• Skip to Content
  • Sitemap
  • Advance Search
Social Welfare

ಕೃತಕ ಬುದ್ಧಿಮತ್ತೆಯ ಮೂಲಕ ಆರೋಗ್ಯ ರಕ್ಷಣೆ ವಿತರಣೆಯ ರೂಪಾಂತರ

Posted On: 13 FEB 2026 12:58PM

ಪ್ರಮುಖ ಮಾರ್ಗಸೂಚಿಗಳು

  • ಭಾರತ ಸರ್ಕಾರವು ಆರೋಗ್ಯ ರಕ್ಷಣೆ ವಿತರಣೆಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಲು, ವೈದ್ಯಕೀಯ ಉಪಕರಣಗಳು, ಸೇವೆಗಳು ಮತ್ತು ಔಷಧಿಗಳ ಗುಣಮಟ್ಟವನ್ನು ಸುಧಾರಿಸಲು ಹಾಗೂ ಆರೋಗ್ಯ ಸೇವೆಯನ್ನು ಹೆಚ್ಚು ಸುಲಭವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ದೊರೆಯುವಂತೆ ಮಾಡಲು ಕೃತಕ ಬುದ್ಧಿಮತ್ತೆ (ಎಐ) ಸಹಾಯ ಮಾಡುತ್ತಿದೆ.
  • ಎಐ-ಶಕ್ತಗೊಂಡ ಆರೋಗ್ಯ ವ್ಯವಸ್ಥೆಯು ರೋಗಗಳನ್ನು ಆರಂಭಿಕ ಹಂತದಲ್ಲಿ ಪತ್ತೆಹಚ್ಚಲು ಮತ್ತು ಸ್ಕ್ರೀನಿಂಗ್ ಮಾಡಲು, ವೈದ್ಯಕೀಯ ನಿರ್ಧಾರಗಳಿಗೆ ಹೆಚ್ಚಿನ ಬೆಂಬಲ ನೀಡಲು ಹಾಗೂ ದೂರದ ಪ್ರದೇಶಗಳಿಗೆ ವೈದ್ಯಕೀಯ ಆರೈಕೆಯನ್ನು ಒದಗಿಸಲು ಸಹಾಯ ಮಾಡುತ್ತಿದೆ.
  • ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದಡಿ ಬಳಸಲಾದ ಎಐ-ಚಾಲಿತ ಉಪಕರಣಗಳ ಫಲವಾಗಿ, ಕ್ಷಯರೋಗದ ಪ್ರತಿಕೂಲ ಪರಿಣಾಮಗಳಲ್ಲಿ ಶೇಕಡಾ 27 ರಷ್ಟು ಕುಸಿತ ಕಂಡುಬಂದಿದೆ ಮತ್ತು 4,500 ಕ್ಕೂ ಹೆಚ್ಚು ರೋಗ ಹರಡುವಿಕೆಯ ಎಚ್ಚರಿಕೆಗಳನ್ನು ನೀಡಲಾಗಿದೆ.
  • ಏಪ್ರಿಲ್ 2023 ರಿಂದ ನವೆಂಬರ್ 2025 ರ ನಡುವೆ ನಡೆದ 282 ಮಿಲಿಯನ್ ಟೆಲಿಮೆಡಿಸಿನ್ ಸಮಾಲೋಚನೆಗಳು, ಎಐ ಶಿಫಾರಸು ಮಾಡಿದ ರೋಗನಿರ್ಣಯದ ಮೂಲಕ 12 ಮಿಲಿಯನ್ ರೋಗಿಗಳಿಗೆ ನೆರವಾಗಿವೆ.

ಪೀಠಿಕೆ

ಭಾರತದ ಆರೋಗ್ಯ ರಕ್ಷಣೆ ವಿತರಣೆಯ ಕ್ರಾಂತಿಯು ಸಾರ್ವಜನಿಕ ಮತ್ತು ಖಾಸಗಿ ವಲಯಗಳೆರಡರಲ್ಲೂ ಎಐ-ಚಾಲಿತ ರೋಗನಿರ್ಣಯ, ಟೆಲಿಮೆಡಿಸಿನ್ ಮತ್ತು ಕಣ್ಗಾವಲು ಸಾಧನಗಳನ್ನು ಬಳಸಿಕೊಳ್ಳುತ್ತಿದೆ. ಈ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಸಂಯೋಜಿಸುವ ಮೂಲಕ, ಭಾರತ ಸರ್ಕಾರವು 'ಸಾರ್ವತ್ರಿಕ ಆರೋಗ್ಯ ರಕ್ಷಣೆ'ಯ (Universal Health Coverage) ತನ್ನ ಬದ್ಧತೆಯನ್ನು ಪೂರೈಸುತ್ತಿದೆ—ಇದು ಸೇವಾ ವಿತರಣೆಯಲ್ಲಿನ ಲೋಪಗಳನ್ನು ಪರಿಣಾಮಕಾರಿಯಾಗಿ ಸರಿಪಡಿಸುತ್ತಿದೆ, ವೈದ್ಯಕೀಯ ಸೇವೆಗಳು ಮತ್ತು ಉತ್ಪನ್ನಗಳ ಗುಣಮಟ್ಟವನ್ನು ಹೆಚ್ಚಿಸುತ್ತಿದೆ ಮತ್ತು ಪ್ರತಿ ಪ್ರಜೆಗೂ ಕೈಗೆಟುಕುವ ದರದಲ್ಲಿ ಚಿಕಿತ್ಸೆ ಸಿಗುವುದನ್ನು ಖಚಿತಪಡಿಸುತ್ತಿದೆ.

'ಸರ್ವಜನ ಹಿತಾಯ, ಸರ್ವಜನ ಸುಖಾಯ' ಎಂಬ ದೃಷ್ಟಿಕೋನದಿಂದ ಪ್ರೇರಿತವಾದ ಕೇಂದ್ರ ಸಚಿವ ಸಂಪುಟವು, ಒಳಗೊಳ್ಳುವ ಅಭಿವೃದ್ಧಿಯನ್ನು ಉತ್ತೇಜಿಸಲು, ಆಡಳಿತವನ್ನು ಬಲಪಡಿಸಲು ಮತ್ತು ಆರೋಗ್ಯ ರಕ್ಷಣೆ ಸೇರಿದಂತೆ ಸಾರ್ವಜನಿಕ ಸೇವಾ ವಿತರಣೆಯನ್ನು ಸುಧಾರಿಸಲು ಮಾರ್ಚ್ 2024ರಲ್ಲಿ 'ಇಂಡಿಯಾ ಎಐ' ಮಿಷನ್ ಅನ್ನು ಪ್ರಾರಂಭಿಸಿತು. ಈ ಮಿಷನ್ ಎರಡು ಪ್ರಮುಖ ತತ್ವಗಳನ್ನು ಒಳಗೊಂಡಿದೆ:

  • ತಂತ್ರಜ್ಞಾನದ ಪ್ರಜಾಪ್ರಭುತ್ವೀಕರಣ: ಎಐ ಉಪಕರಣಗಳು ಗ್ರಾಮೀಣ ಮತ್ತು ಹಿಂದುಳಿದ ಜನಸಂಖ್ಯೆ ಸೇರಿದಂತೆ ಸಮಾಜದ ಎಲ್ಲಾ ವರ್ಗಗಳನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳುವುದು.
  • ಮಾನವೀಯತೆಗಾಗಿ ತಂತ್ರಜ್ಞಾನ: ಎಐ ಅನ್ನು ಕೇವಲ ತಾಂತ್ರಿಕ ಪ್ರಗತಿಗಾಗಿ ಮಾತ್ರವಲ್ಲದೆ, ನಿರ್ಣಾಯಕ ಸಾಮಾಜಿಕ ಸವಾಲುಗಳನ್ನು ಎದುರಿಸಲು, ಜೀವನದ ಗುಣಮಟ್ಟವನ್ನು ಸುಧಾರಿಸಲು ಮತ್ತು ಸಾರ್ವಜನಿಕ ಒಳಿತನ್ನು ಉತ್ತೇಜಿಸಲು ಬಳಸುವುದು.

ಈ ಸಮಗ್ರ ವಿಧಾನವು 2047ರ ವೇಳೆಗೆ ವಿಕಸಿತ ಭಾರತ'ದತ್ತ ಭಾರತದ ಪ್ರಯಾಣದ ಭಾಗವಾಗಿ ಆರೋಗ್ಯ ರಕ್ಷಣೆ ವಿತರಣೆಯನ್ನು ರೂಪಾಂತರಿಸುವ ಗುರಿಯನ್ನು ಹೊಂದಿದೆ.

ಕೇಂದ್ರ ಸರ್ಕಾರವು ಆರೋಗ್ಯ ರಕ್ಷಣೆ ವಿತರಣೆಯಲ್ಲಿ ಎಐ ನ ಪರಿವರ್ತಕ ಸಾಮರ್ಥ್ಯವನ್ನು ವರ್ಷಗಳ ಹಿಂದೆಯೇ ಗುರುತಿಸಿದೆ. 2018 ರಲ್ಲಿ, ನೀತಿ ಆಯೋಗವು 'ಕೃತಕ ಬುದ್ಧಿಮತ್ತೆಗಾಗಿ ರಾಷ್ಟ್ರೀಯ ಕಾರ್ಯತಂತ್ರ'ವನ್ನು ಪ್ರಕಟಿಸಿತು. ಇದು, ರೊಬೊಟಿಕ್ಸ್ ಮತ್ತು 'ಇಂಟರ್ನೆಟ್ ಆಫ್ ಮೆಡಿಕಲ್ ಥಿಂಗ್ಸ್' ಅನ್ನು ಆರೋಗ್ಯ ರಕ್ಷಣೆಯ "ಹೊಸ ನರಮಂಡಲ" ಎಂದು ಕಲ್ಪಿಸಿಕೊಂಡಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ವಿವಿಧ ರಾಷ್ಟ್ರೀಯ ಕಾರ್ಯಕ್ರಮಗಳು ಅಳವಡಿಸಿಕೊಂಡಿರುವ ಎಐ-ಚಾಲಿತ ಉಪಕರಣಗಳು ಭಾರತದಾದ್ಯಂತ ಆರೋಗ್ಯ ರಕ್ಷಣೆಯ ಪರಿಣತಿಯನ್ನು ಎಲ್ಲರಿಗೂ ತಲುಪಿಸುತ್ತಿವೆ. ಉದಾಹರಣೆಗೆ, ಈ ಉಪಕರಣಗಳು ಮುಂಚೂಣಿ ಕಾರ್ಯಕರ್ತರಿಗೆ ಕ್ಷಯರೋಗ ಮತ್ತು ಡಯಾಬಿಟಿಕ್ ರೆಟಿನೋಪತಿಯನ್ನು ಪತ್ತೆಹಚ್ಚಲು ಸಹಾಯ ಮಾಡುವುದರ ಜೊತೆಗೆ, ದೇಶಾದ್ಯಂತ 282 ಮಿಲಿಯನ್ ಟೆಲಿಮೆಡಿಸಿನ್ ಸಮಾಲೋಚನೆಗಳನ್ನು ಬೆಂಬಲಿಸಿವೆ. ಒಟ್ಟಾರೆಯಾಗಿ ಈ ಪ್ರಯತ್ನಗಳು ಗಮನಾರ್ಹ ಪರಿಣಾಮ ಬೀರಿದ್ದು, ಕ್ಷಯರೋಗದ ಪ್ರತಿಕೂಲ ಪರಿಣಾಮಗಳಲ್ಲಿ ಶೇ. 27 ರಷ್ಟು ಇಳಿಕೆ ಮತ್ತು ರೋಗ ಪತ್ತೆಹಚ್ಚುವಿಕೆಯಲ್ಲಿ ಶೇ. 12-16 ರಷ್ಟು ಹೆಚ್ಚಳ ಕಂಡುಬಂದಿದೆ.

ಇಂಡಿಯಾ-ಎಐ ಇಂಪ್ಯಾಕ್ಟ್ ಸಮಿಟ್ 2026

ಭಾರತವು ಫೆಬ್ರವರಿ 16 ರಿಂದ 20 ರವರೆಗೆ ನವದೆಹಲಿಯಲ್ಲಿ ಜಾಗತಿಕ ದಕ್ಷಿಣದ (Global South) ಮೊದಲ ಅಂತರರಾಷ್ಟ್ರೀಯ ಎಐ ಶೃಂಗಸಭೆಯನ್ನು ಆಯೋಜಿಸಲಿದೆ. ಇದು ಜಾಗತಿಕ ನಾಯಕರು, ನೀತಿ ನಿರೂಪಕರು, ತಂತ್ರಜ್ಞಾನ ಸಂಸ್ಥೆಗಳು, ನಾವೀನ್ಯಕಾರರು ಮತ್ತು ತಜ್ಞರನ್ನು ಒಟ್ಟುಗೂಡಿಸಲಿದೆ. ಈ ಶೃಂಗಸಭೆಯು ಎಐ-ಕೇಂದ್ರಿತ ನೀತಿ, ಸಂಶೋಧನೆ, ಉದ್ಯಮ ಮತ್ತು ಸಾರ್ವಜನಿಕ ಸಹಭಾಗಿತ್ವದ ಕುರಿತು ಚರ್ಚಿಸಲಿದೆ.

A diagram of a diagramAI-generated content may be incorrect.

ಆರೋಗ್ಯ ವಿತರಣೆಯಲ್ಲಿ ಎಐ

ಸಾರ್ವಜನಿಕ ಆರೋಗ್ಯದ ಮೇಲೆ ಧನಾತ್ಮಕ ಪ್ರಭಾವ ಬೀರಲು ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ, ವಿವಿಧ ಸಾರ್ವಜನಿಕ ಆರೋಗ್ಯ ಉಪಕ್ರಮಗಳ ಉತ್ತಮ ವಿತರಣೆಗೆ ಕೃತಕ ಬುದ್ಧಿಮತ್ತೆ (ಎಐ) ಅನುವು ಮಾಡಿಕೊಟ್ಟಿದೆ. ತಂತ್ರಜ್ಞಾನ ಆಧಾರಿತ ಪರಿಹಾರಗಳು ಸುದೀರ್ಘ ಕಾಲದ ಅಭಿವೃದ್ಧಿ ಸವಾಲುಗಳನ್ನು ಹೇಗೆ ಎದುರಿಸಬಲ್ಲವು ಮತ್ತು ಒಳಗೊಳ್ಳುವ ಹಾಗೂ ಸಮಗ್ರ ಸಾಮಾಜಿಕ ಅಭಿವೃದ್ಧಿಯನ್ನು ಹೇಗೆ ಉತ್ತೇಜಿಸಬಲ್ಲವು ಎಂಬುದನ್ನು ಇದು ತೋರಿಸಿಕೊಡುತ್ತದೆ. ಇದು 'ಆತ್ಮನಿರ್ಭರ ಭಾರತ' ಮತ್ತು **'ವಿಕಸಿತ ಭಾರತ'**ದ ಆಶಯವನ್ನು ಪ್ರತಿಬಿಂಬಿಸುತ್ತದೆ.

2022 ರಿಂದ 2025 ರ ಅವಧಿಯಲ್ಲಿ, ಭಾರತವು ಎಐ ಅನ್ನು ಒಂದು ಏಕೀಕೃತ ಕಾರ್ಯತಂತ್ರಕ್ಕೆ ಅಳವಡಿಸುವ ಮೂಲಕ ತನ್ನ ಸಾರ್ವಜನಿಕ ಆರೋಗ್ಯ ವಿತರಣೆಯನ್ನು ಮೂಲಭೂತವಾಗಿ ಮರುಸಂಘಟಿಸಿದೆ. ಇದು ತಜ್ಞ ವೈದ್ಯರ ಕೊರತೆಯನ್ನು ನೀಗಿಸುವಲ್ಲಿ ಮತ್ತು ಸಕ್ರಿಯ ಆರೋಗ್ಯ ರಕ್ಷಣೆಯನ್ನು ವಿಸ್ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ, ರಾಷ್ಟ್ರೀಯ ಡಯಾಬಿಟಿಕ್ ರೆಟಿನೋಪತಿ ಸ್ಕ್ರೀನಿಂಗ್ ಕಾರ್ಯಕ್ರಮ ಮತ್ತು ಮಾಧ್ಯಮ ರೋಗ ಕಣ್ಗಾವಲು ವ್ಯವಸ್ಥೆಯಲ್ಲಿ ಎಐ-ಚಾಲಿತ ಉಪಕರಣಗಳನ್ನು ಅಳವಡಿಸುವ ಮೂಲಕ, ಸರ್ಕಾರವು ತಜ್ಞರಲ್ಲದ ಆರೋಗ್ಯ ಕಾರ್ಯಕರ್ತರಿಗೂ ಉನ್ನತ ಮಟ್ಟದ ಸ್ಕ್ರೀನಿಂಗ್ ನಡೆಸಲು ಶಕ್ತಿ ತುಂಬಿದೆ. ಇದರ ಫಲವಾಗಿ ಕ್ಷಯರೋಗದ ಪ್ರತಿಕೂಲ ಪರಿಣಾಮಗಳಲ್ಲಿ ಶೇ. 27 ರಷ್ಟು ಇಳಿಕೆ ಕಂಡುಬಂದಿದೆ ಮತ್ತು 4,500 ಕ್ಕೂ ಹೆಚ್ಚು ರೋಗ ಹರಡುವಿಕೆಯ ಎಚ್ಚರಿಕೆಗಳನ್ನು ನೀಡಲಾಗಿದೆ. ಈ ರೂಪಾಂತರವು ಇ-ಸಂಜೀವನಿ ಮೂಲಕ ಮತ್ತಷ್ಟು ಬಲಗೊಂಡಿದೆ. ಇದು ಎಐ-ಚಾಲಿತ ರೋಗನಿರ್ಣಯದ ನೆರವಿನೊಂದಿಗೆ 282 ಮಿಲಿಯನ್ ಸಮಾಲೋಚನೆಗಳನ್ನು ಬೆಂಬಲಿಸಿದೆ. ಹಾಗೆಯೇ ಅಪೌಷ್ಟಿಕತೆಯ ಮೇಲ್ವಿಚಾರಣೆಗಾಗಿ 'ಉದ್ಯೋಗಯಂತ್ರ ಎಐ' ವ್ಯವಸ್ಥೆಯನ್ನು ಬಳಸಲಾಗಿದೆ. ಈ ಮೂಲಕ ಸಾಂಕ್ರಾಮಿಕ ರೋಗಗಳ ನಿರ್ವಹಣೆ ಮತ್ತು ಕ್ಯಾನ್ಸರ್ ಆರೈಕೆಯಿಂದ ಹಿಡಿದು, ಸಾಂಪ್ರದಾಯಿಕ ಆಯುರ್ವೇದ ವೈದ್ಯಕೀಯ ಪದ್ಧತಿಯ ಆಧುನೀಕರಣ ಮತ್ತು ರಾಷ್ಟ್ರೀಯ 'ಒನ್ ಹೆಲ್ತ್'  ಕಾರ್ಯಕ್ರಮದವರೆಗೆ ಹರಡಿರುವ ಒಂದು ಸಮಗ್ರ ಪರಿಸರ ವ್ಯವಸ್ಥೆಯನ್ನು ಭಾರತ ನಿರ್ಮಿಸಿದೆ.

A close-up of a hand touching a dna strandAI-generated content may be incorrect.

ಭಾರತ ಸರ್ಕಾರವು 2022 ರಿಂದ 2025ರ ಅವಧಿಯಲ್ಲಿ ಸಾರ್ವಜನಿಕ ಆರೋಗ್ಯ ವಿತರಣೆಯನ್ನು ಸುಧಾರಿಸಲು ಜಾರಿಗೆ ತಂದಿರುವ ಪ್ರಮುಖ ಎಐ-ಚಾಲಿತ (ಕೃತಕ ಬುದ್ಧಿಮತ್ತೆ) ಉಪಕ್ರಮಗಳು ಈ ಕೆಳಗಿನಂತಿವೆ:

ಆರೋಗ್ಯದ ವಿಷಯ

ಎಐ ಪರಿಹಾರ / ಉಪಕ್ರಮ

ಪ್ರಕ್ರಿಯೆ ಮತ್ತು ತಂತ್ರಜ್ಞಾನ

ವೈದ್ಯಕೀಯ / ಕಾರ್ಯಾಚರಣೆಯ ಪ್ರಭಾವ

ಕ್ಷಯರೋಗ ನಿರ್ವಹಣೆ

ಪ್ರತಿಕೂಲ ಫಲಿತಾಂಶಗಳ ಮುನ್ಸೂಚನೆ

ಮುನ್ಸೂಚನಾ ವಿಶ್ಲೇಷಣೆ: ಚಿಕಿತ್ಸೆ ವಿಫಲವಾಗುವ ಅಪಾಯವಿರುವ ರೋಗಿಗಳನ್ನು ಚಿಕಿತ್ಸೆ ಆರಂಭದಲ್ಲೇ ಗುರುತಿಸುತ್ತದೆ.

ದೇಶಾದ್ಯಂತ ಅಳವಡಿಸಿದ ನಂತರ ಪ್ರತಿಕೂಲ ಫಲಿತಾಂಶಗಳಲ್ಲಿ 27% ಇಳಿಕೆ ವರದಿಯಾಗಿದೆ.

ಕ್ಷಯರೋಗ ಪತ್ತೆ

ಡೀಪ್ ಸಿಎಕ್ಸ್‌ಆರ್

ರೇಡಿಯಾಲಜಿ ಎಐ: ಡಿಜಿಟಲ್ ಎಕ್ಸ್‌-ರೇಗಳನ್ನು ಸ್ವಯಂಚಾಲಿತವಾಗಿ ವಿಶ್ಲೇಷಿಸಿ ಶ್ವಾಸಕೋಶದ ಗಂಟು ಅಥವಾ ರಂಧ್ರಗಳನ್ನು ಪತ್ತೆ ಮಾಡುತ್ತದೆ.

8 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಭ್ಯವಿದೆ; ತಜ್ಞರ ಕೊರತೆಯನ್ನು ನೀಗಿಸಲು ಉಚಿತವಾಗಿ ನೀಡಲಾಗಿದೆ.

ಮಧುಮೇಹ

ಮಧುನೇತ್ರ ಎಐ

ರೆಟಿನಾ ಟ್ರಯಾಜ್: ತಜ್ಞರಲ್ಲದವರು ತೆಗೆದ ಕಣ್ಣಿನ ರೆಟಿನಾ ಫೋಟೋಗಳನ್ನು ಎಐ ವಿಶ್ಲೇಷಿಸಿ ತುರ್ತು ಚಿಕಿತ್ಸೆಯ ಅಗತ್ಯವಿರುವವರನ್ನು ಗುರುತಿಸುತ್ತದೆ.

38 ಸೌಲಭ್ಯಗಳಲ್ಲಿ 7,100 ರೋಗಿಗಳಿಗೆ ಅನುಕೂಲ; ಡಿಸೆಂಬರ್ 2025 ರಲ್ಲಿ ಭಾರತದ ಮೊದಲ ಎಐ ಸಮುದಾಯ ಸ್ಕ್ರೀನಿಂಗ್ ಕಾರ್ಯಕ್ರಮ ಆರಂಭ.

ಟೆಲಿಮೆಡಿಸಿನ್

ಇ-ಸಂಜೀವನಿ ಸಿಡಿಎಸ್‌ಎಸ್‌

ರೋಗನಿರ್ಣಯ ನೆರವು: ರೋಗಿಗಳ ದೂರುಗಳನ್ನು ಆಧರಿಸಿ ಎಐ ಮೂಲಕ ಸಂಭವನೀಯ ರೋಗನಿರ್ಣಯದ ಶಿಫಾರಸುಗಳನ್ನು ನೀಡುತ್ತದೆ.

ಏಪ್ರಿಲ್ 2023 - ನವೆಂಬರ್ 2025 ರವರೆಗೆ 282 ಮಿಲಿಯನ್ ಸಮಾಲೋಚನೆಗಳು; 12 ಮಿಲಿಯನ್ ಜನರಿಗೆ ಎಐ ಶಿಫಾರಸಿನಿಂದ ನೇರ ಸಹಾಯ.

ಸಾಂಪ್ರದಾಯಿಕ ವೈದ್ಯಕೀಯ

ಆಯುರ್ಜೆನೊಮಿಕ್ಸ್ ಮತ್ತು ಆಯುಷ್ ಗ್ರಿಡ್

ಜೀನೋಮಿಕ್-ಆಯುರ್ವೇದ ಹೈಬ್ರಿಡ್: ಪ್ರಕೃತಿ ಮತ್ತು ಪ್ರಾಚೀನ ಪಠ್ಯಗಳ ಆಧಾರದ ಮೇಲೆ ರೋಗದ ಗುರುತುಗಳನ್ನು ಪತ್ತೆಹಚ್ಚಲು ಎಐ ಬಳಕೆ.

ಜುಲೈ 2025 ರಲ್ಲಿ ಡಬ್ಲು ಎಚ್‌ಒ ನಿಂದ ಜಾಗತಿಕ ಮಾದರಿ ಎಂದು ಮಾನ್ಯತೆ ಪಡೆದಿದೆ.

ಕ್ಯಾನ್ಸರ್ ಆರೈಕೆ

ಇಮೇಜಿಂಗ್ ಬಯೋಬ್ಯಾಂಕ್

ದತ್ತಾಂಶ ಸಂಶೋಧನೆ: 20,000 ಕ್ಕೂ ಹೆಚ್ಚು ಕ್ಯಾನ್ಸರ್ ರೋಗಿಗಳ ಪ್ರೊಫೈಲ್‌ಗಳ (ರೇಡಿಯಾಲಜಿ/ಪಾಥಾಲಜಿ) ದತ್ತಸಂಚಯ ನಿರ್ಮಾಣ.

ಕ್ಯಾನ್ಸರ್ ಅನ್ನು ಮೊದಲೇ ಪತ್ತೆಹಚ್ಚಲು ಹೆಚ್ಚಿನ ನಿಖರತೆಯ ಎಐ ಉಪಕರಣಗಳ ಅಭಿವೃದ್ಧಿಗೆ ನೆರವು.

ಆರೋಗ್ಯ ವಂಚನೆ ತಡೆ

ಎಬಿ-ಪಿಎಂಜೆಎವೈ ಆಂಟಿ-ಫ್ರಾಡ್

ಸಮಗ್ರ ನಿರ್ವಹಣೆ: ಎಐ/ಎಂಎಲ್ ಮೂಲಕ ಅನುಮಾನಾಸ್ಪದ ವಹಿವಾಟುಗಳನ್ನು ಪತ್ತೆಹಚ್ಚಿ ಪಿಎಂ-ಜೆಎವೈ ಯೋಜನೆಯಲ್ಲಿ ವಂಚನೆ ತಡೆಗಟ್ಟುತ್ತದೆ.

ವಂಚನೆ ಪತ್ತೆಹಚ್ಚುವಿಕೆಯನ್ನು 'ಪ್ರತಿಕ್ರಿಯಾತ್ಮಕ' ಹಂತದಿಂದ 'ಸಕ್ರಿಯ' ಹಂತಕ್ಕೆ ಬದಲಾಯಿಸಿದೆ.

ರೋಗ ಕಣ್ಗಾವಲು

ಮಾಧ್ಯಮ ರೋಗ ಕಣ್ಗಾವಲು

ಮುನ್ಸೂಚನೆ: ರಾಷ್ಟ್ರೀಯ ಡಿಜಿಟಲ್ ಸುದ್ದಿಗಳ ಮೂಲಗಳನ್ನು ಸ್ಕ್ಯಾನ್ ಮಾಡಿ ವಿಚಿತ್ರ ಜ್ವರ ಅಥವಾ ರೋಗ ಲಕ್ಷಣಗಳನ್ನು ಪತ್ತೆ ಮಾಡುತ್ತದೆ.

ಪ್ರಾದೇಶಿಕ ರೋಗ ಹರಡುವಿಕೆ ತಡೆಯಲು ಏಪ್ರಿಲ್ 2022 ರಿಂದ 4,500 ಕ್ಕೂ ಹೆಚ್ಚು ಎಚ್ಚರಿಕೆಗಳನ್ನು ನೀಡಲಾಗಿದೆ.

ಈ ಉಪಕರಣಗಳು ಸುರಕ್ಷಿತ ಮತ್ತು ಪ್ರಮಾಣಿತವಾಗಿವೆ ಎಂದು ಖಚಿತಪಡಿಸಿಕೊಳ್ಳಲು ಸರ್ಕಾರವು ಒಂದು ಮೂಲಭೂತ ಸ್ತರವನ್ನು ಸ್ಥಾಪಿಸಿದೆ:

  • ಎಐ ಗಾಗಿ ಉತ್ಕೃಷ್ಟತಾ ಕೇಂದ್ರಗಳು: ಮಾರ್ಚ್ 2025 ರಲ್ಲಿ ಹೆಸರಿಸಲಾದಂತೆ, ಏಮ್ಸ್ ದೆಹಲಿ, ಪಿಜಿಐಎಂಇಆರ್ ಚಂಡೀಗಢ ಮತ್ತು ಏಮ್ಸ್ ರಿಷಿಕೇಶ್‌ಗಳು ಸ್ವದೇಶಿ ಎಐ ಪರಿಹಾರಗಳ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿವೆ. ಇದರ ಜೊತೆಗೆ, ಆರೋಗ್ಯ ಕ್ಷೇತ್ರದಲ್ಲಿ ಎಐ ಸಂಬಂಧಿತ ಬೆಳವಣಿಗೆಗಳ ನೇತೃತ್ವ ವಹಿಸಲು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿರುವ ಶಿಕ್ಷಣ ಸಚಿವಾಲಯದ ಆರೋಗ್ಯ ರಕ್ಷಣೆ ಉತ್ಕೃಷ್ಟತಾ ಕೇಂದ್ರದೊಂದಿಗೆ ಒಪ್ಪಂದ ಮಾಡಿಕೊಂಡಿದೆ.
  • ರಾಷ್ಟ್ರೀಯ ಫೆಡರೇಟೆಡ್ ಲರ್ನಿಂಗ್ ಪ್ಲಾಟ್‌ಫಾರ್ಮ್: ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಅಡಿಯಲ್ಲಿ ಪರಿಸರ ವ್ಯವಸ್ಥೆಯ ಪಾಲುದಾರರಿಂದ ಲಭ್ಯವಿರುವ ದತ್ತಾಂಶವನ್ನು ಬಳಸಿ, ಎಐ ಆರೋಗ್ಯ ಮಾದರಿಗಳನ್ನು ಮೌಲ್ಯೀಕರಿಸಲು ಮುಕ್ತ ಮಾನದಂಡದ ವೇದಿಕೆಯನ್ನು ರಚಿಸಲು ಅಕ್ಟೋಬರ್ 14, 2024 ರಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ಮತ್ತು ಐಐಟಿ ಕಾನ್ಪುರ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
  • ನೈತಿಕ ಮೇಲ್ವಿಚಾರಣೆ: ಗೌಪ್ಯತೆಯನ್ನು ಕಾಪಾಡಲು ಮತ್ತು ಸುರಕ್ಷಿತ ದತ್ತಾಂಶ ವಿನಿಮಯವನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಎಐ ಅಳವಡಿಕೆಗಳು ಐಸಿಎಂಆರ್ ನೈತಿಕ ಮಾರ್ಗಸೂಚಿಗಳು (2023) ಮತ್ತು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಎಐ ಆಡಳಿತ ಮಾರ್ಗಸೂಚಿಗಳನ್ನು ಅನುಸರಿಸುತ್ತವೆ.
  • ಭಾರತದ ಆರೋಗ್ಯ ರಕ್ಷಣೆಯಲ್ಲಿ ಎಐ ಕಾರ್ಯತಂತ್ರ: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ವಿಶಿಷ್ಟ ಎಐ ಕಾರ್ಯತಂತ್ರದ ಕುರಿತು ಕೆಲಸ ಮಾಡುತ್ತಿದೆ. ಈ ಕಾರ್ಯತಂತ್ರವನ್ನು ವಿವಿಧ ಸಾರ್ವಜನಿಕ ಮತ್ತು ಖಾಸಗಿ ಪಾಲುದಾರರೊಂದಿಗೆ ಸಮಾಲೋಚನೆ ನಡೆಸಿದ ನಂತರ ಸಿದ್ಧಪಡಿಸಲಾಗಿದೆ.

A screenshot of a food trayAI-generated content may be incorrect.

ಮಹಾರಾಷ್ಟ್ರದ ಎಟಪಲ್ಲಿ ಜಿಲ್ಲೆಯಲ್ಲಿ ಭಾರತೀಯ ಆಡಳಿತ ಸೇವೆಯ ಅಧಿಕಾರಿಯೊಬ್ಬರು ಸಮಗ್ರ ಬುಡಕಟ್ಟು ಅಭಿವೃದ್ಧಿ ಕಾರ್ಯಕ್ರಮದ ಮೇಲ್ವಿಚಾರಣೆ ನಡೆಸುತ್ತಿದ್ದರು. ಸರ್ಕಾರದಿಂದ ಅನುದಾನಿತ ಊಟ ನೀಡುತ್ತಿದ್ದರೂ ಸಹ, ಅಲ್ಲಿನ ವಿದ್ಯಾರ್ಥಿಗಳಲ್ಲಿ ಅಪೌಷ್ಟಿಕತೆಯ ಸ್ಪಷ್ಟ ಲಕ್ಷಣಗಳು ಕಂಡುಬರುವುದನ್ನು ಅವರು ಗಮನಿಸಿದರು. ತೊಡ್ಸಾ ಆಶ್ರಮ ಶಾಲೆಯಲ್ಲಿ ನಡೆಸಿದ ತಪಾಸಣೆಯು ಅಲ್ಲಿನ ಶೇ. 27 ರಷ್ಟು ವಿದ್ಯಾರ್ಥಿಗಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂಬ ಅಂಶವನ್ನು ಹೊರಹಾಕಿತು. ಇದಕ್ಕೆ ಪರಿಹಾರವಾಗಿ ಗುಪ್ತಾ ಅವರು ಮಕ್ಕಳಿಗೆ ನೀಡುವ ಆಹಾರದ ಕ್ರಮವನ್ನು ಮಾರ್ಪಡಿಸಲು ನಿರ್ಧರಿಸಿದರು. ಸರ್ಕಾರ ನಿಗದಿಪಡಿಸಿದ ಮೆನುಗೆ ಅನುಗುಣವಾಗಿ ಬಡಿಸಲಾಗುವ ಆಹಾರದ ಗುಣಮಟ್ಟವನ್ನು ಮೌಲ್ಯಮಾಪನ ಮಾಡಲು ಎಐ ಶಕ್ತಿಯುಳ್ಳ ಯಂತ್ರವನ್ನು ಪರಿಚಯಿಸಲಾಯಿತು. ಈ ಯಂತ್ರವು ಸುಧಾರಿತ ಚಿತ್ರ ಗುರುತಿಸುವಿಕೆ ತಂತ್ರಜ್ಞಾನವನ್ನು ಹೊಂದಿದ್ದು, ಆಹಾರದ ತಾಪಮಾನ ಮತ್ತು ನೋಟ ಸೇರಿದಂತೆ 2,100 ಕ್ಕೂ ಹೆಚ್ಚು ದತ್ತಾಂಶ ಅಂಶಗಳನ್ನು ವಿಶ್ಲೇಷಿಸುವ ಸಾಮರ್ಥ್ಯವನ್ನು ಹೊಂದಿದೆ.

A group of people standing in front of a displayAI-generated content may be incorrect.

ಈ ಯಂತ್ರವನ್ನು ಅಳವಡಿಸಿದ ನಂತರ ನಡೆಸದ ವಿಶ್ಲೇಷಣೆಯಲ್ಲಿ, ಬಡಿಸಲಾಗುತ್ತಿದ್ದ ಅನೇಕ ಊಟಗಳು ಸರ್ಕಾರ ನಿಗದಿಪಡಿಸಿದ ಮೆನುಗೆ ಹೊಂದಿಕೆಯಾಗುತ್ತಿಲ್ಲ ಎಂಬ ಅಂಶ ಬೆಳಕಿಗೆ ಬಂದಿತು. ವಿದ್ಯಾರ್ಥಿಗಳು ಹಣ್ಣುಗಳು ಅಥವಾ ಪ್ರೋಟೀನ್-ಭರಿತ ಪದಾರ್ಥಗಳಿಂದ ವಂಚಿತರಾಗುತ್ತಿರುವುದನ್ನು ಈ ವಿಶ್ಲೇಷಣೆ ತೋರಿಸಿತು. ಅಸಮರ್ಪಕ ಅಡುಗೆ ತಯಾರಿಕೆ, ಅತಿಯಾಗಿ ಬೇಯಿಸಿದ ತರಕಾರಿಗಳು ಮತ್ತು ಹಾಳಾದ ಪದಾರ್ಥಗಳ ಬಳಕೆಯಿಂದಾಗಿ ಪೌಷ್ಟಿಕಾಂಶದ ಕೊರತೆ ಮತ್ತಷ್ಟು ಉಲ್ಬಣಗೊಂಡಿತ್ತು. ಈ ಎಐ-ಚಾಲಿತ ಯಂತ್ರವು ಅಧಿಕಾರಿಗಳಿಗೆ ಕಟ್ಟುನಿಟ್ಟಾದ ಅನುಸರಣೆ ನಿಯಮಗಳನ್ನು ಜಾರಿಗೆ ತರಲು ಮತ್ತು ಆಹಾರ ಪೂರೈಕೆದಾರರ ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡಿತು. ಇದು ಮಕ್ಕಳ ಪೌಷ್ಟಿಕಾಂಶದ ಮಟ್ಟದಲ್ಲಿ ಗಮನಾರ್ಹ ಸುಧಾರಣೆಗೆ ಕಾರಣವಾಯಿತು. ಈ ಯಶಸ್ವಿ ಮಾದರಿಯನ್ನು ಜಿಲ್ಲೆಯಾದ್ಯಂತದ ಹಲವಾರು ಶಾಲೆಗಳಲ್ಲಿ ಅಳವಡಿಸಲಾಯಿತು.

ಪ್ರಾದೇಶಿಕ ಮುಕ್ತ ಡಿಜಿಟಲ್ ಆರೋಗ್ಯ ಶೃಂಗಸಭೆ 2025

ಪ್ರಾದೇಶಿಕ ಮುಕ್ತ ಡಿಜಿಟಲ್ ಆರೋಗ್ಯ ಶೃಂಗಸಭೆ 2025 ನವೆಂಬರ್ 19-20 ರಂದು ನವದೆಹಲಿಯಲ್ಲಿ ನಡೆಯಿತು. ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ರಾಷ್ಟ್ರೀಯ ಇ-ಗವರ್ನೆನ್ಸ್ ವಿಭಾಗ, ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾ ಪ್ರಾದೇಶಿಕ ಕಚೇರಿ ಮತ್ತು ಯುನಿಸೆಫ್ ಸಹಯೋಗದೊಂದಿಗೆ ಈ ಶೃಂಗಸಭೆಯನ್ನು ಆಯೋಜಿಸಿತ್ತು. ಈ ಶೃಂಗಸಭೆಯು ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾ ವಲಯದ ನೀತಿ ನಿರೂಪಕರು, ತಂತ್ರಜ್ಞರು, ಸಾರ್ವಜನಿಕ ಆರೋಗ್ಯ ನಾಯಕರು ಮತ್ತು ಜಾಗತಿಕ ತಜ್ಞರನ್ನು ಒಟ್ಟುಗೂಡಿಸಿತು. ದೃಢವಾದ ಆಡಳಿತ, ಮುಕ್ತ ಮಾನದಂಡಗಳು ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಮೂಲಕ ತನ್ನ ಡಿಜಿಟಲ್ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸುವಲ್ಲಿ ಭಾರತದ ಪ್ರಯಾಣವನ್ನು ಈ ಚರ್ಚೆಗಳು ಎತ್ತಿ ತೋರಿಸಿದವು. ಆರೋಗ್ಯ ರಕ್ಷಣೆಯಲ್ಲಿ ಜನರೇಟಿವ್ ಎಐ ಬಳಕೆ, ಎಐ-ಚಾಲಿತ ಕಣ್ಗಾವಲು ಮತ್ತು ರೋಗನಿರ್ಣಯ, ವೇಗದ ರೋಗ ಪತ್ತೆಹಚ್ಚುವಿಕೆ, ಆರಂಭಿಕ ಹಂತದಲ್ಲಿ ರೋಗ ಹರಡುವಿಕೆಯ ಮುನ್ಸೂಚನೆ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಬೆಂಬಲ ನೀಡುವುದು ಈ ಶೃಂಗಸಭೆಯ ಪ್ರಮುಖ ಉದ್ದೇಶಗಳಾಗಿದ್ದವು. ಇದರೊಂದಿಗೆ ಇತರ ಆರೋಗ್ಯ ಕಾರ್ಯಕ್ರಮಗಳಲ್ಲಿ ಎಐ ಅನ್ನು ಸಂಯೋಜಿಸುವ ಬಗ್ಗೆಯೂ ಗಮನ ಹರಿಸಲಾಯಿತು. ಶ್ರೀಲಂಕಾ, ನೇಪಾಳ, ಭೂತಾನ್, ಬಾಂಗ್ಲಾದೇಶ ಮತ್ತು ತೈಮೂರ್-ಲೆಸ್ಟೆ ದೇಶಗಳ ಪ್ರತಿನಿಧಿಗಳು ಹಾಗೂ ಡಬ್ಲು ಎಚ್‌ಒ-ಎಸ್‌ಇಎಆರ್‌ಒ, ಯುನಿಸೆಫ್‌ನ ಹಿರಿಯ ಅಧಿಕಾರಿಗಳು ಮತ್ತು ಸದಸ್ಯ ರಾಷ್ಟ್ರಗಳ ಡಿಜಿಟಲ್ ಆರೋಗ್ಯ ನಾಯಕರು ಈ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು.

ಇಂಡಿಯಾ ಎಐ ಮಿಷನ್ ಆರೋಗ್ಯ ರಕ್ಷಣಾ ಉಪಕ್ರಮಗಳು

ಮಾರ್ಚ್ 2024 ರಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಭಾರತದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸಲು ₹10,371.92 ಕೋಟಿ ಬಜೆಟ್ ವೆಚ್ಚದ ಸಮಗ್ರ ರಾಷ್ಟ್ರಮಟ್ಟದ 'ಇಂಡಿಯಾ ಎಐ' ಮಿಷನ್ ಅನ್ನು ಅನುಮೋದಿಸಿತು.

ಇಂಡಿಯಾ ಎಐ ಮಿಷನ್‌ನ ಉಪಕ್ರಮಗಳು ಎಐ-ಚಾಲಿತ ಆರೋಗ್ಯ ರಕ್ಷಣಾ ಅಪ್ಲಿಕೇಶನ್‌ಗಳಲ್ಲಿ ನಾವೀನ್ಯತೆಯನ್ನು ಬೆಂಬಲಿಸುತ್ತಿವೆ. ಈ ಮಿಷನ್‌ನ ಪ್ರಮುಖ ಸ್ತಂಭಗಳಲ್ಲಿ ಒಂದಾದ 'ಇಂಡಿಯಾ ಎಐ ಅಪ್ಲಿಕೇಶನ್ ಡೆವಲಪ್ಮೆಂಟ್ ಇನಿಶಿಯೇಟಿವ್', ರಾಷ್ಟ್ರೀಯ ಸವಾಲುಗಳನ್ನು ಎದುರಿಸಲು ವಿನ್ಯಾಸಗೊಳಿಸಲಾದ ಪರಿಣಾಮಕಾರಿ ಎಐ ಪರಿಹಾರಗಳನ್ನು ಅಭಿವೃದ್ಧಿಪಡಿಸುವ, ವಿಸ್ತರಿಸುವ ಮತ್ತು ಅವುಗಳ ಅಳವಡಿಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಸುಧಾರಿತ ಮತ್ತು ದಕ್ಷ ಎಐ-ಚಾಲಿತ ಆರೋಗ್ಯ ವಿತರಣೆಯು ಈ ಉಪಕ್ರಮದ ಪ್ರಮುಖ ಫಲಿತಾಂಶಗಳಲ್ಲಿ ಒಂದಾಗಿದೆ.

ಮಾರ್ಚ್ 2025 ರ ಹೊತ್ತಿಗೆ, ಇಂಡಿಯಾ ಎಐ ಅಪ್ಲಿಕೇಶನ್ ಡೆವಲಪ್‌ಮೆಂಟ್ ಇನಿಶಿಯೇಟಿವ್ ಅಡಿಯಲ್ಲಿ ಆಯ್ಕೆಯಾದ ಆರೋಗ್ಯಕ್ಕೆ ಸಂಬಂಧಿಸಿದ ಎಐ ಪರಿಹಾರಗಳು ಈ ಕೆಳಗಿನಂತಿವೆ:

ಪರಿಹಾರದ ಹೆಸರು

ಪರಿಹಾರದ ವಿವರಣೆ

ಹಂತ

ನಿದಾನ್

ಎದೆಯ ಕ್ಷ-ಕಿರಣಗಳನ್ನು ವಿಶ್ಲೇಷಿಸುವ ಸುಧಾರಿತ ಎಐ ಸಾಧನವಾಗಿದ್ದು, ಇದು ಕ್ಷಯರೋಗ ಸೇರಿದಂತೆ 30ಕ್ಕೂ ಹೆಚ್ಚು ಆರೋಗ್ಯ ಸಮಸ್ಯೆಗಳನ್ನು ಗುರುತಿಸುತ್ತದೆ.

ಪರಿಹಾರ

ರೇಡಿಯಾಲಜಿ ರೋಗನಿರ್ಣಯಕ್ಕಾಗಿ ಎಂಡ್-ಟು-ಎಂಡ್ ಎಐ ಕ್ಲೌಡ್ ಪ್ಲಾಟ್ಫಾರ್ಮ್

ಕಂಪ್ಯೂಟರ್ ವಿಷನ್, ಜನರೇಟಿವ್ ಎಐ ಮತ್ತು ನ್ಯಾಚುರಲ್ ಲ್ಯಾಂಗ್ವೇಜ್ ಪ್ರೊಸೆಸಿಂಗ್ ತಂತ್ರಜ್ಞಾನಗಳನ್ನು ಬಳಸಿ ರೇಡಿಯಾಲಜಿ ವರದಿಗಳನ್ನು ನೀಡುವ ಕ್ಲೌಡ್ ವೇದಿಕೆ.

ಪರಿಹಾರ

ದೃಷ್ಟಿಹೀನತೆ ತಡೆಗಟ್ಟುವ ಎಐ ಪರಿಹಾರ

ದೃಷ್ಟಿ ಕಳೆದುಕೊಳ್ಳುವ ಅಪಾಯವಿರುವ ರೆಟಿನಾ ಸಂಬಂಧಿತ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚುವ ಮೂಲಕ ಸಾಮಾಜಿಕ ಬದಲಾವಣೆ ತರುವುದು.

ಪರಿಹಾರ

ಎಐ ಚಾಲಿತ ವೇರಬಲ್ ತಂತ್ರಜ್ಞಾನ

ಸ್ನಾಯು ಮತ್ತು ಮೂಳೆಗಳ ಕೀಲು ನೋವು ಪತ್ತೆಹಚ್ಚಲು ಮತ್ತು ಪುನರ್ವಸತಿ ಚಿಕಿತ್ಸೆಗಾಗಿ ವಿನ್ಯಾಸಗೊಳಿಸಲಾದ ಎಐ ತಂತ್ರಜ್ಞಾನದ ಧರಿಸಬಹುದಾದ ಉಪಕರಣ.

ಪರಿಹಾರ

ವೋಕ್ಸೆಲ್ಬಾಕ್ಸ್

ಮಾನವ ಮೆದುಳಿನ ಕಾರ್ಯಚಟುವಟಿಕೆಗಳು ಮತ್ತು ಸಂಕೀರ್ಣ ಸಂಪರ್ಕಗಳನ್ನು ಮ್ಯಾಪಿಂಗ್ ಮಾಡುವ ನ್ಯೂರೋ-ಇನ್ಫರ್ಮ್ಯಾಟಿಕ್ಸ್ ವೇದಿಕೆ.

ಮೂಲಮಾದರಿ

ಒಸೆಲಕ್ಸ್

ಮಧುಮೇಹದಿಂದ ಬರುವ ಕಣ್ಣಿನ ಕಾಯಿಲೆಗಳು ಗ್ಲುಕೋಮಾ ಇತ್ಯಾದಿಗಳನ್ನು ಪತ್ತೆಹಚ್ಚಲು ಎಐ ಚಾಲಿತ, ಸುಲಭವಾಗಿ ಒಯ್ಯಬಹುದಾದ ರೆಟಿನಾ ಇಮೇಜಿಂಗ್ ಸಾಧನ.

ಮೂಲಮಾದರಿ

ಡಾಕ್ಟರ್-ಲೆಡ್ ಎಐ

ಉಚಿತವಾಗಿ ಮತ್ತು ದಿನದ 24 ಗಂಟೆಯೂ ಲಭ್ಯವಿರುವ ಎಐ ವೈಯಕ್ತಿಕ ವೈದ್ಯ. ಇದು ಧರಿಸಬಹುದಾದ ಉಪಕರಣಗಳ ಮೂಲಕ ಆರೋಗ್ಯದ ಮೇಲೆ ನಿಗಾ ಇಡುತ್ತದೆ ಮತ್ತು ಆರೋಗ್ಯ ತರಬೇತುದಾರನಂತೆ ಕೆಲಸ ಮಾಡುತ್ತದೆ.

ಮೂಲಮಾದರಿ

ಮ್ಯಾಫ್ಪ್ರೊ

ಕ್ಯಾನ್ಸರ್ ಯಾವ ಹಂತದಲ್ಲಿದೆ ಮತ್ತು ಎಲ್ಲಿ ಹರಡಿದೆ ಎಂಬುದನ್ನು ವಿಕಿರಣವಿಲ್ಲದೆ, ಸುರಕ್ಷಿತವಾಗಿ ಪತ್ತೆಹಚ್ಚುವ ಎಐ ಚಾಲಿತ ಕೈಯಲ್ಲಿ ಹಿಡಿಯಬಹುದಾದ ಸಾಧನ.

ಮೂಲಮಾದರಿ

ಎಐ-ಚಾಲಿತ ಆರೋಗ್ಯ ವಿತರಣೆಗೆ ಖಾಸಗಿ ವಲಯದ ಕೊಡುಗೆಗಳು

ಸರ್ಕಾರದ ಪ್ರಮುಖ ಸಾರ್ವಜನಿಕ ನೀತಿ ರಚನಾ ಸಂಸ್ಥೆಯಾದ ನೀತಿ ಆಯೋಗವು, ಆರೋಗ್ಯ ಕ್ಷೇತ್ರದಲ್ಲಿ ಖಾಸಗಿ ವಲಯದ ಗಮನಾರ್ಹ ಮತ್ತು ನಾವೀನ್ಯತೆಯ ಕೊಡುಗೆಗಳನ್ನು ಗುರುತಿಸಿದೆ. ಈ ಕೆಲವು ಪ್ರಮುಖ ಎಐ-ಚಾಲಿತ ಉಪಕ್ರಮಗಳು ಈ ಕೆಳಗಿನಂತಿವೆ:

ಆರೋಗ್ಯದ ವಿಷಯ

ಎಐ ಪರಿಹಾರ / ಉಪಕ್ರಮ

ತಂತ್ರಜ್ಞಾನ ಮತ್ತು ಚಿಕಿತ್ಸಾ ಅನುಭವ

ವೈದ್ಯಕೀಯ / ಕಾರ್ಯಾಚರಣೆಯ ಪ್ರಭಾವ

ವೈಯಕ್ತಿಕ ಆರೋಗ್ಯ ದಾಖಲೆಗಳು

ಮೈ ಡಿಜಿ ರೆಕಾರ್ಡ್ಸ್

ರೋಗಿ ಕೇಂದ್ರಿತ ವೇದಿಕೆ: ಲಸಿಕೆ ಮತ್ತು ಔಷಧಿ ನೆನಪಿಸುವ ಮೊಬೈಲ್ ಆಪ್. ಇದರಲ್ಲಿರುವ 'ಸ್ಮಾರ್ಟ್ ವೈಟಲ್ಸ್' ಮುಖದ ವಿಡಿಯೋ ವಿಶ್ಲೇಷಣೆಯ ಮೂಲಕ ಹೃದಯ ಬಡಿತ ಮತ್ತು ರಕ್ತದೊತ್ತಡವನ್ನು ಅಂದಾಜಿಸುತ್ತದೆ.

40,000+ ಬಳಕೆದಾರರು; 20+ ಆಸ್ಪತ್ರೆಗಳಿಂದ ಶಿಫಾರಸು. ಅಭಾ ಐಡಿಯೊಂದಿಗೆ ಲಿಂಕ್ ಆಗಿದ್ದು ನಿರಂತರ ಚಿಕಿತ್ಸೆಗೆ ಸಹಕಾರಿ.

ತಾಯಿಯ ಆರೈಕೆ

ಕೇರ್ ಎನ್ ಎಕ್ಸ್

ಸಮಗ್ರ ವ್ಯವಸ್ಥೆ: ಗರ್ಭಿಣಿಯರ ರಕ್ತದೊತ್ತಡ, ಹಿಮೋಗ್ಲೋಬಿನ್ ಮತ್ತು ಭ್ರೂಣದ ಹೃದಯ ಬಡಿತವನ್ನು ಮನೆ ಬಾಗಿಲಲ್ಲೇ ಪರೀಕ್ಷಿಸಲು ಮುಂಚೂಣಿ ಕಾರ್ಯಕರ್ತರಿಗೆ ಪೋರ್ಟಬಲ್ ಕಿಟ್‌ಗಳನ್ನು ನೀಡುತ್ತದೆ.

20ಕ್ಕೂ ಹೆಚ್ಚು ರಾಜ್ಯಗಳಲ್ಲಿ 5 ಲಕ್ಷಕ್ಕೂ ಹೆಚ್ಚು ತಾಯಂದಿರಿಗೆ ನೆರವು. ಚಿಕಿತ್ಸಾ ವೆಚ್ಚವನ್ನು ಕಡಿಮೆ ಮಾಡಿದೆ.

ನವಜಾತ ಶಿಶುಗಳ ಮೇಲ್ವಿಚಾರಣೆ

ನೆಮೋಕೇರ್ ರಕ್ಷಾ

ವೇರಬಲ್  ಐಒಟಿ/ಎಐ: ನವಜಾತ ಶಿಶುಗಳಿಗೆ ತೊಡಿಸುವ ಸಾಕ್ಸ್ ಮಾದರಿಯ ಉಪಕರಣ. ಇದು ಹೃದಯ ಬಡಿತ, ಉಸಿರಾಟ ಮತ್ತು ದೇಹದ ಉಷ್ಣತೆಯನ್ನು ನಿರಂತರವಾಗಿ ಟ್ರ್ಯಾಕ್ ಮಾಡುತ್ತದೆ.

2022 ರಿಂದ 20,000 ಕ್ಕೂ ಹೆಚ್ಚು ನವಜಾತ ಶಿಶುಗಳಿಗೆ ನೆರವು. ಒಬ್ಬರೇ ನರ್ಸ್ 40-50 ಶಿಶುಗಳನ್ನು ಮೇಲ್ವಿಚಾರಣೆ ಮಾಡಬಹುದು.

ತುರ್ತು ಚಿಕಿತ್ಸೆ

ಕ್ಲೌಡ್ ಫಿಸಿಶಿಯನ್

ಸ್ಮಾರ್ಟ್ ICU: ದೂರದ ಪ್ರದೇಶದ ಐಸಿಯುಗಳನ್ನು ಕಮಾಂಡ್ ಸೆಂಟರ್‌ಗೆ ಸಂಪರ್ಕಿಸಿ 24/7 ಮೇಲ್ವಿಚಾರಣೆ ಮಾಡುತ್ತದೆ. ದಾಖಲೀಕರಣದ ಸಮಯವನ್ನು ಉಳಿಸಲು ಎಐ ಸಹಾಯಕಗಳನ್ನು ಬಳಸುತ್ತದೆ.

280 ಆಸ್ಪತ್ರೆಗಳ 1.3 ಲಕ್ಷ ರೋಗಿಗಳ ಮೇಲೆ ಪ್ರಭಾವ. ದಾಖಲೀಕರಣದ ಸಮಯವನ್ನು 40% ರಷ್ಟು ಕಡಿಮೆ ಮಾಡಿದೆ.

ದೃಷ್ಟಿ ಆರೈಕೆ

3 ನೇತ್ರ

ಪೋರ್ಟಬಲ್ ಎಐ ಸ್ಕ್ರೀನಿಂಗ್: ಕಡಿಮೆ ವೆಚ್ಚದ ಸಾಧನವಾಗಿದ್ದು, ಮಧುಮೇಹದ ಕಣ್ಣಿನ ಕಾಯಿಲೆ, ಕಣ್ಣಿನ ಪೊರೆ ಮತ್ತು ಗ್ಲುಕೋಮಾವನ್ನು ಸ್ವಯಂಚಾಲಿತವಾಗಿ ಪತ್ತೆಹಚ್ಚುತ್ತದೆ.

75ಕ್ಕೂ ಹೆಚ್ಚು ದೇಶಗಳಲ್ಲಿ ಅಳವಡಿಕೆ; 30 ಲಕ್ಷಕ್ಕೂ ಹೆಚ್ಚು ಜನರ ಸ್ಕ್ರೀನಿಂಗ್. ಅನಗತ್ಯ ತಜ್ಞರ ಶಿಫಾರಸನ್ನು 70% ರಷ್ಟು ಕಡಿಮೆ ಮಾಡಿದೆ.

ಹೃದಯ ಮತ್ತು ಉಸಿರಾಟ

ಎಐ ಸ್ಟೆತ್

ಎಐ ಸ್ಟೆತಸ್ಕೋಪ್: ದೇಹದ ಶಬ್ದಗಳನ್ನು ಡಿಜಿಟಲೀಕರಿಸುತ್ತದೆ ಮತ್ತು ಹೃದಯ ಹಾಗೂ ಶ್ವಾಸಕೋಶದ ತರಂಗಾಂತರಗಳನ್ನು ಸ್ಮಾರ್ಟ್‌ಫೋನ್‌ನಲ್ಲಿ ತೋರಿಸುತ್ತದೆ.

ತಜ್ಞರಲ್ಲದವರೂ ಹೃದಯದ ಅಸಹಜ ಶಬ್ದಗಳನ್ನು ಪತ್ತೆಹಚ್ಚಲು ಸಹಕಾರಿ. ದೂರದ ವೈದ್ಯಕೀಯ ಸಮಾಲೋಚನೆಗೆ ಉಪಯುಕ್ತ.

ಸುಧಾರಿತ ರೇಡಿಯಾಲಜಿ

ಕ್ಯೂರ್ ಎಐ

ಸ್ಮಾರ್ಟ್ ಸ್ಕ್ಯಾನ್ಗಳು: ಎದೆಯ ಕ್ಷ-ಕಿರಣ ಮತ್ತು ಸಿಟಿ ಸ್ಕ್ಯಾನ್‌ಗಳನ್ನು ವಿಶ್ಲೇಷಿಸಿ ಕ್ಷಯರೋಗ, ಶ್ವಾಸಕೋಶದ ಕ್ಯಾನ್ಸರ್ ಮತ್ತು ಹೃದಯ ವೈಫಲ್ಯವನ್ನು ಕ್ಷಣಾರ್ಧದಲ್ಲಿ ಪತ್ತೆ ಮಾಡುತ್ತದೆ.

ವರ್ಷಕ್ಕೆ 1.5 ಕೋಟಿ ರೋಗಿಗಳಿಗೆ ಸೇವೆ. ಕ್ಷಯರೋಗ ಪತ್ತೆಯನ್ನು 30% ರಷ್ಟು ಸುಧಾರಿಸಿದೆ. WHO ಮತ್ತು ಅಸ್ಟ್ರಾಜೆನೆಕಾ ಸಂಸ್ಥೆಗಳ ಪಾಲುದಾರ ಹೊಂದಿದೆ.

ಸ್ತನ ಕ್ಯಾನ್ಸರ್

ಥರ್ಮಲೈಟಿಕ್ಸ್

ಎಐ-ಥರ್ಮಲ್ ಇಮೇಜಿಂಗ್: ದೇಹದ ಉಷ್ಣತೆಯ ವ್ಯತ್ಯಾಸಗಳ ಆಧಾರದ ಮೇಲೆ ಸ್ತನ ಕ್ಯಾನ್ಸರ್ ಅನ್ನು ಮೊದಲೇ ಪತ್ತೆಹಚ್ಚುವ ವಿಕಿರಣ ಮುಕ್ತ ತಂತ್ರಜ್ಞಾನ.

29 ನಗರಗಳಲ್ಲಿ 75,000 ಕ್ಕೂ ಹೆಚ್ಚು ಮಹಿಳೆಯರ ಸ್ಕ್ರೀನಿಂಗ್. ಇದು ಸಂಪೂರ್ಣವಾಗಿ ಗೌಪ್ಯತೆ ಸ್ನೇಹಿಯಾಗಿದೆ.

ನಗರ ನೀರಿನ ಆರೋಗ್ಯ

ಬೋಸನ್ ವೈಟ್ ವಾಟರ್

ಎಐ/ಐಒಟಿ ಫಿಲ್ಟರೇಶನ್: ಕೊಳಚೆ ನೀರನ್ನು ಕುಡಿಯುವ ನೀರಿನ ಗುಣಮಟ್ಟಕ್ಕೆ ಪರಿವರ್ತಿಸುವ 11-ಹಂತದ ಶುದ್ಧೀಕರಣ ವ್ಯವಸ್ಥೆ.

65 ಕೋಟಿ ಲೀಟರ್ ನೀರು ಮರುಬಳಕೆ. ಬ್ಯಾಕ್ಟೀರಿಯಾ, ವಿಷಕಾರಿ ಲೋಹಗಳು ಮತ್ತು ವೈರಸ್‌ಗಳನ್ನು ತೆಗೆದುಹಾಕುತ್ತದೆ.

ನೈರ್ಮಲ್ಯ ಮತ್ತು ಹೈಜೀನ್

ಎಐ ತ್ಯಾಜ್ಯ ನಿರ್ವಹಣೆ

ವಿಡಿಯೋ ವಿಶ್ಲೇಷಣೆ: ಸಾರ್ವಜನಿಕ ಸ್ಥಳಗಳಲ್ಲಿ ಕಸ ತುಂಬಿ ತುಳುಕುವುದನ್ನು ಸಿಸಿಟಿವಿ ಮೂಲಕ ಎಐ ಪತ್ತೆ ಮಾಡುತ್ತದೆ.

ವಾರಣಾಸಿ ಮತ್ತು ವಿಶಾಖಪಟ್ಟಣಂನಲ್ಲಿ ಸ್ವಚ್ಛತಾ ದಕ್ಷತೆ 20-30% ಸುಧಾರಿಸಿದೆ; ಡೆಂಗ್ಯೂ ಹರಡುವಿಕೆಯನ್ನು ತಡೆಯಲು ಸಹಕಾರಿ.

ಭಾರತದ ಆರೋಗ್ಯ ಕ್ಷೇತ್ರದ ಎಐ ರೂಪಾಂತರವು ಈಗಾಗಲೇ ಅಸ್ತಿತ್ವದಲ್ಲಿರುವ ಡಿಜಿಟಲ್ ಮೂಲಸೌಕರ್ಯವಾದ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ನಿಂದಾಗಿ ಸಾಧ್ಯವಾಗಿದೆ. ಆಗಸ್ಟ್ 2025 ರ ಹೊತ್ತಿಗೆ, ದೇಶದಲ್ಲಿ ಈಗಾಗಲೇ 799 ಮಿಲಿಯನ್ ಡಿಜಿಟಲ್ ಆರೋಗ್ಯ ಐಡಿಗಳನ್ನು ರಚಿಸಲಾಗಿದೆ. ಡಿಜಿಟಲ್ ರೆಪೊಸಿಟರಿಗಳಲ್ಲಿ 4,10,000 ಕ್ಕೂ ಹೆಚ್ಚು ನೋಂದಾಯಿತ ಆರೋಗ್ಯ ಸೌಲಭ್ಯಗಳು ಮತ್ತು 6,70,000 ಕ್ಕೂ ಹೆಚ್ಚು ಆರೋಗ್ಯ ವೃತ್ತಿಪರರು ನೋಂದಾಯಿಸಿಕೊಂಡಿದ್ದಾರೆ. ಅಲ್ಲದೆ, 671 ಮಿಲಿಯನ್‌ಗಿಂತಲೂ ಹೆಚ್ಚು ಆರೋಗ್ಯ ದಾಖಲೆಗಳನ್ನು ಆಯುಷ್ಮಾನ್ ಭಾರತ್ ಆರೋಗ್ಯ ಖಾತೆಯೊಂದಿಗೆ ಲಿಂಕ್ ಮಾಡಲಾಗಿದೆ.

ಎಬಿಡಿಎಂ ಅಡಿಯಲ್ಲಿ, ಆರೋಗ್ಯ ವಿತರಣೆಯನ್ನು ಪರಿವರ್ತಿಸಲು ನವೀನ ವಿಧಾನಗಳನ್ನು ಬಳಸಲು ಖಾಸಗಿ ವಲಯವನ್ನು ಪ್ರೋತ್ಸಾಹಿಸಲಾಗುತ್ತಿದೆ. ಖಾಸಗಿ ವಲಯವು ಅಭಿವೃದ್ಧಿಪಡಿಸಿದ ಎಬಿಡಿಎಂ-ಶಕ್ತಗೊಂಡ ಅಪ್ಲಿಕೇಶನ್‌ಗಳ ಮೂಲಕ ಕೈಗೊಳ್ಳಲಾದ ಕೆಲವು ಎಐ-ಚಾಲಿತ ಉಪಕ್ರಮಗಳು ಈ ಕೆಳಗಿನಂತಿವೆ:

ಆರೋಗ್ಯದ ವಿಷಯ

ಎಐ ಪರಿಹಾರ / ಉಪಕ್ರಮ

ತಂತ್ರಜ್ಞಾನ ಮತ್ತು ಚಿಕಿತ್ಸಾ ಅನುಭವ

ವೈದ್ಯಕೀಯ / ಕಾರ್ಯಾಚರಣೆಯ ಪ್ರಭಾವ

ರೋಗಿಗಳ ದಾಖಲೆಗಳ ವರ್ಗೀಕರಣ ಮತ್ತು ಸಾರಾಂಶ

ಎಕಾ ಡಾಕ್

ಕ್ಲಿನಿಕ್ ನಿರ್ವಹಣಾ ವ್ಯವಸ್ಥೆ: ರೋಗಿಗಳ ಆರೋಗ್ಯ ದಾಖಲೆಗಳ ನಿರ್ವಹಣೆ, ರೋಗಲಕ್ಷಣಗಳ ಆಧಾರದ ಮೇಲೆ ವರ್ಗೀಕರಣ ಮತ್ತು ವೈದ್ಯರಿಗಾಗಿ ದಾಖಲೆಗಳ ಸಾರಾಂಶ ನೀಡುವ ಸುರಕ್ಷಿತ ಆಪ್.

ಎಬಿಡಿಎಂ ಶಕ್ತಗೊಂಡ ಆಪ್ 10 ಲಕ್ಷಕ್ಕೂ ಹೆಚ್ಚು ರೋಗಿಗಳ ವರ್ಗೀಕರಣ ಮತ್ತು 17 ಲಕ್ಷಕ್ಕೂ ಹೆಚ್ಚು ದಾಖಲೆಗಳ ಸಾರಾಂಶ ನೀಡಲು ನೆರವಾಗಿದೆ.

ವೈದ್ಯಕೀಯ ದಾಖಲೀಕರಣ

ಸುನೋ ಎಐ

ಎಐ ಧ್ವನಿ ತಂತ್ರಜ್ಞಾನ: ವೈದ್ಯರು ಧ್ವನಿಯ ಮೂಲಕವೇ ಇ-ಪ್ರಿಸ್ಕ್ರಿಪ್ಷನ್ ಸಿದ್ಧಪಡಿಸಲು ನೆರವಾಗುವ ಎಐ ಸಾಧನ.

ಲಕ್ಷಾಂತರ ಇ-ಪ್ರಿಸ್ಕ್ರಿಪ್ಷನ್‌ಗಳನ್ನು ಸುಲಭವಾಗಿ ಸಿದ್ಧಪಡಿಸಲು ವೈದ್ಯರಿಗೆ ಬೆಂಬಲ ನೀಡುತ್ತಿದೆ.

ವೈದ್ಯಕೀಯ ದಾಖಲೀಕರಣ

ಎಕಾ ಸ್ಕ್ರೈಬ್

ಎಐ ಧ್ವನಿ ತಂತ್ರಜ್ಞಾನ: ಧ್ವನಿ ತಂತ್ರಜ್ಞಾನದ ಮೂಲಕ ಡಿಜಿಟಲ್ ಪ್ರಿಸ್ಕ್ರಿಪ್ಷನ್‌ಗಳನ್ನು ರಚಿಸಲು ವೈದ್ಯರಿಗೆ ಅನುವು ಮಾಡಿಕೊಡುವ ಸಾಧನ.

ಎಐ ಬಳಸಿ 5 ಲಕ್ಷಕ್ಕೂ ಹೆಚ್ಚು ಇ-ಪ್ರಿಸ್ಕ್ರಿಪ್ಷನ್‌ಗಳನ್ನು ರಚಿಸಲು ಸಹಕರಿಸಿದೆ.

ಎಐ ಶಕ್ತಗೊಂಡ ಎಚ್ಎಂಐಎಸ್

ಈ-ಕ್ಲಿನಿಕಲ್ ವರ್ಕ್ಸ್

ಏಕೀಕೃತ ವ್ಯವಸ್ಥೆ: ಎಐ ಮತ್ತು ಎಂಎಲ್ ಆಧಾರಿತ ಆಸ್ಪತ್ರೆ ನಿರ್ವಹಣಾ ವ್ಯವಸ್ಥೆ. ಇದು ಚಿತ್ರಗಳ ವಿಶ್ಲೇಷಣೆ ಮತ್ತು ವೈದ್ಯಕೀಯ ಪ್ರಕ್ರಿಯೆಗಳ ವೇಗವನ್ನು ಹೆಚ್ಚಿಸುತ್ತದೆ.

219 ಆಸ್ಪತ್ರೆಗಳಲ್ಲಿ 34 ಲಕ್ಷಕ್ಕೂ ಹೆಚ್ಚು ಆಭಾ ಲಿಂಕ್ ಮಾಡಿದ ಆರೋಗ್ಯ ದಾಖಲೆಗಳನ್ನು ಸೃಷ್ಟಿಸಿದೆ.

ಸ್ಮಾರ್ಟ್ ವರದಿಗಳು

ಎಕಾಕೇರ್

ವೈಯಕ್ತಿಕ ಆರೋಗ್ಯ ದಾಖಲೆ: ಎಐ ಮತ್ತು ಎನ್‌ಎಲ್‌ಪಿ ಬಳಸಿ ಆರೋಗ್ಯ ದಾಖಲೆಗಳನ್ನು ಕ್ರಮಬದ್ಧಗೊಳಿಸಿ, ಜೀವನಪರ್ಯಂತದ ಆರೋಗ್ಯ ಇತಿಹಾಸದ ಸಾರಾಂಶ ನೀಡುವ ಅಪ್ಲಿಕೇಶನ್.

1.3 ಕೋಟಿಗೂ ಹೆಚ್ಚು ಎಬಿಡಿಎಂ ಲಿಂಕ್ಡ್ ಆರೋಗ್ಯ ದಾಖಲೆಗಳಿಗೆ 'ಸ್ಮಾರ್ಟ್ ರಿಪೋರ್ಟ್ಸ್' ಒದಗಿಸಿದೆ.

ಎಐ ಶಕ್ತಗೊಂಡ ಎಚ್ಎಂಐಎಸ್

ಪ್ಲಸ್ 91

ಕಾರ್ಯಾಚರಣೆ ದಕ್ಷತೆ: ವರದಿಗಳನ್ನು ಕ್ರಮಬದ್ಧಗೊಳಿಸಲು ಮತ್ತು ವೈದ್ಯ-ರೋಗಿ ನಡುವಿನ ಟಿಪ್ಪಣಿಗಳನ್ನು ಸಂಘಟಿಸಲು ಎಐ/ಎಂಎಲ್ ಬಳಸುವ ಆಸ್ಪತ್ರೆ ನಿರ್ವಹಣಾ ವ್ಯವಸ್ಥೆ.

6,613 ಆಸ್ಪತ್ರೆಗಳಾದ್ಯಂತ 4.24 ಕೋಟಿ ಆಭಾ ಲಿಂಕ್ ಮಾಡಿದ ಆರೋಗ್ಯ ದಾಖಲೆಗಳನ್ನು ನಿರ್ಮಿಸಿದೆ.

A baby in diaper and a deviceAI-generated content may be incorrect.

ಚಿತ್ರ 1 - ನೆಮೋಕೇರ್ ರಕ್ಷಾ

ಚಿತ್ರ 2 - ಕೇರ್ ಎನ್ ಎಕ್ಸ್ ಎಂಬುದು ಭಾರತೀಯ ಮೂಲದ ಡಿಜಿಟಲ್ ಆರೋಗ್ಯ ತಂತ್ರಜ್ಞಾನ ವೇದಿಕೆಯಾಗಿದೆ. ಇದು ಗುಣಮಟ್ಟದ ಮಾತೃತ್ವ ಮತ್ತು ಮಹಿಳಾ ಆರೋಗ್ಯ ರಕ್ಷಣೆಯ ಲಭ್ಯತೆಯನ್ನು ಸುಧಾರಿಸಲು ಕೃತಕ ಬುದ್ಧಿಮತ್ತೆ, ಮೊಬೈಲ್ ರೋಗನಿರ್ಣಯ ಮತ್ತು ಕ್ಲೌಡ್-ಆಧಾರಿತ ನಿರ್ಧಾರ ಬೆಂಬಲ ವ್ಯವಸ್ಥೆಗಳನ್ನು ಬಳಸಿಕೊಳ್ಳುತ್ತದೆ.

A collage of people sitting and holding a phoneAI-generated content may be incorrect.

ಚಿತ್ರ 3 - ಮೈ ಡಿಜಿ ರೆಕಾರ್ಡ್ಸ್ ಎಂಬುದು ರೋಗಿ-ಕೇಂದ್ರಿತ ಡಿಜಿಟಲ್ ಆರೋಗ್ಯ ದಾಖಲೆಗಳು ಮತ್ತು ಆರೈಕೆ ನಿರ್ವಹಣಾ ವೇದಿಕೆಯಾಗಿದೆ.

ಉಪಸಂಹಾರ

ವಿವಿಧ ಕಾಯಿಲೆಗಳ ರೋಗನಿರ್ಣಯ ಮತ್ತು ಅಂಚಿನಲ್ಲಿರುವ ಸಮುದಾಯಗಳ ಆರೋಗ್ಯದ ಫಲಿತಾಂಶಗಳನ್ನು ಸುಧಾರಿಸುವುದರಿಂದ ಹಿಡಿದು, ಶುದ್ಧ ನೀರಿನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವವರೆಗೆ, ಆರೋಗ್ಯ ಕ್ಷೇತ್ರದಲ್ಲಿ ತಂತ್ರಜ್ಞಾನದ ಈ ನವೀನ ಬಳಕೆಯು 'ಮಾನವೀಯತೆಗಾಗಿ ಎಐ' ಎಂಬ ತತ್ವವನ್ನು ಪ್ರತಿಬಿಂಬಿಸುತ್ತದೆ. ನಿರ್ಣಾಯಕ ಮಾನವ ಸವಾಲುಗಳನ್ನು ಎದುರಿಸಲು, ಅಂತರ್ಗತ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸಲು ಮತ್ತು ವಿಕಸಿತ ಭಾರತ@2047ರ ದೃಷ್ಟಿಕೋನವನ್ನು ಮುನ್ನಡೆಸಲು ತಂತ್ರಜ್ಞಾನವನ್ನು ಬಳಸಿಕೊಳ್ಳುವುದು ಇದರ ಪ್ರಮುಖ ಉದ್ದೇಶವಾಗಿದೆ.

References

Transforming Healthcare Delivery Through Artificial Intelligence

 

*****

 

(Explainer ID: 157345) आगंतुक पटल : 9
Provide suggestions / comments
इस विज्ञप्ति को इन भाषाओं में पढ़ें: English , हिन्दी , Bengali
Link mygov.in
National Portal Of India
STQC Certificate