Infrastructure
ಏರುತ್ತಿರುವ ಆಕಾಶ, ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆ: ಭಾರತದ ವಾಯುಯಾನ ದೃಷ್ಟಿಕೋನ 2047ಪ್ರಮುಖ
Posted On:
23 OCT 2025 5:03PM
ಮಾರ್ಗಸೂಚಿಗಳು
- ಉಡಾನ್ ಪ್ರಾದೇಶಿಕ ಸಂಪರ್ಕವನ್ನು ಕ್ರಾಂತಿಗೊಳಿಸಿದೆ — 1.56 ಕೋಟಿ ಪ್ರಯಾಣಿಕರು, 3.23 ಲಕ್ಷ ವಿಮಾನಗಳು.
- ಸರ್ಕಾರದ ದೃಷ್ಟಿಕೋನವು 2047 ರ ವೇಳೆಗೆ ವಿಮಾನ ನಿಲ್ದಾಣಗಳ ಸಂಖ್ಯೆಯನ್ನು 350-400ಕ್ಕೆ ಹೆಚ್ಚಿಸುವುದಾಗಿದೆ.
- ಒಟ್ಟಾರೆಯಾಗಿ, ಭಾರತದ ವಾಯುಯಾನ ಕ್ಷೇತ್ರವು 7.7 ದಶಲಕ್ಷಕ್ಕೂ ಅಧಿಕ ಉದ್ಯೋಗಗಳನ್ನು ಬೆಂಬಲಿಸುತ್ತದೆ.
- ಡಿಜಿ ಯಾತ್ರಾ, ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣಗಳ ನೀತಿ ಮತ್ತು ಡ್ರೋನ್ ಪಿಎಲ್ಐ ಯೋಜನೆ ಯಂತಹ ಉಪಕ್ರಮಗಳು ನಾವೀನ್ಯತೆ ಮತ್ತು ಪ್ರಯಾಣದ ಸುಲಭತೆಯನ್ನು ಪ್ರೇರೇಪಿಸುತ್ತಿವೆ.
ಪರಿಚಯ
ಸಂಪರ್ಕವು ಭೌಗೋಳಿಕತೆಯನ್ನು ಅವಕಾಶವಾಗಿ ಪರಿವರ್ತಿಸುವ ಸೇತುವಾಗಿದೆ. ಇದು ಕೇವಲ ಇಂದಿನ ಕಾಲಕ್ಕೆ ಮಾತ್ರ ಸೀಮಿತವಾಗಿಲ್ಲ; ಪ್ರಾದೇಶಿಕ ಸಂಪರ್ಕವು ಹೇಗೆ ಪ್ರದೇಶಗಳ ಬೆಳವಣಿಗೆಗೆ, ವ್ಯಾಪಾರ ಮತ್ತು ಆರ್ಥಿಕ ವಿನಿಮಯಕ್ಕೆ ಕಾರಣವಾಗಿ, ಬೆಳವಣಿಗೆಯನ್ನು ಸಮಗ್ರ ಮತ್ತು ಸಮತೋಲಿತವಾಗಿ ಮಾಡಿದೆ ಎಂಬುದನ್ನು ಇತಿಹಾಸ ಹೇಳುತ್ತದೆ. ಇಂದಿನ ಕಾಲದಲ್ಲಿಯೂ, ಸಂಪರ್ಕವು ಪ್ರವಾಸೋದ್ಯಮ ಮತ್ತು ವ್ಯಾಪಾರ ಕ್ಷೇತ್ರಗಳಿಗೆ ಮಾತ್ರವಲ್ಲದೆ, ತುರ್ತು ಪರಿಸ್ಥಿತಿಗಳು ಮತ್ತು ಬಾಹ್ಯ ಮಾರುಕಟ್ಟೆಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ದೇಶೀಯ ಮಾರುಕಟ್ಟೆಯ ಬೆಳವಣಿಗೆಗೆ ಕೊಡುಗೆ ನೀಡುತ್ತಿರುವ ಹಲವು ಅಂಶಗಳಲ್ಲಿ, ಅಕ್ಟೋಬರ್ 21, 2016 ರಂದು ಪ್ರಾರಂಭವಾದ ಪ್ರಾದೇಶಿಕ ಸಂಪರ್ಕ ಯೋಜನೆಯಾದ ಉಡಾನ್, ಪ್ರಾದೇಶಿಕ ವಾಯು ಸಂಪರ್ಕವನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇಂದು, ಉಡಾನ್ ಒಂಬತ್ತು ವರ್ಷಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ, ಈ ಯೋಜನೆಯು ಒಂದು ಪ್ರಾಯೋಗಿಕ ಉಪಕ್ರಮದಿಂದ ರಾಷ್ಟ್ರೀಯ ಯಶಸ್ಸಿನ ಕಥೆಯಾಗಿ ವಿಕಸನಗೊಂಡಿದೆ. ಇದು ದೂರವನ್ನು ಕಡಿಮೆ ಮಾಡಿದೆ ಮತ್ತು ದೇಶದಾದ್ಯಂತ ನಾಗರಿಕರಿಗೆ ವಿಮಾನ ಪ್ರಯಾಣವನ್ನು ಲಭ್ಯವಾಗುವಂತೆ ಮಾಡಿದೆ.
ಭಾರತದ ವಾಯುಯಾನ: ಸಮಗ್ರ ಬೆಳವಣಿಗೆಯತ್ತ ಗಗನಕ್ಕೆ ಹಾರಾಟ
ಕಳೆದ ದಶಕದಲ್ಲಿ, ಭಾರತದ ಆಕಾಶವು ಹಿಂದೆಂದಿಗಿಂತಲೂ ಹೆಚ್ಚು ಚಟುವಟಿಕೆಯಿಂದ ಕೂಡಿದೆ. ಭಾರತವು ವಿಶ್ವದ ಮೂರನೇ ಅತಿ ದೊಡ್ಡ ದೇಶೀಯ ವಾಯುಯಾನ ಮಾರುಕಟ್ಟೆಯಾಗಿ ಹೊರಹೊಮ್ಮಿದೆ. ವಿಮಾನ ನಿಲ್ದಾಣಗಳ ಸಂಖ್ಯೆಯು 2014 ರಲ್ಲಿ 74 ರಿಂದ 2025 ರಲ್ಲಿ 163 ಕ್ಕೆ ಹೆಚ್ಚಾಗಿದೆ. ಇದೇ ಸಮಯದಲ್ಲಿ, ಭಾರತವು 2047 ರಲ್ಲಿ ಸ್ವಾತಂತ್ರ್ಯದ ನೂರು ವರ್ಷಗಳನ್ನು ಆಚರಿಸುವ ವೇಳೆಗೆ, ವಿಮಾನ ನಿಲ್ದಾಣಗಳ ಸಂಖ್ಯೆಯನ್ನು 350 ರಿಂದ 400 ಕ್ಕೆ ಹೆಚ್ಚಿಸುವುದು ಸರ್ಕಾರದ ದೃಷ್ಟಿಕೋನವಾಗಿದೆ.
ವಾಯುಯಾನ ವಲಯವು ಭಾರತದ ಆರ್ಥಿಕತೆಯಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಲಯಗಳಲ್ಲಿ ಒಂದಾಗಿದ್ದು, ಇದು ವಾಯು ಸಾರಿಗೆ ಸೇವೆಗಳ ಮೂಲಕ ಮತ್ತು ಪರೋಕ್ಷವಾಗಿ ಪ್ರವಾಸೋದ್ಯಮ, ವ್ಯಾಪಾರ, ಸರಕು ಸಾಗಣೆ (ಲಾಜಿಸ್ಟಿಕ್ಸ್) ಮತ್ತು ಉತ್ಪಾದನೆಯ ಮೂಲಕ ಕೊಡುಗೆ ನೀಡುತ್ತಿದೆ.
ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಯ ಪ್ರಕಾರ, ವಾಯುಯಾನದಲ್ಲಿನ ಹೂಡಿಕೆಗಳು ಆರ್ಥಿಕತೆಯ ಮೇಲೆ ಬಲವಾದ ವ್ಯಾಪಕ ಪರಿಣಾಮವನ್ನು ಬೀರುತ್ತವೆ. ಪ್ರತಿ ರೂಪಾಯಿ ಖರ್ಚಿಗೆ, ಈ ವಲಯವು ಆರ್ಥಿಕ ಚಟುವಟಿಕೆಯಲ್ಲಿ ಅದರ ಮೌಲ್ಯಕ್ಕಿಂತ ಮೂರು ಪಟ್ಟು ಹೆಚ್ಚು ಆದಾಯವನ್ನು ಸೃಷ್ಟಿಸುತ್ತದೆ ಮತ್ತು ಸಂಬಂಧಿತ ಕೈಗಾರಿಕೆಗಳಲ್ಲಿ ಆರು ಪಟ್ಟು ಹೆಚ್ಚು ಉದ್ಯೋಗಗಳಿಗೆ ಬೆಂಬಲ ನೀಡುತ್ತದೆ.
ಪ್ರಸ್ತುತ, ಈ ವಲಯವು 3,69,000 ನೇರ ಉದ್ಯೋಗಗಳು ಸೇರಿದಂತೆ 7.7 ದಶಲಕ್ಷಕ್ಕೂ ಅಧಿಕ ಪರೋಕ್ಷ ಉದ್ಯೋಗಗಳಿಗೆ ಬೆಂಬಲ ನೀಡುತ್ತಿದೆ. ನುರಿತ ಸಿಬ್ಬಂದಿಯಾದ - ಪೈಲಟ್ಗಳು, ಇಂಜಿನಿಯರ್ಗಳು, ನೆಲದ ಸಿಬ್ಬಂದಿ ಮತ್ತು ಸರಕು ಸಾಗಣೆ (ಲಾಜಿಸ್ಟಿಕ್ಸ್) ವೃತ್ತಿಪರರಿಗೆ ಬೇಡಿಕೆಯು ತೀವ್ರವಾಗಿ ಹೆಚ್ಚಾಗುವ ನಿರೀಕ್ಷೆಯಿದೆ.116 ಕ್ಕೂ ಹೆಚ್ಚು ದ್ವಿಪಕ್ಷೀಯ ವಾಯು ಸೇವಾ ಒಪ್ಪಂದಗಳೊಂದಿಗೆ, ಭಾರತೀಯ ವಿಮಾನಯಾನ ಸಂಸ್ಥೆಗಳು ಅಂತರರಾಷ್ಟ್ರೀಯವಾಗಿ ವಿಸ್ತರಿಸುತ್ತಿರುವುದರಿಂದ, ಭಾರತವು ಜಾಗತಿಕ ಸಂಪರ್ಕವನ್ನು ಬಲಪಡಿಸುತ್ತಿದೆ. ಇದು ಏಷ್ಯಾದಲ್ಲಿ ಭಾರತದ ಸ್ಥಾನವನ್ನು ವಾಯುಯಾನ ಕೇಂದ್ರವಾಗಿ ದೃಢಪಡಿಸುತ್ತಿದೆ. ನಾಗರಿಕ ವಾಯುಯಾನವು ನೇರ ವಿದೇಶಿ ಹೂಡಿಕೆ ಒಳಹರಿವು, ತಂತ್ರಜ್ಞಾನ ವರ್ಗಾವಣೆ, ಮತ್ತು ವಿಮಾನ ತಯಾರಿಕೆ, ನೆಲದ ನಿರ್ವಹಣೆ, ಹಾಗೂ ನಿರ್ವಹಣೆ, ದುರಸ್ತಿ ಮತ್ತು ಕಾರ್ಯಾಚರಣೆ ಸೇವೆಗಳಲ್ಲಿ 'ಮೇಕ್ ಇನ್ ಇಂಡಿಯಾ' ಉಪಕ್ರಮಗಳನ್ನು ಸಹ ಪ್ರೇರೇಪಿಸುತ್ತಿದೆ. ಕಳೆದ ದಶಕದಲ್ಲಿ, ದೇಶೀಯ ವಿಮಾನ ಪ್ರಯಾಣಿಕರ ಸಂಚಾರವು ವಾರ್ಷಿಕವಾಗಿ ಶೇ.10-12 ರಷ್ಟು ಬೆಳೆದಿದೆ.
2040 ರ ವೇಳೆಗೆ, ಪ್ರಯಾಣಿಕರ ಸಂಚಾರವು ಆರು ಪಟ್ಟು ಹೆಚ್ಚಾಗಿ ಸುಮಾರು 1.1 ಬಿಲಿಯನ್ (ನೂರು ಕೋಟಿಗೂ ಹೆಚ್ಚು) ಗೆ ತಲುಪುವ ನಿರೀಕ್ಷೆಯಿದೆ. ಭಾರತದ ವಾಣಿಜ್ಯ ವಿಮಾನಗಳ ಸಮೂಹವು 2014 ರಲ್ಲಿ 400 ರಿಂದ ಮಾರ್ಚ್ 2040 ರ ವೇಳೆಗೆ ಸುಮಾರು 2,359 ಕ್ಕೆ ಬೆಳೆಯುವ ಮುನ್ಸೂಚನೆ ಇದೆ. 2040 ರಲ್ಲಿ ವಾಯುಯಾನ ವಲಯದಿಂದ ಒಟ್ಟು ಉದ್ಯೋಗವು ಸುಮಾರು 25 ಮಿಲಿಯನ್ (2.5 ಕೋಟಿ) ಆಗುವ ನಿರೀಕ್ಷೆಯಿದೆ. ಹೀಗೆ, ಈ ವಲಯವು ಭಾರತವು ಅಭಿವೃದ್ಧಿ ಹೊಂದಿದ ಆರ್ಥಿಕತೆಯಾಗುವ ಪಯಣದಲ್ಲಿ ಒಂದು ಕೇಂದ್ರ ಎಂಜಿನ್ನಂತೆ ಹೊರಹೊಮ್ಮುತ್ತಿದೆ.
ಉಡಾನ್ (UDAN): ಪ್ರತಿಯೊಬ್ಬ ನಾಗರಿಕನಿಗೂ ವಿಮಾನ ಪ್ರಯಾಣವನ್ನು ಪ್ರಜಾಪ್ರಭುತ್ವಗೊಳಿಸುವುದು
ಮೆಟ್ರೋ ನಗರಗಳಿಂದ ಹಿಡಿದು ಪರ್ವತ ಕಣಿವೆಗಳವರೆಗೆ, ಭಾರತೀಯ ಆಕಾಶವು ಹೊಸ ಸಾಧ್ಯತೆಗಳ ನಕ್ಷೆಯಾಗಿದೆ — ಇದು ಸಣ್ಣ ಪಟ್ಟಣಗಳನ್ನು ಸಂಪರ್ಕಿಸುತ್ತದೆ, ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ ಮತ್ತು ಸ್ಥಳೀಯ ಆರ್ಥಿಕತೆಗಳನ್ನು ಮುನ್ನಡೆಸುತ್ತದೆ. ಈ ಪರಿವರ್ತನೆಯ ಮೂಲದಲ್ಲಿ ನಾಗರಿಕ ವಿಮಾನಯಾನ ಸಚಿವಾಲಯದ ಅಡಿಯಲ್ಲಿರುವ ಉಡಾನ್ ಯೋಜನೆಯು ನಿಂತಿದೆ. ಇದು ವಿಮಾನ ಪ್ರಯಾಣವನ್ನು ಪ್ರಜಾಪ್ರಭುತ್ವಗೊಳಿಸಿದೆ ಮತ್ತು ಭಾರತದ ಪ್ರಾದೇಶಿಕ ಸಂಪರ್ಕದ ಭೂದೃಶ್ಯವನ್ನು ಮರುರೂಪಿಸಿದೆ.
ನೀತಿ ಆಯೋಗದ ಪ್ರಕಾರ, 2019 ರಲ್ಲಿ ಒಟ್ಟು ಪ್ರವಾಸೋದ್ಯಮದ ಖರ್ಚಿನಲ್ಲಿ ಶೇ. 83ಕ್ಕಿಂತ ಹೆಚ್ಚು ದೇಶೀಯ ಪ್ರಯಾಣಿಕರದ್ದಾಗಿತ್ತು. ಈ ಅಂಕಿ-ಅಂಶವು 2028 ರ ವೇಳೆಗೆ ಸುಮಾರು 89% ಕ್ಕೆ ಏರುವ ನಿರೀಕ್ಷೆಯಿದೆ. ಈ ಬದಲಾವಣೆಯು ಉಡಾನ್‌ನಂತಹ ಸರ್ಕಾರದ ಉಪಕ್ರಮಗಳು ಹೇಗೆ ಮೂಲಸೌಕರ್ಯ ಅಂತರವನ್ನು ಕಡಿಮೆ ಮಾಡಿವೆ ಮತ್ತು ವಿಮಾನ ಪ್ರಯಾಣವನ್ನು ಲಕ್ಷಾಂತರ ಜನರಿಗೆ ಕೈಗೆಟುಕುವಂತೆ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡಿವೆ ಎಂಬುದನ್ನು ತೋರಿಸುತ್ತದೆ. ಇದರ ಮೂಲಕ ದೂರದ ಪ್ರದೇಶಗಳನ್ನು ಸಂಪರ್ಕಿಸಲಾಗಿದೆ.

ಇದು ಉಡಾನ್ ನಂತಹ ಉಪಕ್ರಮಗಳಿಂದ ಬೆಂಬಲಿತವಾದ, ವಿಮಾನ ಪ್ರಯಾಣವನ್ನು ಕೈಗೆಟುಕುವಂತೆ ಮತ್ತು ಎಲ್ಲರಿಗೂ ಲಭ್ಯವಾಗುವಂತೆ ಮಾಡುವ ಸರ್ಕಾರದ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತದೆ. ಈ ಪರಿವರ್ತನೆಯು ಭಾರತದ ಪ್ರವಾಸ ನಕ್ಷೆಯನ್ನೂ ಮರುರೂಪಿಸಿದೆ. ಒಂದು ಕಾಲದಲ್ಲಿ ದೂರದ ತಾಣಗಳಾಗಿದ್ದ ಕುಲ್ಲು, ದರ್ಭಂಗಾ, ಹುಬ್ಬಳ್ಳಿ ಮತ್ತು ಶಿಲ್ಲಾಂಗ್ ಈಗ ನೇರ ವಿಮಾನ ಸಂಪರ್ಕವನ್ನು ಹೊಂದಿದ್ದು, ಸ್ಥಳೀಯ ಆರ್ಥಿಕತೆಗಳು ಮತ್ತು ಪ್ರಾದೇಶಿಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದೆ.

ಉಡಾನ್ನ ದೃಷ್ಟಿಕೋನವು ವಿಮಾನ ಪ್ರಯಾಣವನ್ನು ಪ್ರಜಾಪ್ರಭುತ್ವಗೊಳಿಸುವ ಅಗತ್ಯವನ್ನು ಒತ್ತಿಹೇಳಿತು—ಇದೇ ಭಾವನೆಯು ಹೆಚ್ಚು ಸಮಗ್ರ ವಾಯುಯಾನ ವಲಯಕ್ಕೆ ದೃಷ್ಟಿಯನ್ನು ಪ್ರಜ್ವಲಿಸಿತು. ಸಾಮಾನ್ಯ ಜನರ ಕನಸುಗಳಿಗೆ ನೀಡಿದ ಈ ಬದ್ಧತೆಯು ಉಡಾನ್ನ ಜನ್ಮಕ್ಕೆ ಕಾರಣವಾಯಿತು.
ಉಡಾನ್ನ ಸಾಧನೆಗಳು
- ಪ್ರಾದೇಶಿಕ ಸಂಪರ್ಕ ಯೋಜನೆ- ಉಡಾನ್ ಭಾರತವನ್ನು ಸಂಪರ್ಕಿಸುತ್ತಿದೆ- ಪ್ರಾದೇಶಿಕ ಸಂಪರ್ಕ ಯೋಜನೆ– ಉಡಾನ್ ದೇಶದಾದ್ಯಂತ 649 ಮಾರ್ಗಗಳನ್ನು ಕಾರ್ಯಗತಗೊಳಿಸಿದೆ ಮತ್ತು 93 ವಿಮಾನ ನಿಲ್ದಾಣಗಳನ್ನು (ಇದರಲ್ಲಿ 2 ಜಲ ವಿಮಾನ ನಿಲ್ದಾಣಗಳು ಮತ್ತು 15 ಹೆಲಿಪೋರ್ಟ್‌ಗಳು ಸೇರಿವೆ) ಸಂಪರ್ಕಿಸಿದೆ. ಇವುಗಳಲ್ಲಿ ಈಶಾನ್ಯ ಪ್ರದೇಶದ 12 ವಿಮಾನ ನಿಲ್ದಾಣಗಳು/ಹೆಲಿಪೋರ್ಟ್ಗಳು ಸೇರಿವೆ. ಇದು ಅಂಡಮಾನ್, ನಿಕೋಬಾರ್ ಮತ್ತು ಲಕ್ಷದ್ವೀಪ ದ್ವೀಪಗಳನ್ನು ಸಹ ರಾಷ್ಟ್ರೀಯ ವಾಯುಯಾನ ಜಾಲದೊಂದಿಗೆ ಸಂಯೋಜಿಸಿದೆ.
- ಮೈಲಿಗಲ್ಲು ಸಾಧನೆ: ಪ್ರಾದೇಶಿಕ ಸಂಪರ್ಕ ಯೋಜನೆ– ಉಡಾನ್ ವಿಮಾನಗಳಲ್ಲಿ 1.56 ಕೋಟಿಗೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸಿದ್ದಾರೆ ಮತ್ತು ದೇಶಾದ್ಯಂತ ಪ್ರಾದೇಶಿಕ ಮಾರ್ಗಗಳಲ್ಲಿ ಒಟ್ಟು 3.23 ಲಕ್ಷ RCS ವಿಮಾನಗಳು ಕಾರ್ಯನಿರ್ವಹಿಸಿವೆ. ಪ್ರಾದೇಶಿಕ ಮಾರ್ಗಗಳನ್ನು ವಿಮಾನಯಾನ ಸಂಸ್ಥೆಗಳಿಗೆ ವಾಣಿಜ್ಯಿಕವಾಗಿ ಸುಸ್ಥಿರವಾಗಿಸಲು ಸುಮಾರು ₹4,300 ಕೋಟಿ ರೂಪಾಯಿಗಳ 'ಕಾರ್ಯಸಾಧ್ಯತೆಯ ಅಂತರ ನಿಧಿ'ಯನ್ನು ವಿತರಿಸಲಾಗಿದೆ.
- ವಿಸ್ತೃತ ಉಡಾನ್: ಈ ಯೋಜನೆಯು ಮುಂದಿನ 10 ವರ್ಷಗಳಲ್ಲಿ ದೇಶದಾದ್ಯಂತ 120 ಹೊಸ ಸ್ಥಳಗಳಿಗೆ ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸುವ ಮತ್ತು 4 ಕೋಟಿ ಪ್ರಯಾಣಿಕರಿಗೆ ಸೇವೆ ಸಲ್ಲಿಸುವ ಗುರಿ ಹೊಂದಿದೆ. ಈ ಯೋಜನೆಯು ಗುಡ್ಡಗಾಡು, ಆಕಾಂಕ್ಷಿ ಮತ್ತು ಈಶಾನ್ಯ ಪ್ರದೇಶದ ಜಿಲ್ಲೆಗಳಲ್ಲಿರುವ ಹೆಲಿಪ್ಯಾಡ್ಗಳು ಮತ್ತು ಸಣ್ಣ ವಿಮಾನ ನಿಲ್ದಾಣಗಳಿಗೆ ಸಹ ಬೆಂಬಲ ನೀಡಲಿದೆ.
- ಉಡಾನ್ ಯಾತ್ರಿ ಕೆಫೆ ಮೂಲಕ ವಿಮಾನ ನಿಲ್ದಾಣಗಳಲ್ಲಿ ಕೈಗೆಟುಕುವ ಬೆಲೆಯಲ್ಲಿ ಆಹಾರ: 'ಉಡಾನ್ ಯಾತ್ರಿ ಕೆಫೆ' ಉಪಕ್ರಮವನ್ನು ಕೋಲ್ಕತ್ತಾ ಮತ್ತು ಚೆನ್ನೈ ವಿಮಾನ ನಿಲ್ದಾಣಗಳಲ್ಲಿ ಪ್ರಾರಂಭಿಸಲಾಗಿದೆ. ಇದು ಕೈಗೆಟುಕುವ ಬೆಲೆಯಲ್ಲಿ, ಗುಣಮಟ್ಟದ ಆಹಾರವನ್ನು (ಚಹಾಕ್ಕೆ ₹10, ಸಮೋಸಕ್ಕೆ ₹20) ಒದಗಿಸುತ್ತದೆ. ಈ ಮೂಲಕ ವಿಮಾನ ಪ್ರಯಾಣವನ್ನು ಎಲ್ಲರಿಗೂ ಹೆಚ್ಚು ಸಮಗ್ರವಾಗಿ ಮತ್ತು ಲಭ್ಯವಾಗುವಂತೆ ಮಾಡಿದೆ.
ಮುಂದಿನ ನೋಟ: 2047 ಕ್ಕಾಗಿ ದೃಷ್ಟಿಕೋನ
ಭಾರತವು ತನ್ನ ಸ್ವಾತಂತ್ರ್ಯದ ಶತಮಾನೋತ್ಸವದತ್ತ ಸಾಗುತ್ತಿರುವಾಗ, ವಾಯುಯಾನ ವಲಯವು ಮಹತ್ವಾಕಾಂಕ್ಷೆಯ ಬೆಳವಣಿಗೆಯ ಹಾದಿಯನ್ನು ರೂಪಿಸುತ್ತಿದೆ — 2025 ರಲ್ಲಿ 163 ವಿಮಾನ ನಿಲ್ದಾಣಗಳಿಂದ 2047 ರ ವೇಳೆಗೆ 350 ಕ್ಕಿಂತ ಹೆಚ್ಚು ವಿಮಾನ ನಿಲ್ದಾಣಗಳನ್ನು ಹೊಂದುವ ಮತ್ತು ಪ್ರಯಾಣಿಕರ ಸಂಚಾರವು ಒಂದು ಬಿಲಿಯನ್ (ನೂರು ಕೋಟಿ) ಗಿಂತ ಹೆಚ್ಚಾಗುವ ನಿರೀಕ್ಷೆಯಿದೆ. ಈ ಅಂಕಿ-ಅಂಶಗಳು ಸ್ವಚ್ಛ ಇಂಧನಗಳು, ಡಿಜಿಟಲ್ ವಾಯುಮಾರ್ಗಗಳು ಮತ್ತು ಸಮಗ್ರ ಚಲನಶೀಲತೆ ಕಡೆಗೆ ಬದಲಾವಣೆಯನ್ನು ಪ್ರತಿನಿಧಿಸುತ್ತವೆ.
2047ರ ವೇಳೆಗೆ 25 ದಶಲಕ್ಷ (2.5 ಕೋಟಿ) ಉದ್ಯೋಗಗಳ ನಿರೀಕ್ಷೆಯೊಂದಿಗೆ ಮತ್ತು ಎಂಆರ್‌ಓ, ಡ್ರೋನ್ ಉತ್ಪಾದನೆ ಹಾಗೂ ಪೈಲಟ್ ತರಬೇತಿಯಲ್ಲಿ ಅವಕಾಶಗಳು ವಿಸ್ತರಿಸುತ್ತಿರುವುದರಿಂದ, ವಾಯುಯಾನ ಕ್ಷೇತ್ರವು ಭಾರತದ $10 ಟ್ರಿಲಿಯನ್ ಆರ್ಥಿಕತೆಯ ಒಂದು ಪ್ರಮುಖ ಆಧಾರಸ್ತಂಭವಾಗಲಿದೆ.

2047ರ ವೇಳೆಗೆ 25 ದಶಲಕ್ಷ (2.5 ಕೋಟಿ) ಉದ್ಯೋಗಗಳ ನಿರೀಕ್ಷೆಯೊಂದಿಗೆ ಮತ್ತು ಎಂಆರ್‌ಓ, ಡ್ರೋನ್ ಉತ್ಪಾದನೆ ಹಾಗೂ ಪೈಲಟ್ ತರಬೇತಿಯಲ್ಲಿ ಅವಕಾಶಗಳು ವಿಸ್ತರಿಸುತ್ತಿರುವುದರಿಂದ, ವಾಯುಯಾನ ಕ್ಷೇತ್ರವು ಭಾರತದ $10 ಟ್ರಿಲಿಯನ್ ಆರ್ಥಿಕತೆಯ ಒಂದು ಪ್ರಮುಖ ಆಧಾರಸ್ತಂಭವಾಗಲಿದೆ.

ಕೃಷಿ ಉಡಾನ್: ಸೆಪ್ಟೆಂಬರ್ 2020 ರಲ್ಲಿ ಪ್ರಾರಂಭಿಸಲಾದ ಕೃಷಿ ಉಡಾನ್ ಯೋಜನೆಯು ಕೃಷಿ ಉತ್ಪನ್ನಗಳು ಮತ್ತು ಬೇಗನೆ ಹಾಳಾಗುವ ವಸ್ತುಗಳನ್ನು ವೇಗವಾಗಿ ಸಾಗಿಸಲು ಅನುವು ಮಾಡಿಕೊಡುತ್ತದೆ, ವಿಶೇಷವಾಗಿ ಬುಡಕಟ್ಟು ಮತ್ತು ಈಶಾನ್ಯ ರಾಜ್ಯಗಳಿಗೆ ಪ್ರಯೋಜನವನ್ನು ನೀಡುತ್ತದೆ. ಆಪರೇಷನ್ ಗ್ರೀನ್ಸ್ ಯೋಜನೆಯೊಂದಿಗೆ ಸಂಯೋಜನೆಯಲ್ಲಿ, ಇದು ಶೇ. 50 ರಷ್ಟು ಸಾಗಣೆ ಸಬ್ಸಿಡಿ, ಬಹು-ಮಾದರಿ ಸಾರಿಗೆ ಆಯ್ಕೆಗಳು (, ಮತ್ತು ತೋಟಗಾರಿಕೆ ಹಾಗೂ ಸಂಬಂಧಿತ ಉತ್ಪನ್ನಗಳಿಗೆ ವ್ಯಾಪ್ತಿಯನ್ನು ಒದಗಿಸುತ್ತದೆ.
ಲೈಫ್ಲೈನ್ ಉಡಾನ್ : ಈ ವಿಶೇಷ ಉಪಕ್ರಮವನ್ನು ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ, ಮಾರ್ಚ್ 2020 ರಲ್ಲಿ ಪ್ರಾರಂಭಿಸಲಾಯಿತು. ಇದು ವೈದ್ಯಕೀಯ ಮತ್ತು ಅಗತ್ಯ ಸಾಮಗ್ರಿಗಳ ವಿತರಣೆಯಲ್ಲಿ ಯಾವುದೇ ಅಡೆತಡೆಯಾಗದಂತೆ ಖಚಿತಪಡಿಸಿತು. ಈ ಉಪಕ್ರಮದ ಅಡಿಯಲ್ಲಿ, 588 ಕ್ಕೂ ಹೆಚ್ಚು ವಿಮಾನಗಳು 1,000 ಟನ್ ಸರಕುಗಳನ್ನು 5.45 ಲಕ್ಷ ಕಿ.ಮೀ.ಗಳಷ್ಟು ದೂರ ಸಾಗಿಸಿದವು. ಇದು ವಿಶೇಷವಾಗಿ ಈಶಾನ್ಯ ಪ್ರದೇಶ, ದ್ವೀಪಗಳು ಮತ್ತು ಗುಡ್ಡಗಾಡು ಪ್ರದೇಶಗಳ ಮೇಲೆ ಕೇಂದ್ರೀಕರಿಸಿತ್ತು. ಲೈಫ್‌ಲೈನ್ ಉಡಾನ್, ಕೋವಿಡ್ ಪ್ರಯೋಗಾಲಯಗಳನ್ನು ಸ್ಥಾಪಿಸಲು, ವೈದ್ಯಕೀಯ ತಂಡಗಳನ್ನು ಸಾಗಿಸಲು ಮತ್ತು ವಿಶಾಖಪಟ್ಟಣಂ ಅನಿಲ ಸೋರಿಕೆಯಂತಹ ತುರ್ತು ಪರಿಸ್ಥಿತಿಗಳಿಗೆ ಸ್ಪಂದಿಸಲು ಸಹ ಬೆಂಬಲ ನೀಡಿತು.
ಗ್ರೀನ್ಫೀಲ್ಡ್ ವಿಮಾನ ನಿಲ್ದಾಣಗಳ ನೀತಿ: ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣಗಳ ನೀತಿಯು ಭಾರತದ ವಾಯುಯಾನ ಮೂಲಸೌಕರ್ಯವನ್ನು ವಿಸ್ತರಿಸಲು ಮತ್ತು ಮೆಟ್ರೋ ಕೇಂದ್ರಗಳ ದಟ್ಟಣೆಯನ್ನು ಕಡಿಮೆ ಮಾಡಲು, ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮೂಲಕ ಬಳಕೆಯಾಗದ ಭೂಮಿಯಲ್ಲಿ ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸಲು ಒಂದು ಚೌಕಟ್ಟನ್ನು ಒದಗಿಸುತ್ತದೆ.
ಪ್ರಯಾಣದ ಅನುಭವವನ್ನು ಹೆಚ್ಚಿಸುವುದು: ಪ್ರಯಾಣದ ಅನುಭವವನ್ನು ಹೆಚ್ಚಿಸಲು, ಪುನರಾವರ್ತನೆಯನ್ನು ಕಡಿಮೆ ಮಾಡಲು ಮತ್ತು ಸಮಯವನ್ನು ಉಳಿಸಲು, ಸರ್ಕಾರವು ಡಿಜಿ ಯಾತ್ರಾ ಸೇರಿದಂತೆ ವಿವಿಧ ಉಪಕ್ರಮಗಳನ್ನು ಪ್ರಾರಂಭಿಸಿದೆ. 2022 ರಿಂದ ಜಾರಿಗೆ ಬಂದಿರುವ ಡಿಜಿ ಯಾತ್ರಾ ಯೋಜನೆಯು, ಮುಖ ಗುರುತಿಸುವಿಕೆ ತಂತ್ರಜ್ಞಾನವನ್ನು ಬಳಸಿಕೊಂಡು ಪ್ರಯಾಣಿಕರ ಕಾಗದರಹಿತ ಮತ್ತು ಸಂಪರ್ಕರಹಿತ ಪ್ರಕ್ರಿಯೆಗೆ ಅನುವು ಮಾಡಿಕೊಟ್ಟಿದೆ. ಮಾರ್ಚ್ 2025 ರ ಹೊತ್ತಿಗೆ, 52.2 ದಶಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಈ ಸೌಲಭ್ಯವನ್ನು ಬಳಸಿದ್ದಾರೆ. ಡಿಜಿ ಯಾತ್ರಾ ಅಪ್ಲಿಕೇಶನ್ Android ಮತ್ತು iOS ಎರಡೂ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿದ್ದು, ಇಲ್ಲಿಯವರೆಗೆ 12.1 ದಶಲಕ್ಷಕ್ಕೂ ಹೆಚ್ಚು ಬಳಕೆದಾರರು ಇದನ್ನು ಡೌನ್‌ಲೋಡ್ ಮಾಡಿದ್ದಾರೆ.
ವಿಮಾನ ತರಬೇತಿ ಮತ್ತು ಪೈಲಟ್ ಅಭಿವೃದ್ಧಿ: ಮುಂದಿನ 10-15 ವರ್ಷಗಳಲ್ಲಿ ಅಂದಾಜಿಸಲಾದ 30,000–34,000 ಪೈಲಟ್‌ಗಳ ಬೇಡಿಕೆಯನ್ನು ಪೂರೈಸಲು, ಸರ್ಕಾರವು ವಿಮಾನ ತರಬೇತಿ ಸಂಸ್ಥೆಗಳನ್ನು ಮತ್ತು ವಾಣಿಜ್ಯ ಪೈಲಟ್ ಪರವಾನಗಿಯನ್ನು ವಿಸ್ತರಿಸುತ್ತಿದೆ. ಲಿಂಗ ಸಮಾನತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ, ಪ್ರಸ್ತುತ 13–18% ಮಹಿಳಾ ಪೈಲಟ್‌ಗಳ ಪ್ರಾತಿನಿಧ್ಯದೊಂದಿಗೆ, ಡಿಜಿಸಿಎ ಯು 2025 ರ ವೇಳೆಗೆ ಎಲ್ಲಾ ವಾಯುಯಾನ ಪಾತ್ರಗಳಲ್ಲಿ ಶೇ.25ರಷ್ಟು ಮಹಿಳಾ ಪ್ರಾತಿನಿಧ್ಯದ ಗುರಿಯನ್ನು ಹೊಂದಿದೆ.
ಡ್ರೋನ್ ನಿಯಮಗಳು 2021, ಉತ್ಪಾದನೆ-ಸಂಯೋಜಿತ ಪ್ರೋತ್ಸಾಹಕ: ಡ್ರೋನ್ ನಿಯಮಗಳು, 2021 ರ ಮೂಲಕ, ನಿಯಂತ್ರಣಗಳನ್ನು ಸರಳೀಕರಿಸುವ ಮತ್ತು ವ್ಯಾಪಕ ವಾಣಿಜ್ಯ ಬಳಕೆಗೆ ಅನುವು ಮಾಡಿಕೊಡುವ ಮೂಲಕ ಭಾರತದ ಡ್ರೋನ್ ವಲಯವನ್ನು ಉದಾರೀಕರಣಗೊಳಿಸಲಾಗಿದೆ. ಇದಕ್ಕೆ ಪೂರಕವಾಗಿರುವ ಉತ್ಪಾದನೆ-ಸಂಯೋಜಿತ ಪ್ರೋತ್ಸಾಹಕ ಯೋಜನೆಯು, 2024-25 ನೇ ಹಣಕಾಸು ವರ್ಷದಲ್ಲಿ ₹34.79 ಕೋಟಿಗಳನ್ನು ವಿತರಿಸಿದೆ. ಇದು ದೇಶೀಯ ಉತ್ಪಾದನೆಯನ್ನು ಉತ್ತೇಜಿಸಿದೆ ಮತ್ತು ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿದೆ. ಈ ಮೂಲಕ ಭಾರತದ ಸ್ವಾವಲಂಬಿ ಡ್ರೋನ್ ಪರಿಸರ ವ್ಯವಸ್ಥೆಗೆ ಉತ್ತೇಜನ ನೀಡಿದೆ.
ಭಾರತೀಯ ವಾಯುಯಾನ ಅಧಿನಿಯಮ, 2024: ಇದು ವಿಮಾನ ಕಾಯಿದೆ, 1934 ಅನ್ನು ಸಮಕಾಲೀನ ಅಗತ್ಯತೆಗಳು ಮತ್ತು ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಮರು-ಜಾರಿಗೊಳಿಸುವ ಮೂಲಕ ಭಾರತದ ವಾಯುಯಾನ ವಲಯವನ್ನು ಆಧುನೀಕರಿಸುವ ಗುರಿಯನ್ನು ಹೊಂದಿರುವ ಶಾಸಕಾಂಗ ಸುಧಾರಣೆಯಾಗಿದೆ.ಈ ಹೊಸ ಶಾಸನವು 'ಮೇಕ್ ಇನ್ ಇಂಡಿಯಾ' ಮತ್ತು 'ಆತ್ಮನಿರ್ಭರ ಭಾರತ್' ಉಪಕ್ರಮಗಳ ಅಡಿಯಲ್ಲಿ ಸ್ವದೇಶಿ ಉತ್ಪಾದನೆಗೆ ಉತ್ತೇಜನ ನೀಡುತ್ತದೆ. ಜೊತೆಗೆ, ಇದು ಚಿಕಾಗೋ ಕನ್ವೆನ್ಷನ್ ಮತ್ತು ಐಸಿಎಒ ನಂತಹ ಅಂತರರಾಷ್ಟ್ರೀಯ ಒಪ್ಪಂದಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತದೆ. ಮತ್ತು ಪರವಾನಗಿಗಳ ವಿತರಣೆಯನ್ನು ಸರಳಗೊಳಿಸುವಂತಹ ನಿಯಂತ್ರಕ ಪ್ರಕ್ರಿಯೆಗಳನ್ನು ಸುಗಮಗೊಳಿಸುತ್ತದೆ. ಈ ಕಾಯಿದೆಯು ಅನಗತ್ಯ ಪುನರಾವರ್ತನೆಗಳನ್ನು ತೆಗೆದುಹಾಕುತ್ತದೆ ಮತ್ತು ಮನವಿಗಳಿಗಾಗಿ ನಿಬಂಧನೆಗಳನ್ನು ಒದಗಿಸುತ್ತದೆ.
ಉಪಸಂಹಾರ
ಭಾರತದ ನಾಗರಿಕ ವಿಮಾನಯಾನ ವಲಯವು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಲಯಗಳಲ್ಲಿ ಒಂದಾಗಿ ಹೊರಹೊಮ್ಮಿದೆ, ಇದು ದೇಶವನ್ನು ವಿಶ್ವದ ಮೂರನೇ ಅತಿ ದೊಡ್ಡ ದೇಶೀಯ ವಾಯುಯಾನ ಮಾರುಕಟ್ಟೆಯನ್ನಾಗಿ ಮಾಡಿದೆ. ದೇಶವು ಪ್ರಯಾಣಿಕರ ಸಂಚಾರದಲ್ಲಿ ಅಭೂತಪೂರ್ವ ಏರಿಕೆಯನ್ನು ದಾಖಲಿಸುತ್ತಿರುವಾಗ, ಪ್ರಾದೇಶಿಕ ಸಂಪರ್ಕವನ್ನು ವಿಸ್ತರಿಸುತ್ತಿರುವಾಗ ಮತ್ತು ವಾಯುಯಾನದ ಚೌಕಟ್ಟುಗಳನ್ನು ಆಧುನೀಕರಿಸುತ್ತಿರುವಾಗ, ಸಚಿವಾಲಯದ ಈ ಪ್ರಯತ್ನಗಳು ಲಕ್ಷಾಂತರ ಜನರಿಗೆ ಪ್ರಯಾಣದ ಅನುಭವವನ್ನು ಹೆಚ್ಚಿಸುತ್ತವೆ. ಜೊತೆಗೆ, ಆರ್ಥಿಕ ಸಮೃದ್ಧಿಯನ್ನು ಬಲಪಡಿಸುತ್ತವೆ, ರಾಷ್ಟ್ರೀಯ ಏಕೀಕರಣವನ್ನು ಸುದೃಢಗೊಳಿಸುತ್ತವೆ ಮತ್ತು 'ವಿಕಸಿತ ಭಾರತ @2047' ಎಂಬ ತನ್ನ ದೃಷ್ಟಿಕೋನದತ್ತ ವಿಶ್ವಾಸದಿಂದ ಮುನ್ನುಗ್ಗಲು ಭಾರತಕ್ಕೆ ಸಬಲೀಕರಣ ನೀಡುತ್ತವೆ.
References:
https://www.iata.org/en/iata-repository/publications/economic-reports/the-value-of-air-transport-to-india
https://www.pib.gov.in/PressReleasePage.aspx?PRID=2098780
https://www.pib.gov.in/PressNoteDetails.aspx?NoteId=152143&ModuleId=3
https://www.pib.gov.in/PressReleasePage.aspx?PRID=2123537
https://www.pib.gov.in/PressReleaseIframePage.aspx?PRID=2066445
https://sansad.in/getFile/annex/266/AU669_kOqHSU.pdf?source=pqars#:~:text=Out%20of%20which%2C%20RCS%20flights,economic%20growth%2C%20and%20enhance%20tourism
https://www.iata.org/en/iata-repository/publications/economic-reports/the-value-of-air-transport-to-india
https://www.pib.gov.in/PressNoteDetails.aspx?NoteId=154624&ModuleId=3
https://www.pib.gov.in/PressNoteDetails.aspx?ModuleId=3&NoteId=153352
https://www.pib.gov.in/PressReleaseIframePage.aspx?PRID=1943211#:~:text=Government%20of%20India%20has%20formulated,these%2C%2011%20Greenfield%20airports%20viz
https://sansad.in/getFile/annex/268/AU5_1mFQzx.pdf?source=pqars#:~:text(a)%20&%20(b):,Nadu%20under%20the%20UDAN%20Scheme
https://www.pib.gov.in/PressReleasePage.aspx?PRID=2124459
https://www.pib.gov.in/Pressreleaseshare.aspx?PRID=1847005
https://www.pib.gov.in/PressReleasePage.aspx?PRID=1989139
https://www.pib.gov.in/PressReleasePage.aspx?PRID=1908939
Click here to see PDF
*****
(Backgrounder ID: 155671)
Visitor Counter : 4
Provide suggestions / comments