Technology
ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ
ಜನಸಂಖ್ಯಾ-ಪ್ರಮಾಣದ ಡಿಪಿಐ ಗಾಗಿ ಜಾಗತಿಕ ಮಾನದಂಡವನ್ನು ಸ್ಥಾಪಿಸುತ್ತಿದೆ
Posted On:
06 MAR 2026 10:59AM
|
ಪ್ರಮುಖ ಮುಖ್ಯಾಂಶಗಳು
- ಭಾರತವು 24 ದೇಶಗಳೊಂದಿಗೆ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಸಹಕಾರ ಒಪ್ಪಂದಗಳಿಗೆ ಸಹಿ ಹಾಕಿದೆ.
- ಯುಪಿಐ ಈಗ 8 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಗಡಿಯಾಚೆಗಿನ ಪಾವತಿಗಳನ್ನು ಮಾಡಲು ಸಾಧ್ಯವಾಗಿಸಿದೆ.
- 'ಇಂಡಿಯಾ ಸ್ಟಾಕ್ ಗ್ಲೋಬಲ್' ಪಾಲುದಾರ ರಾಷ್ಟ್ರಗಳು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಅಳವಡಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.
- ಜಾಗತಿಕ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಭಂಡಾರಕ್ಕೆ ಭಾರತವು ಅತಿ ಹೆಚ್ಚು ತಾಂತ್ರಿಕ ಪರಿಹಾರಗಳನ್ನು ಕೊಡುಗೆಯಾಗಿ ನೀಡಿದೆ.
|
ಪೀಠಿಕೆ
ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವು ರಾಷ್ಟ್ರಗಳು ಆಡಳಿತ ನಡೆಸುವ, ವ್ಯವಹಾರ ಮಾಡುವ ಮತ್ತು ಸೇವೆಗಳನ್ನು ಒದಗಿಸುವ ವಿಧಾನವನ್ನು ಮರುರೂಪಿಸುತ್ತಿದೆ. ಈ ಪರಿವರ್ತನೆಯಲ್ಲಿ, ಭಾರತವು ಕೇವಲ ಡಿಜಿಟಲ್ ವ್ಯವಸ್ಥೆಗಳ ಬಳಕೆದಾರನಾಗಿ ಉಳಿಯದೆ, ಬೃಹತ್ ಜನಸಂಖ್ಯಾ-ಪ್ರಮಾಣದ ಡಿಜಿಟಲ್ ವಾಸ್ತುಶಿಲ್ಪದ ನಿರ್ಮಾರ್ತೃವಾಗಿ ಬೆಳೆದಿದೆ. ಭಾರತದ ಈ ವಿಧಾನವನ್ನು ಅದರ ವ್ಯಾಪ್ತಿ, ಮುಕ್ತತೆ ಮತ್ತು ಏಕೀಕರಣವು ವಿಶಿಷ್ಟವಾಗಿಸಿದೆ. ಗುರುತಿನ ಚೀಟಿ, ಪಾವತಿಗಳು ಮತ್ತು ದತ್ತಾಂಶ ವಿನಿಮಯವನ್ನು ಪರಸ್ಪರ ಕಾರ್ಯನಿರ್ವಹಿಸಬಲ್ಲ ಸಾರ್ವಜನಿಕ ವ್ಯವಸ್ಥೆಗಳ ಮೂಲಕ ಸಂಪರ್ಕಿಸಲಾಗಿದೆ. ಇದು ಕಲ್ಯಾಣ ಯೋಜನೆಗಳ ವಿತರಣೆ, ಆರ್ಥಿಕ ಚಟುವಟಿಕೆ ಮತ್ತು ಸರ್ಕಾರದ ಕಾರ್ಯದಕ್ಷತೆಯನ್ನು ಬೆಂಬಲಿಸುತ್ತದೆ.
ವಿಶ್ವಾದ್ಯಂತ ದೇಶಗಳು ವಿಶ್ವಾಸಾರ್ಹ ಮತ್ತು ಒಳಗೊಳ್ಳುವಿಕೆಯ ಡಿಜಿಟಲ್ ಮಾರ್ಗಗಳಿಗಾಗಿ ಹುಡುಕುತ್ತಿರುವಾಗ, ಭಾರತದ ಅನುಭವವು ನಿರಂತರ ಗಮನ ಸೆಳೆಯುತ್ತಿದೆ. ಡಿಜಿಟಲ್ ಮೂಲಸೌಕರ್ಯವನ್ನು ಒಂದು ಮುಚ್ಚಿದ ವೇದಿಕೆಯ ಬದಲಿಗೆ 'ಸಾರ್ವಜನಿಕ ಹಿತಾಸಕ್ತಿ'ಯಾಗಿ ವಿನ್ಯಾಸಗೊಳಿಸಬಹುದು ಎಂಬುದನ್ನು ಈ ಮಾದರಿ ತೋರಿಸಿಕೊಟ್ಟಿದೆ. ಒಳಗೊಳ್ಳುವಿಕೆ ಮತ್ತು ದಕ್ಷತೆ ಎರಡೂ ಒಟ್ಟಾಗಿ ಸಾಗಬಲ್ಲವು ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಈ ಮೂಲಕ, ಇಪ್ಪತ್ತೊಂದನೇ ಶತಮಾನದಲ್ಲಿ ಡಿಜಿಟಲ್ ವ್ಯವಸ್ಥೆಗಳನ್ನು ಹೇಗೆ ನಿರ್ಮಿಸಬೇಕು ಮತ್ತು ನಿರ್ವಹಿಸಬೇಕು ಎಂಬ ಜಾಗತಿಕ ಚರ್ಚೆಗೆ ಭಾರತವು ಒಂದು ಹೊಸ ರೂಪ ನೀಡುತ್ತಿದೆ.
ಜಾಗತಿಕ ಡಿಜಿಟಲ್ ಕ್ಷಣ: ಡಿಪಿಐ ಏಕೆ ಮುಖ್ಯ
ಇಂದಿನ ಮೂಲಸೌಕರ್ಯವು ಕೇವಲ ರಸ್ತೆಗಳು, ಬಂದರುಗಳು ಮತ್ತು ವಿದ್ಯುತ್ ಜಾಲಗಳಿಗೆ ಸೀಮಿತವಾಗಿಲ್ಲ; ಅದು ಈಗ ಡಿಜಿಟಲ್ ಆಗಿದೆ. ವಿಶ್ವಸಂಸ್ಥೆಯು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು "ಆಧುನಿಕ ಸಮಾಜಗಳ ಬೆನ್ನೆಲುಬಾಗಿ ಕಾರ್ಯನಿರ್ವಹಿಸುವ ಮೂಲಭೂತ ಡಿಜಿಟಲ್ ವ್ಯವಸ್ಥೆಗಳು" ಎಂದು ವ್ಯಾಖ್ಯಾನಿಸುತ್ತದೆ. ಈ ವ್ಯವಸ್ಥೆಗಳು ಜನರು, ವ್ಯಾಪಾರ ಸಂಸ್ಥೆಗಳು ಮತ್ತು ಸರ್ಕಾರಗಳ ನಡುವೆ ಸುರಕ್ಷಿತ ಮತ್ತು ತಡೆರಹಿತ ಸಂವಹನಕ್ಕೆ ಅನುವು ಮಾಡಿಕೊಡುತ್ತವೆ. ಗುರುತಿನ ಪರಿಶೀಲನೆ ಮತ್ತು ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು, ತಕ್ಷಣದ ಡಿಜಿಟಲ್ ಪಾವತಿ ಮತ್ತು ಸುರಕ್ಷಿತ ದತ್ತಾಂಶ ವಿನಿಮಯದವರೆಗೆ ಡಿಪಿಐ ದೈನಂದಿನ ಜೀವನವನ್ನು ರೂಪಿಸುತ್ತದೆ. ಹಿಂದೆ ರೈಲ್ವೇಯು ಹೇಗೆ ವಿವಿಧ ಪ್ರದೇಶಗಳನ್ನು ಅವಕಾಶಗಳೊಂದಿಗೆ ಸಂಪರ್ಕಿಸುತ್ತಿತ್ತೋ, ಹಾಗೆಯೇ ಇಂದಿನ ಡಿಜಿಟಲ್ ಮೂಲಸೌಕರ್ಯವು ಆಧುನಿಕ ಆರ್ಥಿಕತೆಯಲ್ಲಿ ಯಾರು ಸೇವೆಗಳು, ಮಾರುಕಟ್ಟೆಗಳು ಮತ್ತು ಹಕ್ಕುಗಳನ್ನು ಪಡೆಯಬಹುದು ಎಂಬುದನ್ನು ನಿರ್ಧರಿಸುತ್ತದೆ.
ಡಿಜಿಟಲ್ ಮೂಲಸೌಕರ್ಯವು ಸಾರ್ವಜನಿಕ ಮೌಲ್ಯವನ್ನು ನೀಡಬೇಕಾದರೆ, ಅದು ಸಮಗ್ರ, ಪರಸ್ಪರ ಕಾರ್ಯನಿರ್ವಹಣೆ ಮತ್ತು ಸಾರ್ವಜನಿಕ ಹಿತಾಸಕ್ತಿಯಿಂದ ನಿಯಂತ್ರಿಸಲ್ಪಡುವ ಗುಣಗಳನ್ನು ಹೊಂದಿರಬೇಕು. ಉತ್ತಮವಾಗಿ ವಿನ್ಯಾಸಗೊಳಿಸಲಾದ ಡಿಜಿಟಲ್ ಗುರುತಿನ ವ್ಯವಸ್ಥೆಯು ಸಬ್ಸಿಡಿ ವಿತರಣೆ, ಮತದಾರರ ನೋಂದಣಿ ಮತ್ತು ಸುರಕ್ಷಿತ ಬ್ಯಾಂಕಿಂಗ್‌ಗೆ ಬೆಂಬಲ ನೀಡಬಲ್ಲದು. ಇದನ್ನು ಪಾವತಿ ಮತ್ತು ದತ್ತಾಂಶ ವಿನಿಮಯ ಚೌಕಟ್ಟುಗಳೊಂದಿಗೆ ಜೋಡಿಸಿದಾಗ, ಅದು ಸರ್ಕಾರದ ಕಾರ್ಯದಕ್ಷತೆಯನ್ನು ಬಲಪಡಿಸುವ ಮತ್ತು ಅವಕಾಶಗಳನ್ನು ವಿಸ್ತರಿಸುವ ಒಂದು ಏಕೀಕೃತ ವಾಸ್ತುಶಿಲ್ಪವನ್ನು ಸೃಷ್ಟಿಸುತ್ತದೆ.
ಈ ಹಿನ್ನೆಲೆಯಲ್ಲಿ, ಭಾರತದ ಅನುಭವವು ಬೃಹತ್ ಜನಸಂಖ್ಯಾ-ಪ್ರಮಾಣದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವು ಏನನ್ನು ಸಾಧಿಸಬಹುದು ಎಂಬುದಕ್ಕೆ ಒಂದು ಪ್ರಾಯೋಗಿಕ ಉದಾಹರಣೆಯಾಗಿದೆ. ಭಾರತವು 140 ಕೋಟಿಗೂ ಹೆಚ್ಚು ಜನರಿಗಾಗಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ನಿರ್ಮಿಸಿದೆ. ಇದು ನಿಯಮಾವಳಿಗಳಿಂದ ಬೆಂಬಲಿತವಾದ ಮುಕ್ತ ಮತ್ತು ಸುಲಭವಾಗಿ ಲಭ್ಯವಿರುವ ಜಾಲವಾಗಿದ್ದು, ಆರ್ಥಿಕತೆಯನ್ನು ಆಧುನೀಕರಿಸುವ, ಆಡಳಿತವನ್ನು ಸುಧಾರಿಸುವ ಮತ್ತು ಜೀವನವನ್ನು ಪರಿವರ್ತಿಸುವ ವ್ಯಾಪಕ ಶ್ರೇಣಿಯ ಅಪ್ಲಿಕೇಶನ್‌ಗಳನ್ನು ಹೊಂದಿದೆ. ಭಾರತದ ವಿಷಯದಲ್ಲಿ, ಒಳಗೊಳ್ಳುವಿಕೆ, ನಾವೀನ್ಯತೆ ಮತ್ತು ವಿಶ್ವಾಸದ ತತ್ವಗಳು ಅದರ ಡಿಪಿಐ ಪರಿಸರ ವ್ಯವಸ್ಥೆಯ ಕಾರ್ಯಗತ ಸತ್ಯಗಳಾಗಿವೆ. ಬೃಹತ್ ಪ್ರಮಾಣದಲ್ಲಿ ಮತ್ತು ಅಳೆಯಬಹುದಾದ ಪ್ರಭಾವದೊಂದಿಗೆ, ಡಿಜಿಟಲ್ ವ್ಯವಸ್ಥೆಗಳು ಅಭಿವೃದ್ಧಿಯನ್ನು ವೇಗಗೊಳಿಸುವ ಜೊತೆಗೆ ಪ್ರಜಾಪ್ರಭುತ್ವವನ್ನು ಹೇಗೆ ಗಾಢವಾಗಿಸಬಹುದು ಎಂಬುದನ್ನು ಭಾರತವು ಜಗತ್ತಿಗೆ ತೋರಿಸಿಕೊಟ್ಟಿದೆ.
ಭಾರತದ ಡಿಪಿಐ ಅಡಿಪಾಯ: ಜಾಮ್ ತ್ರಿವಳಿ
ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವು ಒಂದೇ ರಾತ್ರಿಯಲ್ಲಿ ಉದಯಿಸಿದ್ದಲ್ಲ. ಇದು ಗುರುತು, ಬ್ಯಾಂಕಿಂಗ್ ಮತ್ತು ಸಂಪರ್ಕದ ಉದ್ದೇಶಪೂರ್ವಕ ಸಂಯೋಜನೆಯಿಂದ ರೂಪಗೊಂಡಿದೆ. ಈ ಸಂಯೋಜನೆಯೇ ಜಾಮ್ ತ್ರಿವಳಿ'ಯಾಗಿ (ಜನ್ ಧನ್, ಆಧಾರ್ ಮತ್ತು ಮೊಬೈಲ್) ಹೊರಹೊಮ್ಮಿತು. ಜನ್ ಧನ್ ಬ್ಯಾಂಕ್ ಖಾತೆಗಳು, ಆಧಾರ್ ನೋಂದಣಿ ಮತ್ತು ವ್ಯಾಪಕವಾದ ಮೊಬೈಲ್ ಫೋನ್ ಬಳಕೆ ಭಾರತದ ಡಿಜಿಟಲ್ ರೂಪಾಂತರಕ್ಕೆ ಮೂಲ ಅಡಿಪಾಯವನ್ನು ಹಾಕಿಕೊಟ್ಟವು. ಇವು ಒಟ್ಟಾಗಿ ವ್ಯಕ್ತಿಗಳನ್ನು ಸರ್ಕಾರದೊಂದಿಗೆ ನೇರ ಮತ್ತು ಪರಿಶೀಲಿಸಬಹುದಾದ ರೀತಿಯಲ್ಲಿ ಸಂಪರ್ಕಿಸಿದವು. ಜಾಮ್ ಮೂಲಕ, ಸರ್ಕಾರದ ಕಲ್ಯಾಣ ಯೋಜನೆಗಳ ಸೌಲಭ್ಯಗಳು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆಯಾಗಲು ಪ್ರಾರಂಭಿಸಿದವು. ಇದರಿಂದ ಮಧ್ಯವರ್ತಿಗಳ ಹಾವಳಿ ಕಡಿಮೆಯಾಯಿತು, ಸೌಲಭ್ಯ ವಿತರಣೆಯಲ್ಲಾಗುತ್ತಿದ್ದ ವಿಳಂಬ ತಪ್ಪಿತು ಮತ್ತು ಹಣದ ಸೋರಿಕೆ ಗಣನೀಯವಾಗಿ ಇಳಿಕೆಯಾಯಿತು. ಈ ಏಕೀಕರಣದ ಬೃಹತ್ ವ್ಯಾಪ್ತಿಯೇ ನಂತರದ ದಿನಗಳಲ್ಲಿ ಒಂದು ಸಮಗ್ರ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ವ್ಯವಸ್ಥೆಯಾಗಿ ವಿಕಸನಗೊಳ್ಳಲು ಭದ್ರವಾದ ಅಡಿಪಾಯವಾಯಿತು.

ಆಧಾರ್
ಆಧಾರ್ ದೇಶಾದ್ಯಂತದ ನಿವಾಸಿಗಳಿಗಾಗಿ ಬಯೋಮೆಟ್ರಿಕ್ ಆಧಾರಿತ ಡಿಜಿಟಲ್ ಗುರುತಿನ ವೇದಿಕೆಯನ್ನು ಪರಿಚಯಿಸಿತು. ಇದು ದಕ್ಷ ಸೇವಾ ವಿತರಣೆಗಾಗಿ ವಿಶಿಷ್ಟ ಗುರುತಿಸುವಿಕೆ ಮತ್ತು ಸುರಕ್ಷಿತ ದೃಢೀಕರಣವನ್ನು ಸಾಧ್ಯವಾಗಿಸಿತು. ಮಾರ್ಚ್ 2026 ರ ಹೊತ್ತಿಗೆ, 144 ಕೋಟಿಗೂ ಹೆಚ್ಚು ಆಧಾರ್ ಸಂಖ್ಯೆಗಳನ್ನು ಸೃಜಿಸಲಾಗಿದೆ. ಇದರ ಬಳಕೆಯು ದೈನಂದಿನ ವ್ಯವಸ್ಥೆಗಳಲ್ಲಿ ಆಧಾರ್ ಎಷ್ಟೊಂದು ಆಳವಾಗಿ ಸಂಯೋಜಿತವಾಗಿದೆ ಎಂಬುದನ್ನು ಪ್ರತಿಬಿಂಬಿಸುತ್ತದೆ. 2024-25ರ ವರ್ಷವೊಂದರಲ್ಲೇ 2,707 ಕೋಟಿಗೂ ಅಧಿಕ ದೃಢೀಕರಣ ವಹಿವಾಟುಗಳನ್ನು ನಡೆಸಲಾಗಿದೆ. ಇದರಿಂದಾಗಿ ಗುರುತಿನ ಪುರಾವೆಯು ಪೋರ್ಟಬಲ್ (ಎಲ್ಲಿಯೂ ಬಳಸಬಹುದಾದಂತಹುದು) ಆಯಿತು, ಪರಿಶೀಲನೆಯು ಕ್ಷಣಮಾತ್ರದಲ್ಲಿ ನಡೆಯುವಂತಾಯಿತು ಮತ್ತು ಸೇವೆಗಳ ಲಭ್ಯತೆಯು ಹೆಚ್ಚು ವಿಶ್ವಾಸಾರ್ಹ ಹಾಗೂ ಪಾರದರ್ಶಕವಾಯಿತು.
ಜನ ಧನ್ ಯೋಜನೆ
ಹಣಕಾಸು ಒಳಗೊಳ್ಳುವಿಕೆಯ ರಾಷ್ಟ್ರೀಯ ಮಿಷನ್ ಆಗಿ ಪ್ರಾರಂಭಿಸಲಾದ 'ಪ್ರಧಾನ ಮಂತ್ರಿ ಜನ ಧನ್ ಯೋಜನೆ'ಯು, ಭಾರತದ ಪ್ರತಿಯೊಬ್ಬ ಬ್ಯಾಂಕ್ ಖಾತೆ ಇಲ್ಲದ ವಯಸ್ಕರಿಗೆ ಬ್ಯಾಂಕ್ ಖಾತೆ, ಹಣಕಾಸಿನ ಗುರುತು ಮತ್ತು ಸಾಲ, ವಿಮೆ ಹಾಗೂ ಪಿಂಚಣಿಯಂತಹ ಅಗತ್ಯ ಸೇವೆಗಳ ಲಭ್ಯತೆಯನ್ನು ನೀಡಲು ಉದ್ದೇಶಿಸಿದೆ. ಆಗಸ್ಟ್ 2014 ರಲ್ಲಿ ಪ್ರಾರಂಭವಾದ ಇದು, ವಿಶ್ವದ ಅತಿದೊಡ್ಡ ಹಣಕಾಸು ಒಳಗೊಳ್ಳುವಿಕೆ ಉಪಕ್ರಮಗಳಲ್ಲಿ ಒಂದಾಗಿ ವಿಕಸನಗೊಂಡಿತು. ಖಾತೆಗಳ ಸಂಖ್ಯೆಯು 2015 ರಲ್ಲಿ 14.72 ಕೋಟಿಯಿಂದ ಮಾರ್ಚ್ 2026 ರ ಹೊತ್ತಿಗೆ 57.71 ಕೋಟಿಗೆ ಏರಿತು. ಠೇವಣಿ ಹಣವು ಮಾರ್ಚ್ 2015 ರಲ್ಲಿ ₹15,670 ಕೋಟಿಯಿಂದ ಮಾರ್ಚ್ 2026 ರ ವೇಳೆಗೆ ₹2.94 ಲಕ್ಷ ಕೋಟಿಗೆ ಹೆಚ್ಚಾಯಿತು. ಒಟ್ಟು 39.98 ಕೋಟಿ ರೂಪೇ ಡೆಬಿಟ್ ಕಾರ್ಡ್‌ಗಳನ್ನು ಫಲಾನುಭವಿಗಳಿಗೆ ನೀಡಲಾಯಿತು. ಇದರಿಂದ ಹಣಕಾಸಿನ ಭಾಗವಹಿಸುವಿಕೆ ವಿಸ್ತರಿಸಿತು ಮತ್ತು ಉಳಿತಾಯವು ಔಪಚಾರಿಕ ವ್ಯವಸ್ಥೆಯನ್ನು ಪ್ರವೇಶಿಸುವ ಮೂಲಕ ಆರ್ಥಿಕ ಏಜೆನ್ಸಿಯನ್ನು ಬಲಪಡಿಸಿತು.
ಮೊಬೈಲ್ ಫೋನ್‌ಗಳು ಮತ್ತು ಸಂಪರ್ಕ
ಸಂಪರ್ಕವು ಈ ತ್ರಿಕೋನವನ್ನು ಪೂರ್ಣಗೊಳಿಸಿತು. ಶೇಕಡಾ 85.5 ರಷ್ಟು ಭಾರತೀಯ ಕುಟುಂಬಗಳು ಕನಿಷ್ಠ ಒಂದು ಸ್ಮಾರ್ಟ್‌ಫೋನ್ ಹೊಂದಿದ್ದು, ಮೊಬೈಲ್ ಫೋನ್ ಈಗ ಒಂದು ಬ್ಯಾಂಕ್, ತರಗತಿ ಮತ್ತು ಸಾರ್ವಜನಿಕ ಸೇವೆಗಳ ಹೆಬ್ಬಾಗಿಲಾಗಿ ಮಾರ್ಪಟ್ಟಿದೆ. ಡಿಸೆಂಬರ್ 2025 ರ ಕೊನೆಯಲ್ಲಿ ವೈರ್‌ಲೆಸ್ ದೂರವಾಣಿ ಚಂದಾದಾರರ ಸಂಖ್ಯೆ 125.87 ಕೋಟಿ ತಲುಪಿದೆ. ಐದನೇ ತಲೆಮಾರಿನ ಮೊಬೈಲ್ ಸೇವೆಗಳು ಈಗ ಶೇಕಡಾ 99.9 ರಷ್ಟು ಜಿಲ್ಲೆಗಳಲ್ಲಿ ಲಭ್ಯವಿದ್ದು, ಶೇಕಡಾ 85 ರಷ್ಟು ಜನಸಂಖ್ಯೆಯನ್ನು ಒಳಗೊಂಡಿವೆ. ಡಿಸೆಂಬರ್ 2025 ರ ಹೊತ್ತಿಗೆ, ದೇಶಾದ್ಯಂತ 5.18 ಲಕ್ಷ 5G ಬೇಸ್ ಟ್ರಾನ್ಸ್‌ಸೀವರ್ ಸ್ಟೇಷನ್‌ಗಳನ್ನು ಅಳವಡಿಸಲಾಗಿದೆ. ಈ ವ್ಯಾಪಕವಾದ ಡಿಜಿಟಲ್ ತಲುಪುವಿಕೆಯು ಗುರುತು ಮತ್ತು ಬ್ಯಾಂಕಿಂಗ್ ವ್ಯವಸ್ಥೆಗಳು ಕೇವಲ ನಗರ ಕೇಂದ್ರಗಳಿಗೆ ಸೀಮಿತವಾಗದಂತೆ ನೋಡಿಕೊಂಡಿದೆ. ಇವು ಗ್ರಾಮೀಣ ಮತ್ತು ನಗರ ಭಾರತಕ್ಕೆ ಸಮಾನವಾಗಿ ಲಭ್ಯವಾಗಿವೆ.
ಜಾಮ್ ತ್ರಿವಳಿಯು ಅಡಿಪಾಯದ ಹಳಿಗಳನ್ನು ನಿರ್ಮಿಸಿತು, ಅದರ ಮೇಲೆ ಭಾರತದ ವಿಶಾಲವಾದ ಡಿಪಿಐ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲಾಯಿತು. ಇದು ಗುರುತು, ಹಣಕಾಸು ಮತ್ತು ಸಂಪರ್ಕವನ್ನು ಅಭೂತಪೂರ್ವ ಪ್ರಮಾಣದಲ್ಲಿ ಜೋಡಿಸಿತು.
ಭಾರತದ ಡಿಪಿಐ ಸ್ಟ್ಯಾಕ್‌ನ ಏರಿಕೆ
ಭಾರತದ ಡಿಪಿಐ ಸ್ಟ್ಯಾಕ್' ಕೆಲವು ಮೂಲಭೂತ ಡಿಜಿಟಲ್ ವ್ಯವಸ್ಥೆಗಳಿಂದ ಬೆಳೆದು, ಮುಕ್ತ ಎಪಿಐಗಳು(ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್) ಮತ್ತು ಸಾರ್ವಜನಿಕ ಡಿಜಿಟಲ್ ಸರಕುಗಳ ಮೇಲೆ ನಿರ್ಮಿಸಲಾದ ಏಕೀಕೃತ ರಾಷ್ಟ್ರೀಯ ಚೌಕಟ್ಟಾಗಿ ಮಾರ್ಪಟ್ಟಿದೆ. ಇದನ್ನು 'ಇಂಡಿಯಾ ಸ್ಟ್ಯಾಕ್' ಎಂದು ಕರೆಯಲಾಗುತ್ತದೆ, ಇದು ಬೃಹತ್ ಪ್ರಮಾಣದಲ್ಲಿ ಗುರುತು, ದತ್ತಾಂಶ ಮತ್ತು ಪಾವತಿಗಳ ಪ್ರಮುಖ ಅಂಶಗಳನ್ನು ಮುಕ್ತಗೊಳಿಸುತ್ತದೆ. ಡಿಜಿಟಲ್ ಗುರುತು ಮತ್ತು ಹಣಕಾಸಿನ ಒಳಗೊಳ್ಳುವಿಕೆಯೊಂದಿಗೆ ಪ್ರಾರಂಭವಾದ ಇದು ಕ್ರಮೇಣ ಪಾವತಿಗಳು, ಕಲ್ಯಾಣ ವಿತರಣೆ, ಆರೋಗ್ಯ, ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಆಡಳಿತ ವೇದಿಕೆಗಳಿಗೆ ವಿಸ್ತರಿಸಿತು. ಈ ವ್ಯವಸ್ಥೆಗಳನ್ನು ಪರಸ್ಪರ ಕಾರ್ಯನಿರ್ವಹಿಸಬಲ್ಲ ಡಿಜಿಟಲ್ ಹಳಿಗಳ ಮೂಲಕ ಒಟ್ಟಾಗಿ ಕೆಲಸ ಮಾಡಲು ವಿನ್ಯಾಸಗೊಳಿಸಲಾಗಿದೆ. ಇದರ ಫಲಿತಾಂಶವು ಕೇವಲ ಸ್ವತಂತ್ರ ಪೋರ್ಟಲ್‌ಗಳ ಸಂಗ್ರಹವಲ್ಲ, ಬದಲಿಗೆ ಆರ್ಥಿಕ ಚಟುವಟಿಕೆ ಮತ್ತು ಸಾರ್ವಜನಿಕ ಸೇವಾ ವಿತರಣೆಯನ್ನು ಬೆಂಬಲಿಸುವ ಸಮಗ್ರ ಡಿಜಿಟಲ್ ಬೆನ್ನೆಲುಬಾಗಿದೆ. ಭಾರತದ ಸಂದರ್ಭದಲ್ಲಿ ಅಭಿವೃದ್ಧಿಪಡಿಸಲಾಗಿದ್ದರೂ, ಈ ಮಾದರಿಯು ಹೊಂದಿಕೊಳ್ಳುವ ಗುಣವನ್ನು ಹೊಂದಿದ್ದು, ರಾಷ್ಟ್ರೀಯ ಗಡಿಗಳನ್ನು ಮೀರಿ ಇತರ ದೇಶಗಳಿಗೂ ಪ್ರಸ್ತುತವಾಗಿದೆ.

ಪ್ರಮುಖ ವಲಯಗಳಲ್ಲಿ ಈ 'ಸ್ಟ್ಯಾಕ್' ವಿಕಸನಗೊಂಡ ರೀತಿ ಹೀಗಿದೆ:
ಡಿಜಿಟಲ್ ಆರ್ಥಿಕ ಮೂಲಸೌಕರ್ಯ

· ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್:ಯುಪಿಐ ಚಿಲ್ಲರೆ ಪಾವತಿಗಳನ್ನು ಅತ್ಯಂತ ಸರಳವಾದ ಡಿಜಿಟಲ್ ಅನುಭವವಾಗಿ ಪರಿವರ್ತಿಸಿದೆ. ಇದು ವ್ಯಕ್ತಿಗಳು ಮತ್ತು ವ್ಯಾಪಾರಿಗಳ ನಡುವೆ ತಕ್ಷಣದ, ಪರಸ್ಪರ ಕಾರ್ಯನಿರ್ವಹಿಸಬಲ್ಲ ಮತ್ತು ಸುರಕ್ಷಿತ ವಹಿವಾಟುಗಳನ್ನು ನೈಜ ಸಮಯದಲ್ಲಿ ನಡೆಸಲು ಅನುವು ಮಾಡಿಕೊಡುತ್ತದೆ. ಜನವರಿ 2026 ರಲ್ಲಿ, ಇದು ₹28.33 ಲಕ್ಷ ಕೋಟಿಗೂ ಅಧಿಕ ಮೌಲ್ಯದ 21.70 ಬಿಲಿಯನ್ ವಹಿವಾಟುಗಳನ್ನು ಪ್ರಕ್ರಿಯೆಗೊಳಿಸಿದೆ, ಇದು ದೈನಂದಿನ ವಾಣಿಜ್ಯದಲ್ಲಿ ಯುಪಿಐ ಎಷ್ಟೊಂದು ಆಳವಾಗಿ ಬೆರೆತಿದೆ ಎಂಬುದನ್ನು ಪ್ರತಿಬಿಂಬಿಸುತ್ತದೆ. ಒಟ್ಟು 691 ಬ್ಯಾಂಕ್‌ಗಳು ಯುಪಿಐ ವೇದಿಕೆಯಲ್ಲಿ ಸಕ್ರಿಯವಾಗಿದ್ದು, ಇದು ವ್ಯಾಪಕವಾದ ಸಾಂಸ್ಥಿಕ ಅಳವಡಿಕೆಯನ್ನು ಉಲ್ಲೇಖಿಸುತ್ತದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ, ಬೆಳೆಯುತ್ತಿರುವ ಚಿಲ್ಲರೆ ಡಿಜಿಟಲ್ ಪಾವತಿಗಳ ಕುರಿತಾದ ತನ್ನ ಜೂನ್ 2025 ರ ವರದಿಯಲ್ಲಿ, ಯುಪಿಐ ಅನ್ನು "ವಹಿವಾಟಿನ ಪ್ರಮಾಣದ ಆಧಾರದ ಮೇಲೆ ವಿಶ್ವದ ಅತಿದೊಡ್ಡ ಚಿಲ್ಲರೆ ಕ್ಷಿಪ್ರ ಪಾವತಿ ವ್ಯವಸ್ಥೆ" ಎಂದು ಗುರುತಿಸಿದೆ. 2024 ರ ಎಸಿಐ ವರ್ಲ್ಡ್‌ವೈಡ್ ವರದಿಯಾದ 'ಪ್ರೈಮ್ ಟೈಮ್ ಫಾರ್ ರಿಯಲ್ ಟೈಮ್' ಪ್ರಕಾರ, ಜಾಗತಿಕ ನೈಜ-ಸಮಯದ ಪಾವತಿ ವಹಿವಾಟಿನ ಪ್ರಮಾಣದಲ್ಲಿ ಯುಪಿಐ ಸುಮಾರು ಶೇಕಡಾ 49 ರಷ್ಟು ಪಾಲನ್ನು ಹೊಂದಿದೆ. ಭಾರತದ ಒಳಗೆ, ಒಟ್ಟು ಚಿಲ್ಲರೆ ಪಾವತಿ ವಹಿವಾಟುಗಳ ಪ್ರಮಾಣದಲ್ಲಿ ಶೇಕಡಾ 81 ರಷ್ಟು ವಹಿವಾಟುಗಳು ಯುಪಿಐ ಮೂಲಕವೇ ನಡೆಯುತ್ತಿವೆ. ಇದು ವ್ಯಕ್ತಿಗಳ ನಡುವಿನ ಹಾಗೂ ವ್ಯಕ್ತಿ ಮತ್ತು ವ್ಯಾಪಾರಿಗಳ ನಡುವಿನ ಪಾವತಿಗಳಿಗೆ ಅತ್ಯಂತ ನೆಚ್ಚಿನ ಆಯ್ಕೆಯಾಗಿದೆ.

· ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆ : ಸಾರ್ವಜನಿಕ ವೆಚ್ಚದಲ್ಲಿ ಪಾರದರ್ಶಕತೆ ಮತ್ತು ನಿಯಂತ್ರಣವನ್ನು ಪಿಎಫ್‌ಎಂಎಸ್ ಬಲಪಡಿಸಿದೆ. ಇದು ವೆಬ್ ಆಧಾರಿತ ಆನ್‌ಲೈನ್ ವಹಿವಾಟು ವ್ಯವಸ್ಥೆಯಾಗಿದ್ದು, ಸರ್ಕಾರಿ ಹಣದ ಬಳಕೆ ಮತ್ತು ಅನುಷ್ಠಾನಗೊಳಿಸುವ ಸಂಸ್ಥೆಗಳು ಹಾಗೂ ಫಲಾನುಭವಿಗಳಿಗೆ ನೀಡಲಾಗುವ ಎಲೆಕ್ಟ್ರಾನಿಕ್ ಪಾವತಿಗಳ ಸಂಪೂರ್ಣ ಮೇಲ್ವಿಚಾರಣೆಯನ್ನು ಸಾಧ್ಯವಾಗಿಸುತ್ತದೆ. ಡಿಸೆಂಬರ್ 2014 ರಲ್ಲಿ, ಇದನ್ನು ನೇರ ನಗದು ವರ್ಗಾವಣೆ ಅಡಿಯಲ್ಲಿ ಪಾವತಿ, ಲೆಕ್ಕಪತ್ರ ನಿರ್ವಹಣೆ ಮತ್ತು ವರದಿ ಮಾಡುವಿಕೆಗೆ ಕಡ್ಡಾಯಗೊಳಿಸಲಾಯಿತು. ಈ ಸುಧಾರಣೆಯು ನಕಲಿ ಮತ್ತು ಕೃತಕ ಫಲಾನುಭವಿಗಳನ್ನು ತೆಗೆದುಹಾಕಲು ಹಾಗೂ ಹಣದ ಸೋರಿಕೆಯನ್ನು ತಡೆಯಲು ಸಹಾಯ ಮಾಡಿತು. ಇದರ ಪರಿಣಾಮವಾಗಿ, ಸರ್ಕಾರವು 2015 ರಿಂದ ಮಾರ್ಚ್ 2024 ರ ನಡುವೆ ₹4.31 ಲಕ್ಷ ಕೋಟಿಗೂ ಹೆಚ್ಚು ಹಣವನ್ನು ಉಳಿತಾಯ ಮಾಡಿದೆ. ಜನವರಿ 2026 ರ ಹೊತ್ತಿಗೆ, ನೇರ ನಗದು ವರ್ಗಾವಣೆಯ ಮೂಲಕ ವರ್ಗಾಯಿಸಲಾದ ಒಟ್ಟು ಮೊತ್ತವು ₹49.09 ಲಕ್ಷ ಕೋಟಿ ದಾಟಿದೆ. ಇದು ಉದ್ದೇಶಿತ ಮತ್ತು ಜವಾಬ್ದಾರಿಯುತ ಕಲ್ಯಾಣ ಯೋಜನೆಗಳ ವಿತರಣೆಯತ್ತ ಆದ ಬದಲಾವಣೆಯನ್ನು ಸೂಚಿಸುತ್ತದೆ.

· ಡಿಜಿಟಲ್ ವಾಣಿಜ್ಯಕ್ಕಾಗಿ ಮುಕ್ತ ಜಾಲ:2022 ರಲ್ಲಿ ಪ್ರಾರಂಭಿಸಲಾದ ಒಎನ್‌ಡಿಸಿ, ಡಿಜಿಟಲ್ ವಾಣಿಜ್ಯವನ್ನು ಪ್ರಜಾಪ್ರಭುತ್ವೀಕರಣಗೊಳಿಸಲು ವಿನ್ಯಾಸಗೊಳಿಸಲಾದ ಒಂದು ಮುಕ್ತ ಜಾಲವಾಗಿದೆ. ಇದು ಕೇವಲ ಒಂದು ನಿರ್ದಿಷ್ಟ ಮಾರುಕಟ್ಟೆ ವೇದಿಕೆಗೆ ಸೀಮಿತವಾಗದೆ, ಪರಸ್ಪರ ಕಾರ್ಯನಿರ್ವಹಿಸಬಲ್ಲ ವಿವಿಧ ವೇದಿಕೆಗಳ ಮೂಲಕ ಖರೀದಿದಾರರು ಮತ್ತು ಮಾರಾಟಗಾರರನ್ನು ಸಂಪರ್ಕಿಸುತ್ತದೆ. ಇದು ಮಾರುಕಟ್ಟೆಯ ಪ್ರವೇಶವನ್ನು ವಿಸ್ತರಿಸುತ್ತದೆ, ಹೊಸಬರಿಗೆ ಇರುವ ಅಡೆತಡೆಗಳನ್ನು ಕಡಿಮೆ ಮಾಡುತ್ತದೆ ಮತ್ತು ವಿಶೇಷವಾಗಿ ಸಣ್ಣ ಉದ್ಯಮಗಳು ವ್ಯಾಪಕವಾಗಿ ಭಾಗವಹಿಸಲು ಅನುವು ಮಾಡಿಕೊಡುತ್ತದೆ. ಡಿಸೆಂಬರ್ 2025 ರ ಹೊತ್ತಿಗೆ, ಭಾರತದಾದ್ಯಂತ 630 ಕ್ಕೂ ಹೆಚ್ಚು ನಗರಗಳು ಮತ್ತು ಪಟ್ಟಣಗಳಿಂದ ಒಟ್ಟು 1.16 ಲಕ್ಷಕ್ಕೂ ಹೆಚ್ಚು ಚಿಲ್ಲರೆ ಮಾರಾಟಗಾರರು ಒಎನ್‌ಡಿಸಿ ಜಾಲದಲ್ಲಿ ಸಕ್ರಿಯರಾಗಿದ್ದಾರೆ.

· ಸರ್ಕಾರಿ ಇ-ಮಾರುಕಟ್ಟೆ:ಸರ್ಕಾರಿ ಇ-ಮಾರುಕಟ್ಟೆಯು ಸಾರ್ವಜನಿಕ ಖರೀದಿಯನ್ನು ಡಿಜಿಟಲೀಕರಣಗೊಳಿಸಿದೆ ಮತ್ತು ಸರ್ಕಾರಿ ಗುತ್ತಿಗೆಗಳಲ್ಲಿ ವ್ಯಾಪಕವಾಗಿ ಭಾಗವಹಿಸಲು ಅವಕಾಶ ಕಲ್ಪಿಸಿದೆ. ಇದು ಸರ್ಕಾರಿ ಸಂಸ್ಥೆಗಳು ಸರಕು ಮತ್ತು ಸೇವೆಗಳನ್ನು ಪಾರದರ್ಶಕವಾಗಿ ಮತ್ತು ಪರಿಣಾಮಕಾರಿಯಾಗಿ ಖರೀದಿಸಲು ಒಂದು ಆನ್‌ಲೈನ್ ವೇದಿಕೆಯನ್ನು ಒದಗಿಸುತ್ತದೆ. ನವೆಂಬರ್ 2025 ರ ಹೊತ್ತಿಗೆ, ಸುಮಾರು 3.27 ಕೋಟಿ ಆರ್ಡರ್‌ಗಳನ್ನು ಪ್ರಕ್ರಿಯೆಗೊಳಿಸಲಾಗಿದೆ. ಇದರ ಒಟ್ಟು ಸರಕು ಮೌಲ್ಯವು ₹16.41 ಲಕ್ಷ ಕೋಟಿ ದಾಟಿದೆ. ಇದರಲ್ಲಿ ಸೇವೆಗಳ ಪಾಲು ₹7.94 ಲಕ್ಷ ಕೋಟಿ ಮತ್ತು ಉತ್ಪನ್ನಗಳ ಪಾಲು ₹8.47 ಲಕ್ಷ ಕೋಟಿ ಆಗಿದೆ.ಈ ವೇದಿಕೆಯು 10,894 ಕ್ಕೂ ಹೆಚ್ಚು ಉತ್ಪನ್ನ ವರ್ಗಗಳನ್ನು ಮತ್ತು 348 ಸೇವಾ ವರ್ಗಗಳನ್ನು ಬೆಂಬಲಿಸುತ್ತದೆ, ಹಾಗೂ 1.67 ಲಕ್ಷಕ್ಕೂ ಹೆಚ್ಚು ಖರೀದಿದಾರ ಸಂಸ್ಥೆಗಳನ್ನು ಒಳಗೊಂಡಿದೆ. 24 ಲಕ್ಷಕ್ಕೂ ಹೆಚ್ಚು ಮಾರಾಟಗಾರರು ಮತ್ತು ಸೇವಾ ಪೂರೈಕೆದಾರರು ತಮ್ಮ ಪ್ರೊಫೈಲ್‌ಗಳನ್ನು ಪೂರ್ಣಗೊಳಿಸಿದ್ದು, ಇದರಲ್ಲಿ 11 ಲಕ್ಷಕ್ಕೂ ಹೆಚ್ಚು ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳು ಸೇರಿವೆ. ಈ ಸಣ್ಣ ಉದ್ಯಮಗಳು ಒಟ್ಟು ಆರ್ಡರ್ ಮೌಲ್ಯದಲ್ಲಿ ಶೇಕಡಾ 44.8 ರಷ್ಟು ಕೊಡುಗೆ ನೀಡಿದ್ದು, ₹7.35 ಲಕ್ಷ ಕೋಟಿಗೂ ಅಧಿಕ ಮೌಲ್ಯದ ಆರ್ಡರ್‌ಗಳನ್ನು ಪಡೆದುಕೊಂಡಿವೆ.
ನಾಗರಿಕ ಸೇವಾ ವಿತರಣಾ ವೇದಿಕೆಗಳು

· ಡಿಜಿಲಾಕರ್: 2015 ರಲ್ಲಿ ಪ್ರಾರಂಭಿಸಲಾದ ಡಿಜಿಲಾಕರ್, ನಾಗರಿಕರಿಗಾಗಿ ಸುರಕ್ಷಿತ 'ಡಿಜಿಟಲ್ ದಾಖಲೆ ವಾಲೆಟ್' ಅನ್ನು ಪರಿಚಯಿಸಿತು. ಇದು ವ್ಯಕ್ತಿಗಳು ತಮ್ಮ ದೃಢೀಕೃತ ಎಲೆಕ್ಟ್ರಾನಿಕ್ ದಾಖಲೆಗಳನ್ನು ಸಂಗ್ರಹಿಸಲು, ವೀಕ್ಷಿಸಲು ಮತ್ತು ಪರವಾನಗಿ ಆಧಾರಿತ ಪ್ರವೇಶದೊಂದಿಗೆ ಇತರರೊಂದಿಗೆ ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ. ಈ ವೇದಿಕೆಯು ದಾಖಲೆಗಳ ವಿಶ್ವಾಸಾರ್ಹತೆಯನ್ನು ಖಚಿತಪಡಿಸುತ್ತದೆ ಮತ್ತು ನಕಲಿ ದಾಖಲೆಗಳ ಬಳಕೆಯನ್ನು ಕಡಿಮೆ ಮಾಡುತ್ತದೆ. ನಾಗರಿಕರು ತಮ್ಮ ಜೀವನದ ಪ್ರಮುಖ ದಾಖಲೆಗಳನ್ನು ಯಾವುದೇ ಸಮಯದಲ್ಲಿ ಮತ್ತು ಎಲ್ಲಿಂದಲಾದರೂ ಪಡೆಯಬಹುದು.ಮಾರ್ಚ್ 5, 2026 ರ ಹೊತ್ತಿಗೆ, ಡಿಜಿಲಾಕರ್ 67.63 ಕೋಟಿ ಬಳಕೆದಾರರನ್ನು ಹೊಂದಿದೆ. ಮಾರ್ಚ್ 2026 ರ ವೇಳೆಗೆ, ಈ ವೇದಿಕೆಯ ಮೂಲಕ 950 ಕೋಟಿಗೂ ಹೆಚ್ಚು ದಾಖಲೆಗಳನ್ನು ವಿತರಿಸಲಾಗಿದ್ದು, ಇದು ಸಾರ್ವಜನಿಕ ಆಡಳಿತದಲ್ಲಿ ಡಿಜಿಲಾಕರ್ ವಹಿಸುತ್ತಿರುವ ಬೆಳೆಯುತ್ತಿರುವ ಪಾತ್ರವನ್ನು ಪ್ರತಿಬಿಂಬಿಸುತ್ತದೆ.
- ಉಮಂಗ್: ಹೊಸ ಯುಗದ ಆಡಳಿತಕ್ಕಾಗಿ ಏಕೀಕೃತ ಮೊಬೈಲ್ ಅಪ್ಲಿಕೇಶನ್
2017ರಲ್ಲಿ ಪ್ರಾರಂಭಿಸಲಾದ ಉಮಂಗ್, ಭಾರತದಲ್ಲಿ ಮೊಬೈಲ್ ಆಡಳಿತವನ್ನು ಉತ್ತೇಜಿಸುವ ಉದ್ದೇಶದಿಂದ ವಿನ್ಯಾಸಗೊಳಿಸಲಾಗಿದೆ. ಇದು ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಸರ್ಕಾರಿ ಸಂಸ್ಥೆಗಳ ವಿವಿಧ ಸೇವೆಗಳನ್ನು ಪಡೆಯಲು ನಾಗರಿಕರಿಗೆ ಒಂದು 'ಏಕಗವಾಕ್ಷಿ' ಮೊಬೈಲ್ ಮತ್ತು ವೆಬ್ ವೇದಿಕೆಯನ್ನು ಒದಗಿಸುತ್ತದೆ. ನಾಗರಿಕರು ಉಮಂಗ್ ಮೂಲಕ ಇಪಿಎಫ್‌ಒ ಬ್ಯಾಲೆನ್ಸ್ ಮತ್ತು ಕ್ಲೈಮ್‌ಗಳು, ಪಾನ್ ಮತ್ತು ಆಧಾರ್ ಸೇವೆಗಳು, ಡಿಜಿಲಾಕರ್ ಪ್ರವೇಶ, ವಿದ್ಯುತ್ ಅಥವಾ ನೀರಿನ ಬಿಲ್ ಪಾವತಿಗಳು, ಪಿಂಚಣಿ ಸೇವೆಗಳು, ವಿದ್ಯಾರ್ಥಿವೇತನ ಅರ್ಜಿಗಳು, ಪಾಸ್‌ಪೋರ್ಟ್ ಮತ್ತು ಚಾಲನಾ ಪರವಾನಗಿ ಸಂಬಂಧಿತ ಸೇವೆಗಳು ಹಾಗೂ ಪರೀಕ್ಷಾ ಫಲಿತಾಂಶಗಳಂತಹ ನೂರಾರು ಸೌಲಭ್ಯಗಳನ್ನು ಸುಲಭವಾಗಿ ಪಡೆಯಬಹುದು. ಮಾರ್ಚ್ 5, 2026 ರ ಹೊತ್ತಿಗೆ, ಈ ಅಪ್ಲಿಕೇಶನ್ 10.25 ಕೋಟಿ ಬಳಕೆದಾರರ ನೋಂದಣಿ ಮತ್ತು 723.36 ಕೋಟಿ ವಹಿವಾಟುಗಳನ್ನು ದಾಖಲಿಸಿದೆ. ಪೋರ್ಟಲ್‌ನಲ್ಲಿ 2,400 ಕ್ಕೂ ಹೆಚ್ಚು ಸರ್ಕಾರಿ ಸೇವೆಗಳು ಲಭ್ಯವಿದ್ದು, ಇದು ನಾಗರಿಕರು ಮತ್ತು ಸರ್ಕಾರದ ನಡುವಿನ ಪ್ರಮುಖ ಡಿಜಿಟಲ್ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ.

- ಉಮಂಗ್: ಹೊಸ ಯುಗದ ಆಡಳಿತಕ್ಕಾಗಿ ಏಕೀಕೃತ ಮೊಬೈಲ್ ಅಪ್ಲಿಕೇಶನ್: 2017 ರಲ್ಲಿ ಪ್ರಾರಂಭಿಸಲಾದ ಉಮಂಗ್, ಭಾರತದಲ್ಲಿ ಮೊಬೈಲ್ ಆಡಳಿತವನ್ನು ಉತ್ತೇಜಿಸುವ ಉದ್ದೇಶದಿಂದ ವಿನ್ಯಾಸಗೊಳಿಸಲಾಗಿದೆ. ಇದು ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಸರ್ಕಾರಿ ಸಂಸ್ಥೆಗಳ ವಿವಿಧ ಸೇವೆಗಳನ್ನು ಪಡೆಯಲು ನಾಗರಿಕರಿಗೆ ಒಂದು 'ಏಕಗವಾಕ್ಷಿ' ಮೊಬೈಲ್ ಮತ್ತು ವೆಬ್ ವೇದಿಕೆಯನ್ನು ಒದಗಿಸುತ್ತದೆ. ನಾಗರಿಕರು ಉಮಂಗ್ ಮೂಲಕ ಇಪಿಎಫ್‌ಒ ಬ್ಯಾಲೆನ್ಸ್ ಮತ್ತು ಕ್ಲೈಮ್‌ಗಳು, ಪಾನ್ ಮತ್ತು ಆಧಾರ್ ಸೇವೆಗಳು, ಡಿಜಿಲಾಕರ್ ಪ್ರವೇಶ, ವಿದ್ಯುತ್ ಅಥವಾ ನೀರಿನ ಬಿಲ್ ಪಾವತಿಗಳು, ಪಿಂಚಣಿ ಸೇವೆಗಳು, ವಿದ್ಯಾರ್ಥಿವೇತನ ಅರ್ಜಿಗಳು, ಪಾಸ್‌ಪೋರ್ಟ್ ಮತ್ತು ಚಾಲನಾ ಪರವಾನಗಿ ಸಂಬಂಧಿತ ಸೇವೆಗಳು ಹಾಗೂ ಪರೀಕ್ಷಾ ಫಲಿತಾಂಶಗಳಂತಹ ನೂರಾರು ಸೌಲಭ್ಯಗಳನ್ನು ಸುಲಭವಾಗಿ ಪಡೆಯಬಹುದು. ಮಾರ್ಚ್ 5, 2026 ರ ಹೊತ್ತಿಗೆ, ಈ ಅಪ್ಲಿಕೇಶನ್ 10.25 ಕೋಟಿ ಬಳಕೆದಾರರ ನೋಂದಣಿ ಮತ್ತು 723.36 ಕೋಟಿ ವಹಿವಾಟುಗಳನ್ನು ದಾಖಲಿಸಿದೆ. ಪೋರ್ಟಲ್‌ನಲ್ಲಿ 2,400 ಕ್ಕೂ ಹೆಚ್ಚು ಸರ್ಕಾರಿ ಸೇವೆಗಳು ಲಭ್ಯವಿದ್ದು, ಇದು ನಾಗರಿಕರು ಮತ್ತು ಸರ್ಕಾರದ ನಡುವಿನ ಪ್ರಮುಖ ಡಿಜಿಟಲ್ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ.

· ಇ-ಕೋರ್ಟ್‌ಗಳು:ಇ-ಕೋರ್ಟ್ಸ್ ಯೋಜನೆಯು ಕಾನೂನು ಮತ್ತು ನ್ಯಾಯ ಸಚಿವಾಲಯದ ನ್ಯಾಯಾಂಗ ಇಲಾಖೆಯ ಅಡಿಯಲ್ಲಿರುವ ಒಂದು ಅಖಿಲ ಭಾರತ 'ಮಿಷನ್ ಮೋಡ್' ಉಪಕ್ರಮವಾಗಿದೆ. ಇದು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಬಳಕೆಯ ಮೂಲಕ ನ್ಯಾಯಾಂಗ ಪ್ರಕ್ರಿಯೆಗಳನ್ನು ಹೆಚ್ಚು ದಕ್ಷ, ಪಾರದರ್ಶಕ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಶ್ರಮಿಸುತ್ತದೆ. 2011 ರಿಂದ 2015 ರವರೆಗಿನ ಮೊದಲ ಹಂತವು ಮೂಲಭೂತ ಗಣಕೀಕರಣ ಮತ್ತು ಆಂತರಿಕ ಸಂಪರ್ಕದ ಮೇಲೆ ಗಮನಹರಿಸಿತ್ತು. ಇದರ ಫಲವಾಗಿ, 14,249 ನ್ಯಾಯಾಲಯಗಳನ್ನು ಗಣಕೀಕರಣಗೊಳಿಸಲಾಯಿತು ಮತ್ತು 13,683 ನ್ಯಾಯಾಲಯಗಳಲ್ಲಿ ಸ್ಥಳೀಯ ಜಾಲಬಂಧಗಳನ್ನು ಅಳವಡಿಸಲಾಯಿತು. 2015 ರಿಂದ 2023 ರವರೆಗಿನ ಎರಡನೇ ಹಂತವು ನಾಗರಿಕರಿಗೆ ಐಸಿಟಿ ಆಧಾರಿತ ಸೇವಾ ವಿತರಣೆಯತ್ತ ಗಮನಹರಿಸಿತು. ಇದು ವ್ಯಾಪಕ ಜಾಲಬಂಧ ಸಂಪರ್ಕ, ಸಂಬಂಧಿತರಿಗೆ ತರಬೇತಿ, ಇ-ಸೇವಾ ಕೇಂದ್ರಗಳು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳು ಹಾಗೂ ತಾಲೂಕು ಕಾನೂನು ಸಮಿತಿಗಳ ಗಣಕೀಕರಣವನ್ನು ಪರಿಚಯಿಸಿತು. ಸುಧಾರಿತ 'ಕೇಸ್ ಇನ್ಫರ್ಮೇಷನ್ ಸಿಸ್ಟಮ್' ಸಾಫ್ಟ್‌ವೇರ್, ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಗ್ರಿಡ್ ಹಾಗೂ ಡಿಜಿಟಲ್ ಫೈಲಿಂಗ್ ಮತ್ತು ಆನ್‌ಲೈನ್ ಪಾವತಿ ವ್ಯವಸ್ಥೆಗಳು ನ್ಯಾಯಾಂಗ ಸೇವೆಗಳ ಸಾರ್ವಜನಿಕ ಲಭ್ಯತೆಯನ್ನು ಸಂಪೂರ್ಣವಾಗಿ ಬದಲಾಯಿಸಿದವು.
ಸೆಪ್ಟೆಂಬರ್ 2023 ರಲ್ಲಿ, ಕೇಂದ್ರ ಸಚಿವ ಸಂಪುಟವು 2023 ರಿಂದ 2027 ರ ಅವಧಿಗೆ ₹7,210 ಕೋಟಿ ವೆಚ್ಚದ ಮೂರನೇ ಹಂತಕ್ಕೆ ಅನುಮೋದನೆ ನೀಡಿತು. ಈ ಹಂತವು ಡಿಜಿಟಲ್ ಮತ್ತು ಕಾಗದ ರಹಿತ ನ್ಯಾಯಾಲಯಗಳನ್ನು ಉತ್ತೇಜಿಸುತ್ತದೆ ಹಾಗೂ ಹಳೆಯ ದಾಖಲೆಗಳು ಮತ್ತು ಬಾಕಿ ಉಳಿದಿರುವ ಪ್ರಕರಣಗಳ ಸಮಗ್ರ ಡಿಜಿಟಲೀಕರಣವನ್ನು ಕೈಗೆತ್ತಿಕೊಳ್ಳುತ್ತದೆ. ಇದು ನ್ಯಾಯಾಲಯಗಳು, ಜೈಲುಗಳು ಮತ್ತು ಆಸ್ಪತ್ರೆಗಳ ನಡುವೆ ವಿಡಿಯೋ ಕಾನ್ಫರೆನ್ಸಿಂಗ್ ಸೌಲಭ್ಯಗಳನ್ನು ವಿಸ್ತರಿಸುತ್ತದೆ ಮತ್ತು ಸಂಚಾರಿ ನಿಯಮ ಉಲ್ಲಂಘನೆಗಳ ಆಚೆಗೂ ಆನ್‌ಲೈನ್ ನ್ಯಾಯಾಲಯಗಳ ವ್ಯಾಪ್ತಿಯನ್ನು ಹೆಚ್ಚಿಸುತ್ತದೆ. ಕೃತಕ ಬುದ್ಧಿಮತ್ತೆ ಮತ್ತು ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್ ನಂತಹ ಉದಯೋನ್ಮುಖ ತಂತ್ರಜ್ಞಾನಗಳ ಏಕೀಕರಣವು ಪ್ರಕರಣಗಳ ಬಾಕಿ ವಿಶ್ಲೇಷಣೆ ಮತ್ತು ಮೊಕದ್ದಮೆಗಳ ಪ್ರವೃತ್ತಿಯನ್ನು ಮುನ್ಸೂಚಿಸಲು ಸಹಾಯ ಮಾಡುತ್ತದೆ. ಈ ಉಪಕ್ರಮವು ದತ್ತಾಂಶ ಆಧಾರಿತ ನ್ಯಾಯಾಂಗ ಆಡಳಿತದತ್ತ ಒಂದು ರಚನಾತ್ಮಕ ಬದಲಾವಣೆಯನ್ನು ಸೂಚಿಸುತ್ತದೆ.
ಆರೋಗ್ಯ ಮತ್ತು ಪೌಷ್ಟಿಕಾಂಶ ಪರಿಸರ ವ್ಯವಸ್ಥೆ
· ಕೋವಿನ್:2021 ರ ಜನವರಿ 16 ರಂದು, ಭಾರತದ ಕೋವಿಡ್-19 ಲಸಿಕಾ ಕಾರ್ಯಕ್ರಮದ ಡಿಜಿಟಲ್ ಬೆನ್ನೆಲುಬಾಗಿ 'ಕೋವಿನ್' ಅನ್ನು ಪ್ರಾರಂಭಿಸಲಾಯಿತು. ಇದು ಲಸಿಕೆ ತಯಾರಕರು, ಆಡಳಿತಾಧಿಕಾರಿಗಳು, ಆರೋಗ್ಯ ಕಾರ್ಯಕರ್ತರು ಮತ್ತು ಸಾರ್ವಜನಿಕ ಹಾಗೂ ಖಾಸಗಿ ವಲಯದ ಫಲಾನುಭವಿಗಳನ್ನು ಒಂದೇ ವೇದಿಕೆಯಲ್ಲಿ ಸಂಪರ್ಕಿಸಿತು. 220 ಕೋಟಿಗೂ ಅಧಿಕ ಡೋಸ್‌ಗಳನ್ನು ನಿರ್ವಹಿಸುವ ಮೂಲಕ, ಕೋವಿನ್ ವಿಶ್ವದ ಅತಿದೊಡ್ಡ ಲಸಿಕಾ ಅಭಿಯಾನಗಳಲ್ಲಿ ಒಂದಕ್ಕೆ ಪಾರದರ್ಶಕತೆ ಮತ್ತು ದಕ್ಷತೆಯನ್ನು ತಂದಿತು.ನೈಜ-ಸಮಯದ ದತ್ತಾಂಶ ಟ್ರ್ಯಾಕಿಂಗ್ ಸಮನ್ವಯತೆಯನ್ನು ಮತ್ತು ಸಾರ್ವಜನಿಕ ವಿಶ್ವಾಸವನ್ನು ಹೆಚ್ಚಿಸಿತು. ಇದರ ವಿನ್ಯಾಸ ಮತ್ತು ಅನುಷ್ಠಾನವು ಅಂತರಾಷ್ಟ್ರೀಯ ಆಸಕ್ತಿಯನ್ನು ಸೆಳೆದಿದ್ದು, ಹಲವಾರು ದೇಶಗಳು ಇದನ್ನು ಡಿಜಿಟಲ್ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳಿಗೆ ಒಂದು ಮಾದರಿಯಾಗಿ ಪರಿಶೀಲಿಸುತ್ತಿವೆ.


· ಇ-ಹಾಸ್ಪಿಟಲ್ ಮತ್ತು ಒಆರ್‌ಎಸ್: ಡಿಜಿಟಲ್ ಇಂಡಿಯಾ ಉಪಕ್ರಮದ ಭಾಗವಾಗಿ, ರಾಷ್ಟ್ರೀಯ ಮಾಹಿತಿ ಕೇಂದ್ರವು ಇ-ಹಾಸ್ಪಿಟಲ್, ಇ-ಬ್ಲಡ್‌ಬ್ಯಾಂಕ್ ಮತ್ತು ಆನ್‌ಲೈನ್ ನೋಂದಣಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಆಸ್ಪತ್ರೆ ಸೇವೆಗಳಿಗೆ ಆನ್‌ಲೈನ್ ಪ್ರವೇಶವನ್ನು ಒದಗಿಸಲು 1 ಜುಲೈ 2015 ರಂದು ಒಆರ್‌ಎಸ್ ಪೋರ್ಟಲ್ ಅನ್ನು ಪ್ರಾರಂಭಿಸಲಾಯಿತು. ಇ-ಹಾಸ್ಪಿಟಲ್ ಅಪ್ಲಿಕೇಶನ್ ಒಂದು 'ಆಸ್ಪತ್ರೆ ನಿರ್ವಹಣಾ ಮಾಹಿತಿ ವ್ಯವಸ್ಥೆ'ಯಾಗಿ ಕಾರ್ಯನಿರ್ವಹಿಸುತ್ತದೆ; ಇದು ಆಸ್ಪತ್ರೆಯ ಆಂತರಿಕ ಕೆಲಸದ ಹರಿವು, ನೇಮಕಾತಿಗಳು, ರೋಗನಿರ್ಣಯ ಮತ್ತು ಬಿಲ್ಲಿಂಗ್ ಪ್ರಕ್ರಿಯೆಗಳನ್ನು ಡಿಜಿಟಲೀಕರಣಗೊಳಿಸುತ್ತದೆ. ಈ ಸೌಲಭ್ಯವು ಕೇಂದ್ರ, ರಾಜ್ಯ, ಸ್ವಾಯತ್ತ ಮತ್ತು ಸಹಕಾರಿ ಆಸ್ಪತ್ರೆಗಳಿಗೆ ಕ್ಲೌಡ್-ಆಧಾರಿತ ಸೇವಾ ಮಾದರಿಯ ಮೂಲಕ ಲಭ್ಯವಿದೆ. ಇ-ಬ್ಲಡ್‌ಬ್ಯಾಂಕ್ ಅಪ್ಲಿಕೇಶನ್ ರಕ್ತನಿಧಿ ನಿರ್ವಹಣೆಯ ಸಂಪೂರ್ಣ ಪ್ರಕ್ರಿಯೆಯನ್ನು ಬೆಂಬಲಿಸುತ್ತದೆ. ಒಟ್ಟಾರೆಯಾಗಿ, ಈ ವ್ಯವಸ್ಥೆಗಳು ರೋಗಿಗಳು, ಆಸ್ಪತ್ರೆಗಳು ಮತ್ತು ವೈದ್ಯರನ್ನು ಒಂದು ಏಕೀಕೃತ ಡಿಜಿಟಲ್ ವೇದಿಕೆಯಲ್ಲಿ ಸಂಪರ್ಕಿಸುತ್ತವೆ ಮತ್ತು ಈ ಸೇವೆಗಳನ್ನು ಆಯುಷ್ಮಾನ್ ಭಾರತ್ ಆರೋಗ್ಯ ಖಾತೆ ಯೊಂದಿಗೆ ಸಂಯೋಜಿಸುತ್ತವೆ.

· ಆರೋಗ್ಯ ಸೇತು: ಕೋವಿಡ್-19 ಹರಡುವಿಕೆಯನ್ನು ತಡೆಗಟ್ಟುವ ಪ್ರಯತ್ನಗಳಿಗೆ ಬೆಂಬಲ ನೀಡಲು 2 ಏಪ್ರಿಲ್ 2020 ರಂದು 'ಆರೋಗ್ಯ ಸೇತು' ಆ್ಯಪ್ ಅನ್ನು ಪ್ರಾರಂಭಿಸಲಾಯಿತು. ಇದು ಬ್ಲೂಟೂತ್ ಆಧಾರಿತ ಸಂಪರ್ಕ ಪತ್ತೆ, ಹಾಟ್‌ಸ್ಪಾಟ್ ಮ್ಯಾಪಿಂಗ್ ಮತ್ತು ಆರೋಗ್ಯ ಸಲಹೆಗಳ ಪ್ರಸಾರಕ್ಕೆ ಅನುವು ಮಾಡಿಕೊಟ್ಟಿತು. ಅಂದಿನಿಂದ ಈ ಅಪ್ಲಿಕೇಶನ್ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಅಡಿಯಲ್ಲಿ ಕಾರ್ಯನಿರ್ವಹಿಸುವ 'ರಾಷ್ಟ್ರೀಯ ಆರೋಗ್ಯ ಅಪ್ಲಿಕೇಶನ್' ಆಗಿ ವಿಕಸನಗೊಂಡಿದೆ. ಬಳಕೆದಾರರು ಈ ಆ್ಯಪ್ ಮೂಲಕ 'ಆಯುಷ್ಮಾನ್ ಭಾರತ್ ಆರೋಗ್ಯ ಖಾತೆ' ಗೆ ನೋಂದಾಯಿಸಿಕೊಳ್ಳಬಹುದು ಮತ್ತು ದೃಢೀಕೃತ ಪೂರೈಕೆದಾರರಿಂದ ಡಿಜಿಟಲ್ ಲ್ಯಾಬ್ ವರದಿಗಳು, ಪ್ರಿಸ್ಕ್ರಿಪ್ಷನ್‌ಗಳು ಮತ್ತು ರೋಗನಿರ್ಣಯದ ವರದಿಗಳನ್ನು ಪಡೆಯಬಹುದು. ಇದು ಇ-ಸಂಜೀವನಿ ಒಪಿಡಿ ಸೇವೆಯ ಮೂಲಕ ವೈದ್ಯರೊಂದಿಗೆ ಆನ್‌ಲೈನ್ ಸಮಾಲೋಚನೆಗಾಗಿ ಸಮಯ ನಿಗದಿಪಡಿಸಲು ಅವಕಾಶ ನೀಡುತ್ತದೆ, ಇದರಿಂದಾಗಿ ನಿರಂತರ ಆರೋಗ್ಯ ಆರೈಕೆಯ ವ್ಯವಸ್ಥೆಯು ಬಲಗೊಂಡಿದೆ.

· ರಾಷ್ಟ್ರೀಯ ಅಸಾಂಕ್ರಾಮಿಕ ರೋಗಗಳ ವೇದಿಕೆ:ರಾಷ್ಟ್ರೀಯ ಅಸಾಂಕ್ರಾಮಿಕ ರೋಗಗಳ ವೇದಿಕೆಯು ಪ್ರಮುಖ ಜೀವನಶೈಲಿ ಕಾಯಿಲೆಗಳ ತಪಾಸಣೆ, ರೋಗನಿರ್ಣಯ ಮತ್ತು ನಿರ್ವಹಣೆಯನ್ನು ಬೆಂಬಲಿಸುತ್ತದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಗೂ ಟಾಟಾ ಟ್ರಸ್ಟ್ಸ್ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾದ ಈ ವೇದಿಕೆಯು, ಜನಸಂಖ್ಯಾ ಆಧಾರಿತ ತಪಾಸಣೆ ಮತ್ತು ದೀರ್ಘಕಾಲದ ಕಾಯಿಲೆಗಳ ನಿರ್ವಹಣೆಗೆ ಅನುವು ಮಾಡಿಕೊಡುತ್ತದೆ. ಡಿಸೆಂಬರ್ 2025 ರ ಹೊತ್ತಿಗೆ, 74.97 ಕೋಟಿ ಫಲಾನುಭವಿಗಳು ಈ ವ್ಯವಸ್ಥೆಯಲ್ಲಿ ನೋಂದಾಯಿಸಿಕೊಂಡಿದ್ದಾರೆ. 8.64 ಕೋಟಿಗೂ ಹೆಚ್ಚು ರೋಗಿಗಳು ರಕ್ತದೊತ್ತಡ ಮತ್ತು ಮಧುಮೇಹಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವೇದಿಕೆಯು 31 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಹೆಚ್ಚಿನ ಅಪಾಯವಿರುವ ಜನಸಂಖ್ಯೆಯನ್ನು ವ್ಯವಸ್ಥಿತವಾಗಿ ಪತ್ತೆಹಚ್ಚಲು ಮತ್ತು ಮೇಲ್ವಿಚಾರಣೆ ಮಾಡಲು ಸಹಾಯ ಮಾಡುತ್ತದೆ.

· ಪೋಷಣ್ ಟ್ರ್ಯಾಕರ್: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ರಾಷ್ಟ್ರೀಯ ಇ-ಗೌರ್ನೆನ್ಸ್ ವಿಭಾಗದ ಮೂಲಕ 1 ಮಾರ್ಚ್ 2021 ರಂದು 'ಪೋಷಣ್ ಟ್ರ್ಯಾಕರ್' ಅನ್ನು ಜಾರಿಗೆ ತಂದಿತು. ಇದು ಪೌಷ್ಟಿಕಾಂಶದ ಮೇಲ್ವಿಚಾರಣೆಗಾಗಿ ಒಂದು ಆಡಳಿತಾತ್ಮಕ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ. ಮಕ್ಕಳಲ್ಲಿ ಕುಂಠಿತ ಬೆಳವಣಿಗೆ, ಕ್ಷೀಣತೆ ಮತ್ತು ಕಡಿಮೆ ತೂಕದ ಸಮಸ್ಯೆಯನ್ನು ಕ್ರಿಯಾತ್ಮಕವಾಗಿ ಗುರುತಿಸಲು ಇದು ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತದೆ. ಪೌಷ್ಟಿಕಾಂಶ ಸೇವಾ ವಿತರಣೆಯು ಕಟ್ಟಕಡೆಯ ವ್ಯಕ್ತಿಗೂ ತಲುಪುತ್ತಿದೆಯೇ ಎಂಬುದನ್ನು ಪತ್ತೆಹಚ್ಚಲು ಇದು ಸಹಕಾರಿಯಾಗಿದೆ. ಜನವರಿ 2026 ರ ಹೊತ್ತಿಗೆ, 14.03 ಲಕ್ಷ ಅಂಗನವಾಡಿ ಕೇಂದ್ರಗಳು ಈ ವ್ಯವಸ್ಥೆಯೊಂದಿಗೆ ಜೋಡಿಸಲ್ಪಟ್ಟಿವೆ ಮತ್ತು 8.90 ಕೋಟಿ ಅರ್ಹ ಫಲಾನುಭವಿಗಳು ನೋಂದಾಯಿಸಿಕೊಂಡಿದ್ದಾರೆ. ಇದು ದತ್ತಾಂಶ ಆಧಾರಿತ ಪೌಷ್ಟಿಕಾಂಶದ ಹಸ್ತಕ್ಷೇಪವನ್ನು ಬಲಪಡಿಸಿದೆ.
ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ

ದೀಕ್ಷಾ:
2017 ರಲ್ಲಿ ಪ್ರಾರಂಭಿಸಲಾದ 'ದೀಕ್ಷಾ', ಶಾಲಾ ಶಿಕ್ಷಣಕ್ಕಾಗಿ ಇರುವ ಭಾರತದ ರಾಷ್ಟ್ರೀಯ ವೇದಿಕೆಯಾಗಿದೆ. ಇದು ಶಿಕ್ಷಣ ಸಚಿವಾಲಯದ ಅಡಿಯಲ್ಲಿರುವ 'ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ'ಯ ಒಂದು ಪ್ರಮುಖ ಉಪಕ್ರಮವಾಗಿದೆ. ಸಿಬಿಎಸ್‌ಇ ಸೇರಿದಂತೆ ಕೇಂದ್ರದ ಸ್ವಾಯತ್ತ ಸಂಸ್ಥೆಗಳು ಮತ್ತು ಮಂಡಳಿಗಳ ಜೊತೆಗೆ, ಬಹುತೇಕ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈ ವೇದಿಕೆಯನ್ನು ಅಳವಡಿಸಿಕೊಂಡಿವೆ.

ಇಪ್ಪತ್ತೊಂದನೇ ಶತಮಾನದ ಅಗತ್ಯತೆಗಳಿಗೆ ಸ್ಪಂದಿಸುವ ಕಲಿಕಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವುದು ದೀಕ್ಷಾದ ಗುರಿಯಾಗಿದೆ. ಇಲ್ಲಿ ಶಿಕ್ಷಣವನ್ನು ಪ್ರತಿಯೊಬ್ಬರಿಗೂ ಸುಲಭವಾಗಿ ಲಭ್ಯವಾಗುವಂತೆ, ಆಕರ್ಷಕವಾಗಿ ಮತ್ತು ವೈಯಕ್ತಿಕ ಕಲಿಯುವವರಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ. ಇದು ಕೇವಲ ತರಗತಿ ಕೊಠಡಿಗಳಿಗೆ ಸೀಮಿತವಾಗದೆ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಆಡಳಿತಾಧಿಕಾರಿಗಳಿಗೆ ಸಮಾನವಾಗಿ ಬೆಂಬಲ ನೀಡುತ್ತದೆ. ಮಾರ್ಚ್ 5, 2026 ರ ಹೊತ್ತಿಗೆ, ಈ ವೇದಿಕೆಯ ಮೂಲಕ 566 ಕೋಟಿ ಕಲಿಕಾ ಅವಧಿಗಳನ್ನು ನಡೆಸಲಾಗಿದೆ. ಇದು 2.11 ಕೋಟಿ ನೋಂದಾಯಿತ ಬಳಕೆದಾರರನ್ನು ಹೊಂದಿದೆ. ಕೋರ್ಸ್‌ಗಳ ನೋಂದಣಿ ಸಂಖ್ಯೆಯು 18.52 ಕೋಟಿ ತಲುಪಿದ್ದು, ಇದರಲ್ಲಿ 14.71 ಕೋಟಿ ಪೂರ್ಣಗೊಂಡಿವೆ ಮತ್ತು 12.69 ಕೋಟಿ ಪ್ರಮಾಣಪತ್ರಗಳನ್ನು ವಿತರಿಸಲಾಗಿದೆ.

ಸ್ಕಿಲ್ ಇಂಡಿಯಾ ಡಿಜಿಟಲ್ ಹಬ್:
2023 ರಲ್ಲಿ ಪ್ರಾರಂಭಿಸಲಾದ 'ಸ್ಕಿಲ್ ಇಂಡಿಯಾ ಡಿಜಿಟಲ್ ಹಬ್', ಒಂದು ಸಮಗ್ರ ಡಿಜಿಟಲ್ ವೇದಿಕೆಯ ಮೂಲಕ ಕೌಶಲ್ಯ ತರಬೇತಿ, ಮರು-ಕೌಶಲ್ಯ ಮತ್ತು ಕೌಶಲ್ಯ ಮೇಲ್ದರ್ಜೆಗೇರಿಸುವಿಕೆಯನ್ನು ಬೆಂಬಲಿಸಲು ರಚಿಸಲಾಗಿದೆ. ಇದು ಎಪಿಐ ಗಳ ಮೂಲಕ ನೀಡಲಾಗುವ ವಿಶ್ವಾಸಾರ್ಹ ಕೌಶಲ್ಯ ಪ್ರಮಾಣಪತ್ರಗಳೊಂದಿಗೆ ಆನ್‌ಲೈನ್ ತರಬೇತಿಯನ್ನು ಸಂಯೋಜಿಸುತ್ತದೆ. ಇದರ ಜೊತೆಗೆ ಪಾವತಿ ಮತ್ತು ಉದ್ಯೋಗ ಹುಡುಕಾಟದ ಹಂತಗಳನ್ನೂ ಒಳಗೊಂಡಿದೆ. ಮೇಲ್ದರ್ಜೆಗೇರಿಸಲಾದ ಈ ವೇದಿಕೆಯು ಉದ್ಯಮ್, ಇ-ಶ್ರಮ್, ನ್ಯಾಷನಲ್ ಕೆರಿಯರ್ ಸರ್ವಿಸ್ ಮತ್ತು ಅಸೀಮ್ ಪೋರ್ಟಲ್‌ಗಳನ್ನು ಸಂಯೋಜಿಸುತ್ತದೆ. ಇದು ಸರ್ಕಾರದಿಂದ ನಾಗರಿಕರಿಗೆ, ವ್ಯವಹಾರದಿಂದ ನಾಗರಿಕರಿಗೆ ಮತ್ತು ವ್ಯವಹಾರದಿಂದ ವ್ಯವಹಾರಕ್ಕೆ ಸೇವೆಗಳನ್ನು ಒದಗಿಸಲು ಅನುವು ಮಾಡಿಕೊಡುತ್ತದೆ.
ಇದು ಕಲಿಯುವವರನ್ನು ಉದ್ಯೋಗದಾತರೊಂದಿಗೆ ಸಂಪರ್ಕಿಸುತ್ತದೆ ಮತ್ತು ಉದ್ಯಮದ ಬೇಡಿಕೆಗೆ ಅನುಗುಣವಾಗಿ ತರಬೇತಿಯನ್ನು ರೂಪಿಸಲು ಸಹಾಯ ಮಾಡುತ್ತದೆ. ಶಿಕ್ಷಣ ಸಂಸ್ಥೆಗಳು ಉದಯೋನ್ಮುಖ ಉದ್ಯೋಗಿ ಶಕ್ತಿಯ ಅಗತ್ಯತೆಗಳಿಗೆ ಅನುಗುಣವಾಗಿ ತಮ್ಮ ಪಠ್ಯಕ್ರಮವನ್ನು ಬದಲಾಯಿಸಿಕೊಳ್ಳಬಹುದು. ಈ ವೇದಿಕೆಯು ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ, ಇದರಿಂದಾಗಿ ಭಾರತದ ಮಾನವ ಬಂಡವಾಳದ ಪರಿಸರ ವ್ಯವಸ್ಥೆಯನ್ನು ಬಲಪಡಿಸುತ್ತದೆ.
ಆಡಳಿತಾತ್ಮಕ ಸಾಮರ್ಥ್ಯ ಮತ್ತು ಸಮನ್ವಯಕ್ಕಾಗಿ ಡಿಜಿಟಲ್ ವ್ಯವಸ್ಥೆಗಳು

· ಇ-ಆಫೀಸ್:ಇ-ಆಫೀಸ್ ಸರ್ಕಾರಿ ಇಲಾಖೆಗಳಾದ್ಯಂತ ಕಾಗದ ರಹಿತ ಕಾರ್ಯನಿರ್ವಹಣೆಯನ್ನು ಸಾಧ್ಯವಾಗಿಸಿದೆ. ಇದು ಎಲೆಕ್ಟ್ರಾನಿಕ್ ಫೈಲ್ ನಿರ್ವಹಣೆ ಮತ್ತು ಡಿಜಿಟಲ್ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯನ್ನು ಬೆಂಬಲಿಸುತ್ತದೆ. ಸರಳೀಕೃತ, ಸ್ಪಂದನಾಶೀಲ ಮತ್ತು ಪಾರದರ್ಶಕ ಆಡಳಿತ ವ್ಯವಸ್ಥೆಯನ್ನು ನಿರ್ಮಿಸುವುದು ಈ ವೇದಿಕೆಯ ಗುರಿಯಾಗಿದೆ. ಮುಕ್ತ ವಾಸ್ತುಶಿಲ್ಪದ ಮೇಲೆ ನಿರ್ಮಿಸಲಾದ ಇದನ್ನು ಕೇಂದ್ರ, ರಾಜ್ಯ ಮತ್ತು ಜಿಲ್ಲಾ ಮಟ್ಟಗಳಲ್ಲಿ ಅಳವಡಿಸಿಕೊಳ್ಳಲು ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಇದು ಸ್ವತಂತ್ರ ಕಾರ್ಯಚಟುವಟಿಕೆಗಳನ್ನು ಒಂದು ಏಕೀಕೃತ ಡಿಜಿಟಲ್ ಚೌಕಟ್ಟಿನೊಳಗೆ ಸಂಯೋಜಿಸುತ್ತದೆ, ಇದರಿಂದಾಗಿ ಕಾರ್ಯದಕ್ಷತೆ ಹೆಚ್ಚುತ್ತದೆ ಮತ್ತು ಕಾರ್ಯವಿಧಾನದ ವಿಳಂಬಗಳು ಕಡಿಮೆಯಾಗುತ್ತವೆ.

ಎಪಿಐ ಸೇತು:
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಮಾರ್ಚ್ 2020 ರಲ್ಲಿ 'ಓಪನ್ ಎಪಿಐ ಪ್ಲಾಟ್‌ಫಾರ್ಮ್' ಯೋಜನೆಯಾದ ಎಪಿಐ ಸೇತುವನ್ನು ಪ್ರಾರಂಭಿಸಿತು. ಇದು 'ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್‌ಗಳ' ಮೂಲಕ ಸರ್ಕಾರಿ ದತ್ತಾಂಶ ಮತ್ತು ಸೇವೆಗಳನ್ನು ಸುರಕ್ಷಿತವಾಗಿ ಹಾಗೂ ಪ್ರಮಾಣೀಕೃತ ರೀತಿಯಲ್ಲಿ ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ. ಈ ವೇದಿಕೆಯು ಎಪಿಐಗಳ ಪ್ರಕಟಣೆಯಿಂದ ಬಳಕೆಯವರೆಗೆ ಅವುಗಳ ಸಂಪೂರ್ಣ ಜೀವನಚಕ್ರವನ್ನು ನಿರ್ವಹಿಸುತ್ತದೆ ಮತ್ತು ಸಾರ್ವಜನಿಕ ಹಾಗೂ ಖಾಸಗಿ ಪರಿಸರ ವ್ಯವಸ್ಥೆಗಳೆರಡನ್ನೂ ಬೆಂಬಲಿಸುತ್ತದೆ. ಮಾರ್ಚ್ 2026 ರ ಹೊತ್ತಿಗೆ, ಈ ವೇದಿಕೆಯು ಪ್ರಸ್ತುತ 8,036 ಎಪಿಐಗಳನ್ನು ಹೊಂದಿದ್ದು, 6,592 ಬಳಕೆದಾರರು, 2,559 ಪ್ರಕಾಶಕರು ಮತ್ತು 10,530 ಸಂಸ್ಥೆಗಳು ಇದರೊಂದಿಗೆ ಜೋಡಿಸಲ್ಪಟ್ಟಿವೆ. ವ್ಯವಸ್ಥಿತ ಮತ್ತು ಸುರಕ್ಷಿತ ದತ್ತಾಂಶ ವಿನಿಮಯವನ್ನು ಸುಗಮಗೊಳಿಸುವ ಮೂಲಕ, ಎಪಿಐ ಸೇತು ಭಾರತದ ಡಿಜಿಟಲ್ ಆಡಳಿತದ ಭೂದೃಶ್ಯದಲ್ಲಿ ಪರಸ್ಪರ ಕಾರ್ಯಾಚರಣೆ ಮತ್ತು ನಾವೀನ್ಯತೆಯನ್ನು ಬಲಪಡಿಸುತ್ತದೆ.

ಪಿಎಂ ಗತಿಶಕ್ತಿ:
13 ಅಕ್ಟೋಬರ್ 2021 ರಂದು ಪ್ರಾರಂಭಿಸಲಾದ 'ಪಿಎಂ ಗತಿಶಕ್ತಿ ರಾಷ್ಟ್ರೀಯ ಬೃಹತ್ ಯೋಜನೆ'ಯು, ಮೂಲಸೌಕರ್ಯ ಯೋಜನೆಗಳ ಸಮಗ್ರ ಯೋಜನೆ ಮತ್ತು ಸಂಯೋಜಿತ ಅನುಷ್ಠಾನಕ್ಕಾಗಿ ಜಿಐಎಸ್ ಆಧಾರಿತ ಡಿಜಿಟಲ್ ವೇದಿಕೆಯನ್ನು ಒದಗಿಸುತ್ತದೆ. ಇದು ಆರ್ಥಿಕ ವಲಯಗಳಾದ್ಯಂತ ಮಲ್ಟಿಮೋಡಲ್ ಸಂಪರ್ಕವನ್ನು ಕಲ್ಪಿಸುವ ಮತ್ತು ವಿವಿಧ ಸಚಿವಾಲಯಗಳು ಹಾಗೂ ಏಜೆನ್ಸಿಗಳ ನಡುವೆ ಸಮನ್ವಯತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಈ ಚೌಕಟ್ಟಿನ ಅಡಿಯಲ್ಲಿ ರಚಿಸಲಾದ 'ನೆಟ್‌ವರ್ಕ್ ಪ್ಲಾನಿಂಗ್ ಗ್ರೂಪ್', ಯೋಜನಾ ಹಂತದಲ್ಲೇ ನಿರ್ಣಾಯಕ ಮೂಲಸೌಕರ್ಯ ಪ್ರಸ್ತಾವನೆಗಳನ್ನು ಮೌಲ್ಯಮಾಪನ ಮಾಡುತ್ತದೆ. ಇದು ಮಲ್ಟಿಮೋಡಾಲಿಟಿ, ಇಂಟರ್ ಮೊಡಾಲಿಟಿ, ಕಟ್ಟಕಡೆಯ ಸಂಪರ್ಕ ಮತ್ತು ದತ್ತಾಂಶ ಆಧಾರಿತ ನಿರ್ಧಾರ ಕೈಗೊಳ್ಳುವಿಕೆಯನ್ನು ಖಚಿತಪಡಿಸುತ್ತದೆ.
ಫೆಬ್ರವರಿ 10, 2026 ರ ಹೊತ್ತಿಗೆ, ಒಟ್ಟು ₹16.10 ಲಕ್ಷ ಕೋಟಿ ಅಂದಾಜು ವೆಚ್ಚದ 352 ಮೂಲಸೌಕರ್ಯ ಯೋಜನೆಗಳನ್ನು ಈ ಕಾರ್ಯವಿಧಾನದ ಮೂಲಕ ಮೌಲ್ಯಮಾಪನ ಮಾಡಲಾಗಿದೆ. ಇವುಗಳಲ್ಲಿ 201 ಯೋಜನೆಗಳಿಗೆ ಮಂಜೂರಾತಿ ನೀಡಲಾಗಿದ್ದು, 167 ಯೋಜನೆಗಳು ಅನುಷ್ಠಾನದ ಹಂತದಲ್ಲಿವೆ. ಈ ವೇದಿಕೆಯು ಬೃಹತ್ ಪ್ರಮಾಣದ ಮೂಲಸೌಕರ್ಯ ಆಡಳಿತಕ್ಕೆ ಸುಸಂಬದ್ಧತೆ ಮತ್ತು ಪಾರದರ್ಶಕತೆಯನ್ನು ತರುತ್ತದೆ.
ಒಟ್ಟಾರೆಯಾಗಿ, ಈ ಪರಸ್ಪರ ಸಂಪರ್ಕಿತ ವೇದಿಕೆಗಳು ಭಾರತದ ಡಿಪಿಐ ಸ್ಟ್ಯಾಕ್ ಹೇಗೆ ಆಡಳಿತ, ಆರ್ಥಿಕ ಬೆಳವಣಿಗೆ ಮತ್ತು ನಾಗರಿಕ ಸಬಲೀಕರಣಕ್ಕೆ ಶಕ್ತಿ ನೀಡುವ ಒಂದು ಸಮಗ್ರ ಡಿಜಿಟಲ್ ಬೆನ್ನೆಲುಬಾಗಿ ವಿಕಸನಗೊಂಡಿದೆ ಎಂಬುದನ್ನು ವಿವರಿಸುತ್ತವೆ.
ಭಾರತದ ಡಿಪಿಐ ರಾಜತಾಂತ್ರಿಕತೆ
ಡಿಪಿಐ ಕುರಿತಾದ ಭಾರತದ ತೊಡಗಿಸಿಕೊಳ್ಳುವಿಕೆಯು ಆಳವಾದ ನಾಗರಿಕತೆಯ ನೀತಿಯಿಂದ ಬಂದಿದೆ. 'ವಸುಧೈವ ಕುಟುಂಬಕಂ' ಎಂದರೆ ಇಡೀ ಜಗತ್ತೇ ಒಂದು ಕುಟುಂಬ ಎಂದು ಅರ್ಥ. ಇದು ಗಡಿಗಳು, ಭಾಷೆಗಳು ಮತ್ತು ಸಿದ್ಧಾಂತಗಳನ್ನು ಮೀರಿ ಹಂಚಿಕೆಯ ಪ್ರಗತಿಯನ್ನು ಪ್ರೋತ್ಸಾಹಿಸುವ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ. ಡಿಜಿಟಲ್ ಯುಗದಲ್ಲಿ, ಈ ತತ್ವವು ಡಿಪಿಐ ಮೇಲಿನ ಭಾರತದ ತೊಡಗಿಸಿಕೊಳ್ಳುವಿಕೆಯ ಮೂಲಕ ಹೊಸ ಅಭಿವ್ಯಕ್ತಿಯನ್ನು ಪಡೆದುಕೊಂಡಿದೆ. ತಂತ್ರಜ್ಞಾನವನ್ನು ಒಂದು ಮುಚ್ಚಿದ ಆಸ್ತಿಯಾಗಿ ನೋಡದೆ, ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿಗೆ ಪೂರಕವಾದ 'ಸಾರ್ವಜನಿಕ ಒಳಿತು' ಎಂದು ಪರಿಗಣಿಸಲಾಗುತ್ತದೆ. ಭಾರತವು ಕೇವಲ ತಂತ್ರಜ್ಞಾನವನ್ನು ಹಂಚಿಕೊಳ್ಳುತ್ತಿಲ್ಲ, ಬದಲಾಗಿ ಇತರ ರಾಷ್ಟ್ರಗಳು ಅದನ್ನು ತಮ್ಮದೇ ಆದ ಸಂದರ್ಭಗಳಿಗೆ ಅನುಗುಣವಾಗಿ ಅಭಿವೃದ್ಧಿಪಡಿಸಲು ಮತ್ತು ಅಳವಡಿಸಿಕೊಳ್ಳಲು ಸಹಾಯ ಮಾಡುತ್ತಿದೆ. ವಿವಿಧ ದೇಶಗಳು ವಿಶ್ವಾಸಾರ್ಹ ಡಿಜಿಟಲ್ ಮಾರ್ಗಗಳನ್ನು ಹುಡುಕುತ್ತಿರುವಾಗ, ಭಾರತದ ಅನುಭವವು ಜಾಗತಿಕ ನೀತಿ ಚರ್ಚೆಗಳಲ್ಲಿ ಸ್ಥಿರವಾಗಿ ಸ್ಥಾನ ಪಡೆಯುತ್ತಿದೆ.
ಈ ಕೆಳಗಿನ ಉಪಕ್ರಮಗಳು ಈ ವಿಧಾನವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹೇಗೆ ಕಾರ್ಯಗತಗೊಳಿಸಲಾಗುತ್ತಿದೆ ಎಂಬುದನ್ನು ತೋರಿಸುತ್ತವೆ:
ಡಿಜಿಟಲ್ ಮೂಲಸೌಕರ್ಯದ ಮೇಲಿನ ವ್ಯೂಹಾತ್ಮಕ ಪಾಲುದಾರಿಕೆಗಳು:
ಫೆಬ್ರವರಿ 2026 ರ ಹೊತ್ತಿಗೆ, ಭಾರತ ಸರ್ಕಾರವು 'ಇಂಡಿಯಾ ಸ್ಟ್ಯಾಕ್' ಮತ್ತು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ಸಹಕಾರಕ್ಕಾಗಿ 24 ದೇಶಗಳೊಂದಿಗೆ ತಿಳುವಳಿಕಾ ಒಪ್ಪಂದಗಳಿಗೆ ಮತ್ತು ಒಪ್ಪಂದಗಳಿಗೆ ಸಹಿ ಹಾಕಿದೆ. ಈ ಪಾಲುದಾರಿಕೆಗಳು ತಾಂತ್ರಿಕ ಜ್ಞಾನವನ್ನು ಹಂಚಿಕೊಳ್ಳುವುದು ಮತ್ತು ಡಿಜಿಟಲ್ ಆಡಳಿತ ವೇದಿಕೆಗಳ ಪುನರಾವರ್ತನೆಯನ್ನು ಬೆಂಬಲಿಸುವುದರ ಮೇಲೆ ಕೇಂದ್ರೀಕರಿಸುತ್ತವೆ. ಸಹಕಾರದ ಕ್ಷೇತ್ರಗಳಲ್ಲಿ ಡಿಜಿಟಲ್ ಗುರುತು, ಡಿಜಿಟಲ್ ಪಾವತಿಗಳು, ದತ್ತಾಂಶ ವಿನಿಮಯ ಚೌಕಟ್ಟುಗಳು ಮತ್ತು ಸೇವಾ ವಿತರಣಾ ವ್ಯವಸ್ಥೆಗಳು ಸೇರಿವೆ. ಇದರ ಉದ್ದೇಶ ಕೇವಲ ಉತ್ಪನ್ನದ ರಫ್ತು ಮಾಡುವುದಲ್ಲ, ಬದಲಾಗಿ ವಾಸ್ತುಶಿಲ್ಪ ಮತ್ತು ವಿನ್ಯಾಸದ ತತ್ವಗಳ ಮೇಲೆ ಸಹಯೋಗ ನೀಡುವುದಾಗಿದೆ. ಈ ತೊಡಗಿಸಿಕೊಳ್ಳುವಿಕೆಯು ಬೃಹತ್ ಪ್ರಮಾಣದ ಡಿಜಿಟಲ್ ವ್ಯವಸ್ಥೆಗಳನ್ನು ನಿರ್ಮಿಸಲು ಬಯಸುವ ದೇಶಗಳಿಗೆ ಭಾರತವನ್ನು ಒಬ್ಬ ಪ್ರಾಯೋಗಿಕ ಪಾಲುದಾರನನ್ನಾಗಿ ರೂಪಿಸಿದೆ.
|
ಕ್ರಮ ಸಂಖ್ಯೆ
|
ಇಂಡಿಯಾ ಸ್ಟ್ಯಾಕ್ / ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ಕುರಿತು ಒಪ್ಪಂದ ಮಾಡಿಕೊಂಡಿರುವ ದೇಶಗಳು:
|
|
1
|
ಅರ್ಮೇನಿಯಾ ಗಣರಾಜ್ಯ
|
|
2
|
ಸಿಯೆರಾ ಲಿಯೋನ್ ಗಣರಾಜ್ಯ
|
|
3
|
ಸುರಿನಾಮ್ ಗಣರಾಜ್ಯ
|
|
4
|
ಆಂಟಿಗುವಾ ಮತ್ತು ಬಾರ್ಬುಡಾ
|
|
5
|
ಪಪುವಾ ನ್ಯೂಗಿನಿ
|
|
6
|
ಟ್ರಿನಿಡಾಡ್ ಮತ್ತು ಟೊಬಾಗೋ ಗಣರಾಜ್ಯ
|
|
7
|
ಟಾಂಜಾನಿಯಾ ಯುನೈಟೆಡ್ ರಿಪಬ್ಲಿಕ್
|
|
8
|
ಕೀನ್ಯಾ ಗಣರಾಜ್ಯ
|
|
9
|
ಕ್ಯೂಬಾ ಗಣರಾಜ್ಯ
|
|
10
|
ಕೊಲಂಬಿಯಾ ಗಣರಾಜ್ಯ
|
|
11
|
ಲಾವೋ ಪೀಪಲ್ಸ್ ಡೆಮಾಕ್ರಟಿಕ್ ರಿಪಬ್ಲಿಕ್
|
|
12
|
ಸೇಂಟ್ ಕಿಟ್ಸ್ ಮತ್ತು ನೆವಿಸ್
|
|
13
|
ಇಥಿಯೋಪಿಯಾ
|
|
14
|
ಜಮೈಕಾ
|
|
15
|
ಗ್ಯಾಂಬಿಯಾ
|
|
16
|
ಫಿಜಿ
|
|
17
|
ಗಯಾನಾ
|
|
18
|
ವೆನೆಜುವೆಲಾ
|
|
19
|
ಶ್ರೀಲಂಕಾ
|
|
20
|
ಬ್ರೆಜಿಲ್
|
|
21
|
ಲೆಸೊಥೊ
|
|
22
|
ಮಾಲ್ಡೀವ್ಸ್
|
|
23
|
ಮಂಗೋಲಿಯಾ
|
|
24
|
ಮಲೇಷ್ಯಾ
|
ಯುಪಿಐನ ಗಡಿ ದಾಟಿದ ವಿಸ್ತರಣೆ

ಭಾರತದ ಪಾವತಿ ಮೂಲಸೌಕರ್ಯವು ರಾಷ್ಟ್ರೀಯ ಗಡಿಗಳನ್ನು ಮೀರಿದೆ. ಯುಪಿಐ ಈಗ ಸಂಯುಕ್ತ ಅರಬ್ ಎಮಿರೇಟ್ಸ್, ಸಿಂಗಾಪುರ, ಭೂತಾನ್, ನೇಪಾಳ, ಶ್ರೀಲಂಕಾ, ಫ್ರಾನ್ಸ್, ಮಾರಿಷಸ್ ಮತ್ತು ಕತಾರ್ ಸೇರಿದಂತೆ 8 ದೇಶಗಳಲ್ಲಿ ಸಕ್ರಿಯವಾಗಿದೆ. ಇದರ ಅಂತರಾಷ್ಟ್ರೀಯ ಅಳವಡಿಕೆಯು ಹಣ ವರ್ಗಾವಣೆಯನ್ನು ಸುಗಮಗೊಳಿಸುತ್ತಿದೆ, ಪಾವತಿ ದಕ್ಷತೆಯನ್ನು ಸುಧಾರಿಸುತ್ತಿದೆ ಮತ್ತು ಆರ್ಥಿಕ ಒಳಗೊಳ್ಳುವಿಕೆಯನ್ನು ವಿಸ್ತರಿಸುತ್ತಿದೆ. ತಡೆರಹಿತ ಅಂತರಾಷ್ಟ್ರೀಯ ವಹಿವಾಟುಗಳನ್ನು ಸಕ್ರಿಯಗೊಳಿಸುವ ಮೂಲಕ, ಯುಪಿಐ ಜಾಗತಿಕ ಫಿನ್-ಟೆಕ್ ಭೂದೃಶ್ಯದಲ್ಲಿ ಭಾರತದ ಉಪಸ್ಥಿತಿಯನ್ನು ಬಲಪಡಿಸಿದೆ. ಈ ವ್ಯವಸ್ಥೆಯ ವ್ಯಾಪ್ತಿ ಮತ್ತು ವಿಶ್ವಾಸಾರ್ಹತೆಯು ವಿಶ್ವಾದ್ಯಂತ ನೀತಿ ನಿರೂಪಕರು ಮತ್ತು ನಿಯಂತ್ರಕರ ಗಮನ ಸೆಳೆದಿದೆ.
ಇಂಡಿಯಾ ಸ್ಟ್ಯಾಕ್ ಗ್ಲೋಬಲ್
ವ್ಯವಸ್ಥಿತ ಸಹಕಾರವನ್ನು ಸುಗಮಗೊಳಿಸಲು, ಭಾರತದ ಡಿಪಿಐ ಪರಿಹಾರಗಳನ್ನು ಪ್ರದರ್ಶಿಸಲು ಮತ್ತು ಪಾಲುದಾರ ರಾಷ್ಟ್ರಗಳಿಂದ ಅವುಗಳ ಅಳವಡಿಕೆಯನ್ನು ಬೆಂಬಲಿಸಲು 'ಇಂಡಿಯಾ ಸ್ಟ್ಯಾಕ್ ಗ್ಲೋಬಲ್' ಅನ್ನು ಒಂದು ಮೀಸಲಾದ ವೇದಿಕೆಯಾಗಿ ಸ್ಥಾಪಿಸಲಾಯಿತು. ಈ ಪೋರ್ಟಲ್ ಪ್ರಮುಖ ಡಿಜಿಟಲ್ ವೇದಿಕೆಗಳು ಮತ್ತು ತಾಂತ್ರಿಕ ಸಂಪನ್ಮೂಲಗಳಿಗೆ ಪ್ರವೇಶವನ್ನು ಒದಗಿಸುತ್ತದೆ. ಇದು ಭಾರತದ ಅನುಭವ ಮತ್ತು ಸ್ನೇಹಿ ರಾಷ್ಟ್ರಗಳ ಅಗತ್ಯತೆಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ. ಈ ಉಪಕ್ರಮದ ಮೂಲಕ, ಡಿಜಿಟಲ್ ಸಾರ್ವಜನಿಕ ಸರಕುಗಳನ್ನು ಸ್ಥಿರ ಟೆಂಪ್ಲೇಟ್‌ಗಳ ಬದಲಿಗೆ ಅಳವಡಿಸಿಕೊಳ್ಳಬಹುದಾದ ಬಿಲ್ಡಿಂಗ್ ಬ್ಲಾಕ್‌ಗಳಾಗಿ ಪ್ರಸ್ತುತಪಡಿಸಲಾಗುತ್ತದೆ.
ಜಿ20 ಘೋಷಣೆ ಮತ್ತು ಜಾಗತಿಕ ಡಿಪಿಐ ರೆಪೊಸಿಟರಿ
2023 ರಲ್ಲಿ ತನ್ನ G20 ಅಧ್ಯಕ್ಷತೆಯ ಅವಧಿಯಲ್ಲಿ, ಭಾರತವು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಅಭಿವೃದ್ಧಿ ಕಾರ್ಯಸೂಚಿಯ ಕೇಂದ್ರಬಿಂದುವಾಗಿರಿಸಿತು. G20 ನವದೆಹಲಿ ನಾಯಕರ ಘೋಷಣೆಯು ಡಿಪಿಐ ಅನ್ನು ಅಭಿವೃದ್ಧಿಯ ವೇಗವರ್ಧಕ ಎಂದು ಸ್ಪಷ್ಟವಾಗಿ ಗುರುತಿಸಿದೆ. ಡಿಪಿಐ ಎಂಬುದು ಸ್ವಾಮ್ಯದ ತಂತ್ರಜ್ಞಾನವಲ್ಲ, ಬದಲಾಗಿ ವಿಶೇಷವಾಗಿ 'ಗ್ಲೋಬಲ್ ಸೌತ್' ರಾಷ್ಟ್ರಗಳ ಅಂತರ್ಗತ ಬೆಳವಣಿಗೆಯ ಡಿಜಿಟಲ್ ಹಳಿಗಳಾಗಿವೆ ಎಂಬ ಕಲ್ಪನೆಯನ್ನು ಭಾರತ ಪ್ರತಿಪಾದಿಸಿತು. ಜನಸಂಖ್ಯಾ ಪ್ರಮಾಣದ ಡಿಪಿಐ ಅನ್ನು ವಿನ್ಯಾಸಗೊಳಿಸುವ ಮತ್ತು ನಿಯೋಜಿಸುವ ಕುರಿತಾದ ಮಾಹಿತಿ ಅಂತರವನ್ನು ಕಡಿಮೆ ಮಾಡಲು, ಭಾರತದ ಅಧ್ಯಕ್ಷತೆಯಲ್ಲಿ 'ಗ್ಲೋಬಲ್ ಡಿಜಿಟಲ್ ಪಬ್ಲಿಕ್ ಇನ್ಫ್ರಾಸ್ಟ್ರಕ್ಚರ್ ರೆಪೊಸಿಟರಿ' ಅನ್ನು ಜ್ಞಾನದ ವೇದಿಕೆಯಾಗಿ ಪ್ರಾರಂಭಿಸಲಾಯಿತು. ಈ ರೆಪೊಸಿಟರಿಗೆ ಭಾರತವು ಅತಿ ಹೆಚ್ಚು ಸಂಖ್ಯೆಯ ಡಿಪಿಐ ಪರಿಹಾರಗಳನ್ನು ನೀಡಿದ್ದು, ಈ ಚರ್ಚೆಯನ್ನು ರೂಪಿಸುವಲ್ಲಿ ತನ್ನ ಪಾತ್ರವನ್ನು ಬಲಪಡಿಸಿದೆ.
ಮುಕ್ತ ಡಿಜಿಟಲ್ ಸಾರ್ವಜನಿಕ ಸರಕಾಗಿ ಕೋವಿನ್
ಭಾರತವು ತನ್ನ ಡಿಜಿಟಲ್ ಆರೋಗ್ಯ ವೇದಿಕೆಯಾದ 'ಕೋವಿನ್' ಅನ್ನು ಯಾವುದೇ ವೆಚ್ಚವಿಲ್ಲದೆ ಜಗತ್ತಿಗೆ ಮುಕ್ತ-ಮೂಲ ತಂತ್ರಜ್ಞಾನವಾಗಿ ನೀಡುವ ಮೂಲಕ ರಾಷ್ಟ್ರೀಯ ಗಡಿಗಳನ್ನು ಮೀರಿ ವಿಸ್ತರಿಸಿತು. 220 ಕೋಟಿಗೂ ಅಧಿಕ ಲಸಿಕೆ ಡೋಸ್‌ಗಳನ್ನು ನಿರ್ವಹಿಸುವಲ್ಲಿ ಈ ವೇದಿಕೆಯ ಯಶಸ್ಸು, ಬೃಹತ್ ಪ್ರಮಾಣದಲ್ಲಿ ಸಂಕೀರ್ಣ ಸಾರ್ವಜನಿಕ ಆರೋಗ್ಯ ಲಾಜಿಸ್ಟಿಕ್ಸ್ ಅನ್ನು ಸಂಘಟಿಸುವ ಸಾಮರ್ಥ್ಯವನ್ನು ಪ್ರದರ್ಶಿಸಿತು. ಈ ತಂತ್ರಜ್ಞಾನವನ್ನು ಉಚಿತವಾಗಿ ಲಭ್ಯವಾಗುವಂತೆ ಮಾಡುವ ಮೂಲಕ, ಭಾರತವು ತನ್ನ ಡಿಜಿಟಲ್ ಅನುಭವವನ್ನು ಹಂಚಿಕೊಳ್ಳುವ ಉದ್ದೇಶವನ್ನು ವ್ಯಕ್ತಪಡಿಸಿತು. ಸಾರ್ವಜನಿಕ ಒಳಿತು, ಒಳಗೊಳ್ಳುವ ಅಭಿವೃದ್ಧಿ ಮತ್ತು ಸಾಮಾಜಿಕ ಸಬಲೀಕರಣಕ್ಕಾಗಿ ತಂತ್ರಜ್ಞಾನ ಮತ್ತು ನೀತಿಯ ಬಳಕೆ ಮಾಡುವುದು, ಸ್ಥಿತಿಸ್ಥಾಪಕ ಡಿಜಿಟಲ್ ವ್ಯವಸ್ಥೆಗಳನ್ನು ಬಯಸುವ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಪ್ರಾಯೋಗಿಕ ಪಾಠಗಳನ್ನು ನೀಡುತ್ತದೆ.
ಮೊಸಿಪ್ ಮತ್ತು ಸಾರ್ವಭೌಮ ಡಿಜಿಟಲ್ ಗುರುತು
ಭಾರತದಲ್ಲಿ ಅಭಿವೃದ್ಧಿಪಡಿಸಲಾದ 'ಮಾಡ್ಯುಲರ್ ಓಪನ್-ಸೋರ್ಸ್ ಐಡೆಂಟಿಟಿ ಪ್ಲಾಟ್‌ಫಾರ್ಮ್' (MOSIP) ಮತ್ತೊಂದು ಪ್ರಮುಖ ಉದಾಹರಣೆಯಾಗಿದೆ. ಸಾರ್ವಭೌಮ ಡಿಜಿಟಲ್ ಗುರುತಿನ ವ್ಯವಸ್ಥೆಯನ್ನು ನಿರ್ಮಿಸಲು ಬಯಸುವ ದೇಶಗಳಿಗೆ ಮೊಸಿಪ್ ಒಂದು ಕಾನ್ಫಿಗರ್ ಮಾಡಬಹುದಾದ ಮತ್ತು ಮುಕ್ತ-ಮೂಲ ಚೌಕಟ್ಟನ್ನು ಒದಗಿಸುತ್ತದೆ. 25 ಕ್ಕೂ ಹೆಚ್ಚು ರಾಷ್ಟ್ರಗಳು ತಮ್ಮ ರಾಷ್ಟ್ರೀಯ ಗುರುತಿನ ಕಾರ್ಯಕ್ರಮಗಳಿಗಾಗಿ ಈ ವೇದಿಕೆಯನ್ನು ಅಳವಡಿಸಿಕೊಳ್ಳುತ್ತಿವೆ ಅಥವಾ ಪರಿಶೀಲಿಸುತ್ತಿವೆ. ಒಟ್ಟಾರೆಯಾಗಿ, ಈ ಉಪಕ್ರಮಗಳು ಹಂಚಿಕೆಯ ಸಾಮರ್ಥ್ಯದಲ್ಲಿ ನೆಲೆಗೊಂಡಿರುವ ರಾಜತಾಂತ್ರಿಕತೆಯನ್ನು ಪ್ರತಿಬಿಂಬಿಸುತ್ತವೆ, ಅಲ್ಲಿ ಭಾರತವು ಹೆಚ್ಚು ಅಂತರ್ಗತ ಮತ್ತು ಪರಸ್ಪರ ಕಾರ್ಯನಿರ್ವಹಿಸಬಲ್ಲ ಜಾಗತಿಕ ಡಿಜಿಟಲ್ ವಾಸ್ತುಶಿಲ್ಪವನ್ನು ರೂಪಿಸಲು ಸಹಾಯ ಮಾಡುತ್ತಿದೆ.
ತೀರ್ಮಾನ
ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದೊಂದಿಗೆ ಭಾರತದ ಪ್ರಯಾಣವು ಡಿಜಿಟಲ್ ಯುಗದಲ್ಲಿ ಅಭಿವೃದ್ಧಿ ಮತ್ತು ಆಡಳಿತವನ್ನು ಹೇಗೆ ಕಲ್ಪಿಸಿಕೊಳ್ಳಲಾಗುತ್ತದೆ ಎಂಬುದರಲ್ಲಿನ ವ್ಯಾಪಕ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ. ಆರ್ಥಿಕ ಒಳಗೊಳ್ಳುವಿಕೆ ಮತ್ತು ಗುರುತಿನ ಪ್ರವೇಶವನ್ನು ವಿಸ್ತರಿಸುವ ಪ್ರಯತ್ನವಾಗಿ ಪ್ರಾರಂಭವಾದದ್ದು, ಇಂದು ಆರ್ಥಿಕ ಚಟುವಟಿಕೆ, ಸಾರ್ವಜನಿಕ ಸೇವಾ ವಿತರಣೆ ಮತ್ತು ಸಾಂಸ್ಥಿಕ ಸಾಮರ್ಥ್ಯವನ್ನು ಬೆಂಬಲಿಸುವ ಸಮಗ್ರ ಹಾಗೂ ಪರಸ್ಪರ ಕಾರ್ಯನಿರ್ವಹಿಸಬಲ್ಲ ವಾಸ್ತುಶಿಲ್ಪವಾಗಿ ಬೆಳೆದಿದೆ. ಬೃಹತ್ ಪ್ರಮಾಣದ ಕಾರ್ಯಾಚರಣೆಯು ನಂಬಿಕೆಗೆ ಧಕ್ಕೆ ತರಬೇಕಿಲ್ಲ ಮತ್ತು ಮುಕ್ತತೆಯು ಭದ್ರತೆ ಹಾಗೂ ನಿಯಂತ್ರಣದೊಂದಿಗೆ ಸಹಬಾಳ್ವೆ ನಡೆಸಬಲ್ಲದು ಎಂಬುದನ್ನು ಈ ಮಾದರಿಯು ತೋರಿಸಿಕೊಟ್ಟಿದೆ. ತಂತ್ರಜ್ಞಾನವನ್ನು ಸಾರ್ವಜನಿಕ ಉದ್ದೇಶದೊಂದಿಗೆ ಬೆಸೆಯುವ ಮೂಲಕ, ಡಿಜಿಟಲ್ ವ್ಯವಸ್ಥೆಗಳು ಬೆಳವಣಿಗೆಯನ್ನು ವೇಗಗೊಳಿಸುವ ಜೊತೆಗೆ ಪ್ರಜಾಪ್ರಭುತ್ವವನ್ನು ಬಲಪಡಿಸಬಲ್ಲವು ಎಂಬುದನ್ನು ಭಾರತ ತೋರಿಸಿದೆ. ಹೆಚ್ಚಿನ ರಾಷ್ಟ್ರಗಳು ಸ್ಥಿತಿಸ್ಥಾಪಕ ಮತ್ತು ಒಳಗೊಳ್ಳುವ ಡಿಜಿಟಲ್ ಅಡಿಪಾಯಗಳನ್ನು ನಿರ್ಮಿಸಲು ಎದುರು ನೋಡುತ್ತಿರುವಾಗ, ಭಾರತದ ಅನುಭವವು ಕೇವಲ ಒಂದು ಅಧ್ಯಯನವಾಗಿರದೆ, ಸಾರ್ವಜನಿಕ ಡಿಜಿಟಲ್ ಮೂಲಸೌಕರ್ಯದ ಭವಿಷ್ಯಕ್ಕೆ ಒಂದು ಉಲ್ಲೇಖದ ಬಿಂದುವಾಗಿ ನಿಂತಿದೆ.
References:
Ministry of Electronics & IT:
Ministry of Communications:
MoFHW:
Ministry of Commerce & Industry:
Ministry of Law and Justice:
UNDP:
MEA:
PMO:
Click here to see pdf
*****
(Explainer ID: 157696)
आगंतुक पटल : 90
Provide suggestions / comments