Economy
ವ್ಯಾಪಾರ ವಹಿವಾಟಿನ ಸುಲಭೀಕರಣಕ್ಕಾಗಿ ಡಿಜಿಟಲ್ ನೀಲನಕ್ಷೆ
ತಡೆರಹಿತ ವ್ಯಾಪಾರ ಮತ್ತು ನಿಯಂತ್ರಕ ದಕ್ಷತೆಗೆ ಶಕ್ತಿ ತುಂಬುವುದು
Posted On:
09 MAR 2026 11:21AM
|
ಪ್ರಮುಖಾಂಶಗಳು
- ರಾಷ್ಟ್ರೀಯ ಏಕ ಗವಾಕ್ಷಿ ವ್ಯವಸ್ಥೆ: ಈ ವ್ಯವಸ್ಥೆಯು ಪ್ರಾರಂಭವಾದಾಗಿನಿಂದ 32 ಕೇಂದ್ರ ಇಲಾಖೆಗಳು ಮತ್ತು 32 ರಾಜ್ಯಗಳಾದ್ಯಂತ 8,29,750 ಕ್ಕೂ ಹೆಚ್ಚು ಅನುಮೋದನೆಗಳನ್ನು ನೀಡಿದೆ.
- ಎಂಸಿಎ 21 ಪೋರ್ಟಲ್: ಕಳೆದ ಐದು ವರ್ಷಗಳಲ್ಲಿ (2021–2025) ಸರಿಸುಮಾರು 3.84 ಕೋಟಿ ದಾಖಲೆಗಳನ್ನು ದಾಖಲಿಸಿದೆ.
- ಉದ್ಯಮ್ ಪೋರ್ಟಲ್: ಫೆಬ್ರವರಿ 12, 2026 ರ ಹೊತ್ತಿಗೆ 7.71 ಕೋಟಿ ನೋಂದಣಿಗಳನ್ನು ಸುಗಮಗೊಳಿಸಿದ್ದು, 33.97 ಕೋಟಿ ಉದ್ಯೋಗಗಳಿಗೆ ಬೆಂಬಲ ನೀಡಿದೆ.
- ಜಿಎಸ್ಟಿಎನ್ ಪ್ಲಾಟ್ಫಾರ್ಮ್: ಜನವರಿ 2026ರ ವೇಳೆಗೆ ₹102.91 ಲಕ್ಷ ಕೋಟಿಗೂ ಅಧಿಕ ಪಾವತಿಗಳನ್ನು ಪ್ರಕ್ರಿಯೆಗೊಳಿಸಿದೆ.
- ಸರ್ಕಾರಿ ಇ-ಮಾರುಕಟ್ಟೆ: ಆರ್ಥಿಕ ವರ್ಷ 2026 ರಲ್ಲಿ (ಫೆಬ್ರವರಿ 12, 2026 ರವರೆಗೆ) 60 ಲಕ್ಷಕ್ಕೂ ಹೆಚ್ಚು ಆರ್ಡರ್ಗಳೊಂದಿಗೆ, ₹4 ಲಕ್ಷ ಕೋಟಿಗೂ ಅಧಿಕ ಮೌಲ್ಯದ ವಹಿವಾಟು ನಡೆಸಿದೆ.
- ಯುಪಿಐ : ಜನವರಿ 2026 ಒಂದರಲ್ಲೇ ₹28.33 ಲಕ್ಷ ಕೋಟಿ ಮೌಲ್ಯದ 21.70 ಬಿಲಿಯನ್ ವಹಿವಾಟುಗಳನ್ನು ನಿರ್ವಹಿಸಿದೆ.
|
ಪೀಠಿಕೆ
ಡಿಜಿಟಲ್ ರೂಪಾಂತರವನ್ನು ವ್ಯವಹಾರದ ಬೆಳವಣಿಗೆಯ ಪ್ರಮುಖ ಎಂಜಿನ್ ಆಗಿ ರೂಪಿಸುವ ಮೂಲಕ ಭಾರತವು ತನ್ನ ಆರ್ಥಿಕ ಚಿತ್ರಣವನ್ನು ಮೂಲಭೂತವಾಗಿ ಮರುರೂಪಿಸಿದೆ. ವ್ಯಾಪಾರ ವಹಿವಾಟಿನ ಸುಲಭೀಕರಣ ಪ್ರಕ್ರಿಯೆಯನ್ನು ಸುಧಾರಿಸುವ ತನ್ನ ಸುಸ್ಥಿರ ಬದ್ಧತೆಯ ಭಾಗವಾಗಿ, ಸರ್ಕಾರವು ನಿಯಮಗಳನ್ನು ಸರಳಗೊಳಿಸಲು, ಪಾರದರ್ಶಕತೆಯನ್ನು ಹೆಚ್ಚಿಸಲು ಮತ್ತು ಎಲ್ಲಾ ವಲಯಗಳಲ್ಲಿ ಸಾಂಸ್ಥಿಕ ದಕ್ಷತೆಯನ್ನು ಬಲಪಡಿಸಲು ವ್ಯಾಪಕವಾದ ಸುಧಾರಣೆಗಳು ಮತ್ತು ಉಪಕ್ರಮಗಳನ್ನು ಕೈಗೊಂಡಿದೆ. ತಡೆರಹಿತ ವ್ಯಾಪಾರ ನೋಂದಣಿಯಿಂದ ಹಿಡಿದು ನೈಜ-ಸಮಯದ ಪಾವತಿ ವ್ಯವಸ್ಥೆಯವರೆಗೆ, ಭಾರತದ ಡಿಜಿಟಲ್ ಪರಿಸರ ವ್ಯವಸ್ಥೆಯು ಉದ್ಯಮಗಳು ತಮ್ಮ ವ್ಯವಹಾರದ ಆರಂಭದಿಂದ ವಿಸ್ತರಣೆಯವರೆಗಿನ ಸಂಪೂರ್ಣ ಜೀವನಚಕ್ರವನ್ನು ಅಭೂತಪೂರ್ವ ವೇಗ ಮತ್ತು ಸುಲಭದೊಂದಿಗೆ ನಿರ್ವಹಿಸುವುದನ್ನು ಖಚಿತಪಡಿಸುತ್ತದೆ. ಸಂಯೋಜಿತ ವೇದಿಕೆಗಳ ಮೂಲಕ ಕೇಂದ್ರ ಮತ್ತು ರಾಜ್ಯ ಮಟ್ಟದ ಸುಧಾರಣೆಗಳನ್ನು ಸಮನ್ವಯಗೊಳಿಸುವ ಮೂಲಕ, ಭಾರತವು ವಿಶ್ವದರ್ಜೆಯ ಹೆಬ್ಬಾಗಿಲನ್ನು ಒದಗಿಸುತ್ತಿದೆ; ಇಲ್ಲಿ ವಿವಿಧ ಇಲಾಖೆಗಳ ನಡುವೆ ಮಾಹಿತಿ ಅಥವಾ ದತ್ತಾಂಶಗಳು ಸಲೀಸಾಗಿ ಹರಿಯುತ್ತವೆ, ಇದರಿಂದ ವ್ಯವಹಾರದ ಸಮಯ ಮತ್ತು ವೆಚ್ಚ ಎರಡೂ ಕಡಿಮೆಯಾಗುತ್ತದೆ.
ಈ ಸುಧಾರಣೆಗಳ ಪ್ರಭಾವವು ಭಾರತದ ಹೆಚ್ಚುತ್ತಿರುವ ಹೂಡಿಕೆ ಮತ್ತು ಉದ್ಯಮಗಳ ವಿಸ್ತರಣೆಯಲ್ಲಿ ಸ್ಪಷ್ಟವಾಗಿ ಪ್ರತಿಫಲಿಸುತ್ತಿದೆ. ರಾಷ್ಟ್ರವು ತನ್ನ ಡಿಜಿಟಲ್ ವ್ಯಾಪಾರ ಮತ್ತು ಲಾಜಿಸ್ಟಿಕ್ಸ್ ಚೌಕಟ್ಟುಗಳನ್ನು ಬಲಪಡಿಸುವುದನ್ನು ಮುಂದುವರೆಸುತ್ತಿರುವುದರಿಂದ, ಕೈಗಾರಿಕೆಗಳಿಗೆ ಸುರಕ್ಷಿತ, ದಕ್ಷ ಮತ್ತು ಅತ್ಯಂತ ಲಾಭದಾಯಕ ತಾಣವಾಗಿ ತನ್ನ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದೆ.
ವ್ಯವಹಾರ ನೋಂದಣಿ ಮತ್ತು ನಿಯಂತ್ರಕ ಚೌಕಟ್ಟು
ಭಾರತದ ಸುಧಾರಿತ ಡಿಜಿಟಲ್ ಮೂಲಸೌಕರ್ಯವು ವ್ಯವಹಾರ ನೋಂದಣಿಯನ್ನು ಸುಲಭಗೊಳಿಸುತ್ತದೆ ಮತ್ತು ಸುಲಭ ಪ್ರವೇಶವನ್ನು ಉತ್ತೇಜಿಸುವ ವಾತಾವರಣವನ್ನು ನಿರ್ಮಿಸುತ್ತದೆ. ರಾಜ್ಯ ಮಟ್ಟದ ಸುಧಾರಣೆಗಳೊಂದಿಗೆ ಕೇಂದ್ರದ ವೇದಿಕೆಗಳನ್ನು ಸಮನ್ವಯಗೊಳಿಸುವ ಮೂಲಕ, ಭಾರತವು ಉದ್ಯಮಿಗಳು ಮತ್ತು ವ್ಯಾಪಾರಸ್ಥರಿಗೆ ಬೆಳವಣಿಗೆಯ ದಕ್ಷ, ಪಾರದರ್ಶಕ ಮತ್ತು ವಿಶ್ವಾಸಾರ್ಹ ಹೆಬ್ಬಾಗಿಲನ್ನು ಒದಗಿಸುತ್ತದೆ.

MCA21 ಆವೃತ್ತಿ 3
ಭಾರತದ ಕಾರ್ಪೊರೇಟ್ ಭೂದೃಶ್ಯವು ಎಂಸಿಎ 21 ಯೋಜನೆಯಿಂದ ಕ್ರಾಂತಿಕಾರಕ ಬದಲಾವಣೆಯನ್ನು ಕಾಣುತ್ತಿದೆ. ಇದು ಪಾರದರ್ಶಕತೆ ಮತ್ತು ವ್ಯಾಪಾರ ವಹಿವಾಟಿನ ಸುಲಭೀಕರಣವನ್ನು ಗಣನೀಯವಾಗಿ ಹೆಚ್ಚಿಸುವ ಗುರಿಯನ್ನು ಹೊಂದಿರುವ, ಕೃತಕ ಬುದ್ಧಿಮತ್ತೆ ಚಾಲಿತ ಮುನ್ನೋಟದ ಉಪಕ್ರಮವಾಗಿದೆ. 2006 ರಿಂದ ಈ ವೇದಿಕೆಯು ಕಂಪನಿಗಳು ಮತ್ತು ಎಲ್‌ಎಲ್‌ಪಿ ಗಳ ಸಂಪೂರ್ಣ ನೋಂದಣಿ ಮತ್ತು ಸ್ಥಾಪನೆಗೆ ಸಂಬಂಧಿಸಿದ ಸೇವೆಗಳಿಗಾಗಿ ಬಳಕೆಯಾಗುತ್ತಿದೆ. ಎಂಸಿಎ 21 ಆವೃತ್ತಿ 3 ಇ-ಸ್ಕ್ರುಟಿನಿ, ಇ-ಅಡ್ಜುಡಿಕೇಶನ್, ಇ-ಕನ್ಸಲ್ಟೇಶನ್, ಅನುಸರಣಾ ನಿರ್ವಹಣಾ ವ್ಯವಸ್ಥೆ ಮತ್ತು ಎಂಸಿಎ ಲ್ಯಾಬ್‌ನಂತಹ ಸುಧಾರಿತ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದರ ಜೊತೆಗೆ, ಎಂಸಿಎ21 V3 ಅರಿವಿನ ಚಾಟ್‌ಬಾಟ್ (ಹೊಂದಿರುವ ಸಹಾಯವಾಣಿ, ಮೊಬೈಲ್ ಆ್ಯಪ್‌ಗಳು, ಸಂವಾದಾತ್ಮಕ ಬಳಕೆದಾರ ಡ್ಯಾಶ್‌ಬೋರ್ಡ್‌ಗಳು, ಯುಐ/ಯುಎಕ್ಸ್ ತಂತ್ರಜ್ಞಾನಗಳನ್ನು ಬಳಸಿದ ಸುಧಾರಿತ ಬಳಕೆದಾರ ಅನುಭವ ಮತ್ತು ಎಪಿಐ ಗಳ ಮೂಲಕ ಸುಲಭವಾದ ದತ್ತಾಂಶ ಪ್ರಸರಣ ಸೌಲಭ್ಯಗಳನ್ನು ಹೊಂದಿದೆ.
|
ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್ (ಎಪಿಐ)
ಎಪಿಐ (ಎಪಿಐ) ಎಂಬುದು ವಿವಿಧ ಸಾಫ್ಟ್‌ವೇರ್ ವ್ಯವಸ್ಥೆಗಳು ಪರಸ್ಪರ ಸಂವಹನ ನಡೆಸಲು ಮತ್ತು ಒಟ್ಟಾಗಿ ಕೆಲಸ ಮಾಡಲು ಅನುವು ಮಾಡಿಕೊಡುವ ಒಂದು ಸೇತುವೆಯಂತೆ ಕಾರ್ಯನಿರ್ವಹಿಸುತ್ತದೆ. ಇದು ವಿವಿಧ ಸಾಫ್ಟ್‌ವೇರ್‌ಗಳು ಒಂದಕ್ಕೊಂದು ಸಂಪರ್ಕ ಹೊಂದಲು, ದತ್ತಾಂಶವನ್ನು ಪ್ರವೇಶಿಸಲು ಅಥವಾ ಮಾಹಿತಿ ಹುಡುಕುವುದು, ವಿವರಗಳನ್ನು ಪಡೆಯುವುದು, ದತ್ತಾಂಶವನ್ನು ಸಲ್ಲಿಕೆ ಮಾಡುವುದು, ದಾಖಲೆಗಳನ್ನು ನವೀಕರಿಸುವುದು ಅಥವಾ ನಿರ್ದಿಷ್ಟ ಕ್ರಿಯೆಗಳನ್ನು ಪ್ರಚೋದಿಸುವಂತಹ ಕಾರ್ಯಗಳನ್ನು ನಿರ್ವಹಿಸಲು ಅನುವು ಮಾಡಿಕೊಡುತ್ತದೆ.
|
ಕಳೆದ ಐದು ವರ್ಷಗಳಲ್ಲಿ (2021-2025), ಒಟ್ಟು ಸುಮಾರು 3.84 ಕೋಟಿ ದಾಖಲೆಗಳನ್ನು ಸಲ್ಲಿಕೆ ಮಾಡಲಾಗಿದೆ. ಇನ್ನು ಸಲ್ಲಿಕೆಯಾದ ಮಾಹಿತಿಯ ಭದ್ರತೆ ಮತ್ತು ಗೌಪ್ಯತೆಯನ್ನು ಐಎಸ್‌ಒ 27001 ಮಾನದಂಡಗಳನ್ನು ಪಾಲಿಸುವ ಮೂಲಕ ಹಾಗೂ ವ್ಯವಸ್ಥೆಯನ್ನು ಪ್ರವೇಶಿಸುವ ಬಳಕೆದಾರರ ಗುರುತನ್ನು ಪರಿಶೀಲಿಸಲು ಮಲ್ಟಿ-ಫ್ಯಾಕ್ಟರ್ ಅಥೆಂಟಿಕೇಶನ್ ಬಳಸುವ ಮೂಲಕ ಖಚಿತಪಡಿಸಿಕೊಳ್ಳಲಾಗುತ್ತದೆ.
|
ಐಎಸ್‌ಒ 27001 ಮಾನದಂಡಗಳು
ಐಎಸ್‌ಒ 27001 ಎಲ್ಲಾ ಗಾತ್ರದ ಮತ್ತು ಎಲ್ಲಾ ವಲಯಗಳ ಸಂಸ್ಥೆಗಳಿಗೆ ಮಾಹಿತಿ ಭದ್ರತಾ ನಿರ್ವಹಣಾ ವ್ಯವಸ್ಥೆಯನ್ನು ಸ್ಥಾಪಿಸಲು, ಜಾರಿಗೆ ತರಲು, ನಿರ್ವಹಿಸಲು ಮತ್ತು ನಿರಂತರವಾಗಿ ಸುಧಾರಿಸಲು ಒಂದು ಚೌಕಟ್ಟನ್ನು ಒದಗಿಸುತ್ತದೆ. ಐಎಸ್‌ಒ 27001 ರ ಅನುಸರಣೆಯು, ಒಂದು ಸಂಸ್ಥೆಯು ಅಂತರಾಷ್ಟ್ರೀಯವಾಗಿ ಅಂಗೀಕರಿಸಲ್ಪಟ್ಟ ಅತ್ಯುತ್ತಮ ಅಭ್ಯಾಸಗಳು ಮತ್ತು ಮಾನದಂಡಗಳಿಗೆ ಅನುಗುಣವಾಗಿ ದತ್ತಾಂಶ ಭದ್ರತೆಯ ಅಪಾಯಗಳನ್ನು ನಿರ್ವಹಿಸಲು ಬಲಿಷ್ಠವಾದ ವ್ಯವಸ್ಥೆಯನ್ನು ಜಾರಿಗೆ ತಂದಿದೆ ಎಂಬುದನ್ನು ಸಾಬೀತುಪಡಿಸುತ್ತದೆ.
|
ಇದರ ಜೊತೆಗೆ, ಎಂಸಿಎ21 ಪೋರ್ಟಲ್‌ಗೆ ಸಂಬಂಧಿಸಿದ ಕುಂದುಕೊರತೆಗಳನ್ನು ಪರಿಹರಿಸಲು ಸಹಾಯವಾಣಿ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ. 2025-26ರ ಹಣಕಾಸು ವರ್ಷದಲ್ಲಿ (31 ಜನವರಿ 2026ರವರೆಗೆ), ಪೋರ್ಟಲ್‌ನಲ್ಲಿ 3,16,877 ಸಹಾಯವಾಣಿ ಟಿಕೆಟ್‌ಗಳನ್ನು ದಾಖಲಿಸಲಾಗಿದ್ದು, ಅವುಗಳಲ್ಲಿ ಸುಮಾರು ಶೇ. 98 ರಷ್ಟನ್ನು ಯಶಸ್ವಿಯಾಗಿ ಪರಿಹರಿಸಲಾಗಿದೆ.
ಉದ್ಯಮ್ ನೋಂದಣಿ ಪೋರ್ಟಲ್
|
12 ಫೆಬ್ರವರಿ 2026 ರ ಹೊತ್ತಿಗೆ, ಉದ್ಯಮ್ ಪೋರ್ಟಲ್ 7.71 ಕೋಟಿಗೂ ಹೆಚ್ಚು ನೋಂದಣಿಗಳನ್ನು ಸುಗಮಗೊಳಿಸಿದೆ ಮತ್ತು 33.97 ಕೋಟಿ ಉದ್ಯೋಗಗಳಿಗೆ ಬೆಂಬಲ ನೀಡಿದೆ.
|
ಭಾರತದ ಉದ್ಯಮ್ ನೋಂದಣಿ ಪೋರ್ಟಲ್, ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಉಚಿತ, ಕಾಗದರಹಿತ ಮತ್ತು ಸ್ವಯಂ-ಘೋಷಿತ ಆಧಾರಿತ ವ್ಯವಸ್ಥೆಯನ್ನು ನೀಡುವ ಮೂಲಕ 'ವ್ಯಾಪಾರ ವಹಿವಾಟಿನ ಸುಲಭೀಕರಣ'ಕ್ಕೆ ಒಂದು ಅತ್ಯುತ್ತಮ ಉದಾಹರಣೆಯಾಗಿದೆ. ಇದು ಸಿಬಿಡಿಟಿ ಮತ್ತು ಜಿಎಸ್ಟಿಎನ್ ದತ್ತಾಂಶಗಳೊಂದಿಗೆ ಸಮರ್ಥವಾಗಿ ಸಂಯೋಜನೆಗೊಳ್ಳುವ ಮೂಲಕ, ಯಾವುದೇ ದಾಖಲೆಗಳ ಅಗತ್ಯವಿಲ್ಲದ ಸಂಪೂರ್ಣ ಡಿಜಿಟಲ್ ಅನುಭವವನ್ನು ನೀಡುತ್ತದೆ ಮತ್ತು ಆಡಳಿತಾತ್ಮಕ ಅಡೆತಡೆಗಳನ್ನು ನಿವಾರಿಸುತ್ತದೆ.
ವ್ಯಾಪಾರ ಸುಧಾರಣೆಗಳ ಕ್ರಿಯಾ ಯೋಜನೆ (ಬಿಆರ್‌ಎಪಿ) ಮತ್ತು ಜಿಲ್ಲಾ ಮಟ್ಟದ ಸುಧಾರಣೆಗಳು
ಬಲಿಷ್ಠ ಡಿಜಿಟಲ್ ಮೂಲಸೌಕರ್ಯದ ಬೆಂಬಲದೊಂದಿಗೆ, ಸರ್ಕಾರವು ವ್ಯಾಪಾರ ಸುಧಾರಣೆಗಳ ಕ್ರಿಯಾ ಯೋಜನೆ (ಬಿಆರ್‌ಎಪಿ) ಮೂಲಕ ಉದ್ಯಮ ಸ್ನೇಹಿ ಸುಧಾರಣೆಗಳನ್ನು ಮತ್ತಷ್ಟು ಬಲಪಡಿಸಿದೆ. ರಾಜ್ಯಗಳ ನಡುವಿನ ನಿಯಂತ್ರಕ ಅಗತ್ಯತೆಗಳನ್ನು ಹೋಲಿಸಲು ಮತ್ತು ನಿಯಮಗಳ ಪಾಲನೆಯ ಹೊರೆಯನ್ನು ಕಡಿಮೆ ಮಾಡಿ ಹೆಚ್ಚು ಉದ್ಯಮ ಸ್ನೇಹಿ ವಾತಾವರಣವನ್ನು ಸೃಷ್ಟಿಸಲು ರಾಜ್ಯಗಳನ್ನು ಪ್ರೋತ್ಸಾಹಿಸಲು ಬಿಆರ್‌ಎಪಿ ಅನ್ನು ವಿನ್ಯಾಸಗೊಳಿಸಲಾಗಿದೆ.
ಪಾರದರ್ಶಕತೆಯನ್ನು ಉತ್ತೇಜಿಸಲು, ನಿಯಂತ್ರಕ ಪ್ರಕ್ರಿಯೆಗಳನ್ನು ಸರಳಗೊಳಿಸಲು ಮತ್ತು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೇವಾ ವಿತರಣೆಯನ್ನು ಸುಧಾರಿಸಲು 2015 ರಿಂದ ಸರ್ಕಾರವು ಬಿಆರ್‌ಎಪಿ ಅನ್ನು ಜಾರಿಗೆ ತರುತ್ತಿದೆ. ಇಲ್ಲಿಯವರೆಗೆ, ಬಿಆರ್‌ಎಪಿ ನ 7 ಆವೃತ್ತಿಗಳು ಪೂರ್ಣಗೊಂಡಿವೆ ಮತ್ತು ಎಂಟನೇ ಆವೃತ್ತಿಯಾದ ಬಿಆರ್‌ಎಪಿ 2026 ಅನ್ನು ನವೆಂಬರ್ 11, 2025 ರಂದು ಅಧಿಕೃತವಾಗಿ ಹೊರತರಲಾಗಿದೆ. ತಳಮಟ್ಟದಲ್ಲಿ ಸುಧಾರಣೆಗಳನ್ನು ಮತ್ತಷ್ಟು ಆಳಗೊಳಿಸಲು, ಡಿಪಿಐಐಟಿ ಸಂಸ್ಥೆಯು ಜಿಲ್ಲಾ ಮಟ್ಟದಲ್ಲಿ ವ್ಯಾಪಾರ ವಹಿವಾಟಿನ ಸುಲಭೀಕರಣವನ್ನು ಬಲಪಡಿಸಲು ಜಿಲ್ಲಾ ವ್ಯಾಪಾರ ಸುಧಾರಣಾ ಕ್ರಿಯಾ ಯೋಜನೆ (ಡಿ- ಬಿಆರ್‌ಎಪಿ) ಅನ್ನು ಸಹ ಪ್ರಾರಂಭಿಸಿದೆ. ಬಿಆರ್‌ಎಪಿ ಅಡಿಯಲ್ಲಿ ರಾಜ್ಯವಾರು ಸಾಧನೆಗಳು ಈ ಕೆಳಗಿನಂತಿವೆ:
|
ವ್ಯಾಪಾರ ಸುಧಾರಣೆಗಳ ಕ್ರಿಯಾ ಯೋಜನೆ (ಬಿಆರ್‌ಎಪಿ) ಅಡಿಯಲ್ಲಿ ರಾಜ್ಯಗಳ ಸಾಧನೆಗಳು
|
|
ಕೇರಳ
|
- ಬಿಆರ್‌ಎಪಿ 2022 ರ ಸಮೀಕ್ಷೆಯಲ್ಲಿ ವ್ಯವಹಾರ ಮತ್ತು ನಾಗರಿಕ ಕೇಂದ್ರಿತ ಸುಧಾರಣೆಗಳ ಅಡಿಯಲ್ಲಿ ಆಸ್ಪೈರರ್ (70% ಕ್ಕಿಂತ ಕಡಿಮೆ ಅಂಕ) ಮತ್ತು ಬಿಆರ್‌ಎಪಿ 2024 ರಲ್ಲಿ ವೇಗದ ಪ್ರಗತಿಪರರು (70%-80% ಅಂಕ) ಸ್ಥಾನವನ್ನು ಪಡೆಯಲಾಗಿದೆ. ಇದರ ಪ್ರಮುಖ ಸಾಧನೆಗಳು ಈ ಕೆಳಗಿನಂತಿವೆ:
- ವ್ಯಾಪಾರ ನೋಂದಣಿ ಪ್ರಕ್ರಿಯೆಯ ಸರಳೀಕರಣ.
- ಭೂಮಿ ಮತ್ತು ತೆರಿಗೆ ಪ್ರಕ್ರಿಯೆಗಳ ಡಿಜಿಟಲೀಕರಣ.
- ಪರಿಸರ ಪರವಾನಗಿಗಳ ಸರಳೀಕರಣ ಮತ್ತು ಸುಧಾರಿತ ನವೀಕರಿಸಬಹುದಾದ ಇಂಧನ ಅಳವಡಿಕೆ.ಇಂಗಾಲ ಮುಕ್ತ ಗ್ರಾಮ ಪಂಚಾಯತ್‌ಗಳು ಮತ್ತು ಜಲಮೂಲಗಳ ಪುನಶ್ಚೇತನ.
|
|
ಉತ್ತರ ಪ್ರದೇಶ
|
- ಬಿಆರ್‌ಎಪಿ 2022 ಮತ್ತು 2024ರ ಸಮೀಕ್ಷೆಯಲ್ಲಿ ಆಸ್ಪೈರರ್ ಸ್ಥಾನದಲ್ಲಿದ್ದು, ಈ ಕೆಳಗಿನ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದೆ:
- ವ್ಯಾಪಾರ ಪ್ರವೇಶ: ಕೇವಲ 15 ನಿಮಿಷಗಳಲ್ಲಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸುವಲ್ಲಿ ಶ್ರೇಷ್ಠತೆ ಸಾಧಿಸಿದೆ.
- ಕಾರ್ಮಿಕ ಸಬಲೀಕರಣ: ನಿಯಮಗಳ ಪಾಲನೆಯ ಹೊರೆಯನ್ನು ಶೇ. 40 ರಷ್ಟು ಕಡಿಮೆ ಮಾಡಲಾಗಿದೆ.
- ಭೂ ಆಡಳಿತ: ಭೂ ವ್ಯವಹಾರಗಳನ್ನು ಶೇ. 50 ರಷ್ಟು ವೇಗಗೊಳಿಸಲಾಗಿದೆ.
- ಸುಧಾರಣೆಗಳು: 25 ವಿವಿಧ ಕ್ಷೇತ್ರಗಳಲ್ಲಿ ಒಟ್ಟು 434 ಸುಧಾರಣೆಗಳನ್ನು ಯಶಸ್ವಿಯಾಗಿ ಜಾರಿಗೆ ತರಲಾಗಿದೆ.
|
|
ತಮಿಳುನಾಡು
|
- ಬಿಆರ್‌ಎಪಿ 2022 ಮತ್ತು 2024ರ ಸಮೀಕ್ಷೆಯಲ್ಲಿ ಆಸ್ಪೈರರ್ ಸ್ಥಾನದಲ್ಲಿದ್ದು, ಈ ಕೆಳಗಿನ ಪ್ರಮುಖ ಕ್ರಮಗಳನ್ನು ಕೈಗೊಳ್ಳಲಾಗಿದೆ:
- ಉದ್ಯಮಗಳಿಗೆ ಅಗತ್ಯವಿರುವ ಅನುಮತಿಗಳಿಗಾಗಿ ಏಕಗವಾಕ್ಷಿ ಪದ್ಧತಿಯನ್ನು ಪರಿಚಯಿಸಲಾಗಿದೆ.
- ಭೂ ಸುಧಾರಣೆಗಳೊಂದಿಗೆ ಅನುಮೋದನೆ ಪ್ರಕ್ರಿಯೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಸೌರಶಕ್ತಿ ಉದ್ಯಾನವನಗಳು ಮತ್ತು ಇಂಗಾಲದ ಹೊರಸೂಸುವಿಕೆ ಕಡಿಮೆ ಮಾಡುವ ಯೋಜನೆಗಳಿಗೆ ಉತ್ತೇಜನ ನೀಡಲಾಗಿದೆ.
- ತ್ಯಾಜ್ಯ ನಿರ್ವಹಣೆ: ಕೈಗಾರಿಕಾ ಹೊರಸೂಸುವಿಕೆ ಸಂಸ್ಕರಣಾ ವ್ಯವಸ್ಥೆಗಳ ಮೇಲೆ ಪರಿಣಾಮಕಾರಿ ಮೇಲ್ವಿಚಾರಣೆಯನ್ನು ಖಚಿತಪಡಿಸಲಾಗಿದೆ.
|
|
ಆಂಧ್ರಪ್ರದೇಶ
|
- ಬಿಆರ್‌ಎಪಿ 2022 ರ ಸಮೀಕ್ಷೆಯಲ್ಲಿ ವ್ಯವಹಾರ ಮತ್ತು ನಾಗರಿಕ ಕೇಂದ್ರಿತ ಸುಧಾರಣೆಗಳ ಅಡಿಯಲ್ಲಿ ಆಸ್ಪೈರರ್ ಮತ್ತು ಬಿಆರ್‌ಎಪಿ 2024 ರಲ್ಲಿ ವೇಗದ ಪ್ರಗತಿಪರರು ಸ್ಥಾನವನ್ನು ಪಡೆದಿದೆ.
- ಕೈಗಾರಿಕಾ ಏಕ ಗವಾಕ್ಷಿ ಪರವಾನಗಿಗಳನ್ನು ಜಾರಿಗೊಳಿಸಲಾಗಿದೆ.
- ಆನ್‌ಲೈನ್ ಭೂ ನೋಂದಣಿ ವ್ಯವಸ್ಥೆ.
- ಇ-ಪರಿಸರ ಅನುಮೋದನೆಗಳು.
- ಆನ್‌ಲೈನ್ ಸಮ್ಮತಿ ನಿರ್ವಹಣೆ ಮತ್ತು ಮೇಲ್ವಿಚಾರಣಾ ವ್ಯವಸ್ಥೆಯನ್ನು ವಿಸ್ತರಿಸಲಾಗಿದ್ದು, ಕಂಪನಿಗಳು ಸಮ್ಮತಿಗಾಗಿ ಅರ್ಜಿ ಸಲ್ಲಿಸಲು ಮತ್ತು ಅನುಮೋದನೆಗಳನ್ನು ಡಿಜಿಟಲ್ ರೂಪದಲ್ಲಿ ಟ್ರ್ಯಾಕ್ ಮಾಡಲು ಇದು ಅನುವು ಮಾಡಿಕೊಡುತ್ತದೆ.
|
|
ಮಧ್ಯಪ್ರದೇಶ
|
- ಬಿಆರ್‌ಎಪಿ 2022 ರ ಸಮೀಕ್ಷೆಯಲ್ಲಿ ವ್ಯವಹಾರ ಮತ್ತು ನಾಗರಿಕ ಕೇಂದ್ರಿತ ಸುಧಾರಣೆಗಳ ಅಡಿಯಲ್ಲಿ ಆಸ್ಪೈರರ್ ಮತ್ತು ಬಿಆರ್‌ಎಪಿ 2024 ರಲ್ಲಿ ವೇಗದ ಪ್ರಗತಿಪರರು ಸ್ಥಾನವನ್ನು ಪಡೆದಿದೆ.
- ರಾಷ್ಟ್ರೀಯ ಪೋರ್ಟಲ್‌ಗಳೊಂದಿಗೆ ಸಮನ್ವಯ ಸಾಧಿಸಲಾಗಿದೆ.
- ಭೂಮಿ ಹಂಚಿಕೆ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ.
- ನಾಮಮಾತ್ರದ ದರದಲ್ಲಿ ಸಿದ್ಧಪಡಿಸಿದ ಕೈಗಾರಿಕಾ ಸೌಲಭ್ಯಗಳನ್ನು ಒದಗಿಸಲಾಗಿದೆ.
|
SPICe+ ಫಾರ್ಮ್
SPICe+ ಫಾರ್ಮ್ ಎನ್ನುವುದು ಒಂದು ಸಂಯೋಜಿತ ವೆಬ್ ಫಾರ್ಮ್ ಆಗಿದ್ದು, ಇದು 3 ಕೇಂದ್ರ ಸರ್ಕಾರದ ಸಚಿವಾಲಯಗಳು ಮತ್ತು ಇಲಾಖೆಗಳು ಹಾಗೂ 3 ರಾಜ್ಯ ಸರ್ಕಾರಗಳು (ಮಹಾರಾಷ್ಟ್ರ, ಕರ್ನಾಟಕ, ಪಶ್ಚಿಮ ಬಂಗಾಳ) ಮತ್ತು ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶದ ಒಟ್ಟು 11 ಸೇವೆಗಳನ್ನು ನೀಡುತ್ತದೆ. ಈ ಫಾರ್ಮ್ ಭಾರತದಲ್ಲಿ ವ್ಯವಹಾರವನ್ನು ಪ್ರಾರಂಭಿಸಲು ಅಗತ್ಯವಿರುವ ಹಲವಾರು ಪ್ರಕ್ರಿಯೆಗಳನ್ನು, ಸಮಯವನ್ನು ಮತ್ತು ವೆಚ್ಚವನ್ನು ಉಳಿಸುತ್ತದೆ. ಇದು ಈ ಕೆಳಗಿನವುಗಳನ್ನು ಒಳಗೊಂಡಂತೆ 10 ಅಗತ್ಯ ಪ್ರಕ್ರಿಯೆಗಳನ್ನು ಏಕೀಕರಿಸಿದೆ:
- ಸಂಸ್ಥೆಯ ಸ್ಥಾಪನೆ,
- ನಿರ್ದೇಶಕರ ಗುರುತಿನ ಸಂಖ್ಯೆ ಹಂಚಿಕೆ,
- ಪ್ಯಾನ್ ವಿತರಣೆ,
- ಟ್ಯಾನ್ ವಿತರಣೆ,
- ಇಎಸ್ಐಸಿ ನೋಂದಣಿ ವಿತರಣೆ,
- ಇಪಿಎಫ್‌ಒ ನೋಂದಣಿ ವಿತರಣೆ,
- ವೃತ್ತಿಪರ ತೆರಿಗೆ ನೋಂದಣಿ ವಿತರಣೆ (ಮಹಾರಾಷ್ಟ್ರ, ಕರ್ನಾಟಕ ಮತ್ತು ಪಶ್ಚಿಮ ಬಂಗಾಳ),
- ಬ್ಯಾಂಕ್ ಖಾತೆ ಪ್ರಾರಂಭಿಸುವುದು,
- ಜಿಎಸ್‌ಟಿಐಎನ್ ಹಂಚಿಕೆ (ಅರ್ಜಿ ಸಲ್ಲಿಸಿದ್ದರೆ ಮಾತ್ರ) ಮತ್ತು
- ದೆಹಲಿಯಲ್ಲಿ ಸ್ಥಾಪನೆಯಾಗುವ ಎಲ್ಲಾ ಹೊಸ ಕಂಪನಿಗಳಿಗೆ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಮೊದಲ ಬಾರಿಯ ನೋಂದಣಿ.
ನೈಜ-ಸಮಯದ ದತ್ತಾಂಶ ಪರಿಶೀಲನೆಯನ್ನು ಹೊಂದಿರುವ ಈ ಸಮರ್ಥ ವ್ಯವಸ್ಥೆಯು, ಕಂಪನಿಗಳ ಸುಗಮ ಸ್ಥಾಪನೆಗಾಗಿ ಪರದೆಯ ಮೇಲೆಯೇ ಮಾಹಿತಿ ಸಲ್ಲಿಕೆ ಮಾಡಲು ಅನುವು ಮಾಡಿಕೊಡುತ್ತದೆ.
ಸಂಯೋಜಿತ ಪರವಾನಗಿ ಮತ್ತು ಪರಿಸರ ಅನುಮೋದನೆಗಳು
ಕೇಂದ್ರ ಮತ್ತು ರಾಜ್ಯ ಎರಡೂ ಮಟ್ಟಗಳಲ್ಲಿ ಅನುಮೋದನೆಗಳನ್ನು ಡಿಜಿಟಲೀಕರಣಗೊಳಿಸುವ ಮೂಲಕ ಭಾರತವು ತನ್ನ ಆಡಳಿತಾತ್ಮಕ ಚೌಕಟ್ಟನ್ನು ಮಾರ್ಪಡಿಸಿದೆ. ಏಕೀಕೃತ ಏಕಗವಾಕ್ಷಿ ಪೋರ್ಟಲ್‌ಗಳ ಮೂಲಕ, ಉದ್ಯಮಗಳು ನಿಯಂತ್ರಕ ಪ್ರಕ್ರಿಯೆಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಪೂರೈಸಬಹುದು, ಇದು ಸಾಟಿಯಿಲ್ಲದ ಪಾರದರ್ಶಕತೆ ಮತ್ತು ಕಾರ್ಯಾಚರಣೆಯ ವೇಗವನ್ನು ಖಚಿತಪಡಿಸುತ್ತದೆ.
ರಾಷ್ಟ್ರೀಯ ಏಕ ಗವಾಕ್ಷಿ ವ್ಯವಸ್ಥೆ
ಎನ್‌ಎಸ್‌ಡಬ್ಲುಎಸ್ ಎನ್ನುವುದು ಒಂದು ಡಿಜಿಟಲ್ ಪ್ಲಾಟ್‌ಫಾರ್ಮ್ ಆಗಿದ್ದು, ಇದು ವ್ಯವಹಾರದ ಅಗತ್ಯತೆಗಳಿಗೆ ಅನುಗುಣವಾಗಿ ಅನುಮೋದನೆಗಳನ್ನು ಗುರುತಿಸಲು ಮತ್ತು ಅವುಗಳಿಗೆ ಅರ್ಜಿ ಸಲ್ಲಿಸಲು ಮಾರ್ಗದರ್ಶನ ನೀಡುತ್ತದೆ. ಅನುಮೋದನೆಯ ಕಾಲಮಿತಿಯನ್ನು ಕಡಿಮೆ ಮಾಡುವ ಮೂಲಕ, ದಾಖಲೆಗಳ ಸಂಗ್ರಹಣೆಯನ್ನು ಸುರಕ್ಷಿತವಾಗಿರಿಸುವ ಮೂಲಕ ಮತ್ತು ಒಂದೇ ಡಿಜಿಟಲ್ ಗೇಟ್‌ವೇ ಮೂಲಕ ವೇಗವಾಗಿ ಪ್ರಶ್ನೆಗಳನ್ನು ನಿರ್ವಹಿಸುವ ಮೂಲಕ ಉದ್ಯಮದ ಪರವಾನಗಿಗಳನ್ನು ಸರಳಗೊಳಿಸುವ ಪ್ರಮುಖ ಸುಧಾರಣಾ ಕ್ರಮವಾಗಿ ಇದು ಹೊರಹೊಮ್ಮಿದೆ. ಇದು 32 ಕೇಂದ್ರ ಇಲಾಖೆಗಳು ಮತ್ತು 32 ರಾಜ್ಯ ಸರ್ಕಾರಗಳ ಅನುಮೋದನಾ ಪ್ರಕ್ರಿಯೆಗಳನ್ನು ಸಂಯೋಜಿಸಿದ್ದು, 698 ಕೇಂದ್ರ ಮತ್ತು 7435 ರಾಜ್ಯ ಮಟ್ಟದ ಅನುಮೋದನೆಗಳಿಗೆ ಪ್ರವೇಶವನ್ನು ಹೊಂದಿದೆ. ಎನ್‌ಎಸ್‌ಡಬ್ಲುಎಸ್ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ 8,29,750 ಕ್ಕೂ ಹೆಚ್ಚು ಅನುಮೋದನೆಗಳನ್ನು ನೀಡಿದೆ.
ಪಾರದರ್ಶಕತೆಯನ್ನು ಹೆಚ್ಚಿಸುವ, ವೆಚ್ಚವನ್ನು ಕಡಿಮೆ ಮಾಡುವ ಮತ್ತು ನಿಯಮಗಳ ಪಾಲನೆಯನ್ನು ಸರಳಗೊಳಿಸುವ ಇತರ ಏಕಗವಾಕ್ಷಿ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ಸಹ ಸರ್ಕಾರವು ಪ್ರಾರಂಭಿಸಿದೆ.
|
ಇತರ ಏಕ ಗವಾಕ್ಷಿ ಡಿಜಿಟಲ್ ಪ್ಲಾಟ್ಫಾರ್ಮ್ಗಳು
|
|
ಪರಿವೇಶ 3.0 (ಇದು ಪರಿಸರ, ಅರಣ್ಯ, ವನ್ಯಜೀವಿ ಮತ್ತು ಕರಾವಳಿ ನಿಯಂತ್ರಣ ವಲಯದ (CRZ) ಅನುಮೋದನೆಗಳಿಗಾಗಿ ವಿನ್ಯಾಸಗೊಳಿಸಲಾದ ಒಂದು ವೆಬ್ ಆಧಾರಿತ, ಪಾತ್ರ-ಚಾಲಿತ (role-based) ಕೆಲಸದ ಹರಿವಿನ ಅನ್ವಯಿಕೆ (workflow application) ಆಗಿದೆ.)
|
ಪರಿಸರ ಪರವಾನಗಿಗಳು ಮತ್ತು ಅನುಮೋದನೆಯ ನಂತರದ ನಿಯಮಗಳ ಪಾಲನೆಯ ಮೇಲ್ವಿಚಾರಣೆಗಾಗಿ ಇದನ್ನು ಬಳಸಲಾಗುತ್ತದೆ. ಪಾರದರ್ಶಕತೆ, ಮುನ್ಸೂಚನೆ ಮತ್ತು ದಕ್ಷತೆಯನ್ನು ಹೆಚ್ಚಿಸಲು ಇದು ಮೂಲಭೂತ ದತ್ತಾಂಶ, ಅರಣ್ಯೀಕರಣದ ಭೂ ಬ್ಯಾಂಕ್‌ಗಳು, ಅಂತರ-ಸಚಿವಾಲಯ ಡ್ಯಾಶ್‌ಬೋರ್ಡ್‌ಗಳು ಮತ್ತು ಎಐ ಆಧಾರಿತ ಬೆಂಬಲವನ್ನು ಸಂಯೋಜಿಸುತ್ತದೆ.
|
|
ಇ-ಗ್ರಾಮ ಸ್ವರಾಜ್ ಪೋರ್ಟಲ್
|
ಇದು ಗ್ರಾಮ ಪಂಚಾಯತ್‌ನ ಸಂಪೂರ್ಣ ಪ್ರೊಫೈಲ್ ಅನ್ನು ಒಳಗೊಂಡಿರುವ ಏಕಗವಾಕ್ಷಿ ವ್ಯವಸ್ಥೆಯಾಗಿದೆ. ಇದರಲ್ಲಿ ಸರ್ಪಂಚ್/ಕಾರ್ಯದರ್ಶಿ ವಿವರಗಳು, ಜನಸಂಖ್ಯಾ ಮಾಹಿತಿ, ಹಣಕಾಸು, ಆಸ್ತಿಗಳು ಮತ್ತು ಗ್ರಾಮ ಪಂಚಾಯತ್ ಅಭಿವೃದ್ಧಿ ಯೋಜನೆ ಮೂಲಕ ಕೈಗೊಂಡ ಚಟುವಟಿಕೆಗಳ ವಿವರಗಳು ಲಭ್ಯವಿವೆ. ಏಕೀಕೃತ ವರದಿ ಮತ್ತು ಟ್ರ್ಯಾಕಿಂಗ್ ವೇದಿಕೆಯಾಗಿ ಕಾರ್ಯನಿರ್ವಹಿಸುವ ಮೂಲಕ, ಇದು ವಿಕೇಂದ್ರೀಕೃತ ಯೋಜನೆಯನ್ನು ಬಲಪಡಿಸುತ್ತದೆ ಮತ್ತು ಅಭಿವೃದ್ಧಿ ನಿಧಿಯ ಬಳಕೆಯ ಪರಿಣಾಮಕಾರಿಯನ್ನ ಸುಧಾರಿಸುತ್ತದೆ.
|
ತೆರಿಗೆ, ಕಸ್ಟಮ್ಸ್ ಮತ್ತು ವ್ಯಾಪಾರ ಸುಲಭೀಕರಣ
ಭಾರತದ ಡಿಜಿಟಲೀಕೃತ ಹಣಕಾಸು ಮತ್ತು ವ್ಯಾಪಾರ ಮೂಲಸೌಕರ್ಯವು ಸರಕುಗಳ ಸುಗಮ ಸಂಚಾರ ಮತ್ತು ಹೆಚ್ಚು ಪರಿಣಾಮಕಾರಿ ತೆರಿಗೆ ಅನುಸರಣೆಗೆ ಅನುವು ಮಾಡಿಕೊಡುವ ಮೂಲಕ ವ್ಯವಹಾರದ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುತ್ತದೆ. ಅನುಮೋದನೆಗಳು ಮತ್ತು ಟ್ರ್ಯಾಕಿಂಗ್ ವ್ಯವಸ್ಥೆಗಳನ್ನು ಹೈ-ಸ್ಪೀಡ್ ಡಿಜಿಟಲ್ ಗೇಟ್‌ವೇಗಳಿಗೆ ಬದಲಾಯಿಸುವ ಮೂಲಕ, ಸಾಂಪ್ರದಾಯಿಕ ಅಡೆತಡೆಗಳನ್ನು ನಿವಾರಿಸಲಾಗಿದೆ, ಇದು ಪಾರದರ್ಶಕ ವ್ಯಾಪಾರ ಪರಿಸರಕ್ಕೆ ದಾರಿ ಮಾಡಿಕೊಟ್ಟಿದೆ.

ಜಿಎಸ್ಟಿ ನೆಟ್ವರ್ಕ್ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ದೇಶದ ಅತಿದೊಡ್ಡ ಪರೋಕ್ಷ ತೆರಿಗೆ ಸುಧಾರಣೆಯಾಗಿದ್ದು, ಇದು ವೈವಿಧ್ಯಮಯ ತೆರಿಗೆ ಪದ್ಧತಿಯನ್ನು ಏಕೀಕೃತ ಮತ್ತು ಸುಗಮ ವ್ಯವಸ್ಥೆಯಾಗಿ ಬದಲಾಯಿಸಿದೆ. ತನ್ನ ಡಿಜಿಟಲ್ ಬೆನ್ನೆಲುಬಿನ ಬೆಂಬಲದೊಂದಿಗೆ, ಜಿಎಸ್‌ಟಿಎನ್ ವೇದಿಕೆಯು ಒಂದು ಕೋಟಿಗೂ ಹೆಚ್ಚು ತೆರಿಗೆದಾರರಿಗೆ ಏಕಕಾಲಿಕ ಇಂಟರ್ಫೇಸ್ ಒದಗಿಸುತ್ತದೆ ಮತ್ತು ಸುಲಭವಾದ ಬಿ2ಬಿ ಎಲೆಕ್ಟ್ರಾನಿಕ್ ಇನ್‌ವಾಯ್ಸಿಂಗ್ ಅನ್ನು ಖಚಿತಪಡಿಸುತ್ತದೆ. ಜನವರಿ 2026 ರ ಹೊತ್ತಿಗೆ ಈ ಪೋರ್ಟಲ್ ಮೂಲಕ ₹102.91 ಲಕ್ಷ ಕೋಟಿಗೂ ಹೆಚ್ಚಿನ ಪಾವತಿಗಳ ಪ್ರಕ್ರಿಯೆಯನ್ನು ನಿರ್ವಹಿಸಲಾಗಿದೆ. ಈ ಸ್ವಯಂಚಾಲಿತ ಪರಿಸರ ವ್ಯವಸ್ಥೆಯು ಪಾರದರ್ಶಕ ಮತ್ತು ಸಮರ್ಥ ಆರ್ಥಿಕ ಚೌಕಟ್ಟನ್ನು ಉತ್ತೇಜಿಸುತ್ತದೆ.
ಇ-ವೇ ಬಿಲ್ ಸರಕುಗಳ ಸಾಗಣೆಗಾಗಿ ಬಹು ರಾಜ್ಯ-ಮಟ್ಟದ ಪರವಾನಗಿಗಳ ಬದಲಿಗೆ ಒಂದೇ ಎಲೆಕ್ಟ್ರಾನಿಕ್ ದಾಖಲೆಯನ್ನು ಜಾರಿಗೆ ತರುವ ಮೂಲಕ ಇ-ವೇ ಬಿಲ್ ವ್ಯವಸ್ಥೆಯು ಭಾರತದ ಲಾಜಿಸ್ಟಿಕ್ಸ್ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದೆ. ಈ ಸುಧಾರಣೆಯು ಗಡಿಗಳಲ್ಲಿನ ಸ್ಥಿರ ಚೆಕ್ ಪೋಸ್ಟ್‌ಗಳ ನಿವಾರಣೆಗೆ ಸಹಕಾರಿಯಾಗಿದೆ, ಸಾರಿಗೆ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಿದೆ ಮತ್ತು ತೆರಿಗೆ ಪಾಲನೆಯನ್ನು ಸುಧಾರಿಸಿದೆ. ಏಪ್ರಿಲ್-ಡಿಸೆಂಬರ್ 2025 ರ ಅವಧಿಯಲ್ಲಿ ಇ-ವೇ ಬಿಲ್ ಪ್ರಮಾಣವು ವಾರ್ಷಿಕವಾಗಿ 21% ರಷ್ಟು ಬೆಳವಣಿಗೆ ಕಂಡಿದ್ದು, ಇದು ಜಿಎಸ್‌ಟಿ ಅಡಿಯಲ್ಲಿ ಬಲವಾದ ವಹಿವಾಟಿನ ವೇಗವನ್ನು ಸೂಚಿಸುತ್ತದೆ.
ಐಸ್ಗೇಟ್ ಭಾರತೀಯ ಕಸ್ಟಮ್ಸ್ ಮತ್ತು ವ್ಯಾಪಾರ ಸಮುದಾಯದ ನಡುವಿನ ಎಲ್ಲಾ ಎಲೆಕ್ಟ್ರಾನಿಕ್ ಸಂವಹನಗಳಿಗೆ ಐಸ್‌ಗೇಟ್ ಒಂದು ಕೇಂದ್ರೀಕೃತ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಇದು ಇ-ಫೈಲಿಂಗ್, ಆನ್‌ಲೈನ್ ತಿದ್ದುಪಡಿ ಸಲ್ಲಿಕೆ, ಆನ್‌ಲೈನ್ ಸುಂಕ ಪಾವತಿ, ಕುಂದುಕೊರತೆ ಪರಿಹಾರ ಮತ್ತು ವ್ಯಾಪಾರಿಗಳಿಗೆ ಸಮಗ್ರ ಸರಕು ಮತ್ತು ಸೇವಾ ತೆರಿಗೆ ಮರುಪಾವತಿ ಪ್ರಕ್ರಿಯೆಯಂತಹ ಸೇವೆಗಳನ್ನು ನೀಡುತ್ತದೆ. ಕಸ್ಟಮ್ಸ್ ಪ್ರಕ್ರಿಯೆಗಳನ್ನು ಸರಳಗೊಳಿಸುವ ಮೂಲಕ ಮತ್ತು ಗಡಿಯಾಚೆಗಿನ ವ್ಯಾಪಾರದಲ್ಲಿ ಪಾರದರ್ಶಕತೆಯನ್ನು ಉತ್ತೇಜಿಸುವ ಮೂಲಕ ಈ ಗೇಟ್‌ವೇ ವ್ಯಾಪಾರ ವಹಿವಾಟಿನ ಸುಲಭೀಕರಣವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ.
ಇಕೋ 2.0 ವ್ಯವಸ್ಥೆ: ಇಕೋ 2.0 ವ್ಯವಸ್ಥೆಯು ರಫ್ತುದಾರರಿಗೆ ಪ್ರಮಾಣೀಕರಣ ಪ್ರಕ್ರಿಯೆಯನ್ನು ಸರಳಗೊಳಿಸುವ ಮತ್ತು ವ್ಯಾಪಾರ ದಕ್ಷತೆಯನ್ನು ಹೆಚ್ಚಿಸುವ ಒಂದು ಡಿಜಿಟಲ್ ಮೇಲ್ದರ್ಜೆಯಾಗಿದೆ. ಒಂದೇ ಐಇಸಿ ಅಡಿಯಲ್ಲಿ ಬಹು-ಬಳಕೆದಾರ ಪ್ರವೇಶ, ಆಧಾರ್ ಆಧಾರಿತ ಇ-ಸೈನ್ ಮತ್ತು ಮುಕ್ತ ವ್ಯಾಪಾರ ಒಪ್ಪಂದದ ಸಂಪನ್ಮೂಲಗಳಿಗಾಗಿ ಸಂಯೋಜಿತ ಡ್ಯಾಶ್‌ಬೋರ್ಡ್‌ನಂತಹ ಬಳಕೆದಾರ ಸ್ನೇಹಿ ವೈಶಿಷ್ಟ್ಯಗಳೊಂದಿಗೆ, ಈ ವೇದಿಕೆಯು ನಿರಂತರ ವ್ಯಾಪಾರ ದಕ್ಷತೆಯನ್ನು ಖಚಿತಪಡಿಸುತ್ತದೆ. ಆನ್‌ಲೈನ್‌ನಲ್ಲಿ ಸುಲಭವಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡುವ ಮೂಲಕ, ಈ ವ್ಯವಸ್ಥೆಯು ಅತ್ಯಂತ ಹೊಂದಿಕೊಳ್ಳುವ ಮತ್ತು ಪಾರದರ್ಶಕ ಪರಿಸರವನ್ನು ಒದಗಿಸುತ್ತದೆ.
ಟ್ರೇಡ್ಸ್ ಟ್ರೇಡ್ಸ್ ಎನ್ನುವುದು ಎಲೆಕ್ಟ್ರಾನಿಕ್ ಪ್ಲಾಟ್‌ಫಾರ್ಮ್ ಆಗಿದ್ದು, ಇದು ಹಲವಾರು ಹಣಕಾಸು ಸಂಸ್ಥೆಗಳ ಮೂಲಕ ಎಂಎಸ್‌ಎಂಇಗಳ ವ್ಯಾಪಾರ ಬಾಕಿಗಳ ಹಣಕಾಸು/ರಿಯಾಯಿತಿಯನ್ನು ಸುಗಮಗೊಳಿಸುತ್ತದೆ. ಕಾರ್ಪೊರೇಟ್‌ಗಳು, ಸರ್ಕಾರಿ ಇಲಾಖೆಗಳು ಮತ್ತು ಸಾರ್ವಜನಿಕ ವಲಯದ ಉದ್ಯಮಗಳು ಸೇರಿದಂತೆ ಇತರ ಖರೀದಿದಾರರಿಂದ ಬರಬೇಕಾದ ಬಾಕಿ ಹಣವನ್ನು ಈ ಮೂಲಕ ಪಡೆಯಬಹುದಾಗಿದೆ.
|
ಕೇಂದ್ರ ಬಜೆಟ್ 2026-27ರಲ್ಲಿ ಟ್ರೇಡ್ಸ್ ಎಮ್‌ಎಸ್‌ಎಂಇಗಳ ನಗದು ಲಭ್ಯತೆಯನ್ನು ಹೆಚ್ಚಿಸಲು, ಕೇಂದ್ರ ಬಜೆಟ್ 2026-27ರಲ್ಲಿ ಕೇಂದ್ರ ಸಾರ್ವಜನಿಕ ವಲಯದ ಉದ್ದಿಮೆಗಳ ವಹಿವಾಟು ಇತ್ಯರ್ಥಗಳಿಗಾಗಿ ಟ್ರೇಡ್ಸ್ ಅನ್ನು ಕಡ್ಡಾಯಗೊಳಿಸಲು ಮತ್ತು ಇನ್‌ವಾಯ್ಸ್ ರಿಯಾಯಿತಿಗಾಗಿ ಕ್ರೆಡಿಟ್ ಗ್ಯಾರಂಟಿ ಕಾರ್ಯವಿಧಾನವನ್ನು ಪರಿಚಯಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಲ್ಲದೆ, ಜೆಮ್ ಅನ್ನು ಟ್ರೇಡ್ಸ್ ನೊಂದಿಗೆ ಲಿಂಕ್ ಮಾಡುವುದರಿಂದ ತ್ವರಿತ ಹಣಕಾಸು ಸೌಲಭ್ಯ ದೊರೆಯುತ್ತದೆ. ಹಾಗೆಯೇ, ಟ್ರೇಡ್ಸ್ ಬಾಕಿಗಳನ್ನು ಆಸ್ತಿ-ಬೆಂಬಲಿತ ಭದ್ರತೆಗಳಾಗಿ ಪರಿಚಯಿಸುವುದು ಸುಧಾರಿತ ವಹಿವಾಟು ಇತ್ಯರ್ಥಕ್ಕಾಗಿ ದ್ವಿತೀಯ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ.
|
ಟ್ರೇಡ್ ಕನೆಕ್ಟ್ ಇ-ಪ್ಲಾಟ್ಫಾರ್ಮ್
ಟ್ರೇಡ್ ಕನೆಕ್ಟ್ ಇ-ಪ್ಲಾಟ್ಫಾರ್ಮ್ ಎಂಎಸ್ಎಂಇ ಸೇರಿದಂತೆ ಎಲ್ಲಾ ರಫ್ತುದಾರರಿಗೆ ಸಮಗ್ರ ಅಂತರಾಷ್ಟ್ರೀಯ ವ್ಯಾಪಾರ ಮಾಹಿತಿ ಮತ್ತು ಸೇವೆಗಳನ್ನು ಒದಗಿಸುತ್ತದೆ, ಇದು ಜಾಗತಿಕ ಮಾರುಕಟ್ಟೆಗಳನ್ನು ಸುಲಭವಾಗಿ ಪ್ರವೇಶಿಸಲು ಅವರಿಗೆ ಅನುವು ಮಾಡಿಕೊಡುತ್ತದೆ. ವಿದೇಶಗಳಲ್ಲಿರುವ ಭಾರತೀಯ ರಾಯಭಾರ ಕಚೇರಿಗಳ ಸಹಾಯದೊಂದಿಗೆ ಜಾಗತಿಕ ಖರೀದಿದಾರರು ಮತ್ತು ಭಾರತೀಯ ರಫ್ತುದಾರರ ನಡುವೆ ನೇರ ಸಂಪರ್ಕವನ್ನು ಇದು ಏರ್ಪಡಿಸುತ್ತದೆ. ಇದು ರಫ್ತುದಾರರು ಸರ್ಕಾರಿ ಏಜೆನ್ಸಿಗಳೊಂದಿಗೆ ವ್ಯವಹರಿಸಲು ಇರುವ ಏಕೈಕ ಸಂಪರ್ಕ ಚಾನಲ್ ಆಗಿದ್ದು, ಡಿಜಿಟಲ್ ಕಲಿಕೆ ಮತ್ತು ಸಂಯೋಜಿತ ವೇದಿಕೆಯ ಮೂಲಕ ಅಂತರಾಷ್ಟ್ರೀಯ ವ್ಯಾಪಾರವನ್ನು ಸರಳಗೊಳಿಸುತ್ತದೆ. ಪ್ರಸ್ತುತ, ಇದು 19.25 ಲಕ್ಷಕ್ಕೂ ಹೆಚ್ಚು ನೋಂದಾಯಿತ ಬಳಕೆದಾರರನ್ನು ಹೊಂದಿದ್ದು, 28 ಲಕ್ಷಕ್ಕೂ ಹೆಚ್ಚು ಮೂಲ ಪ್ರಮಾಣಪತ್ರಗಳನ್ನು ನೀಡಲಾಗಿದೆ (12 ಫೆಬ್ರವರಿ, 2026 ರ ಹೊತ್ತಿಗೆ).
ಲಾಜಿಸ್ಟಿಕ್ಸ್ ಮತ್ತು ಮಾರುಕಟ್ಟೆ ಪ್ರವೇಶ
ಭಾರತದ ಸುಧಾರಿತ ಡಿಜಿಟಲ್ ಮೂಲಸೌಕರ್ಯವು ಸಂಯೋಜಿತ ಲಾಜಿಸ್ಟಿಕ್ಸ್ ಸಮನ್ವಯ ಮತ್ತು ವಿಸ್ತಾರವಾದ ಎಲೆಕ್ಟ್ರಾನಿಕ್ ಮಾರುಕಟ್ಟೆ ಪ್ರವೇಶದ ಮೂಲಕ ವ್ಯಾಪಾರ ಪರಿಸರವನ್ನು ಬಲಪಡಿಸುತ್ತದೆ. ಈ ಕೇಂದ್ರೀಕೃತ ವೇದಿಕೆಗಳು ಪಾರದರ್ಶಕ ಅಂತ್ಯದಿಂದ ಅಂತ್ಯದವರೆಗಿನ ಪರಿಹಾರಗಳನ್ನು ಮತ್ತು ಸಮರ್ಥ ಪೂರೈಕೆ ಸರಪಳಿಗಳನ್ನು ಖಚಿತಪಡಿಸುತ್ತವೆ.
ಪಿಎಂ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್
ಅಕ್ಟೋಬರ್ 2021 ರಲ್ಲಿ ಪ್ರಾರಂಭವಾದ ಪಿಎಂ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್, ಸಂಯೋಜಿತ ಮೂಲಸೌಕರ್ಯ ಯೋಜನೆ ಮತ್ತು ಬಹುಮಾದರಿ ಸಂಪರ್ಕಕ್ಕಾಗಿ ಒಂದು ಪರಿವರ್ತಕ ಉಪಕ್ರಮವಾಗಿದೆ. ಇದು 57 ಕೇಂದ್ರ ಸಚಿವಾಲಯಗಳು ಮತ್ತು ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನು ಒಂದೇ ಡಿಜಿಟಲ್ ವೇದಿಕೆಯಡಿ ತರುತ್ತದೆ. ಮೂಲಸೌಕರ್ಯ ಯೋಜನೆಗಳ ಸಮನ್ವಯ ಮತ್ತು ದತ್ತಾಂಶ ಆಧಾರಿತ ಯೋಜನೆಗಾಗಿ ಇದರಲ್ಲಿ 1,700 ಕ್ಕೂ ಹೆಚ್ಚು ದತ್ತಾಂಶ ಪದರಗಳನ್ನು ಬಳಸಲಾಗಿದೆ.
ಪಿಎಂ ಗತಿಶಕ್ತಿ ಸಾರ್ವಜನಿಕ ಮತ್ತು ಏಕೀಕೃತ ಭೂವೈಜ್ಞಾನಿಕ ಇಂಟರ್ಫೇಸ್ ಖಾಸಗಿ ಹೂಡಿಕೆದಾರರಿಗೆ 230 ಸಂಸ್ಕರಿಸಿದ ದತ್ತಾಂಶಗಳನ್ನು ಒದಗಿಸುತ್ತದೆ. ಇದು ಹೂಡಿಕೆ ನಿರ್ಧಾರಗಳು ಮತ್ತು ಲಾಜಿಸ್ಟಿಕ್ಸ್ ಯೋಜನೆಗೆ ಸಹಕಾರಿಯಾಗಿದೆ. ಇಲ್ಲಿಯವರೆಗೆ, 27 ರಾಜ್ಯಗಳು ರಾಜ್ಯ ಲಾಜಿಸ್ಟಿಕ್ಸ್ ನೀತಿಗಳನ್ನು ಘೋಷಿಸಿವೆ ಮತ್ತು 28 ಆಕಾಂಕ್ಷಿ ಜಿಲ್ಲೆಗಳು ಜಿಲ್ಲಾ ಮಾಸ್ಟರ್ ಪ್ಲಾನ್ ಮಾಡ್ಯೂಲ್ ಅನ್ನು ಬಳಸುತ್ತಿವೆ.
ಪಿಎಂ ಗತಿಶಕ್ತಿಯು ನೆಟ್ವರ್ಕ್ ಪ್ಲಾನಿಂಗ್ ಗ್ರೂಪ್ ಮೂಲಕ ಸಮನ್ವಯ ಯೋಜನೆಯನ್ನು ಸಾಂಸ್ಥಿಕಗೊಳಿಸುತ್ತದೆ. ಫೆಬ್ರವರಿ 2026 ರ ಹೊತ್ತಿಗೆ, ಎನ್‌ಪಿಜಿ ₹16.10 ಲಕ್ಷ ಕೋಟಿ ಮೌಲ್ಯದ 352 ಯೋಜನೆಗಳನ್ನು ಮೌಲ್ಯಮಾಪನ ಮಾಡಿದೆ; ಇದರಲ್ಲಿ 201 ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, 167 ಯೋಜನೆಗಳು ಅನುಷ್ಠಾನದಲ್ಲಿವೆ. ಸಾರಿಗೆ ಕಾರಿಡಾರ್‌ಗಳು ಮತ್ತು ಆರ್ಥಿಕ ವಲಯಗಳ ಸಮಗ್ರ ಮೌಲ್ಯಮಾಪನದ ಮೂಲಕ, ಈ ಯೋಜನೆಯು ವಿಳಂಬವನ್ನು ಕಡಿಮೆ ಮಾಡುತ್ತದೆ ಮತ್ತು ಸರಕು ಸಾಗಣೆಯನ್ನು ಬಲಪಡಿಸುತ್ತದೆ.
ರಾಷ್ಟ್ರೀಯ ಲಾಜಿಸ್ಟಿಕ್ಸ್ ಪೋರ್ಟಲ್ (ಸಾಗರ)
ರಾಷ್ಟ್ರೀಯ ಲಾಜಿಸ್ಟಿಕ್ಸ್ ಪೋರ್ಟಲ್ (ಸಾಗರ) ಒಂದು ಕಡಲ ಏಕ-ಗವಾಕ್ಷಿ ವೇದಿಕೆಯಾಗಿದ್ದು, ಇದು ರಫ್ತುದಾರರು, ಆಮದುದಾರರು ಮತ್ತು ಸೇವಾ ಪೂರೈಕೆದಾರರಿಗೆ ಅಂತ್ಯದಿಂದ ಅಂತ್ಯದವರೆಗಿನ ಲಾಜಿಸ್ಟಿಕ್ಸ್ ಪರಿಹಾರಗಳನ್ನು ಒದಗಿಸುವ ಮೂಲಕ ವ್ಯವಹಾರದ ಸುಲಭತೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಈ "ಮುಕ್ತ ವೇದಿಕೆಯು" ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿದ್ದು, ದಾಖಲೆಗಳ ಸುಗಮ ವಿನಿಮಯ ಮತ್ತು ಹಡಗು ಟರ್ಮಿನಲ್ ಗೇಟ್ ಹಾಗೂ ಕಂಟೈನರ್ ಫ್ರೈಟ್ ಸ್ಟೇಷನ್ ಗೇಟ್ ವಹಿವಾಟುಗಳ ನೈಜ-ಸಮಯದ ಟ್ರ್ಯಾಕಿಂಗ್‌ಗಾಗಿ ಜಿ2ಜಿ, ಜಿ2ಬಿ ಮತ್ತು ಬಿ2ಬಿ ಮಾದರಿಗಳನ್ನು ಸಂಯೋಜಿಸುತ್ತದೆ. ಏಕ-ಗವಾಕ್ಷಿ ಪ್ರಮಾಣೀಕರಣ ಸಾಧನದ ಮೂಲಕ ಸಿಎಫ್‌ಎಸ್ ಮತ್ತು ಶಿಪ್ಪಿಂಗ್ ಶುಲ್ಕಗಳಿಗಾಗಿ ಡಿಜಿಟಲ್ ಪಾವತಿಗಳನ್ನು ಸಕ್ರಿಯಗೊಳಿಸುವ ಮೂಲಕ ಭಾರತವು ಡಿಜಿಟಲ್ ಉದ್ಯಮಶೀಲತೆಯನ್ನು ಬಲಪಡಿಸುತ್ತಿದೆ. ಈ ಸಂಯೋಜಿತ ಡಿಜಿಟಲ್ ಪ್ಲಾಟ್‌ಫಾರ್ಮ್ ಒಂದು ಬಲವಾದ ಪರಿಸರ ವ್ಯವಸ್ಥೆಯನ್ನು ನಿರ್ಮಿಸುತ್ತದೆ, ಇಲ್ಲಿ ಹಲವಾರು ಮೌಲ್ಯವರ್ಧಿತ ಸೇವೆಗಳು ಮತ್ತು ನವೀನ ಪರಿಹಾರಗಳು ಮನಬಂದಂತೆ ಕಾರ್ಯನಿರ್ವಹಿಸಬಹುದಾಗಿದೆ.
ಲಾಜಿಸ್ಟಿಕ್ಸ್ ಡೇಟಾ ಬ್ಯಾಂಕ್
ಎಲ್‌ಡಿಬಿ 2.0 ಭಾರತದ ಡಿಜಿಟಲ್ ಸಬಲೀಕರಣದ ಆರ್ಥಿಕತೆಯ ಪ್ರಯಾಣದತ್ತ ಒಂದು ಮಹತ್ವದ ಹೆಜ್ಜೆಯಾಗಿದೆ. ಈ ಸುಧಾರಿತ ಪ್ಲಾಟ್‌ಫಾರ್ಮ್, ಯುನಿಫೈಡ್ ಲಾಜಿಸ್ಟಿಕ್ಸ್ ಇಂಟರ್ಫೇಸ್ ಪ್ಲಾಟ್‌ಫಾರ್ಮ್ ಎಪಿಐ ಗಳ ಸಂಯೋಜನೆಯ ಮೂಲಕ ಕಂಟೈನರ್, ಟ್ರಕ್ ಅಥವಾ ಟ್ರೈಲರ್ ಸಂಖ್ಯೆಗಳು ಮತ್ತು ರೈಲ್ವೆ ಎಫ್‌ಎನ್‌ಆರ್‌ಗಳ ಬಳಸಿ ರಸ್ತೆ, ರೈಲು ಮತ್ತು ಸಮುದ್ರ ಮಾರ್ಗಗಳಲ್ಲಿ ನೈಜ-ಸಮಯದ ಟ್ರ್ಯಾಕಿಂಗ್ ಮತ್ತು ಮಲ್ಟಿ-ಮಾಡಲ್ ದೃಶ್ಯಾವಳಿಯನ್ನು ಒದಗಿಸುತ್ತದೆ. ಇದು ದೇಶದ ಡಿಜಿಟಲ್ ವ್ಯಾಪಾರ ಮೂಲಸೌಕರ್ಯವನ್ನು ಗಮನಾರ್ಹವಾಗಿ ಬಲಪಡಿಸುತ್ತದೆ.
ಹೈ-ಸೀಸ್ ಕಂಟೈನರ್ ಟ್ರ್ಯಾಕಿಂಗ್ ಮತ್ತು ಅಡೆತಡೆಗಳನ್ನು ಗುರುತಿಸಲು ಲೈವ್ ಕಂಟೈನರ್ ಹೀಟ್‌ಮ್ಯಾಪ್ ಅನ್ನು ಪರಿಚಯಿಸುವ ಮೂಲಕ, ಎಲ್‌ಡಿಬಿ 2.0 ಪಾರದರ್ಶಕ ಮತ್ತು ದತ್ತಾಂಶ ಚಾಲಿತ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ. ಇದು ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ಪೂರೈಕೆ ಸರಪಳಿ ನಿರ್ವಹಣೆಯನ್ನು ಸುಧಾರಿಸುತ್ತದೆ. ಈ ಪ್ರಗತಿಗಳು ನೇರವಾಗಿ ವ್ಯವಹಾರದ ಸುಲಭತೆಯನ್ನು ಉತ್ತೇಜಿಸುತ್ತವೆ, ಭಾರತದ ಲಾಜಿಸ್ಟಿಕ್ಸ್ ಅನ್ನು ಹೆಚ್ಚು ದಕ್ಷ ಮತ್ತು ವಿಶ್ವಾಸಾರ್ಹವಾಗಿಸುತ್ತವೆ.
ಜೆಮ್ (ಸರ್ಕಾರಿ ಇ-ಮಾರುಕಟ್ಟೆ)
GeM ದೇಶಾದ್ಯಂತ ಇರುವ ಮಾರಾಟಗಾರರು ಮತ್ತು ಸೇವಾ ಪೂರೈಕೆದಾರರನ್ನು ಸಂಪರ್ಕಿಸುವ ಡಿಜಿಟಲ್ ಖರೀದಿ ವ್ಯವಸ್ಥೆಯಾಗಿ ಬೆಳೆದಿದೆ. ಇದರಲ್ಲಿ ಮಹಿಳಾ ಉದ್ಯಮಿಗಳು, ಸ್ಟಾರ್ಟ್‌ಅಪ್‌ಗಳು, ಅತಿಸಣ್ಣ ಮತ್ತು ಸಣ್ಣ ಉದ್ಯಮಗಳು, ಕುಶಲಕರ್ಮಿಗಳು, ಸ್ವಸಹಾಯ ಗುಂಪುಗಳು ಮತ್ತು ದಿವ್ಯಾಂಗಜನರು ಸೇರಿದ್ದಾರೆ. GeM ಗಮನಾರ್ಹ ಸಾಧನೆಗಳನ್ನು ದಾಖಲಿಸಿದ್ದು, ಹಣಕಾಸು ವರ್ಷ 2026 ರಲ್ಲಿ (12 ಫೆಬ್ರವರಿ, 2026 ರವರೆಗೆ) ₹4 ಲಕ್ಷ ಕೋಟಿಗೂ ಹೆಚ್ಚು ಆರ್ಡರ್ ಮೌಲ್ಯ ಮತ್ತು 60 ಲಕ್ಷಕ್ಕೂ ಹೆಚ್ಚು ಆರ್ಡರ್ ಪ್ರಮಾಣವನ್ನು ಹೊಂದಿದೆ. ಡಿಸೆಂಬರ್ 2021 ರಿಂದ ನವೆಂಬರ್ 2025 ರವರೆಗೆ, ಈ ಮಾಡ್ಯೂಲ್ ₹2,200+ ಕೋಟಿ ಮೌಲ್ಯದ ಹರಾಜನ್ನು ಸುಗಮಗೊಳಿಸಿದೆ, 13,000 ಕ್ಕೂ ಹೆಚ್ಚು ಹರಾಜುಗಳನ್ನು ನಡೆಸಿದೆ, 23,000 ಕ್ಕೂ ಹೆಚ್ಚು ನೋಂದಾಯಿತ ಬಿಡ್ಡರ್‌ಗಳನ್ನು ಸ್ವಾಗತಿಸಿದೆ ಮತ್ತು 17,000 ಕ್ಕೂ ಹೆಚ್ಚು ಹರಾಜುದಾರರ ಭಾಗವಹಿಸುವಿಕೆಯನ್ನು ಸಕ್ರಿಯಗೊಳಿಸಿದೆ.

ಈ ವೇದಿಕೆಯು ವೇಗವಾದ ಮತ್ತು ಹೆಚ್ಚು ವೆಚ್ಚ-ಪರಿಣಾಮಕಾರಿ ವಹಿವಾಟುಗಳಿಗಾಗಿ ತಂತ್ರಜ್ಞಾನ-ಚಾಲಿತ ಖರೀದಿ ಪ್ರಕ್ರಿಯೆಗಳನ್ನು ಜಾರಿಗೆ ತಂದಿದೆ. ಅಲ್ಲದೆ, ವಿಮೆ, ಮಾನವಶಕ್ತಿ ಮತ್ತು ಗಣಿ ಅಭಿವೃದ್ಧಿ ಹಾಗೂ ಕಾರ್ಯಾಚರಣೆಗಳಂತಹ ಹೊಸ ಸೇವಾ ಕ್ಷೇತ್ರಗಳಿಗೂ ವಿಸ್ತರಿಸಿದೆ.
ಒಎನ್‌ಡಿಸಿ (ಡಿಜಿಟಲ್ ವಾಣಿಜ್ಯಕ್ಕಾಗಿ ಮುಕ್ತ ಜಾಲ) ಒಎನ್‌ಡಿಸಿ ಎನ್ನುವುದು ಡಿಜಿಟಲ್ ಅಥವಾ ಎಲೆಕ್ಟ್ರಾನಿಕ್ ಜಾಲಗಳ ಮೂಲಕ ಸರಕು ಮತ್ತು ಸೇವೆಗಳ ವಿನಿಮಯದ ಎಲ್ಲಾ ಆಯಾಮಗಳಿಗಾಗಿ ಮುಕ್ತ ಜಾಲಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಒಂದು ಉಪಕ್ರಮವಾಗಿದೆ. ಇದು ಭಾರತದಾದ್ಯಂತ ಇರುವ ಮಾರಾಟಗಾರರು, ಖರೀದಿದಾರರು ಮತ್ತು ಸೇವಾ ಪೂರೈಕೆದಾರರಿಗೆ, ವಿಶೇಷವಾಗಿ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ ಸಮಾನ ಅವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ. ಮುಕ್ತ ಪ್ರೋಟೋಕಾಲ್‌ಗಳನ್ನು ಪ್ರೋತ್ಸಾಹಿಸುವ ಮೂಲಕ ಮತ್ತು ಏಕಸ್ವಾಮ್ಯದ ವೇದಿಕೆಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಮೂಲಕ, ಒಎನ್‌ಡಿಸಿ ಡಿಜಿಟಲ್ ವಾಣಿಜ್ಯ ಕ್ಷೇತ್ರದಲ್ಲಿ ನಾವೀನ್ಯತೆ ಮತ್ತು ಒಳಗೊಳ್ಳುವಿಕೆಯನ್ನು ಉತ್ತೇಜಿಸುತ್ತದೆ, ಇದರಿಂದಾಗಿ ವ್ಯವಹಾರ ನಡೆಸುವ ಸುಲಭತೆಯನ್ನು ಹೆಚ್ಚಿಸುತ್ತದೆ. ಪ್ರಸ್ತುತ ಮಾರಾಟಗಾರರು ಮತ್ತು ಸೇವಾ ಪೂರೈಕೆದಾರರು 616 ಕ್ಕೂ ಹೆಚ್ಚು ನಗರಗಳಲ್ಲಿ ಹರಡಿಕೊಂಡಿದ್ದು, ಒಎನ್‌ಡಿಸಿ ಜಾಲದ ಭೌಗೋಳಿಕ ವ್ಯಾಪ್ತಿಯನ್ನು ವಿಸ್ತರಿಸುತ್ತಿದ್ದಾರೆ.
ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಭಾರತದಲ್ಲಿನ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವು ಜನರು, ವ್ಯವಹಾರಗಳು ಮತ್ತು ಸರ್ಕಾರಗಳ ನಡುವೆ ಸುರಕ್ಷಿತ ಮತ್ತು ಸಮನ್ವಯದ ಸಂವಹನಕ್ಕೆ ಅನುವು ಮಾಡಿಕೊಡುತ್ತದೆ. ಈ ಸಂಯೋಜಿತ ಪರಿಸರ ವ್ಯವಸ್ಥೆಯು ಕಾರ್ಯಾಚರಣೆಯ ಅಡೆತಡೆಗಳನ್ನು ನಾಟಕೀಯವಾಗಿ ಕಡಿಮೆ ಮಾಡುತ್ತದೆ ಮತ್ತು ತ್ವರಿತ, ಸುರಕ್ಷಿತ ಹಾಗೂ ಪಾರದರ್ಶಕ ಡಿಜಿಟಲ್ ಸಂವಹನಗಳ ಮೂಲಕ ವ್ಯವಹಾರ ನಡೆಸುವ ಸುಲಭತೆಯನ್ನು ಹೆಚ್ಚಿಸುತ್ತದೆ.
ಯುಪಿಐ (ಏಕೀಕೃತ ಪಾವತಿ ಇಂಟರ್ಫೇಸ್)

ಯುಪಿಐ ಎನ್ನುವುದು ನೈಜ-ಸಮಯದ ಪಾವತಿ ವ್ಯವಸ್ಥೆಯಾಗಿದ್ದು, ಮೊಬೈಲ್ ಅಪ್ಲಿಕೇಶನ್ ಮೂಲಕ ಬ್ಯಾಂಕ್ ಖಾತೆಗಳ ನಡುವೆ ಹಣವನ್ನು ತಕ್ಷಣವೇ ವರ್ಗಾಯಿಸಲು ಅನುವು ಮಾಡಿಕೊಡುತ್ತದೆ. ಯುಪಿಐ ಹಲವಾರು ಬ್ಯಾಂಕ್ ಖಾತೆಗಳನ್ನು ಒಂದೇ ಆಪ್ ಅಡಿಯಲ್ಲಿ ತರುತ್ತದೆ ಮತ್ತು ಹಣ ವರ್ಗಾವಣೆ, ವ್ಯಾಪಾರಿ ಪಾವತಿಗಳು ಹಾಗೂ ವ್ಯಕ್ತಿಯಿಂದ ವ್ಯಕ್ತಿಗೆ ಪಾವತಿ ವಿನಂತಿಗಳಂತಹ ವಿವಿಧ ವೈಶಿಷ್ಟ್ಯಗಳನ್ನು ಬೆಂಬಲಿಸುತ್ತದೆ. ಇದು ಡಿಜಿಟಲ್ ವಹಿವಾಟುಗಳನ್ನು ತ್ವರಿತ ಮತ್ತು ಅನುಕೂಲಕರವಾಗಿಸುತ್ತದೆ.
ಸುರಕ್ಷಿತ ಮತ್ತು ವೇಗದ ಪಾವತಿಗಳ ಮೂಲಕ ಇದು ವ್ಯವಹಾರ ನಡೆಸುವ ಸುಲಭತೆಯನ್ನು ಉತ್ತೇಜಿಸುತ್ತದೆ; ಅಲ್ಲದೆ ಗೌಪ್ಯತೆಯನ್ನು ಖಚಿತಪಡಿಸುತ್ತದೆ ಮತ್ತು ಕ್ಯೂಆರ್ ಕೋಡ್ ಸೌಲಭ್ಯವನ್ನು ಒದಗಿಸುತ್ತದೆ. ಈ ವ್ಯವಸ್ಥೆಯು 691 ಬ್ಯಾಂಕ್ಗಳನ್ನು ಒಂದೇ ವೇದಿಕೆಯಲ್ಲಿ ಸಂಪರ್ಕಿಸುತ್ತದೆ, ಇದರಿಂದಾಗಿ ಜನರು ತಾವು ಯಾವ ಬ್ಯಾಂಕ್ ಬಳಸುತ್ತಿದ್ದಾರೆ ಎಂಬ ಚಿಂತೆಯಿಲ್ಲದೆ ಸುಲಭವಾಗಿ ಪಾವತಿಗಳನ್ನು ಮಾಡಬಹುದು. ಜನವರಿ 2026 ರ ಒಂದೇ ತಿಂಗಳಿನಲ್ಲಿ ಇದು ₹28.33 ಲಕ್ಷ ಕೋಟಿ ಮೌಲ್ಯದ 21.70 ಬಿಲಿಯನ್ ವಹಿವಾಟುಗಳನ್ನು ನಿರ್ವಹಿಸಿದೆ. ಇತರ ಸಾರ್ವಜನಿಕ ಡಿಜಿಟಲ್ ಮೂಲಸೌಕರ್ಯಗಳೊಂದಿಗೆ ಸೇರಿ UPI ವಹಿವಾಟು ಮತ್ತು ನಿಯಮಗಳ ಪಾಲನೆಯ ವೆಚ್ಚವನ್ನು ಕಡಿಮೆ ಮಾಡಿದೆ.
|
ಯುಪಿಐಗೆ ಅಂತರಾಷ್ಟ್ರೀಯ ಮನ್ನಣೆ
- ಅಂತರಾಷ್ಟ್ರೀಯ ಹಣಕಾಸು ನಿಧಿ: ಜೂನ್ 2025 ರ ವರದಿಯಲ್ಲಿ, ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ ಅನ್ನು ವಹಿವಾಟಿನ ಪ್ರಮಾಣಕ್ಕೆ ಅನುಗುಣವಾಗಿ ವಿಶ್ವದ ಅತಿದೊಡ್ಡ ಚಿಲ್ಲರೆ ವೇಗದ ಪಾವತಿ ವ್ಯವಸ್ಥೆ ಎಂದು ಐಎಂಎಫ್ ಗುರುತಿಸಿದೆ.
- ಎಸಿಐ ವರ್ಲ್ಡ್ವೈಡ್ ವರದಿ (2024): 'ಪ್ರೈಮ್ ಟೈಮ್ ಫಾರ್ ರಿಯಲ್-ಟೈಮ್' ವರದಿಯ ಪ್ರಕಾರ, ಜಾಗತಿಕ ನೈಜ-ಸಮಯದ ಪಾವತಿ ವ್ಯವಸ್ಥೆಯ ವಹಿವಾಟಿನ ಪ್ರಮಾಣದಲ್ಲಿ ಯುಪಿಐ ಸುಮಾರು 49% ಪಾಲನ್ನು ಹೊಂದಿದೆ.
- ದೈನಂದಿನ ವಹಿವಾಟುಗಳನ್ನು ಪ್ರಕ್ರಿಯೆಗೊಳಿಸುವಲ್ಲಿ ಯುಪಿಐ ಈಗ ವೀಸಾ ಸಂಸ್ಥೆಯನ್ನು ಮೀರಿಸುವ ಮೂಲಕ ಮುಂಚೂಣಿಯಲ್ಲಿದೆ.
- ಯುಎಇ, ಸಿಂಗಾಪುರ, ಭೂತಾನ್, ನೇಪಾಳ, ಶ್ರೀಲಂಕಾ, ಫ್ರಾನ್ಸ್, ಮಾರಿಷಸ್ ಮತ್ತು ಕತಾರ್ ಸೇರಿದಂತೆ 8 ಕ್ಕೂ ಹೆಚ್ಚು ದೇಶಗಳಲ್ಲಿ ಯುಪಿಐ ಈಗ ಬಳಕೆಯಲ್ಲಿದ್ದು, ಡಿಜಿಟಲ್ ಪಾವತಿಗಳಲ್ಲಿ ಭಾರತವನ್ನು ಜಾಗತಿಕ ನಾಯಕನನ್ನಾಗಿ ಮಾಡಿದೆ. ಇದರ ಬೆಳೆಯುತ್ತಿರುವ ಅಂತರಾಷ್ಟ್ರೀಯ ಅಳವಡಿಕೆಯು ಹಣ ವರ್ಗಾವಣೆಯನ್ನು ಉತ್ತೇಜಿಸುತ್ತಿದೆ, ಆರ್ಥಿಕ ಒಳಗೊಳ್ಳುವಿಕೆಯನ್ನು ಹೆಚ್ಚಿಸುತ್ತಿದೆ ಮತ್ತು ಜಾಗತಿಕ ಫಿನ್‌ಟೆಕ್ ಕ್ಷೇತ್ರದಲ್ಲಿ ಭಾರತದ ಸ್ಥಾನವನ್ನು ಬಲಪಡಿಸುತ್ತಿದೆ.
|
ಸಿಕೆವೈಸಿ (ಕೇಂದ್ರ ಕೆವೈಸಿ) ನೋಂದಣಿ
ಸಿಕೆವೈಸಿ ನೋಂದಣಿ ಎನ್ನುವುದು ಹಣಕಾಸು ವಲಯದ ಗ್ರಾಹಕರ ಕೆವೈಸಿ ದಾಖಲೆಗಳ ಕೇಂದ್ರೀಕೃತ ಸಂಗ್ರಹಾಲಯವಾಗಿದೆ. ಇದು ಏಕರೂಪದ ಕೆವೈಸಿ ಮಾನದಂಡಗಳನ್ನು ಹೊಂದಿದ್ದು, ಹಣಕಾಸು ವಲಯದಾದ್ಯಂತ ಈ ದಾಖಲೆಗಳನ್ನು ಮರುಬಳಕೆ ಮಾಡಲು ಅನುವು ಮಾಡಿಕೊಡುತ್ತದೆ. ಗ್ರಾಹಕರು ಹೊಸ ಹಣಕಾಸು ಸಂಸ್ಥೆಯೊಂದಿಗೆ ವ್ಯವಹರಿಸುವಾಗ ಪ್ರತಿ ಬಾರಿಯೂ ಕೆವೈಸಿ ದಾಖಲೆಗಳನ್ನು ಸಲ್ಲಿಸುವ ಮತ್ತು ಅವುಗಳನ್ನು ಪರಿಶೀಲಿಸುವ ಹೊರೆಯನ್ನು ಕಡಿಮೆ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ.
ಎಂಟಿಟಿ ಲಾಕರ್
ಎಂಟಿಟಿ ಲಾಕರ್ ಎನ್ನುವುದು ಡಿಜಿಟಲ್ ದಾಖಲೆಗಳು ಮತ್ತು ಪ್ರಮಾಣಪತ್ರಗಳನ್ನು ಸಂಗ್ರಹಿಸಲು, ಹಂಚಿಕೊಳ್ಳಲು ಮತ್ತು ಪರಿಶೀಲಿಸಲು ಸಂಘಟನೆಗಳಿಗೆ ಸುರಕ್ಷಿತವಾದ ಕ್ಲೌಡ್-ಆಧಾರಿತ ವೇದಿಕೆಯನ್ನು ಒದಗಿಸುವ ಒಂದು ಪ್ರಮುಖ ಉಪಕ್ರಮವಾಗಿದೆ. ಡಿಜಿಟಲ್ ರೂಪಾಂತರದ ಗುರಿಗಳಿಗೆ ಅನುಗುಣವಾಗಿ, ಇದು ಸಂಘಟನೆಗಳಿಗೆ ತಮ್ಮ ಡಿಜಿಟಲ್ ದಾಖಲೆಗಳ ವಾಲೆಟ್ ಮೂಲಕ ಅಧಿಕೃತ ದಾಖಲೆಗಳನ್ನು ಪಡೆಯಲು 'ಡಿಜಿಟಲ್ ಸಬಲೀಕರಣ'ದ ಪರಿಹಾರವನ್ನು ನೀಡುತ್ತದೆ. ಈ ವೇದಿಕೆಯು ವ್ಯವಹಾರಗಳು ಮತ್ತು ಸಂಸ್ಥೆಗಳಿಗೆ ಸುರಕ್ಷಿತ, ದಕ್ಷ ಮತ್ತು ಸರಳೀಕೃತ ದಾಖಲೆ ನಿರ್ವಹಣೆಯನ್ನು ಖಚಿತಪಡಿಸುತ್ತದೆ.
ಎಪಿಐ ಸೇತು
ಎಪಿಐ ಸೇತು ಎನ್ನುವುದು ಒಂದು ಏಕೀಕೃತ ಡಿಜಿಟಲ್ ವೇದಿಕೆಯಾಗಿದ್ದು, ಇದು ಸರ್ಕಾರಿ ಇಲಾಖೆಗಳು, ಖಾಸಗಿ ಸಂಸ್ಥೆಗಳು, ಸ್ಟಾರ್ಟ್‌ಅಪ್‌ಗಳು ಮತ್ತು ಡೆವಲಪರ್‌ಗಳಿಗೆ ಎಪಿಐಗಳನ್ನು ಸುಲಭವಾಗಿ ಹುಡುಕಲು, ಪ್ರವೇಶಿಸಲು ಮತ್ತು ಸಂಯೋಜಿಸಲು ಅನುವು ಮಾಡಿಕೊಡುತ್ತದೆ. ಇದು ವಿವಿಧ ಅಪ್ಲಿಕೇಶನ್‌ಗಳ ನಡುವೆ ವೇಗವಾದ, ಪಾರದರ್ಶಕ, ಸುರಕ್ಷಿತ ಮತ್ತು ವಿಶ್ವಾಸಾರ್ಹ ಮಾಹಿತಿ ಹಂಚಿಕೆಯನ್ನು ಸಕ್ರಿಯಗೊಳಿಸುತ್ತದೆ. ಇ-ಗೌರ್ನೆನ್ಸ್ ಅಪ್ಲಿಕೇಶನ್‌ಗಳಿಂದ ಲಭ್ಯವಿರುವ ದತ್ತಾಂಶವನ್ನು ಉದ್ಯಮ ಮತ್ತು ಸಾರ್ವಜನಿಕರಿಗೆ ಒದಗಿಸುವ ಮೂಲಕ ನಾವೀನ್ಯತೆಯನ್ನು ಉತ್ತೇಜಿಸುತ್ತದೆ ಮತ್ತು ವ್ಯವಹಾರ ಸ್ನೇಹಿ ವಾತಾವರಣವನ್ನು ನಿರ್ಮಿಸುತ್ತದೆ.
ಉಪಸಂಹಾರ
ಭಾರತದ ಡಿಜಿಟಲ್ ಸುಧಾರಣೆಗಳು ದೇಶದ ವ್ಯವಹಾರ ವಾತಾವರಣವನ್ನು ಮೂಲಭೂತವಾಗಿ ಬದಲಾಯಿಸಿದ್ದು, ಅನುಮೋದನೆಗಳು, ನೋಂದಣಿ ಮತ್ತು ವ್ಯಾಪಾರ ಪ್ರಕ್ರಿಯೆಗಳನ್ನು ಸುಗಮ ಮತ್ತು ದಕ್ಷಗೊಳಿಸಿವೆ. ಹೆಚ್ಚಿದ ಪಾರದರ್ಶಕತೆ, ತ್ವರಿತ ನಿಯಮ ಪಾಲನೆ ಮತ್ತು ನೈಜ-ಸಮಯದ ದತ್ತಾಂಶ ಹರಿವು ಸಂಸ್ಥೆಗಳ ವಿಶ್ವಾಸ ಮತ್ತು ಕಾರ್ಯಾಚರಣೆಯ ಸುಲಭತೆಯನ್ನು ಬಲಪಡಿಸಿವೆ. ದೃಢವಾದ ಡಿಜಿಟಲ್ ಮೂಲಸೌಕರ್ಯವು ನಾವೀನ್ಯತೆಯನ್ನು ಬೆಳೆಸುತ್ತಿದೆ, ವೆಚ್ಚವನ್ನು ಕಡಿಮೆ ಮಾಡುತ್ತಿದೆ ಮತ್ತು ವ್ಯವಹಾರಗಳು, ನಾಗರಿಕರು ಹಾಗೂ ಸರ್ಕಾರದ ನಡುವೆ ಸುಗಮ ಸಂವಹನಕ್ಕೆ ಅನುವು ಮಾಡಿಕೊಡುತ್ತಿದೆ. ಈ ಎಲ್ಲಾ ಉಪಕ್ರಮಗಳು ಒಟ್ಟಾಗಿ ಭಾರತವನ್ನು ಉದ್ಯಮಗಳ ಸ್ಥಾಪನೆ ಮತ್ತು ಬೆಳವಣಿಗೆಗೆ ಸುರಕ್ಷಿತ, ದಕ್ಷ ಮತ್ತು ಆಕರ್ಷಕ ತಾಣವನ್ನಾಗಿ ರೂಪಿಸಿವೆ.
References
Ministry of Corporate Affairs
https://www.mca.gov.in/content/mca/global/en/ease-of-doing-business/features.html
https://www.pib.gov.in/Pressreleaseshare.aspx?PRID=1604176®=3&lang=2
https://www.pib.gov.in/PressReleasePage.aspx?PRID=1695473®=3&lang=2
https://www.pib.gov.in/PressReleasePage.aspx?PRID=2099226®=3&lang=2
https://www.pib.gov.in/PressReleseDetailm.aspx?PRID=2226017®=3&lang=2
Ministry of Micro, Small & Medium Enterprises
https://www.pib.gov.in/PressReleasePage.aspx?PRID=1847452®=3&lang=2
https://dashboard.msme.gov.in/
https://udyamregistration.gov.in/Government-India/Ministry-MSME-registration.htm
Ministry of Commerce & Industry
https://www.pib.gov.in/PressReleasePage.aspx?PRID=2201280®=3&lang=1#:~:text=Till%20date%2C%20seven%20editions%20of,2024)%20have%20already%20been%20released
https://www.pib.gov.in/PressReleasePage.aspx?PRID=2204665®=1&lang=1
https://www.pib.gov.in/PressReleseDetailm.aspx?PRID=2188992®=3&lang=2#:~:text=BRAP%202024%20covered%20434%20reform,across%2034%20States%20and%20UTs
https://www.pib.gov.in/PressReleasePage.aspx?PRID=2096786®=3&lang=2
https://www.trade.gov.in/pages/about-trade-connect-eplatform
https://www.pib.gov.in/PressReleasePage.aspx?PRID=2168993®=3&lang=2
https://www.pib.gov.in/PressReleasePage.aspx?PRID=2154136®=3&lang=2
https://gem.gov.in/statistics
https://www.pib.gov.in/PressReleaseIframePage.aspx?PRID=2090097®=3&lang=2
https://www.ondc.org/
https://www.pib.gov.in/PressReleasePage.aspx?PRID=2145471®=3&lang=2#:~:text=About%20Trade%20Connect%20ePlatform%20:,://trade.gov.in.
https://sansad.in/getFile/loksabhaquestions/annex/185/AU2676_JjlKis.pdf?source=pqals&utm_
https://www.pib.gov.in/PressReleasePage.aspx?PRID=2225805&lang=2®=3
https://www.pib.gov.in/PressReleasePage.aspx?PRID=2152521®=3&lang=2
Ministry of Finance
https://www.indiabudget.gov.in/economicsurvey/doc/echapter.pdf
https://www.icegate.gov.in/about-us/icegate
https://www.npci.org.in/product/upi/product-statistics
https://www.pib.gov.in/PressReleasePage.aspx?PRID=2200569®=3&lang=1
https://www.ckycindia.in/ckyc/index.php
Ministry of Electronics & IT
https://www.pib.gov.in/PressReleasePage.aspx?PRID=1709048®=3&lang=2#:~:text=E%2DWay%20Bill%20needs%20to,to%20enhance%20the%20tax%20collection
https://ewaybillgst.gov.in/
https://entity.digilocker.gov.in/
https://www.pib.gov.in/PressReleasePage.aspx?PRID=2224505®=3&lang=2
https://apisetu.gov.in/aboutus
Ministry of Ports, Shipping and Waterways
https://nlpmarine.gov.in/landings/about-new
Sansad.in
https://sansad.in/getFile/loksabhaquestions/annex/185/AU2676_JjlKis.pdf?source=pqals&utm_
Government of UP
https://invest.up.gov.in/uttar-pradesh-braps-top-achiever-in-2024/?utm_
Government of MP
https://sws.invest.mp.gov.in/advantages-of-mp/ease-of-doing-business
GST Network
https://www.gstn.org.in/
Reserve Bank of India
https://www.rbi.org.in/commonman/English/scripts/FAQs.aspx?Id=3138
https://www.pib.gov.in/PressReleasePage.aspx?PRID=2221434®=3&lang=2
UNDP
https://www.undp.org/digital/digital-public-infrastructure
ISO.ORG
https://www.iso.org/standard/27001
PIB Headquarters
https://www.pib.gov.in/PressNoteDetails.aspx?NoteId=157227&ModuleId=3®=3&lang=2#:~:text=Union%20Budget%202026%2D27%20reinforces,clearance%20and%20Custom%20Integrated%20System
https://www.pib.gov.in/PressNoteDetails.aspx?NoteId=154772&ModuleId=3®=3&lang=2
https://www.pib.gov.in/PressNoteDetails.aspx?NoteId=156611&ModuleId=3®=3&lang=1
https://www.pib.gov.in/PressNoteDetails.aspx?NoteId=154912&ModuleId=3®=3&lang=2
Click here to see PDF
*****
(Explainer ID: 157763)
आगंतुक पटल : 16
Provide suggestions / comments