• Skip to Content
  • Sitemap
  • Advance Search
Economy

ಸ್ಟಾರ್ಟ್ಅಪ್ ಇಂಡಿಯಾದ ಒಂದು ದಶಕ

ನವೋದ್ಯಮಗಳ ವಿಸ್ತರಣೆ, ಭಾರತದ ಬೆಳವಣಿಗೆಯ ಕಥೆಗೆ ಹೊಸ ರೂಪ

Posted On: 15 JAN 2026 2:16PM

 

ಪ್ರಮುಖ ಮಾರ್ಗಸೂಚಿಗಳು

  • ಡಿಸೆಂಬರ್ 2025ರ ಹೊತ್ತಿಗೆ 2 ಲಕ್ಷಕ್ಕೂ ಹೆಚ್ಚು ಡಿಪಿಐಐಟಿ-ಮಾನ್ಯತೆ ಪಡೆದ ಸ್ಟಾರ್ಟ್ಅಪ್‌ಗಳೊಂದಿಗೆ, ಭಾರತವು ವಿಶ್ವದ ಅತಿದೊಡ್ಡ ನವೋದ್ಯಮ ಪರಿಸರ ವ್ಯವಸ್ಥೆಗಳಲ್ಲಿ ಒಂದಾಗಿ ದೃಢವಾಗಿ ನಿಂತಿದೆ.

  • ಸ್ಟಾರ್ಟ್ಅಪ್ ಇಂಡಿಯಾದ ಒಂದು ದಶಕವು ಕಲ್ಪನೆ, ಧನಸಹಾಯ, ಮಾರ್ಗದರ್ಶನ ಮತ್ತು ವಿಸ್ತರಣೆಯನ್ನು ಒಳಗೊಂಡ ಪೂರ್ಣ-ಜೀವನಚಕ್ರದ ಬೆಂಬಲ ವ್ಯವಸ್ಥೆಯನ್ನು ನಿರ್ಮಿಸಿದೆ.

  • ಡಿಪಿಐಐಟಿ-ಮಾನ್ಯತೆ ಪಡೆದ ಸುಮಾರು 50% ಸ್ಟಾರ್ಟ್ಅಪ್‌ಗಳು ಎರಡನೇ ಮತ್ತು ಮೂರನೇ ಹಂತದ ನಗರಗಳಿಂದ ಹುಟ್ಟಿಕೊಂಡಿವೆ, ಇದು ಉದ್ಯಮಶೀಲತೆಯ ಪ್ರಜಾಪ್ರಭುತ್ವೀಕರಣವನ್ನು ಸೂಚಿಸುತ್ತದೆ.

  • ಎಐಎಂ 2.0 ಪರಿಸರ ವ್ಯವಸ್ಥೆಯ ಕೊರತೆಗಳನ್ನು ನೀಗಿಸಲು ಮತ್ತು ಸರ್ಕಾರಗಳು, ಉದ್ಯಮ, ಶೈಕ್ಷಣಿಕ ಕ್ಷೇತ್ರ ಹಾಗೂ ಸಮುದಾಯಗಳ ಸಹಯೋಗದೊಂದಿಗೆ ಯಶಸ್ವಿ ಮಾದರಿಗಳನ್ನು ವಿಸ್ತರಿಸಲು ಹೊಸ ಉಪಕ್ರಮಗಳನ್ನು ಪ್ರಾಯೋಗಿಕವಾಗಿ ಜಾರಿಗೊಳಿಸುವುದರ ಮೇಲೆ ಕೇಂದ್ರೀಕರಿಸಿದೆ.

  • ಎಸ್‌ವಿಇಪಿ, ಎಎಸ್‌ಪಿಐಆರ್‌ಇ ಮತ್ತು ಪಿಎಂಇಜಿಪಿ ಯಂತಹ ಗ್ರಾಮೀಣ ಮತ್ತು ತಳಮಟ್ಟದ ಕಾರ್ಯಕ್ರಮಗಳು ಕಿರು-ಉದ್ಯಮಗಳು, ಮಹಿಳಾ ನೇತೃತ್ವದ ಉದ್ಯಮಗಳು ಮತ್ತು ಸ್ಥಳೀಯ ಉದ್ಯೋಗಗಳನ್ನು ಸಕ್ರಿಯಗೊಳಿಸುತ್ತಿವೆ.

ನವೋದ್ಯಮಗಳು: ಆರ್ಥಿಕ ಪರಿವರ್ತನೆಯಲ್ಲಿ ಪ್ರಮುಖ ಪಾತ್ರ

16 ಜನವರಿ 2026 ರಂದು ರಾಷ್ಟ್ರೀಯ ಸ್ಟಾರ್ಟ್ಅಪ್ ದಿನವು 'ಸ್ಟಾರ್ಟ್ಅಪ್ ಇಂಡಿಯಾ' ಉಪಕ್ರಮದ ಐತಿಹಾಸಿಕ ಒಂದು ದಶಕವನ್ನು ಗುರುತಿಸುತ್ತದೆ. 2016 ರಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಲು ಒಂದು ನೀತಿಯಾಗಿ ಪ್ರಾರಂಭವಾದ ಈ ಅಭಿಯಾನವು, ಇಂದು ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ವೈವಿಧ್ಯಮಯ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಗಳಲ್ಲಿ ಒಂದಾಗಿ ವಿಕಸನಗೊಂಡಿದೆ. "ಸ್ಟಾರ್ಟ್ಅಪ್ ಇಂಡಿಯಾ" ಮೂಲಕ ಮುನ್ನಡೆಸಲ್ಪಡುತ್ತಿರುವ ಈ ಚಳವಳಿಯು ಭಾರತದ ಉದ್ಯಮಶೀಲತೆ ಮತ್ತು ನಾವೀನ್ಯತೆಯ ಪರಿಸರ ವ್ಯವಸ್ಥೆಯ ಮೇಲೆ ಪರಿವರ್ತಕ ಪ್ರಭಾವ ಬೀರಿದೆ. ಇದು ಆರ್ಥಿಕ ಆಧುನೀಕರಣವನ್ನು ಅಂತರ್ಗತ ಪ್ರಾದೇಶಿಕ ಅಭಿವೃದ್ಧಿಯೊಂದಿಗೆ ಸಂಯೋಜಿಸುವ ಮೂಲಕ 'ವಿಕಸಿತ ಭಾರತ 2047' ಗುರಿಯತ್ತ ಭಾರತದ ನಡಿಗೆಯನ್ನು ದೃಢವಾಗಿ ಬೆಂಬಲಿಸುತ್ತಿದೆ.

ನಾವೀನ್ಯತೆ, ಉದ್ಯೋಗ ಸೃಷ್ಟಿ ಮತ್ತು ಅಂತರ್ಗತ ಅಭಿವೃದ್ಧಿಯನ್ನು ಉತ್ತೇಜಿಸುವ ಮೂಲಕ ಸ್ಟಾರ್ಟ್ಅಪ್‌ಗಳು ಭಾರತದ ಆರ್ಥಿಕ ಪರಿವರ್ತನೆಯ ಪ್ರಮುಖ ಸ್ತಂಭಗಳಾಗಿ ಹೊರಹೊಮ್ಮಿವೆ. ಕಳೆದ ದಶಕದಲ್ಲಿ ಭಾರತವು ವೇಗವಾಗಿ ಬೆಳೆದಿದ್ದು, ಡಿಸೆಂಬರ್ 2025 ರ ಹೊತ್ತಿಗೆ 2 ಲಕ್ಷಕ್ಕೂ ಹೆಚ್ಚು ಸ್ಟಾರ್ಟ್ಅಪ್‌ಗಳೊಂದಿಗೆ ವಿಶ್ವದ ಅತಿದೊಡ್ಡ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಗಳಲ್ಲಿ ಒಂದಾಗಿದೆ. ಬೆಂಗಳೂರು, ಹೈದರಾಬಾದ್, ಮುಂಬೈ ಮತ್ತು ದೆಹಲಿ-ಎನ್‌ಸಿಆರ್‌ಗಳಂತಹ ಪ್ರಮುಖ ಕೇಂದ್ರಗಳು ಈ ಪರಿವರ್ತನೆಯ ಮುಂಚೂಣಿಯಲ್ಲಿವೆ. ಅದೇ ಸಮಯದಲ್ಲಿ, ಸುಮಾರು 50% ಸ್ಟಾರ್ಟ್ಅಪ್‌ಗಳು ಎರಡನೇ ಮತ್ತು ಮೂರನೇ ಹಂತದ ನಗರಗಳಿಂದ ಉದಯಿಸುತ್ತಿದ್ದು, ಸಣ್ಣ ನಗರಗಳು ಸಹ ಈ ವೇಗಕ್ಕೆ ಸ್ಥಿರವಾಗಿ ಕೊಡುಗೆ ನೀಡುತ್ತಿವೆ. ಇದು ಉದ್ಯಮಶೀಲತೆಯ ಪ್ರಜಾಪ್ರಭುತ್ವೀಕರಣವನ್ನು ಪ್ರತಿಫಲಿಸುತ್ತದೆ.

ನವೋದ್ಯಮಗಳು: ಆರ್ಥಿಕ ಬೆಳವಣಿಗೆಗೆ ಸ್ಫೂರ್ತಿ

  • ತಾಂತ್ರಿಕ ನಾವೀನ್ಯತೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುತ್ತವೆ

  • ಬೃಹತ್ ಪ್ರಮಾಣದ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ

  • ಹಣಕಾಸಿನ ಒಳಗೊಳ್ಳುವಿಕೆ ಮತ್ತು ಡಿಜಿಟಲ್ ಪ್ರವೇಶವನ್ನು ವೃದ್ಧಿಸುತ್ತವೆ

  • ಪ್ರಾದೇಶಿಕ ಮತ್ತು ತಳಮಟ್ಟದ ಉದ್ಯಮಶೀಲತೆಯನ್ನು ಉತ್ತೇಜಿಸುತ್ತವೆ

ಅಗ್ರಿ-ಟೆಕ್, ಟೆಲಿಮೆಡಿಸಿನ್, ಮೈಕ್ರೋಫೈನಾನ್ಸ್, ಪ್ರವಾಸೋದ್ಯಮ ಮತ್ತು ಎಡ್-ಟೆಕ್‌ನಾದ್ಯಂತ ಪರಿಹಾರಗಳನ್ನು ಒದಗಿಸುವ ಮೂಲಕ ನವೋದ್ಯಮಗಳು ಭಾರತದ ಗ್ರಾಮೀಣ-ನಗರಗಳ ನಡುವಿನ ಅಂತರವನ್ನು ಹೆಚ್ಚಾಗಿ ಕಡಿಮೆ ಮಾಡುತ್ತಿವೆ. ಇವು ಅಭಿವೃದ್ಧಿಯ ಕೊರತೆಗಳನ್ನು ನೇರವಾಗಿ ನೀಗಿಸುತ್ತಿವೆ ಮತ್ತು ಗ್ರಾಮೀಣ ಜೀವನೋಪಾಯಕ್ಕೆ ಬೆಂಬಲ ನೀಡುತ್ತಿವೆ. ಈ ನಿಟ್ಟಿನಲ್ಲಿ, ಮಹಿಳಾ ನೇತೃತ್ವದ ಸ್ಟಾರ್ಟ್ಅಪ್‌ಗಳು ಅಂತರ್ಗತ ಮತ್ತು ಪ್ರಾದೇಶಿಕವಾಗಿ ಸಮತೋಲಿತ ಬೆಳವಣಿಗೆಯ ಪ್ರಮುಖ ಚಾಲಕ ಶಕ್ತಿಯಾಗಿ ಹೊರಹೊಮ್ಮುತ್ತಿವೆ. ಡಿಸೆಂಬರ್ 2025 ರ ಹೊತ್ತಿಗೆ ಮಾನ್ಯತೆ ಪಡೆದ ಸ್ಟಾರ್ಟ್ಅಪ್‌ಗಳಲ್ಲಿ 45% ಕ್ಕೂ ಹೆಚ್ಚು ಕನಿಷ್ಠ ಒಬ್ಬ ಮಹಿಳಾ ನಿರ್ದೇಶಕ ಅಥವಾ ಪಾಲುದಾರರನ್ನು ಹೊಂದಿವೆ. ಇದು ನಾವೀನ್ಯತೆಯು ಕೇವಲ ಆರ್ಥಿಕ ಎಂಜಿನ್ ಮಾತ್ರವಲ್ಲದೆ ಸಾಮಾಜಿಕ ಸಮಾನತೆ ಮತ್ತು ಸಮತೋಲಿತ ಪ್ರಾದೇಶಿಕ ಅಭಿವೃದ್ಧಿಯ ಚಾಲಕ ಶಕ್ತಿಯಾಗಿಯೂ ಹೊರಹೊಮ್ಮುತ್ತಿರುವುದನ್ನು ಪ್ರತಿಫಲಿಸುತ್ತದೆ.

ಸ್ಟಾರ್ಟ್ಅಪ್ ಇಂಡಿಯಾ ಉಪಕ್ರಮ: ಭಾರತದ ನಾವೀನ್ಯತೆಯ ಬೆನ್ನೆಲುಬನ್ನು ನಿರ್ಮಿಸಿದ ಒಂದು ದಶಕ

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿಯಲ್ಲಿರುವ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನಾ ಇಲಾಖೆ ನೇತೃತ್ವದ ಸ್ಟಾರ್ಟ್ಅಪ್ ಇಂಡಿಯಾ ಉಪಕ್ರಮವು ಭಾರತದ ನಾವೀನ್ಯತೆ ಮತ್ತು ಉದ್ಯಮಶೀಲತೆಯ ಪರಿಸರ ವ್ಯವಸ್ಥೆಯ ಅಡಿಗಲ್ಲಾಗಿ ಹೊರಹೊಮ್ಮಿದೆ. ಕಳೆದ ದಶಕದಲ್ಲಿ, ಈ ಉಪಕ್ರಮವು ಕೇವಲ ನೀತಿ-ಆಧಾರಿತ ಚೌಕಟ್ಟಿನಿಂದ ಸಮಗ್ರ ಹಾಗೂ ಬಹು ಆಯಾಮದ ವೇದಿಕೆಯಾಗಿ ವಿಕಸನಗೊಂಡಿದೆ; ಇದು ಕಲ್ಪನೆಯ ಹಂತದಿಂದ ಉದ್ಯಮದ ವಿಸ್ತರಣೆಯವರೆಗಿನ ಪ್ರತಿಯೊಂದು ಹಂತದಲ್ಲೂ ನವೋದ್ಯಮಗಳಿಗೆ ಬೆಂಬಲ ನೀಡುತ್ತಿದೆ. ಈ ಪ್ರಗತಿಯು ಭಾರತದ ಉನ್ನತ ಮೌಲ್ಯದ ನವೋದ್ಯಮ ಪರಿಸರ ವ್ಯವಸ್ಥೆಯಲ್ಲಿ ಪ್ರತಿಫಲಿಸುತ್ತಿದೆ. 2014 ರಲ್ಲಿ 1 ಬಿಲಿಯನ್ ಡಾಲರ್‌ಗಿಂತ ಹೆಚ್ಚಿನ ಮೌಲ್ಯದ ಕೇವಲ 4 ಖಾಸಗಿ ಕಂಪನಿಗಳಿದ್ದವು, ಇಂದು ಅಂತಹ ಕಂಪನಿಗಳ ಸಂಖ್ಯೆ 120 ದಾಟಿದೆ. ಇವುಗಳ ಒಟ್ಟು ಮೌಲ್ಯ 350 ಬಿಲಿಯನ್ ಡಾಲರ್‌ಗಳನ್ನು ಮೀರಿದ್ದು, ಇದು ಭಾರತದ ನವೋದ್ಯಮ ಕ್ಷೇತ್ರದ ಪ್ರಮಾಣ ಮತ್ತು ಬೆಳೆಯುತ್ತಿರುವ ಜಾಗತಿಕ ಪ್ರಸ್ತುತತೆಯನ್ನು ಉಲ್ಲೇಖಿಸುತ್ತದೆ.

ನವೋದ್ಯಮಗಳು ಭಾರತದ ಯುವ ಜನಸಂಖ್ಯಾ ಲಾಭಾಂಶವನ್ನು ಬಳಸಿಕೊಳ್ಳುತ್ತಿವೆ, ತಂತ್ರಜ್ಞಾನ, ಸೇವೆಗಳು ಮತ್ತು ಉತ್ಪಾದನಾ ವಲಯಗಳಲ್ಲಿ ಉದ್ಯೋಗಗಳನ್ನು ಸೃಷ್ಟಿಸುತ್ತಿವೆ. ಜೊತೆಗೆ 'ಗಿಗ್' ಕೆಲಸಗಳು ಮತ್ತು ಪೂರೈಕೆ ಸರಪಳಿಗಳ ಮೂಲಕ ಪರೋಕ್ಷ ಉದ್ಯೋಗಾವಕಾಶಗಳನ್ನು ಸಹ ಸೃಷ್ಟಿಸುತ್ತಿವೆ. ಉದ್ಯೋಗದ ಹೊರತಾಗಿ, ನವೋದ್ಯಮಗಳು ದೊಡ್ಡ ಕಾರ್ಪೊರೇಟ್‌ಗಳು ಮತ್ತು ಅಂತಾರಾಷ್ಟ್ರೀಯ ಕಂಪನಿಗಳೊಂದಿಗೆ ಹೆಚ್ಚು ಸಹಯೋಗ ಹೊಂದುತ್ತಿವೆ, ಇದು ತಂತ್ರಜ್ಞಾನ ವರ್ಗಾವಣೆ, ವಿಸ್ತರಣೆ ಮತ್ತು ಜಾಗತಿಕ ಮಾರುಕಟ್ಟೆಯ ಏಕೀಕರಣಕ್ಕೆ ಅನುವು ಮಾಡಿಕೊಡುತ್ತಿದೆ.

ಸಾಂಪ್ರದಾಯಿಕ ಮವಲಯಗಳಲ್ಲಿ, ನಾವೀನ್ಯತೆಯು ಆರ್ಥಿಕತೆಯಾದ್ಯಂತ ಪ್ರಭಾವ ಬೀರುತ್ತಿದೆ: 'ಹೆಸಾʼ ನಂತಹ ಅಗ್ರಿ-ಟೆಕ್ ವೇದಿಕೆಗಳು ಗ್ರಾಮೀಣ-ನಗರಗಳ ಅಂತರವನ್ನು ಕಡಿಮೆ ಮಾಡುವ ಮೂಲಕ ರೈತರ ಮಾರುಕಟ್ಟೆ ಪ್ರವೇಶವನ್ನು ಸುಧಾರಿಸುತ್ತಿವೆ, ಹಾಗೆಯೇ 'ಜಿಪ್'ನಂತಹ ಕ್ಲೀನ್ ಮೊಬಿಲಿಟಿ ನವೋದ್ಯಮಗಳು ಇವಿ-ಆಧಾರಿತ ಸುಸ್ಥಿರ ಸಾರಿಗೆ ಪರಿಹಾರಗಳನ್ನು ನೀಡುತ್ತಿವೆ. ಈ ನಾವೀನ್ಯತೆಗಳು ಹಣಕಾಸು, ಪೂರೈಕೆ ಸರಪಳಿಗಳು, ಸುಸ್ಥಿರತೆ ಮತ್ತು ಡಿಜಿಟಲ್ ಮೂಲಸೌಕರ್ಯಗಳಲ್ಲಿ ಗುಣಕ ಪರಿಣಾಮಗಳನ್ನು ಬೀರುತ್ತಿವೆ, ಇದು ಅಭಿವೃದ್ಧಿ ಹೊಂದುತ್ತಿರುವ ನವೋದ್ಯಮ ವಲಯದ ಒಟ್ಟಾರೆ ಪರಿಸರ ವ್ಯವಸ್ಥೆಯ ಪ್ರಯೋಜನಗಳನ್ನು ಉಲ್ಲೇಖಿಸುತ್ತದೆ.

ನಾವೀನ್ಯತೆ ಆಧಾರಿತ ಉದ್ಯಮಶೀಲತೆಯನ್ನು ವೇಗಗೊಳಿಸಲು, ಡಿಪಿಐಐಟಿಯು ಸ್ಟಾರ್ಟ್ಅಪ್ ಇಂಡಿಯಾ ಉಪಕ್ರಮದ ಮೂಲಕ ದೇಶಾದ್ಯಂತ ಧನಸಹಾಯ, ಮಾರ್ಗದರ್ಶನ ಮತ್ತು ನವೋದ್ಯಮಗಳ ವಿಸ್ತರಣೆಗೆ ಬೆಂಬಲ ನೀಡಲು ಈ ಕೆಳಗಿನ ಪ್ರಮುಖ ಯೋಜನೆಗಳು ಮತ್ತು ಡಿಜಿಟಲ್ ವೇದಿಕೆಗಳನ್ನು ಹೊರತಂದಿದೆ.

ನವೋದ್ಯಮಗಳಿಗಾಗಿ ನಿಧಿಗಳ ನಿಧಿ (ಎಫ್‌ಎಫ್‌ಎಸ್‌)

ಸ್ಟಾರ್ಟ್ಅಪ್‌ಗಳಿಗಾಗಿ ನಿಧಿಗಳ ನಿಧಿ ಎಂಬುದು ಸ್ಟಾರ್ಟ್ಅಪ್ ಇಂಡಿಯಾ ಕ್ರಿಯಾ ಯೋಜನೆಯಡಿ ಡಿಪಿಐಐಟಿಯ ಒಂದು ಪ್ರಮುಖ ಉಪಕ್ರಮವಾಗಿದ್ದು, ಇದನ್ನು ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ ನಿರ್ವಹಿಸುತ್ತದೆ. 10,000 ಕೋಟಿ ರೂಪಾಯಿಗಳ ನಿಧಿಯೊಂದಿಗೆ, ಈ ಯೋಜನೆಯು SEBI-ನೋಂದಾಯಿತ ಪರ್ಯಾಯ ಹೂಡಿಕೆ ನಿಧಿಗಳಿಗೆ ಬೆಂಬಲ ನೀಡುತ್ತದೆ. ಇವುಗಳು ಪ್ರತಿಯಾಗಿ ನವೋದ್ಯಮಗಳಲ್ಲಿ ಹೂಡಿಕೆ ಮಾಡುತ್ತವೆ. ದೇಶೀಯ ರಿಸ್ಕ್ ಕ್ಯಾಪಿಟಲ್ ಲಭ್ಯತೆಯನ್ನು ವಿಸ್ತರಿಸುವುದು ಮತ್ತು ಉದ್ಯಮಶೀಲತೆಯ ಪರಿಸರ ವ್ಯವಸ್ಥೆಯನ್ನು ಬಲಪಡಿಸುವುದು ಇದರ ಉದ್ದೇಶವಾಗಿದೆ.

10,000 ಕೋಟಿ ರೂಪಾಯಿಗಳ ನಿಧಿಯನ್ನು 140 ಕ್ಕೂ ಹೆಚ್ಚು ಎಐಎಫ್‌ಗಳಿಗೆ ನೀಡಲಾಗಿದ್ದು, ಇವು ಒಟ್ಟಾಗಿ 1,370 ಕ್ಕೂ ಹೆಚ್ಚು ನವೋದ್ಯಮಗಳಲ್ಲಿ 25,500 ಕೋಟಿ ರೂಪಾಯಿಗಳಿಗೂ ಹೆಚ್ಚು ಹೂಡಿಕೆ ಮಾಡಿವೆ.

ನವೋದ್ಯಮಗಳಿಗಾಗಿ ಸಾಲ ಖಾತರಿ ಯೋಜನೆ

ಸ್ಟಾರ್ಟ್ಅಪ್‌ಗಳಿಗಾಗಿ ಸಾಲ ಖಾತರಿ ಯೋಜನೆಯನ್ನು ಅರ್ಹ ಹಣಕಾಸು ಸಂಸ್ಥೆಗಳ ಮೂಲಕ ಸ್ಟಾರ್ಟ್ಅಪ್‌ಗಳಿಗೆ ಶೂನ್ಯ ಖಾತರಿ ಸಾಲಗಳನ್ನು ಒದಗಿಸಲು ಜಾರಿಗೆ ತರಲಾಗಿದೆ. ಸಿಜಿಎಸ್‌ಎಸ್‌ ಯೋಜನೆಯನ್ನು ನ್ಯಾಷನಲ್ ಕ್ರೆಡಿಟ್ ಗ್ಯಾರಂಟಿ ಟ್ರಸ್ಟೀ ಕಂಪನಿ (NCGTC) ಲಿಮಿಟೆಡ್ ಕಾರ್ಯಗತಗೊಳಿಸುತ್ತದೆ. ಸಿಜಿಎಎಸ್‌ಎಸ್‌ ಅಡಿಯಲ್ಲಿ, ನವೋದ್ಯಮದ ಸಾಲಗಾರರಿಗಾಗಿ 800 ಕೋಟಿ ರೂಪಾಯಿಗಳಿಗೂ ಅಧಿಕ ಮೌಲ್ಯದ 330 ಕ್ಕೂ ಹೆಚ್ಚು ಸಾಲಗಳಿಗೆ ಖಾತರಿ ನೀಡಲಾಗಿದೆ.

ಸ್ಟಾರ್ಟ್ಅಪ್ ಇಂಡಿಯಾ ಸೀಡ್ ಫಂಡ್ ಯೋಜನೆ

945 ಕೋಟಿ ರೂಪಾಯಿಗಳ ನಿಧಿಯೊಂದಿಗೆ, ಸ್ಟಾರ್ಟ್ಅಪ್ ಇಂಡಿಯಾ ಸೀಡ್ ಫಂಡ್ ಯೋಜನೆಯು ಪರಿಕಲ್ಪನೆಯ ಪುರಾವೆ, ಮಾದರಿ ತಯಾರಿಕೆ, ಉತ್ಪನ್ನ ಪರೀಕ್ಷೆಗಳು, ಮಾರುಕಟ್ಟೆ ಪ್ರವೇಶ ಮತ್ತು ವಾಣಿಜ್ಯೀಕರಣದಂತಹ ಚಟುವಟಿಕೆಗಳಿಗಾಗಿ ಸ್ಟಾರ್ಟ್ಅಪ್‌ಗಳಿಗೆ ಆರ್ಥಿಕ ನೆರವು ನೀಡುತ್ತದೆ. ಈ ಯೋಜನೆಯ ಅನುಷ್ಠಾನ, ನಿರ್ವಹಣೆ ಮತ್ತು ಮೇಲ್ವಿಚಾರಣೆಯ ಜವಾಬ್ದಾರಿಯನ್ನು ತಜ್ಞರ ಸಲಹಾ ಸಮಿತಿಯು (EAC) ಹೊಂದಿದೆ.ಈ ಯೋಜನೆಯಡಿ ಆರಂಭಿಕ ಹಂತದ ಸ್ಟಾರ್ಟ್ಅಪ್‌ಗಳನ್ನು ಬೆಂಬಲಿಸಲು 215 ಕ್ಕೂ ಹೆಚ್ಚು ಇನ್ಕ್ಯುಬೇಟರ್‌ಗಳಿಗೆ 945 ಕೋಟಿ ರೂಪಾಯಿಗಳ ನಿಧಿಯನ್ನು ಅನುಮೋದಿಸಲಾಗಿದೆ.

ಸ್ಟಾರ್ಟ್ಅಪ್ ಇಂಡಿಯಾ ಕೇಂದ್ರ

ಸ್ಟಾರ್ಟ್ಅಪ್ ಇಂಡಿಯಾ ಆನ್‌ಲೈನ್ ಹಬ್ ಭಾರತದ ಉದ್ಯಮಶೀಲತೆಯ ಪರಿಸರ ವ್ಯವಸ್ಥೆಯ ಎಲ್ಲಾ ಪಾಲುದಾರರು ಪರಸ್ಪರರನ್ನು ಅನ್ವೇಷಿಸಲು, ಸಂಪರ್ಕಿಸಲು ಮತ್ತು ತೊಡಗಿಸಿಕೊಳ್ಳಲು ಇರುವ ಒಂದು ವಿಶಿಷ್ಟ ಡಿಜಿಟಲ್ ವೇದಿಕೆಯಾಗಿದೆ. ಈ ಸ್ಟಾರ್ಟ್ಅಪ್ ಹಬ್ ಹೂಡಿಕೆದಾರರು, ಮಾರ್ಗದರ್ಶಕರು ಮತ್ತು ಇನ್ಕ್ಯುಬೇಟರ್‌ಗಳನ್ನು ಭಾರತದ ಮಹತ್ವಾಕಾಂಕ್ಷಿ ಉದ್ಯಮಿಗಳೊಂದಿಗೆ ಸಂಪರ್ಕಿಸುವ ಮೂಲಕ ಕಾರ್ಯನಿರ್ವಹಿಸುತ್ತದೆ. ಇದು ನಿಧಿಗಳು, ಶೈಕ್ಷಣಿಕ ಸಂಸ್ಥೆಗಳು, ಕಾರ್ಪೊರೇಟ್‌ಗಳು ಮತ್ತು ಸರ್ಕಾರಿ ಸಂಸ್ಥೆಗಳನ್ನು ಒಂದೇ ವೇದಿಕೆಗೆ ತರುತ್ತದೆ.

ರಾಜ್ಯಗಳ ಸ್ಟಾರ್ಟ್ಅಪ್ ಶ್ರೇಯಾಂಕ ಚೌಕಟ್ಟು

ರಾಜ್ಯಗಳ ಸ್ಟಾರ್ಟ್ಅಪ್ ಶ್ರೇಯಾಂಕ ಚೌಕಟ್ಟು (SRF), ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಅವುಗಳ ಸ್ಟಾರ್ಟ್ಅಪ್-ಸ್ನೇಹಿ ನೀತಿಗಳು ಮತ್ತು ಅವುಗಳ ಅನುಷ್ಠಾನದ ಆಧಾರದ ಮೇಲೆ ಮೌಲ್ಯಮಾಪನ ಮಾಡುತ್ತದೆ. ಇದು ಭಾರತದ ಉದ್ಯಮಶೀಲತೆಯ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಸ್ಪರ್ಧಾತ್ಮಕ ಒಕ್ಕೂಟ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ. ಈ ಚೌಕಟ್ಟಿನಡಿಯಲ್ಲಿ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು 'ಅತ್ಯುತ್ತಮ ಪ್ರದರ್ಶನಕಾರರು', 'ಉನ್ನತ ಪ್ರದರ್ಶನಕಾರರು', 'ನಾಯಕರು', 'ಮಹತ್ವಾಕಾಂಕ್ಷಿ ನಾಯಕರು' ಮತ್ತು 'ಉದಯೋನ್ಮುಖ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಗಳು' ಎಂಬ ವಿಭಾಗಗಳಾಗಿ ವರ್ಗೀಕರಿಸಲಾಗಿದೆ. ಇದು ಸ್ಟಾರ್ಟ್ಅಪ್ ಆಡಳಿತದಲ್ಲಿ ಆರೋಗ್ಯಕರ ಸ್ಪರ್ಧೆ ಮತ್ತು ನಿರಂತರ ಸುಧಾರಣೆಯನ್ನು ಪ್ರೋತ್ಸಾಹಿಸುತ್ತದೆ.

ರಾಷ್ಟ್ರೀಯ ಮಾರ್ಗದರ್ಶನ ವೇದಿಕೆ

ಮಾರ್ಗದರ್ಶನ, ಸಲಹೆ, ನೆರವು, ಚೇತರಿಸಿಕೊಳ್ಳುವಿಕೆ ಮತ್ತು ಬೆಳವಣಿಗೆ ಕಾರ್ಯಕ್ರಮವನ್ನು ದೇಶಾದ್ಯಂತದ ಸ್ಟಾರ್ಟ್ಅಪ್‌ಗಳಿಗೆ ಸುಲಭವಾಗಿ ಮಾರ್ಗದರ್ಶನ ದೊರೆಯುವಂತೆ ಮಾಡಲು ಅಭಿವೃದ್ಧಿಪಡಿಸಲಾಗಿದೆ. ಉದ್ಯಮಿಗಳನ್ನು ಅನುಭವಿ ಮಾರ್ಗದರ್ಶಕರೊಂದಿಗೆ ಸಂಪರ್ಕಿಸುವ ಮೂಲಕ, ಈ ಪೋರ್ಟಲ್ ಸ್ಟಾರ್ಟ್ಅಪ್ ಬೆಳವಣಿಗೆಯನ್ನು ಬೆಂಬಲಿಸಲು, ಕಾರ್ಯತಂತ್ರದ ಮಾರ್ಗದರ್ಶನ ನೀಡಲು ಮತ್ತು ದೇಶಾದ್ಯಂತ ಒಟ್ಟಾರೆ ಉದ್ಯಮಶೀಲತೆಯ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಗುರಿಯನ್ನು ಹೊಂದಿದೆ.

ಸ್ಟಾರ್ಟ್ಅಪ್ ಇಂಡಿಯಾ ಇನ್ವೆಸ್ಟರ್ ಕನೆಕ್ಟ್ ಪೋರ್ಟಲ್

ಎಸ್‌ಐಡಿಬಿಐ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾದ ಸ್ಟಾರ್ಟ್ಅಪ್ ಇಂಡಿಯಾ ಇನ್ವೆಸ್ಟರ್ ಕನೆಕ್ಟ್ ಪೋರ್ಟಲ್ ಒಂದು ಡಿಜಿಟಲ್ ವೇದಿಕೆಯಾಗಿದ್ದು, ಇದು ಸ್ಟಾರ್ಟ್ಅಪ್‌ಗಳನ್ನು ವೆಂಚರ್ ಕ್ಯಾಪಿಟಲ್ ಫಂಡ್‌ಗಳು ಮತ್ತು ಹೂಡಿಕೆದಾರರೊಂದಿಗೆ ಸಂಪರ್ಕಿಸುತ್ತದೆ. ಇದು ವಿಶೇಷವಾಗಿ ಆರಂಭಿಕ ಹಂತದ ಉದ್ಯಮಗಳ ಮೇಲೆ ಕೇಂದ್ರೀಕರಿಸುತ್ತದೆ. ಈ ವೇದಿಕೆಯು ಉದ್ಯಮಿಗಳಿಗೆ ಒಂದೇ ಅರ್ಜಿಯ ಮೂಲಕ ಹಲವಾರು ಹೂಡಿಕೆದಾರರನ್ನು ತಲುಪಲು ಮತ್ತು ತಮ್ಮ ಆಲೋಚನೆಗಳನ್ನು (pitch) ಪರಿಣಾಮಕಾರಿಯಾಗಿ ಮಂಡಿಸಲು ಅನುವು ಮಾಡಿಕೊಡುತ್ತದೆ.

ಭಾರತದ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಯೋಜನೆಗಳು

ಸ್ಟಾರ್ಟ್ಅಪ್ ಇಂಡಿಯಾದ ಜೊತೆಗೆ, ವಿವಿಧ ವಲಯ-ನಿರ್ದಿಷ್ಟ ಮತ್ತು ಸಚಿವಾಲಯಗಳ ನೇತೃತ್ವದ ಉಪಕ್ರಮಗಳು ತಂತ್ರಜ್ಞಾನ ಅಭಿವೃದ್ಧಿ, ಗ್ರಾಮೀಣ ಉದ್ಯಮಶೀಲತೆ, ಶೈಕ್ಷಣಿಕ ನಾವೀನ್ಯತೆ ಮತ್ತು ಪ್ರಾದೇಶಿಕ ಒಳಗೊಳ್ಳುವಿಕೆಯನ್ನು ಗುರಿಯಾಗಿಸುವ ಮೂಲಕ ಭಾರತದ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯನ್ನು ಬಲಪಡಿಸಿವೆ. ಈ ಯೋಜನೆಗಳು ಸ್ಟಾರ್ಟ್ಅಪ್‌ಗಳಿಗೆ ಸಿಗುವ ಬೆಂಬಲವು ವಿಸ್ತಾರವಾಗಿರುವಂತೆ, ವಿಕೇಂದ್ರೀಕೃತವಾಗಿರುವಂತೆ ಮತ್ತು ರಾಷ್ಟ್ರೀಯ ಅಭಿವೃದ್ಧಿಯ ಆದ್ಯತೆಗಳಿಗೆ ಅನುಗುಣವಾಗಿರುವಂತೆ ಖಚಿತಪಡಿಸುತ್ತವೆ.

ಅಟಲ್ ಇನ್ನೋವೇಶನ್ ಮಿಷನ್

ನೀತಿ ಆಯೋಗವು 2016 ರಲ್ಲಿ ಪ್ರಾರಂಭಿಸಿದ ಅಟಲ್ ಇನ್ನೋವೇಶನ್ ಮಿಷನ್, ಶಾಲೆಗಳು, ವಿಶ್ವವಿದ್ಯಾಲಯಗಳು, ಸಂಶೋಧನಾ ಸಂಸ್ಥೆಗಳು, ಸ್ಟಾರ್ಟ್ಅಪ್‌ಗಳು ಮತ್ತು ಕೈಗಾರಿಕೆಗಳಾದ್ಯಂತ ನಾವೀನ್ಯತೆ ಮತ್ತು ಉದ್ಯಮಶೀಲತೆಯ ಸಂಸ್ಕೃತಿಯನ್ನು ರಾಷ್ಟ್ರವ್ಯಾಪಿ ಪೋಷಿಸುವ ಗುರಿಯನ್ನು ಹೊಂದಿರುವ ಸರ್ಕಾರದ ಪ್ರಮುಖ ಉಪಕ್ರಮವಾಗಿದೆ. ಮಾರ್ಚ್ 2028 ರವರೆಗೆ 2,750 ಕೋಟಿ ರೂಪಾಯಿಗಳ ವೆಚ್ಚದೊಂದಿಗೆ, ಎಐಎಂ ನಾವೀನ್ಯತೆ ಕಾರ್ಯಕ್ರಮಗಳನ್ನು ವಿನ್ಯಾಸಗೊಳಿಸಲು, ಪಾಲುದಾರಿಕೆಗಳನ್ನು ಸಕ್ರಿಯಗೊಳಿಸಲು ಮತ್ತು ಭಾರತದ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಸಮಗ್ರ ಚೌಕಟ್ಟನ್ನು ಒದಗಿಸುತ್ತದೆ.

ಎಐಎಂ 1.0: ಪ್ರಮುಖ ಕಾರ್ಯಕ್ರಮಗಳು

ವಿವಿಧ ಕೇಂದ್ರ ಮತ್ತು ರಾಜ್ಯ ಸಚಿವಾಲಯಗಳು, ಇನ್ಕ್ಯುಬೇಟರ್‌ಗಳು ಮತ್ತು ಜಾಗತಿಕ ಪಾಲುದಾರರೊಂದಿಗೆ ನಿಕಟವಾಗಿ ಕೆಲಸ ಮಾಡುವ ಮೂಲಕ, ಎಐಎಂ ಅಡಿಯಲ್ಲಿನ ಪ್ರಮುಖ ಕಾರ್ಯಕ್ರಮಗಳು ಭಾರತೀಯ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸುತ್ತವೆ.

ಅಟಲ್ ಟಿಂಕರಿಂಗ್ ಲ್ಯಾಬ್ಸ್

  • ಅಟಲ್ ಟಿಂಕರಿಂಗ್ ಲ್ಯಾಬ್ ಕಾರ್ಯಕ್ರಮವು ವಿದ್ಯಾರ್ಥಿಗಳನ್ನು ಕಂಠಪಾಠದ ಕಲಿಕೆಯಿಂದ ದೂರವಿಟ್ಟು ಸೃಜನಶೀಲತೆ, ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ ಮತ್ತು ನಾವೀನ್ಯತೆಯತ್ತ ಕೊಂಡೊಯ್ಯುವ ಮೂಲಕ ಭಾರತದ ಶಿಕ್ಷಣ ವ್ಯವಸ್ಥೆಯನ್ನು ಮರುರೂಪಿಸುವುದರ ಮೇಲೆ ಗಮನ ಹರಿಸಿದೆ.

  • 733 ಜಿಲ್ಲೆಗಳಲ್ಲಿ ಹರಡಿರುವ 10,000 ಕ್ಕೂ ಹೆಚ್ಚು ATL ಗಳ ಮೂಲಕ, ಎಐಎಂ ಮಿಲಿಯನ್ಗಟ್ಟಲೆ ವಿದ್ಯಾರ್ಥಿಗಳಿಗೆ AI, ರೋಬೋಟಿಕ್ಸ್, IoT, 3D ಪ್ರಿಂಟಿಂಗ್ ಮತ್ತು ಇನ್ನೂ ಹೆಚ್ಚಿನ 21 ನೇ ಶತಮಾನದ ಕೌಶಲಗಳನ್ನು ಅನ್ವೇಷಿಸಲು ಅನುವು ಮಾಡಿಕೊಡುತ್ತಿದೆ. 1.1 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವ ಮೂಲಕ, ಇದು 16 ಲಕ್ಷಕ್ಕೂ ಅಧಿಕ ನಾವೀನ್ಯತಾ ಯೋಜನೆಗಳಿಗೆ ಚಾಲನೆ ನೀಡಿದೆ.

ಕಮ್ಯುನಿಟಿ ಇನ್ನೋವೇಟರ್ ಫೆಲೋಶಿಪ್

  • UNDP ಇಂಡಿಯಾದ ಸಹಯೋಗದೊಂದಿಗೆ ಜಾರಿಗೆ ತರಲಾದ ಈ ಕಾರ್ಯಕ್ರಮವು, ತಳಮಟ್ಟದ ಉದ್ಯಮಶೀಲತೆ ಮತ್ತು ಸಾಮಾಜಿಕ ಪರಿಣಾಮವನ್ನು ಉತ್ತೇಜಿಸಲು ಅಗತ್ಯವಿರುವ ಜ್ಞಾನ, ಮಾರ್ಗದರ್ಶನ ಮತ್ತು ಮೂಲಸೌಕರ್ಯ ಬೆಂಬಲದೊಂದಿಗೆ ಮಹತ್ವಾಕಾಂಕ್ಷಿ ಸಮುದಾಯ ನವೋದ್ಯಮಿಗಳನ್ನು ಸಜ್ಜುಗೊಳಿಸುತ್ತದೆ.

  • ಒಂದು ವರ್ಷದ ತೀವ್ರತರವಾದ ಫೆಲೋಶಿಪ್‌ನಲ್ಲಿ, ಪ್ರತಿ ಫೆಲೋಗಳನ್ನು ಅಟಲ್ ಕಮ್ಯುನಿಟಿ ಇನ್ನೋವೇಶನ್ ಸೆಂಟರ್‌ನಲ್ಲಿ ಇರಿಸಲಾಗುತ್ತದೆ. ಅಲ್ಲಿ ಅವರು SDG (ಸುಸ್ಥಿರ ಅಭಿವೃದ್ಧಿ ಗುರಿಗಳು) ಅರಿವು, ಉದ್ಯಮಶೀಲತೆ ಮತ್ತು ಜೀವನ ಕೌಶಲಗಳನ್ನು ಪಡೆಯುತ್ತಾರೆ, ಹಾಗೂ ತಮ್ಮದೇ ಆದ ನವೀನ ಆಲೋಚನೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಮತ್ತು ಸುಧಾರಿಸುವಲ್ಲಿ ಪ್ರಾಯೋಗಿಕ ಅನುಭವವನ್ನು ಪಡೆಯುತ್ತಾರೆ.

ಯೂತ್ ಕೋ:ಲ್ಯಾಬ್ ಕಾರ್ಯಕ್ರಮ

  • ಯೂತ್ ಕೋ:ಲ್ಯಾಬ್ ಏಷ್ಯಾ-ಪೆಸಿಫಿಕ್ ಪ್ರದೇಶದಾದ್ಯಂತ ಯುವಜನರಿಗೆ ನಾಯಕತ್ವ, ಸಾಮಾಜಿಕ ನಾವೀನ್ಯತೆ ಮತ್ತು ಉದ್ಯಮಶೀಲತೆಯ ಮೂಲಕ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಕಾರಗೊಳಿಸಲು ಸಬಲೀಕರಣ ಮತ್ತು ಹೂಡಿಕೆ ಮಾಡುವ ಗುರಿಯನ್ನು ಹೊಂದಿದೆ.

  • ಈ ಕಾರ್ಯಕ್ರಮವು ಪ್ಯಾನಲ್ ಚರ್ಚೆಗಳು, ಕಾರ್ಯಾಗಾರಗಳು ಮತ್ತು ವೆಬಿನಾರ್‌ಗಳ ಮೂಲಕ ವಿಷಯ-ಆಧಾರಿತ ರಾಷ್ಟ್ರೀಯ ಸಂವಾದಗಳನ್ನು ಹೈಲೈಟ್ ಮಾಡಿದೆ. ಜೊತೆಗೆ ದೀರ್ಘಕಾಲದ ಇನ್ಕ್ಯುಬೇಷನ್ ಮತ್ತು ಪ್ರಾದೇಶಿಕ ಶೃಂಗಸಭೆಗಳಲ್ಲಿ ಪ್ರಾತಿನಿಧ್ಯ ನೀಡುವ ಮೂಲಕ ಯುವ ನೇತೃತ್ವದ ಉದ್ಯಮಗಳನ್ನು ಬೆಂಬಲಿಸಿದೆ.

  • ಅಸಿಸ್ಟೆಕ್ ಫೌಂಡೇಶನ್ ಸಹಯೋಗದೊಂದಿಗೆ ನಡೆದ ಯೂತ್ ಕೋ:ಲ್ಯಾಬ್ ರಾಷ್ಟ್ರೀಯ ನಾವೀನ್ಯತೆ ಸವಾಲು 2024–25, ವಿಕಲಚೇತನ ನವೋದ್ಯಮಿಗಳು ಸೇರಿದಂತೆ ಯುವ ಉದ್ಯಮಿಗಳಿಗೆ ಸಹಾಯಕ ತಂತ್ರಜ್ಞಾನ, ಅಂತರ್ಗತ ಎಡ್-ಟೆಕ್ ಮತ್ತು ಕೌಶಲ ತರಬೇತಿ ಹಾಗೂ ಆರೈಕೆ ಸೇವಾ ಮಾದರಿಗಳಲ್ಲಿ ವಿಕಲಚೇತನರ ಸುಲಭ ಪ್ರವೇಶ ಮತ್ತು ಯೋಗಕ್ಷೇಮವನ್ನು ಹೆಚ್ಚಿಸುವ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಉತ್ತೇಜನ ನೀಡಿದೆ.

ಎಐಎಂ 1.0 ನಾವೀನ್ಯತೆಯ ಮೂಲಸೌಕರ್ಯಗಳನ್ನು ಸ್ಥಾಪಿಸುವ ಮತ್ತು ಭಾರತದ ಉದಯೋನ್ಮುಖ ಪರಿಸರ ವ್ಯವಸ್ಥೆಯನ್ನು ಪೋಷಿಸುವುದರ ಮೇಲೆ ಗಮನ ಹರಿಸಿದ್ದರೆ, ಎಐಎಂ 2.0 (2024) ಪರಿಸರ ವ್ಯವಸ್ಥೆಯಲ್ಲಿನ ಕೊರತೆಗಳನ್ನು ನೀಗಿಸುವ ಹೊಸ ಉಪಕ್ರಮಗಳನ್ನು ಪ್ರಾಯೋಗಿಕವಾಗಿ ಜಾರಿಗೊಳಿಸುವುದು ಮತ್ತು ಸರ್ಕಾರಗಳು, ಉದ್ಯಮಗಳು, ಶೈಕ್ಷಣಿಕ ಕ್ಷೇತ್ರ ಹಾಗೂ ಸಮುದಾಯಗಳ ಸಹಯೋಗದೊಂದಿಗೆ ಯಶಸ್ವಿ ಮಾದರಿಗಳನ್ನು ವಿಸ್ತರಿಸುವುದರ ಮೇಲೆ ಕೇಂದ್ರೀಕರಿಸಿದೆ. ಇದು ಶಾಲಾ ವಿದ್ಯಾರ್ಥಿಗಳಲ್ಲಿ ಸಮಸ್ಯೆಗಳನ್ನು ಪರಿಹರಿಸುವ ಮತ್ತು ಉದ್ಯಮಶೀಲತೆಯ ಮನೋಭಾವವನ್ನು ಬೆಳೆಸುವ ಅಟಲ್ ಟಿಂಕರಿಂಗ್ ಲ್ಯಾಬ್ಸ್ (ATLs) ಪರಿಸರ ವ್ಯವಸ್ಥೆಯನ್ನು ವಿಸ್ತರಿಸುವ ಮೂಲಕ ಆರಂಭಿಕ ಹಂತದ ನಾವೀನ್ಯತೆಯ ಮಾರ್ಗವನ್ನು ಬಲಪಡಿಸುತ್ತಿದೆ.

ಎಐಎಂ 2.0 ಅಡಿಯಲ್ಲಿನ ಕಾರ್ಯಕ್ರಮಗಳು

  • ಭಾಷಾ ಒಳಗೊಳ್ಳುವಿಕೆಯ ನಾವೀನ್ಯತೆ ಕಾರ್ಯಕ್ರಮ (LIPI): ಇದು ಇಂಗ್ಲಿಷ್ ಮಾತನಾಡದ ನವೋದ್ಯಮಿಗಳು, ಉದ್ಯಮಿಗಳು ಮತ್ತು ಹೂಡಿಕೆದಾರರಿಗೆ ಇರುವ ಅಡೆತಡೆಗಳನ್ನು ಕಡಿಮೆ ಮಾಡಲು ಗಮನಹರಿಸುತ್ತದೆ. ಭಾರತದ 22 ಅಧಿಕೃತ ಭಾಷೆಗಳಲ್ಲಿ ಬೆಂಬಲ ನೀಡಲು 30 ಪ್ರಾದೇಶಿಕ ನಾವೀನ್ಯತೆ ಕೇಂದ್ರಗಳನ್ನು ಸ್ಥಾಪಿಸುವುದು ಇದರ ಗುರಿಯಾಗಿದೆ.

  • ಪಾಕ್ಷಿಕ ಕಾರ್ಯಕ್ರಮ: ಇದು ಜಮ್ಮು ಮತ್ತು ಕಾಶ್ಮೀರ, ಲಡಾಖ್, ಈಶಾನ್ಯ ರಾಜ್ಯಗಳು ಮತ್ತು ಆಕಾಂಕ್ಷಿ ಜಿಲ್ಲೆಗಳು ಹಾಗೂ ಬ್ಲಾಕ್‌ಗಳಿಗಾಗಿ ಅಟಲ್ ಟಿಂಕರಿಂಗ್ ಲ್ಯಾಬ್‌ಗಳ ಮೂಲಕ ವಿಶೇಷವಾಗಿ ವಿನ್ಯಾಸಗೊಳಿಸಿದ ನಾವೀನ್ಯತೆ ಮತ್ತು ಉದ್ಯಮಶೀಲತೆಯ ಮಾದರಿಗಳನ್ನು ರೂಪಿಸಲು ಶ್ರಮಿಸುತ್ತದೆ.

  • ಮಾನವ ಬಂಡವಾಳ ಅಭಿವೃದ್ಧಿ ಕಾರ್ಯಕ್ರಮ: ಭಾರತದ ನಾವೀನ್ಯತೆ ಮತ್ತು ಉದ್ಯಮಶೀಲತೆಯ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು, ನಿರ್ವಹಿಸಲು ಮತ್ತು ಮುಂದುವರಿಸಲು ಸಮರ್ಥರಾದ ವೃತ್ತಿಪರರು, ವ್ಯವಸ್ಥಾಪಕರು, ಶಿಕ್ಷಕರು ಮತ್ತು ತರಬೇತುದಾರರ ಪಡೆಯನ್ನು ನಿರ್ಮಿಸುವ ಗುರಿಯನ್ನು ಇದು ಹೊಂದಿದೆ.

  • ಡೀಪ್ಟೆಕ್ ರಿಯಾಕ್ಟರ್: ಇದು ದೀರ್ಘಾವಧಿಯ ಅಭಿವೃದ್ಧಿ ಮತ್ತು ಹೆಚ್ಚಿನ ಹೂಡಿಕೆಯ ಅಗತ್ಯವಿರುವ 'ಡೀಪ್ ಟೆಕ್' ನಾವೀನ್ಯತೆಗಳನ್ನು ವಾಣಿಜ್ಯೀಕರಿಸಲು ಪರಿಣಾಮಕಾರಿ ಮಾರ್ಗಗಳನ್ನು ಅನ್ವೇಷಿಸುವ ಸಂಶೋಧನಾ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.

  • ಅಂತಾರಾಷ್ಟ್ರೀಯ ನಾವೀನ್ಯತೆ ಸಹಯೋಗ ಕಾರ್ಯಕ್ರಮ: ಈ ಕಾರ್ಯಕ್ರಮವು ಭಾರತದ ನಾವೀನ್ಯತೆ ಮತ್ತು ಉದ್ಯಮಶೀಲತೆಯ ಪರಿಸರ ವ್ಯವಸ್ಥೆಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುತ್ತದೆ.

  • ಉತ್ಪನ್ನದ ಗುಣಮಟ್ಟವನ್ನು (ಉದ್ಯೋಗಗಳು, ಉತ್ಪನ್ನಗಳು ಮತ್ತು ಸೇವೆಗಳು) ಸುಧಾರಿಸುವ ಗುರಿಯನ್ನು ಹೊಂದಿರುವ ಇತರ ಕಾರ್ಯಕ್ರಮಗಳು ಹೀಗಿವೆ; ಕೈಗಾರಿಕಾ ವೇಗವರ್ಧಕ ಕಾರ್ಯಕ್ರಮ: ಮುಂದುವರಿದ ಹಂತದ ಸ್ಟಾರ್ಟ್ಅಪ್‌ಗಳ ವಿಸ್ತರಣೆಯಲ್ಲಿ ಉದ್ಯಮಗಳ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಇದು ನೆರವಾಗುತ್ತದೆ. ಅಟಲ್ ಸೆಕ್ಟೋರಲ್ ಇನ್ನೋವೇಶನ್ ಲಾಂಚ್ಪ್ಯಾಡ್ಸ್ (ASIL) ಕಾರ್ಯಕ್ರಮ: ಪ್ರಮುಖ ಕೈಗಾರಿಕಾ ವಲಯಗಳಲ್ಲಿನ ಸ್ಟಾರ್ಟ್ಅಪ್‌ಗಳಿಂದ ಉತ್ಪನ್ನಗಳನ್ನು ಸಂಯೋಜಿಸಲು ಮತ್ತು ಖರೀದಿಸಲು ಕೇಂದ್ರ ಸಚಿವಾಲಯಗಳಲ್ಲಿ 'iDEX' ಮಾದರಿಯ ವೇದಿಕೆಗಳನ್ನು ನಿರ್ಮಿಸಲು ಇದು ಶ್ರಮಿಸುತ್ತದೆ.

ಜೆನೆಸಿಸ್

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ರಾಷ್ಟ್ರೀಯ ಡೀಪ್-ಟೆಕ್ ಸ್ಟಾರ್ಟ್ಅಪ್ ವೇದಿಕೆಯಾದ 'ಜೆನೆಸಿಸ್' ಉಪಕ್ರಮವನ್ನು 2022 ರ ಜುಲೈನಲ್ಲಿ ಪ್ರಾರಂಭಿಸಲಾಯಿತು. ಭಾರತದಾದ್ಯಂತ ಇರುವ ಎರಡನೇ ಮತ್ತು ಮೂರನೇ ಹಂತದ ನಗರಗಳಲ್ಲಿನ ಸುಮಾರು 1600 ತಂತ್ರಜ್ಞಾನ ಸ್ಟಾರ್ಟ್ಅಪ್‌ಗಳನ್ನು ಅನುಷ್ಠಾನಗೊಳಿಸುವ ಸಂಸ್ಥೆಗಳ ಮೂಲಕ ವಿಸ್ತರಿಸುವ ಗುರಿಯನ್ನು ಇದು ಹೊಂದಿದೆ. ಅಲ್ಲದೆ, ಡೀಪ್-ಟೆಕ್ ನಾವೀನ್ಯತೆಗಳಿಗಾಗಿ ಇದು ಗಮನಾರ್ಹ ಧನಸಹಾಯ ಮತ್ತು ಬೆಂಬಲವನ್ನು ನೀಡುತ್ತದೆ.

ಐದು ವರ್ಷಗಳ ಅವಧಿಗೆ 490 ಕೋಟಿ ರೂಪಾಯಿಗಳ ಬಜೆಟ್ ವೆಚ್ಚದೊಂದಿಗೆ, ಈ ಯೋಜನೆಯು ವಿವಿಧ ಪಾಲುದಾರರಾದ ಸ್ಟಾರ್ಟ್ಅಪ್‌ಗಳು, ಸರ್ಕಾರಿ ಸಂಸ್ಥೆಗಳು, ಶೈಕ್ಷಣಿಕ ಕ್ಷೇತ್ರ ಮತ್ತು ಕಾರ್ಪೊರೇಟ್‌ಗಳ ನಡುವಿನ ಸಹಯೋಗದ ಮೂಲಕ ಭಾರತದ ವೇಗವಾಗಿ ವಿಸ್ತರಿಸುತ್ತಿರುವ ತಂತ್ರಜ್ಞಾನ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯನ್ನು ವೇಗಗೊಳಿಸಲು ಮತ್ತು ಬಲಪಡಿಸಲು ರೂಪಿತವಾಗಿದೆ.

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ನವೋದ್ಯಮ ಕೇಂದ್ರ

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ 2016 ರಲ್ಲಿ ಸ್ಥಾಪಿಸಲಾದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ನವೋದ್ಯಮ ಕೇಂದ್ರ, ತಂತ್ರಜ್ಞಾನ ಆಧಾರಿತ ನಾವೀನ್ಯತೆಯನ್ನು ಉತ್ತೇಜಿಸುತ್ತದೆ ಮತ್ತು ಭಾರತದ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಈ ಹಬ್ ತಂತ್ರಜ್ಞಾನ ಆಧಾರಿತ ಆರ್ಥಿಕ ಬೆಳವಣಿಗೆ ಮತ್ತು ನಾವೀನ್ಯತೆಯನ್ನು ಮುನ್ನಡೆಸುತ್ತದೆ ಹಾಗೂ ಇನ್ಕ್ಯುಬೇಶನ್ ಕೇಂದ್ರಗಳು, ಉದಯೋನ್ಮುಖ ತಂತ್ರಜ್ಞಾನಗಳ ಉತ್ಕೃಷ್ಟತಾ ಕೇಂದ್ರಗಳು ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಬೆಂಬಲಿಸುವ ಇತರ ವೇದಿಕೆಗಳನ್ನು ಸಂಪರ್ಕಿಸುವ ಕೇಂದ್ರ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.

ಡಿಸೆಂಬರ್ 2025 ರ ಹೊತ್ತಿಗೆ, ಮೈಟಿ ಸ್ಟಾರ್ಟ್ಅಪ್ ಹಬ್ (MSH) ದೇಶಾದ್ಯಂತ 6,148 ಕ್ಕೂ ಹೆಚ್ಚು ಸ್ಟಾರ್ಟ್ಅಪ್‌ಗಳು, 517 ಕ್ಕೂ ಹೆಚ್ಚು ಇನ್ಕ್ಯುಬೇಟರ್‌ಗಳು ಮತ್ತು 329 ಕ್ಕೂ ಹೆಚ್ಚು ಪ್ರಯೋಗಾಲಯಗಳನ್ನು ಒಳಗೊಂಡಿರುವ ಸಮೃದ್ಧ ಪರಿಸರ ವ್ಯವಸ್ಥೆಯನ್ನು ಬೆಂಬಲಿಸುತ್ತಿದೆ.

ತಂತ್ರಜ್ಞಾನ ಇನ್ಕ್ಯುಬೇಶನ್ ಮತ್ತು ಉದ್ಯಮಿಗಳ ಅಭಿವೃದ್ಧಿ 2.0 ಯೋಜನೆ

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ 2019 ರಲ್ಲಿ ಜಾರಿಗೆ ತರಲಾದ ಟಿಐಡಿಇ 2.0 ಯೋಜನೆಯು, ಐಒಟಿ, ಎಐ, ಬ್ಲಾಕ್‌ಚೈನ್ ಮತ್ತು ರೋಬೋಟಿಕ್ಸ್‌ನಂತಹ ಉದಯೋನ್ಮುಖ ತಂತ್ರಜ್ಞಾನಗಳನ್ನು ಬಳಸುವ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ICT) ಸ್ಟಾರ್ಟ್ಅಪ್‌ಗಳನ್ನು ಬೆಂಬಲಿಸುವ ಇನ್ಕ್ಯುಬೇಟರ್‌ಗಳನ್ನು ಬಲಪಡಿಸುವ ಮೂಲಕ ತಂತ್ರಜ್ಞಾನ ಆಧಾರಿತ ಉದ್ಯಮಶೀಲತೆಯನ್ನು ಉತ್ತೇಜಿಸಲು ರೂಪಿಸಲಾಗಿದೆ.

ಈ ಯೋಜನೆಯು ಆರೋಗ್ಯ ಸೇವೆ, ಶಿಕ್ಷ), ಕೃಷಿ, ಹಣಕಾಸು ಒಳಗೊಳ್ಳುವಿಕೆ (ಡಿಜಿಟಲ್ ಪಾವತಿಗಳು ಸೇರಿದಂತೆ), ಮೂಲಸೌಕರ್ಯ ಮತ್ತು ಸಾರಿಗೆ ಹಾಗೂ ಪರಿಸರ ಮತ್ತು ಹಸಿರು ತಂತ್ರಜ್ಞಾನ ಎಂಬ ವಿಷಯಾಧಾರಿತ ವಲಯಗಳನ್ನು ಒಳಗೊಂಡಿದೆ. ರಾಷ್ಟ್ರೀಯ ಆದ್ಯತೆಗಳಿಗೆ ಅನುಗುಣವಾಗಿ ಏಳು ವಿಷಯಾಧಾರಿತ ವಲಯಗಳಲ್ಲಿ ಸಮಗ್ರ ಬೆಂಬಲವನ್ನು ನೀಡಲು ಇದು ಶ್ರಮಿಸುತ್ತದೆ. ದೇಶಾದ್ಯಂತದ ಉನ್ನತ ಶೈಕ್ಷಣಿಕ ಸಂಸ್ಥೆಗಳು ಮತ್ತು ರಾಷ್ಟ್ರೀಯ ಸಂಶೋಧನಾ ಸಂಸ್ಥೆಗಳಲ್ಲಿರುವ 51 ಇನ್ಕ್ಯುಬೇಟರ್‌ಗಳ ಮೂಲಕ ಈ ಬೆಂಬಲವನ್ನು ನೀಡಲಾಗುತ್ತದೆ.

ನಿಧಿ

ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು 2016 ರಲ್ಲಿ ಪ್ರಾರಂಭಿಸಿದ 'ನಿಧಿ' ಯೋಜನೆಯು, ಜ್ಞಾನಾಧಾರಿತ ಮತ್ತು ತಂತ್ರಜ್ಞಾನ ಚಾಲಿತ ಆಲೋಚನೆಗಳನ್ನು ಹಾಗೂ ನಾವೀನ್ಯತೆಗಳನ್ನು ಯಶಸ್ವಿ ಸ್ಟಾರ್ಟ್ಅಪ್‌ಗಳಾಗಿ ಪೋಷಿಸುವ ಒಂದು ಸಮಗ್ರ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮವು ಸಂಪತ್ತು ಮತ್ತು ಉದ್ಯೋಗ ಸೃಷ್ಟಿಯ ಮೂಲಕ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಸಾಧಿಸುವ ಉದ್ದೇಶದೊಂದಿಗೆ, ನಾವೀನ್ಯತೆ ಆಧಾರಿತ ಉದ್ಯಮಶೀಲತೆಯ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವತ್ತ ಗಮನಹರಿಸುತ್ತದೆ.

ಈ ಯೋಜನೆಯು 1,30,000 ಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ಮೂಲಕ ಆರ್ಥಿಕತೆಗೆ ಕೊಡುಗೆ ನೀಡಿದೆ. ಇದು 12,000 ಕ್ಕೂ ಹೆಚ್ಚು ಸ್ಟಾರ್ಟ್ಅಪ್‌ಗಳಿಗೆ ಬೆಂಬಲ ನೀಡಿದೆ, 175 ಕ್ಕೂ ಹೆಚ್ಚು ತಂತ್ರಜ್ಞಾನ ವ್ಯವಹಾರ ಇನ್ಕ್ಯುಬೇಟರ್‌ಗಳನ್ನು (TBI) ಬೆಂಬಲಿಸಿದೆ ಮತ್ತು 1100 ಕ್ಕೂ ಹೆಚ್ಚು ಬೌದ್ಧಿಕ ಆಸ್ತಿಗಳನ್ನು (IP) ಸೃಷ್ಟಿಸಿದೆ.

ಘಟಕಗಳು

ನಿಧಿ ಪ್ರಯಾಸ: ಇದು ನವೋದ್ಯಮಿ ಅಥವಾ ಸ್ಟಾರ್ಟ್ಅಪ್‌ಗಳಿಗೆ ಗರಿಷ್ಠ 10 ಲಕ್ಷ ರೂಪಾಯಿಗಳ ಧನಸಹಾಯ ನೀಡುವ ಮೂಲಕ ಆಲೋಚನೆಯ ಹಂತದಿಂದ ಮೂಲ ಮಾದರಿ (Prototype) ಸಿದ್ಧಪಡಿಸುವವರೆಗೆ ಬೆಂಬಲ ನೀಡುತ್ತದೆ.

ನಿಧಿ-ಇಐಆರ್‌: ಇದು ಉದಯೋನ್ಮುಖ ಉದ್ಯಮಿಗಳಿಗೆ ಇರುವ ಅಪಾಯವನ್ನು ಕಡಿಮೆ ಮಾಡಲು ಮತ್ತು ಪದವಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಇರುವ ಬೆಂಬಲ ವ್ಯವಸ್ಥೆಯಾಗಿದೆ. ಇದು ಮಾಸಿಕ 30,000 ರೂಪಾಯಿಗಳವರೆಗೆ ಆರ್ಥಿಕ ನೆರವು ನೀಡುತ್ತದೆ.

ನಿಧಿ -ಟಿಬಿಐ: ಆತಿಥೇಯ ಸಂಸ್ಥೆಯಲ್ಲಿ ಲಭ್ಯವಿರುವ ಪರಿಣತಿ ಮತ್ತು ಮೂಲಸೌಕರ್ಯವನ್ನು ಬಳಸಿಕೊಂಡು ಹೊಸ ಉದ್ಯಮಗಳ ಸೃಷ್ಟಿಗೆ ನಾವೀನ್ಯತೆ ಮತ್ತು ತಂತ್ರಜ್ಞಾನಗಳನ್ನು ಬಳಸಿಕೊಳ್ಳುವುದು ಇದರ ಉದ್ದೇಶವಾಗಿದೆ.

ನಿಧಿ- ಐಟಿಬಿಐ: ಇದು ನಿಧಿ- ಐಟಿಬಿಐ ನ ಹೊಸ ಆವೃತ್ತಿಯಾಗಿದೆ. ಇದು ಪ್ರಮುಖವಾಗಿ 2 ಮತ್ತು 3 ನೇ ಹಂತದ ನಗರಗಳಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಲು ಮತ್ತು i-TBI ಗಳನ್ನು ಬೆಂಬಲಿಸಲು ಗಮನಹರಿಸುತ್ತದೆ. ಇದು ಭೌಗೋಳಿಕತೆ, ಲಿಂಗ, ವಿಶೇಷ ಸಾಮರ್ಥ್ಯವುಳ್ಳ ವ್ಯಕ್ತಿಗಳು ಮುಂತಾದ ಒಳಗೊಳ್ಳುವಿಕೆಯ ಮೇಲೆ ಕೇಂದ್ರೀಕರಿಸುತ್ತದೆ.

ನಿಧಿ-ವೇಗವರ್ಧಕ: ಕೇಂದ್ರೀಕೃತ ಮಧ್ಯಸ್ಥಿಕೆಯ ಮೂಲಕ ಸ್ಟಾರ್ಟ್ಅಪ್‌ಗಳ ಬೆಳವಣಿಗೆಯನ್ನು ವೇಗಗೊಳಿಸುತ್ತದೆ.

ನಿಧಿ-ಎಸ್‌ಎಸ್‌ಎಸ್‌: ಇದು ಆರಂಭಿಕ ಹಂತದ ಹೂಡಿಕೆಯನ್ನು ಒದಗಿಸುತ್ತದೆ. ಇದಕ್ಕಾಗಿ ಇನ್ಕ್ಯುಬೇಟರ್‌ಗೆ ಗರಿಷ್ಠ 1000 ಲಕ್ಷ ರೂಪಾಯಿಗಳನ್ನು ಮತ್ತು ಪ್ರತಿ ಸ್ಟಾರ್ಟ್ಅಪ್‌ಗೆ 'ಸೀಡ್ ಸಪೋರ್ಟ್' ಆಗಿ 100 ಲಕ್ಷ ರೂಪಾಯಿಗಳವರೆಗೆ ಆರ್ಥಿಕ ನೆರವು ನೀಡಲಾಗುತ್ತದೆ.

ನಿಧಿ-ಸಿಒಇ: ಸ್ಟಾರ್ಟ್ಅಪ್‌ಗಳು ಜಾಗತಿಕ ಮಟ್ಟಕ್ಕೆ ಬೆಳೆಯಲು ಸಹಾಯ ಮಾಡಲು ಜಾಗತಿಕವಾಗಿ ಸ್ಪರ್ಧಾತ್ಮಕವಾದ ಸೌಲಭ್ಯಗಳನ್ನು ಇವು ಒದಗಿಸುತ್ತವೆ.

ಸ್ಟಾರ್ಟ್ಅಪ್ ವಿಲೇಜ್ ಎಂಟರ್ಪ್ರೆನರ್ಶಿಪ್ ಪ್ರೋಗ್ರಾಂ

ದೀನ್ ದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿಯಲ್ಲಿ ಮೇ 2015 ರಲ್ಲಿ ಒಂದು ಉಪ-ಯೋಜನೆಯಾಗಿ ಜಾರಿಗೆ ತರಲಾದ ಎಸ್‌ವಿಇಪಿ, ಗ್ರಾಮೀಣ ಕುಟುಂಬಗಳು ಸ್ಥಳೀಯ ಉದ್ಯಮಗಳನ್ನು ಸ್ಥಾಪಿಸಲು ಮತ್ತು ವಿಸ್ತರಿಸಲು ಅನುವು ಮಾಡಿಕೊಡುವ ಮೂಲಕ ಗ್ರಾಮೀಣ ಉದ್ಯಮಶೀಲತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

  • ಇದು ಸ್ವಯಂ ಉದ್ಯೋಗ ಮತ್ತು ಕೌಶಲ ಆಧಾರಿತ ವೇತನ ಉದ್ಯೋಗದ ಮೂಲಕ ಬಡತನವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಇದು ಬಡವರಿಗೆ ಸುಸ್ಥಿರ ಮತ್ತು ವೈವಿಧ್ಯಮಯ ಜೀವನೋಪಾಯದ ಆಯ್ಕೆಗಳನ್ನು ಒದಗಿಸಲು ನೆರವಾಗುತ್ತದೆ.

  • SVEP ಯೋಜನೆಯು ಗ್ರಾಮೀಣ ಉದ್ಯಮಗಳಿಗೆ ಬಂಡವಾಳದ ಲಭ್ಯತೆ ಮತ್ತು ತಾಂತ್ರಿಕ ಬೆಂಬಲದಲ್ಲಿರುವ ಕೊರತೆಗಳನ್ನು ನೀಗಿಸುತ್ತದೆ.

  • ಈ ಉದ್ದೇಶಿತ ಮಧ್ಯಸ್ಥಿಕೆಗಳ ಮೂಲಕ, ಈ ಕಾರ್ಯಕ್ರಮವು 30 ಜೂನ್ 2025 ರ ಹೊತ್ತಿಗೆ 3.74 ಲಕ್ಷ ಉದ್ಯಮಗಳಿಗೆ ಬೆಂಬಲ ನೀಡಿದೆ. ಈ ಮೂಲಕ ಸ್ಥಳೀಯ ಆರ್ಥಿಕತೆಯನ್ನು ಬಲಪಡಿಸಿದೆ ಮತ್ತು ತಳಮಟ್ಟದಲ್ಲಿ ಆದಾಯ ಗಳಿಸುವ ಅವಕಾಶಗಳನ್ನು ಹೆಚ್ಚಿಸಿದೆ.

ಅಸ್ಪೈರ್ (ನಾವೀನ್ಯತೆ, ಗ್ರಾಮೀಣ ಕೈಗಾರಿಕೆಗಳು ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವ ಯೋಜನೆ)

ಎಂಎಸ್‌ಎಂಇ (ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ) ಸಚಿವಾಲಯವು 2015 ರಲ್ಲಿ ಪ್ರಾರಂಭಿಸಿದ ಈ ಯೋಜನೆಯು ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಇದು ಸೂಕ್ಷ್ಮ ಉದ್ಯಮಗಳ ಸೃಷ್ಟಿಗಾಗಿ ಜೀವನೋಪಾಯ ವ್ಯವಹಾರ ಇನ್ಕ್ಯುಬೇಟರ್‌ಗಳನ್ನು ಸ್ಥಾಪಿಸುವುದು, ಕೌಶಲ ಅಭಿವೃದ್ಧಿ ಮತ್ತು ಮರು-ಕೌಶಲದ ಅವಕಾಶಗಳನ್ನು ನೀಡುವುದು ಮತ್ತು ಕೈಗಾರಿಕಾ ಕ್ಲಸ್ಟರ್‌ಗಳಿಗೆ ಮಾನವಶಕ್ತಿಯನ್ನು ಪೂರೈಸುವುದರ ಮೇಲೆ ಗಮನ ಹರಿಸುತ್ತದೆ.

ಹಣಕಾಸಿನ ಉತ್ತೇಜಕಗಳು

ಯಂತ್ರೋಪಕರಣಗಳು ಮತ್ತು ಸ್ಥಾವರಗಳ ಖರೀದಿಗಾಗಿ:

  • ಸರ್ಕಾರಿ ಸಂಸ್ಥೆಗಳಿಗೆ ಗರಿಷ್ಠ 1 ಕೋಟಿ ರೂಪಾಯಿಗಳು.

  • ಖಾಸಗಿ ಸಂಸ್ಥೆಗಳಿಗೆ 75 ಲಕ್ಷ ರೂಪಾಯಿಗಳು.

  • ಮಾನವಶಕ್ತಿ ವೆಚ್ಚ, ಇನ್ಕ್ಯುಬೇಶನ್ ಮತ್ತು ಕೌಶಲ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸುವುದು ಇತ್ಯಾದಿ ನಿರ್ವಹಣಾ ವೆಚ್ಚಗಳಿಗಾಗಿ

  • ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಿಗೆ ಮಾನವಶಕ್ತಿ ವೆಚ್ಚ, ಇನ್ಕ್ಯುಬೇಶನ್ ಮತ್ತು ಕೌಶಲ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸುವಂತಹ ನಿರ್ವಹಣಾ ವೆಚ್ಚದ ಬೆಂಬಲವಾಗಿ ಗರಿಷ್ಠ 1 ಕೋಟಿ ರೂಪಾಯಿಗಳನ್ನು ನೀಡಲಾಗುತ್ತದೆ.

ಪ್ರಧಾನಮಂತ್ರಿ ಉದ್ಯೋಗ ಸೃಜನಾ ಯೋಜನೆ

ಸ್ವಯಂ ಉದ್ಯೋಗ ಮತ್ತು ತಳಮಟ್ಟದ ಉದ್ಯಮಗಳ ಸೃಷ್ಟಿಯನ್ನು ಉತ್ತೇಜಿಸಲು ಭಾರತದ ಪ್ರಮುಖ ಮಧ್ಯಸ್ಥಿಕೆಯಾಗಿ ರೂಪಿಸಲಾದ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನಾ ಯೋಜನೆಯನ್ನು, ಈ ಹಿಂದಿನ ಪ್ರಧಾನ ಮಂತ್ರಿಗಳ ರೋಜಗಾರ್ ಯೋಜನೆ ಮತ್ತು ಗ್ರಾಮೀಣ ಉದ್ಯೋಗ ಸೃಜನಾ ಯೋಜನೆಯನ್ನು ಒಂದೇ ಸುಗಮ ಚೌಕಟ್ಟಿನಲ್ಲಿ ಸಂಯೋಜಿಸುವ ಮೂಲಕ 2008 ರಲ್ಲಿ ಜಾರಿಗೆ ತರಲಾಯಿತು. ಈ ಯೋಜನೆಯನ್ನು ಎಂಎಸ್‌ಎಂಇ ಸಚಿವಾಲಯದ ಅಡಿಯಲ್ಲಿರುವ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ (KVIC) ಮೂಲಕ ಜಾರಿಗೊಳಿಸಲಾಗುತ್ತಿದ್ದು, ಇದು ವ್ಯಾಪಕ ತಲುಪುವಿಕೆ ಮತ್ತು ಪರಿಣಾಮಕಾರಿ ಸೇವೆಯನ್ನು ಖಚಿತಪಡಿಸುತ್ತದೆ.

  • ಕೇಂದ್ರ ವಲಯದ ಯೋಜನೆಯಾಗಿ, ಇದು ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಯೋಜನಾ ವೆಚ್ಚದ 25% ರಷ್ಟು ಗ್ರಾಮೀಣ ಪ್ರದೇಶಗಳಲ್ಲಿ ಮತ್ತು 15% ರಷ್ಟು ನಗರ ಪ್ರದೇಶಗಳಲ್ಲಿ ಮಾರ್ಜಿನ್ ಮನಿ (MM) ಸಹಾಯಧನವನ್ನು ನೀಡುತ್ತದೆ.

  • ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಹಿಂದುಳಿದ ವರ್ಗ (OBC), ಅಲ್ಪಸಂಖ್ಯಾತರು, ಮಹಿಳೆಯರು, ಮಾಜಿ ಸೈನಿಕರು, ವಿಕಲಚೇತನರು, ತೃತೀಯಲಿಂಗಿಗಳು ಮತ್ತು ಈಶಾನ್ಯ ಪ್ರದೇಶ, ಗುಡ್ಡಗಾಡು ಮತ್ತು ಗಡಿ ಪ್ರದೇಶಗಳು ಹಾಗೂ ಆಕಾಂಕ್ಷಿ ಜಿಲ್ಲೆಗಳ ವ್ಯಕ್ತಿಗಳನ್ನು ಒಳಗೊಂಡಿರುವ ವಿಶೇಷ ವರ್ಗದ ಫಲಾನುಭವಿಗಳು, ಗ್ರಾಮೀಣ ಪ್ರದೇಶಗಳಲ್ಲಿ 35% ಮತ್ತು ನಗರ ಪ್ರದೇಶಗಳಲ್ಲಿ 25% ರಷ್ಟು ಹೆಚ್ಚಿನ ಮಾರ್ಜಿನ್ ಮನಿ ಸಬ್ಸಿಡಿಗೆ ಅರ್ಹರಾಗಿರುತ್ತಾರೆ.

  • ಈ ಯೋಜನೆಯು ಉತ್ಪಾದನಾ ವಲಯದಲ್ಲಿ 50 ಲಕ್ಷ ರೂಪಾಯಿಗಳವರೆಗೆ ಮತ್ತು ಸೇವಾ ವಲಯದಲ್ಲಿ 20 ಲಕ್ಷ ರೂಪಾಯಿಗಳವರೆಗಿನ ಯೋಜನೆಗಳಿಗೆ ಬೆಂಬಲ ನೀಡುತ್ತದೆ.

ಮುನ್ನೋಟ: ನಾವೀನ್ಯತೆ ಮತ್ತು ಕಾರ್ಯಗತಗೊಳಿಸುವಿಕೆಯ ಮೇಲೆ ನಿರ್ಮಿತ ಭವಿಷ್ಯ

ಸ್ಟಾರ್ಟ್ಅಪ್ ಇಂಡಿಯಾ ಉಪಕ್ರಮವು ಒಂದು ದಶಕವನ್ನು ಪೂರೈಸುತ್ತಿರುವ ಈ ಸಂದರ್ಭದಲ್ಲಿ, ಭಾರತದ ನವೋದ್ಯಮ ಪರಿಸರ ವ್ಯವಸ್ಥೆಯು ಒಂದು ಪ್ರಮುಖ ತಿರುವಿನಲ್ಲಿದೆ. ಇದು ಕೇವಲ ಕ್ಷಿಪ್ರ ಬೆಳವಣಿಗೆಯಿಂದ ಸುಸ್ಥಿರ ವಿಸ್ತರಣೆ ಮತ್ತು ನೈಜ ಆರ್ಥಿಕತೆಯೊಂದಿಗೆ ಆಳವಾದ ಏಕೀಕರಣದತ್ತ ದೃಢವಾಗಿ ಸಾಗುತ್ತಿದೆ.

ಒಂದು ದಶಕದ ನಂತರ, ಭಾರತದ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯು ಕೇವಲ ಪ್ರಮಾಣವನ್ನು ಮಾತ್ರವಲ್ಲದೆ, ಜನಸಂಖ್ಯಾ ಅನುಕೂಲತೆ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಮತ್ತು ನಿರಂತರ ಸುಧಾರಣಾ ಕಾರ್ಯಸೂಚಿಯ ಮೇಲೆ ನಿರ್ಮಿತವಾದ ರಚನಾತ್ಮಕ ರೂಪಾಂತರವನ್ನು ಪ್ರತಿನಿಧಿಸುತ್ತದೆ. ಸ್ಟಾರ್ಟ್ಅಪ್‌ಗಳು ಈಗ ಆದ್ಯತೆಯ ವಲಯಗಳಲ್ಲಿ ಅಂತರ್ಗತವಾಗಿದ್ದು, ನಾವೀನ್ಯತೆ, ಉದ್ಯೋಗ ಸೃಜನೆ ಮತ್ತು ಜಾಗತಿಕ ಮಾರುಕಟ್ಟೆ ಏಕೀಕರಣವನ್ನು ಉತ್ತೇಜಿಸುತ್ತಿವೆ. ಭಾರತವು 2030 ರ ಹೊತ್ತಿಗೆ 7.3 ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ಮತ್ತು 'ವಿಕಸಿತ ಭಾರತ 2047' ರ ವಿಶಾಲ ದೃಷ್ಟಿಕೋನದತ್ತ ಮುನ್ನಡೆಯುತ್ತಿರುವಾಗ, ಸ್ಟಾರ್ಟ್ಅಪ್‌ಗಳು ದೇಶದ ಅಭಿವೃದ್ಧಿ ಪಥದಲ್ಲಿ ಕೇಂದ್ರಬಿಂದುವಾಗಿ ಮುಂದುವರಿಯಲಿವೆ. ಇವು ಬೆಳವಣಿಗೆಯ ವೇಗವರ್ಧಕಗಳಾಗಿ ಮತ್ತು ಭಾರತದ ಭವಿಷ್ಯಕ್ಕೆ ಸಿದ್ಧವಾದ, ನಾವೀನ್ಯತೆ ಆಧಾರಿತ ಆರ್ಥಿಕ ಮಾದರಿಯ ಶಾಶ್ವತ ಸಂಕೇತಗಳಾಗಿ ಕಾರ್ಯನಿರ್ವಹಿಸಲಿವೆ.

References

Ministry of Commerce & Industry

https://www.pib.gov.in/PressReleasePage.aspx?PRID=2098452&reg=3&lang=2

https://www.pib.gov.in/PressReleasePage.aspx?PRID=2038380&reg=3&lang=2

https://www.pib.gov.in/PressReleasePage.aspx?PRID=2201280&reg=3&lang=1

https://www.startupindia.gov.in/content/sih/en/startup-scheme.html

AU4149_fl3i6c.pdf

https://www.pib.gov.in/Pressreleaseshare.aspx?PRID=1895966&reg=3&lang=2

https://investorconnect.startupindia.gov.in/

https://www.startupindia.gov.in/srf/

AU1507_iPkDqy.pdf

AU4149_fl3i6c.pdf

https://www.indiabudget.gov.in/economicsurvey/doc/echapter.pdf

https://aim.gov.in/pdf/ATL-Guidebook.pdf

Ministry Of Electronics & Information Technology

https://sansad.in/getFile/loksabhaquestions/annex/184/AU2240_79NBJo.pdf?source=pqals

https://msh.meity.gov.in/schemes/tide

https://msh.meity.gov.in/

Ministry of Science & Technology

https://nidhi.dst.gov.in/nidhieir/                      

https://nidhi.dst.gov.in/schemes-programmes/nidhiprayas/

https://nidhi.dst.gov.in/

https://www.pib.gov.in/PressReleasePage.aspx?PRID=2170134&reg=3&lang=2

NIDHI- Seed Support System (NIDHI-SSS) | India Science, Technology & Innovation - ISTI Portal

Ministry of Rural Development

https://www.pib.gov.in/PressReleasePage.aspx?PRID=2081567&reg=3&lang=2

https://www.pib.gov.in/PressReleaseIframePage.aspx?PRID=2146872&reg=3&lang=2

Ministry of Micro, Small & Medium Enterprises

https://www.pib.gov.in/PressReleasePage.aspx?PRID=2204536&reg=3&lang=1

https://aspire.msme.gov.in/ASPIRE/AFHome.aspx

https://www.nimsme.gov.in/about-scheme/a-scheme-for-promotion-of-innovation-rural-industries-and-entrepreneurship-aspire-

Ministry of Home Affairs

https://www.pib.gov.in/PressReleasePage.aspx?PRID=2170168&reg=3&lang=2#:~:text=Similarly%2C%20the%20number%20of%20unicorn,harnessed%20to%20create%20unicorn%20startups

https://www.pib.gov.in/PressReleasePage.aspx?PRID=2176932&reg=3&lang=2

Ministry of Skill Development & Entrepreneurship

https://www.pib.gov.in/PressReleasePage.aspx?PRID=2038380&reg=3&lang=2

Press Information Bureau

https://www.pib.gov.in/PressNoteDetails.aspx?NoteId=155121&ModuleId=3&reg=3&lang=2

https://www.pib.gov.in/FactsheetDetails.aspx?Id=149260&reg=3&lang=2

https://www.pib.gov.in/PressNoteDetails.aspx?NoteId=154840&ModuleId=3&reg=3&lang=2

https://static.pib.gov.in/WriteReadData/specificdocs/documents/2025/jun/doc2025619572801.pdf

NITI Aayog

https://aim.gov.in/atl.php

https://www.pib.gov.in/PressReleasePage.aspx?PRID=2077102&reg=3&lang=2

IBEF

https://www.ibef.org/blogs/the-role-of-startups-in-india-s-economic-growth

https://www.ibef.org/economy/foreign-direct-investment

https://www.ibef.org/blogs/the-role-of-startups-in-india-s-economic-growth

SIDBI

https://www.sidbivcf.in/en/funds/ffs

Click here for pdf file.

 

*****

(Explainer ID: 156953) आगंतुक पटल : 7
Provide suggestions / comments
इस विज्ञप्ति को इन भाषाओं में पढ़ें: English , Urdu
Link mygov.in
National Portal Of India
STQC Certificate