Energy & Environment
ಭಾರತದ ಹಸಿರು ಕಡಲ ಅಭಿವೃದ್ಧಿ ಪಯಣ
ಸುಸ್ಥಿರ ಸಾಗರ ಆರ್ಥಿಕತೆಗಾಗಿ ಕಾರ್ಯಸೂಚಿ
Posted On:
15 DEC 2025 11:30AM
|
ಪ್ರಮುಖ ಮಾರ್ಗಸೂಚಿಗಳು
-
ಭಾರತೀಯ ಬಂದರುಗಳು ಪರಿಸರ ಸ್ನೇಹಿಯಾಗುತ್ತಿವೆ (ಗ್ರೀನ್ ಪೋರ್ಟ್ಸ್). ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಮತ್ತು ಪರಿಸರ ಸಾಮರ್ಥ್ಯವನ್ನು ಸುಧಾರಿಸಲು ನವೀಕರಿಸಬಹುದಾದ ಇಂಧನ ಸಾಮರ್ಥ್ಯ, ಎಲ್‌ಎನ್‌ಜಿ ಬಂಕರಿಂಗ್ ಮತ್ತು ಹಸಿರು ಹೊದಿಕೆಯ ವಿಸ್ತರಣೆಯನ್ನು ಸೇರಿಸುತ್ತಿವೆ.
-
ನವ ಮಂಗಳೂರು ಬಂದರು: ಇದು 100% ಸೌರಶಕ್ತಿ ಸಂಯೋಜನೆಯನ್ನು ಸಾಧಿಸಿದೆ , ಇದು ನವೀಕರಿಸಬಹುದಾದ ಇಂಧನ ಅಳವಡಿಕೆಯಲ್ಲಿ ಒಂದು ಮಾದರಿಯಾಗಿದೆ.
-
ಭಾರತದ ಪ್ರಮುಖ ಬಂದರುಗಳು 2024-25ರ ಹಣಕಾಸು ವರ್ಷದಲ್ಲಿ 855 ಮಿಲಿಯನ್ ಟನ್ ಸರಕನ್ನು ನಿರ್ವಹಿಸಿವೆ - ಇದು 2014-15ರ ಹಣಕಾಸು ವರ್ಷದಲ್ಲಿದ್ದ 581 ಮಿಲಿಯನ್ ಟನ್‌ಗಿಂತ ಹೆಚ್ಚಾಗಿದ್ದು, ದಶಕದಲ್ಲಿ ಶೇ. 47.16 ರಷ್ಟು ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ.
|
ಪೀಠಿಕೆ
ಮೂಲಸೌಕರ್ಯ ವಲಯದ ನಿರ್ಣಾಯಕ ಭಾಗವಾಗಿ, ಬಂದರುಗಳು ಪರಿಮಾಣದ ಆಧಾರದ ಮೇಲೆ ಸುಮಾರು ಶೇ. 95 ರಷ್ಟು ವಿದೇಶಿ ವ್ಯಾಪಾರಕ್ಕೆ ಕಾರಣವಾಗಿವೆ. 2024-25 ರ ಹಣಕಾಸು ವರ್ಷದಲ್ಲಿ, ಭಾರತದ ಪ್ರಮುಖ ಬಂದರುಗಳು 855 ಮಿಲಿಯನ್ ಟನ್ ಸರಕನ್ನು ನಿರ್ವಹಿಸಿವೆ - ಇದು 2014-15 ರ ಹಣಕಾಸು ವರ್ಷದಲ್ಲಿದ್ದ 581 ಮಿಲಿಯನ್ ಟನ್‌ಗಿಂತ ಹೆಚ್ಚಾಗಿದ್ದು, ದಶಕದಲ್ಲಿ ಶೇ. 47.16 ರಷ್ಟು ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ. ಆತ್ಮನಿರ್ಭರ ಭಾರತದ ದೃಷ್ಟಿಕೋನಕ್ಕೆ ಅನುಗುಣವಾಗಿ ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸಲು ಭಾರತದ ಬಂದರುಗಳು ವೇಗವಾಗಿ ವಿಸ್ತರಿಸುತ್ತಿದ್ದರೂ, ಈ ಹೆಚ್ಚಳವು ಪರಿಸರ ಒತ್ತಡಗಳನ್ನು ತೀವ್ರಗೊಳಿಸುತ್ತದೆ. ಬಂದರುಗಳು ಗಾಳಿ ಮತ್ತು ನೀರಿನ ಮಾಲಿನ್ಯ, ಮತ್ತು ಹಸಿರುಮನೆ ಅನಿಲಗಳ ಪ್ರಮುಖ ಮೂಲಗಳಲ್ಲಿ ಒಂದಾಗಿವೆ, ಇದು ಕರಾವಳಿಯುದ್ದಕ್ಕೂ ಕಂಡುಬರುವ ಮ್ಯಾಂಗ್ರೋವ್‌ಗಳು, ಲಗೂನ್‌ಗಳು, ಹವಳದ ದಿಬ್ಬಗಳು ಮತ್ತು ಕಡಲತೀರಗಳಲ್ಲಿರುವ ಸಮೃದ್ಧ ಜೀವವೈವಿಧ್ಯ ಮತ್ತು ಕಡಲ ಜೀವಿಗಳ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ.
ಆದ್ದರಿಂದ, ಭಾರತವು ತನ್ನ ಆತ್ಮನಿರ್ಭರತೆಯ ದೃಷ್ಟಿಕೋನವನ್ನು ಸಾಧಿಸಬೇಕಾದರೆ, ಜೊತೆಗೆ ಹವಾಮಾನ ಬದಲಾವಣೆ ಮಾತುಕತೆಗಳ ಅಡಿಯಲ್ಲಿ ತನ್ನ ಒಟ್ಟಾರೆ ರಾಷ್ಟ್ರೀಯವಾಗಿ ನಿರ್ಧರಿಸಲಾದ ಕೊಡುಗೆಗಳನ್ನು ಪೂರೈಸಲು, ಕಡಲ ವಲಯವು ಸುಸ್ಥಿರತೆಯನ್ನು ಸಾಧಿಸಲು ಒಂದು ಯೋಜನೆಯ ಕಡೆಗೆ ಕೆಲಸ ಮಾಡಬೇಕಾಗಿದೆ.ಇದರ ಜೊತೆಗೆ, ಜಾಗತಿಕ ಕಡಲ ಸಂಸ್ಥೆಗಳು ಕೂಡ ಹಡಗು ಉದ್ಯಮಕ್ಕೆ ಗುರಿಗಳನ್ನು ನಿಗದಿಪಡಿಸಿವೆ. ಉದಾಹರಣೆಗೆ, ಅಂತರರಾಷ್ಟ್ರೀಯ ಕಡಲ ಸಂಸ್ಥೆ ಸುರಕ್ಷಿತ, ಪರಿಣಾಮಕಾರಿ ಮತ್ತು ಸುಸ್ಥಿರ ಬಂದರುಗಳಿಗಾಗಿ 9 ಯುಎನ್ ಸುಸ್ಥಿರ ಅಭಿವೃದ್ಧಿ ಗುರಿಗಳೊಂದಿಗೆ ಜೋಡಿಸಲ್ಪಟ್ಟಿದೆ ಮತ್ತು 2030 ರೊಳಗೆ ಹಡಗು ವಲಯದಿಂದ CO_2 ಹೊರಸೂಸುವಿಕೆಯನ್ನು ಶೇ. 40 ರಷ್ಟು ಕಡಿಮೆ ಮಾಡುವ ಗುರಿಯನ್ನು ನಿಗದಿಪಡಿಸಿದೆ.

ನೀತಿ ಚೌಕಟ್ಟು
ಭಾರತದಲ್ಲಿ ಹಸಿರು ಕಡಲ ಕಲ್ಪನೆಯು ಅಂತಹ ರಾಷ್ಟ್ರೀಯ ಮತ್ತು ಜಾಗತಿಕ ಆದ್ಯತೆಗಳು ಮತ್ತು ಬದ್ಧತೆಗಳು, ಎಚ್‌ಎಸ್‌ಇ (ಆರೋಗ್ಯ, ಸುರಕ್ಷತೆ ಮತ್ತು ಪರಿಸರ) ಮಾನದಂಡಗಳೊಂದಿಗೆ ಹೊಂದಿಕೆಯಾಗುವ ಅಗತ್ಯದಿಂದ, ಮತ್ತು ಬಂದರು ಕಾರ್ಯಾಚರಣೆಗಳನ್ನು ಸುರಕ್ಷಿತ, ಸ್ವಚ್ಛ ಮತ್ತು ಹೆಚ್ಚು ಸುಸ್ಥಿರವಾಗಿಸುವ ಹೆಚ್ಚುತ್ತಿರುವ ಗಮನದಿಂದ ಬೆಳೆಯಿತು.
ತನ್ನ ವಿಧಾನದಲ್ಲಿ "ಹಸಿರು" ವನ್ನು ಅಳವಡಿಸಲು, ಬಳಕೆಯಲ್ಲಿಲ್ಲದ ಭಾರತೀಯ ಬಂದರುಗಳ ಕಾಯ್ದೆ, 1908 ಅನ್ನು ರದ್ದುಗೊಳಿಸಲಾಗಿದೆ ಮತ್ತು ಅದನ್ನು ಸ್ವಚ್ಛ, ಹಸಿರು ಮತ್ತು ಸುಸ್ಥಿರ ಕಡಲ ಕಾರ್ಯಾಚರಣೆಗಳನ್ನು ಸಾಂಸ್ಥಿಕಗೊಳಿಸುವ ಆಧುನಿಕ ಶಾಸನವಾದ ಭಾರತೀಯ ಬಂದರುಗಳ ಕಾಯ್ದೆ, 2025 ರಿಂದ ಬದಲಾಯಿಸಲಾಗಿದೆ.
ಈ ಗುರಿಗಳನ್ನು ಸಾಧಿಸುವ ಕಾರ್ಯತಂತ್ರ ಮತ್ತು ಯೋಜನೆಯು, ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯದಿಂದ 2021 ರಲ್ಲಿ ಪ್ರಾರಂಭಿಸಲಾದ ಕಡಲ ಭಾರತ ವಿಷನ್ 2030ರಲ್ಲಿ ಅಡಗಿದೆ. ಇದು ಪಟ್ಟಿ ಮಾಡಿರುವ ಪ್ರಮುಖ ಅಂಶಗಳು:
ಭಾರತೀಯ ಬಂದರುಗಳ ಕಾಯ್ದೆ, 2025, ವಸಾಹತುಶಾಹಿ ಮತ್ತು ಹಳೆಯದಾದ ಬಂದರುಗಳ ಕಾಯ್ದೆ 1908 ರ ಸ್ಥಾನವನ್ನು ಪಡೆದಿದೆ. ಈ ಹೊಸ ಕಾಯ್ದೆಯು ಜಾಗತಿಕ ಹಸಿರು ಮಾನದಂಡಗಳಿಗೆ ಬದ್ಧವಾಗಿರುವುದನ್ನು ಕಡ್ಡಾಯಗೊಳಿಸುತ್ತದೆ, ಕಡಲ ಕಾರ್ಯಾಚರಣೆಗಳಲ್ಲಿ ಪರಿಸರ ಸುರಕ್ಷತೆಗಳನ್ನು ಬಲಪಡಿಸುತ್ತದೆ. ಇದು ಸುಸ್ಥಿರ, ಪರಿಸರ ಸ್ನೇಹಿ ಬಂದರು ಅಭ್ಯಾಸಗಳನ್ನು ಉತ್ತೇಜಿಸಲು ಮತ್ತು ವಲಯದ ಪರಿಸರ ಹೆಜ್ಜೆಗುರುತನ್ನು ಕಡಿಮೆ ಮಾಡಲು ದೃಢವಾದ ಮಾಲಿನ್ಯ ನಿಯಂತ್ರಣ ಮತ್ತು ವಿಪತ್ತು ಸಿದ್ಧತಾ ಕ್ರಮಗಳನ್ನು ಪರಿಚಯಿಸುತ್ತದೆ. ಇದಲ್ಲದೆ, ಇದು ಹಡಗುಗಳಿಂದಾಗುವ ಮಾಲಿನ್ಯ ತಡೆಗಟ್ಟುವ ಅಂತರರಾಷ್ಟ್ರೀಯ ಸಮಾವೇಶ ಮತ್ತು ನಿಲುಭಾರ ನೀರು ನಿರ್ವಹಣೆ ಯೊಂದಿಗೆ ಸಹ ಹೊಂದಾಣಿಕೆ ಹೊಂದಿದೆ.
ಸುಸ್ಥಿರ ಕಡಲ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಇದು 150 ಉಪಕ್ರಮಗಳನ್ನು ಒಳಗೊಂಡಿದೆ ಮತ್ತು ಮುಂದಿನ ದಶಕದಲ್ಲಿ ಭಾರತದ ಕಡಲ ವಲಯದ ಸಮನ್ವಯ ಹಾಗೂ ವೇಗವರ್ಧಿತ ಬೆಳವಣಿಗೆಗೆ ಒಂದು ನೀಲನಕ್ಷೆಯಾಗಿ ಕಾರ್ಯನಿರ್ವಹಿಸುತ್ತದೆ. ಇದು ಸುರಕ್ಷಿತ, ಸುಸ್ಥಿರ ಮತ್ತು ಹಸಿರು ಕಡಲ ವಲಯವನ್ನು ನಿರ್ಮಿಸುವತ್ತ ಹೆಚ್ಚಿನ ಗಮನಹರಿಸುತ್ತದೆ. ಈ ಗುರಿಯನ್ನು ಸಾಧಿಸಲು ನವೀಕರಿಸಬಹುದಾದ ಇಂಧನ ಬಳಕೆಯ ಹೆಚ್ಚಳ, ವಾಯು ಮಾಲಿನ್ಯದ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದು, ನೀರಿನ ಬಳಕೆಯನ್ನು ಉತ್ತಮಗೊಳಿಸುವುದು, ಘನ ತ್ಯಾಜ್ಯ ನಿರ್ವಹಣೆಯನ್ನು ಸುಧಾರಿಸುವುದು, ಶೂನ್ಯ ಅಪಘಾತ ಸುರಕ್ಷತಾ ಕಾರ್ಯಕ್ರಮ ಮತ್ತು ಕೇಂದ್ರೀಕೃತ ಮೇಲ್ವಿಚಾರಣಾ ವ್ಯವಸ್ಥೆಯಂತಹ ಪ್ರಮುಖ ಹಸ್ತಕ್ಷೇಪಗಳನ್ನು ಇದು ಗುರುತಿಸಿದೆ.
ಇದಲ್ಲದೆ, ಹಸಿರು ಬಂದರುಗಳ ದೀರ್ಘಾವಧಿಯ ದೃಷ್ಟಿ ಮತ್ತು ಕಾರ್ಯತಂತ್ರವು ಕಡಲ ಅಮೃತ ಕಾಲ ವಿಷನ್ 2047 ನಲ್ಲಿಯೂ ಆಧಾರವಾಗಿದೆ. ಇದು ಭಾರತದ ಕಡಲ ಪುನರುಜ್ಜೀವನಕ್ಕಾಗಿ ದೀರ್ಘಾವಧಿಯ ಮಾರ್ಗಸೂಚಿಯಾಗಿದ್ದು, ಬಂದರುಗಳು, ಕರಾವಳಿ ಹಡಗು, ಒಳನಾಡಿನ ಜಲಮಾರ್ಗಗಳು, ಹಡಗು ನಿರ್ಮಾಣ ಮತ್ತು ಹಸಿರು ಹಡಗು ಉಪಕ್ರಮಗಳಿಗಾಗಿ ಸುಮಾರು ₹80 ಲಕ್ಷ ಕೋಟಿ ಹೂಡಿಕೆಯನ್ನು ಮೀಸಲಿಡಲಾಗಿದೆ. 300 ಕ್ಕೂ ಹೆಚ್ಚು ಕಾರ್ಯಸಾಧ್ಯವಾದ ಉಪಕ್ರಮಗಳನ್ನು ವಿವರಿಸುವ ಈ ವಿಷನ್, ಸುಸ್ಥಿರತೆಯನ್ನು ಆಧಾರವಾಗಿಟ್ಟುಕೊಂಡು, ಸ್ವಾತಂತ್ರ್ಯದ ಶತಮಾನೋತ್ಸವದ ವೇಳೆಗೆ ಭಾರತವನ್ನು ವಿಶ್ವದ ಅಗ್ರ ಕಡಲ ಮತ್ತು ಹಡಗು ನಿರ್ಮಾಣ ಶಕ್ತಿಗಳಲ್ಲಿ ಒಂದಾಗಿ ಬೆಳೆಸುವ ಯೋಜನೆ ಹಾಕಿಕೊಂಡಿದೆ.
ಹರಿತ್ ಸಾಗರ್: ಹಸಿರು ಬಂದರು ಮಾರ್ಗಸೂಚಿಗಳು
2023ರ ಹರಿತ್ ಸಾಗರ್ ಹಸಿರು ಬಂದರು ಮಾರ್ಗಸೂಚಿಗಳು, 'ಕಡಲ ಭಾರತ ವಿಷನ್ 2030' ಅಡಿಯಲ್ಲಿ ನಿಗದಿಪಡಿಸಲಾದ ಗುರಿಗಳಿಗೆ ಮತ್ತು 2030 ರ ವೇಳೆಗೆ ಹೊರಸೂಸುವಿಕೆಯ ತೀವ್ರತೆಯನ್ನು ಶೇ. 45 ರಷ್ಟು ಕಡಿಮೆ ಮಾಡುವ ಹಾಗೂ 2070 ರ ವೇಳೆಗೆ 'ನೆಟ್-ಝೀರೋ' (ನಿವ್ವಳ ಶೂನ್ಯ ಹೊರಸೂಸುವಿಕೆ) ಸಾಧಿಸುವ ಭಾರತದ ಸಿಒಪಿ 26 ಬದ್ಧತೆಗಳಿಗೆ ಅನುಗುಣವಾಗಿವೆ. ಇವು ಭಾರತೀಯ ಬಂದರುಗಳು ಸುರಕ್ಷಿತ, ಪರಿಣಾಮಕಾರಿ, ಹಸಿರು ಮತ್ತು ಸುಸ್ಥಿರ ಕಾರ್ಯಾಚರಣೆಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುವ ಸಮಗ್ರ ಚೌಕಟ್ಟಾಗಿ ಕಾರ್ಯನಿರ್ವಹಿಸುತ್ತವೆ.
ಪ್ರಮುಖ ಲಕ್ಷಣಗಳು:
-
ಇಂಗಾಲದ ಹೊರಸೂಸುವಿಕೆ ಕಡಿತ: ಬಂದರುಗಳು ಪ್ರತಿ ಟನ್ ಸರಕಿನ ಮೇಲಿನ ಇಂಗಾಲದ ಹೊರಸೂಸುವಿಕೆಯನ್ನು 2030 ರ ವೇಳೆಗೆ ಶೇ. 30 ರಷ್ಟು ಮತ್ತು 2047 ರ ವೇಳೆಗೆ ಶೇ. 70 ರಷ್ಟು ಕಡಿಮೆ ಮಾಡಬೇಕು.
-
ನವೀಕರಿಸಬಹುದಾದ ಇಂಧನ: ಬಂದರುಗಳು ನವೀಕರಿಸಬಹುದಾದ ಇಂಧನದ ಪಾಲನ್ನು 2030 ರ ವೇಳೆಗೆ ಶೇ. 60 ಕ್ಕಿಂತ ಹೆಚ್ಚು ಮತ್ತು 2047 ರ ವೇಳೆಗೆ ಶೇ. 90 ಕ್ಕಿಂತ ಹೆಚ್ಚು ಹೆಚ್ಚಿಸಬೇಕು. 2025 ರ ಹೊತ್ತಿಗೆ, ನವ ಮಂಗಳೂರು ಬಂದರು 100% ಸೌರಶಕ್ತಿ ಸಂಯೋಜನೆಯನ್ನು ಸಾಧಿಸುವ ಮೂಲಕ ಈ ನಿಟ್ಟಿನಲ್ಲಿ ಮಾದರಿಯಾಗಿದೆ.
-
ವಿದ್ಯುದ್ದೀಕರಣ: ಬಂದರುಗಳು ತಮ್ಮ ಉಪಕರಣಗಳು ಮತ್ತು ವಾಹನಗಳಲ್ಲಿ ಶೇ. 50 ಕ್ಕಿಂತ ಹೆಚ್ಚು ಭಾಗವನ್ನು 2030 ರ ವೇಳೆಗೆ ವಿದ್ಯುದ್ದೀಕರಿಸಬೇಕು, ಇದು 2047 ರ ವೇಳೆಗೆ ಶೇ. 90 ಕ್ಕಿಂತ ಹೆಚ್ಚು ಹೆಚ್ಚಾಗಬೇಕು.
-
ಹಸಿರು ಹೊದಿಕೆ ವಿಸ್ತರಣೆ: ಪರಿಸರದ ಗುಣಮಟ್ಟವನ್ನು ಸುಧಾರಿಸಲು ಬಂದರುಗಳು ತಮ್ಮ ಹಸಿರು ಹೊದಿಕೆಯನ್ನು (ಗಿಡಮರಗಳನ್ನು) 2030 ರ ವೇಳೆಗೆ ಶೇ. 20 ಕ್ಕಿಂತ ಹೆಚ್ಚು ಮತ್ತು 2047 ರ ವೇಳೆಗೆ ಶೇ. 33 ಕ್ಕಿಂತ ಹೆಚ್ಚು ವಿಸ್ತರಿಸಬೇಕು.
-
ನೌಕೆಗಳಿಗೆ ವಿದ್ಯುತ್ ಪೂರೈಕೆ: ಬಂದರುಗಳು ಎಲ್ಲಾ ನೌಕೆಗಳಿಗೆ ಹಂತ-ಹಂತವಾಗಿ 'ದಡದಿಂದ ಹಡಗಿಗೆ' ವಿದ್ಯುತ್ ಪೂರೈಕೆ ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಬೇಕು, ಇದು 2025 ರ ವೇಳೆಗೆ ಎಕ್ಸಿಮ್ ನೌಕೆಗಳನ್ನು ತಲುಪಬೇಕು.
-
ನೀರಿನ ನಿರ್ವಹಣೆ: ಉತ್ತಮ ಸಂಪನ್ಮೂಲ ನಿರ್ವಹಣೆಯ ಮೂಲಕ ಬಂದರುಗಳು ಶೇ. 100 ರಷ್ಟು ತ್ಯಾಜ್ಯ ನೀರಿನ ಮರುಬಳಕೆಯನ್ನು ಸಾಧಿಸಬೇಕು ಮತ್ತು 2030 ರ ವೇಳೆಗೆ ಸಿಹಿನೀರಿನ ಬಳಕೆಯನ್ನು ಶೇ. 20 ಕ್ಕಿಂತ ಹೆಚ್ಚು ಕಡಿಮೆ ಮಾಡಬೇಕು.
ಅನುಷ್ಠಾನದ ಸ್ಥಿತಿಗತಿ
ಕಡಲ ಭಾರತ ವಿಷನ್ 2030 ಮತ್ತು ಹರಿತ್ ಸಾಗರ್ ಮಾರ್ಗಸೂಚಿಗಳು, ಭಾರತೀಯ ಬಂದರುಗಳನ್ನು ಸಂಪೂರ್ಣ ಹಸಿರು ಮತ್ತು ಸುಸ್ಥಿರ ಕೇಂದ್ರಗಳನ್ನಾಗಿ ಪರಿವರ್ತಿಸಲು ಎಂಐವಿ 2030 ಅಡಿಯಲ್ಲಿ ಎಂಟು ಪ್ರಮುಖ ಹಸ್ತಕ್ಷೇಪಗಳನ್ನು ವಿವರಿಸುತ್ತವೆ.

1. ಬಂದರುಗಳಲ್ಲಿ ನವೀಕರಿಸಬಹುದಾದ ಇಂಧನ ಅಳವಡಿಕೆ
ಬಂದರುಗಳು ಸೌರ ವಿದ್ಯುತ್ ಅಳವಡಿಕೆಗಾಗಿ ಭೂಮಿ, ಕಟ್ಟಡದ ಮೇಲ್ಛಾವಣಿಗಳು ಮತ್ತು ಶಾಂತವಾದ ನೀರಿನ ಮೇಲ್ಮೈಗಳನ್ನು ಮೌಲ್ಯಮಾಪನ ಮಾಡುವ ಮೂಲಕ ನವೀಕರಿಸಬಹುದಾದ ಇಂಧನವನ್ನು ವಿಸ್ತರಿಸುತ್ತಿವೆ. ಇದಕ್ಕಾಗಿ ಮೇಲ್ಛಾವಣಿ ವ್ಯವಸ್ಥೆಗಳು ಮತ್ತು ವಾಣಿಜ್ಯಿಕವಾಗಿ ವೇಗವಾಗಿ ಜನಪ್ರಿಯತೆ ಪಡೆಯುತ್ತಿರುವ ತೇಲುವ ಸೌರ ಫಲಕಗಳನ್ನು ಬಳಸಲಾಗುತ್ತಿದೆ.ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮಾದರಿಗಳ ಮೂಲಕ ಭೂಮಿಯ ಮೇಲಿನ ಪವನ ವಿದ್ಯುತ್ ಘಟಕಗಳಿಗೆ ಸೂಕ್ತ ಸ್ಥಳಗಳನ್ನು ಗುರುತಿಸಿ ಗಾಳಿ ಯಂತ್ರಗಳನ್ನು ಸ್ಥಾಪಿಸುವ ಮೂಲಕ ಪವನ ಶಕ್ತಿಯ ಅಳವಡಿಕೆಯನ್ನು ಹೆಚ್ಚಿಸಲಾಗುತ್ತಿದೆ. ಭಾರತೀಯ ಪರ್ಯಾಯ ದ್ವೀಪದ ದಕ್ಷಿಣ ತುದಿ, ಓಖಾ ಬಂದರಿನ ಸಮೀಪವಿರುವ ಕಡಲಾಚೆಯ ಪ್ರದೇಶಗಳು ಮತ್ತು ಕಚ್‌ನ ವಿಶಾಲವಾದ ಉಪ್ಪು ಪ್ರದೇಶಗಳಲ್ಲಿರುವ ಕಡಲಾಚೆಯ ಪವನ ಶಕ್ತಿಯ ಸಾಮರ್ಥ್ಯವನ್ನು ಬಳಸಿಕೊಳ್ಳಲಾಗುತ್ತಿದೆ.ಇದರೊಂದಿಗೆ, ಗುಜರಾತ್‌ನ ಖಂಬತ್ ಕೊಲ್ಲಿ ಅಥವಾ ಕಚ್ ಪ್ರದೇಶಗಳಲ್ಲಿ ಬಂದರುಗಳು ಉಬ್ಬರವಿಳಿತದ ಇಂಧನ ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸುತ್ತಿವೆ; ಈ ಪ್ರದೇಶಗಳು ಒಟ್ಟಾಗಿ 8,000–12,000 MW ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿವೆ.

ಹರಿತ್ ಸಾಗರ್ ಹಸಿರು ಬಂದರು ಮಾರ್ಗಸೂಚಿಗಳ ಅಡಿಯಲ್ಲಿ, ಬಂದರುಗಳಲ್ಲಿ ನವೀಕರಿಸಬಹುದಾದ ಇಂಧನದ ಪಾಲು 2030 ರ ವೇಳೆಗೆ ಶೇ. 60 ಕ್ಕಿಂತ ಹೆಚ್ಚಿರಬೇಕು ಮತ್ತು 2047 ರ ವೇಳೆಗೆ ಶೇ. 90 ಕ್ಕಿಂತ ಹೆಚ್ಚಿರಬೇಕು. ಕೆಳಗಿನ ಕೋಷ್ಟಕವು ಕೆಲವು ಬಂದರುಗಳಲ್ಲಿನ ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ಪ್ರಸ್ತುತ ಸ್ಥಿತಿಯನ್ನು ಹಂಚಿಕೊಳ್ಳುತ್ತದೆ:
|
ಬಂದರಿನ ಹೆಸರು
|
ವೀಕರಿಸಬಹುದಾದ ಇಂಧನ ಸಾಮರ್ಥ್ಯ (ಮೆ.ವ್ಯಾ - MW)
|
-
ದೀನ್‌ದಯಾಳ್ ಬಂದರು (ಕಾಂಡ್ಲಾ)
|
ಸುಮಾರು 20 ಮೆ.ವ್ಯಾ (ಸೌರ + ಪವನ ಶಕ್ತಿ) (2025)
|
-
ವಿಶಾಖಪಟ್ಟಣಂ ಬಂದರು
|
10 ಮೆ.ವ್ಯಾ (ಸೌರ ಶಕ್ತಿ) (2023)
|
|
ಬಂದರಿನ ಹೆಸರು
|
ನವೀಕರಿಸಬಹುದಾದ ಸಾಮರ್ಥ್ಯ
|
|
3. ನವ ಮಂಗಳೂರು ಬಂದರು
|
5.2 MW (ಸೌರ ಶಕ್ತಿ) (2023)
|
|
4. ವಿ.ಒ. ಚಿದಂಬರನಾರ್ ಬಂದರು (ತೂತುಕುಡಿ)
|
9 MW (ಸೌರ + ಪವನ + ಮೇಲ್ಛಾವಣಿ ಸೌರ ವ್ಯವಸ್ಥೆ + 1 MW ನಿರ್ಮಾಣ ಹಂತದಲ್ಲಿರುವ ಭೂ-ಆಧಾರಿತ ಸೌರ ಘಟಕ) (2025)
|
|
5 ಕೊಚ್ಚಿನ್ ಬಂದರು
|
100kWp ಮತ್ತು 150kWp ಗ್ರಿಡ್-ಸಂಪರ್ಕಿತ ಸೌರ ಸ್ಥಾವರಗಳು, 1.5MWp ತೇಲುವ ಸೌರ ಸ್ಥಾವರ, 9 ಸೌರ ಪ್ರೊಸ್ಯೂಮರ್‌ಗಳು (2024)
|
|
6. ಚೆನ್ನೈ ಬಂದರು
|
2MWp ಮೇಲ್ಛಾವಣಿ ಸೌರ ವಿದ್ಯುತ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ (2025)
|
|
7. ಪಾರಾದೀಪ್ ಬಂದರು ಪ್ರಾಧಿಕಾರ
|
10 MW ಸೌರ ವಿದ್ಯುತ್ ಸ್ಥಾವರದೊಂದಿಗೆ ₹18,600 ಕೋಟಿ ಕೊಡುಗೆ ನೀಡುತ್ತಿದೆ (2025)
|
|
8. ಮರ್ಮುಗೋವಾ ಬಂದರು ಪ್ರಾಧಿಕಾರ
|
ಈಗಾಗಲೇ ಹಸಿರು ಬಂದರಾಗಿದ್ದು, ತನ್ನದೇ ಆದ ಸೌರ ಸ್ಥಾವರದ ಮೂಲಕ 3 MW ವಿದ್ಯುತ್ ಉತ್ಪಾದಿಸುತ್ತಿದೆ, ಇದು ಬಂದರಿನ 100% ಬಳಕೆಯನ್ನು ಪೂರೈಸುತ್ತದೆ
|
|
9. ಮುಂಬೈ ಬಂದರು
|
ಮೇಲ್ಛಾವಣಿ ಸೌರ ವಿದ್ಯುತ್ ಉತ್ಪಾದನಾ ಸಾಮರ್ಥ್ಯ - 1500KVA (~1.5 MW) (2024-25)
|
|
10. ಜವಾಹರಲಾಲ್ ನೆಹರು ಬಂದರು ಪ್ರಾಧಿಕಾರ
|
ಒಟ್ಟು 4.10 MW ಸಾಮರ್ಥ್ಯದ ಮೇಲ್ಛಾವಣಿ ಮತ್ತು ಭೂ-ಆಧಾರಿತ ಸೌರ ಸ್ಥಾವರಗಳು (2023)
|
|
11. ಹಲ್ದಿಯಾ ಬಂದರು
|
2MW ಸೌರ ಫೋಟೋವೋಲ್ಟಾಯಿಕ್ ಗ್ರಿಡ್ ಪವರ್ ಪ್ಲಾಂಟ್ (2025)
|
|
12ಕಾಮರಾಜರ್ ಬಂದರು
|
ಸ್ಥಾಪಿತ ನವೀಕರಿಸಬಹುದಾದ ಇಂಧನ ಸಾಮರ್ಥ್ಯ: 320 KWs
|
|
ನಿಮಗಿದು ಗೊತ್ತೆ?
ಶಿಪ್ಪಿಂಗ್ ಕ್ಷೇತ್ರದಲ್ಲಿ ವಾಯು ಮಾಲಿನ್ಯವನ್ನು ಕಡಿಮೆ ಮಾಡುವ ಜಾಗತಿಕ ಪ್ರಯತ್ನಗಳಿಗೆ ಅನುಗುಣವಾಗಿ, ಪರಿಸರ ಹಡಗು ಸೂಚ್ಯಂಕ ಮೂಲಕ 'ಹಸಿರು ಹಡಗು ಪ್ರೋತ್ಸಾಹಕಗಳನ್ನು' ಪರಿಚಯಿಸಿದ ಭಾರತದ ಮೊದಲ ಬಂದರು ಎಂಬ ಹೆಗ್ಗಳಿಕೆಗೆ ಮರ್ಮುಗೋವಾ ಬಂದರು ಪಾತ್ರವಾಗಿದೆ.ಬಂದರಿನ ಈ ಪ್ರೋತ್ಸಾಹಕ ಕಾರ್ಯಕ್ರಮವಾದ ‘ಹರಿತ್ ಶ್ರೇಯ’ ಅನ್ನು ಅಕ್ಟೋಬರ್ 2023 ರಲ್ಲಿ ಪ್ರಾರಂಭಿಸಲಾಯಿತು. ಇದು ಇಎಸ್‌ಐ ಅಂಕಗಳ ಆಧಾರದ ಮೇಲೆ ಬಂದರು ಶುಲ್ಕಗಳಲ್ಲಿ ರಿಯಾಯಿತಿಗಳನ್ನು ನೀಡುತ್ತದೆ, ಅಂದರೆ ಉತ್ತಮ ಪರಿಸರ ಕಾಳಜಿ ಹೊಂದಿರುವ ಹಡಗುಗಳಿಗೆ ಬಹುಮಾನ ನೀಡುತ್ತದೆ. ಜಪಾನ್ ಮತ್ತು ಓಮನ್ ಜೊತೆಗೆ ಏಷ್ಯಾದಲ್ಲೇ ಇಂತಹ ಪ್ರೋತ್ಸಾಹಕಗಳನ್ನು ನೀಡುತ್ತಿರುವ ಕೇವಲ ಮೂರು ಬಂದರುಗಳಲ್ಲಿ ಮರ್ಮುಗೋವಾ ಬಂದರು ಕೂಡ ಒಂದು ಎಂಬುದು ವಿಶೇಷ ಸಂಗತಿಯಾಗಿದೆ.
|
|
2. ವಾಯು ಗುಣಮಟ್ಟ ಸುಧಾರಣೆ
ಶಿಪ್ಪಿಂಗ್ ಕ್ಷೇತ್ರದಲ್ಲಿ ವಾಯು ಮಾಲಿನ್ಯವನ್ನು ಕಡಿಮೆ ಮಾಡುವ ಜಾಗತಿಕ ಪ್ರಯತ್ನಗಳಿಗೆ ಅನುಗುಣವಾಗಿ, ಪರಿಸರ ಹಡಗು ಸೂಚ್ಯಂಕ ಮೂಲಕ 'ಹಸಿರು ಹಡಗು ಪ್ರೋತ್ಸಾಹಕಗಳನ್ನು' ಪರಿಚಯಿಸಿದ ಭಾರತದ ಮೊದಲ ಬಂದರು ಎಂಬ ಹೆಗ್ಗಳಿಕೆಗೆ ಮರ್ಮುಗೋವಾ ಬಂದರು ಪಾತ್ರವಾಗಿದೆ. ಬಂದರಿನ ಈ ಪ್ರೋತ್ಸಾಹಕ ಕಾರ್ಯಕ್ರಮವಾದ ‘ಹರಿತ್ ಶ್ರೇಯ’ ಅನ್ನು ಅಕ್ಟೋಬರ್ 2023 ರಲ್ಲಿ ಪ್ರಾರಂಭಿಸಲಾಯಿತು. ಇದು ಇಎಸ್‌ಐ ಅಂಕಗಳ ಆಧಾರದ ಮೇಲೆ ಬಂದರು ಶುಲ್ಕಗಳಲ್ಲಿ ರಿಯಾಯಿತಿಗಳನ್ನು ನೀಡುತ್ತದೆ, ಅಂದರೆ ಉತ್ತಮ ಪರಿಸರ ಕಾಳಜಿ ಮತ್ತು ಕಾರ್ಯಕ್ಷಮತೆ ಹೊಂದಿರುವ ಹಡಗುಗಳಿಗೆ ಬಹುಮಾನ ನೀಡುತ್ತದೆ. ಜಪಾನ್ ಮತ್ತು ಓಮನ್ ಜೊತೆಗೆ ಏಷ್ಯಾದಲ್ಲೇ ಇಂತಹ ಪ್ರೋತ್ಸಾಹಕಗಳನ್ನು ನೀಡುತ್ತಿರುವ ಕೇವಲ ಮೂರು ಬಂದರುಗಳಲ್ಲಿ ಮರ್ಮುಗೋವಾ ಬಂದರು ಕೂಡ ಒಂದು ಎಂಬುದು ವಿಶೇಷ ಸಂಗತಿಯಾಗಿದೆ.
|

ಬಂದರುಗಳ ವಿದ್ಯುದ್ದೀಕರಣ ಮತ್ತು ಇಂಧನ ಬದಲಾವಣೆ
ವಿಶ್ವದಾದ್ಯಂತ ಬಂದರುಗಳು ತಮ್ಮ ಕಾರ್ಯಾಚರಣೆಗಳಲ್ಲಿ ನವೀಕರಿಸಬಹುದಾದ ಇಂಧನವನ್ನು ಬಳಸುವ ಮೂಲಕ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತಿವೆ ಮತ್ತು ನಿರ್ವಹಣಾ ವೆಚ್ಚವನ್ನು ತಗ್ಗಿಸುತ್ತಿವೆ. ಭಾರತವು ಕೂಡ 2030 ರ ವೇಳೆಗೆ ತನ್ನ ಶೇ. 50 ಕ್ಕಿಂತ ಹೆಚ್ಚು ಸಾಮಗ್ರಿ ನಿರ್ವಹಣಾ ಉಪಕರಣಗಳನ್ನು ವಿದ್ಯುದ್ದೀಕರಿಸುವ ಗುರಿಯನ್ನು ಹೊಂದಿದೆ. ಇದು ಮೊದಲು 'ಶಿಪ್-ಟು-ಶೋರ್' ಕ್ರೇನ್‌ಗಳಿಂದ ಪ್ರಾರಂಭವಾಗಿ, ನಂತರ ರೀಚ್ ಸ್ಟ್ಯಾಕರ್‌ಗಳು, ಸ್ಟ್ರಾಡಲ್ ಕ್ಯಾರಿಯರ್‌ಗಳು ಮತ್ತು ಫೋರ್ಕ್‌ಲಿಫ್ಟ್‌ಗಳಿಗೆ ವಿಸ್ತರಿಸಲಿದೆ. ಇದರೊಂದಿಗೆ ಎಲ್‌ಎನ್‌ಜಿ ಬಂಕರಿಂಗ್ ಕೂಡ ವಿಸ್ತರಣೆಯಾಗುತ್ತಿದೆ, ಇದು ಹಡಗುಗಳು ಮತ್ತು ಬಂದರು ವಾಹನಗಳಿಗೆ ಡೀಸೆಲ್‌ಗಿಂತ ಶೇ. 80 ರಷ್ಟು ಕಡಿಮೆ ಹೊರಸೂಸುವಿಕೆ ಹೊಂದಿರುವ ಸ್ವಚ್ಛ ಮತ್ತು ಅಗ್ಗದ ಇಂಧನವನ್ನು ಒದಗಿಸುತ್ತದೆ. ವಾಯು ಮಾಲಿನ್ಯ ನಿಯಂತ್ರಣ ಮತ್ತು ಮುಂಬೈ ಹಾಗೂ ದೀನ್‌ದಯಾಳ್ ಬಂದರುಗಳ ಕ್ರಮಗಳು. ಧೂಳು ಮತ್ತು ವಾಯು ಮಾಲಿನ್ಯವನ್ನು ನಿರ್ವಹಿಸಲು ಭಾರತೀಯ ಬಂದರುಗಳು ಸ್ವಚ್ಛ ಇಂಧನಗಳು, ದಡದ ವಿದ್ಯುತ್, ಎಲೆಕ್ಟ್ರಿಕ್ ಉಪಕರಣಗಳು ಮತ್ತು ಹಸಿರು ಹೊದಿಕೆಯತ್ತ ಗಮನ ಹರಿಸುತ್ತಿವೆ. ಈ ಬದಲಾವಣೆಯ ಪ್ರಮುಖ ಭಾಗವೆಂದರೆ 'ದಡದಿಂದ ಹಡಗಿಗೆ' ವಿದ್ಯುತ್ ಪೂರೈಕೆಯನ್ನು ಪರಿಚಯಿಸುವುದು. ಮುಂಬೈ ಬಂದರು ಐದು ಸ್ಥಳಗಳಲ್ಲಿ 200 kW, 415-ವೋಲ್ಟ್, 50 Hz ಸಾಮರ್ಥ್ಯದ ದಡದಿಂದ ಹಡಗಿಗೆ ವಿದ್ಯುತ್ ಪೂರೈಸುವ ವ್ಯವಸ್ಥೆಯನ್ನು ಅಳವಡಿಸುತ್ತಿದೆ. ದೀನ್‌ದಯಾಳ್ ಬಂದರು ಪ್ರಾಧಿಕಾರವು ಹರಿತ್ ಸಾಗರ್ ಮಾರ್ಗಸೂಚಿಗಳಿಗೆ ಅನುಗುಣವಾಗಿ ನಾಲ್ಕು ಎಲೆಕ್ಟ್ರಿಕ್ ವೀಲ್ ಲೋಡರ್‌ಗಳನ್ನು ನಿಯೋಜಿಸುವ ಮೂಲಕ ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ.
ಪಾರಾದೀಪ್ ಬಂದರಿನ ಪರಿಸರ ನಿರ್ವಹಣೆ
ಪಾರಾದೀಪ್ ಬಂದರು ವ್ಯಾಪಕವಾದ ಧೂಳು ನಿಯಂತ್ರಣ ವ್ಯವಸ್ಥೆಗಳು, ವೀಲ್-ವಾಷಿಂಗ್ ಘಟಕಗಳು, ಮೆಕ್ಯಾನಿಕಲ್ ಸ್ವೀಪರ್‌ಗಳು ಮತ್ತು ಸ್ಥಿರ ಸ್ಪ್ರಿಂಕ್ಲರ್‌ಗಳ ಮೂಲಕ ತನ್ನ ಪರಿಸರ ನಿರ್ವಹಣೆಯನ್ನು ಬಲಪಡಿಸಿದೆ. ಇದು ಟೈರ್-1 ತೈಲ ಸೋರಿಕೆ ಪ್ರತಿಕ್ರಿಯೆ ಸೌಲಭ್ಯವನ್ನು ಹೊಂದಿದ್ದು, ಸಂಪೂರ್ಣವಾಗಿ ಎಲ್‌ಇಡಿ ದೀಪಗಳಿಗೆ ಬದಲಾಗಿದೆ. 2023-24ರ ವೇಳೆಗೆ ಪಾರಾದೀಪ್ ಸುತ್ತಮುತ್ತ 11.5 ಲಕ್ಷ ಸಸಿಗಳನ್ನು ನೆಡುವ ಮೂಲಕ ಬೃಹತ್ ಹಸಿರು ಉಪಕ್ರಮವನ್ನು ಕೈಗೊಂಡಿದೆ. ಹೆಚ್ಚುವರಿಯಾಗಿ, ಸುಮಾರು ₹8.42 ಕೋಟಿ ಹೂಡಿಕೆಯೊಂದಿಗೆ 1 ಲಕ್ಷ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಒಎಫ್‌ಡಿಸಿ Ltd ಮೂಲಕ ಜಾರಿಗೆ ತಂದಿದೆ.
3. ನೀರಿನ ಬಳಕೆಯ ಆಪ್ಟಿಮೈಸೇಶನ್ ಮತ್ತು ಹಸಿರು ಹೊದಿಕೆ ಸುಧಾರಣೆ
ಡ್ರೆಜ್ಜಿಂಗ್, ಸರಕು ನಿರ್ವಹಣೆ ಮತ್ತು ಹಡಗು ತ್ಯಾಜ್ಯ ವಿಸರ್ಜನೆಯಂತಹ ಬಂದರು ಚಟುವಟಿಕೆಗಳು ನೀರಿನ ಗುಣಮಟ್ಟವನ್ನು ಕುಗ್ಗಿಸುತ್ತವೆ. ಅಲ್ಲದೆ ಅಗ್ನಿಶಮನ, ಧೂಳು ನಿಯಂತ್ರಣ ಮತ್ತು ಭೂದೃಶ್ಯಕ್ಕಾಗಿ ಹೆಚ್ಚಿನ ಪ್ರಮಾಣದ ಸಿಹಿನೀರು ಬಳಕೆಯಾಗುತ್ತದೆ. ಇದನ್ನು ಸುಧಾರಿಸಲು, ಬಂದರುಗಳು ಒಳಚರಂಡಿ ಮತ್ತು ತ್ಯಾಜ್ಯನೀರು ಸಂಸ್ಕರಣಾ ಘಟಕಗಳನ್ನು ನಿರ್ಮಿಸುವುದು, ಮರುಬಳಕೆಯ ಮೂಲಕ ತೈಲ ತ್ಯಾಜ್ಯವನ್ನು ನಿರ್ವಹಿಸುವುದು ಮತ್ತು ಸ್ಯಾಟಲೈಟ್ ಮೇಲ್ವಿಚಾರಣೆಯ ಮೂಲಕ ತೈಲ ಸೋರಿಕೆ ತಡೆ ವ್ಯವಸ್ಥೆಯನ್ನು ಬಲಪಡಿಸುವುದು ಅಗತ್ಯವಾಗಿದೆ. ಅಟೊಮೈಜರ್‌ಗಳು ಮತ್ತು ಮಿಸ್ಟ್ ಕ್ಯಾನನ್‌ಗಳ ಬಳಕೆಯಿಂದ ನೀರಿನ ಬಳಕೆಯನ್ನು 20 ಪಟ್ಟು ಕಡಿಮೆ ಮಾಡಬಹುದು. ಅಲ್ಲದೆ, ಪ್ರಸ್ತುತ ಶೇ. 3 ರಿಂದ 36 ರಷ್ಟಿರುವ ಹಸಿರು ಹೊದಿಕೆಯನ್ನು ನಿಗದಿತ ಶೇ. 33 ಕ್ಕೆ ಏರಿಸಲು ಲಭ್ಯವಿರುವ ಭೂಮಿ, ಮ್ಯಾಂಗ್ರೋವ್‌ಗಳನ್ನು ಬಳಸಿಕೊಂಡು ಸಿಎಸ್‌ಆರ್‌ಸಹಭಾಗಿತ್ವದೊಂದಿಗೆ ಅಭಿವೃದ್ಧಿಪಡಿಸಬೇಕಿದೆ.

4. ಘನತ್ಯಾಜ್ಯ ನಿರ್ವಹಣೆ ಸುಧಾರಣೆ ಬಂದರುಗಳು ನಿರ್ಮಾಣದ ಅವಶೇಷಗಳಿಂದ ಹಿಡಿದು ಗೃಹಬಳಕೆಯ ಕಸದವರೆಗೆ ಗಮನಾರ್ಹ ಪ್ರಮಾಣದ ಘನತ್ಯಾಜ್ಯವನ್ನು ಉತ್ಪಾದಿಸುತ್ತವೆ. ಇವುಗಳ ಸಂಗ್ರಹಣೆ, ವಿಂಗಡಣೆ, ಸಾಗಣೆ ಮತ್ತು ಸಂಸ್ಕರಣೆಗೆ ಸಮರ್ಥ ವ್ಯವಸ್ಥೆಗಳ ಅಗತ್ಯವಿದೆ. ಪ್ರಮುಖ ಬಂದರುಗಳು ದಿನಕ್ಕೆ 20-30 ಟನ್ ಕಸವನ್ನು ಉತ್ಪಾದಿಸುತ್ತವೆಯಾದರೂ, ವಿಂಗಡಣೆಯ ಕೊರತೆಯಿಂದಾಗಿ ಮರುಬಳಕೆಯ ಪ್ರಮಾಣವು ವ್ಯತ್ಯಾಸವಾಗುತ್ತದೆ. ಇದನ್ನು ಸುಧಾರಿಸಲು, ಹಸಿರು ಹಡಗು ರಾಷ್ಟ್ರೀಯ ಕ್ರಿಯಾ ಯೋಜನೆ ಮತ್ತು ಸ್ವಚ್ಛ ಭಾರತ ಅಭಿಯಾನಕ್ಕೆ ಅನುಗುಣವಾಗಿ ತ್ಯಾಜ್ಯ ನಿರ್ವಹಣೆಯನ್ನು ಬಲಪಡಿಸಬೇಕಿದೆ. ಈಗಾಗಲೇ ಬಂದರುಗಳಲ್ಲಿ ರಸ್ತೆಗಳ ದುರಸ್ತಿ, ಶೌಚಾಲಯಗಳ ನಿರ್ವಹಣೆ ಮತ್ತು ಕಸದ ಬುಟ್ಟಿಗಳನ್ನು ಅಳವಡಿಸುವ ಮೂಲಕ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
5. ಡ್ರೆಜ್ಜಿಂಗ್ ಹೂಳಿನ ಮರುಬಳಕೆ ಬಂದರುಗಳ ಆಳವನ್ನು ಕಾಯ್ದುಕೊಳ್ಳಲು ಮಾಡುವ 'ಡ್ರೆಜ್ಜಿಂಗ್'ನಿಂದ ಅಪಾರ ಪ್ರಮಾಣದ ಹೂಳು ಉತ್ಪತ್ತಿಯಾಗುತ್ತದೆ. ಇದನ್ನು ಸಮುದ್ರಕ್ಕೆ ಸುರಿಯುವುದರಿಂದ ಪರಿಸರಕ್ಕೆ ಹಾನಿಯಾಗುತ್ತದೆ. ಹೀಗಾಗಿ, ಈ ಹೂಳನ್ನು ಭೂಮಿ ಸುಧಾರಣೆ, ನಿರ್ಮಾಣ ಕಾರ್ಯಗಳು ಮತ್ತು ಕರಾವಳಿ ರಕ್ಷಣೆಗೆ ಮರುಬಳಕೆ ಮಾಡುವ ಸುಸ್ಥಿರ ವಿಧಾನಗಳಿಗೆ ಬಂದರುಗಳು ಬದಲಾಗುತ್ತಿವೆ. ಮುದ್ರಾ, ಜೈಗಢ್, ವಿಶಾಖಪಟ್ಟಣಂ ಮತ್ತು ಪಾರಾದೀಪ್ ಬಂದರುಗಳಲ್ಲಿ ಪ್ರಾಯೋಗಿಕವಾಗಿ ಶೇ. 30 ರಷ್ಟು ಹೂಳನ್ನು ಮರುಬಳಕೆ ಮಾಡುವ ಗುರಿ ಹೊಂದಲಾಗಿದೆ.
6. ಶೂನ್ಯ ಅಪಘಾತ ಸುರಕ್ಷತಾ ಕಾರ್ಯಕ್ರಮ ಭಾರತೀಯ ಬಂದರುಗಳಲ್ಲಿ ಸುರಕ್ಷತಾ ಸಂಸ್ಕೃತಿಯನ್ನು ಬಲಪಡಿಸಲು ಈ ಕಾರ್ಯಕ್ರಮ ಅತ್ಯಗತ್ಯ. ವಿ.ಒ. ಚಿದಂಬರನಾರ್ ಬಂದರು ಇದಕ್ಕೆ ಉತ್ತಮ ಉದಾಹರಣೆಯಾಗಿದ್ದು, ಇಲ್ಲಿ ಕಾರ್ಮಿಕರಿಗೆ ಸುರಕ್ಷತಾ ತರಬೇತಿ, ವೈಯಕ್ತಿಕ ರಕ್ಷಣಾ ಸಾಧನಗಳ ಬಳಕೆ ಮತ್ತು ನಿಯಮಿತ ಅಣಕು ಪ್ರದರ್ಶನಗಳನ್ನು ನಡೆಸಲಾಗುತ್ತದೆ. ಇದರ ಫಲವಾಗಿ, 2019 ರಿಂದ 2021 ರವರೆಗೆ ಈ ಬಂದರು "ಶೂನ್ಯ ಮಾರಣಾಂತಿಕ ಅಪಘಾತ ವಲಯ"ವಾಗಿ ಕಾರ್ಯನಿರ್ವಹಿಸಿದೆ. ಅಪಾಯಕಾರಿ ವಸ್ತುಗಳ ನಿರ್ವಹಣೆ ಮತ್ತು ವಿಪತ್ತು ನಿರ್ವಹಣಾ ಯೋಜನೆಗಳನ್ನು ಬಲಪಡಿಸುವ ಮೂಲಕ ಶೂನ್ಯ ಅಪಘಾತದ ಗುರಿಯನ್ನು ತಲುಪಲು ಪ್ರಯತ್ನಿಸಲಾಗುತ್ತಿದೆ.
7. ಔದ್ಯೋಗಿಕ ಆರೋಗ್ಯ ಬಂದರು ಕಾರ್ಮಿಕರು ರಾಸಾಯನಿಕ ಮತ್ತು ಭೌತಿಕ ಅಪಾಯಗಳಿಗೆ ಒಡ್ಡಿಕೊಳ್ಳುವುದರಿಂದ, ಅವರ ಆರೋಗ್ಯ ರಕ್ಷಣೆ ಬಹಳ ಮುಖ್ಯವಾಗಿದೆ. ಭಾರತದ ಸೀಫೇರರ್ ಉದ್ಯೋಗಿಗಳ ಸಂಖ್ಯೆ 2024 ರ ವೇಳೆಗೆ 3.08 ಲಕ್ಷಕ್ಕೆ ಏರಿದ್ದು, ಮಹಿಳೆಯರ ಭಾಗವಹಿಸುವಿಕೆಯೂ ಹತ್ತು ಪಟ್ಟು ಹೆಚ್ಚಾಗಿದೆ. ಮುಂಬೈ ಪೋರ್ಟ್ ಟ್ರಸ್ಟ್ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದು, ₹639 ಕೋಟಿ ವೆಚ್ಚದಲ್ಲಿ 600 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಿಸುತ್ತಿದೆ. ಇದು ಕಾರ್ಮಿಕರಿಗೆ 24/7 ತುರ್ತು ಆರೈಕೆ ಮತ್ತು ನಿಯಮಿತ ಆರೋಗ್ಯ ತಪಾಸಣೆಯನ್ನು ಖಚಿತಪಡಿಸುತ್ತದೆ.
8. ನೈಜ-ಸಮಯದ ಕೇಂದ್ರೀಕೃತ ಮೇಲ್ವಿಚಾರಣೆ ಭಾರತದ ಕಡಲ ವಲಯದಲ್ಲಿ ಸುರಕ್ಷತೆ ಮತ್ತು ಪರಿಸರ ಮಾನದಂಡಗಳನ್ನು ಏಕರೂಪವಾಗಿ ಕಾಪಾಡಲು ಕೇಂದ್ರೀಕೃತ ನೈಜ-ಸಮಯದ ಮೇಲ್ವಿಚಾರಣಾ ವ್ಯವಸ್ಥೆಯ ಅಗತ್ಯವಿದೆ. ಈ ಡಿಜಿಟಲ್ ವ್ಯವಸ್ಥೆಯು ಎಲ್ಲಾ ಬಂದರುಗಳ ಸುರಕ್ಷತೆ, ಆರೋಗ್ಯ ಮತ್ತು ಪರಿಸರ ದತ್ತಾಂಶವನ್ನು ಸಂಗ್ರಹಿಸುತ್ತದೆ. ರಾಷ್ಟ್ರೀಯ ಡ್ಯಾಶ್‌ಬೋರ್ಡ್ ಮೂಲಕ ಪಾರದರ್ಶಕತೆಯನ್ನು ಒದಗಿಸುವ ಈ ವ್ಯವಸ್ಥೆಯು, ಹೊರಸೂಸುವಿಕೆಯನ್ನು ನಿಯಂತ್ರಿಸಲು ಮತ್ತು ಬಂದರುಗಳ ಒಟ್ಟಾರೆ ದಕ್ಷತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
|
ನಿಮಗೆ ತಿಳಿದಿದೆಯೇ?
ಭಾರತವು ನವೆಂಬರ್ 2023 ರಲ್ಲಿ ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯ ಮತ್ತು ಟೆರಿ ಸಹಭಾಗಿತ್ವದಲ್ಲಿ ರಾಷ್ಟ್ರೀಯ ಹಸಿರು ಬಂದರುಗಳು ಮತ್ತು ಶಿಪ್ಪಿಂಗ್ ಉತ್ಕೃಷ್ಟತಾ ಕೇಂದ್ರವನ್ನು ಸ್ಥಾಪಿಸಿತು. ಈ ಕೇಂದ್ರಕ್ಕೆ ಪ್ರಮುಖ ಬಂದರುಗಳಾದ ಕೊಚ್ಚಿನ್ ಶಿಪ್‌ಯಾರ್ಡ್, ದೀನ್‌ದಯಾಳ್ ಬಂದರು, ಪಾರಾದೀಪ್ ಬಂದರು ಮತ್ತು ವಿ.ಒ. ಚಿದಂಬರನಾರ್ ಬಂದರುಗಳ ಬೆಂಬಲವಿದೆ. ಬಂದರುಗಳು ಮತ್ತು ಹಡಗು ವಲಯವನ್ನು ಪರಿಸರ ಸ್ನೇಹಿಯಾಗಿಸಲು, ಇಂಗಾಲದ ತಟಸ್ಥತೆ ಮತ್ತು ವೃತ್ತಾಕಾರದ ಆರ್ಥಿಕತೆಯನ್ನು ಉತ್ತೇಜಿಸಲು ಅಗತ್ಯವಿರುವ ನೀತಿಗಳು, ನಿಯಮಗಳು ಮತ್ತು ಹೊಸ ತಂತ್ರಜ್ಞಾನಗಳ ಬಗ್ಗೆ ಸಂಶೋಧನೆ ಮಾಡುವುದು ಈ ಕೇಂದ್ರದ ಮುಖ್ಯ ಕೆಲಸವಾಗಿದೆ. ಅಲ್ಲದೆ, ಬಂದರು ಕಾರ್ಯಾಚರಣೆಗಳ ವಿದ್ಯುದ್ದೀಕರಣ, ನವೀಕರಿಸಬಹುದಾದ ಇಂಧನ, ಜೈವಿಕ ಇಂಧನಗಳ ಬಳಕೆ ಮತ್ತು ಹಸಿರು ಮೂಲಸೌಕರ್ಯಗಳ ನಿರ್ಮಾಣದಂತಹ ಕ್ರಮಗಳನ್ನು ಜಾರಿಗೆ ತರಲು ಇದು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ನಿರ್ಧಾರ ತೆಗೆದುಕೊಳ್ಳುವವರಿಗೆ ಅಗತ್ಯವಾದ ಸಾಧನ ಮತ್ತು ಮಾರ್ಗದರ್ಶನವನ್ನು ನೀಡುತ್ತದೆ.
|
ಕಡಲ ಭಾರತ ವಿಷನ್ 2030 ಅನ್ನು ಹರಿತ್ ಸಾಗರ್ ಹಸಿರು ಬಂದರು ಮಾರ್ಗಸೂಚಿಗಳು (2023) ಮೂಲಕ ಜಾರಿಗೆ ತರಲಾಗುತ್ತಿದೆ. ಈ ಮಾರ್ಗಸೂಚಿಗಳು ಎಲ್ಲಾ ಪ್ರಮುಖ ಬಂದರುಗಳಲ್ಲಿ 'ನೆಟ್-ಝೀರೋ' (ನಿವ್ವಳ ಶೂನ್ಯ ಹೊರಸೂಸುವಿಕೆ) ಗುರಿಗಳನ್ನು ತಲುಪಲು ನವೀಕರಿಸಬಹುದಾದ ಇಂಧನ ಬಳಕೆ, ಶೂನ್ಯ-ದ್ರವ ವಿಸರ್ಜನೆ ಮತ್ತು ಹೊರಸೂಸುವಿಕೆ ಕಡಿತದ ಗುರಿಗಳನ್ನು ಕಡ್ಡಾಯಗೊಳಿಸುತ್ತವೆ.

ಸಾಗರಮಾಲಾ, ಹರಿತ್ ಸಾಗರ್, ಹರಿತ್ ನೌಕಾ ಮತ್ತು ಗ್ರೀನ್ ಟಗ್ ಟ್ರಾನ್ಸಿಶನ್ ಪ್ರೋಗ್ರಾಂ ನಂತಹ ಉಪಕ್ರಮಗಳು ಹಸಿರು ಹಣಕಾಸು, ನಿಯಮಗಳು, ತಂತ್ರಜ್ಞಾನ ಮತ್ತು ಸಹಯೋಗದ ಮೂಲಕ ಶಿಪ್ಪಿಂಗ್ ವಲಯವನ್ನು ಇಂಗಾಲ ಮುಕ್ತಗೊಳಿಸಲು ಪ್ರಾಯೋಗಿಕ ಮಾರ್ಗಸೂಚಿಯನ್ನು ಒದಗಿಸುತ್ತವೆ. ಇವು ಆರ್ಥಿಕ ಬೆಳವಣಿಗೆಯ ಜೊತೆಗೆ ಸುಸ್ಥಿರತೆಯನ್ನು ಸಮತೋಲನಗೊಳಿಸುತ್ತವೆ.
ಸರ್ಕಾರದ ಪ್ರಮುಖ ಹಸಿರು ಉಪಕ್ರಮಗಳು
ಸುಸ್ಥಿರ ಕಡಲ ಬೆಳವಣಿಗೆ ಮತ್ತು ಸ್ವಚ್ಛ ಇಂಧನಕ್ಕಾಗಿ ಸರ್ಕಾರದ ಪ್ರಮುಖ ಹಸಿರು ಉಪಕ್ರಮಗಳು:
ಸಾಗರಮಾಲಾ ಯೋಜನೆ: ಭಾರತವನ್ನು ಜಾಗತಿಕ ಕಡಲ ಶಕ್ತಿಯನ್ನಾಗಿ ರೂಪಿಸುವ ಗುರಿ ಹೊಂದಿರುವ ಸಾಗರಮಾಲಾ ಯೋಜನೆಯು, 'ಕಡಲ ಭಾರತ ವಿಷನ್ 2030' ಮತ್ತು 'ಕಡಲ ಅಮೃತ ಕಾಲ ವಿಷನ್ 2047'ರ ಒಂದು ಪ್ರಮುಖ ಭಾಗವಾಗಿದೆ. ಹೆಚ್ಚು ಸ್ಮಾರ್ಟ್ ಮತ್ತು ಪರಿಸರ ಸ್ನೇಹಿ ಸಾರಿಗೆ ಜಾಲಗಳನ್ನು ನಿರ್ಮಿಸುವ ಮೂಲಕ ಸರಕು ಸಾಗಣೆ (ಲಾಜಿಸ್ಟಿಕ್ಸ್) ವೆಚ್ಚವನ್ನು ತಗ್ಗಿಸುವುದು, ಅಂತರಾಷ್ಟ್ರೀಯ ವ್ಯಾಪಾರವನ್ನು ವೇಗಗೊಳಿಸುವುದು ಮತ್ತು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಬೃಹತ್ ಕಾರ್ಯಕ್ರಮದ ಅಡಿಯಲ್ಲಿ 2035 ರ ವೇಳೆಗೆ ಸುಮಾರು ₹5.8 ಲಕ್ಷ ಕೋಟಿ ಮೌಲ್ಯದ 840 ಯೋಜನೆಗಳನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಪ್ರಸ್ತುತ ಪ್ರಗತಿಯನ್ನು ಗಮನಿಸಿದರೆ, ಈಗಾಗಲೇ ₹1.41 ಲಕ್ಷ ಕೋಟಿ ಮೌಲ್ಯದ 272 ಯೋಜನೆಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ ಮತ್ತು ₹1.65 ಲಕ್ಷ ಕೋಟಿ ಮೌಲ್ಯದ 217 ಯೋಜನೆಗಳು ಅನುಷ್ಠಾನದ ವಿವಿಧ ಹಂತಗಳಲ್ಲಿವೆ.
|
ನಿಮಗಿದು ಗೊತ್ತೆ?
ಕೇಂದ್ರ ಸರ್ಕಾರವು ಜೂನ್ 2024 ರಲ್ಲಿ ಮಹಾರಾಷ್ಟ್ರದಲ್ಲಿ "ವಧವನ್ನಲ್ಲಿ ಎಲ್ಲಾ ಹವಾಮಾನಕ್ಕೂ ಸೂಕ್ತವಾದ ಗ್ರೀನ್ಫೀಲ್ಡ್ ಪ್ರಮುಖ ಬಂದರು ಅಭಿವೃದ್ಧಿ" ಯೋಜನೆಯ ಪ್ರಸ್ತಾವನೆಗೆ ಅನುಮೋದನೆ ನೀಡಿದೆ. ಈ ವಧವನ್ ಬಂದರನ್ನು ಜವಾಹರಲಾಲ್ ನೆಹರು ಬಂದರು ಪ್ರಾಧಿಕಾರ ಮತ್ತು ಮಹಾರಾಷ್ಟ್ರ ಕಡಲ ಮಂಡಳಿ ನಡುವಿನ ಜಂಟಿ ಉದ್ಯಮವಾದ 'ವಧವನ್ ಪೋರ್ಟ್ ಪ್ರಾಜೆಕ್ಟ್ ಲಿಮಿಟೆಡ್' ಅಭಿವೃದ್ಧಿಪಡಿಸುತ್ತಿದೆ. ಯೋಜನೆಯ ಒಟ್ಟು ಅಂದಾಜು ವೆಚ್ಚ ₹76,220 ಕೋಟಿ ಆಗಿದೆ. ಇದರಲ್ಲಿ ಪ್ರಮುಖ ಮೂಲಸೌಕರ್ಯ ಅಭಿವೃದ್ಧಿಗಾಗಿ ₹38,976 ಕೋಟಿ (ಪಿಪಿಪಿ ಮಾದರಿಯ ಮೂಲಕ ಹೂಳೆತ್ತುವಿಕೆ ಮತ್ತು ಭೂಮಿ ಸುಧಾರಣೆಗಾಗಿ ₹17,709 ಕೋಟಿ ಸೇರಿದಂತೆ) ಹಾಗೂ ಟರ್ಮಿನಲ್ ಮತ್ತು ಇತರ ವಾಣಿಜ್ಯ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಪಿಪಿಪಿ ಮಾದರಿಯ ಅಡಿಯಲ್ಲಿ ₹37,244 ಕೋಟಿ ಹೂಡಿಕೆಯನ್ನು ಒಳಗೊಂಡಿದೆ.
|
ಗ್ರೀನ್ ಟಗ್ ಟ್ರಾನ್ಸಿಶನ್ ಪ್ರೋಗ್ರಾಂ: ಗ್ರೀನ್ ಟಗ್ ಟ್ರಾನ್ಸಿಶನ್ ಪ್ರೋಗ್ರಾಂ ಎನ್ನುವುದು ಕೇಂದ್ರ ಸರ್ಕಾರದ 'ಪಂಚ ಕರ್ಮ ಸಂಕಲ್ಪ' ಅಡಿಯಲ್ಲಿ ಕೈಗೊಳ್ಳಲಾದ ಒಂದು ಪ್ರಮುಖ ಉಪಕ್ರಮವಾಗಿದೆ. ಬಂದರುಗಳಲ್ಲಿ ಇತರ ದೊಡ್ಡ ಹಡಗುಗಳನ್ನು ತಳ್ಳುವ ಅಥವಾ ಎಳೆಯುವ ಮೂಲಕ ಅವುಗಳ ಸಂಚಾರಕ್ಕೆ ಸಹಾಯ ಮಾಡುವ 'ಹಾರ್ಬರ್ ಟಗ್' ನೌಕೆಗಳನ್ನು ಸಾಂಪ್ರದಾಯಿಕ ಇಂಧನ ಬಳಕೆಯಿಂದ ಮುಕ್ತಗೊಳಿಸಿ, ಹಸಿರು ಮತ್ತು ಸುಸ್ಥಿರ ಪರ್ಯಾಯ ಇಂಧನ ಚಾಲಿತ ನೌಕೆಗಳನ್ನಾಗಿ ಪರಿವರ್ತಿಸುವುದು ಈ ಯೋಜನೆಯ ಗುರಿಯಾಗಿದೆ. ಪರಿಸರ ಸುಸ್ಥಿರತೆ ಮತ್ತು ಕಡಲ ವಲಯದ ಅಭಿವೃದ್ಧಿಗೆ ಭಾರತದ ಬದ್ಧತೆಯನ್ನು ಎತ್ತಿ ಹಿಡಿಯುವಲ್ಲಿ ಇದು ಒಂದು ಪ್ರಮುಖ ಹೆಜ್ಜೆಯಾಗಿದೆ. ಈ ಕಾರ್ಯಕ್ರಮವು ದೇಶದ ಪರಿಸರ ಗುರಿಗಳನ್ನು ಬೆಂಬಲಿಸುವುದಲ್ಲದೆ, ಕಡಲ ಉದ್ಯಮದಲ್ಲಿ ದೇಶೀಯ ನಾವೀನ್ಯತೆ ಮತ್ತು ಉತ್ಪಾದನೆಯನ್ನು ಉತ್ತೇಜಿಸುವ ಮೂಲಕ 'ಮೇಕ್ ಇನ್ ಇಂಡಿಯಾ' ಅಭಿಯಾನವನ್ನು ಬಲಪಡಿಸುತ್ತದೆ.
'ಮೇಕ್ ಇನ್ ಇಂಡಿಯಾ': ಭಾರತದ ಉತ್ಪಾದನಾ ವಲಯದ ಮೇಲೆ ಹೊಸ ಗಮನ ಹರಿಸುವ ಉದ್ದೇಶದೊಂದಿಗೆ ಸೆಪ್ಟೆಂಬರ್ 2014 ರಲ್ಲಿ 'ಮೇಕ್ ಇನ್ ಇಂಡಿಯಾ' ಉಪಕ್ರಮವನ್ನು ಜಾಗತಿಕವಾಗಿ ಪ್ರಾರಂಭಿಸಲಾಯಿತು. ಭಾರತವನ್ನು ವಿಶ್ವದ ಅತ್ಯಂತ ಆದ್ಯತೆಯ ಉತ್ಪಾದನಾ ಕೇಂದ್ರವನ್ನಾಗಿ ಮಾಡುವುದು ಮತ್ತು ಜಾಗತಿಕ ಪೂರೈಕೆ ಸರಪಳಿಯ ಅವಿಭಾಜ್ಯ ಅಂಗವನ್ನಾಗಿ ಮಾಡುವುದು ಈ ಉಪಕ್ರಮದ ಮುಖ್ಯ ಉದ್ದೇಶವಾಗಿದೆ.
|
ಗ್ರೀನ್ ಹೈಬ್ರಿಡ್ ಟಗ್ಗಳು: ಗ್ರೀನ್ ಹೈಬ್ರಿಡ್ ಟಗ್‌ಗಳು ಎನ್ನುವುದು ಹಸಿರು ಹೈಬ್ರಿಡ್ ಪ್ರೊಪಲ್ಷನ್ ಸಿಸ್ಟಮ್ಗಳ ಮೂಲಕ ಕಾರ್ಯನಿರ್ವಹಿಸುವ ನೌಕೆಗಳಾಗಿವೆ. ಇವು ಆರಂಭದಲ್ಲಿ ಹೈಬ್ರಿಡ್ ತಂತ್ರಜ್ಞಾನವನ್ನು ಬಳಸುತ್ತವೆ ಮತ್ತು ಹಂತಹಂತವಾಗಿ ಪಳೆಯುಳಿಕೆ ರಹಿತ ಇಂಧನಗಳಾದ ಮೆಥನಾಲ್, ಅಮೋನಿಯಾ ಮತ್ತು ಹೈಡ್ರೋಜನ್ನಂತಹ ಸುಸ್ಥಿರ ಇಂಧನ ಪರಿಹಾರಗಳನ್ನು ಅಳವಡಿಸಿಕೊಳ್ಳುತ್ತವೆ. ಇವು ಹಡಗುಗಳ ಸಂಚಾರಕ್ಕೆ ಸಹಾಯ ಮಾಡುವಾಗ ಪರಿಸರ ಮಾಲಿನ್ಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತವೆ.
|
ಹರಿತ್ ನೌಕಾ (ಹಸಿರು ನೌಕೆ) ಉಪಕ್ರಮ: ಒಳನಾಡಿನ ಜಲಮಾರ್ಗಗಳಲ್ಲಿ ಸಂಚರಿಸುವ ನೌಕೆಗಳಲ್ಲಿ ಪರಿಸರ ಸ್ನೇಹಿ ಮತ್ತು ಹಸಿರು ತಂತ್ರಜ್ಞಾನಗಳ ಅಳವಡಿಕೆಯನ್ನು ಉತ್ತೇಜಿಸಲು 'ಹರಿತ್ ನೌಕಾ' ಮಾರ್ಗಸೂಚಿಗಳನ್ನು ಪ್ರಾರಂಭಿಸಲಾಗಿದೆ. ಈ ಉಪಕ್ರಮವು ಹಂತಹಂತವಾಗಿ ಅಭಿವೃದ್ಧಿ ಹೊಂದುತ್ತಾ, ಅಂತಿಮವಾಗಿ 2047ರ ವೇಳೆಗೆ ಒಳನಾಡಿನ ಎಲ್ಲಾ ನೌಕೆಗಳನ್ನು ಸಂಪೂರ್ಣವಾಗಿ "ಹಸಿರು ನೌಕೆಗಳನ್ನಾಗಿ" ಬದಲಾಯಿಸುವ ಗುರಿಯನ್ನು ಹೊಂದಿದೆ.
ಭಾರತ ಸರ್ಕಾರವು 2047ರ ವೇಳೆಗೆ ಸಂಪೂರ್ಣವಾಗಿ ಹಸಿರು ನೌಕೆಗಳತ್ತ ಬದಲಾಗುವ ಗುರಿಯನ್ನು ಹೊಂದಿದ್ದು, ಅದರ ಪ್ರಮುಖ ಉದ್ದೇಶಗಳು ಈ ಕೆಳಗಿನಂತಿವೆ:
-
ಹಸಿರು ಮತ್ತು ಸುರಕ್ಷಿತವಾಗಿರುವ, ಪ್ರಮಾಣಿತ ವಿನ್ಯಾಸಗಳ ಹೊಸ ತಲೆಮಾರಿನ ನೌಕೆಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಕಾರ್ಯಾಚರಣೆಗೆ ತರುವುದು.
-
ಇಂತಹ ಹಸಿರು ನೌಕೆಗಳ ಕಾರ್ಯಾಚರಣೆಗೆ ಪೂರಕವಾದ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವುದು.
-
ಸುರಕ್ಷಿತ, ಅನುಕೂಲಕರ ಮತ್ತು ಹಸಿರು ಒಳನಾಡು ಜಲಮಾರ್ಗ ಪ್ರಯಾಣಿಕ ಸಾರಿಗೆಯನ್ನು ಉತ್ತೇಜಿಸುವುದು.
-
ಹಡಗು ನಿರ್ಮಾಣದಲ್ಲಿ ದೇಶೀಯ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವುದು ಮತ್ತು ‘ಮೇಕ್ ಇನ್ ಇಂಡ್ಲೀಯ’ ನೀತಿಯನ್ನು ಉತ್ತೇಜಿಸುವುದು.
-
ಹಸಿರು ನೌಕೆಗಳ ಅಭಿವೃದ್ಧಿ ಮತ್ತು ಸಂಬಂಧಿತ ಮೂಲಸೌಕರ್ಯಗಳಿಗೆ ಆರ್ಥಿಕ ನೆರವು ನೀಡುವುದು.
ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್:
ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಮತ್ತು ಭಾರತವನ್ನು ಹಸಿರು ಹೈಡ್ರೋಜನ್ ಕ್ಷೇತ್ರದಲ್ಲಿ ಜಾಗತಿಕ ನಾಯಕನನ್ನಾಗಿ ಮಾಡುವ ಉದ್ದೇಶದಿಂದ ಭಾರತ ಸರ್ಕಾರವು 2023 ರಲ್ಲಿ ಈ ಮಿಷನ್ ಅನ್ನು ಪ್ರಾರಂಭಿಸಿತು. 2030 ರ ವೇಳೆಗೆ ಪ್ರತಿ ವರ್ಷ 5 ಮಿಲಿಯನ್ ಟನ್ ಹಸಿರು ಹೈಡ್ರೋಜನ್ ಉತ್ಪಾದಿಸುವ ಗುರಿಯನ್ನು ಇದು ಹೊಂದಿದೆ, ಇದು ದೇಶಕ್ಕೆ ಸುಮಾರು ₹8 ಲಕ್ಷ ಕೋಟಿ ಹೂಡಿಕೆಯನ್ನು ತರಲಿದ್ದು, 6 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸಲಿದೆ. ಅಲ್ಲದೆ, ಪಳೆಯುಳಿಕೆ ಇಂಧನಗಳ ಆಮದಿನ ಮೇಲೆ ಅವಲಂಬಿತವಾಗಿರುವ ಸುಮಾರು ₹1 ಲಕ್ಷ ಕೋಟಿ ಹಣವನ್ನು ಉಳಿಸಲು ಇದು ಸಹಾಯ ಮಾಡುತ್ತದೆ. ಈ ಮಿಷನ್ ಪ್ರಮುಖವಾಗಿ ಹೈಡ್ರೋಜನ್ ಉತ್ಪಾದನೆ, ಪ್ರಾಯೋಗಿಕ ಯೋಜನೆಗಳು, ಎಲೆಕ್ಟ್ರೋಲೈಸರ್ ತಯಾರಿಕೆ, ಕೌಶಲ್ಯ ತರಬೇತಿ ಮತ್ತು ಸಂಶೋಧನೆಯ ಮೇಲೆ ಕೇಂದ್ರೀಕರಿಸಿದ್ದು, ಉಕ್ಕು, ಸಾರಿಗೆ ಮತ್ತು ರಸಗೊಬ್ಬರ ವಲಯಗಳಲ್ಲಿ ಪಳೆಯುಳಿಕೆ ಇಂಧನಗಳ ಬಳಕೆಯನ್ನು ಕಡಿಮೆ ಮಾಡುವ ಗುರಿ ಹೊಂದಿದೆ. ಈ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೆ ತರಲು, ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯವು ಕಾಂಡ್ಲಾ, ಪಾರಾದೀಪ್ ಮತ್ತು ತೂತುಕುಡಿ ಬಂದರುಗಳನ್ನು 'ಹಸಿರು ಹೈಡ್ರೋಜನ್ ಹಬ್'ಗಳಾಗಿ ಅಭಿವೃದ್ಧಿಪಡಿಸಲು ಗುರುತಿಸಿದೆ.
|
ಭಾರತದ ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಅಡಿಯಲ್ಲಿ, ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ 2027 ರ ವೇಳೆಗೆ ಕನಿಷ್ಠ ಎರಡು ಹಡಗುಗಳನ್ನು ಹಸಿರು ಹೈಡ್ರೋಜನ್ ಅಥವಾ ಹಸಿರು ಹೈಡ್ರೋಜನ್‌ನಿಂದ ಪಡೆದ ಇತರ ಇಂಧನಗಳ ಮೂಲಕ ಚಲಿಸುವಂತೆ ಮಾರ್ಪಡಿಸಲು ಕೆಲಸ ಮಾಡುತ್ತಿದೆ. ಈ ನಿಟ್ಟಿನಲ್ಲಿ, ತನ್ನ ಹಡಗು ಸಮೂಹದಿಂದ ಎರಡು ನೌಕೆಗಳನ್ನು ಹಸಿರು ಮೆಥನಾಲ್ ಮೂಲಕ ಚಲಿಸುವಂತೆ ಮರುಸಜ್ಜುಗೊಳಿಸಲು ಗುರುತಿಸಲಾಗಿದೆ.
|
|
ಸುಸ್ಥಿರ ಕಡಲ ಅಭಿವೃದ್ಧಿಯನ್ನು ವೇಗಗೊಳಿಸಲು ಸರ್ಕಾರವು ಆಯಕಟ್ಟಿನ ತಿಳುವಳಿಕಾ ಪತ್ರಗಳಿಗೆ ಸಹಿ ಹಾಕುತ್ತಿದೆ. ಈ ಒಪ್ಪಂದಗಳು ಭಾರತದ ವಿಶಾಲವಾದ ಹಸಿರು ಬಂದರು ಕಾರ್ಯಸೂಚಿಯನ್ನು ಬಲಪಡಿಸುತ್ತವೆ. ಈ ಕಾರ್ಯಸೂಚಿಗೆ ಭೌತಿಕ ಹೂಡಿಕೆಗಳು, ಸುಧಾರಿತ ತಂತ್ರಜ್ಞಾನಗಳು ಮತ್ತು ಬಲಿಷ್ಠ ಪಾಲುದಾರಿಕೆಗಳ ಬೆಂಬಲವಿದೆ.
|
ಸುಸ್ಥಿರ ಒಪ್ಪಂದಗಳು: ಭಾರತದ ಕಡಲ ವಲಯದ ಬೆಳವಣಿಗೆಗೆ ಇಂಧನ
19 ಸೆಪ್ಟೆಂಬರ್ 2025 ರಂದು ಭಾವನಗರದಲ್ಲಿ ನಡೆದ "ಸಮುದ್ರ ಸೆ ಸಮೃದ್ಧಿ - ಭಾರತದ ಕಡಲ ವಲಯದ ರೂಪಾಂತರ" ಎಂಬ ಘೋಷವಾಕ್ಯದ ಅಡಿಯಲ್ಲಿ ನಡೆದ ಐತಿಹಾಸಿಕ ಒಪ್ಪಂದ ವಿನಿಮಯ ಸಮಾರಂಭವು ಭಾರತದ ಕಡಲ ಮಹತ್ವಾಕಾಂಕ್ಷೆಗಳಲ್ಲಿ ಒಂದು ನಿರ್ಣಾಯಕ ಕ್ಷಣವಾಗಿ ಗುರುತಿಸಲ್ಪಟ್ಟಿದೆ. ಒಟ್ಟು 27 ಪ್ರತ್ಯೇಕ ಒಪ್ಪಂದಗಳಿಗೆ ಸಹಿ ಹಾಕಲಾಗಿದ್ದು, ಇವು ಸಮಗ್ರ ಮತ್ತು ದೂರದೃಷ್ಟಿಯ ಕಡಲ ಕಾರ್ಯಸೂಚಿಯನ್ನು ಒಳಗೊಂಡಿವೆ. ಇವುಗಳಲ್ಲಿ ಸುಸ್ಥಿರತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ₹66,000 ಕೋಟಿಗೂ ಅಧಿಕ ಹೂಡಿಕೆಯ ಬದ್ಧತೆಯೊಂದಿಗೆ, ಈ ಯೋಜನೆಗಳು ಹೆಚ್ಚಿನ ಸಾಮರ್ಥ್ಯದ ಬಂದರುಗಳು, ಹಸಿರು ಚಲನಶೀಲತೆ, ಪ್ರವಾಸೋದ್ಯಮ, ಇಂಧನ, ಹಡಗು ಭದ್ರತೆ, ಹಡಗು ನಿರ್ಮಾಣ ಪರಿಸರ ವ್ಯವಸ್ಥೆ ಮತ್ತು ಬಲಿಷ್ಠ ಹಣಕಾಸು ಚೌಕಟ್ಟುಗಳನ್ನು ಒಳಗೊಂಡಿವೆ.
-
ಭಾರತೀಯ ಒಳನಾಡು ಜಲಮಾರ್ಗ ಪ್ರಾಧಿಕಾರ ಮತ್ತು ಬಿಹಾರ ಸರ್ಕಾರದ ನಡುವೆ ಪಟ್ನಾದಲ್ಲಿ ₹908 ಕೋಟಿ ವೆಚ್ಚದ ವಾಟರ್ ಮೆಟ್ರೋ ಯೋಜನೆಗಾಗಿ ಒಪ್ಪಂದ ನಡೆದಿದೆ. ಇದು ಇಂಧನ ದಕ್ಷತೆಯ ಎಲೆಕ್ಟ್ರಿಕ್ ಫೆರ್ರಿ ಮತ್ತು ಆಧುನಿಕ ಟರ್ಮಿನಲ್‌ಗಳನ್ನು ಒಳಗೊಂಡಿರುತ್ತದೆ.
-
ಮಜಗಾಂವ್ ಡಾಕ್ ಶಿಪ್‌ಬಿಲ್ಡರ್ಸ್ ಲಿಮಿಟೆಡ್ ತಮಿಳುನಾಡಿನ ತೂತುಕುಡಿಯಲ್ಲಿ ಮತ್ತೊಂದು ದೊಡ್ಡ ಹಸಿರು ಮೂಲಸೌಕರ್ಯದ ಹಡಗು ಅಂಗಳವನ್ನು ಸ್ಥಾಪಿಸಲು ಒಪ್ಪಂದ ಮಾಡಿಕೊಂಡಿದೆ.
-
ಆಂಧ್ರಪ್ರದೇಶ, ಒಡಿಶಾ, ಗುಜರಾತ್, ಮಹಾರಾಷ್ಟ್ರ ಮತ್ತು ತಮಿಳುನಾಡಿನ ಹಡಗು ನಿರ್ಮಾಣ ಕ್ಲಸ್ಟರ್‌ಗಳನ್ನು ಹಸಿರು ನಾವೀನ್ಯತೆ ಹಬ್ಗಳಾಗಿ ವಿನ್ಯಾಸಗೊಳಿಸಲಾಗಿದೆ. ಇವು ಇಂಗಾಲ-ಮುಕ್ತ ಹಡಗು ನಿರ್ಮಾಣ ಮತ್ತು ಪರಿಸರ ಸ್ನೇಹಿ ಮೆರೈನ್ ಇಂಜಿನಿಯರಿಂಗ್ ಅನ್ನು ಉತ್ತೇಜಿಸುತ್ತವೆ.
-
ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್ & ಇಂಜಿನಿಯರ್ಸ್ ಸಂಸ್ಥೆಯು ಐಪಿಆರ್‌ಸಿಎಲ್, ಎಸ್‌ಸಿಎಲ್, ಎಸ್‌ಎಂಪಿಕೆ ಮತ್ತು ಮೊಡೆಸ್ಟ್ ಶಿಪ್‌ಯಾರ್ಡ್‌ಗಳೊಂದಿಗೆ ಗುಜರಾತ್ ಮತ್ತು ಪಶ್ಚಿಮ ಬಂಗಾಳದಲ್ಲಿ ಹಸಿರು ಸೌಲಭ್ಯಗಳು, ಟಗ್ ಅಭಿವೃದ್ಧಿ ಮತ್ತು ಹಡಗು ದುರಸ್ತಿಗಾಗಿ ಒಪ್ಪಂದಗಳಿಗೆ ಸಹಿ ಹಾಕಿದೆ.
-
ಸಾಗರಮಾಲಾ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್, ನಿಯೋ ಫಂಡ್, ಎನ್‌ಎಬಿಎಫ್‌ಐಡಿ ಮತ್ತು ಕ್ಲೈಮೇಟ್ ಫಂಡ್ ಮ್ಯಾನೇಜರ್ಸ್ ಅಂತಹ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇದು ಹಸಿರು ಹಡಗು ನಿರ್ಮಾಣ ಮತ್ತು ಆಧುನಿಕ ಲಾಜಿಸ್ಟಿಕ್ಸ್ ಯೋಜನೆಗಳಿಗೆ ಅಗತ್ಯವಾದ ಬಂಡವಾಳವನ್ನು ಒದಗಿಸಲು ಸಹಾಯ ಮಾಡುತ್ತದೆ.
ದೇಶೀಯ ಪ್ರಯತ್ನಗಳ ಜೊತೆಗೆ, ಭಾರತವು ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಹಸಿರು ಒಪ್ಪಂದಗಳನ್ನು ಬಲಪಡಿಸುತ್ತಿದೆ, ಇದರಲ್ಲಿ ಸಮುದ್ರದಲ್ಲಿ ತೈಲ ಸೋರಿಕೆಯನ್ನು ತಡೆಗಟ್ಟುವ ಜಾಗತಿಕ ಒಪ್ಪಂದಗಳೂ ಸೇರಿವೆ.
|
ಭಾರತದ ಅಂತಾರಾಷ್ಟ್ರೀಯ ಹಸಿರು ಕಡಲ ಒಪ್ಪಂದಗಳು
|
|
|
ದೇಶ
|
ಸಹಿ ಮಾಡಲಾದ ಹಸಿರು ಉಪಕ್ರಮಗಳು
|
|
|
|
ಡೆನ್ಮಾರ್ಕ್
|
ಭಾರತ ಮತ್ತು ಡೆನ್ಮಾರ್ಕ್ ಹಸಿರು ಮತ್ತು ಡಿಜಿಟಲ್ ಕಡಲ ಉಪಕ್ರಮಗಳಿಗಾಗಿ ಜಂಟಿ ಕಾರ್ಯಯೋಜನೆಗೆ ಒಪ್ಪಿಕೊಂಡಿವೆ. 'ಗ್ರೀನ್ ಶಿಪ್ಪಿಂಗ್'ನಲ್ಲಿ ಅತ್ಯುತ್ತಮ ಕೇಂದ್ರವನ್ನು ಸ್ಥಾಪಿಸುವುದು, ಹಸಿರು ಇಂಧನ ಅಭಿವೃದ್ಧಿ, ಹಡಗು ಮರುಬಳಕೆ ಮತ್ತು ಇಂಧನ ದಕ್ಷತೆಯ ನಾವೀನ್ಯತೆಗಳಲ್ಲಿ ಸಹಕರಿಸಲು ನಿರ್ಧರಿಸಿವೆ.
|
|
|
|
ನಾರ್ವೆ
|
ಭಾರತ ಮತ್ತು ನಾರ್ವೆ ಜಂಟಿ ಕಾರ್ಯಕಾರಿ ಗುಂಪು ಹಸಿರು ಹಡಗು ಸಂಚಾರ, ಹಡಗು ಮರುಬಳಕೆ, ಕಡಲ ತರಬೇತಿ ಮತ್ತು ಕಡಲ ಭದ್ರತೆಗೆ ಸಂಬಂಧಿಸಿದ ವಿಷಯಗಳಲ್ಲಿ ಸಹಕರಿಸಲು ನಿರ್ಧರಿಸಿದೆ.
|
|
|
|
ರಷ್ಯಾ
|
ಹೆಚ್ಚು ದಕ್ಷ ಮತ್ತು ಕಡಿಮೆ ಹೊರಸೂಸುವಿಕೆಯ ಆರ್ಕ್ಟಿಕ್ ಹಡಗು ಸಂಚಾರವನ್ನು ಉತ್ತೇಜಿಸಲು 'ಉತ್ತರ ಸಮುದ್ರ ಮಾರ್ಗ'ದಲ್ಲಿ ಸಹಕಾರವನ್ನು ಬಲಪಡಿಸಲು ಭಾರತ ಮತ್ತು ರಷ್ಯಾ ನಿರ್ಧರಿಸಿವೆ.
|
|
|
|
ಮಾಲ್ಟಾ
|
ಭಾರತ ಮತ್ತು ಮಾಲ್ಟಾ ನಡುವೆ ಸಹಿ ಹಾಕಲಾದ ತಿಳಿವಳಿಕೆ ಒಪ್ಪಂದದ ಅಡಿಯಲ್ಲಿ ರಚಿಸಲಾದ ಜಂಟಿ ಸಮಿತಿಯು ಗ್ರೀನ್ ಶಿಪ್ಪಿಂಗ್, ಕ್ರೂಸ್ ಶಿಪ್ಪಿಂಗ್, ಬಂದರುಗಳ ಮೂಲಸೌಕರ್ಯ, ಐ. ಎಂ. ಓ. ಅಡಿಯಲ್ಲಿ ಉಪಕ್ರಮಗಳು, ಮಾಹಿತಿಯನ್ನು ಹಂಚಿಕೊಳ್ಳುವುದು ಮತ್ತು ಶಿಪ್ಪಿಂಗ್ ನೋಂದಣಿಯಲ್ಲಿ ಉತ್ತಮ ಅಭ್ಯಾಸಗಳ ಬಗ್ಗೆ ಚರ್ಚಿಸಿತು.
|
|
|
|
ಸಿಂಗಾಪುರ
|
ಹಸಿರು ಮತ್ತು ಡಿಜಿಟಲ್ ಹಡಗು ಕಾರಿಡಾರ್‌ಗಾಗಿ ಭಾರತವು ಸಿಂಗಾಪುರದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇದು ಕಡಿಮೆ ಹೊರಸೂಸುವಿಕೆಯ ತಂತ್ರಜ್ಞಾನಗಳು ಮತ್ತು ಡಿಜಿಟಲ್ ಸಾಧನಗಳ ಬಳಕೆಯನ್ನು ವೇಗಗೊಳಿಸುತ್ತದೆ.
|
|
|
|
ನೆದರ್ಲ್ಯಾಂಡ್ಸ್
|
ಸುಸ್ಥಿರ ಬಂದರು ಬೆಳವಣಿಗೆಯನ್ನು ಉತ್ತೇಜಿಸಲು ಭಾರತ ಮತ್ತು ನೆದರ್ಲ್ಯಾಂಡ್ಸ್ ಕಡಲ ಸಹಕಾರ ಮತ್ತು ಹಸಿರು ಡಿಜಿಟಲ್ ಸಮುದ್ರ ಕಾರಿಡಾರ್ ಕುರಿತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿದವು.
|
|
ಉಪಸಂಹಾರ
ಭಾರತವು ಇಂದು ಒಂದು ಪರಿವರ್ತನಾತ್ಮಕ ಕಡಲ ಯುಗದ ಹೊಸ್ತಿಲಲ್ಲಿ ನಿಂತಿದೆ. ತನ್ನ ವಿಶಾಲವಾದ ಕರಾವಳಿ ತೀರ, ಬೆಳೆಯುತ್ತಿರುವ ಕೈಗಾರಿಕಾ ಸಾಮರ್ಥ್ಯ ಮತ್ತು ಆಯಕಟ್ಟಿನ ಭೌಗೋಳಿಕ ಸ್ಥಾನವನ್ನು ಬಳಸಿಕೊಂಡು, ಭಾರತವು ಕೇವಲ ವ್ಯಾಪಾರ ಮತ್ತು ಸಂಪರ್ಕವನ್ನು ವೃದ್ಧಿಸುವುದು ಮಾತ್ರವಲ್ಲದೆ, ಸುಸ್ಥಿರತೆ ಮತ್ತು ಸ್ಥಿತಿಸ್ಥಾಪಕತ್ವದ ಪರಂಪರೆಯನ್ನು ಭದ್ರಪಡಿಸುತ್ತಿದೆ. ದೂರದೃಷ್ಟಿಯ ಕಾರ್ಯಕ್ರಮಗಳು, ಶಾಸಕಾಂಗ ಸುಧಾರಣೆಗಳು ಮತ್ತು ಹಸಿರು-ಹಡಗು ಉಪಕ್ರಮಗಳ ಮೂಲಕ ದೇಶವು ತನ್ನ ಕಡಲ ಪರಿಸರ ವ್ಯವಸ್ಥೆಯನ್ನು ಭವಿಷ್ಯಕ್ಕಾಗಿ ಮರುರೂಪಿಸುತ್ತಿದೆ. ಇದು ಸ್ವಚ್ಛ ಬಂದರುಗಳು, ಕಡಿಮೆ ಹೊರಸೂಸುವಿಕೆಯ ಹಡಗು ಸಮೂಹಗಳು, ಸ್ಮಾರ್ಟ್ ಮೂಲಸೌಕರ್ಯ ಮತ್ತು ಎಲ್ಲರನ್ನೂ ಒಳಗೊಳ್ಳುವ ಅವಕಾಶಗಳನ್ನು ಒಳಗೊಂಡಿದೆ. 2047ರತ್ತ ತನ್ನ ಪಯಣವನ್ನು ಸಾಗಿಸುತ್ತಿರುವ ಭಾರತವು ಕೇವಲ ಉದಯೋನ್ಮುಖ ಕಡಲ ಶಕ್ತಿಯಾಗಿ ಮಾತ್ರವಲ್ಲದೆ, ಸಮುದ್ರಗಳ ಜವಾಬ್ದಾರಿಯುತ ರಕ್ಷಕನಾಗಿ, ಜಾಗತಿಕವಾಗಿ ಸ್ಪರ್ಧಾತ್ಮಕ ಆರ್ಥಿಕತೆಯಾಗಿ ಮತ್ತು ಭೂಮಿಯ ಯೋಗಕ್ಷೇಮಕ್ಕೆ ಬದ್ಧವಾಗಿರುವ ಪಾಲುದಾರನಾಗಿ ಹೊರಹೊಮ್ಮುತ್ತಿದೆ.
References:
https://www.pib.gov.in/PressReleasePage.aspx?PRID=2182946
https://www.pib.gov.in/PressReleasePage.aspx?PRID=2105136
https://www.pib.gov.in/PressReleasePage.aspx?PRID=2105085
https://www.pib.gov.in/PressReleasePage.aspx?PRID=2182563
https://www.pib.gov.in/PressReleasePage.aspx?PRID=2045946
https://www.pib.gov.in/PressReleasePage.aspx?PRID=2074644
https://www.pib.gov.in/PressReleasePage.aspx?PRID=2155480
https://www.pib.gov.in/PressReleasePage.aspx?PRID=2109521
https://www.pib.gov.in/PressNoteDetails.aspx?id=155063&NoteId=155063&ModuleId=3
https://www.pib.gov.in/PressReleseDetail.aspx?PRID=2155845
https://www.pib.gov.in/PressReleseDetailm.aspx?PRID=2167305
https://www.pib.gov.in/PressReleasePage.aspx?PRID=2157621
https://www.pib.gov.in/PressReleasePage.aspx?PRID=2172488
https://www.pib.gov.in/PressReleasePage.aspx?PRID=2183140
https://www.pib.gov.in/PressReleasePage.aspx?PRID=1804689#:~:text=As%20recognition%20for%20good%20safety
,years%202019%2C%202020%20and%202021.
https://www.pib.gov.in/PressReleasePage.aspx?PRID=2179502
Ministry of Ports, Shipping and Waterways
https://shipmin.gov.in/sites/default/files/Harit%20Sagar%20-%20Green%20Port%20Guidelines%20.pdf https://shipmin.gov.in/sites/default/files/Annual%20Report%202024-25%20-%20English.pdf
https://shipmin.gov.in/sites/default/files/Report%20Monthly%20Major%20Port%20September%202025.pdf
file:///C:/Users/HP/Downloads/consultative-document-on-national-green-shipping-policy.pdf https://shipmin.gov.in/sites/default/files/harit.pdf
https://green-portshipping.org/gallery/teri_doc_img/05092426NCoEGPS_Harit_Sagar_Samachar_Second_Issue 2_.pdf
https://www.facebook.com/ShipminIndia/posts/%EF%B8%8F-in-a-significant-step-towards-green-port-operations-shri-shantanu-thakur-honbl/1101827715309057/
Sagarmala
MIV 2030 Report.pdf
Deendayal Port Authority
https://www.deendayalport.gov.in/wp-content/uploads/2025/10/EOI-for-20-MW-Hybrid-power-With-CAMC-17.10.25.pdf
Vishakhapatnam Port Authority
https://vpt.shipping.gov.in/admin_assets/uploads/1694517836_perspective_05-2023.pdf
New Mangalore Port Authority
https://newmangaloreport.gov.in/sites/default/files/2023-06/Draft%20EIA%20Report_B.17_NMPA.pdf
V.O. Chidambaranar Port Authority
www.vocport.gov.in/port/UserInterface/photos/V.O.C%20Port%20Leads%20the%20Way%20Toward%20a%20Green er%20Future1652025131119.pdf
Cochin Port Authority
https://cochinport.gov.in/sites/default/files/inline-files/EA%20Report%20of%20CoPA%20for%20the%20FY%202023- 4.pdf
Chennai Port Authority
https://chennaiport.gov.in/api/static/default/tendor/EoI%20for%20Solar.pdf
Twitter
https://x.com/DefenceMinIndia/status/1993199832782323823
DG Shipping
https://www.dgshipping.gov.in/WriteReadData/userfiles/file/Marine%20Environmental%20Management%20Report
_2023.pdf
Kamrajar Port Limited
https://green-port-shipping.org/kamarajar-port-tamil-nadu
Paradip port Authority
https://www.linkedin.com/posts/paradip-port-authority_a-greener-tomorrow-begins-today-paradip-activity- 7343462487008174080-dSNp/
https://www.paradipport.gov.in/environment.aspx
Jawaharlal Nehru Port Authority
https://mopsw.nic.in/sagarvidyakosh/index.php?title=Jawaharlal_Nehru_Port_Authority
Mumbai Port Authority
https://mumbaiport.gov.in/WriteReadData/RTF1984/1703606288.pdf
Ministry of External Affairs
https://www.mea.gov.in/Images/attach/Make_in_India_Initiative.pdf
Click here to see pdf
*****
(Backgrounder ID: 156511)
आगंतुक पटल : 11
Provide suggestions / comments