ನೀಡಲಾಗುತ್ತದೆ.

ಮಹಿಳಾ ಕಾರ್ಮಿಕರ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಕಾಯ್ದೆಯಲ್ಲಿ ಪ್ರಮುಖ ನಿಬಂಧನೆಯನ್ನು ಸೇರಿಸಲಾಗಿದೆ. ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ, ಐದು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳು ಇರುವ ಕೆಲಸದ ಸ್ಥಳಗಳಲ್ಲಿ, ಮಕ್ಕಳನ್ನು ನೋಡಿಕೊಳ್ಳಲು ಒಬ್ಬ ಮಹಿಳಾ ಕಾರ್ಮಿಕರನ್ನು ನೇಮಿಸಲಾಗುತ್ತದೆ ಮತ್ತು ಅವರಿಗೆ ನಿಗದಿತ ವೇತನ ದರದಲ್ಲಿ ಹಣ ಪಾವತಿಸಲಾಗುತ್ತದೆ. ಈ ವ್ಯವಸ್ಥೆಯು ಮಹಿಳೆಯರಿಗೆ ಕೆಲಸದ ನಿರಂತರತೆಯನ್ನು ಖಚಿತಪಡಿಸುವುದಲ್ಲದೆ, ಕೆಲಸದ ಸ್ಥಳವನ್ನು ಹೆಚ್ಚು ಅಂತರ್ಗತವಾಗಿ ಮತ್ತು ಅವರ ಅಗತ್ಯಗಳಿಗೆ ಸ್ಪಂದಿಸುವಂತೆ ಮಾಡುತ್ತದೆ.

ಇದರ ಜೊತೆಗೆ, ಕಾರ್ಮಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ಅಪಘಾತಗಳ ಸಂದರ್ಭದಲ್ಲಿ ಉಚಿತ ವೈದ್ಯಕೀಯ ಚಿಕಿತ್ಸೆಯ ಹಕ್ಕನ್ನು ನೀಡಲಾಗಿದೆ. ಆಸ್ಪತ್ರೆಗೆ ದಾಖಲಿಸಬೇಕಾದ ಅಗತ್ಯವಿದ್ದರೆ, ವಸತಿ, ಚಿಕಿತ್ಸೆ, ಔಷಧಗಳು ಮತ್ತು ವೇತನ ದರದ ಅರ್ಧದಷ್ಟು ದೈನಂದಿನ ಭತ್ಯೆಗೆ ಅವಕಾಶ ಕಲ್ಪಿಸಲಾಗುತ್ತದೆ. ಸಾವು ಅಥವಾ ಶಾಶ್ವತ ಅಂಗವೈಕಲ್ಯದ ಸಂದರ್ಭದಲ್ಲಿ, ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಯ ನಿಬಂಧನೆಗಳ ಪ್ರಕಾರ ಪರಿಹಾರ ಧನ ಪಾವತಿಸಲಾಗುತ್ತದೆ. ಹೀಗಾಗಿ, ಕಾಯ್ದೆಯು ಕೆಲಸದ ಸ್ಥಳದಲ್ಲಿ ಸುರಕ್ಷತೆ, ಸೂಕ್ಷ್ಮತೆ ಮತ್ತು ಸಾಮಾಜಿಕ ಭದ್ರತೆಯ ಸಮಗ್ರ ಚೌಕಟ್ಟನ್ನು ಖಚಿತಪಡಿಸುತ್ತದೆ.

ಮಂಜೂರಾದ ಕೆಲಸಗಳು, ಕಾರ್ಮಿಕರ ಅಂದಾಜುಗಳು, ವೆಚ್ಚ ಮತ್ತು ಸಾಮಗ್ರಿಗಳ ಬಳಕೆಗೆ ಸಂಬಂಧಿಸಿದ ವಿವರಗಳನ್ನು ಪ್ರದರ್ಶಿಸುವ ಕಡ್ಡಾಯ 'ಜನತಾ ಬೋರ್ಡ್‌'ಗಳ ಮೂಲಕ ಕೆಲಸದ ಸ್ಥಳಗಳಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಬಲಪಡಿಸಲಾಗುತ್ತದೆ. ಈ ಚೌಕಟ್ಟು ಸಾಪ್ತಾಹಿಕ ಸಾರ್ವಜನಿಕ ಬಹಿರಂಗಪಡಿಸುವಿಕೆ ವ್ಯವಸ್ಥೆಗಳು, ಆಸ್ತಿಗಳ ಜಿಯೋ-ಟ್ಯಾಗಿಂಗ್, ನೈಜ-ಸಮಯದ ಡ್ಯಾಶ್‌ಬೋರ್ಡ್‌ಗಳು, ಮೊಬೈಲ್ ಆಧಾರಿತ ಮೇಲ್ವಿಚಾರಣೆ ಮತ್ತು ತಳಮಟ್ಟದಲ್ಲಿ ಪಾರದರ್ಶಕತೆ, ಸಮುದಾಯದ ಭಾಗವಹಿಸುವಿಕೆ ಮತ್ತು ಪರಿಣಾಮಕಾರಿ ಸಾರ್ವಜನಿಕ ಮೇಲ್ವಿಚಾರಣೆಯನ್ನು ಖಚಿತಪಡಿಸಿಕೊಳ್ಳಲು ಬಲಪಡಿಸಿದ ಸಾಮಾಜಿಕ ಲೆಕ್ಕಪರಿಶೋಧನೆಗಳಿಗೆ ಅವಕಾಶ ನೀಡುತ್ತದೆ.

ಅನುಷ್ಠಾನದಲ್ಲಿ ವಿಶೇಷ ವಿನಾಯಿತಿಗಳು

ನೈಸರ್ಗಿಕ ವಿಕೋಪಗಳು ಅಥವಾ ಇತರ ಅಸಾಧಾರಣ ಸಂದರ್ಭಗಳಲ್ಲಿ, ಅಗತ್ಯವಿರುವಂತೆ ವಿಶೇಷ ವಿನಾಯಿತಿಗಳನ್ನು ನೀಡಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡಲಾಗುವುದು. ಇದು ಪೀಡಿತ ಪ್ರದೇಶಗಳಲ್ಲಿ ಪರಿಹಾರ ಮತ್ತು ಪುನರ್ವಸತಿ ಚಟುವಟಿಕೆಗಳನ್ನು ತ್ವರಿತವಾಗಿ ಮತ್ತು ಅಡೆತಡೆಯಿಲ್ಲದೆ ನಡೆಸುವುದನ್ನು ಮತ್ತು ಪೀಡಿತ ಸಮುದಾಯಗಳು ಸಕಾಲಿಕ ಸಹಾಯವನ್ನು ಪಡೆಯುವುದನ್ನು ಖಚಿತಪಡಿಸುತ್ತದೆ.

ವಿಬಿ-ಜಿ ರಾಮ್ ಜಿ ಕಾಯ್ದೆಯ ಪ್ರಮುಖ ಲಕ್ಷಣಗಳು

ಗ್ರಾಮೀಣಾಭಿವೃದ್ಧಿ ಚೌಕಟ್ಟನ್ನು ವಿಕಸಿತ ಭಾರತ 2047 ರೊಂದಿಗೆ ಜೋಡಿಸುವುದು

ವಿಕಸಿತ ಭಾರತ - ಉದ್ಯೋಗ ಖಾತ್ರಿ ಮತ್ತು ಅಜೀವಿಕಾ ಯೋಜನೆ (ಗ್ರಾಮೀಣ): ವಿಬಿ– ಜಿ ರಾಮ್ ಜಿ ಕಾಯ್ದೆ, 2025 ಅನ್ನು ಗ್ರಾಮೀಣಾಭಿವೃದ್ಧಿ ಚೌಕಟ್ಟನ್ನು ವಿಕಸಿತ ಭಾರತ @ 2047ರ ರಾಷ್ಟ್ರೀಯ ದೃಷ್ಟಿಕೋನದೊಂದಿಗೆ ಜೋಡಿಸಲು ರೂಪಿಸಲಾಗಿದೆ. ಇದರಿಂದ ಕೂಲಿ ಉದ್ಯೋಗ, ಆಸ್ತಿ ಸೃಷ್ಟಿ ಮತ್ತು ಸಾರ್ವಜನಿಕ ಹೂಡಿಕೆಗಳು ಒಟ್ಟಾಗಿ ಹೆಚ್ಚು ಸಮೃದ್ಧ, ಅಭಿವೃದ್ಧಿ ಮತ್ತು ಸಮಗ್ರ ಗ್ರಾಮೀಣ ಭಾರತವನ್ನು ನಿರ್ಮಿಸುತ್ತವೆ. ಗ್ರಾಮೀಣ ಕಾಮಗಾರಿಗಳನ್ನು ಹಳ್ಳಿಗಳಲ್ಲಿ ಉತ್ತಮ ಮೂಲಸೌಕರ್ಯ, ಬಲವಾದ ಜೀವನೋಪಾಯ ಮತ್ತು ಹೆಚ್ಚಿನ ಹವಾಮಾನ ಸ್ಥಿತಿಸ್ಥಾಪಕತ್ವವನ್ನು ನೀಡಲು ಕೇಂದ್ರ ಸಾಧನವಾಗಿ ಇರಿಸಲಾಗಿದೆ, ವಿಕಸಿತ ಪಂಚಾಯತ್ ಮೂಲಕ ವಿಕಸಿತ ಭಾರತ ಸಾಕಾರಗೊಳ್ಳುವುದನ್ನು ಇದು ಖಚಿತಪಡಿಸುತ್ತದೆ.

ಅಣುಸರಣ ಮತ್ತು ಪರಿಪೂರ್ಣತೆ ಆಧಾರಿತ ವಿಧಾನ

ಈ ದೃಷ್ಟಿಕೋನವನ್ನು ಪ್ರಾಯೋಗಿಕವಾಗಿ ಭಾಷಾಂತರಿಸಲು, ಕಾಯ್ದೆಯು ಅಭಿಸರಣ ಮತ್ತು ಪರಿಪೂರ್ಣತೆ ಆಧಾರಿತ ವಿಧಾನವನ್ನು ಅಳವಡಿಸಿಕೊಂಡಿದೆ. ಇದು ಪೂರಕ ಸರ್ಕಾರಿ ಯೋಜನೆಗಳನ್ನು ಒಂದೇ, ಸುಸಂಬದ್ಧ ಗ್ರಾಮೀಣಾಭಿವೃದ್ಧಿ ವಾಸ್ತುಶಿಲ್ಪದ ಅಡಿಯಲ್ಲಿ ತರುತ್ತದೆ. ನಿಧಿಗಳು, ಇಲಾಖೆಗಳು ಮತ್ತು ಕಾರ್ಯಕ್ರಮಗಳು ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಾಮರಸ್ಯದಿಂದ ಕೆಲಸ ಮಾಡುವ ನಿರೀಕ್ಷೆಯಿದೆ. ಇಲ್ಲಿ ಯೋಜನೆಯು ಚದುರಿದ ಅಥವಾ ಒಂದು ಬಾರಿಯ ಕೆಲಸಗಳನ್ನು ಬೆಂಬಲಿಸುವ ಬದಲು, ಎಲ್ಲಾ ಅರ್ಹ ಕುಟುಂಬಗಳನ್ನು ಒಳಗೊಳ್ಳುವ ಮತ್ತು ವ್ಯವಸ್ಥಿತವಾಗಿ ನಿರ್ಣಾಯಕ ಅಂತರಗಳನ್ನು ಮುಚ್ಚುವ ಗುರಿಯನ್ನು ಹೊಂದಿದೆ.

ವಿಷಯಾಧಾರಿತ, ಆಸ್ತಿ ಕೇಂದ್ರಿತ ಸಾರ್ವಜನಿಕ ಕಾಮಗಾರಿಗಳು

ಈ ಅಡಿಪಾಯದ ಮೇಲೆ, ಕಾಯ್ದೆಯು ಸಾರ್ವಜನಿಕ ಕಾಮಗಾರಿಗಳ ವ್ಯವಸ್ಥಿತ ವಿಷಯಾಧಾರಿತ ಆದ್ಯತೆಯನ್ನು ಬಳಸುತ್ತದೆ, ಇದರಿಂದಾಗಿ ಪ್ರತಿ ದಿನದ ಖಾತ್ರಿ ಉದ್ಯೋಗವು ಉತ್ಪಾದಕ ಮತ್ತು ಬಾಳಿಕೆ ಬರುವ ಗ್ರಾಮೀಣ ಆಸ್ತಿಗಳನ್ನು ಸೃಷ್ಟಿಸುತ್ತದೆ. ವಿಕಸಿತ ಗ್ರಾಮ ಪಂಚಾಯಿತಿ ಯೋಜನೆಗಳ ಮೂಲಕ ಗುರುತಿಸಲಾದ ಎಲ್ಲಾ ಕಾಮಗಾರಿಗಳನ್ನು ವಿಕಸಿತ ಭಾರತ-ರಾಷ್ಟ್ರೀಯ ಗ್ರಾಮೀಣ ಮೂಲಸೌಕರ್ಯ ಸ್ಟ್ಯಾಕ್ ನೊಂದಿಗೆ ಸಂಯೋಜಿಸಲಾಗಿದೆ, ಇದು ವಿಕಸಿತ ಭಾರತ ದೃಷ್ಟಿಕೋನಕ್ಕೆ ಸಂಪೂರ್ಣವಾಗಿ ಹೊಂದಿಕೆಯಾಗುವ ಏಕೀಕೃತ ಮತ್ತು ಮುಂದಾಲೋಚನೆಯ ಗ್ರಾಮೀಣ ಮೂಲಸೌಕರ್ಯ ಚೌಕಟ್ಟನ್ನು ಸೃಷ್ಟಿಸುತ್ತದೆ.

ನಾಲ್ಕು ಆದ್ಯತೆಯ ವಿಷಯಾಧಾರಿತ ಕ್ಷೇತ್ರಗಳು

ಜಲ ಭದ್ರತೆ: ಸಂರಕ್ಷಣಾ ರಚನೆಗಳು, ನೀರಾವರಿ ಬೆಂಬಲ, ಅಂತರ್ಜಲ ಮರುಪೂರಣ, ಜಲಮೂಲಗಳ ಪುನಶ್ಚೇತನ, ಜಲಾನಯನ ಅಭಿವೃದ್ಧಿ ಮತ್ತು ಅರಣ್ಯೀಕರಣದಂತಹ ನೀರು ಸಂಬಂಧಿತ ಕಾಮಗಾರಿಗಳು ಗ್ರಾಮೀಣ ಪ್ರದೇಶಗಳಲ್ಲಿ ಜಲ ಭದ್ರತೆಯನ್ನು ಬಲಪಡಿಸುತ್ತವೆ.

ಪ್ರಮುಖ ಗ್ರಾಮೀಣ ಮೂಲಸೌಕರ್ಯ: ಅಗತ್ಯ ನಾಗರಿಕ, ಸಾಮಾಜಿಕ ಮತ್ತು ಸೇವಾ ವಿತರಣಾ ಆಸ್ತಿಗಳು — ಗ್ರಾಮೀಣ ರಸ್ತೆಗಳು, ಸಾರ್ವಜನಿಕ ಕಟ್ಟಡಗಳು, ಶಾಲಾ ಮೂಲಸೌಕರ್ಯಗಳು, ನೈರ್ಮಲ್ಯ ವ್ಯವಸ್ಥೆಗಳು, ನವೀಕರಿಸಬಹುದಾದ ಇಂಧನ ಸೌಲಭ್ಯಗಳು ಮತ್ತು ಕೇಂದ್ರ ಸರ್ಕಾರದ ಯೋಜನೆಗಳ ಅಡಿಯಲ್ಲಿನ ವಸತಿ ಕಾಮಗಾರಿಗಳು — ಉತ್ತಮ ಮೂಲಭೂತ ಸೌಕರ್ಯಗಳು ಮತ್ತು ಸೇವೆಗಳಿಗೆ ಸುಧಾರಿತ ಪ್ರವೇಶವನ್ನು ಖಚಿತಪಡಿಸುತ್ತವೆ.

ಜೀವನೋಪಾಯಕ್ಕೆ ಸಂಬಂಧಿಸಿದ ಮೂಲಸೌಕರ್ಯ: ಕೃಷಿ, ಪಶುಸಂಗೋಪನೆ, ಮೀನುಗಾರಿಕೆ, ಸಂಗ್ರಹಣೆ, ಮಾರುಕಟ್ಟೆಗಳು, ಕೌಶಲ್ಯ ಅಭಿವೃದ್ಧಿ ಮತ್ತು ವೃತ್ತಾಕಾರದ ಆರ್ಥಿಕ ಮಾದರಿಗಳ ಉತ್ಪಾದಕ ಆಸ್ತಿಗಳು ಸುಸ್ಥಿರ ಜೀವನೋಪಾಯ, ಮೌಲ್ಯವರ್ಧನೆ ಮತ್ತು ವೈವಿಧ್ಯಮಯ ಗ್ರಾಮೀಣ ಆದಾಯದ ಅವಕಾಶಗಳನ್ನು ಬೆಂಬಲಿಸುತ್ತವೆ.

ವಿಪರೀತ ಹವಾಮಾನ ಘಟನೆಗಳಿಗಾಗಿ ವಿಶೇಷ ಕಾಮಗಾರಿಗಳು: ವಿಪತ್ತು ಸನ್ನದ್ಧತೆ ಮತ್ತು ಹವಾಮಾನ ಹೊಂದಾಣಿಕೆಯ ಕಾಮಗಾರಿಗಳು — ಅಂದರೆ ಆಶ್ರಯ ತಾಣಗಳು, ಒಡ್ಡುಗಳು, ಪ್ರವಾಹ ನಿರ್ವಹಣಾ ರಚನೆಗಳು, ಪುನರ್ವಸತಿ ಕಾಮಗಾರಿಗಳು ಮತ್ತು ಕಾಳ್ಗಿಚ್ಚು ನಿರ್ವಹಣೆ — ಹವಾಮಾನ-ಸ್ಥಿತಿಸ್ಥಾಪಕ ಗ್ರಾಮಗಳನ್ನು ರಚಿಸಲು ಸಹಾಯ ಮಾಡುತ್ತದೆ.

ಈ ವಿಷಯಾಧಾರಿತ ಗಮನದ ಮೂಲಕ, ಸಾರ್ವಜನಿಕ ಕಾಮಗಾರಿಗಳು ಏಕಕಾಲದಲ್ಲಿ ಜಲ ಭದ್ರತೆಯನ್ನು ವೃದ್ಧಿಸುವಂತೆ, ಪ್ರಮುಖ ಗ್ರಾಮೀಣ ವ್ಯವಸ್ಥೆಗಳನ್ನು ಬಲಪಡಿಸುವಂತೆ, ಜೀವನೋಪಾಯದ ಅವಕಾಶಗಳನ್ನು ವಿಸ್ತರಿಸುವಂತೆ ಮತ್ತು ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸುವಂತೆ ಈ ಕಾಯ್ದೆಯು ಖಚಿತಪಡಿಸುತ್ತದೆ. ಆ ಮೂಲಕ ವಿಕಸಿತ ಭಾರತ 2047 ರ ರಾಷ್ಟ್ರೀಯ ದೃಷ್ಟಿಕೋನಕ್ಕೆ ಅನುಗುಣವಾಗಿ ಸಬಲೀಕರಣ, ಬೆಳವಣಿಗೆ, ಅಭಿಸರಣ ಮತ್ತು ಸ್ಯಾಚುರೇಶನ್ ಅನ್ನು ಬೆಂಬಲಿಸುತ್ತದೆ.

ಆಧುನಿಕ, ತಂತ್ರಜ್ಞಾನ ಆಧಾರಿತ ಆಡಳಿತ

ಪರಿಣಾಮಕಾರಿ ಅನುಷ್ಠಾನ, ಹೊಣೆಗಾರಿಕೆ ಮತ್ತು ಉನ್ನತ ಮಟ್ಟದ ಸೇವಾ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಈ ಕಾಯ್ದೆಯು ಆಧುನಿಕ, ಪಾರದರ್ಶಕ ಮತ್ತು ತಂತ್ರಜ್ಞಾನ ಆಧಾರಿತ ಆಡಳಿತ ಚೌಕಟ್ಟನ್ನು ಸ್ಥಾಪಿಸುತ್ತದೆ. ಆಳವಾದ ಡಿಜಿಟಲ್ ಪ್ರವೇಶ, ಸುಧಾರಿತ ಸಂಪರ್ಕ ಮತ್ತು ವಿಸ್ತರಿತ ಸಾರ್ವಜನಿಕ ಮೂಲಸೌಕರ್ಯಗಳನ್ನು ಹೊಂದಿರುವ ಗ್ರಾಮೀಣ ಭಾರತದಲ್ಲಿ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ನೈಜ-ಸಮಯದ ಮೇಲ್ವಿಚಾರಣೆ ಮತ್ತು ವರ್ಧಿತ ಪಾರದರ್ಶಕತೆ ಕಾರ್ಯವಿಧಾನಗಳ ಮೂಲಕ ಆಡಳಿತ ವ್ಯವಸ್ಥೆಗಳನ್ನು ಬಲಪಡಿಸಲಾಗುತ್ತದೆ.

ಈ ಚೌಕಟ್ಟು ಬಯೋಮೆಟ್ರಿಕ್ ದೃಢೀಕರಣ, ಮೊಬೈಲ್ ಆಧಾರಿತ ಮೇಲ್ವಿಚಾರಣೆ, ಪ್ರಾದೇಶಿಕ ತಂತ್ರಜ್ಞಾನ ಆಧಾರಿತ ಯೋಜನೆ, ನೈಜ-ಸಮಯದ ಡ್ಯಾಶ್‌ಬೋರ್ಡ್‌ಗಳು, ಎಐ ಆಧಾರಿತ ವಿಶ್ಲೇಷಣೆ ಮತ್ತು ನಾಗರಿಕರ ಒಳಗೊಳ್ಳುವಿಕೆ ವೇದಿಕೆಗಳಿಗೆ ಅವಕಾಶ ನೀಡುತ್ತದೆ. ಈ ವ್ಯವಸ್ಥೆಗಳು ಕಾರ್ಮಿಕರು, ಅಧಿಕಾರಿಗಳು ಮತ್ತು ವಹಿವಾಟುಗಳ ನಿಖರವಾದ ಪರಿಶೀಲನೆಯನ್ನು ಖಚಿತಪಡಿಸುತ್ತವೆ, ಮೇಲ್ವಿಚಾರಣೆಯನ್ನು ಸುಧಾರಿಸುತ್ತವೆ ಮತ್ತು ಅನುಷ್ಠಾನದ ಎಲ್ಲಾ ಹಂತಗಳಲ್ಲಿ ಸಕಾಲಿಕ ವರದಿ ಮತ್ತು ಸರಿಪಡಿಸುವ ಕ್ರಮಗಳಿಗೆ ಬೆಂಬಲ ನೀಡುತ್ತವೆ.

ಬಲವರ್ಧಿತ ಸಾಮಾಜಿಕ ಲೆಕ್ಕಪರಿಶೋಧನಾ ಕಾರ್ಯವಿಧಾನವು ಈ ವಾಸ್ತುಶಿಲ್ಪದ ಪ್ರಮುಖ ಭಾಗವಾಗಿದ್ದು, ಸಮುದಾಯದ ಭಾಗವಹಿಸುವಿಕೆಯನ್ನು ಹೆಚ್ಚಿಸುತ್ತದೆ ಮತ್ತು ಗ್ರಾಮ ಮಟ್ಟದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಬಲಪಡಿಸುತ್ತದೆ. ಇದರ ಜೊತೆಗೆ, ರಾಷ್ಟ್ರೀಯ ಮಟ್ಟದ ಸ್ಟೀರಿಂಗ್ ಸಮಿತಿ ಮತ್ತು ರಾಜ್ಯ ಮಟ್ಟದ ಸ್ಟೀರಿಂಗ್ ಸಮಿತಿಗಳು ಆಯಾ ಪ್ರದೇಶಗಳಲ್ಲಿ ಅನುಷ್ಠಾನವನ್ನು ಪರಿಶೀಲಿಸುತ್ತವೆ, ಮೇಲ್ವಿಚಾರಣೆ ಮಾಡುತ್ತವೆ ಮತ್ತು ಮೌಲ್ಯಮಾಪನ ಮಾಡುತ್ತವೆ. ಇದು ಸಮನ್ವಯದ ಮೇಲ್ವಿಚಾರಣೆ ಮತ್ತು ಸರ್ಕಾರದ ಸಮಗ್ರ ವಿಧಾನವನ್ನು ಖಚಿತಪಡಿಸುತ್ತದೆ.

ಈ ಆಧುನಿಕ, ತಂತ್ರಜ್ಞಾನ-ಚಾಲಿತ ಆಡಳಿತ ಪರಿಸರ ವ್ಯವಸ್ಥೆಯನ್ನು ಅಳವಡಿಸುವ ಮೂಲಕ, ಈ ಕಾಯ್ದೆಯು ಊಹಿಸಬಹುದಾದ ಸೇವಾ ವಿತರಣೆಯನ್ನು ಶಕ್ತಗೊಳಿಸುತ್ತದೆ, ಕೆಲಸಗಳ ಪುನರಾವರ್ತನೆಯನ್ನು ಕಡಿಮೆ ಮಾಡುತ್ತದೆ, ಆಸ್ತಿಗಳ ಗುಣಮಟ್ಟವನ್ನು ಸುಧಾರಿಸುತ್ತದೆ ಮತ್ತು ಸಬಲೀಕರಣ, ಬೆಳವಣಿಗೆ, ಅಭಿಸರಣ ಮತ್ತು ಸ್ಯಾಚುರೇಶನ್ ಅನ್ನು ಬೆಂಬಲಿಸುತ್ತದೆ. ಈ ಆಡಳಿತ ವಾಸ್ತುಶಿಲ್ಪವು ಗ್ರಾಮೀಣ ಭಾರತವು ವಿಕಸಿತ ಭಾರತ @ 2047 ರ ರಾಷ್ಟ್ರೀಯ ದೃಷ್ಟಿಕೋನದತ್ತ ಮುನ್ನಡೆಯಲು ಅಗತ್ಯವಾದ ವ್ಯವಸ್ಥೆಗಳನ್ನು ಹೊಂದಿದೆ ಎಂಬುದನ್ನು ಖಚಿತಪಡಿಸುತ್ತದೆ.

ಪ್ರಮುಖ ಶಾಸನಬದ್ಧ ನಿಬಂಧನೆಗಳು

ಎ) ವರ್ಧಿತ ಜೀವನೋಪಾಯ ಖಾತ್ರಿ

ಕೌಶಲ್ಯ ರಹಿತ ಶಾರೀರಿಕ ಕೆಲಸಕ್ಕಾಗಿ ಸ್ವಯಂಪ್ರೇರಿತರಾಗಿ ಮುಂದೆ ಬರುವ ವಯಸ್ಕ ಸದಸ್ಯರನ್ನು ಹೊಂದಿರುವ ಗ್ರಾಮೀಣ ಕುಟುಂಬಗಳಿಗೆ ಪ್ರತಿ ಹಣಕಾಸು ವರ್ಷಕ್ಕೆ 125 ದಿನಗಳ ಕೂಲಿ ಉದ್ಯೋಗವನ್ನು ನೀಡುವ ಮೂಲಕ ಜೀವನೋಪಾಯದ ಖಾತ್ರಿ ಚೌಕಟ್ಟನ್ನು ಬಲಪಡಿಸುವುದು ಮತ್ತು ಗ್ರಾಮೀಣಾಭಿವೃದ್ಧಿಯನ್ನು ವಿಕಸಿತ ಭಾರತ @ 2047 ರೊಂದಿಗೆ ಜೋಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ಬಿ) ವಿಬಿಎನ್ಆರ್ಐಎಸ್ನೊಂದಿಗೆ ಸಂಯೋಜನೆ

ಎಲ್ಲಾ ಕಾಮಗಾರಿಗಳನ್ನು 'ವಿಕಸಿತ ಭಾರತ ರಾಷ್ಟ್ರೀಯ ಗ್ರಾಮೀಣ ಮೂಲಸೌಕರ್ಯ ಸ್ಟ್ಯಾಕ್'ನಲ್ಲಿ ಕ್ರೋಢೀಕರಿಸಲಾಗುವುದು. ನೀರು ಸಂಬಂಧಿತ ಕೆಲಸಗಳ ಮೂಲಕ ಜಲ ಭದ್ರತೆ, ಪ್ರಮುಖ ಗ್ರಾಮೀಣ ಮೂಲಸೌಕರ್ಯ, ಜೀವನೋಪಾಯಕ್ಕೆ ಸಂಬಂಧಿಸಿದ ಮೂಲಸೌಕರ್ಯ ಮತ್ತು ವಿಪರೀತ ಹವಾಮಾನ ಘಟನೆಗಳನ್ನು ತಗ್ಗಿಸಲು ವಿಶೇಷ ಕೆಲಸಗಳಿಗೆ ಆದ್ಯತೆ ನೀಡಲಾಗುವುದು.

ಸಿ) ವಿಜಿಪಿಪಿ ಆಧಾರಿತ ಯೋಜನೆ

ಯೋಜನೆಯನ್ನು 'ವಿಕಸಿತ ಗ್ರಾಮ ಪಂಚಾಯಿತಿ ಯೋಜನೆ'ಗಳ ಮೂಲಕ ಕೈಗೊಳ್ಳಲಾಗುವುದು. ಇವುಗಳನ್ನು ಗ್ರಾಮ ಪಂಚಾಯತ್‌ಗಳು ಸಿದ್ಧಪಡಿಸುತ್ತವೆ ಮತ್ತು ಸ್ಥಳೀಯ ಅಭಿವೃದ್ಧಿ ಅಗತ್ಯಗಳನ್ನು ಪರಿಗಣಿಸಿ,  ಪಿಎಂ ಗತಿ ಶಕ್ತಿ ಸೇರಿದಂತೆ ರಾಷ್ಟ್ರೀಯ ಪ್ರಾದೇಶಿಕ ಯೋಜನಾ ವ್ಯವಸ್ಥೆಗಳೊಂದಿಗೆ ಸಂಯೋಜಿಸಲಾಗುತ್ತದೆ.

ಡಿ) ಗರಿಷ್ಠ ಕೃಷಿ ಅವಧಿಗಳ ರಕ್ಷಣೆ  

ಬಿತ್ತನೆ ಮತ್ತು ಕೊಯ್ಲಿನ ಗರಿಷ್ಠ ಅವಧಿಯನ್ನು ಒಳಗೊಂಡಂತೆ ಒಂದು ಹಣಕಾಸು ವರ್ಷದಲ್ಲಿ ಒಟ್ಟು 60 ದಿನಗಳ ಅವಧಿಯನ್ನು ಮುಂಚಿತವಾಗಿ ಅಧಿಸೂಚಿಸಲು ರಾಜ್ಯಗಳಿಗೆ ಅಧಿಕಾರ ನೀಡಲಾಗುವುದು. ಈ ಅವಧಿಯಲ್ಲಿ ಕಾಯ್ದೆಯಡಿ ಯಾವುದೇ ಕಾಮಗಾರಿಗಳನ್ನು ಕೈಗೊಳ್ಳಲಾಗುವುದಿಲ್ಲ, ಇದು ನಿರ್ಣಾಯಕ ಸಮಯದಲ್ಲಿ ಕೃಷಿ ಕಾರ್ಮಿಕರ ಲಭ್ಯತೆಯನ್ನು ಸುಗಮಗೊಳಿಸುತ್ತದೆ.

ಇ) ಕೇಂದ್ರ ಪುರಸ್ಕೃತ ಯೋಜನೆ

ಈ ಯೋಜನೆಯನ್ನು ಕೇಂದ್ರ ಮತ್ತು ರಾಜ್ಯಗಳ ನಡುವೆ ಹಂಚಿಕೆಯ ಜವಾಬ್ದಾರಿಗಳೊಂದಿಗೆ ಕೇಂದ್ರ ಪುರಸ್ಕೃತ ಯೋಜನೆಯಾಗಿ ಜಾರಿಗೊಳಿಸಲಾಗುವುದು.

ಎಫ್) ಪ್ರಮಾಣಿತ ಹಂಚಿಕೆ

ಸಮಗ್ರ ಬೆಳವಣಿಗೆ ಮತ್ತು ಹಣಕಾಸಿನ ಸಂಪನ್ಮೂಲಗಳ ನ್ಯಾಯೋಚಿತ ವಿತರಣೆಯನ್ನು ಉತ್ತೇಜಿಸಲು, ಕೇಂದ್ರ ಸರ್ಕಾರವು ನಿಯಮಗಳಲ್ಲಿ ಸೂಚಿಸಲಾದ ವಸ್ತುನಿಷ್ಠ ನಿಯತಾಂಕಗಳ ಆಧಾರದ ಮೇಲೆ ಪ್ರತಿ ರಾಜ್ಯಕ್ಕೆ ಪ್ರಮಾಣಿತ ಹಂಚಿಕೆಯನ್ನು ಮಾಡುತ್ತದೆ; ಇದನ್ನೂ ಮೀರಿದ ವೆಚ್ಚವು ರಾಜ್ಯದ ಜವಾಬ್ದಾರಿಯಾಗಿರುತ್ತದೆ. ಪಂಚಾಯಿತಿಗಳ ವರ್ಗ ಮತ್ತು ಸ್ಥಳೀಯ ಅಭಿವೃದ್ಧಿ ಅಗತ್ಯಗಳನ್ನು ಗಣನೆಗೆ ತೆಗೆದುಕೊಂಡು, ಜಿಲ್ಲೆಗಳು ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ನಿಧಿಗಳ ಪಾರದರ್ಶಕ ಮತ್ತು ಅಗತ್ಯ ಆಧಾರಿತ ವಿತರಣೆಯನ್ನು ರಾಜ್ಯಗಳು ಖಚಿತಪಡಿಸುತ್ತವೆ, ಆ ಮೂಲಕ ಸಮಾನತೆ, ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಬಲಪಡಿಸುತ್ತವೆ.

ಜಿ) ವಿಶೇಷ ಸಡಿಲಿಕೆಗಳು

ನೈಸರ್ಗಿಕ ವಿಕೋಪಗಳು ಅಥವಾ ಅಸಾಧಾರಣ ಸಂದರ್ಭಗಳಲ್ಲಿ, ಸಕಾಲಿಕ ಪ್ರತಿಕ್ರಿಯೆ ಮತ್ತು ಪರಿಹಾರಕ್ಕಾಗಿ ಕೇಂದ್ರ ಸರ್ಕಾರವು ತಾತ್ಕಾಲಿಕ ಸಡಿಲಿಕೆಗಳನ್ನು ಮಾಡಬಹುದು.

ಎಚ್) ಪಾರದರ್ಶಕತೆ ಮತ್ತು ಹೊಣೆಗಾರಿಕೆ

ಬಯೋಮೆಟ್ರಿಕ್ ದೃಢೀಕರಣ, ಪ್ರಾದೇಶಿಕ ತಂತ್ರಜ್ಞಾನ ಆಧಾರಿತ ಯೋಜನೆ, ಮೊಬೈಲ್ ಮತ್ತು ಡ್ಯಾಶ್‌ಬೋರ್ಡ್ ಆಧಾರಿತ ಮೇಲ್ವಿಚಾರಣೆ, ಸಾಪ್ತಾಹಿಕ ಸಾರ್ವಜನಿಕ ಬಹಿರಂಗಪಡಿಸುವಿಕೆ ವ್ಯವಸ್ಥೆಗಳು ಮತ್ತು ಬಲವರ್ಧಿತ ಸಾಮಾಜಿಕ ಲೆಕ್ಕಪರಿಶೋಧನಾ ಕಾರ್ಯವಿಧಾನವು ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸುತ್ತದೆ.

ಐ) ಸಾಂಸ್ಥಿಕ ಮೇಲ್ವಿಚಾರಣೆ

ಆಯಾ ಪ್ರದೇಶಗಳಲ್ಲಿ ಶಾಸನದ ನಿಬಂಧನೆಗಳ ಪರಿಶೀಲನೆ, ಮೇಲ್ವಿಚಾರಣೆ ಮತ್ತು ಪರಿಣಾಮಕಾರಿ ಅನುಷ್ಠಾನಕ್ಕಾಗಿ ಕೇಂದ್ರ ಗ್ರಾಮೀಣ ಉದ್ಯೊಗ ಖಾತ್ರಿ ಕೌನ್ಸಿಲ್ ಮತ್ತು ರಾಜ್ಯ ಗ್ರಾಮೀಣ ಉದ್ಯೋಗ  ಖಾತ್ರಿ ಕೌನ್ಸಿಲ್‌ಗಳನ್ನು ರಚಿಸಲಾಗುವುದು. ಪ್ರಮಾಣಿತ ಹಂಚಿಕೆಗಳು, ಅಭಿಸರಣ ಮತ್ತು ಅಂತಹ ಇತರ ವಿಷಯಗಳ ಬಗ್ಗೆ ಶಿಫಾರಸು ಮಾಡಲು ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಸ್ಟೀರಿಂಗ್ ಸಮಿತಿಗಳನ್ನು ರಚಿಸಲಾಗುವುದು.

ಜೆ) ವೇತನ ದರ ವಿವರಣೆ

 ಕೌಶಲ್ಯ ರಹಿತ ಶಾರೀರಿಕ ಕೆಲಸದ ವೇತನ ದರಗಳನ್ನು ಕೇಂದ್ರ ಸರ್ಕಾರವು ಅಧಿಸೂಚಿಸುತ್ತದೆ.

ಕೆ) ಆರು ತಿಂಗಳೊಳಗೆ ರಾಜ್ಯ ಯೋಜನೆಗಳು

ಪ್ರತಿ ರಾಜ್ಯ ಸರ್ಕಾರವು ಕಾಯ್ದೆಯು ಜಾರಿಗೆ ಬಂದ ಆರು ತಿಂಗಳೊಳಗೆ ಕಾಯ್ದೆಯ ನಿಬಂಧನೆಗಳ ಪ್ರಕಾರ ತನ್ನ ಯೋಜನೆಯನ್ನು ಅಧಿಸೂಚಿಸಬೇಕು.

ಎಲ್) ನಿರುದ್ಯೋಗ ಭತ್ಯೆ

ಅರ್ಹ ಅರ್ಜಿದಾರರಿಗೆ ನಿಗದಿತ ಅವಧಿಯಲ್ಲಿ ಕೆಲಸ ನೀಡದಿದ್ದರೆ, ಅಂತಹ ಕಾರ್ಮಿಕರಿಗೆ ಕಾಯ್ದೆಯ ನಿಬಂಧನೆಗಳ ಪ್ರಕಾರ ನಿರುದ್ಯೋಗ ಭತ್ಯೆಯನ್ನು ಪಾವತಿಸಲಾಗುವುದು.

ಎಮ್) ಕಾರ್ಮಿಕರಿಗೆ ಕನಿಷ್ಠ ಕಾನೂನು ಖಾತ್ರಿಗಳು

ಕಾರ್ಮಿಕರ ಕಾನೂನು ಖಾತ್ರಿಗಳನ್ನು ರಕ್ಷಿಸಲು ಕಾಯ್ದೆಯು ಕನಿಷ್ಠ ಗುಣಲಕ್ಷಣಗಳು ಮತ್ತು ಷರತ್ತುಗಳನ್ನು ರೂಪಿಸುತ್ತದೆ. 

Reference

Ministry of Rural Development

Click here to see pdf 

 

*****

(Explainer ID: 158564) आगंतुक पटल : 15
Provide suggestions / comments
इस विज्ञप्ति को इन भाषाओं में पढ़ें: English , Urdu , हिन्दी , Bengali , Gujarati , Malayalam