• Skip to Content
  • Sitemap
  • Advance Search
Technology

6ಜಿಯೊಂದಿಗೆ ವಿಕಸಿತ ಭಾರತವನ್ನು ನಿರ್ಮಿಸುವುದು

4ಜಿ ಸ್ವಾವಲಂಬನೆಯಿಂದ 6G ಜಾಗತಿಕ ನಾಯಕತ್ವದವರೆಗೆ

Posted On: 26 OCT 2025 1:59PM

ಪ್ರಮುಖ ಮಾರ್ಗಸೂಚಿಗಳು

  • ಭಾರತದ 6G ವಿಷನ್ 2030 ಮುಂದಿನ ತಲೆಮಾರಿನ ದೂರಸಂಪರ್ಕ ಆವಿಷ್ಕಾರದಲ್ಲಿ ಜಾಗತಿಕ ಸಹ-ನಾಯಕನಾಗಿ ದೇಶವನ್ನು ಸ್ಥಾಪಿಸುವ ಗುರಿ ಹೊಂದಿದೆ.
  • ಭಾರತ್ 6G ಒಕ್ಕೂಟವು ಜಾಗತಿಕ ಸಂಶೋಧನಾ ಮೈತ್ರಿಗಳ ಸಹಯೋಗದೊಂದಿಗೆ ದೇಶೀಯ ಆವಿಷ್ಕಾರಕ್ಕಾಗಿ ಸ್ಟಾರ್ಟ್‌ಅಪ್‌ಗಳು, ಕೈಗಾರಿಕೆ, ಶಿಕ್ಷಣ ಸಂಸ್ಥೆಗಳು ಮತ್ತು ಸಂಶೋಧನಾ ಸಂಸ್ಥೆಗಳನ್ನು ಒಂದುಗೂಡಿಸಿದೆ.
  • 2035 ರ ವೇಳೆಗೆ 10% ಜಾಗತಿಕ 6G ಪೇಟೆಂಟ್ಗಳು ಮತ್ತು 1.2 ಟ್ರಿಲಿಯನ್ USD GDP ಪರಿಣಾಮವನ್ನು ಅಂದಾಜಿಸಲಾಗಿದೆ.
  • 5G-6G ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ದೂರಸಂಪರ್ಕ ತಂತ್ರಜ್ಞಾನ ಅಭಿವೃದ್ಧಿ ನಿಧಿ ಅಡಿಯಲ್ಲಿ ₹310.6 ಕೋಟಿ ಮೌಲ್ಯದ 115ಕ್ಕೂ ಹೆಚ್ಚು ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.
  • ಭಾರತದ ಮೇಡ್-ಇನ್-ಇಂಡಿಯಾ 4G ಸ್ಟಾಕ್ ಮತ್ತು ಒಂದು ಲಕ್ಷ ದೇಶೀಯ 4ಜಿ ಟವರ್ಗಳ ಅಳವಡಿಕೆಯು ಒಂದು ಬಲಿಷ್ಠ 6G ಚೌಕಟ್ಟಿಗೆ ಅಡಿಪಾಯ ಹಾಕಿದೆ.

ಪರಿಚಯ

ಭಾರತ ಸರ್ಕಾರವು 6ಜಿ ತಂತ್ರಜ್ಞಾನಗಳನ್ನು ಮುಂದುವರಿಸುವ ಗುರಿಯೊಂದಿಗೆ, ಸರಣಿಯ ಕಾರ್ಯತಂತ್ರದ ಉಪಕ್ರಮಗಳ ಮೂಲಕ ದೇಶದ ಮುಂದಿನ ತಲೆಮಾರಿನ ಸಂಪರ್ಕದತ್ತ ಪರಿವರ್ತನೆಗೆ ಚಾಲನೆ ನೀಡುತ್ತಿದೆ. ಕೈಗೆಟುಕುವಿಕೆ, ಸುಸ್ಥಿರತೆ ಮತ್ತು ಎಲ್ಲೆಡೆ ಲಭ್ಯತೆಯ ತತ್ವಗಳಲ್ಲಿ ನೆಲೆಗೊಂಡಿರುವ ಭಾರತದ 6ಜಿ ದೃಷ್ಟಿಕೋನವು ದೇಶೀಯ ಆವಿಷ್ಕಾರ, ಸುಧಾರಿತ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಜಾಗತಿಕ ಸಹಯೋಗದ ಮೂಲಕ ಸಮಾಜಕ್ಕೆ ಸಶಕ್ತಗೊಳಿಸುವುದರ ಮೇಲೆ ಕೇಂದ್ರೀಕರಿಸುತ್ತದೆ.

ಕೈಗಾರಿಕೆ, ಶಿಕ್ಷಣ ಸಂಸ್ಥೆಗಳು ಮತ್ತು ಸಂಶೋಧನಾ ಸಂಸ್ಥೆಗಳ ಸಕ್ರಿಯ ಭಾಗವಹಿಸುವಿಕೆಯೊಂದಿಗೆ, ಭಾರತವು 2047ರ ವೇಳೆಗೆ 'ವಿಕಸಿತ ಭಾರತ'ವನ್ನು ನಿರ್ಮಿಸುವ ವಿಶಾಲ ರಾಷ್ಟ್ರೀಯ ಗುರಿಯೊಂದಿಗೆ ಹೊಂದಿಕೊಂಡು, ಭವಿಷ್ಯದ ದೂರಸಂಪರ್ಕ ತಂತ್ರಜ್ಞಾನಗಳಿಗೆ ಜಾಗತಿಕ ಕೇಂದ್ರವಾಗಿ ತನ್ನನ್ನು ತಾನು ಸ್ಥಾಪಿಸಿಕೊಳ್ಳುತ್ತಿದೆ.

6ಜಿ ಎಂದರೇನು?

6G, ಅಥವಾ ಆರನೇ ತಲೆಮಾರಿನ ವೈರ್‌ಲೆಸ್ ತಂತ್ರಜ್ಞಾನವು 5G ಯ ನಂತರ ಬರಲಿದ್ದು, ಇಂಟರ್ನೆಟ್ ಸಂಪರ್ಕಗಳನ್ನು ಗಣನೀಯವಾಗಿ ವೇಗವಾಗಿ ಮತ್ತು ಸುಗಮವಾಗಿ ಮಾಡುತ್ತದೆ. ಇದು 5ಜಿ ಗಿಂತ ಹೆಚ್ಚಿನ ರೇಡಿಯೋ ಆವರ್ತನಗಳನ್ನು ಬಳಸುತ್ತದೆ. ಇದರಿಂದಾಗಿ ಯಾವುದೇ ವಿಳಂಬವಿಲ್ಲದೆ (ಪ್ರತಿಬಂಧಕವಿಲ್ಲದೆ) ಏಕಕಾಲದಲ್ಲಿ ಅಪಾರ ಪ್ರಮಾಣದ ಡೇಟಾವನ್ನು ನಿರ್ವಹಿಸಲು ಸಾಧ್ಯವಾಗುತ್ತದೆ.

6G ಯು ಕೇವಲ ಒಂದು ಮೈಕ್ರೋಸೆಕೆಂಡ್‌ನಲ್ಲಿ ಮಾಹಿತಿಯನ್ನು ಕಳುಹಿಸಲು ಮತ್ತು ಸ್ವೀಕರಿಸಲು ಗುರಿ ಹೊಂದಿದೆ. ಇದು 5G ಯ ಪ್ರತಿಕ್ರಿಯೆ ಸಮಯಕ್ಕಿಂತ 1,000 ಪಟ್ಟು ವೇಗವಾಗಿರುತ್ತದೆ. ಇದರರ್ಥ ಬಹುತೇಕ ಶೂನ್ಯ ವಿಳಂಬದೊಂದಿಗೆ ತಕ್ಷಣದ ಸಂಪರ್ಕಗಳು ಲಭಿಸುತ್ತವೆ. ದೂರಸ್ಥ ವೈದ್ಯಕೀಯ ಶಸ್ತ್ರಚಿಕಿತ್ಸೆಗಳು, ಸ್ಮಾರ್ಟ್ ರೋಬೋಟಿಕ್ಸ್ ಮತ್ತು ರಿಯಲ್-ಟೈಮ್ ಗೇಮಿಂಗ್‌ನಂತಹ ವಿಷಯಗಳಿಗೆ ಇದು ಉಪಯುಕ್ತವಾಗಲಿದೆ.

6G ನೆಟ್‌ವರ್ಕ್ ಸುಧಾರಿತ ಇಮೇಜಿಂಗ್, ನಿಖರವಾದ ಸ್ಥಳ ಟ್ರ್ಯಾಕಿಂಗ್ ಮತ್ತು ಜೀವಂತವಾಗಿರುವಂತಹ ವರ್ಚುವಲ್ ಅನುಭವಗಳನ್ನು ಸೃಷ್ಟಿಸುವಂತಹ ವೈಶಿಷ್ಟ್ಯಗಳನ್ನೂ ಸಹ ಸುಧಾರಿಸುತ್ತದೆ. ಕೃತಕ ಬುದ್ಧಿಮತ್ತೆಯೊಂದಿಗೆ ಸಂಯೋಜಿಸಿದಾಗ, ಅದು ಡೇಟಾವನ್ನು ಎಲ್ಲಿ ಸಂಗ್ರಹಿಸಬೇಕು, ಸಂಸ್ಕರಿಸಬೇಕು ಮತ್ತು ಹಂಚಿಕೊಳ್ಳಬೇಕು ಎಂಬುದನ್ನು ಸ್ವಯಂಚಾಲಿತವಾಗಿ ನಿರ್ಧರಿಸುವಷ್ಟು ಚುರುಕಾಗಿರುತ್ತದೆ. ಇದು ತಂತ್ರಜ್ಞಾನವನ್ನು ಎಲ್ಲೆಡೆ ಹೆಚ್ಚು ಪರಿಣಾಮಕಾರಿ ಮತ್ತು ಸ್ಪಂದಿಸುವಂತೆ ಮಾಡುತ್ತದೆ.

ಭಾರತದ 6ಜಿ ವಿಷನ್: ಜಾಗತಿಕ ದೂರಸಂಪರ್ಕ ಆವಿಷ್ಕಾರಕನಾಗಿ ಭಾರತವನ್ನು ಸ್ಥಾಪಿಸುವುದು

ಭಾರತ್ 6G ವಿಷನ್‌ನ ಪ್ರಣಾಳಿಕೆಯು 'ವಿಕಸಿತ ಭಾರತ'ದ ಗುರಿಗಳೊಂದಿಗೆ ಹೊಂದಿಕೊಂಡು, ಮುಂದುವರಿದ ದೂರಸಂಪರ್ಕ ತಂತ್ರಜ್ಞಾನಗಳ ಪ್ರಮುಖ ಪೂರೈಕೆದಾರನಾಗಿ ಭಾರತವನ್ನು ಮಾಡುವ ಗುರಿ ಹೊಂದಿದೆ. 5ಜಿ ಯ ಕ್ಷಿಪ್ರ ಅನುಷ್ಠಾನ ಮತ್ತು ದೇಶೀಯ ಅಳವಡಿಕೆಯು ಭಾರತದ 6ಜಿ ದೃಷ್ಟಿಕೋನಕ್ಕೆ ಅಡಿಪಾಯ ಹಾಕುತ್ತಿದ್ದು, ಭವಿಷ್ಯದ ದೂರಸಂಪರ್ಕ ಆವಿಷ್ಕಾರದಲ್ಲಿ ದೇಶವನ್ನು ಜಾಗತಿಕ ನಾಯಕನನ್ನಾಗಿ ಸ್ಥಾಪಿಸುತ್ತಿದೆ. 6ಜಿ ವಿಷನ್ ಕೈಗೆಟುಕುವಿಕೆ, ಸುಸ್ಥಿರತೆ ಮತ್ತು ಎಲ್ಲೆಡೆ ಲಭ್ಯತೆಯ ತತ್ವಗಳನ್ನು ಆಧರಿಸಿದೆ.

ಮಾರ್ಚ್ 22, 2023 ರಂದು, "ಭಾರತ್ 6ಜಿ ವಿಷನ್" ದಾಖಲೆಯನ್ನು ಬಿಡುಗಡೆ ಮಾಡಲಾಯಿತು. ಇದು 2030ರ ವೇಳೆಗೆ 6ಜಿ ತಂತ್ರಜ್ಞಾನದ ವಿನ್ಯಾಸ, ಅಭಿವೃದ್ಧಿ ಮತ್ತು ಅಳವಡಿಕೆಯಲ್ಲಿ ಭಾರತವನ್ನು ಮುಂಚೂಣಿ ಕೊಡುಗೆದಾರನನ್ನಾಗಿ ಮಾಡುವ ಗುರಿ ಹೊಂದಿದೆ. ದೇಶದಲ್ಲಿ 6ಜಿ ತಂತ್ರಜ್ಞಾನದ ಅಭಿವೃದ್ಧಿಗೆ ಅನುಕೂಲವಾಗುವಂತೆ ಸರ್ಕಾರವು ಈ ಕೆಳಗಿನ ಉಪಕ್ರಮಗಳನ್ನು ಕೈಗೊಂಡಿದೆ:

ದೇಶದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಆವಿಷ್ಕಾರವನ್ನು ಉತ್ತೇಜಿಸಲು ಈ ಕೆಳಗಿನ ಎರಡು ಟೆಸ್ಟ್ಬೆಡ್ಗಳಿಗೆ (Testbeds) ಹಣಕಾಸು ಒದಗಿಸಲಾಗಿದೆ: 6G THz ಟೆಸ್ಟ್ಬೆಡ್ ಮತ್ತು ಸುಧಾರಿತ ಆಪ್ಟಿಕಲ್ ಸಂವಹನ ಟೆಸ್ಟ್ಬೆಡ್ (Advance Optical Communication Testbed).ದೇಶದಲ್ಲಿ ಸಾಮರ್ಥ್ಯ ವೃದ್ಧಿಗಾಗಿ ಮತ್ತು 6ಜಿ-ಸಿದ್ಧ ಶೈಕ್ಷಣಿಕ ಹಾಗೂ ಸ್ಟಾರ್ಟ್-ಅಪ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು, ಹಣಕಾಸು ವರ್ಷ 2023-24 ರಲ್ಲಿ ಭಾರತದಾದ್ಯಂತ ಶೈಕ್ಷಣಿಕ ಸಂಸ್ಥೆಗಳಲ್ಲಿ 100 5ಜಿ ಲ್ಯಾಬ್ಗಳನ್ನು ಮಂಜೂರು ಮಾಡಲಾಗಿದೆ.

6ಜಿ ತಂತ್ರಜ್ಞಾನದ ಜಾಗತಿಕ ಮಾರ್ಗಸೂಚಿಗೆ ಅನುಗುಣವಾಗಿ ಸಂಶೋಧನೆ ಮತ್ತು ಆವಿಷ್ಕಾರವನ್ನು ಉತ್ತೇಜಿಸಲು 6ಜಿ ನೆಟ್ವರ್ಕ್ ಪರಿಸರ ವ್ಯವಸ್ಥೆಯ ಕುರಿತು 104 ಸಂಶೋಧನಾ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗಿದೆ.

ಭಾರತ 6ಜಿ ಒಕ್ಕೂಟ

ಭಾರತ 6ಜಿ ಒಕ್ಕೂಟ (B6GA) ಭಾರತೀಯ ಕೈಗಾರಿಕೆ, ದೂರಸಂಪರ್ಕ ಸೇವಾ ಪೂರೈಕೆದಾರರು, ಶಿಕ್ಷಣ ಸಂಸ್ಥೆಗಳು, ರಾಷ್ಟ್ರೀಯ ಸಂಶೋಧನಾ ಸಂಸ್ಥೆಗಳು ಮತ್ತು ಮಾನದಂಡಗಳ ಸಂಸ್ಥೆಗಳ ಒಂದು ಉಪಕ್ರಮವಾಗಿದೆ. ಸರ್ಕಾರ ಮತ್ತು ಕೈಗಾರಿಕೆಯ ಬೆಂಬಲದೊಂದಿಗೆ, ಇದು ಸುಧಾರಿತ ಸಂವಹನ ತಂತ್ರಜ್ಞಾನಗಳಿಗಾಗಿ ಸ್ವಾವಲಂಬಿ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸಲು ದೇಶೀಯ 6G ಸಂಶೋಧನೆ ಮತ್ತು ಅಭಿವೃದ್ಧಿಗೆ ಚಾಲನೆ ನೀಡುತ್ತದೆ. ಅತ್ಯಾಧುನಿಕ ಲ್ಯಾಬ್‌ಗಳು ಮತ್ತು ಬಹು-ಚಿಪ್ ಮಾಡ್ಯೂಲ್‌ಗಳು, ಎಸ್‌ಒಸಿಗಳು, ಮತ್ತು ಸುಧಾರಿತ ಐಒಟಿ ಅಪ್ಲಿಕೇಶನ್‌ಗಳ ಮೇಲೆ ಗಮನಹರಿಸಿರುವ ಆವಿಷ್ಕಾರದೊಂದಿಗೆ, ಭಾರತವು ಜಾಗತಿಕ 6ಜಿ ಆಂದೋಲನವನ್ನು ಮುನ್ನಡೆಸುವ ಗುರಿ ಹೊಂದಿದೆ. B6GA ಸರ್ಕಾರದ ಸಹಯೋಗದೊಂದಿಗೆ ಕೈಗಾರಿಕೆಯ ನೇತೃತ್ವದ ಸಂಸ್ಥೆಯಾಗಿದ್ದು, ಸಾರ್ವಜನಿಕ/ಖಾಸಗಿ ಕಂಪನಿಗಳು, ಶಿಕ್ಷಣ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳು ಮತ್ತು ಮಾನದಂಡ ಅಭಿವೃದ್ಧಿ ಸಂಸ್ಥೆಗಳು ಸೇರಿದಂತೆ ತಂತ್ರಜ್ಞಾನದ ಪಾಲುದಾರರಿಗೆ ಸಹಯೋಗದ ವೇದಿಕೆಯನ್ನು ಒದಗಿಸುತ್ತದೆ. ಭಾರತ್ 6ಜಿ ಒಕ್ಕೂಟವು ಸ್ಪೆಕ್ಟ್ರಮ್, ತಂತ್ರಜ್ಞಾನ, ಅಪ್ಲಿಕೇಶನ್‌ಗಳು, ಹಸಿರು ಮತ್ತು ಸುಸ್ಥಿರತೆ ಹಾಗೂ ಬಳಕೆಯ ನಿದರ್ಶನಗಳಂತಹ ವಿವಿಧ 6ಜಿ ಡೊಮೇನ್‌ಗಳ ಮೇಲೆ ಏಳು ಕಾರ್ಯನಿರತ ಗುಂಪುಗಳನ್ನು ರಚಿಸಿದೆ.

ಜಾಗತಿಕ ಸಂವಹನದ ಭವಿಷ್ಯವನ್ನು ಮರು ವ್ಯಾಖ್ಯಾನಿಸುವ ಒಂದು ಹೆಜ್ಜೆಯಾಗಿ, ಸಹಯೋಗದ ಸಂಶೋಧನೆ ಮತ್ತು ಮಾನದಂಡಗಳಿಗಾಗಿ ಭಾರತ್ 6G ಒಕ್ಕೂಟವು ನೆಕ್ಸ್ಟ್‌ಜಿ ಒಕ್ಕೂಟ (ಐಎಸ್‌ಎ), 6G IA (ಯುರೋಪ್), 6G ಫ್ಲ್ಯಾಗ್‌ಶಿಪ್ ಊಲು ವಿಶ್ವವಿದ್ಯಾಲಯ (ಫಿನ್‌ಲ್ಯಾಂಡ್‌), 6G ಫೋರಂ ದಕ್ಷಿಣ ಕೊರಿಯಾ, ಎಕ್ಸ್‌ಜಿಎಂಎಫ್‌ ಜಪಾನ್, ಎನ್‌ಜಿಎಂಎನ್ ಒಕ್ಕೂಟ, 5G ಎಸಿಐಎ, ಯುಕೆಐ ಎಫ್‌ಎನ್‌ಐ, ಯುಕೆ ಟಿಐಎನ್, ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ (ಇಎಸ್‌ಎ) ಮತ್ತು 6G ಬ್ರೆಜಿಲ್ (ಬ್ರೇಜಿಲ್‌) ನಂತಹ ಪ್ರಮುಖ ಸಂಶೋಧನಾ ಒಕ್ಕೂಟಗಳೊಂದಿಗೆ ತಿಳುವಳಿಕೆ ಒಪ್ಪಂದಕ್ಕೆಸಹಿ ಹಾಕಿದೆ. ರಾಷ್ಟ್ರೀಯ ಸಮನ್ವಯವನ್ನು ಬಳಸಿಕೊಳ್ಳಲು ಟಿಎಸ್‌ಡಿಎಸ್‌ಐ ಮತ್ತು ನಾಸ್‌ಕಾಮ್ ನೊಂದಿಗೆ ಸಹ ಇದು ತಿಳುವಳಿಕೆ ಒಪ್ಪಂದವನ್ನು ಹೊಂದಿದೆ. 6G ಸಂಶೋಧನಾ ಒಕ್ಕೂಟಗಳೊಂದಿಗಿನ ಈ ಒಪ್ಪಂದಗಳು ಸ್ಥಿತಿಸ್ಥಾಪಕ ಪೂರೈಕೆ ಸರಪಳಿಗಳು ಸೇರಿದಂತೆ ಸುರಕ್ಷಿತ ಮತ್ತು ವಿಶ್ವಾಸಾರ್ಹ ದೂರಸಂಪರ್ಕ ತಂತ್ರಜ್ಞಾನದ ಅಭಿವೃದ್ಧಿಯನ್ನು ಮತ್ತಷ್ಟು ಸಕ್ರಿಯಗೊಳಿಸುತ್ತವೆ.

ಭಾರತದ 6ಜಿ ಮಿಷನ್

ಭಾರತದ 6G ಅನ್ವೇಷಣೆಯು ಮುಂದಿನ ತಲೆಮಾರಿನ ವೈರ್‌ಲೆಸ್ ಸಂವಹನದಲ್ಲಿ ಜಾಗತಿಕ ನಾಯಕನಾಗುವ ಮಹತ್ವಾಕಾಂಕ್ಷೆಯ ದೃಷ್ಟಿಕೋನದಿಂದ ಪ್ರಾರಂಭವಾಯಿತು. ಈ ದೃಷ್ಟಿಕೋನವು ಆವಿಷ್ಕಾರಕರು, ಸಂಶೋಧಕರು, ಸ್ಟಾರ್ಟ್‌ಅಪ್‌ಗಳು ಮತ್ತು ನೀತಿ ನಿರೂಪಕರ ಕ್ರಿಯಾತ್ಮಕ ಪರಿಸರ ವ್ಯವಸ್ಥೆಯ ಹೊರಹೊಮ್ಮುವಿಕೆಗೆ ಚಾಲನೆ ನೀಡಿದೆ. ಇವರೆಲ್ಲರೂ ಸಂಪರ್ಕವನ್ನು ಮುನ್ನಡೆಸಲು ಸಮರ್ಪಿತರಾಗಿದ್ದಾರೆ. ಈ ಮಿಷನ್ ತನ್ನ ಮುಂದಿನ ಹಂತಕ್ಕೆ ಮುಂದುವರಿದಂತೆ, ಕಳೆದ ಸಾಧನೆಗಳನ್ನು ಹೆಚ್ಚಿಸುವುದು, ತಾಂತ್ರಿಕ ಆವಿಷ್ಕಾರವನ್ನು ಗಾಢವಾಗಿಸುವುದು ಮತ್ತು 6ಜಿ ಯು ಭಾರತಕ್ಕೆ ಪ್ರಯೋಜನ ನೀಡುವುದು ಮಾತ್ರವಲ್ಲದೆ, ಇಲ್ಲಿಂದಲೇ (ಭಾರತದಿಂದಲೇ) ಹುಟ್ಟಿಕೊಳ್ಳುವುದನ್ನು ಖಚಿತಪಡಿಸುವುದು ಇದರ ಮುಖ್ಯ ಗಮನವಾಗಿದೆ. ಸಹಯೋಗ ಮತ್ತು ಹಂಚಿಕೆಯ ಉದ್ದೇಶದ ಮೂಲಕ, ಭಾರತವು ಜಾಗತಿಕ ಡಿಜಿಟಲ್ ಭವಿಷ್ಯದಲ್ಲಿ ನಾಯಕತ್ವಕ್ಕೆ ದಾರಿ ಮಾಡಿಕೊಡುತ್ತಿದೆ.

ಸ್ಪಾಟ್ಲೈಟ್ ಆನ್ ಇಂಡಿಯಾ @ಇಂಡಿಯಾ ಮೊಬೈಲ್ ಕಾಂಗ್ರೆಸ್, 2025

ಇಂಡಿಯಾ ಮೊಬೈಲ್ ಕಾಂಗ್ರೆಸ್ 2025 ರ ಸಂದರ್ಭದಲ್ಲಿ ನಡೆದ 'ಅಂತಾರಾಷ್ಟ್ರೀಯ 6G ಸಿಂಪೋಸಿಯಂ 2025' ಭಾರತದ ಮುಂದಿನ ತಲೆಮಾರಿನ ಸಂವಹನ ತಂತ್ರಜ್ಞಾನಗಳತ್ತ ಪಯಣದಲ್ಲಿ ಒಂದು ಮಹತ್ವದ ಮೈಲಿಗಲ್ಲಾಗಿದೆ. ಈ ಕಾರ್ಯಕ್ರಮವು ದೂರಸಂಪರ್ಕ ಆವಿಷ್ಕಾರ, ದೇಶೀಯ ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು ಜಾಗತಿಕ ಡಿಜಿಟಲ್ ನಾಯಕತ್ವದಲ್ಲಿ ರಾಷ್ಟ್ರದ ಬೆಳೆಯುತ್ತಿರುವ ಶಕ್ತಿಯನ್ನು ಉಲ್ಲೇಖಿಸಿತು.

ಭಾರತದ ತಾಂತ್ರಿಕ ಸ್ವಾವಲಂಬನೆಯ ಮುನ್ನಡೆ

ಭಾರತದ 'ಮೇಡ್-ಇನ್-ಇಂಡಿಯಾ 4ಜಿ ಸ್ಟಾಕ್' ಅನ್ನು ತಾಂತ್ರಿಕ ಸ್ವಾವಲಂಬನೆ ಮತ್ತು ರಫ್ತಿಗೆ ಸಿದ್ಧವಾಗುವ ದೇಶದ ಪ್ರಯತ್ನದಲ್ಲಿನ ಒಂದು ಮಹತ್ವದ ಸಾಧನೆಯಾಗಿ ಪ್ರದರ್ಶಿಸಲಾಯಿತು. ಈ ದೇಶೀಯ ಅಭಿವೃದ್ಧಿಯು 'ಇಂಡಿಯಾ 6ಜಿ ವಿಷನ್ 2030' ಗೆ ಅಡಿಪಾಯ ಹಾಕುತ್ತದೆ. ಇದು ಭವಿಷ್ಯಕ್ಕೆ ಸಿದ್ಧವಾದ, ಸುರಕ್ಷಿತ ಮತ್ತು ಅಳತೆ ಮಾಡಬಹುದಾದ ದೂರಸಂಪರ್ಕ ಜಾಲಗಳನ್ನು ಸೃಷ್ಟಿಸುವ ಗುರಿ ಹೊಂದಿದೆ.

ಭಾರತದ 6ಜಿ ಮಾರ್ಗಸೂಚಿಯು 2035ರ ವೇಳೆಗೆ ಈ ವಲಯವು ರಾಷ್ಟ್ರೀಯ ಜಿಡಿಪಿಗೆ ಸುಮಾರು 105.75 ಲಕ್ಷ ಕೋಟಿ ಕೊಡುಗೆ ನೀಡುವ ಗುರಿ ಹೊಂದಿದೆ. ದೂರಸಂಪರ್ಕ ತಂತ್ರಜ್ಞಾನಗಳಲ್ಲಿ ಆವಿಷ್ಕಾರದ ಕೇಂದ್ರವಾಗಿ (hub) ಭಾರತವು ಹೊರಹೊಮ್ಮುತ್ತಿರುವುದನ್ನುಉಲ್ಲೇಖಿಸುತ್ತಾ, ಜಾಗತಿಕ 6ಜಿ ಪೇಟೆಂಟ್‌ಗಳ ಶೇ.10% ರಷ್ಟು ಸಾಧಿಸಲು ದೇಶವು ಗುರಿ ಇರಿಸಿದೆ. ಇದಕ್ಕೆ ಸಮಾನಾಂತರವಾಗಿ, ಭಾರತದ ಬಾಹ್ಯಾಕಾಶ-ಸಂಪರ್ಕಿತ ಸಂಪರ್ಕ ಪರಿಸರ ವ್ಯವಸ್ಥೆಯನ್ನು ಬಲಪಡಿಸುತ್ತಾ, ಉಪಗ್ರಹ ಸಂವಹನ ಮಾರುಕಟ್ಟೆಯು 2033 ರ ವೇಳೆಗೆ ಮೂರು ಪಟ್ಟು ಹೆಚ್ಚಾಗುವ ನಿರೀಕ್ಷೆಯಿದೆ.

ಸಹಯೋಗ ಮತ್ತು ಒಳಗೊಳ್ಳುವಿಕೆಗೆ ಒತ್ತು ನೀಡಿ

ಈ ಸಿಂಪೋಸಿಯಂ ಅಂತಾರಾಷ್ಟ್ರೀಯ ಸಹಕಾರ, ದೇಶೀಯ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಅಗ್ಗದ ಮತ್ತು ಒಳಗೊಳ್ಳುವ ಜಾಗತಿಕ 6ಜಿ ಚೌಕಟ್ಟನ್ನು ರೂಪಿಸಲು ಶಿಕ್ಷಣ ಸಂಸ್ಥೆಗಳು, ಕೈಗಾರಿಕೆ ಮತ್ತು ಸರ್ಕಾರಗಳ ನಡುವಿನ ಸಮನ್ವಯದ ಅಗತ್ಯಕ್ಕೆ ಕರೆ ನೀಡಿತು. ದೇಶಾದ್ಯಂತ ಒಂದು ಲಕ್ಷ ದೇಶೀಯ 4ಜಿ ಟವರ್‌ಗಳ ಅಳವಡಿಕೆಯಂತಹ ಇತ್ತೀಚಿನ ಪ್ರಗತಿಗಳಿಂದ ಬೆಂಬಲಿತವಾದ 'ಸ್ವದೇಶಿ ದೂರಸಂಪರ್ಕ ಪರಿಸರ ವ್ಯವಸ್ಥೆ'ಯನ್ನು ಗಮನ ಹರಿಸಲಾಯಿತು. ಇದು ಮುಂದಿನ ತಲೆಮಾರಿನ ಜಾಲಗಳಿಗಾಗಿ ಸ್ಥಿತಿಸ್ಥಾಪಕ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವ ನಿರ್ಣಾಯಕ ಹೆಜ್ಜೆಯಾಗಿದೆ.

ಭಾರತವು ತಂತ್ರಜ್ಞಾನದ ಗ್ರಾಹಕನಾಗಿರುವುದನ್ನು ಮೀರಿ, 6ಜಿ ಕ್ರಾಂತಿಯಲ್ಲಿ ಸಹ-ಸೃಷ್ಟಿಕರ್ತ ಮತ್ತು ಸಹ-ನಾಯಕನಾಗಲು ಸಿದ್ಧವಾಗಿದೆ. ದೇಶೀಯ ಮತ್ತು ಜಾಗತಿಕ ಅಗತ್ಯಗಳಿಗಾಗಿ ಸಂವಹನದ ಭವಿಷ್ಯವನ್ನು ರೂಪಿಸುತ್ತದೆ ಎಂದು ಈ ಮಾರ್ಗದರ್ಶಿ ದೃಷ್ಟಿಕೋನವು ಒತ್ತಿಹೇಳಿತು.

ಪ್ರಮುಖ ಪ್ರಕಟಣೆಗಳು ಮತ್ತು ಬಿಡುಗಡೆಗಳು

ಭಾರತದ 6G ಸಿದ್ಧತೆಯನ್ನು ತ್ವರಿತಗೊಳಿಸುವ ಗುರಿಯೊಂದಿಗೆ ಈ ಕಾರ್ಯಕ್ರಮದಲ್ಲಿ ಹಲವಾರು ಪ್ರಮುಖ ಫಲಿತಾಂಶಗಳನ್ನು ಘೋಷಿಸಲಾಯಿತು:

6ಜಿ ತತ್ವಗಳ ಕುರಿತ ಜಂಟಿ ಘೋಷಣೆಯನ್ನು ಅಕ್ಟೋಬರ್ 10, 2025 ರಂದು ಬಿಡುಗಡೆ ಮಾಡಲಾಯಿತು.

ಭಾರತ್ 6G ಒಕ್ಕೂಟವು  ಎರಡು ತಿಳುವಳಿಕೆ ಒಪ್ಪಂದಗಳಿಗೆ ಸಹಿ ಹಾಕಿದೆ: ಒಂದು ನಾಸ್ಕಾಮ್ ಜೊತೆಗೆ ಮತ್ತು ಇನ್ನೊಂದು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ  ಜೊತೆಗೆ.

ಇವು 6G ಮತ್ತು ಸಂಬಂಧಿತ ತಂತ್ರಜ್ಞಾನಗಳಲ್ಲಿ ಸಹಯೋಗದ ಸಂಶೋಧನೆ ಮತ್ತು ಆವಿಷ್ಕಾರವನ್ನು ಉತ್ತೇಜಿಸುವ ಗುರಿ ಹೊಂದಿವೆ.

ಭಾರತ್ 6G ಒಕ್ಕೂಟವು ಈ ವಲಯಕ್ಕೆ ಕಾರ್ಯತಂತ್ರದ ನಿರ್ದೇಶನವನ್ನು ಒದಗಿಸುವ ನಾಲ್ಕು ವೈಟ್ಪೇಪರ್ಗಳನ್ನು ಸಹ ಅನಾವರಣಗೊಳಿಸಿತು:

  • ಭಾರತದಲ್ಲಿ 6G ಗಾಗಿ ಸ್ಪೆಕ್ಟ್ರಮ್ ಮಾರ್ಗಸೂಚಿ
  • ಮುಂದಿನ ತಲೆಮಾರಿನ ದೂರಸಂಪರ್ಕಕ್ಕೆ ಶಕ್ತಿ ತುಂಬುವುದು
  • 5ಜಿ ಗೆ ಎಐ ಮತ್ತು ನೆಟ್‌ವರ್ಕ್ ವಿಕಸನ
  • ಆರ್‌ಎಫ್‌ ಸೆನ್ಸಿಂಗ್‌ಗಾಗಿ 6ಜಿ ಆರ್ಕಿಟೆಕ್ಚರ್, ಭದ್ರತೆ ಮತ್ತು ಎಕ್ಸ್‌ಪೋಸರ್ ಚೌಕಟ್ಟು 

ಭವಿಷ್ಯಕ್ಕೆ ಸಿದ್ಧವಾದ 6G ದೂರಸಂಪರ್ಕ ಪರಿಸರ ವ್ಯವಸ್ಥೆಗಾಗಿ ಸರ್ಕಾರದ ಉಪಕ್ರಮಗಳು

ಭಾರತವು ಮುಂದಿನ ತಲೆಮಾರಿನ ದೂರಸಂಪರ್ಕದಲ್ಲಿ ಆವಿಷ್ಕಾರ, ಸಹಯೋಗ ಮತ್ತು ಕೌಶಲ್ಯಗಳನ್ನು ಹೆಚ್ಚಿಸುವ ಉಪಕ್ರಮಗಳ ಮೂಲಕ 6G-ಸಿದ್ಧ ಪರಿಸರ ವ್ಯವಸ್ಥೆಯತ್ತ ಮುನ್ನಡೆಯುತ್ತಿದೆ. ಅತ್ಯಾಧುನಿಕ ಪರಿಹಾರಗಳಿಗೆ ಅವಕಾಶ  ಮಾಡಿಕೊಡಲು ಈ ಪ್ರಯತ್ನಗಳು ದೇಶೀಯ ಸಂಶೋಧನೆ, ಉದ್ಯಮ–ಶಿಕ್ಷಣ ಸಂಸ್ಥೆಗಳ ಪಾಲುದಾರಿಕೆಗಳು ಮತ್ತು ಸ್ಟಾರ್ಟ್‌ಅಪ್‌ಗಳ ಬೆಂಬಲದ ಮೇಲೆ ಕೇಂದ್ರೀಕರಿಸುತ್ತವೆ.

  • ಶೈಕ್ಷಣಿಕ ಸಂಸ್ಥೆಗಳಾದ್ಯಂತ 100 5ಜಿ ಲ್ಯಾಬ್ಗಳು: 6ಜಿG-ಸಿದ್ಧ ಆವಿಷ್ಕಾರ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವುದು ಮುಂದುವರಿದ ದೂರಸಂಪರ್ಕ ತಂತ್ರಜ್ಞಾನಗಳಲ್ಲಿ ಕೌಶಲ್ಯಗಳು, ಸಂಶೋಧನೆ ಮತ್ತು ಪ್ರಯೋಗಗಳನ್ನು ಪೋಷಿಸಲು, ಭಾರತ ಸರ್ಕಾರವು ದೇಶಾದ್ಯಂತ ಶೈಕ್ಷಣಿಕ ಸಂಸ್ಥೆಗಳಲ್ಲಿ 100 ಜಿG ಲ್ಯಾಬ್ಗಳನ್ನು ಸ್ಥಾಪಿಸಿದೆ. ಇದರ ಪ್ರಮುಖ ಉದ್ದೇಶಗಳು ಹೀಗಿವೆ:

  ವಿದ್ಯಾರ್ಥಿಗಳು ಮತ್ತು ಶೈಕ್ಷಣಿಕ ಸಮುದಾಯದಲ್ಲಿ 5ಜಿ ತಂತ್ರಜ್ಞಾನಗಳ ಸಾಮರ್ಥ್ಯಗಳನ್ನು ಮತ್ತು ಭಾಗವಹಿಸುವಿಕೆಯನ್ನು ನಿರ್ಮಿಸಲು.

  ವಿದ್ಯಾರ್ಥಿಗಳಿಗೆ 5ಜಿ ಪರಿಸರವನ್ನು ಬಳಸಿಕೊಂಡು ಯುಜಿ ಮತ್ತು ಪಿಜಿ ಮಟ್ಟದಲ್ಲಿ ಯೋಜನೆಗಳನ್ನು ಕೈಗೊಳ್ಳಲು ಅನುವು ಮಾಡಿಕೊಡುವುದು.

  5ಜಿ ಬಳಕೆಯ ನಿದರ್ಶನಗಳನ್ನು ಅನ್ವೇಷಿಸಲು ಮತ್ತು ಅಭಿವೃದ್ಧಿಪಡಿಸಲು ಶಿಕ್ಷಣ ಸಂಸ್ಥೆಗಳು ಮತ್ತು ಕೈಗಾರಿಕೆಗಳ ನಡುವಿನ ಸಹಭಾಗಿತ್ವವನ್ನು ಉತ್ತೇಜಿಸುವುದು.

  ಸಂಸ್ಥೆಯ ಸುತ್ತಮುತ್ತಲಿನ ಸ್ಟಾರ್ಟ್‌ಅಪ್‌ಗಳು ಮತ್ತು ಎಂಎಸ್‌ಎಂಇ ಗಳಿಗೆ 5ಜಿ ಪರೀಕ್ಷಾ ಸ್ಥಾಪಿಸಲು ಸ್ಥಳೀಯ ಪ್ರವೇಶವನ್ನು ಒದಗಿಸುವುದು.

  ಭಾರತೀಯ ಶಿಕ್ಷಣ ಮತ್ತು ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಯನ್ನು 6ಜಿ ಗೆ ಸಿದ್ಧಗೊಳಿಸುವುದು.

ದೂರಸಂಪರ್ಕ ತಂತ್ರಜ್ಞಾನ ಅಭಿವೃದ್ಧಿ ನಿಧಿ: ದೂರಸಂಪರ್ಕದಲ್ಲಿ ದೇಶೀಯ ಸಂಶೋಧನೆ ಮತ್ತು ಅಭಿವೃದ್ಧಿಗೆ  ಚಾಲನೆ

ಅಕ್ಟೋಬರ್ 1, 2022 ರಂದು ಪ್ರಾರಂಭಿಸಲಾದ ದೂರಸಂಪರ್ಕ ತಂತ್ರಜ್ಞಾನ ಅಭಿವೃದ್ಧಿ ನಿಧಿ ಯೋಜನೆಯು 6ಜಿ ತಂತ್ರಜ್ಞಾನಗಳನ್ನು ಒಳಗೊಂಡಂತೆ ದೂರಸಂಪರ್ಕದಲ್ಲಿನ ಆವಿಷ್ಕಾರ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ವೇಗಗೊಳಿಸುವ ಗುರಿ ಹೊಂದಿದೆ.

ಪ್ರಮುಖ ಅಂಶಗಳು

  • ದೂರಸಂಪರ್ಕ ತಂತ್ರಜ್ಞಾನ ಅಭಿವೃದ್ಧಿ ನಿಧಿ ಯೋಜನೆಯನ್ನು ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ಕೈಗೆಟುಕುವ ಬ್ರಾಡ್‌ಬ್ಯಾಂಡ್ ಮತ್ತು ಮೊಬೈಲ್ ಸೇವೆಗಳನ್ನು ಸಕ್ರಿಯಗೊಳಿಸುವ ದೂರಸಂಪರ್ಕ ಉತ್ಪನ್ನಗಳು ಮತ್ತು ಪರಿಹಾರಗಳ ವಿನ್ಯಾಸ, ಅಭಿವೃದ್ಧಿ, ಮತ್ತು ವಾಣಿಜ್ಯೀಕರಣದಲ್ಲಿ ತೊಡಗಿರುವ ದೇಶೀಯ ಕಂಪನಿಗಳು ಮತ್ತು ಸಂಸ್ಥೆಗಳಿಗಾಗಿ ಅಧಿಸೂಚಿಸಲಾಗಿದೆ.
  • ಈ ಯೋಜನೆಯು ದೂರಸಂಪರ್ಕ ತಂತ್ರಜ್ಞಾನಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಆವಿಷ್ಕಾರಕ್ಕೆ ಹಣಕಾಸು ಒದಗಿಸುವ ಗುರಿ ಹೊಂದಿದೆ. ಇದು ಭಾರತದಲ್ಲಿ ದೂರಸಂಪರ್ಕ ಪರಿಸರ ವ್ಯವಸ್ಥೆಯನ್ನು ಹೆಚ್ಚಿಸಲು ಶಿಕ್ಷಣ ಸಂಸ್ಥೆಗಳು, ಸ್ಟಾರ್ಟ್‌ಅಪ್‌ಗಳು, ಎಂಎಸ್‌ಎಂಇ ಗಳು, ಸಂಶೋಧನಾ ಸಂಸ್ಥೆಗಳು ಮತ್ತು ಕೈಗಾರಿಕೆಗಳ ನಡುವಿನ ಸಹಯೋಗವನ್ನು ಪೋಷಿಸುತ್ತದೆ.
  • ಸೆಪ್ಟೆಂಬರ್ 30, 2025 ರವರೆಗೆ, ಟಿಟಿಡಿಎಫ್‌ ಯೋಜನೆಯಡಿಯಲ್ಲಿ 5ಜಿ ಮತ್ತು 6ಜಿ ಗೆ ಸಂಬಂಧಿಸಿದ ಒಟ್ಟು 115 ಯೋಜನೆಗಳಿಗೆ (₹310.6 ಕೋಟಿ ಮೊತ್ತದ) ಅನುಮೋದನೆ ನೀಡಲಾಗಿದೆ. ಈ ಆರ್‌ &ಡಿ ಯೋಜನೆಗಳ ಅವಧಿಯು 1 ರಿಂದ 5 ವರ್ಷಗಳವರೆಗೆ ಇರುತ್ತದೆ. ಈ ಯೋಜನೆಗಳು ಪ್ರಸ್ತುತ ಅಭಿವೃದ್ಧಿಯ ಆರಂಭಿಕ ಹಂತಗಳಲ್ಲಿವೆ.

ಭಾರತ್ 6G ಒಕ್ಕೂಟ: ಜಾಗತಿಕ 6ಜಿ ನಾಯಕತ್ವಕ್ಕಾಗಿ ಒಂದು ಏಕೀಕೃತ ರಾಷ್ಟ್ರೀಯ ಪ್ರಯತ್ನ

ಭಾರತ 6ಜಿ ವಿಷನ್‌' ಅನ್ನು ಮುನ್ನಡೆಸಲು, ಭಾರತವು 'ಭಾರತ್ 6ಜಿ ಒಕ್ಕೂಟವನ್ನು' ಪ್ರಾರಂಭಿಸಿತು. ಇದು ಕೈಗಾರಿಕೆ, ಶಿಕ್ಷಣ ಸಂಸ್ಥೆಗಳು, ಸ್ಟಾರ್ಟ್‌ಅಪ್‌ಗಳು, ಸಂಶೋಧನಾ ಸಂಸ್ಥೆಗಳು ಮತ್ತು ಮಾನದಂಡಗಳ ಸಂಸ್ಥೆಗಳನ್ನು ಒಟ್ಟುಗೂಡಿಸಿದೆ. ಈ ಒಕ್ಕೂಟವು ದೇಶೀಯ ಆವಿಷ್ಕಾರವನ್ನು ಸಕ್ರಿಯಗೊಳಿಸುವುದು ಮತ್ತು ಜಾಗತಿಕ ಸಹಯೋಗವನ್ನು ನಡೆಸುವುದರ ಮೇಲೆ ಕೇಂದ್ರೀಕರಿಸಿದೆ.

  • ಜುಲೈ 2025 ಹೊತ್ತಿಗೆ, ಒಕ್ಕೂಟವು 30ಕ್ಕೂ ಹೆಚ್ಚು ಸ್ಟಾರ್ಟ್ಅಪ್ಗಳು ಸೇರಿದಂತೆ 80ಕ್ಕೂ ಹೆಚ್ಚು ಸದಸ್ಯ ಸಂಸ್ಥೆಗಳನ್ನು ಒಳಗೊಂಡಿದೆ.
  • ಜಾಗತಿಕ ಜ್ಞಾನ ವಿನಿಮಯ ಮತ್ತು ಜಂಟಿ ಅಭಿವೃದ್ಧಿಯನ್ನು ಪೋಷಿಸಲು ಅಂತರರಾಷ್ಟ್ರೀಯ 6G ಒಕ್ಕೂಟಗಳೊಂದಿಗೆ ಅನೇಕ ತಿಳುವಳಿಕೆ ಒಪ್ಪಂದಗಳಿಗೆ ಸಹಿ ಮಾಡಿದೆ.
  • ಜಗತ್ತಿಗೆ ಉತ್ತಮ ಗುಣಮಟ್ಟದ ಜೀವನದ ಅನುಭವಕ್ಕಾಗಿ ಸರ್ವತ್ರ, ಬುದ್ಧಿವಂತ ಮತ್ತು ಸುರಕ್ಷಿತ ಸಂಪರ್ಕವನ್ನು ಒದಗಿಸುವ ಗುರಿ ಹೊಂದಿದೆ.
  • ಗ್ರಾಮೀಣ-ನಗರ ವಿಭಜನೆಗಳನ್ನು ನಿವಾರಿಸುವುದು  ಮತ್ತು ಜಾಗತಿಕ ಡಿಜಿಟಲ್ ಒಳಗೊಳ್ಳುವಿಕೆಯನ್ನು ಕ್ರಿಯಗೊಳಿಸುವ ಗುರಿ ಹೊಂದಿದೆ.
  • ಪರಿಕಲ್ಪನೆಯ ಪುರಾವೆಗಾಗಿ ಕಲ್ಪನೆಯ ಹಂತ, ನಂತರ ಭಾರತ ಮತ್ತು ಜಾಗತಿಕ ಸಮುದಾಯಕ್ಕಾಗಿ ತಂತ್ರಜ್ಞಾನ

ಐಐಐಟಿ-ಬಿ ನಲ್ಲಿ ತಂತ್ರಜ್ಞಾನ ಆವಿಷ್ಕಾರ ಕೇಂದ್ರ: 6G-ಸಿದ್ಧ ತಂತ್ರಜ್ಞಾನಗಳ ಪ್ರವರ್ತಕ

ಅಂತರ್‌-ಶಿಸ್ತೀಯ ಸೈಬರ್-ಫಿಸಿಕಲ್ ಸಿಸ್ಟಮ್ಸ್ಗಳ ರಾಷ್ಟ್ರೀಯ ಮಿಷನ್ ಅಡಿಯಲ್ಲಿ, ಭವಿಷ್ಯದ 6G ಜಾಲಗಳಿಗೆ ಆಕಾರ ನೀಡುವ ಸುಧಾರಿತ ಸಂವಹನ ವ್ಯವಸ್ಥೆಗಳ ಮೇಲೆ ಕೇಂದ್ರೀಕರಿಸಿ, ಐಐಐಟಿ ಬೆಂಗಳೂರಿನಲ್ಲಿ ತಂತ್ರಜ್ಞಾನ ಆವಿಷ್ಕಾರ ಕೇಂದ್ರವನ್ನು ಸ್ಥಾಪಿಸಲಾಗಿದೆ.

  • ಈ ಕೇಂದ್ರವು ಸುಧಾರಿತ ಸಂವಹನ ವ್ಯವಸ್ಥೆಗಳಿಗೆ ಸಮರ್ಪಿತವಾಗಿದ್ದು, ಪ್ರಸ್ತುತ ಮತ್ತು ಭವಿಷ್ಯದ ರಾಷ್ಟ್ರೀಯ ಅಗತ್ಯಗಳು ಹಾಗೂ ಅಂತರರಾಷ್ಟ್ರೀಯ ಪ್ರವೃತ್ತಿಗಳನ್ನು ಪರಿಹರಿಸುತ್ತದೆ.
  • ಕವರೇಜ್, ಸಾಮರ್ಥ್ಯ ಮತ್ತು ಸಂವೇದನೆಯನ್ನು ಹೆಚ್ಚಿಸಲು ರೀಕಾನ್ಫಿಗರಬಲ್ ಇಂಟೆಲಿಜೆಂಟ್ ಮೇಲ್ಮೈಗಳು ಮತ್ತು ಒ-ಆರ್ಎಎನ್ಮ್ಯಾಸಿವ್ ಎಂಐಎಂಒ ಗಳ ಅಭಿವೃದ್ಧಿ.
  • ಪ್ರಮುಖ ಗಮನ ಕ್ಷೇತ್ರಗಳು 5ಜಿಸುಧಾರಿತ (5G+) ಮತ್ತು 6G ವ್ಯವಸ್ಥೆಗಳು ಮತ್ತು ಜಾಲಗಳಿಗಾಗಿ ತಂತ್ರಜ್ಞಾನ ಕಟ್ಟಡದ ಬ್ಲಾಕ್‌ಗಳನ್ನು ವಿನ್ಯಾಸಗೊಳಿಸುವುದು ಮತ್ತು ಅಭಿವೃದ್ಧಿಪಡಿಸುವುದನ್ನು ಒಳಗೊಂಡಿವೆ.
  • ವಾಣಿಜ್ಯ ಅನ್ವಯಿಕೆಗಳಿಗಾಗಿ ಉತ್ಪನ್ನ ಐಪಿ ಯಂತಹ ಬೌದ್ಧಿಕ ಆಸ್ತಿಯ - ಸೃಷ್ಟಿಗೆ ಕಾರಣವಾಗುವ ದೇಶೀಯ ಸಂಶೋಧನೆಗೆ ಆದ್ಯತೆ ನೀಡಲಾಗುತ್ತದೆ.
  • ಉತ್ಪನ್ನ ಆಧಾರಿತ ಆವಿಷ್ಕಾರವನ್ನು ನಡೆಸಲು ಮತ್ತು ಮುಂಬರುವ 5G-ಸುಧಾರಿತ ಮತ್ತು 6G ಮಾನದಂಡಗಳಲ್ಲಿ ಅಳವಡಿಸಲು ಅನುಕೂಲವಾಗುವಂತೆ ಪೇಟೆಂಟ್‌ಗಳನ್ನು ಉತ್ಪಾದಿಸುವುದರ ಮೇಲೆ ಒತ್ತು ನೀಡಲಾಗುತ್ತದೆ.

ಒಟ್ಟಾರೆಯಾಗಿ, ಈ ಉಪಕ್ರಮಗಳು ಸುರಕ್ಷಿತ, ಒಳಗೊಳ್ಳುವ ಮತ್ತು ಭವಿಷ್ಯಕ್ಕೆ ಸಿದ್ಧವಾದ ಡಿಜಿಟಲ್ ಮೂಲಸೌಕರ್ಯವನ್ನು ರೂಪಿಸುತ್ತಿವೆ. ಇದು ಜಾಗತಿಕ 6ಜಿ ಸ್ಪರ್ಧೆಯಲ್ಲಿ ಭಾರತದ ನಾಯಕತ್ವವನ್ನು ಬಲಪಡಿಸುವುದಲ್ಲದೆ, ಎಲ್ಲರಿಗೂ ಮಾಹಿತಿ, ಸಂಪರ್ಕ ಮತ್ತು ಸೇವೆಗಳಿಗೆ ಸಮಾನ ಪ್ರವೇಶವನ್ನು ಉತ್ತೇಜಿಸುತ್ತದೆ. ಸ್ಟಾರ್ಟ್‌ಅಪ್‌ಗಳಿಗೆ ಸಶಕ್ತಗೊಳಿಸುವುದು, ಪ್ರತಿಭೆಯನ್ನು ಪೋಷಿಸುವುದು ಮತ್ತು ಜಾಗತಿಕ ಪಾಲುದಾರಿಕೆಗಳನ್ನು ಗಾಢವಾಗಿಸುವುದರ ಮೂಲಕ, ಭಾರತವು ಸಂಪರ್ಕಿತ, ಸ್ವಾವಲಂಬಿ ಮತ್ತು ಡಿಜಿಟಲ್ ಒಳಗೊಳ್ಳುವ ಭವಿಷ್ಯಕ್ಕೆ ಅಡಿಪಾಯ ಹಾಕುತ್ತಿದೆ.

ಉಪಸಂಹಾರ

ಭಾರತದ ಮುಂದಿನ ತಲೆಮಾರಿನ ದೂರಸಂಪರ್ಕ ತಂತ್ರಜ್ಞಾನಗಳ ಅನ್ವೇಷಣೆಯು ಸ್ವಾವಲಂಬನೆ, ಆವಿಷ್ಕಾರ ಮತ್ತು ಜಾಗತಿಕ ಸಹಯೋಗದ ದೃಷ್ಟಿಕೋನದಿಂದ ಮಾರ್ಗದರ್ಶಿಸಲ್ಪಟ್ಟಿದೆ. 'ಅಂತಾರಾಷ್ಟ್ರೀಯ ಭಾರತ್ 6G ಸಿಂಪೋಸಿಯಂ 2025' ರಲ್ಲಿನ ಚರ್ಚೆಗಳು ಮತ್ತು ಪ್ರಕಟಣೆಗಳು ಸುರಕ್ಷಿತ, ಒಳಗೊಳ್ಳುವ ಮತ್ತು ಭವಿಷ್ಯಕ್ಕೆ ಸಿದ್ಧವಾದ ಡಿಜಿಟಲ್ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ರಾಷ್ಟ್ರದ ಬದ್ಧತೆಯನ್ನು ಪುನರುಚ್ಚರಿಸಿದವು.'ಭಾರತ 6ಜಿ ಒಕ್ಕೂಟ', 'ದೂರಸಂಪರ್ಕ ತಂತ್ರಜ್ಞಾನ ಅಭಿವೃದ್ಧಿ ನಿಧಿ' ಮತ್ತು ಜಾಗತಿಕ ಸಂಶೋಧನಾ ಸಂಸ್ಥೆಗಳೊಂದಿಗಿನ ಸಕ್ರಿಯ ಪಾಲುದಾರಿಕೆಗಳಂತಹ ಉಪಕ್ರಮಗಳ ಮೂಲಕ, ಭಾರತವು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ದೇಶದಿಂದ ತಂತ್ರಜ್ಞಾನದ ಸೃಷ್ಟಿಕರ್ತ ಮತ್ತು ಮಾನದಂಡಗಳನ್ನು ನಿಗದಿಪಡಿಸುವ ದೇಶವಾಗಿ ಸ್ಥಿರವಾಗಿ ಪರಿವರ್ತನೆಗೊಳ್ಳುತ್ತಿದೆ. ಈ ಕಾರ್ಯತಂತ್ರದ ಉಪಕ್ರಮಗಳು ದೇಶೀಯ ದೂರಸಂಪರ್ಕ ಪರಿಸರ ವ್ಯವಸ್ಥೆಯನ್ನು ಬಲಪಡಿಸುವುದಲ್ಲದೆ, ಜಾಗತಿಕ 6ಜಿ ಚೌಕಟ್ಟಿಗೆ ಭಾರತವನ್ನು ಪ್ರಮುಖ ಕೊಡುಗೆದಾರನಾಗಿ ಸ್ಥಾಪಿಸುತ್ತವೆ. ಕೈಗೆಟುಕುವಿಕೆ, ಸುಸ್ಥಿರತೆ ಮತ್ತು ಎಲ್ಲೆಡೆ ಲಭ್ಯತೆಯ ಮೇಲಿನ ನಿರಂತರವಾಗಿ ಗಮನಹರಿಸಿ, ಭಾರತದ ತಾಂತ್ರಿಕ ಪ್ರಗತಿಯು ಸಮಾಜದ ಪ್ರತಿಯೊಂದು ವರ್ಗಕ್ಕೂ ಪ್ರಯೋಜನವನ್ನು ನೀಡುತ್ತದೆ ಎಂಬುದನ್ನು ಖಚಿತಪಡಿಸುತ್ತದೆ. ಇದರ ಜೊತೆಗೆ, ಇದು 2047ರ ವೇಳೆಗೆ 'ವಿಕಸಿತ ಭಾರತ'ದ ದೇಶದ ದೃಷ್ಟಿಕೋನವನ್ನು ಬೆಂಬಲಿಸುತ್ತದೆ.

References

TechTarget: https://www.techtarget.com/searchnetworking/definition/6G

Ministry of Communications:

 

Bharat 6G Alliance:

· https://bharat6galliance.com/bharat6G/public/assets/report/document_79664556.pdf

· https://bharat6galliance.com/bharat6G/public/assets/report/B6GA-Annual-Report-2024-25.pdf

 

Department of Science and Technology: https://comet.iiitb.ac.in/wp-content/uploads/2024/10/IIITB-COMET-Brochure-3.pdf

See in PDF

 

*****

(Backgrounder ID: 155743) Visitor Counter : 5
Provide suggestions / comments
Link mygov.in
National Portal Of India
STQC Certificate