Social Welfare
ಭಾರತದಲ್ಲಿ ತೃತೀಯ ಲಿಂಗಿ ವ್ಯಕ್ತಿಗಳ ಹಕ್ಕುಗಳು
ಕಾನೂನು ಸುಧಾರಣೆಗಳು ಮತ್ತು ಅಂತರ್ಗತ ಪ್ರಗತಿ
Posted On:
19 NOV 2025 10:50AM
|
ಪ್ರಮುಖ ಮಾರ್ಗಸೂಚಿಗಳು
ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ, 2019 ಮತ್ತು ಅದರ ನಿಯಮಗಳು, 2020, ಕಾನೂನು ಮಾನ್ಯತೆ, ಕಲ್ಯಾಣ ಕ್ರಮಗಳು ಮತ್ತು ತಾರತಮ್ಯದ ವಿರುದ್ಧ ರಕ್ಷಣೆಯನ್ನು ಖಚಿತಪಡಿಸುತ್ತವೆ.
ಸರ್ಕಾರವು ಈ ಕಾಯ್ದೆಯ ಅಡಿಯಲ್ಲಿ, ದಿನಾಂಕ 2020ರ ಆಗಸ್ಟ್ 21ರ ಅಧಿಸೂಚನೆಯ ಮೂಲಕ ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ ರಾಷ್ಟ್ರೀಯ ಮಂಡಳಿಯನ್ನು ರಚಿಸಿದೆ.
ಎಸ್.ಎಂ.ಐ.ಎಲ್.ಇ ಉಪಕ್ರಮವು 'ಗರಿಮಾ ಗೃಹ' ಆಶ್ರಯತಾಣಗಳು ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಅಂಚಿನಲ್ಲಿರುವ ವ್ಯಕ್ತಿಗಳ ಜೀವನೋಪಾಯ, ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಪುನರ್ವಸತಿಗೆ ಬೆಂಬಲ ನೀಡುತ್ತದೆ.
ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ ರಾಷ್ಟ್ರೀಯ ಪೋರ್ಟಲ್ ಬಹುಭಾಷಾ ಡಿಜಿಟಲ್ ಸೇವೆಗಳ ಮೂಲಕ ತೊಂದರೆ-ಮುಕ್ತ ಪ್ರಮಾಣೀಕರಣ, ಯೋಜನೆಗಳ ಪ್ರವೇಶ ಮತ್ತು ಪಾರದರ್ಶಕತೆಯನ್ನು ಸಕ್ರಿಯಗೊಳಿಸುತ್ತದೆ.
ಭಾರತೀಯ ಸಂವಿಧಾನದ ವಿಧಿ 14, 15, 19, ಮತ್ತು 21 ರ ಅಡಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳಿಗೆ ಸಮಾನತೆ, ಘನತೆ ಮತ್ತು ತಾರತಮ್ಯವಿಲ್ಲದಿರುವುದು ಖಾತರಿಪಡಿಸಲಾಗಿದೆ.
|
ಪೀಠಿಕೆ
ಜನಗಣತಿ 2011ರ ಪ್ರಕಾರ, ಭಾರತದಲ್ಲಿ ಲಿಂಗ ವಿಭಾಗದಲ್ಲಿ "ಇತರ " ಎಂದು ಆಯ್ಕೆ ಮಾಡಿದವರ ಸಂಖ್ಯೆ 4.87 ಲಕ್ಷ ಇತ್ತು. ಈ ಅಂಕಿ-ಅಂಶವನ್ನು ದೇಶದಲ್ಲಿನ ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ ಜನಸಂಖ್ಯೆ ಎಂದು ಪರಿಗಣಿಸಲಾಗಿದೆ.
ಸಮಗ್ರ ಕಾನೂನು ರಕ್ಷಣೆ, ಕಲ್ಯಾಣ ಯೋಜನೆಗಳು ಮತ್ತು ಡಿಜಿಟಲ್ ಪ್ರವೇಶದ ಮೂಲಕ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಐತಿಹಾಸಿಕ ಅಂಚಿನಲ್ಲಿರುವಿಕೆಯನ್ನು ಪರಿಹರಿಸುವಲ್ಲಿ ಭಾರತವು ಗಣನೀಯ ಪ್ರಗತಿಯನ್ನು ಸಾಧಿಸಿದೆ. ಈ ಬದಲಾವಣೆಯು ಭಾರತೀಯ ಸಮಾಜದಲ್ಲಿ ಸಮಾನತೆ ಮತ್ತು ಅಂತರ್ಗತತೆಯನ್ನು ಉತ್ತೇಜಿಸುವ ಹೆಚ್ಚುತ್ತಿರುವ ಅರಿವು ಮತ್ತು ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತದೆ.

ಭಾರತದ ಸರ್ವೋಚ್ಚ ನ್ಯಾಯಾಲಯವು, 2014ರ ಏಪ್ರಿಲ್ 15ರಂದು ನೀಡಿದ ತನ್ನ ಐತಿಹಾಸಿಕ ತೀರ್ಪಿನಲ್ಲಿ, ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (NALSA) ವಿರುದ್ಧ ಭಾರತ ಒಕ್ಕೂಟ [ರಿಟ್ ಅರ್ಜಿ (ಸಿವಿಲ್) ಸಂಖ್ಯೆ. 400 ಆಫ್ 2012] ಪ್ರಕರಣದಲ್ಲಿ, ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳನ್ನು “ಮೂರನೇ ಲಿಂಗ” ಎಂದು ಸ್ಪಷ್ಟವಾಗಿ ಗುರುತಿಸಿತು. ಈ ತೀರ್ಪು ಅವರು ತಮ್ಮ ಲಿಂಗವನ್ನು ಸ್ವಯಂ-ಗುರುತಿಸಿಕೊಳ್ಳುವ ಹಕ್ಕನ್ನು ದೃಢಪಡಿಸಿತು ಮತ್ತು ಅವರಿಗೆ ಕಾನೂನು ಮಾನ್ಯತೆ ನೀಡಲು, ಸಮಾನತೆ ಮತ್ತು ತಾರತಮ್ಯವಿಲ್ಲದಿರುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರಕ್ಕೆ ನಿರ್ದೇಶನ ನೀಡಿತು.
ತದನಂತರದ ಸರ್ಕಾರದ ಉಪಕ್ರಮಗಳಲ್ಲಿನ ಪ್ರಮುಖ ಮೈಲಿಗಲ್ಲುಗಳು ಹೀಗಿವೆ: ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ, 2019 ರ ಕಾನೂನು ಜಾರಿ (2020ರ ಜನವರಿ 10ರಂದು ಅಧಿಸೂಚಿಸಲಾಗಿದೆ). ಕಾಯ್ದೆಯ ನಿಬಂಧನೆಗಳ ಅನುಷ್ಠಾನಕ್ಕಾಗಿ ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ನಿಯಮಗಳು, 2020. ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳಿಗಾಗಿನ ನೀತಿಗಳು, ಕಾರ್ಯಕ್ರಮಗಳು, ಶಾಸನ ಮತ್ತು ಯೋಜನೆಗಳ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡಲು ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ ರಾಷ್ಟ್ರೀಯ ಮಂಡಳಿಯ ಸ್ಥಾಪನೆ. ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ ರಾಷ್ಟ್ರೀಯ ಪೋರ್ಟಲ್ ಅನ್ನು ಪ್ರಾರಂಭಿಸುವುದು (ನವೆಂಬರ್ 25, 2020). ಈ ಕಾನೂನುಗಳು ಮತ್ತು ಉಪಕ್ರಮಗಳು ವ್ಯವಸ್ಥಿತ ಬೆಂಬಲ ಮತ್ತು ಸಬಲೀಕರಣಕ್ಕೆ ಅಡಿಪಾಯ ಹಾಕಿವೆ, ಮತ್ತು ಸಮಾನ ಹಕ್ಕುಗಳು ಹಾಗೂ ಅವಕಾಶಗಳೊಂದಿಗೆ ಅವರು ಅಭಿವೃದ್ಧಿ ಹೊಂದಬಹುದಾದ ಸಮಾಜವನ್ನು ಪೋಷಿಸುತ್ತಾ, ಅಂತರ್ಗತತೆ, ಘನತೆ, ತಾರತಮ್ಯವಿಲ್ಲದಿರುವುದು ಮತ್ತು ಮುಖ್ಯವಾಹಿನಿಯ ಏಕೀಕರಣವನ್ನು ಉತ್ತೇಜಿಸುವ ಪ್ರಯತ್ನಗಳನ್ನು ಮಾಡುತ್ತಿವೆ.
ಸಾಂವಿಧಾನಿಕ ನಿಬಂಧನೆಗಳು
ಸರ್ವೋಚ್ಚ ನ್ಯಾಯಾಲಯವು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (NALSA) ವಿರುದ್ಧ ಭಾರತ ಒಕ್ಕೂಟ ಪ್ರಕರಣದ (ಏಪ್ರಿಲ್ 15, 2014) ತೀರ್ಪಿನಲ್ಲಿ ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳನ್ನು ಸ್ಪಷ್ಟವಾಗಿ “ಮೂರನೇ ಲಿಂಗ” ಎಂದು ಗುರುತಿಸಿತು ಮತ್ತು ಭಾರತೀಯ ಸಂವಿಧಾನದ ವಿಧಿ 14, 15, 16, 19, ಮತ್ತು 21 ರ ಅಡಿಯಲ್ಲಿ ಸಾಂವಿಧಾನಿಕ ರಕ್ಷಣೆಗಳಿಗೆ ಅವರನ್ನು ಅರ್ಹರನ್ನಾಗಿ ಮಾಡಿತು.
ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ, 2019
2020ರ ಜನವರಿ 10 ರಿಂದ ಜಾರಿಗೆ ಬಂದಿರುವ ಈ ಕಾಯ್ದೆಯು, ಕಾನೂನು ಮಾನ್ಯತೆ ನೀಡುವ, ತಾರತಮ್ಯವನ್ನು ನಿಷೇಧಿಸುವ ಮತ್ತು ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ ಕಲ್ಯಾಣವನ್ನು ಕಡ್ಡಾಯಗೊಳಿಸುವ ಒಂದು ಕಾನೂನಾಗಿದೆ.
ಪ್ರಮುಖ ನಿಬಂಧನೆಗಳು ಸೇರಿವೆ:
- ವಿಭಾಗ 2: ವ್ಯಾಖ್ಯಾನಗಳು (ಉದಾಹರಣೆಗೆ, "ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿ"ಯಲ್ಲಿ ಶಸ್ತ್ರಚಿಕಿತ್ಸೆಯನ್ನು ಲೆಕ್ಕಿಸದೆ ಟ್ರಾನ್ಸ್-ಪುರುಷರು/ಮಹಿಳೆಯರು, ಇಂಟರ್‌ಸೆಕ್ಸ್, ಜೆಂಡರ್ ಕ್ವೀರ್, ಹಿಜ್ರಾ, ಇತ್ಯಾದಿ ಸೇರಿದ್ದಾರೆ).
- ವಿಭಾಗ 3: ತಾರತಮ್ಯ ನಿಷೇಧ (ಶಿಕ್ಷಣ, ಉದ್ಯೋಗ, ಆರೋಗ್ಯ ರಕ್ಷಣೆ, ಸಾರ್ವಜನಿಕ ಸೇವೆಗಳು, ವಾಸಸ್ಥಳ ಮತ್ತು ಚಲನೆಯಲ್ಲಿ ತಾರತಮ್ಯವನ್ನು ನಿಷೇಧಿಸುತ್ತದೆ).
- ವಿಭಾಗಗಳು 4-7: ಸ್ವಯಂ-ಗ್ರಹಿಕೆಯ ಗುರುತಿನ ಹಕ್ಕು; ಗುರುತಿನ ಪ್ರಮಾಣಪತ್ರಕ್ಕಾಗಿ ಅರ್ಜಿ (ಜಿಲ್ಲಾ ಮ್ಯಾಜಿಸ್ಟ್ರೇಟ್ ಮೂಲಕ); ಶಸ್ತ್ರಚಿಕಿತ್ಸೆಯ ನಂತರ ಪರಿಷ್ಕೃತ ಪ್ರಮಾಣಪತ್ರ.
- ವಿಭಾಗ 8: ಕಲ್ಯಾಣ ಯೋಜನೆಗಳು, ಸೇರ್ಪಡೆ, ರಕ್ಷಣೆ ಮತ್ತು ಪುನರ್ವಸತಿಗಾಗಿ ಸರ್ಕಾರದ ಕಡ್ಡಾಯ ಕರ್ತವ್ಯಗಳು.
- ವಿಭಾಗಗಳು 9-12: ಉದ್ಯೋಗದಲ್ಲಿ ತಾರತಮ್ಯವಿಲ್ಲದಿರುವುದು; ದೂರು ಅಧಿಕಾರಿಗಳ ನೇಮಕಾತಿ; ಕೌಟುಂಬಿಕ ವಾಸದ ಹಕ್ಕು.
- ವಿಭಾಗಗಳು 13-15: ಅಂತರ್ಗತ ಶಿಕ್ಷಣ; ವೃತ್ತಿಪರ ತರಬೇತಿ ಯೋಜನೆಗಳು; ಆರೋಗ್ಯ ರಕ್ಷಣೆ (ಉದಾ. ಲಿಂಗ ಪುನರ್ವಿನಿಯೋಗ ಶಸ್ತ್ರಚಿಕಿತ್ಸೆ, ಸಮಾಲೋಚನೆ, ವಿಮಾ ವ್ಯಾಪ್ತಿ).
- ವಿಭಾಗಗಳು 16-18: ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ ರಾಷ್ಟ್ರೀಯ ಮಂಡಳಿ (ನೀತಿಗಳ ಕುರಿತು ಸಲಹೆ ನೀಡುತ್ತದೆ, ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡುತ್ತದೆ).
- ವಿಭಾಗಗಳು 19-20: ಅಪರಾಧಗಳು (ತಾರತಮ್ಯಕ್ಕೆ 2 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ); ಪರಿಹಾರ ಮತ್ತು ತಪಾಸಣೆ ಅಧಿಕಾರಗಳು.
"ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ನಿಯಮಗಳು, 2020"
ಕಾಯ್ದೆಯ ನಿಬಂಧನೆಗಳನ್ನು ಅನುಷ್ಠಾನಗೊಳಿಸಲು "ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ನಿಯಮಗಳು, 2020" ಅನ್ನು 2020ರ ಸೆಪ್ಟೆಂಬರ್ 25ರಂದು ಜಾರಿಗೆ ತರಲಾಯಿತು.
|
ಅಂಡಮಾನ್ ಮತ್ತು ನಿಕೋಬಾರ್, ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಚಂಡೀಗಢ, ಛತ್ತೀಸ್‌ಗಢ, ದೆಹಲಿ, ಜಮ್ಮು ಮತ್ತು ಕಾಶ್ಮೀರ, ಮಣಿಪುರ, ಮಹಾರಾಷ್ಟ್ರ, ಮಿಜೋರಾಂ, ಒಡಿಶಾ, ಪಂಜಾಬ್, ರಾಜಸ್ಥಾನ, ಸಿಕ್ಕಿಂ, ತೆಲಂಗಾಣ, ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ.
|
ನಿಯಮ 11(5)ರ ಪ್ರಕಾರ, ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ ವಿರುದ್ಧದ ಅಪರಾಧ ಪ್ರಕರಣಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಅಂತಹ ಅಪರಾಧಗಳ ಸಮಯೋಚಿತ ನೋಂದಣಿ, ತನಿಖೆ ಮತ್ತು ಮೊಕದ್ದಮೆಯನ್ನು ಖಚಿತಪಡಿಸಿಕೊಳ್ಳಲು ಪ್ರತಿ ರಾಜ್ಯವು ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ ರಕ್ಷಣಾ ಕೋಶಗಳನ್ನು ಸ್ಥಾಪಿಸುವುದು ಅಗತ್ಯವಾಗಿದೆ. ಇಲ್ಲಿಯವರೆಗೆ, ಈ ಕೆಳಗಿನ 20 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಈ ಕೋಶಗಳನ್ನು ಸ್ಥಾಪಿಸಿವೆ:
|
ಅಂಡಮಾನ್ ಮತ್ತು ನಿಕೋಬಾರ್, ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಚಂಡೀಗಢ, ಛತ್ತೀಸ್‌ಗಢ, ಗುಜರಾತ್, ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಕೇರಳ, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಪುದುಚೇರಿ, ರಾಜಸ್ಥಾನ, ಪಂಜಾಬ್, ತಮಿಳುನಾಡು, ತೆಲಂಗಾಣ, ತ್ರಿಪುರ, ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ.
|
ನಿಯಮ 10(1)ರ ಪ್ರಕಾರ, ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ರಕ್ಷಿಸಲು, ಯೋಜನೆಗಳು ಮತ್ತು ಕಲ್ಯಾಣ ಕ್ರಮಗಳಿಗೆ ಪ್ರವೇಶವನ್ನು ಸುಗಮಗೊಳಿಸಲು ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ ಕಲ್ಯಾಣ ಮಂಡಳಿಗಳನ್ನು (TWBs) ಸ್ಥಾಪಿಸಲಾಗಿದೆ. ಇಲ್ಲಿಯವರೆಗೆ, ಈ ಕೆಳಗಿನ 25 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು TWBs ಗಳನ್ನು ಸ್ಥಾಪಿಸಿವೆ:
ಸರ್ಕಾರದ ಪ್ರಮುಖ ಉಪಕ್ರಮಗಳು
ಭಾರತ ಸರ್ಕಾರವು, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಮೂಲಕ, ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳನ್ನು ರಕ್ಷಿಸಲು ಮತ್ತು ಸಬಲೀಕರಣಗೊಳಿಸಲು ಹಲವಾರು ಕ್ರಮಗಳನ್ನು ಪ್ರಾರಂಭಿಸಿದೆ. ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ ರಾಷ್ಟ್ರೀಯ ಮಂಡಳಿ: ನೀತಿಗಳ ಕುರಿತು ಸಲಹೆ ನೀಡುತ್ತದೆ ಮತ್ತು ಕಲ್ಯಾಣ ಯೋಜನೆಗಳನ್ನು ಮೇಲ್ವಿಚಾರಣೆ ಮಾಡುತ್ತದೆ. ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ ರಾಷ್ಟ್ರೀಯ ಪೋರ್ಟಲ್: ನವೆಂಬರ್ 25, 2020 ರಂದು ಪ್ರಾರಂಭಿಸಲಾಯಿತು. ಇದು ಗುರುತಿನ ಪ್ರಮಾಣಪತ್ರಗಳು ಮತ್ತು ಪ್ರಯೋಜನಗಳ ಪ್ರವೇಶಕ್ಕಾಗಿ ಆನ್‌ಲೈನ್ ಅರ್ಜಿಗಳಿಗೆ ಅನುವು ಮಾಡಿಕೊಡುತ್ತದೆ. ಎಸ್‌ಎಂಐಎಲ್‌ಇ ಯೋಜನೆ: ಫೆಬ್ರವರಿ 2022 ರಲ್ಲಿ ಪರಿಚಯಿಸಲಾಯಿತು. ಇದು 'ಗರಿಮಾ ಗೃಹ' ಕೇಂದ್ರಗಳು ಮತ್ತು ಆಯುಷ್ಮಾನ್ ಭಾರತ್ ಟಿಜಿ ಪ್ಲಸ್ ಆರೋಗ್ಯ ವ್ಯಾಪ್ತಿಯ ಮೂಲಕ ಜೀವನೋಪಾಯ, ಕೌಶಲ್ಯ ತರಬೇತಿ ಮತ್ತು ಆಶ್ರಯ ಬೆಂಬಲವನ್ನು ಒದಗಿಸುತ್ತದೆ. ಈ ಉಪಕ್ರಮಗಳು ಸಾಮೂಹಿಕವಾಗಿ ಲಿಂಗತ್ವ ಅಲ್ಪಸಂಖ್ಯಾತ ನಾಗರಿಕರಿಗೆ ಅಂತರ್ಗತತೆ, ಘನತೆ ಮತ್ತು ಸಮಾನ ಅವಕಾಶಗಳನ್ನು ಉತ್ತೇಜಿಸುತ್ತವೆ.
ಇದರ ಜೊತೆಗೆ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯು ಲಿಂಗತ್ವ ಅಲ್ಪಸಂಖ್ಯಾತ ಸಮುದಾಯಕ್ಕೆ ಉದ್ಯೋಗ ಅವಕಾಶಗಳಿಗೆ ಸಮಾನ ಪ್ರವೇಶವಿದೆ ಎಂದು ಖಚಿತಪಡಿಸಿಕೊಳ್ಳಲು “ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳಿಗೆ ಸಮಾನ ಅವಕಾಶಗಳ ನೀತಿ” ಯನ್ನು ಹೊರಡಿಸಿದೆ.
ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ ರಾಷ್ಟ್ರೀಯ ಮಂಡಳಿ
ಕೇಂದ್ರ ಸರ್ಕಾರವು 2020ರ ಆಗಸ್ಟ್ 21ರಂದು ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ ರಾಷ್ಟ್ರೀಯ ಮಂಡಳಿಯನ್ನು ರಚಿಸಿತು ಮತ್ತು 2023ರ ನವೆಂಬರ್ 16ರ ಅಧಿಸೂಚನೆಯ ಮೂಲಕ ಇದನ್ನು ಪುನರ್ ರಚಿಸಲಾಯಿತು. ಇದು ಭಾರತದಲ್ಲಿ ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ ಹಕ್ಕುಗಳನ್ನು ರಕ್ಷಿಸಲು ಮತ್ತು ಉತ್ತೇಜಿಸಲು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅಡಿಯಲ್ಲಿ ಒಂದು ಶಾಸನಬದ್ಧ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ. ಈ ಮಂಡಳಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಐದು ಪ್ರತಿನಿಧಿಗಳು, ಎನ್‌ಎಚ್‌ಆರ್‌ಸಿ ಮತ್ತು ಎನ್‌ಸಿಡಬ್ಲು ಪ್ರತಿನಿಧಿಗಳು, ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳು ಮತ್ತು ಎನ್‌ಜಿಒಗಳನ್ನು ಪ್ರತಿನಿಧಿಸುವ ತಜ್ಞರು ಸಹ ಇದ್ದಾರೆ.

ರಾಷ್ಟ್ರೀಯ ಮಂಡಳಿಯ ಕಾರ್ಯಗಳು ಮತ್ತು ಜವಾಬ್ದಾರಿಗಳು
-
ಸಲಹಾ ಪಾತ್ರ: ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳಿಗೆ ಸಂಬಂಧಿಸಿದ ನೀತಿಗಳು, ಕಾರ್ಯಕ್ರಮಗಳು, ಶಾಸನ ಮತ್ತು ಯೋಜನೆಗಳನ್ನು ರೂಪಿಸುವಲ್ಲಿ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡುವುದು.
-
ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ: ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ ಸಮಾನತೆ ಮತ್ತು ಸಂಪೂರ್ಣ ಭಾಗವಹಿಸುವಿಕೆಯನ್ನು ಸಾಧಿಸಲು ವಿನ್ಯಾಸಗೊಳಿಸಲಾದ ನೀತಿಗಳು ಮತ್ತು ಕಾರ್ಯಕ್ರಮಗಳ ಪರಿಣಾಮವನ್ನು ಮೇಲ್ವಿಚಾರಣೆ ಮಾಡುವುದು ಮತ್ತು ಮೌಲ್ಯಮಾಪನ ಮಾಡುವುದು.
-
ಪರಿಶೀಲನೆ ಮತ್ತು ಸಮನ್ವಯ: ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳಿಗೆ ಸಂಬಂಧಿಸಿದ ಸರ್ಕಾರದ ಎಲ್ಲಾ ಇಲಾಖೆಗಳು ಮತ್ತು ಸರ್ಕಾರೇತರ ಸಂಸ್ಥೆಗಳ ಚಟುವಟಿಕೆಗಳನ್ನು ಪರಿಶೀಲಿಸುವುದು ಮತ್ತು ಸಮನ್ವಯಗೊಳಿಸುವುದು. ಇದು ಸಾಮರಸ್ಯ, ಪರಿಣಾಮಕಾರಿತ್ವ ಮತ್ತು ನಕಲು ಅಥವಾ ಅಂತರವನ್ನು ತಪ್ಪಿಸಲು ಉದ್ದೇಶಿಸಿದೆ.
-
ಕುಂದುಕೊರತೆ ನಿವಾರಣೆ: ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ ಕುಂದುಕೊರತೆಗಳನ್ನು ನಿವಾರಿಸುವುದು.
-
ಇತರೆ ಸೂಚಿತ ಕಾರ್ಯಗಳು: ಕೇಂದ್ರ ಸರ್ಕಾರವು ಸೂಚಿಸಬಹುದಾದ ಇತರ ಕಾರ್ಯಗಳನ್ನು ನಿರ್ವಹಿಸುವುದು.
ಎಸ್‌ಎಂಐಎಲ್‌ಇ ಯೋಜನೆ (Support for Marginalised Individuals for Livelihood and Enterprise)
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ದಿಂದ ಪ್ರಾರಂಭಿಸಲಾದ ಎಸ್‌ಎಂಐಎಲ್‌ಇ ಯೋಜನೆಯು ಭಾರತದಲ್ಲಿ ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳು ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳ ಸಮಗ್ರ ಪುನರ್ವಸತಿ ಮತ್ತು ಸಬಲೀಕರಣವನ್ನು ಗುರಿಯಾಗಿರಿಸಿಕೊಂಡ ಪ್ರಮುಖ ಉಪಕ್ರಮವಾಗಿದೆ.
ಕೇಂದ್ರ ವಲಯದ ಯೋಜನೆಯಾಗಿ ಪರಿಚಯಿಸಲಾದ ಎಸ್‌ಎಂಐಎಲ್‌ಇ ಅನ್ನು ಫೆಬ್ರವರಿ 12, 2022 ರಂದು ಪ್ರಾರಂಭಿಸಲಾಯಿತು ಮತ್ತು ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ, 2019 ರೊಂದಿಗೆ ಹೊಂದಿಕೆಯಾಗುವಂತೆ ಕಾರ್ಯಾಚರಣೆಗೆ ತರಲಾಯಿತು.
ಸಮಾನತೆ, ತಾರತಮ್ಯವಿಲ್ಲದಿರುವುದು ಮತ್ತು ಘನತೆಯ ಹಕ್ಕನ್ನು ಖಚಿತಪಡಿಸಿಕೊಳ್ಳುವ ಮೂಲಕ ಸಂವಿಧಾನದ ವಿಧಿ 14, 15, ಮತ್ತು 21ರ ಅಡಿಯಲ್ಲಿನ ಹಕ್ಕುಗಳನ್ನು ಎತ್ತಿಹಿಡಿಯಲು ಎಸ್‌ಎಂಐಎಲ್‌ಇ ಗುರಿ ಹೊಂದಿದೆ. ಈ ಯೋಜನೆಯು ಉದ್ದೇಶಿತ ಮತ್ತು ಅಂತರ್ಗತ ಮಧ್ಯಸ್ಥಿಕೆಗಳ ಮೂಲಕ ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ ಸಾಮಾಜಿಕ-ಆರ್ಥಿಕ ಸವಾಲುಗಳನ್ನು ಪರಿಹರಿಸುವಲ್ಲಿ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ಎಸ್‌ಎಂಐಎಲ್‌ಇ ಯೋಜನೆಯನ್ನು "ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ ಕಲ್ಯಾಣಕ್ಕಾಗಿ ಸಮಗ್ರ ಪುನರ್ವಸತಿ" ಮೂಲಕ ಸಮಗ್ರ ಬೆಂಬಲವನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ.

ಎಸ್‌ಎಂಐಎಲ್‌ಇ ಯೋಜನೆಯ ಪ್ರಾಥಮಿಕ ಉದ್ದೇಶಗಳು
- ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ: ಉದ್ಯೋಗಾರ್ಹತೆಯನ್ನು ಹೆಚ್ಚಿಸಲು ವೃತ್ತಿಪರ ತರಬೇತಿ ಮತ್ತು ಕೌಶಲ್ಯ ಉನ್ನತೀಕರಣ ಕಾರ್ಯಕ್ರಮಗಳನ್ನು ನೀಡುವುದು ಮತ್ತು ಅಂತರ್ಗತ ಶಿಕ್ಷಣ ಹಾಗೂ ವೃತ್ತಿಪರ ಅವಕಾಶಗಳನ್ನು ಕಡ್ಡಾಯಗೊಳಿಸುವುದು.
- ವಿದ್ಯಾರ್ಥಿವೇತನ ಯೋಜನೆಗಳು: ಒಂದೇ ಲಾಗಿನ್ ರುಜುವಾತುಗಳನ್ನು ಬಳಸಿಕೊಂಡು ಸ್ವಯಂಚಾಲಿತ ಆನ್‌ಲೈನ್ ವ್ಯವಸ್ಥೆಯ ಮೂಲಕ, ಲಿಂಗತ್ವ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಡ್ರಾಪ್-ಔಟ್ ಪ್ರಮಾಣವನ್ನು ಕಡಿಮೆ ಮಾಡಲು ಮತ್ತು ಪ್ರಾಥಮಿಕ ಹಂತದಿಂದ ಮಾಧ್ಯಮಿಕ ಹಂತಕ್ಕೆ ಸುಗಮವಾಗಿ ಹೋಗಲು ನೆರವಾಗುವ ಉದ್ದೇಶದಿಂದ ಈ ವಿದ್ಯಾರ್ಥಿವೇತನಗಳನ್ನು ನೀಡಲಾಗುತ್ತದೆ.
- ಸಮಗ್ರ ವೈದ್ಯಕೀಯ ಆರೋಗ್ಯ: ಕೆಳಗಿನ ಕ್ರಮಗಳ ಮೂಲಕ ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳಿಗೆ ಆರೋಗ್ಯ ರಕ್ಷಣೆಯ ಪ್ರವೇಶವನ್ನು ಸರ್ಕಾರ ಖಚಿತಪಡಿಸುತ್ತದೆ. ಈ ಪ್ರಯೋಜನಗಳು ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿವೆ.
- ಸಂವಿಧಾನದ ವಿಧಿ 21ರ ಅಡಿಯಲ್ಲಿ ಆರೋಗ್ಯದ ಹಕ್ಕನ್ನು ಎತ್ತಿಹಿಡಿಯುತ್ತಾ, ಲಿಂಗ-ದೃಢೀಕರಿಸುವ ಆರೈಕೆ, HIV ಕಣ್ಗಾವಲು, ಸಮಾಲೋಚನೆ ಮತ್ತು ಉಚಿತ ವೈದ್ಯಕೀಯ ವ್ಯಾಪ್ತಿಗಾಗಿ ಆಯುಷ್ಮಾನ್ ಭಾರತ್ - ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯೊಂದಿಗೆ ಏಕೀಕರಣವನ್ನು ಒದಗಿಸುವುದು.
- ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳಿಗಾಗಿ ಮೀಸಲಾದ ಆರೋಗ್ಯ ವಿಮಾ ಯೋಜನೆಯಾದ ಆಯುಷ್ಮಾನ್ ಭಾರತ್ ಟಿಜಿ ಪ್ಲಸ್ ಅನ್ನು ಪ್ರಾರಂಭಿಸುವುದು.
- ಪ್ರತಿ ವ್ಯಕ್ತಿಗೆ ವರ್ಷಕ್ಕೆ ₹5 ಲಕ್ಷ ವರೆಗೆ ಉಚಿತ ವೈದ್ಯಕೀಯ ವ್ಯಾಪ್ತಿಯನ್ನು ನೀಡುವುದು.
-
ಈ ವಿಮೆಯು ಸಮಗ್ರ ಆರೋಗ್ಯ ರಕ್ಷಣಾ ಪ್ಯಾಕೇಜ್ ಅನ್ನು ಒಳಗೊಂಡಿದೆ:
- ಲಿಂಗ-ದೃಢೀಕರಿಸುವ ಕಾರ್ಯವಿಧಾನಗಳು
- ಲಿಂಗ ಪುನರ್ವಿನಿಯೋಗ ಶಸ್ತ್ರಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಯ ನಂತರದ ಆರೈಕೆ.
- ಹಾರ್ಮೋನ್ ಚಿಕಿತ್ಸೆ
-
- ಸುರಕ್ಷಿತ ಆಶ್ರಯ ತಾಣಗಳು ಲಿಂಗತ್ವ ಕಾಯ್ದೆ 2019 ರ ವಿಭಾಗ 12(3) ರ ಪ್ರಕಾರ, ಯಾವುದೇ ಪೋಷಕರು ಅಥವಾ ಅವರ ತಕ್ಷಣದ ಕುಟುಂಬದ ಸದಸ್ಯರು ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಯನ್ನು ನೋಡಿಕೊಳ್ಳಲು ಅಸಮರ್ಥರಾದರೆ, ಸೂಕ್ತ ನ್ಯಾಯಾಲಯವು ಅಂತಹ ವ್ಯಕ್ತಿಯನ್ನು ಪುನರ್ವಸತಿ ಕೇಂದ್ರದಲ್ಲಿ ಇರಿಸಲು ಆದೇಶ ನೀಡಬೇಕು. ಇದಕ್ಕೆ ಅನುಗುಣವಾಗಿ, ಅಗತ್ಯವಿರುವ ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳಿಗೆ ಆಹಾರ, ವೈದ್ಯಕೀಯ ಆರೈಕೆ ಮತ್ತು ಮನರಂಜನಾ ಸೌಲಭ್ಯಗಳಂತಹ ಮೂಲಭೂತ ಸೌಕರ್ಯಗಳೊಂದಿಗೆ ಆಶ್ರಯ ನೀಡಲು ಎಸ್‌ಎಂಐಎಲ್‌ಇ ಯೋಜನೆಯು 'ಗರಿಮಾ ಗೃಹ'ಗಳ ಸ್ಥಾಪನೆಗೆ ಅವಕಾಶ ಕಲ್ಪಿಸುತ್ತದೆ.
- ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ದೆಹಲಿ, ಗುಜರಾತ್, ಜಾರ್ಖಂಡ್, ಕರ್ನಾಟಕ, ಮಧ್ಯಪ್ರದೇಶ (2), ಮಹಾರಾಷ್ಟ್ರ (3), ಮಣಿಪುರ, ಒಡಿಶಾ, ಪಂಜಾಬ್, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ (2) ಸೇರಿದಂತೆ 17 ರಾಜ್ಯಗಳಲ್ಲಿ ನಿರ್ಗತಿಕ ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳಿಗಾಗಿ 21 ಗರಿಮಾ ಗೃಹಗಳನ್ನು ಸ್ಥಾಪಿಸಲಾಗಿದೆ. ಇತ್ತೀಚೆಗೆ ಪುದುಚೇರಿ, ಬಸ್ತಿ ಮತ್ತು ಗೌತಮ್ ಬುದ್ಧನಗರಗಳಲ್ಲಿ ಇನ್ನೂ 3 ಗರಿಮಾ ಗೃಹಗಳಿಗೆ ಮಂಜೂರಾತಿ ನೀಡಲಾಗಿದೆ.
- ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ ರಕ್ಷಣಾ ಕೋಶಗಳು ಮತ್ತು ರಾಷ್ಟ್ರೀಯ ಪೋರ್ಟಲ್ ಏಕೀಕರಣ: ಅಪರಾಧಗಳನ್ನು ಮೇಲ್ವಿಚಾರಣೆ ಮಾಡಲು, ಸಮಯಕ್ಕೆ ಸರಿಯಾಗಿ ಎಫ್‌ಐಆರ್ ನೋಂದಣಿಯನ್ನು ಖಚಿತಪಡಿಸಿಕೊಳ್ಳಲು ಮತ್ತು ಕಾನೂನು ರಕ್ಷಣೆಗಳನ್ನು ಬಲಪಡಿಸಲು ಸಂವೇದನಾಶೀಲ ಕಾರ್ಯಕ್ರಮಗಳನ್ನು ನಡೆಸಲು ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳ ಅಡಿಯಲ್ಲಿ ಜಿಲ್ಲಾ ಮಟ್ಟದ ಕೋಶಗಳನ್ನು ಸ್ಥಾಪಿಸುವುದು.


ತೃತೀಯ ಲಿಂಗಿ ವ್ಯಕ್ತಿಗಳಿಗಾಗಿ ರಾಷ್ಟ್ರೀಯ ಪೋರ್ಟಲ್

ಅರ್ಹ ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳಿಗೆ ಪ್ರಮಾಣಪತ್ರಗಳು ಮತ್ತು ಗುರುತಿನ ಚೀಟಿಗಳನ್ನು ನೀಡಲು 2020ರ ನವೆಂಬರ್ 25 ರಂದು ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ ರಾಷ್ಟ್ರೀಯ ಪೋರ್ಟಲ್ ಅನ್ನು ಪ್ರಾರಂಭಿಸಲಾಯಿತು. ಈ ಪೋರ್ಟಲ್ ಅನೇಕ ಭಾಷೆಗಳಲ್ಲಿ (ಇಂಗ್ಲಿಷ್, ಹಿಂದಿ, ಗುಜರಾತಿ, ಮಲಯಾಳಂ ಮತ್ತು ಬಂಗಾಳಿ) ಲಭ್ಯವಿದೆ. ಇದು ಒಂದು ಸಂಪೂರ್ಣ ಆನ್ಲೈನ್ ಪ್ರಕ್ರಿಯೆಯಾಗಿದ್ದು, ಅರ್ಜಿದಾರರು ಯಾವುದೇ ವಿತರಣಾ ಕಚೇರಿಗೆ ಹೋಗದೆ, ಟಿಜಿ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಬಹುದು ಮತ್ತು ವಿತರಣೆಯ ನಂತರ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
ಉಪಸಂಹಾರ
ಕೇಂದ್ರ ಸರ್ಕಾರ ಮತ್ತು ಅದರ ಸಂಬಂಧಿತ ಸಚಿವಾಲಯಗಳ ನೇತೃತ್ವದಲ್ಲಿ, ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯಕ್ಕಾಗಿ ಗಮನಾರ್ಹ ಕಾನೂನು ಮತ್ತು ನೀತಿ ಸುಧಾರಣೆಗಳಿಗೆ ಸಾಕ್ಷಿಯಾಗಿದೆ. ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ, 2019, ನಂತರದ ತಿದ್ದುಪಡಿಗಳು ಮತ್ತು ಎಸ್‌ಎಂಐಎಲ್‌ಇ ಮತ್ತು ಗರಿಮಾ ಗೃಹದಂತಹ ಉದ್ದೇಶಿತ ಯೋಜನೆಗಳೊಂದಿಗೆ, ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ ಸಕಾರಾತ್ಮಕ ಕ್ರಮ, ಕಾನೂನು ಮಾನ್ಯತೆ ಮತ್ತು ಸಾಮಾಜಿಕ ರಕ್ಷಣೆಗಾಗಿ ದೃಢವಾದ ಅಡಿಪಾಯವನ್ನು ಹಾಕಿವೆ. 2025 ರಲ್ಲಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಅರಿವನ್ನು ಉತ್ತೇಜಿಸಲು, ಕಳಂಕವನ್ನು ನಿವಾರಿಸಲು ಮತ್ತು ನೀತಿ ಚೌಕಟ್ಟುಗಳು ಹಾಗೂ ಸಾರ್ವಜನಿಕ ಜೀವನದಲ್ಲಿ ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ ಪರಿಣಾಮಕಾರಿ ಸೇರ್ಪಡೆಯನ್ನು ಖಚಿತಪಡಿಸಿಕೊಳ್ಳಲು ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳು, ರಾಷ್ಟ್ರೀಯ ಅಭಿಯಾನಗಳು ಮತ್ತು ಸಮ್ಮೇಳನಗಳನ್ನು ಮುಂದುವರೆಸಿತು.
ಭಾರತವು ಹೆಚ್ಚು ಸಮಾನತೆಯ ಭವಿಷ್ಯದತ್ತ ಸಾಗುತ್ತಿರುವಾಗ, ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳು ಘನತೆ, ಸ್ವಾಯತ್ತತೆ ಮತ್ತು ಅವಕಾಶಗಳೊಂದಿಗೆ ಬದುಕುವುದನ್ನು ಖಚಿತಪಡಿಸುವುದು ಅದರ ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳ ಬದ್ಧತೆಗಳಿಗೆ ಮುಖ್ಯವಾಗಿದೆ.
References:
Press Information Bureau:
· https://www.pib.gov.in/PressReleasePage.aspx?PRID=2042571
· https://www.pib.gov.in/PressReleasePage.aspx?PRID=2163005
. https://www.pib.gov.in/PressReleasePage.aspx?PRID=2157945#:~:text=The%20Garima%20Grehs%20supported%20by,DoSJE%20in%2015%20States%2FUTs.
· https://pib.gov.in
· https://static.pib.gov.in/WriteReadData/specificdocs/documents/2022/jun/doc202263068801.pdf
· https://www.pib.gov.in/PressReleaseIframePage.aspx?PRID=1648221
. Press Release: Press Information Bureau
· Press Release:Press Information Bureau
Supreme Court of India
.https://api.sci.gov.in/supremecourt/2022/36593/36593_2022_1_1501_47792_Judgement_17-Oct-2023.pdf
Ministry of Social Justice and Empowerment:
· https://transgender.dosje.gov.in/
· https://socialjustice.gov.in/public/ckeditor/upload/2021-22%20AR%20Social%20Justice%20English_1648809478.pdf
· https://socialjustice.gov.in/writereaddata/UploadFile/44051740858189.pdf
· https://socialjustice.gov.in/writereaddata/UploadFile/32691723633555.pdf
· https://transgender.dosje.gov.in/Applicant/Registration/DisplayForm2
· 44051740858189.pdf
The National Legal Services Authority (NALSA)
· https://nalsa.gov.in/social-action-litigation/
Ministry of Law and Justice
· https://api.sci.gov.in/supremecourt/2022/36593/36593_2022_1_1501_47792_Judgement_17-Oct-2023.pdf
Click here to see pdf
*****
(Backgrounder ID: 156093)
Visitor Counter : 8
Provide suggestions / comments