• Sitemap
  • Advance Search
Technology

"ತಂತ್ರಜ್ಞಾನ: ಮೇಡ್-ಇನ್-ಇಂಡಿಯಾ ಎಐ ಕ್ರಾಂತಿಗೆ ಶಕ್ತಿ ತುಂಬುತ್ತಿರುವ ಸರ್ವಂ ಎಐ"

ಸಾರ್ವಜನಿಕ ಹಿತದೃಷ್ಟಿಯಿಂದ ಭಾರತದ ಸಾರ್ವಭೌಮ, ಬಹುಭಾಷಾ ಎಐ (ಕೃತಕ ಬುದ್ಧಿಮತ್ತೆ) ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ

Posted On: 21 FEB 2026 2:54PM

ಡಿಜಿಟಲ್ ಇಂಡಿಯಾಕ್ಕಾಗಿ ಸ್ವದೇಶಿ ಕೃತಕ ಬುದ್ಧಿಮತ್ತೆ ನಿರ್ಮಾಣ

ಭಾರತವು ಜಾಗತಿಕ ಡಿಜಿಟಲ್ ಶಕ್ತಿಯಾಗಿ ಹೊರಹೊಮ್ಮುವುದು ಈಗ ಅದರ ಸ್ವದೇಶಿ, ಒಳಗೊಳ್ಳುವಿಕೆ ಮತ್ತು ರಾಷ್ಟ್ರೀಯ ಆದ್ಯತೆಗಳಿಗೆ ಅನುಗುಣವಾದ ಕೃತಕ ಬುದ್ಧಿಮತ್ತೆ (AI) ವ್ಯವಸ್ಥೆಗಳನ್ನು ನಿರ್ಮಿಸುವ ಸಾಮರ್ಥ್ಯದ ಮೇಲೆ ಅವಲಂಬಿತವಾಗಿದೆ. ಆಡಳಿತ, ಸಾರ್ವಜನಿಕ ಸೇವೆಗಳು, ಕೈಗಾರಿಕೆ ಮತ್ತು ನಾಗರಿಕರ ತೊಡಗಿಸಿಕೊಳ್ಳುವಿಕೆಯಲ್ಲಿ ಎಐ ಪ್ರಮುಖ ಪಾತ್ರ ವಹಿಸುತ್ತಿರುವುದರಿಂದ, ಸ್ವದೇಶಿ ಮೂಲಭೂತ ಮಾದರಿಗಳ ಅಗತ್ಯತೆ ಹೆಚ್ಚಾಗಿದೆ. ಇವುಗಳ ಪ್ರಸ್ತುತತೆ ಮತ್ತು ಪರಿಣಾಮಕಾರಿಯಾದ ಬಳಕೆಯನ್ನು ಖಚಿತಪಡಿಸಿಕೊಳ್ಳಲು, ಈ ಮಾದರಿಗಳಿಗೆ ಭಾರತೀಯ ಭಾಷೆಗಳು, ಸ್ಥಳೀಯ ದತ್ತಾಂಶ ಮತ್ತು ನೈಜ ಸನ್ನಿವೇಶಗಳ ಆಧಾರದ ಮೇಲೆ ತರಬೇತಿ ನೀಡುವುದು ಅತ್ಯಗತ್ಯ.

ಭಾರತಕ್ಕಾಗಿ ಪ್ರತ್ಯೇಕವಾದ ಎಐ ವ್ಯವಸ್ಥೆಗಳನ್ನು ರೂಪಿಸುವ ದೃಷ್ಟಿಕೋನದೊಂದಿಗೆ ಸ್ಥಾಪಿತವಾದ 'ಸರ್ವಂ ಎಐ' ಸಂಸ್ಥೆಯು, ದೇಶದ ವಿಶಿಷ್ಟ ಭಾಷಾ, ಉದ್ಯಮ ಮತ್ತು ಆಡಳಿತಾತ್ಮಕ ಅಗತ್ಯಗಳಿಗೆ ಅನುಗುಣವಾಗಿ ಮೂಲಭೂತ ಅಂಶಗಳನ್ನು ಅಭಿವೃದ್ಧಿಪಡಿಸುತ್ತಿದೆ. ಈ ಕಂಪನಿಯು ಸಂಪೂರ್ಣವಾಗಿ ಭಾರತದಲ್ಲೇ ಅಭಿವೃದ್ಧಿಪಡಿಸಿದ ಮತ್ತು ನಿರ್ವಹಿಸಲ್ಪಡುವ 'ಫುಲ್-ಸ್ಟ್ಯಾಕ್ ಎಐ ಪ್ಲಾಟ್‌ಫಾರ್ಮ್' ಅನ್ನು ನಿರ್ಮಿಸಿದೆ. ಈ ಉದ್ಯಮ-ದರ್ಜೆಯ ವೇದಿಕೆಗಳು ದೇಶದ ಭಾಷಾ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತವೆ ಮತ್ತು ಸಾರ್ವಜನಿಕ ಸೇವೆಗಳ ವಿತರಣೆಯನ್ನು ಬೆಂಬಲಿಸಲು ವಿನ್ಯಾಸಗೊಳಿಸಲಾಗಿದೆ. ಇದರ ಕಾರ್ಯವೈಖರಿಯು ಭಾಷಾ ಸಂವಹನ, ತಂತ್ರಜ್ಞಾನದ ಸುಲಭ ಲಭ್ಯತೆ ಮತ್ತು ವಿದೇಶಿ ಎಐ ಮೂಲಸೌಕರ್ಯಗಳ ಮೇಲಿನ ಅವಲಂಬನೆಯಂತಹ ದೀರ್ಘಕಾಲದ ಅಡೆತಡೆಗಳನ್ನು ನೇರವಾಗಿ ನಿವಾರಿಸುತ್ತದೆ."

"ಭಾರತ ಎಐ ಇಂಪ್ಯಾಕ್ಟ್ ಶೃಂಗಸಭೆ 2026ರಲ್ಲಿ  ಮಾತನಾಡಿದ ಕೇಂದ್ರ ಸಚಿವರಾದ ಶ್ರೀ ಅಮಿತ್ ಶಾ ಅವರು, ಭವಿಷ್ಯವು ಭಾರತಕ್ಕೆ ಸೇರಿದ್ದು ಎಂಬುದಕ್ಕೆ 'ಸರ್ವಂ ಎಐ'  ಒಂದು ಅತ್ಯುತ್ತಮ ಉದಾಹರಣೆಯಾಗಿದೆ ಎಂದು ತಿಳಿಸಿದರು. ತಂತ್ರಜ್ಞಾನವು ಪ್ರತಿಯೊಬ್ಬ ನಾಗರಿಕನಿಗೂ ತಲುಪುವುದನ್ನು ಈ ಸಂಸ್ಥೆಯು ಖಚಿತಪಡಿಸುತ್ತಿದೆ. ನಾವೀನ್ಯತೆಯು ಜನರನ್ನು ಸಬಲೀಕರಣಗೊಳಿಸಲು ಮತ್ತು ರಾಷ್ಟ್ರವನ್ನು ಬಲಪಡಿಸಲು ಒಂದು ನಂಬಿಕಸ್ತ ಮಿತ್ರನಂತೆ ಕೆಲಸ ಮಾಡುತ್ತಿದೆ. ಇದು 'ವಿಕಸಿತ ಭಾರತ'ದ ಸಂಕಲ್ಪವನ್ನು ಮುನ್ನಡೆಸುತ್ತಿದೆ ಎಂದು ಅವರು ಉಲ್ಲೇಖಿಸಿದರು."

ಸ್ವದೇಶಿ ಎಐ  ಮಾದರಿಗಳ ಮೂಲಕ ಡಿಜಿಟಲ್ ಸ್ವಾವಲಂಬನೆಗೆ ಚಾಲನೆ

ತಾಂತ್ರಿಕ ಸಾರ್ವಭೌಮತ್ವ, ಡಿಜಿಟಲ್ ಸ್ವಾವಲಂಬನೆ ಮತ್ತು ಸಮಗ್ರ ಬೆಳವಣಿಗೆಯ ಭಾರತದ ದೃಷ್ಟಿಕೋನಕ್ಕೆ ಸ್ವದೇಶಿ ಎಐ ಮೂಲಸೌಕರ್ಯವನ್ನು ಬಲಪಡಿಸುವುದು ಅತ್ಯಂತ ಪ್ರಮುಖವಾಗಿದೆ. ಕೃತಕ ಬುದ್ಧಿಮತ್ತೆಯು ಆಡಳಿತ, ಆರ್ಥಿಕ ಸ್ಪರ್ಧಾತ್ಮಕತೆ ಮತ್ತು ನಾಗರಿಕ ಸೇವೆಗಳನ್ನು ರೂಪಿಸುತ್ತಿರುವ ಈ ಯುಗದಲ್ಲಿ, ಸ್ಥಳೀಯ ಭಾಷೆಗಳು, ದತ್ತಾಂಶಗಳು ಮತ್ತು ನಿಯಂತ್ರಕ ಚೌಕಟ್ಟುಗಳಲ್ಲಿ ಬೇರೂರಿರುವ ಎಐ ವ್ಯವಸ್ಥೆಗಳನ್ನು ನಿರ್ಮಿಸುವುದು ಅತ್ಯಗತ್ಯ. ಇದು ನಾವೀನ್ಯತೆಯು ರಾಷ್ಟ್ರೀಯ ಆದ್ಯತೆಗಳು ಮತ್ತು ಸಾಮಾಜಿಕ ಅಗತ್ಯಗಳಿಗೆ ಅನುಗುಣವಾಗಿರುವುದನ್ನು ಖಚಿತಪಡಿಸುತ್ತದೆ. ಸ್ವದೇಶಿ ಎಐ ಅಭಿವೃದ್ಧಿಯು ಕೇವಲ ಕಾರ್ಯತಂತ್ರದ ಸ್ವಾಯತ್ತತೆಯನ್ನು ರಕ್ಷಿಸುವುದಲ್ಲದೆ, ಆರ್ಥಿಕ ಸ್ಥಿತಿಸ್ಥಾಪಕತ್ವ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಿಗೆ ಸಮಾನ ಪ್ರವೇಶವನ್ನು ಉತ್ತೇಜಿಸುತ್ತದೆ.

ಈ ಹಿನ್ನೆಲೆಯಲ್ಲಿ, ಸ್ವದೇಶಿ ಮೂಲಭೂತ ಮಾದರಿಗಳನ್ನು ಅಭಿವೃದ್ಧಿಪಡಿಸಲು 'ಇಂಡಿಯಾ ಎಐ ಮಿಷನ್'  ನ 'ನಾವೀನ್ಯತೆ ಕೇಂದ್ರ' ಸ್ತಂಭದ ಅಡಿಯಲ್ಲಿ ಆಯ್ಕೆಯಾದ 12 ಸಂಸ್ಥೆಗಳಲ್ಲಿ 'ಸರ್ವಂ ಎಐ'  ಗಮನಾರ್ಹವಾಗಿದೆ. ಈ ಸಂಸ್ಥೆಗೆ ₹246.72 ಕೋಟಿ ಹಣಕಾಸು ಮತ್ತು ಕಂಪ್ಯೂಟ್ ಬೆಂಬಲವನ್ನು ನೀಡಲಾಗಿದೆ. ಈ ಕಂಪನಿಯು ಭಾರತೀಯ ಭಾಷೆಗಳು ಮತ್ತು ಸಾರ್ವಜನಿಕ ಸೇವೆಗಳ ವಿತರಣೆಗಾಗಿ ವಿನ್ಯಾಸಗೊಳಿಸಲಾದ ಬೃಹತ್ ಭಾಷಾ ಮತ್ತು ಧ್ವನಿ ಮಾದರಿಗಳನ್ನು ನಿರ್ಮಿಸುತ್ತಿದೆ. ಇವು ಧ್ವನಿ ಆಧಾರಿತ ಇಂಟರ್ಫೇಸ್, ದಾಖಲೆಗಳ ಸಂಸ್ಕರಣೆ ಮತ್ತು ನಾಗರಿಕ-ಕೇಂದ್ರಿತ ಅಪ್ಲಿಕೇಶನ್‌ಗಳಂತಹ ಸಾಮರ್ಥ್ಯಗಳನ್ನು ಹೊಂದಿದ್ದು, ತಂತ್ರಜ್ಞಾನದ ಸುಲಭ ಲಭ್ಯತೆಯನ್ನು ಹೆಚ್ಚಿಸುತ್ತವೆ. ರಾಷ್ಟ್ರೀಯ ಉದ್ದೇಶಗಳಿಗೆ ಅನುಗುಣವಾದ ಸ್ವದೇಶಿ ಎಐ ಮಾದರಿಗಳನ್ನು ಅಭಿವೃದ್ಧಿಪಡಿಸುವ ಮೂಲಕ, ಸರ್ವಂ ಎಐ ವಿದೇಶಿ ಎಐ ವ್ಯವಸ್ಥೆಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದರ ಜೊತೆಗೆ ಮುಕ್ತ ಮೂಲ ಪರಿಸರ ವ್ಯವಸ್ಥೆಯನ್ನು ಬಲಪಡಿಸುತ್ತಿದೆ. ಇದು ಸ್ಟಾರ್ಟ್‌ಅಪ್‌ಗಳು, ಶೈಕ್ಷಣಿಕ ಕ್ಷೇತ್ರ, ಸಂಶೋಧನಾ ಸಂಸ್ಥೆಗಳು ಮತ್ತು ಕೈಗಾರಿಕೆಗಳಲ್ಲಿ ನಾವೀನ್ಯತೆಗೆ ದಾರಿ ಮಾಡಿಕೊಡುತ್ತಿದೆ.

"ಎಐ ಮಾದರಿಯು ಒಂದು ಡಿಜಿಟಲ್ ಮೆದುಳಿನಂತೆ ಕಾರ್ಯನಿರ್ವಹಿಸುವ ಕಂಪ್ಯೂಟರ್ ಪ್ರೋಗ್ರಾಂ ಆಗಿದೆ. ಇದು ಅಗಾಧ ಪ್ರಮಾಣದ ಮಾಹಿತಿಯನ್ನು ವಿಶ್ಲೇಷಿಸಿ, ಅದರಲ್ಲಿನ ಮಾದರಿಗಳನ್ನು ಗುರುತಿಸಲು, ಭವಿಷ್ಯ ನುಡಿಯಲು ಅಥವಾ ಹೊಸ ವಿಷಯಗಳನ್ನು ಸೃಷ್ಟಿಸಲು ತರಬೇತಿ ಪಡೆದಿರುತ್ತದೆ."

ಸರ್ವಂ ಎಐ ಮಾದರಿಗಳು ಇವುಗಳನ್ನು ಒಳಗೊಂಡಿವೆ:

  • ಬುಲ್‌ಬುಲ್ ( ಬುಲ್‌ಬುಲ್‌- ಪಠ್ಯದಿಂದ ಧ್ವನಿ): ಇದು 11 ಭಾರತೀಯ ಭಾಷೆಗಳಲ್ಲಿ ಲಭ್ಯವಿದ್ದು, 39 ವಿಭಿನ್ನ ಧ್ವನಿಗಳನ್ನು ಹೊಂದಿದೆ.

  • ಸಾರಸ್ (ಸರಸ್‌ - ಧ್ವನಿಯಿಂದ ಪಠ್ಯ): ಇದು ಸಂವಿಧಾನದ 8ನೇ ಅನುಸೂಚಿಯಲ್ಲಿರುವ ಎಲ್ಲಾ 22 ಭಾಷೆಗಳನ್ನು ಬೆಂಬಲಿಸುತ್ತದೆ. ಅಲ್ಲದೆ, ಇದು 8kHz ಟೆಲಿಫೋನಿ ಆಡಿಯೋ ಮತ್ತು ಭಾಷೆಗಳು ಬೆರೆತಿರುವ (code-mixed) ಸಂಭಾಷಣೆಯನ್ನು ಅರ್ಥೈಸಿಕೊಳ್ಳಬಲ್ಲದು.

  • ವಿಷನ್ (Vision - ದಾಖಲೆಗಳ ವಿಶ್ಲೇಷಣೆ): ಇದು 22ಕ್ಕೂ ಹೆಚ್ಚು ಭಾರತೀಯ ಭಾಷೆಗಳು, ಮಿಶ್ರ ಲಿಪಿಗಳು ಮತ್ತು ಕೈಬರಹದ ಪಠ್ಯಗಳನ್ನು ಅರ್ಥಮಾಡಿಕೊಳ್ಳಲು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

ಈ ಮೂಲಭೂತ ಸಾಮರ್ಥ್ಯಗಳ ಮೂಲಕ, ಭಾರತ-ಕೇಂದ್ರಿತ ಎಐ ಹೇಗೆ ಸ್ಕೇಲೆಬಲ್ (ವಿಸ್ತರಿಸಬಹುದಾದ), ಸ್ಥಿತಿಸ್ಥಾಪಕ ಮತ್ತು ಜನಸಂಖ್ಯೆಯ ಮಟ್ಟಕ್ಕೆ ಅನುಗುಣವಾದ ಡಿಜಿಟಲ್ ಮೂಲಸೌಕರ್ಯವಾಗಿ ವಿಕಸನಗೊಳ್ಳಬಲ್ಲದು ಎಂಬುದನ್ನು ಸರ್ವಂ ಎಐ ತೋರಿಸಿಕೊಡುತ್ತಿದೆ. ಇದು ಸಾರ್ವಜನಿಕ ಸೇವೆಗಳ ವಿತರಣೆಯನ್ನು ಉತ್ತಮಗೊಳಿಸುವುದಲ್ಲದೆ, ಭಾಷಾ ಪ್ರವೇಶವನ್ನು ಸುಲಭಗೊಳಿಸುತ್ತದೆ ಮತ್ತು ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕವಾದ ಎಐ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಭಾರತದ ಪ್ರಯಾಣವನ್ನು ಬಲಪಡಿಸುತ್ತದೆ.

ಸರ್ವಂ ಎಐ ಸಂಸ್ಥೆಯ ಫುಲ್-ಸ್ಟ್ಯಾಕ್ ಸಾರ್ವಭೌಮ ಎಐ  ಪರಿಸರ ವ್ಯವಸ್ಥೆ

"ಸರ್ವಂ ಎಐ ಸಂಸ್ಥೆಯು ಭಾರತದಾದ್ಯಂತ ಇರುವ ಉದ್ಯಮಗಳು, ಸರ್ಕಾರಗಳು, ತಂತ್ರಜ್ಞಾನ ಅಭಿವೃದ್ಧಿಪಡಿಸುವವರು ಮತ್ತು ಸೃಜನಶೀಲರಿಗೆ ನೆರವಾಗಲು ಸಮಗ್ರವಾದ, 'ಫುಲ್-ಸ್ಟ್ಯಾಕ್ ಸಾರ್ವಭೌಮ ಎಐ' ಪರಿಸರ ವ್ಯವಸ್ಥೆಯನ್ನು ನಿರ್ಮಿಸಿದೆ. ಕಂಪ್ಯೂಟ್ ಮೂಲಸೌಕರ್ಯ, ಮೂಲಭೂತ ಮಾದರಿಗಳು , ಪ್ಲಾಟ್‌ಫಾರ್ಮ್‌ಗಳು ಮತ್ತು ನೈಜ ಅನ್ವಯಿಕೆಗಳನ್ನು  ಒಳಗೊಂಡಂತೆ ಸಂಪೂರ್ಣ ವ್ಯವಸ್ಥೆಯನ್ನು ದೇಶದ ಒಳಗೇ ಅಭಿವೃದ್ಧಿಪಡಿಸಲಾಗಿದೆ. ಈ ಪರಿಸರ ವ್ಯವಸ್ಥೆಯು ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ತಾಂತ್ರಿಕ ಸ್ವಾವಲಂಬನೆಯನ್ನು ಸಾಧಿಸುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ."

ಎಐ ಸ್ಟ್ಯಾಕ್  ಎಂಬುದು ಎಐ ಅಪ್ಲಿಕೇಶನ್‌ಗಳನ್ನು ನಿರ್ಮಿಸಲು ಮತ್ತು ಚಲಾಯಿಸಲು ಒಟ್ಟಾಗಿ ಕೆಲಸ ಮಾಡುವ ಪರಿಕರಗಳು ಮತ್ತು ವ್ಯವಸ್ಥೆಗಳ ಸಂಪೂರ್ಣ ಗುಂಪಾಗಿದೆ. ಈ ಅಪ್ಲಿಕೇಶನ್‌ಗಳು ಸಿರಿಯಂತಹ ದೈನಂದಿನ ಪರಿಕರಗಳಿಂದ ಹಿಡಿದು ಆರೋಗ್ಯ ರೋಗನಿರ್ಣಯ, ಆರ್ಥಿಕ ವಂಚನೆ ಪತ್ತೆ ಮತ್ತು ಸಾರಿಗೆಯಲ್ಲಿ ಬಳಸುವ ಸುಧಾರಿತ ವ್ಯವಸ್ಥೆಗಳವರೆಗೆ ವೈವಿಧ್ಯಮಯವಾಗಿವೆ."

ಸರ್ವಂ ಎಐ  ಪರಿಸರ ವ್ಯವಸ್ಥೆಯು ಈ ಕೆಳಗಿನ ಅಂಶಗಳನ್ನು ಒಳಗೊಂಡಿದೆ:

  • ಸಂಭಾಷಣೆಗಾಗಿ ಸರ್ವಂ: ಇದು ಉದ್ಯಮ-ದರ್ಜೆಯ ಸಂಭಾಷಣಾ ಎಐ ಆಗಿದ್ದು, 11 ಭಾರತೀಯ ಭಾಷೆಗಳಲ್ಲಿ ಮಾನವ ಸಹಜ ಮತ್ತು ಸಾಂಸ್ಕೃತಿಕವಾಗಿ ನಿಖರವಾದ ಧ್ವನಿಗಳನ್ನು ನೀಡುತ್ತದೆ. ಇದು 500 ಮಿಲಿಸೆಕೆಂಡ್‌ಗಿಂತ ಕಡಿಮೆ ವಿಳಂಬದೊಂದಿಗೆ 10 ಕೋಟಿಗೂ ಹೆಚ್ಚು ಸಂವಹನಗಳನ್ನು ನಿರ್ವಹಿಸಬಲ್ಲದು, 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಅಳವಡಿಸಬಹುದು ಮತ್ತು 10 ಪಟ್ಟು ಹೆಚ್ಚಿನ ಲಾಭವನ್ನು  ತಂದುಕೊಡುತ್ತದೆ.

  • ಕೆಲಸಕ್ಕಾಗಿ ಸರ್ವಂ: ಇದು ಏಕೀಕೃತ ಉದ್ಯಮ ಎಐ ಪ್ಲಾಟ್‌ಫಾರ್ಮ್ ಆಗಿದ್ದು, ಎಐ-ಸಹಾಯದ 'ಬಿಲ್ಡ್-ಡಿಬಗ್-ಆಪ್ಟಿಮೈಜ್' ಚಕ್ರದ ಮೂಲಕ ಮೌಲ್ಯ ಸೃಷ್ಟಿಯನ್ನು ವೇಗಗೊಳಿಸುತ್ತದೆ. ಇದು ಮುಕ್ತ ಮತ್ತು ಮಾಡ್ಯುಲರ್ ಆಗಿದ್ದು, ಯಾವುದೇ ಮಾದರಿ, ದತ್ತಾಂಶ ಮೂಲ ಅಥವಾ ಮೂಲಸೌಕರ್ಯದೊಂದಿಗೆ ಸುಲಭವಾಗಿ ಸಂಯೋಜನೆಗೊಳ್ಳುತ್ತದೆ.

  • ವಿಷಯ ನಿರ್ವಹಣೆಗಾಗಿ ಸರ್ವಂ ಎಐ: ಇದು ಧ್ವನಿ ಕ್ಲೋನಿಂಗ್ ಮತ್ತು ನಿಖರವಾದ ಆಡಿಯೋ-ವಿಶುವಲ್ ಸಿಂಕ್‌ನೊಂದಿಗೆ ಬಹುಭಾಷಾ ವೀಡಿಯೊ ಡಬ್ಬಿಂಗ್ ಅನ್ನು ಸಕ್ರಿಯಗೊಳಿಸುತ್ತದೆ. ಇದರ ಜೊತೆಗೆ, ಲೇಔಟ್ ಮತ್ತು ಧ್ವನಿಯನ್ನು ಸಂರಕ್ಷಿಸುವ ದಾಖಲೆಗಳ ಅನುವಾದವನ್ನು ಒದಗಿಸುತ್ತದೆ, ಹಾಗೂ ಗುಣಮಟ್ಟದ ಪರಿಶೀಲನೆ ಮತ್ತು ಎಡಿಟಿಂಗ್ ಪರಿಕರಗಳ ಬೆಂಬಲವನ್ನು ಹೊಂದಿದೆ.

  • ಎಡ್ಜ್ ಇಂಟೆಲಿಜೆನ್ಸ್‌ಗಾಗಿ ಸರ್ವಂ ಎಐ : ಇದು ನೈಜ-ಸಮಯದ ಬಳಕೆಗಾಗಿ ಕಾಂಪ್ಯಾಕ್ಟ್ ಮತ್ತು ಕಡಿಮೆ-ವಿಳಂಬದ ಮಲ್ಟಿಮೋಡಲ್ ಎಐ ಅನ್ನು ಒದಗಿಸುತ್ತದೆ. ಇದು ಎಡ್ಜ್ ಮತ್ತು ಕ್ಲೌಡ್ ಇನ್ಫರೆನ್ಸ್ ಅನ್ನು ಸಂಯೋಜಿಸುವ ಮೂಲಕ ರಿಯಲ್-ಟೈಮ್ ಅಸಿಸ್ಟೆಂಟ್‌ಗಳು, ಆನ್-ಡಿವೈಸ್ ಎನ್‌ಎಲ್‌ಪಿ, ಮತ್ತು ಅತಿ ವೇಗದ ಅನುವಾದ ಹಾಗೂ ಸಾರಾಂಶಗಳನ್ನು ಒದಗಿಸಲು ಶಕ್ತಿ ನೀಡುತ್ತದೆ.

ಈ ಸಮಗ್ರ ವಿನ್ಯಾಸದ ಮೂಲಕ, ಸರ್ವಂ ಎಐ ಕೇವಲ ಅಪ್ಲಿಕೇಶನ್‌ಗಳನ್ನು ನಿರ್ಮಿಸುತ್ತಿಲ್ಲ, ಬದಲಿಗೆ ಭಾರತದ ಎಐ ಭವಿಷ್ಯಕ್ಕಾಗಿ ಸ್ಕೇಲೆಬಲ್ ಡಿಜಿಟಲ್ ಬೆನ್ನೆಲುಬನ್ನು ಸ್ಥಾಪಿಸುತ್ತಿದೆ. ಮೂಲಸೌಕರ್ಯ, ಭಾಷಾ ಬುದ್ಧಿವಂತಿಕೆ, ಉದ್ಯಮ ಸಾಮರ್ಥ್ಯ ಮತ್ತು ಎಡ್ಜ್ ನಿಯೋಜನೆಯನ್ನು ಒಂದು ಸಾರ್ವಭೌಮ ಪರಿಸರ ವ್ಯವಸ್ಥೆಯಲ್ಲಿ ಒಟ್ಟುಗೂಡಿಸುವ ಮೂಲಕ, ಇದು ಭಾರತವನ್ನು ಸ್ವತಂತ್ರವಾಗಿ ಆವಿಷ್ಕರಿಸಲು, ಜವಾಬ್ದಾರಿಯುತವಾಗಿ ಕಾರ್ಯಗತಗೊಳಿಸಲು ಮತ್ತು ಜಾಗತಿಕವಾಗಿ ಸ್ಪರ್ಧಿಸಲು ಅನುವು ಮಾಡಿಕೊಡುತ್ತದೆ. ಅದೇ ಸಮಯದಲ್ಲಿ ಸುಧಾರಿತ ಎಐ ಎಲ್ಲರಿಗೂ ಲಭ್ಯವಿರುವಂತೆ, ಸುರಕ್ಷಿತವಾಗಿರುವಂತೆ ಮತ್ತು ರಾಷ್ಟ್ರೀಯ ಅಭಿವೃದ್ಧಿ ಆದ್ಯತೆಗಳಿಗೆ ಅನುಗುಣವಾಗಿರುವುದನ್ನು ಇದು ಖಚಿತಪಡಿಸುತ್ತದೆ.

ಸಾರ್ವಜನಿಕ ಸೇವಾ ವಿತರಣೆಗಾಗಿ ಕಾರ್ಯತಂತ್ರದ ಪಾಲುದಾರಿಕೆಗಳು

ಸಾರ್ವಂ ಎಐ  ಸಂಸ್ಥೆಯ ಸಾಂಸ್ಥಿಕ ಸಹಯೋಗಗಳು ಭಾರತದಾದ್ಯಂತ ಸ್ವದೇಶಿ ನಾವೀನ್ಯತೆಯನ್ನು ಸಾರ್ವಜನಿಕ ಮೌಲ್ಯವಾಗಿ ಪರಿವರ್ತಿಸುತ್ತಿವೆ. ರಾಷ್ಟ್ರೀಯ ಮತ್ತು ರಾಜ್ಯ ಸರ್ಕಾರಗಳೊಂದಿಗೆ ನಿಕಟವಾಗಿ ಕೆಲಸ ಮಾಡುವ ಮೂಲಕ, ಕಂಪನಿಯು ಸುಧಾರಿತ ಎಐ ಸಾಮರ್ಥ್ಯಗಳನ್ನು ನಿರ್ಣಾಯಕ ಸೇವಾ ವಿತರಣಾ ವ್ಯವಸ್ಥೆಗಳಲ್ಲಿ ಅಳವಡಿಸುತ್ತಿದೆ.

  • ಉದಯ್‌ (ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ): ಎಐ-ಚಾಲಿತ ಧ್ವನಿ ಸಂವಹನ, ನೈಜ-ಸಮಯದ ವಂಚನೆ ಪತ್ತೆ ಮತ್ತು ಬಹುಭಾಷಾ ಬೆಂಬಲದ ಮೂಲಕ ಆಧಾರ್ ಸೇವೆಗಳನ್ನು ಸುಧಾರಿಸಲು ಉದಯ್‌ ಸಾರ್ವಂ ಎಐ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ. ಒಂದು ಕಸ್ಟಮ್ ಜೆನ್-ಎಐ ಸ್ಟ್ಯಾಕ್ ಉದಯ್‌ ನ ಸುರಕ್ಷಿತ ಆವರಣದಲ್ಲಿ ಕಾರ್ಯನಿರ್ವಹಿಸಲಿದ್ದು, 10 ಭಾರತೀಯ ಭಾಷೆಗಳಲ್ಲಿ ದಾಖಲಾತಿ ಪ್ರತಿಕ್ರಿಯೆ ಮತ್ತು ವಂಚನೆಯ ಎಚ್ಚರಿಕೆಗಳನ್ನು ನೀಡಲಿದೆ.

  • ಒಡಿಶಾ ಸರ್ಕಾರ: ಸಾರ್ವಂ ಎಐ ಸಹಯೋಗದೊಂದಿಗೆ ಒಡಿಶಾ ಸರ್ಕಾರವು 50 ಮೆಗಾವ್ಯಾಟ್ (MW) ಸಾಮರ್ಥ್ಯದ 'ಸಾರ್ವಭೌಮ ಎಐ ಸಾಮರ್ಥ್ಯದ ಹಬ್' ಅನ್ನು ಸ್ಥಾಪಿಸುತ್ತಿದೆ. ಇದು ಗಣಿಗಾರಿಕೆ, ಕೈಗಾರಿಕಾ ಸುರಕ್ಷತೆ ಮತ್ತು ಒಡಿಯಾ ಭಾಷೆಯ ಕೌಶಲ್ಯ ಅಭಿವೃದ್ಧಿಯಲ್ಲಿ ಎಐ ಬಳಕೆಯನ್ನು ಬೆಂಬಲಿಸಲಿದ್ದು, ರಾಷ್ಟ್ರೀಯ ಕಂಪ್ಯೂಟ್ ಗ್ರಿಡ್‌ಗೆ ಕೊಡುಗೆ ನೀಡಲಿದೆ.

  • ತಮಿಳುನಾಡು ಸರ್ಕಾರ ಮತ್ತು IIT ಮದ್ರಾಸ್: ಸಾರ್ವಂ ಸಹಯೋಗದೊಂದಿಗೆ ಇವು ಭಾರತದ ಮೊದಲ ಸಾರ್ವಭೌಮ ಎಐ ಸಂಶೋಧನಾ ಪಾರ್ಕ್ ಆದ 'ಡಿಜಿಟಲ್ ಸಂಗಮ್' ಅನ್ನು ಅಭಿವೃದ್ಧಿಪಡಿಸುತ್ತಿವೆ. ಇದು 20 ಮೆಗಾವ್ಯಾಟ್ ಎಐ ದತ್ತಾಂಶ ಕೇಂದ್ರವನ್ನು ಹೊಂದಿದ್ದು, ಸಂಶೋಧನೆ ಮತ್ತು ಸ್ಟಾರ್ಟ್‌ಅಪ್‌ಗಳ ಬೆಳವಣಿಗೆಗೆ ಪೂರಕವಾಗಿರಲಿದೆ.

ಒಟ್ಟಾರೆಯಾಗಿ, ಈ ಉಪಕ್ರಮಗಳು ಸಮನ್ವಯದ ಸಾರ್ವಜನಿಕ ಪಾಲುದಾರಿಕೆಯು ಹೇಗೆ ಸ್ವದೇಶಿ ಎಐ ಮೂಲಸೌಕರ್ಯವನ್ನು ಬೃಹತ್ ಮಟ್ಟದಲ್ಲಿ ಅನ್ವಯಿಸಬಹುದು ಎಂಬುದನ್ನು ತೋರಿಸಿಕೊಡುತ್ತವೆ.

ತೀರ್ಮಾನ

ಸಾರ್ವಂ ಎಐ ಭಾರತದ ದೇಶೀಯ ಎಐ ಮಹತ್ವಾಕಾಂಕ್ಷೆಗಳ ನಿರ್ಣಾಯಕ ಸ್ತಂಭವಾಗಿದ್ದು, 'ಇಂಡಿಯಾ ಎಐ ಮಿಷನ್' ಅಡಿಯಲ್ಲಿ ರಾಷ್ಟ್ರೀಯ ಆದ್ಯತೆಗಳೊಂದಿಗೆ ನಾವೀನ್ಯತೆಯನ್ನು ಬೆಸೆಯುತ್ತಿದೆ. ಭಾರತೀಯ ಭಾಷೆಗಳಲ್ಲಿ ಸ್ವದೇಶಿ ಬೃಹತ್ ಭಾಷಾ ಮತ್ತು ಧ್ವನಿ ಮಾದರಿಗಳನ್ನು ಅಭಿವೃದ್ಧಿಪಡಿಸುವ ಮೂಲಕ, ಸಾರ್ವಂ ಎಐ ಡಿಜಿಟಲ್ ಸೇವೆಗಳ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ ಮತ್ತು ವಿದೇಶಿ ಎಐ ವ್ಯವಸ್ಥೆಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತಿದೆ. ಸಾರ್ವಜನಿಕ ಸೇವೆ, ಸ್ಟಾರ್ಟ್‌ಅಪ್ ಸಬಲೀಕರಣ ಮತ್ತು ಜವಾಬ್ದಾರಿಯುತ ಎಐ ಚೌಕಟ್ಟುಗಳಲ್ಲಿ ಇದು ವಹಿಸುತ್ತಿರುವ ಪಾತ್ರವು, ತಂತ್ರಜ್ಞಾನವನ್ನು ಸಮಗ್ರ ಬೆಳವಣಿಗೆಯ ಸಾಧನವಾಗಿ ಬಳಸುವ ಸರ್ಕಾರದ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ. ಸಾರ್ವಂ ಎಐ ಸ್ಥಿರವಾಗಿ 'ವಿಕಸಿತ ಭಾರತ'ಕ್ಕಾಗಿ ಭವಿಷ್ಯಕ್ಕೆ ಸಿದ್ಧವಾದ, ಬಹುಭಾಷಾ ಮತ್ತು ಜನ-ಕೇಂದ್ರಿತ ಎಐ ಪರಿಸರ ವ್ಯವಸ್ಥೆಗೆ ಅಡಿಪಾಯ ಹಾಕಲು ಸಹಾಯ ಮಾಡುತ್ತಿದೆ.

References:

Sarvam AI

Ministry of Electronics and Information Technology

PIB Headquarters:

Click here to see pdf 

 

*****

 

 

(Explainer ID: 157516) आगंतुक पटल : 96
Provide suggestions / comments
इस विज्ञप्ति को इन भाषाओं में पढ़ें: English , Urdu , Marathi , Bengali , Gujarati , Malayalam