Infrastructure
ಗತಿ ಶಕ್ತಿ ಬಹು-ಮಾದರಿ ಸರಕು ಸಾಗಣೆ ನಿಲ್ದಾಣಗಳು (ಜಿಸಿಟಿs): ಭಾರತದ ಲಾಜಿಸ್ಟಿಕ್ಸ್ ರೂಪಾಂತರದ ಚಾಲನಾ ಶಕ್ತಿ
Posted On:
13 JAN 2026 1:11PM
ಪ್ರಮುಖ ಅಂಶಗಳು
-
ಭಾರತೀಯ ರೈಲ್ವೆಯು ಒಟ್ಟು 306 ಜಿಸಿಟಿಗಳಿಗೆ ಅನುಮೋದನೆ ನೀಡಿದ್ದು, ಇವು ವಾರ್ಷಿಕ 192 ದಶಲಕ್ಷ ಟನ್‌ಗಳು ಸರಕು ನಿರ್ವಹಿಸುವ ಸಾಮರ್ಥ್ಯ ಹೊಂದಿವೆ; ಇವುಗಳಲ್ಲಿ 118 ಈಗಾಗಲೇ ಕಾರ್ಯಾರಂಭ ಮಾಡಿವೆ.
-
2014 ರಿಂದ, 2,672 ದಶಲಕ್ಷ ಟನ್‌ಗಳು ಸರಕು ಸಾಗಣೆಯು ರಸ್ತೆಯಿಂದ ರೈಲ್ವೆಗೆ ವರ್ಗಾವಣೆಯಾಗಿದ್ದು, ಇದರಿಂದ 143.3 ದಶಲಕ್ಷ ಟನ್‌ಗಳು ಅಷ್ಟು CO₂ ಉಳಿತಾಯವಾಗಿದೆ.
-
ಜಿಸಿಟಿ ನೀತಿಯ ಅಡಿಯಲ್ಲಿ ಸುಮಾರು 8,600 ಕೋಟಿ ರೂಪಾಯಿಗಳ ಖಾಸಗಿ ಹೂಡಿಕೆಯನ್ನು ಕ್ರೋಢೀಕರಿಸಲಾಗಿದೆ.
-
ಜಿಸಿಟಿಗಳಿಂದ ಬಂದ ಸರಕು ಸಾಗಣೆ ಆದಾಯವು 2022–23 ಮತ್ತು 2024–25 ರ ನಡುವೆ ನಾಲ್ಕು ಪಟ್ಟು ಹೆಚ್ಚಾಗಿದ್ದು, 12,608 ಕೋಟಿ ರೂಪಾಯಿಗಳನ್ನು ತಲುಪಿದೆ.
ಪೀಠಿಕೆ
ಭಾರತದ ಲಾಜಿಸ್ಟಿಕ್ಸ್ ಕ್ಷೇತ್ರವು ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ಲಾಜಿಸ್ಟಿಕ್ಸ್ ವೆಚ್ಚವು ಈಗ ಜಿಡಿಪಿಯ 7.97%ಕ್ಕೆ ಇಳಿಕೆಯಾಗುವ ಮೂಲಕ ಒಂದು ಪ್ರಮುಖ ಮೈಲಿಗಲ್ಲನ್ನು ತಲುಪಿದೆ. ಈ ಸಾಧನೆಯು ಸುಸ್ಥಿರ ಸುಧಾರಣೆಗಳು ಮತ್ತು ಸಮಗ್ರ ಯೋಜನೆಯ ಯಶಸ್ಸನ್ನು ಪ್ರತಿಬಿಂಬಿಸುತ್ತದೆ, ಇದು ದೇಶವನ್ನು ಜಾಗತಿಕ ಮಾನದಂಡಗಳಿಗೆ ಹತ್ತಿರವಾಗುವಂತೆ ಮಾಡಿದೆ. ಸಮನ್ವಯದ ಮೂಲಸೌಕರ್ಯ ಅಭಿವೃದ್ಧಿ ಮತ್ತು ಡಿಜಿಟಲ್ ಏಕೀಕರಣವು ಲಾಜಿಸ್ಟಿಕ್ಸ್ ರಂಗವನ್ನು ಹೇಗೆ ಹೆಚ್ಚು ದಕ್ಷ, ಸ್ಪರ್ಧಾತ್ಮಕ ಮತ್ತು ಭವಿಷ್ಯದ ಸವಾಲುಗಳಿಗೆ ಸಿದ್ಧವಾಗುವಂತೆ ರೂಪಿಸುತ್ತಿದೆ ಎಂಬುದನ್ನು ಇದು ತೋರಿಸುತ್ತದೆ.
ಈ ರೂಪಾಂತರದ ಕೇಂದ್ರಬಿಂದುವಾಗಿರುವ ಪಿಎಂ ಗತಿ ಶಕ್ತಿ ರಾಷ್ಟ್ರೀಯ ಬೃಹತ್ ಯೋಜನೆ, ರೈಲ್ವೆ, ಹೆದ್ದಾರಿಗಳು, ಬಂದರುಗಳು ಮತ್ತು ವಿಮಾನ ನಿಲ್ದಾಣಗಳನ್ನು ಒಂದು ಏಕೀಕೃತ ಚೌಕಟ್ಟಿನಡಿ ತಂದಿದೆ. ತಡೆರಹಿತ ಮಲ್ಟಿಮೋಡಲ್ ಸಂಪರ್ಕವನ್ನು ಕಲ್ಪಿಸುವ ಮೂಲಕ, ಈ ಯೋಜನೆಯು ಉದ್ಯಮದ ಸ್ಪರ್ಧಾತ್ಮಕತೆಯನ್ನು ಬಲಪಡಿಸಲು, ವ್ಯವಹಾರ ಸುಲಭೀಕರಣ ಮತ್ತು ಮೇಕ್ ಇನ್ ಇಂಡಿಯಾನಂತಹ ಉಪಕ್ರಮಗಳಿಗೆ ಬೆಂಬಲ ನೀಡಲು ಮತ್ತು ಸಮತೋಲಿತ ಪ್ರಾದೇಶಿಕ ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳಲು ಉದ್ದೇಶಿಸಿದೆ. ಗತಿ ಶಕ್ತಿ ಕಾರ್ಗೋ ಟರ್ಮಿನಲ್‌ಗಳು (ಜಿಸಿಟಿs) ಈ ದೃಷ್ಟಿಕೋನದ ಪ್ರಮುಖ ಆಧಾರಸ್ತಂಭಗಳಾಗಿದ್ದು, ಭಾರತವು ಅಂತಾರಾಷ್ಟ್ರೀಯ ವ್ಯಾಪಾರ ಕೇಂದ್ರವಾಗಿ ತನ್ನ ಪಾತ್ರವನ್ನು ಮತ್ತಷ್ಟು ಹೆಚ್ಚಿಸಲು ಆಧುನಿಕ ಲಾಜಿಸ್ಟಿಕ್ಸ್ ಪರಿಹಾರಗಳನ್ನು ಒದಗಿಸುತ್ತಿವೆ.
ಗತಿ ಶಕ್ತಿ ಕಾರ್ಗೋ ಟರ್ಮಿನಲ್‌ಗಳು
ರೈಲ್ವೆ ಕಾರ್ಗೋ ಟರ್ಮಿನಲ್ ಎಂಬುದು ಸರಕುಗಳನ್ನು ಲೋಡ್ ಮಾಡುವ, ಅನ್ಲೋಡ್ ಮಾಡುವ ಮತ್ತು ರೈಲುಗಳು ಹಾಗೂ ಇತರ ಸಾರಿಗೆ ವಿಧಾನಗಳ ನಡುವೆ ವರ್ಗಾಯಿಸುವ ಒಂದು ಸೌಲಭ್ಯವಾಗಿದೆ. ಇದು ಲಾಜಿಸ್ಟಿಕ್ಸ್ ಸರಪಳಿಯಲ್ಲಿ ಪ್ರಮುಖ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಕಂಟೈನರ್‌ಗಳು ಹಾಗೂ ಬೃಹತ್ ಸರಕುಗಳ ದಕ್ಷ ಚಲನೆಯನ್ನು ಸುಗಮಗೊಳಿಸುತ್ತದೆ. ಮೊದಲು, ಗತಿ ಶಕ್ತಿ ಕಾರ್ಗೋ ಟರ್ಮಿನಲ್‌ಗಳಂತಹ ಮಲ್ಟಿಮೋಡಲ್ ಹಬ್‌ಗಳಿಲ್ಲದಿದ್ದಾಗ, ಭಾರತದಲ್ಲಿ ಸರಕು ಸಾಗಣೆಯು ರಸ್ತೆ, ರೈಲು ಮತ್ತು ಬಂದರುಗಳ ನಡುವೆ ಚದುರಿಹೋಗಿತ್ತು. ಇದು ವಿಳಂಬ, ಹೆಚ್ಚಿನ ವೆಚ್ಚ ಮತ್ತು ದಟ್ಟಣೆಗೆ ಕಾರಣವಾಗಿತ್ತು. ಈ ಸಾರಿಗೆ ವಿಧಾನಗಳನ್ನು ಪರಸ್ಪರ ಸಂಪರ್ಕಿಸಲು, ಸರಕು ನಿರ್ವಹಣೆಯನ್ನು ವೇಗಗೊಳಿಸಲು ಮತ್ತು ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಏಕೀಕೃತ ಹಬ್‌ಗಳ ಅಗತ್ಯವಿದೆ.
ಗತಿ ಶಕ್ತಿ ಬಹು-ಮಾದರಿ ಸರಕು ಸಾಗಣೆ ನಿಲ್ದಾಣಗಳು (ಜಿಸಿಟಿs) ಎಂಬುದು ರೈಲ್ವೆ ಸಚಿವಾಲಯದ ಜಿಸಿಟಿ Policy, 2021 ರ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಆಧುನಿಕ ಕಾರ್ಗೋ ಟರ್ಮಿನಲ್‌ಗಳಾಗಿದ್ದು, ಇವು ರೈಲ್ವೆಯನ್ನು ಇತರ ಸಾರಿಗೆ ವಿಧಾನಗಳೊಂದಿಗೆ ಸಂಯೋಜಿಸುತ್ತವೆ.
ವಿಳಂಬವನ್ನು ಕಡಿಮೆ ಮಾಡಲು ಮತ್ತು ರೈಲ್ವೆ ಮೂಲಸೌಕರ್ಯದ ಗರಿಷ್ಠ ಬಳಕೆಯನ್ನು ಖಚಿತಪಡಿಸಿಕೊಳ್ಳಲು ಜಿಸಿಟಿಗಳನ್ನು ‘ಎಂಜಿನ್-ಆನ್-ಲೋಡ್ʼ ಕಾರ್ಯಾಚರಣೆಯೊಂದಿಗೆ ಅಭಿವೃದ್ಧಿಪಡಿಸಲಾಗುತ್ತಿದೆ. ಇವು ಯಾಂತ್ರೀಕೃತ ಲೋಡಿಂಗ್ ವ್ಯವಸ್ಥೆಗಳು ಮತ್ತು ಸೈಲೋಗಳಂತಹ ಆಧುನಿಕ ಸರಕು ನಿರ್ವಹಣಾ ಸೌಲಭ್ಯಗಳನ್ನು ಹೊಂದಿದ್ದು, ನಿರ್ವಹಣಾ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತವೆ. ವೇಗವಾದ, ಹೆಚ್ಚು ದಕ್ಷ ಮತ್ತು ವಿಶ್ವಾಸಾರ್ಹ ಸರಕು ಸೇವೆಗಳನ್ನು ಒದಗಿಸುವ ಮೂಲಕ ಒಟ್ಟು ಸರಕು ಸಾಗಣೆಯಲ್ಲಿ ಭಾರತೀಯ ರೈಲ್ವೆಯ ಪಾಲನ್ನು ಹೆಚ್ಚಿಸುವುದು ಇದರ ಒಟ್ಟಾರೆ ಉದ್ದೇಶವಾಗಿದೆ. ರಸ್ತೆ ಸಾರಿಗೆಗೆ ಹೋಲಿಸಿದರೆ ರೈಲು ಸಾರಿಗೆಯು ಹೆಚ್ಚು ಇಂಧನ ದಕ್ಷತೆ ಹೊಂದಿದ್ದು, ವೆಚ್ಚ-ಪರಿಣಾಮಕಾರಿಯಾಗಿದೆ ಮತ್ತು ಕಡಿಮೆ ಇಂಗಾಲದ ಹೊರಸೂಸುವಿಕೆಯನ್ನು ಉಂಟುಮಾಡುತ್ತದೆ. ಇದು ಭಾರತದ ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಸುಸ್ಥಿರತೆಯ ಗುರಿಗಳನ್ನು ತಲುಪಲು ಅತ್ಯಗತ್ಯವಾಗಿದೆ.
ಇಒಎಲ್ ವ್ಯವಸ್ಥೆಯಡಿಯಲ್ಲಿ, ಲೋಡಿಂಗ್ ಅಥವಾ ಅನ್ಲೋಡಿಂಗ್ ಸಮಯದಲ್ಲಿ ಲೋಕೋಮೋಟಿವ್ (ಇಂಜಿನ್) ಟರ್ಮಿನಲ್ನಲ್ಲಿಯೇ ಇರುತ್ತದೆ. ನಿಗದಿಪಡಿಸಿದ ಉಚಿತ ಸಮಯದಲ್ಲಿ ರೈಲ್ವೆಯ ವೆಚ್ಚದಲ್ಲೇ ಅದು ಕಾಯುವುದರಿಂದ, ಪ್ರಕ್ರಿಯೆ ಮುಗಿದ ತಕ್ಷಣ ರೈಲು ಹೊರಡಲು ಸಾಧ್ಯವಾಗುತ್ತದೆ.
ಕಾರ್ಗೋ ಟರ್ಮಿನಲ್‌ಗಳು ಭಾರತದ ಲಾಜಿಸ್ಟಿಕ್ಸ್ ವ್ಯವಸ್ಥೆಯನ್ನು ಬಲಪಡಿಸುವ ಕಾರ್ಯತಂತ್ರದ ಕೇಂದ್ರಗಳಾಗಿವೆ. ಇವುಗಳ ವಿನ್ಯಾಸವು ತಡೆರಹಿತ ಸಂಪರ್ಕ, ಖಾಸಗಿ ಭಾಗವಹಿಸುವಿಕೆ ಮತ್ತು ಸರಳೀಕೃತ ಪ್ರಕ್ರಿಯೆಗಳ ಮೇಲೆ ಕೇಂದ್ರೀಕೃತವಾಗಿದ್ದು, ರಾಷ್ಟ್ರೀಯ ಆದ್ಯತೆಗಳು ಮತ್ತು ಸಮತೋಲಿತ ಪ್ರಾದೇಶಿಕ ಬೆಳವಣಿಗೆಯೊಂದಿಗೆ ಹೊಂದಾಣಿಕೆಯಾಗುತ್ತವೆ.

-
ಗತಿ ಶಕ್ತಿ ಕಾರ್ಗೋ ಟರ್ಮಿನಲ್‌ಗಳನ್ನು ಮಲ್ಟಿಮೋಡಲ್ ಸಂಪರ್ಕವನ್ನು ಉತ್ತೇಜಿಸಲು ವಿನ್ಯಾಸಗೊಳಿಸಲಾಗಿದ್ದು, ಇವು ರೈಲ್ವೆಯನ್ನು ರಸ್ತೆಗಳು, ಬಂದರುಗಳು ಮತ್ತು ವಿಮಾನ ನಿಲ್ದಾಣಗಳೊಂದಿಗೆ ತಡೆರಹಿತವಾಗಿ ಜೋಡಿಸುತ್ತವೆ.
-
ಈ ಟರ್ಮಿನಲ್‌ಗಳ ಅಭಿವೃದ್ಧಿಯಲ್ಲಿ ಖಾಸಗಿ ವಲಯದ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಮೂಲಕ, ಇವು ಸಾಮರ್ಥ್ಯವನ್ನು ವಿಸ್ತರಿಸುತ್ತವೆ ಮತ್ತು ನಾವೀನ್ಯತೆಯನ್ನು ಬೆಳೆಸುತ್ತವೆ.
-
ಜಿಸಿಟಿ ಯೋಜನೆಗಳ ಅನುಮೋದನೆಯ ಪ್ರಕ್ರಿಯೆಗಳನ್ನು ಸರಳೀಕರಿಸಲಾಗುತ್ತಿದ್ದು, ಕಾಲಮಿತಿಯೊಳಗಿನ ಅನುಮತಿಗಳು ವೇಗವಾಗಿ ಕಾಮಗಾರಿ ನಡೆಯುವುದನ್ನು ಖಚಿತಪಡಿಸುತ್ತವೆ.
-
ಈ ಉಪಕ್ರಮವು ರಾಷ್ಟ್ರೀಯ ಆದ್ಯತೆಗಳಿಗೆ ಅನುಗುಣವಾಗಿದ್ದು, ವ್ಯವಹಾರ ಸುಲಭೀಕರಣ, ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ ಭಾರತ ಯೋಜನೆಗಳಿಗೆ ಬೆಂಬಲ ನೀಡುತ್ತದೆ.
-
ವಿವಿಧ ರಾಜ್ಯಗಳಲ್ಲಿ ಟರ್ಮಿನಲ್ ಸ್ಥಳಗಳನ್ನು ಗುರುತಿಸಲಾಗುತ್ತಿದ್ದು, ಇದು ಸಮತೋಲಿತ ಪ್ರಾದೇಶಿಕ ಅಭಿವೃದ್ಧಿ ಮತ್ತು ಒಳಗೊಳ್ಳುವ ಬೆಳವಣಿಗೆಯನ್ನು ಖಚಿತಪಡಿಸುತ್ತದೆ.
ಗತಿ ಶಕ್ತಿ ಮಲ್ಟಿ-ಮಾಡಲ್ ಕಾರ್ಗೋ ಟರ್ಮಿನಲ್ (ಜಿಸಿಟಿ) ನೀತಿ, 2021
ರೈಲ್ವೆ ಸಚಿವಾಲಯವು 15 ಡಿಸೆಂಬರ್ 2021 ರಂದು ಪರಿಚಯಿಸಿದ ಈ ನೀತಿಯು ಆಧುನಿಕ ಕಾರ್ಗೋ ಟರ್ಮಿನಲ್‌ಗಳ ಅಭಿವೃದ್ಧಿಯನ್ನು ವೇಗಗೊಳಿಸಲು, ಅಸ್ತಿತ್ವದಲ್ಲಿರುವ ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸಲು ಮತ್ತು ಭಾರತದ ಸರಕು ಸಾಗಣೆ ವ್ಯವಸ್ಥೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಇದು ಪ್ರಕ್ರಿಯೆಗಳನ್ನು ಸರಳೀಕರಿಸುತ್ತದೆ, ಖಾಸಗಿ ಭಾಗವಹಿಸುವಿಕೆಯನ್ನು ಉತ್ತೇಜಿಸುತ್ತದೆ ಮತ್ತು ಭಾರತವನ್ನು ಜಾಗತಿಕ ಲಾಜಿಸ್ಟಿಕ್ಸ್ ಹಬ್ ಆಗಿ ರೂಪಿಸಲು ಕೈಗಾರಿಕಾ ಬೇಡಿಕೆಗೆ ಅನುಗುಣವಾಗಿ ಮೂಲಸೌಕರ್ಯದ ಬೆಳವಣಿಗೆಯನ್ನು ಹೊಂದಿಸುತ್ತದೆ.
- ವೆಚ್ಚದ ವಿನಾಯಿತಿಗಳು: ಇಲಾಖಾ ಶುಲ್ಕಗಳು, ಭೂ ಪರವಾನಗಿ ಶುಲ್ಕಗಳು ಮತ್ತು ವಾಣಿಜ್ಯ ಸಿಬ್ಬಂದಿ ವೆಚ್ಚಗಳ ಮನ್ನಾ.
- ಬೆಂಬಲ ಸೌಲಭ್ಯಗಳು: ಕಾರ್ಯನಿರ್ವಹಿಸುತ್ತಿರುವ ನಿಲ್ದಾಣಗಳಲ್ಲಿ ಸಾಮಾನ್ಯ ಬಳಕೆಯ ಸಂಚಾರ ಸೌಲಭ್ಯಗಳನ್ನು ರೈಲ್ವೆಯು ನಿರ್ಮಿಸುತ್ತದೆ ಮತ್ತು ನಿರ್ವಹಿಸುತ್ತದೆ.
- ಸರಕು ಸಾಗಣೆ ರಿಯಾಯಿತಿ: 1 ದಶಲಕ್ಷ ಟನ್‌ಗಳಷ್ಟು ಅಥವಾ ಅದಕ್ಕಿಂತ ಹೆಚ್ಚಿನ ಹೊರಹೋಗುವ ಸರಕು ಸಾಗಣೆಯನ್ನು ಉತ್ಪಾದಿಸುವ ಟರ್ಮಿನಲ್‌ಗಳು, ಮಿಡ್-ಸೆಕ್ಷನ್ ಬ್ಲಾಕ್ ಹಟ್/ಬ್ಲಾಕ್ ಸ್ಟೇಷನ್ ವೆಚ್ಚಗಳ ಮೇಲೆ 10% ಸರಕು ಸಾಗಣೆ ರಿಯಾಯಿತಿಗೆ ಅರ್ಹವಾಗಿರುತ್ತವೆ.
- ಆಸ್ತಿ ನಿರ್ವಹಣೆ: ಹಳಿಗಳು, ಸಿಗ್ನಲಿಂಗ್ ಮತ್ತು ಒಎಚ್‌ಇ ನಿರ್ವಹಣೆಯನ್ನು ರೈಲ್ವೆಯು ಭರಿಸುತ್ತದೆ (ಯಾರ್ಡ್ ಮತ್ತು ಲೋಡಿಂಗ್/ಅನ್ಲೋಡಿಂಗ್ ಲೈನ್‌ಗಳನ್ನು ಹೊರತುಪಡಿಸಿ).
- ಸಂಪರ್ಕ ಹಕ್ಕುಗಳು: ನಿರ್ವಹಿಸಲಾದ ಹಳಿಗಳಿಂದ ಹೆಚ್ಚುವರಿ ಟರ್ಮಿನಲ್‌ಗಳಿಗೆ ಸಂಪರ್ಕವನ್ನು ವಿಸ್ತರಿಸುವ ಹಕ್ಕನ್ನು ರೈಲ್ವೆ ಹೊಂದಿರುತ್ತದೆ.
- ವಾಣಿಜ್ಯ ಭೂ ಬಳಕೆ: ಹೆಚ್ಚುವರಿ ರೈಲ್ವೆ ಭೂಮಿಯನ್ನು ರೈಲ್ ಲ್ಯಾಂಡ್ ಡೆವಲಪ್‌ಮೆಂಟ್ ಅಥಾರಿಟಿ ನಿಬಂಧನೆಗಳ ಅಡಿಯಲ್ಲಿ ಅಭಿವೃದ್ಧಿಪಡಿಸಬಹುದು.
- ಕಾರ್ಯತಂತ್ರದ ಪ್ರಾಮುಖ್ಯತೆ: ಇದು ತಡೆರಹಿತ ಮಲ್ಟಿಮೋಡಲ್ ಲಾಜಿಸ್ಟಿಕ್ಸ್ ವ್ಯವಸ್ಥೆಯನ್ನು ನಿರ್ಮಿಸುತ್ತದೆ, ಅಡೆತಡೆಗಳನ್ನು ಕಡಿಮೆ ಮಾಡುತ್ತದೆ, ಸರಕು ನಿರ್ವಹಣಾ ಸಮಯವನ್ನು ಸುಧಾರಿಸುತ್ತದೆ ಮತ್ತು ದೀರ್ಘಕಾಲೀನ ಜಾಗತಿಕ ಸ್ಪರ್ಧಾತ್ಮಕತೆಯನ್ನು ಬೆಂಬಲಿಸುತ್ತದೆ.
ಇದುವರೆಗೆ ಸಾಧಿಸಿದ ಪ್ರಗತಿ
ಪ್ರಾರಂಭವಾದಾಗಿನಿಂದ, ಗತಿ ಶಕ್ತಿ ಕಾರ್ಗೋ ಟರ್ಮಿನಲ್‌ಗಳು ಕೇವಲ ದೃಷ್ಟಿಕೋನವಾಗಿ ಉಳಿಯದೆ ದೃಶ್ಯ ಫಲಿತಾಂಶಗಳಾಗಿ ಹೊರಹೊಮ್ಮಿವೆ. ಇವು ಸ್ಥಿರವಾಗಿ ಅನುಮೋದನೆಗಳು, ಹೊಸ ಸೌಲಭ್ಯಗಳ ಸ್ಥಾಪನೆ ಮತ್ತು ಸರಕು ನಿರ್ವಹಣಾ ಸಾಮರ್ಥ್ಯದಲ್ಲಿ ಅಳೆಯಬಹುದಾದ ಲಾಭಗಳಾಗಿ ಪರಿವರ್ತನೆಗೊಂಡಿವೆ.
- ಅನುಮೋದನೆಗಳು ಮತ್ತು ಕಾರ್ಯಾರಂಭ: ಭಾರತೀಯ ರೈಲ್ವೆಯು 306 ಗತಿ ಶಕ್ತಿ ಕಾರ್ಗೋ ಟರ್ಮಿನಲ್‌ಗಳ (ಜಿಸಿಟಿs) ಪ್ರಸ್ತಾವನೆಗಳಿಗೆ ಅನುಮೋದನೆ ನೀಡಿದ್ದು, ಅವುಗಳಲ್ಲಿ 118 ಈಗಾಗಲೇ ಕಾರ್ಯಾರಂಭ ಮಾಡಿವೆ. ಇದು ಅನುಷ್ಠಾನದಲ್ಲಿನ ಸ್ಥಿರ ಪ್ರಗತಿಯನ್ನು ಪ್ರತಿಬಿಂಬಿಸುತ್ತದೆ.
- ಕಾರ್ಯಾರಂಭಗೊಂಡ ಟರ್ಮಿನಲ್‌ಗಳು ಮತ್ತು ಸಾಮರ್ಥ್ಯ: ಕಾರ್ಯಾರಂಭಗೊಂಡ 118 ಟರ್ಮಿನಲ್‌ಗಳು ವಾರ್ಷಿಕ ಅಂದಾಜು 192 ದಶಲಕ್ಷ ಟನ್‌ಗಳಷ್ಟು ಸರಕು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿವೆ. ಇದು ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡಲು ಮತ್ತು ರೈಲು ಸರಕು ಚಲನೆಯಲ್ಲಿ ಗಮನಾರ್ಹ ಹೆಚ್ಚಳಕ್ಕೆ ಕೊಡುಗೆ ನೀಡುತ್ತಿದೆ.
- ಖಾಸಗಿ ಹೂಡಿಕೆ: ಜಿಸಿಟಿ ನೀತಿಯ ಪ್ರಾರಂಭದಿಂದಲೂ, ಸುಮಾರು 8,600 ಕೋಟಿರೂಪಾಯಿಗಳ ಖಾಸಗಿ ಹೂಡಿಕೆಯನ್ನು ಕ್ರೋಢೀಕರಿಸಲಾಗಿದೆ. ಇದು ಬಲವಾದ ಉದ್ಯಮ ಭಾಗವಹಿಸುವಿಕೆ ಮತ್ತು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (PPP) ಮಾದರಿಯ ಯಶಸ್ಸನ್ನು ಉಲ್ಲೇಖಿಸುತ್ತದೆ.
- ಜಿಸಿಟಿ ಗಳ ಮೇಲಿನ ಮಾಸ್ಟರ್ ಸರ್ಕ್ಯುಲರ್ (2022): ರೈಲ್ವೆ ಮಂಡಳಿಯು ಹೊರಡಿಸಿದ ಮಾಸ್ಟರ್ ಸರ್ಕ್ಯುಲರ್, ಈ ಟರ್ಮಿನಲ್‌ಗಳ ದಕ್ಷತೆಯನ್ನು ಸುಧಾರಿಸಲು ಒಪ್ಪಂದಗಳು, ಕಾರ್ಯಾಚರಣೆಯ ಮಾನದಂಡಗಳು ಮತ್ತು ತಿದ್ದುಪಡಿಗಳನ್ನು ಒಳಗೊಂಡಂತೆ ಅನುಷ್ಠಾನಕ್ಕೆ ವಿವರವಾದ ಮಾರ್ಗಸೂಚಿಗಳನ್ನು ಒದಗಿಸುತ್ತದೆ.
- ವೆಚ್ಚ-ಪರಿಣಾಮಕಾರಿ ಮತ್ತು ಪರಿಸರ ಸ್ನೇಹಿ: ರೈಲ್ವೆಯು ಸಾರಿಗೆಯ ಸ್ವಚ್ಛ ಮತ್ತು ಹೆಚ್ಚು ದಕ್ಷ ಮಾರ್ಗವಾಗಿದೆ. ಇದರ ವೆಚ್ಚವು ರಸ್ತೆ ಸಾರಿಗೆಯ ಅರ್ಧಕ್ಕಿಂತ ಕಡಿಮೆಯಿದ್ದು, ಇಂಗಾಲದ ಹೊರಸೂಸುವಿಕೆಯು ಸುಮಾರು 90% ರಷ್ಟು ಕಡಿಮೆಯಿದೆ. ಸರಕುಗಳನ್ನು ರಸ್ತೆಯಿಂದ ರೈಲ್ವೆಗೆ ವರ್ಗಾಯಿಸುವುದು ದಟ್ಟಣೆಯನ್ನು ಕಡಿಮೆ ಮಾಡುತ್ತದೆ ಮತ್ತು ಭಾರತದ ಡಿಕಾರ್ಬೊನೈಸೇಶನ್ ಗುರಿಗಳನ್ನು ಬೆಂಬಲಿಸುತ್ತದೆ. 2014 ರಿಂದ, ಈ ಬದಲಾವಣೆಯು ಹೆಚ್ಚುವರಿ 2,672 ದಶಲಕ್ಷ ಟನ್‌ಗಳಷ್ಟು ಸರಕನ್ನು ರೈಲ್ವೆಗೆ ಸ್ಥಳಾಂತರಿಸಿದೆ, ಇದರಿಂದ 143.3 ದಶಲಕ್ಷ ಟನ್‌ಗಳಷ್ಟು ಅಷ್ಟು CO₂ ಹೊರಸೂಸುವಿಕೆಯನ್ನು ಉಳಿಸಲಾಗಿದೆ.
- ಸಮಯೋಚಿತ ವಿತರಣೆ: ಜಿಸಿಟಿ ನೀತಿಯ ನಿಬಂಧನೆಗಳಿಗೆ ಅನುಗುಣವಾಗಿ, ಅನುಮೋದನೆ ಪಡೆದ ಏಜೆನ್ಸಿಗಳು 24 ತಿಂಗಳುಗಳ ಒಳಗಾಗಿ ನಿರ್ಮಾಣವನ್ನು ಪೂರ್ಣಗೊಳಿಸಬೇಕಾಗುತ್ತದೆ. ಇದು ಹೊಸ ಟರ್ಮಿನಲ್‌ಗಳ ಸಕಾಲಿಕ ವಿತರಣೆ ಮತ್ತು ಕಾರ್ಯಾಚರಣೆಯ ಸಿದ್ಧತೆಯನ್ನು ಖಚಿತಪಡಿಸುತ್ತದೆ.
- ಸರಕು ಆದಾಯ: ಗತಿ ಶಕ್ತಿ ಕಾರ್ಗೋ ಟರ್ಮಿನಲ್‌ಗಳು ಬಲವಾದ ಪ್ರದರ್ಶನವನ್ನು ನೀಡಿವೆ. 2022–23 ಮತ್ತು 2024–25 ರ ನಡುವೆ ಸರಕು ಆದಾಯವು ನಾಲ್ಕು ಪಟ್ಟು ಹೆಚ್ಚು ಹೆಚ್ಚಾಗಿದ್ದು, ಭಾರತದ ಲಾಜಿಸ್ಟಿಕ್ಸ್ ಕ್ಷೇತ್ರದಲ್ಲಿ ಅವುಗಳ ಬೆಳೆಯುತ್ತಿರುವ ಪಾತ್ರವನ್ನು ಒತ್ತಿಹೇಳುತ್ತದೆ.

ಅನುಮೋದನೆಗಳು, ಕಾರ್ಯಾರಂಭ ಮತ್ತು ಸರಕು ಆದಾಯದಲ್ಲಿನ ಸ್ಥಿರ ಏರಿಕೆಯು ಗತಿ ಶಕ್ತಿ ಕಾರ್ಗೋ ಟರ್ಮಿನಲ್ ನೀತಿಯು ಸ್ಪಷ್ಟ ಫಲಿತಾಂಶಗಳನ್ನು ನೀಡುತ್ತಿರುವುದನ್ನು ಸಾಬೀತುಪಡಿಸುತ್ತದೆ. ಇದು ರೈಲ್ವೆ ಲಾಜಿಸ್ಟಿಕ್ಸ್ ಅನ್ನು ಬಲಪಡಿಸಿದೆ, ಖಾಸಗಿ ಹೂಡಿಕೆಯನ್ನು ಆಕರ್ಷಿಸಿದೆ ಮತ್ತು ಭಾರತೀಯ ರೈಲ್ವೆಯನ್ನು ದಕ್ಷ ಸರಕು ಚಲನೆಯ ಪ್ರಮುಖ ಚಾಲನಾ ಶಕ್ತಿಯನ್ನಾಗಿ ರೂಪಿಸಿದೆ.
ಲಾಜಿಸ್ಟಿಕ್ಸ್ ಬೆಳವಣಿಗೆಯನ್ನು ಉತ್ತೇಜಿಸುತ್ತಿರುವ ಪ್ರಮುಖ ಗತಿ ಶಕ್ತಿ ಕಾರ್ಗೋ ಟರ್ಮಿನಲ್‌ಗಳು
ಲಾಜಿಸ್ಟಿಕ್ಸ್ ರಂಗದ ಈ ರೂಪಾಂತರವು ಯಾವುದೇ ಒಂದು ಟರ್ಮಿನಲ್‌ನಿಂದ ಮಾತ್ರವಲ್ಲದೆ, ಹೊಸದಾಗಿ ಕಾರ್ಯನಿರ್ವಹಿಸುತ್ತಿರುವ ಜಿಸಿಟಿಗಳ ಜಾಲದಿಂದ ಸಾಧ್ಯವಾಗುತ್ತಿದೆ. ಈ ಪ್ರಭಾವವನ್ನು ಕೆಲವು ಪ್ರಮುಖ ಉದಾಹರಣೆಗಳ ಮೂಲಕ ವಿವರಿಸಬಹುದು:
v. ಮನೇಸರ್ (ಹರಿಯಾಣ) ಜಿಸಿಟಿ - ದೇಶದ ಅತಿದೊಡ್ಡ ಆಟೋಮೊಬೈಲ್ ಗತಿ ಶಕ್ತಿ ಮಲ್ಟಿ-ಮಾಡಲ್ ಕಾರ್ಗೋ ಟರ್ಮಿನಲ್ ಹರಿಯಾಣದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ನ ಮನೇಸರ್ ಪ್ಲಾಂಟ್‌ನಲ್ಲಿದೆ. 46 acres ಪ್ರದೇಶದಲ್ಲಿ ಹರಡಿರುವ ಈ ಟರ್ಮಿನಲ್, ಸಂಪೂರ್ಣ ವಿದ್ಯುದ್ದೀಕೃತ ಕಾರಿಡಾರ್ ಅನ್ನು ಹೊಂದಿದ್ದು, ಇದರಲ್ಲಿ ನಾಲ್ಕು ಪೂರ್ಣ ಪ್ರಮಾಣದ ರೇಕ್ ಹ್ಯಾಂಡ್ಲಿಂಗ್ ಲೈನ್‌ಗಳು ಮತ್ತು ಒಂದು ಇಂಜಿನ್ ಎಸ್ಕೇಪ್ ಲೈನ್ ಇವೆ. ಇದರ ಒಟ್ಟು ಹಳಿಯ ಉದ್ದ 8.2 ಕೀ.ಮಿ. ಇದು ಹರಿಯಾಣ ಆರ್ಬಿಟಲ್ ರೈಲ್ ಕಾರಿಡಾರ್‌ನ ಭಾಗವಾಗಿ 800 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ 10 ಕೀ.ಮಿ ಉದ್ದದ ಮೀಸಲಾದ ರೈಲು ಸಂಪರ್ಕದ ಮೂಲಕ ಪಟ್ಲಿ ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಹೊಂದಿದೆ. ಲಾಜಿಸ್ಟಿಕ್ಸ್ ದಕ್ಷತೆಯನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾದ ಈ ಟರ್ಮಿನಲ್ ಭಾರತದಲ್ಲೇ ಅತಿ ಹೆಚ್ಚು ಲೋಡಿಂಗ್ ಸಾಮರ್ಥ್ಯವನ್ನು ಹೊಂದಿರುವ ಟರ್ಮಿನಲ್‌ಗಳಲ್ಲಿ ಒಂದಾಗಿದ್ದು, ವಾರ್ಷಿಕ 4.5 ಲಕ್ಷ ಆಟೋಮೊಬೈಲ್‌ಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ.
vi. ಈಶಾನ್ಯ ಭಾರತದ ಟರ್ಮಿನಲ್‌ಗಳು - ಅಸ್ಸಾಂನಲ್ಲಿರುವ ಮೊಯಿನಾರ್‌ಬಂಡ್ ಮತ್ತು ಚಿನ್ನಮರ ಗತಿ ಶಕ್ತಿ ಕಾರ್ಗೋ ಟರ್ಮಿನಲ್‌ಗಳು ಕಲ್ಲಿದ್ದಲು, ಕಂಟೈನರ್‌ಗಳು, ಆಹಾರ ಧಾನ್ಯಗಳು, ರಸಗೊಬ್ಬರಗಳು, ಸಿಮೆಂಟ್, ಪೆಟ್ರೋಲಿಯಂ ಉತ್ಪನ್ನಗಳು, ಆಟೋಮೊಬೈಲ್ ಮತ್ತು ಸಾಮಾನ್ಯ ಸರಕುಗಳನ್ನು ನಿರ್ವಹಿಸುವ ಮೂಲಕ ಈಶಾನ್ಯ ಭಾರತದ ಲಾಜಿಸ್ಟಿಕ್ಸ್ ಅನ್ನು ಬಲಪಡಿಸುವಲ್ಲಿ ಈಗಾಗಲೇ ಪ್ರಮುಖ ಪಾತ್ರ ವಹಿಸುತ್ತಿವೆ. ಈಶಾನ್ಯ ಫ್ರಾಂಟಿಯರ್ ರೈಲ್ವೆ ಅಡಿಯಲ್ಲಿ ಅಭಿವೃದ್ಧಿಪಡಿಸಲಾದ ಮೊಯಿನಾರ್‌ಬಂಡ್ ಟರ್ಮಿನಲ್ ಪೆಟ್ರೋಲಿಯಂ ಮತ್ತು ತೈಲ ಚಲನೆಗೆ, ವಿಶೇಷವಾಗಿ ಇಂಡಿಯನ್ ಆಯಿಲ್ ಉತ್ಪನ್ನಗಳಿಗೆ ಹೆಸರುವಾಸಿಯಾಗಿದೆ. ಹಾಗೆಯೇ ಎನ್‌ಎಫ್‌ಆರ್ ಅಡಿಯಲ್ಲಿ ಅಭಿವೃದ್ಧಿಪಡಿಸಲಾದ ಚಿನ್ನಮರ ಟರ್ಮಿನಲ್, ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ ಸೈಡಿಂಗ್ ಮೂಲಕ ಆಹಾರ ಧಾನ್ಯಗಳು ಮತ್ತು ರಸಗೊಬ್ಬರಗಳಿಗೆ ಸಂಪರ್ಕ ಹೊಂದಿದೆ. ಈ ಮಲ್ಟಿಮೋಡಲ್ ಹಬ್‌ಗಳು ಪ್ರಾದೇಶಿಕ ವ್ಯಾಪಾರವನ್ನು ಹೆಚ್ಚಿಸಿ, ಕೈಗಾರಿಕೆಗಳು ಮತ್ತು ಕೃಷಿ ಉತ್ಪಾದಕರನ್ನು ವಿಶಾಲ ಮಾರುಕಟ್ಟೆಗಳಿಗೆ ಸಂಪರ್ಕಿಸುತ್ತವೆ. ಈ ಅಡಿಪಾಯದ ಮೇಲೆ ಅಸ್ಸಾಂನಾದ್ಯಂತ ಆರು ಹೊಸ ಕಾರ್ಗೋ ಟರ್ಮಿನಲ್‌ಗಳು ನಿರ್ಮಾಣ ಹಂತದಲ್ಲಿದ್ದು, ಬೈಹಾಟ ಟರ್ಮಿನಲ್ ಪೂರ್ಣಗೊಳ್ಳುವ ಹಂತದಲ್ಲಿದೆ. ಹಬೈಪುರ, ಜೋಗಿಘೋಪಾ, ಕೆಂದುಕೋನಾ, ಬಾಸುಗಾಂವ್ ಮತ್ತು ಛಾಯಾಗಾಂವ್‌ನಲ್ಲಿ ಬರಲಿರುವ ಸೌಲಭ್ಯಗಳು ರಾಜ್ಯದ ಲಾಜಿಸ್ಟಿಕ್ಸ್ ಜಾಲವನ್ನು ಮತ್ತಷ್ಟು ವಿಸ್ತರಿಸಲಿವೆ ಮತ್ತು ಅಂತಾರಾಷ್ಟ್ರೀಯ ಮಟ್ಟದ ಲಾಜಿಸ್ಟಿಕ್ಸ್ ದಕ್ಷತೆಯನ್ನು ಈ ಪ್ರದೇಶಕ್ಕೆ ತರಲಿವೆ.
V ಗುಜರಾತ್‌ನ ನ್ಯೂ ಸಂಜಲಿ ಜಿಸಿಟಿ: ಗುಜರಾತ್‌ನ ನ್ಯೂ ಸಂಜಲಿ ಗತಿ ಶಕ್ತಿ ಕಾರ್ಗೋ ಟರ್ಮಿನಲ್, ಪಶ್ಚಿಮ ಮೀಸಲು ಸರಕು ಕಾರಿಡಾರ್‌ನುದ್ದಕ್ಕೂ ಗತಿ ಶಕ್ತಿ ನೀತಿಯಡಿ ಖಾಸಗಿ ಭೂಮಿಯಲ್ಲಿ ನಿರ್ಮಿಸಲಾದ ಮೊದಲ ಸೌಲಭ್ಯವಾಗಿದೆ. ಈ ಆಧುನಿಕ ಟರ್ಮಿನಲ್ ಭಾರತದ ಲಾಜಿಸ್ಟಿಕ್ಸ್ ರೂಪಾಂತರದಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ. ಕಾರ್ಯತಂತ್ರದ ಸರಕು ಸಾಗಣೆಯ ಹಬ್ ಆಗಿ ವಿನ್ಯಾಸಗೊಳಿಸಲಾದ ಇದು, ವೇಗದ ಮತ್ತು ಹೆಚ್ಚಿನ ಸಾಮರ್ಥ್ಯದ ಸರಕು ಚಲನೆಯನ್ನು ಬೆಂಬಲಿಸುತ್ತದೆ, ಮಲ್ಟಿಮೋಡಲ್ ಏಕೀಕರಣವನ್ನು ಉತ್ತೇಜಿಸುತ್ತದೆ ಮತ್ತು ಹೆಚ್ಚು ದಕ್ಷ ಹಾಗೂ ಪರಿಸರ ಸ್ನೇಹಿ ಲಾಜಿಸ್ಟಿಕ್ಸ್ ಕಾರ್ಯಾಚರಣೆಗಳನ್ನು ಮುನ್ನಡೆಸುತ್ತದೆ.
ಮುಂದಿನ ಹಾದಿ:
ಮುಂದಿನ ದಿನಗಳಲ್ಲಿ, ಜಿಸಿಟಿ ನೀತಿಯು ಡಿಜಿಟಲ್ ಏಕೀಕೃತ, ಕೈಗಾರಿಕಾ ಪ್ರತಿಸ್ಪಂದನಶೀಲ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕವಾದ ಜಾಗತಿಕ ಮಟ್ಟದ ಲಾಜಿಸ್ಟಿಕ್ಸ್ ನೆಟ್ವರ್ಕ್ಅನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ. ಪ್ರಮುಖ ಆದ್ಯತೆಗಳು ಈ ಕೆಳಗಿನಂತಿವೆ:
-
ಟರ್ಮಿನಲ್ ಅಭಿವೃದ್ಧಿಯನ್ನು ವೇಗಗೊಳಿಸಲು ಖಾಸಗಿ ಭಾಗವಹಿಸುವಿಕೆಯ ವಿಸ್ತರಣೆ.
-
ಕೈಗಾರಿಕಾ ಬೇಡಿಕೆ ಮತ್ತು ಪ್ರಾದೇಶಿಕ ಬೆಳವಣಿಗೆಯ ಮಾದರಿಗಳ ಆಧಾರದ ಮೇಲೆ ಹೊಸ ಜಿಸಿಟಿ ಸ್ಥಳಗಳ ನಿರಂತರ ಗುರುತಿಸುವಿಕೆ.
-
ಗತಿ ಶಕ್ತಿ ಪ್ಲಾಟ್‌ಫಾರ್ಮ್ ಮೂಲಕ ಡಿಜಿಟಲ್ ಏಕೀಕರಣವನ್ನು ಬಲಪಡಿಸುವುದು, ಇದು ನೈಜ-ಸಮಯದ ಟ್ರ್ಯಾಕಿಂಗ್ ಮತ್ತು ಮುನ್ಸೂಚಕ ವಿಶ್ಲೇಷಣೆಯನ್ನು) ಶಕ್ತಗೊಳಿಸುತ್ತದೆ.
-
ಲಾಜಿಸ್ಟಿಕ್ಸ್ ವೆಚ್ಚವನ್ನು ಜಿಡಿಪಿಯಲ್ಲಿ ಒಂದೇ ಅಂಕಿಯ ಪ್ರಮಾಣಕ್ಕೆ ತಂದ ಸಾಧನೆಯ ಮೇಲೆ ಭಾರತವನ್ನು ಜಾಗತಿಕ ಲಾಜಿಸ್ಟಿಕ್ಸ್ ಹಬ್ ಆಗಿ ರೂಪಿಸುವ ದೀರ್ಘಕಾಲೀನ ದೃಷ್ಟಿಕೋನ ಮತ್ತು ಹಸಿರು ಸಾರಿಗೆ ಪರಿಹಾರಗಳ ಮೂಲಕ ಸುಸ್ಥಿರತೆಯನ್ನು ಮುನ್ನಡೆಸುವುದು.
ಉಪಸಂಹಾರ:
ಗತಿ ಶಕ್ತಿ ಕಾರ್ಗೋ ಟರ್ಮಿನಲ್‌ಗಳು ಭಾರತದ ಲಾಜಿಸ್ಟಿಕ್ಸ್ ವಲಯವನ್ನು ಆಧುನೀಕರಿಸುವತ್ತ ಇಟ್ಟಿರುವ ಒಂದು ನಿರ್ಣಾಯಕ ಹೆಜ್ಜೆಯಾಗಿದೆ. ಮೂಲಸೌಕರ್ಯ ಅಭಿವೃದ್ಧಿಯನ್ನು ಡಿಜಿಟಲ್ ಏಕೀಕರಣ ಮತ್ತು ಖಾಸಗಿ ಭಾಗವಹಿಸುವಿಕೆಯೊಂದಿಗೆ ಸಂಯೋಜಿಸುವ ಮೂಲಕ, ಇವು ರಾಷ್ಟ್ರೀಯ ಆರ್ಥಿಕ ಗುರಿಗಳೊಂದಿಗೆ ಹೊಂದಾಣಿಕೆಯಾಗುತ್ತಲೇ ದೀರ್ಘಕಾಲದ ಅಸಮರ್ಥತೆಗಳನ್ನು ನಿವಾರಿಸುತ್ತಿವೆ. ಅನುಷ್ಠಾನವು ಪ್ರಗತಿಯಲ್ಲಿರುವಂತೆ, ಜಿಸಿಟಿಗಳು ಭಾರತದ ಲಾಜಿಸ್ಟಿಕ್ಸ್ ರಂಗವನ್ನು ಹೆಚ್ಚು ದಕ್ಷ, ಸ್ಪರ್ಧಾತ್ಮಕ ಮತ್ತು ಭವಿಷ್ಯದ ಸವಾಲುಗಳಿಗೆ ಸಿದ್ಧವಾಗುವಂತೆ ರೂಪಿಸಲು ಸಜ್ಜಾಗಿವೆ.
References:
Ministry of Railways:
https://x.com/RailMinIndia/status/1991332583255478424
https://sansad.in/getFile/loksabhaquestions/annex/186/AU671_cWHwfg.pdf?source=pqals
https://sansad.in/getFile/loksabhaquestions/annex/185/AU2967_ie0VNh.pdf?source=pqals
https://www.pib.gov.in/Pressreleaseshare.aspx?PRID=1814049®=3&lang=2
https://indianrailways.gov.in/railwayboard/uploads/directorate/traffic_comm/Freight_Marketing_2022/GCT%20-2022.pdf
https://www.pib.gov.in/PressReleasePage.aspx?PRID=2136909®=3&lang=2
https://www.facebook.com/NRlyIndia/posts/sustainable-transport-boost-100th-rake-rolls-out-from-msil-manesarthis-achieveme/1269089571924456/
https://nfr.indianrailways.gov.in/view_detail.jsp?lang=0&dcd=2908&id=0,4,268
https://x.com/dfccil_india/status/1942872988933673181
Click here for pdf file
*****
(Explainer ID: 156927)
आगंतुक पटल : 10
Provide suggestions / comments